ಬಳಕೆದಾರರ ಅಂತರಸಂಪರ್ಕ (ಯೂಸರ್ ಇಂಟರ್ ಫೇಸ್)
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
ಮಾನವ–ಯಂತ್ರದ ಪರಸ್ಪರ ಕ್ರಿಯೆಯ ಔದ್ಯೋಗಿಕ ವಿನ್ಯಾಸ ಕ್ಷೇತ್ರದಲ್ಲಿ, ಬಳಕೆದಾರರ ಅಂತರಸಂಪರ್ಕ ವು ಮಾನವರ ಮತ್ತು ಯಂತ್ರಗಳ ನಡುವೆ ಪಾರಸ್ಪರಿಕ ಕ್ರಿಯೆ ಏರ್ಪಡುವ ಸಂದರ್ಭದ ಅಂತರವಾಗಿರುತ್ತದೆ. ಬಳಕೆದಾರರ ಅಂತರಸಂಪರ್ಕದಲ್ಲಿ ಮಾನವ ಮತ್ತು ಯಂತ್ರದ ನಡುವಿನ ಪರಸ್ಪರ ಕ್ರಿಯೆಯ ಉದ್ದೇಶವೆಂದರೆ, ಪ್ರಭಾವಪೂರ್ಣ ಕಾರ್ಯಾಚರಣೆ ಮತ್ತು ಯಂತ್ರದ ನಿಯಂತ್ರಣವಾಗಿದೆ. ಅಲ್ಲದೇ ಯಂತ್ರದಿಂದ, ಅದರ ಕಾರ್ಯಚಟುವಟಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರ್ಯನಿರ್ವಾಹಕನಿಗೆ ಸಹಾಯವಾಗುವ ಪ್ರತಿಕ್ರಿಯೆಯನ್ನು ಪಡೆಯುವುದಾಗಿದೆ. ಬಳಕೆದಾರರ ಅಂತರಸಂಪರ್ಕದ ಈ ವ್ಯಾಪಕ ಪರಿಕಲ್ಪನೆಯ ಉದಾಹರಣೆಗಳು, ಕಂಪ್ಯೂಟರ್ ಕಾರ್ಯನಿರ್ವಹಣ ಸಾಧನಗಳು , ಕೈ ಪರಿಕರಗಳು, ದೊಡ್ಡ ಶಕ್ತಿಯ ಯಂತ್ರದ, ಹೆವಿ ಮಿಷನರಿ ಕಾರ್ಯನಿರ್ವಾಹಕನ ನಿಯಂತ್ರಣಗಳು, ಮತ್ತು ಕಾರ್ಯವಿಧಾನದ ನಿಯಂತ್ರಣಗಳ, ಪಾರಸ್ಪರಿಕ ಕ್ರಿಯೆಯ ದೃಷ್ಟಿಕೋನಗಳನ್ನು ಒಳಗೊಂಡಿವೆ. ಬಳಕೆದಾರರ ಅಂತರಸಂಪರ್ಕವನ್ನು ನಿರ್ಮಿಸುವಾಗ ಅನ್ವಯವಾಗುವ ವಿನ್ಯಾಸದ ಪರಿಗಣನೆಗಳು ದಕ್ಷತಾಶಾಸ್ತ್ರ ಮತ್ತು ಮನೋವಿಜ್ಞಾನ ದಂತಹ ವಿಷಯಗಳಿಗೆ ಸಂಬಂಧಿಸಿರುತ್ತವೆ ಅಥವಾ ಇವುಗಳನ್ನು ಒಳಗೊಂಡಿರುತ್ತವೆ.
ಜನರು (ಬಳಕೆದಾರರು) ಯಂತ್ರಗಳೊಂದಿಗೆ ಸಂಪರ್ಕಿಸುವ ವ್ಯವಸ್ಥೆಯೇ ಬಳಕೆದಾರರ ಅಂತರಸಂಪರ್ಕವಾಗಿದೆ. ಬಳಕೆದಾರರ ಅಂತರಸಂಪರ್ಕ, ಯಂತ್ರಾಂಶ (ಹಾರ್ಡ್ ವೇರ್) (ಭೌತಿಕ) ಮತ್ತು ತಂತ್ರಾಂಶ (ಸಾಫ್ಟ್ ವೇರ್) (ತಾರ್ಕಿಕ)ಘಟಕಗಳನ್ನು ಒಳಗೊಂಡಿರುತ್ತದೆ. ಬಳಕೆದಾರರ ಅಂತರಸಂಪರ್ಕ, ಅನೇಕ ಸಿಸ್ಟಮ್ ಗಳಿಗಾಗಿ ಅಸ್ತಿತ್ವದಲ್ಲಿದೆಯಲ್ಲದೇ, ಕೆಳಕಂಡವುಗಳನ್ನು ಒದಗಿಸುತ್ತದೆ:
- ಇನ್ ಪುಟ್ (ಒಳಗಿರುವ ವಿಷಯ), ಬಳಕೆದಾರರಿಗೆ ತಮ್ಮ ಯಂತ್ರದ ವಿಧಾನ;ಸಿಸ್ಟಮ್ ಅನ್ನು ಬದಲಾಯಿಸಲು ಅವಕಾಶ ನೀಡುತ್ತದೆ,ಮತ್ತು/ಅಥವಾ,
- ಔಟ್ ಪುಟ್ (ಹೊರಹೊಮ್ಮುವಿಕೆ), ಬಳಕೆದಾರರ ನಿರ್ವಹಣೆಯಿಂದಾಗಿ ಉಂಟಾಗುವ ಪರಿಣಾಮಗಳನ್ನು ಸೂಚಿಸಲು ಸಿಸ್ಟಮ್ ಗೆ ಬಳಕೆಯ ಅವಕಾಶ ನೀಡುತ್ತದೆ.
ಬಳಕೆದಾರನು ಬಯಸುವ ಫಲಿತಾಂಶ ನೀಡುವ ರೀತಿಯಲ್ಲಿ, ಒಂದು ಯಂತ್ರವನ್ನು ಸುಲಭವಾಗಿ ದಕ್ಷತೆಯಿಂದ ಮತ್ತು ಇಷ್ಟದಂತೆ ಕಾರ್ಯನಿರ್ವಹಿಸಲು ನೆರವಾಗುವ, ಬಳಕೆದಾರರ ಅಂತರಸಂಪರ್ಕವನ್ನು ನಿರ್ಮಿಸುವುದೇ ಮಾನವ-ಯಂತ್ರ ಪರಸ್ಪರ ಕ್ರಿಯೆಯನ್ನು ರಚಿಸುವ ಮುಖ್ಯ ಉದ್ದೇಶವಾಗಿದೆ. ಇದು ಅಪೇಕ್ಷಿತ ಔಟ್ ಪುಟ್ ಅನ್ನು ಪಡೆಯಲು ಕಾರ್ಯನಿರ್ವಾಹಕ ಕನಿಷ್ಠ ಇನ್ ಪುಟ್ ವನ್ನಾದರು ಒದಗಿಸಬೇಕು, ಹಾಗು ಯಂತ್ರವು ಮಾನವನಿಗೆ ಅಪೇಕ್ಷಿಸಿರದ ಔಟ್ ಪುಟ್ ಅನ್ನು ಒದಗಿಸಬಾರದು ಎಂಬ ಸಾಮಾನ್ಯ ಅರ್ಥ ನೀಡುತ್ತದೆ.
ವೈಯಕ್ತಿಕ ಕಂಪ್ಯೂಟರ್ ಗಳ ಬಳಕೆ ಹೆಚ್ಚಿದ್ದರಿಂದ ಹಾಗು ಹೆವಿ ಮಿಷನರಿಯ ಬಗ್ಗೆ ಸಾಮಾಜಿಕವಾಗಿ ಆಸಕ್ತಿ ಕಡಿಮೆಯಾಗಿದೆ.ಇದರಲ್ಲಿರುವ ಬಳಕೆದಾರರ ಅಂತರಸಂಪರ್ಕ ಪದವು (ಗ್ರಾಫಿಕ್ (ರೇಖಾಚಿತ್ರದ)) ಬಳಕೆದಾರರ ಅಂತರಸಂಪರ್ಕ ಅನ್ನು ಸೂಚಿಸುತ್ತದೆ; ಔದ್ಯೋಗಿಕ ನಿಯಂತ್ರಣ ವ್ಯವಸ್ಥೆ ಎಂದರೆ ಕಂಟ್ರೋಲ್ ಪ್ಯಾನಲ್ ಮತ್ತು ಯಂತ್ರಗಳ ನಿಯಂತ್ರಣ ವಿನ್ಯಾಸದ ವಿಷಯಾಧಾರಿತ ಚರ್ಚೆಗಳು, ಹೆಚ್ಚಾಗಿ ಮಾನವ-ಯಂತ್ರ ಅಂತರಸಂಪರ್ಕಗಳನ್ನು ಸೂಚಿಸುತ್ತವೆ.
ಬಳಕೆದಾರರ ಅಂತರಸಂಪರ್ಕಕ್ಕಿರುವ ಇತರ ಪದಗಳು, "ಮಾನವ–ಕಂಪ್ಯೂಟರ್ ಅಂತರಸಂಪರ್ಕ" (HCI) ಮತ್ತು "ಮನುಷ್ಯ–ಯಂತ್ರ ಅಂತರಸಂಪರ್ಕ" (MMI) ಪದಗಳನ್ನು ಒಳಗೊಂಡಿವೆ.
ಪೀಠಿಕೆ
[ಬದಲಾಯಿಸಿ]ಸಿಸ್ಟಮ್ ನೊಂದಿಗೆ ಕಾರ್ಯನಿರ್ವಹಿಸಲು, ಬಳಕೆದಾರರು ಸಿಸ್ಟಮ್ ನ ಸ್ಥಿತಿಯನ್ನು ನಿರ್ಣಯಿಸುವಂತಿರಬೇಕು ಮತ್ತು ನಿಯಂತ್ರಿಸುವಂತಿರಬೇಕು. ಉದಾಹರಣೆಗೆ, ಮೋಟಾರು ವಾಹನವನ್ನು ಓಡಿಸುವಾಗ, ಚಾಲಕನು ವಾಹನದ ದಿಕ್ಕನ್ನು ನಿಯಂತ್ರಿಸಲು ಚಾಲನ ಚಕ್ರವನ್ನು ಬಳಸುತ್ತಾನೆ.ಅಲ್ಲದೇ ವಾಹನದ ವೇಗವನ್ನು ನಿಯಂತ್ರಿಸಲು ಆಕ್ಸಲೇಟರ್ ಪೆಡಲ್, ಬ್ರೇಕ್ ಪೆಡಲ್ ಮತ್ತು ಗೇರ್ ಸ್ಟಿಕ್ ಅನ್ನು ಬಳಸುತ್ತಾನೆ. ಚಾಲಕನು ಗಾಳಿತಡೆಯಿಂದ ನೋಡುವುದರ ಮೂಲಕ ವಾಹನದ ಸ್ಥಿತಿಯನ್ನು ಗ್ರಹಿಸುತ್ತಾನೆ. ಅಲ್ಲದೇ ವಾಹನದ ನಿಖರ ವೇಗವನ್ನು, ವೇಗಮಾಪಕದೆಡೆಗೆ ಕಣ್ಣು ಹಾಯಿಸುವ ಮೂಲಕ ತಿಳಿದುಕೊಳ್ಳುತ್ತಾನೆ. ಇಲ್ಲಿ ವಾಹನದ ಬಳಕೆದಾರರ ಅಂತರಸಂಪರ್ಕ , ಚಾಲನೆಯ ಕಾರ್ಯವನ್ನು ನಿರ್ವಹಿಸಲು ಮತ್ತು ವಾಹನವನ್ನು ನಿಭಾಯಿಸಲು ಚಾಲಕ ಬಳಸುವ ಎಲ್ಲಾ ಸಾಧನಗಳ ಸಂಯೋಜನೆಯಾಗಿದೆ.
