ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
Acronym | ಇಸ್ರೋ |
---|---|
Owner | ಬಾಹ್ಯಾಕಾಶ ಇಲಾಖೆ |
Established | 15 ಆಗಸ್ಟ್ 1969 (೧೯೬೨ ರಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ) |
Headquarters | ಬೆಂಗಳೂರು, ಕರ್ನಾಟಕ, ಭಾರತ |
Employees | ೧೭,೨೨೨ (೨೦೨೦ ರ ವೇಳೆಗೆ) |
Primary spaceport | |
Motto | ಮಾನವಕುಲದ ಸೇವೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ. (Mānav Jāti Kī Sevā Men Antarikṣa Praudyogikī) |
Administrator | ಡಾ. ಎಸ್. ಸೋಮನಾಥ (ಅಧ್ಯಕ್ಷರು) |
Budget | ₹೧೩,೪೭೯.೪೭ ಕೋಟಿ (ಯುಎಸ್$೨.೯೯ ಶತಕೋಟಿ) (FY ೨೦೨೦–೨೧) |
Website | www |
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) (ಆಂಗ್ಲ: ISRO - Indian Space Research Organisation) ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ. ಇದು ಬೆಂಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು ಬೆಂಗಳೂರು, ತಿರುವನಂತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇಂದ್ರಗಿರಿ(ತಮಿಳುನಾಡು), ಹಾಸನ(ಕರ್ನಾಟಕ) ಮತ್ತು ಶ್ರೀಹರಿಕೋಟ (ಆಂಧ್ರ ಪ್ರದೇಶ) ಗಳಲ್ಲಿ ಇವೆ. ಇಸ್ರೋ ದ ಮುಖ್ಯ ಉದ್ದೇಶ ಅಂತರಿಕ್ಷ ತಂತ್ರಜ್ಞಾನದ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳ ಅಭಿವೃದ್ಧಿ. ಇಸ್ರೋ ಸಂಸ್ಥೆ ಉಪಗ್ರಹಗಳನ್ನಲ್ಲದೇ ಉಪಗ್ರಹ ವಾಹಕಗಳನ್ನೂ ತಯಾರಿಸುತ್ತದೆ.
ಇಸ್ರೋ ಸಂಸ್ಥೆಯು ಪ್ರತಿ ವರ್ಷ ಸುಮಾರು ೧೫೦ ಇಂಜಿನಿಯರ್ ಗಳನ್ನು ಇಂಜಿನಿಯರ್-"ಎಸ್.ಸಿ" ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಅದು ಒಂದು ಪರೀಕ್ಷೆಯನ್ನು ಮತ್ತು ಸಂದರ್ಶನವನ್ನು ನಡೆಸುತ್ತದೆ. ಇದು ಒಂದು ಪಾರದರ್ಶಕವಾದ ಕ್ರಿಯೆಯಾಗಿದ್ದು ಯಾವುದೇ ಗೋಜಲುಗಳಿಗೆ ಇಲ್ಲಿ ಅವಕಾಶವಿಲ್ಲ. ಪ್ರತಿಭೆಯಿರುವವರಿಗೆ ಮಾತ್ರ ಕೆಲಸ. ತನ್ನ ಕೆಳಹುದ್ದೆಗಳಿಗೂ (ಟ್ರೇಡ್ಸ್ ಮೆನ್ ಮತ್ತು ಟೆಕ್ನೀಶಿಯನ್) ಇದೆ ಪ್ರಕ್ರಿಯೆಯನ್ನು ಇದು ನಡೆಸುತ್ತದೆ.
