ಇಸ್ರೊ ಕಕ್ಷೆಯ ವಾಹನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ISRO Orbital Vehicle
ಚಿತ್ರ:ISROorbitalvehicle.jpg
The design of ISRO OV
OperatorISRO
Mission typeCrew Exploration Vehicle
Carrier rocketGSLV Mk II
Launch siteSatish Dhawan Space Centre
Mission duration7 days
Satellite ofEarth

ಭಾರತೀಯ ಮೂಲದ ಮಾನವ ಚಾಲಿತ ಅಂತರಿಕ್ಷ ನೌಕೆನಿರ್ಮತಿಯನ್ನು ತಾತ್ಕಾಲಿಕವಾಗಿ ಕಕ್ಷೆಯ ವಾಹನ ವನ್ನಾಗಿ ಸ್ವದೇಶೀಯ ತಂತ್ರಜ್ಞಾನ ಆಧಾರದಲ್ಲಿ ಸಿದ್ದಗೊಳಿಸಲಾಗಿದೆ. ಭಾರತೀಯ ಮಾನವ ಅಂತರಿಕ್ಷ ನೌಕೆ ನಿರ್ಮಾಣ ಯೋಜನೆಯಡಿ ಇದನ್ನು ನಿರ್ಮಿಸಲಾಗಿದೆ. ಈ ಅಂತರಿಕ್ಷ ಕೋಶ ಮಾದರಿಯನ್ನು ಮೂವರನ್ನು ಹೊತ್ತೊಯ್ಯುವಂತೆ ವಿನ್ಯಾಸಗೊಳಿಸಲಾಗಿದೆ.ಇದರಲ್ಲಿ ಒಟ್ಟುಗೂಡಿಕೆಯ ಸಂಗಮ ರಹಸ್ಯ ಜಾಗೆ ಮತ್ತು ಅದರ ಬಿಚ್ಚಿಕೊಳ್ಳುವ ಸಾಮರ್ಥ್ಯವನ್ನೂ ಇದರಲ್ಲಿ ಅಳವಡಿಸಲಾಗಿರುತ್ತದೆ. ಅದರ ಮಧ್ಯಮ ತರಗತಿಯ ಮಾನವ ನಿರ್ಮಿತ ಈ ಅಂತರಿಕ್ಷನೌಕೆ ಇಸ್ರೊದ ಸ್ವಯಂ ನಿರ್ಮಿತವಾಗಿದೆ. ಇದು ಇಬ್ಬರ ತಂಡವೊಂದನ್ನೊಳಗೊಂಡಂತೆ ಸುಮಾರು 3-ಟನ್ ತೂಕದ್ದಾಗಿದೆ.ಇದು ಭೂಮಿ ಸುತ್ತಲೂ ಕಕ್ಷೆಯ 248 ಮೈಲುಗಳು(400ಕಿ.ಮೀ)ಅಕ್ಷಾಂಶದ ಸುತ್ತಲೂ ಏಳುದಿನಗಳ ಕಾಲ ಸುತ್ತುವ ಗುರಿ ಹೊಂದಿತ್ತು. ಈ ತಂಡದ ವಾಹನದ ಅಭಿವೃದ್ಧಿಯೊಂದಿಗೆ ಇಸ್ರೊದ GSLV Mk IIರ ಉಡಾವಣೆಗೆ ಸದ್ಯ ಸಿದ್ದತೆ ಪ್ರಗತಿಯಲ್ಲಿದೆ. ಈ GSLV Mk II ವಿಶೇಷವಾಗಿ ಕ್ರೈಯೊಜನಿಕ್ ಎಂಜಿನ್ ನ ಉನ್ನತೀಕರಣದ ತಾಂತ್ರಿಕತೆಯಾಗಿದೆ.[೧]

ಇತಿಹಾಸ[ಬದಲಾಯಿಸಿ]

