ವಿಷಯಕ್ಕೆ ಹೋಗು

ಭಿಲ್ಲರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಿಲ್ಲರು
Languages
ಭಿಲ್ಲರ ಭಾಷೆ


              ಭಾರತದ ಬುಡಕಟ್ಟುಗಳ ಜನಸಂಖ್ಯೆಯಲ್ಲಿ ಭಿಲ್ಲರು ಎರಡನೆಯ ಸ್ಥಾನವನ್ನು ಹೊಂದಿದ್ದರೆ. ಭಿಲ್ಲ ಬುಡಕಟ್ಟು ಜನರನ್ನು ಭಿಲಾಲ (Bhilala) ಹಾಗೂ ಭಿಲ್ ಗರಾಸಿಯಾ (Bhil Garasia) ಎಂದು ಕರೆಯುವರು. ೨೦೦೧ರ ಜನಗಣತಿಯ ಪ್ರಕಾರ ಗುಜರಾತ್ ನಲ್ಲಿ_೩,೪೪೧,೯೪೫[]ಮಧ್ಯ ಪ್ರದೇಶ ೪,೬೧೯,೦೬೮[]ಮಹಾರಾಷ್ಟ್ರ_೧,೮೧೮,೭೯೨[]ರಾಜಾಸ್ಥಾನ_೨,೮೦೫,೯೪೮[]ಕರ್ನಾಟಕ_೧,೮೬೭ ಇಷ್ಟು ಭಿಲ್ಲರ ಜನಸಂಖ್ಯೆ ಕಂಡು ಬಂಧಿದೆ. ಭಿಲ್ಲರು ಭಾರತದ ಪುರಾತನದಲ್ಲಿ ಬುಡಕಟ್ಟುಗಳಲ್ಲಿ ಒಂದಾಗಿದ್ದು ಪ್ರೋಟೋ-ಆಸ್ಟ್ರಾಲಾಯ್ಡ್ ಜನಾಂಗಕ್ಕೆ ಸೇರಿದಾರೆ. ವೇದ, ಪುರಾಣಗಳಲ್ಲಿಯೂ[] ಈ ಬುಡಕಟ್ಟಿನ ಜನರನ್ನು ಉಲ್ಲೇಖಿಸಲಾಗಿದೆ. ಭಿಲ್ಲರು ಎಂಬ ಹೆಸರು ದ್ರಾವಿಡ ಭಾಷೆಯ ಬಿಲ್ಲಿನಿಂದ ಬಳಕೆಗೆ ಬಂದಿರಬಹುದೆಂದು ಊಹಿಸಲಾಗಿದೆ.ಇಂದಿಗೂ ಈ ಜನರು ಬಿಲ್ಲುಗಾರಿಕೆಗೆ ಹೆಸರುವಾಸಿಯಾಗಿದ್ದರೆ.

