ಸರ್ವೋಚ್ಚ ನ್ಯಾಯಾಲಯ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (March 2008) |
This article possibly contains original research. (October 2010) |
ಸರ್ವೋಚ್ಚ ನ್ಯಾಯಾಲಯ ವು(ಒಂದು ಅಂತ್ಯೋಪಾಯದ ನ್ಯಾಯಾಲಯ ,ಅಂದರೆ ತೀರ್ಪು ಪ್ರಶ್ನಾತೀತವಾದುದು ಎಂದು ಪರಿಗಣಿಸಲಾಗುತ್ತದೆ. ಕಾನೂನು ವ್ಯವಹಾರ , ಅಥವಾ ತೀರ್ಪು ; ಹೆಚ್ಚುವರಿ ಅಥವಾ ಉಚ್ಚ ನ್ಯಾಯಾಲಯ ; ಅಗ್ರ ಅಪೆಕ್ಸ್ ನ್ಯಾಯಾಲಯ ವೆಂದೂ ಸಹ ಕರೆಯಲ್ಪಡುತ್ತದೆ), ಕೆಲವು ಕಾನೂನು ವ್ಯಾಪ್ತಿಗಳಲ್ಲಿ, ಅದರ ಕಾನೂನು ವ್ಯವಸ್ಥೆಯೊಳಗಿನ ಉನ್ನತ ನ್ಯಾಯಾಂಗವಾಗಿದ್ದು, ಇಲ್ಲಿನ ಅಧಿಕೃತ ತೀರ್ಪು ಮತ್ತೊಂದು ನ್ಯಾಯಾಲಯದಿಂದ ಹೆಚ್ಚುವರಿ ಮರುವಿಮರ್ಶೆಗೆ ಒಳಪಡುವುದಿಲ್ಲ. ಇಂತಹ ನ್ಯಾಯಾಲಯಗಳಿಗೆ ನೇಮಕಾತಿಯು ಕಾನೂನು ವ್ಯಾಪ್ತಿಯೊಳಗೆ ಭಿನ್ನವಾಗಿರುತ್ತದೆ. ಕೋರ್ಟ್ಸ್ ಆಫ್ ಲಾಸ್ಟ್ ರೆಸಾರ್ಟ್(ಅಂತ್ಯೋಪಾಯದ ನ್ಯಾಯಾಲಯ) ಗಳು ಮೂಲತಃ ಅಪೀಲು(ಮೇಲ್ಮನವಿ)ನ್ಯಾಯಾಲಯಗಳ ಮಾದರಿಯಾಗಿ ಕಾರ್ಯನಿರ್ವಹಿಸುತ್ತವೆ, ಸಣ್ಣ ಪ್ರಮಾಣದ ವಿಚಾರಣಾ ನ್ಯಾಯಾಲಯಗಳು ಅಥವಾ ಮಧ್ಯಂತರ ಮೇಲ್ಮನವಿ ನ್ಯಾಯಾಲಯಗಳಿಂದ ಮೇಲ್ಮನವಿಗಳ ವಿಚಾರಣೆ ಮಾಡುವುದು ಇದರ ಕೆಲಸ. ವಾಸ್ತವವಾಗಿ ಹಲವು ರಾಷ್ಟ್ರಗಳು ಬಹುತೇಕ "ಸರ್ವೋಚ್ಚ ನ್ಯಾಯಾಲಯ"ಗಳನ್ನು ಹೊಂದಿರುತ್ತವೆ, ಜೊತೆಗೆ ಪ್ರತಿಯೊಂದು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಅಥವಾ ಒಂದು ನಿರ್ದಿಷ್ಟ ಕಾನೂನು ವ್ಯಾಪ್ತಿಗೆ ಅನ್ವಯವಾಗುವಂತೆ ಅಂತ್ಯೋಪಾಯದ ನ್ಯಾಯಾಲಯಗಳನ್ನು ಹೊಂದಿರುತ್ತವೆ. ಒಕ್ಕೂಟ ಅಥವಾ ಫೆಡರಲ್ ಆಡಳಿತ ವ್ಯವಸ್ಥೆ ಹೊಂದಿರುವ ಅಮೆರಿಕ ಸಂಯುಕ್ತ ಸಂಸ್ಥಾನವು ಸುಪ್ರೀಂ ಕೋರ್ಟ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಎಂಬ ಏಕೈಕ ಸರ್ವೋಚ್ಚ ನ್ಯಾಯಾಲಯವನ್ನು ಹೊಂದಿದೆ, ಆದರೆ ಪ್ರತಿಯೊಂದು U.S. ರಾಜ್ಯವು ತನ್ನದೇ ಆದ ಉಚ್ಚ ನ್ಯಾಯಾಲಯಗಳನ್ನು ಹೊಂದಿರುತ್ತದೆ, U.S.ನ ಸರ್ವೋಚ್ಚ ನ್ಯಾಯಾಲಯಕ್ಕೆ ಇವುಗಳ ಮೇಲೆ ಫೆಡರಲ್ ಕಾನೂನಿಗೆ ಸಂಬಂಧಿಸಿದಂತೆ ಮಾತ್ರ ಅಧಿಕಾರವಿರುತ್ತದೆ. ಇತರ ಕಾನೂನು ಕ್ಷೇತ್ರಗಳು ಆಸ್ಟ್ರಿಯಾದಲ್ಲಿರುವ ಪ್ರತ್ಯೇಕ ಸಾಂವಿಧಾನಿಕ ನ್ಯಾಯಾಲಯ ಮಾದರಿಯನ್ನು ಅನುಸರಿಸುತ್ತವೆ.(ಈ ಮಾದರಿಯು ಜೆಕೊಸ್ಲೋವಾಕ್ ಸಂವಿಧಾನದಲ್ಲಿ ಮೊದಲು ಜಾರಿಯಾಗಿ ನಂತರ ೧೯೨೦ರಲ್ಲಿ ಆಸ್ಟ್ರಿಯನ್ ಸಂವಿಧಾನದಲ್ಲಿ ಬಳಕೆಗೆ ಬಂದಿತು). ಇಷ್ಟೇ ಅಲ್ಲದೆ, ಉದಾಹರಣೆಗೆ ಫಿನ್ಲ್ಯಾಂಡ್, ಸ್ವೀಡನ್, ಜೆಕ್ ರಿಪಬ್ಲಿಕ್, ಪೋಲಂಡ್, ರಿಪಬ್ಲಿಕ್ ಆಫ್ ಚೀನಾದಲ್ಲಿ ಪ್ರತ್ಯೇಕ ಸರ್ವೋಚ್ಚ ಆಡಳಿತಾತ್ಮಕ ನ್ಯಾಯಾಲಯಗಳಿವೆ, ಈ ನ್ಯಾಯಾಲವು ನೀಡುವ ತೀರ್ಪು ಅಂತಿಮವಾಗಿದ್ದು, ಇವುಗಳ ಕಾನೂನು ವ್ಯಾಪ್ತಿಯು ಸರ್ವೋಚ್ಚ ನ್ಯಾಯಾಲಯದೊಂದಿಗೆ ಅತಿಕ್ರಮಿಸುವುದಿಲ್ಲ. U.S.ನ ಟೆಕ್ಸಾಸ್ ಹಾಗು ಓಕ್ಲಹೋಮ ರಾಜ್ಯಗಳೂ ಸಹ ಕಾನೂನು ವಿಷಯಗಳನ್ನು ಅಂತ್ಯೋಪಾಯದ ಎರಡು ಪ್ರತ್ಯೇಕ ನ್ಯಾಯಾಲಯಗಳ ನಡುವೆ ವಿಭಾಗಿಸುತ್ತವೆ, ಒಂದು ನ್ಯಾಯಾಲಯವು ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ವಿಚಾರಣೆ ನಡೆಸಿದರೆ ಮತ್ತೊಂದು ಸಿವಿಲ್ ಮೊಕದ್ದಮೆಗಳ ಬಗ್ಗೆ ವಿಚಾರಣೆ ನಡೆಸುತ್ತವೆ.
ಕಾಮನ್ವೆಲ್ತ್ ಕಾನೂನು ವ್ಯಾಪ್ತಿಯೊಳಗೆ, ಐತಿಹಾಸಿಕವಾಗಿ ಮೊದಲ ಉಚ್ಚ ನ್ಯಾಯಾಲಯವನ್ನು ಬ್ರಿಟಿಶ್ ವಸಾಹತು ಅಧಿಕಾರವು ಸ್ಥಾಪಿಸಿತು, ಇದು ಮಾದರಿಯಾಗಿ ಸರ್ವೋಚ್ಚ ನ್ಯಾಯಾಲಯವೆಂದು ಕರೆಯಲ್ಪಟ್ಟಿತು, ಇದು ಮೂಲ(ಅದೆಂದರೆ, ವಿಚಾರಣಾ ನ್ಯಾಯಾಲಯ) ಹಾಗು ಮೊದಲ-ದರ್ಜೆ ಮೇಲ್ಮನವಿ ಕಾನೂನುವ್ಯಾಪ್ತಿಯನ್ನು ಹೊಂದಿರುವುದರ ಜೊತೆಗೆ ಅಂತಿಮ ಮೇಲ್ಮನವಿಗಳನ್ನು ಲಂಡನ್ ನ ಪ್ರಿವಿ ಕೌನ್ಸಿಲ್ ಗೆ ಸಲ್ಲಿಸಲಾಗುತ್ತಿತ್ತು. ಕಾಲಾನಂತರದಲ್ಲಿ, ಅಂತಿಮ ಮನವಿಗಳನ್ನು ಹೊಸದಾಗಿ ರಚನೆಯಾದ ಸ್ಥಳೀಯ ಮೇಲ್ಮನವಿ ವಿಚಾರಣಾ ನ್ಯಾಯಾಲಯಗಳು ಪರಿಶೀಲಿಸುತ್ತಿದ್ದವು. ಅಲ್ಲದೇ ಕೆಲವೊಂದು ಕಾನೂನು ವ್ಯಾಪ್ತಿಯೊಳಗೆ ಹಿಂದಿನ ಸುಪ್ರೀಂ ಕೋರ್ಟ್ ನ್ನು(ಸರ್ವೋಚ್ಚ ನ್ಯಾಯಾಲಯ) ಹೈ ಕೋರ್ಟ್(ಉಚ್ಚ ನ್ಯಾಯಾಲಯ) ಎಂದು(ಉದಾಹರಣೆಗೆ, ನ್ಯೂಜಿಲ್ಯಾಂಡ್, ಹಾಂಕಾಂಗ್), ಕೋರ್ಟ್ ಆಫ್ ಕ್ವೀನ್'ಸ್ ಬೆಂಚ್ ಅಥವಾ(ಉದಾಹರಣೆಗೆ ಆಲ್ಬರ್ಟ, ಮನಿತೋಬ)ಉಚ್ಚ ನ್ಯಾಯಾಲಯವೆಂದು ಮರುನಾಮಕರಣ ಮಾಡಲಾಯಿತು, ಆದರೆ ಮತ್ತೆ ಕೆಲವು ರಾಷ್ಟ್ರಗಳಲ್ಲಿ(ಉದಾಹರಣೆಗೆ ಆಸ್ಟ್ರೇಲಿಯನ್ ರಾಜ್ಯಗಳು ಹಾಗು ಕೆಲವು ಕೆನೆಡಿಯನ್ ಪ್ರಾಂತ್ಯಗಳು)ಇದೀಗ ನ್ಯಾಯಾಲಯಗಳು ಕೇವಲ ವಿಚಾರಣಾ ನ್ಯಾಯಾಲಯಗಳಾಗಿದ್ದು, ಅವುಗಳು ರಾಷ್ಟ್ರದಲ್ಲಿ ಅಪೆಕ್ಸ್ ನ್ಯಾಯಾಲಯವಾಗಿ ಕಾರ್ಯ ನಿರ್ವಹಿಸದಿದ್ದರೂ ಸಹ, ಸುಪ್ರೀಂ ಕೋರ್ಟ್ ಎಂಬ ಹೆಸರನ್ನು ಹಾಗೆ ಉಳಿಸಿಕೊಳ್ಳಲಾಗಿದೆ.(ಕೆಳಗೆ ನೀಡಲಾಗಿರುವ ಪ್ರತ್ಯೇಕ ರಾಷ್ಟ್ರಗಳ ವಿಭಾಗದಲ್ಲಿ ಇದರ ಬಗೆಗಿನ ಮಾಹಿತಿಯನ್ನು ನೋಡಿ).
ಹಲವು ಉಚ್ಚ ನ್ಯಾಯಾಲಯಗಳು ತಾವು ನೀಡುವ ತೀರ್ಪಿನ ಮೂಲಕ ಹಿಂತೀರ್ಪು ನ್ಯಾಯವು ತಮ್ಮ ತಮ್ಮ ಕಾನೂನು ವ್ಯಾಪ್ತಿಗೆ ಅನ್ವಯವಾಗುವಂತೆ ರೂಪಿಸುತ್ತವೆ, ಅಥವಾ ಒಂದು ಸಮಾನವಾದ ವ್ಯಾಖ್ಯಾನವನ್ನು ಪರಿಪಾಲಿಸಲು ಸಿವಿಲ್ ಕಾನೂನುಗಳುಳ್ಳ ರಾಷ್ಟ್ರಗಳಲ್ಲಿ ನಿಯಮಾವಳಿಗಳನ್ನು ಪ್ರಕಟಿಸಲಾಗುತ್ತದೆ:
- ಸಂಪ್ರದಾಯ ಕಾನೂನನ್ನು ಪಾಲಿಸುವ ಹಲವು ರಾಷ್ಟ್ರಗಳು ಸ್ಟೇರ್ ಡೆಸಿಸಿಸ್ ನ(ಅಂದರೆ ಹಿಂದೆ ನೀಡಿದ ತೀರ್ಪುಗಳ ತತ್ವಗಳ ಆಧರಿಸಿ ಮುಂದಿನ ನ್ಯಾಯಪಾಲನೆಗೆ ಒತ್ತು ನೀಡುವುದು) ಸಿದ್ಧಾಂತವನ್ನು ಪಾಲಿಸುತ್ತವೆ, ಇದರಂತೆ ನ್ಯಾಯಾಲಯದ ಹಿಂದಿನ ಅಧಿಕೃತ ತೀರ್ಪುಗಳು(ನಿರ್ಣಯಗಳು) ತಮ್ಮ ಕಾನೂನು ವ್ಯಾಪ್ತಿಯೊಳಗಿರುವ ಅದೇ ನ್ಯಾಯಾಲಯ ಅಥವಾ ಕೆಳ ದರ್ಜೆ ನ್ಯಾಯಾಲಯಗಳಲ್ಲಿ ಪೂರ್ವನಿರ್ಣಯದೊಂದಿಗೆ ಸೇರಿಕೊಂಡು ರಚನೆಯಾಗಿರುತ್ತದೆ.
- ನಾಗರಿಕ ಅನುಕೂಲಸಿಂಧು ಕಾನೂನುಳ್ಳ ಹಲವು ರಾಷ್ಟ್ರಗಳು ಸ್ಟೇರ್ ಡೆಸಿಸಿಸ್ ನ ಅಧಿಕೃತ ಸಿದ್ಧಾಂತವನ್ನು ಪಾಲಿಸುವುದಿಲ್ಲ; ಅಲ್ಲದೇ ಈ ರೀತಿಯಾಗಿ ಸರ್ವೋಚ್ಚ ನ್ಯಾಯಾಲಯದ ಅಧಿಕೃತ ತೀರ್ಪುಗಳು ಸಾಮಾನ್ಯವಾಗಿ ಚರ್ಚೆಯಲ್ಲಿರುವ ಮೊಕದ್ದಮೆಯ ಆಚೆಗೆ ತಮ್ಮ ತೀರ್ಪು ವಿಧಾನಗಳಿಗೆ ಸಂಭಂಧಿಸಿದಂತೆ ರಚನೆಯಾಗಿರುವುದಿಲ್ಲ. ಆದಾಗ್ಯೂ, ರೂಢಿಯಲ್ಲಿರುವಂತೆ, ಈ ನ್ಯಾಯಾಲಯಗಳು ಪ್ರಕಟಿಸುವ ಪೂರ್ವನಿರ್ಣಯ, ಅಥವಾ ಜ್ಯೂರಿಸ್ಪ್ರುಡೆನ್ಸ್ ಕಾನ್ಸ್ಟಾನ್ಟೆ ಸಾಮಾನ್ಯವಾಗಿ ಬಹಳ ದೃಢವಾಗಿರುತ್ತವೆ.
ಸರ್ವೆಸಾಮಾನ್ಯ ಕಾನೂನು ಪಾಲಿಸುವ ನ್ಯಾಯಾಂಗ ವ್ಯಾಪ್ತಿಯ ಆಡಳಿತ ಕ್ಷೇತ್ರಗಳು
[ಬದಲಾಯಿಸಿ]ಆಸ್ಟ್ರೇಲಿಯಾ
[ಬದಲಾಯಿಸಿ]ಆಸ್ಟ್ರೇಲಿಯಾದಲ್ಲಿ, ೧೯೮೬ರಲ್ಲಿ ಆಸ್ಟ್ರೇಲಿಯನ್ ಆಕ್ಟ್ ನ ಅನುಮೋದನೆ ಯೊಂದಿಗೆ ಆಸ್ಟ್ರೇಲಿಯಾದ ಹೈಕೋರ್ಟ್ ಅಂತ್ಯೋಪಾಯದ ನ್ಯಾಯಾಲಯವಾಯಿತು. ಈ ಕಾಯಿದೆಯು ಪ್ರಿವಿ ಕೌನ್ಸಿಲ್ ಗೆ ಅಂತಿಮ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ರದ್ದುಪಡಿಸಿತು. ಪ್ರತಿಯೊಂದು ರಾಜ್ಯ ಹಾಗು ಭೂಪ್ರದೇಶಗಳು ತಮ್ಮದೇ ಆದ ಸರ್ವೋಚ್ಚ ನ್ಯಾಯಾಲಯಗಳನ್ನು ಹೊಂದಿದ್ದವು, ಇದು ಆ ರಾಜ್ಯದ/ಭೂಪ್ರದೇಶದ ಉಚ್ಚ ನ್ಯಾಯಾಲಯವಾಗಿತ್ತು. ಇತರ ಕಾನೂನು ವ್ಯಾಪ್ತಿಯೊಳಗೆ ಬರುವವರಿಗೆ ಇದು ಕೆಲವು ತಪ್ಪು ಗ್ರಹಿಕೆಗೆ ಎಡೆಮಾಡಿಕೊಟ್ಟಿದೆ ಏಕೆಂದರೆ "ಸುಪ್ರೀಂ ಕೋರ್ಟ್" ಎಂಬ ಪದವು ಅಂತ್ಯೋಪಾಯದ ನ್ಯಾಯಾಲಯಕ್ಕೆ ಸೂಚಿತವಾಗಬಹುದೆಂದು ತಪ್ಪು ಕಲ್ಪನೆ ಉಂಟಾಗಬಹುದು. ಇದಕ್ಕೆ ಕಾರಣ ಆಸ್ಟ್ರೇಲಿಯಾದ ಉಚ್ಚ ನ್ಯಾಯಾಲಯವನ್ನು ಸಂಪೂರ್ಣ ಐತಿಹಾಸಿಕವಾಗಿ "ಸರ್ವೋಚ್ಚ ನ್ಯಾಯಾಲಯವೆಂದು" ಹೆಸರಿಸಲಾಗಿಲ್ಲ. ಆಸ್ಟ್ರೇಲಿಯನ್ ವಸಾಹತು ನೆಲೆಗಳ ಒಕ್ಕೂಟಗಳನ್ನು ಆಸ್ಟ್ರೇಲಿಯಾದ ರಾಜ್ಯಗಳಾಗಿ ಮಾರ್ಪಡಿಸುವ ಮುಂಚೆ(೧೯೦೧), ಪ್ರತಿಯೊಂದು ವಸಾಹತು ನೆಲೆಯು ತನ್ನದೇ ಆದ ಸ್ವತಂತ್ರ ಕಾನೂನು ವ್ಯವಸ್ಥೆ ಹೊಂದಿರುವುದರ ಜೊತೆಗೆ ಸರ್ವೋಚ್ಚ ನ್ಯಾಯಾಲಯವನ್ನು ಹೊಂದಿತ್ತು, ಇದು ವಾಸ್ತವಿಕವಾಗಿ ವಸಾಹತು ನೆಲೆಯೊಳಗೆ ಉನ್ನತ ನ್ಯಾಯಾಲಯವಾಗಿತ್ತು(ಜೊತೆಗೆ ಪ್ರಿವಿ ಕೌನ್ಸಿಲ್ ಗೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಹೊಂದಿತ್ತು). ಒಕ್ಕೂಟಕ್ಕೆ, ಸಂವಿಧಾನವು ಫೆಡರಲ್ "ಸರ್ವೋಚ್ಚ ನ್ಯಾಯಾಲಯ"ವನ್ನು ಸ್ಥಾಪಿಸುವ ಅವಕಾಶವನ್ನು ನೀಡಿತು, "ಉಚ್ಚ ನ್ಯಾಯಾಲಯ"ವೆಂಬ ಹೆಸರು ಪಡೆದ ಇದು ರಾಜ್ಯದ ಸರ್ವೋಚ್ಚ ನ್ಯಾಯಾಲಯಗಳಿಂದ ಬಂದ ಮೇಲ್ಮನವಿಗಳ ವಿಚಾರಣೆ ನಡೆಸುವ ಅಧಿಕಾರವನ್ನು ಪಡೆದಿತ್ತು. ಆಸ್ಟ್ರೇಲಿಯನ್ ರಾಜಧಾನಿಯ ಭೂಪ್ರದೇಶ ಹೊರತುಪಡಿಸಿ, ಪ್ರತಿ ರಾಜ್ಯದ ಸರ್ವೋಚ್ಚ ನ್ಯಾಯಾಲಯವು ಎರಡು ವಿಭಾಗಗಳಾಗಿ ವಿಂಗಡಣೆಯಾಗಿದೆ: ವಿಚಾರಣಾ ವಿಭಾಗ ಹಾಗು ಮೇಲ್ಮನವಿ ನ್ಯಾಯಾಲಯ. ACT ಸರ್ವೋಚ್ಚ ನ್ಯಾಯಾಲಯದಿಂದ ಬಂದ ಮೇಲ್ಮನವಿಗಳನ್ನು ಆಸ್ಟ್ರೇಲಿಯಾದ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತದೆ. ಉಚ್ಚ ನ್ಯಾಯಾಲಯದ ಪ್ರಸಕ್ತ ನ್ಯಾಯಮೂರ್ತಿ ರಾಬರ್ಟ್ ಫ್ರೆಂಚ್.
ಬಾಂಗ್ಲಾದೇಶ
[ಬದಲಾಯಿಸಿ]ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯವನ್ನು ೧೯೭೨ರ ಬಾಂಗ್ಲಾದೇಶ ಸಂವಿಧಾನದ ನಿಬಂಧನೆಗಳ ಮೂಲಕ ರಚಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಎರಡು ವಿಭಾಗಗಳಿವೆ, ಅದೆಂದರೆ (a)ಮೇಲ್ಮನವಿ ವಿಭಾಗ ಹಾಗು(b) ಉಚ್ಚ ನ್ಯಾಯಾಲಯ ವಿಭಾಗ. ಮೇಲ್ಮನವಿ ವಿಭಾಗವು, ಮೇಲ್ಮನವಿ ಸಲ್ಲಿಕೆಗೆ ಇರುವ ಉನ್ನತ ನ್ಯಾಯಾಲಯವಾಗಿದೆ. ಅಲ್ಲದೇ ಸಾಮಾನ್ಯವಾಗಿ ಆರಂಭಿಕ ವಿಚಾರಣೆಯ ನ್ಯಾಯಾಲಯದ ಅಧಿಕಾರಗಳನ್ನು ಚಲಾಯಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಉಚ್ಚ ನ್ಯಾಯಾಲಯ ವಿಭಾಗವು ಸಾಂಸ್ಥಿಕ ಹಾಗು ನೌಕಾ ಇಲಾಖೆಗೆ ಸಂಬಂಧಿಸಿದ ವಿಷಯಗಳ ಆರಂಭಿಕ ವಿಚಾರಣೆ ನಡೆಸುತ್ತದೆ. ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯವು ಬಾಂಗ್ಲಾದೇಶ ಸಂವಿಧಾನವನ್ನು ರಕ್ಷಿಸಿ ಅದರ ಪಾಲನೆಯನ್ನು ಮಾಡುತ್ತದೆ.
ಬಾಂಗ್ಲಾದೇಶ ಸರ್ವೋಚ್ಚ ನ್ಯಾಯಾಲಯದ ಮೇಲ್ಮನವಿ ವಿಭಾಗದ ತೀರ್ಪುಗಳನ್ನು ಚಾನ್ಸರಿ ಲಾ ಕ್ರೋನಿಕಲ್ಸ್ ನಲ್ಲಿ ಕಾಣಬಹುದು - ಇದು ಬಾಂಗ್ಲಾದೇಶದ ಮೊದಲ ಆನ್ಲೈನ್ ಹಿಂತೀರ್ಪುಗಳ ದತ್ತಾಂಶ ಸಂಗ್ರಹ [೧].
ಕೆನಡಾ
[ಬದಲಾಯಿಸಿ]ಕೆನಡಾದಲ್ಲಿ, ಕೆನಡಾದ ಸರ್ವೋಚ್ಚ ನ್ಯಾಯಾಲಯವನ್ನು ೧೮೭೫ರಲ್ಲಿ ಸ್ಥಾಪಿಸಲಾಯಿತು, ಆದರೆ ಜುಡಿಷಲ್ ಕಮಿಟಿ ಆಫ್ ದಿ ಪ್ರಿವಿ ಕೌನ್ಸಿಲ್(ಪ್ರಿವಿ ಕೌನ್ಸಿಲ್ ನ ನ್ಯಾಯಾಂಗ ಸಮಿತಿ)ಗೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ೧೯೪೯ ರದ್ದುಪಡಿಸಿದ ನಂತರವಷ್ಟೇ ದೇಶದ ಉಚ್ಚ ನ್ಯಾಯಾಲಯವಾಯಿತು. ಈ ನ್ಯಾಯಾಲಯವು, ಮೇಲ್ಮನವಿ ನ್ಯಾಯಾಲಯಗಳು ರಾಷ್ಟ್ರದ ಪ್ರತಿಯೊಂದು ಪ್ರಾಂತಗಳು ಹಾಗು ಭೂಪ್ರದೇಶಗಳಿಗೆ ಸಂಬಂಧಿಸಿದಂತೆ ನೀಡುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ವಿಚಾರಣೆಗಳನ್ನೂ ನಡೆಸುತ್ತದೆ. ಜೊತೆಗೆ ಫೆಡರಲ್ ಕೋರ್ಟ್ ಆಫ್ ಅಪೀಲ್ ನೀಡಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿಗಳ ವಿಚಾರಣೆಯನ್ನು ನಡೆಸುತ್ತವೆ. ನ್ಯಾಯಾಲಯದ ತೀರ್ಪು ಅಂತಿಮವಾಗಿದ್ದು, ಫೆಡರಲ್ ನ್ಯಾಯಾಲಯಗಳು ಹಾಗು ಎಲ್ಲ ಪ್ರಾಂತಗಳ ಹಾಗು ಭೂಪ್ರದೇಶಗಳ ನ್ಯಾಯಾಲಯಗಳನ್ನು ಒಟ್ಟುಗೂಡಿಸುತ್ತವೆ. "ಸುಪ್ರೀಂ" ಎಂಬ ಪದವು ತಪ್ಪು ಗ್ರಹಿಕೆಯನ್ನು ಉಂಟುಮಾಡಬಹುದು, ಏಕೆಂದರೆ, ಬ್ರಿಟಿಶ್ ಕೊಲಂಬಿಯಾದ ಸರ್ವೋಚ್ಚ ನ್ಯಾಯಾಲಯವು ಅಂತಿಮವಾಗಿರುವುದಿಲ್ಲ. ಅಲ್ಲಿ ವಿಚಾರಣೆಗೊಳಪಟ್ಟ ವಿವಾದಾತ್ಮಕ ಮೊಕದ್ದಮೆಗಳು ಸಾಮಾನ್ಯವಾಗಿ ಉಚ್ಚ ನ್ಯಾಯಾಲಯಗಳಲ್ಲಿ ಮೇಲ್ಮನವಿಯನ್ನು ಮಾಡುತ್ತವೆ - ವಾಸ್ತವವಾಗಿ ಇಂತಹ ಪ್ರಕ್ರಿಯೆಯಲ್ಲಿ ಇದು ಒಂದು ಕಿರಿಯ ನ್ಯಾಯಾಲಯವೆನಿಸುತ್ತದೆ.
ಹಾಂಕಾಂಗ್
[ಬದಲಾಯಿಸಿ]ಹಾಂಕಾಂಗ್ ನಲ್ಲಿ, ಹಾಂಕಾಂಗ್ ನ ಸವೋಚ್ಚ ನ್ಯಾಯಾಲಯವು(ಇದೀಗ ಇದು ಉಚ್ಚ ನ್ಯಾಯಾಲಯ ಎಂದು ಕರೆಯಲ್ಪಡುತ್ತದೆ), ಅದರ ವಸಾಹತು ಅವಧಿಯಲ್ಲಿ ಮೇಲ್ಮನವಿ ಸಲ್ಲಿಕೆ ಇದ್ದ ಅಂತಿಮ ನ್ಯಾಯಾಲಯವಾಗಿತ್ತು, ೧೯೯೭ರಲ್ಲಿ ಸಾರ್ವಭೌಮತ್ವದ ವರ್ಗಾವಣೆಯೊಂದಿಗೆ ಇದು ಕೊನೆಗೊಂಡಿತು. ಇತರ ಯಾವುದೇ ಬ್ರಿಟಿಷ ವಸಾಹತು ನೆಲೆಗಳಲ್ಲಿ ಇದ್ದಂತೆ, ಅಂತಿಮ ತೀರ್ಪು ನೀಡುವ ಅಧಿಕಾರವು, ಯುನೈಟೆಡ್ ಕಿಂಗ್ಡಮ್ ನ ಲಂಡನ್ ನಲ್ಲಿದ್ದ ಜುಡಿಷಲ್ ಕಮಿಟಿ ಆಫ್ ದಿ ಪ್ರಿವಿ ಕೌನ್ಸಿಲ್(JCPC) ನ ಕೈಯಲ್ಲಿತ್ತು. ಇದೀಗ ಅಂತಿಮ ತೀರ್ಪು ನೀಡುವ ಅಧಿಕಾರವನ್ನು ೧೯೯೭ರಲ್ಲಿ ರಚನೆಯಾದ ಕೋರ್ಟ್ ಆಫ್ ಫೈನಲ್ ಅಪೀಲ್ ನ ವಶದಲ್ಲಿದೆ. ಬೇಸಿಕ್ ಲಾನ(ಮೂಲಭೂತ ಕಾಯ್ದೆ) ಅಡಿಯಲ್ಲಿ, ಅದರ ಸಂವಿಧಾನ, ಭೂಪ್ರದೇಶವು ಸಂಪ್ರದಾಯ ಕಾನೂನು ವ್ಯಾಪ್ತಿಯಲ್ಲೇ ಉಳಿಯುತ್ತದೆ. ಇದರ ಪರಿಣಾಮವಾಗಿ, ಸಂಪ್ರದಾಯ ಕಾನೂನನ್ನು ಪಾಲಿಸುವ ಇತರ ಅಧಿಕಾರ ಕ್ಷೇತ್ರಗಳ(ಇಂಗ್ಲೆಂಡ್ ಹಾಗು ವೇಲ್ಸ್ ನ್ನು ಒಳಗೊಂಡಂತೆ) ನ್ಯಾಯಾಧೀಶರುಗಳನ್ನು ಇಲ್ಲಿಗೆ ನೇಮಕ ಮಾಡಿಕೊಳ್ಳಬಹುದು. ಜೊತೆಗೆ ಇವರು ಬೇಸಿಕ್ ಲಾನ ೯೨ನೇ ನಿಬಂಧನೆಯ ಪ್ರಕಾರ ನ್ಯಾಯಾಂಗಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರೆಸಬಹುದು. ಮತ್ತೊಂದು ಕಡೆಯಲ್ಲಿ, ಸ್ವತಃ ಬೇಸಿಕ್ ಲಾನ ಅಧಿಕಾರದ ವ್ಯಾಖ್ಯಾನವು ರಾಷ್ಟ್ರೀಯ ಕಾನೂನಾಗಿದ್ದು, ಬೀಜಿಂಗ್ ನಲ್ಲಿ ಸ್ಟ್ಯಾಂಡಿಂಗ್ ಕಮಿಟಿ ಆಫ್ ದಿ ನ್ಯಾಷನಲ್ ಪೀಪಲ್'ಸ್ ಕಾಂಗ್ರೆಸ್ಸ್ (NPCSC)ನ ವಶದಲ್ಲಿದೆ.(ಪೂರ್ವಾನ್ವಯ ಹೊಂದಿರುವ ಕಾಯಿದೆಯ ಪರಿಣಾಮವಿಲ್ಲದೆ), ಅಲ್ಲದೇ ನ್ಯಾಯಾಲಯಗಳು ಮೊಕದ್ದಮೆಗಳ ವಿಚಾರಣೆ ನಡೆಸುವಾಗ ಬೇಸಿಕ್ ಲಾವನ್ನು ವ್ಯಾಖ್ಯಾನಿಸಲು, ಬೇಸಿಕ್ ಲಾನ ೧೫೮ನೇ ನಿಬಂಧನೆಯ ಅನುಸಾರವಾಗಿ ಅಧಿಕಾರ ಪಡೆದಿರುತ್ತವೆ. ಈ ವ್ಯವಸ್ಥೆಯು ೧೯೯೯ರ ವಾಸಿಸುವ ಹಕ್ಕಿನ ಪರಿಗಣನೆಗೆ ಸಂಬಂಧಿಸಿದಂತೆ ವಿವಾದಾತ್ಮಕವಾಯಿತು, ಇದು ನ್ಯಾಯಾಂಗ ಸ್ವಾತಂತ್ರ್ಯದ ಹಿತಾಸಕ್ತಿಯನ್ನು ಹುಟ್ಟುಹಾಕಿತು.
