ಇಸ್ರೋ ಸಂಸ್ಥೆಯು ಪ್ರತಿ ವರ್ಷ ಸುಮಾರು ೧೫೦ ಇಂಜಿನಿಯರ್ ಗಳನ್ನು ಇಂಜಿನಿಯರ್-"ಎಸ್.ಸಿ" ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಅದು ಒಂದು ಪರೀಕ್ಷೆಯನ್ನು ಮತ್ತು ಸಂದರ್ಶನವನ್ನು ನಡೆಸುತ್ತದೆ. ಇದು ಒಂದು ಪಾರದರ್ಶಕವಾದ ಕ್ರಿಯೆಯಾಗಿದ್ದು ಯಾವುದೇ ಗೋಜಲುಗಳಿಗೆ ಇಲ್ಲಿ ಅವಕಾಶವಿಲ್ಲ. ಪ್ರತಿಭೆಯಿರುವವರಿಗೆ ಮಾತ್ರ ಕೆಲಸ. ತನ್ನ ಕೆಳಹುದ್ದೆಗಳಿಗೂ (ಟ್ರೇಡ್ಸ್ ಮೆನ್ ಮತ್ತು ಟೆಕ್ನೀಶಿಯನ್) ಇದೆ ಪ್ರಕ್ರಿಯೆಯನ್ನು ಇದು ನಡೆಸುತ್ತದೆ.
1962 ರಲ್ಲಿ ಭಾರತ ಸರ್ಕಾರ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು (INCOSPAR: The Indian National Committee for Space Research: INCOSPAR), ಭಾರತೀಯ ಸರ್ಕಾರದ ಇಂಡಿಯನ್ ಸ್ಪೇಸ್ ಪ್ರೋಗ್ರಾಂ ರೂಪಿಸಲು ಸ್ಥಾಪಿಸಿತು.[1].ಅದಕ್ಕೆ (INCOSPAR) ಡಾ ವಿಕ್ರಮ್ ಸಾರಾಭಾಯ್. ಅವರು ಮೊದಲ ಅಧ್ಯಕ್ಷರಾದರು. ಅಂತಿಮವಾಗಿ 1969 ರಲ್ಲಿ ಅದು ಇಸ್ರೋ ಆಗಿ ಬೆಳೆಯಿತು: ಅದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation); ಈಗ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದೂ ಹೆಸರಿದೆ. (ಇಂಗ್ಲೀಷ್:: Vikram Sarabhai Space Centre)ಇದು ದೊಡ್ಡ ಮತ್ತು ಪ್ರಮುಖ ಕೇಂದ್ರ. ಇದು ತಿರುವನಂತಪುರಂ ನಲ್ಲಿ ಇದೆ. ಇಲ್ಲಿ ರಾಕೆಟ್, ಉಡಾವಣಾ ವಾಹನಗಳು ಮತ್ತು ಉಪಗ್ರಹಗಳು ನಿರ್ಮಾಣಗೊಂಡಿವೆ; ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆಯನ್ನೂ ಮಾಡಲಾಗುವುದು.[1]. ಮೊದಲು ತುಂಬಾ ಸಮಭಾಜಕದ ಕ್ಷಿಪಣಿ ಉಡಾವಣೆ ನಿಲ್ದಾಣ ಆಗಿತ್ತು [Thumba Equatorial Rocket Launching Station (TERLS)]. ಭಾರತೀಯ ಬಾಹ್ಯಾಕಾಶ ಅಭಿಯಾನ ಪಿತಾಮಹ, ಡಾ ವಿಕ್ರಮ್ ಸಾರಾಭಾಯ್ ಅವರನ್ನು ಗೌರವಿಸಲು ಅವರ ಆಕಸ್ಮಿಕ ಮರಣದ (ದಿ.30-ಡಿಸೆಂಬರ್ 1971) ನಂತರ ಈ ಕೇಂದ್ರಕ್ಕೆ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಮರುನಾಮಕರಣ ಮಾಡಲಾಯಿತು.[೧][೨].