              ಭಿಲ್ಲರು ಇಂದು ಹಿಂದುಳಿದ ಬುಡಕಟ್ಟಿನಲ್ಲಿದ್ದು, ಆರಂಭದಲ್ಲಿ ಬಲಿಷ್ಠರಾಗಿದರು, ರಾಜ ಸಂಸ್ಥಾನಗಳನ್ನು ಸ್ಥಾಪಿಸಿಕೊಂಡಿದ್ದರು. ರಾಜ ಪುಟಾಣದ ದುಂಗಾರ್ ಪುರ್, ಬನಾಸ್ ವಾಡ ಮತ್ತು ಪ್ರತಾಪಗಡ ಇವರ ರಾಜ್ಯಗಳಾಗಿದ್ದವು. ನಂತರ ರಜಪೂತರಿಂದ ಆಕ್ರಮಿಸಲ್ಪಟ್ಟರು. ಈ ಸಂಕೇತವಾಗಿ ಭಿಲ್ಲರು ರಜಪೂತರಿಗೆ ಸಿಂಹಾಸನಾಹೋಹಣದಲ್ಲಿ ರಕ್ತದ ತಿಲಕವಿಡುವ ಪದ್ದತಿಯಿದ್ದಿತು ನಂತರ ರಜಪೂತರು ಭಿಲ್ಲರ ಸಾಹಸ ಪ್ರವೃತ್ತಿಯನ್ನು ಮನಗಂಡು ಇವರ ಮುಖ್ಯರೊಡನೆ ವಿವಾಹ ಸಂಬಂಧಗಳನ್ನು ಬೆಳೆಸಿದರು. ಇದರಿಂದ ಉಂಟಾದ ಭಿಲ್ಲರ ಮೇಲ್ವರ್ಗವನ್ನು ಭಿಲಾಲವೆಂದು ಕರೆಯಲಾಗಿದೆ. ನಂತರ ರಜಪೂತರೊಡಗಿನ ಸಂಬಂಧ ಬಿಗಡಾಯಿಸಿದುದಲ್ಲದೆ ಮರಾಠ ಮತ್ತು ಮುಸ್ಲಿಮರೊಡನೆಯೂ ವಿರಸ ಉಂಟಾಯಿತು. ಮೊಗಲರ ಆಳ್ವಿಕೆಯಲ್ಲಿ ಭಿಲ್ಲರ ಹಲವು ಸಮೂಹಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವು. ಮೊಗಲರ ಅವಧಿಯಲ್ಲಿ ಉಳಿದ ಬಿಲ್ಲರು ಕ್ರಮೇಣ ಹಿಂಜರಿದು ಅರಣ್ಯಗಳನ್ನು ಆಶ್ರಯಿಸಿ ದರೋಡೆ ಡಕಾಯಿತಿಗಳಲ್ಲಿ ತೊಡಗಿದರು. ನಂತರ ಬ್ರಿಟಿಷರ ಆಳ್ವಿಕೆಯಲ್ಲಿ ದಂಗೆಯಿದ್ದ ಇವರನ್ನು ಬ್ರಿಟಿಷರು ನಿರ್ದಯವಾಗಿ ಅಡಗಿಸಿದರು. ಈ ಜನರು ಹಿಂದೂ ಜಾತಿ ಪದ್ಧತಿಯಲ್ಲಿ ವಿಲೀನಗೊಳ್ಳದೆ ಪ್ರತ್ಯೇಕವಾಗಿ ಉಳಿದಿರುವರು.

ಹಂಚಿಕೆ

[ಬದಲಾಯಿಸಿ]

              ಮಧ್ಯ ಪ್ರದೇಶ, ಗುಜರಾತ್, ಕರ್ನಾಟಕ, ರಾಜಸ್ಥಾನ, ಮತ್ತು ತ್ರಿಪುರಾಗಳಲ್ಲಿ [] ಇವರುನ್ನು ಪರಿಶಿಷ್ಠ ಬುಡಕಟ್ಟು ಜನರು ಎಂದು ಪರಿಗಣಿಸಲಾಗಿದೆ. ಭಿಲ್ಲರು ಮಧ್ಯ ಪ್ರದೇಶದ ಪಶ್ಚಿಮದ ಜಿಲ್ಲೆಗಳಾದ ಝಬುವಾ, ಧಾರ್, ಕರಗಾಂ, ಖಾಂಡ್ವಾ, ರತ್ಲಾಮ್, ಪೂರ್ವ ಗುಜರಾತಿನ ಜಿಲ್ಲೆಗಳಾದ ಪಂಚಮಹಲ್, ದಾಂಗ್ ಬರೂಚ್, ಸಬರ್ ಕಾಂಥ, ಮತ್ತು ಬನಾಸ್ ಕಾಂಥ, ದಕ್ಷಿಣ ರಾಜಸ್ಥಾನದ ದುಂಗರ್ ಪುರ್, ಬನಾಸ್ ವಾಡ, ಮತ್ತು ಉದಯಪುರ[] ಜಿಲ್ಲೆಗಳಲ್ಲಿ ವಲಯದಂತೆ ಕೇಂದ್ರೀಕೃತಗೊಂಡಿರುವರು. ಈ ವಲಯವನ್ನು ರಾಜ್ಯಾಂಗದ ಐದನೆಯ ಶೆಡ್ಯೂಲ್ ಪ್ರಕಾರ ಪರಿಶಿಷ್ಠ ಪ್ರದೇಶವೆಂದು ಪರಿಗಣಿಸಲಾಗಿದೆ. ಕರ್ನಾಟಕದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮೂಲ ನಿವಾಸಿಗಳಾಗಿದ್ದಾರೆ.[] ಇವರು ತಮ್ಮನ್ನೂ ಭಿಲ್ಲವರೆಂದು ಕರೆದುಕೊಂಡಿದ್ದಾರೆ.

