ಡೇನಿಎಲ್ ಡಿಫ಼ೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೇನಿಯಲ್ ಡಿಫೋ (೩ ಏಪ್ರಿಲ್, ಕ್ರಿ.೧೬೬೦-೨೧ ಅಪ್ರಿಲ್ ೧೭೩೧). ಡೇನಿಯಲ್ ಡಿಫೋ ಆಂಗ್ಲ ಭಾಷೆಯ ವರ್ತಕರು, ಗ್ರಂಥಕರ್ತರು, ದಿನಚರಿಯ ವಹಿವಾಟುಗಳನ್ನು ರಚಿಸುವವರು ಹಾಗು ಬೇಹುಗಾರರಾಗಿದ್ದರು. "ರಾಬಿನ್ಸನ್ ಕ್ರೂಸೋ"ಎಂಬ ಕಾದಂಬರಿಯನ್ನು ಬರೆಯುವುದರ ಮೂಲಕ, ಡಿಫ಼ೊರವರು ಹೆಸರುವಾಸಿಯಾದವರು. ಅದಲ್ಲದೆ, ಬ್ರಿಟನ್‌ನಿನಲ್ಲಿ ಸ್ಯಾಮ್ಯೂಲ್ ರಿಚರ್ಡ್‌ಸನ್‍ ರವರ ಸಹಾಯದಿಂದ ಈ ಲೇಖನವನ್ನು ಜನ ಸಾಮಾನ್ಯರ ಬಳಿಗೆ ತರುವಲ್ಲಿ ಯಶಸ್ವಿಗೊಂಡರು. ಈ ಲೇಖನಕ್ಕೆ ಸ್ಯಾಮ್ಯೂಲ್ ರವರ ಕೊಡುಗೆಯು ಅಪಾರವಾಗಿದೆ.

ಡೇನಿಯಲ್ ಡೆಫ಼ೊ
ಡೇನಿಯಲ್ ಡೆಫ಼ೊ
ಜನನ೩ ಏಪ್ರಿಲ್, ಕ್ರಿ.೧೬೬೦
ಲಂಡನ್
ವೃತ್ತಿವರ್ತಕರು, ಗ್ರಂಥಕರ್ತರು, ದಿನಚರ್ಯರಚಕರು, ವಹಿಗಳನ್ನು ರಚಿಸುವವರು, ಬೇಗುಗಾರರು
ಪ್ರಕಾರ/ಶೈಲಿಸಾಹಸಕಾರ್ಯ
ವಿಷಯಸಾಹಸ

ಪ್ರಭಾವಗಳು
 • ಮಾರ್ಟ್‌ನ್

ಜೀವನ[ಬದಲಾಯಿಸಿ]

ಡೇನಿಎಲ್ ಫೋ ರವರು ಇಂಗ್ಲೆಂಡ್, ಲಂಡನ್‍ನಿನಲ್ಲಿ ಏಪ್ರಿಲ್ ೩, ಕ್ರಿ.೧೬೬೦ರಂದು ಜನಿಸಿದರು. ಇವರ ತಂದೆ ಜೇಮ್ಸ್ ಫೋ ಲಂಡನ್‌ನಿನಲ್ಲಿ ಒಬ್ಬ ಕಸಾಯಿಯಾಗಿದ್ದರು. ಡೇನಿಎಲ್‍ರವರ ಹೆಸರು ಡೇನಿಎಲ್ ಫೋ ಎಂದಿತ್ತು, ನಂತರ ಅವರು ಈ ಹೆಸರನ್ನು ಡೇನಿಎಲ್ ಡಿಫೋ ಎಂದು ಮರು ನಾಮಕರಣ ಮಾಡಿಕೊಂಡರು. ಡೇನಿಎಲ್ ರವರ ಜನನ ಖಚಿತವಾಗಿಲ್ಲದಿದ್ದರೂ, ಬಹಳಷ್ಟುಕಡೆ ೩ ಏಪ್ರಿಲ್, ೧೬೬೦ ಎಂದೇ ಕಂಡುಬಂದಿದೆ. ಡೇನಿಎಲ್ ರವರ ತಂದೆ ಫೋರವರು, ಭಿನ್ನಮತ ಅವಲಂಭಿತವರಾದರಿಂದ, ಫೋರವರು ಡೇನಿಎಲ್‌ರವರನ್ನು, ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯ ಅಥವಾ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ದಂತಹ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಗೆ ಸೇರಿಸದೆ, ಡೇನಿಎಲ್‍‍ರವರನ್ನು ಪೂಜ್ಯ ಚಾರ್ಲ್ಸ್ ಮಾರ್ಟನ್‍ರವರು ನಡೆಸುತಿದ್ದ, ನೆವಿಂಗ್‍ಟನ್ ಗ್ರೀನ್ ವಿದ್ಯಾಶಾಲೆಯಲ್ಲಿ ಸೇರಿಸಿದರು. ಡೇನಿಎಲ್ ರವರು ಅಲ್ಲಿಂದಲೇ ತಮ್ಮ ಪದವಿಯನ್ನು ಹೊಂದಿದರು. ಮಾರ್ಟನ್ ರವರು ಡೇನಿಎಲ್‍ರವರಿಗೆ ಅವರ ಕಲೆಯಾದ ಬರವಣಿಗೆಯನ್ನು ಕಂಡುಕೊಳ್ಳಲು ಬಹಳಷ್ಟು ಸಹಾಯ ಮಾಡಿದರು.

