ವಿಷಯಕ್ಕೆ ಹೋಗು

ಉಳುಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಳುಕಿರುವ ಗುಲ್ಫ/ಕಣಕಾಲಿಗೆ ಮೂಗೇಟು ಮತ್ತು ಊತವಾಗಿದೆ

ಉಳುಕನ್ನು ಹರಿದ ಅಸ್ಥಿರಜ್ಜು ಎಂದು ಕರೆಯುತ್ತಾರೆ.

ಉಳುಕಿನಲ್ಲಿ ನಾನಾ ವಿಧಗಳಿವೆ. ಜಾಸ್ತಿ ಪ್ರಮಾಣದ ಒತ್ತಡ ಮೂಳೆಯ ಮೇಲೆ ಬೀಳುವುದರಿಂದ ಆಗುವುದು ಸಾಮಾನ್ಯವಾದ ಉಳುಕಾಗಿದೆ ಮತ್ತು ಇದನ್ನು ನಾನಾ ರೀತಿಯಲ್ಲಿ ಗುಣಪಡಿಸಬಹುದು. ಆಟವಾಡುವಾಗ, ಅಪಘಾತದಿಂದ ಅಥವಾ ಎಲ್ಲಿಂದನಾದರೂ ಬಿದ್ದಾಗ ಉಳುಕಾಗುತ್ತದ. ಉಳುಕು ಆದ ಮನುಷ್ಯನಿಗೆ ತಕ್ಷಣವೇ ಪ್ರಥಮಚಿಕಿತ್ಸೆ ನೀಡುವುದು ಅಗತ್ಯ. ಕೆಲವು ಬಾರಿ ಉಳುಕು ಕ್ಯಾನ್ಸರ್ ರೂಪವಾಗಿ ಬದಲಾಗುತ್ತದೆ. ಉಳುಕನ್ನು ಕ್ಷಕಿರಣದ ಮೂಲಕ ತಿಳಿಯಬಹುದು. ಉಳುಕು ಗುಣವಾಗಲು ಜಾಸ್ತಿ ಸಮಯ ತೆಗೆದುಕೂಳ್ಳುತ್ತದೆ. ಕೆಲವುಬಾರಿ ಉಳುಕು ರಕ್ತ ಪರಿಚಲನೆಯನ್ನು ನಿಲ್ಲಿಸುತ್ತದೆ ಹಾಗೂ ರಕ್ತಸ್ರಾವವನ್ನು ಉಂಟುಮಾಡುತ್ತದೆ. ದೇಹದ ಮೂಳೆಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದಾಗ ಉಳುಕು ಉಂಟಾಗುತ್ತದೆ.

ಆಯುರ್ವೇದ ಚಿಕಿತ್ಸೆ

[ಬದಲಾಯಿಸಿ]

ಉಳುಕನ್ನು ಆರ್ಯುವೇದದಿಂದ ಮತ್ತು ಅಲೋಪತಿಯಿಂದಲೂ ಗುಣಪಡಿಸಬಹುದು. ದಕ್ಷಿಣ ಭಾರತದಲ್ಲಿ ಪುತ್ತುರು ಕಟ್ಟು ಎನ್ನುವ ಆರ್ಯುವೇದದ ಔಷಧಿ ತುಂಬ ಪುರಾತನವಾದದ್ದು. ಇದನ್ನು ಕೆಸರಾಜು ಎಂಬುವರು ೧೮೮೧ ರಲ್ಲಿ ಕಂಡುಹಿಡಿದರು ಮತ್ತು ಇದು ಅವರ ವಂಶಸ್ಥರಿಂದ ಬಂದಿದೆ. ಇದನ್ನು ಆಂದ್ರ ಪ್ರದೇಶಿನ ಪುತ್ತುರು ಎಂಬ ಊರಿನಲ್ಲಿ ನೋಡಬಹುದು. ಪ್ರತಿದಿನ ೨೦೦-೩೦೦ ತನಕ ರೋಗಿಗಳು ಈ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ನಮ್ಮ ದೇಶದಲ್ಲಿ ೭೦,೦೦೦ ಪುರಾತನವಾದ ಔಷಧಿಗಳಿಂದ ಉಳುಕನ್ನು ಗುಣಪಡಿಸುತ್ತಾರೆ. ಉಳುಕನ್ನು ಗುಣಪಡಿಸುವ ಮುಖ್ಯ ಪ್ರದೇಶಗಳಾದ- ತಮಿಳುನಾಡು, ಪಾಂಡಿಚೆರಿ, ಕೇರಳ ಮತ್ತು ಕರ್ನಾಟಕ. ಆದರೆ ಆರ್ಯುವೇದದ ವಿದ್ಯಾಭ್ಯಾಸ ಕಡಿಮೆಯಾಗಿರುವುದರಿಂದ ಮತ್ತು ಇತ್ತಿಚಿಗೆ ಯಾರು ಆರ್ಯುವೇದವನ್ನು ಓದದಿರುವ ಕಾರಣದಿಂದ ಆರ್ಯುವೇದದ ಚಿಕಿತ್ಸೆ ಕಡಿಮೆಯಾಗಿದೆ.

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಉಳುಕು&oldid=1002618" ಇಂದ ಪಡೆಯಲ್ಪಟ್ಟಿದೆ