ಭಾರತ
[ಬದಲಾಯಿಸಿ]ಭಾರತದಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಜನವರಿ ೨೮, ೧೯೫೦ರಲ್ಲಿ ಸಂವಿಧಾನದ ಅಂಗೀಕಾರದ ನಂತರ ಸ್ಥಾಪಿಸಲಾಯಿತು. ಭಾರತ ಸಂವಿಧಾನದ ೧೪೧ ನಿಬಂಧನೆಯು, ಸರ್ವೋಚ್ಚ ನ್ಯಾಯಾಲಯವು ಘೋಷಿಸುವ ಕಾನೂನಿಗೆ, ಭಾರತದ ಭೂಪ್ರದೇಶದೊಳಗಿರುವ ಎಲ್ಲ ನ್ಯಾಯಾಲಯಗಳು ಬದ್ಧವಾಗಿರುತ್ತವೆಂದು ನಿರ್ದೇಶಿಸಿತು.
ಜಮ್ಮು ಹಾಗು ಕಾಶ್ಮೀರ(J&K)ರಾಜ್ಯಕ್ಕೆ ಸಂಬಂಧಿಸಿದಂತೆ, ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಹಲವಾರು ಐತಿಹಾಸಿಕ ಕಾರಣಗಳಿಂದಾಗಿ J&K ಭಾರತದ ಇತರ ರಾಜ್ಯಗಳಿಗಿಂತ ವಿಶೇಷ ಸ್ಥಾನಮಾನಗಳನ್ನು ಪಡೆದಿದೆ. ಭಾರತೀಯ ಸಂವಿಧಾನದ ೩೭೦ನೇ ನಿಭಂದನೆಯು J&Kಗಾಗಿ ಕೆಲವು ವಿನಾಯಿತಿಗಳನ್ನು ರೂಪಿಸಿದೆ. ಭಾರತೀಯ ಸಂವಿಧಾನವು J&K ರಾಜ್ಯಕ್ಕೆ ಸಂಪೂರ್ಣವಾಗಿ ಅನ್ವಯವಾಗುವುದಿಲ್ಲ. ಇದು ೩೭೦ನೇ ನಿಬಂಧನೆಯ ಪರಿಣಾಮವಾಗಿದೆ. ಭಾರತೀಯ ಸಂವಿಧಾನವು J&K ರಾಜ್ಯಕ್ಕೆ ಹಲವಾರು ಮಾರ್ಪಾಡುಗಳು ಹಾಗು ವಿನಾಯಿತಿಗಳೊಂದಿಗೆ ಅನ್ವಯವಾಗುತ್ತದೆ. ಇವುಗಳು ೧೯೫೪ರ ಸಾಂವಿಧಾನಿಕ ಆದೇಶದಲ್ಲಿ ಕಂಡುಬರುತ್ತವೆ.(ಜಮ್ಮು ಹಾಗು ಕಾಶ್ಮೀರಕ್ಕೆ ಅನ್ವಯವಾಗುತ್ತದೆ). ಅಲ್ಲದೆ, ಜಮ್ಮು ಹಾಗು ಕಾಶ್ಮೀರ, ಭಾರತದ ಇತರ ರಾಜ್ಯಗಳಿಗಿಂತ ಭಿನ್ನವಾಗಿ, ತನ್ನದೇ ಆದ ಸಂವಿಧಾನವನ್ನೂ ಸಹ ಹೊಂದಿದೆ. ಆದಾಗ್ಯೂ, ಭಾರತೀಯ ಸಂವಿಧಾನವು ಜಮ್ಮು ಹಾಗು ಕಾಶ್ಮೀರ ರಾಜ್ಯಕ್ಕೆ ಹಲವಾರು ಮಾರ್ಪಾಡುಗಳೊಂದಿಗೆ ಅನ್ವಯವಾದರೂ ಸಹ, ೧೯೫೪ರ ಸಾಂವಿಧಾನಿಕ ಆದೇಶವು(ಜಮ್ಮು ಹಾಗು ಕಾಶ್ಮೀರ ರಾಜ್ಯಕ್ಕೆ ಅನ್ವಯವಾಗಿ) J&K ರಾಜ್ಯಕ್ಕೆ ೧೪೧ನೇ ನಿಬಂಧನೆಯನ್ನು ಅನ್ವಯವಾಗುವಂತೆ ಮಾಡುತ್ತದೆ. ಇದು ಈ ರೀತಿಯಾದ ಸರ್ವೋಚ್ಚ ನ್ಯಾಯಾಲಯವು ಘೋಷಿಸುವ ಕಾನೂನು, ಉಚ್ಚ ನ್ಯಾಯಾಲಯವೂ ಸೇರಿದಂತೆ J&K ಎಲ್ಲ ನ್ಯಾಯಾಲಯಗಳಿಗೂ ಅನ್ವಯವಾಗುತ್ತದೆ.
ಐರ್ಲೆಂಡ್
[ಬದಲಾಯಿಸಿ]ಸರ್ವೋಚ್ಚ ನ್ಯಾಯಾಲಯವು ಐರ್ಲೆಂಡ್ ನ ಉನ್ನತ ನ್ಯಾಯಾಲಯವಾಗಿದೆ. ಇದು ಸಂವಿಧಾನವನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ಪಡೆದಿರುತ್ತದೆ, ಅಲ್ಲದೇ ರಾಷ್ಟ್ರದ ಕಾನೂನುಗಳು ಹಾಗು ಚಟುವಟಿಕೆಗಳು ಸಂವಿಧಾನಕ್ಕೆ ವಿರುದ್ಧವಾಗಿದೆಯೆಂದು ಕಂಡುಬಂದರೆ ಅವುಗಳನ್ನು ರದ್ದುಪಡಿಸುವ ಅಧಿಕಾರವನ್ನೂ ಸಹ ಹೊಂದಿರುತ್ತದೆ. ಇದು ಕಾನೂನು ವ್ಯಾಖ್ಯಾನದಲ್ಲಿರುವ ಉನ್ನತ ಅಧಿಕಾರವೂ ಸಹ ಹೌದು. ಸಾಂವಿಧಾನಿಕವಾಗಿ, ಇದು ಸಂವಿಧಾನವನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ಹೊಂದಿರಬೇಕು. ಆದರೆ ಅದರ ಕಿರಿಯ ನ್ಯಾಯಾಲಯಗಳ ಹೆಚ್ಚಿನ ಮೇಲ್ಮನವಿ ಕಾನೂನು ವ್ಯಾಪ್ತಿಯನ್ನು ಕಾನೂನು ನಿರೂಪಿಸುತ್ತದೆ. ಐರಿಶ್ ಸರ್ವೋಚ್ಚ ನ್ಯಾಯಾಲಯವು ಅದರ ಮೇಲ್ವಿಚಾರಣೆ ಸದಸ್ಯ, ಮುಖ್ಯ ನ್ಯಾಯಮೂರ್ತಿ ಹಾಗು ಏಳು ಇತರ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ. ಸರ್ವೋಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರುಗಳನ್ನು ಅಧ್ಯಕ್ಷರು ಸರ್ಕಾರದ ಸಲಹೆಯ ಮೇರೆಗೆ ನೇಮಕ ಮಾಡುತ್ತಾರೆ. ಸರ್ವೋಚ್ಚ ನ್ಯಾಯಾಲಯವು ಡಬ್ಲಿನ್ ನಲ್ಲಿರುವ ಫೋರ್ ಕೋರ್ಟ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ.
ಇಸ್ರೇಲ್
[ಬದಲಾಯಿಸಿ]ಇಸ್ರೇಲ್ ನ ಸರ್ವೋಚ್ಚ ನ್ಯಾಯಾಲಯವು(ಹೀಬ್ರೂ:בית המשפט העליון, ಬೆಯಿಟ್ ಹಮಿಶ್ಪಾತ್ ಹ'ಎಲ್ಯೋನ್) ಇಸ್ರೇಲ್ ರಾಷ್ಟ್ರದ ಕಾನೂನು ವ್ಯವಸ್ಥೆಯ ಪ್ರಮುಖ ಅಂಗವಾಗಿದೆ. ಇದು ಉನ್ನತ ವಿಚಾರಣಾ ನ್ಯಾಯಸ್ಥಾನವಾಗಿದೆ. ಸರ್ವೋಚ್ಚ ನ್ಯಾಯಾಲಯವು ಜರುಸಲೇಮ್ ನಲ್ಲಿ ಸ್ಥಾಪಿತವಾಗಿದೆ. ಸಂಪೂರ್ಣ ರಾಷ್ಟ್ರವು ಇದರ ಕಾನೂನು ವ್ಯಾಪ್ತಿಗೆ ಒಳಪಡುತ್ತದೆ. ಸರ್ವೋಚ್ಚ ನ್ಯಾಯಾಲಯದ ಅಧಿಕೃತ ತೀರ್ಪು, ಸ್ವತಃ ಸರ್ವೋಚ್ಚ ನ್ಯಾಯಾಲಯವನ್ನು ಹೊರತುಪಡಿಸಿ ಪ್ರತಿಯೊಂದು ನ್ಯಾಯಾಲಯವನ್ನು ಬದ್ಧಗೊಳಿಸುತ್ತದೆ. ಇಸ್ರೇಲಿ ಸರ್ವೋಚ್ಚ ನ್ಯಾಯಾಲಯವು ಮೇಲ್ಮನವಿ ನ್ಯಾಯಾಲಯ ಹಾಗು ಉಚ್ಚ ನ್ಯಾಯಾಲಯ ಎರಡೂ ಸಹ ಆಗಿದೆ. ಮೇಲ್ಮನವಿ ನ್ಯಾಯಾಲಯವಾಗಿ, ಸರ್ವೋಚ್ಚ ನ್ಯಾಯಾಲಯವು, ತೀರ್ಪನ್ನು ಪ್ರಶ್ನಿಸಿ ಬಂದಿರುವ ಮೇಲ್ಮನವಿಗಳು(ಕ್ರಿಮಿನಲ್ ಹಾಗು ಸಿವಿಲ್ ಎರಡೂ) ಹಾಗು ಜಿಲ್ಲಾ ನ್ಯಾಯಾಲಯಗಳ ಇತರ ನಿರ್ಣಯಗಳನ್ನು ಪ್ರಶ್ನಿಸಿ ವಿಚಾರಣೆಯನ್ನು ನಡೆಸುತ್ತದೆ. ಹಲವಾರು ತರಹದ ನ್ಯಾಯಾಂಗ ಹಾಗು ಭಾಗಶಃ ನ್ಯಾಯಾಂಗದ ತೀರ್ಪುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳನ್ನೂ ಸಹ ಇದು ಪರಿಗಣಿಸುತ್ತದೆ, ಉದಾಹರಣೆಗೆ ನೆಸ್ಸೆಟ್ ಚುನಾವಣೆಗಳ ಕಾನೂನುಬದ್ಧತೆಗೆ ಸಂಬಂಧಿಸಿದ ವಿಷಯಗಳು ಹಾಗು ಬಾರ್ ಅಸೋಸಿಯೇಶನ್ ನ ಶಿಸ್ತಿನ ಅಧಿಕೃತ ತೀರ್ಪುಗಳು. ಉನ್ನತ ನ್ಯಾಯಾಲಯವಾಗಿ(ಹೀಬ್ರೂ: ಬೆಯಿಟ್ ಮಿಶ್ಪತ್ ಗವೋಹ ಲೇ'ಜೆದೆಕ್ בית משפט גבוה לצדק; ಇದು ತನ್ನ ಪ್ರಥಮಾಕ್ಷರಿಗಳಾದ ಬಗತ್ಜ್ ನಿಂದಲೂ ಸಹ ಪರಿಚಿತವಾಗಿದೆ בג"ץ), ಸರ್ವೋಚ್ಚ ನ್ಯಾಯಾಲಯವು ಆರಂಭಿಕ ವಿಚಾರಣಾ ನ್ಯಾಯಸ್ಥಾನವಾಗಿಯೂ ಅಧಿಕಾರ ಹೊಂದಿರುತ್ತದೆ, ಪ್ರಾಥಮಿಕವಾಗಿ ಇದು ರಾಷ್ಟ್ರದ ಅಧಿಕೃತ ಮಂಡಳಿಯ ನಿರ್ಣಯಗಳ ವಿಧಿಬದ್ಧತೆಗೆ ಸಂಬಂಧಿಸಿದ ವಿಷಯಗಳನ್ನು ಪರಿಗಣಿಸುತ್ತದೆ: ಸರ್ಕಾರಿ ನಿರ್ಣಯಗಳು, ಸ್ಥಳೀಯ ಅಧಿಕೃತ ಮಂಡಳಿಗಳ ಹಾಗು ಇತರ ಅಂಗಗಳು ಹಾಗು ಕಾನೂನಿನಡಿ ಸಾರ್ವಜನಿಕ ಸಭೆಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು, ಹಾಗು ನೆಸ್ಸೆಟ್ ಕಾಯಿದೆ ಮಾಡಿದ ಕಾನೂನುಗಳ ಸಂವಿಧಾನಬದ್ಧತೆಗೆ ಎದುರಾಗುವ ನೇರ ಸವಾಲುಗಳನ್ನು ಪರಿಗಣಿಸುತ್ತದೆ. ಕಾನೂನಿನ ಹಿತಾಸಕ್ತಿಯಲ್ಲಿ ಪರಿಹಾರ ಅಗತ್ಯವೆಂದು ಪರಿಗಣಿಸಲಾಗುವ ವಿಷಯಗಳ ಮೇಲೆ ನ್ಯಾಯಾಲಯವು ವಿವೇಚನೆಗೆ ಒಳಪಟ್ಟ ಅಧಿಕಾರವನ್ನು ಹೊಂದಿರುವುದರ ಜೊತೆಗೆ ಇವುಗಳು ಮತ್ತೊಂದು ನ್ಯಾಯಾಲಯ ಅಥವಾ ನ್ಯಾಯಪೀಠದ ವ್ಯಾಪ್ತಿಗೆ ಸೇರಿರುವುದಿಲ್ಲ. ಉಚ್ಚ ನ್ಯಾಯಾಲಯವು ತಡೆಯಾಜ್ಞೆ, ಆಜ್ಞಾಪತ್ರ ಹಾಗು ಹೇಬಿಸ್ ಕಾರ್ಪಸ್ ನಂತಹ ಆದೇಶಗಳ ಮೂಲಕ, ಹಾಗು ದೃಢಪಡಿಸುವ ನಿರ್ಣಯಗಳ ಮೂಲಕ ಪರಿಹಾರ ಒದಗಿಸುತ್ತದೆ. ಸರ್ವೋಚ್ಚ ನ್ಯಾಯಾಲಯವು, ತನ್ನದೇ ತೀರ್ಪನ್ನು ಪ್ರಶ್ನಿಸಿ 「ಹೆಚ್ಚಿನ ವಿಚಾರಣೆಯನ್ನು」 ನಡೆಸಬಹುದು. ಸರ್ವೋಚ್ಚ ನ್ಯಾಯಾಲಯವು ನೀಡಿದ ಅಧಿಕೃತ ತೀರ್ಪು ನೀಡಿದ ವಿಷಯದಲ್ಲಿ - ಮೇಲ್ಮನವಿ ನ್ಯಾಯಾಲಯವಾಗಿ ಅಥವಾ ಉಚ್ಚ ನ್ಯಾಯಾಲಯವಾಗಿ - ಮೂರು ಅಥವಾ ಅದಕ್ಕೂ ಹೆಚ್ಚು ನ್ಯಾಯಾಧೀಶರನ್ನು ಒಳಗೊಂಡ ತಂಡದೊಂದಿಗೆ, ಮತ್ತಷ್ಟು ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಒಳಗೊಂಡ ತಂಡದೊಂದಿಗೆ ಹೆಚ್ಚಿನ ವಿಚಾರಣೆಯನ್ನೂ ನಡೆಸಬಹುದು. ಸರ್ವೋಚ್ಚ ನ್ಯಾಯಾಲಯವು ಹಿಂದಿನ ಅಧಿಕೃತ ತೀರ್ಪಿನೊಂದಿಗೆ ಅಧಿಕೃತ ತೀರ್ಪನ್ನು ಅಸಮಂಜಸಗೊಳಿಸಿದರೆ ಹೆಚ್ಚಿನ ವಿಚಾರಣೆಯನ್ನು ನಡೆಸಬಹುದು ಅಥವಾ ನ್ಯಾಯಾಲಯವು ಪ್ರಾಮುಖ್ಯತೆ, ಕ್ಲಿಷ್ಟತೆ ಅಥವಾ ಅಧಿಕೃತ ತೀರ್ಪಿನ ನವೀನತೆಯನ್ನು ಪರಿಗಣಿಸಿದರೆ, ನ್ಯಾಯಾಲಯವು ಇಂತಹ ವಿಚಾರಣೆಯನ್ನು ಸಮರ್ಥಿಸುತ್ತದೆ. ಸರ್ವೋಚ್ಚ ನ್ಯಾಯಾಲಯವು "ಟ್ರಯಲ್ ಡೆ ನೋವೋ" (ಮರುವಿಚಾರಣೆ) ಆದೇಶವನ್ನು ಜಾರಿಗೆ ತರುವ ವಿಶಿಷ್ಟ ಅಧಿಕಾರ ಹೊಂದಿರುತ್ತದೆ.
ನ್ಯೂಜಿಲೆಂಡ್
[ಬದಲಾಯಿಸಿ]ನ್ಯೂಜಿಲೆಂಡ್ ನಲ್ಲಿ, ಸುಪ್ರೀಂ ಕೋರ್ಟ್ ಆಕ್ಟ್(೨೦೦೩) ನ ಅಂಗೀಕಾರವನ್ನು ಅನುಸರಿಸಿ ಇತ್ತೀಚಿಗೆ ಪ್ರಿವಿ ಕೌನ್ಸಿಲ್ ಗೆ ಮೇಲ್ಮನವಿ ಹೋಗುವ ಹಕ್ಕನ್ನು ರದ್ದುಪಡಿಸಲಾಗಿದೆ. ಹೊಸ ನ್ಯೂಜಿಲೆಂಡ್ ಸರ್ವೋಚ್ಚ ನ್ಯಾಯಾಲಯವನ್ನು ಅಧಿಕೃತವಾಗಿ ೨೦೦೪ರ ಆರಂಭದಲ್ಲಿ ಸ್ಥಾಪಿಸಲಾಯಿತು, ಆದಾಗ್ಯೂ ಇದು ಜುಲೈ ತಿಂಗಳವರೆಗೂ ಕಾರ್ಯರೂಪಕ್ಕೆ ಬರಲಿಲ್ಲ. ಸೆಪ್ಟೆಂಬರ್ ೨೦೦೬ರಲ್ಲಿ, ಸಮರ್ಪಿತ ಸರ್ವೋಚ್ಚ ನ್ಯಾಯಾಲಯ ಕಟ್ಟಡದ ಹೊಸ ವಿನ್ಯಾಸವನ್ನು ಪ್ರಕಟಿಸಲಾಯಿತು, ಜೊತೆಗೆ ಕಟ್ಟಡ ಕೆಲಸವು ೨೦೦೯ರಲ್ಲಿ ಪೂರ್ಣಗೊಂಡಿತು. ನ್ಯೂಜಿಲೆಂಡ್ ನ ಉಚ್ಚ ನ್ಯಾಯಾಲಯವು ೧೯೮೦ರವರೆಗೂ ಸರ್ವೋಚ್ಚ ನ್ಯಾಯಾಲಯವೆಂದೇ ಪರಿಚಿತವಾಗಿತ್ತು.
ಪಾಕಿಸ್ತಾನ
[ಬದಲಾಯಿಸಿ]ಪಾಕಿಸ್ತಾನವು ಗಣತಂತ್ರದ ರಾಷ್ಟ್ರವೆಂದು ೧೯೫೬ರಲ್ಲಿ ಘೋಷಣೆಯಾದಾಗ ಸರ್ವೋಚ್ಚ ನ್ಯಾಯಾಲಯವು ಅದರ ಅಪೆಕ್ಸ್ ನ್ಯಾಯಾಲಯವಾಯಿತು.(ಇದಕ್ಕೂ ಮುಂಚೆ ಪ್ರೀವಿ ಕೌನ್ಸಿಲ್ ಇದರ ಕಾರ್ಯಭಾರವನ್ನು ನಿರ್ವಹಿಸುತ್ತಿತ್ತು). ಸಾಂವಿಧಾನಿಕ ಕಾನೂನು, ಫೆಡರಲ್ ಕಾನೂನು ಅಥವಾ ಮಿಶ್ರ ಫೆಡರಲ್ ವಿಷಯಗಳು ಹಾಗು ಪ್ರಾಂತೀಯ ವಿಚಾರಣಾಧಿಕಾರಕ್ಕೆ ಸಂಬಂಧಿಸಿದ ವಿಷಯಗಳಿಗೆ ಸರ್ವೋಚ್ಚ ನ್ಯಾಯಾಲಯವು ನೀಡುವ ತೀರ್ಪೇ ಅಂತಿಮವಾಗಿರುತ್ತಿತ್ತು. ಸಾಂವಿಧಾನಿಕ ಸ್ವರೂಪದ ವಿಷಯಗಳು ಚರ್ಚೆಗೆ ಬಂದರೆ ಮಾತ್ರ ಪ್ರಾಂತೀಯ ವಿಚಾರಣಾಧಿಕಾರ ವಿಷಯಗಳಿಗೆ ಸಂಬಂಧಿಸಿದಂತೆ ಇದು ಮೇಲ್ಮನವಿಯನ್ನು ಆಲಿಸಬಹುದಿತ್ತು.
ಪಾಕಿಸ್ತಾನದ ಭೂಪ್ರದೇಶಗಳಿಗೆ ಸಂಬಂಧಿಸಿದಂತೆ(ಅದೆಂದರೆ FATA, ಆಜಾದ್ ಕಾಶ್ಮೀರ್, ಉತ್ತರದ ಪ್ರದೇಶಗಳು ಹಾಗು ಇಸ್ಲಾಮಾಬಾದ್ ಕ್ಯಾಪಿಟಲ್ ಟೆರಿಟರಿ(ICT)) ಸರ್ವೋಚ್ಚ ನ್ಯಾಯಾಲದ ವ್ಯಾಪ್ತಿಯು ಸೀಮಿತವಾಗಿದ್ದು, ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ;ಇಲ್ಲಿ FATA ಹಾಗು ಉತ್ತರದ ಪ್ರದೇಶಗಳ ಸಾಂವಿಧಾನಿಕ ಸ್ವರೂಪದ ಮೇಲ್ಮನವಿಗಳನ್ನು ಮಾತ್ರ ಇದು ವಿಚಾರಣೆ ನಡೆಸಬಹುದು, ICT ಸಾಧಾರಣವಾಗಿ ಪ್ರಾಂತಗಳ ಮಾದರಿಯೇ ಕಾರ್ಯ ನಿರ್ವಹಿಸುತ್ತದೆ. ಆಜಾದ್ ಕಾಶ್ಮೀರ್ ತನ್ನದೇ ಆದ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ ಪಾಕಿಸ್ತಾನದ ಸಂವಿಧಾನವು ಇದಕ್ಕೆ ಅನ್ವಯವಾಗುವುದಿಲ್ಲ; ಆಜಾದ್ ಕಾಶ್ಮೀರ್ ನಿಂದ ಬಂದ ಮೇಲ್ಮನವಿಗಳು ಪಾಕಿಸ್ತಾನದೊಂದಿಗಿನ ಅದರ ಸಂಬಂಧಕ್ಕೆ ಸೇರಿಕೊಂಡಿರುತ್ತವೆ.
ಪ್ರಾಂತಗಳು ತಮ್ಮದೇ ಆದ ಕಾನೂನು ವ್ಯವಸ್ಥೆಯನ್ನು ಹೊಂದಿರುತ್ತವೆ, ಜೊತೆಗೆ ಮೇಲೆ ಉಲ್ಲೇಖಿಸಿದಂತೆ ಒಂದು ಮೇಲ್ಮನವಿಯು ಸರ್ವೋಚ್ಚ ನ್ಯಾಯಾಲದಲ್ಲಿ ವಿಚಾರಣೆಗೆ ಬರುವುದಾದರೆ ಅದನ್ನು ಹೊರತುಪಡಿಸಿ ಉಚ್ಚ ನ್ಯಾಯಾಲಯವನ್ನು ಅಪೆಕ್ಸ್ ನ್ಯಾಯಾಲಯವೆಂದು ಕರೆಯಲಾಗುತ್ತದೆ.
ಯುನೈಟೆಡ್ ಕಿಂಗ್‌ಡಮ್
[ಬದಲಾಯಿಸಿ]ಯುನೈಟೆಡ್ ಕಿಂಗ್ಡಮ್ ನ ಸರ್ವೋಚ್ಚ ನ್ಯಾಯಾಲಯವನ್ನು ಕಾನ್ಸ್ಟಿಟ್ಯೂಶನಲ್ ರಿಫಾರ್ಮ್ ಆಕ್ಟ್ ೨೦೦೫ ಮೂಲಕ ೧ ಅಕ್ಟೋಬರ್ ೨೦೦೯ರಿಂದ ಜಾರಿಗೆ ಬರುವಂತೆ ಸ್ಥಾಪನೆ ಮಾಡಲಾಯಿತು. ಅದಲ್ಲದೇ ಹೌಸ್ ಆಫ್ ಲಾರ್ಡ್ಸ್ ನ ನ್ಯಾಯಾಂಗ ಕಾರ್ಯಭಾರವನ್ನು ವಹಿಸಲಾಯಿತು. ಇದು UKಯುದ್ದಕ್ಕೂ ಬರುವ ಸಿವಿಲ್ ಮೊಕದ್ದಮೆಗಳಿಗೆ ಅಂತಿಮ ಅಪೀಲು(ಮೇಲ್ಮನವಿ)ಸಲ್ಲಿಕೆಗೆ ನ್ಯಾಯವ್ಯಾಪ್ತಿಯಾಗಿತ್ತು, ಜೊತೆಗೆ ಉತ್ತರ ಐರ್ಲೆಂಡ್, ಇಂಗ್ಲೆಂಡ್ ಹಾಗು ವೇಲ್ಸ್ ನ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಯನ್ನೂ ನಡೆಸುತ್ತಿತ್ತು. ಯುನೈಟೆಡ್ ಕಿಂಗ್ಡಂನಲ್ಲಿ, ಪ್ರತ್ಯೇಕ ಶಾಸಕಾಂಗಗಳಿದ್ದು, ವೇಲ್ಸ್, ಉತ್ತರ ಐರ್ಲೆಂಡ್ ಹಾಗು ಸ್ಕಾಟ್ಲ್ಯಾಂಡ್ ನ ಮೇಲೆ ಸೀಮಿತವಾದ ಪರಂಪರಾಗತ ಅಧಿಕಾರವಿತ್ತು: ಸ್ಕಾಟ್ಲ್ಯಾಂಡ್ ಆಕ್ಟ್ ೧೯೯೮, ಗವರ್ನಮೆಂಟ್ ಆಫ್ ವೇಲ್ಸ್ ಆಕ್ಟ್ ಹಾಗು ನಾರ್ದನ್ ಐರ್ಲೆಂಡ್ ಆಕ್ಟ್ ನ ಅಡಿಯಲ್ಲಿ ಬರುವ ಪರಂಪರಾಗತ ಅಧಿಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಜುಡಿಷಲ್ ಕಮಿಟಿ ಆಫ್ ದಿ ಪ್ರಿವಿ ಕೌನ್ಸಿಲ್ ನಿಂದ ಕಾನ್ಸ್ಟಿಟ್ಯೂಶನಲ್ ರಿಫಾರ್ಮ್ ಆಕ್ಟ್ ನ ಮೂಲಕ ರಚನೆಯಾದ ಹೊಸ ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತಿತ್ತು.
ಕಮ್ಯೂನಿಟಿ ಲಾಗೆ (ಸಮುದಾಯ ಕಾನೂನು)ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ ನ ನಿರ್ಣಯಗಳಿಗೆ ಬದ್ಧವಾಗಿರಬೇಕಾಗುತ್ತದೆ. ಸರ್ವೋಚ್ಚ ನ್ಯಾಯಾಲಯವು ಯಾವುದೇ ಮೇಲ್ಮನವಿಯನ್ನು ಸ್ವೀಕರಿಸದ ಕಾರಣ, ವಿಚಾರಣಾವಧಿಯ ವಿಧಾನದ ಮೂಲಕ ಸರ್ವೋಚ್ಚ ನ್ಯಾಯಾಲಯವು ತನ್ನ ಮುಂದೆ ಬರುವ ಯುರೋಪಿಯನ್ ಕಾನೂನಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಯುರೋಪಿಯನ್ ನ್ಯಾಯಾಲಯವನ್ನು ಸೂಚಿಸುತ್ತದೆ, ಜೊತೆಗೆ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ನೀಡುವ ಮೊದಲು ಒಂದು ನಿರ್ಣಾಯಕ ಅಧಿಕೃತ ತೀರ್ಪನ್ನು ಪಡೆದುಕೊಳ್ಳುತ್ತದೆ.
ಸರ್ವೋಚ್ಚ ನ್ಯಾಯಾಲಯವು ತನ್ನ ಸದಸ್ಯರು ಹಾಗು ಸ್ಥಳವನ್ನು ಮಿಡಲ್ಸೆಕ್ಸ್ ಗಿಲ್ಡ್ ಹಾಲ್ ನಲ್ಲಿ ಜುಡಿಷಲ್ ಕಮಿಟಿ ಆಫ್ ದಿ ಪ್ರಿವಿ ಕೌನ್ಸಿಲ್ ನೊಂದಿಗೆ ಹಂಚಿಕೊಳ್ಳುತ್ತದೆ, ಇದು ಕೆಲವು ಸಣ್ಣ ಕಾಮನ್ವೆಲ್ತ್ ರಾಜ್ಯಗಳು ಹಾಗು ವಸಾಹತು ನೆಲೆಗಳು, ನೌಕಾ ಇಲಾಖೆಗೆ ಸಂಬಂಧಿಸಿದ ವಿಷಯಗಳು ಹಾಗು ಚರ್ಚಿನ ನ್ಯಾಯಾಲಯಗಳಿಂದ ಹಾಗು ವೃತ್ತಿಪರ ಹಾಗು ಶೈಕ್ಷಣಿಕ ಅಂಗಗಳಂತಹ ಶಾಸನೋಕ್ತ ಖಾಸಗಿ ನ್ಯಾಯವ್ಯಾಪ್ತಿಗಳ ಕೆಲವು ಮೇಲ್ಮನವಿಗಳು ವಿಚಾರಣೆ ನಡೆಸುತ್ತದೆ.
(ಕಾನ್ಸ್ಟಿಟ್ಯೂಶನಲ್ ರಿಫಾರ್ಮ್ ಆಕ್ಟ್ ವಿರಳವಾಗಿ ಉಲ್ಲೇಖಿತವಾಗುವ ಸುಪ್ರೀಂ ಕೋರ್ಟ್ ಆಫ್ ಜೂಡಿಕೇಚರ್ ಫಾರ್ ಇಂಗ್ಲೆಂಡ್ ಅಂಡ್ ವೇಲ್ಸ್ ನ್ನು ಸೀನಿಯರ್ ಕೋರ್ಟ್ಸ್ ಆಫ್ ಇಂಗ್ಲೆಂಡ್ ಅಂಡ್ ವೇಲ್ಸ್ ಎಂದು ಮರುನಾಮಕರಣ ಮಾಡಿತು).
ಅಮೇರಿಕ ಸಂಯುಕ್ತ ಸಂಸ್ಥಾನ
[ಬದಲಾಯಿಸಿ]ಸುಪ್ರೀಂ ಕೋರ್ಟ್ ಆಫ್ ದಿ ಯುನೈಟೆಡ್ ಸ್ಟೇಟ್ಸ್, ಅಮೆರಿಕ ಸಂಯುಕ್ತ ಸಂಸ್ಥಾನದ ಉಚ್ಚ ಫೆಡರಲ್ ನ್ಯಾಯಾಲಯ ೧೭೮೯ರಲ್ಲಿ ಸ್ಥಾಪನೆಯಾಗಿದೆ, ಜೊತೆಗೆ ನ್ಯಾಯಮೂರ್ತಿ ಐರೆಡೆಲ್ ರ ಭಿನ್ನಾಭಿಪ್ರಾಯವನ್ನು ಕಾಲ್ಡರ್ V. ಬುಲ್ ನಲ್ಲಿ ಮೊದಲ ಬಾರಿಗೆ ನ್ಯಾಯಾಂಗ ಮರುಪರೀಕ್ಷಾ ಅಧಿಕಾರದೊಂದಿಗೆ ನೀಡಲಾಗಿದೆ. ನಂತರದಲ್ಲಿ ನ್ಯಾಯಮೂರ್ತಿ ಮಾರ್ಷಲ್, ಮಾರ್ಬರಿ V. ಮ್ಯಾಡಿಸನ್ (೧೮೦೩)ವಿಚಾರಣೆಯಲ್ಲಿ ಸುಸಂಬದ್ಧ ಅಧಿಕಾರವನ್ನು ನೀಡಿದರು. ಪ್ರಸಕ್ತ US ಸರ್ವೋಚ್ಚ ನ್ಯಾಯಾಲಯದಲ್ಲಿ ಒಂಬತ್ತು ನ್ಯಾಯಮೂರ್ತಿಗಳಿಗಾಗಿರುವ ಸ್ಥಾನಗಳಿವೆ.