ವ್ಯಾಪಾರ[ಬದಲಾಯಿಸಿ]

ಡೇನಿಎಲ್‍ರವರಿಗೆ ಕ್ರೈಸ್ತ ಸಭೆಯ ಮಂತ್ರಿಯಾಗುವ ಕನಸಿದ್ದರೂ ಸಹ, ಇದನ್ನು ಪಕ್ಕಕ್ಕಿಟ್ಟು ೧೬೮೩ರಲ್ಲಿ ವ್ಯಾಪಾರಕ್ಕೆ ಇಳಿದರು. ಡೇನಿಎಲ್‍ರವರಿಗೆ ವ್ಯಾವಹಾರದಲ್ಲಿ ಬಹಳಷ್ಟು ಆಸಕ್ತಿ ಇತ್ತು. ಡೇನಿಎಲ್‍ರವರು ದ್ರಾಕ್ಷಾರಸ (ಮದ್ಯಪಾನ) ಹಾಗು ಅತ್ತಿಯನ್ನು ಮಾರುತ್ತಾ ಬಹಳಷ್ಟು ದೇಶಗಳನ್ನು ಒಡಾಡಿದರು. ಡೇನಿಎಲ್‍ರವರು ಸ್ವಲ್ಪ ಸಮಯದಲ್ಲೇ ಬಹಳ ಚುರುಕಾದ ವ್ಯಾಪಾರಿಯಾದರು. ಆದರೆ ಕೆಲವೇ ವರ್ಷಗಳಲ್ಲಿ ಡೇನಿಎಲ್‍ರವರು ಸಾಲಗಾರರಾಗಿಬಿಟ್ಟರು. ೧೬೯೨ರಿಂದ ಹತ್ತು ವರ್ಷಗಳ ಕಾಲ ಡೇನಿಎಲ್‍ರವರು ತಾವು ಮಾಡಿದ ಸಾಲಗಳನ್ನು ತೀರಿಸುತ್ತಾ ಬಂದರು. ೧೭೦೩ರಲ್ಲಿ ಅವರು ಚೆನ್ನಾಗಿಯೇ ನಡೆಸುತಿದ್ದ ಇಟ್ಟಿಗೆ ಹಾಗು ಹಂಚು ವ್ಯಾಪಾರವು ನಷ್ಟ ಅನುಭವಿಸಿ, ಡೇನಿಎಲ್‍ರವರು ವ್ಯಾಪಾರ ಉದ್ಯೋಗವನ್ನು ಬಿಟ್ಟೊಗೆದರು. ೧೬೮೪ರಲ್ಲಿ ಡೇನಿಎಲ್‍ರವರು ಅವರ ತಂದೆಯಂತೇ ಭಿನ್ನಮತ ಅವಲಂಭಿತರಾದರು ಹಾಗು ವ್ಯಾಪಾರಸ್ತರೊಬ್ಬರ ಮಗಳಾದ ಮೇರಿ ಟುಫ಼್‍ಲೆ ಅವರನ್ನು ವಿವಾಹವಾದರು. ಅವರಿಗೆ ೮ ಮಂದಿ ಮಕ್ಕಳು ಹುಟ್ಟಿದರು. ಅವರಲ್ಲಿ ೬ ಮಂದಿ ಮಾತ್ರವೇ ಬದುಕುಳಿದರು.

