ಅಡಾಮ್ ಗಿಲ್‌ಕ್ರಿಸ್ಟ್
Adam Gilchrist | ||||
ಆಸ್ಟ್ರೇಲಿಯಾ | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | Adam Craig Gilchrist | |||
ಅಡ್ಡಹೆಸರು | Gilly, Churchie | |||
ಹುಟ್ಟು | 11 14 1971 | |||
Bellingen, New South Wales, Australia | ||||
ಎತ್ತರ | 1.86 m (6 ft 1 in) | |||
ಪಾತ್ರ | Wicket-keeper | |||
ಬ್ಯಾಟಿಂಗ್ ಶೈಲಿ | Left Hand | |||
ಬೌಲಿಂಗ್ ಶೈಲಿ | Right-arm off break | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ಟೆಸ್ಟ್ ಪಾದಾರ್ಪಣೆ (cap 381) | 5 November 1999: v Pakistan | |||
ಕೊನೆಯ ಟೆಸ್ಟ್ ಪಂದ್ಯ | 24 January 2008: v India | |||
ODI ಪಾದಾರ್ಪಣೆ (cap 129) | 25 October 1996: v South Africa | |||
ಕೊನೆಯ ODI ಪಂದ್ಯ | 4 March 2008: v India | |||
ODI ಅಂಗಿಯ ಸಂಖ್ಯೆ | 18 | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
1994–2008 | Western Australia | |||
2008–present | Deccan Chargers | |||
1992–1994 | New South Wales | |||
ವೃತ್ತಿಜೀವನದ ಅಂಕಿಅಂಶಗಳು | ||||
ಟೆಸ್ಟ್ | ODI | FC | List A | |
ಪಂದ್ಯಗಳು | 96 | 287 | 190 | 355 |
ಒಟ್ಟು ರನ್ನುಗಳು | 5,570 | 9,619 | 10,334 | 11,288 |
ಬ್ಯಾಟಿಂಗ್ ಸರಾಸರಿ | 47.60 | 35.89 | 44.16 | 34.94 |
೧೦೦/೫೦ | 17/26 | 16/55 | 30/43 | 18/63 |
ಅತೀ ಹೆಚ್ಚು ರನ್ನುಗಳು | 204* | 172 | 204* | 172 |
ಬೌಲ್ ಮಾಡಿದ ಚೆಂಡುಗಳು | – | – | – | 12 |
ವಿಕೆಟ್ಗಳು | – | – | – | 0 |
ಬೌಲಿಂಗ್ ಸರಾಸರಿ | – | – | – | – |
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | – | – | – | 0 |
೧೦ ವಿಕೆಟುಗಳು ಪಂದ್ಯದಲ್ಲಿ | – | – | – | n/a |
ಶ್ರೇಷ್ಠ ಬೌಲಿಂಗ್ | – | – | – | 0/10 |
ಕ್ಯಾಚುಗಳು /ಸ್ಟಂಪಿಂಗ್‍ಗಳು | 379/37 | 417/55 | 756/55 | 526/65 |
ದಿನಾಂಕ 4 March, 2008 ವರೆಗೆ. |
ಅಡಾಮ್ ಕ್ರೇಗ್ ಗಿಲ್‌ಕ್ರಿಸ್ಟ್ (14 ನವೆಂಬರ್ 1971ರಂದು ಜನನ) -[೧] ಗಿಲ್ಲಿ ಅಥವಾ ಚರ್ಚ್ ಉಪನಾಮಗಳಿರುವ ಇವರು[೨] ಆಸ್ಟ್ರೇಲಿಯದ ಮಾಜಿ ಅಂತಾರಾಷ್ಟ್ರೀಯ ಆಟಗಾರ. ಇವರು ಒಬ್ಬ ಅಕ್ರಮಣಕಾರಿ ಎಡಗೈ ಬ್ಯಾಟ್ಸ್‌ಮನ್ ಮತ್ತು ದಾಖಲೆಗಳನ್ನು ಮುರಿದ ವಿಕೆಟ್-ಕೀಪರ್ ಸಹ ಆಗಿದ್ದಾರೆ. ತಮ್ಮ ಅಕ್ರಮಣಕಾರಿ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯ ರಾಷ್ಟ್ರೀಯ ತಂಡಕ್ಕೆ ತಮ್ಮ ಪಾತ್ರವನ್ನು ಮರುವ್ಯಾಖ್ಯಾನಿಸಿದ್ದಾರೆ. ಕ್ರಿಕೆಟ್ ಆಟದ ಇತಿಹಾಸದಲ್ಲಿ ಇವರು ಮಹಾನ್ ವಿಕೆಟ್-ಕೀಪರ್-ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ.[೩][೪] ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಔಟ್ ಮಾಡಿದ ವಿಕೆಟ್‌ಕೀಪರ್ ಎಂಬ ವಿಶ್ವದಾಖಲೆ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಔಟ್ ಮಾಡಿದ ಆಸ್ಟ್ರೇಲಿಯನ್ ವಿಕೆಟ್-ಕೀಪರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.[೫][೬] ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ, ಪಂದ್ಯಗಳ ಎರಡೂ ರೂಪಗಳಲ್ಲಿ ಅತ್ಯುನ್ನತ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್‌ಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಸಹ ಸೇರಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೆಯ ಅತಿ ವೇಗದ ಶತಕದ ದಾಖಲೆಯು ಅಡಾಮ್ ಗಿಲ್‌ಕ್ರಿಸ್ಟ್ ಹೆಸರಿನಲ್ಲಿದೆ.[೭] ಅಡಾಮ್ ಗಿಲ್‌ಕ್ರಿಸ್ಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಹೊಡೆದ ಏಕೈಕ ಆಟಗಾರರಾಗಿದ್ದಾರೆ.[೮] ಅವರು ಹೊಡೆದಿರುವ 17 ಟೆಸ್ಟ್ ಮತ್ತು 16 ODI ಶತಕಗಳು, ವಿಕೆಟ್-ಕೀಪರ್ ಗಳಿಸಿರುವ ಅತಿ ಹೆಚ್ಚು ಶತಕಗಳ ದಾಖಲೆಗಳಾಗಿವೆ.[೯][೧೦] ಮೂರು ಸತತ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಗಳಲ್ಲಿ(1999, 2003 ಮತ್ತು 2007)ಕನಿಷ್ಠ 50 ರನ್ ಗಳಿಸಿದ ಅಪೂರ್ವ ದಾಖಲೆಯನ್ನು ಅಡಾಮ್ ಗಿಲ್‌ಕ್ರಿಸ್ಟ್ ಸಾಧಿಸಿದ್ದಾರೆ .[೧೧] ಮೂರು ಬಾರಿ ಪ್ರಶಸ್ತಿಗಳನ್ನು ಗೆದ್ದ ಕೇವಲ ಮೂವರು ಆಟಗಾರರಲ್ಲಿ ಇವರೂ ಒಬ್ಬರು.[೧೨] ಅಂಪೈರ್ ತೀರ್ಪಿಗೆ ವ್ಯತಿರಿಕ್ತವಾಗಿ ಕೆಲವು ವೇಳೆ ತಾವು ನಿಜಕ್ಕೂ ಔಟ್ ಎಂದು ಪರಿಗಣಿಸಿದ ಸಂದರ್ಭದಲ್ಲಿ ಕ್ರೀಸ್‌ನಿಂದ ನಿರ್ಗಮಿಸುವುದಕ್ಕೆಹೆಸರುವಾಸಿಯಾಗಿದ್ದರು.[೧೩][೧೪] ಅವರು ತಮ್ಮ ಪ್ರಥಮ ದರ್ಜೆಯ ಕ್ರಿಕೆಟ್ ಚೊಚ್ಚಲ ಪ್ರವೇಶವನ್ನು 1992ರಲ್ಲಿ, ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು 1996ರಲ್ಲಿ ಭಾರತದಲ್ಲಿ, ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವನ್ನು 1999ರಲ್ಲಿ ಆರಂಭಿಸಿದರು.[೧] ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ, ಅವರು ಆಸ್ಟ್ರೇಲಿಯ ಪರ 96 ಟೆಸ್ಟ್‌ಪಂದ್ಯಗಳಲ್ಲಿ ಹಾಗೂ 270ಕ್ಕಿಂತಲೂ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದರು. ಕ್ರಿಕೆಟ್ ಆಟದ ಎರಡೂ ಸ್ವರೂಪಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಅಸ್ಟ್ರೇಲಿಯಾ ತಂಡದ ಉಪನಾಯಕರಾಗಿದ್ದರು. ಎಂದಿನ ನಾಯಕರಾದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅನುಪಸ್ಥಿತಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.[೧೫][೧೬] ಅವರು ಮಾರ್ಚ್ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದರು.[೧೭] ಆದಾಗ್ಯೂ, ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ, ಡೆಕನ್ ಚಾರ್ಜರ್ಸ್ ಪರ ಆಟ ಮುಂದುವರೆಸಿದರು. 2009ರಲ್ಲಿ ಅವರು ವಿವಿಎಸ್ ಲಕ್ಷ್ಮಣ್‌ರ ಬದಲಿಗೆ ನಾಯಕತ್ವ ವಹಿಸಿಕೊಂಡರು.[೧೮] ಇವರ ನಾಯಕತ್ವದಲ್ಲಿ ಡೆಕನ್ ತಂಡ 2009ರ ಐಪಿಎಲ್ ಪ್ರಶಸ್ತಿಗಳಿಸಿತು.
ಬಾಲ್ಯ ಮತ್ತು ವೈಯಕ್ತಿಕ ಜೀವನ
[ಬದಲಾಯಿಸಿ]ಅಡಾಮ್ ಗಿಲ್‌ಕ್ರಿಸ್ಟ್ 1971ರಲ್ಲಿ ಆಸ್ಟ್ರೇಲಿಯ ದೇಶದ ನ್ಯೂ ಸೌತ್ ವೇಲ್ಸ್ ರಾಜ್ಯದ ಬೆಲಿಂಗೆನ್‌ನಲ್ಲಿರುವ ಬೆಲಿಂಗೆನ್ ಆಸ್ಪತ್ರೆಯಲ್ಲಿ ಜನಿಸಿದರು. ಅವರು ಮತ್ತು ಅವರ ಕುಟುಂಬದವರು ಡೊರಿಗೊ, ಜೂನೀ ಮತ್ತು ಡೆನಿಲಿಕ್ವಿನ್‌ನಲ್ಲಿ ನೆಲೆಸಿದರು. ಡೆನಿಲಿಕ್ವಿನ್‌ನಲ್ಲಿ ತಮ್ಮ ಶಾಲೆ ಡೆನಿಲಿಕ್ವಿನ್ ಸೌತ್ ಪಬ್ಲಿಕ್ ಸ್ಕೂಲ್ ಪರ ಆಡುತ್ತಿದ್ದಾಗ, ಅವರು ಬ್ರಯಾನ್ ಟೇಬರ್ ಷೀಲ್ಡ್ ವಿಜೇತರಾದರು (ನ್ಯೂ ಸೌತ್ ವೇಲ್ಸ್ ಕ್ರಿಕೆಟ್ ಆಟಗಾರ ಬ್ರಯಾನ್ ಟೇಬರ್ ಹೆಸರಿನಲ್ಲಿ). ತಮ್ಮ 13ನೆಯ ವಯಸ್ಸಿನಲ್ಲಿ, ಅವರ ಹೆತ್ತವರಾದ ಸ್ಟ್ಯಾನ್ ಮತ್ತು ಜೂನ್, ಕುಟುಂಬವನ್ನು ನ್ಯೂ ಸೌತ್ ವೇಲ್ಸ್‌ನ ಲಿಸ್ಮೋರ್‌ಗೆ ಸ್ಥಳಾಂತರಿಸಿದರು. ಅಲ್ಲಿ ಗಿಲ್‌ಕ್ರಿಸ್ಟ್ ಕ್ಯಾಡಿನಾ ಹೈಸ್ಕೂಲ್ ಕ್ರಿಕೆಟ್ ತಂಡದ ನಾಯಕರಾದರು.[೧೯] ನಂತರ ರಾಜ್ಯದ ಅಂಡರ್-17 ತಂಡಕ್ಕೆ ಆಯ್ಕೆಯಾದರು.[೨೦] 1989ರಲ್ಲಿ ಅವರಿಗೆ ಲಂಡನ್-ಮೂಲದ ರಿಚ್ಮಂಡ್ ಕ್ರಿಕೆಟ್ ಕ್ಲಬ್‌ನಿಂದ ವಿದ್ಯಾರ್ಥಿ ವೇತನ ನೀಡುವ ಪ್ರಸ್ತಾಪ ಮಂಡಿಸಲಾಯಿತು.[೨೧] ಈ ಯೋಜನೆಯನ್ನು ಇದೀಗ ಗಿಲ್‌ಕ್ರಿಸ್ಟ್ ಅವರೇ ಬೆಂಬಲಿಸುತ್ತಾರೆ.[೨೧] ನಂತರ ಅವರು ಸಿಡ್ನಿಗೆ ಸ್ಥಳಾಂತರಗೊಂಡು ಸಿಡ್ನಿ ಗ್ರೇಡ್ ಕ್ರಿಕೆಟ್ ಆಡಲು ಗೊರ್ಡೊನ್ ಕ್ರಿಕೆಟ್ ಕ್ಲಬ್ ಸದಸ್ಯರಾದರು. ಆನಂತರ ಅವರು ನಾರ್ದರ್ನ್ ಡಿಸ್ಟ್ರಿಕ್ಟ್ಸ್‌ಗೆ ಸ್ಥಳಾಂತರಗೊಂಡರು.[೨೨] ಅವರು ತಮ್ಮ ಪ್ರೌಢಶಾಲಾ ಗೆಳತಿ ಮೆಲಿಂಡಾ (ಮೆಲ್) ಗಿಲ್‌ಕ್ರಿಸ್ಟ್ (ಮುಂಚಿನ ಹೆಸರು ಷಾರ್ಪ್)ರೊಂದಿಗೆ ವಿವಾಹವಾಗಿದ್ದಾರೆ. ಮೆಲಿಂಡಾ ಒಬ್ಬ ಆಹಾರ ವಿಜ್ಞಾನಿ. ಗಿಲ್‌ಕ್ರಿಸ್ಟ್ ದಂಪತಿಗೆ ಮೂವರು ಮಕ್ಕಳಿದ್ದಾರೆ - ಹ್ಯಾರಿಸನ್ ಮತ್ತು ಆರ್ಚೀ ಎಂಬ ಇಬ್ಬರು ಪುತ್ರರು, ಹಾಗೂ, ಆನೀ ಜೀನ್ ಎಂಬ ಒಬ್ಬ ಪುತ್ರಿ. 2007ರ ಪೂರ್ವದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್‌ರ ವೈಯಕ್ತಿಕ ಜೀವನ ಸುದ್ದಿಗೆ ಗ್ರಾಸವಾಯಿತು.[೨೩] 2007 ಕ್ರಿಕೆಟ್ ವಿಶ್ವಕಪ್ ಆರಂಭವಾಗುವ ಸಮಯದಲ್ಲಿ ಅವರ ಕಿರಿಯ ಮಗು ಜನಿಸುವ ಅಂದಾಜಾಗಿತ್ತು. ಇದು ಮಾರ್ಚ್ 2007ರಲ್ಲಿ ನಡೆದ ಪಂದ್ಯಾವಳಿಯ ಆರಂಭಿಕ ಹಂತಗಳಲ್ಲಿ ಗಿಲ್‌ಕ್ರಿಸ್ಟ್‌ರ ಹಾಜರಿಗೆ ಅಡ್ಡಿಯುಂಟುಮಾಡಿತು. ಮುಂಚಿತವಾಗಿ ಆರ್ಚೀಯ ಜನನದಿಂದ(ಫೆಬ್ರವರಿಯಲ್ಲಿ) ಅಡಮ್ ಗಿಲ್‌ಕ್ರಿಸ್ಟ್ ಇಡೀ ಪಂದ್ಯಾವಳಿಗೆ ಲಭ್ಯವಾಗುವುದಾಗಿ ಸ್ವತಃ ಘೋಷಿಸಿಕೊಳ್ಳಲು ಸಾಧ್ಯವಾಯಿತು.[೨೪]
ದೇಶೀಯ ಕ್ರಿಕೆಟ್ ವೃತ್ತಿ ಜೀವನ
[ಬದಲಾಯಿಸಿ]1991ರಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಆಸ್ಟ್ರೇಲಿಯ ಯುವ ಕ್ರಿಕೆಟರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಇದು ಇಂಗ್ಲೆಂಡ್ ಪ್ರವಾಸ ಕೈಗೊಂಡು ಕಿರಿಯರ ODIಗಳು ಮತ್ತು ಟೆಸ್ಟ್‌ಗಳನ್ನು ಆಡಿದ ರಾಷ್ಟ್ರೀಯ ಯುವ ತಂಡವಾಗಿತ್ತು. ಕೊನೆಯ ಮೂರು ಟೆಸ್ಟ್‌ಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಒಂದು ಶತಕ ಮತ್ತು ಒಂದು ಅರ್ಧಶತಕ ಹೊಡೆದರು.[೨೦] ಆ ವರ್ಷದ ಅಪರಾರ್ಧದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಆಸ್ಟ್ರೇಲಿಯಗೆ ಹಿಂದಿರುಗಿದಾಗ, ಅವರನ್ನು ಆಸ್ಟ್ರೇಲಿಯನ್ ಕ್ರಿಕೆಟ್ ಅಕಾಡೆಮಿಯಲ್ಲಿ ಸೇರ್ಪಡೆಗೊಳಿಸಲಾಯಿತು.[೨೦] ಇದು ಆಸ್ಟ್ರೇಲಿಯದ ಕಿರಿಯ ಕ್ರಿಕೆಟ್ ಆಟಗಾರರಿಗೆ ಒಂದು ಕೊನೆಮುಟ್ಟಿಸುವ ಶಾಲೆಯಾಗಿತ್ತು. [ಸೂಕ್ತ ಉಲ್ಲೇಖನ ಬೇಕು] ಇದರ ತರುವಾಯದ ವರ್ಷದಲ್ಲಿ, ಅಡಾಮ್ ಗಿಲ್‌ಕ್ರಿಸ್ಟ್ ACA ತಂಡವನ್ನು ಪ್ರತಿನಿಧಿಸಿ,ಆಸ್ಟ್ರೇಲಿಯ ರಾಜ್ಯ ತಂಡಗಳ ಸೆಕೆಂಡ್ XI ವಿರುದ್ಧದ ಪಂದ್ಯಗಳಲ್ಲಿ ಆಡಿದರು. ಆನಂತರ, ಪ್ರಾಂತೀಯ ಕಿರಿಯರ ತಂಡದ ಪಂದ್ಯಗಳನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸ ಹೋದರು.[೨೦] ಅಲ್ಲಿಂದ ಆಸ್ಟ್ರೇಲಿಯಗೆ ವಾಪಸಾದ ನಂತರ, ಗಿಲ್‌ಕ್ರಿಸ್ಟ್ ರಾಜ್ಯದ ಕಿರಿಯರ ತಂಡ (ಸ್ಟೇಟ್ ಕೋಲ್ಟ್ಸ್) ಮತ್ತು ಸೆಕೆಂಡ್ XI ತಂಡಗಳ ಪರ ಆಡಿ, ನಾಲ್ಕು ಪಂದ್ಯಗಳಲ್ಲಿ ಎರಡು ಶತಕ ಹೊಡೆದರು.[೨೦] ಇದರ ಫಲವಾಗಿ, 1992-93 ಋತುವಿನಲ್ಲಿ ನ್ಯೂ ಸೌತ್ ವೇಲ್ಸ್ ಪರ ಪ್ರಥಮ ದರ್ಜೆಯ ಕ್ರಿಕೆಟ್ ಚೊಚ್ಚಲ ಪ್ರವೇಶಕ್ಕೆ ಅವರನ್ನು ಆಯ್ಕೆ ಮಾಡುವ ಮೂಲಕ ಬಹುಮಾನಿಸಲಾಯಿತು.[೧] ಫಿಲ್ ಎಮರಿ ವಿಕೆಟ್-ಕೀಪರ್ ಜವಾಬ್ದಾರಿ ಹೊತ್ತಿದ್ದರಿಂದ ಅವರು ಪೂರ್ಣವಾಗಿ ಬ್ಯಾಟ್ಸ್‌ಮನ್ ಆಗಿ ಆಡಿದರು.[೨೫] ತಮ್ಮ ಮೊದಲನೆಯ ಋತುವಿನಲ್ಲಿಯೇ ಅವರ ತಂಡವು ಷೆಫೀಲ್ಡ್ ಷೀಲ್ಡ್ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಫೈನಲ್ ಪಂದ್ಯದ ಎರಡನೆಯ ಇನ್ನಿಂಗ್ಸ್‌ನಲ್ಲಿ ಅವರು 20 ರನ್ ಗಳಿಸಿ ಅಜೇಯರಾಗಿ ಉಳಿದು ಕ್ವೀನ್ಸ್‌ಲೆಂಡ್ ವಿರುದ್ಧ ಲೀಲಾಜಾಲವಾದ ಜಯಗಳಿಸುವುದರಲ್ಲಿ ಪಾತ್ರವಹಿಸಿದರು.[೨೬] ತಮ್ಮ ಆರಂಭಿಕ ಋತುವಿನಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 30.44 ಸರಾಸರಿಯಲ್ಲಿ 274 ರನ್ ಗಳಿಸಿದರು. ಇದರಲ್ಲಿ ಅವರ ಸ್ಕೋರಾದ 75 ರನ್ 50ನ್ನು ಮೀರಿದ ಏಕೈಕ ಪ್ರಯತ್ನವಾಗಿತ್ತು. ಅವರು ಮರ್ಕೆಂಟೈಲ್ ಮ್ಯೂಚುಯಲ್ ಸೀಮಿತ ಒವರ್‌ಗಳ ಪಂದ್ಯಾವಳಿಯಲ್ಲಿಯೂ ಸಹ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ತರುವಾಯದ ಋತುವಿನಲ್ಲಿ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಅವರು ಹೋರಾಡಬೇಕಾಯಿತು. ಅವರು ಕೇವಲ ಮೂರು ಪ್ರಥಮ ದರ್ಜೆಯ ಪಂದ್ಯಗಳಲ್ಲಿ ಆಡಲು ಅವಕಾಶ ದೊರಕಿತು.[೨೭] ಅವರು 8.60 ಸರಾಸರಿಯಲ್ಲಿ ಕೇವಲ 43 ರನ್ ಗಳಿಸಿದರು. ನ್ಯೂ ಸೌತ್ ವೇಲ್ಸ್ ಎರಡೂ ಪಂದ್ಯಾವಳಿಗಳಲ್ಲಿ ಜಯಗಳಿಸಿತು. ಗಿಲ್‌ಕ್ರಿಸ್ಟ್ ಅವರನ್ನು ಎರಡೂ ಫೈನಲ್‌ಗಳಲ್ಲಿ ನಿರ್ಲಕ್ಷಿಸಲಾಯಿತು ಮತ್ತು ಸೀಮಿತ ಒವರ್‌ಗಳ ಒಂದು ಪಂದ್ಯದಲ್ಲಿಯೂ ಆಡಲಿಲ್ಲ.[೨೦][೨೮] ಪ್ರಬಲವಾದ ನ್ಯೂ ಸೌತ್ ವೇಲ್ಸ್ ತಂಡದಲ್ಲಿ ಸಾಕಷ್ಟು ಅವಕಾಶಗಳು ದೊರಕದ ಕಾರಣ, ಅಡಾಮ್ ಗಿಲ್‌ಕ್ರಿಸ್ಟ್ 1994-95 ಋತುವಿನ ಆರಂಭದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯ ತಂಡಕ್ಕೆ ಸೇರ್ಪಡೆಯಾದರು.ಅಲ್ಲಿ ವಿಕೆಟ್-ಕೀಪರ್ ಸ್ಥಾನಕ್ಕಾಗಿ ಅವರು ಮಾಜಿ ಟೆಸ್ಟ್ ಆಟಗಾರ ಟಿಮ್ ಜೋಹ್ರರ್‌ರೊಂದಿಗೆ ಸ್ಪರ್ಧೆಗಿಳಿಯಬೇಕಾಯಿತು. ಅಡಾಮ್ ಗಿಲ್‌ಕ್ರಿಸ್ಟ್ ಆಯ್ಕೆಯಾಗುವ ಖಾತರಿಯಿರಲಿಲ್ಲ. ಆದರೂ, ಋತು-ಪೂರ್ವ ಅಭ್ಯಾಸ ಪಂದ್ಯವೊಂದರಲ್ಲಿ ಅವರು ಶತಕ ಗಳಿಸಿ, ತಂಡದಲ್ಲಿ ಟಿಮ್ ಜೋಹ್ರರ್ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಸ್ಥಳೀಯ ಅಭಿಮಾನಿಗಳು ಈ ಕ್ರಮವನ್ನು ವಿರೋಧಿಸಿದರೂ,ಅಡಾಮ್ ಗಿಲ್‌ಕ್ರಿಸ್ಟ್ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದರು.[೨೯] ಮೊದಲ ಋತುವಿನಲ್ಲಿ ಅವರು 55 ಪ್ರಥಮ ದರ್ಜೆಯ ಔಟ್‌ಗಳನ್ನು ಮಾಡಿದರು. ಇದು 1994-95 ಋತುವಿನಲ್ಲಿ ಆಸ್ಟ್ರೇಲಿಯನ್ ದೇಶೀಯ ಕ್ರಿಕೆಟ್‌ನಲ್ಲಿ ವಿಕೆಟ್-ಕೀಪರ್ ಸಾಧಿಸಿದ ಅತಿ ಹೆಚ್ಚು ಔಟ್‌ಗಳ ದಾಖಲೆಯಾಗಿದೆ.[೩೦] ಆದರೆ ಅವರು 26.53 ಸರಾಸರಿಯಲ್ಲಿ, 398 ರನ್ ಗಳಿಸಿ, ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಸೆಣಸಿದರು. ಇದರಲ್ಲಿ ಏಳು ಬಾರಿ ಒಂದಂಕಿ ಸ್ಕೋರ್‌ಗಳಿಗೆ ಔಟಾದರು. ಆದರೆ ಋತುವಿನ ಕೊನೆಯ ಹಂತಗಳಲ್ಲಿ ಸೌತ್ ಆಸ್ಟ್ರೇಲಿಯ ವಿರುದ್ಧ 126 ರನ್ ಗಳಿಸುವುದರೊಂದಿಗೆ ತಮ್ಮ ಚೊಚ್ಚಲ ಪ್ರಥಮ-ದರ್ಜೆಯ ಶತಕ ಗಳಿಸಿದರು.[೨೦] 1995ರಲ್ಲಿ ಇಂಗ್ಲೆಂಡ್ ಪ್ರವಾಸ ಹೋಗಿ ಅಲ್ಲಿ ಇಂಗ್ಲಿಷ್ ಕೌಂಟಿಗಳ ವಿರುದ್ಧ ಪಂದ್ಯಗಳನ್ನು ಆಡಿದ ಯುವ ಆಸ್ಟ್ರೇಲಿಯ ತಂಡದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಆಯ್ಕೆಯಾದರು. ಅಡಾಮ್ ಗಿಲ್‌ಕ್ರಿಸ್ಟ್ ಬ್ಯಾಟಿಂಗ್‌ನಲ್ಲಿ ಮಿಂಚಿದರು. 70.00 ಸರಾಸರಿಯಲ್ಲಿ ಎರಡು ಶತಕಗಳನ್ನು ಒಳಗೊಂಡ 490 ರನ್ ಗಳಿಸಿದರು.[೨೦] ವೆಸ್ಟರ್ನ್ ಆಸ್ಟ್ರೇಲಿಯ ತಂಡಕ್ಕಾಗಿ ಪರ್ತ್‌ನಲ್ಲಿ ತಮ್ಮ ಎರಡನೆಯ ಋತುವಿನಲ್ಲಿ 58 ಕ್ಯಾಚ್‌ಗಳು ಮತ್ತು ನಾಲ್ಕು ಸ್ಟಂಪಿಂಗ್‌ಗಳೊಂದಿಗೆ ಅತಿ ಹೆಚ್ಚು ಔಟ್ ಮಾಡಿದ ವಿಕೆಟ್-ಕೀಪರ್‌ಗಳ ಪೈಕಿ ಅಗ್ರಸ್ಥಾನ ಪಡೆದರು. ಆದರೆ, ಮನಮೋಹಕ 50.52 ಬ್ಯಾಟಿಂಗ್ ಸರಾಸರಿಯಲ್ಲಿ 835 ರನ್ ಗಳಿಸಿದ್ದು ಗಮನಾರ್ಹವಾಗಿತ್ತು.[೨೦][೨೯][೩೧] ವಾರಿಯರ್ಸ್ ತಂಡವು ಷೆಫೀಲ್ಡ್ ಷೀಲ್ಡ್ ಪಂದ್ಯಾವಳಿಯ ಪೈನಲ್ ತಲುಪಿದರು. ಆಡಿಲೇಡ್ ಒವಲ್ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 187 ಚೆಂಡುಗಳನ್ನೆದುರಿಸಿ ಅಜೇಯ 189 ರನ್ ಗಳಿಸಿದರು. ಇದರಲ್ಲಿ ಐದು ಸಿಕ್ಸರ್‌ಗಳು ಸಹ ಇದ್ದವು.[೨೯] ಈ ಬ್ಯಾಟಿಂಗ್ ಪ್ರದರ್ಶನವು ಅಡಮ್ ಗಿಲ್‌ಕ್ರಿಸ್ಟ್‌ರಿಗೆ ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆ ಸಂಪಾದಿಸಿಕೊಟ್ಟಿತು.[೩೨] ಸೌತ್ ಆಸ್ಟ್ರೇಲಿಯ ಪರ ಕೊನೆಯ ವಿಕೆಟ್ ಜೋಡಿ ದೃಢವಾಗಿ ನಿಂತು ಪ್ರವಾಸಿಗಳನ್ನು ಹಿಮ್ಮೆಟ್ಟಿಸಿದ್ದರಿಂದ, ಫೈನಲ್ ಪಂದ್ಯವು ರೋಮಾಂಚಕ ಡ್ರಾದಲ್ಲಿ ಅಂತ್ಯಗೊಂಡಿತು.[೩೨] ಅರ್ಹತಾಸುತ್ತಿನ ಪಂದ್ಯಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಆಧಾರದ ಮೇಲೆ ಆತಿಥೇಯ ತಂಡವು ಪ್ರಶಸ್ತಿ ಗೆದ್ದುಕೊಂಡಿತು.[೩೩] ಆ ಋತುವಿನ ಸೀಮಿತ ಒವರ್‌ಗಳ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ, ವೆಸ್ಟರ್ನ್ ಆಸ್ಟ್ರೇಲಿಯ ತಂಡದ ಪರ ಅಡಾಮ್ ಗಿಲ್‌ಕ್ರಿಸ್ಟ್ ಅಜೇಯ 76 ರನ್ ಗಳಿಸಿ, ನ್ಯೂ ಸೌತ್ ವೇಲ್ಸ್ ವಿರುದ್ಧ ಅತ್ಯಲ್ಪ ಅಂತರದ ಮೂರು ವಿಕೆಟ್ ಗೆಲುವಿಗೆ ನೆರವಾದರು. ಇದು ಕ್ವೀನ್ಸ್‌ಲೆಂಡ್ ವಿರುದ್ಧ ಫೈನಲ್ ಆಡುವ ಅವಕಾಶ ಒದಗಿಸಿದರೂ, ಆ ಪಂದ್ಯದಲ್ಲಿ ಸೋತರು.[೨೦][೨೯] ಅಡಾಮ್ ಗಿಲ್‌ಕ್ರಿಸ್ಟ್ ಒಳ್ಳೆಯ ಲಯದಲ್ಲಿದ್ದ ಕಾರಣ ಆಸ್ಟ್ರೇಲಿಯ ಎ ತಂಡಕ್ಕೆ ಆಯ್ಕೆಯಾದರು. ರಾಷ್ಟ್ರೀಯ ತಂಡದ ಆಯ್ಕೆಗೆ ಸಮೀಪದಲ್ಲಿದ್ದ ಆಟಗಾರರನ್ನು ಈ ತಂಡವು ಹೊಂದಿತ್ತು.[೨೦] 1996-97 ಋತುವಿನಲ್ಲಿ, ಇಯಾನ್ ಹೀಲಿ ಬದಲಿಗೆ ಅಡಾಮ್ ಗಿಲ್‌ಕ್ರಿಸ್ಟ್ ರಾಷ್ಟ್ರೀಯ ತಂಡದ ವಿಕೆಟ್-ಕೀಪರ್ ಆಗಿ ಆಯ್ಕೆಯಾಗಬೇಕು ಎಂದು ಮಾಧ್ಯಮದ ಕೆಲವು ಭಾಗಗಳು ಸಲಹೆ ಮಾಡಿದವು. ಆದರೆ, ಮೊದಲ ಟೆಸ್ಟ್‌ನಲ್ಲಿ ಇಯಾನ್ ಹೀಲಿ ಅಜೇಯ 161 ರನ್ ಗಳಿಸುವುದ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.[೨೯][೩೪] ದೇಶೀಯ ಪಂದ್ಯಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಪ್ರಬಲ ಪ್ರದರ್ಶನ ಮುಂದುವರೆಸಿದರು. 62 ಔಟ್‌ಗಳೊಂದಿಗೆ ವಿಕೆಟ್‌ಕೀಪಿಂಗ್‌ನಲ್ಲಿ ಔಟ್ ಮಾಡಿದ ಸಂಖ್ಯೆಗಳಲ್ಲಿ ಅಗ್ರಸ್ಥಾನ ಪಡೆದರು. ಯಾವುದೇ ಶತಕ ಹೊಡೆಯಲು ವಿಫಲರಾದರೂ,[೩೫] ಬ್ಯಾಟಿಂಗ್ ಸರಾಸರಿ 40ಕ್ಕಿಂತಲೂ ಸ್ವಲ್ಪ ಕಡಿಮೆಯಿತ್ತು.[೨೦][೨೦] ಮಾರ್ಚ್ 1997ರಲ್ಲಿ ನಡೆದ ಮರ್ಕೆಂಟೈಲ್ ಮ್ಯೂಚುಯೆಲ್ ಕಪ್‌ಫೈನಲ್ ಪಂದ್ಯದಲ್ಲಿ ತಂಡದ ಯಶಸ್ಸು ಬೆಳಕಿಗೆ ಬಂತು. ವಾರಿಯರ್ಸ್ ಕ್ವೀನ್ಸ್‌ಲೆಂಡ್ ವಿರುದ್ಧ ಎಂಟು ವಿಕೆಟ್‌ಗಳ ಅಂತರದಿಂದ ಜಯಗಳಿಸಿತು. ಇದರಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಬ್ಯಾಟ್ ಮಾಡುವ ಅಗತ್ಯವಿರಲಿಲ್ಲ.[೩೬] 1997-98 ಋತುವಿನ ಅಂತ್ಯದಲ್ಲಿ, ಸತತ ನಾಲ್ಕನೆಯ ಋತುವಿನಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಅತಿ ಹೆಚ್ಚು ಔಟ್ ಮಾಡಿದ ವಿಕೆಟ್-ಕೀಪರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದರೊಂದಿಗೆ,ಅವರ ಬ್ಯಾಟಿಂಗ್ ಸುಧಾರಣೆ ಕಂಡು 47.66 ಸರಾಸರಿ ತಲುಪಿದರು.[೩೭] ಸೀಮಿತ ಒವರ್ ಪಂದ್ಯವಾಡುವ ರಾಷ್ಟ್ರೀಯ ತಂಡದ ಕಾಯಂ ಆಟಗಾರರಾದ ಕಾರಣ, ಷೆಫೀಲ್ಡ್ ಷೀಲ್ಡ್‌ನ ಹತ್ತು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕೇವಲ ಆರು ಪಂದ್ಯಗಳಲ್ಲಿ ಮಾತ್ರ ಅವರು ಆಡಿದ್ದರು.[೨೦] ಅಡಾಮ್ ಗಿಲ್‌ಕ್ರಿಸ್ಟ್ ಋತುವಿನ ಆರಂಭದಲ್ಲಿ ಸೌತ್ ಆಸ್ಟ್ರೇಲಿಯ ವಿರುದ್ಧ ಅಜೇಯ 203 ರನ್ ಗಳಿಸುವುದರೊಂದಿಗೆ, ತಮ್ಮ ಮೊಟ್ಟಮೊದಲ ಪ್ರಥಮ ದರ್ಜೆಯ ದ್ವಿಶತಕ ದಾಖಲಿಸಿದರು. ತಮ್ಮ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಪೂರೈಸಿದ ನಂತರ ಋತುವಿನಲ್ಲಿ ತಡವಾಗಿ ಹಿಂದಿರುಗುವುದಕ್ಕೆ ಮುಂಚಿತವಾಗಿ ಈ ಸಾಧನೆ ಮಾಡಿದರು. ವಿಕ್ಟೊರಿಯಾ ವಿರುದ್ಧ 109 ಹೊಡೆದರು. ನಂತರ, ಅವರು ಟಾಸ್ಮಾನಿಯಾ ವಿರುದ್ಧ ಷಫೀಲ್ಡ್ ಷೀಲ್ಡ್ ಅಂತಿಮ ಜಯದ ಪಂದ್ಯದಲ್ಲಿ ಅಡಿದರಾದರೂ,[೩೮] ಕೇವಲ ಎಂಟು ರನ್ ಮಾತ್ರ ಗಳಿಸಿದರು.[೨೦] ಮರ್ಕೆಂಟೈಲ್ ಮ್ಯೂಚುಯಲ್ ಕಪ್‌ನಲ್ಲಿ ತಂಡಕ್ಕೆ ನಿರಾಶೆ ಕಾದಿತ್ತು. ಕ್ವೀನ್ಸ್‌ಲೆಂಡ್ ವಿರುದ್ಧ ಸೆಮಿ-ಫೈನಲ್ ಪಂದ್ಯದಲ್ಲಿ ಸೋಲಪ್ಪಿದರು.[೩೯] ಮುಂದಿನ ಋತುವಿನಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಅಂತಾರಾಷ್ಟ್ರೀಯ ಪಂದ್ಯಗಳ ಬದ್ಧತೆಗಳ ಕಾರಣದಿಂದಾಗಿ, ದೇಶೀಯ ಪಂದ್ಯಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಕುಂಠಿತಗೊಂಡಿತು. ಮರ್ಕೆಂಟೈಲ್ ಮ್ಯೂಚುಯಲ್ ಕಪ್ ಪಂದ್ಯಾವಳಿಯ ಕೇವಲ ಒಂದು ಪಂದ್ಯದಲ್ಲಿ ಆಡಿದರು.[೪೦] ಆದರೂ ಅವರು ಅರ್ಹತಾ ಸುತ್ತಿನ ಪಂದ್ಯವೊಂದರಲ್ಲಿ ಶತಕ ಹೊಡೆಯುವುದರ ಮೂಲಕ [೨೦] ವೆಸ್ಟರ್ನ್ ಆಸ್ಟ್ರೇಲಿಯ ಷೆಫೀಲ್ಡ್ ಷೀಲ್ಡ್ ಉಳಿಸಿಕೊಳ್ಳಲು ನೆರವಾದರು.[೪೧] ಅಡಾಮ್ ಗಿಲ್‌ಕ್ರಿಸ್ಟ್ ಆಸ್ಟ್ರೇಲಿಯ ತಂಡದ ಕಾಯಂ ಆಟಗಾರರಾಗಿ ಆಯ್ಕೆಯಾದ್ದರಿಂದ ದೇಶೀಯ ಕ್ರಿಕೆಟ್ ಪಂದ್ಯಗಳ ಆಯ್ಕೆಯಲ್ಲಿ ಅವರ ಲಭ್ಯತೆ ಅಪರೂಪವಾಯಿತು. 1999ರ ಅಪರಾರ್ಧದಲ್ಲಿ ಅವರು ಟೆಸ್ಟ್ ತಂಡದಲ್ಲಿ ವಿಕೆಟ್ ಕೀಪರ್ ಆದರು.[೨೦] 1999ರಿಂದ 2005ರ ವರೆಗೆ, ತಮ್ಮ ರಾಜ್ಯ ತಂಡದ ಪರ ಕೇವಲ ಏಳು ಬಾರಿ ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡರು.[೪೨] ಅಡಾಮ್ ಗಿಲ್‌ಕ್ರಿಸ್ಟ್ 2005-06 ಋತುವಿನ ಪುರಾ ಕಪ್‌ನಲ್ಲಿ ಆಡಲಿಲ್ಲ; ಸೀಮಿತ ಒವರ್‌ಗಳ ING ಕಪ್ ಪಂದ್ಯಾವಳಿಯಲ್ಲಿ ಕೇವಲ ಮೂರು ಬಾರಿ ತಮ್ಮ ತಂಡಕ್ಕಾಗಿ ಆಡಿದರು.[೪೩][೪೪]