ಪರಿಭಾಷೆ
[ಬದಲಾಯಿಸಿ]ಬಳಕೆದಾರರ ಅಂತರಸಂಪರ್ಕ ಮತ್ತು ನಿರ್ವಾಹಕ ಅಂತರಸಂಪರ್ಕ ಅಥವಾ ಮಾನವ-ಯಂತ್ರ ಅಂತರಸಂಪರ್ಕಗಳ ನಡುವೆ ವ್ಯತ್ಯಾಸವಿದೆ.
- "ಬಳಕೆದಾರರ ಅಂತರಸಂಪರ್ಕ" ಪದವನ್ನು, (ವೈಯಕ್ತಿಕ) ಕಂಪ್ಯೂಟರ್ ಸಿಸ್ಟಮ್ ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಸಂದರ್ಭದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
- ಸಾಧನ ಸಾಮಗ್ರಿಯ ಅಥವಾ ಕಂಪ್ಯೂಟರ್ ನ ಸಂಪರ್ಕವನ್ನು MES (ಮ್ಯಾನ್ಯುಫ್ಯಾಕ್ಚರಿಂಗ್ ಎಕ್ಸ್ ಕ್ಯೂಷನ್ ಸಿಸ್ಟಮ್(ಉತ್ಪಾದನಾ ನಿರ್ವಹಣೆಯ ವಿಧಾನ))-ಅಥವಾ ಸಮೂಹದ ಮೂಲಕ ಒಂದಕ್ಕೊಂದನ್ನು ಸೇರಿಸಿದಾಗ.
- ಒಂದು ಯಂತ್ರಕ್ಕೆ ಅಥವಾ ಸಲಕರಣೆಯ ಒಂದು ತುಂಡಿಗೆ HMI ವಿಶೇಷವಾಗಿ (ಹ್ಯುಮನ್ ಮಶಿನ್ ಇಂಟರ್ ಫೇಸ್ )ಸ್ಥಳೀಯವಾಗಿದ್ದಾಗ, ಹಾಗು ಇದು ಮಾನವ ಮತ್ತು ಸಲಕರಣೆ/ಯಂತ್ರದ ನಡುವಿನ ಅಂತರಸಂಪರ್ಕ ವಿಧಾನವಾಗಿದ್ದಾಗ ನಡೆಯುತ್ತದೆ. ನಿರ್ವಾಹಕ ಅಂತರಸಂಪರ್ಕ ಎಂಬುದು, ಬಹುಭಾಗಗಳ ಸಾಧನವನ್ನು, ಸೇರಿಸಿ ಅಥವಾ ನಿಯಂತ್ರಿಸುತ್ತಿರುವ ಆತಿಥೇಯ ನಿಯಂತ್ರಣ ಸಿಸ್ಟಮ್ ನ ಮೂಲಕ ಜೋಡಿಸುವ ಅಂತರಸಂಪರ್ಕ ವಿಧಾನವಾಗಿದೆ.[clarification needed]
- ಸಿಸ್ಟಮ್ ವಿಭಿನ್ನ ರೀತಿಯ ಬಳಕೆದಾರರಿಗೆ ಸೇವೆ ಸಲ್ಲಿಸಲು, ಬಳಕೆದಾರರ ಅನೇಕ ಅಂತರಸಂಪರ್ಕಗಳ ಅವಕಾಶವನ್ನು ನೀಡಬಹುದಾಗಿದೆ. ಉದಾಹರಣೆಗೆ, ಕಂಪ್ಯೂಟರೀಕರಿಸಲಾದ ಗ್ರಂಥಾಲಯದ ಡೇಟಾಬೇಸ್ ವಿಧಾನವು ಬಹುಶಃ ಎರಡು ಬಳಕೆದಾರರ ಅಂತರಸಂಪರ್ಕಗಳನ್ನು ಒದಗಿಸಬಹುದು. ಒಂದು ಗ್ರಂಥಾಲಯವನ್ನು ಪ್ರೋತ್ಸಾಹಿಸಲು(ಸೀಮಿತ ಕಾರ್ಯಾಚರಣೆಗಳು, ಬಳಕೆಯನ್ನು ಸುಲಭವಾಗಿಸಲು ಅಳವಡಿಸಿಕೊಳ್ಳಲಾಗಿದೆ), ಹಾಗು ಮತ್ತೊಂದನ್ನು ಗ್ರಂಥಾಲಯದ ಸಿಬ್ಬಂದಿಗಳಿಗಾಗಿ(ವ್ಯಾಪಕವಾದ ಕಾರ್ಯಾಚರಣೆಗಳು, ದಕ್ಷತೆಗಾಗಿ ಅಳವಡಿಸಿಕೊಳ್ಳಲಾಗಿದೆ) ಒದಗಿಸುತ್ತದೆ.[clarification needed]
- ಯಾಂತ್ರಿಕ ವ್ಯವಸ್ಥೆಯ ಬಳಕೆದಾರರ ಅಂತರಸಂಪರ್ಕವನ್ನು, ವಾಹನ ಅಥವಾ ಔದ್ಯೋಗಿಕ ಅಳವಡಿಕೆಯನ್ನು, ಕೆಲವೊಮ್ಮೆ ಮಾನವ- ಯಂತ್ರ ಅಂತರಸಂಪರ್ಕ (HMI) ಎಂದು ಸೂಚಿಸಲಾಗುತ್ತದೆ. HMI ಎಂಬುದು MMI (ಮನುಷ್ಯ-ಯಂತ್ರ ಅಂತರಸಂಪರ್ಕ) ಎಂಬ ಮೂಲ ಪದದ ಮಾರ್ಪಾಡಾಗಿದೆ. MMI ಬೇರೆಯೇ ಅರ್ಥ ಕೊಡುತ್ತದೆ, ಎಂದು ಹಲವರು ವಾದಿಸಿದರೂ ಕೂಡ, ಬಳಕೆಯಲ್ಲಿ MMI ನ ಸಂಕ್ಷಿಪ್ತ ರೂಪವನ್ನೇ ಇನ್ನೂ ಬಳಸಲಾಗುತ್ತಿದೆ. ಹ್ಯುಮನ್ ಕಾಂಪ್ಯುಟರ್ ಇಂಟರ್ ಆಕ್ಸನ್ HCI ಮತ್ತೊಂದು ಸಂಕ್ಷಿಪ್ತ ರೂಪವಾಗಿದ್ದು, ಇದನ್ನು ಮಾನವ-ಕಂಪ್ಯೂಟರ್ ನ ಪರಸ್ಪರ ಕ್ರಿಯೆಯನ್ನು ಸೂಚಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಆಪರೇಟರ್ ಇಂಟರ್ ಫೇಸ್ ಕನ್ ಸೋಲ್(OIC) ಮತ್ತು ಆಪರೇಟರ್ ಇಂಟರ್ ಫೇಸ್ ಟರ್ಮಿನಲ್ (OIT) ಬಳಸುವ ಇತರ ಪದಗಳಾಗಿವೆ. ಇವುಗಳನ್ನು ಹೇಗೆ ಸಂಕ್ಷೇಪಿಸಿದರೂ ಕೂಡ, ಈ ಪದಗಳು ಯಂತ್ರಗಳನ್ನು ನಿರ್ವಹಿಸುವ ಮಾನವರನ್ನು ಯಂತ್ರಗಳಿಂದ ಪ್ರತ್ಯೇಕಿಸುವ 'ಪದರ'ವನ್ನು(ಲೇಯರ್)ಸೂಚಿಸುತ್ತವೆ.
ವೈಜ್ಞಾನಿಕ ಕಾಲ್ಪನಿಕ ಕಥೆಗಳಲ್ಲಿ, HMI ಅನ್ನು ಕೆಲವೊಮ್ಮೆ ನೇರ ನರವ್ಯೂಹದ-ಕಂಪ್ಯೂಟರ್ ಅಂತರಸಂಪರ್ಕವನ್ನು ಸೂಚಿಸಲು ಬಳಸಲಾಗುತ್ತದೆ. ಅದೇನೇ ಆದರೂ, ಈ ಅನಂತರದ ಬಳಕೆಯನ್ನು ಪೂರಣಚಿಕಿತ್ಸೆಯ (ಪ್ರಾಸ್ ತೀಸಿಸ್) ನಿಜ ಜೀವನದ ಬಳಕೆಯಲ್ಲಿ(ವೈದ್ಯಕೀಯ) ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ—ನಷ್ಟವಾದ ದೇಹದ ಭಾಗಗಳನ್ನು ಮತ್ತೆ ಅಳವಡಿಸುವ ವಿಧಾನ ಅಂದರೆ ಕೃತಕ ಜೋಡಣೆಯಾಗಿದೆ.(ಉದಾಹರಣೆಗೆ ಕಿವಿಯ ಹಾನಿಗೊಳಗಾದ ಒಳಭಾಗದ ಕಸಿ ಕಾರ್ಯ ಕಾಕ್ಲಿಯರ್ ಇಂಪ್ಲಾಂಟ್ಸ್).
ಕೆಲವೊಂದು ಸಂದರ್ಭಗಳಲ್ಲಿ ಕಂಪ್ಯೂಟರ್ ಗಳು ಬಳಕೆದಾರರನ್ನು ಗಮನಿಸಬಹುದು. ಅಲ್ಲದೇ ನಿರ್ದಿಷ್ಟ ಆದೇಶಗಳಿಲ್ಲದಿದ್ದರೂ ಕೂಡ ಅವರು ನಿರ್ವಹಿಸುವ ಕಾರ್ಯಕ್ಕನುಸಾರವಾಗಿ ಪ್ರತಿಕ್ರಿಯಿಸಬಹುದು. ದೇಹದ ಭಾಗಗಳನ್ನು ಪತ್ತೆ ಹಚ್ಚುವುದರ ಅಗತ್ಯವಿದೆ. ಅಲ್ಲದೇ ತಲೆಯ ಸ್ಥಾನವನ್ನು, ನೋಟದ ದಿಕ್ಕನ್ನು ಗಮನಿಸುವ ಸಂವೇದಕವನ್ನು ಪ್ರಯೋಗಾತ್ಮಕವಾಗಿ ಬಳಸಲಾಗಿದೆ. ಇದು ವಿಶೇಷವಾಗಿ ತಲ್ಲೀನತೆಯ ಅಂತರಸಂಪರ್ಕ ಗಳಿಗೆ ಪ್ರಸಕ್ತವಾಗಿದೆ.