ಬರವಣಿಗೆ[ಬದಲಾಯಿಸಿ]

ಡೇನಿಎಲ್‍ರವರಿಗೆ ವ್ಯಾಪಾರದಲ್ಲಿದ್ದ ಆಸಕ್ತಿಯೂ ಕಡಿಮೆಯಾಗಿ ಅದು, ರಾಜಕೀಯದತ್ತ ಬದಲಾಯಿತು. ೧೬೮೩ರಲ್ಲಿ ಅವರು ತಮ್ಮ ಮೊದಲ ರಾಜಕೀಯ ವಹಿಯನ್ನು ಸೃಷ್ಟಿಸಿದರು. ಡೇನಿಎಲ್‍ರವರು ಫ್ರಾನ್ಸ್‌ಗೆ ತೆರಳಿ, ಓರೆಂಜ್ ದೇಶದಿಂದ ಬಂದಿದ್ದ ವಿಲ್ಲಿಯಮ್‍ರವರ ಜೊತೆ ಸೇರಿಕೊಂಡರು. ವಿಲ್ಲಿಯಮ್‍‍ರವರ ಆಳ್ವಿಕೆಯಲ್ಲಿ, ಡೇನಿಎಲ್‍ ವಿಲ್ಲಿಯಮ್‍ರವರ ರಾಜನಿಷ್ಟೆಯ ಬೆಂಬಲಿಗನಾಗಿ ನಿಂತರು. ಡೇನಿಎಲ್ ರವರ ಮೊದಲ ಪ್ರಕಟನೆ, "ಅನ್ ಎಸ್ಸೆ ಅಪೋನ್ ಪ್ರೊಜೆಕ್ಟ್ಸ್"(An Essay Upon Projects) ಡೇನಿಎಲ್‍ರವರು ೧೭೦೧ರಲ್ಲಿ 'ದಿ ಟ್ರು-ಬೋರ್ನ್ ಇಂಗ್ಲಿಷ್‍ಮೆನ್'(The True-Born Englishmen) ಎಂಬ ಹಾಸ್ಯಕರವಾದ ಕವಿತೆಯೊಂದನ್ನು ರಚಿಸಿದರು. ಈ ಕವಿತೆಯು ಇಂಗ್ಲಾಂಡ್‍ನಲ್ಲಿ ನಡೆಯುತಿದ್ದ ಜಾತೀಕರಣದ ಬಗ್ಗೆ ಹಾಗು ಪರದೇಶಿಯಾದ ವಿಲ್ಲಿಯಮ್‍ರವರ ಮೇಲೆ ನಡೆದ ಹಲ್ಲೆಗಳ ಬಗ್ಗೆ ಪ್ರಾಮುಖ್ಯತೆಹೊಂದಿತ್ತು. ಡಿಫೋರವರು ಪ್ರಸಿದ್ಧವಾದ ಸಾಧನೆಹೊಂದಿದ್ದು, ರಾಣಿ ಅನ್ನಿ ಕಾಲದಲ್ಲಿ. ಅವರು ಬರೆದ 'ರಿವ್ಯೂ'ಎಂಬ ಆ ಕಾಲಕ್ಕೆ ತಕ್ಕ ಕಾಗದ ಪುಸ್ತಕವೊಂದನ್ನು ಪ್ರಕಟಿಸುವುದರ ಮೂಲಕ ಪ್ರಸಿದ್ಧಿ ಗೊಂಡರು. ೧೭೦೩ರಿಂದ ೧೭೧೩ರವರೆಗೆ ಡೇನಿಎಲ್‍ರವರೊಬ್ಬರೇ ಈ ಪುಸ್ತಕವನ್ನು ಬಹಳಷ್ಟು ಗಂಭೀರವಾಗಿ ಬರೆಯುತ್ತಾ ಬಂದರು. ೧೭೦೫ರಲ್ಲಿ, 'ರಿವ್ಯೂ'ವು ವಾರಕ್ಕೆ ಮೂರು ಬಾರಿ ಪ್ರಕಟವಾಗಲು ಆರಂಭಿಸಿತು. ೧೭೧೩ರಲ್ಲಿ, ಡೇನಿಎಲ್‌ರವರ ರಾಜಕೀಯ ಶತ್ರುಗಳು ಡೇನಿಎಲ್‌ರವರನ್ನು ಸೆರೆಮನೆಯಲ್ಲಿಟ್ಟಿದಾಗ ಸಹ, 'ರಿವ್ಯೂ' ಕೆಲ ಕಾಲ ಪ್ರಕಟಗೊಂಡಿತು. ಡೇನಿಎಲ್‍ರವರು ಸೆರೆಮನೆಯಲ್ಲಿದ್ದಾಗ, ಅವರು 'ಹೈಮ್‍ ಟು ದಿ ಪಿಲ್ಲೊರಿ'(Hymn To The Pillory)ಎಂಬ ಕಾವ್ಯವೊಂದನ್ನು ರಚಿಸುವುದರಿಂದ, ತಾವು ಕಳೆದುಕೊಂಡಿದ್ದ ಜನಪ್ರಿಯತೆಯನ್ನು ಮತ್ತೆ ಪಡೆದುಕೊಂಡರು. ಟ್ರಾಯ್ ಪಕ್ಷದವರ ಮೇಲೆ ಬೇಹುಗಾರನಾಗಿರಲು ಒಪ್ಪುವುದರಮೂಲಕ ಅವರ ಸೆರೆಮನೆಯ ವಾಸ ಬಹಳಷ್ಟು ಬೇಗ ಮುಕ್ತಾಯಗೊಂಡು ತಮ್ಮ ಬರವಣಿಗೆಯನ್ನು ಮುಂದುವರಿಸಿದರು.

