ವಿಷಯಕ್ಕೆ ಹೋಗು

ಆಮಿರ್ ಖಾನ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಮೀರ್ ಖಾನ್
ಜನನ
ಆಮೀರ್ ಹುಸೇನ್ ಖಾನ್

ಮಾರ್ಚ್ ೧೪, ೧೯೬೫
ವೃತ್ತಿ(ಗಳು)ಚಲನಚಿತ್ರ ನಟ, ಚಿತ್ರ ನಿರ್ಮಾಪಕ, ಚಿತ್ರ ನಿರ್ದೇಶಕ ಮತ್ತು ಬರಹಗಾರ
ಸಕ್ರಿಯ ವರ್ಷಗಳು೧೯೭೩–೧೯೭೪, ೧೯೮೪, ೧೯೮೮–೨೦೦೧, ೨೦೦೫–ಇಲ್ಲಿಯವರೆವಿಗೂ
ಸಂಗಾತಿ(s)ರೀನಾದತ್ತ (೧೯೮೬–೨೦೦೨)
ಕಿರಣ್ ರಾವ್ (೨೦೦೫–ಇಲ್ಲಿಯವರೆಗೆ)
ಜಾಲತಾಣhttp://www.aamirkhan.com/

ಅಮೀರ್ ಹುಸೇನ್ ಖಾನ್(ಹಿಂದಿ:आमिर ख़ान, ಉರ್ದು: عامر حسین خان,) ಮಾರ್ಚ್ 14 1965ರಂದು ಜನಿಸಿದರು. ಭಾರತೀಯ ಸಿನಿಮಾ ನಟ, ನಿರ್ದೇಶಕ ಮತ್ತು ನಿರ್ಮಾಪಕ ವಿಮರ್ಶಾತ್ಮಕವಾಗಿ ಮತ್ತು ವಾಣೀಜ್ಯೀವಾಗಿ ಯಶಸ್ವಿಯಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ, ಮತ್ತು ತಮ್ಮ ಸ್ವಂತ ಪರಿಶ್ರಮದಿಂದಲೇ ಬಾಲಿವುಡ್‍ನಲ್ಲಿ ಮುಂಚೂಣಿಯ ನಟರಾಗಿದ್ದಾರೆ.[][][] ಇವರ ಚಿಕ್ಕಪ್ಪ ನಾಸಿರ್ ಹುಸೇನ್‌ರ ಚಿತ್ರ ಯಾದೋಂಕಿ ಬಾರಾತ್ (1973)ನಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಂಡಿದ್ದರು, ಇದಾಗಿ ಹನ್ನೊಂದು ವರ್ಷದ ನಂತರ ಹೋಲಿ (1984) ಚಿತ್ರದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು ಮತ್ತು ಮೊದಲ ವಾಣಿಜ್ಯೀಕವಾಗಿ ಯಶಸ್ವಿಯಾದ ಮೊದಲ ಚಿತ್ರ ಖಯಾಮತ್ ಸೆ ಖಯಾಮತ್ ತಕ್ (1988). ರಾಕ್ (1989) ಚಿತ್ರದ ತಮ್ಮ ನಟನೆಗಾಗಿ ಮೊದಲ ಬಾರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ( ತೀರ್ಪುಗಾರರ ವಿಶೇಷ ಪ್ರಶಸ್ತಿ) ಪಡೆದುಕೊಂಡರು. 1980 ಮತ್ತು 1990ರ ನಡುವೆ ಏಳು ಬಾರಿ ನಾಮನಿರ್ದೇಶನಗೊಂಡ ನಂತರದಲ್ಲಿ ರಾಜಾ ಹಿಂದೂಸ್ಥಾನಿ (1996)[][] ಚಿತ್ರಕ್ಕಾಗಿ ಅತ್ಯುತ್ತಮ ನಟರಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದುಕೊಂಡರು ಮತ್ತು ಅಕಾಡಮಿ ಪ್ರಶಸ್ತಿ ನಾಮನಿರ್ದೇಶಿತ ಚಿತ್ರಲಗಾನ್‌ ನಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು, ಇದು ಇವರ ಸ್ವಂತ ಪ್ರೊಡಕ್ಷನ್ ಕಂಪನಿಯಿಂದ ತಯಾರಿಸಲಾದ ಚಿತ್ರ. ಇದಾದ ನಾಲ್ಕು ವರ್ಷಗಳ ನಂತರ (2005) ಐತಿಹಾಸಿಕ ಸಿನೆಮಾದಲ್ಲಿ ನಾಯಕರಾಗಿ ಕಾಣಿಸಿಕೊಂಡರು, ನಂತರ ರಂಗ್ ದೆ ಬಸಂತಿ (2006) ಚಿತ್ರದ ಉತ್ತಮ ನಟನೆಗಾಗಿ ವಿಮರ್ಶಕರ ಪ್ರಶಸ್ತಿ ಪಡೆದುಕೊಂಡರು. ಮುಂದಿನ ವರ್ಷದಲ್ಲಿ ತಾರೆ ಜಮೀನ್ ಪರ್ ಚಿತ್ರ ನಿರ್ದೇಶಿಸಿದರು, ಇದಕ್ಕಾಗಿ ಅತ್ಯುತ್ತಮ ನಿರ್ದೇಶನಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ. ಗಜನಿ (2008)ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಯಿತು, ಮತ್ತು 3 ಇಡಿಯಟ್ಸ್ (2009), ಅತಿ ಹೆಚ್ಚು ಹಣ ಗಳಿಸಿದ ಸಾರ್ವಕಾಲಿಕ ಬಾಲಿವುಡ್ ಚಿತ್ರವಾಯಿತು, ಹಣದುಬ್ಬರ ಕೂಡ ಇದರ ಗಳಿಕೆಯನ್ನು ತಡೆಯುವುದು ಸಾಧ್ಯವಾಗಲಿಲ್ಲ.[] 2003ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ, ಮತ್ತು ಭಾರತೀಯ ಸಿನೆಮಾಗೆ ನೀಡಿದ ಕೊಡುಗೆಯನ್ನು ಗಮನಿಸಿ 2010ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಿತು.

ಆರಂಭಿಕ ಜೀವನ

[ಬದಲಾಯಿಸಿ]

ಖಾನ್ ಜನಿಸಿದ್ದು ಭಾರತಮುಂಬಯಿಯ ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ,ಇವರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದಾರೆ ಇವರ ಕುಟುಂಬವು ಹಲವಾರು ದಶಕಗಳಿಂದ ಭಾರತೀಯ ಮೋಷನ್ ಪಿಚ್ಚರ್ ಉದ್ಯಮದಲ್ಲಿ ತೊಡಗಿಕೊಂಡಿದೆ.[] ಇವರ ತಂದೆತಾಹಿರ್ ಹುಸೇನ್ ನಿರ್ಮಾಪಕರು, ಮತ್ತು ಚಿಕ್ಕಪ್ಪ ನಾಸೀರ್ ಹಸೇನ್ ಕೂಡ ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು. ಮುಸ್ಲಿಂ ಬುದ್ಧಿಜೀವಿಗಳು ಮತ್ತು ರಾಜಕಾರಣಿಯಾದ ಮೌಲಾನ ಅಬ್ದುಲ್ ಕಲಾಮ್ ಆಜಾದ್‌ರ ವಂಶಸ್ಥರು [] ಮತ್ತು ರಾಜ್ಯ ಸಭೆಯ ಉಪಸಭಾಪತಿ ಡಾ ನಜ್ಮಾ ಹೆಫ್ತುಲ್ಲಾರ ಎರಡನೆಯ ಸೋದರ ಸಂಬಂಧಿ ಆಗಿದ್ದಾರೆ.

