ನಾಗರಹಾವು (ಚಲನಚಿತ್ರ ೧೯೭೨)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಗರಹಾವು (ಚಲನಚಿತ್ರ ೧೯೭೨)
ನಾಗರಹಾವು
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಎನ್.ವೀರಾಸ್ವಾಮಿ
ಚಿತ್ರಕಥೆಪುಟ್ಟಣ್ಣ ಕಣಗಾಲ್
ಕಥೆತ.ರಾ.ಸುಬ್ಬರಾಯ
ಪಾತ್ರವರ್ಗವಿಷ್ಣುವರ್ಧನ್ ಆರತಿ ಶುಭ, ಲೀಲಾವತಿ, ಅಶ್ವಥ್, ಶಿವರಾಂ, ಅಂಬರೀಶ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಚಿಟ್ಟಿಬಾಬು
ಸಂಕಲನವಿ.ಪಿ.ಕೃಷ್ಣ
ಬಿಡುಗಡೆಯಾಗಿದ್ದು೧೯೭೨
ಚಿತ್ರ ನಿರ್ಮಾಣ ಸಂಸ್ಥೆಈಶ್ವರಿ ಪ್ರೊಡಕ್ಷನ್ಸ್
ಸಾಹಿತ್ಯವಿಜಯನಾರಸಿಂಹ, ಆರ್.ಎನ್.ಜಯಗೋಪಾಲ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲ


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ಬಾರೆ ಬಾರೆ ವಿಜಯ ನಾರಸಿಂಹ ಪಿ.ಬಿ.ಶ್ರೀನಿವಾಸ್
ಕನ್ನಡ ನಾಡಿನ ಪಿ.ಬಿ.ಶ್ರೀನಿವಾಸ್
ಸಂಗಮ ಸಂಗಮ ವಿಜಯ ನಾರಸಿಂಹ ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ
ಕಥೆ ಹೇಳುವೆ ಆರ್.ಎನ್.ಜಯಗೋಪಾಲ್ ಪಿ.ಸುಶೀಲ
ಹಾವಿನ ದ್ವೇಷ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಕರ್ಪೂರದ ಗೊಂಬೆ ನಾನು ಆರ್.ಎನ್.ಜಯಗೋಪಾಲ್ ಪಿ.ಸುಶೀಲ

ನಾಗರಹಾವು - ೧೯೭೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಖ್ಯಾತಸಾಹಿತಿ, ಕಾದಂಬರಿಕಾರ ತ.ರಾ.ಸುಬ್ಬರಾಯರು ಬರೆದಿರುವ ನಾಗರಹಾವು ಕಾದಂಬರಿ ಆಧಾರಿತವಾದ ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದಾರೆ.

ಪಾತ್ರವರ್ಗ[ಬದಲಾಯಿಸಿ]

ಸ್ವಾರಸ್ಯ[ಬದಲಾಯಿಸಿ]

  • ನಾಯಕನಾಗಿ ವಿಷ್ಣುವರ್ಧನ್ ಅವರ ಮೊದಲ ಚಿತ್ರ
  • ಅಂಬರೀಶ್ ಅಭಿನಯದ ಮೊದಲ ಚಲನಚಿತ್ರ
  • ಅಂಬರೀಶ್ ಅಭಿನಯದ 'ಜಲೀಲ್' ಪಾತ್ರಕ್ಕೆ ರಜನೀಕಾಂತ್ ಆಯ್ಕೆಯಾಗಿದ್ದರು. ಹಲವಾರು ದೃಶ್ಯಗಳ ಚಿತ್ರೀಕರಣ ನಡೆದಿತ್ತು. ನಂತರ ಕಾರಣಾಂತರಗಳಿಂದ ರಜನೀಕಾಂತ್ ಬದಲು ಅಂಬರೀಶ್ ಆ ಪಾತ್ರದಲ್ಲಿ ನಟಿಸಿದರು.
  • ಸ್ಲೋ ಮೋಶನ್ ಕ್ಯಾಮರದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ.
  • ಬೆಂಗಳೂರಿನ ೩ ಚಿತ್ರಮಂದಿರಗಳಲ್ಲಿ ಏಕ ಕಾಲಕ್ಕೆ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರ.
  • ತ.ರಾ.ಸು. ಅವರ ಮೂರು ಕಾದಂಬರಿಗಳನ್ನು (ಸರ್ಪ ಮತ್ಸರ, ಒಂದು ಗಂ‍ಡು ಎರಡು ಹೆಣ್ಣು, ನಾಗರ ಹಾವು) ಸೇರಿ ತಯಾರಿಸಿದ ಚಿತ್ರ.