ಉಪಯುಕ್ತತೆ
[ಬದಲಾಯಿಸಿ]- ಇವನ್ನು ಕೂಡ ನೋಡಿ: mental model, human action cycle, usability testing, and ergonomics . ಮಾನವ-ಕಂಪ್ಯೂಟರ್ ನ ಪರಸ್ಪರ ಕ್ರಿಯೆಯ ವಿಷಯಗಳ ಪಟ್ಟಿ
ಬಳಕೆದಾರರ ಅಂತರಸಂಪರ್ಕಗಳನ್ನು ಕೆಲವು ಲೇಖಕರು, ಕಂಪ್ಯೂಟರ್ ಬಳಕೆದಾರ ತೃಪ್ತಿಗಾಗಿ ಇರುವ ಪ್ರಮುಖ ಸಾಧನವೆಂದು ಪರಿಗಣಿಸುತ್ತಾರೆ. {{citation}}
: Empty citation (help)
ಬಳಕೆದಾರರ ಅಂತರಸಂಪರ್ಕದ ವಿನ್ಯಾಸವು, ನಿರ್ವಾಹಕನ ಪ್ರಯತ್ನದ ಮೇಲೆ ಪ್ರಭಾವ ಬೀರಬಹುದು. ಬಳಕೆದಾರ, ಸಿಸ್ಟಮ್ ಗೆ ಇನ್ ಪುಟ್ ಅನ್ನು ಒದಗಿಸಲು ಪ್ರಯತ್ನಿಸಲೇಬೇಕು; ಹಾಗು ಸಿಸ್ಟಮ್ ನ ಔಟ್ ಪುಟ್ ಅನ್ನು ಕೂಡ ವ್ಯಾಖ್ಯಾನಿಸಲೇಬೇಕು. ಅಲ್ಲದೇ ಇದನ್ನು ಹೇಗೆ ಮಾಡಬೇಕೆಂದು ಕಲಿಯಲು ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ ಎಂಬುದರ ಮೇಲೆ ಈ ವಿನ್ಯಾಸ ಪರಿಣಾಮ ಬೀರುತ್ತದೆ. ಉಪಯುಕ್ತತೆ ಎಂಬುದು, ಪ್ರತ್ಯೇಕವಾದ ಅಂತರಸಂಪರ್ಕದ ವಿನ್ಯಾಸವು ಎಷ್ಟರ ಮಟ್ಟಿಗೆ ಮಾನವ ಮನೋವಿಜ್ಞಾನ ಮತ್ತು ಬಳಕೆದಾರರ ಮನೋವಿಜ್ಞಾನವನ್ನು ಪರಿಗಣಿಸುತ್ತದೆ ಎಂಬುದಾಗಿದೆ. ಅಲ್ಲದೇ ಸಿಸ್ಟಮ್ ನ ಬಳಕೆಯ ಕಾರ್ಯವಿಧಾನವನ್ನು ಎಷ್ಟರ ಮಟ್ಟಿಗೆ ಪರಿಣಾಮಕಾರಿ, ದಕ್ಷತೆ ಮತ್ತು ತೃಪ್ತಿಯಾಗುವಂತೆ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ.
ಉಪಯುಕ್ತತೆ ಮುಖ್ಯವಾಗಿ ಬಳಕೆದಾರರ ಅಂತರಸಂಪರ್ಕದ ಗುಣಲಕ್ಷಣವಾಗಿದೆ. ಆದರೆ ಇದು ಉತ್ಪನ್ನದ ಕಾರ್ಯಗಳು ಮತ್ತು ಅದನ್ನು ವಿನ್ಯಾಸಗೊಳಿಸುವ ಕಾರ್ಯವಿಧಾನಗಳೊಂದಿಗೆಯೂ ಕೂಡ ಸಂಬಂಧಿಸಿದೆ. ಇದು ಹೇಗೆ ಉತ್ಪನ್ನವನ್ನು ಅದರ ಅಪೇಕ್ಷಿತ ಉದ್ದೇಶಕ್ಕಾಗಿ, ದಕ್ಷತೆಯೊಂದಿಗೆ ಪರಿಣಾಮಕಾರಿ, ತೃಪ್ತಿಯೊಂದಿಗೆ ಬಳಕೆದಾರನಿಂದ ಉಪಯೋಗಿಸಬಹುದು ಎಂಬುದನ್ನು ವಿವರಿಸುತ್ತದೆ. ಅಲ್ಲದೇ ಇದನ್ನು ಬಳಸುವ ಸಂದರ್ಭಗಳ ಅಗತ್ಯತೆಗಳನ್ನು ಕೂಡ ಪರಿಗಣಿಸುತ್ತದೆ.
ಕಂಪ್ಯೂಟರ್ ನಲ್ಲಿ ಬಳಕೆದಾರರ ಅಂತರಸಂಪರ್ಕಗಳು
[ಬದಲಾಯಿಸಿ]ಕಂಪ್ಯೂಟರ್ ವಿಜ್ಞಾನದಲ್ಲಿ ಮತ್ತು ಮಾನವ-ಕಂಪ್ಯೂಟರ್ ನ ಪರಸ್ಪರ ಕ್ರಿಯೆಯಲ್ಲಿ, ಬಳಕೆದಾರರ ಅಂತರಸಂಪರ್ಕ (ಕಂಪ್ಯೂಟರ್ ಪ್ರೋಗ್ರಾಂ ನ) ರೇಖಾಚಿತ್ರ, ಅಗತ್ಯ ಪಠ್ಯ ವಿಷಯ,ಗ್ರಂಥಪಾಠ ಮತ್ತು ಬಳಕೆದಾರನಿಗೆ ನೀಡಲಾದ ಪ್ರೋಗ್ರಾಂನ ಶ್ರವಣೀಯ ಮಾಹಿತಿಯನ್ನು ಸೂಚಿಸುತ್ತದೆ. ಅಲ್ಲದೇ ಬಳಕೆದಾರ, ಪ್ರೋಗ್ರಾಂ ಅನ್ನು ನಿಯಂತ್ರಿಸಲು ಬಳಸುವ ನಿಯಂತ್ರಣಾ ಗತಿಯನ್ನು (ಕಂಪ್ಯೂಟರ್ ಕೀಲಿಮಣೆಯೊಂದಿಗೆ ಕೀಲಿಕೈ, ಕಂಪ್ಯೂಟರ್ ಮೌಸ್ ನ ಚಲನೆಗಳನ್ನು, ಸ್ಪರ್ಶ ಪಟಲದೊಂದಿಗೆ ಆಯ್ಕೆಗಳನ್ನು) ಕೂಡ ಸೂಚಿಸುತ್ತದೆ.
ವಿಧಗಳು
[ಬದಲಾಯಿಸಿ]ಪ್ರಸ್ತುತ (as of 2009[update]) ಬಳಕೆದಾರರ ಅಂತರಸಂಪರ್ಕದ ಕೆಳಕಂಡ ವಿಧಗಳು ಅತ್ಯಂತ ಸಾಮಾನ್ಯವಾಗಿವೆ:
- ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ ಗಳು (GUI) (ರೇಖಾಚಿತ್ರ ಬಳಕೆದಾರರ ಅಂತರಸಂಪರ್ಕ) ಕಂಪ್ಯೂಟರ್ ಕೀಲಿಕೈ ಮತ್ತು ಮೌಸ್ ಗಳಂತಹ ಸಾಧನಗಳ ಮೂಲಕ ಇನ್ ಪುಟ್ ಅನ್ನು ಸ್ವೀಕರಿಸುತ್ತದೆ. ಅಲ್ಲದೇ ಕಂಪ್ಯೂಟರ್ ಮಾನಿಟರ್ ನ ಮೇಲೆ ಸ್ಪಷ್ಟವಾಗಿ ಕಾಣುವ ರೇಖಾಚಿತ್ರದ ಜೌಟ್ ಪುಟ್ ಅನ್ನು ಒದಗಿಸುತ್ತದೆ. GUI ವಿನ್ಯಾಸದಲ್ಲಿ ವ್ಯಾಪಕವಾಗಿ ಬಳಸುವ ಎರಡು ತತ್ವಗಳಿವೆ: ಆಬ್ಜೆಕ್ಟ್-ಓರಿಯೆಂಟೆಡ್ ಯೂಸರ್ ಅಂತರಸಂಪರ್ಕಗಳು(ವಸ್ತು-ಉದ್ದೇಶಿತ ಬಳಕೆದಾರರ ಅಂತರಸಂಪರ್ಕಗಳು)(OOUIs) ಹಾಗು ಅನ್ವಯಿಕೆ ಉದ್ದೇಶಿತ ಅಂತರಸಂಪರ್ಕಗಳು[verification needed].
- ವೆಬ್-ಬೇಸ್ಡ್ ಯೂಸರ್ ಇಂಟರ್ ಫೇಸ್ ಗಳು(ವೆಬ್ ಆಧಾರಿತ ಬಳಕೆದಾರರ ಅಂತರಸಂಪರ್ಕಗಳು) ಅಥವಾ ವೆಬ್ ಯೂಸರ್ ಇಂಟರ್ ಫೇಸ್ ಸ್ (WUI)(ವೆಬ್ ಬಳಕೆದಾರರ ಅಂತರಸಂಪರ್ಕಗಳು), ವೆಬ್ ಪುಟ್ ಗಳನ್ನು ಸೃಷ್ಟಿಸುವ ಮೂಲಕ ಇನ್ ಪುಟ್ ಅನ್ನು ಸ್ವೀಕರಿಸಿ ಔಟ್ ಪುಟ್ ಅನ್ನು ಒದಗಿಸುವ GUIs ನ ಉಪವರ್ಗಗಳಾಗಿವೆ. ಈ ವೆಬ್ ಪುಟಗಳನ್ನು ಅಂತರ್ಜಾಲದ ಮೂಲಕ ರವಾನಿಸಲಾಗುತ್ತದೆ. ಅಲ್ಲದೇ ಬಳಕೆದಾರ ವೀಕ್ಷಕ ತಂತ್ರಾಂಶ ಪ್ರೋಗ್ರಾಂಅನ್ನು ಬಳಸಿ ಇವುಗಳನ್ನು ವೀಕ್ಷಿಸುತ್ತಾನೆ. ಹೊಸ ಅಳವಡಿಕೆಗಳು ಜಾವಾ, AJAX, ಅಡೋಬ್ ಫ್ಲೆಕ್ಸ್, ಮೈಕ್ರೋಸಾಫ್ಟ್ .NET, ಅಥವಾ ಪ್ರತ್ಯೇಕ ಪ್ರೋಗ್ರಾಂನಲ್ಲಿ ನಿಜ ಕಾಲದ ನಿಯಂತ್ರಣವನ್ನು ಒದಗಿಸುವ ಸದೃಶ ತಂತ್ರಜ್ಞಾನಗಳನ್ನು ಬಳಸುತ್ತವೆ.ಇವುಗಳನ್ನು ಸಾಂಪ್ರದಾಯಿಕ HTML ಆಧಾರಿತ ವೆಬ್ ತಂತ್ರಾಂಶವನ್ನು ಹೊಸದಾಗಿಸುವ ಅಗತ್ಯಕ್ಕಾಗಿ ಬಳಸಲಾಗುತ್ತದೆ. ವೆಬ್ ಸರ್ವರ್ ಗಳಿಗೆ, ಸರ್ವರ್ ಗಳಿಗೆ ಮತ್ತು ಸಂಪರ್ಕಕ್ಕೆ ಒಳಪಡಿಸಲಾದ ಕಂಪ್ಯೂಟರ್ ಗಳಿಗೆ, ಬಳಸುವಂತಹ ಅಡ್ಮಿನಿಸ್ಟ್ರೇಟಿವ್(ಆಡಳಿತಾತ್ಮಕ) ವೆಬ್ ಅಂತರಸಂಪರ್ಕಗಳನ್ನು (ಆಡಳಿತಾತ್ಮಕ ವೆಬ್ ಅಂತರಸಂಪರ್ಕ) ಹೆಚ್ಚಾಗಿ ಕಂಟ್ರೋಲ್ ಪ್ಯಾನಲ್ ಗಳೆಂದು ಕರೆಯಲಾಗುತ್ತದೆ.
