ಜಬ್ಬಾರ್ ಸಮೊ ಸಂಪಾಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಬ್ಬಾರ್ ಸಮೊ ಅವರು ಓರ್ವ ಯಕ್ಷಗಾನ ಕಲಾವಿದ. ಇವರು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನು ಪ್ರತ್ಯೇಕಿಸುವ ಸಂಪಾಜೆ ಎಂಬಲ್ಲಿ ೧೯೬೩ರ ಜೂನ್ ೧ರಂದು ಜನಿಸಿದರು.[೧]

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಜಬ್ಬಾರ್ ಸಮೊ ಅವರ ತಂದೆ ಮೊಯ್ದಿನ್ ಕುಂಞ ಮತ್ತು ತಾಯಿ ಬೀಫಾತಿಮ. ಜಬ್ಬಾರ್ ಸಮೊ ಅವರು ೫ನೇ ಗಂಡುಮಗು. ೧ರಿಂದ ೫ನೇ ತರಗತಿ ವರೆಗಿನ ಶಿಕ್ಷಣವನ್ನು ಸಂಪಾಜೆಯಲ್ಲಿ ಮತ್ತು ೬ರಿಂದ ೭ಣೇ ತರಗತಿವರೆಗಿನ ಶಿಕ್ಷಣವನ್ನು ಕಲ್ಲುಗುಂಡಿಯಲ್ಲಿ ಪಡೆದರು. ಪದವಿ ಪೂರ್ವ ವಿದ್ಯಾಭ್ಯಾಸವನ್ನು ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಪಡೆದರು. ಬಾಲ್ಯದಿಂದಲೇ ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ತಮ್ಮ ತಂದೆಗೆ ಅಂಗಡಿ ವ್ಯಾಪಾರದಲ್ಲಿ ಸಹಾಯದ ಜೊತೆಯಲ್ಲಿ ಯಕ್ಷಗಾನವನ್ನು ಕಲಿತರು.

ಯಕ್ಷಗಾನ ರಂಗ[ಬದಲಾಯಿಸಿ]

ಜಬ್ಬಾರ್ ಸಮೊ ಅವರ ಯಕ್ಷಗಾನದ ಮೊದಲ ಗುರು ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್. ಆರಂಭದಲ್ಲಿ ದ್ರೋಣ, ಜಾಬಾಲಿ, ಈಶ್ವರ, ಸಂಜಯ, ಅಕ್ರೂರ, ಬ್ರಹ್ಮ, ಕಂಸ ಮಂತಾದ ವೇಷಗಳಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಿದ್ದರು. ೧೯೯೦ರಲ್ಲಿ ತಾಳಮದ್ದಳೆಯಲ್ಲಿ ಭಾಗವಹಿಸಲು ಆರಂಭಿಸಿದರು. ವಾಲಿ, ಮಾಗಧ, ಕರಣ, ಅರ್ಜುನ, ಶಲ್ಯ, ಸುಗ್ರೀವ, ಭೀಷ್ಮ, ಕೌರವ, ಶುಂಭ, ರಕ್ತಬೀಜ, ಧರ್ಮಾಂಗದ, ಭರತ, ಶತ್ರುಘ್ನ, ಹನುಮಂತ, ವೀರಮಣಿ, ಈಶ್ವರ, ಬಲರಾಮ, ರುಕ್ಮ, ಭೀಷ್ಮಕ, ಜಾಂಬವಂತ, ಸಂಜಯ, ಭೀಮ, ದೇವೇಂದ್ರ, ಭೃಗು, ತಮಾಸುರ, ಶತ್ರುಪ್ರಸೂದನ, ಬಲಿ, ಶುಕ್ರಾಚಾರ್ಯ ಮುಂತಾದ ಪಾತ್ರಗಳನ್ನು ತಾಳಮದ್ದಳೆಯಲ್ಲಿ ನಿರ್ವಹಿಸಿದ್ದಾರೆ.[೨]

ಪ್ರಶಸ್ತಿಗಳು[ಬದಲಾಯಿಸಿ]

  1. ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ[೩]
  2. ಸಂದೇಶ ಪ್ರತಿಷ್ಠಾನ ಪ್ರಶಸ್ತಿ
  3. ಬೆಂಗಳೂರು, ಮಂಗಳೂರು, ಮುಂಬಯಿ, ಹುಬ್ಬಳ್ಳಿ ಮಂತಾದ ಕಡೆಗಳಲ್ಲಿನ ಸನ್ಮಾನ ಪ್ರಶಸ್ತಿ
  4. ಆಳ್ವಾಸ್ ನುಡಿಸಿರಿ ಪ್ರಶಸ್ತಿ[೪]

ಉಲ್ಲೇಖ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://www.daijiworld.com/news/newsDisplay.aspx?newsID=401031
  2. http://www.bfirst.in/news/culture/10546/his-art-transcends-relgion[ಶಾಶ್ವತವಾಗಿ ಮಡಿದ ಕೊಂಡಿ]
  3. https://www.deccanherald.com/content/109340/44-get-district-level-rajyotsava.html
  4. "ಆರ್ಕೈವ್ ನಕಲು". Archived from the original on 2017-10-30. Retrieved 2018-11-17.