ಗೋವಿಂದಾ
ಗೋವಿಂದಾ | |
---|---|
Govinda at the launch of Dev Anand's autobiography 'Romancing With Life'. | |
ಅಧಿಕಾರ ಅವಧಿ ೩ ಜೂನ್ ೨೦೦೪ – ೨೦೦೯ | |
ಉತ್ತರಾಧಿಕಾರಿ | ಸಂಜಯ್ ನಿರುಪಮ್ |
ಮತಕ್ಷೇತ್ರ | ಮುಂಬಯಿ ಉತ್ತರ |
ವೈಯಕ್ತಿಕ ಮಾಹಿತಿ | |
ಜನನ | ಗೋವಿಂದ್ ಅರುಣ್ ಅಹುಜಾ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಸುನಿತ ಅಹುಜಾ (೧೯೮೭ - ಪ್ರಸ್ತುತ) |
ಮಕ್ಕಳು | ಆಶು ದೇವಿ |
ವಾಸಸ್ಥಾನ | ಮುಂಬಯಿ |
ಉದ್ಯೋಗ | ನಟ, ದೂರದರ್ಶನ ನಿರೂಪಕ, ರಾಜಕಾರಣಿ |
ಧರ್ಮ | ಹಿಂದೂ |
ಸಕ್ರಿಯ ಕಾಲ | ೧೯೮೬ - ಪ್ರಸ್ತುತ |
As of February 19, 2008 ಮೂಲ: Lok Sabha |
ಗೋವಿಂದಾ (ಹಿಂದಿ:गोविंदा; ಗೋವಿಂದ್ ಅರುಣ್ ಅಹುಜಾ , ೧೯೬೩ ರ ಡಿಸೆಂಬರ್ ೨೧ ರಂದು ಜನನ)[೧], ಇವರು ಫಿಲ್ಮ್ ಫೇರ್ ಪ್ರಶಸ್ತಿ-ವಿಜೇತರಾಗಿರುವ ಭಾರತೀಯ ನಟ ಮತ್ತು ರಾಜಕಾರಣಿಯಾಗಿದ್ದಾರೆ. ಇವರು ಸುಮಾರು ೧೨೦ ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವೃತ್ತಿಜೀವನದ ಆರಂಭದಲ್ಲಿ, ಅವರ ನಟನೆ ಮತ್ತು ನೃತ್ಯ ಕೌಶಲಗಳು ಚಲನಚಿತ್ರ ವೀಕ್ಷರಲ್ಲಿ ಜನಪ್ರಿಯತೆ ಗಳಿಸುವಂತೆ ಮಾಡಿದವು. ಅನಂತರ ಅವರು ಷೋಲಾ ಔರ್ ಶಬ್ನಮ್ , ಆಂಖೆ , ಕೂಲಿ ನಂ. ೧ , ಹಸೀನಾ ಮಾನ್ ಜಾಯೇಗಿ ಮತ್ತು ಪಾರ್ಟನರ್ ಹಾಸ್ಯ ಪ್ರಧಾನ ಚಲನಚಿತ್ರಗಳ ಮೂಲಕ ಬಾಲಿವುಡ್ ನಟರಾಗಿ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದರು.
ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ೨೦೦೪ ರ ೧೪ನೇ ಲೋಕ ಸಭೆ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷದ ರಾಮ್ ನಾಯ್ಕ್ ರನ್ನು ಸೋಲಿಸಿದ ನಂತರ, ಇವರು ಭಾರತದ ಮಹಾರಾಷ್ಟ್ರದಲ್ಲಿನ ಉತ್ತರ ಮುಂಬಯಿ ಲೋಕಸಭೆ ಚುನಾವಣಾ ಕ್ಷೇತ್ರದಿಂದ, ಏಳನೇ ಸಂಸತ್ ಸದಸ್ಯರಾಗಿ ಚುನಾಯಿಸಲ್ಪಟ್ಟರು. ಸಿನಿಮಾಗಳ ಕಡೆ ಹೆಚ್ಚು ಗಮನಹರಿಸಲೆಂದು ೨೦೦೯ ರ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದರು. ಅದೇನೇ ಆದರೂ ಕಾಂಗ್ರೆಸ್ ಪಕ್ಷದಿಂದ ಅವರಿಗೆ ಈಗಲೂ ಕೃಪಾ ಕಟಾಕ್ಷ ಮತ್ತು ನೆರವು ದೊರೆಯುತ್ತಲೇ ಇದೆ. ಇವರ ಚುನಾವಣಾ ಕ್ಷೇತ್ರವನ್ನು ನಂತರ ಸಂಜಯ್ ನಿರುಪಮ್ ಗೆದ್ದುಕೊಂಡರು. (ಇವರೂ ಕೂಡ ಕಾಂಗ್ರೆಸ್ ನವರು).
೧೯೯೯ ರ ಜೂನ್ ನಲ್ಲಿ, ಗೋವಿಂದಾರವರನ್ನು ಬೆಳ್ಳಿತೆರೆಯ ಅಥವಾ ಕಳೆದ ಸಾವಿರ ವರ್ಷಗಳ ಅವಧಿಯಲ್ಲಿನ ಬೆಳ್ಳಿತೆರೆಯಲ್ಲಿ ಅತ್ಯಂತ ಶ್ರೇಷ್ಠ ಹತ್ತು ತಾರೆಯರಲ್ಲಿ ಒಬ್ಬರೆಂದು BBC ನ್ಯೂಸ್ ಆನ್ ಲೈನ್ ಬಳಕೆದಾರರ ಜನಮತಗಣನೆಯಲ್ಲಿ ಆಯ್ಕೆ ಮಾಡಲಾಯಿತು.[೨]
ಆರಂಭಿಕ ಜೀವನ
[ಬದಲಾಯಿಸಿ]ಗೋವಿಂದಾರ ತಂದೆ, ಅರುಣ್ ಕುಮಾರ್ ಅಹುಜಾ, ವಿಭಜನೆ ಪೂರ್ವದ ಪಂಜಾಬ್ ನ ಗುಜ್ರಾನ್ವಾಲ(ಈಗ ಇದು ಪಾಕಿಸ್ತಾನದಲ್ಲಿದೆ) ದಲ್ಲಿ ೧೯೧೭ ರ ಜನವರಿ ೨೬ ರಂದು ಜನಿಸಿದರು. ಇವರು ಲಾಹೋರ್ ನ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಅಧ್ಯಯನ ಮಾಡಿದರು. ಹೆಸರಾಂತ ನಿರ್ಮಾಪಕ ಮೆಹಬೂಬ್ ಖಾನ್ ಇವರನ್ನು ೧೯೩೭ ರಲ್ಲಿ ಮುಂಬಯಿಗೆ ಕರೆತಂದರು. ಅಲ್ಲದೇ ಏಕ್ ಹಿ ರಾಸ್ತಾ ಚಲನಚಿತ್ರದ ನಾಯಕರನ್ನಾಗಿಸಿದರು. ಅರುಣ್, ಮೆಹ್ಬೂಬ್ ಖಾನ್ ರ ಔರತ್ (೧೯೪೦) ನಲ್ಲಿ ಗಮನಾರ್ಹ ಅಭಿನಯ ನೀಡಿದರು. ಗೋವಿಂದಾರ ತಾಯಿ ನಜೀಮಾ, ಇವರು ಮುಸ್ಲೀಮರಾಗಿದ್ದು, ಹಿಂದೂ ಧರ್ಮಕ್ಕೆ ಮತಾಂತರಗೊಂಡು, ತಮ್ಮ ಹೆಸರನ್ನು ನಿರ್ಮಲಾ ದೇವಿಯೆಂದು ಬದಲಾಯಿಸಿಕೊಂಡರು.[ಸೂಕ್ತ ಉಲ್ಲೇಖನ ಬೇಕು] ಅರುಣ್ ಮತ್ತು ನಿರ್ಮಲಾ, ಸವೇರಾ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಮೊದಲ ಬಾರಿಗೆ ಭೇಟಿಯಾದರು. ಈ ಚಲನಚಿತ್ರದಲ್ಲಿ ಇಬ್ಬರೂ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಅವರು ೧೯೪೧ ರಲ್ಲಿ ವಿವಾಹವಾದರು.[೩]
ಅಹುಜಾ ನಿರ್ಮಿಸಿದ ಕೇವಲ ಒಂದೇ ಒಂದು ಚಲನಚಿತ್ರ ನೆಲಕಚ್ಚಿತು. ಈ ನಷ್ಟವನ್ನು ಭರಿಸಲಾಗದೆ ಅವರ ಆರೋಗ್ಯ ಹದಗೆಟ್ಟಿತು. ಮುಂಬಯಿ ನ ಅಪ್ ಮಾರ್ಕೆಟ್ ಕಾರ್ಟರ್ ರಸ್ತೆಯ ಬಂಗಲೆಯಲ್ಲಿ ವಾಸವಾಗಿದ್ದ ಕುಟುಂಬ, ಈ ನಷ್ಟದಿಂದಾಗಿ ವಿರಾರ್ ಗೆ ತೆರಳಬೇಕಾಯಿತು- ಇದು ದೂರದ ಗುಡ್ಡಗಾಡಿನ ಅರೆ ಗ್ರಾಮೀಣ ಮುಂಬಯಿನ ಉಪನಗರವಾಗಿದ್ದು,ಇಲ್ಲಿ ಗೋವಿಂದಾ ಜನಿಸಿದರು. ಆರು ಜನರಲ್ಲಿ ಕಿರಿಯವರಾಗಿದ್ದ ಇವರನ್ನು ಮುದ್ದಿನಿಂದ ಚಿ ಚಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಪಂಜಾಬೀ,[೪] ಭಾಷೆಯಲ್ಲಿ ಇದರ ಅರ್ಥ ಕಿರು ಬೆರೆಳೆಂದು. ಅಲ್ಲದೇ ಈ ಭಾಷೆಯನ್ನು ಮನೆಯಲ್ಲಿ ಮಾತನಾಡುತ್ತಿದ್ದರು. ಇವರ ತಂದೆಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಮುಂಬಯಿನ ಕಷ್ಟಕರ ಪರಿಸ್ಥಿತಿಯಲ್ಲಿ ನಿರ್ಮಲಾ ದೇವಿ ಮಕ್ಕಳನ್ನು ಬೆಳೆಸಿದರು.