- ಸ್ಪರ್ಶ ಪಟಲಗಳು (ಟಚ್ ಸ್ಕ್ರೀನ್) , ಬೆರಳುಗಳ ಅಥವಾ ಸ್ಟೈಲಸ್(ಮುಳ್ಳು,ಗಾನಸೂಚಿ) ಸ್ಪರ್ಶದಿಂದ ಇನ್ ಪುಟ್ ಅನ್ನು ಸ್ವೀಕರಿಸುವ ಪ್ರದರ್ಶಕಗಳಾಗಿವೆ. ಇದನ್ನು ಪ್ರಗತಿಯಲ್ಲಿರುವ ಮೊಬೈಲ್ ಸಾಧನಗಳಲ್ಲಿ ಹಾಗು ಅನೇಕ ವಿಧದ ಪಾಯಿಂಟ್ ಆಫ್ ಸೇಲ್ ನಲ್ಲಿ, ಔದ್ಯೋಗಿಕ ಕಾರ್ಯವಿಧಾನ, ಯಂತ್ರಗಳು, ಸ್ವಯಂ ಸೇವಾ ಯಂತ್ರಗಳು ಹೀಗೆ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.
ಡೆಸ್ಕ್ ಟಾಪ್ ಕಂಪ್ಯೂಟರ್(ವೈಯಕ್ತಿಕ ಕಂಪ್ಯೂಟರ್) ನ ಹೊರಗೆ ಅನೇಕ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿರುವ ಬಳಕೆದಾರರ ಅಂತರಸಂಪರ್ಕಗಳು:
- ಕಮಾಂಡ್ ಲೈನ್ ಇಂಟರ್ ಫೇಸ್ ಗಳು , ಇಲ್ಲಿ ಕಂಪ್ಯೂಟರ್ ನ ಕೀಲಿಕೈಯೊಂದಿಗೆ ಆದೇಶವನ್ನು ಟೈಪ್ ಮಾಡುವ(ಬೆರಳಚ್ಚು ಮಾಡುವ)ಮೂಲಕ ಬಳಕೆದಾರ ಇನ್ ಪುಟ್ ಒದಗಿಸುತ್ತಾನೆ. ಅಲ್ಲದೇ ಕಂಪ್ಯೂಟರ್ ಮಾನಿಟರ್ ನ ಮೇಲೆ ಮುದ್ರಿತ ಪಠ್ಯದ ಮೂಲಕ ಸಿಸ್ಟಮ್ ಔಟ್ ಪುಟ್ ಅನ್ನು ಒದಗಿಸುತ್ತದೆ. ಇದನ್ನು ಕಂಪ್ಯೂಟರ್ ಪ್ರೋಗ್ರಾಂ ಮಾಡುವವರು ಮತ್ತು ಸಿಸ್ಟಮ್ ನ ಕಾರ್ಯನಿರ್ವಾಹಕರು ಬಳಸುತ್ತಾರೆ. ಅಲ್ಲದೇ ಇಂಜಿನಿಯರಿಂಗ್ ಮತ್ತು ವೈಜ್ಞಾನಿಕ ಪರಿಸರಗಳಲ್ಲಿ ಹಾಗು ತಾಂತ್ರಿಕವಾಗಿ ಮುಂದುವರೆದ ವೈಯಕ್ತಿಕ ಕಂಪ್ಯೂಟರ್ ನ ಬಳಕೆದಾರರೂ ಕೂಡ ಬಳಸುತ್ತಾರೆ.
- ಟಚ್ ಯೂಸರ್ ಇಂಟರ್ ಫೇಸ್ (ಸ್ಪರ್ಶ ಬಳಕೆದಾರರ ಅಂತರಸಂಪರ್ಕ), ಇವು ರೇಖಾಚಿತ್ರ ಬಳಕೆದಾರರ ಅಂತರಸಂಪರ್ಕಗಳಾಗಿದ್ದು, ಜಂಟಿ ಇನ್ ಪುಟ್ ಮತ್ತು ಔಟ್ ಪುಟ್ ಸಾಧನದ ರೂಪದಲ್ಲಿ, ಟಚ್ ಪ್ಯಾಡ್ ಅಥವಾ ಸ್ಪರ್ಶ ಪಟಲ ಪ್ರದರ್ಶಕವನ್ನು ಬಳಸುತ್ತವೆ. ಇವು ಸ್ಪರ್ಶಪ್ರತಿಕ್ರಿಯೆ ವಿಧಾನಗಳ ಔಟ್ ಪುಟ್ ನ ಇತರ ರೂಪಗಳನ್ನು ಪೂರೈಸುತ್ತವೆ ಅಥವಾ ಪುನಃ ನೀಡುತ್ತವೆ. ಇದನ್ನು ಕಂಪ್ಯೂಟರೀಕರಿಸಲಾದ ಅನುಕರಣಾ ಸಾಧನ ಗಳಲ್ಲಿ ಮತ್ತು ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.
ಇತರ ವಿಧದ ಬಳಕೆದಾರರ ಅಂತರಸಂಪರ್ಕ ಗಳು:
- ಅಟೆಂಟೀವ್ ಯೂಸರ್ ಇಂಟರ್ ಫೇಸ್ ಗಳು (ಲಕ್ಷ್ಯವಿಡುವ ಬಳಕೆದಾರರ ಅಂತರಸಂಪರ್ಕಗಳು) , ಯಾವಾಗ ಬಳಕೆದಾರನಿಗೆ ತಡೆಯನ್ನು ನೀಡಬೇಕು, ಅಪಾಯದ ಸೂಚನೆಗಳನ್ನು ಯಾವಾಗ ಕೊಡಬೇಕು, ಹಾಗು ಬಳಕೆದಾರನಿಗೆ ನೀಡಲಾದ ವಿಷಯಗಳ ವಿವರದ ಮಟ್ಟ ಎಷ್ಟಿರಬೇಕೆಂದು ನಿರ್ಧರಿಸುವ ಮೂಲಕ ಇದು ಬಳಕೆದಾರನ ಗಮನವನ್ನು ನಿರ್ವಹಿಸುತ್ತದೆ.
- ಬ್ಯಾಚ್ ಇಂಟರ್ ಫೇಸ್ ಗಳು, ಪರಸ್ಪರ ಪ್ರತಿಕ್ರಿಯೆ ನೀಡದ ಬಳಕೆದಾರರ ಅಂತರಸಂಪರ್ಕಗಳಾಗಿವೆ. ಇಲ್ಲಿ ಬ್ಯಾಚ್ ಮಾಡಬೇಕಿರುವ ಕೆಲಸದ ಬಗ್ಗೆ ಎಲ್ಲಾ ವಿವರಗಳನ್ನು ಬಳಕೆದಾರ, ಬ್ಯಾಚ್ ಕಾರ್ಯವಿಧಾನಕ್ಕೆ ಮೊದಲೇ ನಿರ್ದಿಷ್ಟಗೊಳಿಸಿರುತ್ತಾನೆ. ಅಲ್ಲದೇ ಎಲ್ಲಾ ಕಾರ್ಯವಿಧಾನವು ಮುಗಿದ ನಂತರ ಔಟ್ ಪುಟ್ ಅನ್ನು ಪಡೆಯುತ್ತಾನೆ. ಕಾರ್ಯ ಆರಂಭವಾದ ನಂತರ ಕಂಪ್ಯೂಟರ್ ಗೆ ಮುಂದಿನ ಇನ್ ಪುಟ್ ಅನ್ನು ಸೂಚಿಸುವಂತಿಲ್ಲ.
- ಕಾನ್ವರ್ಸೇಷನಲ್ ಇಂಟರ್ ಫೇಸ್ ಏಜೆಂಟ್ಸ್ (ಸಂಭಾಷಣಾತ್ಮಕ ಅಂತರಸಂಪರ್ಕ ಪ್ರತಿನಿಧಿಗಳು), ಕಂಪ್ಯೂಟರ್ ಅಂತರಸಂಪರ್ಕದಲ್ಲಿ ಚಿತ್ರಿಸಲಾದ ವ್ಯಕ್ತಿ, ರೋಬಾಟ್ ಅಥವಾ ಇತರ ಲಕ್ಷಣಗಳ ರೂಪಗಳಲ್ಲಿ ( ಮೈಕ್ರೋಸಾಫ್ಟ್ ನ ಕ್ಲಿಪ್ಪಿ ಪೇಪರ್ ಕ್ಲಿಪ್ ನಂತಹ) ಮೂರ್ತೀಕರಿಸುವ ಪ್ರಯತ್ನ ಮಾಡಿದೆ. ಅಲ್ಲದೇ ಸಂಭಾಷಣೆಯ ರೂಪದಲ್ಲಿ ಪರಸ್ಪರ ಕ್ರಿಯೆಯನ್ನು ಮಂಡಿಸುತ್ತದೆ.
- ಕ್ರಾಸಿಂಗ್-ಬೇಸ್ಡ್ ಇಂಟರ್ ಫೇಸ್ ಗಳು , ರೇಖಾಚಿತ್ರ ಬಳಕೆದಾರರ ಅಂತರಸಂಪರ್ಕಗಳಾಗಿವೆ. ಇಲ್ಲಿ ನಿರ್ದಿಷ್ಟವಾದುದನ್ನು ಸೂಚಿಸುವ ಬದಲಿಗೆ ಮಿತಿ ಮೀರುವ ಚಟುವಟಿಕೆಯನ್ನು ಈ ಕಾರ್ಯಾಚರಣೆ ಒಳಗೊಂಡಿದೆ.
- ಗೆಸ್ಚರ್ ಇಂಟರ್ ಫೇಸ್ ಗಳು, ರೇಖಾಚಿತ್ರ ಬಳಕೆದಾರರ ಅಂತರಸಂಪರ್ಕ ಗಳಾಗಿದ್ದು, ಇದು ಕೈ ಸನ್ನೆಗಳು ಅಥವಾ ಕಂಪ್ಯೂಟರ್ ಮೌಸ್ ನೊಂದಿಗೆ ಅಥವಾ ಸ್ಟೈಲಸ್ ನೊಂದಿಗೆ ಚಿತ್ರಿಸಲಾದ ಮೌಸ್ ಸನ್ನೆಗಳ ಮೂಲಕ ಇನ್ ಪುಟ್ ಅನ್ನು ಸ್ವೀಕರಿಸುತ್ತದೆ.
- ಇಂಟಲಿಜೆಂಟ್ ಯೂಸರ್ ಇಂಟರ್ ಫೇಸ್ ಗಳು, ಮಾನವ-ಯಂತ್ರ ಅಂತರಸಂಪರ್ಕಗಳಾಗಿದ್ದು, ದಕ್ಷತೆ,ಪರಿಣಾಮಕಾರಿತ್ವ ಹೆಚ್ಚಿಸುವ ಗುರಿ ಹೊಂದಿದೆ. ಅಲ್ಲದೇ ಪುನಃ ಮಂಡಿಸುವ, ಚರ್ಚಿಸುವ ಮೂಲಕ ಮಾನವ-ಯಂತ್ರದ ಪರಸ್ಪರ ಕ್ರಿಯೆಯನ್ನು ಸಹಜವಾಗಿಸುವ ಗುರಿಯನ್ನು ಹಾಗು ಬಳಕೆದಾರನ ಮಾದರಿಗಳು, ಬಳಕೆ, ಸಂಭಾಷಣೆ, ಮಾಧ್ಯಮ(ಉದಾಹರಣೆಗೆ, ರೇಖಾಚಿತ್ರಗಳು, ಸಹಜ ಭಾಷೆ, ಸನ್ನೆ)ದ ಮೇಲೆ ಕಾರ್ಯನಿರ್ವಹಿಸುವಂತೆ ಮಾಡುವ ಗುರಿ ಹೊಂದಿದೆ.
