ವಿಷಯಕ್ಕೆ ಹೋಗು

ದೇವುನಿಗುಟ್ಟ ದೇವಸ್ಥಾನ

ನಿರ್ದೇಶಾಂಕಗಳು: 18°6′54.6″N 80°02′13.3″E / 18.115167°N 80.037028°E / 18.115167; 80.037028
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವುನಿಗುಟ್ಟ ಗುಡಿ
Native name
ತೆಲುಗು:దేవునిగుట్ట దేవాలయం
ದೇವುನಿಗುಟ್ಟ ಗುಡಿ, ಉತ್ತರ ಮತ್ತು ಪಶ್ಚಿಮ ಭಾಗ, ಕ್ರಿ.ಶ. ೨೦೧೭
ಸ್ಥಳಜಯಶಂಕರ್ ಭೂಪಾಲಪಲ್ಲಿ ಜಿಲ್ಲೆ, ತೆಲಂಗಾಣ, ಭಾರತ
Coordinates18°6′54.6″N 80°02′13.3″E / 18.115167°N 80.037028°E / 18.115167; 80.037028
ನಿರ್ಮಾಣಕ್ರಿ.ಶ. ೬ನೇ ಶತಮಾನ[]
ವಾಸ್ತುಶಿಲ್ಪ ಶೈಲಿದೇವಸ್ಥಾನದ ವಾಸ್ತುಶಿಲ್ಪ
ದೇವಾಲಯದ ಪಶ್ಚಿಮ ಗೋಡೆಯ ಮೇಲೆ ಇರುವ ಶಿಲ್ಪಗಳು; (ಒಂದೇ ಸ್ತನದೊಂದಿಗೆ) ಮತ್ತು ಇತರ ಮೂರ್ತಿಗಳು.

ದೇವುನಿಗುಟ್ಟ ದೇವಸ್ಥಾನ (ತೆಲುಗಿನಲ್ಲಿ "ದೇವರಗುಡ್ಡದ ಗುಡಿ")[] ಅಥವಾ ಶಿವ ದೇವಾಲಯ, ಕೊತ್ತೂರು ಎಂಬುದು ಮುಲುಗು ಜಿಲ್ಲೆಯ ಕೊತ್ತೂರು ಗ್ರಾಮದ ಸಮೀಪದಲ್ಲಿರುವ ಒಂದು ಗುಡಿ, ಇದು ವಾರಂಗಲ್ ನಿಂದ ಸುಮಾರು ೬೦ ಕಿ.ಮೀ ಪೂರ್ವಕ್ಕೆ ಇದೆ.[][][] ದೂರದ ಕಾಡು ಪ್ರದೇಶದಲ್ಲಿರುವ ಈ ಗುಡಿಯನ್ನು ಕ್ರಿ.ಶ. ೬ನೇ ಶತಮಾನದಲ್ಲಿ ವಾಕಾಟಕರು ನಿರ್ಮಿಸಿದ್ದರು ಎಂದು ಅಂದಾಜಿಸಲಾಗಿದೆ.[] ೨೦೧೨ರಲ್ಲಿ ಇದು ಭಾರತೀಯ ಪುರಾತತ್ವ ಸಮೀಕ್ಷೆ (ASI)ಯಿಂದ ಮೊದಲ ಬಾರಿಗೆ ಉಲ್ಲೇಖಿಸಲ್ಪಟ್ಟಿತ್ತು,[] ಆದರೆ ೨೦೧೭ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಗಳು ಹರಿದಾಡಿದ ನಂತರ ಪ್ರಚಾರಕ್ಕೆ ಬಂದಿತು.