ಚಿತ್ರ:Manned-Mission-Chart.jpg

ಕಕ್ಷೆಯ ಸುತ್ತ ಪ್ರದಕ್ಷಿಣೆ ಹಾಕುವ ಈ ವಾಹನದ ತಯಾರಿಕೆಯ ಪ್ರಗತಿ 2006 ರಲ್ಲಿ ಆರಂಭವಾಗಿದೆ. ಪಾದರಸ-ಮೂಲದ, ಮರ್ಕ್ಯುರಿ-ವರ್ಗದ ಸರಳ ಅಂತರಿಕ್ಷ ವಾಹನ ಸಿದ್ದಪಡಿಸಿ ಅಂತರಿಕ್ಷದಲ್ಲಿ ಕನಿಷ್ಟ ಒಂದು ವಾರದ ಕಾಲ ಅಲ್ಲಿರುವ ಸಾಮರ್ಥ್ಯ ತುಂಬಲಾಗಿದೆ. ಇದನ್ನು ಇಬ್ಬರು ಗಗನಯಾತ್ರಿಗಳನ್ನು ಹೊತ್ತೊಯ್ಯುವ ಮತ್ತು ನೀರಿನಲ್ಲಿ ಸಲೀಸಾಗಿ ನೆಲೆನಿಲ್ಲಲು ಅದರ ಮರುಪ್ರವೇಶಕ್ಕೆ ಶಕ್ತಿ ಒದಗಿಸುವ ವಿನ್ಯಾಸ ಮಾಡಲಾಗಿದೆ. ಇದರ ಪರಿಪೂರ್ಣ ವಿನ್ಯಾಸವನ್ನು ಮಾರ್ಚ್ 2008 ರಲ್ಲಿ ಪೂರ್ಣಗೊಳಿಸಲಾಗಿದ್ದು,ಇದರ ಅನುದಾನ ನಿಧಿಗಾಗಿ ಭಾರತ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರ ನಿಧಿ ನೆರವಿನ ಯೋಜನೆಯಾದ ಇಂಡಿಯನ್ ಹ್ಯುಮನ್ ಸ್ಪೇಸ್ ಫ್ಲೈಟ್ ಯೋಜನೆಯನ್ನು ಫೆಬ್ರವರಿ 2009 ರಲ್ಲಿ ಮಂಜೂರು ಮಾಡಲಾಗಿದೆ.[೨] ಮಾನವ ರಹಿತ ಮೊದಲ ಆರ್ಬಿಟಲ್ ವೆಹಿಕಲ್ ಅಂತರಿಕ್ಷ ನೌಕೆಯು 2013 ನಲ್ಲಿ ಹೊರಬರಲಿದೆ.[೩] ಇದನ್ನು ಇಸ್ರೊ SRE ನ ವಿನ್ಯಾಸದ ಮೇಲೆ ಈ ಆರ್ಬಿಟಲ್ ವೆಹಿಕಲ್ ನ್ನು ಮೂಲವನ್ನಾಗಿಸಿ ನಿರ್ಮಿಸಿದೆ.ಇಸ್ರೊ ಇದನ್ನು ಉಡಾವಣೆ ಮಾಡಿ ನಂತರ 550-ಕಿಗ್ರಾಂ ತೂಕದ ಸ್ಪೇಸ್ ರಿಕವರಿ ಕ್ಯಾಪ್ಸುಲ್ ನ್ನು 2007ರ ಜನವರಿಯಲ್ಲಿ ಮರುಪಡೆಯಿತು. ಪೂರ್ಣ-ಪ್ರಮಾಣದ OV ಚಾಲಿತ ಅಂತರಿಕ್ಷನೌಕೆಯು ಇದರ ಮೂಲಕವಾಗಿಯೇ ಅಸ್ತಿತ್ವ ಪಡೆಯಿತು.ಆದರೆ ಇಸ್ರೊ ಪ್ರಕಟಿಸಿದಂತೆ ಇದು ಹೆಚ್ಚು ಪ್ರಚಲಿತ ಪ್ರಚಾರ ಪಡೆಯಿತು.ತನ್ನ ಶಂಕುವಿನಾಕಾರದ ಆಕೃತಿ SREಗಿಂತ ಹೆಚ್ಚಿನ ಮಹತ್ವ ಪಡೆಯಿತು.

