ಗರಗಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Crosscut saw.JPG

ಗರಗಸವು (ಕ್ರಕಚ) ಗಡುಸಾದ ಹಲ್ಲುಗಳುಳ್ಳ ಅಂಚಿರುವ ಕಠಿಣ ಅಲಗು, ತಂತಿ, ಅಥವಾ ಸರಪಳಿಯನ್ನು ಹೊಂದಿರುವ ಒಂದು ಉಪಕರಣ. ಇದನ್ನು ವಸ್ತುವನ್ನು ಕತ್ತರಿಸಲು ಬಳಸಲಾಗುತ್ತದೆ, ಬಹಳವೇಳೆ ಕಟ್ಟಿಗೆ ಆದರೆ ಕೆಲವೊಮ್ಮೆ ಲೋಹ ಅಥವಾ ಕಲ್ಲು. ವಸ್ತುವಿಗೆ ಎದುರಾಗಿ ತಗಲುವಂತೆ ಹಲ್ಲುಗಳುಳ್ಳ ಅಂಚನ್ನು ಇರಿಸಿ, ಅದನ್ನು ಮುಂದಕ್ಕೆ ಬಲಯುತವಾಗಿ ಹಾಗೂ ಹಿಂದಿಕ್ಕಿನಲ್ಲಿ ಕಡಿಮೆ ಬಲಯುತವಾಗಿ ಅಥವಾ ನಿಲ್ಲಿಸದಂತೆ ಮುಂದಿಕ್ಕಿನಲ್ಲಿ ಚಲಿಸಿ ಕಾಟನ್ನು ಮಾಡಲಾಗುತ್ತದೆ. ಈ ಬಲವನ್ನು ಕೈಯಿಂದ ಪ್ರಯೋಗಿಸಬಹುದು ಅಥವಾ ಇದು ಆವಿ, ನೀರು, ವಿದ್ಯುಚ್ಛಕ್ತಿ, ಅಥವಾ ಇತರ ಶಕ್ತಿ ಮೂಲದಿಂದ ಚಾಲಿತವಾಗಿರಬಹುದು. ಅಪಘರ್ಷಕ ಗರಗಸವು ಲೋಹ ಅಥವಾ ಪಿಂಗಣಿ ವಸ್ತುವನ್ನು ಕತ್ತರಿಸಲು ವಿನ್ಯಾಸಗೊಳಿಸಲಾದ ಶಕ್ತಿಹೊಂದಿರುವ ವೃತ್ತಾಕಾರದ ಅಲಗನ್ನು ಹೊಂದಿರುತ್ತದೆ. ಬಹುತೇಕ ಅಲಗುಗಳ ಹಲ್ಲುಗಳನ್ನು ಉಪಕರಣದ ಉಕ್ಕು ಅಥವಾ ಕಾರ್ಬೈಡಿನಿಂದ ತಯಾರಿಸಲಾಗುತ್ತದೆ. ಸತುವು ಅಥವಾ ತಾಮ್ರವನ್ನು ಕೇವಲ ಉಪ್ಪಿನ ಖಂಡಗಳನ್ನು ಕತ್ತರಿಸಲು ತಯಾರಿಸಲಾದ ಗರಗಸಗಳಿಗೆ ಬಳಸಲಾಗುತ್ತದೆ, ಪೂರ್ವದಲ್ಲಿ ಅಡುಗೆಮನೆಗಳಲ್ಲಿ ಬಳಸಲ್ಪಡುತ್ತಿದ್ದವು.

"https://kn.wikipedia.org/w/index.php?title=ಗರಗಸ&oldid=892394" ಇಂದ ಪಡೆಯಲ್ಪಟ್ಟಿದೆ