ಅಂತಾರಾಷ್ಟ್ರೀಯ ವೃತ್ತಿ ಜೀವನ
[ಬದಲಾಯಿಸಿ]ಆರಂಭಿಕ ಏಕದಿನದ ಋತುಗಳು
[ಬದಲಾಯಿಸಿ]1996ರಲ್ಲಿ ಅಡಾಮ್ ಗಿಲ್‌ಕ್ರಿಸ್ಟ್‌ರನ್ನು ಆಸ್ಟ್ರೇಲಿಯದ ಏಕದಿನ ಅಂತಾರಾಷ್ಟ್ರೀಯ (ODI) ತಂಡಕ್ಕೆ ಆಯ್ಕೆ ಮಾಡಲಾಯಿತು. ಅವರು 25 ಅಕ್ಟೋಬರ್ 1996ರಂದು ದಕ್ಷಿಣ ಆಫ್ರಿಕಾ ವಿರುದ್ಧ ಫರಿದಾಬಾದ್‌ನಲ್ಲಿ ತಮ್ಮ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 129ನೆಯ ಆಸ್ಟ್ರೇಲಿಯನ್ ODI ಕ್ಯಾಪ್ ಆಗಿ ಚೊಚ್ಚಲ ಪ್ರವೇಶ ಮಾಡಿದರು.[೧][೪೫][೪೬] ಇಯಾನ್ ಹೀಲಿ ಗಾಯಗೊಂಡಿದ್ದ ಕಾರಣ ಅಡಾಮ್ ಗಿಲ್‌ಕ್ರಿಸ್ಟ್‌ರಿಗೆ ಅವಕಾಶ ಕಲ್ಪಿಸಿತು.[೨೯] ತಮ್ಮ ಆರಂಭಿಕ ಪಂದ್ಯದಲ್ಲಿ ವಿಶೇಷವಾಗಿ ಬ್ಯಾಟಿಂಗ್‌ನಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿರದೇ, 18 ರನ್ ಗಳಿಸಿ ವೇಗದ ಬೌಲರ್ ಅಲ್ಯಾನ್ ಡೊನಾಲ್ಡ್ ಅವರಿಂದ ಬೌಲ್ಡ್ ಆಗಿ ನಿರ್ಗಮಿಸಿದರೂ,ಅಂತಾರಾಷ್ಟ್ರೀಯ ವಿಕೆಟ್-ಕೀಪರ್ ಆಗಿ ತಮ್ಮ ಮೊದಲ ಕ್ಯಾಚ್ ಹಿಡಿದರು. ಪಾಲ್ ರೈಫಲ್ ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೊನ್ಯೆ ಎದುರಿಸಿದ ಮೊದಲ ಚೆಂಡಿನಲ್ಲೇ ಶೂನ್ಯಕ್ಕೆನಿರ್ಗಮಿಸಿದರು.[೪೬] ಆ ಪ್ರವಾಸದಲ್ಲಿ ತಾವು ಆಡಿದ ಇನ್ನೊಂದು ಏಕೈಕ ODIನಲ್ಲಿ ಅವರು ಸೊನ್ನೆಗೆ ರನ್ ಔಟ್ ಆದರು.[೨೦] 1996-97 ಋತುವಿನಲ್ಲಿ ಇಯಾನ್ ಹೀಲಿ ತಮ್ಮ ಸ್ಥಾನವನ್ನು ಮರಳಿ ಪಡೆದರು. 1997ರಲ್ಲಿ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ, ಮೊದಲ ಎರಡು ODIಗಳಿಗೆ ಇಯಾನ್ ಹೀಲಿಯವರ ಬದಲು ಅಡಾಮ್ ಗಿಲ್‌ಕ್ರಿಸ್ಟ್‌ರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಯಿತು. ಇಯಾನ್ ಹೀಲಿ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ ತೋರಿಸಿದ್ದಕ್ಕಾಗಿ ಅವರನ್ನು ಎರಡು ODIಗಳಿಂದ ಅಮಾನತುಗೊಳಿಸಿದ ನಂತರ ಗಿಲ್‌ಕ್ರಿಸ್ಟ್‌ಗೆ ಸ್ಥಾನ ಲಭಿಸಿತು. ಇಯಾನ್ ಹೀಲಿ ವಾಪಸಾದ ನಂತರ, ಮಾರ್ಕ್ ವಾ ಕೈಗೆ ಗಾಯವಾಗಿದ್ದರಿಂದ, ಗಿಲ್‌ಕ್ರಿಸ್ಟ್ ತಮ್ಮ ಸ್ಥಾನವನ್ನು ತಜ್ಞ ಬ್ಯಾಟ್ಸ್‌ಮನ್ ಆಗಿ ಉಳಿಸಿಕೊಂಡರು.[೪೭][೪೮] ಡರ್ಬನ್‌ನಲ್ಲಿ ಅವರು 77 ರನ್ ಗಳಿಸುವುದರೊಂದಿಗೆ ಈ ಸರಣಿಯಲ್ಲಿ ಅಡಮ್ ಗಿಲ್‌ಕ್ರಿಸ್ಟ್ ODI ಅರ್ಧಶತಕ ದಾಖಲಿಸಿದರು[೪೯] ಈ ಸರಣಿಯಲ್ಲಿ ಅವರು 31.75 ಸರಾಸರಿಯಲ್ಲಿ ಒಟ್ಟು 127 ರನ್ ಗಳಿಸಿದ್ದರು.[೨೦] ಆನಂತರ, 1997ರಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಇಂಗ್ಲೆಂಡ್ ವಿರುದ್ಧ ಟೆಕ್ಸಾಕೊ ಟ್ರೊಫಿ ಸರಣಿಯಲ್ಲಿ ಆಡಿದರು. ಆಸ್ಟ್ರೇಲಿಯ ಈ ಸರಣಿಯಲ್ಲಿ 3-0 ಅಂತರದಲ್ಲಿ ಸೋಲಪ್ಪಿದರು. ಎರಡು ಇನ್ನಿಂಗ್ಸ್‌ಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ತಲಾ 53 ಮತ್ತು 33ರನ್‌ಗಳ ಕೊಡುಗೆ ನೀಡಿದರು.[೨೦][೫೦] 1997-98 ಆಸ್ಟ್ರೇಲಿಯನ್ ಋತುವಿನ ಆರಂಭದಲ್ಲಿ, ಆಸ್ಟ್ರೇಲಿಯನ್ ಆಯ್ಕೆದಾರರು ಇಯಾನ್ ಹೀಲಿ ಮತ್ತು ನಾಯಕ ಮಾರ್ಕ್ ಟೇಲರ್‌ರನ್ನು ODI ತಂಡದಿಂದ ಕೈಬಿಟ್ಟು, ಅಡಾಮ್ ಗಿಲ್‌ಕ್ರಿಸ್ಟ್ ಮತ್ತು ಮೈಕಲ್ ಡಿ ವೆನುಟೊರಿಗೆ ಅವಕಾಶ ಕಲ್ಪಿಸಿದರು. ಆಯ್ಕೆದಾರರು ಆಯ್ಕೆಯ ನೀತಿಯಲ್ಲಿ ಬದಲಾವಣೆ ತಂದದ್ದರಿಂದ ಅಡಾಮ್ ಗಿಲ್‌ಕ್ರಿಸ್ಟ್‌ರಿಗೆ ಬಡ್ತಿ ಸಿಕ್ಕಿದಂತಾಯಿತು. ODI ಮತ್ತು ಟೆಸ್ಟ್ ತಂಡದ ಆಯ್ಕೆ ಪ್ರತ್ಯೇಕವಾಗಿರುವುದು. ಇದರ ಪ್ರಕಾರ, ಟೆಸ್ಟ್ ಮತ್ತು ODI ತಜ್ಞ ಆಟಗಾರರನ್ನು ಆಯ್ಕೆ ಮಾಡಲಾಗುವುದು. ಟೆಸ್ಟ್ ತಂಡದಲ್ಲಿ ಇಯಾನ್ ಹೀಲಿ ಆದ್ಯತೆಯ ವಿಕೆಟ್-ಕೀಪರ್ ಆಗಿ ಉಳಿಯುವರು ಎಂದು ಆಯ್ಕೆದಾರರು ಘೋಷಿಸಿದರು.[೫೧] ಹದಿನೇಳು ವರ್ಷಗಳಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯ ಹಿಂದಿನ ಋತುವಿನಲ್ಲಿ ODI ತ್ರಿಕೋನ ಸರಣಿಯ ಫೈನಲ್ ತಲುಪಲು ವಿಫಲವಾದ ನಂತರ ಈ ನಿರ್ಧಾರಗಳನ್ನು ಕೈಗೊಳ್ಳಲಾಯಿತು.[೫೨]
ಹೊಸ ತಂಡವು ಆರಂಭದಲ್ಲಿ ಯಾವುದೇ ರೀತಿಯ ಭರವಸೆ ಮೂಡಿಸಲಿಲ್ಲ. 1997-98 ಕಾರ್ಲ್ಟನ್ ಅಂಡ್ ಯುನೈಟೆಡ್ ಸೀರೀಸ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎಲ್ಲಾ ನಾಲ್ಕು ರೌಂಡ್ ರಾಬಿನ್ ಪಂದ್ಯಗಳನ್ನು ಸೋತಿತ್ತು.[೫೩] ಮಾರ್ಕ್ ವಾ ಗೆ ಆರಂಭಿಕ ಜತೆಗಾರರಾಗಿ ಮಾರ್ಕ್ ಟೇಲರ್ ಸ್ಥಾನವನ್ನು ಯಶಸ್ವಿಯಾಗಿ ತುಂಬುವಲ್ಲಿ ಅನೇಕ ಮಂದಿ ಆಟಗಾರರು ವೈಫಲ್ಯ ಕಂಡರು.[೫೩] ವಿಕೆಟ್ ಕೀಪರ್ ಸಾಂಪ್ರದಾಯಿಕವಾಗಿ ಬ್ಯಾಟ್ ಮಾಡುವ ಕೆಳ ಕ್ರಮಾಂಕವಾದ ಏಳನೆಯ ಸ್ಥಾನದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಬ್ಯಾಟ್ ಮಾಡಿ, ರನ್‌ಗಳಿಗೆ ಪರದಾಡಬೇಕಾಯಿತು. ಅವರು ಎಂಟು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ 24.66 ಸರಾಸರಿಯಲ್ಲಿ 148 ರನ್ ಗಳಿಸಿದರು.[೨೦][೫೪] ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪ್ರಥಮ ಫೈನಲ್ ಪಂದ್ಯದಲ್ಲಿ ಮಾರ್ಕ್ ವಾರೊಂದಿಗೆ ಆರಂಭಿಕ ಆಟಗಾರರಾಗಿ ಅಡಾಮ್ ಗಿಲ್‌ಕ್ರಿಸ್ಟ್ ಆಯ್ಕೆಯಾದರು. ಹೊಸ ಜೋಡಿ ವಿಶೇಷವಾಗಿ ಕಳಪೆ ಆರಂಭದಲ್ಲಿ, ಮಾರ್ಕ್ ವಾ ಅಡಾಮ್ ಗಿಲ್‌ಕ್ರಿಸ್ಟ್‌ರೊಂದಿಗೆ ಓಟದಲ್ಲಿ ಗಲಿಬಿಲಿಯಾಗಿ ರನ್ ಔಟ್ ಆದರು.[೫೫] ಆದರೆ ಎರಡನೆಯ ಫೈನಲ್ ಪಂದ್ಯದಲ್ಲಿ, ಅಡಾಮ್ ಗಿಲ್‌ಕ್ರಿಸ್ಟ್ ತಮ್ಮ ಮೊಟ್ಟಮೊದಲ ODI ಶತಕ ಹೊಡೆದು, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯ ತಂಡವು ಯಶಸ್ವಿಯಾಗಿ ರನ್ ಬೆನ್ನಟ್ಟಲು ಕಾರಣರಾದರು.[೨೦] ಇದರಿಂದಾಗಿ, ಒಬ್ಬ ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದರು.[೫೬] ಆಸ್ಟ್ರೇಲಿಯ ಸರಣಿಯ ಮೂರನೆಯ ಫೈನಲ್ ಪಂದ್ಯವನ್ನು ಗೆದ್ದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.[೫೭]
ಫೆಬ್ರುವರಿ 1998ರಲ್ಲಿ ಆಸ್ಟ್ರೇಲಿಯ ತಂಡದ ನ್ಯೂಜಿಲೆಂಡ್ ಪ್ರವಾಸದಲ್ಲಿ ಆಸ್ಟ್ರೇಲಿಯ ತಂಡದ ಪರ ಅಡಾಮ್ ಗಿಲ್‌ಕ್ರಿಸ್ಟ್ 50.00 ಸರಾಸರಿಯಲ್ಲಿ 200 ರನ್ ಗಳಿಸಿ ಅಗ್ರಸ್ಥಾನ ಪಡೆದರು.[೫೮] ಇದರಲ್ಲಿ ಮೊದಲ ಪಂದ್ಯದಲ್ಲಿ ಗೆಲುವಿಗೆ ನೆರವಾದ 118 ರನ್‌ಗಳು ಸಹ ಸೇರಿದ್ದವು.[೨೦] ವೆಲಿಂಗ್ಟನ್‌ನಲ್ಲಿ ನಡೆದ ಎರಡನೆಯ ODIದಲ್ಲಿ ನ್ಯಾಥನ್ ಆಷ್ಲೆ ಅವರನ್ನು ಸ್ಟಂಪ್ ಮಾಡುವುದರೊಂದಿಗೆ ತಮ್ಮ ಪ್ರಥಮ ODI ಸ್ಟಂಪಿಂಗ್ ಮಾಡಿದರು.[೫೯] ನಂತರ, ಆಸ್ಟ್ರೇಲಿಯ ಏಷ್ಯಾದಲ್ಲಿ ಎರಡು ತ್ರಿಕೋನ ಸರಣಿಗಳಲ್ಲಿ ಭಾಗವಹಿಸಿತು. ಭಾರತದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ರನ್‌ಗಳಿಗಾಗಿ ಪರದಾಡಿ, 17.20 ಸರಾಸರಿಯಲ್ಲಿ 86 ರನ್ ಕೂಡಿಹಾಕಿದರು. ಎಪ್ರಿಲ್ 1998ರಲ್ಲಿ ಷಾರ್ಜಾದಲ್ಲಿ ನಡೆದ ಕೊಕಾ ಕೋಲಾ ಕಪ್ ತ್ರಿಕೋನ ಸರಣಿ ಪಂದ್ಯಾವಳಿಯಲ್ಲಿ ಆಡಿದರು. ಆಸ್ಟ್ರೇಲಿಯ, ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು ಈ ತ್ರಿಕೋನ ಸರಣಿಯಲ್ಲಿ ಪಾಲ್ಗೊಂಡಿದ್ದವು. ಆಸ್ಟ್ರೇಲಿಯ ಪಂದ್ಯಾವಳಿಯಲ್ಲಿ ರನ್ನರ್ಸ್-ಅಪ್ ಸ್ಥಾನ ಪಡೆದು, ಅಡಾಮ್ ಗಿಲ್‌ಕ್ರಿಸ್ಟ್ ವಿಕೆಟ್‌ಕೀಪರ್ ಸ್ಥಾನದಲ್ಲಿ ಒಂಬತ್ತು ಔಟ್ ಮಾಡಿದರಲ್ಲದೆ, 37.13ರಷ್ಟು ಬ್ಯಾಟಿಂಗ್ ಸರಾಸರಿ ಹೊಂದಿದ್ದರು.[೬೦] ಕೌಲಾಲಂಪುರ್‌ನಲ್ಲಿ ನಡೆದ 1998 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಬೆಳ್ಳಿ ಪದಕ ಗಳಿಸಿದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇದೊಂದೇ ಬಾರಿ ಕ್ರಿಕೆಟ್ ಆಟ ಸೇರ್ಪಡೆಯಾಗಿತ್ತು. ಈ ಕ್ರೀಡಾಕೂಟದಲ್ಲಿ ಆಡಲಾದ ಕ್ರಿಕೆಟ್ ಪಂದ್ಯಗಳಿಗೆ ODI ಸ್ಥಾನಮಾನವಿರಲಿಲ್ಲ. ತಮ್ಮ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯ, ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಪ್ಪಿದರು. ಇದರಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 15 ರನ್ ಗಳಿಸಿದರು.[೨೦][೬೧] ಆನಂತರ ಪಾಕಿಸ್ತಾನದ ನೆಲದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯನ್ನು 3-0ಯೊಂದಿಗೆ ಆಸ್ಟ್ರೇಲಿಯ ಅಪರೂಪದಲ್ಲಿ ಸದೆಬಡಿಯಿತು. ಗಿಲ್‌ಕ್ರಿಸ್ಟ್ ಅದರಲ್ಲಿ 103 ರನ್ ಗಳಿಸಿ, 63.33 ಸರಾಸರಿಯಲ್ಲಿ ಒಟ್ಟು 190 ರನ್ ಗಳಿಸಿದರು.[೨೦] 1999 ಕ್ರಿಕೆಟ್ ವಿಶ್ವಕಪ್ ಮುಂಚಿನ ವರೆಗೂ ಅಡಮ್ ಗಿಲ್‌ಕ್ರಿಸ್ಟ್ ಅತ್ಯುತ್ತಮ ಲಯದಲ್ಲಿದ್ದರು. ಜನವರಿ ಮತ್ತು ಫೆಬ್ರುವರಿ 1999ರಲ್ಲಿ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ಕಾರ್ಲ್ಟನ್ ಅಂಡ್ ಯುನೈಟೆಡ್ ತ್ರಿಕೋನ ಸರಣಿಯಲ್ಲಿ ಅವರು ಉಪಯುಕ್ತ ವೈಯಕ್ತಿಕ ಸಾಧನೆ ತೋರಿದರು. ಹನ್ನೆರಡು ಪಂದ್ಯಗಳಲ್ಲಿ 43.75 ಸರಾಸರಿಯಲ್ಲಿ ಅವರು ಒಟ್ಟು 525 ರನ್ ಗಳಿಸಿದರು. ಇದರಲ್ಲಿ ಎರಡು ಶತಕಗಳು (ಎರಡೂ ಶ್ರೀಲಂಕಾ ವಿರುದ್ಧ) ಮತ್ತು ಒಂದು ಅರ್ಧಶತಕ ಸಹ ಸೇರಿದ್ದವು; ವಿಕೆಟ್-ಕೀಪರ್ ಆಗಿ ಅವರದ್ದು ಒಟ್ಟು 27 ಔಟ್ ಮಾಡಿದ ಸಾಧನೆ.[೬೨][೬೩] ಅವರು 131 ರನ್ ಆಸ್ಟ್ರೇಲಿಯ SCGಯಲ್ಲಿ ಸಫಲ ರನ್ ಬೆನ್ನಟ್ಟುವುದರಲ್ಲಿ ಹೊಸ ದಾಖಲೆ ಸೃಷ್ಟಿಸಲು ನೆರವಾಯಿತು. [ಸೂಕ್ತ ಉಲ್ಲೇಖನ ಬೇಕು] ಇದರ ನಂತರ, MCGಯಲ್ಲಿ 154 ರನ್ ಗಳಿಸಿದರು. ಇದು ಆಸ್ಟ್ರೇಲಿಯದ ODI ಸ್ಕೋರ್ ಹೊಸ ದಾಖಲೆಯಾಗಿದೆ.[೨೦][ಸೂಕ್ತ ಉಲ್ಲೇಖನ ಬೇಕು] 1999ರಲ್ಲಿ ಆಸ್ಟ್ರೇಲಿಯ ಕೈಗೊಂಡ ವೆಸ್ಟ್ ಇಂಡೀಸ್ ಪ್ರವಾಸವು, ಆಸ್ಟ್ರೇಲಿಯಾದ ವಿಶ್ವಕಪ್-ಪೂರ್ವ ಕೊನೆಯ ಪ್ರವಾಸವಾಗಿತ್ತು. ಈ ಪ್ರವಾಸವೂ ಸಹ ಒಬ್ಬ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ರೂಪದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್‌ರ ಸಾಮರ್ಥ್ಯವನ್ನು ಸಾಬೀತು ಮಾಡಿತು. ಈ ಸರಣಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 28.71 ಬ್ಯಾಟಿಂಗ್ ಸರಾಸರಿ ಮತ್ತು ಕೆಚ್ಚು ಕಡಿಮೆ 90.00ರಷ್ಟು ಸ್ಟ್ರೈಕ್ ರೇಟ್ ಹೊಂದಿ, ವಿಕೆಟ್-ಕೀಪರ್ ಆಗಿ ಏಳು ಔಟ್ ಮಾಡಿದರು.ಏಳು ಪಂದ್ಯಗಳ ಈ ಸರಣಿಯು ಒಂದು ಪಂದ್ಯ ಡ್ರಾ ಆಗುವುದರೊಂದಿಗೆ 3-3 ಫಲಿತಾಂಶದಲ್ಲಿ ಅಂತ್ಯಗೊಂಡಿತು.[೬೪]
ಮೊದಲ ವಿಶ್ವಕಪ್ ಯಶಸ್ಸು
[ಬದಲಾಯಿಸಿ]ಆಸ್ಟ್ರೇಲಿಯದ ಯಶಸ್ವಿ ವಿಶ್ವಕಪ್ ಅಭಿಯಾನದ ಪ್ರತಿಯೊಂದು ಪಂದ್ಯದಲ್ಲಿ ಗಿಲ್‌ಕ್ರಿಸ್ಟ್ ಆಡಿದರು.[೬೫] ಆದರೆ ಸ್ಕಾಟ್‌ಲ್ಯಾಂಡ್,ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ 6, 14, ಮತ್ತು 0 ರನ್‌ಗಳೊಂದಿಗೆ ಮೊದಲಿಗೆ ಪ್ರಯಾಸಪಟ್ಟರು.[೨೦] ಕೊನೆಯ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯ ಸೋಲಪ್ಪಿದರು. ಫೈನಲ್ ತಲುಪಬೇಕಿದ್ದಲ್ಲಿ ಆಸ್ಟ್ರೇಲಿಯ ಸತತ ಆರು ಪಂದ್ಯಗಳಲ್ಲಿ ಸೋಲನ್ನು ತಪ್ಪಿಸಿಕೊಳ್ಳಬೇಕಿತ್ತು.[೬೬] ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಡಮ್ ಗಿಲ್‌ಕ್ರಿಸ್ಟ್ 39 ಚೆಂಡುಗಳಲ್ಲಿ ಬಿಡುಬೀಸಿನ 63 ರನ್ ಗಳಿಕೆಯು ಪಂದ್ಯಾವಳಿಯ ಸೂಪರ್ ಸಿಕ್ಸ್ ಹಂತಕ್ಕೆ ಭರವಸೆ ಮೂಡಿಸಲು ನೆರವಾಯಿತು. ವೆಸ್ಟ್‌ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 21 ರನ್ ಗಳಿಸಿದ್ದರೂ, ಆಸ್ಟ್ರೇಲಿಯ ಸೂಪರ್ ಸಿಕ್ಸ್ ಹಂತದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿತು.[೨೦] ಸೂಪರ್ ಸಿಕ್ಸ್ ಹಂತದ ಪಂದ್ಯಗಳಲ್ಲಿಯೂ ಸಹ ಅಡಾಮ್ ಗಿಲ್‌ಕ್ರಿಸ್ಟ್ ಲಯ ಕಂಡುಕೊಳ್ಳಲು ವಿಫಲರಾದರು. ಭಾರತ, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕ್ರಮವಾಗಿ ಕೇವಲ 31, 10 ಮತ್ತು 5 ರನ್ ಗಳಿಸಿದರು. ಸೂಪರ್ ಸಿಕ್ಸ್ ಹಂತದ ಮೂರೂ ಪಂದ್ಯಗಳಲ್ಲಿ ಆಸ್ಟ್ರೇಲಿಯ ವಿಜಯಿಯಾಯಿತು.[೨೦] ಇದರಲ್ಲಿ, ಕೊನೆಯ ಪಂದ್ಯವನ್ನು ಕೊನೆಯ ಓವರಿನಲ್ಲಿ ಗೆದ್ದು, [ಸೂಕ್ತ ಉಲ್ಲೇಖನ ಬೇಕು] ಸೆಮಿಫೈನಲ್ಸ್ ಹಂತವನ್ನು ಪ್ರವೇಶಿಸಿತು.[೨೦] ಎಡ್ಜ್‌ಬ್ಯಾಸ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 20 ರನ್ ಗಳಿಸಿದರು.[೨೦] ಆದರೆ ಪಂದ್ಯದ ಅಂತಿಮ ಕ್ಷಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಸ್ಕೋರ್ 213 ಆಗಿದ್ದು 'ಟೈ' ಆಗಿತ್ತು. ದಕ್ಷಿಣ ಆಫ್ರಿಕಾ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಸ್ಟ್ರೇಲಿಯದ ವೇಗಿ ಡೇಮಿಯನ್ ಫ್ಲೆಮಿಂಗ್ ಬೌಲ್ ಮಾಡಿದ ಅಂತಿಮ ಒವರ್‌ನಲ್ಲಿ ಗೆಲ್ಲುವ ರನ್ ಕದಿಯಲು ಯತ್ನಿಸಿದಾಗ ಅಡಾಮ್ ಗಿಲ್‌ಕ್ರಿಸ್ಟ್ ವಿಕೆಟ್ ಉರುಳಿಸಿ, ದಕ್ಷಿಣ ಆಫ್ರಿಕಾದ ಕೊನೆಯ ಬ್ಯಾಟ್ಸ್‌ಮನ್ ಅಲ್ಯಾನ್ ಡೊನಾಲ್ಡ್‌ರನ್ನು ರನ್ ಔಟ್ ಮಾಡಿದರು. [ಸೂಕ್ತ ಉಲ್ಲೇಖನ ಬೇಕು] ಪಂದ್ಯವು ಟೈ ಆಯಿತು.[೨೦] ಆದರೆ ಸೂಪರ್ ಸಿಕ್ಸ್ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿರುವುದನ್ನು ಪರಿಗಣಿಸಿ, [ಸೂಕ್ತ ಉಲ್ಲೇಖನ ಬೇಕು] ಆಸ್ಟ್ರೇಲಿಯ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್‌ರ ಬಿರುಸಿನ 54 ರನ್, ಆಸ್ಟ್ರೇಲಿಯ ತಂಡ ಪಾಕಿಸ್ತಾನದ ವಿರುದ್ಧ ಎಂಟು ವಿಕೆಟ್‌ಗಳಲ್ಲಿ ವಿಶ್ವಕಪ್ ಜಯಕ್ಕೆ ಕಾರಣವಾಯಿತು. 1987ರ ನಂತರ ಆಸ್ಟ್ರೇಲಿಯ ವಿಶ್ವಕಪ್ ಗೆದ್ದದ್ದು ಇದೇ ಮೊದಲ ಬಾರಿ.[೬೭] ಪಂದ್ಯಾವಳಿಯುದ್ದಕ್ಕೂ ಬ್ಯಾಟಿಂಗ್‌ನಲ್ಲಿ ತಿಣುಕಾಡಿದ ಅಡಾಮ್ ಗಿಲ್‌ಕ್ರಿಸ್ಟ್‌ಗೆ ಫೈನಲ್ ಪಂದ್ಯವು ಸುಖಾಂತ್ಯವಾಗಿತ್ತು. ಅವರು 21.54 ಸರಾಸರಿಯಲ್ಲಿ 237 ರನ್ ಗಳಿಸಿದರು.[೨೦] ವಿಶ್ವಕಪ್ ಯಶಸ್ಸಿನ ನಂತರ ಆಗಸ್ಟ್ 1999ರಲ್ಲಿ ನಡೆದ ಐವಾ ಕಪ್ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ಅತಿಥೇಯ ಶ್ರೀಲಂಕಾ ವಿರುದ್ಧ ಸೋತಿತು.[೬೮] ಆ ಸರಣಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 46.20 ಸರಾಸರಿಯಲ್ಲಿ 231 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಯಶಸ್ವಿ ಬ್ಯಾಟ್ಸ್‌ಮನ್ ಹಾಗೂ ವಿಕೆಟ್-ಕೀಪರ್ ಆಗಿದ್ದರೂ,ಆಸ್ಟ್ರೇಲಿಯ ಸೋಲಪ್ಪಿತು.[೨೦] ಟೆಸ್ಟ್ ಆಟಗಾರರು ಶ್ರೀಲಂಕಾ ವಿರುದ್ಧ ಹೋರಾಡುತ್ತಿದ್ದರೆ, ಇತ್ತ ಅಡಾಮ್ ಗಿಲ್‌ಕ್ರಿಸ್ಟ್ ಲಾಸ್ ಏಂಜಲ್ಸ್‌ನಲ್ಲಿ ಭಾರತ A ವಿರುದ್ಧ ಸೀಮಿತ ಓವರುಗಳ ಸರಣಿಯಲ್ಲಿ ಆಸ್ಟ್ರೇಲಿಯ A ತಂಡವನ್ನು ಮುನ್ನಡೆಸಿದರು. ಆನಂತರ,ಜಿಂಬಾಬ್ವೆ ವಿರುದ್ಧ [[3-0 ಅಂತರದಿಂದ ನೆಲಸಮ ಮಾಡಿದ|3-0 ಅಂತರದಿಂದ ನೆಲಸಮ ಮಾಡಿದ]] ಆಸ್ಟ್ರೇಲಿಯ ಪರ ಅಡಾಮ್ ಗಿಲ್‌ಕ್ರಿಸ್ಟ್ 20.00 ಸರಾಸರಿಯಲ್ಲಿ 60 ರನ್ ಗಳಿಸಿದರು.[೨೦][೬೯]
ಟೆಸ್ಟ್ ವೃತ್ತಿಯ ಆರಂಭ
[ಬದಲಾಯಿಸಿ]ಅಡಮ್ ಗಿಲ್‌ಕ್ರಿಸ್ಟ್ ತಮ್ಮ ಟೆಸ್ಟ್ ಪಂದ್ಯದ ಪ್ರವೇಶವನ್ನು ನವೆಂಬರ್ 1999ರಲ್ಲಿ ಪಾಕಿಸ್ತಾನದ ವಿರುದ್ಧ ಬ್ರಿಸ್ಬೇನ್‌ನ ಗಬ್ಬಾ ಕ್ರಿಕೆಟ್ ಮೈದಾನದಲ್ಲಿ ಮಾಡಿದರು.[೭೦] ಅವರು ಆಸ್ಟ್ರೇಲಿಯ ಪರ ಆಡಿದ 381ನೆಯ ಟೆಸ್ಟ್ ಆಟಗಾರರೆನಿಸಿದರು.[೭೧] ಕಳಪೆ ಫಾರಂನಲ್ಲಿದ್ದ ಕಾಯಂ ವಿಕೆಟ್-ಕೀಪರ್ ಇಯಾನ್ ಹೀಲಿಯವರ ಬದಲಿಗೆ ಅಡಾಮ್ ಗಿಲ್‌ಕ್ರಿಸ್ಟ್ ಆಸ್ಟ್ರೇಲಿಯದ ತಂಡಕ್ಕೆ ಸೇರ್ಪಡೆಯಾದರು. ತಮ್ಮ ತಾಯ್ನೆಲದ ಪ್ರೇಕ್ಷಕರ ಮುಂದೆ ವಿದಾಯದ ಪಂದ್ಯವಾಡಲು ಅವಕಾಶ ನೀಡಬೇಕೆಂದು ಇಯಾನ್ ಹೀಲಿ ಆಯ್ಕೆದಾರ ಮಂಡಳಿಗೆ ಮನವಿಗಳನ್ನು ಮಾಡಿದ್ದರೂ, ಅವರನ್ನು ಕೈಬಿಡಲಾಯಿತು.[೭೨] ಅಡಾಮ್ ಗಿಲ್‌ಕ್ರಿಸ್ಟ್ ಆಸ್ಟ್ರೇಲಿಯ ಟೆಸ್ಟ್ ತಂಡಕ್ಕೆ ಸೇರ್ಪಡೆಯಾದದ್ದು, ಕ್ರಿಕೆಟ್ ಕ್ಷೇತ್ರದಲ್ಲಿ ಆಸ್ಟ್ರೇಲಿಯದ ಅದೃಷ್ಟ ಗಮನಾರ್ಹವಾಗಿ ಖುಲಾಯಿಸಲು ನಾಂದಿಯಾಯಿತು.[೭೩] ಈ ಹಂತದ ವರೆಗೆ, 1999ರಲ್ಲಿ ತಂಡವು ಎಂಟು ಟೆಸ್ಟ್‌ಗಳನ್ನಾಡಿ, ಮೂರು ಗೆದ್ದು, ಮೂರು ಸೋತಿತ್ತು.[೭೪] ಗಬ್ಬಾದಲ್ಲಿ ತಮಗೆ ದೊರೆತ ನಿರುತ್ಸಾಹದ ಸ್ವಾಗತದಿಂದ ಅಡಾಮ್ ಗಿಲ್‌ಕ್ರಿಸ್ಟ್ ವಿಚಲಿತರಾಗಲಿಲ್ಲ.[೭೫] ಅವರು ಐದು ಕ್ಯಾಚ್ ಹಿಡಿದು, ಶೇನ್ ವಾರ್ನ್ ಬೌಲಿಂಗ್‌ನಲ್ಲಿ ಅಜರ್ ಮಹ್ಮೂದ್‌ರನ್ನು ಸ್ಟಂಪ್ ಔಟ್ ಮಾಡಿದರು. ತಮ್ಮ ODI ಸಹವರ್ತಿ ಮಾರ್ಕ್ ವಾರೊಂದಿಗೆ ಬಹುತೇಕ ಜತೆಯಾಟದಲ್ಲಿ ವೇಗದ 81 ರನ್ ಹೊಡೆದರು. ಆಸ್ಟ್ರೇಲಿಯ ಈ ಪಂದ್ಯದಲ್ಲಿ 10 ವಿಕೆಟ್‌ಗಳ ಅಂತರದಿಂದ ನಿರಾಯಾಸದ ಜಯಗಳಿಸಿತು.[೭೦] ಹೋಬಾರ್ಟ್‌ನಲ್ಲಿ ನಡೆದ ತಮ್ಮ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಅವರು ಅಜೇಯ 149 ರನ್ ಗಳಿಸಿ, ಕೈತಪ್ಪಿಹೋದಂತೆ ಕಂಡುಬಂದ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಜಯದತ್ತ ಮುನ್ನಡೆಸಿದರು.[೭೬][೭೭] ಆಸ್ಟ್ರೇಲಿಯ ಗೆಲುವಿಗೆ 369 ರನ್ ಬೆನ್ನು ಹತ್ತಿದ್ದು, ಒಂದು ಹಂತದಲ್ಲಿ 5/126 ರನ್‌ಗಳೊಂದಿಗೆ ಪ್ರಯಾಸ ಪಡುತ್ತಿದ್ದಾಗ, ಅವರು ಪಶ್ಚಿಮ ಆಸ್ಟ್ರೇಲಿಯದ ತಂಡದ ಸಹವರ್ತಿ ಜಸ್ಟಿನ್ ಲ್ಯಾಂಗರ್ ಒಂದಿಗೆ 238 ರನ್ ದಾಖಲೆಯ ಜತೆಯಾಟವಾಡಿ ಆಸ್ಟ್ರೇಲಿಯವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು.[೭೬][೭೭][೭೮] ತಮ್ಮ ಆರಂಭಿಕ ಟೆಸ್ಟ್ ಋತುವಿನುದ್ದಕ್ಕೂ ತಮ್ಮ ಪ್ರಬಲವಾದ ಬ್ಯಾಟಿಂಗ್ ಮತ್ತು ವಿಕೆಟ್-ಕೀಪಿಂಗ್ ಪ್ರದರ್ಶನ ನೀಡಿದ ಅಡಾಮ್ ಗಿಲ್‌ಕ್ರಿಸ್ಟ್ ಆರು ಪಂದ್ಯಗಳಲ್ಲಿ 69.28 ಸರಾಸರಿಯಲ್ಲಿ 485 ರನ್ ಹೊಡೆದಿದ್ದರು. ಪಾಕಿಸ್ತಾನ ಹಾಗೂ ಭಾರತ ತಂಡಗಳ ವಿರುದ್ಧ ತಲಾ ಮೂರು ಪಂದ್ಯಗಳನ್ನಾಡಿದ್ದರು. ಭಾರತದ ವಿರುದ್ಧ ಎರಡು ಅರ್ಧಶತಕಗಳನ್ನು ಗಳಿಸಿದ್ದರು.[೨೦] ನಂತರ, ಆಸ್ಟ್ರೇಲಿಯ, ಪಾಕಿಸ್ತಾನ ಮತ್ತು ಭಾರತ ತಂಡಗಳನ್ನು ಒಳಗೊಂಡ ಕಾರ್ಲ್ಟನ್ ಅಂಡ್ ಯುನೈಟೆಡ್ ಸೀರೀಸ್ ODI ಪಂದ್ಯಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಸಾಧಾರಣ ಯಶಸ್ವಿಯಾದರು. ಮೂರು ಪಂದ್ಯಗಳ ಫೈನಲ್‌ನಲ್ಲಿ ಆಸ್ಟ್ರೇಲಿಯ ಪಾಕಿಸ್ತಾನವನ್ನು 2-0 ಅಂತರದಿಂದ ಸೋಲಿಸಿತು.