ಚಿತ್ರರಂಗದ ವೃತ್ತಿಜೀವನ

[ಬದಲಾಯಿಸಿ]

ನಾಸೀರ್ ಹುಸೇನ್‌‍ ಸ್ವಂತವಾಗಿ ನಿರ್ಮಿಸಿದ ಚಿತ್ರ ಯಾದೋಂಕಿ ಬಾರಾತ್ (1973) ಮತ್ತು ಮಧೋಶ್‌ ನಲ್ಲಿ ಬಾಲ ಕಲಾವಿದರಾಗಿ ಅಭಿನಯ ಆರಂಭಿಸಿದರು(1974). ಹನ್ನೊಂದು ವರ್ಷಗಳ ನಂತರ, ಕೇತನ್ ಮೆಹ್ತಾರ ಹೋಲಿ ಚಿತ್ರದಲ್ಲಿ ಪ್ರಥಮ ಬಾರಿಗೆ ನಾಯಕರಾಗಿ ಕಾಣಿಸಿಕೊಂಡರು(1984). 1988ರಲ್ಲಿ ಬಂದ ಖಯಾಮತ್ ಸೆ ಖಯಾಮತ್ ತಕ್ ಚಿತ್ರದಲ್ಲಿ ಮೊದಲ ಬಾರಿಗೆ ಗಮನರ್ಹವಾದ ಪಾತ್ರದಲ್ಲಿ ಕಾಣಿಸಿಕೊಂಡರು, ಇದನ್ನು ನಿರ್ದೇಶಿಸಿದವರು ಸೋದರ ಸಂಬಂಧಿ ಮತ್ತು ನಾಸೀರ್ ಹಸೇನ್‌ರ ಮಗ ಮನ್ಸೂರ್ ಖಾನ್. ಈ ಚಿತ್ರವು ಯಶಸ್ವಿಯಾಗುವ ಮೂಲಕ ಖಾನ್‌ರನ್ನು ನಾಯಕ ನಟರಾಗಿ ಪರಿಚಯಿಸಿತು. ಚಾಕಲೇಟ್ ಹೀರೋ ಇಮೇಜ್ ಹೊಂದಿ ಹದಿ ವಯಸ್ಸಿನವರ ಅಚ್ಚುಮೆಚ್ಚಿನ ವ್ಯಕ್ತಿಯಾದರು. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ ರಾಕ್‌ ಗಾಗಿ ತೀರ್ಪುಗಾರರ ವಿಶೇಷ ಪ್ರಶಸ್ತಿಗಾಗಿ ಮೊದಲ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. ಇದಾದ ನಂತರ 80 ಮತ್ತು 90ರ ಮೊದಲಿಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು: ದಿಲ್ (1990),ವರ್ಷದ ಹೆಚ್ಚು ಹಣಗಳಿಸಿದ ಚಿತ್ರ,[] ದಿಲ್ ಹೇ ಕಿ ಮಾನತಾ ನಹಿ (1991), ಜೋ ಜೀತಾ ವಹಿ ಸಿಕಂದರ್ (1992), ಹಮ್ ಹೆ ರಾಹಿ ಪ್ಯಾರ್ ಕೆ (1993) (ಇದಲ್ಲದೆ ಚಿತ್ರಕಥೆ ಕೂಡ ಬರೆದಿದ್ದಾರೆ), ಮತ್ತು ರಂಗೀಲಾ (1995). ಇವುಗಳಲ್ಲಿ ಹೆಚ್ಚಿನ ಚಿತ್ರಗಳು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯೀಕ ಯಶಸ್ವಿಯಾದವು.[೧೦][೧೧][೧೨] ಸಲ್ಮಾನ ಖಾನ್ ಜೊತೆಗಿನ ಅಂದಾಜ್ ಅಪ್ನಾ ಅಪ್ನಾ ಕೂಡ ಯಶಸ್ವಿಯಾಯಿತು. ಇದು ಬಿಡುಗಡೆಯಾದ ಸಮಯದಲ್ಲಿ ವಿಮರ್ಶಕರು ಇದನ್ನು ಮೆಚ್ಚಲಿಲ್ಲ ಆದರೆ ಕೆಲ ಸಮಯದ ನಂತರ ಉತ್ತಮ ಪ್ರತಿಕ್ರಿಯೆಗಳು ದೊರೆತವು.[೧೩] ಹಿಂದಿ ಚಿತ್ರಗಳಲ್ಲಿನ ಮುಖ್ಯ ನಟರಂತೆ ಇವರು ನಟಿಸದೆ ವರ್ಷಕ್ಕೆ ಒಂದು ಅಥವಾ ಎರಡು ಚಿತ್ರಗಳಲ್ಲಿ ಮಾತ್ರ ಅಭಿನಯ ಮಾಡುವುದನ್ನು ಮುಂದುವರೆಸಿದರು. ಧರ್ಮೇಶ್ ದರ್ಶನ್ ನಿರ್ದೇಶಿಸಿದ ಬ್ಲಾಕ್ ಬಾಸ್ಟರ್ ಚಿತ್ರ ರಾಜಾ ಹಿಂದೂಸ್ಥಾನಿ ಮಾತ್ರ 1996ರಲ್ಲಿ ಬಿಡುಗಡೆಯಾಯಿತು, ಇದಲ್ಲಿ ನಾಯಕಿಯಾಗಿ ಕರೀಷ್ಮಾ ಕಪೂರ್ ಅಭಿನಯಿಸಿದ್ದರು. ಈ ಚಿತ್ರವು ಏಳು ನಾಮನಿರ್ದೇಶನದ ನಂತರ ಮೊದಲ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ತಂದುಕೊಟ್ಟಿತು, ಮತ್ತು ಆ ವರ್ಷದ ಬಿಗ್ ಹಿಟ್ ಚಿತ್ರವಾಯಿತು, 1990ರ ಹೆಚ್ಚು ಹಣ ಗಳಿಸಿದ ಮೂರನೇಯ ಚಿತ್ರ .[೧೪] ಈ ದೃಷ್ಟಿಯಿಂದ ಖಾನ್‌ರ ವೃತ್ತಿ ಜೀವನವು ಏರುಪೇರಿಲ್ಲದೆ ಸಾಗಿತು, ಮುಂದಿನ ಕೆಲ ವರ್ಷಗಳಲ್ಲಿ ಬಂದ ಚಿತ್ರಗಳು ಸಾಧಾರಣ ಯಶಸ್ಸನ್ನು ಕಂಡವು. 1997ರಲ್ಲಿ ಬಂದ ಇಷ್ಕ್ ಚಿತ್ರವು ಬಾಕ್ಸ್ ಆಫೀಸಿನಲ್ಲಿ ಯಶಸ್ವಿಯಾಯಿತು, ಇವರ ಸಹ ನಟರಾಗಿ ಅಜಯ್ ದೇವಗನ್ ಮತ್ತು ಜೋಡಿಯಾಗಿ ಜೂಹಿಚಾವ್ಲಾ ನಟಿಸಿದ್ದರು. 1998ರಲ್ಲಿ ತೆರೆಕಂಡ ಚಿತ್ರ ಗುಲಾಮ್ ಸಾಧಾರಣ ಯಶಸ್ಸು ಪಡೆಯಿತು, ಇದಕ್ಕಾಗಿ ಹಿನ್ನೆಲೆ ಗಾಯನ ಕೂಡ ಮಾಡಿದ್ದಾರೆ.[೧೫] ಜಾನ್ ಮ್ಯಾಥ್ಯು ಮ್ಯಾಥನ್‌ರ ಸರ್ಫರೋಶ್ (1999) 1999ರಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಇದು ಕೂಡ ಸಾಧಾರಣ ಯಶಸ್ಸು ಪಡೆಯಿತು. ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು ಮತ್ತು ಖಾನ್‌ ಪಾತ್ರದಲ್ಲಿ ತುಂಬಾ ತನ್ಮಯತೆಯಿಂದ ನಟಿಸಿದ್ದರು, ಗಡಿ ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವ ಪ್ರಾಮಾಣಿಕ ಮತ್ತು ಶುದ್ಧ ಹಸ್ತದ ಪೋಲಿಸ್ ಪಾತ್ರ ನಿರ್ವಹಿಸಿದ್ದಾರೆ ಇದಕ್ಕಾಗಿ ಉತ್ತಮ ಪ್ರತಿಕ್ರಿಯೆ ಪಡೆದರು ದೀಪಾ ಮೆಹ್ತಾರ ಕಲಾತ್ಮಕ ಚಿತ್ರ ಅರ್ಥ್‌ ನಲ್ಲೂ ಇಂತಹ ಪಾತ್ರದಲ್ಲಿ ನಟಿಸಿದ್ದರು. ಮಿಲೆನಿಯಂನ ಮೊದಲಿಗೆ ಬಿಡುಗಡೆಯಾದ ಚಿತ್ರ ಮೇಲಾ , ಇದರಲ್ಲಿ ನಿಜ ಜೀವನದ ಸಹೋದರ ಫೈಸಲ್ ಖಾನ್ ಜೊತೆ ನಟಿಸಿದ್ದರು, ಚಿತ್ರವು ಬಾಕ್ಸ್ ಆಫೀಸ್ ಮತ್ತು ವಿಮರ್ಶಾತ್ಮಕವಾಗಿ ಪ್ಲಾಫ್ ಆಯಿತು.[೧೬]

