ಕಮಾನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಮಾನು ಎಂದರೆ ಎತ್ತರದ ಸ್ಥಳವನ್ನು ವ್ಯಾಪಿಸುವ ಒಂದು ಲಂಬವಾದ ವಕ್ರ ರಚನೆ ಮತ್ತು ಇದು ಇದರ ಮೇಲಿನ ತೂಕಕ್ಕೆ ಆಧಾರ ನೀಡಬಹುದು ಅಥವಾ ನೀಡದಿರಬಹುದು, ಅಥವಾ ಕಮಾನು ಅಣೆಕಟ್ಟಿನಂತಹ ಅಡ್ಡಡ್ಡಲಾದ ಕಮಾನಿನ ವಿಷಯದಲ್ಲಿ, ಇದರ ವಿರುದ್ಧದ ದ್ರವಸ್ಥಿತಿಶಾಸ್ತ್ರೀಯ ಒತ್ತಡಕ್ಕೆ ಆಧಾರ ನೀಡಬಹುದು ಅಥವಾ ನೀಡದಿರಬಹುದು. ಕಮಾನುಗಳು ಕಮಾನುಚಾವಣಿಗಳಿಕೆ ಸಮಾನಾರ್ಥಕವಾಗಿರಬಹುದು, ಆದರೆ ಕಮಾನುಚಾವಣಿಯನ್ನು ಛಾವಣಿಯನ್ನು ರೂಪಿಸುವ ಅಖಂಡ ಕಮಾನಾಗಿ ವ್ಯತ್ಯಾಸ ಮಾಡಬಹುದು. ಕಮಾನುಗಳು ಕ್ರಿ.ಪೂ. ೨ನೇ ಸಹಸ್ರಮಾನದಷ್ಟು ಮುಂಚಿತವಾಗಿ ಮೆಸೊಪೊಟೇಮಿಯನ್ ಇಟ್ಟಿಗೆ ವಾಸ್ತುಶಿಲ್ಪದಲ್ಲಿ ಕಾಣಿಸಿಕೊಂಡವು,[೧] ಮತ್ತು ಅವುಗಳ ವ್ಯವಸ್ಥಿತ ಬಳಕೆಯು ಪ್ರಾಚೀನ ರೋಮನ್ನರಿಂದ ಆರಂಭವಾಯಿತು. ಇವರು ಈ ತಂತ್ರವನ್ನು ವ್ಯಾಪಕ ಶ್ರೇಣಿಯ ರಚನೆಗಳಿಗೆ ಅನ್ವಯಿಸಿದವರಲ್ಲಿ ಮೊದಲಿಗರಾಗಿದ್ದರು.

ಕಮಾನು ಒಂದು ಮೃದು ಸಂಕೋಚನ ರೂಪವಾಗಿದೆ. ಇದು ಬಲಗಳನ್ನು ಸಂಕೋಚಕ ಒತ್ತಡಗಳಾಗಿ ವಿಘಟಿಸಿ ದೊಡ್ಡ ಪ್ರದೇಶವನ್ನು ವ್ಯಾಪಿಸಬಹುದು, ಮತ್ತು ಪ್ರತಿಯಾಗಿ ಕರ್ಷಕ ಒತ್ತಡಗಳನ್ನು ತೆಗೆದುಹಾಕುತ್ತದೆ. ಇದನ್ನು ಕೆಲವೊಮ್ಮೆ ಕಮಾನು ಕ್ರಿಯೆ ಎಂದು ಸೂಚಿಸಲಾಗುತ್ತದೆ. ಕಮಾನಿನಲ್ಲಿನ ಬಲಗಳು ನೆಲಕ್ಕೆ ಸಾಗಿಸಲ್ಪಟ್ಟಾಗ, ಕಮಾನು ತಳದಲ್ಲಿ ಹೊರಗಡೆ ತಳ್ಳುತ್ತದೆ. ಇದನ್ನು ತಳ್ಳಾಟ ಎಂದು ಕರೆಯಲಾಗುತ್ತದೆ. ಕಮಾನಿನ ಎತ್ತರವು ಕಡಿಮೆಯಾದಂತೆ, ಹೊರಗಡೆಯ ತಳ್ಳಾಟವು ಹೆಚ್ಚುತ್ತದೆ. ಕಮಾನು ಕ್ರಿಯೆಯನ್ನು ಕಾಪಾಡುವ ಸಲುವಾಗಿ ಮತ್ತು ಕಮಾನು ಕುಸಿದು ಬೀಳದಂತೆ ತಡೆಯಲು, ತಳ್ಳಾಟವನ್ನು ನಿರ್ಬಂಧಿಸಬೇಕಾಗುತ್ತದೆ, ಒಳಗಿನ ತೊಲೆಗಳಿಂದ ಅಥವಾ ಪಕ್ಕದ ಆಧಾರಗಳಂತಹ ಬಾಹ್ಯ ಬಿಗಿಕಟ್ಟುಗಳಿಂದ.

