ವಿಷಯಕ್ಕೆ ಹೋಗು

ಕರ್ನಾಟಕದಲ್ಲಿ ತಂತ್ರಾಂಶ (ಸಾಫ್ಟ್ ವೇರ್) ಉದ್ಯಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತತದಲ್ಲಿನ ಕರ್ನಾಟಕ ರಾಜ್ಯದ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭಗಳಲ್ಲಿ ಸಾಫ್ಟ್‌ವೇರ್ ಉದ್ಯಮವು ಒಂದಾಗಿದೆ. ಸಾಫ್ಟ್‌ವೇರ್ ರಫ್ತಿನಿಂದ ಉತ್ಪತ್ತಿಯಾಗುವ ಆದಾಯದ ವಿಷಯದಲ್ಲಿ ಕರ್ನಾಟಕವು ಭಾರತದ ಎಲ್ಲಾ ರಾಜ್ಯಗಳಲ್ಲಿಯೇ ಮೊದಲ ಸ್ಥಾನವನ್ನು ಹೊಂದಿದೆ. 2018-19 ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿನ ಎಲ್ಲಾ ಸಾಫ್ಟ್‌ವೇರ್ ರಫ್ತುಗಳಲ್ಲಿ ಕರ್ನಾಟಕದ ಪಾಲು 41.6% ರಷ್ಟಿದೆ. [] ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ಧಿ ಹೊಂದಿದೆ, [] 2016-17 ರ ಆರ್ಥಿಕ ವರ್ಷದಲ್ಲಿ $45 ಶತಕೋಟಿ ಮೌಲ್ಯದ ಒಟ್ಟು IT ರಫ್ತುಗಳೊಂದಿಗೆ, 10 ಲಕ್ಷ ಜನರಿಗೆ ನೇರವಾಗಿ ಮತ್ತು 30 ಲಕ್ಷ ಜನರಿಗೆ ಪರೋಕ್ಷವಾಗಿ ಉದ್ಯೋಗ ನೀಡಿದೆ. [] ಬಹುತೇಕ ಸಾಫ್ಟ್‌ವೇರ್ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಗೊಂಡಿವೆಯಾದರೂ, ಕೆಲವು ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಕರ್ನಾಟಕದ ಹುಬ್ಬಳ್ಳಿಯಂತಹ ಇತರ ನಗರಗಳಲ್ಲಿ ನೆಲೆಗೊಂಡಿವೆ. [] ಕರ್ನಾಟಕದಲ್ಲಿ ಸಾಫ್ಟ್‌ವೇರ್ ಉದ್ಯಮಗಳನ್ನು ಸ್ಥಾಪಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಎಸ್‌ಟಿಪಿಐ ಒದಗಿಸುತ್ತದೆ . ಕರ್ನಾಟಕದ ಸಾಫ್ಟ್‌ವೇರ್ ಉದ್ಯಮವು ದೂರಸಂಪರ್ಕ, ಬ್ಯಾಂಕಿಂಗ್ ಸಾಫ್ಟ್‌ವೇರ್, ಏವಿಯಾನಿಕ್ಸ್, ಡೇಟಾಬೇಸ್, ಆಟೋಮೋಟಿವ್, ನೆಟ್‌ವರ್ಕಿಂಗ್, ಸೆಮಿಕಂಡಕ್ಟರ್‌ಗಳು, ಮೊಬೈಲ್ ಹ್ಯಾಂಡ್‌ಸೆಟ್‌ಗಳು, ಇಂಟರ್ನೆಟ್ ಅಪ್ಲಿಕೇಶನ್‌ಗಳು ಮತ್ತು ವ್ಯವಹಾರ ಪ್ರಕ್ರಿಯೆಯ ಹೊರಗುತ್ತಿಗೆ ಇತ್ಯಾದಿ ಕ್ಷೇತ್ರಗಳೊಂದಿಗೆ ವ್ಯವಹರಿಸುವ ಕಂಪನಿಗಳನ್ನು ಒಳಗೊಂಡಿದೆ.