ಡೇನಿಯಲ್ ಡಿಫ಼ೊರವರ ಕೃತಿ
ರಾಬಿನ್ಸನ್ ಕ್ರೂಸೋ

ಲೇಖನಗಳು[ಬದಲಾಯಿಸಿ]

 • 'ರಾಬಿನ್ಸನ್ ಕ್ರೂಸೋ'(Robinson Crusoe)(೧೭೧೯)
 • 'ಮೋಲ್ ಫ್ಲಾಂಡರ್ಸ್'(Moll Flanders)(೧೭೨೨)
 • 'ಎ ಜರ್ನಲ್ ಆಫ್ ದಿ ಪ್ಲೇಗ್ ಈಯರ್'(A Journal of The Plague Year)(೧೭೨೨)
 • 'ಕೋಲೊನೆಲ್ ಜ್ಯಾಕ್'(Colonel Jack)(೧೭೨೨)
 • 'ರೋಕ್ಸಾನ'(Roxana)(೧೭೨೪)
 • 'ಕ್ಯಾಪ್‌ಟನ್ ಸಿಂಗಲ್‌ಟನ್'(Capital Singleton)(೧೭೨೦)
 • 'ಮೆಮೊಯ್‌ರ್ಸ್ ಆಫ್ ಅ ಕವಲಿಯ್‌ರ್'(Memomirs of a Cavalier)(೧೭೨೦)
ಡೇನಿಎಲ್‌ರವರ 'ಅ ಜರ್ನಲ್ ಆಫ್ ದಿ ಪ್ಲೇಗ್ ಈಯರ್'(A Journal of The Plague Year)(೧೭೨೨)
'ಅ ಜರ್ನಲ್ ಆಫ್ ದಿ ಪ್ಲೇಗ್ ಈಯರ್'

ಪ್ರಬಂಧಗಳು[ಬದಲಾಯಿಸಿ]