ಇಂಜಿನಿಯರ್- ಎಸ್.ಸಿ- ವಿದ್ಯಾರ್ಹತೆ- ಬಿ.ಇ >೭೦% (ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಕೆಮಿಕಲ್, ಕಂಪ್ಯೂಟರ್ ಸ್ಯನ್ಸ್, ಸಿವಿಲ್) ಟೆಕ್ನೀಶಿಯನ್ ವಿದ್ಯಾರ್ಹತೆ- ಡಿಪ್ಲಮೋ >೭೦% (ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್) ಟ್ರೇಡ್ಸ್ ಮೆನ್ ವಿದ್ಯಾರ್ಹತೆ- ಐ.ಟಿ.ಐ. >೭೦% (ಫಿಟ್ಟರ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇಲೆಕ್ಟ್ರಿಕಲ್ ಮುಂತಾದುವು)
ಚರಿತ್ರೆ
[ಬದಲಾಯಿಸಿ]- ಸಂಕ್ಷಿಪ್ತ ಇತಿಹಾಸ :
1962 ರಲ್ಲಿ ಭಾರತ ಸರ್ಕಾರ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು (INCOSPAR: The Indian National Committee for Space Research : INCOSPAR) , ಭಾರತೀಯ ಸರ್ಕಾರದ ಇಂಡಿಯನ್ ಸ್ಪೇಸ್ ಪ್ರೋಗ್ರಾಂ ರೂಪಿಸಲು ಸ್ಥಾಪಿಸಿತು.[1].ಅದಕ್ಕೆ (INCOSPAR) ಡಾ ವಿಕ್ರಮ್ ಸಾರಾಭಾಯ್. ಅವರು ಮೊದಲ ಅಧ್ಯಕ್ಷರಾದರು. ಅಂತಿಮವಾಗಿ 1969 ರಲ್ಲಿ ಅದು ಇಸ್ರೋ ಆಗಿ ಬೆಳೆಯಿತು: ಅದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation); ಈಗ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದೂ ಹೆಸರಿದೆ. (ಇಂಗ್ಲೀಷ್: : Vikram Sarabhai Space Centre)ಇದು ದೊಡ್ಡ ಮತ್ತು ಪ್ರಮುಖ ಕೇಂದ್ರ. ಇದು ತಿರುವನಂತಪುರಂ ನಲ್ಲಿ ಇದೆ. ಇಲ್ಲಿ ರಾಕೆಟ್, ಉಡಾವಣಾ ವಾಹನಗಳು ಮತ್ತು ಉಪಗ್ರಹಗಳು ನಿರ್ಮಾಣಗೊಂಡಿವೆ; ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆಯನ್ನೂ ಮಾಡಲಾಗುವುದು.[1]. ಮೊದಲು ತುಂಬಾ ಸಮಭಾಜಕದ ಕ್ಷಿಪಣಿ ಉಡಾವಣೆ ನಿಲ್ದಾಣ ಆಗಿತ್ತು [Thumba Equatorial Rocket Launching Station (TERLS)]. ಭಾರತೀಯ ಬಾಹ್ಯಾಕಾಶ ಅಭಿಯಾನ ಪಿತಾಮಹ, ಡಾ ವಿಕ್ರಮ್ ಸಾರಾಭಾಯ್ ಅವರನ್ನು ಗೌರವಿಸಲು ಅವರ ಆಕಸ್ಮಿಕ ಮರಣದ (ದಿ.30-ಡಿಸೆಂಬರ್ 1971) ನಂತರ ಈ ಕೇಂದ್ರಕ್ಕೆ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಮರುನಾಮಕರಣ ಮಾಡಲಾಯಿತು. [೧]
[೨].ಭಾರತ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಇಸ್ರೋ ಅನ್ನು ೧೯೬೯ ರಲ್ಲಿ ಸ್ಥಾಪಿಸಲಾಯಿತು. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟ ರಷ್ಯಾದ ರಾಕೆಟ್ ಒಂದರ ಮೂಲಕ ಕಕ್ಷೆಗೆ ಹಾರಿತು. ಉಪಗ್ರಹವೊಂದರ ಮೊದಲ ಭಾರತೀಯ ಉಡಾವಣೆ ೧೯೮೦ ರಲ್ಲಿ ನಡೆಯಿತು.
೧೯೭೨ ರಲ್ಲಿ ಅಂತರಿಕ್ಷ ಸಮಿತಿ ಮತ್ತು ಅಂತರಿಕ್ಷ ಇಲಾಖೆಗಳ ಸ್ಥಾಪನೆಯ ನಂತರ ಇಸ್ರೋ ದ ಮೇಲ್ವಿಚಾರಣೆಯನ್ನು ಈ ಸಂಸ್ಥೆಗಳಿಗೆ ವರ್ಗಾಯಿಸಲಾಯಿತು...