ಲಗಾನ್

[ಬದಲಾಯಿಸಿ]

2001ರಲ್ಲಿ ಲಗಾನ್ ಚಿತ್ರದಲ್ಲಿ ಕಾಣಿಸಿಕೊಂಡರು. ವಾಣಿಜ್ಯೀಕವಾಗಿ ಮತ್ತು ವಿಮರ್ಶಾತ್ಮಕವಾಗಿ ಯಶಸ್ವಿಯಾಯಿತು,[೧೭] ಮತ್ತು 74ನೆಯ ಅಕಾಡಮಿ ಪ್ರಶಸ್ತಿಯಲ್ಲಿ ಉತ್ತಮ ವಿದೇಶಿ ಭಾಷಾ ಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿತು. ಇದಲ್ಲದೆ ಹಲವಾರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ವಿಮರ್ಶಕರ ಮೆಚ್ಚುಗೆ ಗಳಿಸಿತು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಒಳಗೊಂಡಂತೆ ಹಲವಾರು ಭಾರತೀಯ ಪ್ರಶಸ್ತಿಗಳನ್ನೂ ಪಡೆಯಿತು. ಖಾನ್ ಇದಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಿಂದಿ ಚಿತ್ರವು ಪ್ರಸಿದ್ದಿಯಾಗುವುದು ಮುಂದುವರೆಸಿತು.[ಸೂಕ್ತ ಉಲ್ಲೇಖನ ಬೇಕು] ಲಗಾನ್ ಯಶಸ್ಸಿನ ನಂತರ ದಿಲ್ ಚಾಹ್ತಾ ಹೆ ಕೂಡ ಯಶಸ್ಸನ್ನು ಮುಂದುವರೆಸಿತು, ಇದರಲ್ಲಿ ಸಹನಟರಾಗಿ ಅಕ್ಷಯ್ ಖನ್ನಾ ಮತ್ತು ಸೈಫ್ ಅಲಿ ಖಾನ್, ಜೊತೆಯಾಗಿ ಪ್ರೀತಿ ಜಿಂಟಾ ನಟಿಸಿದ್ದರು. ಇದನ್ನು ಬರೆದು ನಿರ್ದೇಶಿಸಿದ್ದವರು ಹೊಸಬರಾದಫರಾನ್ ಅಕ್ತರ್. ವಿಮರ್ಶಕರ ಪ್ರಕಾರ ಇಂದಿನ ಭಾರತದ ನಗರ ಪ್ರದೇಶದ ಯುವಕರು ಯಾವ ರೀತಿ ಇದ್ದಾರೊ ಅದನ್ನೆ ಗಮದಲ್ಲಿಟ್ಟುಕೊಂಡು ಚಿತ್ರಿಸಲಾಗಿದ್ದು ಹೊಸದಾದ ಅಲೆಯನ್ನು ಹುಟ್ಟು ಹಾಕಿತು. ಇಲ್ಲಿ ಚಿತ್ರಿಸಲಾದ ಪಾತ್ರಗಳು ಆಧುನಿಕ, ವಿನಮ್ರ ಮತ್ತು ಕಾಸ್ಮೊಪಾಲಿಟನ್ ಸಂಸ್ಕೃತಿಯ ಪಾತ್ರಗಳಾಗಿದ್ದವು. ಚಿತ್ರವು ಸಾಧಾರಣವಾಗಿದ್ದು, ನಗರ ಪ್ರದೇಶಗಳಲ್ಲಿ ಯಶಸ್ಸು ಗಳಿಸಿತು.[೧೭] ಖಾನ್ ವೈಯಕ್ತಿಕ ಕಾರಣಗಳಿಗಾಗಿ ನಾಲ್ಕು ವರ್ಷ ವಿರಾಮ ಪಡೆದುಕೊಂಡರು, ಮತ್ತು 2005ರಲ್ಲಿ ಕೇತನ್ ಮೆಹ್ತಾ ನಿರ್ದೇಶನದ ಚಿತ್ರMangal Pandey: The Rising ದಲ್ಲಿ 1857ರ ಭಾರತೀಯ ದಂಗೆ ಅಥವಾ ಭಾರತ ಮೊದಲ ಸ್ವಾತಂತ್ರ ಸಂಗ್ರಾಮಕ್ಕೆ ಹಿಡಿ ಹತ್ತಿಸಿದ ಯೋಧನ ಕುರಿತಾದ ಚಿತ್ರದಲ್ಲಿ ಸಿಪಾಯಿಯಾಗಿ ಕಾಣಿಸಿಕೊಂಡರು.[ಸೂಕ್ತ ಉಲ್ಲೇಖನ ಬೇಕು] ರಾಕೇಶ್ ಓಂಪ್ರಕಾಶ್ ಮೆಹ್ತಾರ ಪ್ರಶಸ್ತಿ-ವಿಜೇತ ಚಿತ್ರ ರಂಗ ದೆ ಬಸಂತಿ 2006ರಲ್ಲಿ ಬಿಡುಗಡೆಯಾದ ಖಾನರ ಮೊದಲ ಚಿತ್ರ. ಇವರ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು,[೧೮] ಉತ್ತಮ ನಟನೆಗಾಗಿ ಫಿಲ್ಮ್‌ಫೇರ್ ವಿಮರ್ಶಕ ಪ್ರಶಸ್ತಿ ದೊರಕಿತು ಮತ್ತು ಅತ್ಯುತ್ತಮ ನಟ ನಾಗಿ ಹಲವಾರು ನಾಮನಿರ್ದೇಶನಗೊಂಡಿತು. ಇದಲ್ಲದೆ ಅ ವರ್ಷದ ಅತಿ ಹೆಚ್ಚು ಹಣ ಗಳಿಸಿದ ಚಿತ್ರವು ಇದಾಯಿತು,[೧೯] ಮತ್ತು ಭಾರತದಿಂದ ಆಸ್ಕರ್ ಪ್ರಶಸ್ತಿಗಾಗಿ ಅಧೀಕೃತ ಪ್ರವೇಶಕ್ಕೆ ಆಯ್ಕೆಯಾಯಿತು. ಆದರೆ ಆಸ್ಕರ್ ಪ್ರಶಸ್ತಿಯ ಆಯ್ಕೆಪಟ್ಟಿಯಲ್ಲಿರಲಿಲ್ಲ, ಉತ್ತಮ ವಿದೇಶಿ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡು ಇಂಗ್ಲೆಂಡಿನಲ್ಲಿ ಬಿಎ‌ಎಫ್‌ಟಿಎ ಪ್ರಶಸ್ತಿ ಪಡೆಯಿತು. ಇವರ ಮುಂದಿನ ಚಿತ್ರ, ಫನಾ (2006) ಇದು ಕೂಡ ಮೆಚ್ಚುಗೆ ಪಡೆಯಿತು,[೨೦] ಮತ್ತು 2006ರಲ್ಲಿ ಅತಿ ಹೆಚ್ಚು ಹಣಗಳಿಸಿದ ಚಿತ್ರಗಳಲ್ಲಿ ಇದು ಒಂದು.[೧೯]