ನಟನಾ ವೃತ್ತಿ ಬದುಕು
[ಬದಲಾಯಿಸಿ]ಆರಂಭಿಕ ವೃತ್ತಿಜೀವನ
[ಬದಲಾಯಿಸಿ]ಇವರು ಮಹಾರಾಷ್ಟ್ರದ ವಾಸೈನಲ್ಲಿರುವ ಅಣ್ಣಾ ಸಾಬ್ ವರ್ತಕ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದರು. ಇವರು ವಾಣಿಜ್ಯದಲ್ಲಿ ಪದವಿ ಪಡೆದರೂ ಕೂಡ ಉದ್ಯೋಗ ಗಳಿಸುವಲ್ಲಿ ವಿಫಲರಾದರು. ಅವರಿಗೆ ಇಂಗ್ಲೀಷ್ ಅನ್ನು ಅಷ್ಟು ಚೆನ್ನಾಗಿ ಮಾತನಾಡಲು ಬರದಿದ್ದ ಕಾರಣ, ತಾಜ್ ಮಹಲ್ ಹೋಟೆಲ್ ನಲ್ಲಿ ಅವರಿಗೆ ವ್ಯವಸ್ಥಾಪಕನ ಕೆಲಸ ದೊರೆಯಲಿಲ್ಲ. ಗೋವಿಂದಾ ಅವರ ತಂದೆ ಚಲನಚಿತ್ರಗಳಲ್ಲಿ ಅವರ ಅದೃಷ್ಟ ಪರೀಕ್ಷಿಸುವಂತೆ ಸಲಹೆ ನೀಡಿದರು. ಈ ಸಮಯದಲ್ಲಿ, ಗೋವಿಂದಾ ಸಾಟರ್ಡೆ ನೈಟ್ ಫೀವರ್ ಎಂಬ ಸಿನಿಮಾ ನೋಡಿದರು. ಅಲ್ಲದೇ ನೃತ್ಯ ಅವರ ಗೀಳಾಯಿತು. ಅವರು ಗಂಟೆಗಟ್ಟಲೆ ನೃತ್ಯ ಅಭ್ಯಾಸ ಮಾಡಿದರು. ಅಲ್ಲದೇ VHS ಕ್ಯಾಸೆಟ್ ಗಳ ಮೇಲೆ ತಮ್ಮ ನೃತ್ಯದ ತುಣುಕನ್ನು ಪ್ರಚಾರ ಮಾಡಿದರು. ಶೀಘ್ರದಲ್ಲೆ ಇವರನ್ನು ಪ್ರೋತ್ಸಾಹಿಸುವವ ಅಲ್ವಿನ್ ಜಾಹಿರಾತಿನಲ್ಲಿ ಕಾಣಿಸಿದರು, ಅಂತಿಮವಾಗಿ ಇವರು ತನ್ ಬದನ್ ನಲ್ಲಿ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದರು. ಈ ಚಿತ್ರವನ್ನು ಇವರ ಚಿಕ್ಕಪ್ಪ ಆನಂದ್ ನಿರ್ದೇಶಿಸಿದ್ದರು. ಅನಂತರ ೧೯೮೫ ರ ಜೂನ್ ನಲ್ಲಿ ಅವರ ಮುಂದಿನ ಚಿತ್ರ ಲವ್ ೮೬ ನಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಜುಲೈ ಮಧ್ಯಾವಧಿಗೆಲ್ಲಾ ಇವರು ಇತರ ೪೦ ಚಲನಚಿತ್ರಗಳಿಗೆ ಸಹಿಹಾಕಿದ್ದರು.[೫][೬]
ಮೊದಲ ಬಾರಿಗೆ ತೆರೆಕಂಡ ಇವರ ಚಿತ್ರ ಇಲ್ಜಾಮ್ (೧೯೮೬), ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಆಯಿತಲ್ಲದೇ, ೧೯೮೬ ರ ಐದನೇ ಅತ್ಯಂತ ಯಶಸ್ವಿ ಚಿತ್ರವಾಯಿತು. ಈ ಚಿತ್ರ ಇವರನ್ನು ನೃತ್ಯ ತಾರೆಯನ್ನಾಗಿಸಿತು. ಈ ಮಿಶ್ರ ಯಶಸ್ಸಿನೊಂದಿಗೆ ಅನಂತರ ಅವರು ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದರು. ಅವರು ೧೯೮೦ ರ ಸಮಯದಲ್ಲಿ ಅಭಿನಯಿಸಿದ ಬಹುಪಾಲು ಚಿತ್ರಗಳು ಸಾಹಸ, ಪ್ರೀತಿ ಅಥವಾ ಕೌಟುಂಬಿಕ ಕಥೆ ಯ ನಾಟಕ ಶೈಲಿಯಲ್ಲಿದ್ದವು. ಇವರು ನೀಲಂ ನ ಎದುರು ನಾಯಕನ ಪಾತ್ರದಲ್ಲಿ ಹೆಚ್ಚಾಗಿ ಅಭಿನಯಿಸಿದ್ದಾರೆ. ಅಲ್ಲದೇ ಇವರಿಬ್ಬರೂ ಲವ್ ೮೬ (೧೯೮೬), ಖುದ್ಗರ್ಜ್ (೧೯೮೭), ಮತ್ತು ಇವರ ತಮ್ಮ ಕೀರ್ತಿ ಕುಮಾರ್ ನಿರ್ದೇಶನದ ಹತ್ಯಾ (೧೯೮೮) ದಂತಹ ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕೌಟುಂಬಿಕ ಕಥೆಗೆ ಸಂಬಂಧಿಸಿದ ದರಿಯಾ ದಿಲ್ (೧೯೮೮), ಜೀತೆ ಹೈ ಶಾನ್ ಸೆ (೧೯೮೮) ಮತ್ತು ಹಮ್ (೧೯೯೧) ನಂತಹ ಚಿತ್ರಗಳಲ್ಲಿ ಹಾಗು ಮರ್ತೆ ದಮ್ ತಕ್ (೧೯೮೭) ಮತ್ತು ಜಂಗ್ ಬಾಜ್ (೧೯೮೯) ನಂತಹ ಸಾಹಸಮಯ ಚಿತ್ರಗಳಲ್ಲಿ ಯಶಸ್ಸು ಕಂಡರು. ಇವರು ಸಾಹಸಮಯ ಚಲನಚಿತ್ರ ತಾಕತ್ವಾರ್ ನಲ್ಲಿ ಡೇವಿಡ್ ಧವನ್ ನೊಂದಿಗೆ ಮೊದಲ ಬಾರಿ ೧೯೮೯ ರಲ್ಲಿ ಕಾರ್ಯನಿರ್ವಹಿಸಿದರು. ಇವರು, ಆ ವರ್ಷದ ಯಶಸ್ವಿ ಚಿತ್ರ ಗೈರ್ ಖಾನೂನಿ ಯಲ್ಲಿ ರಜನಿ ಕಾಂತ್ ಮತ್ತು ಶ್ರೀದೇವಿ ಯೊಂದಿಗೂ ಕಾರ್ಯನಿರ್ವಹಿಸಿದರು.