ಮೈಲಿಗಲ್ಲುಗಳು
[ಬದಲಾಯಿಸಿ]- ೧೯೬೯: ಇಸ್ರೋದ ಸ್ಥಾಪನೆ
- ೧೯೭೨: ಅಂತರಿಕ್ಷ ಇಲಾಖೆಯ ಸ್ಥಾಪನೆ
- ೧೯೭೫: ಆರ್ಯಭಟ ಉಪಗ್ರಹದ ಉಡಾವಣೆ
- ೧೯೭೯: ಪ್ರಾಯೋಗಿಕ ಉಪಗ್ರಹ ಭಾಸ್ಕರ-೧ ರ ಉಡಾವಣೆ. ಎಸ್‍ಎಲ್‍ವಿ-೩ ರಾಕೆಟ್‍ನ ಮೂಲಕ ರೋಹಿಣಿ ಉಪಗ್ರಹದ ಉಡಾವಣೆ ವಿಫಲ
- ೧೯೮೦: ರೋಹಿಣಿ ಉಪಗ್ರಹದ ಯಶಸ್ವಿ ಉಡಾವಣೆ
- ೧೯೮೧: ಆಪಲ್ ಮತ್ತು ಭಾಸ್ಕರ-೨ ಉಪಗ್ರಹಗಳ ಉಡಾವಣೆ
- ೧೯೮೨: ಇನ್ಸಾಟ್ ಸರಣಿಯ ಮೊದಲ ಉಪಗ್ರಹ ಇನ್ಸಾಟ್-೧ಎ ಉಡಾವಣೆ
- ೧೯೮೪: ಇಂಡೋ-ರಷ್ಯನ್ ಅಂತರಿಕ್ಷ ಯಾನ. ರಾಕೇಶ್ ಶರ್ಮಾ ಅಂತರಿಕ್ಷಕ್ಕೆ ಸಂಚರಿಸಿದ ಮೊದಲ ಭಾರತೀಯರಾದರು
- ೧೯೯೨: ಇನ್ಸಾಟ್ ಸರಣಿಯ ಇನ್ಸಾಟ್-೨ಎ, ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಿತ ಮೊದಲ ಉಪಗ್ರಹ) ಉಡಾವಣೆ
- ೧೯೯೩: ಪಿಎಸ್‍ಎಲ್‍ವಿ ರಾಕೆಟ್ ನ ಉಡಾವಣೆ ವಿಫಲ
- ೧೯೯೪: ಪಿಎಸ್‍ಎಲ್‍ವಿ ರಾಕೆಟ್ ನ ಎರಡನೆಯ ಉಡಾವಣೆ ಯಶಸ್ವಿ (ಐಆರ್‍ಎಸ್-ಪಿ೨ ಉಪಗ್ರಹವನ್ನು ಹೊತ್ತು)
- ೨೦೦೪: ಶೈಕ್ಷಣಿಕ ಉಪಗ್ರಹ ಎಡುಸ್ಯಾಟ್ ಅನ್ನು ಹೊತ್ತ ಜಿಎಸ್‍ಎಲ್‍ವಿ ರಾಕೆಟ್ ನ ಮೊದಲ ಉಡಾವಣೆ ಯಶಸ್ವಿ
- ೨೦೧೩:ನವೆಂಬರ್ ೫ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರುವಗಾಮಿ ರಾಕೆಟ್ ಮೂಲಕ ‘ಮಂಗಳಯಾನ’ (ಅಂತರಿಕ್ಷ ನೌಕೆ)ವನ್ನು ಉಡಾವಣೆ ಮಾಡಲಾಯಿ
ಬಾಹ್ಯಾಕಾಶದಲ್ಲಿ ಇಸ್ರೋ ಸಾಧನೆಗಳು:
[ಬದಲಾಯಿಸಿ]- ಹೆಚ್ಚಿನ ವಿವರ
- 1962 ರಲ್ಲಿ ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಇಲಾಖೆ ಸ್ಥಾಪನೆ. ಕೇರಳದ ಥಂಬಾ ರಾಕೆಟ್ ಉಡಾವನಾ ಕೇಂದ್ರದ ಕೆಲಸ ಆರಂಭ.
- 1963 ನವಂಬರ್ 21, ಟಿಇಅರ್‘ಎಲ್‘ಎಸ್‘ನಿಂದಮೊದಲ ರಾಕೆಟ್‘ ಉಡಾವಣೆ.
- 1965 ಥಂಬಾದಲ್ಲಿ ಬಾಹ್ಯಾಕಾಶ ವಿಜ್ಞಾನ ತಂತ್ರ ಜ್ಞಾನ ಕೆಂದ್ರ ಸ್ಥಾಪನೆ.
- 1969 ಆಗಸ್ಟ 15, ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸ್ಥಾಪನೆ.
- 1972 ಆಂದ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್‘ಧವನ್‘ಬಾಹ್ಯಾಕಾಶ ಕೇಂದ್ರ ಸ್ಥಾಪನೆ.
- 1975 ಏಪ್ರಿಲ್ 19, ದೂರದರ್ಶನ ಪ್ರಸಾರ ಉದ್ದೇಶ ಹೊಂದಿದ ಮೊದಲ ಉಪಗ್ರಹ ಆರ್ಯಭಟ ಉಡಾವಣೆ.
- 1979 ಭೂ ವೀಕ್ಷಣಾ ಪ್ರಾಯೋಗಿಕ ಉಪಗ್ರಹ ಭಾಸ್ಕರ-1 ಉಡಾವಣೆ.
- 1984 ಭಾರತದ ಮೊದಲ ಗಗನ ಯಾನಿ ರಾಕೇಶ್ ಶರ್ಮಾ ಅವರಿಂದ ರಷ್ಯಾ ಬಾಹ್ಯಾಕಾಶ ನಿಲ್ದಾಣ ಸಲ್ಯೂಟ್` 7ರಲ್ಲಿ ಎಂಟು ದಿನ ವಾಸ.
- 1988 ರಷ್ಯಾದ ರಾಕೆಟ್‘ಮೂಲಕ ಭಾರತದ ದೂರ ಸಂವೇದಿ ಐಆರ್‘ಎಸ್‘ (IRS)ಉಪಗ್ರಹ ಉಡಾವಣೆ.
- 1993 ಮೊದಲ ದೃವಗಾಮಿ ಉಪಗ್ರಹ-ಉಡಾವಣಾ ವಾಹಕ ಪಿಎಸ್‘ಎಲ್‘ವಿ (PSLV)ಅಭಿವೃದ್ಧಿ ; ಯೋಜನೆ ವಿಫಲ.