'ತಾರ ಝಮೀನ್ ಪರ್'

[ಬದಲಾಯಿಸಿ]

2007ರಲ್ಲಿ ಬಂದಂತ ಚಿತ್ರ ತಾರ ಝಮಿನ್ ಪರ್ ಇದನ್ನು ನಿರ್ಮಾಣ ಮಾಡಿದ್ದಲ್ಲದೆ ಮೊದಲ ಬಾರಿಗೆ ನಿರ್ದೇಶಕರಾಗಿಯೂ ಹೊರಹೊಮ್ಮಿದರು. ಇದು ಅಮೀರ್‌ ಖಾನ್‌ ಪ್ರೊಡಕ್ಷನ್ಸ್‌ ನಿಂದ ಬಂದ ಎರಡನೇಯ ಚಿತ್ರ, ಇದರಲ್ಲಿ ಖಾನ್‌ರದ್ದು ಓದುವುದರಲ್ಲಿರುವ ಸಮಸ್ಯೆ ಹೊಂದಿರುವ ಮಗುವಿನ ಗೆಳೆಯನಾಗುವ ಶಿಕ್ಷಕರ ಪಾತ್ರ. ಇದಕ್ಕೆ ವಿಮರ್ಶಕರಿಂದಲೂ ಮತ್ತು ಪ್ರೇಕ್ಷಕರಿಬ್ಬರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯಿತು. ಇದರಲ್ಲಿ ಖಾನ್‌ರ ಅಭಿನಯ ಕೂಡ ಉತ್ತಮ ಹೆಸರು ಪಡೆದಿದ್ದಲ್ಲದೆ ನಿರ್ದೇಶನಕ್ಕಾಗಿ ಮೆಚ್ಚುಗೆ ಗಳಿಸಿದರು.[ಸೂಕ್ತ ಉಲ್ಲೇಖನ ಬೇಕು]

2008ರಲ್ಲಿ ಖಾನ್ ಗಜನಿ ಚಿತ್ರದಲ್ಲಿ ಕಾಣಿಸಿಕೊಂಡರು. ವಾಣಿಜ್ಯಿಕವಾಗಿಯು ಯಶಸ್ವಿಯಾಯಿತು[೨೧] ಮತ್ತು ಹೆಚ್ಚು ಹಣ ಗಳಿಸಿದ ವರ್ಷದ ಚಿತ್ರ ಕೂಡ. ಇದರಲ್ಲಿನ ಅಭಿನಯಕ್ಕಾಗಿ ಹಲವಾರು ಅತ್ಯುತ್ತಮ ನಟ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ನಾಮನಿರ್ದೇಶನ ಗೊಂಡಿತು ಇದಲ್ಲದೆ ಹದಿನೈದನೆಯ ಬಾರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟ ನಾಮನಿರ್ದೇಶನ.[ಸೂಕ್ತ ಉಲ್ಲೇಖನ ಬೇಕು] 2009ರಲ್ಲಿ ಖಾನ್ ನಟಿಸಿದ 3 ಇಡಿಯಟ್ಸ್‌ ವಾಣಿಜ್ಯಿಕವಾಗಿಯು ಮತ್ತು ವಿಮರ್ಶಾತ್ಮಕವಾಗಿಯು ಮೆಚ್ಚುಗೆ ಗಳಿಸಿತು, ಇದರಲ್ಲಿ ರಾಂಚೋಡ್‌ದಾಸ್ ಚಾಂಚಡ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಇದು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರ ಕೂಡ[] ಮತ್ತು ಉತ್ತಮ ಚಿತ್ರ ಒಳಗೊಂಡಂತೆ ವಿವಿಧ ಫಿಲ್ಮ್‌ಫೇರ್ ಪ್ರಶಸ್ತಿಗಳು ದೊರೆತವು.[೨೨]

ನಿರ್ಮಾಪಕ

[ಬದಲಾಯಿಸಿ]
An Indian man wearing a black dress shirt.
ತಾರೆ ಜಮಿನ್ ಪರ್ ಚಿತ್ರದ ಪ್ರಚಾರ ಸಂದರ್ಭದಲ್ಲಿ ಖಾನ್

