ಜಾಗರೂಕತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಗರೂಕತೆಯು ಉನ್ನತ ಇಂದ್ರಿಯ ಅರಿವಿನ ಮೂಲಕ ಸಕ್ರಿಯ ಎಚ್ಚರದ ಸ್ಥಿತಿ, ಉದಾಹರಣೆಗೆ ಅಪಾಯ ಅಥವಾ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಾಗರೂಕವಾಗಿರುವುದು ಹಾಗೂ ಚುರುಕಾಗಿರುವುದು, ಅಥವಾ ಗ್ರಹಿಸಿ ಕಾರ್ಯನಿರ್ವಹಿಸಲು ಚಟುವಟಿಕೆಯಿಂದಿರುವುದು. ಇದು ಮನೋವಿಜ್ಞಾನ ಜೊತೆಗೆ ಶರೀರ ವಿಜ್ಞಾನಕ್ಕೂ ಸಂಬಂಧಿಸಿದೆ. ಜಾಗರೂಕತೆಯ ಕೊರತೆಯು ನಾರ್ಕೊಲೆಪ್ಸಿ, ಗಮನದ ಕೊರತೆಯ ಅಸ್ವಸ್ಥತೆ, ದೀರ್ಘಕಾಲೀನ ಆಯಾಸ ಲಕ್ಷಣಕೂಟ, ಖಿನ್ನತೆ, ಆ್ಯಡಿಸನ್‍ನ ರೋಗ, ಅಥವಾ ನಿದ್ರಾ ಅಭಾವ ಸೇರಿದಂತೆ ಅನೇಕ ಅಸ್ವಸ್ಥತೆಗಳ ಲಕ್ಷಣವಾಗಿದೆ. ಜಾಗರೂಕತೆಯ ಗಮನಾರ್ಹವಾದ ಕೊರತೆಯನ್ನು ಮಾರ್ಪಾಡಾದ ಪ್ರಜ್ಞೆಯ ಮಟ್ಟವೆಂದು ವರ್ಗೀಕರಿಸಬಹುದು.

ಶರೀರ ವಿಜ್ಞಾನ ಸಂಬಂಧಿ ಅಂಶಗಳು[ಬದಲಾಯಿಸಿ]

ಸುರಕ್ಷತಾ ಸಂಬಂಧಿ ಅಥವಾ ಸಾರಿಗೆ ವೃತ್ತಿಗಳಲ್ಲಿ ನೇಮಕಗೊಂಡ ವ್ಯಕ್ತಿಗಳು ಜಾಗರೂಕತೆಯಲ್ಲಿ ವೈಫಲ್ಯಗಳನ್ನು ಹೊಂದಿದರೆ, ವಾಯುಸಂಚಾರ ನಿಯಂತ್ರಣದಿಂದ ಬೈಜಿಕ ವಿದ್ಯುತ್ ಸ್ಥಾವರದ ಮೇಲ್ವಿಚಾರಣೆವರೆಗಿನ ವ್ಯಾಪ್ತಿಯ ವೃತ್ತಿಗಳಲ್ಲಿ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.[೧]

ಉಲ್ಲೇಖಗಳು[ಬದಲಾಯಿಸಿ]

  1. "Alertness Monitoring". salk.edu.