ದೇವಾಲಯವು ಈಗ ಒಂದು ಚೌಕಾಕಾರದ ಗರ್ಭಗುಡಿಯನ್ನೂ ಅದರ ಮೇಲೆ ಶಿಖರ/ವಿಮಾನ ಗೋಪುರವನ್ನೂ ಹೊಂದಿದೆ.[] ಗೋಪುರದೊಳಗಡೆಯೇ ಗರ್ಭಗುಡಿ ಇದೆ. ದೇವಾಲಯದ ಒಳಗೆ ಮತ್ತು ಹೊರಗೆ ಅಪರೂಪದ ಉಬ್ಬುಶಿಲ್ಪಗಳು ಕಂಡುಬರುತ್ತವೆ.[][] ಅಂತಾರಾಷ್ಟ್ರೀಯ ಪಂಡಿತರು ಮತ್ತು ಸ್ಥಳೀಯರು ದೇವಾಲಯದ ಹಾಳಾಗುತ್ತಿರುವ ಸ್ಥಿತಿಯನ್ನು ಕುರಿತು ಚಿಂತೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಸ್ವಯಂಸೇವಕರು ಕಟ್ಟಡದ ಮೇಲೆ ಬೆಳೆದಿದ್ದ ಗಿಡಗಳನ್ನು ತೆಗೆಯುವ ಕಾರ್ಯ ಮಾಡಿದರೂ,[] ೨೦೨೦ರ ವೇಳೆಗೆ ಅವು ಮರಳಿ ಬೆಳೆದಿದ್ದವು. ೨೦೧೯ರ ಕೊನೆಯಲ್ಲಿ ASI ದೇವಾಲಯದ ಪುನರ್ ನಿರ್ಮಾಣಕ್ಕೆ ಸಿದ್ಧವಾಗಿದ್ದರೂ, ಸ್ಥಳೀಯ ಅಧಿಕಾರಿಗಳ ಅನುಮತಿ ಇನ್ನೂ ಸಿಕ್ಕಿರಲಿಲ್ಲ.[]

೨೦೧೨ ನಂತರ ನರಸಿಂಹನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ದೇವಾಲಯದಲ್ಲಿ ಅನೌಪಚಾರಿಕ ಪೂಜೆ ನಡೆಯುತ್ತಿದೆ.[]

ಮರುಶೋಧನೆ

[ಬದಲಾಯಿಸಿ]

೨೦೧೨ರಲ್ಲಿ ASIಗೆ ತಿಳಿಸಿದ್ದರೂ,[] ೨೦೧೭ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಗಳು ಪ್ರಕಟವಾದ ನಂತರ ಮಾತ್ರ ಹೆಚ್ಚಿನ ಗಮನ ಸೆಳೆಯಿತು.[] ೨೦೧೭ ಆಗಸ್ಟ್‌ನಲ್ಲಿ ತೆಲಂಗಾಣ ಪುರಾತತ್ವ ಹಾಗೂ ಸಂಗ್ರಹಾಲಯಗಳ ಇಲಾಖೆಯ ಸಹಾಯಕ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಸಂರಕ್ಷಣೆ ಅಗತ್ಯವಿದೆ ಎಂದು ವರದಿ ಸಲ್ಲಿಸಿದರು, ಆದರೆ ೨೦೧೯ರ ಆರಂಭದವರೆಗೂ ಕ್ರಮ ಕೈಗೊಳ್ಳಲಿಲ್ಲ.[]

ಜರ್ಮನ್ ಕಲಾ ಇತಿಹಾಸಕಾರ್ತಿ ಕೊರಿನ್ನಾ ವೆಸೆಲ್ಸ್-ಮೇವಿಸೆನ್ ೨೦೧೮ರಲ್ಲಿ ದೇವಾಲಯಕ್ಕೆ ಭೇಟಿ ನೀಡಿ "ದೇವಾಲಯವು ಒಡಿಶಾದ ಉದಯಗಿರಿ ಮತ್ತು ಸ್ಕಂದಗಿರಿ ಶೈಲಿಗಳ ಸಂಯೋಜನೆ, ಜೊತೆಗೆ ಅಮರಾವತಿ ಶೈಲಿಯ ಅಂಶಗಳನ್ನು ಕೂಡ ಹೊಂದಿದೆ" ಎಂದು ಅಭಿಪ್ರಾಯಪಟ್ಟರು.[][೧೦]