ವಿವರಣೆ[ಬದಲಾಯಿಸಿ]

ಚಿತ್ರ:ISRO orbital vehicle.jpg

ಇಲ್ಲಿ OV ಪೂರ್ಣ ಪ್ರಮಾಣದ ಸ್ವಯಂನಿರ್ಮಿತ ಮೂರು-ಟನ್ ತೂಕದ ಅಂತರಿಕ್ಷ ನೌಕೆಯಾಗಿದ್ದು ಇದು ಮೂವರು ಚಾಲಕ ವರ್ಗವನ್ನು ಒಳಗೊಳ್ಳಲು ಅವಕಾಶ ನೀಡುತ್ತದೆ.ಕಕ್ಷೆ ಸುತ್ತಿದ ನಂತರ ಎರಡು ಕಕ್ಷೆಗಳ ಸುತ್ತಿ ಎರಡು ದಿನಗಳ ನಂತರ ಇದು ಮರಳಿ ಭೂಮಿಗೆ ತಲುಪುವ ವ್ಯವಸ್ಥೆ ಮಾಡಲಾಗಿತ್ತು. ಈ ಅಂತರಿಕ್ಷ ಕೋಶದಲ್ಲಿ ಜೀವರಕ್ಷಣೆ ನಿಯಂತ್ರಕ ಮತ್ತು ವಾತಾವರಣ ನಿಯಂತ್ರಕ ವಿಧಾನಗಳನ್ನು ಅಳವಡಿಸಲಾಗಿದೆ. ಇದರಲ್ಲಿ ತುರ್ತು ಇಳಿಕೆ ಮತ್ತು ಸಾಂದರ್ಭಿಕ ಪಾರಾಗುವಿಕೆಯ ಗುರಿ ತಲುಪುವ ಎಲ್ಲಾ ಸಿದ್ದತೆಗಳನು ವ್ಯವಸ್ಥೆ ಮಾಡಲಾಗಿದೆ.ರಾಕೆಟ್ ನ ಮೊದಲ ಹಂತ ಮತ್ತು ಎರಡನೆಯ ಹಂತದ ವ್ಯವಸ್ಥೆಯಲ್ಲಿ ಇವುಗಳನ್ನು ಅಳವಡಿಸಲಾಗಿದೆ.[೪] ಅಂತರಿಕ್ಷ ನೌಕೆಯಲ್ಲಿನ ಪ್ರಮುಖ ಎಂಜಿನ್ ಮತ್ತು ಸಣ್ಣ ಪೂರ್ವಾಭಿಮುಖಿ ಎಂಜಿನ್ ಗಳನ್ನು ಹಗುರ ಪ್ಯಾಕೇಜ್ ಸೂತ್ರಗಳಲ್ಲಿ ಅಳವಡಿಸಲಾಗಿದೆ.ಇದು ಸುತ್ತುವ ಕಕ್ಷೆಯ ಭೂಮಿಯ ಪ್ರದಕ್ಷಿಣೆಯ ಒಟ್ಟು ಶಕ್ತಿ-ಸಾಮರ್ಥ್ಯವನ್ನು ತೋರಿಸುತ್ತದೆ. ಇದರಲ್ಲಿ OV ಯ ಮೂಲ ಆವೃತ್ತಿಯು ತನ್ನ ತುದಿಅಂಚಿನ ಮೂಗಿಗೆ ಒಂದು ಮುಕ್ತ ತೆರೆಯುವ ವಿಧಾನ ಹೊಂದಿದೆ.ಆದರೆ ಪ್ರವೇಶವು ಪಕ್ಕದ ಬೊಲ್ಟ್ ಗಳ ಮರು ಸಿಡಿತದಿಂದ ಉಂಟಾಗುವ ವಿಧಾನದ ಅಳವಡಿಕೆ ಅನಿವಾರ್ಯವಾಗಿದೆ.[೫] ಈ ಆರ್ಬಿಟಲ್ ವೆಹಿಕಲ್ ಕಕ್ಷೀಯ ವಾಹನವು GSLV Mk II ದ ಮೇಲೆ ಲಾಂಚರ್ ಬಳಸಿ ಉಡಾವಣೆ ಮಾಡಲಾಗುತ್ತದೆ.[೬] . ಸತೀಶ್ ಧವನ್ ಸ್ಪೇಸ್ ಸೆಂಟರ್ (SDSC)ನಿಂದ ಸುಮಾರು 16 ನಿಮಿಷಗಳ ಅದರ ಪ್ರಾಥಮಿಕ ಉಡಾವಣಾ ಪ್ರಕ್ರಿಯೆಯನ್ನು ಶ್ರೀಹರಿಕೋಟಾದಿಂದ ಮಾಡಲಾಗಿತ್ತು.