ಟೆಕ್ಸಾಸ್ ಇಂಸ್ಟ್ರುಮೆಂಟ್ಸ್
ಸಂಸ್ಥೆಯ ಪ್ರಕಾರ | Public |
---|---|
ಪೂರ್ವಾಧಿಕಾರಿ | Geophysical Service |
ಸ್ಥಾಪನೆ | ಟೆಂಪ್ಲೇಟು:ಪ್ರಾರಂಭ (ಪೂರ್ವನಾಮ ಜಿಯೋಫಿಸಿಕಲ್ ಸರ್ವಿಸ್ ಇಂಕ್.)[೧] 1951 (as Texas Instruments) |
ಮುಖ್ಯ ಕಾರ್ಯಾಲಯ | ಡ್ಯಾಲಸ್, ಟೆಕ್ಸಾಸ್, ಅಮೆರಿಕಾ ಸಂಯುಕ್ತ ಸಂಸ್ಥಾನ |
ಪ್ರಮುಖ ವ್ಯಕ್ತಿ(ಗಳು) | ರಿಚ್ ಟೆಂಪಲ್ಟನ್ [೨] (ಚೇರ್ಮನ್, ಪ್ರೆಸಿಡೆಂಟ್ ಮತ್ತು ಸಿಈಓ) |
ಉದ್ಯಮ | ಸೆಮಿಕಂಡಕ್ಟರ್ |
ಉತ್ಪನ್ನ | ಅನಲಾಗ್ ಎಲೆಕ್ಟ್ರಾನಿಕ್ಸ್ ಕ್ಯಾಲ್ಕ್ಯುಲೇಟರ್ ಡಿಜಿಟಲ್ ಸಿಗ್ನಲ್ ಪ್ರಾಸೆಸರ್ Digital light processors ಇಂಟೆಗ್ರೇಟೆಡ್ ಸರ್ಕ್ಯೂಟ್ ಎಂಬೆಡೆಡ್ ಪ್ರಾಸೆಸರ್ |
ಆದಾಯ | ಟೆಂಪ್ಲೇಟು:ಇಳಿಕೆ ಟೆಂಪ್ಲೇಟು:ಡಾಲರ್ (2016)[೩] |
ಆದಾಯ(ಕರ/ತೆರಿಗೆಗೆ ಮುನ್ನ) | ಟೆಂಪ್ಲೇಟು:ಏರಿಕೆ ಟೆಂಪ್ಲೇಟು:ಡಾಲರ್ (2016)[೩] |
ನಿವ್ವಳ ಆದಾಯ | ಟೆಂಪ್ಲೇಟು:ಏರಿಕೆ US$೨.೯೮ ಬಿಲಿಯನ್ (2016)[೩] |
ಒಟ್ಟು ಆಸ್ತಿ | ಟೆಂಪ್ಲೇಟು:ಇಳಿಕೆ US$೧೬.೨೩ ಬಿಲಿಯನ್ (2016)[೩] |
ಒಟ್ಟು ಪಾಲು ಬಂಡವಾಳ | ಟೆಂಪ್ಲೇಟು:ಇಳಿಕೆ US$೯.೯೪ ಬಿಲಿಯನ್ (2016)[೩] |
ಉದ್ಯೋಗಿಗಳು | 29,977 ಉದ್ಯೋಗಿಗಳು (2016)[೩] |
ಜಾಲತಾಣ | www |
ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ (ಟಿ.ಐ.) ಒಂದು ಪ್ರಮುಖ ಅಮೆರಿಕನ್ ತಂತ್ರಜ್ಞಾನ ಸಂಸ್ಥೆ. ಅದರ ಮುಖ್ಯ ತಯಾರಿಕೆ ಸೆಮಿಕಂಡಕ್ಟರ್ ಉತ್ಪನ್ನಗಳು. ಇವುಗಳು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಕೆಯಾಗುತ್ತವೆ.[೪] ಮುಖ್ಯ ಕಚೇರಿಡ್ಯಾಲಸ್ ನಗರ, ಟೆಕ್ಸಾಸ್, ಅಮೆರಿಕಾ ಸಂಸ್ಥಾನ. ಮಾರಾಟದ ಸಂಖ್ಯೆ ಗಮನದಲ್ಲಿಟ್ಟುಕೊಂಡು ಜಗತ್ತಿನ ಹತ್ತು ಪ್ರಮುಖ ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಟಿ.ಐ. ಕೂಡಾ ಒಂದು.[೫] ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಸಂಸ್ಥೆಯ ಮುಖ್ಯ ಉತ್ಪನ್ನಗಳೆಂದರೆ ಅನಲಾಗ್ ಸರ್ಕ್ಯೂಟ್ಗಳು ಮತ್ತು ಎಂಬೆಡೆಡ್ ಪ್ರಾಸೆಸರ್ಗಳು, ಕಂಪನಿಯ ಆದಾಯದ ೮೫% ಇವುಗಳಿಂದಲೇ ಕೂಡಿದೆ.[೬] ಟಿ.ಐ. ಇನ್ನಿತರ ತಯಾರಿಕೆಗಳೆಂದರೆ ಡಿಜಿಟಲ್ ಲೈಟ್ ಪ್ರಾಸೆಸರ್ [೬], ಕ್ಯಾಲ್ಕ್ಯುಲೇಟರ್, ಮೈಕ್ರೋಕಂಟ್ರೋಲರ್ ಮತ್ತು ಮಲ್ಟಿಕೋರ್ ಪ್ರಾಸೆಸರ್. ಟಿ.ಐ. 43,000ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಹೊಂದಿದೆ.[೭]
೧೯೫೧ರಲ್ಲಿ ಜಿಯೋಫಿಸಿಕಲ್ ಸರ್ವಿಸ್ ಇಂಕ್ ಎಂಬ ಸಂಸ್ಥೆಯನ್ನು ಪುನರ್ ಸಂಘಟಿಸಿ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಎಂಬ ಕಂಪನಿಯನ್ನು ಹುಟ್ಟುಹಾಕಲಾಯಿತು. ಜಿಯೋಫಿಸಿಕಲ್ ಸರ್ವಿಸ್ ಇಂಕ್ ಎಂಬ ಸಂಸ್ಥೆ ೧೯೩೦ರಲ್ಲಿ ಪ್ರಾರಂಭವಾಗಿತ್ತು. ಭೂಗರ್ಭದಲ್ಲಿರುವ ಪೆಟ್ರೋಲಿಯಂ ಖನಿಜವನ್ನು ಹುಡುಕಾಡಲು ಸಾಧನಗಳನ್ನು ಈ ಸಂಸ್ಥೆ ತಯಾರಿಸುತ್ತಿತ್ತು. ಇದಲ್ಲದೆ ಅಮೆರಿಕಾ ದೇಶದ ರಕ್ಷಣಾ ವಿಭಾಗಕ್ಕಾಗಿ ಬೇಕಾದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನೂ ಈ ಸಂಸ್ಥೆ ತಯಾರಿಸುತ್ತಿತ್ತು.[೮] ೧೯೫೦ರಲ್ಲಿ ಜಗತ್ತಿನ ಪ್ರಥಮ ಸಿಲಿಕಾನ್ ಟ್ರಾನ್ಸಿಸ್ಟರ್ ಉತ್ಪಾದಿಸಿ ಟಿ.ಐ. ದಾಖಲೆ ಸ್ಥಾಪಿಸಿತು. ಇದನ್ನು ಬಳಸಿ ೧೯೫೪ರಲ್ಲಿ ಜಗತ್ತಿನ ಪ್ರಥಮ ಟ್ರಾನ್ಸಿಸ್ಟರ್ ರೇಡಿಯೋ ತಯಾರಿಸಿತು. ಜ್ಯಾಕ್ ಕಿಲ್ಬಿ ಎಂಬ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಸಂಸ್ಥೆಯ ಇಂಜಿನಿಯರ್ ಇಂಟೆಗ್ರೇಟೆಡ್ ಸರ್ಕ್ಯೂಟ್ ಎಂಬ ಸಾಧನವನ್ನು 1958ರಲ್ಲಿ ಅನ್ವೇಷಿಸಿದ. ೧೯೬೭ರಲ್ಲಿ ಟಿ.ಐ. ಜಗತ್ತಿನ ಪ್ರಥಮ ಕೈಪಿಡಿ ಕ್ಯಾಲ್ಕ್ಯುಲೇಟರ್ ಅನ್ವೇಷಿಸಿತು. ಜಗತ್ತಿನ ಪ್ರಥಮ ಏಕ-ಸರ್ಕ್ಯೂಟ್ ಮೈಕ್ರೋಕಂಟ್ರೋಲರ್ ಕೂಡಾ ಟಿ.ಐ. ಹೆಗ್ಗಳಿಕೆಗಳಲ್ಲಿ ಒಂದು (೧೯೬೭).[೯]