ಗೋಪುರದ "ಬಿರಿದ" ಗೋಡೆ

ಬ್ರಿಟಿಷ್ ತಜ್ಞ ಆಡಂ ಹಾರ್ಡಿ ೨೦೧೯ರಲ್ಲಿ ಭೇಟಿ ನೀಡಿ, ಇದು ಅಪರೂಪದ ಶಿಲ್ಪಾಭರಣಗಳಿಂದ ಕೂಡಿದ ವಿಶಿಷ್ಟ ದೇವಾಲಯ ಎಂದು ಹೊಗಳಿದರು. ಅವರು "ಅಂಕೊರ್ ವಾಟ್" ಜೊತೆಗೆ ಹೋಲಿಕೆ ಮಾಡುವ ಅಭಿಪ್ರಾಯಗಳನ್ನು ತಳ್ಳಿಹಾಕಿದರು, ಏಕೆಂದರೆ ದೇವುನಿಗುಟ್ಟ ಅದಕ್ಕಿಂತ ಹಳೆಯದು ಎಂದು ಹೇಳಿದ್ದಾರೆ.[೧೧] "ದೇವಾಲಯವು ಕುಸಿಯಲು ಶುರುವಾಗಿರುವುದರಿಂದ ತ್ವರಿತ ಕ್ರಮ ಅಗತ್ಯ" ಎಂದೂ ಹೇಳಿದರು.[೧೨]

ವೆಸೆಲ್ಸ್-ಮೇವಿಸೆನ್ ೨೦೧೮ರಲ್ಲಿ ನೆಪಲ್ಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ದೇವಾಲಯದ ಕುರಿತು ವರದಿ ನೀಡಿದರು; ನಂತರ ೨೦೧೯ರಲ್ಲಿ ಅವರು ಮತ್ತು ಹಾರ್ಡಿ ಇದರ ಕುರಿತು ಸಂಶೋಧನಾ ಲೇಖನ ಪ್ರಕಟಿಸಿದರು.[೧೩] ಕಾರ್ಡಿಫ್ ವಿಶ್ವವಿದ್ಯಾಲಯದ ಡಾ. ಲಕ್ಷ್ಮೀ ಗ್ರೀವ್ಸ್ ಕೂಡ ೨೦೧೮ರಲ್ಲಿ ಭೇಟಿ ನೀಡಿ ಲೇಖನ ಪ್ರಕಟಿಸಿದರು.[]

ವಾಸ್ತುಶಿಲ್ಪ

[ಬದಲಾಯಿಸಿ]