[೭೯] ಈ ಸರಣಿಯಲ್ಲಿ ಅಡಮ್ ಗಿಲ್‌ಕ್ರಿಸ್ಟ್ 27.20 ಸರಾಸರಿಯಲ್ಲಿ 272 ರನ್ ಗಳಿಸಿದರು. ಆಸ್ಟ್ರೇಲಿಯ ದಿನ (26 ಜನವರಿ)ದಂದು ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ 92 ರನ್ ಹೊಡೆದು 152 ರನ್‌ಗಳ ಭರ್ಜರಿ ಗೆಲುವಿಗೆ ಕಾರಣರಾದದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.[೨೦] ನಂತರ, ಆಸ್ಟ್ರೇಲಿಯ ತಂಡ ಕೈಗೊಂಡ ನ್ಯೂಜಿಲೆಂಡ್ ಪ್ರವಾಸದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 41.66 ಸರಾಸರಿಯಲ್ಲಿ 251 ರನ್ ಗಳಿಸಿದರು.[೨೦] ಅವರು ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 128 ರನ್ ಹೊಡೆದದ್ದು ಗಮನ ಸೆಳೆಯಿತು. ಅದರಿಂದ ಆಸ್ಟ್ರೇಲಿಯ ಹೊಸ ರಾಷ್ಟ್ರೀಯ ದಾಖಲೆಯ ಸ್ಕೋರ್ 6/349 ಗಳಿಸಲು ಕಾರಣವಾಯಿತು.[೨೦] ಸರಣಿಯ ಎರಡು ಪಂದ್ಯಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಪಂದ್ಯದ ಪುರುಷೋತ್ತಮರೆಂದು ಹೆಸರಿಸಲಾಯಿತು. 2000ದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೆಯ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಆಸ್ಟ್ರೇಲಿಯ ವಿಕೆಟ್-ಕೀಪರ್ ಆಗಿ ಮೂರನೆಯ ಅತ್ಯುತ್ತಮ ಟೆಸ್ಟ್ ಸಾಧನೆ ಮತ್ತು ಆಸ್ಟ್ರೇಲಿಯನ್ ಆಗಿ ಅತ್ಯುತ್ತಮ ಸಾಧನೆ ಮಾಡಿದರು.[೮೦] ಈ ಪಂದ್ಯದಲ್ಲಿ ಅವರು ಹತ್ತು ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಈ ಸಾಧನೆ ಮಾಡಿದರು.[೮೧] ಅಡಾಮ್ ಗಿಲ್‌ಕ್ರಿಸ್ಟ್‌ರ ಬ್ಯಾಟಿಂಗ್ ಸಾಧಾರಣವಿದ್ದರೂ (36.00 ಸರಾಸರಿಯಲ್ಲಿ 144 ರನ್‌ಗಳು),[೨೦] ಆಸ್ಟ್ರೇಲಿಯ 3-0ಯಲ್ಲಿ [೮೨] ಪೂರ್ಣ ಗುಡಿಸಿಹಾಕಿತು.[೮೨] ದಕ್ಷಿಣ ಆಫ್ರಿಕಾದ ವಿರುದ್ಧ ಎರಡು ಸ್ವದೇಶಿ ಮತ್ತು ಸ್ವದೇಶದಿಂದ ದೂರದ ODI ಸರಣಿಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಬ್ಯಾಟಿಂಗ್ ಕಣ್ಣು ಕುಕ್ಕುವಂತಿರಲಿಲ್ಲ. ಅವರು 26.66 ಸರಾಸರಿಯಲ್ಲಿ 170 ರನ್ ಗಳಿಸಿದರು.[೨೦] ಆರು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮೂರಲ್ಲಿ ಜಯಗಳಿಸಿತು. ಒಂದು ಪಂದ್ಯ ಟೈ ಆಯಿತು.[೮೦] ಆ ವರ್ಷದ ಅಪರಾರ್ಧದಲ್ಲಿ, ಆಸ್ಟ್ರೇಲಿಯ ತಂಡದ ಉಪನಾಯಕ ಪಟ್ಟವನ್ನು ಶೇನ್ ವಾರ್ನ್ ಬದಲಿಗೆ ಅಡಾಮ್ ಗಿಲ್‌ಕ್ರಿಸ್ಟ್‌ಗೆ ಹಸ್ತಾಂತರಿಸಲಾಯಿತು. ಹದಿಹರೆಯದ ಹುಡುಗರೊಂದಿಗೆ ಜಗಳ, ಬ್ರಿಟಿಷ್ ದಾದಿಯೊಬ್ಬಳ ಜತೆ ಲೈಂಗಿಕ ಹಗರಣ ಸೇರಿದಂತೆ ಮೈದಾನದಾಚೆಯ ಅನೇಕ ವಿವಾದಗಳ ಸುಳಿಯಲ್ಲಿ ಶೇನ್ ವಾರ್ನ್ ಸಿಲುಕಿದ್ದರು.[೮೩][೮೪] 2000-01 ಋತುವಿನಲ್ಲಿ ವೆಸ್ಟ್ ಇಂಡೀಸ್ ತಂಡವು ಆಸ್ಟ್ರೇಲಿಯ ಪ್ರವಾಸದ ಮಾಡಿತು. ಅಡಾಮ್ ಗಿಲ್‌ಕ್ರಿಸ್ಟ್ ವೆಸ್ಟರ್ನ್ ಆಸ್ಟ್ರೇಲಿಯ ಪರ ಆಡಿ ಸತತ ಪ್ರಥಮ ದರ್ಜೆಯ ಶತಕಗಳನ್ನು ಹೊಡೆದರು.[೨೦] ಅಡೆಲೈಡ್‌ನ ಮೂರನೇ ಟೆಸ್ಟ್‌ನಲ್ಲಿ ಗಾಯಗೊಂಡ ಸ್ಟೀವ್ ವಾ ಬದಲಿಗೆ ಪ್ರಥಮ ಬಾರಿಗೆ ಅವರು ಟೆಸ್ಟ್ ತಂಡದ ನಾಯಕತ್ವ ವಹಿಸಿದರು. ಈ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 9 ಮತ್ತು ಅಜೇಯ 10 ರನ್ ಗಳಿಸಿದರಷ್ಟೆ.[೨೦] ಆದರೆ, ಕೊಲಿನ್ ಮಿಲ್ಲರ್ ಪಂದ್ಯದಲ್ಲಿ ಹತ್ತು ವಿಕೆಟ್ ಗಳಿಸಿದ ಕಾರಣ, ಆಸ್ಟ್ರೇಲಿಯ ತಂಡಕ್ಕೆ ಐದು ವಿಕೆಟ್‌ಗಳ ಹೋರಾಟದ ಗೆಲುವು ಲಭಿಸಿತು.[೮೫]
ಅಡಾಮ್ ಗಿಲ್‌ಕ್ರಿಸ್ಟ್ 'ಇದು ನನ್ನ ವೃತ್ತಿಯ ಅತ್ಯಂತ ಹೆಮ್ಮೆಯ ಕ್ಷಣ' ಎಂದು ಈ ಪಂದ್ಯವನ್ನು ಬಣ್ಣಿಸಿದರು.[೮೬] ನಾಲ್ಕನೆಯ ಮತ್ತು ಐದನೆಯ ಟೆಸ್ಟ್‌ಗಳಿಗೆ ಸ್ಟೀವ್ ವಾ ವಾಪಸಾಗಿ ನಾಯಕತ್ವ ವಹಿಸಿಕೊಂಡರು. ಆಸ್ಟ್ರೇಲಿಯ 5-0ಯಲ್ಲಿ ಸರಣಿಯನ್ನು ಗುಡಿಸಿಹಾಕಿ ಜಯಭೇರಿ ಬಾರಿಸಿತು.[೮೭] ಈ ಸರಣಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 48.20 ಸರಾಸರಿಯಲ್ಲಿ 241 ರನ್ ಗಳಿಸಿದರು. ಇದರಲ್ಲಿ ಎರಡು ಅರ್ಧ ಶತಕಗಳಿದ್ದವು.[೨೦] ಇದರ ನಂತರದ ODI ಪಂದ್ಯಾವಳಿಯಲ್ಲಿ, ಆಸ್ಟ್ರೇಲಿಯ ಹತ್ತೂ ಪಂದ್ಯಗಳಲ್ಲಿ ಜಯಗಳಿಸಿತು. ಅಡಾಮ್ ಗಿಲ್‌ಕ್ರಿಸ್ಟ್ 36.22 ಸರಾಸರಿಯಲ್ಲಿ 326 ರನ್ ಗಳಿಸಿದರು.[೨೦][೮೮]
ಈ ಹಂತದ ವರೆಗೆ, ಅಡಾಮ್ ಗಿಲ್‌ಕ್ರಿಸ್ಟ್ 14 ಟೆಸ್ಟ್‌ಗಳಲ್ಲಿ ಆಡಿದ್ದರು. ಎಲ್ಲವೂ ಆಸ್ಟ್ರೇಲಿಯದಲ್ಲೇ ಆಡಿದ್ದು, ಆಸ್ಟ್ರೇಲಿಯಾ ಎಲ್ಲಾ ಪಂದ್ಯಗಳಲ್ಲೂ ಜಯಗಳಿಸಿತ್ತು.[೨೦] ಸತತವಾಗಿ 15 ಟೆಸ್ಟ್ ಜಯಗಳನ್ನು ಕಂಡ ಆಸ್ಟ್ರೇಲಿಯ ಭಾರತದ ಪ್ರವಾಸದಲ್ಲಿ ತೀವ್ರ ಸವಾಲು ಎದುರಿಸಿತು. ಏಕೆಂದರೆ 1969-70ರಿಂದೀಚೆಗೆ ಭಾರತದ ನೆಲದಲ್ಲಿ ಆಸ್ಟ್ರೇಲಿಯ ಟೆಸ್ಟ್ ಸರಣಿಯನ್ನು ಗೆದ್ದಿರಲಿಲ್ಲ.[೮೮] ಮುಂಬಯಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಈ ಅಭಿಯಾನವು ನಿಂತುಹೋಗುವ ಅಪಾಯದಲ್ಲಿತ್ತು. ಭಾರತದ ಮೊದಲ ಇನ್ನಿಂಗ್ಸ್ ಸ್ಕೋರ್ 171ಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ 99ಕ್ಕೆ ಐದು ವಿಕೆಟ್ ಕಳೆದುಕೊಂಡು ದುಃಸ್ಥಿತಿಯಲ್ಲಿತ್ತು. ಆಗ ಅಡಾಮ್ ಗಿಲ್‌ಕ್ರಿಸ್ಟ್ ಕ್ರೀಸ್‌ಗೆ ಆಗಮಿಸಿದರು. ಅವರು ಭಾರತದ ಬೌಲರ್‌ಗಳ ವಿರುದ್ಧ ಉಗ್ರ ಪ್ರತಿದಾಳಿ ಮಾಡಿ, ಕೇವಲ 112 ಚೆಂಡುಗಳಲ್ಲಿ 122 ರನ್ ಚಚ್ಚಿದರು. ಕೇವಲ 32 ಓವರ್‌ಗಳಲ್ಲಿ ಮ್ಯಾಥ್ಯೂ ಹೇಡನ್‌ರೊಂದಿಗೆ 197 ರನ್‌ಗಳ ಜೊತೆಯಾಟಕ್ಕೆ ಕೊಡುಗೆ ನೀಡಿದರು.[೮೯]
ಇದು ಆಸ್ಟ್ರೇಲಿಯ ಪರ ಪಂದ್ಯವು ವಾಲುವಂತೆ ಮಾಡಿ, ಆಸ್ಟ್ರೇಲಿಯ 349ರ ಗಡಿಯನ್ನು ತಲುಪಿತು. ಅಡಾಮ್ ಗಿಲ್‌ಕ್ರಿಸ್ಟ್ ಆರು ಕ್ಯಾಚ್‌ಗಳನ್ನು ಹಿಡಿದು,ಆಸ್ಟ್ರೇಲಿಯ ಹತ್ತು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಗಿಲ್‌ಕ್ರಿಸ್ಟ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.[೯೦] ಇದು ಆಸ್ಟ್ರೇಲಿಯ ಸತತ ಟೆಸ್ಟ್ ಗೆಲುವಿನ ವಿಶ್ವದಾಖಲೆಯನ್ನು 16ಕ್ಕೆ ವಿಸ್ತರಿಸಿತು.[೮೮]
ಇದರ ನಂತರ ಅಡಾಮ್ ಗಿಲ್‌ಕ್ರಿಸ್ಟ್‌ರ ಬ್ಯಾಟಿಂಗ್ ಲಯ ಕೆಲವು ಸಮಯ ಕುಂಠಿತಗೊಂಡಿತು; ಕೋಲ್ಕತ್ತಾದಲ್ಲಿ ನಡೆದ ಎರಡನೆಯ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಅಪರೂಪದ ಕಿಂಗ್ ಪೇರ್ (ಒಂದೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಮೊದಲ ಚೆಂಡಿನಲ್ಲೇ ಸೊನ್ನೆ ರನ್‌ಗೆ ಔಟ್ ಆಗುವುದು) ಹಾಗೂ ಚೆನ್ನೈನಲ್ಲಿ ನಡೆದ ಮೂರನೆಯ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇವಲ ಎರಡು ರನ್‌ಗಳು ಲಭಿಸಿದವು. ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಸತತ ನಾಲ್ಕು ಬಾರಿ LBW (ಎಲ್‌ಬಿಡಬ್ಲ್ಯೂ) ಆದರು;[೯೧][೯೨] ಇದರಲ್ಲಿ ಹರ್ಭಜನ್ ಸಿಂಗ್‌ಗೆ ಮೂರು ಬಾರಿ. ಹರ್ಭಜನ್ ಸರಣಿಯಲ್ಲಿ 32 ವಿಕೆಟ್ ಗಳಿಸಿ, ಆಸ್ಟೇಲಿಯ 2-1ರಿಂದ ಸರಣಿ ಸೋಲುವ ಮೂಲಕ ಆಸ್ಟ್ರೇಲಿಯದ ಟೆಸ್ಟ್ ಗೆಲುವಿನ ಅಭಿಯಾನ ಅಂತ್ಯಗೊಂಡಿತು.[೯೩] ನಂತರ ನಡೆದ ODIಗಳ ಸರಣಿಯಲ್ಲಿ ಇವರ ಏಕದಿನ ಪಂದ್ಯದ ಲಯವು ದೃಢವಾಗಿಯೇ ಉಳಿದು, 43.00 ಸರಾಸರಿಯಲ್ಲಿ 172 ರನ್ ಗಳಿಸಿದರು. ಆಸ್ಟ್ರೇಲಿಯ ಸರಣಿಯಲ್ಲಿ 3-2 ಅಂತರದಿಂದ ಜಯಗಳಿಸಿ ಪ್ರತಿಏಟು ನೀಡಿತು.[೯೪] ಈ ಸರಣಿಯಲ್ಲಿ, ಅವರು ಮೊದಲ ಬಾರಿ ODIದಲ್ಲಿ ನಾಯಕತ್ವ ವಹಿಸಿ, ಆಸ್ಟ್ರೇಲಿಯ ಅವರ ನಾಯಕತ್ವದಲ್ಲಿ ನಡೆದ ಮೂರೂ ಪಂದ್ಯಗಳನ್ನು ಗೆದ್ದಿತು.[೯೫]
2001ರ ಆಷಸ್ ಸರಣಿ
[ಬದಲಾಯಿಸಿ]2001ರಲ್ಲಿ ಇಂಗ್ಲೆಂಡ್ ನೆಲದಲ್ಲಿ ನಡೆದ ಐದು ಟೆಸ್ಟ್‌ಗಳ ಆಷಸ್ ಸರಣಿಯಲ್ಲಿ ಆಸ್ಟ್ರೇಲಿಯ 4-1 ಅಂತರದಲ್ಲಿ ವಿಜಯಿಯಾಯಿತು. ಅಡಾಮ್ ಗಿಲ್‌ಕ್ರಿಸ್ಟ್ ಐದು ಪಂದ್ಯಗಳ ಸರಣಿಯಲ್ಲಿ 68.00 ಸರಾಸರಿಯಲ್ಲಿ 340 ರನ್ ಗಳಿಸಿ, ವಿಕೆಟ್-ಕೀಪರ್ ಆಗಿ 26 ಔಟ್‌ಗಳನ್ನು ಮಾಡಿ ಪ್ರಮುಖ ಪಾತ್ರ ವಹಿಸಿದರು.[೯೬] ಇಂಗ್ಲಿಷ್ ನೆಲದಲ್ಲಿ ತಮ್ಮ ODI ಪ್ರಯಾಸದ ಆಟವನ್ನು ಹಿಂದೆಬಿಟ್ಟ ಗಿಲ್‌ಕ್ರಿಸ್ಟ್ ಪುಟಿದೆದ್ದು, ಟೆಸ್ಟ್‌ಗಳಿಗಿಂತ ನಡೆದ ತ್ರಿಕೋನ ಸರಣಿಯಲ್ಲಿ 49.60 ರನ್ ಸರಾಸರಿಯಲ್ಲಿ 248 ರನ್ ಗಳಿಸಿದರು ಹಾಗೂ ಪಾಕಿಸ್ತಾನದ ವಿರುದ್ಧ ಅಂತಿಮ ಜಯದಲ್ಲಿ ಅಜೇಯ 76 ರನ್ ಗಳಿಸಿದರು. ಭಾರತ ಪ್ರವಾಸದಲ್ಲಾದ ತಮ್ಮ ನಿರಾಶೆಯನ್ನು ತೊಡೆದುಹಾಕಿದ ಗಿಲ್‌ಕ್ರಿಸ್ಟ್ ಇಂಗ್ಲೆಂಡ್ ವಿರುದ್ಧ ಎಡ್ಜ್‌ಬ್ಯಾಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕೇವಲ 143 ಚೆಂಡೆಸೆತಗಳಲ್ಲಿ 152 ರನ್ ಗಳಿಸಿದರು. ಇದರ ಫಲವಾಗಿ ಆಸ್ಟ್ರೇಲಿಯ ಕೇವಲ 545 ನಿಮಿಷಗಳಲ್ಲಿ 576 ರನ್ ಮುಟ್ಟಲು ಅವಕಾಶ ಕಲ್ಪಿಸಿತು, ಒಂದು ಇನ್ನಿಂಗ್ಸ್ ಅಂತರದ ಗೆಲುವನ್ನು ಸಾಧಿಸಿ, ಸರಣಿಯ ಗೆಲುವಿನ ಹಾದಿ ಸುಗಮಗೊಳಿಸಿತು.[೯೭] ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೆಯ ಟೆಸ್ಟ್ ಪಂದ್ಯದಲ್ಲಿ 90 ರನ್ ಗಳಿಸಿದರು. ಆಸ್ಟ್ರೇಲಿಯ ಈ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ವಿಜಯ ಸಾಧಿಸಿತು.[೨೦][೯೭] ನಂತರ, ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಮೂರನೆಯ ಟೆಸ್ಟ್‌ನಲ್ಲಿ ಅವರು ಪ್ರಮುಖ ತಿರುವು ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಮೊತ್ತ 185ಕ್ಕೆ ಪ್ರತಿಯಾಗಿ ಆಸ್ಟ್ರೇಲಿಯ ಕೇವಲ 105ಕ್ಕೆ 7 ವಿಕೆಟ್ ಕಳೆದುಕೊಂಡು ಸಂಕಟದಲ್ಲಿತ್ತು. ಅಡಾಮ್ ಗಿಲ್‌ಕ್ರಿಸ್ಟ್ 54 ರನ್ ನೆರವಿನಿಂದ ಪ್ರವಾಸಿ ತಂಡ 190 ತಲುಪಲು ಸಾಧ್ಯವಾಗಿ,ಆಸ್ಟ್ರೇಲಿಯ ಟ್ರೆಂಟ್ ಬ್ರಿಡ್ಜ್ ಟೆಸ್ಟ್‌ನ್ನು ಎಳು ವಿಕೆಟ್‌ಗಳ ಅಂತರದಲ್ಲಿ ಗೆದ್ದು ಆಷಸ್ ತನ್ನಲ್ಲಿಯೇ ಉಳಿಸಿಕೊಂಡಿತು.[೯೮] ಸ್ಟೀವ್ ವಾ ಗಾಯಗೊಂಡಿದ್ದ ಕಾರಣ, ಹೆಡಿಂಗ್ಲೇದಲ್ಲಿ ನಡೆದ ನಾಲ್ಕನೆಯ ಟೆಸ್ಟ್ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ನಾಯಕತ್ವ ವಹಿಸಿಕೊಂಡರು.[೯೯] ಪದೇಪದೇ ಮಳೆಯ ಅಡಚಣೆಗಳ ನಂತರ, ಟೆಸ್ಟ್‌ನ ನಾಲ್ಕನೆಯ ದಿನ ಚಹಾ ವಿರಾಮದ ಹೊತ್ತಿಗೆ ಆಸ್ಟ್ರೇಲಿಯ ತನ್ನ ಎರಡನೆಯ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಅಡಾಮ್ ಗಿಲ್‌ಕ್ರಿಸ್ಟ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿ, ಇಂಗ್ಲೆಂಡ್ ಮುಂದೆ 315 ರನ್‌ಗಳ ಗುರಿಯನ್ನು ಮುಂದಿಟ್ಟರು. ಆರಂಭಿಕ ಎರಡು ವಿಕೆಟ್‌ಗಳನ್ನು ಇಂಗ್ಲೆಂಡ್ ಬೇಗನೆ ಕಳೆದುಕೊಂಡರೂ ಪಂದ್ಯವನ್ನು ಆರು ವಿಕೆಟ್‌ಗಳ ಅಂತರದಿಂದ ಗೆದ್ದಿತು.( ಇಂಗ್ಲೆಂಡ್ ಪರ ಮಾರ್ಕ್ ಬುಚರ್ 24 ಬೌಂಡರಿಗಳ ಸಹಿತ ಅಜೇಯ 173 ರನ್ ಹೊಡೆದರು).[೯೮][೯೯][೧೦೦] ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 25 ರನ್ ಸ್ಕೋರು ದಾಟಲು ವಿಫಲರಾದರು. ಆದರೆ ಅದು ಇವರಿಗೆ ಬಹಳ ಲಾಭದಾಯಕ ಋತುವಾಗಿತ್ತು. ಆಸ್ಟ್ರೇಲಿಯ ಆಡಿದ ಎರಡೂ ಕೌಂಟಿ ಪಂದ್ಯಗಳಲ್ಲಿ ಶತಕ ಹೊಡೆದರು.[೨೦] 2001-02 ಋತುವಿನಲ್ಲಿ ಸ್ವದೇಶದಲ್ಲಿ ಎರಡು ಸರಣಿಗಳು ನಡೆದವು. ನ್ಯೂಜಿಲೆಂಡ್ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿ 0-0 ಡ್ರಾದಲ್ಲಿ ಅಂತ್ಯಗೊಂಡಿತು; ನಂತರ ದಕ್ಷಿಣ ಆಫ್ರಿಕಾ ವಿರುದ್ಧ 3-0 ಸಂಪೂರ್ಣ ಸರಣಿ ಜಯ.[೯೫] ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 118 ರನ್ ಗಳಿಸಿ ಪರ್ತ್‌ನಲ್ಲಿ ನಡೆದ ಮೂರನೆಯ ಟೆಸ್ಟ್‌ನಲ್ಲಿ ಅಜೇಯ 83 ಗಳಿಸಿ, ಕೇವಲ ಮೂರು ವಿಕೆಟ್ ಉಳಿಸಿಕೊಂಡಿದ್ದ ಆಸ್ಟ್ರೇಲಿಯ ಡ್ರಾದೊಂದಿಗೆ ಪಾರಾಗಲು ನೆರವಾದರು.[೨೦] ಆದರೆ, ಅಡಾಮ್ ಗಿಲ್‌ಕ್ರಿಸ್ಟ್ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನಲ್ಲಿ ಅಂತಹ ಸಾಧನೆಯನ್ನು ಮಾಡಲಿಲ್ಲ.ಅವರ ಗರಿಷ್ಠ ಸ್ಕೋರ್ 35 ರನ್ ದಾಟಲು ವಿಫಲವಾಯಿತು. ಈ ಎರಡೂ ಸರಣಿಗಳ ಅಂತ್ಯದಲ್ಲಿ ಅವರು 50.42 ಸರಾಸರಿಯಲ್ಲಿ 353 ರನ್ ಗಳಿಸಿದ್ದರು.[೨೦] ನಂತರ, ಸ್ವದೇಶದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 16.16 ಸರಾಸರಿಯಲ್ಲಿ 97 ರನ್ ಗಳಿಸಿದರು.[೨೦] ಟೆಸ್ಟ್ ಪಂದ್ಯಗಳಲ್ಲಿ ಯಶಸ್ವಿಯಾದ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್‌ರನ್ನು ಆಸ್ಟ್ರೇಲಿಯದ ODIದಲ್ಲಿ ಸೇರಿಸಿಕೊಳ್ಳುವ ಮೂಲಕ ಅಡಾಮ್ ಗಿಲ್‌ಕ್ರಿಸ್ಟ್ ಮತ್ತು ಮಾರ್ಕ್ ವಾರ ಜತೆ ಸರದಿಯ ಮೇಲೆ ಆವರ್ತನ ಕ್ರಿಯೆಯಲ್ಲಿ ಆಡಿಸಲು ಆಸ್ಟ್ರೇಲಿಯದ ಆಯ್ಕೆದಾರರು ಬಯಸಿದ್ದರು. ಆದರೆ ಇದು ತಂಡವನ್ನು, ಅದರಲ್ಲೂ ವಿಶೇಷವಾಗಿ ಮೇಲಿನ ಕ್ರಮಾಂಕದ ಆಟಗಾರರನ್ನು ಅನಿಶ್ಚಿತತೆಯತ್ತ ತಳ್ಳುವಂತೆ ಕಂಡುಬಂದಿತು. [ಸೂಕ್ತ ಉಲ್ಲೇಖನ ಬೇಕು] ದುರ್ಬಲವಾದ ತಂಡದ ಆರಂಭಿಕ ಜೋಡಿಯುಳ್ಳ ಆಸ್ಟ್ರೇಲಿಯ ತಂಡವು ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ವಾ ಸಹೋದರರನ್ನು ತಂಡದಿಂದ ಕೈಬಿಡಲಾಯಿತು ಹಾಗೂ ಅಡಾಮ್ ಗಿಲ್‌ಕ್ರಿಸ್ಟ್-ಮಾರ್ಕ್ ವಾ ಜೊತೆಯಾಟದ ನಾಲ್ಕು ವರ್ಷಗಳ ಸಂಬಂಧವೂ ಅಂತ್ಯಗೊಂಡಿತು. ಉಪನಾಯಕ ಅಡಾಮ್ ಗಿಲ್‌ಕ್ರಿಸ್ಟ್‌ರಿಗೆ ನಾಯಕ ಸ್ಥಾನಕ್ಕೆ ಬಡ್ತಿ ನೀಡುವ ಬದಲು ರಿಕಿ ಪಾಂಟಿಂಗ್‌ರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಯಿತು.[೧೦೧] ಇದರ ಮುಂದಿನ ತಿಂಗಳು ಆಸ್ಟ್ರೇಲಿಯ ತಂಡವು ದಕ್ಷಿಣ ಆಫ್ರಿಕಾದ ಪ್ರವಾಸ ನಡೆಸಿತು.ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಟೆಸ್ಟ್ ಪಂದ್ಯಗಳಲ್ಲಿ ಅತಿವೇಗದ ದ್ವಿಶತಕದ ದಾಖಲೆಯನ್ನು ಮುರಿದರು.[೧೦೨] ಈ ಸಾಧನೆಯನ್ನು ಮಾಡಲು 212 ಚೆಂಡುಗಳು ಅಗತ್ಯವಾಗಿತ್ತು.[೧೦೩] ಲಂಡನ್ ಓವಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಇಯಾನ್ ಬಾಥಮ್ 1982ರಲ್ಲಿ ಭಾರತ ವಿರುದ್ಧ ಗಳಿಸಿದ ದ್ವಿಶತಕಕ್ಕಿಂತಲೂ ಇದು ಎಂಟು ಚೆಂಡು ವೇಗವುಳ್ಳದ್ದಾಗಿದೆ.[೧೦೪] ಪ್ರತಿ ಓವರ್‌ಗೆ 5.5 ಸರಾಸರಿ ರನ್‌ಗಳಂತೆ, ಅವರು ಡೆಮಿಯೆನ್ ಮಾರ್ಟಿನ್‌ರೊಂದಿಗೆ 317 ರನ್‌ಗಳ ಜೊತೆಯಾಟವನ್ನಾಡಿದರು. ಇನ್ನಿಂಗ್ಸ್ ಪೂರ್ಣಗೊಂಡಾಗ ಅವರು ಅಜೇಯ 204 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾ ಸ್ಥೈರ್ಯಗೆಟ್ಟು, ಫಾಲೋ-ಆನ್‌ಗೆ ಒಳಗಾಗಿ ಒಂದು ಇನ್ನಿಂಗ್ಸ್ ಅಂತರದಿಂದ ಸೋಲಪ್ಪಿತು.[೧೦೫] ಅತಿ ವೇಗ ಟೆಸ್ಟ್ ದ್ವಿಶಕದ ದಾಖಲೆಯು ಕೇವಲ ಒಂದು ತಿಂಗಳು ಮಾತ್ರ ಉಳಿದುಕೊಂಡಿತು. ನ್ಯೂಜಿಲೆಂಡ್‌ನ ನ್ಯಾಥನ್ ಆಷ್ಲೆ ಇಂಗ್ಲೆಂಡ್ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ ಮಾರ್ಚ್ 2002ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇನ್ನೂ 59 ಕಡಿಮೆ ಚೆಂಡುಗಳನ್ನೆದುರಿಸಿ ದ್ವಿಶತಕದ ಮೈಲಿಗಲ್ಲು ದಾಟಿದರು .[೧೦೬]
ಕೇಪ್ ಟೌನ್‌ನಲ್ಲಿ ನಡೆದ ಎರಡನೆಯ ಟೆಸ್ಟ್ ಪಂದ್ಯದಲ್ಲಿ, ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 108 ಚೆಂಡೆಸೆತಗಳಲ್ಲಿ 138 ರನ್ ಗಳಿಸಿ, ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆದು, ತರುವಾಯ ನಾಲ್ಕು ವಿಕೆಟ್ ಜಯಗಳಿಸಿತು. ಮೂರನೆಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಪರ ಅಡಾಮ್ ಗಿಲ್‌ಕ್ರಿಸ್ಟ್ ಗರಿಷ್ಠ 91 ರನ್ ಗಳಿಸಿದರು. ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಸೋತರೂ,[೧೦೫] ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 474 ಚೆಂಡುಗಳಲ್ಲಿ, 157.66 ಸರಾಸರಿಯಲ್ಲಿ ನಿಬ್ಬೆರಗಿನ 473 ರನ್ ಗಳಿಸಿದ್ದರು. ಜೊತೆಗೆ ವಿಕೆಟ್-ಕೀಪರ್ ಆಗಿ 14 ಔಟ್ ಮಾಡಿದ್ದರು.[೧೦೫][೧೦೭] ನೈರೋಬಿಯಲ್ಲಿ ನಡೆದ PSO ಮೂರು ರಾಷ್ಟ್ರಗಳ ಏಕದಿನದ ಸರಣಿಯಲ್ಲಿ, ಕೀನ್ಯಾ ವಿರುದ್ಧ ಅಡಾಮ್ ಗಿಲ್‌ಕ್ರಿಸ್ಟ್ ಒಂದೇ ಒಂದು ಪಂದ್ಯಕ್ಕಾಗಿ ಆಸ್ಟ್ರೇಲಿಯ ODI ತಂಡದ ನಾಯಕತ್ವ ವಹಿಸಿಕೊಂಡರು.[೧೦೮] ಈ ಸರಣಿಯಲ್ಲಿ ಆಸ್ಟ್ರೇಲಿಯ ಎಲ್ಲಾ ಪಂದ್ಯಗಳಲ್ಲಿ ಜಯಗಳಿಸಿದ್ದರೂ, ಪಾಕಿಸ್ತಾನದ ವಿರುದ್ಧದ ಫೈನಲ್ ಪಂದ್ಯವು ಮಳೆಯ ಕಾರಣ ನಡೆಯಲಿಲ್ಲ.ಹೀಗಾಗಿ ಎರಡೂ ತಂಡಗಳು ಪ್ರಶಸ್ತಿಯನ್ನು ಹಂಚಿಕೊಂಡವು.[೧೦೯] 2002 ಮಧ್ಯದ ಆರು ತಿಂಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 18 ODIಗಳಲ್ಲಿ ಆಡಿ, 31.22 ಸರಾಸರಿಯಲ್ಲಿ ಒಂದು ಶತಕ ಸೇರಿ 562 ರನ್ ಗಳಿಸಿದರಲ್ಲದೆ ಕುಸಿತದಿಂದ ಚೇತರಿಸಿಕೊಂಡರು.[೨೦] ಯುನೈಟೆಡ್ ಅರಬ್ ಎಮೈರೇಟ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯ 3-0ಯಲ್ಲಿ ಸಂಪೂರ್ಣ ಸದೆಬಡಿಯಿತು.[೨೦] ಈ ಸರಣಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 40.66 ಸರಾಸರಿಯಲ್ಲಿ 122 ರನ್ ಗಳಿಸಿದರು. 2002-03 ಋತುವಿನಲ್ಲಿ ಆಷಸ್ ಸರಣಿಯನ್ನು 4-1ರ ಅಂತರದಲ್ಲಿ ಉಳಿಸಿಕೊಳ್ಳಲು ಅಡಾಮ್ ಗಿಲ್‌ಕ್ರಿಸ್ಟ್ ನೆರವಾದರು. ಸರಣಿಯ ಎಲ್ಲಾ ಐದು ಟೆಸ್ಟ್‌ಗಳಲ್ಲಿ ಆಡಿ 55.50 ಸರಾಸರಿಯಲ್ಲಿ 330 ರನ್ ಗಳಿಸಿ, ವಿಕೆಟ್-ಕೀಪರ್ ಆಗಿ 25 ಔಟ್‌ಗಳನ್ನು ಮಾಡಿದರು.[೧೧೦] ಮೊದಲ ಎರಡು ಟೆಸ್ಟ್‌ಗಳಲ್ಲಿ ಅರ್ಧಶತಕಗಳನ್ನು ಗಳಿಸಿದ ನಂತರ,SCGಯಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 121 ಚೆಂಡುಗಳಲ್ಲಿ ಪ್ರತಿದಾಳಿಯ 133 ರನ್ ಗಳಿಸಿದರು. ಆದರೆ ಆಸ್ಟ್ರೇಲಿಯ ಈ ಸರಣಿಯ ಏಕೈಕ ಸೋಲನ್ನು ತಡೆಯಲಾಗಲಿಲ್ಲ.[೨೦][೧೧೧] ತಮ್ಮ ಕ್ರಿಕೆಟ್ ವೃತ್ತಿಯ ಅರಂಭದಿಂದ 2003 ಕ್ರಿಕೆಟ್ ವಿಶ್ವಕಪ್‌ವರೆಗೆ, ಅಡಾಮ್ ಗಿಲ್‌ಕ್ರಿಸ್ಟ್ ಸರಣಿಗಳಲ್ಲಿ 40 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು.[೧೧೨] 2001ರ ಭಾರತ ಪ್ರವಾಸ ಸರಣಿಯನ್ನು ಹೊರತುಪಡಿಸಿ, 24.80 ಸರಾಸರಿಯಲ್ಲಿ (ಈ ಸರಣಿಯಲ್ಲಿ 124 ರನ್ ಗಳಿಸಿದ್ದರು; ಅದರಲ್ಲಿ 122 ರನ್ ಒಂದೇ ಇನ್ನಿಂಗ್ಸ್‌ನಲ್ಲಿ ಬಂದವು),ಕ್ರಿಕೆಟ್ ಆಟಕ್ಕೆ ಭೂಷಣಪ್ರಾಯವಾದ ಅವರ ಬ್ಯಾಟಿಂಗ್ ಸಾಧನೆಗಳಿಂದ ಆ ಕಾಲದ ಅತ್ಯುತ್ತಮ ಬ್ಯಾಟ್ಸ್‌ಮನ್-ವಿಕೆಟ್‌ಕೀಪರ್ ಎಂದು ಬಣ್ಣಿಸಲಾಗಿದೆ.[೧೧೨][೧೧೩] ಮಾರ್ಚ್ 2002ರಲ್ಲಿ ಒಮ್ಮೆ ಅಡಾಮ್ ಗಿಲ್‌ಕ್ರಿಸ್ಟ್‌ರ ಟೆಸ್ಟ್ ಸರಾಸರಿ 60ಕ್ಕೂ ಮೀರಿತ್ತು. ಇದು ಟೆಸ್ಟ್ ಪಂದ್ಯದ ಇತಿಹಾಸದಲ್ಲಿ ಯಾವುದೇ ಕಾಯಂ ಆಟಗಾರನ ಎರಡನೆಯ ಅತ್ಯುನ್ನತ ಸರಾಸರಿಯಾಗಿತ್ತು.[೧೧೪] ಮೇ 2002ರಲ್ಲಿ ಅವರು ICC ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕಗಳಲ್ಲಿ ಅಗ್ರಸ್ಥಾನದಲ್ಲಿದ್ದರು.[೧೧೫] ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದ್ದ 2003 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಪೂರ್ವಾಭ್ಯಾಸವಾಗಿ, ಆಸ್ಟ್ರೇಲಿಯ ನೆಲದಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 44.28 ಸರಾಸರಿಯಲ್ಲಿ 310 ರನ್ ಗಳಿಸಿದರು.[೨೦][೧೧೬] ಅವರ ಕಳೆದ ಒಂದು ವರ್ಷದ ಸಾಧನೆಗಳ ಫಲವಾಗಿ ಅವರಿಗೆ ಅಲಾನ್ ಬಾರ್ಡರ್ ಪದಕ ಲಭಿಸಿತು.