 • 'ಏನ್ ಎಸ್ಸೆ ಅಪೋನ್ ಪ್ರೊಜೆಕ್ಟ್ಸ್'(an essay opon projects)(೧೬೯೭)
 • 'ದಿ ಶೊರ್ಟೆಸ್ಟ್ ವೆ ವಿತ್ ದಿ ಡಿಸೆಂಟರ್ಸ್'(the shortest way with the dissenters) (೧೭೦೨)
 • 'ಸೀರಿಯಸ್ ರಿಫ಼್ಲೆಕ್ಷನ್ಸ್ ಆಫ್ ರಾಬಿನ್ಸನ್ ಕ್ರೂಸೊ'(serious reflections of robinson crusoe)(೧೭೨೦)
 • 'ದಿ ಕಂಪ್ಲೀಟ್ ಇಂಗ್ಲಿಷ್ ಟ್ರೇಡ್‌ಮೆನ್'(the complete english trademen)(೧೭೨೬)
 • 'ಅನ್ ಎಸ್ಸೆ ಅಪೋನ್ ಲಿಟ್ರೇಚರ್'(an essay upon literature)(೧೭೨೬)
 • 'ಎ ಪ್ಲಾನ್ ಆಫ್ ದಿ ಇಂಗ್ಲಿಷ್ ಕಾಮರ್ಸ್'(a plan of the english commerce(೧೭೨೮)

ಡ್ಯಾನಿಎಲ್‍ರವರ ಮುಂದಿನ ಜೀವನ[ಬದಲಾಯಿಸಿ]