ಗುಡಿಯು ಸುಮಾರು ೬ ಮೀಟರ್ ಚೌಕಾಕಾರದ ಆವರಣದಲ್ಲಿದ್ದು, ಈಗ ಸುಮಾರು ೭ ಮೀಟರ್ ಎತ್ತರವಿದೆ. ಒಂದು ಕಾಲದಲ್ಲಿ ಇದರ ಮೇಲ್ಭಾಗವನ್ನು ಅಲಂಕರಿಸಿದ್ದ ಕಲಶ ಅಥವಾ ನೆಲ್ಲಿಕಾಯಿ ಈಗ ಕಾಣಿಸದು. ಮರಳುಗಲ್ಲು ಇಟ್ಟಿಗೆಗಳಿಂದ ಇದನ್ನು ನಿರ್ಮಿಸಲಾಗಿದ್ದು ಈಗ ತುಂಬಾ ಸವೆದು ಹೋಗಿದೆ. ಇಟ್ಟಿಗೆಗಳನ್ನು ಪರಸ್ಪರ ಹತ್ತಿಕೊಂಡಂತೆ ಜೋಡಿಸಿ ಕೆಂಪು ಬಣ್ಣದ ಗಿಲಾವಿನಿಂದ ಹೊಂದಿಸಲಾಗಿದ್ದರೂ ಕೆಲವು ಕಡೆಗಳಲ್ಲಿ ಗಾರೆ ಕಿತ್ತು ಹೋಗಿ ಅದರ ಅವಶೇಷಗಳು ಕಾಣುತ್ತಿವೆ. ಇವು ಮೂಲತಃ ಎಲ್ಲಾ ಉಬ್ಬುಶಿಲ್ಪಗಳನ್ನು ಬಂಧಿಸಿದ್ದಿರಬಹುದು ಮತ್ತು ಅವುಗಳಿಗೆ ಬಣ್ಣ ಬಳಿದಿದ್ದರೂ ಇರಬಹುದು. [೧೪] ಕಲ್ಲಿನ ಸವೆತ, ಬಾಗಿಲ ಮೇಲ್ಭಾಗದ ಹಾನಿ ಮತ್ತು ಪಶ್ಚಿಮ ಗೋಡೆಯ ಮೇಲಿನಿಂದ ಕೆಳಗಿನ "ಉದ್ದವಾದ ಸೀಳು" ಹೊರತುಪಡಿಸಿ, ಗುಡಿಯು ಸಂರಕ್ಷಿತವಾಗಿಯೇ ಇದೆ. ಈ ಸೀಳು, ಹೊರಭಾಗದ ಶಿಲ್ಪ ಫಲಕದ ಒಂದು ಬದಿಯನ್ನು ಹಾಳು ಮಾಡಿದೆ.[೧೫] ಗುಡಿಯ ಮುಂಭಾಗದಲ್ಲಿರುವ ಕಡಿಮೆ ಎತ್ತರದ ಆವರಣಗೋಡೆ ಮೂಲದದ್ದೆನ್ನುವ ಕುರಿತ ಪುರಾವೆಯಿಲ್ಲ.[೧೬] ಅದನ್ನು ಮತ್ತೊಂದು ಕಟ್ಟಡದ ಕಲ್ಲುಗಳಿಂದ ಬೇಕಾಬಿಟ್ಟಿ ಕಟ್ಟಿರುವಂತೆ ತೋರುತ್ತದೆ. ಈ ದೇವಾಲಯ ವಾಸ್ತುಶಿಲ್ಪದಲ್ಲಿ ಬಹಳ ಅಪರೂಪವಾದ ಲಕ್ಷಣವೆಂದರೆ ಇಲ್ಲಿನ ಗರ್ಭಗುಡಿಗೆ ಸೂರಿಲ್ಲದಿರುವುದು. ನೋಡುಗರು ಗುಡಿಯ ಒಳಗಿನಿಂದ ಶಿಖರ/ವಿಮಾನದ ಒಳ ವಿನ್ಯಾಸವನ್ನು ನೋಡಬಹುದು. ಇಂಡಿಯಾದ ಮತ್ತೊಂದು ಕಡೆ ಗುಜರಾತಿನ ಗೋಪ್ ದೇವಾಲಯ Gop temple ದಲ್ಲೂ (ಸುಮಾರು ಕ್ರಿ.ಶ. ೫೫೦) ಇಂತದು ಇದೆ.[೧೭] ಸಾಮಾನ್ಯವಾಗಿ ಗರ್ಭಗುಡಿಯ ಸಮತಟ್ಟಾದ, ಅಲಂಕಾರವಿಲ್ಲದ ಛಾವಣಿಯು "ಪರ್ವತ" ರೂಪಕದ ಮುಖ್ಯ ಅಂಶವಾಗಿದೆ. ಇದು ಬೌದ್ಧ ಶಿಲಾಪಟಗಳಲ್ಲಿ ಕಾಣುವ ಅಷ್ಟಕೋನ ಗೋಪುರಗಳನ್ನು ಹೊಂದಿದ್ದ ಮರದ ಮಂದಿರಗಳ ಪರಂಪರೆಯನ್ನು ಸೂಚಿಸಬಹುದೆಂದು ಅನಿಸುತ್ತದೆ.[೧೮] ವೆಸೆಲ್ಸ್–ಮೆವಿಸ್ಸೆನ್ ಮತ್ತು ಹಾರ್ಡಿ ಅವರ ಅಭಿಪ್ರಾಯದಲ್ಲಿ ಈ ದೇವಾಲಯದ "ವೈಶಿಷ್ಟ್ಯಪೂರ್ಣ ವಾಸ್ತುಶಿಲ್ಪವು ಪ್ರಾರಂಭಿಕ ಮರಕಟ್ಟಡಗಳ ಹಾಗೂ ದ್ರಾವಿಡ ವಾಸ್ತುಶಿಲ್ಪಗಳ ನಡುವೆ ಕಳೆದುಹೋದ ಕೊಂಡಿಯನ್ನು ಒದಗಿಸುತ್ತದೆ".