2003 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ
[ಬದಲಾಯಿಸಿ]ಒಂದು ಪಂದ್ಯವನ್ನು ಹೊರತುಪಡಿಸಿ,ಉಳಿದೆಲ್ಲಾ ಪಂದ್ಯಗಳಲ್ಲಿ ಜಯಗಳಿಸಿ ಆಸ್ಟ್ರೇಲಿಯದ ವಿಶ್ವಕಪ್ ಪ್ರಶಸ್ತಿ ಉಳಿಸಿಕೊಳ್ಳುವ ಯಶಸ್ವಿ ಅಭಿಯಾನಕ್ಕೆ ನೆರವಾದರು.ನೆದರ್ಲೆಂಡ್ಸ್ ವಿರುದ್ಧದ ಆರಂಭಿಕ ಹಂತದ ಪಂದ್ಯಕ್ಕೆ ಅಡಾಮ್ ಗಿಲ್‌ಕ್ರಿಸ್ಟ್‌ರಿಗೆ ವಿಶ್ರಾಂತಿ ನೀಡಲಾಗಿತ್ತು.[೧೧೭] ವಿಶ್ವ ಕಪ್ ಪಂದ್ಯಾವಳಿಯಲ್ಲಿ ಅವರು 40.80 ಸರಾಸರಿಯಲ್ಲಿ, 105ರ ಸ್ಟ್ರೈಕ್ ರೇಟ್(ಬ್ಯಾಟಿಂಗ್ ಅಂಕಿಅಂಶ)ನಲ್ಲಿ 408 ರನ್ ಗಳಿಸಿದರು. ನಾಲ್ಕು ಅರ್ಧಶತಕ ಗಳಿಸಿದರು. ಶ್ರೀಲಂಕಾ ವಿರುದ್ಧ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ರನ್ ಔಟ್ ಆಗಿ ಕೇವಲ ಒಂದು ರನ್ ಕೊರತೆಯಿಂದ ಶತಕ ವಂಚಿತರಾದರು.[೧೧೮] ಶ್ರೀಲಂಕಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ, ಅರವಿಂದ ಡಿಸಿಲ್ವಾ ಬೌಲಿಂಗ್‌ನಲ್ಲಿ ಬ್ಯಾಟಿನ ಒಳತುದಿ ಮತ್ತು ಪ್ಯಾಡ್‌ಗೆ ಚೆಂಡು ತಾಗಿ ಕ್ಯಾಚ್ ಹಿಡಿಯಲಾಗಿತ್ತು. ಅಂಪೈರ್ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ. ಆದರೂ, ಕೆಲವು ಕ್ಷಣಗಳ ನಂತರ ಅಡಾಮ್ ಗಿಲ್‌ಕ್ರಿಸ್ಟ್ ಸ್ವತಃ ಮೈದಾನದಿಂದ ನಿರ್ಗಮಿಸಿದರು. 2009ರಲ್ಲಿ ಇದನ್ನು ಒಂದು "ಪರಮಾಶ್ಚರ್ಯದ ಕ್ಷಣ" ಎಂದು ಬಣ್ಣಿಸಲಾಗಿತ್ತು. ಇಂಗ್ಲೆಂಡ್‌ನ ಆಂಗಸ್ ಫ್ರೇಸರ್ ಇದನ್ನು ಟೀಕಿಸಿ, 'ಕೇವಲ ಮೋಸ ಮಾಡದಿರುವುದಕ್ಕಾಗಿ ಅವರನ್ನು ಸಂತನೆಂದು ಹೊಗಳುವುದಕ್ಕೆ ಆಕ್ಷೇಪಿಸಿದರು' ಇತರರು, 'ಏನೋ ಆಕಸ್ಮಾತಾಗಿ ಮೈದಾನದಿಂದ ನಡೆದರು; ಆ ಷಾಟ್ ಹೊಡೆದ ನಂತರ ಸಮತೋಲನ ತಪ್ಪಿ ಪೆವಿಲಿಯನ್ ಕಡೆ ನಡೆದರು' ಎಂದರು. ಏನೇ ಇರಲಿ, ಅವರ ಕ್ರಮವನ್ನು ಬಹಳಷ್ಟು ಜನರು ಪ್ರಶಂಸಿಸಿದರು.[೧೪] ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡ್ ಮಾಡಲು ನಿರ್ಧರಿಸಿತು. ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 48 ಚೆಂಡೆಸೆತಗಳಲ್ಲಿ 57 ರನ್ ಬಾರಿಸಿದರು. ಮ್ಯಾಥ್ಯೂ ಹೇಡನ್ ಜೊತೆ ಮೊದಲ ವಿಕೆಟ್ ಶತಕದ ಜೊತೆಯಾಟದಲ್ಲಿ ಭಾಗಿಯಾಗಿ, ಉಪಕ್ರಮವನ್ನು ಬಳಸಿಕೊಂಡರು. ಇದರ ಫಲವಾಗಿ ಆಸ್ಟ್ರೇಲಿಯ 50 ಒವರ್‌ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 359 ರನ್‌ಗಳ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿತು, ಭಾರತದ ವಿರುದ್ಧ 125 ರನ್‌ಗಳ ಭರ್ಜರಿ ಗೆಲುವು ಸಾಧಿಸಿ, ಅಜೇಯ ಅಭಿಯಾನವನ್ನು ಮುಗಿಸಿತು.[೨೦][೧೧೯]
ಅಡಾಮ್ ಗಿಲ್‌ಕ್ರಿಸ್ಟ್ ವಿಶ್ವಕಪ್ ಪಂದ್ಯಾವಳಿಯ ಅತಿ ಯಶಸ್ವಿ ವಿಕೆಟ್-ಕೀಪರ್ ಎನಿಸಿ, 21 ಔಟ್ ಮಾಡಿದರು.[೧೨೦]
ವಿಶ್ವಕಪ್ ವಿಜಯದ ನಂತರ ಆಸ್ಟ್ರೇಲಿಯ ತಂಡವು ವೆಸ್ಟ್ ಇಂಡೀಸ್ ಪ್ರವಾಸ ನಡೆಸಿತು. ಅಡಾಮ್ ಗಿಲ್‌ಕ್ರಿಸ್ಟ್ ಆಟಗಾರರಾಗಿದ್ದ ಈ ತಂಡವು ODI ಮತ್ತು ಟೆಸ್ಟ್ ಸರಣಿಗಳೆರಡರಲ್ಲೂ ಜಯ ಸಾಧಿಸಿತು.[೧೨೧] ನಾಲ್ಕು ಟೆಸ್ಟ್‌ಗಳಲ್ಲಿ ಅವರು 70.50 ಸರಾಸರಿಯಲ್ಲಿ, ಒಂದು ಶತಕ ಸಹಿತ 282 ರನ್ ಹಾಗೂ ODIಗಳಲ್ಲಿ 35.33 ಸರಾಸರಿಯಲ್ಲಿ 212 ಗಳಿಸಿದರು.[೨೦] ನಂತರ ಸ್ವದೇಶದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ಧ ಆಟದ ಎರಡೂ ಸ್ವರೂಪಗಳ ಲಘು ಸರಣಿಯಲ್ಲಿ ಆಸ್ಟ್ರೇಲಿಯ ಜಯ ಸಾಧಿಸಿತು.[೧೨೨] ಅಡಾಮ್ ಗಿಲ್‌ಕ್ರಿಸ್ಟ್ ಕೆಲವೇ ಕೆಲವು ಬಾರಿ ಮಾತ್ರ ಬ್ಯಾಟ್ ಮಾಡುವ ಅಗತ್ಯವಿತ್ತು.[೨೦]
ಕುಗ್ಗುವಿಕೆ ಹಾಗೂ ಚೇತರಿಕೆ
[ಬದಲಾಯಿಸಿ]ತಮ್ಮ ತಾಯ್ನೆಲ ಪರ್ತ್‌ನಲ್ಲಿ ಮೊದಲ ಟೆಸ್ಟ್ ಶತಕ, ಜಿಂಬಾಬ್ವೆ ವಿರುದ್ಧ ಅಜೇಯ 113, ಗಳಿಸಿದ ನಂತರ,[೨೦] 2003-04 ಋತುವಿನಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಟೆಸ್ಟ್‌ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಲಯವನ್ನು ಮತ್ತೊಮ್ಮೆ ಕಳೆದುಕೊಂಡರು. ಸ್ವದೇಶದಲ್ಲಿ ಭಾರತ ವಿರುದ್ಧದ ಸರಣಿ(1-1 ಡ್ರಾ)ಹಾಗೂ ಸ್ವದೇಶದಿಂದ ಹೊರಗಿನ ಶ್ರೀಲಂಕಾ(3-0 ಗೆಲವು) ವಿರುದ್ಧ ಸರಣಿಯ ಸಂದರ್ಭದಲ್ಲಿ ಮುಂದಿನ ಹತ್ತು ಇನ್ನಿಂಗ್ಸ್‌ಗಳಲ್ಲಿ ಕೇವಲ 120 ರನ್‌ಗಳನ್ನು ಗಳಿಸಿದರು.[೯೫] ಆದರೆ, ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಪುನಃ ಲಯ ಕಂಡುಕೊಂಡು, ಆಸ್ಟ್ರೇಲಿಯದ ಎರಡನೆಯ ಇನ್ನಿಂಗ್ಸ್‌ನಲ್ಲಿ ವೇಗದ 144 ರನ್ ಗಳಿಸಿದರು. ಇದರ ಫಲವಾಗಿ, ಮೊದಲ ಇನ್ನಿಂಗ್ಸ್‌ನಲ್ಲಿ 91 ರನ್ ಮುನ್ನಡೆ ಬಿಟ್ಟುಕೊಟ್ಟಿದ್ದ ಆಸ್ಟ್ರೇಲಿಯಾ, ಅಂತಿಮವಾಗಿ 27 ರನ್‌ಗಳ ಗೆಲುವು ಸಾಧಿಸಿತು.[೨೦][೯೫] ಆದರೆ, ಈ ಋತುವಿನಲ್ಲಿ ನಡೆದ ODIಗಳಲ್ಲಿ ತಮ್ಮ ಉನ್ನತ ಮಟ್ಟವನ್ನು ಕಾಯ್ದುಕೊಂಡರು. ಭಾರತದ ವಿರುದ್ಧ ಬೆಂಗಳೂರಿನಲ್ಲಿ 111, ಆಸ್ಟ್ರೇಲಿಯದಲ್ಲಿ ಜಿಂಬಾಬ್ವೆ ವಿರುದ್ಧ 172 (ಮಾರ್ಕ್ ವಾ ನಿರ್ಮಿಸಿದ ಆಸ್ಟ್ರೇಲಿಯನ್ ದಾಖಲೆ 173ಗಿಂತ ಒಂದು ರನ್ ಕಡಿಮೆ) ಮತ್ತು ಆಸ್ಟ್ರೇಲಿಯದ VB ಸರಣಿಗಳಲ್ಲಿ ಇನ್ನೂ ಎರಡು ಅರ್ಧಶತಕಗಳು ಇದರಲ್ಲಿ ಸೇರಿದ್ದವು.[೫೪] ಫೆಬ್ರುವರಿ 2004ರಲ್ಲಿ ICC ODI ಬ್ಯಾಟಿಂಗ್ ಶ್ರೇಯಾಂಕಗಳಲ್ಲಿ ಅಗ್ರಸ್ಥಾನ ಗಳಿಸಿದ್ದು, ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಯಶಸ್ಸು ಎದ್ದುಕಾಣುವಂತೆ ಮಾಡಿತು.[೧೨೩] ಆದರೆ, 2004 ಶ್ರೀಲಂಕಾ ಮತ್ತು ಜಿಂಬಾಬ್ವೆ ಪ್ರವಾಸಗಳು, ಹಾಗೂ ಇಂಗ್ಲೆಂಡ್‌ನಲ್ಲಿ ನಡೆದ ಚ್ಯಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಗಳಲ್ಲಿ ಅವರು ಈ ರೀತಿಯ ಲಯವನ್ನು ಕಾಯ್ದುಕೊಳ್ಳುವುದರಲ್ಲಿ ವಿಫಲರಾದರು. 11 ಇನ್ನಿಂಗ್ಸ್‌ನಲ್ಲಿ 28.11 ಸರಾಸರಿಯಲ್ಲಿ ಕೇವಲ 253 ರನ್ ಗಳಿಸಿದರು.[೨೦][೫೪] 2004ರ ಮಧ್ಯದಲ್ಲಿ, ಶ್ರೀಲಂಕಾ ವಿರುದ್ಧ ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅವರು 28.75 ಸರಾಸರಿಯಲ್ಲಿ 115 ರನ್ ಗಳಿಸಿದರು.[೨೦] ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪಾಂಟಿಂಗ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯ ತಂಡದ ನಾಯಕತ್ವ ವಹಿಸಿದರು. ಆಸ್ಟ್ರೇಲಿಯ ಈ ಸರಣಿಯನ್ನು 1-0 ಅಂತರದಿಂದ ಗೆದ್ದಿತು.[೨೦] ಅಕ್ಟೋಬರ್ 2004ರಲ್ಲಿ ಭಾರತದ ಪ್ರವಾಸದಲ್ಲಿ, ಭಾರತದ ವಿರುದ್ಧ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 104 ರನ್ ಗಳಿಸಿದರಾದರೂ ಅದು ಹುಸಿ ಚೇತರಿಕೆಯೆಂದು ಸಾಬೀತಾಯಿತು.[೧೨೪] ಭಾರತದ ಪ್ರವಾಸದಲ್ಲಿ ಮುಂದಿನ ಏಳು ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 104 ರನ್ ಗಳಿಸಿದರು. 2004-05 ಋತುವಿನ ಅಂತ್ಯದಲ್ಲಿ ನಡೆದ ಎಂಟು ODI ಇನ್ನಿಂಗ್ಸ್‌ಗಳಲ್ಲಿ 139 ರನ್ ಗಳಿಸಿದರು. ಹಾಗಾಗಿ, ಇದು ಅಡಾಮ್ ಗಿಲ್‌ಕ್ರಿಸ್ಟ್ ವೃತ್ತಿಜೀವನದಲ್ಲಿ 2007ರ ತನಕದ ಅತಿ ಕಡಿಮೆ ಸರಾಸರಿಯ ಅವಧಿಯಾಗಿತ್ತು.[೫೪][೯೫]
ಅಕ್ಟೋಬರ್ 2004ರಲ್ಲಿ ಭಾರತದ ವಿರುದ್ಧ ಮೊದಲ ಮೂರು ಟೆಸ್ಟ್‌ಗಳಲ್ಲಿ, ಗಾಯಗೊಂಡ ರಿಕಿ ಪಾಂಟಿಂಗ್ ಸ್ಥಾನದಲ್ಲಿ, ಅಡಾಮ್ ಗಿಲ್‌ಕ್ರಿಸ್ಟ್ ಆಸ್ಟ್ರೇಲಿಯ ತಂಡದ ನಾಯಕತ್ವ ವಹಿಸಿದರು.[೧೨೫] ಆಸ್ಟ್ರೇಲಿಯ ಭಾರತದ ನೆಲದಲ್ಲಿ 2-1 ಅಂತರದಲ್ಲಿ ಐತಿಹಾಸಿಕ ಸರಣಿ ಗೆಲುವು ಸಾಧಿಸಿತು. ಆಸ್ಟ್ರೇಲಿಯಾ ಭಾರತದ ನೆಲದಲ್ಲಿ ಕೊನೆ ಬಾರಿಗೆ ಟೆಸ್ಟ್ ಸರಣಿ ಗೆದ್ದದ್ದು 1969ರಲ್ಲಿ.[೧೨೬] ರಿಕಿ ಪಾಂಟಿಂಗ್ ಚೇತರಿಸಿಕೊಂಡು ನಾಲ್ಕನೆಯ ಟೆಸ್ಟ್ ಪಂದ್ಯದಲ್ಲಿ ತಂಡದ ನಾಯಕರಾಗಿ,ಆಸ್ಟ್ರೇಲಿಯ ಕೇವಲ ಒಂದು ಸೋಲನ್ನು ಕಂಡ ಟೆಸ್ಟ್ ಪಂದ್ಯವೆನಿಸಿತು.
ದಕ್ಷಿಣ ಗೋಲಾರ್ಧದಲ್ಲಿ ಕ್ರಿಕೆಟ್ ಋತುವಿನ ಆರಂಭದಲ್ಲಿ ನ್ಯೂಜಿಲೆಂಡ್ ಆಸ್ಟ್ರೇಲಿಯದ ಪ್ರವಾಸ ನಡೆಸಿದಾಗ ಅಡಾಮ್ ಗಿಲ್‌ಕ್ರಿಸ್ಟ್ ಪುನಃ ಉತ್ತಮ ಲಯಕ್ಕೆ ಹಿಂದಿರುಗಿದರು. ಅವರು 2-0ಯಿಂದ ಸಂಪೂರ್ಣ ಸದೆಬಡಿದ ಸರಣಿಯಲ್ಲಿ 126 ಮತ್ತು 50 ರನ್ ಗಳಿಸಿದರು ಹಾಗೂ ಎರಡೂ ODIಗಳಲ್ಲಿ ಅರ್ಧಶತಕ ಗಳಿಸಿದರು.[೨೦] ಪಾಕಿಸ್ತಾನದ ವಿರುದ್ಧ ಸ್ವದೇಶದಲ್ಲಿ ನಡೆದ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 76.66 ಸರಾಸರಿಯಲ್ಲಿ 230 ರನ್ ಗಳಿಸಿದರು. ಇದರಲ್ಲಿ, ಸಿಡ್ನಿಯ SCGಯಲ್ಲಿ ನಡೆದ ಮೂರನೆಯ ಟೆಸ್ಟ್‌ನಲ್ಲಿ ವೇಗವಾದ 113 ಸಹ ಸೇರಿತ್ತು. ಆ ಬೇಸಿಗೆಯಲ್ಲಿ ನಡೆದ ಐದೂ ಟೆಸ್ಟ್‌ಗಳನ್ನು ಆಸ್ಟ್ರೇಲಿಯ ಗೆದ್ದುಕೊಂಡಿತು.[೨೦] ನಂತರ ನಡೆದ ನ್ಯೂಜಿಲೆಂಡ್ ಪ್ರವಾಸದಲ್ಲಿ, ಮೊದಲ ಎರಡು ಟೆಸ್ಟ್‌ಗಳಲ್ಲಿ ಅವರು 121 ಮತ್ತು 162ರನ್‌ಗಳೊಂದಿಗೆ ಶತಕಗಳನ್ನು ಗಳಿಸುವುದರ ಮೂಲಕ ಸತತ ಮೂರು ಟೆಸ್ಟ್‌ಗಳಲ್ಲಿ ಶತಕ ಗಳಿಸಿದರು.[೧೨೭] ಮೂರನೆಯ ಟೆಸ್ಟ್‌ನಲ್ಲಿ ಅವರು ಅಜೇಯ 60 ರನ್ ಗಳಿಸಿದರು. ನ್ಯೂಜಿಲೆಂಡ್ ಪ್ರವಾಸದ ಈ ಟೆಸ್ಟ್ ಸರಣಿಯಲ್ಲಿ ಅವರು 114.33 ಸರಾಸರಿಯಲ್ಲಿ ಒಟ್ಟು 343 ರನ್ ಗಳಿಸಿದರು.[೨೦] 2005ರ ಆರಂಭದಲ್ಲಿ ಅವರ ODI ಲಯವು ಸಾಧಾರಣವೆನಿಸಿತ್ತು. ದಕ್ಷಿಣದ ಬೇಸಿಗೆಯ ಸಮಯದ ಕ್ರಿಕೆಟ್ ಋತುವಿನಲ್ಲಿ ಅವರು 28.00 ಸರಾಸರಿಯಲ್ಲಿ 308 ರನ್ ಗಳಿಸಿದರು.[೨೦] 2004ನೆಯ ಇಸವಿಯಲ್ಲಿ ಇಂಗ್ಲೆಂಡ್ ತಂಡವು ಒಂದು ಟೆಸ್ಟ್‌ನಲ್ಲೂ ಸೋಲಲಿಲ್ಲ. 2001ರ ಭಾರತ ಪ್ರವಾಸದ ನಂತರ, 2005ರ ಆಷಸ್ ಸರಣಿಯು ಆಸ್ಟ್ರೇಲಿಯದ ಪ್ರಾಬಲ್ಯಕ್ಕೆ ದೊಡ್ಡ ಬೆದರಿಕೆಯೆಂದು ಭಾವಿಸಲಾಯಿತು. ಇಂಗ್ಲೆಂಡ್‌ನಲ್ಲಿ ಟೆಸ್ಟ್‌ಗಳ ಮುಂಚೆ ನಡೆದ ODIಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಅತಿಥೇಯ ತಂಡದ ವಿರುದ್ಧ 49.13 ಸರಾಸರಿಯಲ್ಲಿ 393 ರನ್ ಗಳಿಸಿದರು.[೨೦] ಇದರಲ್ಲಿ, ನ್ಯಾಟ್ವೆಸ್ಟ್ ಸರಣಿಯ ಅಂತಿಮ ODIದಲ್ಲಿ ಅಜೇಯ 121 ರನ್ ಗಳಿಸಿ, ಪಂದ್ಯದ ಪುರುಷೋತ್ತಮ ಪ್ರಶಸ್ತಿ ಪಡೆದದ್ದು ಪ್ರಮುಖಾಂಶವಾಗಿತ್ತು.[೧೨೮] ಆದರೆ, ಅತಿಥೇಯ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳಲ್ಲಿ ಅವರು ವೈಫಲ್ಯ ಕಂಡರು. 22.62 ಸರಾಸರಿಯಲ್ಲಿ 181 ರನ್ ಗಳಿಸಿದರು.[೧೨೯] ಒಂದು ಇನ್ನಿಂಗ್ಸ್‌ನಲ್ಲಿ ಅಜೇಯ 49 ರನ್ ಮಾತ್ರ 30 ರನ್ ದಾಟಿದ ಅವರ ಗಮನಾರ್ಹ ಸ್ಕೋರ್ ಆಗಿತ್ತು.[೨೦]
2001ರ ಭಾರತ ಪ್ರವಾಸದಂತೆಯೇ, ಆಷಸ್ ಸರಣಿಯಲ್ಲಿ ಆಸ್ಟ್ರೇಲಿಯ 1-2 ಅಂತರದಿಂದ ಸೋತಿತು.[೧೩೦] ಅಡಾಮ್ ಗಿಲ್‌ಕ್ರಿಸ್ಟ್ ಸರಣಿಯ ಪುರುಷೋತ್ತಮ ಆಂಡ್ರ್ಯೂ ಫ್ಲಿಂಟಾಫ್ ಬೌಲಿಂಗ್‌ನಲ್ಲಿ ನಾಲ್ಕು ಬಾರಿ ಔಟ್ ಆಗಿದ್ದರು.
