ಝಾರ್ಖಂಡ್
ಜಾರ್ಖಂಡ್/ ಝಾರ್ಖಂಡ್ | |
ರಾಜಧಾನಿ - ಸ್ಥಾನ |
ರಾಂಚಿ - |
ಅತಿ ದೊಡ್ಡ ನಗರ | ಜಮಷೇಡ್ ಪುರ |
ಜನಸಂಖ್ಯೆ (2001) - ಸಾಂದ್ರತೆ |
26,909,428 (೧೩ನೆಯ) - 274/km² |
ವಿಸ್ತೀರ್ಣ - ಜಿಲ್ಲೆಗಳು |
79,700 km² (೧೫ನೆಯ) - ೨೨ |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
2000-11-15 - ಕಟೀಕಲ್ ಸಂಕರನಾರಾಯಣನ್ - ರಾಷ್ಟ್ರಪತಿ ಆಡಳಿತ - Unicameral (81) |
ಅಧಿಕೃತ ಭಾಷೆ(ಗಳು) | ಹಿಂದಿ |
Abbreviation (ISO) | IN-JH |
ಅಂತರ್ಜಾಲ ತಾಣ: www.jharkhand.gov.in | |
ಜಾರ್ಖಂಡ್/ ಝಾರ್ಖಂಡ್ ರಾಜ್ಯದ ಮುದ್ರೆ |
ಝಾರ್ಖಂಡ್, Jharkhand (Jhārkhaṇḍ, pronounced [ˈdʒʱaːrkʰəɳɖ] ( listen); Hindi: झारखंड) lit. "Bushland"),ಎಂದು ಕರೆಯಲ್ಪಡುತ್ತದೆ.
ಜಾರ್ಖಂಡ್ ಪೂರ್ವ ಭಾರತದ ರಾಜ್ಯಗಳಲ್ಲೊಂದು. ೧೫ನೇ ನವೆಂಬರ್, ೨೦೦೦ದಲ್ಲಿ ಬಿಹಾರ ರಾಜ್ಯದ ದಕ್ಷಿಣ ಪ್ರಾಂತ್ಯಗಳನ್ನು ಸೇರಿಸಿ ಇದನ್ನು ರಚಿಸಲಾಯಿತು. ಜೈನರ ಪವಿತ್ರ ಯಾತ್ರಾಸ್ಥಳ ಸಮ್ಮೇದ ಶಿಖರ್ಜಿಯು ಈ ರಾಜ್ಯದಲ್ಲಿದೆ.
ಉತ್ತರ ಭಾರತದ ಪೂರ್ವಕ್ಕಿರುವ ಈ ರಾಜ್ಯವನ್ನು ದಕ್ಷಿಣದಲ್ಲಿ ಒರಿಸ್ಸ, ಪಶ್ಚಿಮದಲ್ಲಿ ಛತ್ತೀಸ್‍ಘರ್, ವಾಯುವ್ಯದಲ್ಲಿ ಉತ್ತರ ಪ್ರದೇಶ ಉತ್ತರದಲ್ಲಿ ಬಿಹಾರ ರಾಜ್ಯಗಳು ಸುತ್ತುವರೆದಿವೆ. 32,615 ಗ್ರಾಮಗಳಿಂದ 152 ನಗರ, ಪಟ್ಟಣಗಳಿಂದ ಕೂಡಿರುವ ಈ ರಾಜ್ಯದ ವಿಸ್ತೀರ್ಣ 79,714 ಚ.ಕಿ.ಮೀ. ಈ ರಾಜ್ಯವನ್ನು 22 ಜಿಲ್ಲೆಗಳಾಗಿ ವಿಂಗಡಿಸಿದೆ. ಒಟ್ಟು ಜನಸಂಖ್ಯೆ 2,69,09,428 (2001). ರಾಜಧಾನಿ ರಾಂಚಿ.
