ವಿಷಯಕ್ಕೆ ಹೋಗು

ಶ್ರೀಹರಿಕೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಹರಿಕೋಟ ಭಾರತಆಂಧ್ರಪ್ರದೇಶ ರಾಜ್ಯದ ನೆಲ್ಲೂರಿನಲ್ಲಿರುವ, ದಕ್ಷಿಣದಂಚಿನಲ್ಲಿ ಬಂಗಾಳ ಕೊಲ್ಲಿಯಲ್ಲಿನ ಒಂದು ದ್ವೀಪ. ಶ್ರೀಹರಿಕೋಟದಲ್ಲಿ ಭಾರತದ ಏಕೈಕ ಉಪಗ್ರಹ ಉಡಾವಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಸೇರಿದ ಸತೀಶ್ ಧಾವನ್ ಬಾಹ್ಯಾಕಾಶ ಕೇಂದ್ರದಿಂದ ಪಿ.ಎಸ್.ಎಲ್.ವಿ ಮತ್ತು ಜಿ.ಎಸ್.ಎಲ್.ವಿ. ಮುಂತಾದ ರಾಕೆಟ್‌ಗಳ ಮೂಲಕ ಕೃತಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳುಹಿಸಲಾಗುತ್ತದೆ. ಬಂಗಾಳ ಕೊಲ್ಲಿ ಮತ್ತು ಪುಲಿಕಾಟ್ ಸರೋವರಗಳ ನಡುವೆ ಇರುವ ಶ್ರೀಹರಿಕೋಟ ಚೆನ್ನೈ ಮಹಾನಗರಕ್ಕೆ ಬಲು ಸಮೀಪದಲ್ಲಿದೆ. ಶ್ರೀಹರಿಕೋಟದಿಂದ ಇತ್ತೀಚೆಗೆ ಚಂದ್ರಯಾನವನ್ನು ಯಶಸ್ವಿಯಾಗಿ ಅಂತರಿಕ್ಷಕ್ಕೆ ಕಳುಹಿಸಲಾಯಿತು.ಮತ್ತೊಂದು ಥುಂಬ ಈಕ್ವಟೋರಿಯಲ್ ರಾಕೆಟ್ ಸ್ಟೇಷನ್ ಆರಂಭಿಸಿದ್ದ ಭಾರತ ಎರಡು ಉಪಗ್ರಹ ಉಡಾವಣಾ ಕೇಂದ್ರಗಳಲ್ಲಿ ಒಂದಾಗಿದೆ.ಶ್ರೀಹರಿಕೋಟ ಹತ್ತಿರದ ಪಟ್ಟಣ ಮತ್ತು ರೈಲು ನಿಲ್ದಾಣವು, ಸುಳ್ಳುರ್ ಪೇಟೆ. ಇದು ಚೆನೈ ನಗರದಿಂದ 80 ಕಿಮೀ ದೂರವಿದೆ.

ವಾತವರಣ[ಬದಲಾಯಿಸಿ]

ಶ್ರೀಹರಿಕೋಟದ ಹವಾಮಾನ, ಉಷ್ಣವಲಯದ ತೇವ ಮತ್ತು ಒಣವಾಗಿರುತ್ತದ.