೧೯೯೦ರ ದಶಕ
[ಬದಲಾಯಿಸಿ]೧೯೯೦ ರ ಹೊತ್ತಿನಲ್ಲಿ ಗೋವಿಂದಾ ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ೧೯೯೨ ರಲ್ಲಿ , ವಿಮರ್ಶಾತ್ಮಕವಾಗಿ ಅಪಾರ ಮೆಚ್ಚುಗೆ ಗಳಿಸಿದ ಜುಲ್ಮ್ ಕಿ ಹುಕುಮತ್ ಎಂಬ ಚಲನಚಿತ್ರದಲ್ಲಿ ಕಾಣಿಸಿಕೊಂಡರು. ಇದು ದಿ ಗಾಡ್ ಫಾದರ್ ಚಲನಚಿತ್ರದ ಭಾರತೀಯ ರೀಮೇಕ್ ಆಗಿದ್ದು, ಇದರಲ್ಲಿನ ಅಭಿನಯಕ್ಕಾಗಿ ಅವರನ್ನು ಪ್ರಶಂಸಿಸಲಾಯಿತು. ಅನಂತರ ಅವರು ಡೇವಿಡ್ ಧವನ್ ರವರ ಜೊತೆಗೂಡಿ ೧೭ ಚಲನಚಿತ್ರಗಳಲ್ಲಿ ಅಭಿನಯಿಸಲು ಮುಂದಾದರು. ಇವುಗಳನ್ನು ಡೇವಿಡ್ ರವರೇ ನಿರ್ದೇಶಿಸಿದ್ದರಲ್ಲದೇ, ಇವುಗಳಲ್ಲಿ ಬಹುಪಾಲು ಹಾಸ್ಯಪ್ರಧಾನ ಚಲನಚಿತ್ರಗಳಾಗಿವೆ. ಇವರು ಜತೆಗೂಡಿ ನಿರ್ಮಿಸಿದ ಚಿತ್ರಗಳಲ್ಲಿ ಯಶಸ್ವಿಯಾದವುಗಳು ಕೆಳಕಂಡಂತಿವೆ: ಷೋಲಾ ಔರ್ ಶಬ್ನಮ್ (೧೯೯೨), ಆಂಖೆ (೧೯೯೩), ರಾಜಾ ಬಾಬು (೧೯೯೪), ಕೂಲಿ ನಂ. ೧ (೧೯೯೫), ಸಾಜನ್ ಚಲೆ ಸಸುರಾಲ್ (೧೯೯೬), ಹೀರೋ ನಂ. ೧ (೧೯೯೭), ದೀವಾನ ಮಸ್ತಾನ (೧೯೯೭), ಬಡೆ ಮಿಯಾ ಛೋಟೆ ಮಿಯಾ (೧೯೯೮), ಹಸೀನಾ ಮಾನ್ ಜಾಯೇಗಿ (೧೯೯೯), ಅನಾರಿ ನಂ.೧ (೧೯೯೯) ಮತ್ತು ಜೋಡಿ ನಂ . ೧ (೨೦೦೧). ಧವನ್ ಮತ್ತು ಇತರ ನಿರ್ದೇಶಕರು ೧೯೯೦ ಹೊತ್ತಿನಲ್ಲಿ ಸತತವಾಗಿ ಇವರನ್ನು ದಿವ್ಯಾ ಭಾರತಿ, ಕರಿಶ್ಮಾ ಕಪೂರ್, ಜೂಹಿ ಚಾವ್ಲಾ, ಮನಿಷಾ ಕೊಯಿರಾಲ, ಮತ್ತು ರವೀನಾ ಟಂಡನ್ ಎದುರು ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು.
೨೦೦೦
[ಬದಲಾಯಿಸಿ]ಆದರೆ ೨೦೦೦ ಇಸವಿಯ ಪೂರ್ವಾರ್ಧದಲ್ಲಿ ಇವರ ಚಲನಚಿತ್ರಗಳು ವಾಣಿಜ್ಯವಾಗಿ ವಿಫಲವಾಗುವುದರೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಸಾಧನೆ ಕಾಣಲಿಲ್ಲ. ಅವರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಶಿಕಾರಿ (೨೦೦೦) ಎಂಬ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿದರು. ಈ ಸಿನಿಮಾ ವಾಣಿಜ್ಯಕವಾಗಿ ಯಶಸ್ಸು ಗಳಿಸದಿದ್ದರೂ ಕೂಡ, ಗೋವಿಂದ ರವರ ಮನಮುಟ್ಟುವ ಅಸ್ವಸ್ಥ ಮನಸ್ಸಿನ, ಘಾತಕ ಮನೋಭಾವದ ಹಂತಕ ನ ಅಭಿನಯವನ್ನು ವಿಮರ್ಶಾತ್ಮಕವಾಗಿ ಮೆಚ್ಚಲಾಯಿತು.[೭] ಇವರು ತಾಲ್ Gadar: Ek Prem Katha ಮತ್ತು ದೇವದಾಸ್ ಚಿತ್ರಗಳ ಅವಕಾಶಗಳನ್ನು ತಿರಸ್ಕರಿಸಿದರು, ಆದರೆ ಇವು ಯಶಸ್ವಿ ಚಲನಚಿತ್ರವಾದವು.[೮] ನಂತರ ೨೦೦೪ ರ ಸಂಸತ್ತಿನ ಚುನಾವಣೆಗಳಲ್ಲಿ ಮುಂಬಯಿ ಉತ್ತರದಿಂದ ಇವರು ಸ್ಪರ್ಧಿಸಿ, ಸಂಸತ್ ಸದಸ್ಯರಾದರು. ಈ ಸ್ಥಾನವನ್ನು ಗೆದ್ದುಕೊಂಡಾಗ ಇವರ ನಟನಾ ವೃತ್ತಿಜೀವನಕ್ಕೆ ತಡೆಯುಂಟಾಯಿತು. ೨೦೦೪ ಮತ್ತು ೨೦೦೫ ರಲ್ಲಿ ಇವರ ಯಾವ ಹೊಸ ಸಿನಿಮಾವೂ ತೆರೆಕಾಣಲಿಲ್ಲ. ಆದರು ಖುಲ್ಲಂ ಖುಲ್ಲಾ ಪ್ಯಾರ್ ಕರೇ (೨೦೦೫), ಮತ್ತು ಅವರದೇ ನಿರ್ಮಾಣದ ಸುಖ್ (೨೦೦೫) ನಂತಹ ಬಿಡುಗಡೆಗೆ ವಿಳಂಬವಾಗಿದ್ದ ಚಿತ್ರಗಳು ತೆರೆಕಂಡರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸೋತವು.
ಗೋವಿಂದಾ, ೨೦೦೬ ರ ಉತ್ತರಾರ್ಧದಲ್ಲಿ ಹಾಸ್ಯ ಪ್ರಧಾನ ಚಲನಚಿತ್ರ ಭಾಗಮ್ ಭಾಗ್ ನಲ್ಲಿ ಅಕ್ಷಯ್ ಕುಮಾರ್ ರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದರಲ್ಲದೇ, ಈ ಚಿತ್ರ ಯಶಸ್ವಿಯೂ ಆಗಿ ವಿಕ್ರಮ ಸಾಧಿಸಿತು. ಆಗ ೨೦೦೭ ರಲ್ಲಿ ತೆರೆಕಂಡ ಇವರ ಮೊದಲ ಚಲನಚಿತ್ರ ಬಹು ತಾರೆಗಳನ್ನೊಳಗೊಂಡ Salaam-e-Ishq: A Tribute To Love ಚಿತ್ರವಾಗಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತರೂ ಕೂಡ, ಗೋವಿಂದಾ ಅವರನ್ನು ಅದರಲ್ಲಿನ ಅಭಿನಯಕ್ಕಾಗಿ ಪ್ರಶಂಸಿಸಲಾಯಿತು.[೯]
