ವರ್ಚುಯಲ್ ರಿಯಾಲಿಟಿ

ವಿಕಿಪೀಡಿಯ ಇಂದ
Jump to navigation Jump to search
A person wearing a HTC Vive virtual reality headset.

ನಿಜವಾದ ವತಾವರಣಕ್ಕೆ ಅತ್ಯಂತ ಸಮೀಪವಾದ ವಾತಾವರಣವನ್ನು ಕಂಪ್ಯೂಟರ್ ಮೂಲಕ ಒದಗಿಸಿ ವಿವಿಧ ಪ್ರಯೂಗಗಳಿಗೆ ಅವಕಾಶ ಒದಗಿಸುವ ತಂತ್ರ ಜ್ಞಾವನ್ನು ವರ್ಚುಯಲ್ ರಿಯಾಲಿಟಿ ಎಂದು ಕರೆಯಲಾಗಿದೆ. ವರ್ಚುಯಲ್ ರಿಯಾಲಿಟಿ ವ್ಯವಸ್ಥೆಯು ಕಂಪ್ಯೂಟರ್ ಗೆ ಕೈಗವಚ ಹಾಗು ಶಿರಸ್ತ್ರಾಣವನ್ನು ಒದಗಿಸಿ ಕೈ ಬೆರಳುಗಳ ಚಾಲನೆಗನುಸಾರವಾಗಿ ಬದಲಾದ ಸನ್ನಿವೇಶವನ್ನು ಒದಗಿಸುತ್ತದೆ.ಈ ಪ್ರಯೂಗವನ್ನು ನಡೆಸುತ್ತಿರುವವರಿಗೆ ವಾಸ್ತವವಾಗಿ ನಡೆದಾಡುವ ಪದಾರ್ಥಗಳ ಸ್ಥಾನವನ್ನು ಬದಲಿಸಿ ಮತ್ತೆ ಅದೇ ಸ್ಥಾನಕ್ಕೆ ಸೇರಿಸುವ, ಮೊದಲಾದ ಭಾವನೆಗಳನ್ನು ಸೃಷ್ಟಿಸುತ್ತದೆ. ಕಂಪ್ಯೂಟರ್ ಅನುಭವದಿಂದ ಮುಂದುವರೆದ ವ್ಯವಸ್ಥೆಯ ವಿಶೇಷ ಅನುಕೂಲವೆಂದರೆ,ಕಾರ್ಯಕ್ರಮದಲ್ಲಿ ಭಾಗವಹಿಸುವವ ತಾನು ಕಂಪ್ಯೂಟರ್ ನಲ್ಲಿ ಸೃಷ್ಟಿಯಾದ ಕೃತಕ ಪರಿಸರದ ಒಂದು ಭಾಗವೆಂದೇ ಭಾವಿಸುವುದು. ಅವನು ಈ ಪರಿಸರವನ್ನು,ಒಂದೊಂದು ಕಣ್ಣಿಗೆ ಒಂದೊಂದರಂತೆ ಅಳವಡಿಸಿದ ಎರಡು ಪುಟ್ಟ ಟಿ.ವಿ ಪರದೆಗಳ ಮೂಲಕ ದೃಷ್ಟಿಸುತ್ತಾನೆ .ಸಂವೇದಕಗಳು ಭಾಗವಹಿಸುವವನ ಶರೀರದ ಅಥವಾ ಶಿರದ ಚಲನೆಗಳನ್ನು ಪತ್ತೆಹಚ್ಚಿ ದೃಕ್ಕೋನ ಬದಲುವಂತೆ ಮಾಡುತ್ತವೆ.ಉದಾಹರಣೆಗೆ ಒಂದು ಕಾಲೇಜಿನ ರಾಸಾಯನಿಕ ವಿಜ್ಞಾನ ಪ್ರಯೋಗಶಾಲೆಯನ್ನು ಸಿದ್ಧಪಡಿಸಲು ಅಧ್ಯಾಪಕರು,ಸಲಕರಣೆಗಳು ಹಾಗೂ ರಾಸಾಯನಿಕ ಪದಾರ್ಥಗಳ ಅವಶ್ಯಕತೆಯಿರುತ್ತದೆ.ಇದರ ಬದಲು ಕಂಪ್ಯೂಟರಿನಲ್ಲಿ 'ವರ್ಚುಯಲ್ ರಿಯಾಲಿಟಿ ವ್ಯವಸ್ಥೆಯನ್ನು ಬಳಸಿ ಈ ಪ್ರಯೋಗಾಲಯವನ್ನು ಸೃಷ್ಟಿಸಿದಲ್ಲಿ ವಿದ್ಯಾರ್ಥಿಗಳು ಶಿರಸ್ತ್ರಾರಾಣ ಹಾಗೂ ಕೈಗವಚ ಧರಿಸಿ ನಿಜವಾದ ಪ್ರಯೋಗಶಾಲೆಯ ವಾತವರಣ ಪಡೆದು ಕಂಪ್ಯೂಟರ್ ನ ನಿರ್ದೇಶನದಂತೆ ವಿವಿಧ ರಾಸಾಯನಿಕ ವಸ್ತುಗಳನ್ನು ಬೆರೆಸಿ,ಬಿಸಿ ಮಾಡಿ ಆದರ ಪರಿಣಾಮನ್ನು ಗುರುತಿಸಿ ಫಲಿತಾಂಶವನ್ನು ದಾಖಲಿಸಬಹುದು.ಹಲವಾರು ಅಧ್ಯಾಪಕರ ತೀವ್ರ ಕೊರತೆ ಇರುವ ಹಳ್ಳಿಗಳು ಹಾಗೂ ಸಣ್ಣ ಊರುಗಳಲ್ಲಿ ಉತ್ತಮ ಮಟ್ಟದ ಪ್ರಯೋಗಶಾಲೆಯ ವ್ಯವಸ್ಥೆಯನ್ನು ಇದರ ಮೂಲಕ ಏರ್ಪಡಿಸಬಹುದು ವರ್ಚುಯಲ್ ರಿಯಾಲಿಟಿ ತಂತ್ರ ಜ್ಞಾನವನ್ನು ವಿಶ್ವಾದ್ಯಾಂತ ಡಾಕ್ಟರುಗಳು,ತಂತ್ರಜ್ಞರು ಹಾಗೂ ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷೇತ್ರವನ್ನು ರೂಪಿಸಲು ಬಳಸುತ್ತಿದ್ದಾರೆ..[೧] [೨]

ಉಲ್ಲೇಖಗಳು[ಬದಲಾಯಿಸಿ]