- 1997ಉಪಗ್ರಹ-ಉಡಾವಣಾ ವಾಹಕ ಪಿಎಸ್‘ಎಲ್‘ವಿ ಮೊದಲ ಉಡಾವಣೆ. (ಐಅರ್‘ಎಸ್‘-1ಡಿ=IRS-1Dಉಪಗ್ರಹ)
- 2001 ಜಿಸಾಟ್‘-1 ಉಪಗ್ರಹ ಹೊತ್ತ ಭೂ ಸ್ಥಿರ ಉಪಗ್ರಹ ಹೊತ್ತ ಭೂಸ್ಥಿರ ಉಪಗ್ರಹ ಉಡಾವಣಾ ವಾಹಕದ (ಜಿಎಸ್‘ಎಲ್‘ವಿ-GSLV) ಯಶಸ್ವಿ ಉಡಾವಣೆ.
- 2008ಅಕ್ಟೋಬರ್‘೨೨22 ಚಂದ್ರಯಾನ 1 ರ ನೌಕೆಯನ್ನು ಹೊತ್ತ ಪಿಎಸ್‘ಎಲ್‘ವಿ. -ಎಕ್ಷ್‘ಎಲ್‘ (PSLV_XL) ಉಡಾವಣೆ.
- 2013 ನವೆಂಬರ್‘ 5 , ಸ್ವದೇಶಿ ನಿರ್ಮಿತ ಮಂಗಳ ನೌಕೆಯನ್ನು ಹೊತ್ತ ಪಿಎಸ್‘ಎಲ್‘ವಿ. ಸಿ 25(PSLV_C25) ಉಡಾವಣೆ..
- 2014 ಜನವರಿ 5 , ಸ್ವದೇಶಿ ನಿರ್ಮಿತ ಕ್ರಯೋಜನಿಕ್‘ತಂತ್ರಜ್ಞಾನ ಒಳಗೊಂಡ ಜಿಎಸ್‘ಎಲ್‘ವಿ-ಡಿ5 (GSLV-D25) ಉಡಾವಣೆ
ಸ್ಕ್ರಾಮ್‌ಜೆಟ್ ಎಂಜಿನ್ ಯಶಸ್ವಿ ಪರೀಕ್ಷೆ
[ಬದಲಾಯಿಸಿ]- 29 Aug, 2016
- ರಾಕೆಟ್ ತಂತ್ರಜ್ಞಾನದಲ್ಲಿ ಸೂಪರ್ ಸಾನಿಕ್ ಕಂಬುಷನ್ ರಾಮ್‌ಜೆಟ್ (ಸ್ಕ್ರಾಮ್‌ಜೆಟ್) ಎಂಜಿನ್ ಈವರೆಗಿನ ಅತ್ಯಾಧುನಿಕ ತಂತ್ರಜ್ಞಾನವೆನಿಸಿದೆ. ಅಮೆರಿಕ, ರಷ್ಯಾ ಮತ್ತು ಐರೋಪ್ಯ ಒಕ್ಕೂಟವಷ್ಟೇ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿವೆ. ಈಗ ಇದೇ ಸ್ವರೂಪದ ಎಂಜಿನ್ ಅನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿ, ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತವೂ ಈ ರಾಷ್ಟ್ರಗಳ ಸಾಲಿಗೆ ಸೇರಿದೆ. ರಾಕೆಟ್‌ಗಳ ಎಂಜಿನ್‌ಗಳಲ್ಲಿ ಸಾಮಾನ್ಯವಾಗಿ ಇಂಧನವಾಗಿ ಜಲಜನಕವನ್ನು ಹಾಗೂ ದಹನಶೀಲ ಉತ್ಕರ್ಷಣಕಾರಿಯಾಗಿ (ಆಕ್ಸಿಡೈಸ್) ಆಮ್ಲಜನಕವನ್ನು ಬಳಸಲಾಗುತ್ತದೆ. ಸಾಮಾನ್ಯ ರಾಕೆಟ್‌ಗಳಲ್ಲಿ ಜಲಜನಕ ಮತ್ತು ಆಮ್ಲಜನಕ ಎರಡನ್ನೂ ಸಂಗ್ರಹಿಸಿ ಇಡಲಾಗಿರುತ್ತದೆ.