ಆಷಸ್ ನಂತರ, ICC ವರ್ಲ್ಡ್ XI ವಿರುದ್ಧದ ಸರಣಿಯಲ್ಲಿ ಆಸ್ಟ್ರೇಲಿಯ ಮತ್ತು ಅಡಾಮ್ ಗಿಲ್‌ಕ್ರಿಸ್ಟ್ ಪುನಃ ಲಯ ಕಂಡುಕೊಂಡರು. ಆಸ್ಟ್ರೇಲಿಯಾ ODI ಪಂದ್ಯಗಳನ್ನು 3-0ಯಿಂದ ಧೂಳಿಪಟ ಮಾಡಿತು ಹಾಗು ಅಡಾಮ್ ಗಿಲ್‌ಕ್ರಿಸ್ಟ್ 45, 103 ಮತ್ತು 32 ರನ್‌ಗಳ ಕೊಡುಗೆ ನೀಡಿದರು. ವಿಶ್ವ XI ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಗೆದ್ದ ಆಸ್ಟ್ರೇಲಿಯ ಪರ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 94 ರನ್ ಗಳಿಸಿದರು.[೨೦] ಆದರೆ ಈ ಬ್ಯಾಟಿಂಗ್ ಲಯವು ಅಧಿಕೃತ ಅಂತಾರಾಷ್ಟ್ರೀಯ ಪಂದ್ಯಗಳಿಗೆ ವರ್ಗಾವಣೆಯಾಗಲಿಲ್ಲ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 2005-06 ಋತುವಿನಲ್ಲಿ ಸ್ವದೇಶದಲ್ಲಿ ನಡೆದ ಆರು ಟೆಸ್ಟ್ ಪಂದ್ಯಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 23.75 ಸರಾಸರಿಯಲ್ಲಿ ಕೇವಲ 190 ರನ್ ಗಳಿಸಿದರು.[೨೦] ಆದರೆ ಆಸ್ಟ್ರೇಲಿಯ ಯಾವುದೇ ಅಡಚಣೆಯಿಲ್ಲದೆ ಕ್ರಮವಾಗಿ 3-0 ಹಾಗು 2-0 ಅಂತರದಿಂದ ಸರಣಿ ಜಯ ಗಳಿಸಿತು.[೨೦] ODIಗಳಲ್ಲಿಯೂ ಅವರ ಬ್ಯಾಟಿಂಗ್ ಲಯದಲ್ಲಿ ಕೊರತೆ ಕಂಡುಬರಲು ಆರಂಭವಾಯಿತು. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಕೇವಲ 11 ರನ್ ಹಾಗೂ VB ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ 13ರನ್ ಗಳಿಸಿದರು.[೫೪] ಎರಡು ಪಂದ್ಯಗಳಿಗೆ ಇವರಿಗೆ ವಿಶ್ರಾಂತಿ ನೀಡಲಾಯಿತು. 29 ಜನವರಿ 2006ರಂದು ತಮ್ಮ ತಾಯ್ನೆಲ ಪರ್ತ್‌ನ WACA ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪುನಃ ಲಯ ಕಂಡುಕೊಂಡು, ಕೇವಲ 105 ಚೆಂಡೆಸೆತಗಳಲ್ಲಿ 116 ರನ್ ಬಾರಿಸಿ ಆಸ್ಟ್ರೇಲಿಯವನ್ನು ಗೆಲುವಿನ ದಡ ಮುಟ್ಟಿಸಿದರು.[೧೩೧] ಇದೇ ರೀತಿಯ ಲಯದಲ್ಲಿ ಅವರು ಶ್ರೀಲಂಕಾ ವಿರುದ್ಧ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಪಂದ್ಯದಲ್ಲಿ ಅವರು ಆಸ್ಟ್ರೇಲಿಯನ್‌ನಿಂದ ಕೇವಲ 67 ಚೆಂಡೆಸೆತಗಳಲ್ಲಿ ಅತೀ ವೇಗದ ಶತಕ ದಾಖಲಿಸಿದರು. ಅವರು ಅಂತಿಮವಾಗಿ 122 ರನ್ ಗಳಿಸಿ, ನಿರ್ಣಾಯಕ ಮೂರನೆಯ ಫೈನಲ್(ಅಂತಿಮ) ಪಂದ್ಯದಲ್ಲಿ ಆಸ್ಟ್ರೇಲಿಯ ಒಂಬತ್ತು ವಿಕೆಟ್‌ಗಳ ಅಂತರದಲ್ಲಿ ಜಯಗಳಿಸಲು ನೆರವಾದರು.[೧೩೨] ನಿಧಾನಗತಿಯ ಆರಂಭದ ನಂತರ, ಸರಣಿಯ ಅಂತ್ಯದಲ್ಲಿ ಅವರು 48.00 ಸರಾಸರಿಯಲ್ಲಿ 432 ರನ್ ಗಳಿಸಿದ್ದರು.[೨೦] ಅಡಾಮ್ ಗಿಲ್‌ಕ್ರಿಸ್ಟ್‌ರ ಸಫಲ ಅಭಿಯಾನವು ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಪ್ರವಾಸಗಳೊಂದಿಗೆ ಕೊನೆಗೊಂಡಿತು. ಐದು ಟೆಸ್ಟ್‌ಗಳಲ್ಲಿ 29.42 ಸರಾಸರಿಯಲ್ಲಿ 206 ರನ್ ಹಾಗೂ ಎಂಟು ODIಗಳಲ್ಲಿ ಅವರು 248 ರನ್ ಗಳಿಸಿದರು. ಇದರಲ್ಲಿ, ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ 144 ರನ್ ಗಳಿಸಿದ್ದರು.[೨೦] ಆದರೂ ಸಹ, ಆಸ್ಟ್ರೇಲಿಯ ಎಲ್ಲಾ ಐದೂ ಟೆಸ್ಟ್‌ಗಳಲ್ಲಿಯೂ ವಿಜಯ ಸಾಧಿಸಿತು.[೧೩೦] ವೆಸ್ಟ್ ಇಂಡೀಸ್ ವಿರುದ್ಧ 92 ರನ್ ಸೇರಿದಂತೆ, 26.00 ಸರಾಸರಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 130 ರನ್ ಗಳಿಸಿದರು. ಇದರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 92 ರನ್ ಸೇರಿತ್ತು. 2006ರಲ್ಲಿ ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಆಸ್ಟ್ರೇಲಿಯ ಗೆದ್ದಿತು.[೨೦] 16 ಡಿಸೆಂಬರ್ 2006ರಂದು, ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧದ ಆಷಸ್ ಸರಣಿಯಲ್ಲಿ, ಪರ್ತ್‌ನ WACAದಲ್ಲಿ ನಡೆದ ಮೂರನೆಯ ಟೆಸ್ಟ್‌ನಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 57 ಚೆಂಡೆಸೆತಗಳಲ್ಲಿ ಶತಕ ಗಳಿಸಿದರು. ಇದರಲ್ಲಿ ಹನ್ನೆರಡು ಬೌಂಡರಿಗಳು ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.[೧೩೩] ಇದು ಟೆಸ್ಟ್ ಪಂದ್ಯಗಳಲ್ಲಿ ಎರಡನೆಯ ಅತಿವೇಗದ ಶತಕವಾಗಿತ್ತು.[೭] ಒಂದು ಹಂತದಲ್ಲಿ, 54 ಚೆಂಡೆಸೆತಗಳಲ್ಲಿ 97 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದ ಅಡಾಮ್ ಗಿಲ್‌ಕ್ರಿಸ್ಟ್‌ರಿಗೆ, ಮುಂದಿನ ಚೆಂಡೆಸೆತದಲ್ಲಿ, ವಿವಿಯನ್ ರಿಚರ್ಡ್ಸ್ 1986ರಲ್ಲಿ ನಿರ್ಮಿಸಿದ ದಾಖಲೆಯನ್ನು ಮುರಿಯಲು ಕೇವಲ ಮೂರು ರನ್‌ಗಳ ಅಗತ್ಯವಿತ್ತು.[೧೩೪] ಆದರೆ, ಇಂಗ್ಲೆಂಡ್‌ನ ಮ್ಯಾಥ್ಯೂ ಹೊಗಾರ್ಡ್ ಬೌಲ್ ಮಾಡಿದ ಚೆಂಡು ವೈಡ್ ಆದ ಕಾರಣ ಅಡಾಮ್ ಗಿಲ್‌ಕ್ರಿಸ್ಟ್ ಅದರಿಂದ ರನ್ ಗಳಿಸಲಾಗಲಿಲ್ಲ.[೧೩೫] ತಮ್ಮ "ಬಿಡುಬೀಸಿನ ಬ್ಯಾಟಿಂಗ್" ಆಸ್ಟ್ರೇಲಿಯದ ನಾಯಕ ರಿಕಿ ಪಾಂಟಿಂಗ್ ಜತೆ ಸಂಪರ್ಕಕೊರತೆಯ ಫಲ ಎಂದು ನಂತರ ಅವರು ಹೇಳಿದ್ದಾರೆ: ಇನ್ನಿಂಗ್ಸ್ ಡಿಕ್ಲೇರ್ ಮಾಡುವ ದೃಷ್ಟಿಯಿಂದ ತ್ವರಿತ ರನ್ ಹೊಡೆಯುವುದು ಬೇಡ ವೆಂದು ಗಿಲ್‌ಕ್ರಿಸ್ಟ್ ಅವರಿಗೆ ವಾಸ್ತವವಾಗಿ ತಿಳಿಸಲಾಗಿತ್ತು.[೧೩೬] 2006-07ರ ಆಷಸ್ ಸರಣಿಯು ಅಂತ್ಯಗೊಂಡಾಗ ಅವರು ಒಂದು ಶತಕ ಮತ್ತು ಎರಡು ಅರ್ಧ ಶತಕಗಳು ಸೇರಿದಂತೆ 45.80 ಸರಾಸರಿಯಲ್ಲಿ 100ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನೊಂದಿಗೆ 229 ರನ್ ಹೊಡೆದಿದ್ದರು. ಆಸ್ಟ್ರೇಲಿಯ ಈ ಸರಣಿಯ ಐದೂ ಟೆಸ್ಟ್‌ಗಳಲ್ಲಿ ಸದೆಬಡಿದು ಆಷಸ್ ಪುನಃ ತಮ್ಮದಾಗಿಸಿಕೊಂಡಿತು.[೧೩೭] ಇದು ಅವರ ಪಾಲಿಗೆ ಅಸಂಗತ ಸರಣಿಯಾಗಿತ್ತು. ಮೇಲೆ ತಿಳಿಸಲಾದ ಮೂರು ಪ್ರಮುಖ ಸ್ಕೋರ್‌ಗಳನ್ನು ಹೊರತುಪಡಿಸಿದರೆ, ಅಡಾಮ್ ಗಿಲ್‌ಕ್ರಿಸ್ಟ್ ತಮ್ಮ ಇತರೆ ಮೂರು ಇನ್ನಿಂಗ್ಸ್‌ನಲ್ಲಿ ಒಂದು ರನ್ ದಾಟಿ ಮುಂದೆ ಹೋಗಲಿಲ್ಲ.[೨೦] ಎರಡೂ ಆಷಸ್ ಸರಣಿಗಳ ನಡುವೆ, ಅಡಾಮ್ ಗಿಲ್‌ಕ್ರಿಸ್ಟ್‌ರ ಸರಾಸರಿಯು ಒಂದು ಟೆಸ್ಟ್ ಶತಕದೊಂದಿಗೆ ಕೇವಲ 25 ಆಗಿತ್ತು.[೨೦] ಆದರೆ, 2006-07ರ ಕಾಮನ್ವೆಲ್ತ್ ಬ್ಯಾಂಕ್ ಸರಣಿಯಲ್ಲಿ ಅವರು ಮತ್ತು ಆಸ್ಟ್ರೇಲಿಯ ತಂಡವು ಆಶ್ಚರ್ಯಕರವಾದ ಕಳಫೆ ಫಲಿತಾಂಶದ ಮಾಲೆಯನ್ನು ಅನುಭವಿಸಿದರು. ಈ ಸರಣಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 22.20ರ ಸರಾಸರಿ ಗಳಿಸಲು ಮಾತ್ರ ಸಾಧ್ಯವಾಯಿತು.[೨೦] ತನ್ನ ಎಂಟು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡವು ಏಳರಲ್ಲಿ ಜಯ ಸಾಧಿಸಿತು.[೨೦] ಆದರೆ ಎರಡು ಫೈನಲ್ ಜಯಗಳಿಂದ ಇಂಗ್ಲೆಂಡ್ ಆಸ್ಟ್ರೇಲಿಯ ತಂಡವನ್ನು ಸೋಲಿಸಿತು.[೧೩೮] ಮೊದಲ ಎರಡು ಪಂದ್ಯಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 60 ಮತ್ತು 61 ರನ್ ಗಳಿಸಿದ ಬಳಿಕ ನಂತರದ ಪಂದ್ಯಗಳಲ್ಲಿ ತಮ್ಮ 30ರ ಗಡಿ ದಾಟಲಿಲ್ಲ.[೨೦] ನಂತರ ನ್ಯೂಜಿಲೆಂಡ್ ನೆಲದಲ್ಲಿ ಮೂರು ODIದ ಸರಣಿಗಾಗಿ ಅಡಮ್ ಗಿಲ್‌ಕ್ರಿಸ್ಟ್‌ರಿಗೆ ವಿಶ್ರಾಂತಿ ನೀಡಲಾಯಿತು.[೧೩೯] ಈ ಸರಣಿಯ ಮೂರೂ ಪಂದ್ಯಗಳಲ್ಲಿ ಆಸ್ಟ್ರೇಲಿಯ ಸೋತಿತು. 2007ರ ವಿಶ್ವಕಪ್ ಕ್ರಿಕೆಟ್ ಗಾಗಿ ಅಡಾಮ್ ಗಿಲ್‌ಕ್ರಿಸ್ಟ್‌ರನ್ನು ಆಯ್ಕೆ ಮಾಡಲಾಯಿತು.[೧೪೦] ಹಿಂದೊಮ್ಮೆ, ತಾವು 2007 ವಿಶ್ವಕಪ್ ನಂತರ ಆಟಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ ಎಂದು ಅಡಾಮ್ ಗಿಲ್‌ಕ್ರಿಸ್ಟ್ ಸೂಚಿಸಿದ್ದರು.[೧೪೧] ಆದರೆ ತಮ್ಮ ಮನಸ್ಸು ಬದಲಿಸಿ ಇನ್ನೂ ಆಟವಾಡುವ ಬಯಕೆ ವ್ಯಕ್ತಪಡಿಸಿದರು.[೧೪೨]
2007ರ ಕ್ರಿಕೆಟ್ ವಿಶ್ವಕಪ್
[ಬದಲಾಯಿಸಿ]ಅಡಾಮ್ ಗಿಲ್‌ಕ್ರಿಸ್ಟ್ ಮತ್ತು ಆಸ್ಟ್ರೇಲಿಯನ್ ತಂಡ ತಮ್ಮ 2007ರ ಕ್ರಿಕೆಟ್ ವಿಶ್ವಕಪ್ ಅಭಿಯಾನದಲ್ಲಿ ಶುಭಾರಂಭ ಮಾಡಿತು. ಗ್ರೂಪ್ ಎದಲ್ಲಿ ಸ್ಕಾಟ್ಲೆಂಡ್,[೧೪೩] ನೆದರ್ಲೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಎಲ್ಲಾ ಆರಂಭಿಕ ಪಂದ್ಯಗಳನ್ನು ಗೆದ್ದಿತು.[೨೦] ಸೂಪರ್8 ಹಂತದಲ್ಲಿ ಆಸ್ಟ್ರೇಲಿಯ ತನ್ನ ಆರೂ ಪಂದ್ಯಗಳನ್ನು ಲೀಲಾಜಾಲವಾಗಿ ಗೆದ್ದುಕೊಂಡಿತು-ಪ್ರತಿ ಬಾರಿಯೂ ಗೆಲುವಿನ ಅಂತರವು 80ರನ್‌ಗಳನ್ನು ಅಥವಾ 6 ವಿಕೆಟ್‌ಗಳನ್ನು ಮೀರಿತು.[೨೦] ಸೂಪರ್-8 ಹಂತದಲ್ಲಿ ಆಸ್ಟ್ರೇಲಿಯ ಅಗ್ರಸ್ಥಾನದಲ್ಲಿ ಉಳಿದು ನಾಲ್ಕನೆಯ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್ ಮರುಪಂದ್ಯವಾಡಲು ಅರ್ಹತೆ ಪಡೆಯಿತು. ಪ್ರತಿಯೊಂದು ಪಂದ್ಯದಲ್ಲೂ ಅಡಮ್ ಗಿಲ್‌ಕ್ರಿಸ್ಟ್ ಇನ್ನಿಂಗ್ಸ್ ಆರಂಭಿಕ ಬ್ಯಾಟ್ಸ್‌ಮನ್ ಆದರು. ಆರಂಭಿಕ ಪವರ್‌ಪ್ಲೇ ಅವಧಿಯ ಅನುಕೂಲಗಳನ್ನು ಅವರು ಚೆನ್ನಾಗಿ ಬಳಸಿಕೊಂಡು ಬಿರುಸಿನ ಹೊಡೆತಗಳ ಮೂಲಕ ಬ್ಯಾಟ್ ಮಾಡಿ ರನ್ ಗಳಿಸಿದರು. ಆರಂಭದಲ್ಲಿ ಗ್ರೂಪ್ ಪಂದ್ಯಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಸಾಫಲ್ಯ ಕಂಡುಕೊಂಡು, 46, 57 ಮತ್ತು 42 ರನ್ ಗಳಿಸಿದರು. ವೆಸ್ಟ್ ಇಂಡೀಸ್ ವಿರುದ್ಧ ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ವಿಪಲರಾದರೂ ಮಳೆಯ ಕಾರಣ ಕಡಿಮೆ ಓವರುಗಳಿಗೆ ನಿಗದಿ ಮಾಡಿದ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಎರಡನೇ ಅರ್ಧಶತಕ ಗಳಿಸಿ (ಅಜೇಯ 59)ಆಸ್ಟ್ರೇಲಿಯ 10 ವಿಕೆಟ್‌ಗಳ ಜಯ ಸಾಧಿಸಲು ನೆರವಾದರು. ಮಧ್ಯಮ ಮಟ್ಟದ ಸ್ಕೋರ್ ಗಳಿಸಿದ ನಂತರ, ನ್ಯೂಜಿಲೆಂಡ್ ವಿರುದ್ಧದ ಅಂತಿಮ ಸೂಪರ್-8 ಪಂದ್ಯದಲ್ಲಿ ಪುನಃ ವೈಫಲ್ಯ ಕಂಡರು.[೨೦] ದಕ್ಷಿಣ ಆಫ್ರಿಕಾದ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಕೇವಲ ಒಂದು ರನ್‌ಗೆ ಔಟ್ ಆದರು. ಆದರೂ ಆಸ್ಟ್ರೇಲಿಯ ಏಳು ವಿಕೆಟ್‌ಗಳ ಜಯ ಸಾಧಿಸಿತು.[೨೦] ವಿಕೆಟ್-ಕೀಪರ್ ಆಗಿ ಅವರು ನಾಲ್ಕು ಕ್ಯಾಚ್ ಹಿಡಿದರು. ಪಂದ್ಯಾವಳಿಯ ಪಂದ್ಯವೊಂದರಲ್ಲಿ ಅತಿ ಹೆಚ್ಚು ಔಟ್‌ಗಳನ್ನು ಮಾಡಿದ ದಾಖಲೆಯನ್ನು ಸಮವಾಗಿಸಿದರು. ಈ ಪಂದ್ಯಾವಳಿಯಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕರರ ನಂತರ ಇವರು ಹದಿನಾಲ್ಕು ಕ್ಯಾಚ್ ಪಡೆದು ಎರಡನೆಯ ಅತಿ ಹೆಚ್ಚು ಕ್ಯಾಚ್ ಹಿಡಿದ ವಿಕೆಟ್-ಕೀಪರ್ ಆದರು. ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಡಾಮ್ ಗಿಲ್‌ಕ್ರಿಸ್ಟ್ ಬ್ಯಾಟಿಂಗ್ ಆರಂಭಿಸಿದರು. ಇದು ಅಡಾಮ್ ಗಿಲ್‌ಕ್ರಿಸ್ಟ್‌ರಿಗೆ ಸತತ ಮೂರನೆಯ ವಿಶ್ವಕಪ್ ಫೈನಲ್ ಪಂದ್ಯವಾಗಿತ್ತು. ಅವರು ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಕನಿಷ್ಠ ಅರ್ಧಶತಕ ಗಳಿಸಿದ್ದು ಇದು ಮೂರನೆಯ ಬಾರಿ.[೨೦] ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 104 ಚೆಂಡೆಸೆತಗಳಲ್ಲಿ 149 ರನ್ ಗಳಿಸಿದರು. ಇದರಲ್ಲಿ 13 ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳಿದ್ದವು. ವಿಶ್ವಕಪ್ ಫೈನಲ್ ಪಂದ್ಯವೊಂದರಲ್ಲಿ ಇದು ಅತ್ಯುನ್ನತ ವೈಯಕ್ತಿಕ ಸ್ಕೋರ್ ಆಗಿತ್ತು. ಅವರು ತಮ್ಮ ನಾಯಕ ರಿಕಿ ಪಾಂಟಿಂಗ್ 2003 ಫೈನಲ್ ಪಂದ್ಯದಲ್ಲಿ ಹೊಡೆದ 140ರ ಸ್ಕೋರ್ ದಾಖಲೆಯನ್ನು ಮುರಿದರು. ಆಸ್ಟ್ರೇಲಿಯ ಗೆದ್ದಿತು. ಅಡಾಮ್ ಗಿಲ್‌ಕ್ರಿಸ್ಟ್ ಪಂದ್ಯದ ಪುರುಷೋತ್ತಮರಾದರು. ತರುವಾಯ ಅಡಾಮ್ ಗಿಲ್‌ಕ್ರಿಸ್ಟ್ ತಮ್ಮ ಕೈಚೀಲದೊಳಗೆ ಒಂದು ಸ್ಕ್ವಾಷ್ ಚೆಂಡನ್ನು ಅಳವಡಿಸಿ ಈ ಪಂದ್ಯದಲ್ಲಿ ಬ್ಯಾಟ್ ಮಾಡಿದರೆಂಬ ವಿವಾದದ ಹೊಗೆ ಸುತ್ತಿಕೊಂಡಿತು.[೧೪೪] ಅಡಾಮ್ ಗಿಲ್‌ಕ್ರಿಸ್ಟ್ ಈ ರೀತಿ ಮಾಡಿದ್ದು ಆಟದ ನಿಯಮ ಅಥವಾ ಕ್ರೀಡಾಮನೋಭಾವದ ವಿರುದ್ಧವಾಗಿಲ್ಲ, ಬ್ಯಾಟಿಂಗ್ ಕೈಚೀಲಗಳ ಆಂತರಿಕ ಅಥವಾ ಬಾಹ್ಯ ರೂಪಗಳ ವಿರುದ್ಧ ಯಾವುದೇ ನಿರ್ಬಂಧಗಳಿರುವುದಿಲ್ಲ' ಎಂದು MCC ಸ್ಪಷ್ಟಪಡಿಸಿತು.[೧೪೫] ಸೆಪ್ಟೆಂಬರ್ 2007ರಲ್ಲಿ, ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆದ ಉದ್ಘಾಟನಾವಿಶ್ವ ಟ್ವೆಂಟಿ20 ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಆಸ್ಟ್ರೇಲಿಯ ತಂಡಕ್ಕಾಗಿ ಆಡಿದರು. ಈ ಪಂದ್ಯಾವಳಿಯಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ 33.80 ಸರಾಸರಿಯಲ್ಲಿ 169 ರನ್ ಗಳಿಸಿದರು. ಡರ್ಬನ್‌ನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ಭಾರತದ ವಿರುದ್ಧ ಸೋತಿತು.[೨೦] ಭಾರತದಲ್ಲಿ ಆಡಲಾದ ಏಳು ಪಂದ್ಯಗಳ ODI ನಲ್ಲಿ ಆಸ್ಟ್ರೇಲಿಯ ಅತಿಥೇಯ ತಂಡದ ವಿರುದ್ಧ 4-2 ಜಯ ಸಾಧಿಸಿತು. ಅಡಾಮ್ ಗಿಲ್‌ಕ್ರಿಸ್ಟ್ 34.66 ಸರಾಸರಿಯಲ್ಲಿ 208 ರನ್ ಗಳಿಸಿದರು.[೨೦] ಅವರು ಒಂದೇ ಬಾರಿ ಬ್ಯಾಟ್ ಮಾಡುವ ಅಗತ್ಯವಿತ್ತು; ಅದರಲ್ಲಿ ಅಜೇಯ 67 ರನ್ ಗಳಿಸಿದರು. ಆಸ್ಟ್ರೇಲಿಯ ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಜಯಗಳಿಸಿತು.[೨೦]
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ
[ಬದಲಾಯಿಸಿ]26 ಜನವರಿ 2008ರಂದು, ಸ್ವದೇಶದಲ್ಲಿ ಭಾರತದ ವಿರುದ್ಧದ 2007-08 ಋತುವಿನ ಟೆಸ್ಟ್ ಸರಣಿಯ (ಆಡಿಲೇಡ್‌ನಲ್ಲಿ) ನಾಲ್ಕನೆಯ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಸಮಯದಲ್ಲಿ, ಈ ಋತುವಿನ ಕೊನೆಯಲ್ಲಿ ತಾವು ನಿವೃತ್ತರಾಗುವುದಾಗಿ ಅಡಾಮ್ ಗಿಲ್‌ಕ್ರಿಸ್ಟ್ ಘೋಷಿಸಿದರು.[೧೭] ಭಾರತದ ಎರಡನೆಯ ಇನ್ನಿಂಗ್ಸ್‌ನಲ್ಲಿ ಕೆಲ ಕಾಲ ಬೆನ್ನಿನ ಗಾಯದ ಕಾರಣ ರಿಕಿ ಪಾಂಟಿಂಗ್ ಮೈದಾನದಿಂದ ಹೊರಗುಳಿಯಬೇಕಾಯಿತು. ಅಡಾಮ್ ಗಿಲ್‌ಕ್ರಿಸ್ಟ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಯ ಕೊನೆಯ ಎರಡು ದಿನಗಳಿಗೆ ಆಸ್ಟ್ರೇಲಿಯ ತಂಡದ ನಾಯಕತ್ವ ವಹಿಸಿಕೊಂಡರು.[೧೪೬] ಈ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿತು. ಹಾಗಾಗಿ, ಮೊದಲ ಇನ್ನಿಂಗ್ಸ್‌ನಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಗಳಿಸಿದ 14 ರನ್ ತಮ್ಮ ಕೊನೆಯ ಟೆಸ್ಟ್ ಇನ್ನಿಂಗ್ಸ್ ಆಗಿತ್ತು. ಆದರೆ ಅವರು ತಮ್ಮ 379ರ ಹಾಗೂ ಅಂತಿಮ ಕ್ಯಾಚನ್ನು ವೀರೇಂದ್ರ ಸಹ್ವಾಗ್ ವಿಕೆಟ್ ಹಿಂದೆ ಕ್ಯಾಚ್ ನೀಡಿದಾಗ ಹಿಡಿದರು.[೧೪೭] ತಮ್ಮ ಅಂತಿಮ ಟೆಸ್ಟ್ ಸರಣಿಯಲ್ಲಿ ಅವರು 21.42 ಸರಾಸರಿಯಲ್ಲಿ ಕೇವಲ 150 ರನ್ ಗಳಿಸಿದ್ದರು.[೨೦] ಅಡಾಮ್ ಗಿಲ್‌ಕ್ರಿಸ್ಟ್‌ರ ಅಂತಾರಾಷ್ಟ್ರೀಯ ವೃತ್ತಿಯ ಬಹುಪಾಲು ಸಮಯದಲ್ಲಿ ಆಸ್ಟ್ರೇಲಿಯದ ತರಬೇತುದಾರರಾಗಿದ್ದ ಜಾನ್ ಬುಕನಾನ್‌ರ ಭವಿಷ್ಯ ನುಡಿಯಿದ್ದದ್ದು ಹೀಗೆ: 'ಕಳೆದ ವರ್ಷ ಗ್ಲೆನ್ ಮೆಕ್‌ಗ್ರಾ, ಶೇನ್ ವಾರ್ನ್ ಮತ್ತು ಜಸ್ಟಿನ್ ಲ್ಯಾಂಗರ್ ನಿವೃತ್ತಿಗಿಂತಲೂ ಅಡಾಮ್ ಗಿಲ್‌ಕ್ರಿಸ್ಟ್‌ರ ನಿವೃತ್ತಿಯು ಹೆಚ್ಚು ಪ್ರಭಾವ ಬೀರಲಿದೆ.' ಆಸ್ಟ್ರೇಲಿಯದ ಪ್ರಧಾನಿ ಕೆವಿನ್ ರುಡ್ ತಮ್ಮ ನಿವೃತ್ತಿಯನ್ನು ಮುಂದೂಡಲು ಅಡಾಮ್ ಗಿಲ್‌ಕ್ರಿಸ್ಟ್‌ರನ್ನು ಕೋರಿದರು.[೧೪೮] ಅಡಾಮ್ ಗಿಲ್‌ಕ್ರಿಸ್ಟ್ ಆಡಿಲೇಡ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಹೊಡೆದ ಚೆಂಡನ್ನು ಕ್ಯಾಚ್ ಮಾಡಲು ವಿಫಲವಾಗಿದ್ದರಿಂದ ತಾವು ನಿವೃತ್ತಿಯನ್ನು ಆಯ್ಕೆ ಮಾಡಿದ್ದಾಗಿ ನಂತರ ಬಹಿರಂಗಪಡಿಸಿದರು. 'ಸ್ಪರ್ಧಾತ್ಮಕ ಅಂಚ'ನ್ನು ಕಳೆದುಕೊಂಡೆನೆಂದು ತಮಗೆ ಅರಿವಾಯಿತು ಎಂದು ಹೇಳಿದ್ದಾರೆ.[೧೪೯] ದೇಶಾದ್ಯಂತ ವಿದಾಯಗಳ ಸಾಲುಗಳೊಂದಿಗೆ ODI ಸರಣಿಯ ಬೇಸಿಗೆ ಆಟವನ್ನು ಅವರು ಆಡಿದರು.ಆದರೆ 2007-08 ಕಾಮನ್ವೆಲ್ತ್ ಬ್ಯಾಂಕ್ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯವನ್ನು 2-0ಯಿಂದ ಸೋಲಿಸಿದಾಗ ಅವರಿಗೆ ನಿರಾಶೆ ಕವಿಯಿತು.[೧೫೦] ಫೈನಲ್ಸ್‌ನ ಎರಡು ಪಂದ್ಯಗಳಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಕೇವಲ ಏಳು ಮತ್ತು ಎರಡು ರನ್ ಗಳಿಸಿದರು.[೨೦] ಶ್ರೀಲಂಕಾ ವಿರುದ್ದ ತಮ್ಮ ತಾಯ್ನೆಲ ಪರ್ತ್‌ನಲ್ಲಿ 15 ಫೆಬ್ರವರಿ 2008ರಂದು ನಡೆದ ಫೈನಲ್ ಪಂದ್ಯದಲ್ಲಿ 118 ರನ್ ಗಳಿಸಿ ಪಂದ್ಯ ಪುರುಷೋತ್ತಮರೆಂದು ಹೆಸರಿಸಲ್ಪಟ್ಟದ್ದು ಸರಣಿಯಲ್ಲಿ ಗಮನಸೆಳೆಯಿತು.[೧೫೧] ಅವರು 322 ರನ್‌ಗಳನ್ನು 32.20 ಸರಾಸರಿಯಲ್ಲಿ ಗಳಿಸಿ, ತಮ್ಮ ಅಂತಿಮ ಸರಣಿಯನ್ನು ಮುಕ್ತಾಯಗೊಳಿಸಿದರು.[೨೦]
ಇಂಡಿಯನ್ ಪ್ರಿಮಿಯರ್ ಲೀಗ್
[ಬದಲಾಯಿಸಿ]ಹೈದರಾಬಾದ್-ಮೂಲದ ಡೆಕನ್ ಚಾರ್ಜರ್ಸ್ ತಂಡದೊಂದಿಗೆ ಅಡಾಮ್ ಗಿಲ್‌ಕ್ರಿಸ್ಟ್ ಗುತ್ತಿಗೆಯ ಆಟಗಾರರಾಗಿ, ಆರಂಭಿಕ ಋತುವಿನ ಆಟಗಾರರ ಹರಾಜಿನಲ್ಲಿ ಅವರಿಗೆ US$700,000 ಮೌಲ್ಯದ ಗುತ್ತಿಗೆ ಲಭಿಸಿತು. ಆರಂಭಿಕ 2008 ಋತುವಿನಲ್ಲಿ, ಡೆಕನ್‌ರ ನಾಲ್ಕನೆಯ ಪಂದ್ಯದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಕೇವಲ 42 ಚೆಂಡೆಸೆತಗಳಲ್ಲಿ IPLನ ಅತಿವೇಗ ಶತಕವನ್ನು ದಾಖಲಿಸಿದರು. ಇದರ ಫಲವಾಗಿ ಮುಂಬಯಿ ವಿರುದ್ಧ ತಮ್ಮ ಮೊದಲ ಜಯ ಸಂಪಾದಿಸಿತು. IPLನ ಅಪರಾರ್ಧದಲ್ಲಿ ಗಾಯಗೊಂಡು ಉಳಿದ ಪಂದ್ಯಾವಳಿಯಿಂದ ಹೊರಗುಳಿದ ಕಾಯಂ ನಾಯಕ VVS ಲಕ್ಷ್ಮಣ್ ಸ್ಥಾನದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಡೆಕನ್ ಚಾರ್ಜರ್ಸ್ ನಾಯಕತ್ವ ವಹಿಸಿಕೊಂಡರು. ಹದಿನಾಲ್ಕು ಪಂದ್ಯಗಳಲ್ಲಿ ಕೇವಲ ಎರಡೇ ಪಂದ್ಯಗಳನ್ನು ಗೆದ್ದ ಡೆಕನ್ ತಂಡವು ಕೊನೆಯ ಸ್ಥಾನದಲ್ಲಿರಬೇಕಾಯಿತು. ಎರಡನೆಯ ಋತುವಿನಲ್ಲಿ ಹೊಸ ತರಬೇತುದಾರ ಮತ್ತು ಮಾಜಿ ಆಸ್ಟ್ರೇಲಿಯ ತಂಡದ ಸಹಆಟಗಾರ ಡಾರೆನ್ ಲೆಹ್ಮನ್ ಲಕ್ಷ್ಮಣ್ ಸ್ಥಾನದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್‌ರನ್ನು ಡೆಕನ್ ಚಾರ್ಜರ್ಸ್‌ನ ಅಧಿಕೃತ ನಾಯಕರನ್ನಾಗಿ ಮಾಡಿದರು. ತಂಡವು ಶುಭಾರಂಭ ಮಾಡಿ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಿತು. ಆದರೆ ಅದು ಎಡವಿ ತನ್ನ ಕೊನೆಯ ಹತ್ತು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಕೇವಲ ಮೂರಲ್ಲಿ ವಿಜಯಿಯಾಯಿತು. ಅರ್ಹತಾ ಸುತ್ತಿನ ಪಂದ್ಯಗಳು ಮುಗಿದಾಗ ಡೆಕ್ಕನ್ ನಾಲ್ಕನೆಯ ಸ್ಥಾನ ಗಿಟ್ಟಿಸಿಕೊಂಡು ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಅಡಾಮ್ ಗಿಲ್‌ಕ್ರಿಸ್ಟ್ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕೇವಲ 35 ಚೆಂಡೆಸೆತಗಳಲ್ಲಿ 85 ರನ್ ಚಚ್ಚಿ ತಮ್ಮ ತಂಡವನ್ನು ಫೈನಲ್ ಪಂದ್ಯಕ್ಕೆ ಕೊಂಡೊಯ್ದರು. ಅಂತಿಮ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಶೂನ್ಯಕ್ಕೆ ಔಟ್ ಆದರೂ, ಡೆಕನ್ ಕೇವಲ ಆರು ರನ್‌ಗಳ ರೋಮಾಂಚಕ ಜಯ ಸಂಪಾದಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅಡಾಮ್ ಗಿಲ್‌ಕ್ರಿಸ್ಟ್ ಪಂದ್ಯಾವಳಿಯ ಪುರುಷೋತ್ತಮರಾಗಿ ಆಯ್ಕೆಯಾದರು. ಸದ್ಯಕ್ಕೆ ಅವರು IPLನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಎರಡೂ ಋತುಗಳಿಂದ ಒಟ್ಟು 931 ರನ್ ಹೊಡೆದಿದ್ದಾರೆ.