ಡೇವಿಡ್ ಧವನ್ ನಿರ್ದೇಶಿಸಿರುವ ಪಾರ್ಟನರ್ ಚಲನಚಿತ್ರ ೨೦೦೭ ರಲ್ಲಿ ತೆರೆಕಂಡ ಇವರ ಎರಡನೆಯ ಚಿತ್ರವಾಗಿದ್ದು, ಇದು ಸಲ್ಮಾನ್ ಖಾನ್ ರವರನ್ನು ಒಳಗೊಂಡಿದೆ. ಈ ಚಿತ್ರವು ತೆರೆಕಂಡ ಮೊದಲನೆಯ ವಾರದಲ್ಲೇ ಭಾರತದಲ್ಲಿ ೩೦೦ ಮಿಲಿಯನ್ ಅನ್ನು ಗಳಿಸಿತು. ಇದು ಅಲ್ಲಿಯ ವರೆಗೂ ತೆರೆಕಂಡ ಆರಂಭಿಕ ವಾರದಲ್ಲೇ ಅತ್ಯಧಿಕ ಹಣಗಳಿಸಿದ ಭಾರತದ ಸ್ಥಳೀಯ ಭಾಷೆಯ ಎರಡನೆಯ ಚಿತ್ರವಾಗಿದೆ.[೧೦] ೨೦೦೮ ರಲ್ಲಿ ಅವರು ಮನಿ ಹೈ ತೋ ಹನಿ ಹೈ ಚಲನಚಿತ್ರದಲ್ಲಿ ಕಾಣಿಸಿಕೊಂಡರು. ಅದೇ ವರ್ಷ, ಸಲ್ಮಾನ್ ಖಾನ್ ಪಾರ್ಟನರ್ ಚಿತ್ರದ ಯಶಸ್ಸನ್ನು ಆಚರಿಸಲು ,ಡೇವಿಡ್ ಧವನ್ ಮತ್ತು ಗೋವಿಂದಾ ಅವರನ್ನು ಅವರ ದಸ್ ಕಾ ದಮ್ ಪ್ರದರ್ಶನಕ್ಕೆ ಆಹ್ವಾನಿಸಿದರು. ೨೦೦೯ ರಲ್ಲಿ, ತೆರೆಕಂಡ ಅವರ ಲೈಫ್ ಪಾರ್ಟನರ್ ಚಲನಚಿತ್ರ ಯಶಸ್ವಿಯಾಯಿತು. ಗೋವಿಂದಾ, ಡೇವಿಡ್ ಧವನ್ ಮತ್ತು ವಷು ಭಾಗ್ನಾನಿ ಯವರ ಮೂರು ಯಶಸ್ವಿ ಚಿತ್ರಗಳ ನಂತರ, ಅಭಿನಯಿಸಿದ ಡು ನಾಟ್ ಡಿಸ್ಟರ್ಬ್ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು.[೧೧]
೨೦೧೦ ರಲ್ಲಿ ಗೋವಿಂದಾ, ಮಣಿರತ್ನಂರ ದ್ವಿಭಾಷಾ ಚಲನಚಿತ್ರ, ರಾವಣ ದಲ್ಲಿ ವಿಕ್ರಂ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ರೊಂದಿಗೆ ಕಾಣಿಸಿಕೊಂಡರು. ಈ ಚಲನಚಿತ್ರದಲ್ಲಿ ಗೋವಿಂದಾ, ಕಾಡಿನಲ್ಲಿ ಬೇಕಿದ್ದ ಅಪರಾಧಿಗಳ ಹುಡುಕಾಟದಲ್ಲಿರುವ ವಿಕ್ರಮ್ ಪಾತ್ರವನ್ನು ನಿರ್ವಹಿಸುವ ಅರಣ್ಯಾಧಿಕಾರಿಯಾಗಿದ್ದಾರೆ. ಮೊದಲು ಇವರ ಪಾತ್ರವನ್ನು ಹನುಮಾನ್ ನ ಸಮಕಾಲೀನ ಆವೃತ್ತಿ ಎಂದು ಊಹಿಸಲಾಗಿತ್ತು, ಆದರೆ ಗೋವಿಂದ ಇದನ್ನು ತಳ್ಳಿಹಾಕಿದರು.[೧೨] ಈ ಚಲನಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರೂ ಕೂಡ ಇವರ ಈ ಪಾತ್ರದ ಸಾಧನೆಯನ್ನು ಪ್ರಶಂಸಿಸಲಾಯಿತು.[೧೩][೧೪][೧೫]
ರಾಜಕೀಯ ಜೀವನ
[ಬದಲಾಯಿಸಿ]೨೦೦೪ರಲ್ಲಿ, ಗೋವಿಂದಾ, ಕಾಂಗ್ರೆಸ್ ಪಕ್ಷ ಸೇರಿಕೊಂಡರು. ಅಲ್ಲದೇ ಮುಂಬಯಿ ಉತ್ತರ ಚುನಾವಣಾ ಕ್ಷೇತ್ರದಿಂದ ಐದು ಬಾರಿ ಚುನಾಯಿತರಾಗಿದ್ದ MP ಯನ್ನು(ಸಂಸದರನ್ನು) ೫೦೦೦೦ ಮತಗಳಿಂದ ಸೋಲಿಸುವ ಮೂಲಕ ಸಂಸತ್ತಿನ ಕೆಳಮನೆ, ಲೋಕ ಸಭೆಗೆ ಆಯ್ಕೆಯಾದರು.[೧೬] ಗೋವಿಂದಾ, ಪ್ರವಾಸ (ಸಾರಿಗೆ ವ್ಯವಸ್ಥೆ), ಸ್ವಾಸ್ಥ್ಯ್ (ಆರೋಗ್ಯ) ಮತ್ತು ಜ್ಞಾನ್ (ಶಿಕ್ಷಣ) ಅವರ ಕಾರ್ಯಕ್ಷೇತ್ರಗಳಾಗಿವೆ ಎಂಬ ಘೋಷಣೆ ಮೂಲಕ ಚುನಾವಣೆ ವೇಳೆ ಇದನ್ನು ತಮ್ಮ ಚುನಾವಣಾ ಆಸ್ತ್ರವಾಗಿ ಪ್ರಕಟಿಸಿದರು.
ಸಂಸತ್ತಿನ ಸದಸ್ಯ (MP) ಯಾಗಿದ್ದ ಅವರ ಅಧಿಕಾರದ ಮೊದಲ ಹತ್ತು ತಿಂಗಳ ಅವಧಿಯಲ್ಲಿ, ಗೋವಿಂದಾ ಅವರ ೨೦ ಮಿಲಿಯನ್ MP ಸ್ಥಳಿಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಸಾರ್ವಜನಿಕರಿಗಾಗಿ ಯಾವುದೇ ನಿಧಿ ಬಳಸಲಿಲ್ಲ. ವೃತ್ತ ಪತ್ರಿಕೆಗಳ ವರದಿಗಳು ಈ ವಿಷಯವನ್ನು ಗಮನಕ್ಕೆ ತಂದ ಮೇಲೆ ಅವರು ಈ ನಿಧಿಯಿಂದ ಹಣವನ್ನು ಬಳಸಲು ಪ್ರಾರಂಭಿಸಿದರು. ಥಾಣೆ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಮೂಲಗಳ ಪ್ರಕಾರ, ಅಂಗನವಾಡಿ , ಸಮಾಜ ಮಂದಿರ ಗಳು ಹಾಗು ವಾಸೈ ಮತ್ತು ವಿರಾರ್ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗೋವಿಂದಾ ಹಲವು ಕೆಲಸಗಳನ್ನು ಮಾಡಿದ್ದಾರೆ. ಅದೇನೇ ಆದರೂ, ಈ ಯೋಜನೆಗಳ ಮೇಲೆ ಕೆಲಸ ಇನ್ನೂ ಪ್ರಾರಂಭವಾಗಿಲ್ಲ(೨೦೦೫ ರ ಆಗಸ್ಟ್ ನಿಂದ), ಏಕೆಂದರೆ ಆಡಳಿತಾತ್ಮಕ ಒಪ್ಪಿಗೆಗಾಗಿ ನಿರೀಕ್ಷಿಸಲಾಗುತ್ತಿದೆ. ಗೋವಿಂದಾ, ಪಶ್ಚಿಮ ರೈಲ್ವೆ (ಭಾರತ) ಯ ಬೊರಿವ್ಲಿ-ವಿರಾರ್ ವಿಭಾಗವನ್ನು ೮೦ ಪ್ರತಿಶತದಷ್ಟು ಅಧಿಕಗೊಳಿಸಿದ ಪ್ರಶಂಸೆಗೂ ಪಾತ್ರರಾಗಿದ್ದಾರೆ.
ಟೀಕೆ
[ಬದಲಾಯಿಸಿ]ಅವರು MP ಯಾಗಿದ್ದು, ಮುಂಬಯಿ ನಲ್ಲಿ ೪೫೦ ಜನರ ಸಾವಿಗೆ ಕಾರಣವಾದ ಭಯಾನಕ ಮಳೆಯ(೨೦೦೫ ರ ಜುಲೈ ೨೬ ರಂದು) ಸಂದರ್ಭದಲ್ಲಿ ಅವರ ಕ್ಷೇತ್ರದ ಜನರನ್ನು ಸಂಪರ್ಕಿಸಲಿಲ್ಲ ಎಂಬ ತೀವ್ರ ಟೀಕೆಗೆ ಅವರು ಗುರಿಯಾಗಿದ್ದಾರೆ. ಮಳೆಯ ನಂತರ TV ಚಾನಲ್ ನೊಂದಿಗೆ ಮಾತನಾಡುವಾಗ ಗೋವಿಂದಾ ಈ ಕುರಿತು, ಸೋನಿಯಾ ಗಾಂಧಿ ಯವರೊಂದಿಗೆ ಮಾತುಕತೆ ನಡೆಸಿದ ನಂತರ, ಅವರ ಪ್ರವಾಹ ಪೀಡಿತ ಕ್ಷೇತ್ರಕ್ಕಾಗಿ ೧೫೦ ಮಿಲಿಯನ್ ಹಣ ಮಂಜೂರಾಗಿದೆ ಎಂದು ತಿಳಿಸಿದ್ದರು. ಆದರೂ, ಅವರದೇ ಪಕ್ಷದ ಸಹಚರರು ಇದನ್ನು ವಿರೋಧಿಸಿದರು. ಪಲ್ ಗಢ್ ನ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಅಧಿಕಾರಿ, " ಒಂದು ಪೈಸೆ ಕೂಡ ದೊರಕಿಲ್ಲ" ಎಂದು ನೇರವಾಗಿಯೇ ಹೇಳಿದ್ದರು.