ಜಾರ್ಜ್‍ರವರು ಪಟ್ಟಕ್ಕೆ ಬಂದನಂತರ ಟ್ರಾಯ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದರಿಂದ, ಜನರಿಗೆ ಡಿಫೋರವರ ಬೆಲೆಕಂಡುಬಂದಿತು. ಇದರಿಂದ, ಅವರು ಅವತ್ತಿಗೆ ಅಸ್ತಿತ್ವದಲ್ಲಿದ್ದ ಸರ್ಕಾರಕ್ಕೆ ಬರೆಯುತ್ತಾ ತಮ್ಮ ಬೇಹುಗಾರನ ವೃತ್ತಿಯನ್ನು ಮುಂದುವರೆಸಿದರು. ಡಿಫೋರವರಿಗೆ ಆರೋಗ್ಯತೊಂದರೆ ಬಂದರೂ ಅವರು ತಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಜನಪ್ರಿಯವಾದ ಕೃತಿಗಳನ್ನು ಬರೆದರು. ಅದರಲ್ಲಿ ೧೭೧೫ರಲ್ಲಿ ರಚಿಸಿದ 'ದಿ ಫ಼್ಯಾಮಿಲಿ ಇನ್ಸ್‌ಟ್ರಕ್ಟರ್'(The Family Instructor) ಎಂಬ ಕೃತಿಯು ಒಂದಾಗಿದೆ. ಡೇನಿಎಲ್‍ರವರ ಈ ವರೆಗು ತಿಳಿಸಿದ ಯಾವ ಕೃತಿಯೂ ಜನಪ್ರಿಯತೆಯನ್ನು ನೀಡಿರಲಿಲ್ಲ. ಆದರೆ, ೧೭೧೯ರಲ್ಲಿ ಅವರು ಬರೆದ 'ರೊಬಿನ್ಸನ್ ಕ್ರೂಸೊ'(Robinson Crusoe) ಎಂಬ ಇಂದಿಗೂ ಪ್ರಸಿದ್ಧವಾದ ಕೃತಿಯನ್ನು ರಚಿಸುವುದರ ಮೂಲಕ ತಮ್ಮ ಹೆಸರು ದೇಶಾದ್ಯಂತ ಒಡಾಡತೊಡಗಿತು. ಒಬ್ಬ ಜರ್ಮನ್ ಶೋಧನೆಕಾರನು ಈ ಕೃತಿಗೆ 'ವರ್ಲ್ಡ್ ಬುಕ್'ಎಂದು ಬಿರುದು ನೀಡಿದರು. ಅವರು ಈ ಕೀರ್ತಿಯನ್ನು ಅದರ ನಿರ್ಬಂಧ ಮಟ್ಟಕ್ಕಾಗಲೀ, ಅಳವಡಿಕೆಗಾಗಲೀ, ಅಥವ ಅದರ ಭಾಷಾಂತರಕ್ಕಾಗಲಿ ಹೀಗೆ ಕರೆಯಲಿಲ್ಲಾ, ಆದರೇ ಅದನ್ನು ಓದುವಾಗ ಪ್ರತಿಒಬ್ಬ ಓದುಗಾರನಿಗೂ ಅದರಿಂದ ಕಲಿಯಲು ಬಹಳಷ್ಟಿದೆ ಎಂಬ ಕಾರಣಕ್ಕೆ, ಹಾಗು ಡೇನಿಎಲ್‍ರವರು ಸೃಷ್ಟಿಸಿದ್ದ ಆ 'ರೋಬಿನ್ಸನ್'ಎಂಬ ಪಾತ್ರವೂ ಅಷ್ಟರ ಮಟ್ಟಿಗೆ ಜನರನ್ನು ತಲುಪಿದ ಕಾರಣಕ್ಕೆ ಇದನ್ನು 'ವರ್ಲ್ಡ್ ಬುಕ್'ಎಂದು ಕರೆಯಲಾಯಿತು. ಅದಲ್ಲದೇ, ಯಾರೆ ಈ ಪುಸ್ತಕವನ್ನು ಓದುವಾಗ ಯಾವುದಾರು ಒಂದು ಸಮಯದಲ್ಲಿ ತಮ್ಮನ್ನು ಆ ಕಥೆಯಲ್ಲಿ ಕಂಡುಕೊಳ್ಳಬಹುದಾಗಿತ್ತು. ಈ ಎಲ್ಲಾ ಕಾರಣದಿಂದಗಿ, ಈ ಪುಸ್ತವನ್ನು 'ವರ್ಲ್ಡ್ ಬುಕ್'‌ಎಂದು ಕರೆಯಲಾಯಿತು. ಇದರ ನಡುವೆ, ಡೇನಿಎಲ್‍ರವರು ೧೭೨೨ರಲ್ಲಿ ಒಂದಿಷ್ಟು ಬಹಳ ಪ್ರಸಿದ್ದವಾದ ಕೃತಿಗಳನ್ನು ಸೃಷ್ಟಿಸಿದರು. ಅದರಲ್ಲಿ 'ಮೋಲ್ ಫ್ಲಾಂಡರ್ಸ್'(Moll Flanders)(೧೭೨೨), 'ಎ ಜರ್ನಲ್ ಆಫ್ ದಿ ಪ್ಲೇಗ್ ಈಯರ್'(A Journal of The Plague Year)(೧೭೨೨), ಹಾಗು 'ಕೊಲೋನೆಲ್ ಜ್ಯಾಕ್'(Colonel Jack) ಕೆಲವು. ಈ ಕೃತಿಗಳು ಡೇನಿಎಲ್‍ರವರಿಗಿದ್ದ ಅಪ್ರತಿಮ ಕಲೆ ಹಾಗು ಮಾನವ ಕುಲದ ಒಳನೋಟದ ಬಗ್ಗೆ ಅವರಿಗಿದ್ದ ಆಸಕ್ತಿಯನ್ನು ಹೊರ ಪ್ರಪಂಚಕ್ಕೆ ತಿಳಿಸಿತು. ಅವರು ರಚಿಸುತ್ತಿದ್ದ ಕೃತಿಗಳಲ್ಲಿ ಅವರು ಬರೆಯುತ್ತಿದ್ದ ಅಥವ ಚಿತ್ರಿಸುತ್ತಿದ್ದ ಹೆಣ್ಣಿನ ಪಾತ್ರವಾಗಲಿ, ಗಂಡಿನ ಪಾತ್ರವಾಗಲಿ, ಹೊರ ಜಗತ್ತಿಗೆ ಬಹಳ ಬೇಗನೆ ತಲುಪಿತು. ಅದಲ್ಲದೇ, ಅವರು ಅನುಭವಿಸುತ್ತಿದ್ದ ಸಂಧರ್ಭಗಳು, ಕಷ್ಟಗಳು ಎಲ್ಲವೂ ಓದುಗಾರನಿಗೆ ಒಂದಲ್ಲಾ ಒಂದು ರೀತಿಯಲ್ಲಿ ಯಾವುದಾರು ಒಂದು ಸಂದೇಶ ನಿಡುವ ಮೂಲಕ ಬಹಳ ಉಪಯೋಗಕಾರಿಯಾದವು. ಮಾನವನಾಗಿ ಹುಟ್ಟಿದ ಮೇಲೆ ಎನೆಲ್ಲಾ ಕಷ್ಟಗಳನ್ನು ಅನುಭವಿಸಬೇಕೆಂದು ತಿಳಿಸುತ್ತವೆ. ಡೇನಿಎಲ್‍ರವರ ಬರವಣಿಗೆಯಲ್ಲಿ ಏನೋ ಒಂದು ರಿತಿಯ ಶಕ್ತಿ ಇದೆ ಎಂದು ಅಂದಿಗೂ ಅನಿಸಿತ್ತು, ಇಂದಿಗೂ ಅನಿಸುತ್ತದೆ. ಆದರೆ ಡಿಫೋರವರಿಗೆ ಯಾವುದೇ ತರಹದ ಪ್ರಶಸ್ತಿಗಳಾಗಲಿ, ಬಿರುದುಗಳಾಗಲಿ ದೊರೆತಿಲ್ಲಾ. ಆದರೆ ಅವರು ಇದಕ್ಕೆಲ್ಲ ಲೆಕ್ಕಿಸದೇ, ತಮ್ಮ ಬರವಣಿಗೆಯನ್ನು ಮುಂದುವರೆಸಿದರು. ಪ್ರಶಸ್ತಿಗಳಿಗೆ ಅತವಾ ಬಿರುದುಗಳಿಗೆ ಆಸೆಪಡುವ ವ್ಯಕ್ತಿತ್ವ ಇವರದಾಗಿರಲಿಲ್ಲಾ.