ಈ ರಾಕೆಟ್ OV ಯನ್ನು ಭೊಮಿಯಿಂದ 300-400 ಕಿಮೀ ದೂರದ ಭೂಕಕ್ಷೆಯೊಳಗೆ ಸೇರಿಸಲು ಸಮರ್ಥವಾಗುವಂತೆ ಮಾಡಲಾಗಿತ್ತು. ಈ ಅಂತರಿಕ್ಷ ರಾಕೆಟ್ ಕೋಶವು ಬಂಗಾಳ ಕೊಲ್ಲಿಯ ಬೇ ಆಫ್ ಬೆಂಗಾಲ್ ನಲ್ಲಿ ತನ್ನ ವಾಪಸಾತಿಯನ್ನು ತೋರಿಸುತಿತ್ತು. ಭಾರತೀಯ ಈ OV ಯು ಸದ್ಯದ ರಷ್ಯನ್ ಸೊಯೆಜ್ ಕ್ಕಿಂತ ಚಿಕ್ಕ ಪ್ರಮಾಣದಲ್ಲಿದೆ.ಚೀನಾದ ಶೆಂಜೊವ್ (ಅಂತರಿಕ್ಷ ನೌಕೆ)ಅಥವಾ ರದ್ದಾದ US ನ ಒರಿಯಾನ್ ಅಂತರಿಕ್ಷಹಡಗುಗಳು ಇದನ್ನು ಹೋಲುತ್ತವೆ.ಆದರೆ ಇವು ಮೊದಲಿನ US ನ ಜೈಮಿನಿ ಅಂತರಿಕ್ಷ ನೌಕೆಗಿಂತ ವಿಶಾಲವಾಗಿವೆ. ಆದರೆ ಎಲ್ಲಾ ತಂತ್ರಜ್ಞಾನ ಮೂಲಗಳ ಸೇರಿದ ಮಾನವಚಾಲಿತ ಅಂತರಿಕ್ಷ ನೌಕೆಗಳು ಈಗ ಸದ್ಯ ಲಭ್ಯವಿವೆ.ಇದರೊಟ್ಟಿಗೆ ಇನ್ನೂ ಕೆಲವನ್ನು ಅಭಿವೃದ್ಧಿಪಡಿಸಬೇಕಾಗಿದೆ.ಇದರೊಟ್ಟಿಗೆ ಇಸ್ರೊ ನೂತನ ಮತ್ತು ನಾವಿನ್ಯತೆಯ ಪ್ರಕಾರಗಳನ್ನು ಅಭಿವೃದ್ಧಿಗೊಳಿಸಲು ಮುಂದಾಗಿದೆ.ಸಂಪೂರ್ಣ ದೋಷ ರಹಿತ,ಜೀವ-ರಕ್ಷಕ ವಿಧಾನ,ಸುರಕ್ಷತೆ,ಅದರ ಭರವಸೆಯುಳ್ಳ ಮತ್ತು ತಂಡಕ್ಕೆ ಸುರಕ್ಷಿತ ಪಾರುಗೊಳಿಸುವ ವ್ಯವಸ್ಥೆಯನ್ನೂ ಅದು ಒಳಗೊಂಡಿರುತ್ತದೆ. ಮಾನವ ಸಹಿತ ಇರುವ ಈ ಅಂತರಿಕ್ಷ ನೌಕೆಯಲ್ಲಿ ಮರುಪ್ರವೇಶದ ತಂತ್ರಗಳನ್ನೂ ಅಳವಡಿಸಲು ಎಲ್ಲಾ ಸಕಲ ಸಿದ್ದತೆ ಮಾಡಲಾಗಿರುತ್ತದೆ.ಸದ್ಯ ಇಸ್ರೊ ಇನ್ನೂ ಮೂರು ಸ್ಪೇಸ್ ರಿಕವರಿ ಕ್ಯಾಪ್ಸುಲ್ ಗಳನ್ನು (SRE)ಹೊಂದಲು ಯೋಜನೆ ಹಾಕಿಕೊಂಡಿದೆ.ಇದರೊಂದಿಗೆ ಕೆಲವು ಮಾನವರಹಿತ OV ಅಂತರಿಕ್ಷ ಹಡಗುಗಳನ್ನು ಉಡಾವಣಾ ಮಾಡುವ ತಯಾರಿಯಲ್ಲಿದೆ.[೭]