2001ರಲ್ಲಿ ಅಮೀರ್‌ ಖಾನ್‌ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಕಂಪನಿಯನ್ನು ಹುಟ್ಟುಹಾಕಿದರು. ಇದಲ ಮೊದಲ ಚಿತ್ರ ಲಗಾನ್ . ಇದು 2001ರಲ್ಲಿ ಬಿಡುಗಡೆಯಾಯಿತು, ಅಮೀರ್ ಖಾನ್ ನಾಯಕರಾಗಿ ಕಾಣಿಸಿಕೊಂಡಿದ್ದರು. 74ನೇಯ ಅಕಾಡಮಿ ಪ್ರಶಸ್ತಿಗಾಗಿ ಉತ್ತಮ ವಿದೇಶಿ ಭಾಷಾ ಚಿತ್ರ ವಿಭಾಗಕ್ಕೆ ಭಾರತದಿಂದ ಅಧೀಕೃತ ಪ್ರವೇಶ ಪಡೆಯಿತು. ಈ ವಿಭಾಗಕ್ಕೆ ಕೊನೆಯಲ್ಲಿ ಆರಿಸಲಾಗಿತ್ತು ಆದರೆ ’ ನೋ ಮ್ಯಾನ್ಸ್ ಲ್ಯಾಂಡ್ . ಫಿಲ್ಮ್‌ಫೇರ್ ಮತ್ತು ಐಫಾದಂತಹ ಭಾರತದ ಪ್ರಶಸ್ತಿ ಸಮಾರಂಭಗಳಲ್ಲಿ ಹಲವಾರು ಪ್ರಶಸ್ತಿಗಳಿಸಿತು, ಮತ್ತು ಹೆಚ್ಚು ಪ್ರಸಿದ್ಧಿಗಳಿಸಿದ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ಪ್ರಶಸ್ತಿಯನ್ನು ಚಿತ್ರದ ನಿರ್ದೇಶಕ ಅಶುತೋಷ್ ಗೋವಾರಿಕರ್ ಜೊತೆಗೆ ಹಂಚಿಕೊಂಡರು.[೨೩] ಲಗಾನ್ ಆಸ್ಕರ್ ಪ್ರಶಸ್ತಿ ಪಡೆಯಲು ವಿಫಲವಾದಾಗ ಈ ರೀತಿ ಹೇಳಿಕೆ ನೀಡಿದರು: "ನಿಜವಾಗಿಯೂ ನಾವು ನಿರಾಶೆ ಹೊಂದಿದ್ದೇವೆ. ಆದರೆ ನಮಗೆ ಸ್ಫೂರ್ತಿ ನೀಡುವ ಒಂದು ವಿಷಯವೆನೆಂದರೆ ಇಡಿ ದೇಶ ನಮ್ಮ ಹಿಂದಿದೆ". 2007ರಲ್ಲಿ ತಾರೆ ಜಮಿನ್ ಪರ್ ನಿರ್ಮಾಣ ಮಾಡಿದರು ಇದು ಇವರು ನಿರ್ದೇಶಿಸಿದ ಮೊದಲ ಚಿತ್ರ. ಚಿತ್ರದ ಪೋಷಕ ಪಾತ್ರದಲ್ಲಿ ಬಾಲ ಕಲಾವಿದ ದರ್ಶಿಲ್ ಸಫಾರಿ ಜೊತೆ ಕಾಣಿಸಿಕೊಂಡರು. ಈ ಸಿನೆಮಾವನ್ನು ಮೊದಲು ಅಮೊಲ್ ಗುಪ್ತಾ ಮತ್ತು ದೀಪಾ ಬಾಟಿಯಾ ಅವರ ದಂಪತಿ ಜೋಡಿಯಿಂದ ಗ್ರಹಿಸಲ್ಪಟ್ಟು ಬೆಳೆಸಲಾಗಿತ್ತು. ಇದು ಓದುವುದರಲ್ಲಿರುವ ಸಮಸ್ಯೆ ಹೊಂದಿರುವ ಬಾಲಕನ ಕುರಿತಾಗಿದ್ದು ಇದನ್ನು ಶಾಲೆಯ ಶಿಕ್ಷಕನು ಗುರುತಿಸುತ್ತಾನೆ. ಚಿತ್ರವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು,[೨೪] ಬಾಕ್ಸ್ ಆಫೀಸಿನಲ್ಲು ಗೆಲುವು ಪಡೆಯಿತು. ತಾರೆ ಜಮಿನ್ ಪರ್ 2008ರ ಫಿಲ್ಮ್‌ಫೇರ್ ಉತ್ತಮ ಚಿತ್ರ ಪ್ರಶಸ್ತಿ ಇದಲ್ಲದೆ ಹಲವಾರು ಫಿಲ್ಮ್‌ಫೇರ್ ಪಡೆಯಿತು ಮತ್ತು ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಗಳಿಸಿಕೊಂಡಿತು. ಫಿಲ್ಮ್‌ಫೇರ್‌ನಲ್ಲಿ ಖಾನ್‌ರ ಕೆಲಸವು ಎರಡು ಪ್ರಶಸ್ತಿಗಳನ್ನು ಗಳಿಸಿಕೊಟ್ಟಿತು, ಉತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಬಾಲಿವುಡ್‌ನಲ್ಲಿ ತಾವೊಬ್ಬ ಚಿತ್ರನಿರ್ಮಾಪಕರು ಎಂಬುದನ್ನು ತೋರಿಸಿಕೊಟ್ಟರು. 2008ರಲ್ಲಿ ತಮ್ಮ ಸೋದರಳಿಯ ಇಮ್ರಾನ್ ಖಾನ್‌ರನ್ನು ಮೊದಲ ಬಾರಿಗೆ ಜಾನೆ ತು ಯಾ ಜಾನೆ ನಾ ಚಿತ್ರದ ಮೂಲಕ ಪರಿಚಯಿಸಿದರು ಇದೂ ಇವರ ನಿರ್ಮಾಣದ ಚಿತ್ರವೆ. ಭಾರತದಲ್ಲಿ ದೊಡ್ಡ ಗೆಲುವು ಪಡೆಯಿತು ಮತ್ತು ಮತ್ತೊಂದು ಫಿಲ್ಮ್‌ಫೇರ್‌ನಲ್ಲಿ ಉತ್ತಮ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿತು.[೨೫] ಇವರ ನಿರ್ಮಾಣದ ಇತ್ತೀಚಿನ ಚಿತ್ರ "ದೋಭಿ ಘಾಟ್".[೨೬]

'ಸತ್ಯಮೇವ ಜಯತೇ ಟಾಕ್ ಶೋ' ಧಾರಾವಾಹಿ

[ಬದಲಾಯಿಸಿ]

೨೦೧೨ ರ ಮೇ, ೬ ರಂದು, ಅಮೀರ್ ಖಾನ್ ಪ್ರಾಯೋಜಿಸಿ ಪ್ರಸ್ತುತಪಡಿಸಿದ, ಅವರ ಪ್ರಥಮ ಕಿರುತೆರೆಯಲ್ಲಿ ನಿರ್ದೇಶಿಸಿದ ಧಾರಾವಾಹಿ, ಸತ್ಯಮೇವ ಜಯತೇ ಎಂಬ ಕಿರುತೆರೆಯ ಟಾಕ್ ಶೋ, ಒಂದು ವೈಚಾರಿಕತೆಯ ಅಲೆಯನ್ನೇ ದೇಶದುದ್ದಕ್ಕೂ ಎಬ್ಬಿಸಿದೆ. [೧] Archived 2012-05-10 ವೇಬ್ಯಾಕ್ ಮೆಷಿನ್ ನಲ್ಲಿ.

ವೈಯಕ್ತಿಕ ಜೀವನ

[ಬದಲಾಯಿಸಿ]
2009ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಜೊತೆಗೆ ಖಾನ್.