- ರಾಕೆಟ್‌ಗಳು ಇವೆರಡನ್ನೂ ಹೊತ್ತುಕೊಂಡು ಹೋಗುತ್ತವೆ. ಸ್ಕ್ರಾಮ್‌ಜೆಟ್ ಎಂಜಿನ್ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಹೀರಿಕೊಂಡು ಕೆಲಸ ಮಾಡುವುದರಿಂದ ಕಾರ್ಯಾಚರಣೆಯ ವೆಚ್ಚದಲ್ಲಿ ಭಾರಿ ಇಳಿಕೆ ಆಗುತ್ತದೆ. ಇಸ್ರೊ ತನ್ನ ಮರುಬಳಕೆ ಉಡಾವಣಾ ವಾಹನಗಳಲ್ಲಿ ಈ ಎಂಜಿನ್‌ಗಳನ್ನು ಬಳಸಲು ಉದ್ದೇಶಿಸಿದೆ. ಇದನ್ನು ಇನ್ನಷ್ಟು ಸುಧಾರಣೆ ಮಾಡಬೇಕಿದೆ ಎಂದು ಇಸ್ರೊ ಹೇಳಿದೆ. ಈ ಪರೀಕ್ಷೆ ಯಶಸ್ವಿಯಾಗಿರುವುದರಿಂದ ಸ್ಕ್ರಾಮ್‌ಜೆಟ್ ಎಂಜಿನ್ ಇರುವ ರಾಕೆಟ್‌ಗಳ ಅಭಿವೃದ್ಧಿಯಲ್ಲಿ ಇಸ್ರೊ ಮಹತ್ವದ ಮೈಲುಗಲ್ಲು ಸಾಧಿಸಿದಂತಾಗಿದೆ. ಇಸ್ರೊ ಸಾಧನಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮ್ಯಾಕ್ 6:
[ಬದಲಾಯಿಸಿ]- ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ. ಬದಲಾದ ಈ ವೇಗವನ್ನು ‘ಮ್ಯಾಕ್’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್ ಎಂದು ಕರೆಯಲಾಗುತ್ತದೆ.
ಪರೀಕ್ಷೆ ಉದ್ದೇಶ
[ಬದಲಾಯಿಸಿ]- ಹೈಪರ್ ಸಾನಿಕ್ ವೇಗದಲ್ಲಿ ಸ್ಕ್ರಾಮ್‌ಜೆಟ್ ಎಂಜಿನ್ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ ಪರೀಕ್ಷೆ; ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ; ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ
ಪರೀಕ್ಷೆ ವಿವರ
[ಬದಲಾಯಿಸಿ]- ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6ಗಂಟೆಗೆ ಉಡಾವಣೆ
- ಇಸ್ರೊದ ಸುಧಾರಿತ ತಂತ್ರಜ್ಞಾನ ವಾಹನ (ಎಟಿವಿ) 02 ಬಳಸಿ ಪರೀಕ್ಷೆ
- ಎಟಿವಿಯಲ್ಲಿ ಎರಡು ಹಂತದ ಎಂಜಿನ್
- ಮೊದಲ ಎಂಜಿನ್ ಮೂಲಕ ಎಟಿವಿ ಉಡಾವಣೆ
- ತುಸು ಸಮಯದ ನಂತರ 2ನೇ ಎಂಜಿನ್ ಕಾರ್ಯನಿರ್ಹಹಣೆ
- ನಂತರದ ಹಂತದಲ್ಲಿ ಎರಡು ಸ್ಕ್ರಾಮ್‌ಜೆಟ್ ಎಂಜಿನ್‌ಗಳ ದಹನ ಕ್ರಿಯೆ ಆರಂಭ
ಇತರೆ ವಿವರ
[ಬದಲಾಯಿಸಿ]ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್ ಎಂಜಿನ್ ಸೇರಿ ಎಟಿವಿ 02ನ ತೂಕ :3277 ಕೆ.ಜಿ. ಸ್ಕ್ರಾಮ್‌ಜೆಟ್ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ :5 ಸೆಕೆಂಡ್* ಪರೀಕ್ಷೆಯ ಅವಧಿ :300 ಸೆಕೆಂಡ್* ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ :320 ಕಿ.ಮೀ* ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ :7408 ಕಿ.ಮೀ/ಮ್ಯಾಕ್ 6
ಮ್ಯಾಕ್ 6:
[ಬದಲಾಯಿಸಿ]- ಶಬ್ದದ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ. ಸಮುದ್ರದ ಮೇಲ್ಮೈ ಉಷ್ಣಾಂಶದಲ್ಲಿ (ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್) ಶಬ್ದ ಪ್ರತಿ ಗಂಟೆಗೆ 1225 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಉಷ್ಣಾಂಶ ಬದಲಾದಂತೆ ಈ ವೇಗದಲ್ಲೂ ತುಸು ಬದಲಾಗುತ್ತದೆ. ಬದಲಾದ ಈ ವೇಗವನ್ನು ‘ಮ್ಯಾಕ್’ ಎಂದು ಕರೆಯಲಾಗುತ್ತದೆ. ಶಬ್ದದ ವೇಗವನ್ನು ಮ್ಯಾಕ್ 1 ಎಂದು ಕರೆಯಲಾಗುತ್ತದೆ. ಒಟ್ಟಾರೆ ಶಬ್ದಕ್ಕಿಂತಲೂ ಹೆಚ್ಚಿನ ವೇಗವನ್ನು ಹೈಪರ್‌ಸಾನಿಕ್ ಎಂದು ಕರೆಯಲಾಗುತ್ತದೆ.