ಕೃಷಿ
[ಬದಲಾಯಿಸಿ]ಜಾರ್‍ಖಂಡ್ ರಾಜ್ಯದಲ್ಲಿ 18,423ಚ.ಕಿ.ಮೀ. ಅರಣ್ಯ ಪ್ರದೇಶವಿದೆ. ವ್ಯವಸಾಯ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯೋಗಗಳೇ ಈ ರಾಜ್ಯದ ಮುಖ್ಯ ಆರ್ಥಿಕ ಚಟುವಟಿಕೆಗಳಿಗೆ ಮೂಲವಾಗಿವೆ. 38ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಕಾರ್ಯ ನಡೆದಿದೆ.
ನೀರಾವರಿ ಮತ್ತು ವಿದ್ಯುತ್
[ಬದಲಾಯಿಸಿ]ದಾಮೋದರ, ಮೌರಾಕ್ಷಿ, ಬರಕರ್, ಉತ್ತರಕೊಯಲ್, ದಕಿಣ ಕೊಯಲ್, ಶಂಖ್, ಸುವರ್ಣರೇಖಾ, ಕಾರ್‍ಕಾಯ್ ಮತ್ತು ಅಜಯ್ ನದಿಗಳು ಈ ರಾಜ್ಯದ ಮುಖ್ಯ ನೀರಾವರಿಯ ಮೂಲಗಳಾಗಿವೆ. ನೀರಾವರಿಗೆ 1.57ಲಕ್ಷ ಹೆಕ್ಟೇರ್ ಪ್ರದೇಶ ಒಳಪಟ್ಟಿದ್ದು ಇದು ಒಟ್ಟು ಬಿತ್ತನೆಯಾದ ಭೂಪ್ರದೇಶದಲ್ಲಿ ಶೇ.8 ಭಾಗವಾಗಿದೆ. ವಿದ್ಯುದುತ್ಪಾದನೆಯಲ್ಲಿ ಈ ರಾಜ್ಯದ ತೆನುಘಾಟ್ ಕೇಂದ್ರ 420ಮೆ.ವಾ. ಪ್ರಸಿದ್ಧ ದಾಮೋದರ ಕಣಿವೆ ಯೋಜನಾ ಕೇಂದ್ರದಿಂದ 1200ಮೆ.ವಾ. ಉತ್ಪಾದಿಸಲಾಗುತ್ತಿದ್ದ ಒಟ್ಟು 2590ಮೆ.ವಾ. ಮತ್ತೆ ಕೆಲವು ಕೇಂದ್ರಗಳಲ್ಲೂ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಕೈಗಾರಿಕೆ ಮತ್ತು ಖನಿಜಗಳು
[ಬದಲಾಯಿಸಿ]ಜಾರ್‍ಖಂಡ್ ರಾಜ್ಯದಲ್ಲಿ ಪ್ರಸಿದ್ಧವಾದ ತಾತ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಜೆಮಷೆಡ್‍ಪುರದಲ್ಲಿದೆ ಹಾಗೇ ಬೊಕಾರೊ ಉಕ್ಕು ಸ್ಥಾವರ ಇಲ್ಲಿವೆ. ತಾತ ಎಂಜಿನಿಯರಿಂಗ್ ಮತ್ತು ಲೊಕೊಮೋಟಿವ್ ಕಂಪನಿ, ಟಿಮ್‍ಕೆನ್ ಇಂಡಿಯಾ, ಲಿಮಿಟೆಡ್ (ಜೆಂಷೆಡ್‍ಪುರ) ಭಾರತ ಕುಕಿಂಗ್ ಲಿಮಿಟೆಡ್ (ಧನಬಾದ್), ಖಿಲಾರಿ ಸಿಮೆಂಟ್ ಕಾರ್ಖಾನೆ (ಪಲಮು), ಇಂಡಿಯನ್ ಅಲ್ಯೂಮಿನಿಯಂ (ಮುರಿ), ಎ.ಸಿ.