ಹಣಕಾಸಿನ ನೆರವು ಮತ್ತು ಮೂಲಭೂತ ಸೌಲಭ್ಯ[ಬದಲಾಯಿಸಿ]

ಪೂರ್ಣ ಸ್ವಯಂ ಸಿದ್ದವಾದ ದೇಶೀಯ ಕಕ್ಷಾ ವಾಹನವನ್ನು ಇಬ್ಬರು ಚಾಲಕ ಗಗನಯಾತ್ರಿಗಳ ತಂಡದೊಂದಿಗೆ ಹೊಂದಲು ಸಣ್ಣ ಪ್ರಮಾಣ ಭೂಕಕ್ಷೆಯ ನಿರ್ಮತಿ ಸದ್ಯ ಚಾಲ್ತಿಯಲ್ಲಿದೆ. ಇಸ್ರೊ ಮೂಲಗಳ ಪ್ರಕಾರ ಈ ಅಂತರಿಕ್ಷ ಗಗನ ನೌಕೆಯು 2016 ರಲ್ಲಿ ಸಿದ್ದಗೊಳ್ಳುತ್ತದೆ. ಸರ್ಕಾರವು ಇದಕ್ಕಾಗಿ 50 ಕೋಟಿ (US$10 ದಶಲಕ್ಷ)ನಿಧಿಯನ್ನು ಹಂಚಿಕೆ ಮಾಡಿದೆ.2007 ರ ಅದರ ಪ್ರಾಥಮಿಕ ಯೋಜನೆಗಾಗಿ 2008 ರಲ್ಲಿ ಈ ಮಂಜೂರಾತಿ ದೊರಕಿದೆ. ಮಾನವಸಹಿತ ಅಂತರಿಕ್ಷ ಯಾನದ ಈ ಉದ್ದೇಶಿತ ಯೋಜನೆಗೆ ಒಟ್ಟು 12,400 ಕೋಟಿ (US$3 ಬಿಲಿಯನ್)ಹಣ ಅಗತ್ಯವಿರುವುದಲ್ಲದೇ ಏಳು ವರ್ಷಗಳ ಅವಧಿಯೂ ಇದಕ್ಕೆ ಅಗತ್ಯವಿದೆ. ಯೋಜನಾ ಆಯೋಗವು ಒಟ್ಟು ಆಯವ್ಯಯದಲ್ಲಿ 5000 ಕೋಟಿ (US$1 ಬಿಲಿಯನ್)ಹಣದ ಅಗತ್ಯವಿದೆಯೆಂದು ಹನ್ನೊಂದನೆಯ ಪಂಚವಾರ್ಷಿಕ (2007–12)ಯೋಜನೆಯಲ್ಲಿ ನಿಗದಿಗೊಳಿಸಿದೆ.ಈ ಯೋಜನಾ ಸಾಫಲ್ಯಕ್ಕೆ ಈ ವೆಚ್ಚದ ಅಗತ್ಯವವನ್ನು ಸರ್ಕಾರ ಕಂಡುಕೊಂಡಿದೆ. ಇಸ್ರೊದಿಂದ ಸಿದ್ದಗೊಳಿಸಲಾದ ಯೋಜನಾ ವರದಿಯನ್ನು ಅಂತರಿಕ್ಷ ಆಯೋಗ ಸಮ್ಮತಿ ಸೂಚಿಸುವ ಮೂಲಕ ಇದಕ್ಕೆ ಚಾಲನೆ ನೀಡಿದೆ.