ಆಟದ ಶೈಲಿ
[ಬದಲಾಯಿಸಿ]ಅಡಾಮ್ ಗಿಲ್‌ಕ್ರಿಸ್ಟ್‌ರ ಅಕ್ರಮಣಕಾರಿ ಬ್ಯಾಟಿಂಗ್ ಆಸ್ಟ್ರೇಲಿಯ ತಂಡದ ಅಮೋಘ ಯಶಸ್ಸಿನ ಹಿಂದಿನ ಪ್ರಮುಖ ಕಾರಣವಾಗಿದೆ, ಏಕೆಂದರೆ ಅವರು ಸಾಮಾನ್ಯವಾಗಿ ಆರಂಭಿಕ ಆಟಗಾರರಾಗಿ ಬ್ಯಾಟ್ ಮಾಡುತ್ತಿದ್ದರು. ಆಸ್ಟ್ರೇಲಿಯ ತಂಡದ 1999, 2003 ಮತ್ತು 2007 ಕ್ರಿಕೆಟ್ ವಿಶ್ವಕಪ್‌ಗಳ ಯಶಸ್ವಿ ಅಭಿಯಾನದಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ಸಕ್ರಿಯರಾಗಿದ್ದರು.[೧೫೨][೧೫೩] ಅಡಾಮ್ ಗಿಲ್‌ಕ್ರಿಸ್ಟ್‌ರ ಟೆಸ್ಟ್ ಬ್ಯಾಟಿಂಗ್ ಸರಾಸರಿಯು 40ರ ಅಪರಾರ್ಧದಲ್ಲಿರುವುದು ವಿಕೆಟ್-ಕೀಪರ್ ದೃಷ್ಟಿಯಿಂದ ಬಹಳ ಮೇಲ್ಮುಖದ ಸಾಧನೆಯಾಗಿದೆ.[೧೫೪] ಸರ್ವಕಾಲಿಕ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಗಳಲ್ಲಿ ಅವರು 45ನೆಯ ಸ್ಥಾನದಲ್ಲಿದ್ದಾರೆ.[೧೫೪] ಪ್ರತಿ 100 ಚೆಂಡುಗಳಿಗೆ 82 ರನ್ ಟೆಸ್ಟ್ ಸ್ಟ್ರೈಕ್ ರೇಟ್(ಬ್ಯಾಟಿಂಗ್ ಅಂಕಿಅಂಶ)ವನ್ನು ಕಾಯ್ದುಕೊಂಡಿದ್ದಾರೆ. ಚೆಂಡುಗಳನ್ನು ಪೂರ್ಣವಾಗಿ ದಾಖಲಿಸಿದಾಗಿನಿಂದ ಅದು ಅತ್ಯುನ್ನತ ಅಂಕಿಅಂಶವಾಗಿದೆ. ಆಕ್ರಮಣ ಮತ್ತು ಸುಸ್ಥಿರತೆಯ ಮಿಶ್ರಣವುಳ್ಳ ಇವರ ಆಟದಿಂದಾಗಿ ವಿಶ್ವದ ಅತ್ಯಂತ ಸೃಜನಶೀಲ ಕ್ರಿಕೆಟ್ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ.[೧೫೫] ಅವರು ಅಸಾಧಾರಣ ಕಾಲದೊಂದಿಗೆ ಎಲ್ಲ ದಿಕ್ಕುಗಳಿಗೂ ಚೆಂಡನ್ನು ಹೊಡೆಯುತ್ತಿದ್ದರು. ವಿಕೆಟ್ ಕೀಪರ್ ಆಗಿ ಅಡಾಮ್ ಗಿಲ್‌ಕ್ರಿಸ್ಟ್‌ರ ಕೌಶಲ್ಯವು ಕೆಲವೊಮ್ಮೆ ಪ್ರಶ್ನಾರ್ಹವಾಗಿದೆ. ಅವರು ಆಸ್ಟ್ರೇಲಿಯದಲ್ಲಿಯೇ ಅತ್ಯುತ್ತಮ ವಿಕೆಟ್-ಕೀಪರ್ ಎಂದು ಕೆಲವರು ವಾದಿಸಿದರೆವಿಕ್ಟೋರಿಯಾ ತಂಡದ ಡ್ಯಾರೆನ್ ಬೆರ್ರಿ 1990ರ ದಶಕ ಮತ್ತು 2000ದ ದಶಕದ ಪೂರ್ವಾರ್ಧದಲ್ಲಿ ಆಸ್ಟ್ರೇಲಿಯದಲ್ಲಿ ಅತ್ಯುತ್ತಮ ವಿಕೆಟ್-ಕೀಪರ್ ಎಂದು ಅನೇಕ ಮಂದಿ ಪರಿಗಣಿಸಿರುವುದಾಗಿ ಇನ್ನೂ ಕೆಲವರು ವಾದಿಸುತ್ತಾರೆ.[೧೫೬][೧೫೭] ಪರಿಪೂರ್ಣ ವಿಕೆಟ್-ಕೀಪರ್ ಎನಿಸಲು ಅಡಾಮ್ ಗಿಲ್‌ಕ್ರಿಸ್ಟ್ ಎತ್ತರದ ನಿಲುವು ಹೊಂದಿರುವುದು ಅವರಿಗೆ ಅನಾನುಕೂಲವಾಗಿರಬಹುದು. ಇತರೆ ವಿಕೆಟ್-ಕೀಪರ್‌ಗಳಿಗೆ ಹೋಲಿಸಿದರೆ ಅವರು ಅಷ್ಟು ಶ್ರೇಷ್ಠರೆನಿಸದಿದ್ದರೂ, ಹಲವು ವರ್ಷಗಳ ಕಾಲ ಲೆಗ್‌ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಚೆಂಡೆಸೆತಗಳಿಗೆ ಯಶಸ್ವಿಯಾದ ವಿಕೆಟ್-ಕೀಪಿಂಗ್ ಮಾಡಿದ್ದರು. ಹಲವು ಸ್ಟಂಪಿಂಗ್‌ಗಳನ್ನು ಯಶಸ್ವಿಯಾಗಿ ಮಾಡಿ, ಕೆಲವು ಕ್ಯಾಚಿಂಗ್ ಅವಕಾಶಗಳನ್ನು ಕೈಬಿಟ್ಟಿದ್ದರಲ್ಲದೆ ಕೆಲವು 'ಬೈ'ಗಳನ್ನು ಬಿಟ್ಟಿದ್ದುಂಟು. ಅಲೆಕ್ ಸ್ಟಿವರ್ಟ್ ಮತ್ತು ಮಾರ್ಕ್ ಬೌಷರ್‌ರೊಂದಿಗೆ ಅವರು ODIವೊಂದರಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು (6) ಹಿಡಿದಿರುವ ವಿಕೆಟ್-ಕೀಪರ್‌ಗಳ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಆದರೆ ಅವರು ಐದು ಬಾರಿ ಈ ಸಾಧನೆಗೈದಿದ್ದಾರೆ. 2008 CB ಸರಣಿಯಲ್ಲಿ ಭಾರತದ ವಿರುದ್ಧದ ಸಾಧನೆ ಇವುಗಳಲ್ಲಿ ಇತ್ತೀಚಿನದಾಗಿದೆ.[೧೫೮] 2007ರಲ್ಲಿ ನಡೆದ ಪಂದ್ಯವೊಂದರಲ್ಲಿ ಅದು ಎರಡನೆಯ ಬಾರಿ ಆರು ಔಟ್‌ಮಾಡಿ ಅದೇ ODIದಲ್ಲಿ ಅವರು ಅರ್ಧಶತಕ ಹೊಡೆದಿದ್ದರು. ಒಮ್ಮೆಯಾದರೂ ಈ ರೀತಿಯ ಸಾಧನೆ ಮಾಡಿದ ಏಕೈಕ ಆಟಗಾರರಾಗಿ ಇವರು ಉಳಿದಿದ್ದಾರೆ.[೧೫೯] ಆಗಸ್ಟ್ 2005ರಲ್ಲಿ ಇಂಗ್ಲೆಂಡ್‌ನ ಓಲ್ಡ್ ಟ್ರ್ಯಾಫರ್ಡ್ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ವಿಕೆಟ್-ಕೀಪರ್ ಆಗಿ ಅತಿ ಹೆಚ್ಚು ರನ್ ಗಳಿಸಿದ್ದ ಅಲೆಕ್ ಸ್ಟೀವರ್ಟ್‌ರ 4,540 ವಿಶ್ವದಾಖಲೆಯನ್ನು ಅಡಾಮ್ ಗಿಲ್‌ಕ್ರಿಸ್ಟ್ ಹಿಂದಿಕ್ಕಿದರು.[೧೬೦] ಅಂಕಿ ಅಂಶದ ಪ್ರಕಾರ,ಪ್ರಸಕ್ತ ODIಗಳಲ್ಲಿ ಅವರು 400 ಕ್ಯಾಚ್‌ಗಳು ಮತ್ತು 53 ಸ್ಟಂಪಿಂಗ್‌ಗಳು, ಒಟ್ಟು 453 ಔಟ್‍ಗಳೊಂದಿಗೆ ಅತಿ ಯಶಸ್ವೀ ವಿಕೆಟ್-ಕೀಪರ್ ಆಗಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಮಾರ್ಕ ಬೌಷರ್, 80ಕ್ಕೂ ಹೆಚ್ಚು ಔಟ್‌ಗಳಷ್ಟು ಹಿಂದಿದ್ದಾರೆ.[೧೬೧]
ನಿರ್ಗಮನ ಮತ್ತು ಶಿಸ್ತು
[ಬದಲಾಯಿಸಿ]'ತಾವು ಖಚಿತವಾಗಿಯೂ ಔಟಾಗಿದ್ದೇವೆಂದು ಒಪ್ಪಿಕೊಂಡು, ಅಂಪೈರ್‌ರ ತೀರ್ಪಿಗಾಗಿ ಕಾಯದೆ(ಅಥವಾ ವ್ಯತಿರಿಕ್ತವಾಗಿ), ಬ್ಯಾಟ್ಸ್‌ಮನ್ ತಾವಾಗಿಗೇ "ನಡೆದು" ಅಂಕಣದಿಂದ ನಿರ್ಗಮಿಸಬೇಕೆ ಎಂಬುದು ಕ್ರಿಕೆಟ್ ಪ್ರಪಂಚದಲ್ಲಿ ಹಲವು ವರ್ಷಗಳಿಂದಲೂ ಚರ್ಚಾಸ್ಪದ ವಿಷಯವಾಗಿದೆ. 2003 ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ನಂತಹ ಅತ್ಯಂತ ಪ್ರಮುಖ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ, ಅಂಪೈರ್ ಔಟ್ ಇಲ್ಲವೆಂದು ತೀರ್ಪು ನೀಡಿದರೂ ಸಹ ಅಡಾಮ್ ಗಿಲ್‌ಕ್ರಿಸ್ಟ್ ಅಂಕಣದಿಂದ ನಿರ್ಗಮಿಸುವ ಮೂಲಕ ಈ ಚರ್ಚೆಯ ಕಿಡಿಯನ್ನು ಪುನಃ ಹೊತ್ತಿಸಿದರು.[೧೬೨] ಅಂದಿನಿಂದಲೂ, ತಾವು ಔಟ್ ಎಂದು ತಮಗೆ ಮನವರಿಕೆಯಾಗಿದ್ದಲ್ಲಿ ಖಂಡಿತವಾಗಿಯೂ ನಿರ್ಗಮಿಸುವ ಅಥವಾ ಸುಸಂಗತವಾಗಿ ನಿರ್ಗಮಿಸುವ ಬ್ಯಾಟ್ಸ್‌ಮನ್ ಎಂದು ಅವರು ತಮ್ಮನ್ನು ಸ್ವಯಂಘೋಷಣೆ ಮಾಡಿಕೊಂಡಿದ್ದಾರೆ.[೧೬೩] ಅನೇಕ ಸಂದರ್ಭಗಳಲ್ಲಿ ಅವರು ಈ ರೀತಿ ಮಾಡಿದ್ದಾರೆ.[೧೬೨][೧೬೪] ಬಾಂಗ್ಲಾದೇಶ ವಿರುದ್ಧದ ಪಂದ್ಯವೊಂದರಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ನಿರ್ಗಮಿಸಿದ್ದುಂಟು, ಆದರೆ, ಅವರ ಬ್ಯಾಟ್ ಚೆಂಡಿಗೆ ತಾಗಿದ್ದನ್ನು TV ಮರುಪ್ರಸಾರಗಳು ದೃಢಪಡಿಸಲು ವಿಫಲವಾದವು. ಅಂತಹ ಸಂಪರ್ಕವಿಲ್ಲದಿದ್ದಲ್ಲಿ, ಅವರು ಕ್ಯಾಚ್ ಮೂಲಕ ಔಟ್ ಆಗುವ ಸಾಧ್ಯತೆಯಿರುತ್ತಿರಲಿಲ್ಲ.[೧೬೪] ಅಡಾಮ್ ಗಿಲ್‌ಕ್ರಿಸ್ಟ್‌ರ ಈ ಕ್ರಮಗಳು ಮಾಜಿ ಹಾಗೂ ಹಾಲಿ ಕ್ರಿಕೆಟ್ ಆಟಗಾರರು ಮತ್ತು ಅಂಪೈರ್‌ಗಳ ನಡುವಣ ಚರ್ಚೆ ಕಿಡಿಯನ್ನು ಹೊತ್ತಿಸಿತು.[೧೩] ತಾವು ನಿರ್ಗಮಿಸುವವನಲ್ಲ, ಆದರೆ ನಿರ್ಗಮಿಸುವುದು ಅಥವಾ ನಿರ್ಗಮಿಸದಿರುವ ವಿಚಾರವು ಇತರೆ ಆಟಗಾರರ ಇಚ್ಛೆಗೆ ಬಿಟ್ಟದ್ದು ಎಂದು ರಿಕಿ ಪಾಂಟಿಂಗ್ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.[೧೬೫] ಆಸ್ಟ್ರೇಲಿಯದ ಇತರೆ ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಾವು ನಿರ್ಗಮಿಸುವವರು ಎಂದು ಹೇಳಿಕೊಳ್ಳದಿದ್ದರೂ, 2004ರಲ್ಲಿ ಭಾರತ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯದ ಕೆಳಗಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಜೇಸನ್ ಜಿಲೆಸ್ಪಿಮತ್ತು ಮೈಕಲ್ ಕ್ಯಾಸ್ಪ್ರೊವಿಕ್ಜ್ ತಾವು ಔಟ್ ಎಂದೆನಿಸಿದಾಗ ನಿರ್ಗಮಿಸಿದ್ದರು.[೧೬೬] 2004ರಲ್ಲಿ, ನ್ಯೂಜಿಲೆಂಡ್ ನಾಯಕ ಸ್ಟೀಫೆನ್ ಫ್ಲೆಮಿಂಗ್, ಅಡಾಮ್ ಗಿಲ್‌ಕ್ರಿಸ್ಟ್‌ರ ವಿರುದ್ಧ "ನಿರ್ಗಮಿಸುವ ದಂಡಯಾತ್ರೆ" ನಡೆಸಿದ ಆರೋಪ ಮಾಡಿದ್ದರು. ನ್ಯೂಜಿಲೆಂಡ್ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡದ ಟೆಸ್ಟ್ ಪಂದ್ಯವೊಂದರಲ್ಲಿ,[೧೬೭] ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಕ್ರೇಗ್ ಮ್ಯಾಕ್ಮಿಲನ್, ಜೇಸನ್ ಜಿಲೆಸ್ಪಿ ಚೆಂಡೆಸೆತದಲ್ಲಿ ಬ್ಯಾಟಿನ ತುದಿಗೆ ತಾಕಿದಂತೆ ಕಂಡ ಚೆಂಡನ್ನು ಗಿಲ್‌ಕ್ರಿಸ್ಟ್ ಕ್ಯಾಚ್ ಹಿಡಿದ ನಂತರ ಮ್ಯಾಕ್ಮಿಲನ್ ನಿರ್ಗಮಿಸಲು ನಿರಾಕರಿಸಿದರು.[೧೬೭] ಆಟಗಾರರ ಕ್ಯಾಚ್ ಮನವಿಯನ್ನು ಅಂಪೈರ್‌ಗೆ ಬ್ಯಾಟಿನ ತುದಿಗೆ ತಾಗಿದ್ದು ಕೇಳಿಸದೇ ತಳ್ಳಿಹಾಕಿದರು. ನಂತರ, ವಿಕೆಟ್ ಕೀಪರ್ ಅಡಾಮ್ ಗಿಲ್‌ಕ್ರಿಸ್ಟ್ ಕ್ರೇಗ್ ಮ್ಯಾಕ್ಮಿಲನ್‌ಗೆ ಚೆಂಡು ಬ್ಯಾಟಿನ ತುದಿಗೆ ತಾಕಿದ ಬಗ್ಗೆ ಚುಚ್ಚಿದರು. ಕ್ರೇಗ್ ಮೆಕ್ಮಿಲನ್‌ರ ಸಿಟ್ಟಿನ ಪ್ರತಿಕ್ರಿಯೆಯು ಸ್ಟಂಪ್ ಮೈಕ್ರೊಫೊನ್ ಮೂಲಕ ಕೇಳಿತು - 'ಗಿಲ್ಲಿ, ನಿನ್ ರೀತಿ ಎಲ್ಲರೂ ನಿರ್ಗಮಿಸಲ್ಲ... ಎಲ್ಲರೂ ನಿರ್ಗಮಿಸಬೇಕಾಗಿಲ್ಲ..!' [೧೬೭] ಆದರೆ ಈ ಮೂದಲಿಕೆಯು ತನ್ನ ಪ್ರಭಾವ ಬೀರಿತ್ತು. ಬಹುಶಃ ಏಕಾಗ್ರತೆ ಕಳೆದುಕೊಂಡ ಕ್ರೇಗ್ ಮ್ಯಾಕ್ಮಿಲನ್, ಮುಂದಿನ ಚೆಂಡನ್ನು ಆಡಲು ತಪ್ಪಿಎಲ್‌ಬಿಡಬ್ಲ್ಯೂ ಔಟ್ ಆಗಿ ನಿರ್ಗಮಿಸಿದರು.[೧೬೭] 'ನನ್ನ ನಿಲುವಿಗೆ "ತಂಡದಲ್ಲಿ ಶೂನ್ಯದ ಬೆಂಬಲವಿತ್ತು". ಈ ವಿಚಾರವು ನಮ್ಮ ತಂಡದ ಉಡುಪು ಬದಲಿಸುವ ಕೋಣೆಯಲ್ಲಿ ಅಹಿತಕರ ಸ್ಥಿತಿಯನ್ನು ತಂದಿಡುತ್ತಿತ್ತೆಂದು ಭಾವಿಸುತ್ತೇನೆ.' ಎಂದು ಅಡಾಮ್ ಗಿಲ್‌ಕ್ರಿಸ್ಟ್ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿದ್ದರು.[೧೬೮]
ಈ ವಿಚಾರದಲ್ಲಿ ತಾವು "ಒಂಟಿ ಭಾವನೆ"ಯನ್ನು ಎದುರಿಸಬೇಕಾಯಿತು, ಜೊತೆಗೆ ತಂಡಕ್ಕೆ ವಂಚಿಸಿದ ಆರೋಪವನ್ನು ಸದ್ದಿಲ್ಲದೇ ಮಾಡಲಾಯಿತು ' ಎಂದೂ ಹೇಳಿದ್ದಾರೆ. ಪರೋಕ್ಷವಾಗಿ, ನಾನು ನನ್ನನ್ನು ಸ್ವಾರ್ಥಿಯೆಂದು ಪರಿಗಣಿಸುವಂತಾಯಿತು. ಇತರರು ಅಪ್ರಾಮಾಣಿಕರೆಂದು ಕಾಣುವಂತೆ ಮಾಡಿ, ನನ್ನ ಪರಿಶುದ್ಧ ವ್ಯಕ್ತಿತ್ವದ ಹಿತಕ್ಕಾಗಿ ನಾನು ನಿರ್ಗಮಿಸುತ್ತಿರುವೆನೆಂದು ಅನಿಸಿತು.[೧೬೮]
ಕ್ರಿಕೆಟ್ ಅಂಕಣದಲ್ಲಿ ಅವರ ಭಾವನಾತ್ಮಕ ಆಸ್ಫೋಟಕ್ಕಾಗಿ ಅಡಾಮ್ ಗಿಲ್‌ಕ್ರಿಸ್ಟ್ ಗಮನ ಸೆಳೆದಿದ್ದಾರೆ. ಹಲವು ಬಾರಿ ಅಂಪೈರಿಂಗ್ ತೀರ್ಪುಗಳನ್ನು ಪ್ರಶ್ನಿಸಿದ ಕಾರಣ ಅವರ ವಿರುದ್ಧ ದಂಡ ವಿಧಿಸಲಾದ ಸಂದರ್ಭಗಳೂ ಇದ್ದವು.[೧೬೯][೧೭೦][೧೭೧] ಜನವರಿ 2006ರಲ್ಲಿ, ದಕ್ಷಿಣ ಆಫ್ರಿಕಾ ತಂಡ ವಿರುದ್ಧ ODIವೊಂದರಲ್ಲಿ ಅವರಿಗೆ ತಮ್ಮ ಪಂದ್ಯ ಶುಲ್ಕದಲ್ಲಿ 40%ರಷ್ಟು ದಂಡ ವಿಧಿಸಲಾಗಿತ್ತು.[೧೬೯][೧೭೨] ಇನ್ನೊಂದು ಸಂದರ್ಭದಲ್ಲಿ, 2004ರ ಆರಂಭದಲ್ಲಿ, ಶ್ರೀಲಂಕಾದಲ್ಲಿ ನಡೆದ ಪಂದ್ಯವೊಂದರಲ್ಲಿ, ತಮ್ಮ ಬ್ಯಾಟಿಂಗ್ ಸಹವರ್ತಿ ಆಂಡ್ರ್ಯೂ ಸಿಮಂಡ್ಸ್‌ರಿಗೆ ಔಟ್ ನೀಡಿದಾಗ, ಅಂಪೈರ್ ಪೀಟರ್ ಮ್ಯಾನುಯೆಲ್‌ರೊಂದಿಗೆ ಅಡಾಮ್ ಗಿಲ್‌ಕ್ರಿಸ್ಟ್ ಎಲ್ಲರಿಗೂ ಕೇಳಿಸುವಂತೆ ವಾಗ್ವಾದ ಮಾಡಿದರು.[೧೭೩] ವಾಗ್ವಾದ ಅಂತ್ಯಗೊಂಡ ನಂತರ ಪೀಟರ್ ಮ್ಯಾನುಯೆಲ್ ತಮ್ಮ ಸಹವರ್ತಿ ಅಂಪೈರ್ ಬಿಲ್ಲಿ ಬೌಡನ್‌ರೊಂದಿಗೆ ಚರ್ಚಿಸಿ, ತಮ್ಮ ಮೊದಲಿನ ತೀರ್ಪನ್ನು ರದ್ದುಗೊಳಿಸಿದರು. ಆಂಡ್ರ್ಯೂ ಸಿಮಂಡ್ಸ್ ಅಂಕಣಕ್ಕೆ ವಾಪಸಾಗಲು ಸೂಚಿಸಿದರು.[೧೭೪] ಶ್ರೀಲಂಕಾದ ಆಫ್‌ಸ್p.್ನರ್ ಮುತ್ತಯ್ಯ ಮುರಳಿಧರನ್‌ರ ಬೌಲಿಂಗ್ ಶೈಲಿಯ ನ್ಯಾಯಬದ್ಧತೆ ಬಗ್ಗೆ 2002ರಲ್ಲಿ, ಬಹಿರಂಗವಾಗಿ ಪ್ರಶ್ನಿಸಿದ್ದಕ್ಕಾಗಿ ಗಿಲ್‌ಕ್ರಿಸ್ಟ್ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯಿಂದ ವಾಗ್ದಂಡನೆಗೆ ಗುರಿಯಾಗಿದ್ದರು.[೧೭೫] ಅವರ ಪ್ರತಿಕ್ರಿಯೆಗಳು[೧೭೫]"ಹಾನಿಕರವಾದ ಸಾರ್ವಜನಿಕ ಪ್ರತಿಕ್ರಿಯೆ"ಗೆ ಸಂಬಂಧಿಸಿದ ಆಟಗಾರರ ನಡವಳಿಕೆ ಸಂಹಿತೆಯ ಕಲಂ ಉಲ್ಲಂಘನೆಯೆಂದು ಕಂಡುಬಂತು.[೧೭೬] ಹಿಂದಿನ 2003 ಕ್ರಿಕೆಟ್ ವಿಶ್ವಕಪ್ ಪಂದ್ಯವೊಂದರಲ್ಲಿ, ಪಾಕಿಸ್ತಾನದ ರಷೀದ್ ಲತೀಫ್‌ತಮ್ಮ ಗುಂಪಿನ ಪಂದ್ಯದಲ್ಲಿ ಬ್ಯಾಟ್ ಮಾಡುತ್ತಿರುವಾಗ ತಮ್ಮ ವಿರುದ್ಧ ಜನಾಂಗೀಯ ನಿಂದನೆ ಮಾಡಿದರೆಂದು ರಷೀದ್ ಮೇಲೆ ಆರೋಪ ಹೊರಿಸಿದ್ದರು. ಪಂದ್ಯದ ರೆಫರೀ ಕ್ಲೈವ್ ಲಾಯ್ಡ್ ರಷೀದ್ ಲತೀಫ್‌ರನ್ನು ಈ ಆರೋಪದಿಂದ ಮುಕ್ತಗೊಳಿಸಿದ್ದರು. ಆಪಾದನೆ ಹೊರಿಸಿದ್ದ ಅಡಾಮ್ ಗಿಲ್‌ಕ್ರಿಸ್ಟ್ ವಿರುದ್ಧ ದಾವೆ ಹೂಡುವ ಬೆದರಿಕೆ ಹಾಕಲಾಯಿತು.[೧೭೭]
ದಾನಧರ್ಮ, ಮಾಧ್ಯಮ ಮತ್ತು ರಾಜಕೀಯ ಕಾರ್ಯಗಳು
[ಬದಲಾಯಿಸಿ]ಕ್ರಿಕೆಟ್ ಕ್ಷೇತ್ರದಿಂದ ಹೊರಗೆ, ಅಡಾಮ್ ಗಿಲ್‌ಕ್ರಿಸ್ಟ್ ಭಾರತದಲ್ಲಿ ವರ್ಲ್ಡ್ ವಿಷನ್ ಎಂಬ ಧರ್ಮದತ್ತಿ ಸಂಸ್ಥೆಯ ರಾಯಭಾರಿಯಾಗಿದ್ದಾರೆ.[೧೭೮] ತಮ್ಮ ಕ್ರಿಕೆಟ್ ಸಾಧನೆಯ ಕಾರಣ ಅಡಾಮ್ ಗಿಲ್‌ಕ್ರಿಸ್ಟ್ ಭಾರತದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಪಿತೃವಿಯೋಗವಾದ ಬಾಲಕನಿಗೆ ಈ ಸಂಸ್ಥೆಯು ಪ್ರಾಯೋಜಕತ್ವ ವಹಿಸಿಕೊಂಡಿತು.[೧೭೯] 2005ರ ಆರಂಭದಲ್ಲಿ, ತಮ್ಮ ಕ್ರಿಕೆಟ್ ವೃತ್ತಿ ಅಂತ್ಯಗೊಂಡ ನಂತರ ತಮ್ಮ ತಂಡದ ಪರ ಬೇಸ್‌ಬಾಲ್ ಆಡಿರೆಂದು ಬೊಸ್ಟನ್ ರೆಡ್ ಸಾಕ್ಸ್ ಎಂಬ US ಬೇಸ್‌ಬಾಲ್ ತಂಡವು ಅಡಾಮ್ ಗಿಲ್‌ಕ್ರಿಸ್ಟ್‌ರಿಗೆ ಆಮಂತ್ರಣ ನೀಡಿತ್ತು.[೧೮೦] ಆದರೆ, ಅವರು 2007 ಕ್ರಿಕೆಟ್ ವಿಶ್ವಕಪ್ ಆಡಲು ಆಸ್ಟ್ರೇಲಿಯ ತಂಡಕ್ಕೆ ಆಯ್ಕೆಯಾಗಿ, 2008ರ ಆರಂಭದಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಘೋಷಿಸಿದರು.[೧೮೧] ಮಾರ್ಚ್ 2008ರಲ್ಲಿ ಅಡಾಮ್ ಗಿಲ್‌ಕ್ರಿಸ್ಟ್ ನೈನ್ ನೆಟ್ವರ್ಕ್‌ಗೆ ಸೇರ್ಪಡೆಯಾದರು.[೧೮೨] ಪುನಾರಂಭಗೊಂಡ ವೈಡ್ ವರ್ಲ್ಡ್ ಆಫ್ ಸ್ಪೋರ್ಟ್ಸ್ ವೀಕೆಂಡ್ ಎಡಿಷನ್ ಕಾರ್ಯಕ್ರಮಕ್ಕಾಗಿ ಅಡಾಮ್ ಗಿಲ್‌ಕ್ರಿಸ್ಟ್ ಆವರ್ತನೆಯ ಮೇರೆಗೆ ಈ ಕಾರ್ಯಕ್ರಮದ ಸಹ-ನಿರೂಪಣೆಯ ಸಮಿತಿಯಲ್ಲಿ ಒಬ್ಬರಗಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 2008ರಲ್ಲಿ ಅವರು ಮೊದಲ ಬಾರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.[೧೮೨] ಆಸ್ಟ್ರೇಲಿಯನ್ ಋತುವಿನಲ್ಲಿ ನೈನ್ ವಾಹಿನಿ ಪ್ರಸಾರ ಮಾಡುವ ಕ್ರಿಕೆಟ್ ಪಂದ್ಯಗಳ ವೀಕ್ಷಕ ವಿವರಣೆ ನೀಡುವರು.[೧೮೨] ಮುಂಬರಲಿದ್ದ ಫೆಡರಲ್ ಚುನಾವಣೆಯಲ್ಲಿ ಪರ್ತ್‌ನ ಡಿವಿಷನ್ ಆಫ್ ಸ್ಟರ್ಲಿಂಗ್(ಪರ್ತ್ ಉತ್ತರ ಉಪನಗರ) ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಡಳಿತ ಆಸ್ಟ್ರೇಲಿಯನ್ ಲೇಬರ್ ಪಾರ್ಟಿ ಅಡಾಮ್ ಗಿಲ್‌ಕ್ರಿಸ್ಟ್‌ರಲ್ಲಿ ಪ್ರಸ್ತಾವನೆ ಮಂಡಿಸಿತು.[೧೮೩]
ಸ್ಟರ್ಲಿಂಗ್ ಒಂದು ಸಣ್ಣ ಸ್ಥಾನವಾಗಿದ್ದು, ಸಧ್ಯಕ್ಕೆ ವಿರೋಧ ಪಕ್ಷ ಲಿಬರಲ್ ಪಾರ್ಟಿಯಿಂದ ಪ್ರತಿನಿಧಿಸಲಾಗಿದೆ.
ಸಧ್ಯದ ಆಸ್ಟ್ರೇಲಿಯ ದಿನದ ಆಚರಣೆಯನ್ನು ಇನ್ಯಾವುದಾದರೂ ದಿನಾಂಕಕ್ಕೆ ನಿಗದಿಪಡಿಸಬೇಕು ಎಂದು 2008ರಲ್ಲಿ ಗಿಲ್‌ಕ್ರಿಸ್ಟ್ ಸಲಹೆ ಮಾಡಿದ್ದರು. ಏಕೆಂದರೆ ಸಧ್ಯದ ದಿನಾಂಕವು ಯುರೋಪಿಯನ್ ವಸಾಹತನ್ನು ಸಂಕೇತಿಸುತ್ತದೆ ಮತ್ತು ಮೂಲನಿವಾಸಿ ಆಸ್ಟ್ರೇಲಿಯನ್ನರ ಮೇಲೆ ಆಕ್ರಮಣ ಮಾಡಿ ಅವರ ಭೂಮಿಯನ್ನು ಕಿತ್ತುಕೊಳ್ಳಲಾಗಿತ್ತು ಎಂದು ಹೇಳಿದ್ದರು.[೧೮೪] ಅಡಾಮ್ ಗಿಲ್‌ಕ್ರಿಸ್ಟ್ ಎಡಪಂಥೀಯ ವಿಚಾರಧಾರೆಯುಳ್ಳವರೆಂದು ಪರಿಗಣಿಸಲಾಗಿತ್ತು; ಆಸ್ಟ್ರೇಲಿಯ ತಂಡದ ನಾಯಕ ರಿಕಿ ಪಾಂಟಿಂಗ್ ತಮ್ಮ ವಾರ್ಷಿಕ ನಾಯಕನ ದಿನಚರಿಯಲ್ಲಿ ನಮೂದಿಸಿರುವ ಪ್ರಕಾರ, ಅವರ ಉಪನಾಯಕರು ಪ್ರವಾಸದ ಸಮಯದಲ್ಲಿ ಕಾರ್ಲ್ ಮಾರ್ಕ್ಸ್‌ರ ಕೃತಿಗಳನ್ನು ಓದುವ ಅಬಿರುಚಿ ಹೊಂದಿದ್ದರು.[೧೮೫]
ಆತ್ಮಚರಿತ್ರೆ
[ಬದಲಾಯಿಸಿ]2008ರಲ್ಲಿ ಪ್ರಕಟಿಸಲಾದ ಅಡಾಮ್ ಗಿಲ್‌ಕ್ರಿಸ್ಟ್‌ರ ಆತ್ಮಚರಿತ್ರೆ ಟ್ರೂ ಕಲರ್ಸ್ ಅನೇಕ ವಿವಾದಗಳ ಕೇಂದ್ರಬಿಂದುವಾಗಿತ್ತು. ಹರಭಜನ್ ಸಿಂಗ್ ವಿರುದ್ಧ ಜನಾಂಗೀಯತೆ ಆರೋಪವನ್ನು ಒಳಗೊಂಡ ಮಂಕೀಗೇಟ್ ವಿವಾದದ ಕುರಿತು,ಅವರು ಹೇಳಿದ ಸಾಕ್ಷ್ಯಕ್ಕೆ ಸಂಬಂಧಿಸಿದಂತೆ ಭಾರತದ ಪ್ರಮುಖ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್‌ರ ಪ್ರಾಮಾಣಿಕತೆಯನ್ನು ಅಡಾಮ್ ಗಿಲ್‌ಕ್ರಿಸ್ಟ್ ಆ ಪುಸ್ತಕದಲ್ಲಿ ಪ್ರಶ್ನಿಸಿದ್ದಾರೆ.[೧೮೬][೧೮೭] ಹರಭಜನ್ ಆಂಡ್ರ್ಯೂ ಸಿಮಂಡ್ಸ್‌ಗೆ ಏನು ಹೇಳಿದರು ಎಂಬುದು ತಮಗೆ ಕೇಳಿಸಲಿಲ್ಲ ಎಂದು ಮೊದಲ ವಿಚಾರಣೆಯಲ್ಲಿ ಸಚಿನ್ ಸಾಕ್ಷ್ಯ ಹೇಳಿದರು. ಸಚಿನ್ ಕೂಗಳತೆಗಿಂತಲೂ ದೂರವಿದ್ದುದರಿಂದ, ಸಚಿನ್ ಹೇಗಿದ್ದರೂ "ಸತ್ಯವನ್ನೇ ಹೇಳುತ್ತಿರುವುದು ಖಂಡಿತ" ಎಂದು ಅಡಾಮ್ ಗಿಲ್‌ಕ್ರಿಸ್ಟ್ ಈ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.[೧೮೬][೧೮೭] ಹಾಗಿದ್ದಲ್ಲಿ, ಎರಡನೆಯ ವಿಚಾರಣಾ ಸಭೆಯಲ್ಲಿ ಸಿಮಂಡ್ಸ್ ಪ್ರತಿಕ್ರಿಯೆಯು ಅಶ್ಲೀಲವಾಗಿತ್ತು ಎಂಬ ಹರಭಜನ್ ಹೇಳಿಕೆಯನ್ನು ಸಚಿನ್ ಹೇಗೆ ಸಮರ್ಥಿಸಿಕೊಂಡರು ಎಂದು ಅಡಾಮ್ ಗಿಲ್‌ಕ್ರಿಸ್ಟ್ ಪ್ರಶ್ನಿಸಿ, ಈ ವಿಚಾರಣಾ ಪ್ರಕ್ರಿಯೆ ಸುಮ್ಮನೆ ಒಂದು 'ಪ್ರಹಸನ'ವಷ್ಟೇ ಎಂದು ಅವರು ನಿರ್ಣಯಿಸಿದ್ದರು.[೧೮೭] ತೆಂಡೂಲ್ಕರ್ ಕ್ರೀಡಾಮನೋಭಾವದ ಬಗ್ಗೆ ಕೂಡ ಅವರು ಪ್ರಶ್ನೆಗಳನ್ನು ಎತ್ತಿದ್ದರು. "ನಾವು ಭಾರತದ ವಿರುದ್ದ ಗೆದ್ದ ಬಳಿಕ ಉಡುಪು ಬದಲಾಯಿಸುವ ಕೋಣೆಯಲ್ಲಿ ಹಸ್ತಲಾಘವ ಪಡೆಯಲು ಅವರು ಸಿಗಲೇ ಇಲ್ಲ" ಎಂದು ಹೇಳಿದ್ದಾರೆ.[೧೮೬][೧೮೮] ಅಡಾಮ್ ಗಿಲ್‌ಕ್ರಿಸ್ಟ್‌ರ ಈ ಅಭಿಪ್ರಾಯದ ಬಗ್ಗೆ ಭಾರತದಲ್ಲಿ ಟೀಕೆಯ ಅಲೆಗಳೆದ್ದವು. ಅಡಾಮ್ ಗಿಲ್‌ಕ್ರಿಸ್ಟ್ ಕೂಡಲೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಯಿತು. ತಾವು ಸಚಿನ್‌ರ ಮೇಲೆ ಸುಳ್ಳಿನ ಆಪಾದನೆಯನ್ನು ಹೊರಿಸಿಲ್ಲ ಎಂದು ಅವರು ಸಾಕ್ಷ್ಯದಲ್ಲಿ ಒತ್ತಿ ಹೇಳಬೇಕಾಯಿತು. ಕೈಕುಲುಕಿನ ವಿಚಾರದಲ್ಲಿ ಅವರು ಸಚಿನ್‌ರನ್ನು 'ಕ್ರೀಡಾ ಮನೋಭಾವವಿಲ್ಲದವರು' ಎಂದು ಜರಿದಿರುವ ಆಪಾದನೆಯನ್ನು ತಳ್ಳಿಹಾಕಿದರು.[೧೮೬][೧೮೯] ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿನ್ ತೆಂಡುಲ್ಕರ್ ಹೀಗೆ ಹೇಳಿದರು: 'ನನ್ನನ್ನು ಸಾಕಷ್ಟು ಬಲ್ಲದವರಿಂದ ಆ ಪ್ರತಿಕ್ರಿಯೆಗಳು ಬಂದವು. ಅವರು ಹಿಡಿತವಿಲ್ಲದ ಹೇಳಿಕೆಗಳನ್ನು ನೀಡಿದ್ದಾರೆ ಅಂತ ನನಗನಿಸುತ್ತದೆ... ಸಿಡ್ನಿಯಲ್ಲಿ ಸೋತ ನಂತರ ಅವರ ಕೈಕುಲುಕಿದವರಲ್ಲಿ ನಾನೇ ಮೊದಲು ಎಂದು ನಾನು ಅವರಿಗೆ ನೆನಪು ಮಾಡಿದೆ.' [೧೯೦] ಮುರಳಿಧರನ್ ಪುನಃ ಬೌಲ್ ಮಾಡಲು ಅವಕಾಶ ನೀಡಿದ ICCಯನ್ನು ಈ ಆತ್ಮಚರಿತ್ರೆಯಲ್ಲಿ ಟೀಕಿಸಲಾಗಿದೆ; ತಾವು ನ್ಯಾಯಸಮ್ಮತವಲ್ಲ ಎಂದು ಪರಿಗಣಿಸಿರುವ ಬೌಲಿಂಗ್ ಶೈಲಿಯನ್ನು ಕಾನೂನುಬದ್ಧಗೊಳಿಸಲು ICC ಚೆಂಡೆಸೆತದ ನಿಯಮಗಳನ್ನು ತಿದ್ದಿತು ಎಂದು ಅಡಾಮ್ ಗಿಲ್‌ಕ್ರಿಸ್ಟ್ ನಂಬಿದ್ದಾರೆ. ನಿಯಮದ ಬದಲಾವಣೆಯು 'ಕುದುರೆಯ ಲದ್ದಿಯ ರಾಶಿ, ಇವೆಲ್ಲ ಅಸಂಬದ್ಧ' ಎಂದು ಬಣ್ಣಿಸಿದರು.[೧೯೧][೧೯೨] ಮುರಳಿಧರನ್ ಚೆಂಡನ್ನು ಎಸೆಯುತ್ತಾರೆ. ಶ್ರೀಲಂಕಾ ಕ್ರಿಕೆಟ್ ಅಧಿಕಾರವರ್ಗವು ಬೌಲರ್ ಬೌಲಿಂಗ್‌ನ ನ್ಯಾಯಬದ್ಥತೆಯನ್ನು ಪ್ರಶ್ನಿಸುವ ಯಾವುದೇ ಟೀಕೆಯನ್ನು ಜನಾಂಗೀಯ ಹಾಗೂ ಬಿಳಿಯರು ದ್ವೇಷಸಾಧನೆ ಮಾಡುತ್ತಿದ್ದಾರೆಂದು ಬಿಂಬಿಸಿದ್ದರಿಂದ ICC ಅವರನ್ನು ರಕ್ಷಿಸಿತು.[೧೯೨][೧೯೩] ಈ ಹೇಳಿಕೆಗೆ ಪ್ರತ್ಯುತ್ತರವಾಗಿ, 'ತಾವು ಮುರಳಿಧರನ್ ಮುತ್ತು ಸಚಿನ್‌ರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದರ ಮೂಲಕ, ಅಡಾಮ್ ಗಿಲ್‌ಕ್ರಿಸ್ಟ್ ತಮ್ಮದೇ ಖ್ಯಾತಿಗೆ ಚ್ಯುತಿ ತಂದುಕೊಂಡಿದ್ದಾರೆ' ಎಂದು ಮಾಜಿ ಶ್ರೀಲಂಕಾ ನಾಯಕ ಮರ್ವನ್ ಅಟಪಟ್ಟು ಹೇಳಿದರು.[೧೯೪]
ಸಾಧನೆಗಳು
[ಬದಲಾಯಿಸಿ]ಪ್ರಶಸ್ತಿಗಳು
[ಬದಲಾಯಿಸಿ]ವರ್ಷದ ವಿಸ್ಡೆನ್ ಕ್ರಿಕೆಟ್ ಆಟಗಾರ ಪಟ್ಟಿಯಲ್ಲಿ 2002ರಲ್ಲಿ ಇದ್ದವರಲ್ಲಿ ಗಿಲ್‌ಕ್ರಿಸ್ಟ್ ಒಬ್ಬರು.[೧೯೫] 2003 ಮತ್ತು 2004 ವರ್ಷಗಳಲ್ಲಿ ಅವರು ಆಸ್ಟ್ರೇಲಿಯದ ವರ್ಷದ ಏಕದಿನ ಅಂತಾರಾಷ್ಟ್ರೀಯ ಆಟಗಾರರಾಗಿದ್ದರು.[೧]
2003ರಲ್ಲಿ ಅವರು ಅಲ್ಯಾನ್ ಬಾರ್ಡರ್ ಪದಕ ಪುರಸ್ಕೃತರಾಗಿದ್ದರು.[೧೯೬] 2004ರಲ್ಲಿ ರಿಚಿ ಬೆನಾಡ್‌ರ ಗ್ರೇಟೆಸ್ಟ್ XI ತಂಡದ ಆಟಗಾರರ ಪೈಕಿ ಪ್ರಸಕ್ತ ಆಡುತ್ತಿರುವ ಏಕೈಕ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರ ಎನಿಸಿದರು.[೧೯೭] ಮುಂಚಿನ 2004-05 ಋತುವಿನಲ್ಲಿ ACC ಏಷ್ಯನ್ XI ತಂಡದ ವಿರುದ್ಧ ಧರ್ಮದತ್ತಿ ಸರಣಿಗಾಗಿ ಅವರು ICC ವಿಶ್ವ XI ತಂಡದ ಪರ ಆಯ್ಕೆಯಾದರು.[೧೯೮] ಅಂತಾರಾಷ್ಟ್ರೀಯ ಬೌಲರ್‌ಗಳ ಸಮೀಕ್ಷೆಯೊಂದರ ಪ್ರಕಾರ, ಇವರು 'ವಿಶ್ವದ ಅತಿ ಹೆದರಿಕೆಹುಟ್ಟಿಸುವ ಬ್ಯಾಟ್ಸ್‌ಮನ್' ಆಗಿದ್ದರು.[೧೯೯] ಇವಿಷ್ಟೇ ಅಲ್ಲದೆ, ಆಸ್ಟ್ರೇಲಿಯದ 'ಸರ್ವಕಾಲಿಕ ಶ್ರೇಷ್ಠ ODI ತಂಡ'ದಲ್ಲಿ ವಿಕೆಟ್-ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗಿದ್ದರು.[೨೦೦]
2007ರಲ್ಲಿ ಕ್ರಿಕ್‌ಇನ್ಫೊ ಆಯೋಜಿಸಿದ ಹತ್ತು ಸಾವಿರ ಜನರನ್ನೊಳಗೊಂಡ ಒಂದು ಸಮೀಕ್ಷೆಯಲ್ಲಿ, ಕಳೆದ ಒಂದು ನೂರು ವರ್ಷಗಳಲ್ಲಿ ಒಂಬತ್ತನೆಯ ಶ್ರೇಷ್ಠ ಆಲ್‌ರೌಂಡರ್ ಆಗಿ ಆಯ್ಕೆಯಾಗಿದ್ದರು.[೨೦೧] ಕ್ರಿಕ್ ಇನ್ಫೊಗಾಗಿ ಆಸ್ಟ್ರೇಲಿಯದ ಸರ್ವಕಾಲಿಕ ಶ್ರೇಷ್ಠ XI ತಂಡವೊಂದರಲ್ಲಿ ಖ್ಯಾತ ಕ್ರಿಕೆಟ್ ಅಂಕಣಕಾರರ ಸಮಿತಿಯು ಅಡಾಮ್ ಗಿಲ್‌ಕ್ರಿಸ್ಟ್‌ರನ್ನು ಆಯ್ಕೆ ಮಾಡಿತು.