೧೯೮೭ರಲ್ಲಿ ಟಿ.ಐ. “ಡಿಜಿಟಲ್ ಲೈಟ್ ಪ್ರಾಸೆಸಿಂಗ್” (DLP) ಅಥವಾ ಬೆಳಕನ್ನು ಸಂಸ್ಕರಿಸುವ ಸಾಧನವನ್ನು ಅನ್ವೇಷಿಸಿತು. ಈ ತಂತ್ರಜ್ಞಾನವು ಕಂಪನಿಯ DLP ತಂತ್ರಜ್ಞಾನದ ಅಡಿಗಲ್ಲು. DLP ಸಿನೆಮಾಗಳಲ್ಲಿ ಬಳಕೆಯಾಗುವ ಈ ತಂತ್ರಜ್ಞಾನ ಆಸ್ಕರ್ ಪ್ರಶಸ್ತಿಯನ್ನೂ ಒಳಗೊಂಡು ಅನೇಕ ಪುರಸ್ಕಾರಗಳಿಗೆ ಪಾತ್ರವಾಗಿದೆ. 1990ರಲ್ಲಿ TI-81 ಎಂಬ ಗ್ರಾಫಿಂಗ್ ಕ್ಯಾಲ್ಕ್ಯುಲೇಟರ್ ಮೂಲಕ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಕ್ಯಾಲ್ಕ್ಯುಲೇಟರ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. 1997ರಲ್ಲಿ ಟಿ.ಐ. ತನ್ನ “ರಕ್ಷಣಾ ಎಲೆಕ್ಟ್ರಾನಿಕ್ಸ್” ವಿಭಾಗವನ್ನು ರೇಥಿಯಾನ್ ಎಂಬ ಕಂಪನಿಗೆ ಮಾರಿತು. ಈ ಮೂಲಕ ಟಿ.ಐ. ಡಿಜಿಟಲ್ ಉತ್ಪನ್ನಗಳ ಮೇಲೆ ಹೆಚ್ಚಿನ ಗಮನ ನೀಡತೊಡಗಿತು.[೧೦] 2011ರಲ್ಲಿ ನ್ಯಾಷನಲ್ ಸೆಮಿಕಂಡಕ್ಟರ್ ಎಂಬ ಕಂಪನಿಯನ್ನು ಖರೀದಿಸಿತು. ಹೀಗೆ ನ್ಯಾಟ್ ಸೆಮ್ ಕಂಪನಿಯ 45,000 ಅನಲಾಗ್ ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ವಿನ್ಯಾಸ ತಂತ್ರಾಂಶಗಳನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳುವ ಮೂಲಕ ಟಿ.ಐ. ಅನಲಾಗ್ ಎಲೆಕ್ಟ್ರಾನಿಕ್ ಉತ್ಪನ್ನಗಳ ಕ್ಷೇತ್ರದಲ್ಲಿ ಅಗ್ರಮಾನ್ಯವೆನ್ನಿಸಿಕೊಂಡಿತು.[೧೧]
ಇತಿಹಾಸ
[ಬದಲಾಯಿಸಿ]ಸೆಸಿಲ್ ಎಚ್. ಗ್ರೀನ್, ಜೆ. ಎರಿಕ್ ಜಾನ್ಸನ್, ಯೂಜೀನ್ ಮೆಕ್ಡರ್ಮಾಟ್, ಮತ್ತು ಪ್ಯಾಟ್ರಿಕ್ ಹ್ಯಾಗರ್ಟಿ ಎಂಬ ನಾಲ್ವರು ಕೂಡಿ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಸಂಸ್ಥೆಯನ್ನು 1951ರಲ್ಲಿ ಸ್ಥಾಪಿಸಿದರು. ಯೂಜೀನ್ ಮ್ಯಾಕ್ಡರ್ಮಾಟ್ ಈ ಕಂಪನಿಯ ಪೂರ್ವಸಂಸ್ಥೆಯಾಗಿದ್ದ ಜಿಯೋಫಿಸಿಕಲ್ ಸರ್ವಿಸ್ ಇಂಕ್ ಎಂಬ ಕಂಪನಿಯ ಸ್ಥಾಪಕರಾಗಿದ್ದರು. ಮ್ಯಾಕ್ಡರ್ಮಾಟ್, ಗ್ರೀನ್ ಮತ್ತು ಜಾನ್ಸ್ಯನ್ GSI ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದರು. 