ಜಾರ್ಜೆಸ್ ಮೆಲಿಯೇಸ್
ಜಾರ್ಜೆಸ್ ಮೆಲಿಯೇಸ್ (Georges Méliès) ಎಂದೇ ಖ್ಯಾತರಾದ ಮೇರಿ-ಜಾರ್ಜೆಸ್-ಜೀನ್-ಮೆಲಿಯೇಸ್[೧] (೮ ಡಿಸೆಂಬರ್ ೧೮೬೧– ೨೧ ಜನವರಿ ೧೯೩೮)ರವರು ಚಲನಚಿತ್ರಗಳ ಆರಂಭಿಕ ದಿನಗಳಲ್ಲಿ ನಿರೂಪಣೆ ಹಾಗು ತಾಂತ್ರಿಕ ವರ್ಗಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡ ಫ಼್ರೆಂಚ್ ಚಲನಚಿತ್ರ ನಿರ್ದೇಶಕ ಹಾಗು ಇಂದ್ರಜಾಲಿಗ. ಸದಾ ಹೊಸ ತಂತ್ರಾಂಶಗಳನ್ನು ಸೃಷ್ಟಿಸುವುದನ್ನೇ ತಮ್ಮ ಹೆಗ್ಗುರುತನ್ನಾಗಿಸಿಕೊಂಡಿದ್ದ ಮೆಲಿಯೇಸ್, ತಮ್ಮ ಚಲನಚಿತ್ರಗಳಲ್ಲಿ ಬಳಸುತ್ತಿದ್ದ ವಿಶೇಷ ಪರಿಣಾಮ(ಸ್ಪೆಷಲ್ ಎಫ಼ೆಕ್ಟ್ಸ್)ಗಳಿಗೆ ಹೆಸರುವಾಸಿಯಾಗಿದ್ದರು. ಸುಬ್ಸ್ಟಿಟ್ಯುಶನ್ ಸ್ಪ್ಲೈಸಸ್, ಮಲ್ಟಿಪಲ್ ಎಕ್ಸ್ಪೋಷರ್,ಟೈಮ್ ಲ್ಯಾಪ್ಸ್ ಛಾಯಾಗ್ರಹಣ,ಡಿಸಾಲ್ವ್ ,ಕೈಯಿಂದ ಮಾಡಿದ ಬಣ್ಣದ ಚಲನಚಿತ್ರಗಳು ಹಾಗು ಇನ್ನೂ ಹಲವು ತಂತ್ರಾಂಶಗಳನ್ನು ಜನಪ್ರಿಯಗೊಳಿಸುವಲ್ಲಿ ಇವರದ್ದೇ ಸಿಂಹಪಾಲು. ಚಿತ್ರ ನಿರ್ಮಾಣದಲ್ಲಿ ಸ್ಟೋರಿಬೋರ್ಡ್ ಗಳನ್ನು ಉಪಯೋಗಿಸಿದವರಲ್ಲಿ ಜಾರ್ಜೆಸ್ ಮೊದಲಿಗರು[೨]. ಜ್ಯುಲ್ಸ್ ವರ್ನೆಯವರ ಶೈಲಿಯಲ್ಲಿ ವಿಚಿತ್ರ ಹಾಗು ಅಸಂಭಾವ್ಯ ಪಯಣಗಳನ್ನು ಬಿಂಬಿಸುವ ಇವರ ಜನಪ್ರಿಯ ಚಿತ್ರಗಳಾದ ಎ ಟ್ರಿಪ್ ಟು ದ ಮೂನ್(೧೯೦೨) ಹಾಗು ದಿ ಇಂಪಾಸಿಬಲ್ ವೊಯೇಜ್(೧೯೦೪) , ಕಾಲ್ಪನಿಕ ಕಥಾನಕಗಳಾಗಿದ್ದರೂ, ವೈಜ್ಞಾನಿಕ ಕಲ್ಪನೆಯನ್ನು ಆಧರಿಸಿದ ಆರಂಭಿಕ ಚಿತ್ರಗಳ ಪಟ್ಟಿಯಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದಿವೆ.
ಜಾರ್ಜೆಸ್ ಮೆಲಿಯೇಸ್ | |
---|---|
ಜನನ | ಮೇರಿ-ಜಾರ್ಜೆಸ್-ಜೀನ್-ಮೆಲಿಯೇಸ್ ೮ ಡಿಸೆಂಬರ್ ೧೮೬೧ ಪ್ಯಾರಿಸ್, ಫ್ರಾನ್ಸ್ |
ಮರಣ | 21 January 1938 ಪ್ಯಾರಿಸ್, ಫ್ರಾನ್ಸ್ | (aged 76)
ರಾಷ್ಟ್ರೀಯತೆ | ಫ಼್ರೆಂಚ್ |
ವೃತ್ತಿ(ಗಳು) | ಚಲನಚಿತ್ರ ನಿರ್ದೇಶಕ, ನಟ, ವಿನ್ಯಾಸಕಾರ, ಇಂದ್ರಜಾಲಿಗ, ಆಟಿಕೆ ತಯಾರಕ, ವಸ್ತ್ರ ವಿನ್ಯಾಸಕಾರ |
ಸಕ್ರಿಯ ವರ್ಷಗಳು | ೧೮೮೮–೧೯೨೩ |
ಸಂಗಾತಿ(s) | ಯುಜೀನಿ ಜೆನಿನ್ (೧೮೮೫–೧೯೧೩; ಇವರ ಮರಣದವರೆಗೂ) ಜಿಹ್ಯಾನ್ ಡಿ'ಎಲ್ಸಿ (೧೯೨೫–೧೯೩೮; ಜಾರ್ಜೆಸ್ ಮರಣದವರೆಗೂ) |
ಮಕ್ಕಳು | ೨ |
Signature | |
ಆರಂಭಿಕ ಜೀವನ ಹಾಗು ವಿದ್ಯಾಭ್ಯಾಸ
[ಬದಲಾಯಿಸಿ]ಜೀನ್-ಲೂಯಿ-ಸ್ಟ್ಯಾನಿಸ್ಲಾಸ್ ಮೆಲಿಯೇಸ್ ಹಾಗು ಅವರ ಡಚ್ ಪತ್ನಿ ಜೊಹಾನ-ಕ್ಯಾಥರೀನ್ ಶ್ಯುಅರಿಂಗ್ ರವರಿಗೆ ಡಿಸೆಂಬರ್ ೮ ೧೮೬೧ರಂದು ಮೇರಿ-ಜಾರ್ಜೆಸ್-ಜೀನ್ ಮೆಲಿಯೇಸ್ ಜನಿಸಿದರು[೩]. ಜಾರ್ಜೆಸ್ ನವರ ತಂದೆಯವರದು ಚಮ್ಮಾರ ವೃತ್ತಿ. ಕೆಲಸಕ್ಕಾಗಿ ಪ್ಯಾರಿಸಿಗೆ ತೆರಳಿ ಅಲ್ಲಿನ ಒಂದು ಬೂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ಜೊಹಾನ-ಕ್ಯಾಥರೀನ್ ರವರನ್ನು ಭೇಟಿಯಾದರು. ಜೊಹಾನ-ಕ್ಯಾಥರೀನ್ ರವರ ತಂದೆಯು ಡಚ್ ರಾಜಸಂಸ್ಥಾನದ ಅಧಿಕೃತ ಚಮ್ಮಾರರಾಗಿದ್ದರು, ಆದರೆ ಬೆಂಕಿಯ ಕಾರಣ ತಮ್ಮ ವಹಿವಾಟಿನಲ್ಲಿ ನಷ್ಟವನ್ನನುಭವಿಸಿದರು. ಜೀನ್ ಲೂಯಿಯವರು ಶಿಕ್ಷಣ ಪಡೆಯಲು ಜೊಹಾನ-ಕ್ಯಾಥರೀನ್ ಸಹಾಯ ನೀಡಿದರು. ಸ್ವಲ್ಪ ಸಮಯಾನಂತರ ಇಬ್ಬರು ಮದುವೆಯಾಗಿ, ಬೊಲೆವಾರ್ಡ್ ಸೇಂಟ್-ಮಾರ್ಟಿನ್ನಲ್ಲಿ ಉತ್ತಮ ಗುಣಮಟ್ಟದ ಬೂಟ್ ಕಾರ್ಖಾನೆಯನ್ನು ಸ್ಥಾಪಿಸಿದರು. ಈ ಕಾಲಘಟ್ಟದಲ್ಲಿ ಅವರಿಗೆ ಹೆನ್ರಿ ಹಾಗು ಗ್ಯಾಸ್ಟನ್ ಎಂಬ ಇಬ್ಬರು ಮಕ್ಕಳಿದ್ದರು. ಜಾರ್ಜೆಸ್ ಹುಟ್ಟುವಷ್ಟರಲ್ಲಿ ಮೇಲಿಯೇಸ್ ಕುಟುಂಬವು ಸಾಕಷ್ಟು ಐಶ್ವರ್ಯವಂತರಾಗಿದ್ದರು[೩].
ಲೈಸೀ ಮಿಚೆಲೆಟ್ನಲ್ಲಿ ೭ನೇ ವರ್ಷದವರೆಗೆ ಜಾರ್ಜೆಸ್ ರವರ ವಿದ್ಯಾಭ್ಯಾಸ ನೆಡೆಯಿತು. ಫ್ರಾಂಕೊ-ಪ್ರಶ್ಯನ್ ಯುದ್ಧದಲ್ಲಿ ಈ ಶಾಲೆಯು ಬಾಂಬ್ ದಾಳಿಗೊಳಗಾಗಿದ್ದರಿಂದ ಅವರ ವಿದ್ಯಾಭ್ಯಾಸವು ಪ್ರತಿಷ್ಠಿತ ಲೈಸಿ ಲೂಯಿ-ಲೆ-ಗ್ರಾಂಡ್ ನಲ್ಲಿ ಮುಂದುವರೆಯಿತು. ಆ ಕಾಲದ ಚಿತ್ರ ನಿರ್ದೇಶಕರು ಯಾವುದೇ ಕಲಾತ್ಮಕ ಚಿತ್ರವನ್ನು ನಿರ್ಮಿಸಲು ಬಾರದ ಅನಕ್ಷರಸ್ಥರು ಎಂಬ ಅಪಾದನೆಗೆ ತದ್ವಿರುದ್ಧವಾಗಿ ಜಾರ್ಜೆಸ್ ತಮ್ಮ ಆತ್ಮಚರಿತ್ರೆಯಲ್ಲಿ,ತಮಗೆ ದೊರಕಿದ ಔಪಚಾರಿಕ ಹಾಗು ಶಾಸ್ತ್ರೀಯ ವಿದ್ಯಾಭ್ಯಾಸದ ಬಗ್ಗೆಒತ್ತಿ ಹೇಳಿದ್ದಾರೆ[೩].ಅದಾಗ್ಯೂ ತಮ್ಮ ಸೃಜನಶೀಲ ಸ್ವಭಾವವು ತಮ್ಮ ಬೌದ್ಧಿಕ ಸ್ವಭಾವವನ್ನು ಸುಲಭವಾಗಿ ಮೀರಿಸುತ್ತಿತ್ತು ಎಂದು ಅವರೇ ಒಪ್ಪಿಕೊಂಡಿದ್ದಾರೆ. ತಮ್ಮ ಕಿರುಪುಸ್ತಕ ಹಾಗು ಪಠ್ಯಪುಸ್ತಕಗಳನ್ನು ಚಿತ್ರಗಳಿಂದ ತುಂಬುವ ಅಭ್ಯಾಸದಿಂದ ಅಗಾಗ್ಗೆ ಶಿಕ್ಷಕರಿಂದ ಶಿಸ್ತುಕ್ರಮಕ್ಕೆ ಒಳಗಾಗುತ್ತಿದ್ದ ಯುವ ಜಾರ್ಜೆಸ್ ತಮ್ಮ ಹತ್ತನೇ ವಯಸ್ಸಿನಲ್ಲಿ ರಟ್ಟಿನಿಂದ ಸೂತ್ರದಗೊಂಬೆಗಳ ರಂಗಸ್ಥಳಗಳನ್ನು ನಿರ್ಮಿಸಲಾರಂಭಿಸಿದರು. ಕ್ರಮೇಣ ತಮ್ಮ ಹದಿಹರೆಯದರಲ್ಲಿ ಜಟಿಲ ಕೀಲುಗೊಂಬೆಗಳನ್ನು ತಯಾರಿಸಲಾರಂಭಿಸಿದ ಜಾರ್ಜೆಸ್, ಲೈಸೀಯಿಂದ ೧೮೮೦ರಲ್ಲಿ ಸ್ನಾತಕಪದವಿ ಪಡೆದರು[೪].
ರಂಗಜೀವನ
[ಬದಲಾಯಿಸಿ]ವಿದ್ಯಾಭ್ಯಾಸದ ನಂತರ, ಮೆಲಿಯೇಸ್ ತಮ್ಮ ಕುಟುಂಬದ ಪಾದರಕ್ಷೆಯ ವ್ಯವಹಾರದಲ್ಲಿ ತಮ್ಮ ಸಹೋದರರ ಕೈಜೋಡಿಸಿದಾಗ ಅಲ್ಲಿ ಅವರು ಹೊಲಿಯುವುದನ್ನು ಕಲಿತರು. ೩ ವರ್ಷಗಳ ಕಡ್ಡಾಯ ಸೈನಿಕ ಸೇವೆಯನ್ನು ಮುಗಿಸಿದ ನಂತರ, ಅವರ ತಂದೆಯಯು ಮೆಲಿಯೇಸ್ ರನ್ನು ಲಂಡನ್ನಿನಲ್ಲಿದ್ದ ಓರ್ವ ಸ್ನೇಹಿತರಲ್ಲಿ ಗುಮಾಸ್ತನಾಗಿ ಕೆಲಸ ಮಾಡಲು ಕಳಿಸಿದರು. ಲಂಡನ್ನಿನಲ್ಲಿದ್ದಾಗ, ಇವರು ಅಲ್ಲಿನ ಖ್ಯಾತ ಗಾರುಡಿಗ ಜಾನ್ ನೆವಿಲ್ ಮಾಸ್ಕೆಲೈನ್ ನೆಡೆಸುತ್ತಿದ್ದ ಎಜಿಪ್ಶಿಯನ್ ಹಾಲಿಗೆ ಭೇಟಿ ನೀಡಲಾರಂಭಿಸಿದರು. ಜಾರ್ಜೆಸ್ ರವರ ಜೀವಮಾನ ಪರ್ಯಂತವಿದ್ದ ವೇದಿಕೆಯಲ್ಲಿ ನೆಡೆಯುವ ಇಂದ್ರಜಾಲದ ಮೇಲಿನ ಒಲುವು ಕುಡಿಯೊಡೆದದ್ದು ಇಲ್ಲಿಯೇ[೪]. ೧೮೮೫ರಲ್ಲಿ ಎಕೋಲೆ ಡೆ ಬಿಯೋ-ಆರ್ಟ್ಸ್ ನಲ್ಲಿ ಚಿತ್ರಕಲೆ ಕಲಿಯುವ ಹೊಸ ಆಸೆಯೊಂದಿಗೆ ಮೆಲಿಯೇಸ್ ಪ್ಯಾರಿಸ್ಸಿಗೆ ಮರಳಿದರು. ಆದರೆ ಅವರ ತಂದೆಯು ಇವರ ಕಲಾವೃತ್ತಿಯನ್ನು ಆರ್ಥಿಕವಾಗಿ ಬೆಂಬಲಿಸಲು ನಿರಾಕರಿಸಿದರು. ಆದ್ದರಿಂದ ಮೆಲಿಯೇಸ್, ತಮ್ಮ ಕುಟುಂಬದ ಕಾರ್ಖಾನೆಯೊಂದರಲ್ಲಿ ಯಂತ್ರಗಳ ಮೆಲುಸ್ತುವಾರರಾಗಿ ಕೆಲಸ ಮಾಡಲಾರಂಭಿಸಿದರು. ಅದೇ ವರ್ಷದಲ್ಲಿ ತಮ್ಮ ಕುಟುಂಬದ ಇಷ್ಟದ ಪ್ರಕಾರ ತಮ್ಮ ಸಹೋದರನ ನಾದಿನಿಯನ್ನು ವಿವಾಹವಾಗುವುದರ ಬದಲು, ತಮ್ಮ ಕುಟುಂಬದ ಸ್ನೇಹಿತರೊಬ್ಬರ ಮಗಳಾದ ಯುಜೀನಿ ಜೆನಿನ್ರನ್ನು ಮದುವೆಯಾದರು. ಯುಜೀನಿಯ ಪೋಷಕರು ಅವರಿಗಾಗಿ ಉತ್ತಮ ಮೊತ್ತದ ವರದಕ್ಷಿಣೆಯನ್ನು ಬಿಟ್ಟು ಹೋಗಿದ್ದರು. ಮೆಲಿಯೇಸ್ ಹಾಗು ಯುಜೀನಿಗೆ ಇಬ್ಬರು ಮಕ್ಕಳು : ಜಾರ್ಜೆಟ್, ಜನನ - ೧೮೮೮ ಹಾಗು ಅಂಡ್ರೆ, ಜನನ - ೧೯೦೧.
ತಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಲೇ ಮೆಲಿಯೇಸ್ ಯಕ್ಷಿಣಿಯಾಟದ ಮೇಲಿದ್ದ ತಮ್ಮ ಒಲವನ್ನು ಬೆಳಸುತ್ತಿದ್ದರು. ಜೀನ್ ಯುಜೀನ್ ರಾಬರ್ಟ್ ಹೌಡಿನ್ ಸ್ಥಾಪಿಸಿದ ಥಿಯೇಟರ್ ರಾಬರ್ಟ್ ಹೌಡಿನ್ ನಲ್ಲಿ ನೆಡೆಯುತ್ತಿದ್ದ ಯಕ್ಷಿಣಿಯಾಟಗಳಿಗೆ ಹೋಗತೊಡಗಿದರು. ಎಮಿಲ್ ವಾಯಿಸಿನ್ ಎಂಬುವವರಲ್ಲಿ ಯಕ್ಷಿಣಿಯಾಟ ಕಲಿಯಲಾರಂಭಿಸಿದ ಮೆಲಿಯೇಸ್ ಗೆ, ಗ್ರೆವಿನ್ ಮೇಣದ ವಸ್ತುಸಂಗ್ರಹಾಲಯದ ದಿ ಕ್ಯಾಬಿನೆಟ್ ಫೆಂಟಾಸ್ಟಿಕ್ ಹಾಗು ನಂತರ ಗ್ಯಾಲರಿ ವಿವಿಯೆನ್ನಲ್ಲಿ ಮೊತ್ತಮೊದಲ ಸಾರ್ವಜನಿಕ ಪ್ರದರ್ಶನ ನೆಡೆಸಲು ಇದೇ ಎಮಿಲ್ ಅವಕಾಶ ಕಲ್ಪಿಸಿಕೊಟ್ಟರು.[೪]
೧೮೮೮ರಲ್ಲಿ ಮೆಲಿಯೇಸ್ ರ ತಂದೆ ನಿವೃತ್ತಿ ಹೊಂದಿದರು. ತಮ್ಮ ಕುಟುಂಬದ ಪಾದರಕ್ಷೆಗಳ ವ್ಯವಹಾರದಲ್ಲಿದ್ದ ತಮ್ಮ ಭಾಗವನ್ನು ಮೆಲಿಯೇಸ್, ತಮ್ಮ ಸಹೋದರರಿಗೆ ಮಾರಿದರು. ಈ ಮಾರಾಟ ಹಾಗು ತಮ್ಮ ಹೆಂಡತಿಯು ನೀಡಿದ ವರದಕ್ಷಿಣೆಯ ಹಣವನ್ನು ಒಟ್ಟುಗೂಡಿಸಿ ಥಿಯೇಟರ್ ರಾಬರ್ಟ್ ಹೌಡಿನ್ ರಂಗಮಂದಿರವನ್ನು ಖರೀದಿಸಿದರು. ರಂಗಮಂದಿರವು ಉತ್ತಮ ಸ್ಥಿತಿಯಲ್ಲಿದ್ದು, ಬೆಳಕು, ಲೀವರ್ ಗಳು, ಜಾರುಬಾಗಿಲು ಹಾಗು ಹಲವಾರು ಸ್ವನಡೆಯುವ ತಂತ್ರಜ್ಞಾನಗಳನ್ನು ಒಳಗೊಂಡಿದ್ದರೂ ಸಹ ಅಲ್ಲಿ ತೋರಿಸುತ್ತಿದ್ದ ಇಂದ್ರಜಾಲಗಳು ಹಳೆಯದಾಗಿದ್ದವು. ಆದ್ದರಿಂದ ಮೇಲಿಯೇಸ್ ಮಾಡಿದ ಅರಂಭದ ನವೀಕರಣದ ನಂತರವೂ ರಂಗಮಂದಿರವು ಜನರನ್ನು ಸೆಳೆಯುವಲ್ಲಿ ವಿಫಲಗೊಂಡಿತು.
