ಗುಗ್ಗುಳ ಧೂಪ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಗುಗ್ಗುಳ ಧೂಪ
Boswellia serrata (Salai) in Kinnarsani WS, AP W2 IMG 5840.jpg
in Kinnerasani Wildlife Sanctuary, ಆಂಧ್ರ ಪ್ರದೇಶ, India.
Egg fossil classification
Kingdom:
(unranked):
(unranked):
Eudicots
(unranked):
Order:
Family:
Genus:
Species:
B. serrata
Binomial nomenclature
Boswellia serrata

'ಗುಗ್ಗುಳ ಧೂಪ ಒಂದು ಮದ್ಯಮ ಪ್ರಮಾಣದ ಪರ್ಣಪಾತಿ ಮರ.ಕರ್ನಾಟಕದ ಶುಷ್ಕ ವಾತಾವರಣದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಗುಗ್ಗುಳದ ಮರ ಬರ್ಸೆರೇಸೀ ಕುಟುಂಬಕ್ಕೆ ಸೇರಿದ ಬಾಸ್ವೆಲಿಯ ಸೆರ್ರೇಟ ಎಂಬ ವೈಜ್ಞಾನಿಕ ಹೆಸರುಳ್ಳ ಒಂದು ಮರ. 'ಮಡ್ಡಿ ಮರ' ಇದರ ಪರ್ಯಾಯ ಹೆಸರು. ಭಾರತದಲ್ಲಿ ಬಿಹಾರ, ಒಡಿಶಾ, ರಾಜಾಸ್ತಾನ ಮತ್ತು ಪೂರ್ವ ಪ್ರಾಂತ್ಯಗಳ ಒಣ ಹವೆಯಿರುವ ಬೆಟ್ಟಗಾಡುಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಸುಮಾರು 7-9 ಮೀ ಎತ್ತರಕ್ಕೆ ಬೆಳೆಯುವ ಮರ ಇದು. ಮುಖ್ಯ ಕಾಂಡವೇ ಸಾಮಾನ್ಯವಾಗಿ 4-5 ಮೀ ಉದ್ದ ಇರುತ್ತದೆ. ಎಲೆಗಳು ಸಂಯುಕ್ತ ಮಾದರಿಯವು. ಎಲೆಗಳ ಮೇಲೆಲ್ಲ ತುಪ್ಪಳದಂಥ ಕೂದಲುಗಳ ಹೊದಿಕೆ ಉಂಟು. ಎಲೆಗಳ ಅಂಚು ಗರಗಸ ದಂತೆ ಇದೆ.

ಗುಗ್ಗುಳದ ಮರದ ವಿಶೇಷತೆ[ಬದಲಾಯಿಸಿ]