ರೀನಾ ಗುಪ್ತಾರನ್ನು ಏಪ್ರಿಲ್ 18, 1986ರಂದು ಮದುವೆಯಾಗಿದ್ದರು, ಇವರು ಕೂಡ ಖಯಾಮತ್ ಸೆ ಖಯಾಮತ್ ತಕ್ ಚಿತ್ರದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿದ್ದರು. ಇಬ್ಬರು ಮಕ್ಕಳನ್ನು ಹೊಂದಿದ್ದು ಮಗನ ಹೆಸರು ಜುನಾಯಿದ್ ಮತ್ತು ಮಗಳ ಹೆಸರು ಈರಾ. ಲಗಾನ್ ನಿರ್ಮಾಣ ಮಾಡುವಾಗ ರೀನಾ ಕೂಡ ನಿರ್ಮಾಪಕಿಯಾಗಿ ಇವರ ಜೊತೆ ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡಿದ್ದರು. 2002 ಡಿಸೆಂಬರ್‌ನಲ್ಲಿ ವಿಚ್ಛೇದನ ಪಡೆದುಕೊಂಡು 15-ವರ್ಷದ ದಾಂಪತ್ಯ ಕೊನೆಯಾಯಿತು. ರೀನಾ ಎರಡು ಮಕ್ಕಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು.[೨೭] ಡಿಸೆಂಬರ್ 28 2005ರಂದು ಖಾನ್ ಕಿರಣ್ ರಾವ್‌ರನ್ನು ಮದುವೆಯಾದರು ಇವರು ಅಶುತೋಷ್ ಗೋವಾರಿಕರ್ ಲಗಾನ್ ಚಿತ್ರ ಮಾಡುವಾಗ ಸಹಾಯಕ ನಿರ್ದೇಶಕಿಯಾಗಿದ್ದರು.[೨೮] ಹಲವಾರು ಬಾರಿ ನಾಮನಿರ್ದೇಶನಗೊಂಡರು ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಿಲ್ಲ ಕಾರಣ " ಭಾರತೀಯ ಚಿತ್ರ ಪ್ರಶಸ್ತಿ ಪ್ರಶಸ್ತಿಗಳು ವಿಶ್ವಾಸಾರ್ಹತೆ ಹೊಂದಿಲ್ಲ" ಎಂಬ ಭಾವನೆ ಹೊಂದಿದ್ದಾರೆ.[೨೯] 2007ರಲ್ಲಿ ಲಂಡನ್ನಿನಲ್ಲಿನ ಮೇಡಂ ತುಸ್ಸಾಡ್ಸ್‌ನಲ್ಲಿ ಖಾನ್‌ರ ಮೇಣದ ಪ್ರತಿಮೆ ಅನಾವರಣ ಗೊಂಡಿತು.[೩೦] ಆದರೆ ಇದನ್ನು ನಿರಾಕರಿಸಿ ಈ ರೀತಿ ಹೇಳಿದರು "ಇದು ನನಗೆ ಪ್ರಾಮುಖ್ಯತೆ ಹೊಂದಿರುವ ವಿಷಯವಲ್ಲ... ಜನರು ನನ್ನನ್ನ ನೋಡಲು ಬಯಸಿದರೆ ಚಿತ್ರದಲ್ಲಿ ನೋಡಬಹುದು. ಅಲ್ಲದೆ, ಸಾಕಷ್ಟು ವಿಷಯಗಳನ್ನು ನಿರ್ವಹಿಸುವ ಸಾಮರ್ಥ್ಯ ನನ್ನಲ್ಲೂ ಇಲ್ಲಾ. ನನ್ನ ಸಾಮರ್ಥ್ಯ ಅಷ್ಟೆ."[೩೧] 2007ರಲ್ಲಿ ಅಮಿರ್ ಖಾನ್ ತನ್ನ ತಮ್ಮ ಫೈಸಲ್‌ನನ್ನು ತಾನು ಇರಿಸಿಕೊಳ್ಳುವ ಕುರಿತಾಗಿ ಹಾಕಿದ್ದ ದಾವೆಯನ್ನು ಅವರ ತಂದೆ ತಾಹಿರ್ ಹುಸೇನ್‌ ಗೆದ್ದುಕೊಳ್ಳುತ್ತಾರೆ.[೩೨] ಫೆಬ್ರವರಿ 2 2010ರಂದು ಖಾನ್‌ರ ತಂದೆ ತೀರಿಕೊಂಡರು.[೩೩] 2009ರ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ ಖಾನ್, ತಾನು ಸಿನೆಮಾ ಪ್ರಪಂಚಕ್ಕೆ ಸ್ವಯಂ ಸ್ಪೂರ್ತಿಯ ಪ್ರಯತ್ನದ ದಿಕ್ಕನ್ನು ಕೊಡಲು ಬಯಸುವವನು. ನಾನು ಹೊಸದಾಗಿ ಏನನ್ನೂ ಮಾಡುವುದಿಲ್ಲ ಆದರೆ ಹೊಸತನದಿಂದ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯು ಅವನ /ಅವಳ ಕನನುಗಳನ್ನು ನನಸಾಗಿಸಲು ಪ್ರಯತ್ನಿಸಬೇಕು ಮತ್ತು ಇದನ್ನು ಸಾಧಿಸುವುದಕ್ಕಾಗಿ ಪ್ರಾಯೋಗಿಕ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕು." ಅಲ್ಲದೆ ಅಮಿರ್ ಖಾನ್ ಹೇಳುವ ಪ್ರಕಾರ ಅವರಿಗೆ ಸಿನೆಮಾದ ಫಲಿತಾಂಶಕ್ಕಿಂತ ತಯಾರಿಕೆಯ ಪ್ರಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಸಂತೋಷದಾಯಕವಾದುದು ಎಂದು ಹೇಳುತ್ತಾರೆ. ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಮೊದಲ ಮೆಟ್ಟಿಲಿನಿಂದಲೆ ಸಂಪೂರ್ಣ ಗಮನ ಹರಿಸುತ್ತೇನೆ." ಆದರ್ಶ ವ್ಯಕ್ತಿಯ ಕುರಿತಾಗಿ ಕೇಳಲಾದ ಪ್ರಶ್ನೆಗೆ "ಗಾಂಧೀಜಿ ನನಗೆ ಸ್ಫೂರ್ತಿ ನೀಡಿದ ಒಬ್ಬ ವ್ಯಕ್ತಿ!" ಎಂದು ಉತ್ತರಿಸಿದರು[೩೪]ಟೆಂಪ್ಲೇಟು:Off-topic?

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ರಂಗೀಲಾಅಕೇಲೇ ಹಮ್‌ ಅಕೇಲೇ ತುಮ್‌ದಿಲ್ ಚಾಹತಾ ಹೈಫನಾ
ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
1973 ಯಾದೋಂಕಿ ಬಾರಾತ್ ಯಂಗ್ ರತನ್
1974 ಮದೋಶ್ ಬಾಲ ಕಲಾವಿದ
1984

ಹೋಳಿ

ಮದನ್ ಶರ್ಮಾ
1988 ಖಯಾಮತ್ ಸೆ ಖಯಾಮತ್ ತಕ್

ರಾಜ್‌ ಫಿಲ್ಮ್‌ಫೇರ್‌ ಅತ್ಯುತ್ತಮ ಪುರುಷ ಪರಿಚಯ ಪ್ರಶಸ್ತಿ ವಿಜೇತ
ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

1989 ರಾಕ್ ಆಮೀರ್ ಹೆಸೇನ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ತೀರ್ಪುಗಾರರ ವಿಶೇಷ ಪ್ರಶಸ್ತಿ ವಿಜೇತ ,
ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ಲವ್ ಲವ್ ಲವ್ ಅಮಿತ್
1990 ಅವ್ವಾಲ್ ನಂಬರ್ ಸನ್ನಿ
ತುಮ್ ಮೇರೆ ಹೊ