ಜೀವನದ ಕೊನೆಯ ದಿನಗಳು[ಬದಲಾಯಿಸಿ]

ಡೇನಿಎಲ್‍ರವರ ಪ್ರಸಿದ್ಧವಾದ ಬರವಣಿಗೆಯಿಂದಾಗಿ ಹಾಗು ಅವರ ಅಪರೂಪದ ಕಲೆ ಹಾಗು ವಿದ್ಯೆಯಿಂದಾಗಿಯು, ಅವರ ಹೆಸರು ಎಂದಿಗೂ ಶಾಷ್ವತವಾಗಿರುತ್ತದೆ. ಡೇನಿಎಲ್‍ರವರಿಗೆ ಅವರ ಬರವಣಿಗೆಯಿಂದಾಗಿ ಬಹಳಷ್ಟು ಶತ್ರುಗಳಿದ್ದರು. ಡೇನಿಎಲ್‌ರವರನ್ನು ದ್ವಂದ್ವಾರ್ಥವುಳ್ಳ ಮನುಷ್ಯನೆಂದು ಕರೆಯುತ್ತಿದ್ದರು. ಡೇನಿಎಲ್‍ರವರ ವೈಯಕ್ತಿಕ ಜೀವನದ ಬಗ್ಗೆ ಈ ವರೆಗೂ ಹೆಚ್ಚು ಮಾಹಿತಿ ತಿಳಿದುಬಂದಿಲ್ಲಾ ಆದರೆ, ಡೇನಿಎಲ್‍ರವರನ್ನು ಅವರ ಬರವಣಿಗೆಗಾಗಿ ಹಾಗು ಅವರಿಗಿದ್ದ ಬುದ್ಧಿವಂತಿಕೆಗಾಗಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಡೇನಿಎಲ್‍ರವರು ೧೭೨೪ರಲ್ಲಿ, ಅನಾರೂಗ್ಯದಿಂದ ಬಳಳುತ್ತಿದ್ದರೂ ಸಹ, 'ರೋಕ್ಸಾನ'ಎಂಬ ತಮ್ಮ ಕೊನೆಯ ಕೃತಿಯನ್ನು ಪ್ರಕಟಿಸಿದರು. ಡೇನಿಎಲ್‍ರವರು ೧೭೩೧ರ, ಎಪ್ರಿಲ್ ೨೧ ರಂದು, ಲಂಡನ್‌ನಿನಲ್ಲಿ ತಮ್ಮ ಕೊನೆ ಉಸಿರೆಳೆದರು[೧].

ಉಲ್ಲೇಖನೆಗಳು[ಬದಲಾಯಿಸಿ]

 1. https://www.theguardian.com/culture/2011/feb/22/bunhill-fields-bunyan-defoe-blake

ಹೊರಗಿನ ಸಂಪರ್ಕಗಳು[ಬದಲಾಯಿಸಿ]