MP ಯಾಗಿದ್ದ ಅಧಿಕಾರಾವಧಿಯಲ್ಲಿ ಗೋವಿಂದಾ ಅವರು, ನಟ ಶಕ್ತಿ ಕಪೂರ್ ಗೆ ಬಹಿರಂಗವಾಗಿ ಬೆಂಬಲ ನೀಡುವ ಮೂಲಕ ತಮ್ಮ ಪಕ್ಷವಾದ ಕಾಂಗ್ರೆಸ್ ಮುಜುಗರ ಗೊಳ್ಳುವಂತೆ ಮಾಡಿದ್ದರು. ಅಷ್ಟೇ ಅಲ್ಲದೇ ಇವರು ಬಾಲಿವುಡ್ ನ ಮಹಾತ್ವಕಾಂಕ್ಷಿಯಂತೆ ನಟಿಸಿ,ದೂರದರ್ಶನದ ವರದಿಗಾರರೊಬ್ಬರಿಂದ ಲೈಂಗಿಕ ನೆರವನ್ನು ಅಪೇಕ್ಷಿಸುವಾಗ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದಿದ್ದರು.[೧೭] ಇಷ್ಟೇ ಅಲ್ಲದೇ ಡ್ಯಾನ್ಸ್ ಬಾರ್ ಗಳ ಮೇಲಿನ ನಿಷೇಧದ ಪ್ರಸ್ತಾಪವನ್ನು ವಿರೋಧಿಸಿ ಕಾಂಗ್ರೆಸ್ ಮುಜುಗರ ಪಡುವಂತೆ ಮಾಡಿದ್ದರು-NCP ಯ ಡೆಮೊಕ್ರಟಿಕ್ ಫ್ರಂಟ್ ಗವರ್ನಮೆಂಟ್ (ಪ್ರಜಾಸತ್ಮಾತ್ಮಕ ಮೈತ್ರಿಕೂಟದ ಸರ್ಕಾರ) ಇದರ ನಿಷೇಧ ಮಾಡಲು ಉದ್ದೇಶಿಸಿತ್ತು.
ಸಂಸತ್ ಸದಸ್ಯರಾಗಿ ತಮ್ಮ ಅಧಿಕಾರಾವಧಿಯಲ್ಲಿ,ಯಾವುದೇ ಕ್ರಿಯಾತ್ಮಕ ಕಾರ್ಯ ಮಾಡಲಿಲ್ಲವೆಂದು ಇವರನ್ನು ಟೀಕಿಸಲಾಗಿದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಇವರು ಬಹುತೇಕ ಗೈರುಹಾಜರಾಗುತ್ತಿದ್ದರು. ಅಷ್ಟೇ ಅಲ್ಲದೇ ಅವರು ಸದನದ ಯಾವುದೇ ಚರ್ಚೆಯಲ್ಲಿ ಭಾಗವಹಿಸುತ್ತಿರಲಿಲ್ಲ ಅಥವಾ ಅವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವ ಪ್ರಶ್ನೆಯನ್ನೂ ಕೇಳುತ್ತಿರಲಿಲ್ಲ.[೧೮]
ಬಾಲಿವುಡ್ ನಲ್ಲಿ ಅವರ ವೃತ್ತಿಜೀವನದ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಲು ೨೦೦೮ ರ ಜನವರಿ ೨೦ ರಂದು ರಾಜಕೀಯ ತೊರೆಯಲು ಅವರು ನಿರ್ಧರಿಸಿದರು.[೧೯]
ವೈಯಕ್ತಿಕ ಜೀವನ
[ಬದಲಾಯಿಸಿ]ಗೋವಿಂದಾರ ತಂದೆ ಅರುಣ್ ಅಹುಜಾ ೧೯೪೦ರ ಅವಧಿಯಲ್ಲಿನ ನಟರಾಗಿದ್ದರು. ಅಲ್ಲದೇ ಇವರ ತಾಯಿ ನಿರ್ಮಲಾ ಅಹುಜಾ ಕೂಡ ನಟಿ ಮತ್ತು ಗಾಯಕಿಯಾಗಿದ್ದರು. ಇವರ ಸಹೋದರ ಕೀರ್ತಿ ಕುಮಾರ್ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದಾರೆ. ಇವರ ಸಹೋದರಿ ಕಾಮಿನಿ ಖನ್ನಾ ಚಿತ್ರಕಥೆಗಾರ್ತಿ, ಸಂಗೀತ ನಿರ್ದೇಶಕಿ, ಗಾಯಕಿ, ನಿರೂಪಕಿ ಅಲ್ಲದೇ 'ಬ್ಯೂಟಿ ವಿತ್ ಆಸ್ಟ್ರೋಲಜಿ' ಯ ಸಂಸ್ಥಾಪಕಿಯಾಗಿದ್ದಾರೆ. ಗೋವಿಂದಾ ಮನರಂಜನೆಯ ಉದ್ಯಮದಲ್ಲಿ ಆರು ಜನ ಸೋದರಳಿಯರು ಮತ್ತು ಇಬ್ಬರು ಸೋದರ ಸೊಸೆಯರನ್ನು ಹೊಂದಿದ್ದಾರೆ: ನಟರಾದ ವಿಜಯ್ ಆನಂದ್, ಕೃಷ್ಣ ಅಭಿಷೇಕ್, ಆರ್ಯನ್, ಅರ್ಜುನ್ ಸಿಂಗ್, ರಾಗಿನಿ ಖನ್ನಾ, ಅಮಿತ್ ಖನ್ನಾ, ಆರತಿ ಸಿಂಗ್ ಮತ್ತು ನಿರ್ದೇಶಕ ಜನ್ಮೇಂದ್ರ ಕುಮಾರ್ ಅಹುಜಾ. ಗೋವಿಂದಾ ಅವರ ಭಾವಮೈದುನ ದೇವೆಂದ್ರ ಶರ್ಮಾ ಕೂಡ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.[೨೦][೨೧]
ಗೋವಿಂದಾರ ಸೋದರ ಮಾವ ಆನಂದ್ ಸಿಂಗ್, ನಿರ್ದೇಶಕ ಹೃಷಿಕೇಶ್ ಮುಖರ್ಜಿಯವರ ಸಹಾಯಕರಾಗಿದ್ದರು. ಇವರು ಗೋವಿಂದಾ ಅವರನ್ನು ಅವರ ತನ್ ಬದನ್ ಚಿತ್ರದ ಮೂಲಕ ನಾಯಕರನ್ನಾಗಿಸಿದರು. ಆನಂದ ಸಿಂಗ್ ರ ಪತ್ನಿಯ ಕಿರಿಯ ಸೋದರಿ ಸುನಿತಾ, ತನ್ ಬದನ್ ಚಲನಚಿತ್ರದ 'ಮೂಹೂರ್ತ' ದ ಸಮಯದಲ್ಲಿ ಗೋವಿಂದಾರನ್ನು ಪ್ರೇಮಿಸಲು ಆರಂಭಿಸಿದರು. ಅವರು ೧೯೮೭ ರ ಮಾರ್ಚ್ ೧೧ ರಂದು ವಿವಾಹವಾದರು. ಇವರ ವಿವಾಹವನ್ನು ಆರಂಭದ ನಾಲ್ಕು ವರ್ಷಗಳ ವರೆಗೂ ಬಹಿರಂಗಪಡಿಸಿರಲಿಲ್ಲ.[೨೨]
ಈ ಜೋಡಿ ಈಗ ಇಬ್ಬರು ಮಕ್ಕಳನ್ನು ಹೊಂದಿದೆ: ನರ್ಮದಾ ಮತ್ತು ಯಶೋವರ್ಧನ್ . ಗೋವಿಂದಾ, ೧೯೯೪ ರ ಜನವರಿ ೫ ರಂದು ಖುದ್ದಾರ್ (೧೯೯೪) ಚಲನಚಿತ್ರದ ಚಿತ್ರೀಕರಣಕ್ಕಾಗಿ ಸ್ಟುಡಿಯೋಗೆ ಪ್ರಯಾಣ ಮಾಡುತ್ತಿರುವಾಗ ಸ್ವಲ್ಪದರಲ್ಲೇ ಸಾವಿನಿಂದ ಪಾರಾದರು. ಇವರ ಕಾರು ಮತ್ತೊಂದು ಕಾರಿನ ನಡುವೆ ಡಿಕ್ಕಿಯಾದಾಗ ಇವರ ತಲೆಯ ಮೇಲೆ ಗಾಯವಾಗಿತ್ತು. ಅಪಾರ ರಕ್ತಸ್ರಾವವಾಗಿದ್ದರೂ ಕೂಡ ಗೋವಿಂದಾ ಅವರು ಚಿತ್ರೀಕರಣ ನಿಲ್ಲಿಸಲಿಲ್ಲ. ವೈದ್ಯರನ್ನು ಭೇಟಿಮಾಡಿದ ನಂತರ ಮಧ್ಯರಾತ್ರಿಯವರೆಗೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ವಯಸ್ಸಿನ ವಿವಾದ