ಮುಂದಿನ ೯ ವರ್ಷಗಳಲ್ಲಿ, ಮೆಲಿಯೇಸ್ ಖುದ್ದಾಗಿ ೨೦ಕ್ಕೂ ಹೆಚ್ಛು ಹೊಸ ಇಂದ್ರಜಾಲಗಳನ್ನು ರಚಿಸಿದರು. ತಾವು ಲಂಡನ್ನಿನಲ್ಲಿ ನೋಡಿದ್ದಂತಹ ಇಂದ್ರಜಾಲಗಳಲ್ಲಿದ್ದ ಉತ್ತಮ ಹಾಸ್ಯ ಹಾಗು ಅತಿರೇಕದ ವೈಭವನ್ನು ಈ ಹೊಸ ಇಂದ್ರಜಾಲಗಳಲ್ಲಿ ಅಳವಡಿಸಿದರು. ಇದರಿಂದ ಮೆಲಿಯೇಸ್ ರ ರಂಗಮಂದಿರದೆಡೆಗೆ ಜನ ಮುಗಿಬೀಳಲಾರಂಭಿಸಿದರು. ಅವರ ಅತ್ಯಂತ ಜನಪ್ರಿಯವಾದ ಮಾಯಜಾಲವು ಅವರ ರಿಕಾಲ್ಸಿಟ್ರಾಂಟ್ ದಿಕ್ಯಾಪಿಟೆಟೆಡ್ ಮ್ಯಾನ್ ನಲ್ಲಿ ಮೂಡಿಬಂತು. ಈ ಮಾಯೆಯಲ್ಲಿ ಪ್ರೊಫೆಸರಿನ ತಲೆಯು ಭಾಷಣದ ಮಧ್ಯದಲ್ಲಿ ಕಡಿದು ಬಿದ್ದ ನಂತರ ಬರೀ ರುಂಡವು ಭಾಷಣವನ್ನು ಮುಂಡದೊಂದಿಗೆ ಜೋಡಿಸುವವರೆಗೂ ಮುಂದುವರಿಸುತ್ತದೆ. ಈ ರಂಗಸ್ಥಳವನ್ನು ಖರೀದಿಸಿದಾಗ, ಅದರ ಜೊತೆಗೆ ಮುಖ್ಯ ಯಂತ್ರಕರ್ಮಿ ಯುಜೀನ್ ಕಾಲ್ಮೆಲ್ಸ್ ಹಾಗು ಜಿಹ್ಯಾನ್ ಡಿಯಾಲ್ಸಿಯಂತಹ ನಟರನ್ನು ಸಹ ಅದರೊಂದಿಗೆ ದೊರೆತರು. ಜಿಹ್ಯಾನ್, ಮುಂದೆ ಅವರ ಪ್ರಿಯತಮೆಯಾಗಿ, ನಂತರದ ದಿನಗಳಲ್ಲಿ ಪತ್ನಿಯೂ ಆದರು. ತಮ್ಮ ಸಂಬಂಧಿ ಅಡಾಲ್ಫ್ ಮೆಲಿಯೇಸ್ ನೆಡೆಸುತ್ತಿದ್ದ ಲ ಗ್ರಿಫೆ ಎಂಬ ಪ್ರಗತಿಪರ ಪತ್ರಿಕೆಯಲ್ಲಿ ರಾಜಕೀಯ ವ್ಯಂಗಕಾರನಾಗಿಯೂ ಮೆಲಿಯೇಸ್ ಕಾರ್ಯ ನಿರ್ವಹಿಸಿದರು.[೪]
ಥಿಯೇಟರ್ ರಾಬರ್ಟ್ ಹೌಡಿನ್ನಿನ ಮಾಲಿಕರಾಗಿ ಮಿಲಿಯೇಸ್ ರಂಗದ ಹಿಂದಿನ ಕೆಲಸಗಳಲ್ಲಿ ಮಗ್ನರಾದರು. ಅವರು ನಿರ್ದೇಶಕ, ನಿರ್ಮಾಪಕ, ಲೇಖಕ, ದೃಶ್ಯ ಹಾಗು ವಸ್ತ್ರ ವಿನ್ಯಾಸಕಾರ, ಹೊಸ ಮಾಯಾ ತಂತ್ರಗಳ ಸಂಶೋಧಕ ಹೀಗೆ ಹತ್ತು ಹಲವು ಕರ್ತವ್ಯಗಳನ್ನು ನಿರ್ವಹಿಸಿದರು. ರಂಗಮಂದಿರದ ಜನಪ್ರಿಯತೆ ಹೆಚ್ಚಾದಂತೆಲ್ಲಾ ಬುವಾಟಿಯರ್ ಡೆ ಕೊಲ್ಟ, ಡುಪ್ರೆ ಹಾಗು ರೆನಾಲೆಯಂತಹ ಪ್ರಸಿದ್ಧ ಗಾರುಡಿಗರನ್ನು ಮೆಲಿಯೇಸ್ ಕರೆತಂದರು. ಯಕ್ಷಿಣಿ ಆಟಗಳ ಜೊತೆಗೆ ಕಿನ್ನರಿ ಮೂಕನಾಟಕಗಳು, ಮಧ್ಯಂತರ ವಿರಾಮಗಳಲ್ಲಿ ರೊಬೋ ಆಟಗಳು, ಮಾಯಾವಿ ಲಾಟೀನಿನ ಪ್ರದರ್ಶನ ಹಾಗು ಹಿಮಪಾತ, ಗುಡುಗು ಸಿಡಿಲಿನಂತಹ ಸ್ಪೆಷೆಲ್ ಎಫೆಕ್ಟ್ಸ್ ಸಹ ಇರುತ್ತಿದ್ದವು. ೧೮೯೫ರಲ್ಲಿ ಮೆಲಿಯೇಸ್ ಚೇಂಬರ್ ಸಿಂಡಿಕೇಲ್ ಡೆಸ್ ಆರ್ಟಿಸ್ಟ್ಸ್ ಇಲ್ಲ್ಯುಷನಿಸ್ಟ್ಸ್ ನ ಅಧ್ಯಕ್ಷನಾಗಿ ಚುನಾಯಿತರಾದರು.[೪]
ಆರಂಭಿಕ ವೃತ್ತಿಜೀವನ
[ಬದಲಾಯಿಸಿ]೨೮ ಡಿಸೆಂಬರ್ ೨೮೯೫ರ ಸಂಜೆ, ಮೆಲಿಯೇಸ್ ಲೂಮಿಯೇರ್ ಸಹೋದರರು ಪ್ಯಾರಿಸಿನ ರಂಗಮಂದಿರಗಳ ಯಜಮಾನರಿಗಾಗಿ ಏರ್ಪಡಿಸಿದ್ದ ಸಿನಿಮಾಟೊಗ್ರಾಫಿನ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದರು. [೫][lower-alpha ೧]ಯಂತ್ರವನ್ನು ಮೆಚ್ಛಿದ ಮೆಲಿಯೇಸ್, ಅದಕ್ಕಾಗಿ ೧೦,೦೦೦ ಫ್ರಾಂಕ್ ಕೊಟ್ಟು ಕೊಳ್ಳುವುದಾಗಿ ಹೇಳಿದರೂ, ಲುಮಿಯೇರ್ ಸಹೋದರರು ತಮ್ಮ ಯಂತ್ರದ ವೈಜ್ಞಾನಿಕ ಸ್ವಭಾವವನ್ನು ಕಾಪಿಡುವ ನಿಟ್ಟಿನಿಂದ ನಿರಾಕರಿಸಿದರು.(ಇದೇ ಕಾರಣದಿಂದ, ಅದೇ ರಾತ್ರಿ ಬಂದ ಮ್ಯುಸೆ ಗ್ರೆವಿನ್ನಿನ ೨೦,೦೦೦ ಫ್ರಾಂಕ್ ಹಾಗು ಫೊಲಿಯೆಸ್ ಬೆರ್ಜೆರೆಯ ೫೦,೦೦೦ ಫ್ರಾಂಕಿನ ಪ್ರಸ್ತಾಪವನ್ನು ನಿರಾಕರಿಸಿದ್ದರು)[೬]. ತಮ್ಮ ಥಿಯೇಟರ್ ರಾಬರ್ಟ್ ಹೌಡಿನ್ನಿಗೆ ಚಲನಚಿತ್ರದ ಪ್ರೊಜೆಕ್ಟರನ್ನು ತರಲು ತೀರ್ಮಾನಿಸಿದ ಮೆಲಿಯೇಸ್, ಯುರೋಪ್ ಹಾಗು ಅಮೇರಿಕಾದಲ್ಲಿ ಲುಮಿಯೇರ್ ಸಹೋದರರ ಯಂತ್ರದಂತಹ ಯಂತ್ರವನ್ನು ತಯಾರಿಸಲು ಪ್ರಯತ್ನಿಸುತ್ತಿದ್ದ ಅನೇಕ ಅನ್ವೇಷಕರತ್ತ ತಮ್ಮ ದೃಷ್ಟಿಯನ್ನು ನೆಟ್ಟರು. ಬಹುಶಃ ಜಿಹ್ಯಾನ್, ತಾವು ಇಂಗ್ಲೆಂಡಿನ್ನಲ್ಲಿ ಪ್ರಯಾಣದ ಮಾಡುತ್ತಿದ್ದಾಗ ಕಂಡಿದ್ದ ರಾಬರ್ಟ್ ಡಬ್ಲ್ಯು. ಪಾಲ್ ನಿರ್ಮಿತ ಅನಿಮಾಟೊಗ್ರಾಫ್ ಫಿಲ್ಮ್ ಪೊರ್ಜೆಕ್ಟರಿನ ಬಗ್ಗೆ ನೀಡಿದ ಸುಳಿವಿನ ಮೇರೆಗೆ, ಮೆಲಿಯೇಸ್ ಲಂಡನ್ನಿಗೆ ತೆರಳಿದರು. ಅಲ್ಲಿ ಪಾಲ್ ರಿಂದ ಅನಿಮಾಟೊಗ್ರಾಫ್, ಪಾಲ್ ಹಾಗು ಎಡಿಸನ್ ಮಾನ್ಯುಫಾಕ್ಚರಿಂಗ್ ಕಂಪೆನಿಯು ತಯಾರಿಸಿದ ಹಲವಾರು ಕಿರುಚಿತ್ರಗಳನ್ನು ಮೆಲಿಯೇಸ್ ಕೊಂಡೊಯ್ದರು. ಎಪ್ರಿಲ್ ೧೮೯೬ರಿಂದ ಥಿಯೇಟರ್ ರಾಬರ್ಟ್ ಹೌಡಿನ್ನಿನಲ್ಲಿ ದಿನನಿತ್ಯ ಪ್ರದರ್ಶನದ ಅಂಗವಾಗಿ ಚಲನಚಿತ್ರಗಳನ್ನು ಪ್ರದರ್ಶಿಸಲಾರಂಭಿಸಲಾಯಿತು.[೭]
ಅನಿಮೆಟೊಗ್ರಾಫಿನ ರಚಿಸುವುದನ್ನು ಕಲಿತ ನಂತರ, ಮೆಲಿಯೇಸ್ ಯಂತ್ರದಲ್ಲಿ ತಮ್ಮದೇ ಮಾರ್ಪಾಡುಗಳನ್ನು ಅಳವಡಿಸಿ ಅದನ್ನು ಚಲನಚಿತ್ರದ ಕ್ಯಾಮರಾವನ್ನಾಗಿ ಪರಿವರ್ತಿಸಿದರು.[೭] ಪ್ಯಾರಿಸ್ಸಿನಲ್ಲಿ ಕಚ್ಚಾ ಚಿತ್ರ ಸಾಮಗ್ರಿಗಳು ಹಾಗು ಚಿತ್ರ ಪರಿಷ್ಕರಣೆಯ ಪ್ರಯೋಗಾಲಯಗಳು ಇಲ್ಲವಾದ್ದರಿಂದ, ಮೆಲಿಯೇಸ್ ರಂಧ್ರಗಳಿಲ್ಲದ ಚಿತ್ರಪಟಗಳನ್ನು ಲಂಡನ್ನಿನಿಂದ ಖರೀದಿಸಿ ತಂದು, ಖುದ್ದು ತಾವೇ ಅದರ ಮೇಲೆ ಅಡ್ಡಗುಡ್ಡೇಟು ಹಾಕುತ್ತ ಚಿತ್ರಗಳನ್ನು ಮುದ್ರಿಸತೊಡಗಿದರು.[೮]
ಸೆಪ್ಟೆಂಬರ್ ೧೮೯೬ರಲ್ಲಿ, ಮೆಲಿಯೇಸ್, ಲೂಸಿಯನ್ ಕೋರ್ಸ್ಟನ್ ಹಾಗು ಲೂಸಿಯನ್ ರಿಯುಲೋಸ್ ಕೈನೆಟೊಗ್ರಾಫ್ ರಾಬರ್ಟ್ ಹೌಡಿನ್ ಎಂಬ ಹೆಸರಿನ ಎರೆಕಬ್ಬಿಣದ ಕ್ಯಾಮರಾ ಪ್ರೊಜೆಕ್ಟರ್ ಗೆ ಪೇಟೆಂಟ್(ಹಕ್ಕುಸ್ವಾಮ್ಯ ಪಡೆದರು) . ಈ ಯಂತ್ರವು ಮಾಡುತ್ತಿದ್ದ ಸದ್ದಿನ ಕಾರಣ, ಮೆಲಿಯೇಸ್ ಇದನ್ನು ತಮ್ಮ "ಮೆಷೀನ್ ಗನ್" ಹಾಗು "ಕಾಫಿ ಅರೆಯುವ ಯಂತ್ರ" ಎಂದೆ ಕರೆಯುತ್ತಿದ್ದರು.೧೮೯೭ರಷ್ಟರಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುರೆದಿದ್ದರಿಂದ, ಹಲವು ಉತ್ತಮ ಕ್ಯಾಮರಾಗಳು ಪ್ಯಾರಿಸ್ಸಿನಲ್ಲಿ ದೊರೆಯಲಾರಂಭಿಸಿದವು. ಆಗ ತಮ್ಮ ಕ್ಯಾಮರಾವನ್ನು ಬದಿಗಿರಿಸಿದ ಮೆಲಿಯೇಸ್ ಗಾಮೌಂಟ್, ಲೂಮಿರೇಸ್ ಹಾಗು ಪಾಥೆ ಮುಂತಾದವರಿಂದ ತಯಾರಿಸಿದ ನವೀನ ಕ್ಯಾಮರಾಗಳನ್ನು ಖರೀದಿಸ ತೊಡಗಿದರು[೮].
೧೮೯೬ರಿಂದ ೧೯೧೩ರವರೆಗೆ ಮೆಲಿಯೇಸ್ ೧ ನಿಮಿಷದಿಂದ - ೪೦ ನಿಮಿಷದ ಕಾಲಾವಧಿಯಿರುವ ಸುಮಾರು ೫೦೦ಕ್ಕಿಂತಲೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದರು. ಈ ಚಿತ್ರಗಳು ಮೆಲಿಯೇಸ್ ನೆಡೆಸುತ್ತಿದ್ದ ಇಂದ್ರಜಾಲ ಪ್ರದರ್ಶನದಂತೆಯೇ ಹಲವಾರು "ಕೈಚಳಕಗಳು" ಹಾಗು ಮಾಯವಾಗುವುದು, ಕುಬ್ಜಗೊಳ್ಳುವುದು ಹೀಗೆ ಅನೇಕ ಅತ್ಯದ್ಭುತ ಅಸಾಧ್ಯವಾದ ಸಂಗತಿಗಳನ್ನು ಒಳಗೊಂಡಿರುತ್ತಿದ್ದವು. ಮೊದಮೊದಲ ಈ ಮೋಡಿಗಳಲ್ಲಿ ಯಾವುದೆ ಕಥೆಯ ಇರುತ್ತಿರಲಿಲ್ಲ.ಈ ಮೋಡಿಗಳ ಬಳಕೆಯು, ಚಲನಚಿತ್ರದ ಜಗತ್ತಿನಲ್ಲಿ ಏನು ಸಾಧ್ಯ ಎಂದು ತೋರುವುದಕ್ಕಾಗಿದ್ದವೇ ಹೊರತು ಒಟ್ಟು ಚಿತ್ರಕಥೆಯ ಅಭಿರುಚಿಯನ್ನು ಹೆಚ್ಚಿಸುವಲ್ಲಿ ಯಾವುದೇ ಸಹಾಯವನ್ನು ಮಾಡುತ್ತಿರಲಿಲ್ಲ. ಮೆಲಿಯೇಸ್ ರವರ ಮೊದಲಿನ ಚಿತ್ರಗಳಲ್ಲಿ ,ಚಿತ್ರದುದ್ದಕ್ಕೂ ಕೇವಲ ಒಂಟಿ ಒಳ-ಕ್ಯಾಮರಾ ಎಫೆಕ್ಟ್ಗಳನ್ನು ಬಳಸುತ್ತಿದ್ದರು. ಉದಾಹರಣೆಗೆ, ಮಲ್ಟಿಪಲ್ ಎಕ್ಸ್ಪೋಷರಿನಲ್ಲಿ ಪ್ರಯೋಗ ಮಾಡಲು, ಮೆಲಿಯೇಸ್ "ದಿ ಒನ್ ಮ್ಯಾನ್ ಬ್ಯಾಂಡ್" ಚಿತ್ರವನ್ನು ನಿರ್ಮಿಸಿದರು. ಇದರಲ್ಲಿ ಮೆಲಿಯೇಸ್ ಏಳು ವಿವಿಧ ಪಾತ್ರಗಳನ್ನು ಏಕಕಾಲಿಕವಾಗಿ ನಿರ್ವಹಿಸಿದ್ದರು.[೩]
ಮೇ ೧೮೯೬ರಲ್ಲಿ ಮೆಲಿಯೇಸ್ ತಮ್ಮ ಮೊದಲ ಚಲನಚಿತ್ರಗಳನ್ನು ತಯಾರಿಸಲಾರಂಭಿಸಿದರು . ಈ ಚಿತ್ರಗಳು ಆಗಸ್ಟ್ ತಿಂಗಳಿನಲ್ಲಿ ಥಿಯೇಟರ್ ರಾಬರ್ಟ್ ಹೌಡಿನ್ನಿನಲ್ಲಿ ತೆರೆಕಂಡವು. ೧೮೯೬ರ ಕೊನೆಯಲ್ಲಿ ಮೆಲಿಯೇಸ್ ಹಾಗು ರಿಯುಲೊಸ್ ಇಬ್ಬರು ಸೇರಿ ಸ್ಟಾರ್ ಫಿಲ್ಮ್ ಕಂಪೆನಿಯನ್ನು ಶುರು ಮಾಡಿದರು. ಈ ಕಂಪೆನಿಯಲ್ಲಿ ಕಾರ್ಸ್ಟನ್ ಮುಖ್ಯ ಕ್ಯಾಮರಾ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದರು. ಗ್ರಾಂಡ್ ಕೆಫ಼ೆಯ ದೈನಂದಿನದ ೨೦೦೦ ಶ್ರೋತ್ರುಗಳನ್ನು ಮೀರಿಸುವ ನಿಟ್ಟಿನಿಂದ, ಮೆಲಿಯೇಸರ ಸಾಕಷ್ಟು ಮೊದಲಿನ ಚಿತ್ರಗಳು ಲುಮಿಯೇರ್ ಸಹೋದರರ ಚಿತ್ರಗಳ ನಕಲು ಇಲ್ಲವೇ ರಿಮೇಕ್ ಗಳಾಗಿದ್ದವು[೮]. ಇವುಗಳಲ್ಲಿ ಅವರ ಮೊತ್ತಮೊದಲ ಚಲನಚಿತ್ರ ಪ್ಲೇಯಿಂಗ್ ಕಾರ್ಡ್ಸ್ ಹಾಗು ಲುಮಿಯೇರ್ ಸಹೋದರರ ಒಂದು ಮೊದಲಿನ ಚಿತ್ರದಲ್ಲಿ, ಬಹಳಷ್ಟು ಸಮಾನತೆಗಳಿದ್ದವು. ಆದರೆ ಮೇಲಿಯೇಸರ ಹಲವು ಮೊದಲಿನ ಚಿತ್ರಗಳಲ್ಲಿ ವೈಭವೀಕರಣ ಹಾಗು ನಾಟಕೀಯತೆಗೆ ಅವರಲ್ಲಿದ್ದ ಚಾಕಚಕ್ಯತೆಗಳನ್ನು ಕಾಣಬಹುದು. ಉದಾಹರಣೆಗೆ, ಏ ಟೆರಿಬಲ್ ನೈಟ್ ಎಂಬ ಚಿತ್ರದಲ್ಲಿ ಹೊಟೆಲಿನ ಅಥಿತಿಯ ಮೇಲೆ ಒಂದು ಬೃಹತ್ ತಿಗಣೆಯು ಆಕ್ರಮಣ ಮಾಡುವ ದೃಶ್ಯ[೯]. ಲುಮಿಯೇರ್ ಸಹೋದರರ ಪ್ರಕಾರ, ಕ್ಯಾಮರಾವು ಇತಿಹಾಸ ಹಾಗು ವೈಜ್ಞಾನಿಕ ಅಭ್ಯಾಸಕ್ಕೆ ಒಂದು ಬಹುಮುಖ್ಯವಾದ ಸಾಧನವಾದ್ದರಿಂದ ಜಗತ್ತಿನಾದ್ಯಂತ ಹಲವಾರು ಕ್ಯಾಮರಾ ನಿರ್ವಾಹಕರನ್ನು ರವಾನಿಸಿ, ಆಗಿನ ಜನಜೀವನವನ್ನು ದಾಖಲಿಸಲು ಶುರುಮಾಡಿದರು. ಆದರೆ ಮೆಲಿಯೇಸ್ ಸ್ಟಾರ್ ಕಂಪೆನಿಯು ಜನಸಾಮಾನ್ಯರ ಮನರಂಜನೆಯತ್ತ ಹೆಚ್ಚು ಗಮನಹರಿಸಿ, ಅವರಿಗೆ ಬೇಕಾದಂತಹ ಇಂದ್ರಜಾಲ, ಕೈಚಳಕ ಹೀಗೆ ಹಲವು ಕಲೆಗಳನ್ನು ತಮ್ಮ ಚಿತ್ರಗಳಲ್ಲಿ ಅಳವಡಿಸತೊಡಗಿದರು.[೮]
ತಮ್ಮ ಆರಂಭಿಕ ಚಿತ್ರಗಳಿಂದಲೇ, ಮೆಲಿಯೇಸ್ ತಮ್ಮ ಅನನ್ಯ ಶೈಲಿಯಲ್ಲಿ ಹಲವು ಹೊಸ ಕಣ್ಕಟ್ಟು ಮೋಡಿಗಳನ್ನು ಪ್ರಯೋಗಿಸಿ, ಅನ್ವೇಷಿಸಿ ಅದನ್ನು ಚಿತ್ರಗಳಲ್ಲಿ ಅಳವಡಿಸಲಾರಂಭಿಸಿದರು. ಮೆಲಿಯೇಸರ ಆತ್ಮಚರಿತ್ರೆಯ ಪ್ರಕಾರ ಇದು ಆರಂಭವಾದದ್ದು ಆಕಸ್ಮಿಕವಾಗಿ. ಒಂದು ದೃಶ್ಯದ ಚಿತ್ರೀಕರಣದ ನಡುವೆ ಕ್ಯಾಮರಾ ಸಿಕ್ಕಿಹಾಕಿಕೊಂಡಾಗ,"ಒಂದು ಮೇಡಲೀನ್-ಬ್ಯಾಸ್ಟಿಲಿನ ಬಸ್ ಹೆಣಗಾಡಿಯಾಗಿ ಪರಿವರ್ತಿತಗೊಂಡಿತ್ತು ಹಾಗು ಹೆಂಗಸರು ಗಂಡಸರಾಗಿ ಪರಿವರ್ತಿತರಾಗಿದ್ದರು. ಈ ರೀತಿಯಾಗಿ ಸ್ಟಾಪ್ ಟ್ರಿಕ್ ಎಂಬ ಕ್ಯಾಮರಾ ಬದಲಿ ತಂತ್ರದ ಅವಿಷ್ಕಾರವಾಯಿತು.".[೯] ಥಾಮಸ್ ಎಡಿಸನ್ನಿನ ದಿ ಎಕ್ಸಿಕ್ಯುಷನ್ ಆಫ್ ಮೇರಿ ಸ್ಟುವರ್ಟ್ ಚಿತ್ರದಲ್ಲಿ, ತಲೆ ಕಡಿದು ಹೋಗುವ ಒಂದು ದೃಶ್ಯದಲ್ಲಿ ಈ ತಂತ್ರವನ್ನು ಈಗಾಗಲೇ ಉಪಯೋಗಿಸಲಾಗಿದ್ದರೂ, ಮೇಲಿಯೇಸರು ತಮ್ಮದೇ ಅನನ್ಯ ಶೈಲಿಯಲ್ಲಿ ಕೈಚಳಕ ಹಾಗು ಇಂದ್ರಜಾಲದ ತೋರಿಕೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು. ಈ ತಂತ್ರವನ್ನು ಅವರು ತಮ್ಮ ದಿ ವ್ಯಾನಿಶಿಂಗ್ ಲೇಡಿಯಲ್ಲಿ ಉಪಯೋಗಿಸಿದ್ದರು. ಇಂದ್ರಜಾಲದಲ್ಲಿ, ವ್ಯಕ್ತಿಯು ವೇದಿಕೆಯ ಮೇಲಿಂದ ಮಾಯವಾಗುವ ಸರ್ವೇಸಾಮಾನ್ಯ ಕೈಚಳಕವನ್ನು, ಈ ಚಿತ್ರದಲ್ಲಿ ತಮ್ಮದೇ ಶೈಲಿಯಲ್ಲಿ ಮೆಲಿಯೇಸ್ ತೋರಿಸಿದ್ದಾರೆ. ಈ ಚಿತ್ರದಲ್ಲಿ ಒಬ್ಬ ವ್ಯಕ್ತಿಯು ಅಸ್ಥಿಪಂಜರವಾಗಿ ಮಾರ್ಪಾಡಾಗಿ, ಕೊನೆಯಲ್ಲಿ ಮತ್ತೆ ಮನುಷ್ಯನಾಗಿ ಪ್ರತ್ಯಕ್ಷವಾಗುತ್ತಾನೆ.[೯]
ಸೆಪ್ಟೆಂಬರ್ ೧೮೯೬ರಲ್ಲಿ ಮೆಲಿಯೇಸ್ ಪ್ಯಾರಿಸ್ಸಿನ ಬಳಿಯಿರುವ ಮೊಂಟ್ರಿಯಿಲ್ ನಲ್ಲಿರುವ ತಮ್ಮ ಜಾಗದಲ್ಲಿ ಫಿಲ್ಮ್ ಸ್ಟುಡಿಯೊ ನಿರ್ಮಿಸಲಾರಂಭಿಸಿದರು. ಇದರ ಮುಖ್ಯ ವೇದಿಕೆಯು ಸಂಪೂರ್ಣವಾಗಿ ಗಾಜಿನ ಗೋಡೆ ಹಾಗು ಚಾವಣಿಯನ್ನು ಹೊಂದಿತ್ತು ಹಾಗು ಇದರ ರಚನೆ ಥಿಯೇಟರ್ ರಾಬರ್ಟ್ ಹೌಡಿನನ್ನು ಹೋಲುತ್ತಿತ್ತು.ಈ ಸಂರಚನೆಯ ಅತಿಮುಖ್ಯ ಉಪಯೋಗವೆಂದರೆ, ಚಿತ್ರ ನಿರ್ದೇಶನಕ್ಕೆ ಅತಿಮುಖ್ಯವಾಗಿ ಬೇಕಾದ ಬೆಳಕು ಪ್ರಾಕೃತಿವಾಗಿ ದೊರೆಯುತ್ತಿತ್ತು. ಇಲ್ಲಿ ಅಲಂಕಾರ ಕೊಠಡಿಗಳನ್ನು ರಚಿಸಲು ಪೂರಕವಾಗುವ ಒಂದು ಶೆಡ್ ಹಾಗು ಸೆಟ್ ಗಳನ್ನು ನಿರ್ಮಿಸಲು ಒಂದು ವಿಶಾಲವಾದ ಹ್ಯಾಂಗರ್ ಮೊದಲಿನಿಂದಲೇ ಲಭ್ಯವಿತ್ತು. ಬಣ್ಣದ ವಸ್ತುಗಳು ಕಪ್ಪು-ಬಿಳುಪು ಛಾಯಾಚಿತ್ರಗಳಲ್ಲಿ ಅನಿರೀಕ್ಷಿತ ರೀತಿಯಲ್ಲಿ ಮೂಡಿಬರುತ್ತಿದ್ದವಾದ್ದರಿಂದ ಎಲ್ಲ ಸೆಟ್ ಗಳು ಹಾಗು ನಟರ ವೇಷಭೂಶಣಗಳನ್ನು ಬೂದು ಬಣ್ಣದ ವಿವಿಧ ಛಾಯೆಗಳಲ್ಲಿ ವಿನ್ಯಾಸ ಮಾಡಲಾಗಿತ್ತು. ಮೆಲಿಯೀಸ್ ಈ ಸ್ಟುಡಿಯೋವನ್ನು "ಒಂದು ಬೃಹತ್ ಛಾಯಾಚಿತ್ರದ ಕಮ್ಮಟ ಹಾಗು ರಂಗಸ್ಥಳದ ವೇದಿಕೆಯ ಸಮ್ಮಿಶ್ರಣ" ಎಂದು ಬಣ್ಣಿಸಿದ್ದರು[೧೦]. ತಮ್ಮ ಉಳಿದ ವೃತ್ತಿಜೀವನದುದ್ದಕ್ಕೂ, ಮೆಲಿಯೇಸ್ ಮೊಂಟ್ರಿಯಿಲ್ ಹಾಗು ಥಿಯೇಟರ್ ರಾಬರ್ಟ್ ಹೌಡಿನ್ನಿನ ನಡುವೆ ತಮ್ಮ ಕೆಲಸಗಳನ್ನು ನಿಭಾಯಿಸುತ್ತಿದ್ದರು. ಅವರು "ಬೆಳಿಗ್ಗೆ ೭ಕ್ಕೆ ಮೊಂಟ್ರಿಯಿಲ್ಲಿನ ಸ್ಟುಡಿಯೋಗೆ ಆಗಮಿಸುತ್ತಿದ್ದ ಮೆಲಿಯೇಸ್ ಮುಂದಿನ ೧೦ ಗಂಟೆಗಳ ಕಾಲ ಸೆಟ್ ಹಾಗು ರಂಗಪರಿಕರಗಳನ್ನು ವಿನ್ಯಾಸ ಮಾಡುವಲ್ಲಿ ತಲ್ಲೀನರಾಗಿರುತ್ತಿದ್ದರು. ಸಂಜೆ ೬ ಗಂಟೆಗೆ ಪ್ಯಾರಿಸಿನ ತಮ್ಮ ಥಿಯೇಟರಿಗೆ ಬರುತ್ತಿದ್ದ ಕರೆಗಳನ್ನು ನಿರ್ವಹಿಸುವ ನಿಟ್ಟಿನಿಂದ, ಮೆಲಿಯೇಸ್ ೫ ಗಂಟೆಗೆ ಬಟ್ಟೆಯನ್ನು ಬದಲಿಸಿ ಪ್ಯಾರಿಸಿನೆಡೆಗೆ ಪ್ರಯಾಣ ಬೆಳೆಸುತ್ತಿದ್ದರು. ರಾತ್ರಿ ಊಟದ ನಂತರ, ರಾತ್ರಿ ೮ರ ಪ್ರದರ್ಶನಕ್ಕಾಗಿ ಥಿಯೇಟರಿಗೆ ಮರಳುತ್ತಿದ್ದ ಮೆಲಿಯೇಸ್, ಈ ಸಮಯದಲ್ಲಿ ಹೊಸ ಸೆಟ್ಟಿನ ವಿನ್ಯಾಸದ ಮೇಲೆ ಕೆಲಸ ಮಾಡುತ್ತಿದ್ದರು. ಪ್ರದರ್ಶನದ ನಂತರ ಮಲಗಲು ಮೊಂಟ್ರಿಯಿಲ್ಲಿಗೆ ಮರಳುತ್ತಿದ್ದರು. ಶುಕ್ರವಾರ ಹಾಗು ಶನಿವಾರದಂದು,ಆ ವಾರದಲ್ಲಿ ತಯಾರಿಸಿದ್ದ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಭಾನುವಾರ ಹಾಗು ರಜಾದಿನಗಳಂದು, ಥಿಯೇಟಿರನಲ್ಲಿ ನೆಡೆಯುತ್ತಿದ್ದ ಹಗಲಿನ ಪ್ರದರ್ಶನಗಳನ್ನು ವೀಕ್ಷಣೆ, ೩ ಚಲನಚಿತ್ರಗಳ ತೆರೆಕಾಣುವಿಕೆ ಹಾಗು ರಾತ್ರಿ ೧೧:೩೦ರ ವರೆಗೆ ನೆಡೆಯುತ್ತಿದ್ದ ಸಂಜೆಯ ನಿರೂಪಣೆಯಲ್ಲಿ ಮೆಲಿಯೇಸ್ ಮಗ್ನರಾಗಿರುತ್ತಿದ್ದರು"[೧೧].