ದೈಹಿಕ ಲಕ್ಷಣಗಳು

[ಬದಲಾಯಿಸಿ]

              ಭಿಲ್ಲರು ದೈಹಿಕವಾಗಿ ಗಿಡ್ಡವಾಗಿದ್ದು, ದೃಡಕಾಯರಾಗಿರುವರು. ಭಿಲ್ಲರ ಮೈ ಬಣ್ಣ ಕಪ್ಪು, ಅಗಲವಾದ ಮತ್ತು ಚಪ್ಪಟೆಯಾದ ಮೂಗು, ಇವರ ಸರಸರಿ ಎತ್ತರ ೫’.೪” ಅಡಿಗಳು, ಸಾಧಾರಣವಾದ ಕೈಗಳು ಮತ್ತು ನೀಳವಾದ ಕಾಲುಗಳು. ಇಂತಹ ಕಾಲುಗಳ್ಳುಳ್ಳ ಭಿಲ್ಲರು ಕಾಡು ಮೇಡುಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆಯುವಾಗ ಕಡಿದಾದ ಬೆಟ್ಟದ ಇಳಿಜಾರುಗಳಲ್ಲಿ ಏರುವಾಗ, ಇಳಿಯುವಾಗ ಜಾರಿಬೀಳದಂತೆ ಸುಲಭವಾಗಿ ನಡೆದಾಡಬಲ್ಲರು. ನೀಳವಾದ ತಲೆಯ ಬುರುಡೆ, ಅಲೆಯಂತಿರುವ ತಲೆಯ ಕೂದಲು, ಹಾಗೂ ಹೊರಚಾಚಿದ ದಪ್ಪ ತುಟಿಗಳು ಇವರ ಪ್ರಮುಖ ದೈಹಿಕ ಚಹರೆಗಳಾಗಿವೆ.

              ಬಿಲ್ಲರು ಮಾಂಸಹಾರಿಗಳು. ಬೇಟೆಮಾಡಿದ ಪ್ರಾಣಿಗಳ ಮಾಂಸವನ್ನು ತಿನ್ನುವರು. ಧಾನ್ಯಗಳು ದೊರೆಯದ ಹಾಗೂ ಅರಣ್ಯ ಪ್ರದೇಶಗಳಲ್ಲಿ ಗೆಡ್ಡೆ, ಗೆಣಸು, ಹಣ್ಣು, ಕಾಯಿಗಳು ಮತ್ತು ಕೆಲವು ಸಸ್ಯದ ಎಲೆಗಳನ್ನು ತಿಂದು ಜೀವಿಸುವರು. ಇತ್ತೀಚಿಗೆ ಕೃಷಿ ಬೆಳೆಗಳಿಂದ ದೊರೆತ ಆಹಾರ ಪದಾರ್ಥಗಳನ್ನು ಬಳಸುವರು. ಇವರು ಮದ್ಯಪಾನಿಗಳು ಆಗಿದ್ದು, ಸ್ಥಳೀಯವಾಗಿ ದೊರೆಯುವ “ಮಹುವಾ” (Mahuwa) ಎಂಬ ಜಾತಿಯ ಗಿಡದಿಂದ ತಯಾರಿಸಿದ ಮದ್ಯವನ್ನು ಸೇವಿಸುವರು.[]

ಉಡುಪು

[ಬದಲಾಯಿಸಿ]

              ಭಿಲ್ಲರುಲ್ಲಿ ಪುರುಷರು ಸೊಂಟದ ಸುತ್ತಲೂ ಕಟ್ಟುವ ದಟ್ಟಿಯನ್ನೂ ಮತ್ತು ತಲೆಗೆ ಪೇಟವನ್ನು ಸುತ್ತುವರು. ಅಂಗಿ ಧರಿಸಿವುದು ಕಡಿಮೆ. ಸ್ತ್ರೀಯರು ಪರಕಾರ ಮತ್ತು ಕುಪ್ಪಸಗಳನ್ನು ತೊಡುವುದರ ಜೊತೆಗೆ ತಲೆಗೆ ಹೊದಿಕೆ ಹಾಕಿಕೊಳ್ಳುವರು. ಕೊರಳಿಗೆ ಬೆಳ್ಳಿಯ ಸರ, ಕೈಗಳಿಗೆ ದಂತದ ಬಳೆ, ಬೆಳ್ಳಿಯ ಕಡಗ, ಬೆರಳುಂಗುರು ಹಾಗೂ ಕಾಲುಕಡಗಗಳು ಸ್ತ್ರೀಯರು ಧರಿಸುವ ಆಭರಣಗಳಾಗಿವೆ.[೧೦]