ಭಾರತಅಣುಶಕ್ತಿ ಇಲಾಖೆಯ ಅಡಿಯಲ್ಲಿ ಇಸ್ರೋ ಅನ್ನು ೧೯೬೯ ರಲ್ಲಿ ಸ್ಥಾಪಿಸಲಾಯಿತು. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟರಷ್ಯಾದ ರಾಕೆಟ್ ಒಂದರ ಮೂಲಕ ಕಕ್ಷೆಗೆ ಹಾರಿತು. ಉಪಗ್ರಹವೊಂದರ ಮೊದಲ ಭಾರತೀಯ ಉಡಾವಣೆ ೧೯೮೦ ರಲ್ಲಿ ನಡೆಯಿತು.
೧೯೭೨ ರಲ್ಲಿ ಅಂತರಿಕ್ಷ ಸಮಿತಿ ಮತ್ತು ಅಂತರಿಕ್ಷ ಇಲಾಖೆಗಳ ಸ್ಥಾಪನೆಯ ನಂತರ ಇಸ್ರೋ ದ ಮೇಲ್ವಿಚಾರಣೆಯನ್ನು ಈ ಸಂಸ್ಥೆಗಳಿಗೆ ವರ್ಗಾಯಿಸಲಾಯಿತು...
ರಾಕೆಟ್ ತಂತ್ರಜ್ಞಾನದಲ್ಲಿ ಸೂಪರ್ ಸಾನಿಕ್ ಕಂಬುಷನ್ ರಾಮ್‌ಜೆಟ್ (ಸ್ಕ್ರಾಮ್‌ಜೆಟ್) ಎಂಜಿನ್ ಈವರೆಗಿನ ಅತ್ಯಾಧುನಿಕ ತಂತ್ರಜ್ಞಾನವೆನಿಸಿದೆ. ಅಮೆರಿಕ, ರಷ್ಯಾ ಮತ್ತು ಐರೋಪ್ಯ ಒಕ್ಕೂಟವಷ್ಟೇ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿವೆ. ಈಗ ಇದೇ ಸ್ವರೂಪದ ಎಂಜಿನ್ ಅನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿ, ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತವೂ ಈ ರಾಷ್ಟ್ರಗಳ ಸಾಲಿಗೆ ಸೇರಿದೆ. ರಾಕೆಟ್‌ಗಳ ಎಂಜಿನ್‌ಗಳಲ್ಲಿ ಸಾಮಾನ್ಯವಾಗಿ ಇಂಧನವಾಗಿ ಜಲಜನಕವನ್ನು ಹಾಗೂ ದಹನಶೀಲ ಉತ್ಕರ್ಷಣಕಾರಿಯಾಗಿ (ಆಕ್ಸಿಡೈಸ್) ಆಮ್ಲಜನಕವನ್ನು ಬಳಸಲಾಗುತ್ತದೆ. ಸಾಮಾನ್ಯ ರಾಕೆಟ್‌ಗಳಲ್ಲಿ ಜಲಜನಕ ಮತ್ತು ಆಮ್ಲಜನಕ ಎರಡನ್ನೂ ಸಂಗ್ರಹಿಸಿ ಇಡಲಾಗಿರುತ್ತದೆ.