೧೮೯೬ರಲ್ಲಿ ಒಟ್ಟು ೭೮ ಚಿತ್ರಗಳನ್ನು ನಿರ್ಮಿಸಿದ ಮೆಲಿಯೇಸ್ , ೧೮೯೭ರಲ್ಲಿ ೫೨ ಚಿತ್ರಗಳನ್ನು ನಿರ್ಮಿಸಿದರು. ಮೆಲಿಯೇಸ್ ಲುಮಿಯೇರರ ರೀತಿಯ ಸ್ಯಾಕ್ಷ್ಯಚಿತ್ರಗಳು,ಹಾಸ್ಯಚಿತ್ರಗಳು, ಪೌರಾಣಿಕ ಚಿತ್ರಗಳು, ನಾಟಕೀಯ ಚಿತ್ರಗಳು ಹಾಗು ಕಾಲ್ಪನಿಕ ಕಥಾನಕದ ಚಿತ್ರಗಳನ್ನು ನಿರ್ಮಿಸುವಲ್ಲಿ ಹೆಸರುವಾಸಿಯಾದರು. ೧೮೯೭ರಷ್ಟರಲ್ಲಿ ಈ ಎಲ್ಲಾ ಬಗೆಯ ಚಿತ್ರಗಳನ್ನು ನಿರ್ಮಿಸಿದ್ದ ಮೆಲಿಯೇಸರ ಕಾಲ್ಪನಿಕ ಕಥಾನಕದ ಚಿತ್ರಗಳು ಮನೆಮಾತಾದವು. ಲುಮಿಯೇರ್ ಸಹೋದರರು ಹಾಗು ಪಾಥೆ ಕಂಪೆನಿಯ ತರಹ, ಸ್ಟಾರ್ ಫಿಲ್ಮ್ಸ್ ಸಹ ಪೀಪಿಂಗ್ ಟಾಮ್ ಅಟ್ ದಿ ಸೀಸೈಡ್, ಅ ಹಿಪ್ನೊಟಿಸ್ಟ್ ಅಟ್ ವರ್ಕ್ ಹಾಗು ಆಫ್ಟರ್ ದ ಬಾಲ್ ನಂತಹ ಲಂಪಟ ಚಿತ್ರಗಳನ್ನು ನಿರ್ಮಿಸುತ್ತಿತ್ತು. ಇವೆಲ್ಲದರಲ್ಲಿ ಕೇವಲ ಆಫ್ಟರ್ ದ ಬಾಲ್ ಮಾತ್ರ ಅಸ್ತಿತ್ವದಲ್ಲಿದೆ. ಈ ಚಿತ್ರದಲ್ಲಿ ಜಿಹ್ಯಾನ್ ಡಿಯಾಲ್ಸಿಯು ಕೇವಲ ಚರ್ಮದ ಬಣ್ಣದ ಪೋಷಾಕು ಕಾಣುವವರೆಗು ತಮ್ಮ ವಸ್ತ್ರಗಳನ್ನು ಕಳಚಿಹಾಕುವ ದೃಶ್ಯವಿದೆ. ನಂತರ ಬರುವ ಕೆಲಸದಾಕೆ ಜಿಹ್ಯಾನ್ ಗೆ ಸ್ನಾನ ಮಾಡಿಸುತ್ತಾಳೆ. ೧೮೯೬-೧೯೦೦ ರ ನಡುವೆ ಮೆಲಿಯೇಸ್, ವಿಸ್ಕಿ, ಚಾಕಲೇಟ್ ಹಾಗು ಮಕ್ಕಳ ಉಪಹಾರದಂತಹ ವಸ್ತುಗಳಿಗೆ ಜಾಹಿರಾತುಗಳನ್ನು ಸಹ ತಯಾರಿಸಿದರು[೧೨]. ಸೆಪ್ಟೆಂಬರ್ ೧೮೯೭ರಲ್ಲಿ, ಮೆಲಿಯೇಸ್ ಥಿಯೇಟರ್ ರಾಬರ್ಟ್ ಹೌಡಿನನ್ನು ಚಲನಚಿತ್ರ ಮಂದಿರವಾಗಿ ಪರಿವರ್ತಿಸುವ ನಿಟ್ಟಿನಿಂದ, ಯಕ್ಷಿಣಿಯಾಟಗಳ ಪ್ರದರ್ಶನಗಳನ್ನು ಕಮ್ಮಿ ಮಾಡಿ, ಪ್ರತಿರಾತ್ರಿ ಚಿತ್ರಪ್ರದರ್ಶನಗಳನ್ನು ನೆಡೆಸಲಾರಂಭಿಸಿದರು. ಆದರೆ ಡಿಸೆಂಬರ್ ೧೯೯೭ರಷ್ಟರಲ್ಲಿ, ಚಿತ್ರ ಪ್ರದರ್ಶನಗಳು ಕೇವರ ಭಾನುವಾರ ರಾತ್ರಿಗೆ ಸೀಮಿತವಾದವು.[೧೩]
೧೮೯೮ರಲ್ಲಿ ಮೆಲಿಯೇಸ್ ಕೇವಲ ೨೭ ಚಿತ್ರಗಳನ್ನು ನಿರ್ಮಿಸಿದರು, ಆದರೆ ಅವರ ತಯಾರಿಸುತ್ತಿದ್ದ ಚಿತ್ರಗಳ ವೈಭವ ಬೆಳೆಯತೊಡಗಿತು. ಯು.ಎಸ್.ಎಸ್ ಮೆಯಿನ್ ನ ಮುಳುಗುವಿಕೆಯ ಮೇಲೆ ಆಧಾರಿತ ಪೌರಾಣಿಕ ಚಿತ್ರ ಡೈವರ್ಸ್ ಆಟ್ ವರ್ಕ್ ಆನ್ ದಿ ವ್ರೆಕ್ ಆಫ್ ಮೆಯಿನ್, ಕೈಚಳಕ ಹಾಗು ಚಮತ್ಕಾರದಿಂದ ಕೂಡಿದ ದಿ ಫೇಮಸ್ ಬಾಕ್ಸ್ ಟ್ರಿಕ್ ಹಾಗು ಕಾಲ್ಪನಿಕ ಕಥಾನಕವಾದ ದಿ ಆಸ್ಟ್ರಾನಮರ್ಸ್ ಡ್ರೀಮ್ ಈ ಕಾಲದ ಅವರ ಜನಪ್ರಿಯ ಚಿತ್ರಗಳು. ದಿ ಆಸ್ಟ್ರಾನಮರ್ಸ್ ಡ್ರೀಮ್ ಚಿತ್ರದಲ್ಲಿ, ಖಗೋಲವಿಜ್ಞಾನಿಯಾದ ಮೇಲಿಯೇಸರ ಪ್ರಯೋಗಾಲಯವು ಚಂದ್ರನ ಪ್ರಭಾವದಿಂದ ಬದಲಾಗಿ, ಕಿನ್ನರರು ಹಾಗು ಪಿಶಾಚಿಗಳು ಅಲ್ಲಿಗೆ ಬರುವಂತಾಗುತ್ತದೆ. ಮೆಲಿಯೇಸ್ ಧಾರ್ಮಿಕ ವಿಡಂಬನೆ ಚಿತ್ರಗಳನ್ನುಸಹ ನಿರ್ಮಿಸಿದರು. ಇದರಲ್ಲಿ ಒಂದಾದ ದಿ ಟೆಂಪ್ಟೆಷನ್ ಆಫ್ ಸೇಂಟ್ ಎಂಟನಿಯಲ್ಲಿ ಶಿಲುಬೆಯೇರಿದ ಯೇಸುವಿನ ಮೂರ್ತಿಯು ಮಾದಕ ಯುವತಿಯಾಗಿ (ನಟಿ: ಜಿಹ್ಯಾನ್ ಡಿಯಾಲ್ಸಿ) ಪರಿವರ್ತಿತವಾಗುತ್ತದೆ.[೧೩]
ಕ್ಯಾಮರಾ ಒಳಗಿನ ತಮ್ಮ ಪ್ರಯೋಗಗಳಿಂದ ಸಾಧಿಸಬಹುದಾದ ಸ್ಪೆಶಲ್ ಎಫೆಕ್ಟ್ ಗಳನ್ನು ಕಂಡುಹಿಡಿಯುವುದನ್ನು ಮೆಲಿಯೇಸ್ ಮುಂದುವರೆಸಿದರು. ಸೂಪರ್ ಇಂಪೊಸಿಶನ್ನಿನಂತಹ ಪ್ರಯೋಗಗಳಲ್ಲಿ ಮೆಲಿಯೇಸ್, ತಮ್ಮ ನಟರನ್ನು ಕಪ್ಪು ಹಿನ್ನಲೆಯೆಲ್ಲಿ ಸೆರೆಹಿಡಿದು, ನಂತರ ಕ್ಯಾಮರಾ ಮೂಲಕ ಚಿತ್ರಪಟಲವನ್ನು ಹಿಂದಕ್ಕೆ ತಂದು ಮತ್ತೆ ಅದೇ ದೃಶ್ಯದ ತುಣುಕನ್ನು ಅದರ ಮೇಲೆ ಪ್ರಕಟಿಸಿ ಡಬರ್ ಎಕ್ಸ್ಪೋಷರನ್ನು ಸಾಧಿಸುತ್ತಿದ್ದರು. ಇವರ ದಿ ಕೇವ್ ಆಫ್ ಡಿಮನ್ಸ್ ಚಿತ್ರದಲ್ಲಿ ಪಾರದರ್ಶಕ ಭೂತಗಳು ಗುಹೆಯಲ್ಲಿ ಸುಳಿದಾಡುವ ದೃಶ್ಯ ಹಾಗು ದಿ ಫೋರ್ ಟ್ರಬಲ್ಸಮ್ ಹೆಡ್ಸ್ ಚಿತ್ರದಲ್ಲಿ ಮೆಲಿಯೇಸ್ ತಮ್ಮ ತಲೆಯನ್ನು ಮೂರು ಬಾರಿ ತೆಗೆದು, ಮೇಳಗೀತ ನೆಡೆಸುವ ದೃಶ್ಯವನ್ನು ಈ ಪ್ರಯೋಗವನ್ನು ಬಳಸಿ ಚಿತ್ರಿಸಲಾಗಿದೆ. ಈ ಪ್ರಭಾವಗಳನ್ನು ಸಾಧಿಸುವುದು ಅತಿ ಕಷ್ಟದ ಹಾಗು ಜಾಣ್ಮೆಯ ಕೆಲಸವಾಗಿತ್ತು. ೧೯೦೭ರ ತಮ್ಮ ಒಂದು ಲೇಖನದಲ್ಲಿ ಇದನ್ನು ಉಲೇಖಿಸುತ್ತಾ ಮೆಲಿಯೇಸ್ : "ಪ್ರತಿ ಕ್ಷಣದಲ್ಲು, ಚಿತ್ರದ ೧೦ ವಿವಿಧ ದೃಶ್ಯಗಳಲ್ಲಿ ನಟಿಸುತ್ತಿದ್ದ ನಟನು, ಚಿತ್ರವನ್ನು ಸೆರೆ ಹಿಡಿಯುವಾಗ, ಹಿಂದಿನ ದೃಶ್ಯಗಳಲ್ಲಿ ಯಾವಾಗ,ರಂಗದ ಯಾವ ಭಾಗದಲ್ಲಿ ,ಏನು ಮಾಡಿದೆ ಎಂದು ನೆನಪಿನಲ್ಲಿಟ್ಟುಕೊಂಡಿರಬೇಕು." ಎಂದು ಬರೆದಿದ್ದಾರೆ[೧೩].
೧೮೯೯ರಲ್ಲಿ ವಿಶೇಷ ಪ್ರಯೋಗಗಳನ್ನು ಮಾಡುತ್ತಾ ಮೆಲಿಯೇಸ್ ೪೮ ಚಿತ್ರಗಳನ್ನು ನಿರ್ಮಿಸಿದರು. ಈ ಜನಪ್ರಿಯ ಚಿತ್ರಗಳಲ್ಲಿ ರಾಬಿಂಗ್ ಕ್ಲಿಯೋಪಾತ್ರಾಸ್ ಟಾಂಬ್ ಸಹ ಒಂದು. ಇದು ಕ್ಲಿಯೋಪಾತ್ರಾಳ ಮೇಲೆ ಅಧಾರಿತ ಪೌರಾಣಿಕ ಚಿತ್ರವಲ್ಲ. ಅದರ ಬದಲು ಕ್ಲಿಯೋಪಾತ್ರಾಳನ್ನು ಆಧುನಿಕ ಜಗತ್ತಿನಲ್ಲಿ ಮತ್ತೆ ಮಮ್ಮಿ ಭೂತವಾಗಿ ಪುನರುಜ್ಜೀವಗೊಳಿಸುವ ಕಥೆ. ೨೦೦೫ರಲ್ಲಿ ಪ್ಯಾರಿಸಿನಲ್ಲಿ ಈ ಚಿತ್ರದ ಪ್ರತಿ ಸಿಗುವವರೆಗೂ ಇದು ಮೆಲಿಯೇಸರ ಕಳೆದು ಹೋದ ಚಿತ್ರಗಳಲ್ಲಿ ಒಂದು ಎಂದು ಭಾವಿಸಲಾಗಿತ್ತು[೪]. ಈ ವರ್ಷದಲ್ಲಿ ಮೆಲಿಯೇಸ್ ತಮ್ಮ ಜೀವನದ ಮಹತ್ವಾಕಾಂಕ್ಷೆಯ ಹಾಗು ಅತಿ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದರು. ಮೊದಲನೆ ಚಿತ್ರ, ಅವಾಗ ನೆಡೆಯುತ್ತಿದ್ದ ವಿವಾದಾತ್ಮಕ ರಾಜಕೀಯ ಹಗರಣದ ಮೇಲಾಧರಿಸಿ ಈ ವರ್ಷದ ಬೇಸಿಗೆಯಲ್ಲಿ ಮೆಲಿಯೇಸ್, ದಿ ಡ್ರೆಫಸ್ ಅಫೇರ್ ಚಾರಿತ್ರಿಕ ಚಿತ್ರ.ಈ ಚಿತ್ರದಲ್ಲಿ ಯೆಹೂದ್ಯ ಫ್ರೆಂಚ್ ಸೇನಾನಾಯಕ ಅಲ್ಫ್ರೆಡ್ ಡ್ರೆಫಸ್ಸಿನ ಮೇಲೆ ಅವರ ಮೇಲಾಧಿಕಾರಿಗಳು, ದೇಶದ್ರೋಹದ ಸುಳ್ಳು ಅಪಾದನೆ ಹೊರಿಸಿ, ಡೆವಿಲ್ಸ್ ದ್ವೀಪದಲ್ಲಿ ಸೆರೆಯಲ್ಲಿರಿಸುತ್ತಾರೆ. ಮೆಲಿಯೇಸ್ ಡ್ರೆಫಸ್ಸಿನ ಪರವಾಗಿದ್ದಿದ್ದರಿಂದ ಡ್ರೆಫಸ್ಸನ್ನು ಮುಗ್ದ ಹಾಗು ಸುಳ್ಳು ಅಪಾದನೆ ಮೇಲೆ ಸೆರೆಯಿರಿಸುವುದಾಗಿ ಚಿತ್ರದಲ್ಲಿ ತೋರಿಸಿದ್ದಾರೆ. ಇದರಿಂದ ಚಿತ್ರ ಪ್ರದರ್ಶನದ ವೇಳೆ ಈ ವಾದದ ವಿವಿದ ಬಣಗಳ ನಡುವೆ ಹೊಡೆದಾಟಗಳು ಶುರುವಾದವು. ಆದ್ದರಿಂದ ಚಿತ್ರದ ಕೊನೆಯಲ್ಲಿ ಡ್ರೆಫಸ್ ಸೆರೆಗೆ ಮರಳುವ ದೃಶ್ಯವನ್ನು ಪ್ರದರ್ಶಿಸದಂತೆ ಆರಕ್ಷಕರು ನಿಷೇಧ ಹೇರಿದರು.[೧೪]
ಎರಡನೆಯದು, ಅದೇ ವರ್ಷದದಲ್ಲಿ ಮೆಲಿಯೇಸ್, ಚಾರ್ಲ್ಸ್ ಪೆರ್ರಾಲ್ಟಿನ ಕಾಲ್ಪನಿಕ ಕಥಾನಕಧಾರಿತ, ಸಿಂಡ್ರೆಲ್ಲಾ ಚಿತ್ರ ನಿರ್ಮಿಸಿದರು. ಚಿತ್ರವು ೬ ನಿಮಿಷದ ಕಾಲಾವಧಿ ಹಾಗು ೩೫ ನಟರನ್ನು ಹೊಂದಿತ್ತು. ಬ್ಲ್ಯುಯೆಟ್ ಬರ್ನನ್ ಚಿತ್ರದ ಮುಖ್ಯಪಾತ್ರವನ್ನು ನಿರ್ವಹಿಸಿದ್ದರು. ಇದು ಮೆಲಿಯೇಸರು ನಿರ್ಮಿಸಿದ ವಿವಿಧ ದೃಶ್ಯಗಳನ್ನು ಹೊಂದಿದ ಟ್ಯಾಬ್ಲ್ಯು ಬಗೆಯ ಮೊತ್ತಮೊದಲ ಚಿತ್ರವಾಗಿತ್ತು. ಚಿತ್ರವು ಯುರೋಪ್ ಹಾಗು ಅಮೇರಿಕಾದಲ್ಲಿ ಯಶಸ್ವಿ ಪ್ರದರ್ಶನಗೊಂಡು ಜನಪ್ರಿಯತೆ ಗಳಿಸಿತು. ಏಡಿಸನ್ ರ ಏಕಸ್ವಾಮ್ಯವನ್ನು ಮುರಿಯಲು ಹಾಗು ವೀಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯಲು ಸಿಗ್ಮಂಡ್ ಲ್ಯುಬಿನ್ ರಂತಹ ಚಿತ್ರ ಹಂಚಿಕೆದಾರರು ಹೊಸ ಬಗೆಯ ಚಿತ್ರಗಳ ಅವಶ್ಯಕತೆಯಲ್ಲಿದ್ದರು. ಮೆಲಿಯೇಸರ ಚಿತ್ರವು ಈ ನಿಟ್ಟಿನಲ್ಲಿ ಜನಪ್ರಿಯವಾಗಿದ್ದವು. ಡಿಸೆಂಬರ್ ೧೮೯೯ರಲ್ಲಿ ಅಮೆರಿಕಾದಲ್ಲಿ ತೆರೆಕಂಡ ಸಿಂಡ್ರೆಲ್ಲಾ , ಎಷ್ಟೊ ವರ್ಷಗಳ ನಂತರವು ಸಹ ಹಲವು ಜಾಗಗಳಲ್ಲಿ ಜನಪ್ರಿಯ ಪ್ರದರ್ಶನವಾಗಿತ್ತು[೧೫].ಸಿಂಡ್ರೆಲ್ಲಾದ ಯಶಸ್ಸಿನ ನಂತರ ಈ ರೀತಿಯ ಅನ್ಯದೇಶೀಯ ಚಿತ್ರಗಳ ಸ್ಪರ್ಧೆಯಿಂದ ಅಸಾಮಾಧಾನಗೊಂಡ ಥಾಮಸ್ ಎಡಿಸನ್ನಿನಂತಹ ಅಮೆರಿಕಾದ ಚಿತ್ರ ನಿರ್ಮಾಪಕರು, ಮೆಲಿಯೇಸರು ತಮ್ಮ ಚಿತ್ರಗಳನ್ನು ಅಮೆರಿಕಾದಲ್ಲಿ ಬಿಡುಗಡೆಗೊಳಿಸದಂತೆ ತಡೆಯೊಡ್ಡಲಾರಂಭಿಸಿದರು ಹಾಗು ಅತಿ ಶೀಘ್ರವೇ ಈ ನಿರ್ಮಾಪಕರು ಚಿತ್ರದ ನಕಲು ಮಾಡುವ ಪದ್ದತಿಯನ್ನು ಸಹ ಕಂಡುಹಿಡಿದುಕೊಂಡರು. ವಿದೇಶಿ ಮಾರುಕಟ್ಟೆಯಲ್ಲಿ ಎದುರಾಗುವ ಈ ತರಹದ ಸನ್ನಿವೇಶಗಳಿಂದ ತಮ್ಮನ್ನು ರಕ್ಶಿಸಿಕೊಳ್ಳಲು ಮೆಲಿಯೇಸ್ ಹಾಗು ಇತರ ನಿರ್ಮಾಪಕರು ಸೇರಿ ಟ್ರೇಡ್ ಯೂನಿಯನ್ ಚೇಂಬರ್ ಆಫ್ ಸಿನಮಾಟೊಗ್ರಾಫಿಕ್ ಎಡಿಟರ್ಸ್ ಎಂಬ ಒಕ್ಕೂಟವನ್ನು ಹುಟ್ಟುಹಾಕಿದರು. ೧೯೧೨ರ ವರೆಗೆ ಮೆಲಿಯೇಸ್ ಈ ಒಕ್ಕೂಟದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು ಹಾಗು ರಾಬರ್ಟ್ ಹೌಡಿನ್ ಥಿಯೇಟರ್ ಈ ಒಕ್ಕೂಟದ ಕೇಂದ್ರ ಕಾರ್ಯಾಲಯವಾಗಿತ್ತು.