ಟೆಸ್ಟ್ ಪಂದ್ಯಗಳಲ್ಲಿ ಸಾಧನೆ
[ಬದಲಾಯಿಸಿ]ಟೆಸ್ಟ್ ವೃತ್ತಿಯ ಆರಂಭ: 1999-2000 ಋತುವಿನಲ್ಲಿ, ಪಾಕಿಸ್ತಾನ ವಿರುದ್ಧ ಬ್ರಿಸ್ಬೇನ್‌ನಲ್ಲಿ [೭೦]
- ಅಡಾಮ್ ಗಿಲ್‌ಕ್ರಿಸ್ಟ್‌ರ ಅತ್ಯುತ್ತಮ ಬ್ಯಾಟಿಂಗ್ ಸ್ಕೋರ್ ಅಜೇಯ 204 - ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ 2001–2002 ಋತುವಿನಲ್ಲಿ.[೨೦೨]
- ಅವರು ಆರು ಬಾರಿ ಆಸ್ಟ್ರೇಲಿಯ ತಂಡದ ನಾಯಕತ್ವ ವಹಿಸಿಕೊಂಡಿದ್ದರು: ನಾಲ್ಕರಲ್ಲಿ ಜಯ, ಒಂದು ಸೋಲು, ಒಂದು ಡ್ರಾ.[೧೫]
- ಟೆಸ್ಟ್ ವೃತ್ತಿಜೀವನದಲ್ಲಿ 100 ಸಿಕ್ಸರ್‌ಗಳೊಂದಿಗೆ ಅತಿ ಹೆಚ್ಚು ಸಿಕ್ಸರ್ ಹೊಡೆದ ದಾಖಲೆ ಅಡಾಮ್ ಗಿಲ್‌ಕ್ರಿಸ್ಟ್‌ರ ಹೆಸರಿನಲ್ಲಿದೆ.[೮]
- ಎರಡನೆಯ ಅತಿವೇಗದ ಟೆಸ್ಟ್ ಶತಕದ ದಾಖಲೆ (57 ಚೆಂಡೆಸೆತಗಳಲ್ಲಿ 100 ರನ್)vs ಇಂಗ್ಲೆಂಡ್, 16 ಡಿಸೆಂಬರ್ 2006ರಂದು.[೨೦೩]
- ವಿಕೆಟ್ ಕೀಪರ್ ಗಳಿಸಿದ ಎರಡನೆಯ ಅತಿಹೆಚ್ಚು ಟೆಸ್ಟ್ ಔಟ್‌ಗಳು (416), 4 ಫೆಬ್ರುವರಿ 2008.[೫]
- ವಿಕೆಟ್-ಕೀಪರ್ ಗಳಿಸಿದ ಅತಿ ಹೆಚ್ಚು ಟೆಸ್ಟ್ ಶತಕಗಳು ಅವರ ಹೆಸರಿನಲ್ಲಿದೆ (17) - 4 ಫೆಬ್ರುವರಿ 2008.[೯]
ಬ್ಯಾಟಿಂಗ್[೨೦೪] | ಕ್ಷೇತ್ರರಕ್ಷಣೆ[೨೦೫] | ||||||
---|---|---|---|---|---|---|---|
ಎದುರಾಳಿ ತಂಡ | ಪಂದ್ಯಗಳು | ರನ್‌ಗಳು | ಸರಾಸರಿ | ಅತ್ಯಧಿಕ ಸ್ಕೋರ್ | 100 / 50 | ಕ್ಯಾಚ್‌ಗಳು | ಸ್ಟಂಪಿಂಗ್‌ಗಳು |
ಬಾಂಗ್ಲಾದೇಶ | 4 | 199 | 66.33 | 144 | 1/0 | 14 | 1 |
ಇಂಗ್ಲೆಂಡ್ | 20 | 1,083 | 45.12 | 152* | 3 / 6 | 89 | 7 |
ICC ವಿಶ್ವ XI | 1 | 95 | 47.50 | 94 | 0/1 | 5 | 2 |
ಭಾರತ | 14 | 659 | 27.89 | 122 | 2/2 | 48 | 2 |
ನ್ಯೂಜಿಲೆಂಡ್ | 11 | 923 | 76.91 | 162 | 4/5 | 38 | 3 |
ಪಾಕಿಸ್ತಾನ | 9 | 616 | 68.44 | 149* | 2/3 | 34 | 4 |
ದಕ್ಷಿಣ ಆಫ್ರಿಕಾ | 12 | 754 | 47.12 | 204* | 2/2 | 39 | 5 |
ಶ್ರೀಲಂಕಾ | 7 | 383 | 42.55 | 144 | 1/2 | 32 | 5 |
ವೆಸ್ಟ್ ಇಂಡೀಸ್ | 12 | 575 | 47.91 | 101* | 1/4 | 46 | 6 |
ಜಿಂಬಾಬ್ವೆ | 1 | 146 | 133.00 | 113* | 1/0 | 9 | 2 |
ಒಟ್ಟಾರೆ | 92 | 5,420 | 47.60 | 204* | 17/25 | 354 | 37 |
ಪಂದ್ಯದ ಪುರುಷೋತ್ತಮ ಪ್ರಶಸ್ತಿಗಳು (ಟೆಸ್ಟ್ ಪಂದ್ಯಗಳು)
[ಬದಲಾಯಿಸಿ]ದಿನಾಂಕ | ಎದುರಾಳಿ | ಕ್ರಿಕೆಟ್ ಮೈದಾನ | ದಾಖಲೆ ಅಥವಾ ಸ್ಕೋರ್ ವಿವರ[೨೦೬] |
---|---|---|---|
3 ಎಪ್ರಿಲ್ 2000 | ನ್ಯೂಜಿಲೆಂಡ್ | ವೆಸ್ಟ್‌ಪ್ಯಾಕ್ ಟ್ರಸ್ಟ್ ಪಾರ್ಕ್, ಹ್ಯಾಮಿಲ್ಟನ್ | 75 ರನ್‌ಗಳು, 10 ಕ್ಯಾಚ್‌ಗಳು |
1 ಮಾರ್ಚ್ 2001 | ಭಾರತ | ವಾಂಖಡೆ ಕ್ರೀಡಾಂಗಣ, ಮುಂಬಯಿ | 122 ರನ್‌ಗಳು, 6 ಕ್ಯಾಚ್‌ಗಳು |
9 ಜುಲೈ 2001 | ಇಂಗ್ಲೆಂಡ್ | ಎಡ್ಜ್‌ಬ್ಯಾಸ್ಟನ್, ಬರ್ಮಿಂಗ್‌ಹ್ಯಾಮ್ | 152 ರನ್‌ಗಳು, 2 ಕ್ಯಾಚ್‌ಗಳು |
26 ಫೆಬ್ರುವರಿ 2002 | ದಕ್ಷಿಣ ಆಫ್ರಿಕಾ | ನ್ಯೂ ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್ | 204*, 3 ಕ್ಯಾಚ್‌ಗಳು, 1 ಸ್ಟಂಪಿಂಗ್ |
13 ಮಾರ್ಚ್ 2005 | ನ್ಯೂಜಿಲೆಂಡ್ | ಜೇಡ್ ಕ್ರೀಡಾಂಗಣ, ಕ್ರೈಸ್ಟ್‌ಚರ್ಚ್ | 121 ರನ್‌ಗಳು, 3 ಕ್ಯಾಚ್‌ಗಳು |
22 ಮಾರ್ಚ್ 2005 | ನ್ಯೂಜಿಲೆಂಡ್ | ಬೇಸಿನ್ ರಿಸರ್ವ್, ವೆಲಿಂಗ್ಟನ್ | 162 ರನ್‌ಗಳು, 2 ಕ್ಯಾಚ್‌ಗಳು |
13 ಏಪ್ರಿಲ್ 2006 | ಬಾಂಗ್ಲಾದೇಶ | ನಾರಾಯಣಗಂಜ್ ಉಸ್ಮಾನಿ ಕ್ರೀಡಾಂಗಣ, ಫತುಲ್ಲಾ | 144, 12, 1 ಕ್ಯಾಚ್, 1 ಸ್ಟಂಪಿಂಗ್ |
ಸರಣಿ ಪುರುಷೋತ್ತಮ ಪ್ರಶಸ್ತಿಗಳು (ಟೆಸ್ಟ್ ಪಂದ್ಯ ಸರಣಿಗಳು)
[ಬದಲಾಯಿಸಿ]ದಿನಾಂಕ | ಎದುರಾಳಿ | ದಾಖಲೆ/ಸರಣಿ ವಿವರ[೨೦೬] |
---|---|---|
ಫೆಬ್ರವರಿ-ಏಪ್ರಿಲ್ 2002 | ದಕ್ಷಿಣ ಆಫ್ರಿಕಾ | 157.66 ಸರಾಸರಿಯಲ್ಲಿ 473 ರನ್‌ಗಳು, 13 ಕ್ಯಾಚ್‌ಗಳು, 1 ಸ್ಟಂಪಿಂಗ್ (ಮೂರು ಪಂದ್ಯಗಳ ಸರಣಿ) |
ಮಾರ್ಚ್ 2005 |
ನ್ಯೂಜಿಲೆಂಡ್ | 171.50 ಸರಾಸರಿಯಲ್ಲಿ 343 ರನ್‌ಗಳು, 7 ಕ್ಯಾಚ್‌ಗಳು (ಮೂರು ಪಂದ್ಯಗಳ ಸರಣಿ) |
ಅಕ್ಟೋಬರ್ 2005 |
ICC ವಿಶ್ವ XI | 47.50 ಸರಾಸರಿಯಲ್ಲಿ 95 ರನ್‌ಗಳು, 5 ಕ್ಯಾಚ್‌ಗಳು, 2 ಸ್ಟಂಪಿಂಗ್‌ಗಳು (ಒಂದು ಟೆಸ್ಟ್ ಪಂದ್ಯ) |
ODIಗಳಲ್ಲಿ ಮುಖ್ಯಾಂಶಗಳು
[ಬದಲಾಯಿಸಿ]ODIಗಳಲ್ಲಿ ವೃತ್ತಿಯ ಆರಂಭ: ದಕ್ಷಿಣ ಆಫ್ರಿಕಾ ವಿರುದ್ಧ, ಫರಿದಾಬಾದ್, 1996–97.[೪೬]
- ವಿಕೆಟ್-ಕೀಪರ್ ಆಗಿ ODIಗಳಲ್ಲಿ ಅತಿ ಹೆಚ್ಚು ಔಟ್ ಗಳಿಸಿದ ದಾಖಲೆ (455*), 4 ಫೆಬ್ರುವರಿ 2008.[೬]
- ಅಡಾಮ್ ಗಿಲ್‌ಕ್ರಿಸ್ಟ್‌ರ ಅತ್ಯುನ್ನತ ODIದ ಬ್ಯಾಟಿಂಗ್ ಸ್ಕೋರ್ 172, ಜಿಂಬಾಬ್ವೆ ವಿರುದ್ಧ, ಹೋಬಾರ್ಟ್‌ನಲ್ಲಿ. 2003–04.[೨೦೭]
- 15 ODIಗಳಲ್ಲಿ ಅವರು ಆಸ್ಟ್ರೇಲಿಯ ತಂಡದ ನಾಯಕತ್ವ ವಹಿಸಿದ್ದಾರೆ: 11ರಲ್ಲಿ ಗೆಲುವು, 4 ಸೋಲುಗಳು [೧೬]
- ODIಗಳಲ್ಲಿ ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್ ಹೊಡೆದ ಎರಡನೆಯ ಅತಿವೇಗದ ಶತಕದ ದಾಖಲೆ ಅಡಾಮ್ ಗಿಲ್‌ಕ್ರಿಸ್ಟ್‌ರ ಹೆಸರಲ್ಲಿದೆ (ಶ್ರೀಲಂಕಾ ವಿರುದ್ಧ 67 ಚೆಂಡೆಸೆತಗಳಲ್ಲಿ 100; 14 ಫೆಬ್ರುವರಿ 2006), ಅಂತಾರಾಷ್ಟ್ರೀಯವಾಗಿ, ಇದು ಒಟ್ಟಾರೆ ಒಂಬತ್ತನೆಯ ಅತಿ ವೇಗದ ಶತಕವಾಗಿದೆ.[೨೦೮]
- ODIಗಳಲ್ಲಿ ವಿಕೆಟ್-ಕೀಪರ್ ಗಳಿಸಿದ ಅತಿ ಹೆಚ್ಚು ಶತಕಗಳು (15), 4 ಫೆಬ್ರುವರಿ 2008.[೧೦]
ಬ್ಯಾಟಿಂಗ್[೨೦೯] | ಕ್ಷೇತ್ರರಕ್ಷಣೆ[೨೧೦] | ||||||
---|---|---|---|---|---|---|---|
ಎದುರಾಳಿ | ಪಂದ್ಯಗಳು | ರನ್‌ಗಳು | ಸರಾಸರಿ | ಅತ್ಯಧಿಕ ಸ್ಕೋರ್ | 100 / 50 | ಕ್ಯಾಚ್‌ಗಳು | ಸ್ಟಂಪಿಂಗ್‌ಗಳು |
ಏಷ್ಯಾ XI | 1 | 24 | 24.00 | 24 | 0/0 | 1 | 1 |
ಬಾಂಗ್ಲಾದೇಶ | 12 | 444 | 55.50 | 76 | 0/5 | 23 | 4 |
ಇಂಗ್ಲೆಂಡ್ | 35 | 1087 | 32.94 | 124 | 2/6 | 60 | 4 |
ICC ವಿಶ್ವ XI | 3 | 180 | 60.00 | 103 | 1/0 | 2 | 0 |
ಭಾರತ | 40 | 1568 | 41.26 | 111 | 1/12 | 63 | 4 |
ಐರ್ಲೆಂಡ್ | 1 | 34 | 34.00 | 34 | 1/0 | 0 | 0 |
ಕೀನ್ಯಾ | 3 | 130 | 43.33 | 67 | 0/1 | 4 | 1 |
ನಮೀಬಿಯಾ | 1 | 13 | 13.00 | 13 | 0/0 | 6 | 0 |
ನೆದರ್ಲೆಂಡ್ಸ್ | 1 | 57 | 57.00 | 57 | 0/1 | 0 | 1 |
ನ್ಯೂಜಿಲೆಂಡ್ | 41 | 1195 | 31.45 | 128 | 2/7 | 55 | 6 |
ಪಾಕಿಸ್ತಾನ | 24 | 761 | 33.08 | 103 | 1/5 | 39 | 5 |
ಸ್ಕಾಟ್‌ಲೆಂಡ್ | 2 | 52 | 26.00 | 46 | 0/0 | 3 | 1 |
ದಕ್ಷಿಣ ಆಫ್ರಿಕಾ | 44 | 1127 | 28.18 | 105 | 2/6 | 60 | 9 |
ಶ್ರೀಲಂಕಾ | 27 | 1243 | 45.76 | 154 | 5/2 | 27 | 6 |
ಅಮೆರಿಕಾ ಸಂಯುಕ್ತ ಸಂಸ್ಥಾನ | 1 | 24 | - | 24* | 0/0 | 2 | 0 |
ವೆಸ್ಟ್ ಇಂಡೀಸ್ | 25 | 735 | 30.63 | 98 | 0/5 | 33 | 4 |
ಜಿಂಬಾಬ್ವೆ | 15 | 572 | 38.13 | 172 | 1/2 | 20 | 6 |
ಒಟ್ಟಾರೆ | 268 | 9038 | 38.69 | 172 | 15/50 | 386 | 50 |
ಪಂದ್ಯದ ಪುರುಷೋತ್ತಮ ಪ್ರಶಸ್ತಿಗಳು (ODIಗಳು)
[ಬದಲಾಯಿಸಿ]ದಿನಾಂಕ | ಎದುರಾಳಿ | ಕ್ರಿಕೆಟ್ ಮೈದಾನ | ದಾಖಲೆ/ ಸ್ಕೋರ್ ವಿವರ[೨೧೧] |
---|---|---|---|
26 ಜನವರಿ 1998 | ದಕ್ಷಿಣ ಆಫ್ರಿಕಾ | SCG, ಸಿಡ್ನಿ | 100 ರನ್‌ಗಳು, 1 ಕ್ಯಾಚ್ |
8 ಫೆಬ್ರುವರಿ 1998 | ನ್ಯೂಜಿಲೆಂಡ್ | SCG, ಸಿಡ್ನಿ | 118 ರನ್‌ಗಳು |
13 ಜನವರಿ 1999 | ಶ್ರೀಲಂಕಾ | SCG, ಸಿಡ್ನಿ | 131 ರನ್‌ಗಳು, 3 ಕ್ಯಾಚ್‌ಗಳು |
7 ಫೆಬ್ರುವರಿ 1999 | ಶ್ರೀಲಂಕಾ | MCG, ಮೆಲ್ಬೊರ್ನ್ | 154 ರನ್‌ಗಳು, 2 ಕ್ಯಾಚ್‌ಗಳು |
24 ಏಪ್ರಿಲ್ 1999 | ವೆಸ್ಟ್ ಇಂಡೀಸ್ | ಕೆನ್ಸಿಂಗ್ಟನ್ ಓವಲ್, ಬ್ರಿಡ್ಜ್‌ಟೌನ್ | 64 ರನ್‌ಗಳು, 2 ಕ್ಯಾಚ್‌ಗಳು, 1 ಸ್ಟಂಪಿಂಗ್ |
28 ಆಗಸ್ಟ್ 1999 |
ಭಾರತ | ಸಿನ್ಹಾಲೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನ, ಕೊಲಂಬೊ | 77 ರನ್‌ಗಳು, 3 ಕ್ಯಾಚ್‌ಗಳು |
23 ಫೆಬ್ರುವರಿ 2000 | ನ್ಯೂಜಿಲೆಂಡ್ | ಕ್ಯಾರಿಸ್ಬ್ರೂಕ್, ಡನೆಡಿನ್ | 77 ರನ್‌ಗಳು, 1 ಕ್ಯಾಚ್ |
26 ಫೆಬ್ರುವರಿ 2000 | ನ್ಯೂಜಿಲೆಂಡ್ | ಜೇಡ್ ಕ್ರೀಡಾಂಗಣ, ಕ್ರೈಸ್ಟ್‌ಚರ್ಚ್ | 128 ರನ್‌ಗಳು, 2 ಕ್ಯಾಚ್‌ಗಳು |
23 ಜೂನ್ 2001 | ಪಾಕಿಸ್ತಾನ | ಲಾರ್ಡ್ಸ್, ಲಂಡನ್ | 76* ರನ್‌ಗಳು, 1 ಕ್ಯಾಚ್ |
3 ಏಪ್ರಿಲ್ 2002 | ದಕ್ಷಿಣ ಆಫ್ರಿಕಾ | ಕಿಂಗ್ಸ್‌ಮೀಡ್, ಡರ್ಬನ್ | 105 ರನ್‌ಗಳು, 3 ಕ್ಯಾಚ್‌ಗಳು |
6 ಏಪ್ರಿಲ್ 2002 |
ದಕ್ಷಿಣ ಆಫ್ರಿಕಾ | ಸೇಂಟ್ ಜಾರ್ಜ್ಸ್ ಪಾರ್ಕ್, ಪೋರ್ಟ್ ಎಲಿಜಬೆತ್ |
52 ರನ್‌ಗಳು |
12 ಜೂನ್ 2002 | ಪಾಕಿಸ್ತಾನ | MCG, ಮೆಲ್ಬೊರ್ನ್ | 56 ರನ್‌ಗಳು, 4 ಕ್ಯಾಚ್‌ಗಳು, 1 ಸ್ಟಂಪಿಂಗ್ |
15 ಡಿಸೆಂಬರ್ 2002 | ಇಂಗ್ಲೆಂಡ್ | MCG, ಮೆಲ್ಬೊರ್ನ್ | 124 ರನ್‌ಗಳು |
24 ಮೇ 2003 | ಇಂಗ್ಲೆಂಡ್ | ಕ್ವೀನ್ಸ್ ಪಾರ್ಕ್ ಒವಲ್, ಪೋರ್ಟ್ ಆಫ್ ಸ್ಪೇನ್ |
84 ರನ್‌ಗಳು |
12 ನವೆಂಬರ್ 2003 | ಭಾರತ | ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | 111 ರನ್‌ಗಳು |
16 ಜನವರಿ 2004 | ಜಿಂಬಾಬ್ವೆ | ಬೆಲ್‌ರೈವ್ ಒವಲ್, ಹೋಬಾರ್ಟ್ | 172 ರನ್‌ಗಳು, 3 ಕ್ಯಾಚ್‌ಗಳು |
1 ಫೆಬ್ರುವರಿ 2004 | ಭಾರತ | WACA ಮೈದಾನ, ಪರ್ತ್ | 75 ರನ್‌ಗಳು, 3 ಕ್ಯಾಚ್‌ಗಳು |
1 ಮಾರ್ಚ್ 2005 | ನ್ಯೂಜಿಲೆಂಡ್ | ಬೇಸಿನ್ ರಿಸರ್ವ್, ವೆಲ್ಲಿಂಗ್ಟನ್ | 54 ರನ್‌ಗಳು, 2 ಕ್ಯಾಚ್‌ಗಳು |
12 ಜುಲೈ 2005 | ಇಂಗ್ಲೆಂಡ್ | ದಿ ಒವಲ್, ಲಂಡನ್ | 121* ರನ್‌ಗಳು, 2 ಕ್ಯಾಚ್‌ಗಳು |
7 ಅಕ್ಟೋಬರ‍್ 2005 | ICC ವಿಶ್ವ XI | ಡಾಕ್ಲೆಂಡ್ಸ್ ಕ್ರೀಡಾಂಗಣ, ಮೆಲ್ಬೊರ್ನ್ | 103 ರನ್‌ಗಳು, 1 ಕ್ಯಾಚ್ |
29 ಜನವರಿ 2006. | ಶ್ರೀಲಂಕಾ | WACA ಮೈದಾನ, ಪರ್ತ್ | 116 ರನ್‌ಗಳು, 1 ಕ್ಯಾಚ್ |
5 ಫೆಬ್ರುವರಿ 2006 | ದಕ್ಷಿಣ ಆಫ್ರಿಕಾ | SCG, ಸಿಡ್ನಿ | 88 ರನ್‌ಗಳು, 2 ಕ್ಯಾಚ್‌ಗಳು |
14 ಫೆಬ್ರುವರಿ 2006 | ಶ್ರೀಲಂಕಾ | ಗಬ್ಬಾ, ಬ್ರಿಸ್ಬೇನ್ | 122 ರನ್‌ಗಳು |
23 ಏಪ್ರಿಲ್ 2006 | ಬಾಂಗ್ಲಾದೇಶ | ಚಿತ್ತಗಾಂಗ್ | 76 ರನ್‌ಗಳು, 4 ಕ್ಯಾಚ್‌ಗಳು, 1 ಸ್ಟಂಪಿಂಗ್ |
12 ಜನವರಿ 2007 | ಇಂಗ್ಲೆಂಡ್ | MCG, ಮೆಲ್ಬೊರ್ನ್ | 60 ರನ್‌ಗಳು, 1 ಕ್ಯಾಚ್ |
28 ಏಪ್ರಿಲ್ 2007 | ಶ್ರೀಲಂಕಾ | ಕೆನ್ಸಿಂಗ್ಟನ್ ಒವಲ್, ಬಾರ್ಬೆಡೊಸ್ | 149 ರನ್‌ಗಳು, 1 ಕ್ಯಾಚ್ |
15 ಫೆಬ್ರುವರಿ 2008 | ಶ್ರೀಲಂಕಾ | WACA ಮೈದಾನ, ಪರ್ತ್ | 118 ರನ್‌ಗಳು, 1 ಕ್ಯಾಚ್ |
29 ಫೆಬ್ರುವರಿ 2008 | ಶ್ರೀಲಂಕಾ | MCG, ಮೆಲ್ಬೊರ್ನ್ | 83 ರನ್‌ಗಳು, 1 ಕ್ಯಾಚ್ |
ಸರಣಿ ಪುರುಷೋತ್ತಮ ಪ್ರಶಸ್ತಿಗಳು (ODI ಸರಣಿಗಳು)
[ಬದಲಾಯಿಸಿ]ದಿನಾಂಕ | ಎದುರಾಳಿ | ದಾಖಲೆಗಳು/ ಸರಣಿ ಕೊಂಡಿ[೨೧೧] |
---|---|---|
ಆಗಸ್ಟ್ 1999 | ಶ್ರೀಲಂಕಾ, ಭಾರತ | ಐದು ಪಂದ್ಯಗಳಲ್ಲಿ 46.20 ಸರಾಸರಿಯಲ್ಲಿ 231 ರನ್‌ಗಳು, 8 ಕ್ಯಾಚ್‌ಗಳು, 2 ಸ್ಟಂಪಿಂಗ್‌ಗಳು |
ಜನವರಿ-ಫೆಬ್ರುವರಿ 2004 | ಭಾರತ, ಜಿಂಬಾಬ್ವೆ | ಹತ್ತು ಪಂದ್ಯಗಳಿಂದ 62.25 ಸರಾಸರಿಯಲ್ಲಿ 498 ರನ್‌ಗಳು, 16 ಕ್ಯಾಚ್‌ಗಳು, 1 ಸ್ಟಂಪಿಂಗ್(ಹತ್ತು ಪಂದ್ಯಗಳು) |
ಅಕ್ಟೋಬರ್ 2005 | ICC ವಿಶ್ವ XI | 60.00 ಸರಾಸರಿಯಲ್ಲಿ 180 ರನ್‌ಗಳು, 2 ಕ್ಯಾಚ್‌ಗಳು(ಮೂರು ಪಂದ್ಯಗಳು) |
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ "Adam Gilchrist biography". Cricinfo. Retrieved 2007-02-20.
- ↑ Brett, Oliver (17 September). "No room at the inns". BBC Sport. Retrieved 2007-02-23.
{{cite web}}
: Check date values in:|date=
(help) - ↑ Irish, Oliver (2003-02-02). "The lowdown on Pool A". Observer Sport Monthly. Retrieved 2007-02-22.
- ↑ "Sri Lanka one-day squad to tour England 2006". England and Wales Cricket Board. Archived from the original on 2007-04-07. Retrieved 2007-02-22.
- ↑ ೫.೦ ೫.೧ "Records - Test Cricket - Most dismissals in career". Cricinfo. Retrieved 2007-02-04.
- ↑ ೬.೦ ೬.೧ "Cricinfo - Records - One-Day Internationals - Most dismissals in a career". Cricinfo. Retrieved 2007-02-04.
- ↑ ೭.೦ ೭.೧ Brenkley, Stephen (2006-12-17). "Gilchrist's hammer leaves England out on their feet". The Independent. Archived from the original on 2007-10-16. Retrieved 2007-02-20.
- ↑ ೮.೦ ೮.೧ "Tests – Most Sixes in a Career". Cricinfo. Retrieved 2007-02-20.
- ↑ ೯.೦ ೯.೧ "StatsGuru - Most Centuries by wicketkeeper - Tests". Cricinfo. Retrieved 2007-02-04.
- ↑ ೧೦.೦ ೧೦.೧ "StatsGuru - Most Centuries by wicketkeeper - ODIs". Cricinfo. Retrieved 2007-02-04.
- ↑ "One-Day Internationals Batting records". Cricinfo. 2008-02-04. Retrieved 2008-02-04.
- ↑ "One-Day Internationals Fielding records". Cricinfo. 2008-02-04. Retrieved 2008-02-04.
- ↑ ೧೩.೦ ೧೩.೧ Kesavan, Mukul (2004-11-11). "On walking". Cricinfo. Retrieved 2007-02-21.
- ↑ ೧೪.೦ ೧೪.೧ Stern, John (September 20, 2009). "Gilchrist walks". CricInfo. Retrieved 2009-09-20.
- ↑ ೧೫.೦ ೧೫.೧ HowSTAT!. "Player Profile (Test) – Adam Gilchrist". Retrieved 2007-02-20.
- ↑ ೧೬.೦ ೧೬.೧ HowSTAT!. "Player Profile (ODI) – Adam Gilchrist". Retrieved 2007-02-20.
- ↑ ೧೭.೦ ೧೭.೧ "Gilchrist announces his retirement". Cricinfo. 2008-01-26. Retrieved 2008-01-26.
- ↑ "Gilchrist says IPL part of post-retirement plans". Associated Press. 2008-01-28. Retrieved 2008-02-04.[ಶಾಶ್ವತವಾಗಿ ಮಡಿದ ಕೊಂಡಿ]
- ↑ "The double casting of Adam Gilchrist". ABC. 2007-02-07. Archived from the original on 2008-01-01. Retrieved 2007-02-23.