ಪ್ರತಿಯೊಂದು U.S. ರಾಜ್ಯವು ಒಂದು ರಾಜ್ಯ ಮಟ್ಟದ ಸರ್ವೋಚ್ಚ ನ್ಯಾಯಾಲಯವನ್ನು ಹೊಂದಿರುತ್ತದೆ, ಇದು ರಾಜ್ಯದ ಕಾನೂನನ್ನು ವ್ಯಾಖ್ಯಾನಿಸುವ ಹಾಗು ರಾಜ್ಯದ ನ್ಯಾಯಾಂಗವನ್ನು ನಿರ್ವಹಿಸುವ ಉನ್ನತ ಅಧಿಕಾರವಾಗಿದೆ. ಎರಡು ರಾಜ್ಯಗಳು, ಓಕ್ಲಹೋಮ ಹಾಗು ಟೆಕ್ಸಾಸ್, ಪ್ರತಿಯೊಂದು ಪ್ರತ್ಯೇಕ ಉಚ್ಚ ನ್ಯಾಯಾಲಯಗಳನ್ನು ಹೊಂದಿರುತ್ತವೆ, ಇವುಗಳು ಕ್ರಮವಾಗಿ ಕ್ರಿಮಿನಲ್ ಮೊಕದ್ದಮೆಗಳು ಹಾಗು ಸಿವಿಲ್ ಮೊಕದ್ದಮೆಗಳಲ್ಲಿ ವಿಶೇಷತೆ ಹೊಂದಿರುತ್ತವೆ. ಆದಾಗ್ಯೂ ಡೆಲವೇರ್ ಧರ್ಮಸಮ್ಮತ ಹಕ್ಕಿನ ಬಗ್ಗೆ ವಿಚಾರಣೆ ನಡೆಸಲು ಒಂದು ವಿಶೇಷ ನ್ಯಾಯಾಲಯ ಕೋರ್ಟ್ ಆಫ್ ಚಾನ್ಸರಿಯನ್ನು ಹೊಂದಿದೆ, ಇದು ಸರ್ವೋಚ್ಚ ನ್ಯಾಯಾಲಯವಲ್ಲ ಏಕೆಂದರೆ ಡೆಲವೇರ್ ಸರ್ವೋಚ್ಚ ನ್ಯಾಯಾಲಯವು ಮೇಲ್ಮನವಿಗಾಗಿ ತನ್ನ ಮೇಲಿನ ನ್ಯಾಯಾಲಯವೊಂದನ್ನು ಹೊಂದಿದೆ.[೧]
ರಾಜ್ಯ ಸರ್ವೋಚ್ಚ ನ್ಯಾಯಾಲಯದ ಹೆಸರುಗಳು ಬದಲಾಗುತ್ತವೆ, ಇದು ನ್ಯಾಯವ್ಯಾಪ್ತಿಗಳ ನಡುವೆ ತಪ್ಪುಗ್ರಹಿಕೆಯನ್ನು ಉಂಟುಮಾಡಬಹುದು ಏಕೆಂದರೆ ಒಂದು ರಾಜ್ಯವು ತನ್ನ ಉನ್ನತ ನ್ಯಾಯಾಲಯಕ್ಕೆ ಬಳಸುವ ಹೆಸರನ್ನು ಮತ್ತೊಂದು ರಾಜ್ಯವು ತನ್ನ ಕಿರಿಯ ನ್ಯಾಯಾಲಯಕ್ಕೆ ಬಳಸಬಹುದು. ನ್ಯೂಯಾರ್ಕ್, ಮೇರಿಲ್ಯಾಂಡ್, ಹಾಗು ಡಿಸ್ಟ್ರಿಕ್ಟ್ ಆಫ್ ಕೊಲಂಬಿಯದ ಉಚ್ಚ ನ್ಯಾಯಾಲಯವನ್ನು ಕೋರ್ಟ್ ಆಫ್ ಅಪೀಲ್ಸ್ ಎಂದು ಕರೆಯಲಾಗುತ್ತದೆ, ಈ ಹೆಸರನ್ನು ಹಲವು ರಾಜ್ಯಗಳು ತಮ್ಮ ಮಧ್ಯಂತರ ಮೇಲ್ಮನವಿ ನ್ಯಾಯಾಲಯಗಳಿಗೆ ಬಳಸುತ್ತವೆ. ಇದಲ್ಲದೆ, ನ್ಯೂಯಾರ್ಕ್ ನ ಸಾಮಾನ್ಯ ನ್ಯಾಯವ್ಯಾಪ್ತಿಯಲ್ಲಿ ಬರುವ ವಿಚಾರಣಾ ನ್ಯಾಯಾಲಯಗಳನ್ನು ಸರ್ವೋಚ್ಚ ನ್ಯಾಯಾಲಯವೆಂದು ಕರೆಯಲಾಗುತ್ತದೆ, ಹಾಗು ಮಧ್ಯಂತರ ಮೇಲ್ಮನವಿ ನ್ಯಾಯಾಲಯವನ್ನು ಸರ್ವೋಚ್ಚ ನ್ಯಾಯಾಲಯ, ಮೇಲ್ಮನವಿ ವಿಭಾಗ ಎಂದು ಕರೆಯಲಾಗುತ್ತದೆ. ಪಶ್ಚಿಮ ವರ್ಜೀನಿಯಾದಲ್ಲಿ, ಸುಪ್ರೀಂ ಕೋರ್ಟ್ ಆಫ್ ಅಪೀಲ್ಸ್ ರಾಜ್ಯದ ಉನ್ನತ ನ್ಯಾಯಾಲಯವಾಗಿದೆ. ಮೈನೆ ಹಾಗು ಮ್ಯಾಸ್ಸಾಚುಸೆಟ್ಸ್ ನಲ್ಲಿ ಉನ್ನತ ನ್ಯಾಯಾಲಯವನ್ನು "ಸುಪ್ರೀಂ ಜುಡಿಷಲ್ ಕೋರ್ಟ್" ಎಂದು ಹೆಸರಿಸಲಾಗಿದೆ; ಮ್ಯಾಸ್ಸಚುಸೆಟ್ಸ್ ನಲ್ಲಿರುವ ನ್ಯಾಯಾಲಯವು ಪಶ್ಚಿಮ ಗೋಳಾರ್ಧದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಹಳೆಯ ಮೇಲ್ಮನವಿ ನ್ಯಾಯಾಲಯವಾಗಿದೆ.
ಪೌರ(ನಾಗರಿಕ) ಕಾನೂನನ್ನು ಪಾಲಿಸುವ ಆಡಳಿತ ಕ್ಷೇತ್ರಗಳು
[ಬದಲಾಯಿಸಿ]ರೋಮನ್ ಕಾನೂನು ಹಾಗು ಕಾರ್ಪಸ್ ಜ್ಯೂರಿಸ್ ಸಿವಿಲಿಸ್ ಗಳನ್ನು ಸಾಮಾನ್ಯವಾಗಿ ಪೌರ ಕಾನೂನಿನ ಐತಿಹಾಸಿಕ ಮಾದರಿಯೆಂದು ಕರೆಯಲಾಗುತ್ತದೆ. ಪೌರ ಕಾನೂನುಳ್ಳ ಅಧಿಕಾರ ಕ್ಷೇತ್ರಗಳು ತಮ್ಮ ಕಾನೂನನ್ನು ೧೮ನೇ ಶತಮಾನದ ಉತ್ತರಾರ್ಧದಿಂದ, ಸಂಹಿತೆಯಾಗಿ ರಚಿಸಲು ಆರಂಭಿಸಿದವು, ಇದರಲ್ಲಿ ಬಹುತೇಕ ಸಿವಿಲ್ ಕೋಡ್ ಗಳಿವೆ.
ಆಸ್ಟ್ರಿಯಾ
[ಬದಲಾಯಿಸಿ]ಆಸ್ಟ್ರಿಯಾದಲ್ಲಿ, ೧೯೨೦ರ ಆಸ್ಟ್ರಿಯನ್ ಸಂವಿಧಾನವು(ಹಾನ್ಸ್ ಕೆಲ್ಸೆನ್ ರ ಕರಡುಪ್ರತಿಯನ್ನು ಆಧರಿಸಿದೆ) ತನ್ನ ಸಂವಿಧಾನಬದ್ಧತೆಗಾಗಿ ಶಾಸನದ ನ್ಯಾಯಾಂಗ ಪುನರ್ವಿಮರ್ಶೆಯನ್ನು ಪರಿಚಯಿಸಿತು. ಈ ಕಾರ್ಯವನ್ನು ಸಾಂವಿಧಾನಿಕ ನ್ಯಾಯಾಲಯವು ನಿರ್ವಹಿಸುತ್ತದೆ(ವರ್ಫಾಸ್ಸುಂಗ್ಸ್ ಗೆರಿಚ್ಟ್ಶೋಫ್ ), ಇವುಗಳು ಸಾಂವಿಧಾನಿಕವಾಗಿ ಖಾತರಿಯಾದ ಹಕ್ಕಿನ ಉಲ್ಲಂಘನೆಯಾಗಿದೆಯೇ ಎಂಬುದನ್ನು ಆಡಳಿತಾತ್ಮಕ ನಿಬಂಧನೆಗಳನ್ನು ಪುನರ್ವಿಮರ್ಶಿಸುವ ಹೊಣೆ ಹೊತ್ತಿರುತ್ತವೆ. ಇದಲ್ಲದೆ, ಆಡಳಿತಾತ್ಮಕ ನಿಬಂಧನೆಗಳು ಆಡಳಿತಾತ್ಮಕ ನ್ಯಾಯಾಲಯದಿಂದ ಪುನರ್ವಿಮರ್ಶೆಗೆ ಒಳಪಡುತ್ತವೆ.(ವರ್ವಾಲ್ ಟಂಗ್ಸ್ ಗೆರಿಚ್ಟ್ಶೋಫ್ ) ಸರ್ವೋಚ್ಚ ನ್ಯಾಯಾಲಯವು(ಒಬರ್ಸ್ಟರ್ ಗೆರಿಚ್ಟ್ಶೋಫ್ ), ಖಾಸಗಿ ಕಾನೂನು ಹಾಗು ಕ್ರಿಮಿನಲ್ ಕಾನೂನಿಗೆ ಸಂಬಂಧಿಸಿದ ವಿಷಯಗಳ ಅಂತಿಮ ವಿಚಾರಣೆಗೆ, ಆಸ್ಟ್ರಿಯಾದ "ಸಾಮಾನ್ಯ ನ್ಯಾಯಾಲಯ"(ಆರ್ಡೆಂಟ್ ಲಿಚೆ ಗೆರಿ ಚ್ಟೆ) ವ್ಯವಸ್ಥೆಯಲ್ಲಿ ಅಗ್ರಮಾನ್ಯವೆನಿಸಿದೆ.
ಬ್ರೆಜಿಲ್
[ಬದಲಾಯಿಸಿ]ಬ್ರೆಜಿಲ್ ನಲ್ಲಿ, ಸುಪ್ರೀಂ ಫೆಡರಲ್ ಟ್ರಿಬ್ಯೂನಲ್ ಉಚ್ಚ ನ್ಯಾಯಾಲಯವಾಗಿದೆ. ಬ್ರೆಜಿಲಿಯನ್ ಕಾನೂನಿನಲ್ಲಿ ಇದು ಸಾಂವಿಧಾನಿಕ ನ್ಯಾಯಾಲಯ ಹಾಗು ಅಂತಿಮ ತೀರ್ಪಿನ ಪ್ರಶ್ನಾತೀತ ನ್ಯಾಯಾಲಯ ಎರಡೂ ಸಹ ಆಗಿದೆ. ಕೇವಲ ಸಂವಿಧಾನಕ್ಕೆ ವಿರುದ್ಧವಾಗಿದೆಯೆಂಬ ಮೊಕದ್ದಮೆಗಳನ್ನಷ್ಟೇ ಇದು ಪುನರ್ಪರಿಶೀಲಿಸುತ್ತದೆ. ಇದು ಮೂಲ ನ್ಯಾಯವ್ಯಾಪ್ತಿ, ಕಾಂಗ್ರೆಸ್ಸ್, ಸೆನೆಟರುಗಳು, ರಾಜ್ಯದ ಮಂತ್ರಿಗಳು, ನ್ಯಾಯಾಲಯದ ಸದಸ್ಯರು ಹಾಗು ಅಧ್ಯಕ್ಷ ಹಾಗು ಗಣರಾಜ್ಯದ ಉಪಾಧ್ಯಕ್ಷರನ್ನು ಒಳಗೊಂಡ ಮೊಕದ್ದಮೆಗಳ ವಿಚಾರಣೆಯನ್ನೂ ಸಹ ನಡೆಸುತ್ತದೆ. ಸುಪೀರಿಯರ್ ಜಸ್ಟಿಸ್ ಟ್ರಿಬ್ಯೂನಲ್ ಪೌರ ಕಾನೂನು ಹಾಗು ಕ್ರಿಮಿನಲ್ ಕಾನೂನಿಗೆ ಸಂಬಂಧಿಸಿದ ಮೊಕದ್ದಮೆಗಳಿಗೆ ದಾಖಲೆ ಕೇಳಿಕೆ ಸಾಕ್ಷ್ಯದ ಮೇರೆಗೆ ಆಜ್ಞಾಪತ್ರವನ್ನು ನೀಡುತ್ತದೆ. ಸುಪೀರಿಯರ್ ಲೇಬರ್ ಟ್ರಿಬ್ಯೂನಲ್ ಲೇಬರ್ ಕಾನೂನನ್ನು ಒಳಗೊಂಡ ಮೊಕದ್ದಮೆಗಳನ್ನು ಪುನರ್ಪರಿಶೀಲಿಸುತ್ತದೆ. ಸುಪೀರಿಯರ್ ಎಲೆಕ್ಟೋರಲ್ ಟ್ರಿಬ್ಯೂನಲ್ ಚುನಾವಣೆಗೆ ಸಂಬಂಧಿಸಿದ ಕಾನೂನುಗಳಿಗೆ ಇರುವ ಅಂತಿಮೋಪಾಯದ ನ್ಯಾಯಾಲಯವಾಗಿದೆ, ಜೊತೆಗೆ ಇದು ಸಾರ್ವತ್ರಿಕ ಚುನಾವಣೆಗಳ ಮೇಲ್ವಿಚಾರಣೆಯನ್ನೂ ಸಹ ಮಾಡುತ್ತದೆ. ಸುಪೀರಿಯರ್ ಮಿಲಿಟರಿ ಟ್ರಿಬ್ಯೂನಲ್ ಮಿಲಿಟರಿ ಕಾನೂನಿಗೆ ಸಂಬಂಧಿಸಿದ ವಿಷಯಗಳಿಗೆ ಇರುವ ಉನ್ನತ ನ್ಯಾಯಾಲಯವಾಗಿದೆ..
ಚೀನಾ ಗಣರಾಜ್ಯ
[ಬದಲಾಯಿಸಿ]ಚೀನಾ ಗಣರಾಜ್ಯದಲ್ಲಿ, ಅಂತ್ಯೋಪಾಯಕ್ಕಾಗಿ ಮೂರು ವಿವಿಧ ನ್ಯಾಯಾಲಯಗಳಿವೆ:
- ಸುಪ್ರೀಂ ಕೋರ್ಟ್ ಆಫ್ ದಿ ರಿಪಬ್ಲಿಕ್ ಆಫ್ ಚೀನಾ (中華民國最高法院): ಸಿವಿಲ್ ಹಾಗು ಕ್ರಿಮಿನಲ್ ಮೊಕದ್ದಮೆಗಳು.
- ಸುಪ್ರೀಂ ಅಡ್ಮಿನಿಸ್ಸ್ಟ್ರೆಟಿವ್ ಕೋರ್ಟ್ ಆಫ್ ದಿ ರಿಪಬ್ಲಿಕ್ ಆಫ್ ಚೀನಾ(中華民國最高行政法院): ಕಾರ್ಯಕಾರಿ ಮೊಕದ್ದಮೆಗಳು.
ಕೌನ್ಸಿಲ್ ಆಫ್ ಗ್ರ್ಯಾಂಡ್ ಜಸ್ಟಿಸಸ್: ಸಂವಿಧಾನದ ವ್ಯಾಖ್ಯಾನ, ಕಾನೂನುಗಳು ಹಾಗು ವಿಧಾಯಕಗಳ ವ್ಯಾಖ್ಯಾನ, ಸಂವಿಧಾನಕ್ಕೆ ವಿರುದ್ಧವಾಗಿ ಹೋಗುವ ರಾಜಕೀಯ ಪಕ್ಷಗಳನ್ನು ವಿಲೀನಗೊಳಿಸುವುದು, ಅಧ್ಯಕ್ಷ ಅಥವಾ ಉಪಾಧ್ಯಕ್ಷರ ವಿರುದ್ಧ ದೋಷಾರೋಪಣೆಯ ವಿರುದ್ಧ ವಿಚಾರಣೆ ನಡೆಸುವುದು ಇದರ ಕೆಲಸ.
ಕೌನ್ಸಿಲ್ ಆಫ್ ಗ್ರ್ಯಾಂಡ್ ಜಸ್ಟಿಸಸ್, ೧೫ ನ್ಯಾಯಮೂರ್ತಿಗಳನ್ನು ಒಳಗೊಂಡಿದೆ.ಇದು ಪ್ರಮುಖವಾಗಿ ಸಾಂವಿಧಾನಿಕ ವಿಷಯಗಳ ನಿರ್ವಹಣೆ ಮಾಡುತ್ತದೆ, ಕೆಲವು ರಾಷ್ಟ್ರಗಳಲ್ಲಿ ಇದು ಸಾಂವಿಧಾನಿಕ ನ್ಯಾಯಾಲಯಗಳ ಪ್ರತಿರೂಪವಾಗಿರುತ್ತದೆ.
ಎಲ್ಲ ಮೂರು ನ್ಯಾಯಾಲಯಗಳು ನೇರವಾಗಿ ಜುಡಿಷಿಯಲ್ ಯುವಾನ್ ನ ಕೆಳಗಿರುತ್ತವೆ, ಇದರ ಅಧ್ಯಕ್ಷರು ಕೌನ್ಸಿಲ್ ಆಫ್ ಗ್ರ್ಯಾಂಡ್ ಜಸ್ಟಿಸಸ್ ನ ಮುಖ್ಯ ನ್ಯಾಯಮೂರ್ತಿಗಳಾಗಿಯೂ ಸಹ ಸೇವೆ ಸಲ್ಲಿಸುತ್ತಾರೆ.