ದೇವನಹಳ್ಳಿಯ ಹೊರವಲಯದಲ್ಲಿರುವ ನಂದಿ ಬೆಟ್ಟಗಳ ಪ್ರದೇಶವು ಮುಂಬರುವ ದಿನಗಳಲ್ಲಿ $22 ಬಿಲಿಯನ್, 12,000-acre (49 km2) BIAL IT ಹೂಡಿಕೆ ಪ್ರದೇಶವಾಗಿ ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಲಿದೆ. [] ಈ ಯೋಜನೆಯು 2030 ರ ವೇಳೆಗೆ ನಾಲ್ಕು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

1980 ರ ದಶಕದಲ್ಲಿ ಕರ್ನಾಟಕವು ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ಹೊರಹೊಮ್ಮಿತು. [] ಕರ್ನಾಟಕದಲ್ಲಿ ಒಟ್ಟು 1973 ಕಂಪನಿಗಳಿದ್ದುಬೆಂಗಳೂರಿನಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿರುವ ಇನ್ಫೋಸಿಸ್ ಮತ್ತು ವಿಪ್ರೋನಂತಹ ದೊಡ್ಡ ಸಂಸ್ಥೆಗಳು [] ಸೇರಿದಂತೆ ಹಲವು ಕಂಪೆನಿಗಳು ಮಾಹಿತಿ ತಂತ್ರಜ್ಞಾನ ಸಂಬಂಧಿತ ವ್ಯವಹಾರದಲ್ಲಿ ತೊಡಗಿಕೊಂಡಿವೆ []. 1985 ರಲ್ಲಿ[] ಬೆಂಗಳೂರಿನ ಸೋನಾ ಟವರ್, ಮಿಲ್ಲರ್ಸ್ ರೋಡ್ ನಲ್ಲಿದ್ದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮೊದಲ ಬಹುರಾಷ್ಟ್ರೀಯ ನೆಲೆಯನ್ನು ಸ್ಥಾಪಿಸುವ ಮೂಲಕ ಕರ್ನಾಟಕದಲ್ಲಿ ಸಾಫ್ಟ್ ವೇರ್ ಉದ್ಯಮದ ಬೆಳವಣಿಗೆಯ ಮೂಲ ಪ್ರವೇಶವಾಯಿತೆಂದು ತೋರುತ್ತದೆ. 1980 ರ ದಶಕದ ಆರಂಭದಲ್ಲಿ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಭಾರತದಲ್ಲಿ ತಮ್ಮ ಸಾಗರೋತ್ತರ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಸ್ಥಳವನ್ನು ಹುಡುಕುತ್ತಿತ್ತು. ಅವರು ಮೊದಲು ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳನ್ನು ನೋಡಿದರು ಆದರೆ ಎರಡೂ ರಾಜ್ಯಗಳು ಅನುಮತಿಯನ್ನು ನಿರಾಕರಿಸಿದಾಗ, ಕರ್ನಾಟಕಕ್ಕೆ "ಮಂಜೂರು ಮಾಡಲಾಗುವ ಭೂಮಿಯು ವಿಮಾನ ನಿಲ್ದಾಣದ ಬಳಿ ಇರಬೇಕು" ಎಂಬ ಷರತ್ತಿನೊಂದಿಗೆ ಪ್ರಸ್ತಾಪಿಸಲಾಯಿತು. ಅಂದಿನ ಕರ್ನಾಟಕದ ಮುಖ್ಯಮಂತ್ರಿ ಗುಂಡೂರಾವ್ ಅವರ ಷರತ್ತುಗಳಿಗೆ ಒಪ್ಪಿಗೆ ನೀಡಿ ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದ ಬಳಿ ಭೂಮಿ ಮಂಜೂರು ಮಾಡಿದರು. ಪ್ರಸ್ತುತ ಬೆಂಗಳೂರಿನ ವಿಮಾನ ನಿಲ್ದಾಣದ ಬಳಿಯ ಬಾಗ್‌ಮನೆ ಟೆಕ್ ಪಾರ್ಕ್‌ನಲ್ಲಿ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಕಂಪೆನಿಯು ಬಹು ದೊಡ್ಡ ಸೌಲಭ್ಯವನ್ನು ಹೊಂದಿದೆ.