- ಮೋಷನ್ ಟ್ರ್ಯಾಕಿಂಗ್ ಇಂಟರ್ ಫೇಸ್ ಗಳು , ಬಳಕೆದಾರರ ದೇಹದ ಚಲನೆಯನ್ನು ಗಮನಿಸಿ, ಅವುಗಳನ್ನು ಆದೇಶಗಳಾಗಿ ಬದಲಾಯಿಸುತ್ತವೆ. ಪ್ರಸ್ತುತದಲ್ಲಿ ಆಪಲ್ ಇವುಗಳನ್ನು ಅಭಿವೃದ್ಧಿಪಡಿಸುತ್ತಿದೆ.[೧]
- ಬಹು-ಪಟಲ ಇಂಟರ್ ಫೇಸ್ ಗಳು , ಅತ್ಯಂತ ನಮ್ಯ ಪರಸ್ಪರ ಕ್ರಿಯೆಯನ್ನು ಒದಗಿಸಲು ಬಹು ಪಟಲ ಪ್ರದರ್ಶಕಗಳನ್ನು ಬಳಸುತ್ತದೆ. ಇದನ್ನು ವಾಣಿಜ್ಯ ಬಜಾರು ಗಳಲ್ಲಿ ಮತ್ತು ಕೈಗಳಿಂದ ನಿರ್ವಹಿಸುವ ಉತ್ಪನ್ನಗಳ ಮಾರುಕಟ್ಟೆಗಳಲ್ಲಿ ಎರಡರಲ್ಲೂ ಕಂಪ್ಯೂಟರ್ ಆಟದ ಪಾರಸ್ಪರಿಕ ಕ್ರಿಯೆಯಲ್ಲಿ ಬಳಸಲಾಗುತ್ತದೆ.
- ನಾನ್ ಕಮಾಂಡ್ ಇಂಟರ್ ಫೇಸ್ ಗಳು(ಆದೇಶ ರಹಿತ ಅಂತರಸಂಪರ್ಕಗಳು), ಇವುಗಳು ಅವನು/ಅವಳ ಆದೇಶವಿಲ್ಲದೆಯೇ, ಅವನ/ಅವಳ ಅಗತ್ಯ,ಮತ್ತು ಉದ್ದೇಶವನ್ನು ಸೂಚಿಸುವ ಬಳಕೆದಾರನನ್ನು ಗಮನಿಸುತ್ತವೆ.
- ಆಬ್ಜೆಕ್ಟ್-ಓರಿಯೆಂಟೆಡ್ ಇಂಟರ್ ಫೇಸ್ (OOUI)(ವಸ್ತು ಉದ್ದೇಶಿತ ಅಂತರಸಂಪರ್ಕ)
- ರಿಫ್ಲೆಕ್ಸಿವ್ ಯೂಸರ್ ಇಂಟರ್ ಫೇಸ್ ಗಳು, ಇವು ಬಳಕೆದಾರರ ನಿಯಂತ್ರಣಗಳನ್ನು ಮತ್ತು ಸಂಪೂರ್ಣ ಸಿಸ್ಟಮ್ ಅನ್ನು, ಬಳಕೆದಾರರ ಅಂತರಸಂಪರ್ಕ ಒಂದರ ಮೂಲಕವೇ ಪುನರ್ವ್ಯವಸ್ಥಾಪಿಸುತ್ತವೆ. ಉದಾಹರಣೆಗೆ ಅದರ ಆದೇಶ ಕ್ರಿಯಾಪದಗಳ ಬದಲಾವಣೆ. ಸಾಮಾನ್ಯವಾಗಿ ಇದು, ಕೇವಲ ಅತ್ಯುತ್ತಮ ರೇಖಾಚಿತ್ರ ಬಳಕೆದಾರರ ಅಂತರಸಂಪರ್ಕಗಳೊಂದಿಗೆ ಮಾತ್ರ ಸಾಧ್ಯ.
- ಟ್ಯಾಂಜಿಯೇಬಲ್ ಯೂಸರ್ ಇಂಟರ್ ಫೇಸ್ ಗಳು , ಇದು ಸ್ಪರ್ಶ ಮತ್ತು ಭೌತಿಕ ಪರಿಸರಕ್ಕೆ ಅಥವಾ ಅದರ ಅಂಶಗಳಿಗೆ ಸ್ಪಷ್ಟತೆ ನೀಡುತ್ತದೆ.
- ಟಾಸ್ಕ್-ಫೋಕಸ್ಡ್ ಇಂಟರ್ ಫೇಸ್ ಗಳು , ಬಳಕೆದಾರರ ಅಂತರಸಂಪರ್ಕಗಳಾಗಿದ್ದು, ಇವು ದಾಖಲಿಸದೇ ಕಾರ್ಯ ಮಾಡುವ ಮೂಲಕ ಡೆಸ್ಕ್ ಟಾಪ್ ಮೆಟಫರ್ ನ ಮಿತಿಮೀರಿದ ಮಾಹಿತಿ ಯಿಂದಾಗುವ ಸಮಸ್ಯೆಯನ್ನು ಸೂಚಿಸುತ್ತವೆ. ಇದು ಪರಸ್ಪರ ಕ್ರಿಯೆಯ ಪ್ರಾಥಮಿಕ ಘಟಕವಾಗಿದೆ.
- ಟೆಕ್ಸ್ಟ್ ಯೂಸರ್ ಇಂಟರ್ ಫೇಸ್ ಗಳು ಬಳಕೆದಾರರ ಅಂತರಸಂಪರ್ಕಗಳಾಗಿದ್ದು, ಪಠ್ಯವನ್ನು ನೀಡುತ್ತವೆ. ಆದರೆ ಅಧಿಕವಾಗಿ ಅಥವಾ ನೀವು ಟೈಪ್ಪಿಂಗ್ ನಲ್ಲಿ ನೀಡಿದ ಆದೇಶಕ್ಕೆ ಬದಲಾಗಿ ಇನ್ ಪುಟ್ ನ ಇತರ ರೂಪವನ್ನು ಸ್ವೀಕರಿಸುತ್ತದೆ.
- ವಾಯ್ಸ್ ಯೂಸರ್ ಇಂಟರ್ ಫೇಸ್ ಗಳು , ಇದು ಇನ್ ಪುಟ್ ಅನ್ನು ಸ್ವೀಕರಿಸಿ, ಶಬ್ದದ ರೂಪದಲ್ಲಿ ಔಟ್ ಪುಟ್ ಅನ್ನು ಒದಗಿಸುತ್ತದೆ. ಬಳಕೆದಾರರ ಇನ್ ಪುಟ್ ಅನ್ನು ಕೀಗಳನ್ನು ಅಥವಾ ಬಟನ್ ಗಳನ್ನು ಒತ್ತುವ ಮೂಲಕ ಅಥವಾ ಅಂತರಸಂಪರ್ಕಕ್ಕೆ ಮಾತಿನಲ್ಲಿ ಪ್ರತಿಕ್ರಿಯಿಸುವ ಮೂಲಕ ಮಾಡಬಹುದಾಗಿದೆ.
- ನ್ಯಾಚ್ಯುರಲ್-ಲ್ಯಾಗ್ವೇಂಜ್ ಇಂಟರ್ ಫೇಸ್ ಗಳು - ಶೋಧಕ ಇಂಜಿನ್ ಗಳಿಗೆ ಮತ್ತು ವೆಬ್ ಪುಟಗಳಿಗೆ ಬಳಸಲಾಗುತ್ತದೆ. ಬಳಕೆದಾರ, ಪ್ರಶ್ನೆಯ ರೂಪದಲ್ಲಿ ಟೈಪ್ ಮಾಡಬೇಕು ಮತ್ತು ಪ್ರತಿಕ್ರಿಯೆಗಾಗಿ ಕಾಯಬೇಕು.
- ಜೀರೊ-ಇನ್ ಪುಟ್ ಇಂಟರ್ ಫೇಸ್ ಗಳು , ಇನ್ ಪುಟ್ ಮಾತುಗಳ ಮೂಲಕ ಬಳಕೆದಾರನನ್ನು ಪ್ರಶ್ನಿಸುವ ಬದಲು, ಇನ್ ಪುಟ್ ಅನ್ನು ಕೆಲವು ಸಂವೇದಕಗಳ ಮೂಲಕ ಪಡೆಯುತ್ತದೆ.
- ಝೂಮಿಂಗ್ ಯೂಸರ್ ಇಂಟರ್ ಫೇಸ್ ಗಳು , ರೇಖಾಚಿತ್ರದ ಅಂತರಸಂಪರ್ಕಗಳಾಗಿದ್ದು, ಇಲ್ಲಿ ಮಾಹಿತಿಯ ವಸ್ತುಗಳನ್ನು ವಿಭಿನ್ನ ಹಂತಗಳ ಪ್ರಮಾಣದಲ್ಲಿ ಮತ್ತು ವಿವರದಲ್ಲಿ ಮಂಡಿಸಲಾಗುತ್ತದೆ. ಅಲ್ಲದೇ ಹೆಚ್ಚಿನ ಮಾಹಿತಿಯನ್ನು ಪ್ರದರ್ಶಿಸುವಂತೆ ಮಾಡಲು ಬಳಕೆದಾರ ವೀಕ್ಷಿಸಿದ ಸ್ಥಳದ ಪ್ರಮಾಣವನ್ನು ಬದಲಾಯಿಸಬಹುದು.
ಇವನ್ನೂ ಗಮನಿಸಿ
- ಅರ್ಕಿ- ಇದು ಜೆಫ್ ರಾಸ್ಕಿನ್ ಸಾದರಪಡಿಸಿದ ಕೀಲಿಕೈನೊಂದಿಗೆ ಕಾರ್ಯನಿರ್ವಹಿಸುವ ಮೋಡ್ ರಹಿತ ಬಳಕೆದಾರರ ಅಂತರಸಂಪರ್ಕವಾಗಿದೆ. ಇದು ದಾಖಲೆಗಳ ಸಂಪಾದನೆಗೆ ಮತ್ತು ಪ್ರೋಗ್ರಾಂಗಳನ್ನು ಬರೆಯಲು, ತುಲನಾತ್ಮಕವಾಗಿ ಮೌಸ್ ನಿಂದ ಕಾರ್ಯನಿರ್ವಹಿಸುವ ಅಂತರಸಂಪರ್ಕಗಳಿಗಿಂತ ಹೆಚ್ಚು ದಕ್ಷವಾಗಿದೆ.