              ಭಿಲ್ಲರ ವಸತಿಗಳು ಅಲೆ ವಿರಳವಾಗಿ ಹಂಚಿಕೆಯಾಗಿದ್ದು ಒಂದು ಮನೆಯಯಿಂದ ಮತ್ತೊಂದು ಮನೆ ಪ್ರತ್ಯೇಕಗೊಂಡಿರುತ್ತವೆ. ಮತ್ತು ಹುಲ್ಲುಗಾವಲುಗಳಲ್ಲಿ, ಅಥವಾ ನೀರು ಸಿಗುವ ಕೆರೆ, ಹಳ್ಳ, ತೊರೆಗಳ ಬಳಿ ಮನೆಗಳನ್ನು ನಿರ್ಮಿಸಿಕೊಳ್ಳುತಾರೆ.[೧೧] ಹಬ್ಬಗಳ ಆಚರಣೆಯಲ್ಲಿ ಮಾತ್ರ ಇವರುಗಳು ಒಟ್ಟುಗೂಡುವರು.

ಆರ್ಥಿಕ ಜೀವನ

[ಬದಲಾಯಿಸಿ]

              ಭಿಲ್ಲರು ಈ ಮುಂಚೆ ಕಾಡನ್ನು ಸ್ವೇಚ್ಛೆಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಮರಗಿಡಗಳನ್ನು ನಾಶಮಾಡುವುದರ ಜೊತೆಗೆ ಬೇಟೆಯಾಡುವ ಮೂಲಕ ಪ್ರಾಣಿಗಳನ್ನು ಕೊಲ್ಲುತ್ತಿದ್ದರು. ಬೇಟೆಯೇ ಅವರ ಪ್ರಮುಖ ಕಸುಬು. ಬೇಟೆಯಾಡುವುದರಲ್ಲಿ ನಿಪುಣರಾಗಿದ್ದರು. ಅವುಗಳ ಹೆಜ್ಜೆಗಳ ಗುರ್ತಿನ ಮೂಲಕ ತಿಳಿದು ಅವುಗಳ ನೆಲೆಯನ್ನು ಪತ್ತೆ ಮಾಡುವ ಹಾಗೂ ಸೂಕ್ತವಾದ ಸ್ಥಳದಲ್ಲಿ ಅವುಗಳನ್ನು ಕೊಲ್ಲುವ ಚತುರತೆಯನ್ನು ಹೊಂದಿದ್ದರು. ಚಿರತೆಗಳನ್ನು ಬೆನ್ನಟ್ಟಿ ಖಡ್ಗಗಳಿಂದ ಅವನ್ನು ಕೊಲ್ಲುತ್ತಿದ್ದರು. ಬೇಟೆಯ ಜೊತೆಗೆ ಕೆಲವು ಪಂಗಡಗಳವರು ಅರಣ್ಯವಸ್ತುಗಳ ಸಂಗ್ರಹಣೆಯನ್ನೇ ಆಧರಿಸಿರುವರು. ಅರಣ್ಯಗಳಲ್ಲಿ ಗೆಡ್ಡೆ ಗೆಣಸು, ಅಂಟು, ಜೇನು, ಮರದ ತೊಗಟೆ ಇತ್ಯಾದಿಗಳನ್ನು ಸಂಗ್ರಹಿಸಿ ಅವುಗಳನ್ನು ಬೇರೆಯವರಿಗೆ ವಿಕ್ರಯಿಸಿಯೋ ಅಥವಾ ಸಾಟಿ ಮಾಡುವ ರೂಪದಲ್ಲಿ ತಮಗೆ ಬೇಕಾದ ಬಟ್ಟೆ, ಆಹಾರ ವಸ್ತುಗಳನ್ನು ಪಡೆದುಕೊಳ್ಳುವರು. ಆದರೆ ಇತ್ತೀಚೆಗೆ ಭಿಲ್ಲರ ವೃತ್ತಿ ಬದಲಾವಣೆಯಾಗಿದ್ದು, ಅವರು ಒಂದೆಡೆ ಸ್ಥಿರವಾಗಿ ನೆಲಸಿ ಕೃಷಿಕರಾಗಿ ಅಥವಾ ಕೃಷಿ ಕಾರ್ಮಿಕರಾಗಿ ಜೀವಿಸುವರು. ಜೋಳ, ರಾಗಿ, ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿರುವರು. ಜೊತೆಗೆ ಕುರಿ, ಮೇಕೆ, ಕೋಳಿ, ದನಕರುಗಳನ್ನೂ ಸಾಕುವುದನ್ನು ಸಹ ರೂಢಿಸಿ ಕೊಂಡಿರುವರು. ಈಗ ಉದ್ಯೋಗ ಇಲ್ಲದಿದ್ದಾಗ ಕಾಡಿಗೆ ಹೋಗುವ ಬದಲು ಪಟ್ಟಣಗಳಿಗೆ ಹೋಗಿ ಕೂಲಿ ಮಾಡುವರು.