ಕರ್ನಾಟಕ ರಾಜ್ಯದಲ್ಲಿ ಸಾಫ್ಟ್‌ವೇರ್ ಉದ್ಯಮದ ಅಭಿವೃದ್ಧಿಗೆ ಅನುಕೂಲಕರವಾದ ಹಲವು ಅಂಶಗಳಿವೆ. ಒಂದು ಪ್ರಮುಖ ಅಂಶವೆಂದರೆ ಐಐಎಸ್ಸಿ, ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು, ಮಲೆನಾಡ ಮಹಾವಿದ್ಯಾಲಯಗಳು, ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್, ಎಸ್.ಜೆ.ಸಿ.ಇ, ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ, ಪಿಇಎಸ್ ವಿಶ್ವವಿದ್ಯಾಲಯ, ಸುಮಾರು 200 ಎಂಜಿನಿಯರಿಂಗ್ ಕಾಲೇಜುಗಳಂತಹ ಉನ್ನತ ದರ್ಜೆಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಸ್ಥೆಗಳ ದೊಡ್ಡ ಸಂಖ್ಯೆಯ ಉಪಸ್ಥಿತಿಯನ್ನು ಹೊಂದಿದೆ. ಸಾಫ್ಟ್‌ವೇರ್ ಉದ್ಯಮಕ್ಕೆ ಹೆಚ್ಚಿನ ಸಂಖ್ಯೆಯ ನುರಿತ ಇಂಜಿನಿಯರ್‌ಗಳ ಅಗತ್ಯವಿದ್ದು ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳಿಂದ ಅಂತಹ ಪದವೀಧರರು ನಿಯಮಿತವಾಗಿ ಹೊರಬರುತ್ತಿದ್ದಾರೆ. [] ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್, ಭಾರತೀಯ ದೂರವಾಣಿ ಉದ್ಯಮ ನಿಗಮ ಮತ್ತು ಬಿ.ಇ.ಎ.ಎಲ್.ನಂತಹ ಸಾರ್ವಜನಿಕ ವಲಯದ ಉದ್ಯಮಗಳು ಸಿದ್ಧ ಮಾನವಸಂಪನ್ಮೂಲವನ್ನು ಒದಗಿಸಿಕೊಟ್ಟಿತು ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ನ ಪ್ರಾಯೋಗಿಕ ಅವಕಾಶಗಳನ್ನು ನೀಡಿತು. ಬೆಂಗಳೂರು ಮತ್ತು ಸುತ್ತಮುತ್ತ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಂತಹ ಅನೇಕ ಮುಂದುವರಿದ ಪ್ರಯೋಗಾಲಯಗಳು ಸಾಫ್ಟ್‌ವೇರ್ ಅಭಿವೃದ್ಧಿಗೆ ಅಗತ್ಯವಾದ ಮೂಲ ಜ್ಞಾನವನ್ನು ಒದಗಿಸಿದವು. ಸತತವಾಗಿ ರಾಜ್ಯ ಸರ್ಕಾರಗಳು ಈ ಉದ್ಯಮದ ಬೆಳವಣಿಗೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬೆಂಗಳೂರಿನ ಹಿತಕರ ವಾತಾವರಣವೂ ಅಲ್ಲಿನ ಸಾಫ್ಟ್‌ವೇರ್ ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗಿದೆ.

ಪರಿಣಾಮಗಳು

[ಬದಲಾಯಿಸಿ]