ಶಿಖರವು ನಾಲ್ಕು ಹಂತಗಳನ್ನು ಹೊಂದಿದ್ದು, ಅವುಗಳನ್ನು "ಶಿಲ್ಪಭರಿತ ಪಟ್ಟಿಕೆ"ಗಳ ಮೂಲಕ ಗುರುತಿಸಬಹುದು. ಮೇಲಿನ ಹಂತದಲ್ಲಿ ಪುಟ್ಟ ಸಜ್ಜಾಗಳು ಅಸಮಾನ ಗೂಡುಗಳಾಗಿ ವಿಭಜಿಸುತ್ತವೆ. ಎಲ್ಲಕ್ಕೂ ಮೇಲುಗಡೆ ತಗ್ಗಾದ ಚಾಚುಗೂಡು ಕುಳಿತಿದೆ. ಪ್ರತಿ ಗೋಡೆಯ ನಡುವಲ್ಲೂ ಬಲವಾದ ತೊಲೆ ಹಾಯ್ದಿದೆ. ಕೆಳಗಿನ ಹಂತದಲ್ಲಿ ಪೂರ್ವದ ಬಾಗಿಲು ಹೊರತುಪಡಿಸಿ ಉಳಿದ ಮೂರೂ ಗೋಡೆಯಲ್ಲಿ ಸರಳ ಅಲಂಕಾರದ ಮೇಲ್ಭಾಗದಲ್ಲಿ ವೈಭವಯುತ ಪೌರಾಣಿಕ ಶಿಲ್ಪ ಫಲಕ ಇದೆ. ನಾಲ್ಕನೆಯ ಹಂತದಲ್ಲಿ ಪುಟ್ಟ ಪುಟ್ಟ ಕೈಕಂಬಗಳಿದ್ದು ತಮ್ಮ ಭುಜದ ಮೇಲೆ ಪುಟ್ಟ ಸಂದೂಕಗಳನ್ನು ಹೊತ್ತುಕೊಂಡಿವೆ, ಮತ್ತು ಅನೇಕ ಕಡೆಗಳಲ್ಲಿ ಮುಖಗಳನ್ನು ಒಳಗೊಂಡ ಗವಾಕ್ಷಿ ವಿನ್ಯಾಸಗಳೂ ಕಾಣುತ್ತವೆ. ಒಳಗಡೆ ಈಗ ನರಸಿಂಹನ ವಿಗ್ರಹವನ್ನು ಇರಿಸಿರುವ ಹೊಸ ಪೀಠ ಇದೆ, ಆದರೆ ಅಭಿಷೇಕ ಮಾಡುವಾಗ ನೀರು ಹರಿದು ಹೋಗುವ ಕಾಲುವೆಯ ಯಾವುದೇ ಗುರುತೂ ಇಲ್ಲ.

ಸುತ್ತುವರಿದ ಪ್ರಾಂಗಣದ ಗೋಡೆಯ ಬಳಿ ಮೂರು ಸುಣ್ಣಗಲ್ಲಿನ ತುಂಡುಗಳು ಎದುರಾಗುತ್ತವೆ. ಇವು ಬೌದ್ಧ ಸ್ತೂಪಗಳ ಪ್ರಾಕಾರ ಹಿಡಿಕೆಗಳಲ್ಲಿ ಕಾಣುವ ಕಂಬಗಳನ್ನು ಹೋಲುತ್ತವೆ, ಆದರೆ ಮಂದಿರದಿಂದ ೧೦೦ ಕಿ.ಮೀ ವ್ಯಾಪ್ತಿಯಲ್ಲಿ ಯಾವ ಸ್ತೂಪಗಳೂ ಇದ್ದಂತಿಲ್ಲ. ಇವುಗಳನ್ನು ಗಾರೆ ತಯಾರಿಸಲು ಅಥವಾ ಅಲಂಕಾರಕ್ಕಾಗಿ ಬೇರೆಡೆಯಿಂದ ತಂದಿರಬಹುದು.[೧೯]; Telangana Tourism https://tourism.telangana.gov.in/ನಲ್ಲಿ ಚಿತ್ರಗಳು ಲಭ್ಯ.