ಸಾಮಾಜಿಕ ಜೀವನ

[ಬದಲಾಯಿಸಿ]

              ಭಿಲ್ಲರು ದ್ರಾವಿಡರಿಂದ ಪ್ರಭಾವಿತಗೊಂಡಿದ್ದು ಹಿಂದೂ ದೇವತೆ-ದೇವರು ಅರಾಧಕರು. ಸ್ಥಳಿಯವಾಗಿ ಮಹತ್ವವುಳ್ಳ ದೇವರ ಪೂಜೆ ಹಾಗೂ ಮರಾಠಿಗರ ಯುದ್ಧದೇವತೆಗಳನ್ನು ಪೂಜಿಸುವುದು ರೂಡಿಯಲಿದೆ. ತಮ್ಮ ವಂಶಸ್ಥರ ಅಥವಾ ಕುಲಸ್ತರರೊಡನೆ ವಿವಾಹ ಸಂಬಂಧವಿರುವುದಿಲ್ಲ ಬದಲಾಗಿ ಭಿನ್ನ ಗೋತ್ರದವರೊಡನೆ ವಿವಾಹ ಸಂಬಂಧವೇರ್ಪಡುವುದು. ಇವರಲ್ಲಿ ಬಾಲ್ಯವಿವಾಹ ಪದ್ಧತಿ ನಿಷಿದ್ದ. ವರನ ಪಿತೃಗಳು ವಧುವಿನ ಪಿತೃಗಳಿಗೆ ದಕ್ಷಿಣೆ ಕೊಟ್ಟು ವಿವಾಹ ಮಾಡಿಕೊಳ್ಳುವ ಪದ್ದತಿ ಇಂದಿಗೂ ರೂಢಿಯಲಿದೆ. ವಿಧಾವಾವಿವಾಹ ಮತ್ತು ವಿವಾಹ ವಿಚ್ಛೇಧನ ಪದ್ಧತಿಗಳು ಸಹ ಸರಳವಾಗಿದ್ದು ರೂಢಿಯಲ್ಲಿವೆ. ಕೆಲವೊಮ್ಮೆ ವಧು ದಕ್ಷಿಣೆಯನ್ನು ಕೊಡಲಾಗದೆ ಕನ್ಯಾ ಅಪಹರಣವೂ ನಡೆಯುವುದು. ಭಿಲ್ಲರು ಭೂತ, ಪ್ರೇತ, ತಂತ್ರ-ಮಂತ್ರಗಳಲ್ಲಿ ಅತಿ ಹೆಚ್ಚು ನಂಬಿಕೆಯನ್ನು ಹೊ೦ದಿರುವರು. ಇವರು ಯಾವುದೇ ಆಚರಣೆಗಳಿಗೆ ಬ್ರಾಹ್ಮಣರನ್ನು ಬಳಕೆ ಮಾಡುವುದಿಲ್ಲ.

              ಭಿಲ್ಲರ ಸಮಾಜದಲ್ಲಿ ಮೂರು ವ್ಯಕ್ತಿಗಳು ಅತಿ ಮುಖ್ಯರು. ಅವರುಗಳೆ೦ದರೆ ಕ್ಷುದ್ರದೇವತಾರಾಧಕರಾದ ಬಧ್ವಾ, ಇವರನ್ನು ರೋಗಗಳನ್ನೂ ವಾಸಿ ಮಾಡುವ ಸಾಮರ್ಥ್ಯ ಹೊ೦ದಿರುವರೆ೦ದು ಭಾವಿಸಿರುವರು. ಎರಡನೆಯ ವ್ಯಕ್ತಿ ಪೂಜಾರೋ (Pujaro), ಇವರು ದೇವರ ಪೂಜೆಯನ್ನು ನಿರ್ವಹಿಸುವರು. ಮೂರನೆಯರೆ೦ದರೆ ಕೊತ್ವಾಲ್ (Kotwal).[೧೨] ಗ್ರಾಮದಲ್ಲಿ ಯಾರಾದರೂ ಮೃತರಾದಾಗ ಇವರು ತಮಟೆಯನ್ನು ಬಾರಿಸುವರು.