ಸಾಫ್ಟ್‌ವೇರ್ ಉದ್ಯಮದ ಪ್ರಚಂಡ ಬೆಳವಣಿಗೆಯ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳಿವೆ. ರಾಜ್ಯದ ತಲಾ ಆದಾಯ ಹೆಚ್ಚಿದೆ. ಒಮ್ಮೆ ಐಷಾರಾಮಿ ಎಂದು ಪರಿಗಣಿಸಲ್ಪಟ್ಟ ಕಾರುಗಳು ಸರಕುಗಳಾಗಿ ಮಾರ್ಪಟ್ಟಿವೆ, ಆಗಾಗ್ಗೆ ಉಂಟಾಗುವ ಟ್ರಾಫಿಕ್ ಜಾಮ್ ಮತ್ತು ಪಾರ್ಕಿಂಗ್ ಸ್ಥಳದ ಅಲಭ್ಯತೆಯು ಪ್ರಮುಖ ಪರಿಣಾಮವಾಗಿದೆ. ಉದ್ಯೋಗ ಹಾಗೂ ಪ್ರವಾಸೋದ್ಯಮ ನಿಮಿತ್ತ ಹೆಚ್ಚು ಮಂದಿ ವಿದೇಶಕ್ಕೆ ತೆರಳುತ್ತಿದ್ದಾರೆ. ಆದಾಯದ ವೃದ್ಧಿಯಿಂದ ಭೂಮಿಯ ದರಗಳು ಗಗನಕ್ಕೇರುವುದರೊಂದಿಗೆ ರಿಯಲ್ ಎಸ್ಟೇಟ್ ಬೆಲೆಗಳ ಮೇಲೆ ಪರಿಣಾಮ ಬೀರಿದೆ. [೧೦] ಭೂಮಿಯ ಬೆಲೆಯು ಹಣದುಬ್ಬರ ದರವನ್ನು ಮೀರಿ ಬೆಳೆದಿದೆ ಹಾಗೂ ಕೆಲಸ್ಥಳಗಳಲ್ಲಿ ಭೂಮಿಯ ದರವು ಪ್ರತಿ ಎರಡು ವರ್ಷಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದೆ. ಜನರು ಭೂಮಿಯನ್ನು ಕೃಷಿಗೆ ಬಳಸುವುದಕ್ಕಿಂತ ಹೆಚ್ಚಾಗಿ, ಮಾರಾಟ ಮಾಡುವುದು ಲಾಭದಾಯಕವೆಂದು ಭಾವಿಸಿದ್ದರಿಂದ ಕೃಷಿಯು ಪ್ರಗತಿ ಕುಂಠಿತಗೊಂಡಿದೆ. ಸಾಫ್ಟ್‌ವೇರ್ ವೃತ್ತಿಪರರ ಆದಾಯದ ಹೆಚ್ಚಳವು ಕಂಪ್ಯೂಟರ್ ಸೈನ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕೋರ್ಸ್‌ಗಳನ್ನು ಆಯ್ಕೆ ಮಾಡುವ ಯುವಜನರಲ್ಲಿ ಆಸಕ್ತಿಯನ್ನು ಹೆಚ್ಚಿಸಿದೆ. ಮೂಲ ವಿಜ್ಞಾನ, ಕಲೆ ಮತ್ತು ವಾಣಿಜ್ಯ ಕ್ಷೇತ್ರಗಳು ಗುಣಮಟ್ಟದ ಮಾನವ ಸಂಪನ್ಮೂಲದ ಕೊರತೆಯನ್ನು ಅನುಭವಿಸುತ್ತಿವೆ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Software exports from Mysuru touch Rs 4,200 crore". The New Indian Express. Retrieved 4 October 2021.
  2. "Becoming silicon valley". James Heitzman. Seminar - Web edition. Retrieved 19 June 2007.
  3. "'Bangalore will become the world's largest IT cluster by 2020'". Business Line (in ಇಂಗ್ಲಿಷ್). Retrieved 27 May 2021.
  4. ೪.೦ ೪.೧ "About Karnataka: Information on Tourism Industry, Exports, Economy & Geography". India Brand equity foundation. Retrieved 15 August 2019.
  5. "State Cabinet approves IT park near Devanahalli airport". The Hindu. Chennai, India. 29 January 2010. Archived from the original on 1 February 2010.
  6. "India in Business". Ministry of External affairs. Government of India. Archived from the original on 5 ಆಗಸ್ಟ್ 2007. Retrieved 19 June 2007.
  7. "TCS topples Infosys as m-cap leader in IT space". The Economic Times. 14 July 2006. Retrieved 19 June 2007.
  8. Habib Beary (3 October 2002). "American IT giant expands in Bangalore". Online webpage of the BBC, dated 2002-10-03. Retrieved 19 June 2007.
  9. "The industry-varsity disconnect". The Hindu. Chennai, India. 4 September 2006. Archived from the original on 9 May 2007. Retrieved 19 June 2007.
  10. Anjali Prayag. "Bangalored". Business Line. Retrieved 19 June 2007.