ಈ ಸಮಯದಲ್ಲಿ, ಮೆಲಿಯೇಸ ತಮಗೊದಗಿದ ಆರ್ಥಿಕ ಯಶಸ್ಸನ್ನು ಬಳಸಿಕೊಂಡು ಮೊಂಟ್ರಿಯಿಲ್ ಸ್ಟುಡಿಯೋವನ್ನು ಸಾಕಷ್ಟು ವಿಸ್ತರಿಸಿದರು. ಈ ವಿಸ್ತರಣೆಯು ಮೆಲಿಯೇಸರಿಗೆ ಇನ್ನಷ್ಟು ವೈವಿಧ್ಯಮಯ ಸೆಟ್ ಗಳನ್ನು ತಯಾರಿಸಲು ಹಾಗು ಬೆಳೆಯುತ್ತಿದ್ದ ತಮ್ಮ ಪೋಷಾಕು, ಪರಿಕರಗಳು, ಸ್ಮರಣೀಯಗಳು ಹಾಗು ಇನ್ನಿತರ ಚಿತ್ರಸಾಮಗ್ರಿಗಳನ್ನು ಶೇಖರಿಸಿಡಲು ಪೂರಕವಾಯಿತು.
ಅಂತರಾಷ್ಟ್ರೀಯ ಮನ್ನಣೆ
[ಬದಲಾಯಿಸಿ]೧೯೦೦ರಲ್ಲಿ ಮೆಲಿಯೇಸ್ ನಿರ್ಮಿಸಿದ ಹಲವಾರು ಚಿತ್ರಗಳಲ್ಲಿ ೧೩-ನಿಮಿಷದ ಕಾಲಾವಧಿಯ ಜೋನ್ ಆಫ್ ಆರ್ಕ್ ಸಹ ಒಂದು. ಸ್ಪೆಷಲ್ ಎಫ಼ೆಕ್ಟ್ಸ್ ನ ಮೇಲಿನ ತಮ್ಮ ಕೌಶಲ್ಯವನ್ನು ಇನ್ನಷ್ಟು ವೃದ್ಧಿಸಿಕೊಂಡ ಮೆಲಿಯೇಸ್, ತಾವೇ ಒಂದೇ ಸಮನೆ ಏಳು ವಾದ್ಯಗಳನ್ನು ನುಡಿಸುತ್ತಿರುವಂತಹ ದೃಶ್ಯವುಳ್ಳ ದಿ ಒನ್ ಮ್ಯಾನ್ ಬ್ಯಾಂಡ್ ಚಿತ್ರವನ್ನು ನಿರ್ಮಿಸಿದರು. ಈ ಕಾಲಘಟ್ಟದ ಇನ್ನೊಂದು ಮಹತ್ತರ ಚಿತ್ರವೆಂದರೆ ದಿ ಕ್ರಿಸ್ಮಸ್ ಡ್ರೀಮ್. ಇದರಲ್ಲಿ ಸಿನಿಮೀಯ ಪ್ರಭಾವಗಳನ್ನು ಸಾಂಪ್ರದಾಯಿಕ ಕ್ರಿಸ್ಮಸ್ ಮೂಕನಾಟಕಗಳಲ್ಲಿ ಅಳವಡಿಸಿದರು.[೧೫]
೧೯೦೧ರಲ್ಲಿ ಮತ್ತಷ್ಟು ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದ ಮೆಲಿಯೇಸ್ ತಮ್ಮ ಯಶಸ್ಸಿನ ಉತ್ತುಂಗದಲ್ಲಿದ್ದರು. ಆ ವರ್ಷದಲ್ಲಿ ಅವರು ನಿರ್ಮಿಸಿದ ಚಿತ್ರಗಳಲ್ಲಿ ದಿ ಬ್ರಾಹ್ಮಿನ್ ಅಂಡ್ ದಿ ಬಟರ್ಫ್ಲೈ ಸಹ ಒಂದು. ಬ್ರಾಹ್ಮಿನನ ಪಾತ್ರವನ್ನು ನಿರ್ವಹಿಸಿದ ಮೆಲಿಯೇಸ್, ಈ ಚಿತ್ರದಲ್ಲಿ ಕಂಬಳಿಹುಳುವೊಂದನ್ನು ರೆಕ್ಕೆಗಳಿರುವ ಒಂದು ಸುಂದರ ಚಿಟ್ಟೆಯನ್ನಾಗಿ ಪರಿವರ್ತಿಸುತ್ತಾರೆ, ಆದರೆ ಇದರ ಕಾರಣ ಬ್ರಾಹ್ಮಿನನು ಕಂಬಳಿಹುಳುವಾಗಿ ಮಾರ್ಪಾಡಾಗುತ್ತಾನೆ. ಚಾರ್ಲ್ಸ್ ಪೆರ್ರಾಲ್ಟರ ದಿ ರೈಡಿಂಗ್ ಹೂಡ್ ಹಾಗು ಬ್ಲುಬಿಯರ್ಡ್ ಕಾಲ್ಪನಿಕ ಕಥಾನಕಗಳನ್ನು ಸಹ ಮೆಲಿಯೇಸ್ ಚಲನಚಿತ್ರಗಳನ್ನಾಗಿ ಪರಿವರ್ತಿಸಿದರು. ಬ್ಲುಬಿಯರ್ಡ್(ನೀಲಿಗಡ್ಡ) ಚಿತ್ರದ ಪತ್ನಿಗಳ ಕೊಲೆಗಾರ ಬ್ಲುಬಿಯರ್ಡ್ ಪಾತ್ರವನ್ನು ಸ್ವತಃ ಮೆಲಿಯೇಸ್ ನಿರ್ವಹಿಸಿದ್ದರು, ಹಾಗು ಈ ಚಿತ್ರದಲ್ಲಿ ಜಿಹ್ಯಾನ್ ಡಿಯಾಲ್ಸಿ ಹಾಗು ಬ್ಲುಯೆಟ್ ಬರ್ನನ್ ಸಹ ನಟಿಸಿದ್ದರು. ಈ ಚಿತ್ರವು ಕ್ರಾಸ್ ಕಟಿಂಗ್ ಹಾಗು ಪಾತ್ರಗಳು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಚಲಿಸುವ ಅಭಾಸ ನೀಡುವ ಮ್ಯಾಚ್ ಕಟ್ ಗಳ ಉಪಯೋಗದ ಬಹಳ ಮುಂಚಿನ ಉದಾಹರಣೆಯಾಗಿದೆ.ದಿ ಎಡಿಸನ್ ಕಂಪೆನಿಯ ೧೯೦೨ರಲ್ಲಿ, ಎಡ್ವಿನ್ ಎಸ್. ಪೋರ್ಟರ್ ನಿರ್ದೇಶನದಲ್ಲಿ ನಿರ್ಮಿಸಿದ ಜ್ಯಾಕ್ ಎಂಡ್ ದಿ ಬೀನ್ಸ್ಟಾಕ್ ಚಿತ್ರ ಮೆಲಿಯೇಸ್ನ ಹಲವು ಜನಪ್ರಿಯ ಚಿತ್ರಗಳು, ಮುಖ್ಯವಾಗಿ ಬ್ಲುಬಿಯರ್ಡಿನ ಒಂದು ಕಡಿಮೆ ಯಶಸ್ಸಿನ ಆವೃತ್ತಿ ಎಂದೇ ಪರಿಗಣಿಸಲಾಗಿದೆ[೭]. ಅದೇ ವರ್ಷದಲ್ಲಿ ಮೆಲಿಯೇಸ್ ನಿರ್ಮಿಸಿದ ಆಫ಼್ ಟು ಬ್ಲೂಮಿಂಗ್ಡೇಲ್ ಅಸೈಲಮ್ ಚಿತ್ರವು ಒಂದು ಕಪ್ಪುಮುಖದ ಅಣಕು ಪ್ರದರ್ಶನವಾಗಿತ್ತು. ಈ ಚಿತ್ರದಲ್ಲಿ ೪ ಬಿಳಿ ಬಸ್ ಪ್ರಯಾಣಿಕರು ಒಟ್ಟಾಗಿ ಒಬ್ಬ ದೊಡ್ಡ ಕರಿಯ ಪ್ರಯಾಣಿಕನಾಗಿ ಪರಿವರ್ತಿತವಾಗುತ್ತಾರೆ. ನಂತರ ಈ ಪ್ರಯಾಣಿಕನನ್ನು ಬಸ್ಸಿನ ಚಾಲಕನು ಗುಂಡಿಕ್ಕಿ ಕೊಲ್ಲುತ್ತಾನೆ.[೧೬]
೧೯೦೨ರಲ್ಲಿ ಕ್ಯಾಮರಾ ಚಲನಗಳಿಂದ ಪಾತ್ರದ ಗಾತ್ರಗಳಲ್ಲಿ ಉಂಟಾಗುವ ಬದಲಾವಣೆಗಳ ಮೇಲೆ ಮೆಲಿಯೇಸ್ ತಮ್ಮ ಪ್ರಯೋಗ ಪ್ರಾರಂಭಿಸಿದರು. ಅವರು ಈ ಪರಿಣಾಮವನ್ನು ರಾಟೆಯಿಂದ ಎಳೆಯಲ್ಪಡುವ ಕುರ್ಚಿಯ ವ್ಯವಸ್ಥೆಯ ಮೇಲೆ ಅಳವಡಿಸಿದ ಕ್ಯಾಮರಾವನ್ನು ಮುಂದೆ ಚಲಿಸುವಂತೆ ಮಾಡಿ ಸಾಧಿಸಿದರು. ಈ ವಿಧಾನವನ್ನು ಛಾಯಾಗ್ರಾಹಕನು ನಿಖರವಾಗಿ ಕ್ಯಾಮರಾದ ಫ಼ೊಕಸನ್ನು ಅಳವಡಿಸಲು ಹಾಗು ಪಾತ್ರಧಾರಿಯು ಫ಼್ರೇಮಿನಲ್ಲಿ ತಮ್ಮಸ್ಥಾನವನ್ನು ಹೊಂದಿಸಿಕೊಳ್ಳಲು ಇನ್ನಷ್ಟು ಸುಲಭವಾಗುವಂತೆ ಪರಿಷ್ಕರಿಸಲಾಯಿತು[೧೭]. ಈ ಎಫ಼ೆಕ್ಟನ್ನು ಮೊತ್ತಮೊದಲ ಬಾರಿಗೆ ,ತಮ್ಮ ದಿ ಡೆವಿಲ್ ಎಂಡ್ ದಿ ಸ್ಟ್ಯಾಚ್ಯು ಚಿತ್ರದಲ್ಲಿ ಮೆಲಿಯೇಸ್ ಉಪಯೋಗಿಸಿದರು. ಈ ಚಿತ್ರದಲ್ಲಿ ಮೆಲಿಯೇಸ್ ಸೈತಾನನ ಪಾತ್ರವನ್ನು ನಿರ್ವಿಸಿದ್ದರು ಹಾಗು ಈ ಸೈತಾನನು ದೈತ್ಯಾಕಾರಕ್ಕೆ ಬೆಳೆದು ಷೇಕ್ಸ್‌ಪಿಯರ್ನ ಜುಲಿಯಟ್ ಳನ್ನು ಹೆದರಿಸಲಾರಂಭಿಸುತ್ತಾನೆ ಆದರೆ ವಿರ್ಜಿನ್ ಮೇರಿಯು ಜುಲಿಯಟ್ ನ ಸಹಾಯಕ್ಕೆ ಬಂದಾಗ ಸೈತಾನನ ಆಕಾರ ಕುಗ್ಗಿಹೋಗುತ್ತದೆ. ಈ ಎಫ಼ೆಕ್ಟ್ ಮತ್ತೆ ದಿ ಮ್ಯಾನ್ ವಿತ್ ದಿ ರಬ್ಬರ್ ಹೆಡ್ ಚಿತ್ರದಲ್ಲಿ ಉಪಯೋಗಿಸಲಾಯಿತು.ಈ ಚಿತ್ರದಲ್ಲಿ ತನ್ನ ತಲೆಯನ್ನೆ ಬೃಹದಾಕಾರವಾಗಿ ಬೆಳೆಸಿಕೊಳ್ಳುವ ವಿಜ್ಞಾನಿಯ ಪಾತ್ರದಲ್ಲಿ ಮೆಲಿಯೇಸ್ ಕಂಡು ಬಂದಿದ್ದಾರೆ. ಈ ಹೊಸ ಪ್ರಯೋಗ ಹಾಗು ಎಷ್ಟೊ ವರ್ಷಗಳಿಂದ ಪರಿಷ್ಕರಿಸಿ ಪರಿಪೂರ್ಣಗೊಳಿಸಿದ್ದ ಇನ್ನೂ ಹಲವು ಪ್ರಯೋಗಗಳನ್ನು ಅದೇ ವರ್ಷದ ಕೊನೆಯಲ್ಲಿ ನಿರ್ಮಿಸಿದ ತಮ್ಮ ಅತ್ಯಂತ ಜನಪ್ರಿಯ ಹಾಗು ಸುಪ್ರಸಿದ್ಧ ಚಿತ್ರದಲ್ಲಿ ಮೇಲಿಯೇಸ್ ಬಳಸಿದರು[೧೭].
ಮೇ ೧೯೦೨ರಲ್ಲಿ ಮೆಲಿಯೇಸ್ ಜ್ಯೂಲ್ಸ್ ವರ್ನೆಯ ಫ಼್ರಮ್ ದಿ ಅರ್ಥ್ ಟು ದಿ ಮೂನ್ ಹಾಗು ಎಚ್.ಜಿ.ವೆಲ್ಸಿನ ದಿ ಫ಼ರ್ಸ್ಟ್ ಮೆನ್ ಇನ್ ದಿ ಮೂನ್ ಮೇಲೆ ಆಧರಿಸಿ ಎ ಟ್ರಿಪ್ ಟು ದಿ ಮೂನ್ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರದಲ್ಲಿ ಮೆಲಿಯೇಸ್, ತಮ್ಮ ೧೮೯೮ರ್ ದಿ ಆಸ್ಟ್ರೋನಮರ್ಸ್ ಡ್ರೀಮ್ ಚಿತ್ರದಲ್ಲಿ ಮಾಡಿದ್ದ ಪಾತ್ರದಂತೆಯೇ ರೂಪಿಸಿದ್ದ ಪ್ರೊಫ಼ೆಸರ್ ಬಾರ್ಬೆನ್ಫೌಲಿಸ್ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಪ್ರೊಫ಼ೆಸರ್ ಖಗೋಳಶಾಸ್ತ್ರಜ್ಞರ ಒಕ್ಕೂಟ ಅಧ್ಯಕ್ಷನಾಗಿದ್ದು ಚಂದ್ರಯಾನದ ಉಪಾಯವನ್ನು ಸೂಚಿಸುತ್ತಾರೆ. ತಮ್ಮ ಪ್ರಯೋಗಾಲಯದಲ್ಲಿ ಒಂದು ದೊಡ್ಡ ಮದ್ದುಗುಂಡಿನ ಆಕಾರದಲ್ಲಿ ಬಾಹ್ಯಾಕಾಶ ವಾಹನವನ್ನು ವಿನ್ಯಾಸ ಮಾಡಿ, ತಮ್ಮನ್ನೊಳಗೊಂಡು ೬ ಜನರನ್ನು ಚಂದ್ರನಲ್ಲಿಗೆ ಒಯ್ಯಲು ತಯಾರು ಮಾಡುತ್ತಾರೆ. ಈ ವಾಹನವನ್ನು ಒಂದು ದೊಡ್ದ ತೋಪಿನಿಂದ ಬಾಹ್ಯಾಕಾಶದತ್ತ ಸಿಡಿಸಿದಾಗ ಅದು ಚಂದ್ರನಲ್ಲಿರುವ ಮನುಷ್ಯನ ಒಂದು ಕಣ್ಣನ್ನು ಘಾಸಿಗೊಳಿಸಿ, ಚಂದ್ರನಲ್ಲಿ ಇಳಿಯುತ್ತದೆ.ಈ ತಂಡವು ನಿದ್ದೆ ಹೋಗುವ ಮುನ್ನ ಚಂದ್ರನ ಹೊರತಲವನ್ನು ಅನ್ವೇಷಿಸುತ್ತದೆ. ಇವರು ಕನಸು ಕಾಣುವಾಗ, ಚಂದ್ರದೇವತೆ ಫೀಬಿಯಾಗಿ ನಟಿಸಿದ ಬ್ಲ್ಯುಯೆಟ್ ಬರ್ನನ್, ಹಿಮವರ್ಷವಾಗುವಂತೆ ಮಾಡುತ್ತಾಳೆ. ನಂತರ ಪಾತಾಳದಲ್ಲಿ ಅವರ ಮೇಲೆ ಅನ್ಯಗ್ರಹ ಜೀವಿಗಳು ಆಕ್ರಮಣ ಮಾಡಿ, ಅವರನ್ನು ಬಂಧಿಸುತ್ತಾರೆ. ಫೊಲಿಯೆಸ್ ಬರ್ಜೆರೆಯ ಅಕ್ರೊಬ್ಯಾಟ್ ಗಳು ಅನ್ಯಗ್ರಹ ಜೀವಿಗಳ ಪಾತ್ರವನ್ನು ನಿರ್ವಹಿಸಿದ್ದರು. ಈ ಅನ್ವೇಷಕರನ್ನು ಜೀವಿಗಳು ತಮ್ಮ ರಾಜನಲ್ಲಿಗೆ ಕೊಂಡೊಯ್ದಾಗ, ಅಲ್ಲಿಂದ ಜಾಣ್ಮೆಯಿಂದ ತಪ್ಪಿಸಿಕೊಳ್ಳುತ್ತಾರೆ. ತಮ್ಮನ್ನು ಅಟ್ಟಿಸಿಕೊಂಡು ಬರುತ್ತಿದ್ದ ಜೀವಿಗಳಿಂದ ಓಡುತ್ತ ತಮ್ಮ ವಾಹನವನ್ನು ತಲುಪುವ ಅನ್ವೇಷಕರು, ವಾಹನದಿಂದ ಭೂಮಿಗೆ ಕಟ್ಟಲಾಗಿದ್ದ ಒಂದು ಹಗ್ಗದ ಸಹಾಯದಿಂದ, ಒಂದು ಜೀವಿಯೊಂದಿಗೆ ಭೂಮಿಯೆಡೆಗೆ ಬೀಳುತ್ತಾರೆ. ಸುಪರ್ ಇಂಪೋಸ್ ಮಾಡಿದ ಮೀನಿನ ತೊಟ್ಟಿಯ ಸಹಾಯದಿಂದ ನಿರ್ಮಿಸಲಾದ ಸಮುದ್ರದೊಳಗೆ ಬಂದು ಅನ್ವೇಷಕರು ಬೀಳುತ್ತಾರೆ. ವಾಹನವನ್ನು ದಡದತ್ತ ಸಾಗಿಸುವ ಊರಜನ, ಅನ್ವೇಷಕರ ಸಾಹಸವನ್ನು ಕೊಂಡಾಡುತ್ತಾರೆ[೧೮]. ೧೪ ನಿಮಿಷದ ಕಾಲಾವಧಿಯ ಈ ಚಿತ್ರ ಮೇಲಿಯೇಸರ ಅತಿ ಉದ್ದದ ಚಿತ್ರ ಹಾಗು ಇದನ್ನು ನಿರ್ಮಿಸಲು ಮಾಡಿದ ಖರ್ಚು ೧೦ ಸಾವಿರ ಫ್ರ್ಯಾಂಕ್.