  • ಗುಗ್ಗುಳದ ಮರದ ಕಾಂಡದಿಂದ ಪಾರದರ್ಶಕವಾದ ಅಂಟುದ್ರವ ಸ್ರವಿಸುತ್ತದೆ. ಇದನ್ನು 'ಗುಗ್ಗುಳ' ಎಂದು ಕರೆಯುತ್ತಾರೆ. ಸುವಾಸನೆಯುಳ್ಳ ಈ ದ್ರವ ತೆಳುಹಳದಿ ಬಣ್ಣದ್ದು. ಗಾಳಿಯ ಸಂಪರ್ಕಕ್ಕೆ ಬಂದಾಗ ನಿಧಾನವಾಗಿ ಗಟ್ಟಿಯಾಗುತ್ತದೆ. ಒಂದು ಮರದಿಂದ ವರ್ಷಕ್ಕೆ ಸುಮಾರು ಎರಡು ಪೌಂಡುಗಳಷ್ಟು ಗುಗ್ಗುಳ ದೊರೆಯುತ್ತದೆ. ಸಾಮಾನ್ಯವಾಗಿ 75 ಸೆಂ.ಮೀ ಮತ್ತು ಅದಕ್ಕಿಂತ ಹೆಚ್ಚು ದಪ್ಪದ ಕಾಂಡಗಳಿರುವ ಮರಗಳಿಂದ ಗುಗ್ಗುಳವನ್ನು ತೆಗೆಯುತ್ತಾರೆ.
  • ಗುಗ್ಗುಳವನ್ನು ತೆಗೆಯಲು ಸುಮಾರು 30 ಸೆಂಮೀ ಗಳಷ್ಟು ಅಗಲದ ತೊಗಟೆಯನ್ನು ಮರದ ಬುಡದಿಂದ 60-75 ಸೆಂಮೀ ಗಳ ಎತ್ತರದಲ್ಲಿ ಕೆತ್ತುತ್ತಾರೆ. ಇದರಿಂದ ಸ್ರವಿಸುವ ಅಂಟು ದ್ರವವನ್ನು ಶೇಖರಿಸುತ್ತಾರೆ. ಅಂಟನ್ನು ತೆಗೆಯುವ ಕಾಲ ನವೆಂಬರಿನಿಂದ ಜುಲೈವರೆಗೆ. ಗುಗ್ಗುಳವನ್ನು ಧೂಪ ಹಾಕಲು ಬಳಸುತ್ತಾರೆ. ಗುಗ್ಗುಳದಲ್ಲಿ ಶೇ. 10-11ರಷ್ಟು ತೇವಾಂಶ. ಶೇ. 8-9ರಷ್ಟು ಚಂಚಲ ತೈಲ, ಶೇ. 55-57ರಷ್ಟು ರಾಳ ಮತ್ತು ಶೇ. 4-5ರಷ್ಟು ಕರಗದಿರುವ ವಸ್ತುಗಳಿವೆ.
  • ಗುಗ್ಗುಳದಲ್ಲಿ ಕೆಲವು ಉಪಯುಕ್ತ ಸಾರತೈಲಗಳಿರುವುದರಿಂದ ಇದನ್ನು ಸಂಧಿವಾತ ಮತ್ತು ನರದೌರ್ಬಲ್ಯಗಳನ್ನು ಗುಣಪಡಿಸಲು ಆಯುರ್ವೇದ ಚಿಕಿತ್ಸೆಗಳಲ್ಲಿ ಉಪಯೋಗಿಸುತ್ತಾರೆ. ಗುಗ್ಗುಳದ ಮರದ ಚೌಬೀನೆ ಮೃದುವಾಗಿಯೂ ಸಾಕಷ್ಟು ಗಟ್ಟಿಯಾಗಿಯೂ ಇರುವುದರಿಂದ ಹಲಗೆ, ಸಾಧಾರಣ ದರ್ಜೆಯ ಪೀಠೋಪಕರಣಗಳು, ಪೆಟ್ಟಿಗೆಗಳು, ಎರಡನೆಯ ದರ್ಜೆಯ ಪ್ಲೈವುಡ್ ಮುಂತಾದವನ್ನು ತಯಾರಿಸಲು ಬಳಸುತ್ತಾರೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಬುರ್ಸೆರೆಸಿ(Burseraceae) ಕುಟುಂಬಕ್ಕೆ ಸೇರಿದ್ದು,ಬೊಸ್ವೆಲ್ಲಿಯ ಸೆರ್ರಟ (Boswellia Serrata)ಎಂದು ಸಸ್ಯಶಾಸ್ತ್ರೀಯ ಹೆಸರು.

ಸಸ್ಯ ಗುಣಲಕ್ಷಣಗಳು[ಬದಲಾಯಿಸಿ]

ತೆಳು ಹಂದರ.ತೊಗಟೆ ಎಳೆ ಹಸಿರು ಅಥವಾ ಬೂದು ಬಣ್ಣವಿದ್ದು,ನಯವಾದ ಹೊಪ್ಪಳಿಕೆ ಬರುವುದು.ದಾರುವು ಸಾದಾರಣ ಗಡಸು.ತೊಗಟೆಯನ್ನು ಕೆತ್ತಿದಾಗ ರಾಳವು ಸಿಗುವುದು.

ಉಪಯೋಗಗಳು[ಬದಲಾಯಿಸಿ]

ದಾರುವು ಸಾದಾರಣ ಬಾಳಿಕೆಯದಾದುದರಿಂದ ತಾತ್ಕಾಲಿಕ ಸ್ವರೂಪದ ರಚನೆಗಳಿಗೆ ಉಪಯುಕ್ತ.ಹಲಗೆಗಳಿಗೆ,ಬೆಂಕಿಕಡ್ಡಿ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.

ಅಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