ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
{{{awardname}}}
ಪ್ರಶಸ್ತಿಯ ವಿವರ
ವರ್ಗ ಕನ್ನಡ ಚಿತ್ರರಂಗ
ಪ್ರಾರಂಭವಾದದ್ದು 1966
ಮೊದಲ ಪ್ರಶಸ್ತಿ 1966-67
ಕಡೆಯ ಪ್ರಶಸ್ತಿ 2016
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ಹಿಂದಿನ ಹೆಸರು(ಗಳು) ಮೈಸೂರು ರಾಜ್ಯ ಚಿತ್ರ ಪ್ರಶಸ್ತಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಕರ್ನಾಟಕದಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ನೀಡಲಾಗುವ ಅತ್ಯಂತ ಗಮನಾರ್ಹ ಮತ್ತು ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಾಗಿವೆ. ಇವುಗಳನ್ನು ಕನ್ನಡ ಭಾಷಾ ಚಲನಚಿತ್ರಗಳಿಗೆ ಅತ್ಯುನ್ನತ ಪ್ರಶಸ್ತಿಗಳೆಂದು ಪರಿಗಣಿಸಲಾಗಿದೆ. ಚಿತ್ರರಂಗದ ಉತ್ತಮ ಪ್ರತಿಭೆಗಳನ್ನು ಮತ್ತು ಚಿತ್ರಗಳನ್ನು ಗುರುತಿಸಿ ಈ ಗೌರವ ಸಲ್ಲಿಸಲಾಗುವುದು.

ಕನ್ನಡ ಚಿತ್ರರಂಗದ ಆಯ್ಕೆಯಾದ ಪ್ರಸಿದ್ಧ ವ್ಯಕ್ತಿಗಳ ಆಯ್ಕೆ ಸಮಿತಿಯಿಂದ ಪ್ರಶಸ್ತಿಗಳನ್ನು ನಿರ್ಧರಿಸಲಾಗುತ್ತದೆ. ಪ್ರಶಸ್ತಿಗಳು ಕಲಾತ್ಮಕ ಮೌಲ್ಯಗಳೊಂದಿಗೆ ಚಲನಚಿತ್ರಗಳನ್ನು ಉತ್ತೇಜಿಸಲು ಮತ್ತು ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರನ್ನು ಉತ್ತೇಜಿಸಲು ಉದ್ದೇಶಿಸಿದೆ. ಪ್ರಶಸ್ತಿಗಳನ್ನು ಸಾಂಸ್ಕೃತಿಕ ವ್ಯವಹಾರಗಳ ಮಂತ್ರಿಯವರು ಘೋಷಿಸುತ್ತಾರೆ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನಿಸುತ್ತಾರೆ.

ಪ್ರಶಸ್ತಿಗಳು[ಬದಲಾಯಿಸಿ]

 • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಚಿತ್ರ ಪ್ರಶಸ್ತಿ

  • ನಾಲ್ಕನೇ ಅತ್ಯುತ್ತಮ ಚಿತ್ರ

 • ಅತ್ಯುತ್ತಮ ಸಾಮಾಜಿಕ ಚಿತ್ರ

 • ಅತ್ಯುತ್ತಮ ಮಕ್ಕಳ ಚಿತ್ರ

 • ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ

 • ಅತ್ಯುತ್ತಮ ಮನರಂಜನಾ ಚಿತ್ರ

 • ಚೊಚ್ಚಲ ನಿರ್ದೇಶನದ ಅತ್ಯುತ್ತಮ ಚಿತ್ರ

 • ಅತ್ಯುತ್ತಮ ನಿರ್ದೇಶನ

 • ಅತ್ಯುತ್ತಮ ನಟ

 • ಅತ್ಯುತ್ತಮ ನಟಿ

 • ಅತ್ಯುತ್ತಮ ಪೋಷಕ ನಟ

 • ಅತ್ಯುತ್ತಮ ಪೋಷಕ ನಟಿ

 • ಅತ್ಯುತ್ತಮ ಬಾಲನಟ

 • ಅತ್ಯುತ್ತಮ ಬಾಲನಟಿ

 • ಅತ್ಯುತ್ತಮ ಸಂಗೀತ ನಿರ್ದೇಶನ

 • ಅತ್ಯುತ್ತಮ ಹಿನ್ನೆಲೆ ಗಾಯಕ

 • ಅತ್ಯುತ್ತಮ ಹಿನ್ನೆಲೆ ಗಾಯಕಿ

 • ಅತ್ಯುತ್ತಮ ಕಂಠದಾನ ಕಲಾವಿದ

 • ಅತ್ಯುತ್ತಮ ಕಂಠದಾನ ಕಲಾವಿದೆ

 • ಅತ್ಯುತ್ತಮ ಛಾಯಾಗ್ರಹಣ

 • ಅತ್ಯುತ್ತಮ ಸಂಕಲನ

 • ಅತ್ಯುತ್ತಮ ಗೀತರಚನೆ

 • ಅತ್ಯುತ್ತಮ ಶಬ್ದಗ್ರಹಣ

 • ಅತ್ಯುತ್ತಮ ಕಲಾ ನಿರ್ದೇಶನ

 • ಅತ್ಯುತ್ತಮ ಕಥೆ

 • ಅತ್ಯುತ್ತಮ ಚಿತ್ರಕಥೆ

 • ಅತ್ಯುತ್ತಮ ಸಂಭಾಷಣೆ

 • ಜೀವಿತಾವಧಿ ಕೊಡುಗೆಯ ವಿಶೇಷ ಪ್ರಶಸ್ತಿ

 • ಜ್ಯೂರಿಯ ವಿಶೇಷ ಪ್ರಶಸ್ತಿ

 • ಅತ್ಯುತ್ತಮ ಸಿನಿಮಾ ಪುಸ್ತಕ

 • ಅತ್ಯುತ್ತಮ ಕಿರುಚಿತ್ರ

 • ಪುಟ್ಟಣ್ಣ ಕಣಗಾಲ್ ಪ್ರಶಸ್ತಿ

 • ಡಾ. ರಾಜಕುಮಾರ್ ಪ್ರಶಸ್ತಿ

 • ಡಾ. ವಿಷ್ಣುವರ್ಧನ್ ಪ್ರಶಸ್ತಿ

ವರ್ಷವಾರು ಅತಿ ಹೆಚ್ಚು ಪ್ರಶಸ್ತಿ ಪಡೆದ ಚಿತ್ರಗಳು[ಬದಲಾಯಿಸಿ]

ವರ್ಷ ಚಿತ್ರ (ಗಳು) ಪ್ರಶಸ್ತಿಗಳು
1967–68 ಸರ್ವಮಂಗಳಾ 3
ಬೆಳ್ಳಿಮೋಡ 7
1968–69 ಮಾರ್ಗದರ್ಶಿ 3
ನಮ್ಮ ಮಕ್ಕಳು 4
ಹಣ್ಣೆಲೆ ಚಿಗುರಿದಾಗ 5
1969–70 ಶ್ರೀ ಕೃಷ್ಣದೇವರಾಯ 3
ಗೆಜ್ಜೆಪೂಜೆ 5
1970–71 ಶರಪಂಜರ 3
ಸಂಸ್ಕಾರ 4
ಕುಲಗೌರವ 5
1971–72 ಬಂಗಾರದ ಮನುಷ್ಯ 5
ವಂಶವೃಕ್ಷ 6
1972–73 ಸಂಕಲ್ಪ 6
ನಾಗರಹಾವು 8
1973–74 ಭೂತಯ್ಯನ ಮಗ ಅಯ್ಯು 4
ಕಾಡು 5
1974–75 ಭಕ್ತ ಕುಂಬಾರ 3
ಕಂಕಣ 5
ಉಪಾಸನೆ 6
1975–76 ಕಥಾಸಂಗಮ, ಹಂಸಗೀತೆ 3
ಪ್ರೇಮದ ಕಾಣಿಕೆ 4
ಚೋಮನ ದುಡಿ 6
1976–77 ಋಷ್ಯಶೃಂಗ, ಕಾಕನಕೋಟೆ 3
ಪಲ್ಲವಿ 4
1977–78 ಘಟಶ್ರಾದ್ಧ 4
ಸ್ಪಂದನ 5
1978–79 ಒಂದಾನೊಂದು ಕಾಲದಲ್ಲಿ, ಪರಸಂಗದ ಗೆಂಡೆತಿಮ್ಮ 3
1979–80 ಮಿಂಚಿನ ಓಟ 7
1980–81 ರಂಗನಾಯಕಿ 3
ಮೂರು ದಾರಿಗಳು 4
ಸಂಗೀತ 5
1981–82 ಅಂತ 3
1982–83 ಹಾಲು ಜೇನು, ಫಣಿಯಮ್ಮ, ಪಲ್ಲವಿ ಅನುಪಲ್ಲವಿ 3
1983–84 ಅನುಭವ, ಅಮೃತ ಘಳಿಗೆ 3
1984–85 ಅವಳ ಅಂತರಂಗ 4
ಆಕ್ಸಿಡೆಂಟ್ 5
1985–86 ಧ್ರುವತಾರೆ, ತುಳಸೀದಳ 3
ಹೊಸ ನೀರು 4
ಮಸಣದ ಹೂವು 6
1986–87 ತಬರನ ಕಥೆ 6
1987–88 ಪುಷ್ಪಕ ವಿಮಾನ, ಅವಸ್ಥೆ 3
ಆಸ್ಫೋಟ 4
1988–89 ಬೆಳ್ಳಿ ಬೆಳಕು, ಸಂಕ್ರಾಂತಿ 3
1989–90 ಸಂತ ಶಿಶುನಾಳ ಶರೀಫ, ಪಂಚಮವೇದ 3
ಮನೆ 4
1990–91 ಮುತ್ತಿನ ಹಾರ, ಕ್ರಮ, ಭುಜಂಗಯ್ಯನ ದಶಾವತಾರ 3
1991–92 ಪತೀತ ಪಾವನಿ 4
ಮೈಸೂರು ಮಲ್ಲಿಗೆ 5
1992–93 ಜೀವನ ಚೈತ್ರ 4
ಆತಂಕ 6
1993–94 ನಿಷ್ಕರ್ಷ 3
ಚಿನ್ನಾರಿ ಮುತ್ತ 4
1994–95 ಅರಗಿಣಿ, ಕೊಟ್ರೇಶಿ ಕನಸು 3
ಗಂಗವ್ವ ಗಂಗಾಮಾಯಿ 4
1995–96 ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ, ಬೆಳದಿಂಗಳ ಬಾಲೆ, ಸಿಪಾಯಿ 3
ಓಂ 4