1941ರಲ್ಲಿ ಇವರು ಕೂಡಿ GSI ಕಂಪನಿಯನ್ನು ಖರೀದಿಸಿದರು. 1945ರ ನವೆಂಬರ್ ತಿಂಗಳಲ್ಲಿ ಪ್ಯಾಟ್ರಿಕ್ ಹ್ಯಾಗರ್ಟಿಯನ್ನು ಕಂಪನಿಯ “ಪ್ರಯೋಗಾಲಯಗಳು ಮತ್ತು ಉತ್ಪಾದನೆ” ವಿಭಾಗಕ್ಕೆ ಮೇಲ್ವಿಚಾರಕನ ಹುದ್ದೆಗೆ ನೇಮಿಸಲಾಯಿತು. ಈ ವಿಭಾಗವು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುತ್ತಿತ್ತು.[೧೨] 1951ರವರೆಗೆ ಅಮೆರಿಕಾ ಸಂಸ್ಥಾನದ ರಕ್ಷಣಾವಿಭಾಗದಿಂದ ಪಡೆದುಕೊಂಡ ಕಾಂಟ್ರಾಕ್ಟುಗಳ ಮೂಲಕ ಈ ವಿಭಾಗವು GSI ಉಳಿದ ವಿಭಾಗಗಳಿಗಿಂತ ಹೆಚ್ಚಿನ ಗತಿಯಲ್ಲಿ ಬೆಳೆಯತೊಡಗಿತ್ತು. 1951ರಲ್ಲಿ ಕಂಪನಿಯನ್ನು ಪುನರ್ವಿಂಗಡಿಸಿ ಜೆನೆರಲ್ ಇಂಸ್ಟ್ರುಮೆಂಟ್ಸ್ ಎಂದು ನಾಮಕರಣ ಮಾಡಲಾಯಿತು. ಆದರೆ “ಜೆನೆರಲ್ ಇಂಸ್ಟ್ರುಮೆಂಟ್” ಎಂಬ ಕಂಪನಿ ಈಗಾಗಲೇ ಅಸ್ತಿತ್ವದಲ್ಲಿದ್ದ ಕಾರಣ ಪುನರ್ನಾಮಕರಣ ಮಾಡಿ “ಟೆಕ್ಸಾಸ್ ಇಂಸ್ಟ್ರುಮೆಂಟ್ಸ್” ಎಂಬ ಹೆಸರು ನೀಡಲಾಯಿತು. 1956ರಿಂದ 1961ವರೆಗೆ ಫ್ರೆಡ್ ಆಗ್ನಿಚ್ ಕಂಪನಿಯ ಪ್ರೆಸಿಡೆಂಟ್ ಆಗಿದ್ದರು. ಇವರು ಅಮೆರಿಕಾ ಸಂಸ್ಥಾನದ ರಿಪಬ್ಲಿಕ್ ಪಾರ್ಟಿಯ ಸದಸ್ಯರೂ ಮತ್ತು ಟೆಕ್ಸಾಸ್ ರಾಜ್ಯದಿಂದ ಪಾರ್ಟಿಯ ಪ್ರತಿನಿಧಿಗಳೂ ಆಗಿದ್ದರು. GSI ಕಂಪನಿಯು ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಕಂಪನಿಯ ಒಂದು ಭಾಗವಾಯಿತು. 1988ರ ಪ್ರಾರಂಭದಲ್ಲಿ GSI ಕಂಪನಿಯ ಬಹುಭಾಗವನ್ನು ಹ್ಯಾಲಿಬರ್ಟನ್ ಎಂಬ ಕಂಪನಿಗೆ ವಿಕ್ರಯ ಮಾಡಲಾಯಿತು.
ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಅಸ್ತಿತ್ವದಲ್ಲಿರುವುದು ತನ್ನ ಜಾಗತಿಕ ಗಿರಾಕಿಗಳಿಗೆ ಉಪಯುಕ್ತವಾದ ಸಾಧನಗಳನ್ನು ಮತ್ತು ಸೇವೆಗಳನ್ನು ನೀಡಲು.[೧೩]
— ಪ್ಯಾಟ್ರಿಕ್ ಹ್ಯಾಗರ್ಟಿ, ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಉದ್ದೇಶ