ಸಿ. ಸಿಮೆಂಟ್ (ಚೈಬ್‍ಸ), ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್ (ರಾಂಚಿ), ಉಷಾ ಮಾರ್ಟಿನ್, ಉಷಾ ಬೆಲ್ಟ್ರಾನ್, ಯುರೇನಿಯಂ ಕಾರ್ಪೊರೆಷನ್ ಲಿಮಿಟೆಡ್ (ಜದುಗೊರ) ಹಿಂದುಸ್ತಾನ್ ಕಾಸರ್ ಲಿಮಿಟೆಡ್ (ಮುಸ್ಸಬನಿ), ಟಿನ್ ಪ್ಲೇಟ್ ಕಂಪನಿ ಆಫ್ ಇಂಡಿಯ ಲಿಮಿಟೆಡ್ (ಜೆಂಷೆಡ್‍ಪುರ), ಇಂಡಿಯನ್ ಎಕ್ಸ್‍ಪ್ಲೊಸಿವ್ (ಗೊಮಿಯ) ಮತ್ತು ಲೋಹರ್‍ದಗದಲ್ಲಿರುವ ಹಿಂಡಲ್ಕೊ ಬಾಕ್ಸೈಟ್ ಇವು ಪ್ರಸಿದ್ಧವಾದವು. ಈ ರಾಜ್ಯ ಹೆಚ್ಚು ಖನಿಜ ಸಂಪತ್ತನ್ನು ಹೊಂದಿದೆ. ಇದ್ದಿಲು, ಕಬ್ಬಿಣದ ಅದಿರು, ಸುಣ್ಣಕಲ್ಲು, ತಾಮ್ರ, ಬಾಕ್ಸೈಟ್, ಪೈರೇಟ್, ಚೀನಕ್ಲೆ, ಕೈನೈಟ್, ಫೈನ್‍ಕ್ಲೆ, ಡಾಲೊಮೈಟ್, ಗ್ರಾಫೈಟ್, ಬೆಂಟೊನೈಟ್, ಸೋಪ್‍ಸ್ಟೋನ್, ಕ್ವಾಟ್ರ್ಜ್ ಮರಳು, ಸಿಲಿಕ ಮರಳು ಇವೆಲ್ಲಾ ಹೆಚ್ಚಾಗಿ ದೊರಕುತ್ತವೆ. ಮಯಕ, ಇದ್ದಿಲು ಮುಂತಾದವುಗಳನ್ನು ಸಿಂಗ್‍ಭೂಮ್, ಬೊಕಾರೊ, ಹಜಾರಿಬಾಗ್, ರಾಂಚೆ, ಕೊಡರ್ಮ ಮತ್ತು ಧನಬಾದ್‍ಗಳಲ್ಲಿ ಹೆಚ್ಚಾಗಿ ಗಣಿಗಾರಿಕೆಯಿಂದ ಪಡೆಯಲಾಗುತ್ತಿದೆ.
ಸಾರಿಗೆ ಸಂಪರ್ಕ
[ಬದಲಾಯಿಸಿ]ಜಾರ್‍ಖಂಡ ರಾಜ್ಯದಲ್ಲಿ ಒಟ್ಟು 4311ಕಿ.ಮೀ. ರಸ್ತೆಯಿದೆ. ಇದರಲ್ಲಿ 1500ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮತ್ತು 2711 ಕಿ.ಮೀ. ರಾಜ್ಯ ಹೆದ್ದಾರಿ ಸೇರಿದೆ. ರೈಲು ಸಂಪರ್ಕ ಮಾರ್ಗವಿದ್ದು ರಾಂಚಿ, ಬೊಕಾರೊ, ಧನಬಾದ್, ಜೆಂಷೆಡ್‍ಪುರ ಮುಂತಾದ ಮುಖ್ಯ ರೈಲು ನಿಲ್ದಾಣಗಳಿದ್ದು ಇತರೇ ಸಾಮಾನ್ಯ ರೈಲು ನಿಲ್ದಾಣಗಳನ್ನು ಹೊಂದಿದೆ. ರಾಜಧಾನಿ ರಾಂಚಿಯಲ್ಲಿ ಮುಖ್ಯ ವಿಮಾನ ನಿಲ್ದಾಣವಿದೆ. ಇಲ್ಲಿಂದ ದೆಹಲಿ, ಪಟ್ನ, ಮುಂಬಯಿ, ಜೆಂಷೆಡ್‍ಪುರ, ಬೊಕಾರೊ, ಗಿರಿಧಿ, ದಿಯೋಗರ್, ಹಜಾರಿಬಾಗ್, ದಾಲ್ಟನ್‍ಗಂಜ್ ಮತ್ತು ಗೋವಾಮುಂಡಿಗಳಿಗೆ ವಿಮಾನ ಸಂಪರ್ಕವಿದೆ.
ರಾಜ್ಯದ 22 ಜಿಲ್ಲೆಗಳ ವಿವರ
[ಬದಲಾಯಿಸಿ]ಜಿಲ್ಲೆ | (ಚ.ಕಿ.ಮೀ.) ವಿಸ್ತಾರ | ಜನಸಂಖ್ಯೆ (2001) | ಆಡಳಿತ ಕೇಂದ್ರ |
---|---|---|---|
ಬೊಕಾರೊ | 2,860.82 | 17,75,961 | ಬೊಕಾರೊ |
ಚೌತ್ರ | 3706.22 | 790680 | ಚೌತ್ರ |
ದಿಯೊಗರ್ | 2478.61 | 1161370 | ದಿಯೊಗರ್ |
ಧನಬಾದ್ | 2074.68 | 2394434 | ಧನಬಾದ್ |
ದುಮ್ಕ | 3716.36 | 950853 * | ದುಮ್ಕ |
ಗಾರ್ವ | 4044.22 | 1034151 | ಗಾರ್ವ |
ಗಿರಿಧಿ | 4887.05 | 1901564 | ಗಿರಿಧಿ |
ಗೊಡ್ಡ | 2110.45 | 1047264 | ಗೊಡ್ಡ |
ಗುಮ್ಲ | 5320.94 | 707555 * | ಗುಮ್ಲ |
ಹಜರಿಬಾಗ್ | 5965.35 | 2277108 | ಹಜರಿಬಾಗ್ |
ಜಂತರ | 1801.98 | 544856 * | ಜಂತರ |
ಕೊಡರಮ | 1311.62 | 498683 | ಕೊಡರಮ |
ಲಟೇರ | 3660.47 | 467071 * | ಲಟೇರ |
ಲೊಹರ್‍ದಗ | 1490.80 | 364405 | ಲೊಹರ್‍ದಗ |
ಪಕೌರ್ | 1805.59 | 701616 | ಪಕೌರ್ |
ಪಲಮು | 4015.16 | 1182770 * | ಡಾಲ್ಟೊಗಂಜ್ |
ಪಶ್ಚಿಮ ಸಿಂಗಭೂಮ್ | 5290.21 | 1080780 * | ಚಬಾಸ |
ಪೂರ್ವ ಸಿಂಗಭೂಮ್ | 3553.35 | 1978671 | ಜೆಂಷೆಡ್‍ಪುರ |
ರಾಂಚಿ | 7573.68 | 2783577 | ರಾಂಚಿ |
ಸಾಹಿಬ್‍ಗಂಜ್ | 1705.98 | 927584 | ಸಾಹಿಬ್‍ಗಂಜ್ |
ಸೆರೈಕೆಲ | 2724.55 | 707175 * | ಸೆರೈಕೆಲ |
ಸಿಂದೆಗ | 3756.19 | 446421 * | ಸಿಂದೆಗ |
(* - 1991ರ ಜನಸಂಖ್ಯೆ)
ಪ್ರವಾಸೋದ್ಯಮ
[ಬದಲಾಯಿಸಿ]ಜಾರ್‍ಖಂಡ್ ರಾಜ್ಯದಲ್ಲಿ ಅನೇಕ ಪ್ರವಾಸಿ ಆಕರ್ಷಕ ಸುಂದರ ತಾಣಗಳಿವೆ. ಅವುಗಳಲ್ಲಿ ಇಚಾಬಾಗ್, ಉಧವ, ಚಂದ್ರಾಪುರ ಮತ್ತು ತೆನುಘಾಟ್‍ನ ಪಕ್ಷಿಧಾಮಗಳು, ಸಾಹಿಬ್‍ಗಂಜ್‍ನ ಪಥರ ಸರೋವರ, ಕೊಡರಮ ಜಿಲ್ಲೆಯ ತಿಲಾಯ ಜಲಾಶಯದ ಮೊಸಳೆಗಳ ಪಾಲನ ಸ್ಥಳ ಚಚ್ರೋ, ಬೊಕಾರೊದಲ್ಲಿರುವ ಜವಾಹರಲಾಲ್ ನೆಹರೂ ಪ್ರಾಣಿ ಸಂಗ್ರಹಾಲಯ ವನ, ಜೆಂಷೆಡ್‍ಪುರದ ದಾಲ್ಮ ಅರಣ್ಯ ಮೃಗಧಾಮ, ತಾತ ಉಕ್ಕು ಪ್ರಾಣಿ ಸಂಗ್ರಹಾಲಯ, ಗುಮ್ಲ ಜಿಲ್ಲೆಯ ಪಾಲ್ಕೊಟೆ ಅರಣ್ಯ ಮೃಗಧಾಮ, ರಾಜ್ಯದ ರಾಜಧಾನಿ ರಾಂಚಿಯಲ್ಲಿರುವ ಭಗವಾನ್ ಬಿರ್ಸ ಪ್ರಾಣಿವನ, ಮತ್ಸ್ಯಸಂಗ್ರಹಾಲಯ, ಕಾಲ್ಮತಿ ರಾಂಚಿಯಲ್ಲಿರುವ ಬಿರ್ಸ ಜಿಂಕೆಗಳ ಧಾಮ, ಹಜûರಿಬಾಗ್‍ನ ರಾಷ್ಟ್ರೀಯ ಉದ್ಯಾನವನ, ದುಮ್ಕದಲ್ಲಿರುವ ತಕೋಲೈ ಬಿಸಿನೀರ ಬುಗ್ಗೆ ಇವಲ್ಲದೆ ಸರಂದ ಅರಣ್ಯ ಪ್ರದೇಶ, ಮಸಾಂಜೊರೆ ಜಲಾಶಯ ಬಹುಮುಖ್ಯವೆನಿಸಿವೆ. ಜಾರ್‍ಖಂಡ್‍ಧಾಮ್, ಲಗ್ನಟಬಾಲಾ ದೇವಾಲಯ, ಮಾತೆ ಬಿಂದ ವಾಸಿನಿ ದೇವಾಲಯಗಳೂ ಪ್ರಸಿದ್ಧವಾದವು.
ಇತಿಹಾಸ
[ಬದಲಾಯಿಸಿ]ಭಾರತದ 28ನೇ ರಾಜ್ಯವಾಗಿ 2000, ನವಂಬರ್ 15ನೆ ದಿನದಂದು ಈ ರಾಜ್ಯ ಅಸ್ತಿತ್ವಕ್ಕೆ ಬಂತು. ಬ್ರಿಟಿಷರ ಆಳ್ವಿಕೆಯಲ್ಲಿ ಬೆಂಗಾಲ್ ಪ್ರೆಸಿಡೆನ್ಸಿ ವಿಭಾಗಕ್ಕೆ ಸೇರಿತ್ತು. 1912ರಲ್ಲಿ ಬಿಹಾರ, ಒರಿಸ್ಸದೊಡನೆ ಇದು ಹೊರ ಬಂತು. 1965ರಲ್ಲಿ ಸ್ಥಾಪಿಸಲ್ಪಟ್ಟ ಚೋಟಾನಾಗಪುರ್ ಉನ್ನತಿ ಸಮಾಜ್ ಸ್ಥಳೀಯ ಆದಿವಾಸಿಗಳ ಕಲ್ಯಾಣವನ್ನು, ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡಿದ್ದು 1928ರಲ್ಲಿ ಪ್ರಥಮ ಬಾರಿಗೆ ಸೈಮನ್ ಕಮಿಷನ್ ಮುಂದೆ ಪ್ರತ್ಯೇಕ ಜಾರ್‍ಖಂಡ್ ಬೇಡಿಕೆಯನ್ನಿಟ್ಟಿತು. 1933ರಲ್ಲಿ ಚೋಟಾನಾಗಪುರ ಮತ್ತು ಸಂತಾಲ್ ಪರಗಣ ಗೇಣಿಗೆ ಕಾಯಿದೆಯನ್ನು ಸ್ಥಳೀಯ ಗುಡ್ಡುಗಾಡು ಜನರ ಏಳಿಗೆಗಾಗಿ ಜಾರಿಗೆ ತರಲಾಯಿತು. ಮುಂದೆ ಜಾರ್‍ಖಂಡ್ ಮುಕ್ತಿಮೋರ್ಚಾ ಪಕ್ಷ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿ 2000ರ ನವಂಬರ್ 15ರಂದು ಜಾರ್‍ಖಂಡ್ ರಾಜ್ಯದ ಉದಯಕ್ಕೆ ಕಾರಣವಾಯಿತು. 1928ರಲ್ಲಿ ಹಾಕಿಯಲ್ಲಿ ಭಾರತ ಒಲಂಪಿಕ್ ಸ್ವರ್ಣಪದಕ ಗೆಲ್ಲಲು ಇಲ್ಲಿಯ ಹಾಕಿಪಟು ಜಯಪಾಲ್‍ಸಿಂಗ್ ಮುಂಡ ಹೆಚ್ಚು ಶ್ರಮಿಸಿದ್ದನೆಂಬುದನ್ನು ಭಾರತೀಯರು ಮರೆಯಲಾರರು.
ರಾಜಕೀಯ
[ಬದಲಾಯಿಸಿ]- ವಿಧಾನಸಭೆ ಚುನಾವಣೆ 2014
- ಜಾರ್ಖಂಡ್‌ನ 13 ವಿಧಾನಸಭೆ ಕ್ಷೇತ್ರಗಳಿಗೆ Nov 25, 2014, ನಡೆದ ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.62ರಷ್ಟು ಮತದಾನವಾಗಿದೆ.
- ಒಬ್ಬ ಸಚಿವ 10 ಶಾಸಕರು ಸೇರಿದಂತೆ 199 ಅಭ್ಯರ್ಥಿಗಳು ಜಾರ್ಖಂಡ್ ವಿಧಾನಸಭೆ ಕಣದಲ್ಲಿದ್ದಾರೆ. ಈ ಕ್ಷೇತ್ರಗಳಲ್ಲಿ 15,77,090 ಮಹಿಳೆಯರು ಸೇರಿದಂತೆ 33,61,938 ಮತದಾರರಿದ್ದಾರೆ.
- ಎಲ್ಲ ಹಂತಗಳು ಸೇರಿ ಒಟ್ಟಾರೆ ಈ ಸರ್ತಿ ರಾಜ್ಯದಲ್ಲಿ ಶೇ.65ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಕಣಿವೆಯಲ್ಲಿ ಕಳೆದ 2008ರ ಚುನಾವಣೆಯಲ್ಲಿ ಶೇ.61.42, 2002ರಲ್ಲಿ ಶೇ.43.09ರಷ್ಟು ಮತದಾನವಾಗಿತ್ತು. ಜಾರ್ಖಂಡ್‌ನಲ್ಲಿ ಈ ಬಾರಿ ಎಲ್ಲ ಹಂತಗಳ ಮತದಾನ ಸೇರಿ ಶೇ.66ರಷ್ಟು ಮತದಾನವಾಗಿದೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಶೇ.54.2ರಷ್ಟು ಮತದಾನವಾಗಿದ್ದು, ಈ ದಾಖಲೆ ಈಗ ಪುಡಿಯಾಗಿದೆ. ಡಿ.23ರಂದು ಉಭಯ ರಾಜ್ಯಗಳ ಮತ ಎಣಿಕೆ ನಡೆಯಲಿದೆ.
- 81 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷ 37 ಸ್ಥಾನಗಳನ್ನು ಗಳಿಸಿದ ನಂತರ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ದಾಸ್ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು. 1980ರಲ್ಲಿ ಬಿಜೆಪಿಗೆ ಸೇರಿದ ದಾಸ್ ಎರಡು ಬಾರಿ ರಾಜ್ಯಾಧ್ಯಕ್ಷರಾಗಿದ್ದಾರೆ.
ದಿ.28-12-2014 ಭಾನುವಾರ , ಜಾರ್ಖಂಡ್‌ನ 10 ನೇ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ರಘುವರ ದಾಸ್ ಪ್ರಮಾಣ ವಚನ ಸ್ವೀಕರಿಸಿದರು.
- ಜಾರ್ಖಂಡ್‌ನ ಬುಡಕಟ್ಟಿಗೆ ಸೇರದ ಜಾರ್ಖಂಡ್‌ನ ಮೊದಲ ಮುಖ್ಯಮಂತ್ರಿ ರಘುವರ ದಾಸ್, ಎರಡು ಪಕ್ಷಗಳ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಲ್ಲಿದ್ದಾರೆ. ಪದಚ್ಯುತ ಮುಖ್ಯಮಂತ್ರಿ ಹೇಮಂತ್ ಸೋರೆನ್ ವಿರುದ್ಧ ಜಯಸಾಧಿಸಿರುವ ಲೂಯಿಸ್ ಮರಾಂಡಿ ಬಿಜೆಪಿಯ ಸಚಿವರು. ಚಂದ್ರ ಪ್ರಕಾಶ್ ಚೌಧರಿ ಸಂಪುಟದಲ್ಲಿ ಎಜೆಎಸ್‌ಯುವನ್ನು ಪ್ರತಿನಿಧಿಸಲ್ಲಿದ್ದಾರೆ.
- ರಾಜ್ಯಪಾಲ ಸೈಯದ್ ಅಹಮ್ಮದ್ ಅವರು ಬಿರ್ಸಾ ಮುಂಡಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 59 ವರ್ಷದ ದಾಸ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
- ಬಿಜೆಪಿಯ ನೀಲಕಾಂತ್ ಸಿಂಗ್ ಮುಂಡಾ, ಚಂದ್ರೇಶ್ವರ್ ಪ್ರಸಾದ್ ಸಿಂಗ್, ಲೂಯಿಸ್ ಮರಾಂಡಿ ಮತ್ತು ಎ.ಜೆ.ಎಸ್.ಯು ಪಕ್ಷದ ಚಂದ್ರಪ್ರಕಾಶ್ ಚೌಧರಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡರು. ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 12 ಸಚಿವರು ಇರಲು ಅವಕಾಶವಿದೆ.
2014ರ ಜಾರ್ಖಂಡ್ ಫಲಿತಾಂಶ
[ಬದಲಾಯಿಸಿ]ಪಕ್ಷ | ಗೆಲವು. | ಬದಲಾವಣೆ | ವೋಟು,ಶೇ. |
---|---|---|---|
ಬಿಜೆಪಿ + | 42 | +19 | 32% |
ಕಾಂಗ್ರೆಸ್+ | 6 | -15 | 10% |
ಜೆ.ಎಮ್.ಎಮ್. | 19 | +1 | 21% |
ಜೆವಿಎಮ್`ಪಿJVM(P) | 8 | -3 | 10% |
ಇತರೆ | 6 | -2 | 27% |
ಒಟ್ಟು | 81 | - | 1೦೦% |
ಇತರೆ ಪಕ್ಷ | ಗೆಲವು | - | - |
ಎ.ಜೆ.ಎಸ್.ಯು.ಪಾರ್ಟಿ(ಬಿಜೆಪಿಗೆ ಬೆಂಬಲ) | 5 | - | - |
ಬಹುಜನ ಸಮಾಜವಾದಿ ಪಾರ್ಟಿ | 1 | - | - |
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (M-L)(Lbrn) | 1 | - | - |
ಜಯಭಾರತ ಸಮತಾ ಪಾರ್ಟಿ | 1 | - | |
ಜಾರ್ಕಂಡ್ ಪಾರ್ಟಿ | 1 | - | - |
- ಝಾರ್ಖಂಡ್
- ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
- Articles with FAST identifiers
- Articles with VIAF identifiers
- Articles with BNF identifiers
- Articles with BNFdata identifiers
- Articles with GND identifiers
- Articles with J9U identifiers
- Articles with LCCN identifiers
- Articles with NKC identifiers
- Articles with MusicBrainz area identifiers