[ಬದಲಾಯಿಸಿ]ಗೋವಿಂದಾ ಅವರು ೧೯೬೦ ಮತ್ತು ೧೯೬೩ ರಲ್ಲಿ ಹುಟ್ಟಿದರೆಂದು ಕೆಲವೆಡೆ ಉಲ್ಲೇಖಿಸಲಾಗಿದೆ. Loksabha.nic.in Archived 2011-01-01 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿರುವ ಗೋವಿಂದಾ ಅವರ ಸಂಸತ್ ಸದಸ್ಯರ ವ್ಯಕ್ತಿ ವಿವರದಲ್ಲಿ ಇವರ ಹುಟ್ಟಿದ ದಿನಾಂಕ ೧೯೬೩ ರ ಡಿಸೆಂಬರ್ ೨೧ ಎಂದು ದಾಖಲಾಗಿದೆ. ಇದು ಲೋಕ ಸಭೆಯ ಅಧಿಕೃತ ಸರ್ಕಾರಿ ವೈಬ್ ಸೈಟ್ ಆಗಿದೆ.[೨೩] ಈ ಖಾಸಗಿ ವಿವರವನ್ನು ಸರ್ಕಾರಿ ದಾಖಲೆಗಳಿಂದ ಸಂಗ್ರಹಿಸಲಾಗಿದೆ. ಸಂಸತ್ ಸದಸ್ಯರ ವೈಯಕ್ತಿಕ ಮಾಹಿತಿಗಳನ್ನು ಕಡ್ಡಾಯವಾಗಿ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ಅಲ್ಲದೇ ಸದಸ್ಯತ್ವಕ್ಕಾಗಿ ನಾಮಪತ್ರ ಸಲ್ಲಿಸುವಾಗ ಇವುಗಳನ್ನು ದೃಢೀಕರಿಸಲಾಗುತ್ತದೆ.[೨೪]
ಆದರೆ ಅನೇಕ ವೆಬ್ ಪೋರ್ಟಲ್ ನಲ್ಲಿ ಇವರ ಹುಟ್ಟಿದ ದಿನಾಂಕ ೧೯೫೮ ಎಂದು ತಿಳಿಸಲಾಗಿದೆ. ಇದು ಬಹುಶಃ ಅವರ IMDb ಪೇಜ್ ನಲ್ಲಿರುವ ದೃಢಪಡಿಸದ ದಾಖಲೆಯಿಂದ ಹುಟ್ಟಿಕೊಂಡಿರಬಹುದು. IMDb ಪುಟದಲಿ ಉಲ್ಲೇಖಿತವಾದಂತೆ ಅದೇ ಅದರ ಸುದ್ದಿ ಮೂಲವೆಂದು ಹೇಳುವ Rediff ನಂತಹ ಅನೇಕ ವೆಬ್ ಪೋರ್ಟಲ್ ಗಳು, ಅವರ ೪೮ ನೇ ಹುಟು ಹಬ್ಬವನ್ನು ೨೦೦೬ ರ ಡಿಸೆಂಬರ್ ೨೧ ರಂದು, ಭಾಗಮ್ ಭಾಗ್ ನ ಬಿಡುಗಡೆಯ ಸಂದರ್ಭದಲ್ಲಿ ಆಚರಿಸಿಕೊಂಡರೆಂದು ಬರೆದಿವೆ.[೨೫][೨೬]
ಪ್ರಶಸ್ತಿಗಳು
[ಬದಲಾಯಿಸಿ]ಫಿಲ್ಮ್‌ಫೇರ್ ಪ್ರಶಸ್ತಿಗಳು
[ಬದಲಾಯಿಸಿ]ವಿಜೇತ
- ೧೯೯೭ - ಸಾಜನ್ ಚಲೆ ಸಸುರಾಲ್ ಚಿತ್ರಕ್ಕಾಗಿ ಫಿಲ್ಮ್ ಫೇರ್ ವಿಶೇಷ ಪ್ರಶಸ್ತಿ
- ೧೯೯೯ - ಹಸೀನಾ ಮಾನ್ ಜಾಯೇಗಿ ಚಿತ್ರಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ,
ನಾಮನಿರ್ದೇಶಿತ:
- ೧೯೯೪- ಆಂಖೆ ಚಿತ್ರಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- ೧೯೯೬ -ಕೂಲಿ ನಂ. ೧ ಚಿತ್ರಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- ೧೯೯೭ - ಸಾಜನ್ ಚಲೆ ಸಸುರಾಲ್ ಚಿತ್ರಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- ೧೯೯೮ -ದೀವಾನಾ ಮಸ್ತಾನಾ ಚಿತ್ರಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- ೧೯೯೯ - ಬಡೆ ಮಿಯಾ ಛೋಟೆ ಮಿಯಾ ಚಿತ್ರಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ
- ೨೦೦೦ - ಹಸೀನಾ ಮಾನ್ ಜಾಯೇಗಿ ಚಿತ್ರಕ್ಕೆ ಹಾಸ್ಯ ಪಾತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನೀಡುವ ಫಿಲ್ಮ್ ಫೇರ್ ಪ್ರಶಸ್ತಿ - '
- ೨೦೦೦ -ಶಿಕಾರಿ ಚಿತ್ರಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿ
- ೨೦೦೧ -ಕುಂವಾರಾ ಚಿತ್ರಕ್ಕೆ, ಹಾಸ್ಯ ಪಾತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನೀಡುವ ಫಿಲ್ಮ್ ಫೇರ್ ಪ್ರಶಸ್ತಿ
- ೨೦೦೨ - ಜೋಡಿ ನಂ.೧ ಚಿತ್ರಕ್ಕೆ, ಹಾಸ್ಯ ಪಾತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನೀಡುವ ಫಿಲ್ಮ್ ಫೇರ್ ಪ್ರಶಸ್ತಿ
- ೨೦೦೨ - ಹಾಸ್ಯ ಪಾತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನೀಡುವ ಫಿಲ್ಮ್ ಫೇರ್ ಪ್ರಶಸ್ತಿ, ಕ್ಯೂ ಕೀ... ಮೈ ಝೂಟ್ ನಹೀ ಬೋಲ್ತಾ ಚಿತ್ರಕ್ಕಾಗಿ
- ೨೦೦೩ -ಅಖಿಯೋ ಸೇ ಗೋಲಿ ಮಾರೆ ಚಿತ್ರಕ್ಕೆ, ಹಾಸ್ಯ ಪಾತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ನೀಡುವ ಫಿಲ್ಮ್ ಫೇರ್ ಪ್ರಶಸ್ತಿ
ಇತರೇ ಪ್ರಶಸ್ತಿಗಳು
[ಬದಲಾಯಿಸಿ]ವಿಜೇತ
- ೧೯೯೫ -ಕೂಲಿ ನಂ. ೧ ಚಿತ್ರಕ್ಕಾಗಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿಯ ವಿಶೇಷ ಜೂರಿ ಪ್ರಶಸ್ತಿ
- ೧೯೯೮ - ದುಲ್ಹೆ ರಾಜಾ ಚಿತ್ರಕ್ಕಾಗಿ, ಲಕ್ಸ್ ಹಾಸ್ಯ ಪಾತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಝೀ ಸಿನೆ ಪ್ರಶಸ್ತಿ
- ೧೯೯೮ - ಜೂರಿಯಿಂದ ಒಟ್ಟಾರೆ ಅಭಿನಯಕ್ಕಾಗಿ ವಿಶೇಷ ವಿಡಿಯೋಕಾನ್ ಸ್ಕ್ರೀನ್ ಪ್ರಶಸ್ತಿ[೨೭]
- ೧೯೯೯ -ಬಡೆ ಮಿಯಾ ಛೋಟೆ ಮಿಯಾ ಚಿತ್ರಕ್ಕಾಗಿ ಹಾಸ್ಯ ಪಾತ್ರದಲ್ಲಿ ಝೀ ಸಿನೆ ಅತ್ಯುತ್ತಮ ನಟ ಪ್ರಶಸ್ತಿ
- ೨೦೦೦ - ಹಸೀನಾ ಮಾನ್ ಜಾಯೇಗಿ ಚಿತ್ರಕ್ಕಾಗಿ ಹಾಸ್ಯ ಪಾತ್ರದಲ್ಲಿ ಜೀ ಸಿನಿ ಅತ್ಯುತ್ತಮ ನಟ ಪ್ರಶಸ್ತಿ