ಶಿವ

ದಿಲ್

ರಾಜ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

ದೀವಾನಾ ಮುಜ್ಸಾ ನಹಿ ಅಜಯ್ ಶರ್ಮಾ
ಜವಾನಿ ಜಿಂದಾಬಾದ್ ಶಶಿ
1991 ಅಫ್ಸಾನ್ ಫ್ಯಾರ್ ಕಾ

ರಾಜ್‌

ದಿಲ್ ಹೆ ಕಿ ಮಾನ್ತಾ ನಹಿ ರಘು ಜೆಟ್ಲಿ

ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

ಐಸಿ ಕಾ ನಾಮ್ ಜಿಂದಗಿ ಚೋಟು
ದೌಲತ್ ಕಿ ಜಂಗ್ ರಾಜೇಶ್ ಚೌಧರಿ
1992

ಜೋ ಜೀತಾ ವಹಿ ಸಿಕಂದರ್‌‌

ಸಂಜಯ್‌ಲಾಲ್ ಶರ್ಮಾ

ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

1993

ಪರಂಪರಾ

ರನ್ಬೀರ್ ಪ್ರಥ್ವಿ ಸಿಂಗ್
ಹಮ್ ಹೆ ರಾಹಿ ಪ್ಯಾರ ಕೆ

ರಾಹುಲ್‌ ಮಲ್ಹೋತ್ರಾ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

1994

ಅಂದಾಜ್‌ ಅಪ್ನಾ ಅಪ್ನಾ

ಅಮರ್ ಮನೋಹರ್

ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

1995 ಬಾಜಿ Iಇನ್ಸ್‌ಪೆಕ್ಟರ್ ಅಮರ್ ದಾಮ್ಲೆ
ಆತಂಕ್ ಹಿ ಆತಂಕ್ ರೋಹನ್
ಮುನ್ನಾ

ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

ರೋಹಿತ್
1996 ರಾಜಾ ಹಿಂದೂಸ್ಥಾನಿ ರಾಜಾ ಹಿಂದೂಸ್ಥಾನಿ

ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ ವಿಜೇತ

1997

ಇಶ್ಕ್ ರಾಜ

1998 ಗುಲಾಮ್ ಸಿದ್ಧರ್ಥ್ ಮರಾಠೆ

ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ
ನಾಮಾಂಕಿತ, ಫಿಲ್ಮ್‌ಫೇರ್ ಉತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ

1999 ಸರ್ಫರೋಶ್ ಅಜಯ್ ಸಿಂಗ್ ರಾಥೋಡ್

ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

ಮನ್ ದೇವ್ ಕರಣ್ ಸಿಂಗ್
ಅರ್ಥ್ (1947 ) ದಿಲ್ ನವಾಜ್
2000 ಮೇಲಾ ಕಿಶನ್ ಪ್ಯಾರೆ
2001

ಲಗಾನ್ ಭುವನ್ ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ ವಿಜೇತ

ಆಕಾಶ್ ಮಲ್ಹೋತ್ರಾ

ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

2005 Mangal Pandey: The Rising

ಮಂಗಾಲ್ ಪಾಂಡೆ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

2006

ರಂಗ್ ದೇ ಬಸಂತಿ

ದಲ್ಜಿತ್ ಸಿಂಗ್ 'ಡಿಜೆ'

ಅತ್ಯುತ್ತಮ ನಟನೆಗೋಸ್ಕರ ಫಿಲ್ಮ್‌ಫೇರ್‌ ಕ್ರಿಟಿಕ್ಸ್‌ ಪ್ರಶಸ್ತಿ ವಿಜೇತ
ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

ರೆಹಾನ್ ಕ್ವಾದ್ರಿ
2007 ತಾರೆ ಜಮಿನ್ ಪರ್ ರಾಮ್ ಶಂಕರ್ ನಿಕುಂಭ್

ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮಕರಣ

2008 ಗಜನಿ ಸಂಜಯ್ ಸಿ

ಸಿಂಘಾನಿಯಾ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

2009

ಲಕ್‌ ಬೈ ಚಾನ್ಸ್‌

ತನ್ನದೇ ಪಾತ್ರ

ಅತಿಥಿನಟ

3 ಇಡಿಯಟ್ಸ್ ರಾಂಚೋಡ್‌ದಾಸ್ ಶಾಮಲ್‌ದಾಸ್
ರಾಂಚಂದ್ (ರ್ಯಾಂಚೊ)/
ಪುಂಗ್ಶುಕ್ ಬಾಂಗ್ಡು

ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ

2011 ದೋಭಿ ಘಾಟ್ ಅರುಣ್ ಜನವರಿ 21, 2011ರಂದು ಬಿಡುಗಡೆ
ಡೆಲ್ಲಿ ಬೆಲ್ಲಿ

ಅಥಿತಿ ನಟ

ಹಿನ್ನೆಲೆ ಗಾಯನ

[ಬದಲಾಯಿಸಿ]
ಫನಾ
ವರ್ಷ ಚಿತ್ರ ಹಾಡು
1998 ಗುಲಾಮ್ "ಆತಿ ಕ್ಯಾ ಖಂಡಾಲಾ"
2000 ಮೇಲಾ "ದೇಖೋ 2000 ಜಮಾನಾ ಆ ಗಯಾ"
2005 Mangal Pandey: The Rising "ಹೋಲಿ ರೆ"
2006

ರಂಗ್ ದೇ ಬಸಂತಿ

"ಲಾಲ್ಕಾರ್"
"ಚಂದಾ ಚಮ್ಕೆ"
2007 ತಾರೆ ಜಮಿನ್ ಪರ್ "ಬಮ್ ಬಮ್ ಬೋಲೆ"

ನಿರ್ಮಾಪಕ

[ಬದಲಾಯಿಸಿ]
ವರ್ಷ ಚಿತ್ರ ನಿರ್ದೇಶಕ ಟಿಪ್ಪಣಿಗಳು
2001

ಲಗಾನ್ ಆಶುತೋಷ್ ಗೋವಾರಿಕರ್

ಕೌಟುಂಬಿಕ ಮನರಂಜನೆಯ ಜನಪ್ರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ
ಫಿಲ್ಮ್‌ಫೇರ್ ಉತ್ತಮ ಚಿತ್ರ ಪ್ರಶಸ್ತಿ ವಿಜೇತ
2007 ತಾರೆ ಜಮಿನ್ ಪರ್ (ಲೈಕ್ ಸ್ಟಾರ್ಸ್ ಆನ್ ಅರ್ಥ್ )

ಅಮೀರ್‌ ಖಾನ್‌

ಉತ್ತಮ ಕೌಟುಂಬಿಕ ಮನೋರಂಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ
ಫಿಲ್ಮ್‌ಫೇರ್ ಉತ್ತಮ ಚಿತ್ರ ಪ್ರಶಸ್ತಿ ವಿಜೇತ
2008 ಜಾನೆ ತು ಯಾ ಜಾನೆ ನಾ ಅಬ್ಬಾಸ್ ತೈರೆವಾಲ ನಮನಿರ್ದೇಶಿತ, ಫಿಲ್ಮ್‌ಫೇರ್ ಉತ್ತಮ ಚಿತ್ರ ಪ್ರಶಸ್ತಿ
2010 ಪೀಪ್ಲಿ ಲೈವ್ ಅನುಷಾ ರಿಜ್ವಿ
2011 ದೋಭಿ ಘಾಟ್ ಕಿರಣ್ ರಾವ್
ಡೆಲ್ಲಿ ಬೆಲ್ಲಿ [೩೫] ಅಭಯ್ ಡಿಯೋಲ್