ಜಗತ್ತಿನೆಲ್ಲೆಡೆ ಈ ಚಿತ್ರ ಸುಪ್ರಸಿದ್ಧವಾಯಿತು ಹಾಗು ಮೇಲಿಯೇಸ್ ಚಿತ್ರದ ಕಪ್ಪು-ಬಿಳುಪು ಹಾಗು ಕೈ-ಬಣ್ಣದ ಆವೃತ್ತಿಗಳನ್ನು ಪ್ರದರ್ಶಕರಿಗೆ ಮಾರಿದರು. ಈ ಚಿತ್ರವು ಮೆಲಿಯೇಸ್ರನ್ನು ಅಮೇರಿಕಾದಲ್ಲಿ ಹೆಸರುವಾಸಿಯನ್ನಾಗಿಸಿತು. ಅಲ್ಲಿ ನಿರ್ಮಾಪಕರಾದ ಥಾಮಸ್ ಎಡಿಸನ್, ಸಿಗ್ಮಂಡ್ ಲುಬಿನ್ ಹಾಗು ವಿಲಿಯಂ ಸೀಗ್ ಅಗಾಗಲೆ ಚಿತ್ರದ ನಕಲು ಪ್ರತಿಗಳನ್ನು ತಯಾರಿಸಿ, ತುಂಬ ಹಣವನ್ನು ದೋಚಿಯಾಗಿತ್ತು[೮].ಈ ಹಕ್ಕುಸ್ವಾಮ್ಯ ಉಲ್ಲಂಘನೆಯಿಂದ ಬೇಸತ್ತ ಮೆಲಿಯೇಸ್, ನ್ಯುಯಾರ್ಕ್ ನಗರದಲ್ಲಿ ಸ್ಟಾರ್ ಫಿಲ್ಮ್ಸ್ನಕಛೇರಿಯನ್ನು ತಮ್ಮ ಸಹೋದರ ಗ್ಯಾಸ್ಟನ್ ಮೆಲಿಯೇಸ್ರ ಉಸ್ತುವಾರಿಯಲ್ಲಿ ಆರಂಭಿಸಿದರು. ಪಾದರಕ್ಷೆಯ ವ್ಯಾಪಾರದಲ್ಲಿ ನಷ್ಟವನ್ನು ಕಂಡಿದ್ದ ಗ್ಯಾಸ್ಟನ್, ತಮ್ಮ ಸಹೋದರನ ಯಶಸ್ವಿಯಾದ ಚಿತ್ರ ತಯಾರಿಕಾ ವ್ಯವಹಾರ ಸೇರಲು ನಿರ್ಧರಿಸಿದರು. ನವೆಂಬರ್ ೧೯೦೨ರಲ್ಲಿ ನ್ಯುಯಾರ್ಕಿಗೆ ತೆರಳಿದ ಗ್ಯಾಸ್ಟನ್, ಅಲ್ಲಿ ನೆಡೆಯುತ್ತಿದ್ದ ಹಕ್ಕುಸ್ವಾಮ್ಯ ಉಲ್ಲಂಘನೆಯ ಮಟ್ಟವನ್ನು ಕಂಡು ಚಕಿತರಾದರು. ಉದಾಹರಣೆಗೆ, ಬಯಾಗ್ರಾಫ್ ಮೆಲಿಯೇಸ್ರ ಚಿತ್ರದ ರಾಯಧನವನ್ನು ನಿರ್ಮಾಪಕ ಚಾರ್ಲ್ಸ್ ಅರ್ಬನ್ಗೆ[೯] ನೀಡಿತ್ತು.ಇದರಿಂದಾಗ್ಯೆ, ನ್ಯುಯಾರ್ಕಿನಲ್ಲಿ ಗ್ಯಾಸ್ಟನ್ ತೆರೆದ ಶಾಖಾ ಕಛೇರಿಯ ಸನ್ನದ್ದು ಪತ್ರದಲ್ಲಿ ಹೀಗೆಂದು ಉಲ್ಲೇಖಿಸಲಾಗಿತ್ತು,"ನ್ಯುಯಾರ್ಕಿನಲ್ಲಿ ಕಾರ್ಖಾನೆ ಹಾಗು ಕಛೇರಿ ತೆರೆಯುವ ಉದ್ದೇಶವೇನೆಂದರೆ, ಎಲ್ಲ ನಕಲುಗಾರರು ಹಾಗು ಸ್ವಾಮ್ಯಚೋರರ ಹುಟ್ಟಡಗಿಸುವುದಾಗಿದೆ.ನಾವು ಇನ್ನೊಮ್ಮೆ ಮಾತಾಡುವುದಿಲ್ಲ, ನಾವು ಮಾಡಿತೋರಿಸುತ್ತೇವೆ ."[೧೮] ಅಮೆರಿಕಾದಲ್ಲಿ ಗ್ಯಾಸ್ಟನ್ರ ನಾದಿನಿ,ಲೂಯಿಸ್ ಡೆ ಮಿರ್ಮಾಂಟ್ರ ಪತಿ ಲೂಸಿಯನ್ ರೆಉಲೋಸ್, ಅವರಿಗೆ ತುಂಬ ನೆರವಾದರು[೧೧].
೧೦೯೨ರ ಯಶಸ್ಸಿನ ಓಟ ಮುಂದುವರೆಸಿದ ಮೆಲಿಯೇಸ್ , ಅದೇ ವರ್ಷದಲ್ಲಿ ಇನ್ನೂ ಮೂರು ಪ್ರಮುಖ ಚಿತ್ರಗಳನ್ನು ನಿರ್ಮಿಸಿದರು. ಬ್ರಿಟಿಷ್ ರಾಜ ಏಳನೇ ಎಡ್ವರ್ಡ್ನ ಪಟ್ಟಾಭಿಷೇಕವನ್ನಾಧರಿಸಿ ದಿ ಕರೊನೆಷೆನ್ ಆಫ್ ಎಡ್ವರ್ಡ್ ೭ ಅನ್ನು ನಿರ್ಮಿಸಿದರು. ಪಟ್ಟಾಭಿಷೇಕಕ್ಕೆ ಪ್ರವೇಶ ನಿರಾಕರಿಸಿದ್ದರಿಂದ, ಚಿತ್ರವನ್ನು ಅಸಲು ಪಟ್ಟಾಭಿಷೇಕಕ್ಕಿಂತ ಮುನ್ನವೇ ನಿರ್ಮಿಸಲಾಗಿತ್ತು. ವಾರ್ವಿಕ್ ಟ್ರೇಡಿಂಗ್ ಕಂಪೆನಿಯ ಮಾಲೀಕ, ಚಾರ್ಲ್ಸ್ ಅರ್ಬನ್ ಹಾಗು ಲಂಡನ್ನಿನ ಸ್ಟಾರ್ ಫಿಲ್ಮ್ಸಿನ ಪ್ರತಿನಿಧಿಯ ಬೇಡಿಕೆಯ ಮೇರೆಗೆ ಈ ಚಿತ್ರವನ್ನು ನಿರ್ಮಿಸಲಾಯಿತು. ಪಟ್ಟಾಭಿಷೇಕದ ದಿನವೇ ಚಿತ್ರವನ್ನು ಬಿಡುಗಡೆ ಮಾಡುವ ಹಂಬಲವಿದ್ದರೂ, ಎಡ್ವರ್ಡಿನ ಅನಾರೋಗ್ಯದ ಕಾರಣ ಅದನ್ನು ೬ ವಾರಗಳ ಕಾಲ ಮುಂದೂಡಲಾಯಿತು. ಇದರಿಂದಾಗಿ ಸಾರೋಟು ಮೆರವಣಿಗೆಯ ನಿಜವಾದ ತುಣುಕನ್ನು ಚಿತ್ರದಲ್ಲಿ ಸೇರಿಸುವುದಕ್ಕೆ ಮೆಲಿಯೇಸ್ಗೆ ಸಾಧ್ಯವಾಯಿತು. ಚಿತ್ರವು ಆರ್ಥಿಕವಾಗಿ ಯಶಸ್ವಿಯಾಯಿತು ಹಾಗು ಎಡ್ವರ್ಡ್ ಸಹ ಚಿತ್ರವನ್ನು ಆನಂದಿಸಿದರೆನ್ನಲಾಗಿದೆ. ನಂತರ ಜೊನಾಥನ್ ಸ್ವಿಫ್ಟಿನ ಕಾದಂಬರಿಯಾಧಾರಿತ ಕಾಲ್ಪನಿಕ ಚಿತ್ರ ಗಲೀವರ್ಸ್ ಟ್ರ್ಯಾವಲ್ಸ್ ಅಮಾಂಗ್ ದಿ ಲಿಲಿಪುಟನ್ಸ್ ಏಂಡ್ ಜಾಯಂಟ್ಸ್ ಹಾಗು ಡೇನಿಯಲ್ ಡಿಫೊ ಕಾದಂಬರಿಯಾಧಾರಿತ ರಾಬಿನ್ಸನ್ ಕ್ರುಸೊ ಚಿತ್ರವನ್ನು ನಿರ್ಮಿಸಿದರು.[೧೯]
೧೯೦೩ರಲ್ಲಿ ಮೆಲಿಯೇಸ್, ದಿ ಕಿಂಗ್ಡಮ್ ಆಫ್ ಫೆಯರೀಸ್ ಚಿತ್ರ ನಿರ್ಮಿಸಿದರು. ಚಿತ್ರ ವಿಮರ್ಶಕ ಜೀನ್ ಮಿತ್ರಿಯು ಈ ಚಿತ್ರವನ್ನು "ಮೆಲಿಯೇಸರ ಇದುವರೆಗಿನ ಶ್ರೇಷ್ಠ ಚಿತ್ರ ಹಾಗು ಒಂದು ತೀವ್ರ ಕಾವ್ಯಾತ್ಮಕ ಅನುಭವವನ್ನು ನೀಡುವಂತಹದ್ದು" ಎಂದು ಬಣ್ಣಿಸಿದ್ದಾರೆ[೨೦]. ದಿ ಲಾಸ್ ಏಂಜಲಿಸ್ ಟೈಮ್ಸ್ ನ ಒಂದು ವರದಿಯು ಈ ಚಿತ್ರವನ್ನು "ಹಣ ಹಾಗು ಸಮಯದ ಕೊರತೆಯಿಲ್ಲದ ತಜ್ಞರ ಕೈಯಲ್ಲಿ ಚಲನಚಿತ್ರಗಳನ್ನು ಯಾವ ಉತ್ತುಂಗಕ್ಕೆ ಕೊಂಡೊಯ್ಯಬಹುದು ಎಂಬುದರ ನಿದರ್ಶನ" ಎಂದು ಬಣ್ಣಿಸಿದೆ[೧೦]. ಈ ಚಿತ್ರದ ಪ್ರತಿಯು ಬ್ರಿಟಿಷ್ ಚಲನಚಿತ್ರ ಸಂಸ್ಥೆ ಹಾಗು ಯು.ಎಸ್ ಲೈಬ್ರರಿ ಆಫ್ ಕಾಂಗ್ರೆಸ್ಸಿನಲ್ಲಿ ದಾಖಲಾಗಿವೆ.[೧೨]
ಆ ವರ್ಷದಲ್ಲಿ ಮೆಲಿಯೇಸ್ ತಮ್ಮ ಕ್ಯಾಮರಾ ಕೈಚಳಕಗಳನ್ನು ಇನ್ನಷ್ಟು ಪರಿಷ್ಕರಿಸಿದರು.ಟೆನ್ ಲೇಡೀಸ್ ಇನ್ ಒನ್ ಅಂಬ್ರೆಲ್ಲಾ ಚಿತ್ರದ ವೇಗದ ದೃಶ್ಯ ರೂಪಾಂತರ ಹಾಗು ದಿ ಮೆಲೊಮೆನಿಯಾಕ್ ಚಿತ್ರದಲ್ಲಿ ಉಪಯೋಗಿಸಿದ ೭ ಸೂಪರಿಂಪೋಸಿಷನ್ ಗಳು ಇದಕ್ಕೆ ಸಾಕ್ಷಿ. ಆ ವರ್ಷದ ಕೊನೆಯಲ್ಲಿ ಫೊಸ್ಟ್ ದಂತಕಥೆಯಾಧಾರಿತ ಡ್ಯಾಮ್ನೇಷನ್ ಆಫ್ ಫೋಸ್ಟ್ ಚಿತ್ರವನ್ನು ನಿರ್ಮಿಸಿದರು. ಹೆಕ್ಟರ್ ಬೆರ್ಲಿಯೋಜ಼್ ರಚಿಸಿದ ಒಪೆರಾದಿಂದ ಉತ್ತೇಜಿತಗೊಂಡ ಈ ಚಿತ್ರವು ಕಥೆಯ ಮೇಲಿನ ಗಮನ ಕಮ್ಮಿಯಾಗಿದ್ದು, ಬೆಂಕಿಯ ಗೋಡೆ, ನೀರಿನ ಗೋಡೆ, ಭೂಗತ ಉದ್ಯಾನಗಳು ಹೀಗೆ ಕೈಚಳಕಗಳಿಂದ ತಯಾರಿಸಿದ ನರಕದ ದೃಶ್ಯಾವಳಿಗಳನ್ನು ತೋರಿಸುವ ಮೇಲೆ ಕೇಂದ್ರೀಕೃತವಾಗಿತ್ತು[೨೧]. ೧೯೦೪ರಲ್ಲಿ ಇದರ ಉತ್ತರಭಾಗ ಫೋಸ್ಟ್ ಎಂಡ್ ಮಾರ್ಗರೀಟ್ ಚಿತ್ರವನ್ನು ಮೆಲಿಯೇಸ್ ನಿರ್ಮಿಸಿದರು. ಆದರೆ ಈ ಚಿತ್ರವನ್ನು ಚಾರ್ಲ್ಸ್ ಗೌನಾಡ್ ಬರೆದ ಒಪೆರಾದ ಅಧಾರದ ಮೇಲೆ ರಚಿಸಲಾಗಿತ್ತು. ಮೆಲಿಯೇಸ್ ಈ ಎರಡು ಚಿತ್ರಗಳ ಮಿಶ್ರವಾದ ಅವೃತ್ತಿಯನ್ನು ಸಹ ನಿರ್ಮಿಸಿದ್ದರು. ೧೯೦೪ರಲ್ಲಿ ಉನ್ನತ ಕಲಾತ್ಮಕ ಚಿತ್ರಗಳನ್ನು ನಿರ್ಮಿಸುವುದನ್ನು ಮುಂದುವರಿಸಿದ ಮೆಲಿಯೇಸ್, ದಿ ಬಾರ್ಬರ್ ಆಫ್ ಸೆವಿಲ್ ಚಿತ್ರ ನಿರ್ಮಿಸಿದ ನಂತರ ವೀಕ್ಷಕರು ಹಾಗು ವಿಮರ್ಶಕರಿಗೂ ಪ್ರಿಯರಾಗಿ, ತಮ್ಮ ಘನತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು.[೨೧]
೧೯೦೪ರ ದಿ ಇಂಪಾಸಿಬಲ್ ವೊಯೇಜ್, ಆ ವರ್ಷದ ಮೆಲಿಯೇಸರ ಅತಿಮುಖ್ಯ ನಿರ್ಮಾಣಗಳಲ್ಲಿ ಒಂದು. ಎ ಟ್ರಿಪ್ ಟು ದಿ ಮೂನ್ ಚಿತ್ರದ ರೀತಿಯೇ ಇದ್ದ ಈ ಚಿತ್ರವು ಭೂಮಿ, ಸಾಗರ ಹಾಗು ಸೂರ್ಯನನ್ನು ಅನ್ವೇಷಿಸುವ ಕಥೆಯಾಗಿದೆ. ಈ ಚಿತ್ರದಲ್ಲಿ ಮೆಲಿಯೇಸ್, ಪ್ರೊಫ಼ೆಸರ್ ಬಾರ್ಬೆನ್ಫೌಲಿಸ್ ರೀತಿಯೇ, ದಿ ಇನ್ಸ್ಟಿಟ್ಯೂಟ್ ಆಫ್ ಇನ್ಕೋಹರೆಂಟ್ ಜಿಯಾಗ್ರಫಿಯ ಇಂಜಿನಿಯರ್ ಮಾಬೊಲೊಫ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ತಮ್ಮ ಈ ಪ್ರಯಾಣಗಳಿಗೆ ಮಾಬೊಲೊಫ್ ಹಾಗು ಅವರ ತಂಡ ಉಪಯೋಗಿಸುವ ವಾಹನದ ಹೆಸರು ಆಟೊಮೊಬೊಲುಫಸ್. ಈ ವಾಹನದ ಸಹಾಯದಿಂದ, ತಂಡವು ಆಲ್ಪ್ಸ್ ಪರ್ವತಶ್ರೇಣಿಯನ್ನು ಹತ್ತುತ್ತಿರುವಾಗ, ವಾಹನವು ಇವರಿಗರಿವಿಲ್ಲದಂತೆಯೆ ತನ್ನ ಮೇಲ್ಮುಖ ಪ್ರಯಾಣವನ್ನು ಮುಂದುವರೆಸಿ ಸೂರ್ಯನನ್ನು ತಲುಪಿಬಿಡುತ್ತದೆ. ಚಂದ್ರನಲ್ಲಿಯ ಮನುಷ್ಯನಂತೆಯೇ ಸೂರ್ಯನಿಗೂ ಸಹ ಮುಖವಿರುತ್ತದೆ ಹಾಗು ಈ ಮುಖವು ವಾಹನವನ್ನು ನುಂಗಿಬಿಡುತ್ತದೆ. ನಂತರ ಜಲಾಂತರ್ಗಾಮಿಯ ಸಹಾಯದಿಂದ ಭೂಮಿಯತ್ತ ಹೊರಡುತ್ತಾರೆ ಹಾಗು ಸಮುದ್ರದಲ್ಲಿ ಬೀಳುತ್ತಾರೆ. ಅಲ್ಲಿಂದ ಅವರನ್ನು ಕೊಂಡೊಯ್ಯುವ ಊರಿನ ಜನ, ಊರಿನಲ್ಲಿ ಸಂಭ್ರಮಾಚರಣೆ ಮಾಡುತ್ತಾರೆ. ೨೪ ನಿಮಿಷದ ಕಾಲಾವಧಿಯ ಈ ಚಿತ್ರ ತಕ್ಷಣವೇ ಜನಪ್ರಿಯಗೊಂಡಿತು. ಈ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾ, ಚಿತ್ರ ವಿಮರ್ಶಕ ಲೆವಿಸ್ ಜಾಕಬ್ಸ್, "ಈ ಚಿತ್ರವು ಮೆಲಿಯೇಸರ ಎಲ್ಲ ಪ್ರತಿಭೆಗಳನ್ನು ವ್ಯಕ್ತಪಡಿಸುತ್ತದೆ.. ಅವರ ಸಂಕೀರ್ಣವಾದ ತಂತ್ರಗಳು, ಯಂತ್ರಗಳ ಉಪಯೋಗಗಳ ಮೇಲೆ ಅವರಿಗಿರುವ ಹಿಡಿತ, ದೃಶ್ಯಗಳ ಕಲಾತ್ಮಕತೆ ಹಾಗು ಸಮೃದ್ಧವಾಗಿ ಸಿಂಗರಿಸಲಾದ ಚಿತ್ರಪಟಗಳಿಂದಾಗಿ ಈ ಚಿತ್ರವು ಈಗಿನ ಕಾಲಘಟ್ಟದ ಮೇರುಕೃತಿಯೆಂದೇ ಪರಿಗಣಿಸಬಹುದು. " ಎಂದು ಹೇಳಿದ್ದಾರೆ[೨೨].