ಪರೀಕ್ಷೆ ಉದ್ದೇಶ
[ಬದಲಾಯಿಸಿ]- ಹೈಪರ್ ಸಾನಿಕ್ ವೇಗದಲ್ಲಿ ಸ್ಕ್ರಾಮ್‌ಜೆಟ್ ಎಂಜಿನ್ ಆಮ್ಲಜನಕ ಹೀರಿಕೊಂಡು, ಜಲಜನಕದೊಂದಿಗೆ ಸರಿಯಾಗಿ ಮಿಶ್ರಣವಾಗುತ್ತದೆಯೇ ಎಂಬುದರ ಪರೀಕ್ಷೆ; ಆ ವೇಗದಲ್ಲಿ ಇಂಧನದ ಮಿಶ್ರಣಕ್ಕೆ ಕಿಡಿ ಹೊತ್ತಿ, ಇಂಧನ ದಹಿಸಲು ಆರಂಭಿಸುತ್ತದೆಯೇ ಎಂಬುದರ ಪರಿಶೀಲನೆ; ಸಂಗ್ರಹದಲ್ಲಿರುವ ಅಷ್ಟೂ ಇಂಧನ ಮುಗಿಯುವವರೆಗೆ ದಹನ ಕ್ರಿಯೆ ಮುಂದುವರೆಯುತ್ತದೆಯೇ ಎಂಬುದರ ಪರೀಕ್ಷೆ
ಪರೀಕ್ಷೆ ವಿವರ
[ಬದಲಾಯಿಸಿ]- ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 6ಗಂಟೆಗೆ ಉಡಾವಣೆ
- ಇಸ್ರೊದ ಸುಧಾರಿತ ತಂತ್ರಜ್ಞಾನ ವಾಹನ (ಎಟಿವಿ) 02 ಬಳಸಿ ಪರೀಕ್ಷೆ
- ಎಟಿವಿಯಲ್ಲಿ ಎರಡು ಹಂತದ ಎಂಜಿನ್
- ಮೊದಲ ಎಂಜಿನ್ ಮೂಲಕ ಎಟಿವಿ ಉಡಾವಣೆ
- ತುಸು ಸಮಯದ ನಂತರ 2ನೇ ಎಂಜಿನ್ ಕಾರ್ಯನಿರ್ಹಹಣೆ
- ನಂತರದ ಹಂತದಲ್ಲಿ ಎರಡು ಸ್ಕ್ರಾಮ್‌ಜೆಟ್ ಎಂಜಿನ್‌ಗಳ ದಹನ ಕ್ರಿಯೆ ಆರಂಭ
ಇತರೆ ವಿವರ
[ಬದಲಾಯಿಸಿ]- ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್ ಎಂಜಿನ್ ಸೇರಿ ಎಟಿವಿ 02ನ ತೂಕ :3277 ಕೆ.ಜಿ.
- ಸ್ಕ್ರಾಮ್‌ಜೆಟ್ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ :5 ಸೆಕೆಂಡ್*
- ಪರೀಕ್ಷೆಯ ಅವಧಿ :300 ಸೆಕೆಂಡ್*
- ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ :320 ಕಿ.ಮೀ*
- ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ :7408 ಕಿ.ಮೀ/ಮ್ಯಾಕ್ 6
- 100th Consecutively Successful Launch of Sounding Rocket RH-200 from TERLS Archived 2016-08-08 ವೇಬ್ಯಾಕ್ ಮೆಷಿನ್ ನಲ್ಲಿ.
- ISRO successfully test launches scramjet rocket engine
- ಸ್ಕ್ರಾಮ್‌ಜೆಟ್ ಎಂಜಿನ್ ಯಶಸ್ವಿ ಪರೀಕ್ಷೆ Archived 2016-08-30 ವೇಬ್ಯಾಕ್ ಮೆಷಿನ್ ನಲ್ಲಿ.