ಉಬ್ಬುಶಿಲ್ಪಗಳು

[ಬದಲಾಯಿಸಿ]

ಕಟ್ಟೋಣದ ಗೋಡೆಗಳಲ್ಲಿ ಪೇರಿಸಲಾದ ಕಲ್ಲುಗಳ ಹೊರಮೈ ಮತ್ತು ಒಳಮೈ ಎರಡೂ ಕಡೆಗಳಲ್ಲಿ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ. ಬಹುಶಃ ಈ ಗುಡಿಯು ಬೌದ್ಧ ರಚನೆಯಾಗಿದ್ದು, ಪುರುಷ ಮತ್ತು ಸ್ತ್ರೀಗಳ ಸಂಯುಕ್ತ ರೂಪವಾದ ಪುಂಸ್ತ್ರೀಯನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಈ ಪುಂಸ್ತ್ರೀ ರೂಪವು ಗರ್ಭಗುಡಿಯ ಹಿಂಭಾಗದ (ಪಶ್ಚಿಮ) ಗೋಡೆಯ ಒಳ-ಹೊರಗುಗಳ ಕೇಂದ್ರ ಸ್ಥಾನದಲ್ಲಿದೆ – ಇಂತಹ ಲಕ್ಷಣವು ಬೇರೆಲ್ಲೂ ಕಂಡು ಬಂದಿಲ್ಲ.[೨೦]

ಉತ್ತರ ಹೊರಗೋಡೆಯ ಶಿಲ್ಪಸಮೂಹ

ದೊಡ್ಡ ಉಬ್ಬುಶಿಲ್ಪಗಳು ವಿಶೇಷವಾಗಿ ಗರ್ಭಗುಡಿಯ ಹಿಂಭಾಗದ ಗೋಡೆಯನ್ನೇ ಆವರಿಸಿದ್ದು ಹಲವು ವೈಶಿಷ್ಟ್ಯಪೂರ್ಣ ಅಂಶಗಳ ದ್ಯೋತಕವಾಗಿವೆ. ಮತ್ತು ಇವುಗಳ ರಹಸ್ಯವನ್ನು ಇನ್ನೂ ಅರಿಯಲಾಗಿಲ್ಲ. ಒಟ್ಟಿನಲ್ಲಿ, ಇವು "ದಕ್ಷಿಣ ಇಂಡಿಯಾಕ್ಕೆ ತಾಂತ್ರಿಕಪೂರ್ವ ಸಂನ್ಯಾಸ ಪರಂಪರೆಯ ವಿಸ್ತರಣೆ"ಯನ್ನು ಸೂಚಿಸುತ್ತವೆ.[೨೧]

ಮೂರು ದೊಡ್ಡ ಹೊರಗಿನ ಉಬ್ಬುಶಿಲ್ಪ ಸಮೂಹ

[ಬದಲಾಯಿಸಿ]