ಇದರ ನಂತರ ೧೦೯೪ರಲ್ಲಿಯೇ ಫೊಲಿಯಸ್ ಬರ್ಗೆರೆಯ ನಿರ್ದೇಶಕರಾದ ವಿಕ್ಟರ್ ಡೆ ಕಾಟನ್ಸ್, ತಮ್ಮ ರಂಗಸ್ಥಳದ ಒಂದು ಪ್ರದರ್ಶನಕ್ಕೆ ಸ್ಪೆಷಲ್ ಎಫೆಕ್ಟ್ಸ್ ಅನ್ನು ನೀಡಲು ಮೆಲಿಯೇಸರಿಗೆ ಅಹ್ವಾನವಿತ್ತರು. ಇದರ ಪರಿಣಾಮವೇ ಬೆಲ್ಜಿಯಮ್ಮಿನ ೨ನೇ ಲಿಯೋಪೋಲ್ಡಿನ ಮೇಲೆ ಆಧರಿಸಿದ ವಿಡಂಬನಾತ್ಮಕ ಎನ್ ಅಡ್ವೆಂಚರಸ್ ಆಟೊಮೊಬೈಲ್ ಟ್ರಿಪ್.ಮೆಲಿಯೇಸ್ ಈ ಚಿತ್ರವನ್ನು ಸ್ಟಾರ್ ಫಿಲ್ಮ್ಸ್ ನ ನಿರ್ಮಾಣವೆಂದು ಮಾರುವ ಮುನ್ನವೇ, ಫೊಲಿಯಸ್ ಬರ್ಗೆರೆಯಲ್ಲಿ ಪ್ರದರ್ಶನ ಕಂಡಿತ್ತು. ೧೯೦೪ರ ಕೊನೆಯಲ್ಲಿ, ಎಡಿಸನ್ ಪಾಲೆ & ಸ್ಟಿನರ್ ಎಂಬ ಅಮೇರಿಕನ್ ನಿರ್ಮಾಣ ಸಂಸ್ಥೆಯ ಮೇಲೆ ಹಕ್ಕುಸ್ವಾಮ್ಯ ಉಲ್ಲಂಘನೆಯ ದಾವೆ ಹೂಡಿದರು. ತಮ್ಮ ಚಿತ್ರದ ಪಾತ್ರಗಳು, ಕಥೆಗಳು ಹಾಗು ದೃಶ್ಯ ಸಂಯೋಜನೆಯನ್ನು ಈ ಸಂಸ್ಥೆಯು ನಕಲು ಮಾಡುತ್ತಿರುವುದಾಗಿ ಎಡಿಸನ್ ತಮ್ಮ ದಾವೆಯಲ್ಲಿ ದೂಷಿಸಿದರು. ಅನಿರ್ದಿಷ್ಟ ಕಾರಣಗಳಿಂದ ಈ ದಾವೆಯಲ್ಲಿ ಪಾಥೆ ಫ್ರೆರೆಸ್, ಎಬೆರ್ಹಾರ್ಡ್ ಶ್ನೈಡರ್ ಹಾಗು ಸ್ಟಾರ್ ಫಿಲ್ಮ್ಸಿನ ಹೆಸರನ್ನು ಸೇರಿಸಲಾಯಿತು. ಎಡಿಸನ್ ನಂತರ ಖರೀದಿಸಿದ ಪಾಲೆ & ಸ್ಟಿನರ್ ಸಂಸ್ಥೆಯು ನ್ಯಾಯಾಲಯಕ್ಕೆ ಹೋಗದಂತೆಯೇ ಎಡಿಸನ್ನಿನೊಂದಿಗೆ ಒಪ್ಪಂದ ಮಾಡಿಕೊಂಡು ಸುಮ್ಮನಾಯಿತು.[೧೩]
೧೯೦೫ರಲ್ಲಿ, ವಿಕ್ಟರ್ ಡೆ ಕಾಟನ್ಸ್, ಥಿಯೆಟರ್ ಡು ಶಾಲೆಟ್ಗಾಗಿ ರಚಿಸುತ್ತಿದ್ದ ದಿ ಮೆರಿ ಡೀಡ್ಸ್ ಆಫ್ ಸೆಟನ್ ಎಂಬ ಪ್ರದರ್ಶನಕ್ಕಾಗಿ ತಮ್ಮೊಂದಿಗೆ ಕೈಜೋಡಿಸುವಂತೆ ಮೆಲಿಯೇಸರಿಗೆ ಅಹ್ವಾನವಿತ್ತರು. ಈ ಪ್ರದರ್ಶನಕ್ಕಗಿ ಮೆಲಿಯೇಸ್ ಎರಡು ಕಿರುಚಿತ್ರಗಳನ್ನುರಚಿಸಿಕೊಟ್ಟರು. ಅವು ಲೆ ವಾಯೇಜ್ ಡಾನ್ಸ್ ಲೆಸ್ಪೇಸ್(ಬಾಹ್ಯಾಕಾಶ ಪ್ರಯಾಣ) ಹಾಗು ಲೆ ಸೈಕ್ಲೋನ್(ಚಂಡಮಾರುತ). ಹಾಗು ಇಡಿ ಪ್ರದರ್ಶನದ ಸನ್ನಿವೇಶಗಳನ್ನು ಕಾಟನ್ಸ್ ಸಹಭಾಗಿತ್ವದಲ್ಲಿ ರಚಿಸಿದರು. ೧೯೦೫ ಜೀನ್ ಯುಜೀನ್ ರಾಬರ್ಟ್ ಹೌಡಿನ್ನರ ಶತಮಾನೋತ್ಸವವಾದ್ದರಿಂದ ಥಿಯೇಟರ್ ರಾಬರ್ಟ್ ಹೌಡಿನ್ನಿನಲ್ಲಿ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ತುಂಬಾ ವರ್ಷಗಳ ನಂತರ ಮತ್ತೆ ಮೆಲಿಯೇಸ್ ನಿರ್ಮಿಸಿದ ರಂಗ ಪ್ರದರ್ಶನ ಲೆ ಫೆನೊಮೆನೆಸ್ ಡು ಸ್ಪಿರಿಟಿಸ್ಮೆ ಸಹ ಒಂದು. ಆ ಸಮಯದಲ್ಲಿಯೇ ಮಾಂಟ್ರಿಯುಲ್ನಲ್ಲಿಯ ತಮ್ಮ ಸ್ಟುಡಿಯೋದ ನವೀಕರಣ ಹಾಗು ವಿಸ್ತರಿಸುವ ಕೆಲಸವನ್ನು ಆರಂಭಿಸಿದರು. ಇದರಿಂದಾಗಿ ವೆದಿಕೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಯಿತು, ಎರಡನೇ ವೇದಿಕೆಯನ್ನು ನಿರ್ಮಿಸಲಾಯಿತು ಹಾಗು ವಿವಿಧ ಮೂಲಗಳಿಂದ ವೇಷಭೂಶಣಗಳನ್ನು ಖರೀದಿಸಲಾರಂಭಿಸಿದರು[೨೩]. ೧೯೦೫ರಲ್ಲಿ ಮೆಲಿಯೇಸ್ ನಿರ್ಮಿಸಿದ ಚಿತ್ರಗಳೆಂದರೆ ದಿ ಪ್ಯಾಲೇಸ್ ಆಫ್ ಅರೇಬಿಯನ್ ನೈಟ್ಸ್ ಸಾಹಸ ಚಿತ್ರ ಹಾಗು ರಾಬರ್ಟ್ ಪ್ಲಾನ್ಕೆಟ್ ಬರೆದ ಒಪೆರಾ ಮೆಲಾಧಾರಿತ ರಿಪ್ ವ್ಯಾನ್ ವಿಂಕಲ್ಲಿನ ದಂತಕಥೆಯನ್ನಾಧರಿಸಿದ ರಿಪ್ಸ್ ಡ್ರೀಮ್ ಕಾಲ್ಪನಿಕ ಚಿತ್ರ. ೧೯೦೬ರಲ್ಲಿ ಮೆಲಿಯೇಸ್, ಫಾಸ್ಟ್ ದಂತಕಥೆ ದಿ ಮೆರಿ ಫ್ರಾಲಿಕ್ಸ್ ಆಫ್ ಸೆಟನ್ ನ ನವಿಕೃತ ಹಾಸ್ಯ ರೂಪಾಂತರ ಹಾಗು ದಿ ವಿಚ್ ಚಿತ್ರಗಳನ್ನು ನಿರ್ಮಿಸಿದರು. ತಾವು ಗುರುತಿಸಿಕೊಂಡ ಕಾಲ್ಪನಿಕ ಚಿತ್ರಗಳ ಪ್ರಕಾರದ ಜನಪ್ರಿಯತೆ ಕುಗ್ಗಲಾರಂಭಿಸಿದ್ದರಿಂದ ಮೆಲಿಯೇಸ್ ಇತರೆ ಪ್ರಕಾರದ ಚಿತ್ರಗಳನ್ನು ನಿರ್ಮಿಸಲಾರಂಭಿಸಿದರು. ಉದಾಹರಣೆಗೆ ಅಪರಾಧದ ಹಂದರವುಳ್ಳ ಚಿತ್ರಗಳು ಹಾಗು ಕೌಟುಂಬಿಕ ಚಿತ್ರಗಳು. ಅಮೆರಿಕಾದಲ್ಲಿ ಗ್ಯಾಸ್ಟನ್ ಮೆಲಿಯೇಸ್ , ಮೆಲಿಯೇಸರ ಅತ್ಯಂತ ಜನಪ್ರಿಯ ಕಾಲ್ಪನಿಕ ಚಿತ್ರಗಳಾದ ಸಿಂಡ್ರೆಲ್ಲಾ,ಬ್ಲುಬಿಯರ್ಡ್ ಹಾಗು ರಾಬಿನ್ಸನ್ ಕ್ರುಸೋವಿನ ಮಾರಾಟದ ಬೆಲೆಯನ್ನು ಕಡಿಮೆ ಮಾಡಿದ್ದರು.೧೯೦೫ರ ಅಂತ್ಯದಷ್ಟರಲ್ಲಿ ಗ್ಯಾಸ್ಟನ್ ಸ್ಟಾರ್ ಫಿಲ್ಮ್ಸಿನ ಎಲ್ಲ ಚಿತ್ರಗಳ ಮಾರುಕಟ್ಟೆ ಬೆಲೆಯನ್ನು ೨೦% ಕಮ್ಮಿಗೊಳಿಸಿದ್ದರು. ಇದರಿಂದಾಗಿ ಈ ಚಿತ್ರಗಳ ಮಾರಾಟವೂ ಸಹ ಹೆಚ್ಚಿತು.[೨೪]
ನಂತರದ ವೃತ್ತಿಜೀವನ
[ಬದಲಾಯಿಸಿ]ಅಂಡರ್ ದಿ ಸೀಸ್ ಚಲನಚಿತ್ರ,ಶೇಕ್ಸ್ಪಿಯರಿನ ಹ್ಯಾಮ್ಲೆಟ್ಟಿನ ಕಿರು ಅವತರಣಿಕೆ ಹಾಗು ಹಲವು ಚಿತ್ರಗಳನ್ನು ನಿರ್ಮಿಸುತ್ತಲೇ, ೧೯೦೭ರಲ್ಲಿ ಮೆಲಿಯೇಸ್ ೩ ಹೊಸ ಭ್ರಮಾನಾಟಕಗಳನ್ನು ರಚಿಸಿ, ಥಿಯೇಟರ್ ರಾಬರ್ಟ್ ಹೌಡಿನ್ನಿನಲ್ಲಿ ಪ್ರದರ್ಶಿಸಿದರು. ಹೀಗಿದ್ದರೂ ಸಹ ಜೀನ್ ಮಿಟ್ರಿ, ಜಾರ್ಜೆಸ್ ಸಡೌಲ್ ಹಾಗು ಮುಂತಾದ ಚಿತ್ರ ವಿಮರ್ಶಕರು ಮೆಲಿಯೇಸರ ಕಲಾಕೃತಿಗಳ ಮೌಲ್ಯ ಕ್ಷೀಣಿಸಲಾರಿಂಭಿಸಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ. ಚಿತ್ರ ವಿದ್ವಾಂಸೆ ಮಿರಿಯಂ ರೋಸೆನ್ನಿನ ಮಾತುಗಳಲ್ಲಿ ಹೇಳುವುದಾದರೆ "ಅವರ ಕೆಲಸಗಳಲ್ಲಿ ಒಂದೆಡೆ ತಮ್ಮದೇ ಹಳೆಯ ಕೃತಿಗಳ ಸೂತ್ರಗಳ ಪುನರಾವರ್ತನೆಯಾದರೆ, ಇನ್ನೊಂದೆಡೆ ಹೊಸಗಾಳಿಯ ಅಸ್ಥಿರ ಅನುಕರಣೆಯು ಕಂಡುಬರುತ್ತಿತ್ತು."[೨೫]
೧೯೦೮ರಲ್ಲಿ,ಎಡಿಸನ್ ಅಮೆರಿಕಾ ಹಾಗು ಯುರೋಪಿನ ಚಲನಚಿತ್ರೋದ್ಯಮವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ನಿಟ್ಟಿನಿಂದ ಮೊಷನ್ ಪಿಚ್ಚರ್ಸ್ ಪೆರೆಂಟ್ಸ್ ಕಂಪೆನಿಯನ್ನು ಹುಟ್ಟುಹಾಕಿದನು. ಎಡಿಸನ್, ಬಯಾಗ್ರಾಫ್, ವಿಟಗ್ರಾಫ್, ಎಸ್ಸನೆ, ಸೆಲಿಗ್, ಲುಬಿನ್,ಕಾಲೆಮ್, ಅಮೆರಿಕನ್ ಪಾಥೆ ಹಾಗು ಮೆಲಿಯೇಸರ ಸ್ಟಾರ್ ಫಿಲ್ಮ್ ಕಂಪನಿಯಂತಹ ಕಂಪನಿಗಳು ಈ ಸಂಘಟನೆಯನ್ನು ಸೇರಿಕೊಂಡವು ಹಾಗು ಏಡಿಸನ್ ಈ ಸಂಘಟನೆಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಲಾರಂಭಿಸಿದನು. ಈ ಸಂಘಟನೆಗೆ ವಾರಕ್ಕೆ ಒಂದು ಸಾವಿರ ಅಡಿಗಳ ಚಿತ್ರಪಟವನ್ನು ಒದಗಿಸುವ ಬಾಧ್ಯತೆ ಸ್ಟಾರ್ ಫಿಲ್ಮ್ಸಿನ ಮೇಲಿತ್ತು. ಇದನ್ನು ಪೊರೈಸಲು ಮೆಲಿಯೇ ಆ ವರ್ಷದಲ್ಲಿ ೫೮ ಚಿತ್ರಗಳನ್ನು ನಿರ್ಮಿಸಿದರು. ಗ್ಯಾಸ್ಟನ್ ಮೆಲಿಯೇಸ್ ಶಿಕಾಗೋದಲ್ಲಿ ತಮ್ಮದೇ ಆದ ಮೆಲಿಯೇಸ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ ಎಂಬ ಸ್ಟುಡಿಯೋವನ್ನು ಆರಂಭಿಸಿದರು.೧೯೦೮ರಲ್ಲಿ ಗ್ಯಾಸ್ಟನ್ ಯಾವುದೇ ಚಿತ್ರಗಳನ್ನು ನಿರ್ಮಿಸಿದದಿದ್ದರೂ, ಈ ಸ್ಟುಡಿಯೋದಿಂದ ಮೆಲಿಯೇಸರಿಗೆ ತಾವು ಎಂ.ಪಿ.ಪಿ.ಸಿಗೆ ಮಾಡಿದ ಕರಾರನ್ನು ಪೊರೈಸಲು ಸಾಧ್ಯವಾಯಿತು. ಈದೇ ವರ್ಷದಲ್ಲಿ ಮೆಲಿಯೇಸ್ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ಹುಮ್ಯಾನಿಟಿ ಥ್ರು ದಿ ಏಜಸ್ ಚಿತ್ರವನ್ನು ನಿರ್ಮಿಸಿದರು. ಈ ನಿರಾಶಾವಾದಿ ಚಿತ್ರವು ಕೇನ್ ಹಾಗು ಏಬೆಲ್ರಿಂದ ಹಿಡಿದು ೧೦೯೭ರಲ್ಲಿ ನೆಡೆದ ಹೇಗ್ ಶಾಂತಿ ಸಮಾವೇಶದವರೆಗೆ ಮಾನವರ ಇತಿಹಾಸವನ್ನು ತೆರೆದಿಡುತ್ತದೆ. ಈ ಚಿತ್ರವು ವಿಫಲವಾದರೂ, ತಮ್ಮ ಜೀವನದುದ್ದಕ್ಕೂ ಮೆಲಿಯೇಸ್ ಇದನ್ನು ತನ್ನ ಅತ್ಯಂತ ಹೆಮ್ಮೆಯ ಕಲಾಕೃತಿಯೆಂದೆ ಬಣ್ಣಿಸಿದ್ದರು.[೨೬]
೧೯೦೯ರ ಶುರುವಿನಲ್ಲಿ ಮೆಲಿಯೇಸ್ ಚಿತ್ರ ನಿರ್ಮಾಣವನ್ನು ನಿಲ್ಲಿಸಿಬಿಟ್ಟರು ಹಾಗು ಫೆಬ್ರವರಿಯಲ್ಲಿ ಪ್ಯಾರಿಸ್ಸಿನಲ್ಲಿ ನೆಡೆದ ಅಂತರಾಷ್ಟ್ರೀಯ ಚಿತ್ರನಿರ್ಮಾಪಕರ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ಇತರರಂತೆ ಏಡಿಸನ್ ನಿರ್ಮಿಸಿದ ಏಕಸ್ವಾಮ್ಯತೆಯಿಂದ ಬೇಸತ್ತಿದ್ದ ಮೆಲಿಯೇಸ್, ಈ ಸ್ವಾಮ್ಯತೆಯನ್ನು ಮುರಿಯುವ ಯೋಚನೆಯಲ್ಲಿದ್ದರು. ಹೀಗಾಗಿ ಈ ಸಮ್ಮೇಳನದ ಸದಸ್ಯರೆಲ್ಲ ಸೇರಿ ತಮ್ಮ ಚಿತ್ರಗಳನ್ನು ಮಾರುವ ಬದಲು ತಮ್ಮ ಸಂಘಟನೆಯ ಸದಸ್ಯರಿಗೆ ಮಾತ್ರ ಗುತ್ತಿಗೆ ನೀಡುವ ಒಪ್ಪಂದವನ್ನು ಮಾಡಿಕೊಂಡರು ಹಾಗು ಎಲ್ಲ ಚಿತ್ರಗಳಿಗೂ ಪ್ರಮಾಣೀಕರಿಸಲಾದ ಫಿಲ್ಮ್ ಪರ್ಫೊರೇಷನ್ ಲೆಕ್ಕವನ್ನು ಅಳವಡಿಸುವ ತಿರ್ಮಾನ ತೆಗೆದುಕೊಂಡರು. ತಮ್ಮದೇ ಸಂಸ್ಥೆಯ ಸದಸ್ಯರಿಗೆ ಮಾತ್ರ ಗುತ್ತಿಗೆ ನೀಡುವ ಕರಾರಿನಿಂದ ಮೆಲಿಯೇಸರಿಗೆ ಅಸಮಾಧಾನವಾಯಿತು, ಏಕೆಂದರೆ ಅವರ ಮುಖ್ಯ ಗಿರಾಕಿಗಳು ಜಾತ್ರಾಮೈದಾನ ಹಾಗು ಸಂಗೀತ ಸಭಾಂಗಣಗಳ ಮಾಲೀಕರಾಗಿದ್ದರು. ಈ ಸಮಯದಲ್ಲಿ, "ನಾನೊಂದು ಸಂಸ್ಥೆಯಲ್ಲ, ನಾನೊಬ್ಬ ಸ್ವತಂತ್ರ ಚಿತ್ರ ನಿರ್ಮಾಪಕ" ಎಂದು ಮೆಲಿಯೇಸರು ಹೇಳಿದ್ದನ್ನು, ಒಂದು ಫೇರ್ ಗ್ರೌಂಡ್ ಟ್ರೇಡ್ ಜರ್ನಲ್ಲಿನಲ್ಲಿ ಉಲ್ಲೇಖಿಸಲಾಗಿದೆ.[೨೬]
೧೯೦೯ರ ಶರತ್ಕಾಲದಲ್ಲಿ ಚಿತ್ರನಿರ್ಮಾಣವನ್ನು ಪುನರಾರಂಭಿಸಿದ ಮೆಲಿಯೇಸ್, ಸರಾಸರಿ ೯ ಚಿತ್ರಗಳನ್ನು ನಿರ್ಮಿಸಿದರು. ವೇದಿಕೆಯ ಮೇಲೆ ತಾವು ಪ್ರಸ್ತುತ ಪಡಿಸಿದ ಮಾಯಾಜಾಲವನ್ನು ತೋರಿಸುವ ವಿಮ್ಸಿಕಲ್ ಇಲ್ಲ್ಯುಷನ್ಸ್ ಚಿತ್ರ ಸಹ ಇದರಲ್ಲಿ ಒಂದು. ಇದೇ ಸಮಯದಲ್ಲಿ ಗ್ಯಾಸ್ಟನ್, ಮೆಲಿಯೇಸ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿಯನ್ನು ನ್ಯು ಜರ್ಸಿಯ ಫೊರ್ಟ್ ಲೀ ಪ್ರದೇಶಕ್ಕೆ ಸ್ಥಳಾಂತರಿಸಿದರು. ೧೯೧೦ರಲ್ಲಿ ಟೆಕ್ಸಸ್ಸಿನ ಸ್ಯಾನ್ ಅಂಟೊನಿಯೊದಲ್ಲಿ ದಿ ಸ್ಟಾರ್ ಫಿಲ್ಮ್ ರಾಂಚ್ ಎಂಬ ಸ್ಟುಡಿಯೋವನ್ನು ಸ್ಥಾಪಿಸಿದ ಗ್ಯಾಸ್ಟನ್,ಅಲ್ಲಿ ಕೌಬಾಯ್ ಚಿತ್ರಗಳನ್ನು ನಿರ್ಮಿಸಲಾರಂಭಿಸಿದರು. ೧೯೧೧ರಷ್ಟರಲ್ಲಿ ಸ್ಟಾರ್ ಫಿಲ್ಮ್ಸಿನ ತಮ್ಮ ಶಾಖೆಯನ್ನು ಅಮೆರಿಕನ್ ವೈಲ್ಡ್ ವೆಸ್ಟ್ ಪ್ರೊಡಕ್ಷನ್ಸ್ ಎಂದು ನಾಮಕರಣ ಮಾಡಿದ ಗ್ಯಾಸ್ಟನ್, ಕ್ಯಾಲಿಫೋರ್ನಿಯಾದಲ್ಲೂ ಸಹ ಸ್ಟುಡಿಯೋವನ್ನು ತೆರೆದರು. ೧೯೧೦ರಿಂದ ೧೯೧೨ವರೆಗೆ ೧೩೦ ಚಿತ್ರಗಳನ್ನು ನಿರ್ಮಿಸಿದ ಗ್ಯಾಸ್ಟನ್, ಎಡಿಸನ್ನಿನ ಕಂಪೆನಿಯ ಕರಾರನ್ನು ಪೋರೈಸುವ ಪ್ರಾಥಮಿಕ ಮೂಲವಾಗಿದ್ದರು. ಈ ಸಮಯದಲ್ಲಿ ಮೆಲಿಯೇಸ್ ಕೆಲವೇ ಕೆಲವು ಚಿತ್ರಗಳನ್ನು ನಿರ್ಮಿಸಿದರು.[೨೭]
೧೯೧೦ರಲ್ಲಿ ಮೆಲಿಯೇಸ್ ತಮ್ಮ ವೇದಿಕೆಯ ಮ್ಯಾಜಿಕ್ ಪ್ರದರ್ಶನ ಲೆ ಫ್ಯಾಂಟಮ್ಸ್ ಡು ನಿಲ್ ನ ಯುರೋಪ್ ಪ್ರವಾಸ ಕೈಗೊಂಡ ಕಾರಣ ಚಿತ್ರನಿರ್ಮಾಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು[೨೮]. ಅದೇ ವರ್ಷದಲ್ಲಿ ಸ್ಟಾರ್ ಫಿಲ್ಮ್ಸ್, ಗಾಮೌಂಟ್ ಫಿಲ್ಮ್ ಕಂಪನಿಯೊಂದಿಗೆ ತನ್ನೆಲ್ಲಾ ಚಿತ್ರಗಳ ಇತರಣೆಯ ಒಪ್ಪಂದವನ್ನು ಮಾಡಿಕೊಂಡಿತು. ೧೯೧೦ರ ಶರದೃತುವಲ್ಲಿ ಮೆಲಿಯೇಸ್ ಚಾರ್ಲಿ ಪಾಥೆಯೊಂದಿಗೆ, ಭವಿಷ್ಯದಲ್ಲಿ ತಮ್ಮ ವೃತ್ತಿಯನ್ನೇ ನಾಶಗೊಳಿಸಿದಂತಹ ಒಪ್ಪಂದವನ್ನು ಮಾಡಿಕೊಂಡರು. ಚಿತ್ರ ನಿರ್ಮಾಣಕ್ಕಾಗಿ ಪಾಥೆ ಫ್ರೆರೆಸ್ಸಿನಿಂದ ಬಹುದೊಡ್ಡ ಮೊತ್ತವನ್ನು ಸ್ವೀಕರಿಸಿದ ಮೆಲಿಯೇಸ್, ಚಿತ್ರದ ವಿತರಣೆ ಹಾಗು ಅದನ್ನು ಬೇಕಾದ ಹಾಗೆ ತಿದ್ದುವ ಹಕ್ಕನ್ನು ಪಾಥೆಗೆ ನೀಡಿಬಿಟ್ಟರು. ಇದಲ್ಲದೆಯೇ ಈ ಒಪ್ಪಂದದ ಮೇರೆಗೆ ಮೆಲಿಯೇಸರ ಮನೆ ಹಾಗು ಮಾಂಟ್ರಿಯಲ್ಲಿನ ಸ್ಟುಡಿಯೋದ ಕರಾರು ಪತ್ರಗಳು ಸಹ ಪಾಥೆಯ ಪಾಲಾಯಿತು. ತಕ್ಷಣವೇ ದೊಡ್ದ ಚಿತ್ರದ ನಿರ್ಮಾಣ ಪ್ರಾರಂಭಿಸಿದ ಮೆಲಿಯೇಸ್, ೧೯೧೧ರಲ್ಲಿ ಬ್ಯಾರನ್ ಮನ್ಛೌಸನ್ಸ್ ಡ್ರೀಮ್ಸ್ ಹಾಗು ದಿ ಡಯಬೊಲಿಕಲ್ ಚರ್ಚ್ ವಿಡೊ ಚಿತ್ರಗಳನ್ನು ನಿರ್ಮಿಸಿದರು. ಒಂದು ದಶಕದ ಹಿಂದೆಯಷ್ಟೆ ಜನಪ್ರಿಯವಾಗಿದ್ದ ಕಾಲ್ಪನಿಕ ಚಿತ್ರಗಳ ಪ್ರಕಾರಕ್ಕೆ ಸೇರಿದ ಈ ಚಿತ್ರಗಳು ವೈಭವೋಪೇತವಾಗಿದ್ದರೂ, ಆರ್ಥಿಕವಾಗಿ ಸೋಲುಂಡವು.[೨೯]
ಮಹತ್ತರ ಚಿತ್ರಗಳನ್ನು ನಿರ್ಮಿಸುವುದನ್ನು ಮುಂದುವರಿಸಿದ ಮೆಲಿಯೇಸ್, ೧೯೧೨ರಲ್ಲಿ ದಿ ಕಾಂಕ್ವೆಸ್ಟ್ ಆಫ್ ದಿ ಪೋಲ್ ಚಿತ್ರವನ್ನು ನಿರ್ಮಿಸಿದರು. ೧೯೦೯ರ ರಾಬರ್ಟ್ ಪಿಯರಿಯ ಉತ್ತರ ಧ್ರುವದ ಯಾತ್ರೆ ಹಾಗು ರೊಲ್ಡ್ ಅಮುಂಡ್ಸನ್ನಿನ್ನ ೧೯೧೧ರ ದಕ್ಷಿಣ ಧ್ರುವದ ಯಾತ್ರೆಯಿಂದ ಪ್ರೇರೇಪಿತವಾಗಿದ್ದರೂ, ಈ ಚಿತ್ರದಲ್ಲಿ ಕೆಲವು ಅದ್ಭುತ ಕಾಲ್ಪನಿಕ ಅಂಶಗಳನ್ನು ಸೇರಿಸಲಾಗಿತ್ತು. ಗ್ರಿಫಿತ್-ತಲೆಯ ಏರೋಬಸ್ ಹಾಗು ೧೨ ರಂಗಕರ್ಮಿಗಳಿಂದ ನೆಡೆಸಲಾಗುತ್ತಿದ್ದ ಹಿಮದೈತ್ಯ, ಜ್ಯುಲ್ಸ್ ವರ್ನೆಯ ನೆನಪಿಗೆ ತರುವಂತಹ ದೃಶ್ಯಗಳು ಹಾಗು ತಮ್ಮದೇ ಅತ್ಯದ್ಭುತ ಯಾತ್ರೆಗಳ ವಿಷಯ,ಎ ಟ್ರಿಪ್ ಟು ದಿ ಮೂನ್ ಹಾಗು ದಿ ಇಂಪಾಸಿಬಲ್ ವೊಯೇಜ್, ಈ ಅಂಶಗಳಲ್ಲಿ ಕೆಲವು. ದುರದೃಷ್ಟವಶಾತ್ ಈ ಚಿತ್ರವೂ ಸಹ ನೆಲಕಚ್ಛಿತು. ಇದರಿಂದಾಗಿ ಪಾಥೆಯು ಮೆಲಿಯೇಸರ ಚಿತ್ರವನ್ನು ತಿದ್ದುವ ತನ್ನ ಹಕ್ಕನ್ನು ಮುಂದಿನ ಅವರ ಚಿತ್ರಗಳ ಮೇಲೆ ಚಲಾಯಿಸತೊಡಗಿತು.