ಇತಿಹಾಸ
[ಬದಲಾಯಿಸಿ]ಬಳಕೆದಾರರ ಅಂತರಸಂಪರ್ಕಗಳ ಇತಿಹಾಸವನ್ನು, ಬಳಕೆದಾರರ ಅಂತರಸಂಪರ್ಕದ ಪ್ರಮುಖ ವಿಧಗಳ ಪ್ರಕಾರ ಕೆಳಕಂಡಂತೆ ವಿಂಗಡಿಸಬಹುದು:
- ಬ್ಯಾಚ್ ಇಂಟರ್ ಫೇಸ್, 1945–1968
- ಕಮಾಂಡ್-ಲೈನ್ ಯೂಸರ್ ಇಂಟರ್ ಫೇಸ್, 1969 ರಿಂದ ಇಲ್ಲಿಯ ವರೆಗೆ [ಸೂಕ್ತ ಉಲ್ಲೇಖನ ಬೇಕು]
- ಗ್ರಾಫಿಕಲ್ ಯೂಸರ್ ಇಂಟರ್ ಫೇಸ್, 1981 ರಿಂದ ಇಲ್ಲಿಯವರೆಗೆ — ನೋಡಿ GUI ನ ಇತಿಹಾಸ ಸಂಕ್ಷಿಪ್ತ ಮಾಹಿತಿಗಾಗಿ[ಸೂಕ್ತ ಉಲ್ಲೇಖನ ಬೇಕು]
ಸ್ಥಿರತೆ
[ಬದಲಾಯಿಸಿ]ಸ್ಥಿರತೆಯು, ಉತ್ತಮ ಬಳಕೆದಾರರ ಅಂತರಸಂಪರ್ಕದ ಮುಖ್ಯ ಸಂಪತ್ತಾಗಿದೆ. ಉತ್ತಮ ಬಳಕೆದಾರರ ಅಂತರಸಂಪರ್ಕದ ವಿನ್ಯಾಸವು, ಬಳಕೆದಾರ ಸ್ಥಿರ ಪ್ರಮಾಣದಲ್ಲಿ ನಿರೀಕ್ಷೆ ಹೊಂದುವಂತೆ ಹಾಗು ಅನಂತರ ಆ ನಿರೀಕ್ಷೆಗಳನ್ನು ಮುಟ್ಟುವಂತೆ ಮಾಡುತ್ತದೆ. ಉದ್ದೇಶಕ್ಕಾಗಿ ಬಳಸದಿದ್ದಲ್ಲಿ ಹಾಗು ಕೊನೆಯಲ್ಲಿ ಇದು ಬಳಕೆದಾರನಿಗೆ ಯಾವ ಲಾಭವನ್ನು ನೀಡದಿದ್ದಾಗಲೂ ಸ್ಥಿರತೆ ಉತ್ತಮವಾಗಿರುವುದಿಲ್ಲ.[೨]
ಸ್ಥಿರತೆಯ ಮೂರು ಪ್ರಮುಖ ಅಂಶಗಳು ಮತ್ತು ದೃಷ್ಟಿಕೋನಗಳಿವೆ[೩][dubious ]
ಮೊದಲನೆಯದು,ವಿಭಿನ್ನ ಲಕ್ಷಣಗಳಿಗೆ ಬಳಸುವ ನಿಯಂತ್ರಣಗಳು ಸ್ಥಿರವಾದ ರೀತಿಯಲ್ಲಿರಬೇಕು. ಇದರಿಂದಾಗಿ ಬಳಕೆದಾರ ಸುಲಭವಾಗಿ ನಿಯಂತ್ರಣಗಳನ್ನು ಕಾಣಬಲ್ಲ.[ಸೂಕ್ತ ಉಲ್ಲೇಖನ ಬೇಕು] ಉದಾಹರಣೆಗೆ, ಕೆಲವು ಆದೇಶಗಳು ಪರಿವಿಡಿ, ಐಕಾನ(ಚಿತ್ರಿಕೆ), ಬಲ ಕ್ಲಿಕ್ ಗಳ ಮೂಲಕ, ಕೆಲವು ತೆರೆಯ ಒಂದು ಬದಿಯಲ್ಲಿ ಪ್ರತ್ಯೇಕವಾದ ಬಟನ್ ಮೂಲಕ ದೊರೆತರೆ, ಕೆಲವನ್ನು ಕಾರ್ಯದ ಮೂಲಕ ಕ್ಷಮತೆಯನ್ನು ಗುಂಪುಗೂಡಿಸಿದ್ದರೆ, “ಎಲ್ಲದರ” ಮೂಲಕ ಗುಂಪುಗೂಡಿಸಿದ್ದರೆ, ಕೆಲವನ್ನು “ಮೊದಲೇ” ಒಟ್ಟಾಗಿಸಿದ್ದರೆ ಅಂತಹ ಸಮಯದಲ್ಲಿ ಬಳಕೆದಾರನಿಗೆ ತಂತ್ರಾಂಶವನ್ನು ಬಳಸಲು ಕಷ್ಟವಾಗಬಹುದು. ಆದೇಶಕ್ಕಾಗಿ ಹುಡುಕುವಂತಹ ಬಳಕೆದಾರ, ಅದನ್ನು ಕಂಡುಕೊಳ್ಳಲು ಸ್ಥಿರವಾದ ಶೋಧಕ ಕೌಶಲವನ್ನು ಹೊಂದಿರಬೇಕು. ಬಳಕೆದಾರ ಅಧಿಕ ಶೋಧಕ ಕಾರ್ಯತಂತ್ರಗಳನ್ನು ಬಳಸಿದಷ್ಟು ಹತಾಶನಾಗುತ್ತಾನೆ. ಗುಂಪನ್ನು ಹೆಚ್ಚು ಸ್ಥಿರವಾಗಿಸುವುದರಿಂದ ಶೋಧನೆ ಸುಲಭವಾಗುತ್ತದೆ.
ಎರಡನೆಯದು, "ಪ್ರಿನ್ಸಿಪಲ್ ಆಫ್ ಲೀಸ್ಟ್ ಅಸ್ಟಾನಿಷ್ ಮಂಟ್" ಆಗಿದ್ದು, ಇದು ನಿರ್ಣಾಯಕವಾಗಿದೆ.[ಸೂಕ್ತ ಉಲ್ಲೇಖನ ಬೇಕು] ಅನೇಕ ಲಕ್ಷಣಗಳು ಸದೃಶವಾದ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತವೆ.[೪] ಉದಾಹರಣೆಗೆ, ಅಡೋಬ್ ಅಕ್ರೋಬ್ಯಾಟ್ ನಲ್ಲಿರುವ ಕೆಲವು ಲಕ್ಷಣಗಳು "ಆಯ್ಕೆಯ ಸಾಧನವಾಗಿರುತ್ತದೆ, ಅನಂತರ ಅನ್ವಯಿಸುವುದು ಆಯ್ಕೆಯ ಪಠ್ಯವಾಗಿರುತ್ತದೆ". "ಆಯ್ಕೆಯ ಪಠ್ಯ, ಇತರ ಲಕ್ಷಣವಾಗಿದ್ದು, ಅನಂತರ ಆಯ್ಕೆಮಾಡಿಕೊಳ್ಳಲು ಕಾರ್ಯವನ್ನು ಅನ್ವಯಿಸಬೇಕು." [೨]. ಎಲ್ಲಾ ಪ್ರಕರಣಗಳಲ್ಲೂ ಆದೇಶಗಳು ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು.
ಮೂರನೆಯದು, ಆವೃತ್ತಿ ಯಿಂದ ಆವೃತ್ತಿಗೆ ಬಳಕೆದಾರರ ಅಂತರಸಂಪರ್ಕದ ಬದಲಾವಣೆಯ ವಿರುದ್ಧವಿರುವ ಸ್ಥಿರತೆಯ ಕಾರ್ಯವಿಧಾನವಾಗಿದೆ.[ಸೂಕ್ತ ಉಲ್ಲೇಖನ ಬೇಕು] ಬದಲಾವಣೆಯನ್ನು ಕನಿಷ್ಟಗೊಳಿಸಿ ಮುಂದಿನ ಸ್ಥಿರತೆಯನ್ನು ನಿಭಾಯಿಸಬಹುದು. ಉದಾಹರಣೆಗೆ,ಮೈಕ್ರೋಸಾಫ್ಟ್ ಆಫೀಸ್ 2003 ರ ಪರಿವಿಡಿ ಪೆಟ್ಟಿಕೆಯಿಂದ, ಮೈಕ್ರೋಸಾಫ್ಟ್ ಆಫೀಸ್ 2007 ರ ರಿಬ್ಬನ್ನ್ ಟೂಲ್ ಬಾರ್(ಸಾಧನ ಪಟ್ಟಿ)ನಲ್ಲಿ ಆದಂತಹ ಬದಲಾವಣೆ, ಹೆಚ್ಚಾಗಿ ಬಳಸಿದ ಕ್ರಮವಿಧಿ ಅಂಶಗಳಿಗೆ ಪ್ರವೇಶ ಕಲ್ಪಿಸುವ ಉದ್ದೇಶದಿಂದ ಪುನರ್ವಿನ್ಯಾಸಕ್ಕೆ ಮಿಶ್ರ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಇದು "ಕೋಪ ಮತ್ತು ಹತಾಶೆಯನ್ನು," ಹಾಗು " ಸಮಯ, ತರಬೇತಿ ಮತ್ತು ವೆಚ್ಚದಲ್ಲಿ ಹೆಚ್ಚು ಶ್ರಮವನ್ನು" ಉಂಟುಮಾಡುತ್ತದೆ, ಎಂದು ಹೇಳಲಾಗುತ್ತದೆ.[೫] ವಿದ್ಯುತ್ ಬಳಕೆದಾರರು ಇದನ್ನು ಕುರಿತು ಕೆಳಕಂಡಂತೆ ಹೇಳಿದ್ದಾರೆ: ಹೊಸ ಅಂತರಸಂಪರ್ಕವನ್ನು "ಕಲಿಯಲು ಇದು ಅಧಿಕ ಸಮಯ ಮತ್ತು ಸಹನೆಯನ್ನು" ತೆಗೆದುಕೊಳ್ಳುತ್ತದೆ.[೫] ಎಕ್ಸೆಲ್ ಬಳಕೆದಾರರ ಗುಂಪಿನಿಂದ ಮಾಡಲಾದ ಆನ್ ಲೈನ್ ಸಮೀಕ್ಷೆ ಕೆಳಕಂಡಂತೆ ವರದಿ ಮಾಡಿದೆ: ಪ್ರತಿಕ್ರಿಯೆ ನೀಡಿದ 80 ಪ್ರತಿಶತ ಮಂದಿ ಬದಲಾವಣೆಯ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಹೊಂದಿದ್ದಾರೆ. ಅಲ್ಲದೇ ಆ 80 ಪ್ರತಿಶತದಲ್ಲಿಯೇ, ಉತ್ಪಾದನೆಯಲ್ಲಿ "ಸುಮಾರು 35 ಪ್ರತಿಶತ" ಕಡಿಮೆಮಾಡಬೇಕಾಗುತ್ತದೆ ಎಂದು ಸ್ವಯಂ ಅಂದಾಜು ಮಾಡಲಾಗಿದೆ.[೬][೭]
ಸ್ಥಿರತೆಯು ಬಳಕೆದಾರ ಅಂತರಸಂಪರ್ಕ ವಿನ್ಯಾಸದಲ್ಲಿ ವಿನಿಮಯ ಮಾಡಿಕೊಳ್ಳುವಂತಹ ಒಂದು ಗುಣವಾಗಿದೆ. ಅಷ್ಟೇ ಅಲ್ಲದೇ ವಿನ್ಯಾಸದಲ್ಲಿ ಇದು ಅತ್ಯಂತ ಮುಖ್ಯವಾಗಿದೆ. ಕೆಲವೊಂದು ಪ್ರಕರಣಗಳಲ್ಲಿ, ಸ್ಥಿರತೆಯ ತತ್ವಗಳ ಉಲ್ಲಂಘನೆ, ಸಾಕಷ್ಟು ಸ್ಪಷ್ಟ ಪ್ರಯೋಜನಗಳನ್ನು ಒದಗಿಸಬಲ್ಲದು. ಸೂಕ್ಷ್ಮ ಗ್ರಹಿಕೆ ಮತ್ತು ಎಚ್ಚರಿಕೆಯ ಬಳಕೆದಾರರ ಅಂತರಸಂಪರ್ಕದ ವಿನ್ಯಾಸಕನು, ಇತರ ಗುರಿಗಳನ್ನು ಮುಟ್ಟಲು ಹೊಂದಾಣಿಕೆಯ ಉಲ್ಲಂಘನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ, ಸಾಕಷ್ಟು ಅಭಿವೃದ್ಧಿ ಪಡಿಸಿರದ ತಂತ್ರಾಂಶವು, ಯಥಾಸ್ಥಿತಿಯನ್ನು ಉಳಿಸಿಕೊಳ್ಳುವಂತಹ ಕೆಲವೇ ಕೆಲವು ಬಳಕೆದಾರರನ್ನು ಹೊಂದಿರುತ್ತದೆ. ಹಳೆಯ, ಅತ್ಯಂತ ವ್ಯಾಪಕವಾಗಿ ಬಳಸಲಾದ ತಂತ್ರಾಂಶವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಬಳಕೆದಾರನಿಗೆ ಎಚ್ಚರಿಕೆಯಿಂದ ಹೊಂದಿಸಲಾಗುತ್ತದೆ. ಏಕೆಂದರೆ ಹಾನಿಕಾರಕ ವೆಚ್ಚ ತಡೆಯಲು ಇದನ್ನು ಹೊಂದಿಸಲಾಗುತ್ತದೆ. ಅತ್ಯಂತ ಅನುಭವವುಳ್ಳ ಬಳಕೆದಾರ ಮತ್ತು ಪ್ರೋಗ್ರಾಂ ನಿಂದ ಅತ್ಯಂತ ಲಾಭ ಪಡೆದ ಬಳಕೆದಾರ, ಬದಲಾವಣೆಯಿಂದ ಉಂಟಾಗುವ ಅಧಿಕ ವೆಚ್ಚವನ್ನು ತಡೆದುಕೊಳ್ಳುವ ಬಳಕೆದಾರರಾಗಿದ್ದಾರೆ. ಅದೇನೇ ಅದರೂ, ಆ ವಿನಿಮಯಗಳಿಗೆ ಸ್ಥಿರತೆ ಕೂಡ ಅತ್ಯಂತ ಪ್ರಮುಖ ತತ್ವಗಳಲ್ಲಿ ಒಂದಾಗಿದೆ. ಅಲ್ಲದೇ ಇದನ್ನು ಕೆಲವೊಮ್ಮೆ ಮಾತ್ರ ಉಲ್ಲಂಘಿಸಬಹುದಾಗಿದೆ. ಅಸ್ತಿತ್ವದಲ್ಲಿರುವ ಬಳಕೆದಾರ ಅಂತರಸಂಪರ್ಕಕ್ಕೆ, ಬ್ಯಾಡ್ ಯೂಸರ್ ಅಂತರಸಂಪರ್ಕ ವಿನ್ಯಾಸ ಮತ್ತು ಸರಿಯಾಗಿ ಕಾರ್ಯಗತಗೊಳಿಸದಂತಹ ಬದಲಾವಣೆಗಳು, ಬಳಕೆದಾರರ ಮೇಲೆ ಹೊರಲಾರದಷ್ಟು ವೆಚ್ಚವನ್ನು ಹೇರಬಹುದು.
