ಗೌರಿ (ರಾಗ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೌರಿ ರಾಗಿಣಿ, ಸಿ. ೧೬೮೦ 1680

ಗೌರಿ ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತದ ಒಂದು ರಾಗ.ಉತ್ತರ ಭಾರತದ ಸಿಖ್ ಸಂಪ್ರದಾಯದಲ್ಲಿ ಮತ್ತು ಸಿಖ್ ಪವಿತ್ರ ಭಾಗವಾದ ಶ್ರೀ ಗುರು ಗ್ರಂಥ ಸಾಹಿಬ್ (SGGS.) ಕಾಣಿಸಿಕೊಳ್ಳುತ್ತದೆ ಪ್ರತಿ ರಾಗವೂ ಒಂದು ಸಿದ್ದ ಚೌಕಟ್ಟು ಹೊಂದಿರುತ್ತದೆ.ಇದರಿಂದಾಗಿ ಪ್ರತೀ ರಾಗದಲ್ಲಿ ಉಪಯೋಗಿಸಬಹುದಾದ ಸ್ವರಗಳು ,ಸ್ವರಗಳ ಸಂಖ್ಯೆ,ಅವುಗಳ ನಡುವೆ ಇರುವ ಅನ್ಯೋನ್ಯತೆ ಇವುಗಳು ರಾಗ ಸಂಯೋಜನೆಯಲ್ಲಿ ಪ್ರಮುಖವಾಗುತ್ತದೆ. ಗುರು ಗ್ರಂಥ್ ಸಾಹಿಬ್ ದಲ್ಲಿ ೩೧ ರಾಗಗಳ ರಚನೆಗಳಿವೆ.ಅದರಲ್ಲಿ ಈ ರಾಗವು ೨೪ನೆಯದು. .

ಗೌರಿ ರಾಗವು ಶ್ರೀ ರಾಗ ದ ಒಂದು ರಾಗಿಣಿ (ಉಪಭಾಗ)ರಾಗವಾಗಿದೆ.ಇದು ರಾಗಮಾಲ ದಲ್ಲಿ ಕಾಣಿಸಿಕೊಳ್ಳುವ ಅನೇಕ ರಾಗಗಳಲ್ಲಿ ಒಂದಾಗಿದೆ. ಇದು ಶರತ್ಕಾಲದ ಸಂಜೆ ರಾಗವಾಗಿದೆ ಮತ್ತು ಅದರ ಮನಸ್ಥಿತಿಯು ಚಿಂತನಶೀಲ ಆಗಿದೆ. ಗೌರಿ ರಾಗದಲ್ಲಿ ಬಹಳಷ್ಟು ಸಂಯೋಜನೆಗಳು ಇವೆ . ಗೌರಿ ರಾಗವನ್ನು ಗುರು ನಾನಕ್, ಗುರು ಅಮರ್ ದಾಸ್, ಗುರು ರಾಮ್ ದಾಸ್, ಗುರು ಅರ್ಜನ್ ಮತ್ತು ಗುರು ತೇಜ್ ಬಹಾದುರ್ ಬಳಸಿದ್ದಾರೆ. ಐತಿಹಾಸಿಕವಾಗಿ ಗೌರಿನ ರಾಗದ ಹಲವು ರೂಪಾಂತರಗಳು ಅಸ್ತಿತ್ವದಲ್ಲಿವೆ.ಗೌರಿ ಚೇತಿ ,, ಗೌರಿ ಬೈರ್ಗನ್ an, ಗೌರಿ ದೀಪಕಿ , ಗೌರಿ ಪೂರ್ವಿ ದೀಪಕಿ , , ಗೌರಿ-ಮಾಜ್ , ಗೌರಿ ಮಾಳವ , ಗೌರಿ ಮಾಲಾ, ಗೌರಿ ಸೋರತ್, ಗೌರಿ ದಖ್ಖನಿ ಮುಂತಾದವುಗಳು.

  • ಆರೋಹ್ : ಸ ಗ ಮ ಧಾ ನಿ ಸ
  • ಅವರೊಹ್ :ಸ ,ನಿ ಧ ಮ ,ಪ,ಧ,ಪ, ಮ, ಗ,ಗ, ಸ, ನಿ, ಸ
  • ವಾದಿ : ರಿ
  • ಸಂವಾದಿ : ಪ

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಗುರು ಗ್ರಂಥ್ ಸಾಹಿಬ್ ನಲ್ಲಿ ರಾಗಗಳು
  • ಕೀರ್ತನ

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]