ಕ್ರೊವೇಷಿಯ
[ಬದಲಾಯಿಸಿ]ಕ್ರೊವೇಷಿಯದಲ್ಲಿ, ನ್ಯಾಯ ನೀಡುವ ಪರಮಾಧಿಕಾರವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಲಾಗಿದೆ, ಇದು ಸಮಾನವಾದ ಕಾನೂನಿನ ಅನ್ವಯವನ್ನು(ಅನುಷ್ಟಾನ) ಖಾತರಿಪಡಿಸುತ್ತದೆ. ಸಾಂವಿಧಾನಿಕ ನ್ಯಾಯಾಲಯವು ಕಾನೂನುಗಳು ಹಾಗು ನಿಬಂಧನೆಗಳ ಸಂವಿಧಾನಬದ್ಧತೆಯನ್ನು ಪರಿಶೀಲಿಸಲು ಅಸ್ತಿತ್ವದಲ್ಲಿರುತ್ತದೆ, ಇದಲ್ಲದೆ ಸರ್ಕಾರಿ ಅಂಗಗಳ ನಿರ್ಣಯಗಳ ವಿರುದ್ಧವಾದ ವೈಯಕ್ತಿಕ ದೂರುಗಳ ಬಗ್ಗೆಯೂ ನಿರ್ಣಯಿಸುತ್ತದೆ. ಇದು ಶಾಸಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗಗಳ ನಡುವೆ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಉಂಟಾಗುವ ಸಮಸ್ಯೆಗಳನ್ನೂ ಬಗೆಹರಿಸುತ್ತದೆ.
ಡೆನ್ಮಾರ್ಕ್
[ಬದಲಾಯಿಸಿ]ಡೆನ್ಮಾರ್ಕ್ ನಲ್ಲಿ, ಎಲ್ಲ ಸಾಮಾನ್ಯ ನ್ಯಾಯಾಲಯಗಳು ಎಲ್ಲ ಬಗೆಯ ಮೊಕದ್ದಮೆಗಳ ತನಿಖೆ ನಡೆಸಲು ಮೂಲ ಅಧಿಕಾರವ್ಯಾಪ್ತಿಯನ್ನು ಹೊಂದಿರುತ್ತವೆ, ಇದರಲ್ಲಿ ಸಾಂವಿಧಾನಿಕ ಅಥವಾ ಆಡಳಿತಾತ್ಮಕವಾದ ಎಲ್ಲ ವಿಷಯಗಳೂ ಸೇರಿರುತ್ತವೆ. ಇದರ ಪರಿಣಾಮವಾಗಿ, ಯಾವುದೇ ವಿಶೇಷ ಸಾಂವಿಧಾನಿಕ ನ್ಯಾಯಾಲಯವು ಅಸ್ತಿತ್ವದಲ್ಲಿರುವುದಿಲ್ಲ, ಜೊತೆಗೆ ಈ ರೀತಿಯಾಗಿ ಅಂತಿಮ ನ್ಯಾಯವ್ಯಾಪ್ತಿಯು ಡ್ಯಾನಿಶ್ ಸರ್ವೋಚ್ಚ ನ್ಯಾಯಾಲಯದ(ಹೊಜೆಸ್ಟೆರೆಟ್ ) ವಶದಲ್ಲಿರುತ್ತದೆ.
ಫ್ರಾನ್ಸ್
[ಬದಲಾಯಿಸಿ]ಫ್ರಾನ್ಸ್ ನಲ್ಲಿ, ಮೇಲ್ಮನವಿಗಾಗಿ ಸರ್ವೋಚ್ಚ ನ್ಯಾಯಾಧಿಕಾರವನ್ನು ಐದು ನ್ಯಾಯಾಂಗಗಳ ನಡುವೆ ವಿಭಾಗಿಸಲಾಗಿದೆ:
- ನ್ಯಾಯಾಲಯಗಳು, ಅದೆಂದರೆ., ಸಿವಿಲ್ ಅಥವಾ ಕ್ರಿಮಿನಲ್ ವಿಷಯಗಳು: ಸರ್ವೋಚ್ಚ ನ್ಯಾಯಾಲಯ ಕೌರ್ ಡೆ ಕಾಸ್ಸೇಶನ್
- ಆಡಳಿತಾತ್ಮಕ ನ್ಯಾಯಾಲಯಗಳಿಗಾಗಿ: ಕೌನ್ಸಿಲ್ ಆಫ್ ಸ್ಟೇಟ್
- ಶಾಸನೋಕ್ತ ಕಾನೂನುಗಳಿಗಾಗಿ ಸಂವಿಧಾನಾತ್ಮಕ ಸವಾಲುಗಳು: ಸಾಂವಿಧಾನಿಕ ಮಂಡಳಿ
- ನ್ಯಾಯಿಕ ಹಾಗು ಆಡಳಿತಾತ್ಮಕ ನ್ಯಾಯಾಲಯಗಳ ನಡುವೆ ಅಧಿಕಾರವ್ಯಾಪ್ತಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾದರೆ, ಭಾಗಶಃ ಸರ್ವೋಚ್ಚ ನ್ಯಾಯಾಲಯದಿಂದ ಹಾಗು ಕೌನ್ಸಿಲ್ ಆಫ್ ಸ್ಟೇಟ್ ನಿಂದ(ಹಾಗು ಕಾನೂನು ಮಂತ್ರಿಗಳು ಇದರ ಅಧ್ಯಕ್ಷತೆ ವಹಿಸಿರುತ್ತಾರೆ) ಭಾಗಶಃ ದಾಖಲಿತವಾದ ಕೋರ್ಟ್ ಆಫ್ ಜೂರಿಸ್ಡಿಕ್ಷನಲ್ ಡಿಸ್ಪ್ಯೂಟ್ಸ್(ಟ್ರಿಬ್ಯೂನಲ್ ಆಫ್ ದಿ ಕಾನ್ಫ್ಲಿಕ್ಟ್ಸ್ ) ಜಂಟಿಯಾಗಿ ಸಮಸ್ಯೆಯನ್ನು ಬಗೆಹರಿಸುತ್ತದೆ ಅಥವಾ ಅಂತಿಮ ನಿರ್ಣಯವನ್ನು ಒಪ್ಪಿಕೊಳ್ಳುತ್ತವೆ.
ಹೈಕೋರ್ಟ್ ಆಫ್ ಜಸ್ಟಿಸ್ ಸರ್ಕಾರಕ್ಕೆ ನಿಷ್ಠೆ ತಪ್ಪಿದ ಸಂದರ್ಭದಲ್ಲಿ ಫ್ರೆಂಚ್ ಗಣರಾಜ್ಯದ ಅಧ್ಯಕ್ಷರ ಮೇಲೆ ವಿಚಾರಣೆ ನಡೆಸುತ್ತದೆ. ಫ್ರೆಂಚ್ ಸಂವಿಧಾನವು, ೨೦೦೭ರ ಸಾಂವಿಧಾನಿಕ ತಿದ್ದುಪಡಿಯ ನಂತರ,ಪಾರ್ಲಿಮೆಂಟರಿ ಚೇಂಬರ್ಸ್ ನ ಸದಸ್ಯರು, ಉಚ್ಚ ನ್ಯಾಯಾಲಯವನ್ನು ರೂಪಿಸಲು ಒಟ್ಟುಗೂಡಬಹುದೆಂದು ಇದೀಗ ನಿರ್ದೇಶಿಸುತ್ತದೆ, "ಸ್ಪಷ್ಟವಾಗಿ ತಮ್ಮ ಕರ್ತವ್ಯವನ್ನು ಉಲ್ಲಂಘಿಸಿ ಅಧಿಕಾರದಲ್ಲಿ ಮುಂದುವರೆಯಲು ಅಸಂಬದ್ಧರೆಂದು" ಅಧ್ಯಕ್ಷರ ಮೇಲೆ ದೋಷಾರೋಪಣೆ ಮಾಡಬಹುದು.
ಜರ್ಮನಿ
[ಬದಲಾಯಿಸಿ]ಜರ್ಮನಿಯಲ್ಲಿ ಏಕೈಕ ಸರ್ವೋಚ್ಚ ನ್ಯಾಯಾಲಯವಿಲ್ಲ. ಜರ್ಮನ್ ಸಂವಿಧಾನ ಗ್ರುಂಡ್ಗೆಸೆಟ್ಜ್ ನ ಅಂತಿಮ ವ್ಯಾಖ್ಯಾನ ಮಾಡುವುದು, ಬುನ್ಡೆಸ್ವರ್ಫಾಸ್ಸುನ್ಗ್ಸ್ ಗೆರಿಚ್ಟ್ ನ ಕಾರ್ಯವಾಗಿದೆ.(ಫೆಡರಲ್ ಕಾನ್ಸ್ಟಿಟ್ಯೂಶನಲ್ ಕೋರ್ಟ್ ಆಫ್ ಜರ್ಮನಿ), ಇದು ವಾಸ್ತವವಾಗಿ ಜರ್ಮನಿಯ ಉನ್ನತ ನ್ಯಾಯಾಲಯವಾಗಿದೆ, ಏಕೆಂದರೆ ಇದು ಫೆಡರಲ್ ಹಾಗು ರಾಜ್ಯ ಶಾಸನವನ್ನು ತಕ್ಷಣವೇ ಜಾರಿಗೆ ಬರುವಂತೆ ಘೋಷಿಸಬಹುದು. ಜೊತೆಗೆ ಇತರ ಎಲ್ಲ ಫೆಡರಲ್ ನ್ಯಾಯಾಲಯಗಳ ನಿರ್ಣಯಗಳನ್ನು ತಳ್ಳಿಹಾಕುವ ಅಧಿಕಾರವನ್ನು ಹೊಂದಿರುತ್ತದೆ, ಆದಾಗ್ಯೂ ಇದು ಜರ್ಮನ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದು ಸಾಧಾರಣ ಮೇಲ್ಮನವಿ ನ್ಯಾಯಾಲಯವಾಗಿರುವುದಿಲ್ಲ. ಸಿವಿಲ್ ಹಾಗು ಕ್ರಿಮಿನಲ್ ಮೊಕದ್ದಮೆಗಳಿಗೆ, ಮೇಲ್ಮನವಿ ನ್ಯಾಯಾಲಯಗಳ ವ್ಯವಸ್ಥೆಗಳಲ್ಲಿರುವ ಉನ್ನತ ನ್ಯಾಯಾಲಯವೆಂದರೆ ಬಂಡೆಸ್ಗೇರಿಚ್ಟ್ಶೋಫ್ . ಜರ್ಮನ್ ಇತರ ನ್ಯಾಯಾಂಗದ ಶಾಖೆಗಳು ಪ್ರತಿಯೊಂದು ತಮ್ಮದೇ ಆದ ಮೇಲ್ಮನವಿ ವ್ಯವಸ್ಥೆಗಳನ್ನು ಹಾಗು ಸಾಮಾಜಿಕ(ಬಂಡೆಸ್ಸೋಜಿಯಾಲ್ ಗೆರಿಚ್ಟ್ ), ಕಾರ್ಮಿಕ(ಬಂಡೆಸಾರ್ಬಿಯೆಟ್ಸ್ ಗೆರಿಚ್ಟ್ ), ತೆರಿಗೆಗಳು(ಬಂಡೆಸ್ಫೈನಾನ್ಜ್ಹೊಫ್ ) ಹಾಗು ಆಡಳಿತಾತ್ಮಕ ವಿಷಯಗಳಿಗಾಗಿ(ಬಂಡೆಸ್ವರ್ವಾಲ್ಟಂಗ್ಸ್ ಗೆರಿಚ್ಟ್ ) ಉನ್ನತ ನ್ಯಾಯಾಲಯಗಳನ್ನು ಹೊಂದಿರುತ್ತವೆ. ಜೆಮೆಯಿನ್ಸಮೆರ್ ಸೆನಟ್ ಡೆರ್ ಒಬರ್ಸ್ಟೇನ್ ಗೆರಿಚ್ಟ್ಶೋಫೆ (ಫೆಡರಲ್ ಸುಪ್ರೀಂ ಕೋರ್ಟ್ ಗಳ ಜಂಟಿ ಸೆನೆಟ್), ಸ್ವತಃ ಸರ್ವೋಚ್ಚ ನ್ಯಾಯಾಲಯವಲ್ಲ, ಆದರೆ ಇದೊಂದು ತಾತ್ಪೂರ್ತಿಕವಾದ ಅಂಗವಾಗಿದ್ದು, ಒಂದು ಸರ್ವೋಚ್ಚ ನ್ಯಾಯಾಲಯವು ಮತ್ತೊಂದು ಸರ್ವೋಚ್ಚ ನ್ಯಾಯಾಲಯದ ನಿರ್ಣಯದಿಂದ ಅಭಿಪ್ರಾಯಭೇದವನ್ನು ಹೊಂದಿದ್ದ ಪಕ್ಷದಲ್ಲಿ ಮಾತ್ರ ಸಭೆ ಸೇರಿ ಮುಂದಿನ ಕ್ರಮವನ್ನು ಕೈಗೊಳ್ಳುತ್ತದೆ. ನ್ಯಾಯಾಲಯಗಳು ತಮ್ಮ ಜವಾಬ್ದಾರಿಗಳಿಂದ ಸ್ಪಷ್ಟವಾಗಿ ನಿರೂಪಿತವಾಗಿರುವುದರಿಂದ, ಈ ಪರಿಸ್ಥಿತಿಯು ವಿರಳವಾಗಿ ಉದ್ಭವಿಸುತ್ತದೆ, ಜೊತೆಗೆ ಕಾಮನ್ ಸೆನೆಟ್ ವಿರಳವಾಗಿ ಸಭೆ ಸೇರುತ್ತವೆ ಎನ್ನುವುದಕ್ಕಿಂತ ಹೆಚ್ಚಾಗಿ ಕೇವಲ ಬಹುತೇಕವಾಗಿ ನಿರೂಪಿತವಾಗಬೇಕಿರುವ ವಿಷಯಗಳಿಗೆ ಮಾತ್ರ ಸಭೆ ಸೇರುತ್ತವೆ.
ನೆದರ್ಲೆಂಡ್ಸ್
[ಬದಲಾಯಿಸಿ]ನೆದರ್ಲೆಂಡ್ಸ್ ನಲ್ಲಿ, ಹೋಗೆ ರಾಡ್ ಡೆರ್ ನೆದರ್ಲಾಂಡೆನ್ ಸರ್ವೋಚ್ಚ ನ್ಯಾಯಾಲಯವಾಗಿದೆ. "ಅರ್ರೆಸ್ಟೆನ್" ಎಂದು ಕರೆಯಲ್ಪಡುವ ಇದರ ನಿರ್ಣಯಗಳು ಸಂಪೂರ್ಣವಾಗಿ ಅಂತಿಮವಾಗಿರುತ್ತವೆ. ಸಂವಿಧಾನದ ವಿರುದ್ಧ ಶಾಸನವನ್ನು ಪರೀಕ್ಷಿಸುವ ಅಧಿಕಾರವನ್ನು ನ್ಯಾಯಾಲಯಕ್ಕೆ ನೀಡಲಾಗಿಲ್ಲ, ಸ್ಟೇಟ್ಸ್-ಜನರಲ್ ನ ಸಾರ್ವಭೌಮತ್ವದ ನಿಯಮಕ್ಕೆ ಅನುಸಾರವಾಗಿರುತ್ತದೆ; ಆದಾಗ್ಯೂ ನ್ಯಾಯಾಲಯವು, ಒಪ್ಪಂದಗಳ ವಿರುದ್ಧ ಶಾಸನವನ್ನು ಪರೀಕ್ಷಿಸಬಹುದು , ಇದು ವಸ್ತುತಃ ಸಾಂವಿಧಾನಿಕ ಮರುಪರಿಶೀಲನೆಯ ಕೆಲವು ರೂಪಕ್ಕೆ ಸಮನಾಗಿರುತ್ತದೆ. ಅಲ್ಲದೆ, ನೆದರ್ಲೆಂಡ್ಸ್ ನ ಸಾಮಾನ್ಯ ನ್ಯಾಯಾಲಯಗಳು, ಹೋಗೆ ರಾಡ್ ನ್ನು ಒಳಗೊಂಡಂತೆ, ಆಡಳಿತಾತ್ಮಕ ಕಾನೂನಿನೊಂದಿಗೆ ವ್ಯವಹರಿಸುವುದಿಲ್ಲ, ಇವುಗಳನ್ನು ಪ್ರತ್ಯೇಕ ಆಡಳಿತಾತ್ಮಕ ನ್ಯಾಯಾಲಯಗಳು ಕೈಗೆತ್ತಿಕೊಳ್ಳುತ್ತವೆ, ಇದರಲ್ಲಿ ಕೌನ್ಸಿಲ್ ಆಫ್ ಸ್ಟೇಟ್ (ರಾಡ್ ವ್ಯಾನ್ ಸ್ಟೇಟ್) ಉನ್ನತ ನ್ಯಾಯಾಲಯವಾಗಿದೆ.
ಐಸ್ಲ್ಯಾಂಡ್
[ಬದಲಾಯಿಸಿ]ಐಸ್ಲ್ಯಾಂಡ್ ನ ಸರ್ವೋಚ್ಚ ನ್ಯಾಯಾಲಯವನ್ನು (Hæstiréttur) ನಂ. ೨೨/೧೯೧೯ರ ಅಡಿಯಲ್ಲಿ ಸ್ಥಾಪಿಸಲಾಯಿತು. ಜೊತೆಗೆ ೧೬ ಫೆಬ್ರವರಿ ೧೯೨೦ರಲ್ಲಿ ಇದು ತನ್ನ ಮೊದಲ ಅಧಿವೇಶನವನ್ನು ಹಮ್ಮಿಕೊಂಡಿತ್ತು. ನ್ಯಾಯಾಲಯವು ಐಸ್ಲ್ಯಾಂಡ್ ನಲ್ಲಿ ಉನ್ನತ ನ್ಯಾಯಾಂಗ ಅಧಿಕಾರವನ್ನು ಹೊಂದಿರುತ್ತದೆ, ಇಲ್ಲಿ ನ್ಯಾಯಾಲಯ ವ್ಯವಸ್ಥೆಯು ಎರಡು ವರ್ಗಗಳನ್ನು ಹೊಂದಿರುತ್ತದೆ.[೨]
ಇಟಲಿ
[ಬದಲಾಯಿಸಿ]ಇಟಲಿಯಲ್ಲಿ, ಕಾರ್ಟೆ ಡಿ ಕಾಸ್ಸಜಿಯೋನೆ ಎಂದು ಕರೆಯಲ್ಪಡುವ ಇಟಾಲಿಯನ್ ಅಂತ್ಯೋಪಾಯದ ನ್ಯಾಯಾಲಯವು ಹೆಚ್ಚಿನ ವಿವಾದಗಳನ್ನು ಬಗೆಹರಿಸುತ್ತದೆ. ಒಂದು ಪ್ರತ್ಯೇಕ ಸಂವಿಧಾನಾತ್ಮಕ ನ್ಯಾಯಾಲಯವಿದೆ, ಕಾರ್ಟೆ ಕಾಸ್ಟಿಟುಜಿಯೋನೆಲ್ ಜೊತೆಗೆ ಅಂತ್ಯೋಪಾಯದ ಒಂದು ಪಾರ್ಲಿಮೆಂಟರಿ ನ್ಯಾಯಾಲಯವೂ ಸಹ ಇದೆ.
ಜಪಾನ್
[ಬದಲಾಯಿಸಿ]ಜಪಾನ್ ನಲ್ಲಿ, ಜಪಾನ್ ಸರ್ವೋಚ್ಚ ನ್ಯಾಯಾಲಯವನ್ನು 最高裁判所 ಎಂದು ಕರೆಯಲಾಗುತ್ತದೆ(ಸೈಕೋ-ಸೈಬಾನ್ಷೋ; ಸಂಕ್ಷಿಪ್ತವಾಗಿ ಸೈಕೋ-ಸೈ 最高裁 ಎಂದು ಕರೆಯಲ್ಪಡುತ್ತದೆ), ಟೋಕಿಯೋದ ಚಿಯೋಡದಲ್ಲಿ ನೆಲೆಯಾಗಿರುವ ಇದು ಜಪಾನಿನ ಉನ್ನತ ನ್ಯಾಯಾಲಯವಾಗಿದೆ. ಜಪಾನಿನೊಳಗೆ ಸಂವಿಧಾನವನ್ನು ವ್ಯಾಖ್ಯಾನಿಸುವ ಅಂತಿಮ ನ್ಯಾಯಾಂಗ ಅಧಿಕಾರವನ್ನು ಹೊಂದಿದೆ. ಜೊತೆಗೆ ರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ಧರಿಸುವ ಹಕ್ಕನ್ನು ಹೊಂದಿದೆ.(ಸ್ಥಳೀಯ ಉಪ-ನಿಬಂಧನೆಗಳನ್ನು ಒಳಗೊಂಡಂತೆ). ಇದು ನ್ಯಾಯಾಂಗ ಮರುಪರಿಶೀಲನೆ ಮಾಡುವ ಅಧಿಕಾರ ಹೊಂದಿದೆ.(ಅದೆಂದರೆ ಡಯಟ್ ನ ಶಾಸನಗಳು ಹಾಗು ಸ್ಥಳೀಯ ಶಾಸನಸಭೆ, ಹಾಗು ಆಡಳಿತಾತ್ಮಕ ಕಾರ್ಯಗಳು, ಸಂವಿಧಾನಕ್ಕೆ ವಿರುದ್ಧವಾದವುಗಳನ್ನು ಘೋಷಿಸಬಹುದು).
ಲಕ್ಸೆಂಬರ್ಗ್
[ಬದಲಾಯಿಸಿ]ಲಕ್ಸೆಂಬರ್ಗ್ ನಲ್ಲಿ, ಸಂವಿಧಾನಕ್ಕೆ ಕಾನೂನಿನ ಅನುಸರಣೆಯಲ್ಲಿ ಎದುರಾಗುವ ಸವಾಲುಗಳನ್ನು ಕೌರ್ ಕಾಂಸ್ಟಿಟ್ಯೂಟಿಯೋನ್ನೆಲ್ಲೆ (ಸಾಂವಿಧಾನಿಕ ನ್ಯಾಯಾಲಯ) ಎದುರು ತರಲಾಗುತ್ತದೆ. - ಈ ಸವಾಲುಗಳನ್ನು ಪ್ರಸ್ತುತಪಡಿಸಲು ಸಾಮಾನ್ಯವಾಗಿ ಬಳಕೆಯಾಗುವ ಹಾಗು ಸಾಧಾರಣವಾದ ಪ್ರಕ್ರಿಯೆಯೆಂದರೆ ಕೊಶ್ಚನ್ ಪ್ರಿಜುಡಿಸಿಯೆಲ್ಲೇ (ಪೂರ್ವಗ್ರಹ ವಿಚಾರಣೆ) ಮಾದರಿ.
ಸಿವಿಲ್ ಹಾಗು ಕ್ರಿಮಿನಲ್ ವಿಚಾರಣೆಗೆ ಇರುವ ಅಂತ್ಯೋಪಾಯದ ನ್ಯಾಯಾಲಯವೆಂದರೆ "ಕೌರ್ ಡೆ ಕಾಸ್ಸೇಶನ್ "
ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ವಿಚಾರಣೆಗೆ ಇರುವ ಉನ್ನತ ನ್ಯಾಯಾಲಯವೆಂದರೆ "ಕೌರ್ ಅಡ್ಮಿನಿಸ್ಟ್ರೇಟಿವ್ "(ಆಡಳಿತಾತ್ಮಕ ನ್ಯಾಯಾಲಯ).
ಫಿಲಿಫೈನ್ಸ್
[ಬದಲಾಯಿಸಿ]ಪೌರ ಕಾನೂನನ್ನು ಪಾಲಿಸುವ ರಾಷ್ಟ್ರವೆಂದು ಸಾಧಾರಣವಾಗಿ ಪರಿಗಣಿತವಾಗುವ ಫಿಲಿಫೈನ್ಸ್ ನ ಸಸರ್ವೋಚ್ಚ ನ್ಯಾಯಾಲಯವು ಅಮೆರಿಕನ್ ಸರ್ವೋಚ್ಚ ನ್ಯಾಯಾಲಯದಿಂದ ಪ್ರಭಾವಿತಗೊಂಡು ವಿನ್ಯಾಸಗೊಂಡಿದೆ. ಫಿಲಿಫೈನ್ಸ್, ಸ್ಪೇನ್ ಹಾಗು ಅಮೆರಿಕ ಸಂಯುಕ್ತ ಸಂಸ್ಥಾನ ಎರಡರಿಂದಲೂ ಪ್ರಭಾವಕ್ಕೊಳಪಟ್ಟಿದ್ದೇ ಇದಕ್ಕೆ ಕಾರಣವೆಂದು ಹೇಳಬಹುದು, ಜೊತೆಗೆ ಎರಡೂ ರಾಷ್ಟ್ರಗಳ ಕಾನೂನು ವ್ಯವಸ್ಥೆಗಳು ಫಿಲಿಫೈನ್ ಕಾನೂನುಗಳು ಹಾಗು ನ್ಯಾಯತತ್ತ್ವಗಳ ಅಭಿವೃದ್ಧಿಗೆ ಬಲವಾದ ಪ್ರಭಾವ ಬೀರಿವೆ. ಫಿಲಿಫೈನ್ ಕಾನೂನು ಅಂಗವು ಬಹುತೇಕವಾಗಿ ಸಂಹಿತೆಯಾಗಿ ರಚಿಸಲ್ಪಟ್ಟಿದೆ, ಫಿಲಿಫೈನ್ ಸಿವಿಲ್ ಕೋಡ್, ಸರ್ವೋಚ್ಚ ನ್ಯಾಯಾಲಯದ ನಿರ್ಣಯಗಳನ್ನು ಸ್ಪಷ್ಟವಾಗಿ ಗುರುತಿಸುತ್ತದೆ "ನೆಲದ ಕಾನೂನನ್ನು ಭಾಗಶಃ ರೂಪಿಸುತ್ತದೆ", ಇವುಗಳು ಕಾನೂನುಗಳ ಅದೇ ವರ್ಗಕ್ಕೆ ಸೇರುತ್ತವೆ. ೧೯೮೭ರ ಫಿಲಿಫೈನ್ ಸಂವಿಧಾನವೂ ಸಹ ಸರ್ವೋಚ್ಚ ನ್ಯಾಯಾಲಯಕ್ಕೆ ಕಾನೂನುಗಳು ಹಾಗು ಕಾರ್ಯಕಾರಿ ವ್ಯವಹಾರಗಳ ಮೇಲೆ ನ್ಯಾಯಾಂಗ ಪುನರ್ವಿಮರ್ಶೆಗೆ ಸ್ಪಷ್ಟವಾಗಿ ಅಧಿಕಾರ ನೀಡುತ್ತದೆ. ಸರ್ವೋಚ್ಚ ನ್ಯಾಯಾಲಯವು ಒಬ್ಬ ಮುಖ್ಯ ನ್ಯಾಯಮೂರ್ತಿ ಹಾಗು ೧೪ ಸಹೋದ್ಯೋಗಿ ನ್ಯಾಯಮೂರ್ತಿಗಳಿಂದ ರಚನೆಯಾಗಿರುತ್ತದೆ. ತೀರ್ಮಾನವಾಗಬೇಕಿರುವ ಮೊಕದ್ದಮೆಯ ಸ್ವರೂಪವನ್ನು ಅವಲಂಬಿಸಿ ನ್ಯಾಯಾಲಯವು ಎನ್ ಬ್ಯಾಂಕ್ ಅಥವಾ ವಿಭಾಗಗಳಾಗಿ ಕಾರ್ಯ ನಿರ್ವಹಿಸುತ್ತವೆ.
ಸ್ಪೇನ್
[ಬದಲಾಯಿಸಿ]ಸ್ಪಾನಿಷ್ ಸರ್ವೋಚ್ಚ ನ್ಯಾಯಾಲಯವು ಸ್ಪೇನ್ ನ ಎಲ್ಲ ವಿಷಯಗಳ ವಿಚಾರಣೆ ನಡೆಸುವ ಉನ್ನತ ನ್ಯಾಯಾಲಯವಾಗಿದೆ.(ಖಾಸಗಿ ಹಾಗು ಸಾರ್ವಜನಿಕ ಎರಡೂ). ಕೇವಲ ಮಾನವ ಹಕ್ಕುಗಳಿಗೆ ಸಂಬಂಧಿಸಿದ ತೀರ್ಪನ್ನು ಪ್ರಶ್ನಿಸಿ ಸಾಂವಿಧಾನಿಕ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು.(ಸ್ಪಾನಿಷ್ ಸಂವಿಧಾನದೊಂದಿಗಿನ ಕಾನೂನು ಹೊಂದಿಕೆಯ ಬಗ್ಗೆಯೂ ಸಹ ಇದು ನಿರ್ಧರಿಸುತ್ತದೆ).
ಸ್ಪೇನ್ ನಲ್ಲಿ, ಉಚ್ಚ ನ್ಯಾಯಾಲಯಗಳು ಪೂರ್ವನಿರ್ಣಯದ ಬದ್ಧತೆಯನ್ನು ರೂಪಿಸಲು ಸಾಧ್ಯವಿಲ್ಲ;[೩] ಆದಾಗ್ಯೂ, ಕಿರಿಯ ನ್ಯಾಯಾಲಯಗಳು ಸಾಮಾನ್ಯವಾಗಿ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನಗಳನ್ನೇ ಪಾಲಿಸುತ್ತವೆ. ಬಹುತೇಕ ಖಾಸಗಿ ಕಾನೂನು ಮೊಕದ್ದಮೆಗಳಲ್ಲಿ, ಒಂದು ವಾದವನ್ನು ಬೆಂಬಲಿಸಿ ನೀಡಿದ ಎರಡು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು, ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು.[೪]
ಐದು ವಿಭಾಗಗಳಿಂದ ಸ್ಪಾನಿಷ್ ಸರ್ವೋಚ್ಚ ನ್ಯಾಯಾಲಯವು ರೂಪಿತವಾಗಿದೆ:
- ಒಂದನೇ ವಿಭಾಗವು ಖಾಸಗಿ ಕಾನೂನಿಗೆ ಸಂಬಂಧಿಸಿದ ವಿಷಯಗಳ ವಿಚಾರಣೆ ನಡೆಸುತ್ತದೆ. (ವಾಣಿಜ್ಯ ಕಾನೂನು ಒಳಗೊಂಡಿದೆ).
- ಎರಡನೇ ವಿಭಾಗವು ಕ್ರಿಮಿನಲ್ ಮೇಲ್ಮನವಿಗಳ ಬಗ್ಗೆ ನಿರ್ಧರಿಸುತ್ತದೆ.
- ಮೂರನೇ ವಿಭಾಗವು ಆಡಳಿತಾತ್ಮಕ ಮೊಕದ್ದಮೆಗಳ ಬಗ್ಗೆ ವಿಚಾರಣೆ ನಡೆಸುವುದರ ಜೊತೆಗೆ ಸರ್ಕಾರದ ಪ್ರಮಾಣಕ ಅಧಿಕಾರವನ್ನು ನಿಯಂತ್ರಿಸುತ್ತದೆ.
- ನಾಲ್ಕನೇ ವಿಭಾಗವು ಕಾರ್ಮಿಕ ಕಾನೂನಿಗೆ ಸಮರ್ಪಿತವಾಗಿದೆ.
- ಐದನೇ ವಿಭಾಗವು ಮಿಲಿಟರಿ ನ್ಯಾಯಕ್ಕೆ ಸಮರ್ಪಿತವಾಗಿದೆ.
ಸ್ವೀಡನ್
[ಬದಲಾಯಿಸಿ]ಸ್ವೀಡನ್ ನಲ್ಲಿ, ಸರ್ವೋಚ್ಚ ನ್ಯಾಯಾಲಯ ಹಾಗು ಸರ್ವೋಚ್ಚ ಆಡಳಿತಾತ್ಮಕ ನ್ಯಾಯಾಲಯವು ಕ್ರಮವಾಗಿ ದೇಶದ ಉಚ್ಚ ನ್ಯಾಯಾಲಯಗಳಾಗಿ ಕಾರ್ಯ ನಿರ್ವಹಿಸುತ್ತವೆ. ಸರ್ವೋಚ್ಚ ಆಡಳಿತಾತ್ಮಕ ನ್ಯಾಯಾಲಯವು ವ್ಯಕ್ತಿಗಳು ಹಾಗು ಆಡಳಿತಾಂಗಗಳ ನಡುವಿನ ವಿವಾದಗಳಿಗೆ ಸಂಬಂಧಿಸಿದ ವಿಷಯಗಳ ವಿಚಾರಣೆ, ಜೊತೆಗೆ ಆಡಳಿತಾಂಗಗಳ ನಡುವಿನ ವಿವಾದ ವಿಚಾರಣೆಯನ್ನೂ ಸಹ ಮಾಡುತ್ತದೆ, ಆದರೆ ಸರ್ವೋಚ್ಚ ನ್ಯಾಯಾಲಯವು ಇತರ ಎಲ್ಲ ಬಗೆಯ ವ್ಯಾಜ್ಯಗಳ ವಿಚಾರಣೆ ನಡೆಸುತ್ತದೆ. ನ್ಯಾಯಮೂರ್ತಿಗಳು ಸರ್ಕಾರದಿಂದ ನಿಯುಕ್ತರಾಗಿರುತ್ತಾರೆ. ಹಲವು ಸಂದರ್ಭಗಳಲ್ಲಿ, ಸರ್ವೋಚ್ಚ ನ್ಯಾಯಾಲಯವು, ಕಾನೂನಿನ ವ್ಯಾಖ್ಯಾನದಲ್ಲಿ ಮೊದಲೇ ನಿರ್ಧಾರವಾದ ಪೂರ್ವನಿರ್ಣಯವನ್ನು ಒಳಗೊಂಡಿದ್ದರೆ ಅಂತಹ ಮೊಕದ್ದಮೆಯ ಒಂದು ತೀರ್ಪನ್ನು ಪ್ರಶ್ನಿಸಿ ಲೀವ್ ಟು ಅಪೀಲ್ ಗೆ [ಪ್ರೋವ್ನಿಂಗ್ಸ್ಟಿಲ್ ಸ್ಟ್ಯಾಂಡ್ ) ಅವಕಾಶ ನೀಡಬಹುದು. ಆರೋಪಗಳು ವಿವಾದಾತ್ಮಕವಾಗಿದ್ದು, ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಆರಂಭಿಕ ವಿಚಾರಣಾ ನ್ಯಾಯಾಲಯವಾಗಿರುತ್ತದೆ. ಇಂತಹ ವಿಷಯಗಳು, ಹೊಸ ಸಾಕ್ಷಿಯನ್ನು ಪರಿಗಣಿಸಿ ಕ್ರಿಮಿನಲ್ ಮೊಕದ್ದಮೆಯ ಮರುವಿಚಾರಣೆ ನಡೆಸಲು ಅರ್ಜಿ ಸಲ್ಲಿಸುವುದನ್ನು ಒಳಗೊಂಡಿರುತ್ತವೆ. ಜೊತೆಗೆ ಕರ್ತವ್ಯ ಲೋಪದ ಮೇಲೆ ಸರಕಾರದ ಜವಾಬ್ದಾರಿಯುತ ಮಂತ್ರಿಯ ವಿರುದ್ಧ ಆರೋಪ ಮಾಡಲಾಗುತ್ತದೆ. ಒಂದು ಸ್ಪಷ್ಟವಾದ ವ್ಯಾಖ್ಯಾನವಿಲ್ಲದ ಕಾನೂನಿಗೆ ಪ್ರಶ್ನೆಗಳು ಎದುರಾಗಿ, ಅಂತಹ ವಿಷಯವನ್ನು ಕಿರಿಯ ನ್ಯಾಯಾಲಯವು ವಿಚಾರಣೆ ನಡೆಸಬೇಕಾಗಿ ಬಂದಾಗ, ಅಂತಹ ಸಂದರ್ಭದಲ್ಲಿ ಇದು ಪರಿಹಾರಕ್ಕಾಗಿ ಸಂಬದ್ಧ ಸರ್ವೋಚ್ಚ ನ್ಯಾಯಾಲಯದ ಸಲಹೆ ಪಡೆಯಬಹುದು.
ಸ್ವಿಟ್ಜರ್‌ಲೆಂಡ್
[ಬದಲಾಯಿಸಿ]ಸ್ವಿಟ್ಜರ್‌ಲೆಂಡ್ ನಲ್ಲಿ, ಫೆಡರಲ್ ಸುಪ್ರೀಂ ಕೋರ್ಟ್ ಆಫ್ ಸ್ವಿಟ್ಜರ್‌ಲೆಂಡ್[೫], ಮೇಲ್ಮನವಿ ಸಲ್ಲಿಕೆಗೆ ಇರುವ ಅಂತಿಮ ನ್ಯಾಯಾಲಯವಾಗಿದೆ. ಸ್ವಿಟ್ಜರ್‌ಲೆಂಡ್ ಹೊಂದಿರುವ ನೇರ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರಣದಿಂದ, ಇದಕ್ಕೆ ಫೆಡರಲ್ ಶಾಸನಗಳ ಸಂವಿಧಾನಬದ್ಧತೆಯನ್ನು ಪರಿಶೀಲಿಸುವ ಯಾವುದೇ ಅಧಿಕಾರವಿರುವುದಿಲ್ಲ, ಆದರೆ ಜನಾಭಿಪ್ರಾಯದ ಮೂಲಕ ಪ್ರಸ್ತಾಪಿಸಲಾದ ಕಾನೂನನ್ನು ಜನರು ಅದನ್ನು ರದ್ದುಪಡಿಸಬಹುದು. ಆದಾಗ್ಯೂ, ಸ್ಪಷ್ಟವಾಗಿ ನಿರೂಪಿತವಾದ ಕಾನೂನಿನ ಪ್ರಕಾರ, ನ್ಯಾಯಾಲಯವು, ಅಂತರರಾಷ್ಟ್ರೀಯ ಕಾನೂನಿನ ಕೆಲ ವರ್ಗಗಳನ್ನು ಒಳಗೊಂಡಂತೆ ಎಲ್ಲ ಸ್ವಿಸ್ಸ್ ಕಾನೂನಿನ ಅನುವರ್ತನೆಯನ್ನು ಪರಿಶೀಲಿಸಲು ಅಧಿಕಾರ ಹೊಂದಿರುತ್ತವೆ, ಅದರಲ್ಲೂ ವಿಶೇಷವಾಗಿ ಯುರೋಪಿಯನ್ ಕನ್ವೆನ್ಶನ್ ಆಫ್ ಹ್ಯೂಮನ್ ರೈಟ್ಸ್.
ಪೌರ ಕಾನೂನನ್ನು ಪಾಲಿಸುವ ಇತರ ಅಧಿಕಾರ ಕ್ಷೇತ್ರಗಳು
[ಬದಲಾಯಿಸಿ]- ಹೊಂಡುರಾಸ್ ಗಾಗಿ, ಹೊಂಡುರಾಸ್ ಸರ್ವೋಚ್ಚ ನ್ಯಾಯಾಲಯ ವಿಭಾಗವನ್ನು ನೋಡಿ.
- ಪೆರುಗಾಗಿ ಪೆರು ಸರ್ವೋಚ್ಚ ನ್ಯಾಯಾಲಯ ವಿಭಾಗವನ್ನು ನೋಡಿ.
- ಪೋಲಂಡ್ ಗಾಗಿ, ರಿಪಬ್ಲಿಕ್ ಆಫ್ ಪೋಲಂಡ್ ಸರ್ವೋಚ್ಚ ನ್ಯಾಯಾಲಯ ವಿಭಾಗವನ್ನು ನೋಡಿ.
- ಪೋರ್ಚುಗಲ್ ಗಾಗಿ, ಪೋರ್ಚುಗಲ್ ಸರ್ವೋಚ್ಚ ನ್ಯಾಯಾಲಯ ವಿಭಾಗವನ್ನು ನೋಡಿ.
- ಉಗಾಂಡಗಾಗಿ, ಉಗಾಂಡ ಸರ್ವೋಚ್ಚ ನ್ಯಾಯಾಲಯ ವಿಭಾಗವನ್ನು ನೋಡಿ.
ಶ್ರೀಲಂಕಾ
[ಬದಲಾಯಿಸಿ]ಶ್ರೀಲಂಕಾದಲ್ಲಿ, ಶ್ರೀಲಂಕಾ ಸರ್ವೋಚ್ಚ ನ್ಯಾಯಾಲಯವನ್ನು ೧೯೭೨ರ ನಂತರ ಹೊಸ ಸಂವಿಧಾನದ ಅಂಗೀಕಾರದ ನಂತರ ಸ್ಥಾಪಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ಉನ್ನತ ಹಾಗು ದಾಖಲೆ ನ್ಯಾಯಾಲಯದ ಅಂತಿಮ ಉಚ್ಚ ನ್ಯಾಯಸ್ಥಾನವಾಗಿದೆ. ಜೊತೆಗೆ ಸಂವಿಧಾನಕ್ಕೆ ಬದ್ಧವಾಗಿದ್ದುಕೊಂಡು ಅಧಿಕೃತ ಅಧಿಕಾರವನ್ನು ಚಲಾಯಿಸುತ್ತದೆ. ನ್ಯಾಯಾಲಯದ ಅಧಿಕೃತ ತೀರ್ಪುಗಳು ಎಲ್ಲ ಕಿರಿಯ ನ್ಯಾಯಾಲಯಗಳ ಮೇಲೆ ಆದ್ಯತೆ ಪಡೆದಿರುತ್ತದೆ. ಶ್ರೀಲಂಕಾದ ನ್ಯಾಯಾಂಗ ವ್ಯವಸ್ಥೆಯು ಸಂಪ್ರದಾಯ ಕಾನೂನು ಹಾಗು ಪೌರ ಕಾನೂನು ಎರಡರ ಸಂಕೀರ್ಣ ಮಿಶ್ರಣವಾಗಿದೆ. ಕೆಲವು ಸಂದರ್ಭಗಳಲ್ಲಿ, ಉದಾಹರಣೆಗೆ ಮರಣದಂಡನೆ ನೀಡುವ ವಿಷಯದಲ್ಲಿ, ಕ್ಷಮೆ ಅರ್ಜಿಯನ್ನು ಗಣರಾಜ್ಯದ ಅಧ್ಯಕ್ಷರಿಗೆ ನೀಡಿ ಅವರ ನಿರ್ಣಯವನ್ನು ಪರಿಗಣಿಸಲಾಗುತ್ತದೆ. ಆದಾಗ್ಯೂ, ಅಧ್ಯಕ್ಷರ ಪರವಾಗಿ ಪಾರ್ಲಿಮೆಂಟಿನ ೨/೩ ಬಹುಮತ(ಪ್ರಸಕ್ತದವರೆಗೂ), ಸರ್ವೋಚ್ಚ ನ್ಯಾಯಾಲಯ ಹಾಗು ಅದರ ನ್ಯಾಯಮೂರ್ತಿಗಳ ಅಧಿಕಾರವು ನಿರರ್ಥಕಗೊಳ್ಳುತ್ತದೆ ಏಕೆಂದರೆ, ಅಧ್ಯಕ್ಷರು ಇಚ್ಚಿಸಿದರೆ, ಸಂವಿಧಾನದ ಪ್ರಕಾರ ಅವರುಗಳನ್ನು ಅವರವರ ಹುದ್ದೆಗಳಿಂದ ವಜಾಮಾಡಬಹುದು. ಈ ರೀತಿಯಾಗಿ, ಇಂತಹ ಪರಿಸ್ಥಿತಿಗಳಲ್ಲಿ, ಪೌರ ಕಾನೂನಿನ ಅಧಿಕೃತ ಸ್ಥಿತಿಯು ಇಲ್ಲವಾಗುತ್ತದೆ.
ದಕ್ಷಿಣ ಆಫ್ರಿಕಾ
[ಬದಲಾಯಿಸಿ]ದಕ್ಷಿಣ ಆಫ್ರಿಕಾದಲ್ಲಿ, ಸುಪ್ರೀಂ ಕೋರ್ಟ್ ಆಫ್ ಅಪೀಲ್ (SCA) ೧೯೯೪ರಲ್ಲಿ ರಚನೆಯಾಯಿತು. ಜೊತೆಗೆ ಸಂವಿಧಾನೇತರ ವಿಷಯಗಳಲ್ಲಿ ಮೇಲ್ಮನವಿ ಸಲ್ಲಿಕೆಯ ಉಚ್ಚ ನ್ಯಾಯಾಲಯವಾಗಿ ದಕ್ಷಿಣ ಆಫ್ರಿಕಾದ ಸರ್ವೋಚ್ಚ ನ್ಯಾಯಾಲಯದ ಮೇಲ್ಮನವಿ ವಿಭಾಗದ ಸ್ಥಾನವನ್ನು ಆಕ್ರಮಿಸಿತು. ಇಲ್ಲಿ SAC, ಸಾಂವಿಧಾನಿಕ ನ್ಯಾಯಾಲಯದ ಅಧೀನ ನ್ಯಾಯಾಲಯವಾಗಿದೆ, ಇದು ಸಂವಿಧಾನದ ವ್ಯಾಖ್ಯಾನವನ್ನು ಒಳಗೊಳ್ಳುವ ಉನ್ನತ ನ್ಯಾಯಾಲಯವಾಗಿದೆ.
ಸೋವಿಯತ್-ಮಾದರಿಯ ನ್ಯಾಯಾಧಿಕಾರ ವ್ಯಾಪ್ತಿ ಕ್ಷೇತ್ರಗಳು
[ಬದಲಾಯಿಸಿ]ಹಲವು ರಾಷ್ಟ್ರಗಳು, ಸೋವಿಯತ್ ಒಕ್ಕೂಟದ ಮಾದರಿ ಸಂವಿಧಾನವನ್ನು ಹೊಂದಿವೆ. ಶಾಸಕಾಂಗಕ್ಕೆ ಅಂತ್ಯೋಪಾಯದ ನ್ಯಾಯಾಲಯ ದ ಅಧಿಕಾರವನ್ನು ನೀಡಲಾಗಿದೆ. ಆದಾಗ್ಯೂ, ಪ್ರಬಲವಾದ ಕಾನೂನು ವ್ಯವಸ್ಥೆಯ ಕೊರತೆಯಿಂದಾಗಿ, ಈ ಅಧಿಕಾರವು ಕೇವಲ ಹೆಸರಿಗೆ ಮಾತ್ರ ಇದೆ[ಸೂಕ್ತ ಉಲ್ಲೇಖನ ಬೇಕು]. ಪೀಪಲ್'ಸ್ ರಿಪಬ್ಲಿಕ್ ಆಫ್ ಚೀನಾನಲ್ಲಿ, ಕಾನೂನು ವ್ಯಾಖ್ಯಾನದ ಅಂತಿಮ ಅಧಿಕಾರವನ್ನು ಸ್ಟ್ಯಾಂಡಿಂಗ್ ಕಮಿಟಿ ಆಫ್ ದಿ ನ್ಯಾಷನಲ್ ಪೀಪಲ್'ಸ್ ಕಾಂಗ್ರೆಸ್ಸ್ ಗೆ ವಹಿಸಲಾಗಿದೆ. ಈ ಅಧಿಕಾರದಲ್ಲಿ ಹಾಂಗ್ ಕಾಂಗ್ ಹಾಗು ಮಕಾವ್ ನ (ಮೂಲ ಕಾಯ್ದೆಗಳನ್ನು)ಬೇಸಿಕ್ ಲಾಗಳನ್ನು ವ್ಯಾಖ್ಯಾನಿಸುವ ಅಧಿಕಾರವೂ ಸೇರಿದೆ, ಎರಡು ವಿಶೇಷ ಆಡಳಿತಾತ್ಮಕ ಪ್ರದೇಶಗಳ ಸಾಂವಿಧಾನಿಕ ದಾಖಲೆಗಳು, ಕ್ರಮವಾಗಿ ಸಂಪ್ರದಾಯ ಕಾನೂನು ಹಾಗು ಪೋರ್ಚುಗೀಸ್-ಮೂಲದ ಕಾನೂನು ವ್ಯವಸ್ಥೆಯನ್ನು ಕ್ರಮವಾಗಿ ಹೊಂದಿರುತ್ತವೆ. ಈ ಅಧಿಕಾರವು ಶಾಸನದ ಅಧಿಕಾರವಾಗಿದ್ದು, ನ್ಯಾಯಾಂಗ ಅಧಿಕಾರವಲ್ಲ, NPCSC ವ್ಯಾಖ್ಯಾನವು ಈಗಾಗಲೇ ಇರುವ ನಿರ್ಧಾರಿತ ವಿಷಯಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಇವನ್ನೂ ನೋಡಿ
[ಬದಲಾಯಿಸಿ]- ರಾಷ್ಟ್ರೀಯ ಸರ್ವೋಚ್ಚ ನ್ಯಾಯಾಲಯಗಳ ಪಟ್ಟಿ
- ಸಂವಿಧಾನಾತ್ಮಕ ಪ್ರಭುತ್ವ
- ನ್ಯಾಯಾಂಗ
- ನ್ಯಾಯಾಂಗದ ಸ್ವಾತಂತ್ರ್ಯ
- ಅಧಿಕಾರದ ವಿಭಜನೆ
- ಭಾರತದ ಸಂವಿಧಾನ
- ಭಾರತದ ಸರ್ವೋಚ್ಛ ನ್ಯಾಯಾಲಯ
ಟಿಪ್ಪಣಿಗಳು ಮತ್ತು ಆಕರಗಳು
[ಬದಲಾಯಿಸಿ]- ↑ "Overview of the Delaware Court System". Delaware Judicial Information Center. Retrieved 2009-12-19.
- ↑ http://www.haestirettur.is/
- ↑ ಸ್ಪಾನಿಷ್ ಸಿವಿಲ್ ಕೋಡ್, ನಿಬಂಧನೆ ೧ ೧
- ↑ ಪಾಬ್ಲೋ ಕಾಂಟ್ರೇರಾಸ್, ಪೆಡ್ರೋ ಡೆ (ಸಂಪಾದನೆ.). "ಕುರ್ಸೋ ಡೆ ಡೆರೆಚೋ ಸಿವಿಲ್ (I)". ಕೊಲೆಕ್ಸ್ ೨೦೦೮, ಪುಟ. ೧೬೭, ೧೬೮ ಹಾಗು ೧೭೫
- ↑ "The Judiciary: The Federal Supreme Court". Government of Switzerland. Archived from the original on 2011-04-29. Retrieved 2010-11-14.
- Pages using the JsonConfig extension
- Articles with hatnote templates targeting a nonexistent page
- Articles needing additional references from March 2008
- All articles needing additional references
- Articles that may contain original research from October 2010
- All articles that may contain original research
- Articles containing Japanese-language text
- Articles with unsourced statements from December 2009
- ನ್ಯಾಯಾಲಯ ವ್ಯವಸ್ಥೆಗಳು
- ರಾಷ್ಟ್ರೀಯ ಸರ್ವೋಚ್ಚ ನ್ಯಾಯಾಲಯಗಳು
- ಆಡಳಿತ ವಿಭಾಗಗಳು
- ನ್ಯಾಯಾಂಗ ವ್ಯವಸ್ಥೆ