ಮೊಡ್ಯಾಲಿಟಿ ಗಳು(ವಿಧಿ ವಿಧಾನಗಳು) ಮತ್ತು ಮೋಡ್ ಗಳು
[ಬದಲಾಯಿಸಿ]ಬಳಕೆದಾರ, ಉತ್ಪನ್ನವನ್ನು ವಿಭಿನ್ನ ರೀತಿಗಳಲ್ಲಿ ಬಳಸಬಹುದೆಂಬುದನ್ನು ವಿವರಿಸಲು UI ವಿನ್ಯಾಸದಲ್ಲಿ ಎರಡು ಪದಗಳನ್ನು ಬಳಸಲಾಗುತ್ತದೆ. ಮೊಡ್ಯಾಲಿಟಿ , ಒಂದೇ ಉತ್ಪನ್ನಕ್ಕಿರುವ ಅನೇಕ ಪರ್ಯಾಯ ಅಂತರಸಂಪರ್ಕಗಳನ್ನು ಸೂಚಿಸಿದರೆ, ಮೋಡ್ ಒಂದೇ ಅಂತರಸಂಪರ್ಕದ ವಿಭಿನ್ನ ಸ್ಥಿತಿಗಳನ್ನು ವಿವರಿಸುತ್ತದೆ.
ಮೊಡ್ಯಾಲಿಟಿ ಎಂಬುದು ಸಂಪರ್ಕದ ಮಾರ್ಗವಾಗಿದ್ದು, ಇನ್ ಪುಟ್ ಮತ್ತು ಔಟ್ ಪುಟ್ ಅನ್ನು ಸಾಗಿಸಲು ಬಳಕೆದಾರರ ಅಂತರಸಂಪರ್ಕ ಇದನ್ನು ಬಳಸುತ್ತದೆ. ಮೊಡ್ಯಾಲಿಟಿಯ ಉದಾಹರಣೆಗಳು:
- ಇನ್ ಪುಟ್ — ಕಂಪ್ಯೂಟರ್ ಕೀಲಿಕೈ ಬಳಕೆದಾರನಿಗೆ ಟೈಪ್ ಮಾಡಲಾದ ಪಠ್ಯವನ್ನು ದಾಖಲಿಸಲು ಅವಕಾಶ ನೀಡುತ್ತದೆ, ರೇಖಾಚಿತ್ರ ಫಲಕ ಬಳಕೆದಾರನಿಗೆ ಮುಕ್ತ ಚಿತ್ರಾಕಾರ ಸೃಷ್ಟಿಸಲು ಅವಕಾಶ ನೀಡುತ್ತದೆ.
- ಔಟ್ ಪುಟ್ — ಕಂಪ್ಯೂಟರ್ ಮಾನಿಟರ್, ಸಿಸ್ಟಮ್ ಗೆ ಪಠ್ಯವನ್ನು ಮತ್ತು ರೇಖಾಚಿತ್ರಗಳನ್ನು (ದೃಶ್ಯ ಆಕೃತಿ ) ಪ್ರದರ್ಶಿಸಲು ಅವಕಾಶ ನೀಡುತ್ತದೆ, ಧ್ವನಿವರ್ಧಕ, ಸಿಸ್ಟಮ್ ಗೆ ಶಬ್ದವನ್ನು(ಆಡಿಟರಿ ಮೊಡ್ಯಾಲಿಟಿ ) ನಿರ್ಮಿಸಲು ಅವಕಾಶ ನೀಡುತ್ತದೆ.
ಬಳಕೆದಾರರ ಅಂತರಸಂಪರ್ಕ, ಪರಸ್ಪರ ಕ್ರಿಯೆಗೆ ಯಾವುದನ್ನು ಬಳಸಬೇಕೆಂದು ಆಯ್ಕೆ ಮಾಡಿಕೊಳ್ಳಲು ಬಳಕೆದಾರನಿಗೆ ಅವಕಾಶ ನೀಡುವುದರೊಂದಿಗೆ, ಅನೇಕ ವಿಪುಲ ಇನ್ ಪುಟ್ ಆಕೃತಿ ಮತ್ತು ಔಟ್ ಪುಟ್ ಆಕೃತಿಗಳನ್ನು ಬಳಸಬಲ್ಲದು.
ಮೋಡ್, ಕಂಪ್ಯೂಟರ್ ಪ್ರೋಗ್ರಾಂ ನಲ್ಲಿಯೇ ವಿಭಿನ್ನ ರೀತಿಯ ಕಾರ್ಯವಿಧಾನವಾಗಿದ್ದು, ಇಲ್ಲಿ ಒಂದೇ ಇನ್ ಪುಟ್ ಕಂಪ್ಯೂಟರ್ ಪ್ರೋಗ್ರಾಂನ ಸ್ಥಿತಿಯನ್ನು ಆಧರಿಸಿ ಗ್ರಹಿಸಲಾದ ವಿಭಿನ್ನ ಫಲಿತಾಂಶಗಳನ್ನು ನೀಡಬಹುದು. ಉದಾಹರಣೆಗೆ, ಕ್ಯಾಪ್ಸ್ ಲಾಕ್ ಒಂದು ಇನ್ ಪುಟ್ ಮೋಡ್ ಅನ್ನು ಏರ್ಪಡಿಸುತ್ತದೆ. ಇಲ್ಲಿ ಟೈಪ್ ಮಾಡಲಾದ ಅಕ್ಷರಗಳು ಅಪ್ರಯತ್ನ ಪೂರ್ವವಾಗಿಯೇ ಅಪ್ಪರ್ ಕೇಸ್ ನಲ್ಲಿರುತ್ತವೆ; ಕ್ಯಾಪ್ಸ್ ಲಾಕ್ ಮೋಡ್ ನಲ್ಲಿ ಇಲ್ಲದಿರುವಾಗ ಇದೇ ಟೈಪ್ಪಿಂಗ್, ಲೋವರ್ ಕೇಸ್ ಅಕ್ಷರಗಳನ್ನು ನೀಡುತ್ತದೆ. ಮೋಡ್ ಅನ್ನು ಹೆಚ್ಚಾಗಿ ಬಳಸುವುದರಿಂದ ಬಳಕೆದಾರರ ಅಂತರಸಂಪರ್ಕದ ಉಪಯುಕ್ತತೆ ಕಡಿಮೆಯಾಗುತ್ತದೆ. ಬಳಕೆದಾರನು ಪ್ರಸ್ತುತದ ಮೋಡ್ ಸ್ಥಿತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಮತ್ತು ಅಗತ್ಯವಿದ್ದಲ್ಲಿ ಮೋಡ್ ಗಳ ಸ್ಥಿತಿಗಳ ನಡುವೆ ಬದಲಾಗಲು ಹೆಚ್ಚು ಶ್ರಮಪಡಬೇಕಾಗುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಪ್ರವೇಶ್ಯತೆ ಮತ್ತು ಕಂಪ್ಯೂಟರ್ ಪ್ರವೇಶ್ಯತೆ — ವಿಶೇಷ ಅಗತ್ಯವುಳ್ಳ ಜನರಿಗೆ ಹೊಂದುವ ಬಳಕೆದಾರರ ಅಂತರಸಂಪರ್ಕ
- ಹೊಂದಿಸಬಲ್ಲ ಬಳಕೆದಾರ ಅಂತರಸಂಪರ್ಕಗಳು
- ಮಿದುಳು-ಕಂಪ್ಯೂಟರ್ ಅಂತರಸಂಪರ್ಕ ಸಾಧನ
- ಕಂಪ್ಯೂಟರ್ ಬಳಕೆದಾರನ ತೃಪ್ತಿ
- ದಕ್ಷತಾಶಾಸ್ತ್ರ ಮತ್ತು ಮಾನವ ಅಂಶಗಳು —ವಸ್ತುಗಳನ್ನು ವಿನ್ಯಾಸಗೊಳಿಸುವ ಅಧ್ಯಯನವು, ಮಾನವನ ದೇಹದ ಆಕಾರಕ್ಕೆ ಹೊಂದಿಕೊಳ್ಳುವಂತಿರಬೇಕು.
- ಫ್ರೇಮ್ ಬಫರ್
- ರೇಖಾಚಿತ್ರ ಬಳಕೆದಾರರ ಅಂತರಸಂಪರ್ಕ
- ಮಾನವ-ಕಂಪ್ಯೂಟರ್ ಪಾರಸ್ಪರಿಕ ಕ್ರಿಯೆಯ ಕೊಂಡಿಗಳು
- ಐಕಾನ್(ಚಿತ್ರಿಕೆಯ) ನ ವಿನ್ಯಾಸ
- ಮಾಹಿತಿ ವಿನ್ಯಾಸ — ಏರ್ಪಡಿಸುವುದು, ಹೆಸರಿಸುವುದು, ಮತ್ತು ಮಾಹಿತಿ ರಚನೆಗಳಿಗೆ ಗುರುತನ್ನು ನೀಡುವುದು.