- ↑ ೨೦.೦೦ ೨೦.೦೧ ೨೦.೦೨ ೨೦.೦೩ ೨೦.೦೪ ೨೦.೦೫ ೨೦.೦೬ ೨೦.೦೭ ೨೦.೦೮ ೨೦.೦೯ ೨೦.೧೦ ೨೦.೧೧ ೨೦.೧೨ ೨೦.೧೩ ೨೦.೧೪ ೨೦.೧೫ ೨೦.೧೬ ೨೦.೧೭ ೨೦.೧೮ ೨೦.೧೯ ೨೦.೨೦ ೨೦.೨೧ ೨೦.೨೨ ೨೦.೨೩ ೨೦.೨೪ ೨೦.೨೫ ೨೦.೨೬ ೨೦.೨೭ ೨೦.೨೮ ೨೦.೨೯ ೨೦.೩೦ ೨೦.೩೧ ೨೦.೩೨ ೨೦.೩೩ ೨೦.೩೪ ೨೦.೩೫ ೨೦.೩೬ ೨೦.೩೭ ೨೦.೩೮ ೨೦.೩೯ ೨೦.೪೦ ೨೦.೪೧ ೨೦.೪೨ ೨೦.೪೩ ೨೦.೪೪ ೨೦.೪೫ ೨೦.೪೬ ೨೦.೪೭ ೨೦.೪೮ ೨೦.೪೯ ೨೦.೫೦ ೨೦.೫೧ ೨೦.೫೨ ೨೦.೫೩ ೨೦.೫೪ ೨೦.೫೫ ೨೦.೫೬ ೨೦.೫೭ ೨೦.೫೮ ೨೦.೫೯ ೨೦.೬೦ ೨೦.೬೧ ೨೦.೬೨ ೨೦.೬೩ ೨೦.೬೪ ೨೦.೬೫ ೨೦.೬೬ ೨೦.೬೭ ೨೦.೬೮ ೨೦.೬೯ ೨೦.೭೦ ೨೦.೭೧ ೨೦.೭೨ ೨೦.೭೩ ೨೦.೭೪ ೨೦.೭೫ ೨೦.೭೬ ೨೦.೭೭ ೨೦.೭೮ ೨೦.೭೯ ೨೦.೮೦ ೨೦.೮೧ ೨೦.೮೨ ೨೦.೮೩ ೨೦.೮೪ ೨೦.೮೫ ೨೦.೮೬ ೨೦.೮೭ ೨೦.೮೮ ೨೦.೮೯ ೨೦.೯೦ ಉಲ್ಲೇಖ ದೋಷ: Invalid
<ref>
tag; no text was provided for refs namedo
- ↑ ೨೧.೦ ೨೧.೧ "The Adam Gilchrist Cricket Development Scholarship". AdamGilchrist.com. Archived from the original on 2007-02-06. Retrieved 2007-03-09.
- ↑ "ಆರ್ಕೈವ್ ನಕಲು". Archived from the original on 2013-03-04. Retrieved 2010-03-22.
- ↑ Hutchinson, Jane (2006-11-19). "Wicket maidens". Archived from the original on 2007-02-07. Retrieved 2007-02-20.
- ↑ "Gilchrist available for entire World Cup". Cricinfo. 2007-02-12. Retrieved 2007-02-24.
- ↑ Polack, John (1998-11-30). "Profile of Adam Gilchrist". Cricinfo. Retrieved 2007-02-20.
- ↑ "Sheffield Shield, 1992/93, Final, New South Wales v Queensland". Cricinfo. Retrieved 2007-02-22.
- ↑ "New South Wales, Australian First - Class Season 1993/94: Averages". Cricinfo. Retrieved 2007-02-22.
- ↑ ಹಾರ್ಟ್, p. 720.
- ↑ ೨೯.೦ ೨೯.೧ ೨೯.೨ ೨೯.೩ ೨೯.೪ ೨೯.೫ ಉಲ್ಲೇಖ ದೋಷ: Invalid
<ref>
tag; no text was provided for refs namedaz
- ↑ "Australian First-Class Season 1994/95: Most Fielding Dismissals". Cricinfo. Retrieved 2007-02-22.
- ↑ "Australian First-Class Season 1995/96: Most Fielding Dismissals". Cricinfo. Retrieved 2007-02-22.
- ↑ ೩೨.೦ ೩೨.೧ ಹಾರ್ಟ್, p. 730.
- ↑ "Sheffield Shield, 1995/96, Final, South Australia v Western Australia". Cricinfo. Retrieved 2007-02-22.
- ↑ ಹಾರ್ಟ್, p. 731.
- ↑ "Australian First-Class Season 1996/97: Most Fielding Dismissals". Cricinfo. Retrieved 2007-02-26.
- ↑ "Mercantile Mutual Cup, 1996/97, Final, Western Australia v Queensland". Cricinfo. Retrieved 2007-02-26.
- ↑ "Australian First-Class Season 1997/98: Most Fielding Dismissals". Cricinfo. Retrieved 2007-02-27.
- ↑ "Sheffield Shield, 1997/98, Final, Western Australia v Tasmania". Cricinfo. Retrieved 2007-02-26.
- ↑ "Mercantile Mutual Cup, 1997/98, Semi Final, Western Australia v Queensland". Cricinfo. Retrieved 2007-02-26.
- ↑ "Mercantile Mutual Cup 1998/99: Averages, Western Australia". Cricinfo. Retrieved 2007-02-26.
- ↑ "Sheffield Shield, 1998/99, Final, Queensland v Western Australia". Cricinfo. Retrieved 2007-02-26.
- ↑ "Western Australia, Australian First-Class Season 1999/2000: Averages". Cricinfo. Retrieved 2007-02-26.
* "Western Australia, Australian First-Class Season 2000/2001: Averages". Cricinfo. Retrieved 2007-02-26.
* "Western Australia, Australian First-Class Season 2001/2002: Averages". Cricinfo. Retrieved 2007-02-26.
* "Western Australia, Australian First-Class Season 2002/2003: Averages". Cricinfo. Retrieved 2007-02-26.
* "Western Australia, Australian First-Class Season 2003/2004: Averages". Cricinfo. Retrieved 2007-02-26.
* "Western Australia, Australian First-Class Season 2004/2005: Averages". Cricinfo. Retrieved 2007-02-26. - ↑ "2005-06 Pura Cup Batting Averages". Cricinfo. Retrieved 2007-02-26.
- ↑ "2005–06 ING Cup Batting Averages". Cricinfo. Retrieved 2007-02-26.
- ↑ "Players – Australia – ODI Caps". Cricinfo. Retrieved 2007-02-22.
- ↑ ೪೬.೦ ೪೬.೧ ೪೬.೨ "Titan Cup – 5th Match, Australia v South Africa". Cricinfo. Retrieved 2007-02-20.
- ↑ Peter Deeley (1997-03-26). "Healy says sorry for show of dissent". Cricinfo. Retrieved 2007-02-22.
- ↑ ಹಾರ್ಟ್, p. 733.
- ↑ "South Africa v Australia, 1996/97, 4th One-day International". Cricinfo. Retrieved 2007-02-27.
- ↑ "1997 Texaco Trophy Averages, Australia vs England". Cricinfo. Retrieved 2007-02-22.
- ↑ ಹಾರ್ಟ್,pp 733–736.
- ↑ ಹಾರ್ಟ್, p. 732.
- ↑ ೫೩.೦ ೫೩.೧ "Carlton & United Series, 1997/98, 1st Match, Australia v South Africa". Cricinfo. Retrieved 2007-02-27.
* "Carlton & United Series, 1997/98, 4th Match, Australia v South Africa". Cricinfo. Retrieved 2007-02-27.
* "Carlton & United Series, 1997/98, 8th Match, Australia v South Africa". Cricinfo. Retrieved 2007-02-27.
* "Carlton & United Series, 1997/98, 11th Match, Australia v South Africa". Cricinfo. Retrieved 2007-02-27. - ↑ ೫೪.೦ ೫೪.೧ ೫೪.೨ ೫೪.೩ ೫೪.೪ Jones, Dean (2005-06-06). "Australia profiles: Adam Gilchrist". BBC Sport. Retrieved 2007-03-10.
- ↑ "Carlton & United Series, 1997/98, 1st Final, Australia v South Africa". Cricinfo. Retrieved 2007-02-27.
- ↑ Clare, Nelson (1998-01-27). "Gilchrist century lifts Australia". Cricinfo. Retrieved 2007-02-27.
- ↑ ಹಾರ್ಟ್, p. 736.
- ↑ "ODI Series Averages – Australia v New Zealand". Cricinfo. Retrieved 2007-02-22.
- ↑ "Australia in New Zealand, 1997-98, 2nd One-Day International". Cricinfo. Retrieved 2007-02-22.
- ↑ "Coca-Cola Cup 1997/98 Averages, Australia". Cricinfo. Retrieved 2007-02-22.
- ↑ ಹಾರ್ಟ್, p. 737.
- ↑ "Carlton & United Series 1998/99 Most Fielding Dismissals". Cricinfo. Retrieved 2007-02-22.
- ↑ "Carlton & United Series 1998/99 Averages – Australia". Cricinfo. Retrieved 2007-02-23.
- ↑ "ODI Series 1998/99 Averages, Australia v West Indies". Cricinfo. Retrieved 2007-02-22.
- ↑ "ICC World Cup 1999 Averages - Australia". Cricinfo. Retrieved 2007-02-27.
- ↑ ಹಾರ್ಟ್, p. 741.
- ↑ "ICC World Cup, 1999, Final, Australia v Pakistan". Cricinfo. Retrieved 2007-02-27.
- ↑ "Aiwa Cup, 1999, Final, Sri Lanka v Australia". Cricinfo. Retrieved 2007-02-27.
- ↑ "Australia in Zimbabwe, 1999-2000". Cricinfo. Retrieved 2007-02-27.
- ↑ ೭೦.೦ ೭೦.೧ ೭೦.೨ "Pakistan in Australia Test Series – 1st Test". Cricinfo. Retrieved 2007-02-20.
- ↑ "Players – Australia – Caps". Cricinfo. Retrieved 2007-02-22.
- ↑ "Healy wants suitable exits for 100–Test veterans". Cricinfo. 2007-01-09. Retrieved 2007-02-20.
- ↑ ಹಾರ್ಟ್, pp. 742–743.
- ↑ ಹಾರ್ಟ್, pp.740–742.
- ↑ Gough, Martin (2002-01-20). "The Bulls at Australia's gates". BBC Sport. Retrieved 2007-02-20.
- ↑ ೭೬.೦ ೭೬.೧ "Pakistan in Australia, 1999/00, 2nd Test". Cricinfo. Retrieved 2007-02-20.
- ↑ ೭೭.೦ ೭೭.೧ ಹಾರ್ಟ್, p. 743.
- ↑ "Records fall as Aussies smash Pakistan". BBC Sport. 1999-11-22. Retrieved 2007-02-20.
- ↑ "Carlton & Union Series 1999-2000 results". Cricinfo. Retrieved 2007-02-27.
- ↑ ೮೦.೦ ೮೦.೧ ಹಾರ್ಟ್, p. 745.
- ↑ "Trans-Tasman Trophy, 1999/00, 3rd Test, New Zealand v Australia". Cricinfo. Retrieved 2007-02-22.
- ↑ ೮೨.೦ ೮೨.೧ "RESULTS SUMMARY - Australia in New Zealand, 1999-2000". Cricinfo. Retrieved 2007-03-07.
- ↑ ಹೈಗ್, p. 325.
- ↑ Polack, John (2000-08-04). "Gilchrist named Australia's new vice-captain". Retrieved 2007-03-06.
- ↑ ಹಾರ್ಟ್, p. 746.
- ↑ Colliver, John (2000-12-19). "Gilchrist hails proudest moment of career". Cricinfo. Retrieved 2007-03-06.
- ↑ "RESULTS SUMMARY - West Indies in Australia, 2000-2001". Cricinfo. Retrieved 2007-03-07.
- ↑ ೮೮.೦ ೮೮.೧ ೮೮.೨ ಹಾರ್ಟ್, p. 747.
- ↑ "1st Test: India v Australia at Mumbai, 27 Feb-3 Mar 2001 Ball-by-Ball commentary". Cricinfo. Retrieved 2007-02-28.
- ↑ "Border-Gavaskar Trophy, 2000/01, 1st Test, India v Australia". Cricinfo. Retrieved 2007-03-07.
- ↑ "Border-Gavaskar Trophy, 2000/01, 2nd Test, India v Australia". Cricinfo. Retrieved 2007-03-07.
- ↑ "Border-Gavaskar Trophy, 2000/01, 3rd Test, India v Australia". Cricinfo. Retrieved 2007-03-07.
- ↑ ಹಾರ್ಟ್, p. 748.
- ↑ "Australia in India, 2000/01 ODI Series Averages". Cricinfo. Retrieved 2007-03-07.
- ↑ ೯೫.೦ ೯೫.೧ ೯೫.೨ ೯೫.೩ ೯೫.೪ "Adam Gilchrist ODI career statistics". Cricinfo. Retrieved 2007-03-07.
- ↑ "Australia in England, 2001 Test Series Averages". Cricinfo. Retrieved 2007-02-23.
- ↑ ೯೭.೦ ೯೭.೧ ಹಾರ್ಟ್, p. 749.
- ↑ ೯೮.೦ ೯೮.೧ ಹಾರ್ಟ್, p. 750.
- ↑ ೯೯.೦ ೯೯.೧ "The Ashes, 2001, 4th Test". Cricinfo. Retrieved 2007-03-07.
- ↑ ECB. "Six great Ashes battles". Archived from the original on 2007-02-28. Retrieved 2007-03-07.
- ↑ ಹಾರ್ಟ್, p. 751–752.
- ↑ Crutcher, Michael (2002-02-24). "Gilchrist downplays record after remarkable double century". Cricinfo. Retrieved 2007-02-20.
- ↑ "Australia in South Africa, 2001-02, 1st Test". Cricinfo. Retrieved 2007-02-23.
- ↑ "England v India, 1982, 3rd Test". Cricinfo. Retrieved 2007-02-23.
- ↑ ೧೦೫.೦ ೧೦೫.೧ ೧೦೫.೨ ಹಾರ್ಟ್, p. 752.
- ↑ Johnson, Martin (2002-03-17). "Whirlwind Astle steals show in losing cause". The Telegraph. Archived from the original on 2007-10-16. Retrieved 2007-02-20.
- ↑ "Australia in South Africa, 2001-02 Test Series Averages". Cricinfo. Retrieved 2007-03-07.
- ↑ "PSO Tri-Nation Tournament, 2002 Points Table". Cricinfo. Retrieved 2007-03-07.
- ↑ Akbar, Agha (2002-09-07). "Rain provides reprieve to Pakistan". Cricinfo. Retrieved 2007-03-07.
- ↑ "England in Australia, 2002-03 Test Series Averages". Cricinfo. Retrieved 2007-03-07.
- ↑ ಹಾರ್ಟ್, p. 754.
- ↑ ೧೧೨.೦ ೧೧೨.೧ "Statsguru - AC Gilchrist - Tests - Series averages". Cricinfo. Retrieved 2007-02-28.
- ↑ McConnell, Lynn (2003-10-13). "Gilchrist: the best of the best". Cricinfo. Retrieved 2007-02-28.
- ↑ Crutcher, Michael (2002-03-10). "Gilchrist happy at No.7". Cricinfo. Retrieved 2007-02-20.
- ↑ "Adam Gilchrist Batting Test Ranking Statistics". ICC. Retrieved 2007-02-28.
- ↑ ಹಾರ್ಟ್, p. 755.
- ↑ "ICC Cricket World Cup, 2002/03 Averages, Australia". Cricinfo. Retrieved 2007-02-26.
- ↑ "ICC World Cup, 2002/03, 1st Super Six Match, Australia v Sri Lanka". Cricinfo. Retrieved 2007-02-27.
- ↑ ಹಾರ್ಟ್, p. 757.
- ↑ "ICC Cricket World Cup, 2002/03 Highest Batting Averages". Cricinfo. Retrieved 2007-02-27.
- ↑ "West Indies v Australia 2003". BBC Sport. 2003-05-31. Retrieved 2007-03-07.
- ↑ "Bangladesh in Australia 2003". BBC Sport. 2003-08-06. Retrieved 2007-03-07.
- ↑ ICC. "Adam Gilchrist Batting ODI Ranking Statistics". Retrieved 2007-02-28.
- ↑ "Border-Gavaskar Trophy, 2004-05, 1st Test, India v Australia". Cricinfo. Retrieved 2007-03-07.
- ↑ "Gilchrist ready for Indian challenge". Cricinfo. 2004-09-24. Retrieved 2007-02-20.
- ↑ "India pull off astounding victory". Cricinfo. 2004-11-05. Retrieved 2007-02-20.
- ↑ "Pakistan in Australia, 2004–05, 3rd Test". Cricinfo. Retrieved 2007-02-20.
* "Trans–Tasman Trophy, 2004–05, 1st Test, New Zealand v Australia". Cricinfo. Retrieved 2007-02-20.
* "Trans–Tasman Trophy, 2004–05, 2nd Test, New Zealand v Australia". Cricinfo. Retrieved 2007-02-20. - ↑ "NatWest Challenge, 2005, 3rd Match". Cricinfo. Retrieved 2007-03-08.
- ↑ "Australia in England, 2005 Test Series Averages". Cricinfo. Retrieved 2007-03-08.
- ↑ ೧೩೦.೦ ೧೩೦.೧ "Statsguru - Australia - Tests - Results list". Cricinfo. Retrieved 2007-12-21.
- ↑ English, Peter (2006-02-19). "Gilchrist back with a bang". Cricinfo. Retrieved 2007-02-20.
- ↑ English, Peter (2006-02-14). "Gilchrist and Katich seal series". Retrieved 2007-02-20.
- ↑ "The Ashes - 3rd Test, 2006-07". Cricinfo. Retrieved 2007-03-07.
- ↑ "The Wisden Trophy, 1985/86, 5th Test, West Indies v England". Cricinfo. Retrieved 2007-02-23.
- ↑ English, Peter (2006-12-16). "'Viv deserves fastest hundred' - Gilchrist". Cricinfo. Retrieved 2007-02-22.
- ↑ Brown, Alex (2006-12-17). "Wrong end of Gilly's stick". Sydney Morning Herald. Retrieved 2007-02-22.
- ↑ "The Ashes, 2006-07 Test Series Averages". Cricinfo. Retrieved 2007-03-08.
- ↑ "Commonwealth Bank Series, 2006-07 Averages, Australia". Cricinfo. Retrieved 2007-03-08.
- ↑ "Ponting and Gilchrist to rest - Hussey to lead Australia for New Zealand tour". Cricinfo. 2007-02-09. Retrieved 2007-03-08.
- ↑ ICC. "ICC Cricket World Cup 2007 West Indies - Australia Squad". Archived from the original on 2007-03-05. Retrieved 2007-03-08.
- ↑ "Gilchrist set to work on batting". BBC Sport. 2006-08-12. Retrieved 2007-02-23.
- ↑ Burrow, Vanessa; Brown, Alex; Marshallsea, Trevor (2006-12-22). "Gilchrist has no plans to call it quits". The Age. Retrieved 2007-02-23.
{{cite web}}
: CS1 maint: multiple names: authors list (link) - ↑ "ICC World Cup - 2nd Match, Group A, Australia v Scotland". Cricinfo. Retrieved 2007-03-14.
- ↑ "Legality of Gilchrist's innings questioned". news.com.au. 2007-05-04. Archived from the original on 2007-05-08. Retrieved 2007-05-15.
- ↑ "Adam Gilchrist's use of squash ball Legal: MCC". dawn.com. 2007-05-09. Retrieved 2008-02-15.
- ↑ 2007-08 ಋತುವಿನಲ್ಲಿ ಆಡಿಲೇಡ್‌ನಲ್ಲಿ ಆಸ್ಟ್ರೇಲಿಯ-ಭಾರತ ನಡುವಣ ನಾಲ್ಕನೆಯ ಟೆಸ್ಟ್ ಪಂದ್ಯದಲ್ಲಿ ಭಾರತದ ಎರಡನೆಯ ಇನ್ನಿಂಗ್ಸ್‌ನ ಕ್ರಿಕ್ ಇನ್ಫೊ ವೀಕ್ಷಕವಿವರಣೆ
- ↑ "Sehwag denies Gilchrist final win". BBC News. 2008-01-28. Retrieved 2008-01-28.
- ↑ "Where next for Australia?". BBC News. 2008-01-28. Retrieved 2008-01-28.
- ↑ "Error convinced Gilchrist to quit". BBC News. 2008-01-28. Retrieved 2008-01-28.
- ↑ CBS AUS vs IND: ಯೂತ್‌ಫುಲ್ ಇಂಡಿಯಾ ಪ್ರಾಮ್ಟ್ ಗಿಲ್‌ಕ್ರಿಸ್ಟ್ ಗುಡ್‌ಬೈ Archived 2008-05-11 ವೇಬ್ಯಾಕ್ ಮೆಷಿನ್ ನಲ್ಲಿ.; ESPNStar; 2008-03-05
- ↑ ಗಿಲ್‌ಕ್ರಿಸ್ಟ್ ಇನ್‌ಸ್ಪೈರ್ಸ್ ಆಸೀಸ್ ಟು ವಿನ್ BBC ನ್ಯೂಸ್ 15 ಫೆಬ್ರುವರಿ 2008ರಂದು ಪುನರ್ಪಡೆದದ್ದು.
- ↑ "1999 World Cup in England, Australia Squad". Cricinfo. Retrieved 2007-02-20.
- ↑ "2003 World Cup in South Africa, Australia Squad". Cricinfo. Retrieved 2007-02-20.
- ↑ ೧೫೪.೦ ೧೫೪.೧ "Test Career Highest Batting Averages". Cricinfo. Retrieved 2007-02-20.
- ↑ "Wisden rates Gilchrist the fastest scorer ever". Cricinfo. Retrieved 2007-10-18.
- ↑ "Player profile – Darren Berry". Cricinfo. Retrieved 2007-02-20.
- ↑ "Berry bows out as Vics grab the glory". The Age. 2004-03-17. Retrieved 2007-02-20.
- ↑ "One Day International Records - Most Catches in an Innings". Cricinfo. Retrieved 2007-10-18.
- ↑ "One Day International Records - A fifty and five dismissals in an innings". Cricinfo. Retrieved 2007-10-18.
- ↑ English, Peter (2005-08-12). "Taking an unfamiliar route". Cricinfo. Retrieved 2007-02-23.
- ↑ "ODI Career Most Fielding Dismissals". Cricinfo. Retrieved 2007-10-18.
- ↑ ೧೬೨.೦ ೧೬೨.೧ Brett, Oliver (2003-03-18). "Walking on a blue moon". BBC News. Retrieved 2007-02-21.
- ↑ "Gilchrist wants to keep walking". Cricinfo. 2005-07-19. Retrieved 2007-02-21.
- ↑ ೧೬೪.೦ ೧೬೪.೧ "Ponting surprised by Gilchrist the walker". Cricinfo. 2005-07-01. Retrieved 2007-02-21.
- ↑ Swanton, Will (2003-03-19). "Don't walk, Ponting urges team-mates". Cricinfo. Retrieved 2007-02-21.
- ↑ English, Peter (2004-10-14). "Learning to walk". Cricinfo. Retrieved 2007-02-20.
- ↑ ೧೬೭.೦ ೧೬೭.೧ ೧೬೭.೨ ೧೬೭.೩ "Fleming accuses Gilchrist of walking 'crusade'". Cricinfo. 2004-11-22. Retrieved 2007-02-21.
- ↑ ೧೬೮.೦ ೧೬೮.೧ ಗಿಲ್‌ಕ್ರಿಸ್ಟ್, pp.578–579.
- ↑ ೧೬೯.೦ ೧೬೯.೧ "Gilchrist fined for dissent". Cricinfo. 2006-01-25. Retrieved 2007-02-21.
- ↑ "McGrath and Gilchrist fined". BBC Sport. 2001-03-28. Retrieved 2007-02-21.
- ↑ "Gilchrist fined for dissent, but Symonds cleared". Cricinfo. 2004-02-24. Retrieved 2007-02-21.
- ↑ "2006: Penalties imposed on players for breaches of ICC Code of Conduct". International Cricket Council. Archived from the original on 2007-02-20. Retrieved 2007-01-30.
- ↑ Donaldson, Michael (2004-02-24). "CRIK: Gilly could be in hot water". Sports Newswires. Australian Associated Press.
The replays show Gilchrist firing some heated words at Manuel when he raised his finger to signal Symonds' dismissal for 10.
{{cite news}}
:|access-date=
requires|url=
(help) - ↑ Austin, Charlie (2004-02-23). "A fine gesture that will strengthen the game". Cricinfo. Retrieved 2007-02-26.
- ↑ ೧೭೫.೦ ೧೭೫.೧ "Gilchrist questions Murali action". BBC Sport. 2002-05-27. Retrieved 2007-03-07.
- ↑ ACB (2002-05-30). "Adam Gilchrist reprimanded by ACB Code of Behaviour Commission". Cricinfo. Retrieved 2007-03-07.
- ↑ "ಆರ್ಕೈವ್ ನಕಲು". Archived from the original on 2009-05-29. Retrieved 2010-03-22.
- ↑ "Adam Gilchrist goes into bat for Child Rescue". World Vision. 2006-12-22. Retrieved 2007-02-20.
- ↑ "Gilchrist to sponsor Mumbai maid's kid". ಟೈಮ್ಸ್ ಆಫ್ ಇಂಡಿಯ. 2006-10-17. Retrieved 2007-05-07.
- ↑ "Red Sox flag interest in Gilchrist". ABC Sport. 2005-04-06. Archived from the original on 2006-08-18. Retrieved 2007-02-20.
- ↑ "World Cup 2007 Squads - Australia - Adam Gilchrist". Cricinfo. Retrieved 2007-03-07.
- ↑ ೧೮೨.೦ ೧೮೨.೧ ೧೮೨.೨ Knox, David (2008-03-02). "Gilchrist signs with Nine". tvtonight.com.au. Retrieved 2008-03-03.
- ↑ "ಇನ್ಸೈಡ್ ಕವರ್", ದಿ ವೆಸ್ಟ್ ಆಸ್ಟ್ರೇಲಿಯನ್ , 14 ಫೆಬ್ರುವರಿ 2009
- ↑ "Andrew Gilchrist backs debate to move Australia Day". news.com.au. 2009-01-27. Archived from the original on 2012-12-31. Retrieved 2009-03-15.
- ↑ ಪಾಂಟಿಂಗ್, ಆರ್: ಕ್ಯಾಪ್ಟನ್ಸ್ ಡೈರಿ 2006 , p75, 2006
- ↑ ೧೮೬.೦ ೧೮೬.೧ ೧೮೬.೨ ೧೮೬.೩ Cricinfo staff (2008-10-24). "Gilchrist slams Tendulkar in autobiography". Cricinfo. Retrieved 2008-10-27.
- ↑ ೧೮೭.೦ ೧೮೭.೧ ೧೮೭.೨ ಗಿಲ್‌ಕ್ರಿಸ್ಟ್, p. 588.
- ↑ ಗಿಲ್‌ಕ್ರಿಸ್ಟ್, p. 583.
- ↑ '[ನೌಹಿಯರ್ ಡಿಡ್ ಐ ಅಕ್ಯೂಸ್ ಸಚಿನ್ ಆಫ್ ಲೈಯಿಂಗ್']http://content-www.cricinfo.com/australia/content/story/375276.html
- ↑ "Gilly doesn't know me: Tendulkar". Sydney Morning Herald. 2008-10-29. Retrieved 2008-10-29.
- ↑ Cricinfo staff (2008-11-04). "Muralitharan's action not clean". Cricinfo. Retrieved 2008-11-04.
- ↑ ೧೯೨.೦ ೧೯೨.೧ ಗಿಲ್‌ಕ್ರಿಸ್ಟ್, pp. 317–319.
- ↑ Press Trust Of India (2008-11-11). "Gilchrist's publicity gimmicks target Murali". Press Trust Of India. Archived from the original on 2008-12-10. Retrieved 2008-11-04.
- ↑ Press Trust Of India (2008-11-11). "Gilchrist has tarnished his own image: Atapattu". Press Trust Of India. Retrieved 2008-11-06.
- ↑ Wisden. "CRICKETER OF THE YEAR 2002, Adam Gilchrist". Retrieved 2007-02-20.
- ↑ Salvado, John (2003-01-28). "Gilchrist wins the Allan Border Medal". Cricinfo. Retrieved 2007-02-20.
- ↑ "Murali misses out in Benaud's Greatest XI". Cricinfo. 2004-08-23. Retrieved 2007-02-20.
- ↑ "World Cricket Tsunami Appeal, 2004–05, One–Day Internationals, ICC World XI". Cricinfo. Retrieved 2007-02-20.
- ↑ "Gilchrist voted scariest batsman". Cricinfo. 2005-06-17. Retrieved 2007-02-20.
- ↑ Daily Times (2007-02-28). "Australia names greatest ODI team". Archived from the original on 2013-01-13. Retrieved 2007-03-01.
- ↑ "Sobers named as Cricinfo's greatest allrounder". Cricinfo. Retrieved 2007-04-27.
- ↑ "Australia in South Africa, 2001–02, 1st Test". Cricinfo. Retrieved 2007-02-20.
- ↑ "The Ashes – 3rd Test, 2006/07 season". Cricinfo. Retrieved 2007-02-20.
- ↑ "Statsguru – AC Gilchrist– Test Batting – Career summary". Cricinfo. Retrieved 2007-02-25.
- ↑ "Statsguru – AC Gilchrist– Test Fielding – Career summary". Cricinfo. Retrieved 2007-03-07.
- ↑ ೨೦೬.೦ ೨೦೬.೧ "Statsguru -AC Gilchrist - ODIs - Match/series awards list". Cricinfo. Retrieved 2007-03-13.
- ↑ "VB Series, 2003/04, 4th Match, Australia v Zimbabwe". Cricinfo. Retrieved 2007-02-20.
- ↑ "One Day Internationals – Fastest Centuries and Half Centuries". Cricinfo. Retrieved 2007-04-28.
- ↑ "Statsguru – AC Gilchrist– ODI Batting – Career summary". Cricinfo. Retrieved 2007-02-25.
- ↑ "Statsguru – AC Gilchrist– ODI Fielding – Career summary". Cricinfo. Retrieved 2007-03-07.
- ↑ ೨೧೧.೦ ೨೧೧.೧ "Statsguru -AC Gilchrist - ODIs - Match/series awards list". Cricinfo. Retrieved 2007-03-13.
ಆಕರಗಳು
[ಬದಲಾಯಿಸಿ]- Cashman, Franks, Maxwell, Sainsbury, Stoddart, Weaver, Webster (1997). The A-Z of Australian cricketers. ISBN 0-19550-604-9.
{{cite book}}
: CS1 maint: multiple names: authors list (link) - Haigh, Gideon (2007). Inside story:unlocking Australian cricket's archives. New Custom Publishing. ISBN 1-921116-00-5.
{{cite book}}
: Unknown parameter|coauthors=
ignored (|author=
suggested) (help) - Harte, Chris (2003). The Penguin History of Australian Cricket. Andre Deutsch. ISBN 0-670-04133-5.
{{cite book}}
: Unknown parameter|coauthors=
ignored (|author=
suggested) (help)
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಅಡಾಮ್ ಗಿಲ್ಕ್ರಿಸ್ಟ್ಸ್ ಅಫೀಸಿಯಲ್ ವೆಬ್ಸೈಟ್
- ಕ್ರಿಕೆಟ್-ಆನ್ಲೈನ್ ಪ್ರೊಫೈಲ್ ಆನ್ ಅಡಾಂ ಗಿಲ್‌ಕ್ರಿಸ್ಟ್ Archived 2005-01-22 ವೇಬ್ಯಾಕ್ ಮೆಷಿನ್ ನಲ್ಲಿ.
- ಕ್ರಿಕ್ಇನ್ಫೋ ಪ್ರೊಫೈಲ್ ಆನ್ ಅಡಾಂ ಗಿಲ್‌ಕ್ರಿಸ್ಟ್
- HowSTAT! ಸ್ಟಾಟಿಸ್ಟಿಕಲ್ ಪ್ರೊಫೈಲ್ ಆನ್ ಅಡಾಂ ಗಿಲ್‌ಕ್ರಿಸ್ಟ್
Sporting positions | ||
---|---|---|
ಪೂರ್ವಾಧಿಕಾರಿ Steve Waugh |
Australian Test cricket captains 2000/1 |
ಉತ್ತರಾಧಿಕಾರಿ Steve Waugh |
ಪೂರ್ವಾಧಿಕಾರಿ Steve Waugh |
Australian Test cricket captains 2001 |
ಉತ್ತರಾಧಿಕಾರಿ Steve Waugh |
ಪೂರ್ವಾಧಿಕಾರಿ Ricky Ponting |
Australian Test cricket captains 2004 |
ಉತ್ತರಾಧಿಕಾರಿ Ricky Ponting |
ಪೂರ್ವಾಧಿಕಾರಿ Ricky Ponting |
Australian Test cricket captains 2004/5 |
ಉತ್ತರಾಧಿಕಾರಿ Ricky Ponting |
ಪೂರ್ವಾಧಿಕಾರಿ Shane Warne |
Australian One-day International cricket captains 2000/1-2003/4 |
ಉತ್ತರಾಧಿಕಾರಿ Ricky Ponting |
ಪೂರ್ವಾಧಿಕಾರಿ Ricky Ponting |
Australian One-day International cricket captains 2006 2006/7 |
ಉತ್ತರಾಧಿಕಾರಿ Ricky Ponting |
Awards | ||
ಪೂರ್ವಾಧಿಕಾರಿ Matthew Hayden |
Allan Border Medal winner 2003 |
ಉತ್ತರಾಧಿಕಾರಿ Ricky Ponting |
- Pages with reference errors
- CS1 errors: dates
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 maint: multiple names: authors list
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: access-date without URL
- Pages using duplicate arguments in template calls
- Articles with unsourced statements from August 2009
- Articles with invalid date parameter in template
- Articles with hatnote templates targeting a nonexistent page
- CS1 errors: unsupported parameter
- ಆಸ್ಟ್ರೇಲಿಯದ ವಿಕೆಟ್-ಕೀಪರ್ಗಳು
- ಆಸ್ಟ್ರೇಲಿಯದ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಆಟಗಾರರು
- ಆಸ್ಟ್ರೇಲಿಯದ ಟೆಸ್ಟ್ ಆಟಗಾರರು
- ಆಸ್ಟ್ರೇಲಿಯದ ಟ್ವೆಂಟಿ20 ಅಂತಾರಾಷ್ಟ್ರೀಯ ಆಟಗಾರರು
- ಆಸ್ಟ್ರೇಲಿಯ ಕ್ರಿಕೆಟ್ ನಾಯಕರು
- ICC ವಿಶ್ವ XI ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು
- ವರ್ಷದ ವಿಸ್ಡೆನ್ ಕ್ರಿಕೆಟಿಗರು
- ಆಸ್ಟ್ರೇಲಿಯದ ವಿಶ್ವಕಪ್ ಕ್ರಿಕೆಟ್ ಆಟಗಾರರು
- 1999 ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಭಾಗವಹಿಸಿದ ಕ್ರಿಕೆಟ್ ಆಟಗಾರರು
- 2003 ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಭಾಗವಹಿಸಿದ ಕ್ರಿಕೆಟ್ ಆಟಗಾರರು
- 2007 ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಭಾಗವಹಿಸಿದ ಕ್ರಿಕೆಟ್ ಆಟಗಾರರು
- ಡೆಕನ್ ಕ್ರಿಕೆಟ್ ಆಟಗಾರರು
- 1971ರಲ್ಲಿ ಜನಿಸಿದವರು
- ಕ್ರಿಕೆಟ್
- ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರು