ವಿದ್ಯಾಧರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಧರ್ಮಗಳಲ್ಲಿ, ವಿದ್ಯಾಧರರು ಮಾಂತ್ರಿಕ ಶಕ್ತಿಗಳನ್ನು ಹೊಂದಿರುವ ಅಲೌಕಿಕ ಜೀವಿಗಳ ಒಂದು ಗುಂಪು.[೧] ಹಿಂದೂ ಧರ್ಮದಲ್ಲಿ, ಅವರು ಹಿಮಾಲಯದಲ್ಲಿ ವಾಸಿಸುವ ಶಿವನ ಸೇವೆಯನ್ನು ಕೂಡ ಮಾಡುತ್ತಾರೆ. ಅವರನ್ನು ಉಪದೇವತೆಗಳೆಂದು ಪರಿಗಣಿಸಲಾಗುತ್ತದೆ. ವಿದ್ಯಾಧರರು ಬೌದ್ಧ ಮೂಲಗಳಲ್ಲೂ ಕಾಣಿಸಿಕೊಳ್ಳುತ್ತಾರೆ.

ಹಿಂದೂ ಮಹಾಕಾವ್ಯಗಳಲ್ಲಿ[ಬದಲಾಯಿಸಿ]

ಹಿಂದೂ ಮಹಾಕಾವ್ಯಗಳಲ್ಲಿ, ವಿದ್ಯಾಧರರನ್ನು ಮೂಲಭೂತವಾಗಿ ಗಾಳಿಯ ಚೇತನಗಳು ಎಂದು ವರ್ಣಿಸಲಾಗಿದೆ. ಅವರು ಮಾನವ ಪರಾಕ್ರಮವನ್ನು ವಿಸ್ಮಯದಿಂದ ನೋಡುವುದು, ಹೂವುಗಳನ್ನು ಹರಡುವುದು, ಕದನವನ್ನು ನೋಡುವುದು, ಸಂಗೀತ ಹಾಗೂ ನಗುವಿನೊಂದಿಗೆ ಸಂತೋಷಪಡುವುದು, ಹೂವಿನ ಹಾರವನ್ನು ತಲೆಯ ಮೇಲೆ ಧರಿಸಿರುವುದು ಮತ್ತು ತಮ್ಮ ಹೆಂಡತಿಯರೊಂದಿಗೆ ಅಪಾಯದಿಂದ ಪಲಾಯನ ಮಾಡುವುದು ಮುಂತಾದ ಭಿನ್ನ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ ಎಂದು ಮಹಾಕಾವ್ಯಗಳಲ್ಲಿ ವರ್ಣಿಸಲಾಗಿದೆ. ಅವರು ತಮ್ಮ ಗಾತ್ರವನ್ನು ಚಿಕ್ಕದಾಗಿಸುವ ಸಾಮರ್ಥ್ಯದಂತಹ ಮಹಾನ್ ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತಾರೆ. ಅವರಿಗೆ "ಶುಭವನ್ನು ಮಾಡುವವರು ಹಾಗೂ ಸಂತೋಷಕ್ಕೆ ಸಮರ್ಪಿಸಿಕೊಂಡವರು" ಎಂದು ವರ್ಣಿಸುವ ಗುಣವಾಚಕಗಳನ್ನು ನೀಡಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Dalal, Roshen (2010), Hinduism: An Alphabetical Guide, India: Penguin Books, p. 338