ಲೇಖಕ, ನಿರ್ದೇಶಕ

[ಬದಲಾಯಿಸಿ]
ವರ್ಷ ಚಿತ್ರ ಟಿಪ್ಪಣಿಗಳು
1988 ಖಯಾಮತ್ ಸೆ ಖಯಾಮತ್ ತಕ್ ಕಥೆಗಾರ
1993 ಹಮ್ ಹೆ ರಾಹಿ ಪ್ಯಾರ್ ಕೆ

ಚಿತ್ರಕಥೆಗಾರ

2007 ತಾರೆ ಜಮಿನ್ ಪರ್ ನಿರ್ದೇಶಕ
ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವಿಜೇತ ,

ಇವನ್ನೂ ಗಮನಿಸಿ

[ಬದಲಾಯಿಸಿ]
  • ಭಾರತೀಯ ಚಿತ್ರ ನಟರ ಪಟ್ಟಿ

ಉಲ್ಲೇಖಗಳು

[ಬದಲಾಯಿಸಿ]
  1. "Readers' Picks: Top Bollywood Actors". Rediff. 17 August 2006.
  2. "Powerlist: Top Bollywood Actors". Rediff. 8 August 2006.
  3. "Box Office 2000s Decade in Review". IBOS. 19 January 2010. Archived from the original on 9 ಡಿಸೆಂಬರ್ 2012. Retrieved 12 ಜನವರಿ 2011.
  4. Press Trust India (30 November 2000). "'I become the audience'". Rediff.
  5. "The Aamir Khan Station". IBOS Network.[ಶಾಶ್ವತವಾಗಿ ಮಡಿದ ಕೊಂಡಿ]
  6. ೬.೦ ೬.೧ Nama Ramachandran (6 January 2010). "'3 Idiots' nabs Bollywood B.O. crown". Variety.
  7. "Bollywood Gets Political". Foreign Policy In Focus. 2008-10-24. {{cite news}}: Italic or bold markup not allowed in: |publisher= (help)
  8. Kidwai, Rasheed (31 May 2004). "Badshah at durbar and dinner - I am really proud of you, Shah Rukh tells Sonia". The Telegraph. Archived from the original on 27 ಜನವರಿ 2009. Retrieved 12 ಜನವರಿ 2011. {{cite web}}: Cite has empty unknown parameter: |coauthors= (help)
  9. "Box Office 1990". BoxOfficeIndia.Com. Archived from the original on 22 ಜುಲೈ 2012. Retrieved 12 ಜನವರಿ 2011.
  10. "Box Office 1992". BoxOfficeIndia.Com. Archived from the original on 4 ಡಿಸೆಂಬರ್ 2012. Retrieved 12 ಜನವರಿ 2011.
  11. "Box Office 1993". BoxOfficeIndia.Com. Archived from the original on 21 ಜುಲೈ 2012. Retrieved 12 ಜನವರಿ 2011.
  12. "Box Office 1995". BoxOfficeIndia.Com. Archived from the original on 29 ಜುಲೈ 2012. Retrieved 12 ಜನವರಿ 2011.
  13. Ashley Gujaadhur. "Andaz Apna Apna". Planet Bollywood. Archived from the original on 2009-09-08. Retrieved 2011-01-12.
  14. "Box Office 1996". BoxOfficeIndia.Com. Archived from the original on 21 ಜುಲೈ 2012. Retrieved 12 ಜನವರಿ 2011.
  15. "Box Office 1998". BoxOfficeIndia.Com. Archived from the original on 30 ಜೂನ್ 2012. Retrieved 12 ಜನವರಿ 2011.
  16. "Box Office 2000". BoxOfficeIndia.Com. Archived from the original on 20 ಜುಲೈ 2012. Retrieved 12 ಜನವರಿ 2011.
  17. ೧೭.೦ ೧೭.೧ "Box Office 2001". BoxOfficeIndia.Com. Archived from the original on 29 ಜೂನ್ 2012. Retrieved 12 ಜನವರಿ 2011.
  18. Taran Adarsh (26 January 2006). "Rang De Basanti". Bollywood Hungama.
  19. ೧೯.೦ ೧೯.೧ "Box Office 2006". BoxOfficeIndia.Com. Archived from the original on 25 ಮೇ 2012. Retrieved 12 ಜನವರಿ 2011.
  20. Taran Adarsh (26 May 2006). "Fanaa: Movie Review". Bollywood Hungama. {{cite web}}: Missing or empty |url= (help)
  21. "Ghajini Opens To A Phenomenal Response All Over". BoxOfficeIndia. 27 December 2008. Archived from the original on 23 ಜುಲೈ 2012. Retrieved 12 ಜನವರಿ 2011.
  22. "'3 ಇಡಿಯಟ್ಸ್' ಬೆಸ್ಟ್ ಫಿಲ್ಮ್; ಬಿಗ್ ಬಿ, ವಿದ್ಯಾ ಬೆಸ್ಟ್ ಆ‍ಯ್‌ಕ್ಟರ್ಸ್ ಎಟ್ ಫಿಲ್ಮ್‌ಫೇರ್ ಅವಾರ್ಡ್ಸ್". Archived from the original on 2011-09-28. Retrieved 2021-08-24.
  23. "Awards for Lagaan: Once Upon a Time in India". Internet Movie Database.
  24. "Taare Zameen Par, Chak De top directors' pick in 2007". Economic Times. 29 December 2007. Archived from the original on 21 April 2008.
  25. "Filmfare: 'Jodha...' bags 5, Priyanka, Hrithik shine". Times of India. 1 March 2009.
  26. "Will Dhobi Ghat appeal to Indians?'". movies.rediff.com. {{cite web}}: Missing or empty |url= (help); Text "http://movies.rediff.com/report/2010/oct/19/review-dhobi-ghat.htm" ignored (help)
  27. "Aamir Khan Kiran Rao Wedding Marriage Amir Wife Reena Dutta Divorce". Archived from the original on 2010-08-04. Retrieved 2011-01-12.
  28. Press Trust of India (1 January 2006). "Grand reception for Aamir Khan-Kiran Rao wedding". Indian Express. Archived from the original on 22 ಫೆಬ್ರವರಿ 2007. Retrieved 12 ಜನವರಿ 2011.
  29. Anil Sinanan (27 February 2008). "Aamir Khan's defiant stand against Bollywood awards". Times. London.
  30. "Aamir declines Madame Tussauds". Indiatimes. 22 November 2007. Archived from the original on 15 ಜೂನ್ 2010. Retrieved 12 ಜನವರಿ 2011.
  31. "Aamir Khan turns down Madam Tussauds". IBOS. 26 November 2007. Archived from the original on 11 ಜನವರಿ 2013. Retrieved 12 ಜನವರಿ 2011.
  32. Press Trust of India (2 November 2007). "Aamir's family supports him against father". Times of India.
  33. "Aamir Khan's father Tahir Hussain passes away". Bollywood Hungama. 2 February 2010.
  34. Janki Dave (10 February 2009). "Gandhiji inspires me, says Aamir". Times of India.
  35. IndiaFM News Bureau (26 December 2007). "Aamir Khan to produce Delhi Belly". Bolywood Hungama.

(೩೬). ↑ [೨] Archived 2012-05-10 ವೇಬ್ಯಾಕ್ ಮೆಷಿನ್ ನಲ್ಲಿ.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]