- ಮಾಹಿತಿ ದೃಶ್ಯೀಕರಣ — ಸಂವೇದನೆಯನ್ನು ಪುನಃ ಜಾಗೃತಗೊಳಿಸಲು, ಅಮೂರ್ತ ದತ್ತಾಂಶದ ಸಂವೇದಕ ಪ್ರದರ್ಶನಗಳ ಬಳಕೆ
- ಪಾರಸ್ಪರಿಕ ಕ್ರಿಯೆಯ ವಿಧಾನ
- ಪಾರಸ್ಪರಿಕ ಕ್ರಿಯೆಯ ವಿನ್ಯಾಸ
- ಅಂತರಸಂಪರ್ಕ(ಕಂಪ್ಯೂಟರ್ ವಿಜ್ಞಾನ)
- ಚಲನಶಾಸ್ತ್ರ ಬಳಕೆದಾರರ ಅಂತರಸಂಪರ್ಕ
- ಜ್ಞಾನ ದೃಶ್ಯೀಕರಣ — ಜ್ಞಾನವನ್ನು ವರ್ಗಾಯಿಸಲು ದೃಶ್ಯ ಸಂವೇದಕಗಳ ಬಳಕೆ
- ಬಳಕೆದಾರರ ಅಂತರಸಂಪರ್ಕ ಸಾಹಿತ್ಯ
- ಸಹಜ ಬಳಕೆದಾರರ ಅಂತರಸಂಪರ್ಕ ಗಳು
- ನ್ಕೂರೋಸೆಸ್, ಅರೆ ರೇಖಾಚಿತ್ರ ಬಳಕೆದಾರರ ಅಂತರಸಂಪರ್ಕ.
- ಮಾಪನದ ಘಟಕಗಳಿಗೆ ಏಕಪ್ರಕಾರದ ಕೋಡ್
- ಉಪಯುಕ್ತತೆಯ ಕೊಂಡಿಗಳು
- ಬಳಕೆದಾರರ ಸಹಾಯಕ
- ಬಳಕೆದಾರರ ಅನುಭವ
- ಬಳಕೆದಾರರ ಅನುಭವದ ವಿನ್ಯಾಸ
- ಬಳಕೆದಾರರ ಅಂತರಸಂಪರ್ಕ ವಿನ್ಯಾಸ
- ವಸ್ತುತಃ ಪ್ರಾಕ್ತನ-ಕೃತಿ
- ವಸ್ತುತಃ ಬಳಕೆದಾರರ ಅಂತರಸಂಪರ್ಕ
ಉಲ್ಲೇಖಗಳು
[ಬದಲಾಯಿಸಿ]- ↑ Appleinsider.com
- ↑ "How to avoid foolish consistency". " ಬಳಕೆದಾರರು ದೀರ್ಘಕಾಲದ ವರೆಗೆ ಅವರ ಕಾರ್ಯವನ್ನು ನಿರ್ವಹಿಸದಿದ್ದಲ್ಲಿ, ವಿಷಯವನ್ನು ಗ್ರಹಿಸಿ ಕಾರ್ಯನಿರ್ವಹಿಸುವಂತೆ ಮಾಡುವುದಕ್ಕೆ ಅರ್ಥವಿರುವುದಿಲ್ಲ. ಶ್ರೇಣಿ ಇವುಗಳನ್ನು ಸ್ಥಿರಗೊಳಿಸುವ ಬದಲು ಉಪಯುಕ್ತವಾಗಿಸುತ್ತದೆ"
- ↑ ಡೇವಿಡ್ ಇ. ಬೌಂಡಿ, ಪ್ರೋಗ್ರಾಂ ಬರೆಯುವವರ ಜೀವಿವರ್ಗೀಕರಣ ಶಾಸ್ತ್ರ, ACM SIGSOFT ಸಾಫ್ಟ್ ವೇರ್ ಇಂಜಿನಿಯಂರಿಂಗ್ ನೋಟ್ಸ್ 16(4) 23-30 (1991 ರ ಅಕ್ಟೋಬರ್)
- ↑ ಉದಾಹರಣೆಗೆ, 1979 ರಲ್ಲಿ ನಡೆದ ಥ್ರೀ ಮೈಲ್ ಐಲೆಂಡ್ ನ್ಯೂಕ್ಲಿಯರ್ ದುರ್ಘಟನೆಗೆ, ಸ್ಥಿರತೆಯಿಲ್ಲದ ಬಳಕೆದಾರರ ಅಂತರಸಂಪರ್ಕ ಕೂಡ ಕಾರಣವಾಗಿದೆ. ಕೆಲವು ಸೂಚಕದ ದೀಪಗಳು ಸಹಜವಾಗಿ ಕೆಂಪನ್ನು ಸೂಚಿಸಿದರೆ, ಇನ್ನೂ ಕೆಲವು ಹಸಿರನ್ನು ಸೂಚಿಸುತ್ತವೆ. [೧] Archived 2011-09-27 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೫.೦ ೫.೧ ವರ್ಡ್ 2007: ನಾಟ್ ಎಕ್ಸಾಕ್ಟ್ಲಿ ಎ ಮಸ್ಟ್-ಹ್ಯಾವ್ Archived 2007-12-12 ವೇಬ್ಯಾಕ್ ಮೆಷಿನ್ ನಲ್ಲಿ. “ಒಂದಕ್ಕೆ, ವಲ್ಡ್ 2007 ಸಂಪೂರ್ಣವಾಗಿ ಹೊಸ ರಿಬ್ಬನ್ನ್ ಅಂತರಸಂಪರ್ಕ ಅನ್ನು ಬಳಸುತ್ತದೆ. … ‘ಜನರು ಹೊಸ ಅಂತರಸಂಪರ್ಕ ಅನ್ನು ಬಳಸಲು ಪ್ರಾರಂಭಿಸುತ್ತಾರೆ, ಆದರೆ ಸಮಯ, ತರಬೇತಿ ಮತ್ತು ವೆಚ್ಚದಲ್ಲಿ ಹೆಚ್ಚು ಶ್ರಮಪಡಬೇಕಾಗುತ್ತದೆ,' ಎಂದು [a] ಸಿಸ್ಟಮ್ ಗಳ ನಿರ್ದೇಶಕರು ಹೇಳಿದ್ದಾರೆ… [ಬಳಕೆದಾರ] 2003 ರಿಂದ 2007ಕ್ಕೆ ಬದಲಾಗುವ ಸಮಯ ಬಂದಾಗ… ‘ಬ್ಯಾಟಿನಿಂದ ಒಡೆದು ಅದನ್ನು ಚೂರು ಮಾಡುವಷ್ಟು ಕೋಪ ಬಂದಿತ್ತು’ ಎಂದು ಅವರು ಹೇಳಿದ್ದಾರೆ. ‘ನಾನು ಕೋಪ ಮತ್ತು ಹತಾಶೆಯನ್ನು ನೋಡಬಹುದು.’” ಉಲ್ಲೇಖ ದೋಷ: Invalid
<ref>
tag; name "Word 2007: Not Exactly a Must-Have" defined multiple times with different content - ↑ "Ribbon survey results". Archived from the original on 2011-02-19. Retrieved 2011-02-08. ಮುಂದುವರೆದ ಬಳಕೆದಾರರಲ್ಲಿ, ಸುಮಾರು 80 ಪ್ರತಿಶತದಷ್ಟು ಜನ ಹೊಸ ಅಂತರಸಂಪರ್ಕವನ್ನು "ಇಷ್ಟ ಪಡುವುದಿಲ್ಲ" ಅಥವಾ "ದ್ವೇಷಿಸುತ್ತಾರೆ", ಕೇವಲ 20ಪ್ರತಿಶತದಷ್ಟು ಮಾತ್ರ ಅದನ್ನು "ಇಷ್ಟ" ಅಥವಾ "ಪ್ರೀತಿಸುತ್ತಾರೆ", ಅಲ್ಲದೇ ಆಗ 80ಪ್ರತಿಶತದಲ್ಲಿ, ಸರಾಸರಿ 35 ಪ್ರತಿಶತದಷ್ಟು ಉತ್ಪಾದನಾ ನಷ್ಟವಾಗುತ್ತದೆ.
- ↑ ಮತ್ತೊಂದು ಬದಿಯಲ್ಲಿ, ಸಾಧಾರಣವಾಗಿ ಮತ್ತು ಕಡಿಮೆ- ಬಳಸುವ ಬಳಕೆದಾರರು, ಹಳೆಯ ಬಳಕೆದಾರರ ಅಂತರಸಂಪರ್ಕ ಗಳ ಮೇಲೆ ಅವಲಂಬಿಸಿರದ ಬಳಕೆದಾರರು, ಬದಲಾವಣೆಗೆ ಆತಂಕ ಪಡುವುದಿಲ್ಲ. "'ಇತರ ಓದುಗರು, ಹೊಸ ಅಂತರಸಂಪರ್ಕವನ್ನು ಕಲಿಯಲು ಸಮಯ ಹಿಡಿಯುವುದು ಉಚಿತ ಎಂದು ಭಾವಿಸುತ್ತಾರೆ. ಒಮ್ಮೆ ನೀವು ಕಲಿತರೆಂದರೆ ಇದು ವೃತ್ತಿಪರರನ್ನು ಸೃಷ್ಟಿಸುತ್ತದೆ-ಸಾಧಾರಣ ಬಳಕೆದಾರನಿಗೆ ದಾಖಲೆಗಳನ್ನು ಹುಡುಕಲು ಸುಲಭವಾಗಿಸುತ್ತದೆ'" ಎಂದು ಹೇಳಿದ್ದಾರೆ. ವರ್ಡ್ 2007: ನಾಟ್ ಎಕ್ಸ್ಯಾಕ್ಟ್ಲಿ ಎ ಮಸ್ಟ್-ಹ್ಯಾವ್ Archived 2007-12-12 ವೇಬ್ಯಾಕ್ ಮೆಷಿನ್ ನಲ್ಲಿ. ಹೊಸ ಬಳಕೆದಾರರ ಅಂತರಸಂಪರ್ಕವನ್ನು ನೀಡುವಾಗ ಹಿಂದಿನ ಹೊಂದಾಣಿಕೆಯ ಮೋಡ್ ಅನ್ನು ಒದಗಿಸುವುದು ಸಾಮಾನ್ಯ ಪರಿಹಾರವಾಗಿದೆ. ಇದರಿಂದಾಗಿ ಉತ್ಪನ್ನದ ಬಹುಪಾಲು ಬಳಕೆದಾರರು ಬದಲಾವಣೆಯ ವೆಚ್ಚವನ್ನು ಅನುಭವಿಸದಂತಾಗುತ್ತದೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಇಟ್ಸ್ ಬಯೋಗ್ರಫಿ ಕವರ್ಸ್ ಎ ವೈಡ್ ಏರಿಯಾ ಆಫ್ ಯೂಸರ್ ಇಂಟರ್ ಫೇಸ್ ಪಬ್ಲಿಕೇಷನ್ಸ್
- ಚಾಪ್ಟರ್ 2 ಹಿಸ್ಟ್ರಿ: ಎ ಬ್ರೀಫ್ ಹಿಸ್ಟ್ರಿ ಆಫ್ ಯೂಸರ್ ಇಂಟರ್ ಫೇಸಿಸ್
- Pages with reference errors
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with multiple maintenance issues
- Pages using multiple issues with unknown parameters
- Articles with hatnote templates targeting a nonexistent page
- Wikipedia articles needing clarification from January 2010
- Articles with invalid date parameter in template
- CS1 errors: empty citation
- Articles containing potentially dated statements from 2009
- All articles containing potentially dated statements
- All pages needing factual verification
- Wikipedia articles needing factual verification from April 2007
- Articles with unsourced statements from October 2007
- All accuracy disputes
- Articles with disputed statements from October 2010
- Articles with unsourced statements from December 2010
- ಬಳಕೆದಾರರ ಅಂತರಸಂಪರ್ಕ
- ಬಳಕೆದಾರ ಅಂತರಸಂಪರ್ಕದ ಕೌಶಲಗಳು
- ವಾಸ್ತವ ನೈಜತೆ