ಇಸ್ರೊದಿಂದ ‘ಶುಕ್ರ ಯಾನ’ ಯೋಜನೆ
[ಬದಲಾಯಿಸಿ]- 20 Apr, 2017
- ದಿ.೧೯-೪-೨೦೧೭ ರಂದು ಶುಕ್ರ ಗ್ರಹದ ವೈಜ್ಞಾನಿಕ ಅಧ್ಯಯನಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸುವ ‘ಶುಕ್ರ ಯಾನ’ ಯೋಜನೆಯನ್ನು ಇಸ್ರೋ ಅಧಿಕೃತವಾಗಿ ಪ್ರಕಟಿಸಿದೆ. ದೇಶದ ವಿವಿಧ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಶುಕ್ರ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇಸ್ರೋ ಕರೆ ನೀಡಿದೆ. ಇಸ್ರೋ ನಿರ್ದೇಶಕ ದೇವಿಪ್ರಸಾದ್ ಕಾರ್ಣಿಕ್, ‘ಶುಕ್ರ ಯೋಜನೆ ಕುರಿತ ಅಧಿಕೃತ ಘೋಷಣೆ ಇದಾಗಿದೆ. ವೈಜ್ಞಾನಿಕ ಅಧ್ಯಯನಕ್ಕೆ ಅಗತ್ಯವಿರುವ ಪೇಲೋಡ್‌ಗಳನ್ನು ವಿಜ್ಞಾನ ಸಂಸ್ಥೆಗಳು ಅಭಿವೃದ್ಧಿಪಡಿಸಬೇಕಾಗಿದೆ’ ಎಂದರು. ಈ ಯೋಜನೆ ಕಾರ್ಯಗತಗೊಳಿಸಲು ಕೆಲವು ವರ್ಷಗಳೇ ಬೇಕಾಗುತ್ತದೆ. ಒಂದೆರಡು ವರ್ಷಗಳಲ್ಲಿ ಆಗುವ ಕೆಲಸವಲ್ಲ ಎಂದು ಅವರು ಹೇಳಿದರು.[೮]
ಆಕಾಶಯಾನ ನೌಕಾ ವಾಹಕ
[ಬದಲಾಯಿಸಿ]- ಇಸ್ರೊ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ (ಜಿಎಸ್‌ಎಲ್‌ವಿ) ಮಾರ್ಕ್ 3, 200 ಏಷ್ಯಾ ಆನೆಗಳಷ್ಟು (ಏಷ್ಯಾ ಆನೆಗಳ ಸರಾಸರಿ ತೂಕ 3ಟನ್) ತೂಕವಿದೆ. ಜಿಎಸ್‌ಎಲ್‌ವಿ ಮಾರ್ಕ್ 3 ಎಂಬ ಹೆಸರಿನ 640 ಟನ್ ತೂಕದ ಉಡಾವಣಾ ವಾಹನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಇಸ್ರೊ ಈವರೆಗೆ ಅಭಿವೃದ್ಧಿ ಪಡಿಸಿದ ಅತ್ಯಂತ ತೂಕದ ರಾಕೆಟ್ ಎನಿಸಿದೆ.
- ‘ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕ್ರಯೋಜೆನಿಕ್ ಎಂಜಿನ್ ಇರುವ ಮಾರ್ಕ್ 3, ಭೂಸಮನ್ವಯ ಕಕ್ಷೆಗೆ 4 ಟನ್ ತೂಕದ ಉಪಗ್ರಹಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್‌ನ ಪರೀಕ್ಷೆ ಈಗಾಗಲೇ ಯಶಸ್ವಿಯಾಗಿ ನಡೆದಿದೆ. ಆದರೆ ಮಾರ್ಕ್ 3ನಲ್ಲಿ ಅಳವಡಿಸಿ, ಮತ್ತೊಮ್ಮೆ ಪರೀಕ್ಷೆ ನಡೆಸಬೇಕಿದೆ’ ಎಂದು ಇಸ್ರೊ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.[೯]
ಜಿಸ್ಯಾಟ್–17 ಉಪಗ್ರಹ ಯಶಸ್ವಿ ಉಡಾವಣೆ
[ಬದಲಾಯಿಸಿ]- 29 ಜೂನ್, 2017;
- ಜಿಸ್ಯಾಟ್–17 ದೂರಸಂಪರ್ಕ ಉಪಗ್ರಹವನ್ನು ಏರಿಯಾನ್–5 ವಿಎ–238 ಮೂಲಕ, ಕೌರೌನ ಗಯಾನಾ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇಸ್ರೋದಿಂದ ಈಗಾಗಲೇ ಕಕ್ಷೆ ಸೇರಿರುವ 17 ದೂರಸಂಪರ್ಕ ಉಪಗ್ರಹಗಳ ಜತೆ ಇದು ಕಾರ್ಯನಿರ್ವಹಿಸಲಿದೆ.ದೇಶದ ನೂತನ ದೂರಸಂಪರ್ಕ ಉಪಗ್ರಹ ಜಿಸ್ಯಾಟ್–17 ಅನ್ನು ಫ್ರೆಂಚ್ ಗಾಯಾನದ ಕೌರೌ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉಪಗ್ರಹವನ್ನು ಏರಿಯಾನ್–5 ವಿಎ–238 ಉಡಾವಣಾ ವಾಹಕದ ಮೂಲಕ 28/29 ಜೂನ್, 2017ಬುಧವಾರ ತಡರಾತ್ರಿ 2.31ಕ್ಕೆ ಉಡಾವಣೆ ಮಾಡಲಾಗಿದೆ.