ಉಲ್ಲೇಖಗಳು
[ಬದಲಾಯಿಸಿ]- ↑ "Investor FAQs". Texas Instruments.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedBbBw2011
- ↑ ೩.೦ ೩.೧ ೩.೨ ೩.೩ ೩.೪ ೩.೫ "Texas Instruments Incorporated 2016 Annual Report Form (10-K)". EDGAR. United States Securities and Exchange Commission. ಫೆಬ್ರವರಿ 27, 2016.
- ↑ "ಟಿ.ಐ. ಅಂಚೆ ವಿಳಾಸ Archived March 12, 2015[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.." ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್. Retrieved on June 12, 2009.
- ↑ "ಪ್ರಮುಖ ಸೆಮಿಕಂಡಕ್ಟರ್ ಕಂಪನಿಗಳು 2012-2015 | Statistic". Statista.
- ↑ ೬.೦ ೬.೧ "About TI – Technology and innovation – TI.com". www.ti.com.
- ↑ "ಟಿ.ಐ. ವಾಸ್ತವ್ಯಗಳು | Who we are | Company | About TI". www.ti.com.
- ↑ "Texas Instruments - Low Bandwidth Timeline - Key TI Events". www.ti.com.
- ↑ "About TI – History – TI.com". www.ti.com.
- ↑ "TI IR - CI - AD - Raytheon Purchases Defense Systems and Electronics Business". www.ti.com.
- ↑ "Texas Instruments Closes $6.5B Acquisition Of National Semiconductor". Retrieved ಸೆಪ್ಟೆಂಬರ್ 23, 2011.
- ↑ http://www.ti.com/corp/docs/company/history/lowbandwidthtimeline.shtml
- ↑ ಹ್ಯಾಗರ್ಟಿ, ಪ್ಯಾಟ್ರಿಕ್ (1981). "The Corporation and Innovation". Strategic Management Journal. 2 (2): 97–118. doi:10.1002/smj.4250020202.