- ೨೦೦೨- ಜೋಡಿ ನಂ. ೧ ಚಿತ್ರಕ್ಕಾಗಿ IIFA ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ
- ೨೦೦೭ - "ಸ್ಟಾರ್ ಗೋಲ್ಡ್ ಕಾಮಿಡಿ ಹಾನರ್ಸ್ ನಲ್ಲಿ ಅತ್ಯುತ್ಕೃಷ್ಟ ಹಾಸ್ಯ ನಟ" ಪ್ರಶಸ್ತಿ[೨೮][೨೯]
- ೨೦೦೭ - MTV ಲಿಕ್ರಾ ಸ್ಟೈಲ್ ಪ್ರಶಸ್ತಿಗಳ ಸಂದರ್ಭದಲ್ಲಿ ನೀಡಲಾದ ಮೋಸ್ಟ್ ಸ್ಟೈಲಿಶ್ ಕಮ್ ಬ್ಯಾಕ್ ಪ್ರಶಸ್ತಿ[೩೦]
- ೨೦೦೮ - ಅಪ್ಸರಾ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಪಕರ ಗಿಲ್ಡ್ ಪ್ರಶಸ್ತಿಗಳು, ಸಲ್ಮಾನ್ ಖಾನ್ ಜೊತೆ "NDTV ಇಮ್ಯಾಜಿನ್ ನ ೨೦೦೭ ರ ಅತ್ಯುತ್ತಮ ಜೋಡಿ ಪ್ರಶಸ್ತಿ.[೩೧]
- ೨೦೦೮ -ಪಾರ್ಟನರ್ ಚಿತ್ರಕ್ಕಾಗಿ ಪೋಷಕ ನಟ ಪಾತ್ರದಲ್ಲಿ ಜೀ ಸಿನಿ ಅತ್ಯುತ್ತಮ ನಟ ಪ್ರಶಸ್ತಿ
- ೨೦೦೮ -ಪಾರ್ಟನರ್ ಚಿತ್ರಕ್ಕಾಗಿ IIFA ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ನಟ
[ಬದಲಾಯಿಸಿ]ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು | |
---|---|---|---|---|
೧೯೮೬ | ಇಲ್ಜಾಮ್ | ಅಜಯ್ ಶರ್ಮಾ/ವಿಜಯ್ | ಜನಪ್ರಿಯ ಗೀತೆ “ಸ್ಟ್ರೀಟ್ ಡ್ಯಾನ್ಸರ್” ಅನ್ನು ಒಳಗೊಂಡಿದೆ | |
ಡ್ಯೂಟಿ | - | |||
ತನ್- ಬದನ್ | ರವಿ ಪ್ರತಾಪ್ | |||
ಲವ್ ೮೬ | ವಿಕ್ರಂ ದೋಷಿ | |||
ಸದಾ ಸುಹಾಗನ್ | ರವಿ | |||
೧೯೮೭ | ಮೇರಾ ಲಹೂ | ಗೋವಿಂದಾ ಸಿಂಗ್ | ||
ಮರ್ತೆ ದಮ್ ತಕ್ | ಜೈ | |||
ಖುದ್ಗರ್ಜ್ | ಕುಮಾರ್ ಸಕ್ಸೇನಾ | ಕಾನೆ ಅಂಡ್ ಅಬೆಲ್ ನಿಂದ ಎತ್ತಿಕೊಂಡು ಅಳವಡಿಕೆ | ||
ದಾದಾಗಿರಿ | ಸೂರಜ್ | |||
ಪ್ಯಾರ್ ಕರ್ಕೆ ದೇಖೋ | ರವಿ ಕುಮಾರ್ | |||
ಸಿಂಧೂರ್ | ರವಿ | |||
೧೯೮೮ | ಜೀತೆ ಹೈ ಶಾನ್ ಸೆ | ಇಕ್ಬಾಲ್ ಅಲಿ | ||
ಪಾಪ್ ಕೊ ಜಲಾ ಕರ್ ರಾಖ್ ಕರ್ ದೂಂಗಾ | ದೀಪಕ್ ಮಲ್ಹೋತ್ರಾ | |||
ಹತ್ಯಾ | ಸಾಗರ್ | ಪೂವಿನು ಪುಥಿಯಾ ಪೂಂತೇನಲ್ ಚಿತ್ರದ ರೀಮೇಕ್ | ||
ಹಲಾಲ್ ಕಿ ಕಮಾಯಿ | - | |||
ಘರ್ ಘರ್ ಕಿ ಕಹಾನಿ | ಅಮರ್ ಧನ್ ರಾಜ್ | |||
ದರಿಯಾ ದಿಲ್ | ರವಿ | |||
ಘರ್ ಮೇ ರಾಮ್ ಗಲಿ ಮೇ ಶ್ಯಾಮ್ | ಅಮರ್ | |||
ಪ್ಯಾರ್ ಮೊಹಬ್ಬತ್ | - | |||
ಶಿವ್ ಶಕ್ತಿ | ಶಕ್ತಿ | |||
ತೋಫಾ ಮೊಹಬ್ಬತ್ ಕಾ | - | |||
೧೯೮೯ | ಆಖ್ರಿ ಬಾಜಿ | ರಾಮ್ ಕುಮಾರ್ | ||
ಜಂಗ್ ಬಾಜ್ | ಅರ್ಜುನ್ ಶ್ರೀವಾಸ್ತವ್ | |||
ದೊ ಖೈದಿ | ಕಾನು | |||
ಪಾಪ್ ಕಾ ಅಂತ್ | - | |||
ಜೆಂಟಲ್ ಮನ್ | - | |||
ಜೈಸಿ ಕರ್ನಿ ವೈಸಿ ಭರ್ನಿ | ರವಿ ವರ್ಮಾ | ನೀಲ್ ನಿತಿನ್ ಮುಖೇಶ್ ರವಿಯ ಆವೃತಿಯಲ್ಲಿ ಕಿರಿವಯಸ್ಸಿನ ಪಾತ್ರದಲ್ಲಿ ಅಭಿನಯಿಸಿದ್ದಾರೆ. | ||
ಬಿಲ್ಲೂ ಬಾದ್ ಶಾ | - | |||
ಗೈರ್ ಕಾನೂನಿ | ಓಂ ನಾರಾಯಣ್ | |||
ಫರ್ಜ್ ಕಿ ಜಂಗ್ | ವಿಶಾಲ್ | |||
ದೋಸ್ತ್ ಗರಿಬೋಂ ಕಾ | - | |||
ಆಸ್ಮಾನ್ ಸೆ ಊಂಚಾ | ವಿಕ್ರಂ ಮಲಿಕ್ (ವಿಕಿ) | |||
ಘರಾನಾ | ರವಿ ಮೆಹ್ರಾ | |||
ಸಚ್ಚಾಯಿ ಕಿ ತಾಕತ್ | ಸಾಗರ್ ಸಿಂಗ್ | |||
ತಾಕತ್ವಾರ್ | ಜಾನ್ ಡಿ'ಮೆಲ್ಲೊ | |||
೧೯೯೦ | ಮಹಾ-ಸಂಗ್ರಾಮ್ | ರಾಮ್ ಕುಮಾರ್ | ||
ಮೊಹಬ್ಬತ್ ಕಿ ಆಗ್ | - | |||
ಕೌನ್ ಕರೇ ಕುರ್ಬಾನಿ | - | |||
ಆವಾರ್ಗಿ | ಧಿರೆನ್ ಕುಮಾರ್ | |||
ಸ್ವರ್ಗ್ | ಕೃಷ್ಣಾ | |||
ಇಜ್ಜತ್ ದಾರ್ | ವಿಜಯ್ | |||
ಕಾಳಿ ಗಂಗಾ | ಗೋವಿಂದಾ | |||
ಖತರ್ನಾಕ್ | "ಜೀನಾ ಹೈ ಹಮ್ ಕಾ.." ಹಾಡಿನಲ್ಲಿ ನೃತ್ಯಗಾರ | |||
ನಯಾ ಖೂನ್ | ಡಾ.ಆನಂದ್ | |||
ರಯಿಸ್ಜಾದಾ | - | |||
ತಕ್ದೀರ್ ಕಾ ತಮಾಷಾ | - | |||
೧೯೯೧ | ಹಮ್ | ವಿಜಯ್ | ||
ಕೌನ್ ಕರೇ ಕುರ್ಬಾನಿ | ಅಜಿತ್ | |||
ಭಾಭೀ | ಅಮರ್/ನಕದ್ರಮ್ | |||
ಕರ್ಜ್ ಚುಕಾನಾ ಹೈ | ರವಿ | |||
೧೯೯೨ | ಷೋಲಾ ಔರ್ ಶಬ್ನಮ್ | ಕರಣ್ | ||
ತೇರಿ ಪಾಯಲ್ ಮೇರೆ ಗೀತ್ | ಪ್ರೇಮಿ | |||
ಬಾಜ್ | - | |||
ಜಾನ್ ಸೆ ಪ್ಯಾರಾ | ಇನ್ ಸ್ಪೆಕ್ಟರ್ ಜೈ/ಸುಂದರ್ | ದ್ವಿಪಾತ್ರ | ||
ಜುಲ್ಮ್ ಕಿ ಹುಕುಮತ್ | ಪ್ರತಾಪ್ ಕೊಹ್ಲಿ | |||
