ವಿಷಯಕ್ಕೆ ಹೋಗು

ಉದಯಗಿರಿ (ಒಡಿಶಾ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉದಯಗಿರಿ
ଉଦୟଗିରି
Main Stupa
ಧರ್ಮ ಮತ್ತು ಸಂಪ್ರದಾಯ
ಧರ್ಮಬೌದ್ಧ ಧರ್ಮ
ಸ್ಥಿತಿPreserved
ಸ್ಥಳ
ಸ್ಥಳIndia
ರಾಜ್ಯOdisha

ಉದಯಗಿರಿ ಒಡಿಶಾ ರಾಜ್ಯದಲ್ಲಿ ಭುವನೇಶ್ವರದ ಬಳಿ ಇರುವ ಬೆಟ್ಟ. ಇಲ್ಲಿಯ ಬೌದ್ಧ ಗುಹೆಗಳಲ್ಲಿ ಹಲವು ಕಲಿಂಗರಾಜ ಖಾರವೇಲನ ಕಾಲವೆಂದು (ಸು. 2ನೆಯ ಶತಮಾನ) ತರ್ಕಿಸಲಾಗಿದೆ. ಒರಿಸ್ಸದ ಉದಯಗಿರಿ ಗುಹೆಗಳಲ್ಲಿ ಮಂಚಪುರಿ ಗುಹೆಯನ್ನು ಆರ್ಯ ಮಹಾಮೇಘವಾಹನ ಮಹಾರಾಜ ವಕ್ರದೇವ ಕೊರೆಯಿಸಿದ. ಉದಯಗಿರಿಯ ಗವಿಗಳಲ್ಲಿ ರಾಣಿಗುಂಫ ಎಂಬ ಗವಿ ಎಲ್ಲಕ್ಕೂ ದೊಡ್ಡದಿದ್ದು ಅದರ ಒಳಭಾಗದಲ್ಲಿ ಅನೇಕ ಮೂರ್ತಿಗಳ ಸಾಲುಗಳನ್ನು ಕೆತ್ತಲಾಗಿದೆ. ಇವು ಭವ್ಯ ಮತ್ತು ಚೈತನ್ಯಪೂರ್ಣ ಕಲಾಕೃತಿಗಳು. ಇವುಗಳಲ್ಲಿನ ಬೌದ್ಧ ಶಿಲ್ಪಗಳ ಪೈಕಿ ಬೋಧಿವೃಕ್ಷದ ಸುತ್ತ ಸ್ತ್ರೀಪುರುಷರು ವಾದ್ಯಗಳನ್ನು ನುಡಿಸಿ ಹಾಡಿ ನರ್ತಿಸುತ್ತಿರುವ ಚಿತ್ರ ಅತ್ಯಂತ ಆಕರ್ಷಕವಾದದ್ದು.