ಇಂದ್ರಜಾಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇಂದ್ರಜಾಲ ಒಂದು ಪ್ರದರ್ಶನ ಕಲೆ. ಜಾದೂಗಾರರು ಬಹುತೇಕ ಇದೇ ವಿದ್ಯೆಯ ಮೇಲೆ ಅವಲಂಬಿತರಾಗಿದ್ದಾರೆ. ಇಂದ್ರಜಾಲವು ಅನೇಕ ಒಳಪ್ರಕಾರಗಳನ್ನು ಹೊಂದಿದ್ದು ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸುವದು, ಗಾಳಿಯಲ್ಲಿ ಮಾನವನನ್ನು ತೇಲಾಡಿಸುವದು, ಅಸ್ತಿತ್ವದಲ್ಲಿದ್ದ ವಸ್ತುಗಳನ್ನು ಮಾಯವಾಗಿಸುವದು ಜನಪ್ರೀಯವಾಗಿರುವ ಕಲೆಗಳಾಗಿವೆ. ಮಹೇಂದ್ರಜಾಲ, ಯಕ್ಷಿಣಿ ವಿದ್ಯೆ, ಕಣ್ಕಟ್ಟು ವಿದ್ಯೆ, ಸಮ್ಮೋಹನ ವಿದ್ಯೆ, ವಶೀಕರಣ, ಮಾಟ ಮುಂತಾದ ವಿದ್ಯೆಗಳು ಇಂದ್ರಜಾಲದ ಒಳಪ್ರಕಾರಗಳೆಂದು ಹೇಳಬಹುದಾಗಿದೆ.ಭಾರತದ ಪುರಾತನ ಕಾಲದ ಅರತ್ನಾಲ್ಕು ವಿದ್ಯೆಗಳಲ್ಲಿ ಇಂದ್ರಜಾಲವೂ ಸೇರಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂದ್ರಜಾಲದ ಕೆಲ ಬಗೆಗಳನ್ನು ವಿಜ್ಞಾನದ ಸಹಾಯದಿಂದ ಕಲಿಯಬಹುದೆಂದು ವಿಚಾರವಾದಿಗಳ ಅಭಿಪ್ರಾಯವಾಗಿದೆ. ವೇದಗಳ ಪೈಕಿ ಅಥರ್ವವೇದದಲ್ಲಿ ಈ ಕಲೆಯ ಬಗ್ಗೆ ವಿಸ್ತಾರವಾಗಿ ವಿವರಿಸಿರುವದನ್ನು ಗಮನಿಸಬಹುದಾಗಿದೆ.

"https://kn.wikipedia.org/w/index.php?title=ಇಂದ್ರಜಾಲ&oldid=609395" ಇಂದ ಪಡೆಯಲ್ಪಟ್ಟಿದೆ