ಹಿಂಭಾಗದ (ಮೂಡಣದಿಕ್ಕಿನ) ಹೊರಗೋಡೆಯ ಪುಂಸ್ತ್ರೀ ಗುಂಪು ವಿಶೇಷ ಲಕ್ಷಣಗಳನ್ನು ಹೊಂದಿದೆ. ಸಂಯುಕ್ತ ಪುರುಷ/ಸ್ತ್ರೀ ರೂಪದಲ್ಲಿದ್ದರೂ, ಎಡಭಾಗಕ್ಕೆ ಹೋಲಿಸಿದರೆ ಸ್ತ್ರೀ ಗಾತ್ರವು ದೊಡ್ಡದಾಗಿದೆ. ನಾಲ್ಕು ಭುಜಗಳಿರುವಂತೆ ತೋರಿ, ಕೈಗಳಲ್ಲಿ ಒಂದರಲ್ಲಿ ಕಮಲ, ಮತ್ತೊಂದರಲ್ಲಿ ಚೌಕಾಕಾರದ ಕನ್ನಡಿ ಹಿಡಿದಿರುವುದು ಕಾಣುತ್ತದೆ; ಇನ್ನೊಂದು ಕೈ ಮುದ್ರಾ ರೂಪದಲ್ಲಿರುವಂತೆ ತೋರುತ್ತದೆ. ಈ ಗುಂಪಿನಲ್ಲಿ ಹಲವಾರು ಪುರುಷ ಮುಖಗಳು ಇದ್ದು ಕೆಲವದರಲ್ಲಿ ಟಗರಿನ ಕೊಂಬುಗಳು ಮತ್ತು ಕಿವಿಗಳು ಕಂಡುಬರುತ್ತವೆ. ಇದೇ ಲಕ್ಷಣಗಳು ದಕ್ಷಿಣ ಗೋಡೆಯ ದೊಡ್ಡ ಉಬ್ಬುಶಿಲ್ಪಗಳಲ್ಲೂ ಇವೆ.

ಒಳಗೋಡೆಯ ಉಬ್ಬುಶಿಲ್ಪಗಳು

[ಬದಲಾಯಿಸಿ]

ಒಟ್ಟಿನಲ್ಲಿ ಗರ್ಭಗುಡಿಯ ಪಶ್ಚಿಮಗೋಡೆಯ ಬಹುಭಾಗವನ್ನು ಮೂರು ಅಡ್ಡಪಟ್ಟಿಗಳಲ್ಲಿ ತುಂಬಿದ ದೊಡ್ಡ ಉಬ್ಬುಶಿಲ್ಪ ಆವರಿಸಿದೆ. ಇದರಲ್ಲಿನ ಚಿತ್ರಗಳಿಗೆ "ಏಕೀಕೃತ ದೃಶ್ಯವಸ್ತು" ಇಲ್ಲದಂತಿದೆ. ಇವರೆಲ್ಲ ಬಹುಶಃ ತಪಸ್ವಿಗಳು ಅಥವಾ ಸಮುದಾಯದ ಪ್ರಮುಖರು ಎಂದು ತೋರುತ್ತವೆ. ಬದಿಯ ಗೋಡೆಗಳಲ್ಲೂ ಇಂತಹವೇ ದೃಶ್ಯಗಳು ಮುಂದುವರಿಯುತ್ತವೆ.[೨೨]

ಇತರ ಉಬ್ಬುಶಿಲ್ಪಗಳು

[ಬದಲಾಯಿಸಿ]

ಪಶ್ಚಿಮ ಗೋಡೆಯ ಮೇಲಿನ ಮೊದಲ ಮೇಲ್ಮಟ್ಟದಲ್ಲಿ ಬಹುಶಃ ಲಕುಲೇಶನ ಮೂರ್ತಿ ಮತ್ತು ಅವನ ನಾಲ್ಕು ಶಿಷ್ಯರ ಗುಂಪು ಕಾಣುತ್ತದೆ, ಅವರ ಬಲಭಾಗದಲ್ಲಿ "ಸಾಕ್ಷಿ"ಯಂತೆ ಕಾಣುವ ಆರನೆಯ ತಲೆಯೂ ಇದೆ. ಕರ್ನಾಟಕಬಾದಾಮಿ ಗುಹೆಗಳುಯಲ್ಲಿ, ವಿಶೇಷವಾಗಿ ಗುಹಾ ದೇವಾಲಯ ಸಂಖ್ಯೆ ೨ರಲ್ಲಿ (ಕ್ರಿ.ಶ. ೫೫೦-೫೭೦), ಇಂತಹವೇ ಗುಂಪು ಕಾಣುತ್ತದೆ, ಆದರೆ ಅಲ್ಲಿ ಲಕುಲೇಶನು ನಾಲ್ಕು ಭುಜಗಳೊಂದಿಗೆ ಮತ್ತು ಲಿಂಗೋದ್ರೇಕದ ಸ್ಥಿತಿಯಲ್ಲಿ—ಆ ಕಾಲಕ್ಕೆ ಸಾಮಾನ್ಯವಾಗಿ—ಕಾಣುತ್ತಾನೆ; ಆದರೆ ದೇವುನಿಗುಟ್ಟದಲ್ಲಿ ಅದು ಕಾಣುತ್ತಿಲ್ಲ.[೨೩]; ಬಾದಾಮಿ ಗುಂಪಿನ ಚಿತ್ರ. ಮತ್ತೆ ಇತರ ಸಣ್ಣ ಉಬ್ಬುಶಿಲ್ಪಗಳಲ್ಲಿ ಸ್ತ್ರೀಪುರುಷ ಜೋಡಿಗಳ ಮುಖಗಳು ಮತ್ತು ಮೇಲುಹಂತದ ಅಡ್ಡಕಲ್ಲುಗಳಲ್ಲಿ ಸೈನ್ಯ, ರಥ, ಯುದ್ಧ ಆನೆಗಳುಳ್ಳ ಯುದ್ಧದ ದೃಶ್ಯಗಳೂ ಕಾಣುತ್ತವೆ.