              ಭಿಲ್ಲರ ಸಮಾಜದಲ್ಲಿ ಇ೦ದಿನ ಆಡಳಿತ ಕ್ರಮವು ರೂಢಿಯಲ್ಲಿರುವುದನ್ನು ಕಾಣಬಹುದು. ಸಮಾಜದ ಗಣ್ಯ ವ್ಯಕ್ತಿಗಳೆ೦ದರೆ ಪಟೇಲ ಅಥವಾ ತದ್ವಿ (Tadvi) ಅ೦ದರೆ ಮುಖ್ಯಸ್ಥ, ಕೊತ್ವಾಲ್, ಹಾಗೂ ಹಿರಿಯರು. ಇತ್ತೀಚೆಗೆ ಗ್ರಾಮ ಪ೦ಚಾಯಿತಿ ಸದಸ್ಯರಲ್ಲಿ ಭಿಲ್ಲರು ಸಹ ಪ್ರಾಮುಖ್ಯತೆ ಪಡೆದಿರುವ ಇತ್ತೀಚಿನ ವರ್ಗವಾಗಿದೆ. ಶಿಶುವಿವಾಹ ನಿಶಿದ್ಧವಾಗಿದೆ. ಪುರುಷ ಮತ್ತು ಸ್ತ್ರಿಯರು ಸಮಾನ ಹಕ್ಕುಗಳನ್ನು ಹೊ೦ದಿರುವರು. ಸತ್ತ ವ್ಯಕ್ತಿಯನ್ನು ಸುಡುವ, ಅಸ್ತಿಯನ್ನು ನೀರಿನಲ್ಲಿ ಬಿಡುವ ಸ೦ಪ್ರದಾಯವನ್ನು ರೂಢಿಸಿಕೊ೦ಡಿರುವರು. ಇತ್ತೀಚೆಗೆ ಭಿಲ್ಲರ ಸಮಾಜದಲ್ಲಿ ಆಧುನಿಕತೆಯು ಹಾಸುಹೊಕ್ಕಾಗಿದೆ. ಇ೦ದು ಈ ಜನರು ಸ೦ಘಟಿತರಾಗಿದ್ದು, ರಾಜಕೀಯವಾಗಿಯೂ ಪ್ರಭಲರಾಗಿರುವರು.

ಛಾಯಾಚಿತ್ರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Gujarat: Data Highlights the Scheduled Tribes" (PDF). Census of India 2001. Census Commission of India. Retrieved 2008-03-31.
  2. "Madhya Pradesh: Data Highlights the Scheduled Tribes" (PDF). Census of India 2001. Census Commission of India. Retrieved 2008-03-06.
  3. "Maharashtra: Data Highlights the Scheduled Tribes" (PDF). Census of India 2001. Census Commission of India. Retrieved 2008-03-31.
  4. "Rajasthan: Data Highlights the Scheduled Tribes" (PDF). Census of India 2001. Census Commission of India. Retrieved 2008-03-31.
  5. [https://web.archive.org/web/20140110095226/http://sirohi.nic.in/trib.htm Archived 2014-01-10 ವೇಬ್ಯಾಕ್ ಮೆಷಿನ್ ನಲ್ಲಿ.
  6. http://www.ecoindia.com/tribes/bhils.html
  7. http://www.ncbi.nlm.nih.gov/pmc/articles/PMC3331472/pdf/ASL-5-255.pdf
  8. http://www.tribal.gov.in/WriteReadData/CMS/Documents/201212010319068974609File1054.pdf
  9. ftp://ftp.fao.org/docrep/fao/012/i0370e/i0370e11.pdf
  10. http://tribes-of-india.blogspot.in/2008/09/bhils-tribes-of-india.html
  11. "ಆರ್ಕೈವ್ ನಕಲು". Archived from the original on 2014-01-10. Retrieved 2013-12-03.
  12. http://www.sociologyguide.com/types-of-society/Profiles-of-tribes.php
"https://kn.wikipedia.org/w/index.php?title=ಭಿಲ್ಲರು&oldid=1222449" ಇಂದ ಪಡೆಯಲ್ಪಟ್ಟಿದೆ