ಮೆಲಿಯೇಸರ ಸಿಂಡ್ರೆಲ್ಲಾ ಆರ್ ದಿ ಗ್ಲಾಸ್ ಸ್ಲಿಪ್ಪರ್, ಕಾಲ್ಪನಿಕ ಚಿತ್ರ ಪ್ರಕಾರದಲ್ಲಿ ಅವರ ಕೊನೆಯ ಚಿತ್ರವಾಗಿತ್ತು. ೫೪ ನಿಮಿಷ ಕಾಲಾವಧಿಯ ಈ ಚಿತ್ರ, ಸಿಂಡ್ರೆಲ್ಲಾ ಕಥಾನಕದ ಮರು-ರೂಪಣೆಯಾಗಿತ್ತು.ಹೊಸ ಡೀಪ್ ಫೋಕಸ್ ಲೆನ್ಸಿನಿಂದ ಚಿತ್ರೀಕರಿಸಿದ್ದ ಈ ಚಿತ್ರವು, ಮೊತ್ತಮೊದಲ ಬಾರಿಗೆ ವೆದಿಕೆಯ ಹಿನ್ನಲೆಯಲ್ಲಿ ಅಲ್ಲದೇ ಹೊರಾಂಗಣದಲ್ಲಿ ಚಿತ್ರಿಸಲಾಗಿತ್ತು. ಚಿತ್ರದ ಅಳತೆಯನ್ನು ೩೩ ನಿಮಿಷಕ್ಕೆ ಇಳಿಸಲು ಪಾಥೆಯು ಮೆಲಿಯೇಸರ ಬಹುಕಾಲದ ವೈರಿ ಫರ್ಡಿನೆಂಡ್ ಜ಼ೆಕ್ಕಾನನ್ನು ನೇಮಿಸಿಕೊಂಡಿತು. ಆದರೆ ಇದೂ ಸಹ ಫಲಪ್ರದವಾಗಲಿಲ್ಲ ಹಾಗು ಚಿತ್ರವು ನಷ್ಟವನ್ನನುಭವಿಸಿತು. ದಿ ನೈಟ್ ಆಫ್ ದಿ ಸ್ನೋಸ್ ಹಾಗು ದಿ ವೊಯೇಜ್ ಆಫ್ ಬೌರಿಕೋನ್ ಫ್ಯಾಮಿಲಿ ಚಿತ್ರಗಳಲ್ಲಿಯು ಸಹ ಇದೇ ಅನುಭವ ಮರುಕಳಿಸಿದಾಗ ,೧೯೧೨ರ ಕೊನೆಯಲ್ಲಿ ಮೆಲಿಯೇಸ್ ಪಾಥೆಯೊಂದಿಗಿನ ತಮ್ಮ ಒಪ್ಪಂದವನ್ನು ಮುರಿದರು.[೨೯]
ಇದೇ ವೇಳೆ ಗ್ಯಾಸ್ಟನ್ ೧೯೧೨ರ ಬೇಸಿಗೆ ಕಾಲದಲ್ಲಿ, ತಮ್ಮ ಕುಟುಂಬ ಹಾಗು ೨೦ ಮಂದಿಯ ಚಿತ್ರತಂಡದೊಂದಿಗೆ ಟಹೀಟಿಗೆ ಪ್ರಯಾಣ ಬೆಳೆಸಿದರು ಹಾಗು ೧೯೧೩ರಷ್ಟ್ರಲ್ಲಿ ದಕ್ಷಿಣ ಪೆಸಿಫಿಕ್ ಹಾಗು ಏಷ್ಯಾದುದ್ದಕ್ಕೂ ಪಯಣಿಸಿದ ಗ್ಯಾಸ್ಟನ್, ಅಲ್ಲೆಲ್ಲಾ ಚಿತ್ರೀಕರಿಸಿದ ಚಲನಚಿತ್ರದ ತುಣುಕಗಳನ್ನು ನ್ಯು ಯಾರ್ಕಿನಲ್ಲಿದ್ದ ತಮ್ಮ ಮಗನಿಗೆ ಕಳುಹಿಸಿದರಿ. ಈ ತುಣುಕುಗಳು ಅನೇಕ ಬಾರಿ ಹಾನಿಗೊಳಗಾಗಿದ್ದವು ಅಥವಾ ನಿಷ್ಪ್ರಯೋಜಕವಾಗಿರುತ್ತಿದ್ದವು. ಇದಲ್ಲದೇ ಗ್ಯಾಸ್ಟನ್ ಎಡಿಸನ್ ಕಂಪೆನಿಯ ಕರಾರನ್ನು ಪೂರ್ಣಗೊಳಿಸುವಲ್ಲಿ ವಿಫಲವಾದರು. ತಮ್ಮ ಪ್ರಯಾಣದ ಕೊನೆಯಷ್ಟರಲ್ಲಿ ಗ್ಯಾಸ್ಟನ್ ೫೦ ಸಾವಿರ ಡಾಲರ್ ಗಳಷ್ಟು ನಷ್ಟವನ್ನನುಭಿವಿಸಿದ್ದ ಕಾರಣ ಸ್ಟಾರ್ ಫಿಲ್ಮ್ಸಿನ ಅಮೇರಿಕಾ ಶಾಖೆಯನ್ನು ವಿಟಾಗ್ರಾಫ್ ಸ್ಟುಡಿಯೋಸಿಗೆ ಮಾರಿದರು. ಅಂತಿಮವಾಗಿ ಯುರೋಪಿಗೆ ಮರಳಿದ ಗ್ಯಾಸ್ಟನ್, ೧೯೧೫ರಲ್ಲಿ ನಿಧನರಾದರು. ಗ್ಯಾಸ್ಟನ್ ಹಾಗು ಜಾರ್ಜೆಸ್ ಮೆಲಿಯೇಸ್ ಮತ್ತೆಂದೂ ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ.[೨೯]
೧೯೧೩ರಲ್ಲಿ ಪಾಥೆಯೊಂದಿಗೆ ಒಪ್ಪಂದ ಮುರಿದ ಮೆಲಿಯೇಸರಿಗೆ, ಕಂಪೆನಿಯ ಋಣಭಾರ ತೀರಿಸಲು ಬೆರಾವುದೇ ದಾರಿಯಿರಲಿಲ್ಲ. ೧೯೧೪ರ ಮಹಾಯುದ್ಧದಲ್ಲಿ ಹೇರಲಾದ ನಿಷೇದಾಜ್ಞೆಯ ಕಾರಣ ಪಾಥೆಯು ಮೆಲಿಯೇಸರ ಮನೆ ಹಾಗು ಮಾಂಟ್ರಿಯಲ್ಲಿನ ಸ್ಟುಡಿಯೋವನ್ನು ವಶಪಡಿಸಿಕೊಳ್ಳಲಾಗಲಿಲ್ಲ. ಮೆಲಿಯೇಸ್ ದಿವಾಳಿಯಾದ ಕಾರಣ ಚಿತ್ರನಿರ್ಮಾಣವನ್ನು ಮುಂದುವರಿಸಲಾಗಲಿಲ್ಲ. ತಮ್ಮ ಆತ್ಮಚರಿತ್ರೆಯಲ್ಲಿ ಮೆಲಿಯೇಸ್, ಮಿರಿಯಂ ರೊಸೆನ್ ಬಣ್ಣಿಸಿದಂತೆ, ಪಾಥೆ ಹಾಗು ಇತರೆ ಸಂಸ್ಥೆಗಳ ಬಾಡಿಗೆ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗದಿರುವುದು, ತಮ್ಮ ಸಹೋದರ ಗ್ಯಾಸ್ಟನ್ ರ ಕಳಪೆ ಆರ್ಥಿಕ ನಿರ್ಧಾರಗಳು ಹಾಗು ಮೊದಲನೇ ಮಹಾಯುದ್ಧದ ಭೀಭಿತ್ಸತೆಯ ಕಾರಣ ಚಿತ್ರ ನಿರ್ಮಾಣ ನಿಲ್ಲಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಷಮಕಾಲದ ಕೊನೆಯ ಪೆಟ್ಟಾಗಿ ೧೯೧೩ರ ಮೇ ತಿಂಗಳಿನಲ್ಲಿ ಮೆಲಿಯೇಸರ ಮೊದಲನೇ ಮಡದಿ, ಯುಜೀನಿ ಜೆನಿನ್, ಅವರ ೧೨ ವರ್ಷದ ಮಗ ಆಂಡ್ರೆಯ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ಮೆಲಿಯೇಸರ ಕೈಗಿತ್ತು ,ವಿಧಿವಶರಾದರು. ಯುದ್ಧದ ಕಾರಣ ಅದೇ ವರ್ಷ ಥಿಯೇಟರ್ ರಾಬರ್ಟ್ ಹೌಡಿನನ್ನು ಒಂದು ವರ್ಷದ ಕಾಲ ಮುಚ್ಚಲಾಯಿತು. ಆವಾಗ ತಮ್ಮಿಬ್ಬರು ಮಕ್ಕಳನ್ನು ಕರೆದುಕೊಂಡು ಪ್ಯಾರಿಸನ್ನು ಬಿಟ್ಟು ಹೋದ ಮೆಲಿಯೇಸ್, ಮುಂದಿನ ಹಲವು ವರ್ಷಗಳ ಕಾಲ ಅಲ್ಲಿಗೆ ಮರಳಲಿಲ್ಲ.[೩೦]
೧೯೧೭ರಲ್ಲಿ ಫ್ರೆಂಚ್ ಸೈನ್ಯವು, ಮಾಂಟ್ರಿಯಲ್ಲಿನ ಮುಖ್ಯ ಸ್ಟುಡಿಯೋ ಕಟ್ಟಡವನ್ನು ಗಾಯಾಳು ಸೈನಿಕರಿಗಾಗಿನ ಆಸ್ಪ್ತ್ರೆಯನ್ನಾಗಿ ಪರಿವರ್ತಿಸಿತು. ಮೆಲಿಯೇಸ್ ಹಾಗು ಅವರ್ ಕುಟುಂಬವು ಎರಡನೇ ಸ್ಟುಡಿಯೋ ಸೆಟ್ಟನ್ನು ರಂಗಮಂದಿರವನ್ನಾಗಿ ಪರಿವರ್ತಿಸಿ ೧೯೧೩ರವರೆಗೆ ಸರಿಸುಮಾರು ೨೪ ನಾಟಕ ಪ್ರಸಂಗಗಳನ್ನು ಪ್ರದರ್ಶಿಸಿತು. ಯುದ್ಧಕಾಲದಲ್ಲಿ ಫ್ರೆಂಚ್ ಸೈನ್ಯವು ೪೦೦ಕ್ಕೂ ಹೆಚ್ಚು ಸ್ಟಾರ್ ಫಿಲ್ಮ್ಸಿನ ಚಿತ್ರಗಳ ಮೂಲಪ್ರತಿಗಳನ್ನು ಜಪ್ತಿ ಮಾಡಿ, ಶೂಗಳ ಹೀಲ್ ತಯಾರಿಸುವುದಕ್ಕಾಗಿ, ಈ ಪ್ರತಿಗಳಲ್ಲಿದ್ದ ಬೆಳ್ಳಿ ಹಾಗು ಸೆಲ್ಯುಲಾಯ್ಡನ್ನು ಪಡೆಯಲು ಅವನ್ನು ಕರಗಿಸಲಾಯಿತು.[೧೪]
೧೯೨೩ರಲ್ಲಿ ಬೊಲೆವಾರ್ಡ್ ಹೌಸ್ಮಾನನ್ನು ನಿರ್ಮಿಸಲು ಥಿಯೇಟರ್ ರಾಬರ್ಟ್ ಹೌಡಿನನ್ನು ಕೆಡವಲಾಯಿತು. ಅದೇ ವರ್ಷ ಪಾಥೆಯು ಸ್ಟಾರ್ ಫಿಲ್ಮ್ಸ್ ಹಾಗು ಮಾಂಟ್ರಿಯಲ್ಲಿನ ಸ್ಟುಡಿಯೋವನ್ನು ವಶಪಡಿಸಿಕೊಂಡಿತು. ಇದರಿಂದ ರೊಚ್ಚಿಗೆದ್ದ ಮೆಲಿಯೇಸ್, ಮಾಂಟ್ರಿಯಲ್ಲಿನ ಸ್ಟುಡಿಯೋದಲ್ಲಿ ಶೇಖರಿಸಿಟ್ಟಿದ್ದ ತಮ್ಮ ಚಿತ್ರದ ಪ್ರತಿಗಳು ಹಾಗು ಅಲ್ಲಿದ ಸಾಕಷ್ಟು ದೃಶ್ಯ ಪರಿಕರಗಳು ಹಾಗು ವೇಷಭೂಷಣಗಳನ್ನು ಅಗ್ನಿಗೆ ಆಹುತಿಯಾಗಿಸಿದರು. ಇದರ ಕಾರಣ ಮೆಲಿಯೇಸರ ಹಲವು ಚಿತ್ರಗಳು ಇವಾಗ ಲಭ್ಯವಿಲ್ಲ. ಆದಾಗ್ಯೂ ೨೦೦ರಷ್ಟು ಅವರ ಚಿತ್ರಗಳನ್ನು ಸಂರಕ್ಷಿಸಿಲಾಗಿದೆ ಹಾಗು ೨೦೧೧ ಡಿಸೆಂಬರ್ ನಿಂದ ಅವುಗಳ ಡಿವಿಡಿ ಪ್ರತಿಗಳು ಲಭ್ಯವಿವೆ.
ನಂತರದ ಜೀವನ ಹಾಗು ಮರಣ
[ಬದಲಾಯಿಸಿ]ಚಿತ್ರೋದ್ಯಮದಿಂದ ಹೊರದಬ್ಬಿಸಿಕೊಂಡ ಮೇಲೆ, ಮೆಲಿಯೇಸ್, ಸಾರ್ವಜನಿಕ ಜೀವನದಿಂದ ಕಣ್ಮರೆಯಾದರು. ೧೯೨೦ರ ದಶಕದ ಮಧ್ಯಭಾಗದಷ್ಟರಲ್ಲಿ ಪ್ಯಾರಿಸಿನ ಮೊಂಟ್ಪರ್ನಸ್ಸೆ ನಿಲ್ದಾಣದಲ್ಲಿ ಇತರೆ ಚಿತ್ರೊದ್ಯಮಿಗಳ ಸಹಾಯದಿಂದ, ಮಿಠಾಯಿ ಹಾಗು ಗೊಂಬೆಗಳನ್ನು ಮಾರುತ್ತಾ, ಬಡ ಜೀವನವನ್ನು ನೆಡೆಸುತ್ತಿದ್ದರು. ೧೯೨೫ರಲ್ಲಿ ತಮ್ಮ ಬಹುಕಾಲದ ಸಂಗಾತಿ ಜಿಹ್ಯಾನ್ ಡಿಯಾಲ್ಸಿಯನ್ನು ವರಿಸಿದ ಮೆಲಿಯೇಸ್, ಅವರೊಂದಿಗೆ ಪ್ಯಾರಿಸಿನಲ್ಲಿ ತಮ್ಮ ಕಿರಿಯ ಮೊಮ್ಮಗಳಾದ ಮ್ಯಾಡಲೀನ್ ಮಾಲ್ಥೀಟ್ ಮೆಲಿಯೇಸ್ ಜೊತೆ ನೆಲೆಸಿದರು. ೧೯೨೦ರ ದಶಕದ ಕೊನೆಯಷ್ಟರಲ್ಲಿ ಹಲವಾರು ಪತ್ರಕರ್ತರು ಮೆಲಿಯೇಸ್ ಹಾಗು ಅವರ ಜೀವಮಾನದ ಕೃತಿಗಳ ಮೇಲೆ ಸಂಶೋಧನೆ ಆರಂಭಿಸಿ, ಮೆಲಿಯೇಸರ ಮೇಲೆ ಹೊಸ ಆಸಕ್ತಿ ಹುಟ್ಟುವಂತೆ ಮಾಡಿದರು. ಮೆಲಿಯೇಸರ ಘನತೆ ಮತ್ತೊಮ್ಮೆ ಜಗತ್ತಿನಾದ್ಯಂತ ಬೆಳೆಯಲಾರಂಭಿಸಿ, ಅವರ ಕೃತಿಗಳು ಮತ್ತಷ್ಟು ಗುರುತಿಸಿಕೊಳ್ಳಲಾರಂಭಿಸಿ, ಡಿಸೆಂಬರ್ ೧೯೨೯ರಲ್ಲಿ ಸಾಲ್ಲೆ ಪ್ಲೆಯಲ್ನಲ್ಲಿ ಅವರ ಚಿತ್ರ ಮಹೋತ್ಸವವನ್ನು ಏರ್ಪಡಿಸಲಾಯಿತು. ತಮ್ಮ ಆತ್ಮಚರಿತೆಯಲ್ಲಿ ಮೆಲಿಯೇಸ್, ಈ ಉತ್ಸವವನ್ನು "ತಮ್ಮ ಜೀವಮಾನದ ಅತ್ಯಂತ ಅದ್ಭುತ ಕ್ಷಣಗಳನ್ನು ಇಲ್ಲಿ ಅನುಭವಿಸಿದೆ" ಎಂದು ಬಣ್ಣಿಸಿದ್ದಾರೆ.[೩೦]
ನಂತರದ ದಿನಗಳಲ್ಲಿ ಮೆಲಿಯೇಸರಿಗೆ ಚೆವಲಿಯರ್ ಡೆ ಲಾ ಲೆಜಿಯನ್ ಡಿ'ಹಾನರ್, ಪದಕವನ್ನು ನೀಡಿ ಗೌರವಿಸಲಾಯಿತು. ಅವರಿಗೆ ಈ ಪದಕವನ್ನು ೧೯೩೧ ಅಕ್ಟೋಬರಿನಲ್ಲಿ ಲೂಯಿಸ್ ಲುಮಿಯೇರ್ ರವರು ನೀಡಿದರು[೧೫]. ಮೆಲಿಯೇಸ್ "ಸಿನಿಮೀಯ ಅದ್ಭುತಗಳ ಪಿತಾಮಹ" ಎಂದು ಖುದ್ದು ಲುಮಿಯೇರ್ ಹೊಗಳಿದ್ದರು[೩೦]. ಆದರೆ ಇದ್ಯಾವುದೇ ಮನ್ನಣೆಗಳಿಂದಲೂ ಮೆಲಿಯೇಸ್ರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿಲ್ಲ. ಫ್ರೆಂಚ್ ಚಿತ್ರನಿರ್ಮಾಪಕ ಯುಜೀನ್ ಲೌಸ್ಟೆಗೆ ಬರೆದ ಕಾಗದದಲ್ಲಿ, "ಅದೃಷ್ಟವಶಾತ್, ನಾನಿನ್ನು ಸಶಕ್ತ ಹಾಗು ಆರೋಗ್ಯವಂತನಾಗಿದ್ದೇನೆ. ಆದರೆ ದಿನಂಪ್ರತಿ ೧೪ ಗಂಟೆಗಳ ಕಾಲ ರವಿವಾರ ಹಾಗು ರಜೆಗಳೆನ್ನದೆ, ಚಳಿಗಾಲದಲ್ಲಿ ಶೀತಕದಳೊಗೆ ಹಾಗು ಬೇಸಿಗೆಯಲ್ಲಿ ಕುಲುಮೆಯೊಳಗೆ ಕೆಲಸ ಮಾಡುತ್ತಿರುವ ಅಭಾಸವಾಗುತ್ತದೆ" ಎಂದು ಮೆಲಿಯೇಸ್ ತಮ್ಮ ಸ್ಥಿತಿಯನ್ನು ಬಣ್ಣಿಸಿದ್ದಾರೆ.[೩೦]
೧೯೩೨ರಲ್ಲಿ ಸಿನಿಮಾ ಸೊಸೈಟಿಯು, ಮೆಲಿಯೇಸ್, ಅವರ ಪತ್ನಿ ಜಿಹ್ಯಾನ್ ಹಾಗು ಮೊಮ್ಮಗಳು ಮೆಡಲೀನ್ರಿಗೆ ಚಲನಚಿತ್ರೋದ್ಯಮದ ನಿವೃತ್ತಿ ವಿಶ್ರಾಂತಿಗೃಹವಾದ ಒರ್ಲಿಯ ಲಾ ಮೈಸನ್ ಡು ರಿಟ್ರೈಟ್ ಡು ಸಿನೆಮಾದ ಮನೆಯೊಂದರಲ್ಲಿ ತಂಗುವ ಏರ್ಪಾಡು ಮಾಡಿತು. ಇದರಿಂದ ಬಹುಮಟ್ಟಿಗೆ ನಿರಾಳವಾದ ಮೆಲಿಯೇಸ್, ಅಮೇರಿಕನ್ ಪತ್ರಕರ್ತರೊಬ್ಬರಿಗೆ ಬರೆದ ಪತ್ರದಲ್ಲಿ , "ಮನೆ ಅಥವಾ ಊಟವಿಲ್ಲದ ಒಂದು ದಿನವೂ ಇನ್ನು ನನಗೆ ಬರುವುದಿಲ್ಲವೆನ್ನುವುದು ನನಗೆ ತುಂಬ ತೃಪ್ತಿಯನ್ನು ನೀಡುವ ಸಂಗತಿಯಾಗಿದೆ."[೩೦] ಒರ್ಲಿಯಲ್ಲಿ ಮೆಲಿಯೇಸ್ ಹಲವಾರು ಕಿರಿಯ ನಿರ್ದೇಶಕರೊಂದಿಗೆ ಕೂಡಿ ಹಲವು ಚಿತ್ರದ ಚಿತ್ರಕಥೆ ರೂಪಿಸಿದರು, ಆದರೆ ಅದ್ಯಾವು ಚಲನಚಿತ್ರಗಳಾಗಿ ಮಾರ್ಪಾಡಾಗಲಿಲ್ಲ.ಇವುಗಳಲ್ಲಿ ಕೆಲವು ಹ್ಯಾನ್ಸ್ ರಿಕ್ಟರಿನ ಬ್ಯಾರನ್ ಮುಂಚೌಸನ್ನಿನ ಹೊಸ ಆವೃತ್ತಿ ಹಾಗು ಹೆನ್ರಿ ಲ್ಯಾಂಗ್ಲೊಯಿಸ್, ಜಾರ್ಜೆಸ್ ಫ್ರಾಂಜು, ಮಾರ್ಸೆಲ್ ಕಾರ್ನೆ ಹಾಗು ಜಾಕೆಸ್ ಪ್ರೆವರ್ಟ್ [೧೭] ಇವರನ್ನೊಳಗೊಂಡ ಲೆ ಫ್ಯಾಂಟಮ್ ಡು ಮೆಟ್ರೊ ಎಂಬ ಹೆಸರಿಡಬೇಕಿದ್ದ ಚಿತ್ರ. ನಂತರದ ಕೆಲವು ವರ್ಷಗಳಲ್ಲಿ ಮೆಲಿಯೇಸ್, ಪ್ರೆವರ್ಟ್ ಜೊತೆಗೂಡಿ ಹಲವು ಜಾಹಿರಾತುಗಳಲ್ಲಿ ನಟಿಸಿದರು.