ರಾಕೆಟ್‌ಗಳು ಇವೆರಡನ್ನೂ ಹೊತ್ತುಕೊಂಡು ಹೋಗುತ್ತವೆ. ಸ್ಕ್ರಾಮ್‌ಜೆಟ್ ಎಂಜಿನ್ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಹೀರಿಕೊಂಡು ಕೆಲಸ ಮಾಡುವುದರಿಂದ ಕಾರ್ಯಾಚರಣೆಯ ವೆಚ್ಚದಲ್ಲಿ ಭಾರಿ ಇಳಿಕೆ ಆಗುತ್ತದೆ. ಇಸ್ರೊ ತನ್ನ ಮರುಬಳಕೆ ಉಡಾವಣಾ ವಾಹನಗಳಲ್ಲಿ ಈ ಎಂಜಿನ್‌ಗಳನ್ನು ಬಳಸಲು ಉದ್ದೇಶಿಸಿದೆ. ಇದನ್ನು ಇನ್ನಷ್ಟು ಸುಧಾರಣೆ ಮಾಡಬೇಕಿದೆ ಎಂದು ಇಸ್ರೊ ಹೇಳಿದೆ. ಈ ಪರೀಕ್ಷೆ ಯಶಸ್ವಿಯಾಗಿರುವುದರಿಂದ ಸ್ಕ್ರಾಮ್‌ಜೆಟ್ ಎಂಜಿನ್ ಇರುವ ರಾಕೆಟ್‌ಗಳ ಅಭಿವೃದ್ಧಿಯಲ್ಲಿ ಇಸ್ರೊ ಮಹತ್ವದ ಮೈಲುಗಲ್ಲು ಸಾಧಿಸಿದಂತಾಗಿದೆ. ಇಸ್ರೊ ಸಾಧನಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ. ಬದಲಾದ ಈ ವೇಗವನ್ನು ‘ಮ್ಯಾಕ್’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್ ಎಂದು ಕರೆಯಲಾಗುತ್ತದೆ.
ಹೈಪರ್ ಸಾನಿಕ್ ವೇಗದಲ್ಲಿ ಸ್ಕ್ರಾಮ್‌ಜೆಟ್ ಎಂಜಿನ್ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ ಪರೀಕ್ಷೆ; ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ; ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ
ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್ ಎಂಜಿನ್ ಸೇರಿ ಎಟಿವಿ 02ನ ತೂಕ :3277 ಕೆ.ಜಿ.
ಸ್ಕ್ರಾಮ್‌ಜೆಟ್ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ :5 ಸೆಕೆಂಡ್*
ಪರೀಕ್ಷೆಯ ಅವಧಿ :300 ಸೆಕೆಂಡ್*
ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ :320 ಕಿ.ಮೀ*
ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ :7408 ಕಿ.ಮೀ/ಮ್ಯಾಕ್ 6
ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ. ಬದಲಾದ ಈ ವೇಗವನ್ನು ‘ಮ್ಯಾಕ್’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್ ಎಂದು ಕರೆಯಲಾಗುತ್ತದೆ.
ಹೈಪರ್ ಸಾನಿಕ್ ವೇಗದಲ್ಲಿ ಸ್ಕ್ರಾಮ್‌ಜೆಟ್ ಎಂಜಿನ್ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ ಪರೀಕ್ಷೆ; ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ; ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ
ದಿ.೧೯-೪-೨೦೧೭ ರಂದು ಶುಕ್ರ ಗ್ರಹದ ವೈಜ್ಞಾನಿಕ ಅಧ್ಯಯನಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸುವ ‘ಶುಕ್ರ ಯಾನ’ ಯೋಜನೆಯನ್ನು ಇಸ್ರೋ ಅಧಿಕೃತವಾಗಿ ಪ್ರಕಟಿಸಿದೆ. ದೇಶದ ವಿವಿಧ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಶುಕ್ರ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇಸ್ರೋ ಕರೆ ನೀಡಿದೆ. ಇಸ್ರೋ ನಿರ್ದೇಶಕ ದೇವಿಪ್ರಸಾದ್ ಕಾರ್ಣಿಕ್, ‘ಶುಕ್ರ ಯೋಜನೆ ಕುರಿತ ಅಧಿಕೃತ ಘೋಷಣೆ ಇದಾಗಿದೆ. ವೈಜ್ಞಾನಿಕ ಅಧ್ಯಯನಕ್ಕೆ ಅಗತ್ಯವಿರುವ ಪೇಲೋಡ್‌ಗಳನ್ನು ವಿಜ್ಞಾನ ಸಂಸ್ಥೆಗಳು ಅಭಿವೃದ್ಧಿಪಡಿಸಬೇಕಾಗಿದೆ’ ಎಂದರು. ಈ ಯೋಜನೆ ಕಾರ್ಯಗತಗೊಳಿಸಲು ಕೆಲವು ವರ್ಷಗಳೇ ಬೇಕಾಗುತ್ತದೆ. ಒಂದೆರಡು ವರ್ಷಗಳಲ್ಲಿ ಆಗುವ ಕೆಲಸವಲ್ಲ ಎಂದು ಅವರು ಹೇಳಿದರು.[೮]
ಇಸ್ರೊ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ (ಜಿಎಸ್‌ಎಲ್‌ವಿ) ಮಾರ್ಕ್ 3, 200 ಏಷ್ಯಾ ಆನೆಗಳಷ್ಟು (ಏಷ್ಯಾ ಆನೆಗಳ ಸರಾಸರಿ ತೂಕ 3ಟನ್) ತೂಕವಿದೆ. ಜಿಎಸ್‌ಎಲ್‌ವಿ ಮಾರ್ಕ್ 3 ಎಂಬ ಹೆಸರಿನ 640 ಟನ್ ತೂಕದ ಉಡಾವಣಾ ವಾಹನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಇಸ್ರೊ ಈವರೆಗೆ ಅಭಿವೃದ್ಧಿ ಪಡಿಸಿದ ಅತ್ಯಂತ ತೂಕದ ರಾಕೆಟ್ ಎನಿಸಿದೆ.
‘ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕ್ರಯೋಜೆನಿಕ್ ಎಂಜಿನ್ ಇರುವ ಮಾರ್ಕ್ 3, ಭೂಸಮನ್ವಯ ಕಕ್ಷೆಗೆ 4 ಟನ್ ತೂಕದ ಉಪಗ್ರಹಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್‌ನ ಪರೀಕ್ಷೆ ಈಗಾಗಲೇ ಯಶಸ್ವಿಯಾಗಿ ನಡೆದಿದೆ. ಆದರೆ ಮಾರ್ಕ್ 3ನಲ್ಲಿ ಅಳವಡಿಸಿ, ಮತ್ತೊಮ್ಮೆ ಪರೀಕ್ಷೆ ನಡೆಸಬೇಕಿದೆ’ ಎಂದು ಇಸ್ರೊ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.[೯]
ಜಿಸ್ಯಾಟ್–17 ದೂರಸಂಪರ್ಕ ಉಪಗ್ರಹವನ್ನು ಏರಿಯಾನ್–5 ವಿಎ–238 ಮೂಲಕ, ಕೌರೌನ ಗಯಾನಾ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ.ದೇಶದ ನೂತನ ದೂರಸಂಪರ್ಕ ಉಪಗ್ರಹ ಜಿಸ್ಯಾಟ್–17 ಅನ್ನು ಫ್ರೆಂಚ್ ಗಾಯಾನದ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉಪಗ್ರಹವನ್ನು ಏರಿಯಾನ್–5 ವಿಎ–238 ಉಡಾವಣಾ ವಾಹಕದ ಮೂಲಕ 28/29 ಜೂನ್, 2017ಬುಧವಾರ ತಡರಾತ್ರಿ 2.31ಕ್ಕೆ ಉಡಾವಣೆ ಮಾಡಲಾಗಿದೆ.
ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋದಿಂದ ಉಡಾವಣೆಗೊಂಡ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್‌ಎಲ್‌ವಿ ಎಂಕೆ–3 ಹಾಗೂ ಪಿಎಸ್‌ಎಲ್‌ವಿ ಸಿ–38 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಜಿಸ್ಯಾಟ್–17 ಒಟ್ಟು 3,477 ಕೆ.ಜಿ ತೂಕವಿದೆ. ಹವಾಮಾನ ದತ್ತಾಂಶ, ಉಪಗ್ರಹ ಆಧಾರಿತ ಹುಡುಕಾಟದ ಸೇವೆಗೆ ಇದು ಬಳಕೆ ಆಗಲಿದೆ ಎಂದು ಇಸ್ರೊ ಹೇಳಿದೆ.[೧೦]