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ Reddy, U. Sudhakar (28 January 2019). "Cardiff expert says no resemblance of Devunigutta architecture with Angkor Wat". The Times of India (in ಇಂಗ್ಲಿಷ್). Retrieved 2020-01-05.
  2. ೨.೦ ೨.೧ ೨.೨ ೨.೩ Wessels-Mevissen and Hardy, 265
  3. ೩.೦ ೩.೧ ೩.೨ ೩.೩ ೩.೪ Greaves
  4. "Telangana: Ancient Mulugu temple soon to become tourist attraction". Deccan Chronicle (in ಇಂಗ್ಲಿಷ್). 2017-09-04. Retrieved 2020-01-05.
  5. "shikhara" to Greaves, "vimana" to Wessels-Mevissen and Hardy. At this locality and date, the northern and southern forms of tower over a sanctuary were just beginning to emerge
  6. Greaves; Telangana Tourism
  7. Telangana Tourism has photos before, during and after.
  8. Newsmeter, "Devuni Gutta temple in Mulugu lies in state of neglect", by Dasari Sreenivasa Rao, 16 December 2019
  9. ೯.೦ ೯.೧ Reddy, P Laxma (24 Jan 2019). "Need to conserve Devunigutta temple: Archaeologists". Telangana Today (in ಅಮೆರಿಕನ್ ಇಂಗ್ಲಿಷ್). Retrieved 2020-01-05.{{cite web}}: CS1 maint: url-status (link)
  10. Reddy, AuthorP Laxma. "Art historian from Germany visits Devunigutta temple". Telangana Today (in ಅಮೆರಿಕನ್ ಇಂಗ್ಲಿಷ್). Retrieved 2020-01-05.
  11. "Cardiff expert says no resemblance of Devunigutta architecture with Angkor Wat", Times of India, U Sudhakar Reddy, Jan 28, 2019
  12. Mahender, Adepu (2019-01-27). "Devuni Gutta: A researcher's paradise". www.thehansindia.com (in ಇಂಗ್ಲಿಷ್). Retrieved 2020-01-05.
  13. Greaves; Wessels-Mevissen and Hardy
  14. Wessels-Mevissen and Hardy, 267
  15. Wessels-Mevissen and Hardy, 277
  16. Wessels-Mevissen and Hardy, 268
  17. Wessels-Mevissen and Hardy, 267–268
  18. Wessels-Mevissen and Hardy, 269
  19. Wessels-Mevissen and Hardy, 269
  20. Wessels-Mevissen and Hardy, 275; Greaves
  21. Wessels-Mevissen and Hardy, 276
  22. Wessels-Mevissen and Hardy, 273–276; Greaves
  23. Wessels-Mevissen and Hardy, 272; Greaves

ಉಲ್ಲೇಖಗಳು

[ಬದಲಾಯಿಸಿ]

ಇವೆಲ್ಲವೂ ಅನೇಕ ಉತ್ತಮ ಫೋಟೋಗಳನ್ನು ಹೊಂದಿವೆ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]