ಲ್ಯಾಂಗ್ಲೊಯಿಸ್ ಹಾಗು ಫ್ರಾಂಜು, ಮೆಲಿಯೇಸರನ್ನು ರೆನೆ ಕ್ಲೇರಿನ ಜೊತೆ ೧೯೩೫ರಲ್ಲಿ ಭೇಟಿಯಾದರು[೧೬]. ೧೯೩೬ರಲ್ಲಿ ಅವರಿಬ್ಬರು ಒಟ್ಟುಗೂಡಿ ಒರ್ಲಿ ನಿವೃತ್ತಿ ನಿವಾಸದ ಪರಿಧಿಯಲ್ಲಿಯೇ ಇದ್ದ ಒಂದು ಪಾಳುಬಿದ್ದ ಕಟ್ಟಡವನ್ನು , ಚಲನಚಿತ್ರಗಳ ಪ್ರತಿಗಳನ್ನು ಶೇಖರಿಸಿಡಲು ಬಾಡಿಗೆಗೆ ಪಡೆದರು ಹಾಗು ಈ ಕಟ್ಟಡದ ಕೀಲಿಯನ್ನು ಮೆಲಿಯೇಸರ ಕೈಗಿತ್ತರು. ಹೀಗೆ ಮೇಲಿಯೇಸ್,ಮುಂದೆ ಸಿನಿಮಾಥೆಕ್ ಫ್ರಾಂಕೈಸ್ ಎಂದು ಗುರುತಿಸಿಕೊಂಡ ಈ ಸಂಸ್ಥೆಯ ಮೊತ್ತಮೊದಲ ಸಂರಕ್ಷಕರಾದರು. ೧೯೧೨ರ ನಂತರ ಯಾವುದೇ ಚಿತ್ರವನ್ನು ನಿರ್ಮಿಸದಿದ್ದರೂ ಅಥವ ೧೯೨೩ರ ನಂತರ ರಂಗದ ಮೇಲೆ ತಮ್ಮ ಕೈಚಳಕ ತೋರಿಸದಿದ್ದರೂ, ಮೆಲಿಯೇಸ್ ಚಿತ್ರಬಿಡಿಸುವುದು, ಲೇಖನಗಳನ್ನು ಬರೆಯುವುದು ಹಾಗು ಕಿರಿಯ ಸಿನಿಮಾ ಅಭಿಮಾನಿಗಳಿಗೆ ಸಲಹೆ ಸೂಚನೆಗಳನ್ನು ನೀಡುವುದನ್ನು ತಮ್ಮ ಕೊನೆಗಾಲದವರೆಗೂ ಮುಂದುವರಿಸಿದರು.[೩೦]
೧೯೩೭ರ ಕೊನೆಯಷ್ಟರಲ್ಲಿ ಮೆಲಿಯೇಸರ ಆರೋಗ್ಯ ತುಂಬ ಹದಗೆಟ್ಟ ಕಾರಣ, ಲ್ಯಾಂಗ್ಲೊಯಿಸ್ ಅವರನ್ನು ಪ್ಯಾರಿಸಿನ ಲಿಯೊಪೊಲ್ಡ್ ಬೆಲ್ಲನ್ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದರು. ಇಷ್ಟರಲ್ಲಾಗಲೇ ಮೆಲಿಯೇಸರಿಗೆ ಲ್ಯಾಂಗ್ಲೊಯಿಸ್ ತುಂಬ ಆಪ್ತರಾಗಿದ್ದರು ಹಾಗು ಫ್ರಾಂಜುವಿನ ಜೊತೆಗೂಡಿ ಅವರ ಸಾವಿಗೂ ಮುನ್ನ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು. ಅವರು ಬಂದಾಗ, ಮೆಲಿಯೇಸ್ ಅವರಿಗೆ ತಮ್ಮ ಕೊನೆಯ ಕಲಾಕೃತಿಗಳಲ್ಲಿ ಒಂದಾದ ಕಾರ್ಕ್ ತೆರೆದು ನೊರೆ ಉಕ್ಕುತ್ತಿರುವ ಶಾಂಪೇನಿನ ಬಾಟಲಿನ ಚಿತ್ರವನ್ನು ತೋರಿಸಿ, "ನಗಾಡಿ ಸ್ನೇಹಿತರೇ, ನನ್ನೊಂದಿಗೆ ನಗಾಡಿ, ನನಗಾಗಿ ನಗಾಡಿ ಯಾಕೆಂದರೆ ನಿಮ್ಮ ಕನಸುಗಳನ್ನು ಕಾಣುವವನು ನಾನು" ಎಂದು ಹೇಳಿದ್ದರು[೧೮]. ೨೧ ಜನವರಿ ೧೯೩೮ರಲ್ಲಿ, ೭೬ರ ವಯಸ್ಸಿನಲ್ಲಿ ಜಾರ್ಜೆ ಮೆಲಿಯೇಸ್ ಕ್ಯಾನ್ಸರಿನಿಂದ ಮೃತಪಟ್ಟರು.ಜಾರ್ಜೆಸ್ ನಿಧನರಾಗುವ ಕೆಲವು ಘಂಟೆಗಳ ಮುಂಚೆಯಷ್ಟೆ ಮತ್ತೊಬ್ಬ ಫ್ರೆಂಚ್ ಚಿತ್ರದ ಪ್ರವರ್ತಕ ಎಮೈಲ್ ಕೋಲ್ ಸಹ ಇಹಲೋಕ ತ್ಯಜಿಸಿದ್ದರು. ಇವರಿಬ್ಬರನ್ನು ಪೆರೆ ಲಚಾಯಿಸ್ ರುದ್ರಭೂಮಿಯಲ್ಲಿ ಸಮಾಧಿ ಮಾಡಲಾಯಿತು.[೨೧]
ಪ್ರಶಂಸೆಗಳು
[ಬದಲಾಯಿಸಿ]**ವಿವಿಧ ಸಂಸ್ಕೃತಿಗಳಲ್ಲಿ ಮೆಲಿಯೇಸರ ಬಗ್ಗೆ ಕಂಡುಬಂದಿರುವ ಉಲ್ಲೇಖಗಳನ್ನು ಈ ಕೊಂಡಿಯಲ್ಲಿ ಕಾಣಬಹುದು**
ವಾಲ್ಟ್ ಡಿಸ್ನಿ, ೧೯೩೬ರಲ್ಲಿ ಲಿಜಿಯನ್ ಆಫ್ ಹಾನರಿನಿಂದ ಪುರಸ್ಕೃತರಾದಾಗ, ಮೆಲಿಯೇಸ್ ಹಾಗು ಎಮಿಲ್ ಕೊಲ್ರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾ,"ಸಾಮಾನ್ಯ ಜನರಿಗೂ ಸಹ ಕವಿತೆಗಳ ಸೌಂದರ್ಯವನ್ನು ತೋರುವ ರೀತಿಯನ್ನು ಕಂಡುಹಿಡಿದವರು" ಎಂದು ಮೆಲಿಯೇಸರನ್ನು ಬಣ್ಣಿಸಿದ್ದಾರೆ.[೩೧]
ಟೆರಿ ಗಿಲ್ಲಿಯಮ್ ಮೆಲಿಯೇಸರನ್ನು "ಚಿತ್ರರಂಗದ ಮೊತ್ತಮೊದಲ ಮಹಾನ್ ಜಾದೂಗಾರ" ಎಂದು ಬಣ್ಣಿಸುತ್ತಾ,"ಅವರ ಅಹ್ಲಾದಕರ ಮೋಜಿನ ಭಾವ ಹಾಗು ನಿಬ್ಬೆರಗಾಗಿಸುವ ಶಕ್ತಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿವೆ ಹಾಗು ಇದನ್ನು ನನ್ನ ಮೊದಲ ಎನಿಮೇಷನ್ಗಳು ಹಾಗು ನಂತರ ಲೈವ್-ಎಕ್ಷನ್ ಚಿತ್ರಗಳಲ್ಲಿ ಕಾಣಬಹುದು.. ಖಂಡಿತವಾಗ್ಯು ಇಂದಿಗೂ ಮೆಲಿಯೇಸರು ನನ್ನನ್ನು ಬಿಗಿಯಾದ ಸೃಜನಾತ್ಮಕ ಹಿಡಿತದಲ್ಲಿಟ್ಟಿದ್ದಾರೆ " ಎಂದು ಹೇಳಿದ್ದಾರೆ.[೩೨]
ದಿ ಸ್ಮ್ಯಾಶಿಂಗ್ ಪಂಪ್ಕಿನ್ಸ್ ಸಂಗೀತ ಬಳಗ ತಮ್ಮ ೧೯೯೫ರ ಹಾಡು, "ಟುನೈಟ್, ಟುನೈಟ್"ನ ವಿಡಿಯೋ ಮೆಲಿಯೇಸರ ಎ ಟ್ರಿಪ್ ಟು ದಿ ಮೂನ್ ಚಿತ್ರದಿಂದ ಪ್ರೇರಿತಗೊಂಡಿದೆ. ಇದನ್ನು ಜೊನಾಥನ್ ಡೆಟನ್ ಹಾಗು ವಲೆರಿ ಫಾರಿಸ್ ನಿರ್ದೇಶಿಸಿದ್ದಾರೆ.
ಬ್ರೈಯನ್ ಸೆಲ್ಜ಼್ನಿಕ್ ನ ೨೦೦೭ರ ಕಾದಂಬರಿ ದಿ ಇನ್ವೆನ್ಷನ್ ಆಫ್ ಹ್ಯುಗೊ ಕ್ಯಾಬ್ರೆಟ್ ಹಾಗು ಇದರ ಮೇಲೆ ೨೦೧೧ರಲ್ಲಿ ನಿರ್ಮಿಸಿದ ಚಿತ್ರ ಹ್ಯುಗೊ, ಮೆಲಿಯೇಸರ ನಂತರದ ಜೀವನದ ಮೇಲಾಧಾರಿತವಾಗಿದೆ. ಈ ಚಿತ್ರದಲ್ಲಿ ಬೆನ್ ಕಿಂಗ್ಸ್ಲೆಯವರು ಮೆಲಿಯೇಸರ ಪಾತ್ರವನ್ನು ನಿರ್ವಹಿಸಿದ್ದಾರೆ ಹಾಗು ಈ ಚಿತ್ರವನ್ನು ಮಾರ್ಟಿನ್ ಸ್ಕೊರ್ಸೆಸೆ ನಿರ್ದೇಶಿಸಿದ್ದಾರೆ[೨೦]. ಈ ಚಿತ್ರದಲ್ಲಿ ಮೆಲಿಯೇಸರ ನಿಜವಾದ ಆರಂಭಿಕ ಚಲನಚಿತ್ರಗಳಲ್ಲಿ ಕಂಡುಬಂದಂತಹ ಅತ್ಯದ್ಭುತ ಸೆಟ್ ಗಳ ಪುನಾರಚನೆಯನ್ನು ನೋಡಬಹುದು.
೨೦೧೫ರಲ್ಲಿ ಮೆಲಿಯೇಸರ ಹೆಸರನ್ನು ಸೈನ್ಸ್ ಫಿಕ್ಷನ್ ಅಂಡ್ ಫ್ಯಾಂಟಸಿ ಹಾಲ್ ಆಫ್ ಫೇಮಿಗೆ ಸೇರಿಸಲಾಯಿತು.[೨೨][೨೩]
ಮೇ ೩, ೨೦೧೮ರಂದು ಗೂಗಲ್ ತನ್ನ ಮೊತ್ತಮೊದಲ ವರ್ಚುಯಲ್ ರಿಯಾಲಿಟಿ ಡೂಡಲಿನಿಂದ ಮೆಲಿಯೇಸರನ್ನು ಗೌರವಿಸಿತು[೨೪]. ಮೇ ೩ ೧೯೧೨ರಂದು ಮೆಲಿಯೇಸರ ದಿ ಕಾಂಕ್ವೆಸ್ಟ್ ಆಫ್ ದಿ ಪೋಲ್ ಚಿತ್ರವು ತೆರೆಕಂಡಿತ್ತು.
ನಿರ್ಮಾಣಗಳು
[ಬದಲಾಯಿಸಿ]**ಮೆಲಿಯೇಸರ ಚಲನಚಿತ್ರಗಳ ಪಟ್ಟಿ ಹಾಗು ಸಂಬಂಧಿತ ವಿವರಗಳನ್ನು ಈ ಕೊಂಡಿಯಲ್ಲಿ ಕಾಣಬಹುದು**
ವಿವಿಧ ಕಾರಣಗಳಿಂದ, ಮೆಲಿಯೇಸರ ೫೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ, ಸರಿಸುಮಾರು ೨೦೦ ಚಿತ್ರಗಳು ಮಾತ್ರ ಅಸ್ತಿತ್ವದಲ್ಲಿವೆ. ಮೆಲಿಯೇರು ತಮ್ಮ ಚಿತ್ರದ ಮೂಲ ನೆಗೆಟಿವ್ಗಳನ್ನು ನಾಶಪಡಿಸಿದ್ದರಿಂದ, ಫ್ರೆಂಚ್ ಸೈನ್ಯದಿಂದ ಪ್ರತಿಗಳು ಜಪ್ತಿಗೊಂಡಿದ್ದರಿಂದ ಹಾಗು ೧೯೫೦ಕ್ಕೂ ಮುನ್ನ ನಿರ್ಮಿಸಿದ ಚಿತ್ರಗಳ ಪ್ರತಿಗಳು ಒಳಗಾಗುವ ನಿಧಾವಾದ ಹಾಳುಗೆಡವುವಿಕೆಯಿಂದ ಅವರ ಬಹುತೇಕ ಚಿತ್ರಗಳು ಈಗ ಅಸ್ತಿತ್ವದಲ್ಲಿಲ್ಲ. ಮೆಲಿಯೇಸರ ಹಲವು ಹೊಸ ಚಿತ್ರಳು ಅವಾಗವಾಗ ದೊರಕುತ್ತಿವೆ ಆದರೆ ಅವರ ಬಹುತೇಕ ಸಂರಕ್ಷಿತ ಚಿತ್ರಪ್ರತಿಗಳು ಯು.ಎಸ್. ಲೈಬ್ರೆರಿ ಆಫ್ ಕಾಂಗ್ರೆಸ್ಸಿನಲ್ಲಿ ಇರುವ ಕಾರಣವೇನೆಂದರೆ,ಸ್ಟಾರ್ ಫಿಲ್ಮ್ಸಿನ ಅಮೆರಿಕಾ ಶಾಖೆಯನ್ನು ತೆರೆದಾಗ, ತಮ್ಮ ಸಂಸ್ಥೆಯ ಚಿತ್ರಗಳ ಕೃತಿಸ್ವಾಮ್ಯವನ್ನು ಕಾಪಾಡಲು ಗ್ಯಾಸ್ಟನ್ ಮೈಲಿಯೇಸ್ ಎಲ್ಲ ಚಿತ್ರಪ್ರತಿಗಳು ಹಾಗು ಅದರ ಜೊತೆ ಕಡತಗಳನ್ನು ಸರ್ಕಾರಿ ಸಂಸ್ಥೆಗಳಿಗೆ ಸಲ್ಲಿಸುತ್ತಿದ್ದಿದ್ದು.[೩೩]
ಕಳೆದುಹೋದ ಚಿತ್ರಗಳು
[ಬದಲಾಯಿಸಿ]೨೦೧೬ರಲ್ಲಿ ಹಲವು ವರ್ಷಗಳ ಹಿಂದೆಯೇ ಕಳೆದುಹೋಗಿತ್ತೆಂದು ಭಾವಿಸಲಾದ ಮೆಲಿಯೇಸರ ಮ್ಯಾಚ್ ಡೆ ಪ್ರೆಸ್ಟಿಡಿಜಿಟೇಶನ್ ಚಿತ್ರವು ಜ಼ೆಕ್ ಚಲನಚಿತ್ರ ಭಂಡಾರದಲ್ಲಿ ದೊರಕಿತು.[೨೫][೩೪]
ಇವನ್ನೂ ನೋಡಿರಿ
[ಬದಲಾಯಿಸಿ]- ಗ್ಯಾಸ್ಟನ್ ಮೆಲಿಯೇಸ್
- ಸೆಗುಂಡೊ ಡೆ ಚೊಮೊನ್
- ಲಾ ಮೈಸನ್ ಡೆ ಲಾ ಮ್ಯಾಗಿ ರಾಬರ್ಟ್ ಹೌಡಿನ್
- ಜಾರ್ಜೆಸ್ ಮೆಲಿಯೇಸ್ ಗ್ರಂಥಸೂಚಿ
- ಜಾರ್ಜೆಸ್ ಮೆಲಿಯೇಸ್ ಚಲನಚಿತ್ರಗಳ ಪಟ್ಟಿ
ಉಲ್ಲೇಖಗಳು
[ಬದಲಾಯಿಸಿ]ಪರಿವಿಡಿ
[ಬದಲಾಯಿಸಿ]- ↑ ಮಾರನೇ ದಿನ ಸಾಲೊನ್ ಇಂಡಿಯನ್ ಡು ಗ್ರಾಂಡ್ ಕೆಫೆಯಲ್ಲಿ ಇದರ ವಿಜೃಂಭಿತ ಸಾರ್ವಜನಿಕ ಪ್ರದರ್ಶನವು ನೆಡೆಯಿತು. ಮೆಲಿಯೇಸ್ ಈ ಸಾರ್ವಜನಿಕ ಪ್ರದರ್ಶನದಲ್ಲಿ ಹಾಜರಿದ್ದರು ಎಂದು ಕೆಲವು ಮೂಲಗಳಲ್ಲಿ ತಪ್ಪಾಗಿ ಹೇಳಲಾಗಿದೆ.[೫]
ಉಲ್ಲೇಖಗಳು
[ಬದಲಾಯಿಸಿ]- ↑ "Méliès". Random House Webster's Unabridged Dictionary.
- ↑ Gress, Jon (2015). Visual Effects and Compositing. San Francisco: New Riders. p. 23. ISBN 9780133807240. Retrieved 21 February 2017.
- ↑ ೩.೦ ೩.೧ ೩.೨ ೩.೩ Fry & Fourzon, The Saga of Special Effects, pp. 8
- ↑ ೪.೦ ೪.೧ ೪.೨ ೪.೩ ೪.೪ ೪.೫ "Lost 106-Year-Old Movie Discovered". MovieWeb. 22 September 2005. Archived from the original on 2013-12-30. Retrieved 2013-12-28.
- ↑ ೫.೦ ೫.೧ Cinémathèque Méliès 2013, p. 7.
- ↑ Musser, Charles. History of the American Cinema: Volume 1, The Emergence of Cinema. Charles Scribner's Sons, Inc. 1990. p. 277.
- ↑ ೭.೦ ೭.೧ ೭.೨ Musser. p. 325.
- ↑ ೮.೦ ೮.೧ ೮.೨ ೮.೩ ೮.೪ Solomon, Matthew, "Introduction", Fantastic Voyages of the Cinematic Imagination (PDF), SUNY Press, p. 2, archived from the original (PDF) on 19 ಜುಲೈ 2020, retrieved 2 January 2017,
As Charles Musser notes, 'Lubin, Selig, and Edison catalogs from 1903–04 listed many dupes … and gave particular prominence to Méliès films such as … A Trip to the Moon.' Consequently, Méliès received but a small fraction of the considerable profits earned by the film through sales of prints and theater admissions.
- ↑ ೯.೦ ೯.೧ ೯.೨ ೯.೩ Musser. p. 364.
- ↑ ೧೦.೦ ೧೦.೧ Musser, p. 299.
- ↑ ೧೧.೦ ೧೧.೧ Lucien Reulos. Cinematographes.free.fr. Retrieved 2013-08-16.
- ↑ ೧೨.೦ ೧೨.೧ "Silent Era: Fairyland: A Kingdom of Fairies". silentera. Archived from the original on 2009-10-06. Retrieved 2008-07-20.
- ↑ ೧೩.೦ ೧೩.೧ ೧೩.೨ ೧೩.೩ Musser. p. 402.
- ↑ ೧೪.೦ ೧೪.೧ Ezra, Elizabeth (2000). George Méliès. Manchester University Press. p. 19. ISBN 9780719053962.
- ↑ ೧೫.೦ ೧೫.೧ ೧೫.೨ Elizabeth Ezra. Georges Méliès: the birth of the auteur (Manchester: Manchester University Press, 2000): 20.
- ↑ ೧೬.೦ ೧೬.೧ Myrent & Langlois. p. 28.
- ↑ ೧೭.೦ ೧೭.೧ ೧೭.೨ Myrent, Glenn & Langlois, Georges P.. Henri Langlois: First Citizen of Cinema. Twayne Publishers. 1986. p. 40.
- ↑ ೧೮.೦ ೧೮.೧ ೧೮.೨ Myrent & Langlois. p. 40–41.
- ↑ Rosen 1987, p. 755.
- ↑ ೨೦.೦ ೨೦.೧ Lee, Kevin B. (28 November 2011). "On Beyond 'Hugo:' Méliès and More Early Movie Magic at the 'Minute' Cinematheque". Fandor. Archived from the original on 2014-11-29. Retrieved 2015-05-23.
- ↑ ೨೧.೦ ೨೧.೧ ೨೧.೨ "Georges Melies. French Motion Picture Producer a Pioneer in Industry". New York Times. 23 January 1938. Retrieved 2008-05-09.
{{cite news}}
: Cite has empty unknown parameter:|coauthors=
(help) - ↑ ೨೨.೦ ೨೨.೧ "Georges Méliès: One of the earliest filmmakers to bring visions of other worlds to reality" Archived 2016-03-09 ವೇಬ್ಯಾಕ್ ಮೆಷಿನ್ ನಲ್ಲಿ.. Science Fiction and Fantasy Hall of Fame. EMP Museum (empmuseum.org). Retrieved 2015-09-10.
- ↑ ೨೩.೦ ೨೩.೧ "2015 SF&F Hall of Fame Inductees & James Gunn Fundraiser". 12 June 2015. Locus Publications. Retrieved 2015-07-16.
- ↑ ೨೪.೦ ೨೪.೧ "Google's First VR Doodle Honors French Filmmaker Georges Méliès". Time (in ಇಂಗ್ಲಿಷ್). Retrieved 2018-05-03.
- ↑ ೨೫.೦ ೨೫.೧ Vishnevetsky, Ignatiy (12 October 2016). "A lost film by cinema pioneer Georges Méliès has been rediscovered". The A.V. Club. Retrieved 12 October 2016.
{{cite news}}
: Italic or bold markup not allowed in:|publisher=
(help) - ↑ ೨೬.೦ ೨೬.೧ ಉಲ್ಲೇಖ ದೋಷ: Invalid
<ref>
tag; no text was provided for refs named:27
- ↑ ಉಲ್ಲೇಖ ದೋಷ: Invalid
<ref>
tag; no text was provided for refs named:28
- ↑ Malthête & Mannoni 2008, p. 10.
- ↑ ೨೯.೦ ೨೯.೧ ೨೯.೨ Rosen 1987, p. 758.
- ↑ ೩೦.೦ ೩೦.೧ ೩೦.೨ ೩೦.೩ ೩೦.೪ ೩೦.೫ Rosen 1987, p. 759.
- ↑ Frazer 1979, p. 154.
- ↑ Wemaere, Séverine; Duval, Gilles (2011), La couleur retrouvée du Voyage dans la Lune, Groupama Gan Foundation for Cinema and Technicolor Foundation for Cinema Heritage, p. 174, retrieved 2014-02-03
- ↑ Rosen 1987, p. 756.
- ↑ Agence France-Presse (11 October 2016). "'Lost' movie by silent film pioneer unearthed at Czech film archive". The Guardian.
ಮೂಲಗಳು
[ಬದಲಾಯಿಸಿ]- Cinémathèque Méliès (June 2013), "Dossier: la soirée historique du Grand Café, Georges Méliès y assistait...la veille!", Cinémathèque Méliès: Lettre d'information (37): 7, archived from the original on 2015-04-15, retrieved 2018-05-23
- Frazer, John (1979), Artificially Arranged Scenes: The Films of Georges Méliès, Boston: G.K. Hall & Co., ISBN 0816183686
- Malthête, Jacques; Mannoni, Laurent (2008), L'oeuvre de Georges Méliès, Paris: Éditions de La Martinière, ISBN 9782732437323
- Rosen, Miriam (1987), "Méliès, Georges", in Wakeman, John (ed.), World Film Directors: Volume I, 1890–1945, New York: The H.W. Wilson Company, pp. 747–65
ಬಾಹ್ಯಕೊಂಡಿಗಳು
[ಬದಲಾಯಿಸಿ]- Works by or about ಜಾರ್ಜೆಸ್ ಮೆಲಿಯೇಸ್ at Internet Archive
- Official Georges Méliès website
- Museo Méliès and Cinema Collection, new art pieces every week, private collection in Spanish
- ಜಾರ್ಜೆಸ್ ಮೆಲಿಯೇಸ್ at Find a Grave
- ಟೆಂಪ್ಲೇಟು:Victorian Cinema
- ಜಾರ್ಜೆಸ್ ಮೆಲಿಯೇಸ್ ಐ ಎಮ್ ಡಿ ಬಿನಲ್ಲಿ
- Index des Films avec Georges Méliès
- Cinémathèque Méliès (Les Amis de Georges Méliès)
- Georges Méliès daily in-depth reviews of individual Méliès films
- Méliès: Inspirations & Illusions
- ಟೆಂಪ್ಲೇಟು:LCAuth
- [೧]
- Pages with reference errors
- Pages using the JsonConfig extension
- CS1 errors: empty unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 ಇಂಗ್ಲಿಷ್-language sources (en)
- CS1 errors: markup
- Pages using infobox person with multiple spouses
- Biography with signature
- Articles with hCards
- Commons category link is on Wikidata
- Articles with Internet Archive links
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNE identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with J9U identifiers
- Articles with KBR identifiers
- Articles with LCCN identifiers
- Articles with LNB identifiers
- Articles with NDL identifiers
- Articles with NKC identifiers
- Articles with NLA identifiers
- Articles with NLK identifiers
- Articles with NTA identifiers
- Articles with PLWABN identifiers
- Articles with CINII identifiers
- Articles with MusicBrainz identifiers
- Articles with MoMA identifiers
- Articles with PIC identifiers
- Articles with RKDartists identifiers
- Articles with ULAN identifiers
- Articles with Trove identifiers
- Articles with SNAC-ID identifiers
- Articles with SUDOC identifiers
- Georges Méliès
- 1861 births
- 1938 deaths
- People from Paris
- French people of Dutch descent
- French animators
- French male silent film actors
- 20th-century French male actors
- French film directors
- French magicians
- Silent film directors
- Special effects people
- Chevaliers of the Légion d'honneur
- Burials at Père Lachaise Cemetery
- French cinema pioneers
- Articles containing video clips
- Storyboard artists
- Science fiction film directors
- Fantasy film directors