ತಡಿಯಾಂಡಮೋಳ್ ಬೆಟ್ಟ
Jump to navigation
Jump to search
ತಡಿಯಂಡಮೋಳ್ ಬೆಟ್ಟ | |
---|---|
![]() ತಡಿಯಂಡಮೋಳ್ ಬೆಟ್ಟ | |
ಎತ್ತರ | ೧,೭೪೮ m (೫,೭೩೫ ft) |
Location | |
ನೆಲೆ | ಕರ್ನಾಟಕ, ಭಾರತ |
ಶ್ರೇಣಿ | ಪಶ್ಚಿಮ ಘಟ್ಟ |
ನಿರ್ದೇಶಾಂಕ | 12°13′N 75°40′E / 12.217°N 75.667°ECoordinates: 12°13′N 75°40′E / 12.217°N 75.667°E |
Climbing | |
ಸುಲಭದ ದಾರಿ | Hike |
ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯಲ್ಲಿರುವ ಅತ್ಯಂತ ಎತ್ತರವಾದ ಬೆಟ್ಟ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತದೆ. ಇದರ ಎತ್ತರ ಸುಮಾರು ೧೭೪೮ ಮೀಟರ್. ಇದು ಚಾರಣಿಗರ ಪಾಲಿಗೆ ಬಹಳ ಪ್ರಿಯವಾದ ಜಾಗ. ಇದು ವಿರಾಜಪೇಟೆಯಿಂದ ಸುಮಾರು ೩೦ ಕಿ.ಮೀ ದೂರದಲ್ಲಿದೆ. ಬೆಟ್ಟದ ಮೇಲೆ ಹುಲ್ಲುಗಾವಲು ಇದ್ದು, ಬೆಟ್ಟದ ಸುತ್ತ ಶೋಲ ಅರಣ್ಯವಿದೆ. ಬೆಟ್ಟದ ಕೆಳಭಾಗದಲ್ಲಿ ನಾಲ್ಕು ನಾಡು ಅರಮನೆ ಇದೆ. ಈ ಅರಮನೆಗೆ ಕೆಲವು ಶತಮಾನಗಳ ಇತಿಹಾಸವಿದೆ. ಸ್ಥಳೀಯ ಭಾಷೆಯಲ್ಲಿ ತಡಿಯಂಡಮೋಳ್ ಎಂದರೆ ಎತ್ತರವಾದ ಬೆಟ್ಟ ಎಂದು ಅರ್ಥ.