ಅತ್ಯಂತ ಸಾಮಾನ್ಯ ಸಾಚಾ ಕಮಾನು ವಿನ್ಯಾಸಗಳೆಂದರೆ ಸ್ಥಿರ ಕಮಾನು, ಎರಡು ಕೀಲುಳ್ಳ ಕಮಾನು, ಮತ್ತು ಮೂರು ಕೀಲುಳ್ಳ ಕಮಾನು. ಸ್ಥಿರ ಕಮಾನನ್ನು ಬಹುತೇಕ ವೇಳೆ ಚಾಚುಗಳು ಚಿಕ್ಕದಾಗಿರುವ ಬಲವರ್ಧಿತ ಕಾಂಕ್ರೀಟ್ ಸೇತುವೆ ಮತ್ತು ಸುರಂಗ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಇದು ಉಷ್ಣೀಯ ವಿಸ್ತರಣೆ ಮತ್ತು ಸಂಕೋಚನದಿಂದ ಉಂಟಾದ ಹೆಚ್ಚುವರಿ ಆಂತರಿಕ ಒತ್ತಡಕ್ಕೆ ಒಳಪಡುವುದರಿಂದ, ಈ ಬಗೆಯ ಕಮಾನು ಸ್ಥಾಯಿಯಾಗಿ ಅನಿರ್ಣೀತ ಎಂದು ಪರಿಗಣಿಸಲಾಗುತ್ತದೆ. ಎರಡು ಕೀಲುಳ್ಳ ಕಮಾನನ್ನು ಬಹುತೇಕ ವೇಳೆ ಉದ್ದನೆಯ ಚಾಚುಗಳಿಗೆ ಸೇತುವೆಯಾಗಲು ಬಳಸಲಾಗುತ್ತದೆ. ಈ ಬಗೆಯ ಕಮಾನು ತಳದಲ್ಲಿ ಪಿನ್ನುಗಳಿಂದ ಭದ್ರಪಡಿಸಿದ ಸಂಪರ್ಕಗಳನ್ನು ಹೊಂದಿರುತ್ತದೆ. ಸ್ಥಿರ ಕಮಾನಿನಿಂದ ಭಿನ್ನವಾಗಿ, ಪಿನ್ನಿನಿಂದ ಭದ್ರಪಡಿಸಿದ ತಳವು ತಿರುಗಲು ಸಾಧ್ಯವಿರುತ್ತದೆ, ಹಾಗಾಗಿ ರಚನೆಯು ಮುಕ್ತವಾಗಿ ಚಲಿಸಿ ಬಾಹ್ಯ ಉಷ್ಣಾಂಶದಲ್ಲಿನ ಬದಲಾವಣೆಗಳಿಂದ ಉಂಟಾದ ಉಷ್ಣೀಯ ವಿಸ್ತರಣೆ ಮತ್ತು ಸಂಕೋಚನವನ್ನು ಸರಿದೂಗಿಸುವ ಅವಕಾಶ ಇರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Ancient Mesopotamia: Architecture". The Oriental Institute of the University of Chicago. Archived from the original on 16 May 2012. Retrieved 16 May 2012. {{cite web}}: Unknown parameter |deadurl= ignored (help)
"https://kn.wikipedia.org/w/index.php?title=ಕಮಾನು&oldid=873636" ಇಂದ ಪಡೆಯಲ್ಪಟ್ಟಿದೆ