[೮][೯] ಭಾರತ ಸರ್ಕಾರವು ಫೆಬ್ರವರಿ 2009 ರಲ್ಲಿ ಈ ಮ್ಯಾನ್ಡ್ ಸ್ಪೇಸ್ ಫ್ಲೈಟ್ ಪ್ರೊಗ್ರಾಮ್ ಗೆ ತನ್ನ ಹಸಿರು ನಿಶಾನೆ ತೋರಿದೆ.ಇದನ್ನು 2016 ರ ಹೊತ್ತಿಗೆ ಕಾರ್ಯಾಚರಣೆಗೆ ತರುವ ಯೋಜನೆ ಇಸ್ರೊಗಿದೆ.[೧೦] ಸತೀಶ್ ಧವನ್ ಸ್ಪೇಸ್ ಸೆಂಟರ್ (SDSC)ನ ನಿರ್ದೇಶಕ ಎಂಸಿ ದಾಥನ್ ಹೇಳುವ ಪ್ರಕಾರ ಗಗನಯಾತ್ರಿಗಳಿಗೆ ಪೂರ್ಣ ಪ್ರಮಾಣದ ತರಬೇತಿ ನೀಡುವ ಸೌಲಭ್ಯವನ್ನು ಬೆಂಗಳೂರನಲ್ಲಿ ಮಾಡುವ ಉದ್ದೇಶವನ್ನು ಪಕಟಿಸಿದ್ದಾರೆ. ಇದಲ್ಲದೇ ಇಸ್ರೊ ಶ್ರೀಹರಿಕೋಟಾದಲ್ಲಿ ಮೂರನೆಯ ಉಡಾವಣ ಲಾಂಚ್ ಪ್ಯಾಡ್ ಮೈದಾನವನ್ನು ಸ್ಥಾಪಿಸಲು ಯೋಜಿಸಿದೆ.ಮಾನವ ಚಾಲಿತ ಈ ಅಂತರಿಕ್ಷ ಸಾಹಸಗಳಿಗೆ ಪ್ರತ್ಯೇಕ ಹೆಚ್ಚಿನ ಸೌಕರ್ಯ ಒದಗಿಸುವ ಉದ್ದೇಶ ಇದರದ್ದಾಗಿದೆ.ಜೀವರಕ್ಷಕ ಪಾರಾಗುವ ವಿಧಾನಗಳ ಹೊಸ ಚ್ಯುಟ್ ಗಳ ಒದಗಿಸುವುದೂ ಇದರ ಉದ್ದೇಶಗಳಲ್ಲೊಂದಾಗಿದೆ.[೯] ಆಗ 2009 ರ ವಸಂತ ಋತುವಿನಲ್ಲಿ OV ಗಾಗಿ ಪೂರ್ಣ ಪ್ರಮಾಣದ ಕೋಶದ ಚಾಲಕರಿಗೆ ನೆರವಾಗುವ ರಾಕೆಟ್ ಕೋಶ ನಿರ್ಮಿಸಲಾಗಿದೆ.ಇದನ್ನು ಗಗನಯಾತ್ರಿಗಳ ತರಬೇತಿಗಾಗಿ ಸತೀಶ್ ಧವನ್ ಸ್ಪೇಸ್ ಸೆಂಟರ್ ಗೆ ನೀಡಲಾಗಿದೆ. [೧] Archived 2009-05-04 ವೇಬ್ಯಾಕ್ ಮೆಷಿನ್ ನಲ್ಲಿ.