- ಕಳೆದ ಒಂದು ತಿಂಗಳಿನ ಅವಧಿಯಲ್ಲಿ ಇಸ್ರೋದಿಂದ ಉಡಾವಣೆಗೊಂಡ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್‌ಎಲ್‌ವಿ ಎಂಕೆ–3 ಹಾಗೂ ಪಿಎಸ್‌ಎಲ್‌ವಿ ಸಿ–38 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. ಜಿಸ್ಯಾಟ್–17 ಒಟ್ಟು 3,477 ಕೆ.ಜಿ ತೂಕವಿದೆ. ಹವಾಮಾನ ದತ್ತಾಂಶ, ಉಪಗ್ರಹ ಆಧಾರಿತ ಹುಡುಕಾಟದ ಸೇವೆಗೆ ಇದು ಬಳಕೆ ಆಗಲಿದೆ ಎಂದು ಇಸ್ರೊ ಹೇಳಿದೆ.[೧೦]
ನೋಡಿ
[ಬದಲಾಯಿಸಿ]- ಇಸ್ರೊ ಕಕ್ಷೆಯ ವಾಹನ
- ಎಚ್ಎಎಲ್ ತೇಜಸ್ಇದಕ್ಕೆ -'ಎಚ್.ಎ.ಎಲ್ -ಲಘು ಯುದ್ಧ ವಿಮಾನ ೨೦೧೩-೨ನೆ ಹಂತ' ಸೇರಿಸಿದೆ.
- ಜಿ.ಎಸ್.ಎಲ್.ವಿಡಿ೫ - ರಾಕೆಟ್ - ಕೃತಕ ಉಪಗ್ರಹ ವಾಹಕ-
- ಎಚ್ಎಎಲ್ ತೇಜಸ್--ಹೆಚ್ಎಎಲ್ ತೇಜಸ್ ಯುದ್ಧ ವಿಮಾನ
- ಎಸ್. ನಂಬಿ ನಾರಾಯಣನ್-ಉಪಗ್ರಹ ಉಡಾವಣೆಗೆ ಕ್ರಯೋಜನಿಕ್ ಎಂಜಿನ ತಂತ್ರಜ್ಞಾನ ಸಂಶೋದನೆ ಮಾಡಿದ ವಿಜ್ಞಾನಿ. *ಮಂಗಳಯಾನ
- ಭೂಸ್ಥಾಯೀ ಉಪಗ್ರಹ ಉಡ್ಡಯನ ವಾಹನ-GSLV
- ವಿಜ್ಞಾನ
- ಇಸ್ರೋಭೇಟಿ :ಸಂಸ್ಥೆಗಳು ರೂಪಿಸುವ ಸಂಸ್ಕಾರ: Archived 2016-09-21 ವೇಬ್ಯಾಕ್ ಮೆಷಿನ್ ನಲ್ಲಿ.
- ಮಾನವೀಯ ಗುಣದ ವಿಜ್ಞಾನಿ ಜಿ.ಕೆ.ಮೆನನ್;ಎಸ್. ನಿರೂಪಣೆ-ರವಿಪ್ರಕಾಶ್;27 Nov, 2016 Archived 2016-11-27 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಇಸ್ರೋ ಅಧಿಕೃತ ತಾಣ Archived 2012-02-05 ವೇಬ್ಯಾಕ್ ಮೆಷಿನ್ ನಲ್ಲಿ.
- ಜಿಎಸ್ಎಲ್ವಿ ರಾಕೆಟ್
- ಪಿಎಸ್ಎಲ್ವಿ ರಾಕೆಟ್
ಹೆಚ್ಚಿನ ಓದಿಗೆ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://en.wikipedia.org/wiki/Indian_Space_Research_Organisation
- ↑ Eligar Sadeh (11 February 2013). Space Strategy in the 21st Century: Theory and Policy. Routledge. pp. 303–.ISBN 978-1-136-22623-6
- ↑ ಹೀಗಿತ್ತು ನಮ್ಮ ಪಯಣದ ಹಾದಿ...25 Sep, 2014- ಪ್ರಜಾವಾಣಿ ೨೫-೯-೨೦೧೪
- ↑ Genesis of Indian Space Programme
- ↑ "100th Consecutively Successful Launch of Sounding Rocket RH-200 from TERLS". Archived from the original on 2016-08-08. Retrieved 2016-08-30.
- ↑ ISRO successfully test launches scramjet rocket engine
- ↑ "ಸ್ಕ್ರಾಮ್‌ಜೆಟ್ ಎಂಜಿನ್ ಯಶಸ್ವಿ ಪರೀಕ್ಷೆ". Archived from the original on 2016-08-30. Retrieved 2016-08-30.
- ↑ "ಅಧಿಕೃತ ಘೋಷಣೆ;ಇಸ್ರೊದಿಂದ 'ಶುಕ್ರ ಯಾನ' ಯೋಜನೆ ಪ್ರಕಟ;ಎಸ್.ರವಿಪ್ರಕಾಶ್;20 Apr, 2017". Archived from the original on 2017-04-20. Retrieved 2017-04-20.
- ↑ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ರಾಕೆಟ್ ಸಿದ್ಧ;ಪಿಟಿಐ;29 May, 2017
- ↑ ಜಿಸ್ಯಾಟ್–17 ಉಪಗ್ರಹ ಯಶಸ್ವಿ ಉಡಾವಣೆಪಿಟಿಐ;29 Jun, 2017;ಪಿಟಿಐ