ರಷಿಯಾದ ಸರ್ಕಾರ[ಬದಲಾಯಿಸಿ]

ಭಾರತ ಮತ್ತು ರಷ್ಯಾದ ಮಧ್ಯೆ ಡಿಸೆಂಬರ್ 5,2008 ರಲ್ಲಿ ಇಸ್ರೊ ಅಧ್ಯಕ್ಷ ಜಿ.ಮಾಧವನ್ ನಾಯರ್ ಮತ್ತು ರೊಸ್ಕೊಮೊಸ್ ನಿರ್ದೆಶಕ ಅನಾಟೊಲಿ ಪರ್ಮಿನೊವ್ ಅವರ ನಡುವೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.ರಷ್ಯದ ಅಧ್ಯಕ್ಷ ಡಿಮಿತ್ರಿ ಮೆಡ್ವೆದೆವ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ತಂತ್ರಜ್ಞಾನದ ಸಹಕಾರಕ್ಕೆ ಅಂಕಿತ ಹಾಕಲಾಯಿತು.ಈ ಒಪ್ಪಂದದ ಪ್ರಕಾರ ಭಾರತದ ಗಗನ ಯಾತ್ರಿಯು ರಷ್ಯಾದ ಸೊಯೆಜ್ ಅಂತರಿಕ್ಷ ನೌಕೆಯಲ್ಲಿ 2013 ರಲ್ಲಿನ ಯೋಜನೆಯಲ್ಲಿ ಪಾಲ್ಗೊಂಡು ಇಸ್ರೊದ 2916 ರ ಯೋಜಿತ ಉಡಾವಣಾ ಪೂರ್ವ ಅನುಭವ ಪಡೆಯಬಹುದಾಗಿದೆ. ಗಗನಯಾತ್ರಿ ತಂಡದ ಆಯ್ಕೆ,ತರಬೇತಿ ಮತ್ತು ಇಸ್ರೊದ ಆರ್ಬಿಟರ್ ವಾಹನ ನಿರ್ಮಾಣದಲ್ಲಿ ರೊಸ್ಕೊಮೊಸ್ ನೆರವಾಗಲಿದೆ.[೧೧] ಇಸ್ರೊದ ಮಾನವಸಹಿತ ಅಂತರಿಕ್ಷ ನೌಕೆ ಯೋಜನೆಯು ರಷ್ಯಯನ್ ಫೆಡೆರಲ್ ಸ್ಪೇಸ್ ಏಜೆನ್ಸಿ ನೆರವಿನ ಲಾಭ ಪಡೆಯಲಿದೆ. ರಷ್ಯಾ ಮತ್ತು ಭಾರತಗಳು ಈ ಅಂತರಿಕ್ಷ ಸಂಭಂಧಿತ ಒಪ್ಪಂದ-ಸಹಕಾರಗಳಲ್ಲಿ ಬಹುದಿನಗಳಿಂದ ಒಟ್ಟಾಗಿ ಕೆಲಸ ಮಾಡುತ್ತಿವೆ. ಆಗ 1984 ರಲ್ಲಿರಾಕೆಶ್ ಶರ್ಮಾ ಭಾರತದ ಮೊದಲ ಗಗನಯಾತ್ರಿಯಾಗಿ ಆಗಿನ ಸೊವಿಯತ್ ಯುನಿಯನ್ ನ ಸಲ್ಯುತ್ -7 ಅಂತರಿಕ್ಷ ಕೇಂದ್ರದಿಂದ ಸೊಯೆಜ್ ರಾಕೆಟ್ ಕೋಶದಲ್ಲಿ ಪಯಣಿಸಿದವರಾಗಿದ್ದಾರೆ.[೧೨] ರಷ್ಯಾವು 2010 ರಲ್ಲಿ ಘೋಷಿಸಿದ ಪ್ರಕಾರ ಭಾರತವು ಸೊಯೆಜ್ ಮಿಶನ್ ನ ಬಗ್ಗೆ ಯೋಜಿಸಿಲ್ಲ ಎಂದು ಪ್ರಕಟಿಸಿತು.[೧೩]

ಕಾರ್ಯಸೂಚಿ ಪಟ್ಟಿ[ಬದಲಾಯಿಸಿ]

ಇತ್ತೀಚಿಗೆ ಜನವರಿ 2010 ರಲ್ಲಿ ಪ್ರಕಟಿಸಿದ ವಿಷಯದ ಪ್ರಕಾರ ಇಸ್ರೊದ OV ಯನ್ನು ಗಗನಯಾತ್ರಿಗಳ ಜೊತೆ 2016 ರಲ್ಲಿ ಉಡಾವಣೆಗೆ ಸಜ್ಜುಗೊಳಿಸಲಾಗಿದೆ.[೧೪] ಪೂರ್ವನಿರ್ಧಾರಿತ ಯೋಜನೆಯಂತೆ ಭಾರತೀಯ ಗಗನಯಾತ್ರಿಯು ರಷ್ಯಾದ 2013 ದ ಸೊಯೆಜ್ ಅಂತರಿಕ್ಷ ನೌಕೆಯಲ್ಲಿ ಪಯಣಿಸಲಿದ್ದಾನೆ.ಇದು ಸ್ವದೇಶೀ ನಿರ್ಮಿತ ಆರ್ಬಿಟಲ್ ವಾಹನಗಳಿಗೆ ನೆರವಾಗಲಿದೆ.[೧೨]

ಸೇವಾದಾರರು[ಬದಲಾಯಿಸಿ]

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal

  • ಇಂಡಿಯನ್ ಹ್ಯುಮನ್ ಸ್ಪೇಸ್ ಫ್ಲೈಟ್ ಪ್ರೊಗ್ರಾಮ್
  • ಜಿಯೊಸಿಂಕ್ರೊನಸ್ ಸ್ಯಾಟ್ ಲೈಟ್ ಲಾಂಚ್ ವೆಹಿಕಲ್
  • GSLV Mk III
  • ಬಾಹ್ಯಾಕಾಶದ ಪರಿಶೋಧನೆ
  • ಹ್ಯುಮನ್ ಸ್ಪೇಸ್ ಕ್ರಾಫ್ಟ್

ಉಲ್ಲೇಖಗಳು[ಬದಲಾಯಿಸಿ]

  1. http://www.space.com/businesstechnology/090211-india-manned-spaceship.html
  2. Priyadarshi, Siddhanta (2009-02-23). "Planning Commission Okays ISRO Manned Space Flight Program". Indian Express. p. 2. {{cite news}}: Cite has empty unknown parameter: |coauthors= (help)
  3. "ಆರ್ಕೈವ್ ನಕಲು". Archived from the original on 2014-02-21. Retrieved 2010-12-22.
  4. http://www.deccanherald.com/Content/Jan42009/national20090104110557.asp
  5. ಕಕ್ಷೆಯ ವಾಹನ
  6. ಇಸ್ರೊದ ಮಾನವ ಸಹಿತ ಅಂತರಿಕ್ಷ ನೌಕೆಯು 2015ರಲ್ಲಿ ಉಡವಣೆಗೊಳ್ಳಲು ಕೇಂದ್ರ ಸರ್ಕಾರದ ಅನುದಾನ ಅನುಮತಿ[ಶಾಶ್ವತವಾಗಿ ಮಡಿದ ಕೊಂಡಿ] ಗಾಗಿಕಾಯುತ್ತಿದೆ,ಈ ಯೋಜನೆಯು 2015ಉಡಾವಣಾ ಕಾರ್ಯಕ್ರಮವಾಗಿದೆ.
  7. ಭಾರತೀಯ ಸ್ವದೇಶಿ ನಿರ್ಮಿತ ಮಾನವ ಸಹಿತ ಕೋಶ ಉಡಾವಣೆ ಗೊಳ್ಳಲಿದೆ.
  8. "ಏಳನೆಯ ಪಂಚವಾರ್ಷಿಕ ಯೋಜನಾ ಚಟುವಟಿಕೆ ಯನ್ನು ಸೇರಿಸಲಾಗಿದೆ.(2007-12)" (PDF). Archived from the original (PDF) on 2013-05-12. Retrieved 2010-12-22.
  9. ೯.೦ ೯.೧ "ISRO plans manned mission to moon in 2014". Business Standard.
  10. BBC.co.uk - ಭಾರತ ಮತ್ತು ಯು ಕೆ ದ ಜಂಟಿಯಾಗಿ ಮಾನವ ಸಹಿತ ರಾಕೆಟ್ ಉಡಾವಣಾ ಕೋಶ ಕ್ಕೆ 2010 ಜನವರಿ 27ರಲ್ಲಿ ಚಾಲನೆ ದೊರಕಿದೆ. -Jan 27th, 2010
  11. ರಷ್ಯ ಮತ್ತು 'ಭಾರತದ ಸೊಯೆಜ್' ಅಂತರಿಕ್ಷ ನೌಕೆಯು ಜಂಟಿಯಾಗಿ ಉಡಾವಣಾ ಕಾರ್ಯ ನಡೆಸುತ್ತದೆ.
  12. ೧೨.೦ ೧೨.೧ The Times Of India. December 10, 2008 http://timesofindia.indiatimes.com/Russia_to_take_Indian_astronaut_on_space_mission_in_2013/rssarticleshow/3817475.cms. {{cite news}}: Missing or empty |title= (help)
  13. "(Oct.10, 2010)ರಷ್ಯದ ಸೊಯೆಜ್ ಅಂತರಿಕ್ಷ ನೌಕೆಯಲ್ಲಿ ಭಾರತದ ಯಾವುದೇ ಗಗನ ಯಾತ್ರಿ ಪಾಲ್ಗೊಳ್ಳುವುದಿಲ್ಲ". Archived from the original on 2012-03-01. Retrieved 2021-08-09.
  14. Beary, Habib (January 27, 2010). "India manned space trip 'by 2016'". BBC News. Retrieved May 5, 2010.