ರಾಧಾ ಕಾ ಸಂಗಮ್ | - | |||
೧೯೯೩ | ಆಂಖೆ | ಬುನ್ನು/ಗೌರಿಶಂಕರ್ | ಆ ವರ್ಷದಲ್ಲಿ ಅತ್ಯಧಿಕ ಹಣಗಳಿಸಿದ ಚಿತ್ರ | |
ಮುಕಾಬ್ಲಾ | ಸೂರಜ್ | |||
ಝಖ್ಮೊ ಕಾ ಹಿಸಾಬ್ | ಸೂರಜ್ ಕುಮಾರ್ | |||
ಆದ್ಮಿ ಖಿಲೋನಾ ಹೈ | ಶರದ್ ವರ್ಮಾ | |||
ಪ್ರತೀಕ್ಷಾ | ರಾಜಾ | |||
೧೯೯೪ | ಎಕ್ಕಾ ರಾಜಾ ರಾಣಿ | ಸಾಗರ್ | ||
ಅಂದಾಜ್ ಅಪ್ನಾ ಅಪ್ನಾ | ಸ್ವತಃ ತಾನೇ | |||
ರಾಜಾ ಬಾಬು | ರಾಜಾ ಸಿಂಗ್ | ರಸುಕುಟ್ಟಿ ರಿಮೇಕ್ | ||
ರಖ್ ವಾಲೆ | - | |||
ಖುದ್ದಾರ್ | ಸಿದ್ದಾಂತ್ | |||
ದುಲಾರಾ | ರಾಜಾ | |||
ಎಕ್ಕಾ ರಾಜಾ ರಾಣಿ | ಸಾಗರ್ | |||
ಭಾಗ್ಯವಾನ್ | ಅಮರ್ | |||
ಬೇಟಾ ಹೋ ತೋ ಐಸಾ | ರಾಜು | |||
ಪ್ರೇಮ್ ಶಕ್ತಿ | ಗಂಗ್ವಾ/ಕೃಷ್ಣ | |||
ಆಗ್ | ಬಿರ್ಜು | |||
ಬ್ರಹ್ಮಾ | ಸೂರಜ್ | |||
೧೯೯೫ | ಗ್ಯಾಂಬ್ಲರ್ | ದಯಾಶಂಕರ್ ಪಾಂಡೆಯ್ | ಶಾರ್ಟ್ ಟೈಮ್ ನ ಆವೃತ್ತಿ | |
ರಾಕ್ ಡ್ಯಾನ್ಸರ್ | - | |||
ಹಥ್ಕಡಿ | ಸೂರಜ್ ಚೌಹಾಣ್/ರಜನಿ ಕಾಂತ್ | |||
ಆಂದೋಲನ್ | ಅನಿಕೇತ್ | |||
ಕಿಸ್ಮತ್ | ಅಜಯ್ | |||
ಕೂಲಿ ನಂ. ೧ | ರಾಜು | ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ,ಗೆ ನಾಮನಿರ್ದೇಶಿತ ಚಿನ್ನ ಮಾಪಿಳ್ಳೈ ಚಿತ್ರದ ರೀಮೇಕ್ | ||
೧೯೯೬ | ಸಾಜನ್ ಚಲೇ ಸಸುರಾಲ್ | ಶ್ಯಾಮ್ ಸುಂದರ್ | ವಿಶೇಷ ಫಿಲ್ಮ್ ಫೇರ್ ಪ್ರಶಸ್ತಿ,ಅಲ್ಲಾರಿ ಮೊಗುಡು ಚಲನಚಿತ್ರದ ರೀಮೇಕ್ | |
ಛೋಟೆ ಸರ್ಕಾರ್ | ಅಮರ್/ರೋಹಿತ್ | |||
ಜೋರ್ದಾರ್ | ರವಿ | |||
ಮಾಹಿರ್ | ಭೋಲಾ | |||
ಅಪ್ನೆ ದಮ್ ಪರ್ | ||||
೧೯೯೭ | ಹೀರೋ ನಂ. ೧ | ರಾಜೇಶ್ ಮಲ್ಹೋತ್ರಾ | ಬಾವರ್ಚಿಯ ರೀಮೇಕ್ | |
ಕೌನ್ ರೋಕೆಗಾ ಮುಝೆ | ||||
ದೀವಾನಾ ಮಸ್ತಾನಾ | ಬುನ್ನು | ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶಿತವಾಗಿದೆ, ಇದು ವಾಟ್ ಅಬೌಟ್ ಬಾಬ್? ನ ಆವೃತ್ತಿಯಾಗಿದೆ | ||
ದೊ ಆಂಖೆ ಬಾರಾ ಹಾತ್ | ಸಾಗರ್ | |||
ಅಗ್ನಿಚಕ್ರ | ಅಮರ್ | |||
ಲೋಹಾ | ಗೋವಿಂದಾ | |||
೧೯೯೮ | ಅಚಾನಕ್ | ಅರ್ಜುನ್ | ||
ಬನಾರಸಿ ಬಾಬು | ಗೋಪಿ | |||
ದುಲ್ಹೇ ರಾಜಾ | ರಾಜಾ | ಥುರುಪ್ಪು ಗುಲನ್ ಎಂದು ಪುನಃ ನಿರ್ಮಿಸಲಾಗಿದೆ.ಈ ಎರಡು ಚಲನಚಿತ್ರಗಳ ಹಾಡುಗಳನ್ನು ಇತರ ಚಲನಚಿತ್ರಗಳ ಶೀರ್ಷಿಕೆಯಾಗಿ ಬಳಸಲಾಗಿದೆ - ಸುನೋ ಸಾಸುರ್ಜಿ ಮತ್ತು ಆಂಖಿಯೋ ಸೆ ಗೋಲಿ ಮಾರೆ . | ||
ಆಂಟಿ ನಂ.೧ | ಗೋಪಿ | |||
ಮಹಾರಾಜಾ | ಕೊಹಿನೂರ್ ಕರಣ್ | |||
ನಸೀಬ್ | ಕೃಷ್ಣ ಪ್ರಸಾದ್ | |||
ಬಡೆ ಮಿಯಾ ಛೋಟೆ ಮಿಯಾ | ಪ್ಯಾರೆ ಮೋಹನ್/ಛೋಟೆ ಮಿಯಾ | ಬ್ಯಾಡ್ ಬಾಯ್ಸ್ ನ ಆವೃತ್ತಿ | ||
ಪರದೇಸಿ ಬಾಬು | ರಾಜು ಪರದೇಸಿ | |||
೧೯೯೯ | ಅನಾರಿ ನಂ.೧ | ರಾಹುಲ್ ಸಕ್ಸೇನಾ/ರಾಜಾ | ದ್ವಿಪಾತ್ರ | |
ರಾಜಾಜೀ | ರಾಜಾಜೀ | |||
ಹಸೀನಾ ಮಾನ್ ಜಾಯೇಗಿ | ಮೋನು | ವಿಜೇತ , ಫಿಲ್ಮ್ ಫೇರ್ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ | ||
ಹಮ್ ತುಮ್ ಪೆ ಮರ್ತೆ ಹೈ | ರಾಹುಲ್ ಮಲ್ಹೋತ್ರಾ | |||
೨೦೦೦ | ಜಿಸ್ ದೇಶ್ ಮೇ ಗಂಗಾ ರೆಹತಾ ಹೇ | ಗಂಗಾ | ||
ಶಿಕಾರಿ | ಓಂ ಶ್ರೀವಾಸ್ತವ್/ಮಹೇಂದ್ರ ಪ್ರತಾಪ್ ಸಿಂಗ್ | ಫಿಲ್ಮ್ ಫೇರ್ ಅತ್ಯುತ್ತಮ ಖಳನಾಯಕ ಪ್ರಶಸ್ತಿಗೆ ನಾಮನಿರ್ದೇಶಿತಗೊಂಡಿದೆ | ||
ಕುಂವಾರಾ | ರಾಜು | "ಬಾವಗಾರು ಬಾಗುನ್ನಾರಾ"ತೆಲುಗು ಚಿತ್ರದ ರೀಮೇಕ್ | ||
ಬೇಟಿ ನಂ. ೧ | ಭರತ್ ಭಟ್ನಾಗರ್ | ಆದ್ಯಥೆ ಕಣ್ಮಣಿ ಯ ರೀಮೇಕ್ | ||
ಜೋರುಂ ಕಾ ಗುಲಾಮ್ | ರಾಜಾ | |||
ಹಧ್ ಕರ್ ದಿ ಆಪ್ನೆ | ರಾಜು/ಮಮ್ಮಿ/ಡ್ಯಾಡಿ/ಸ್ವೀಟಿ/ದಾದಾ/ದಾದಿ | ಆರು ಪಾತ್ರಗಳು | ||
೨೦೦೧ | ಆಮ್ದನಿ ಅಠನ್ನಿ ಖರ್ಚಾ ರುಪಯ್ಯಾ | ಭಿಮ್ಷಾ | ||
ಅಲ್ಬೇಲಾ | ಟೋನಿ | |||
ಸೆನ್ಸಾರ್ | - | |||
ಜೋಡಿ ನಂ. ೧ | ವೀರು | |||
ದಿಲ್ ನೆ ಫಿರ್ ಯಾದ್ ಕಿಯಾ | ಪ್ರೇಮ್ | |||
ಕ್ಯೂ ಕೀ... ಮೇ ಝೂಟ್ ನಹಿ ಬೋಲ್ತಾ | ರಾಜ್ ಮಲ್ಹೋತ್ರಾ | ಲಯರ್ ಲಯರ್ನ ರಿಮೇಕ್ | ||
೨೦೦೨ | ಪ್ಯಾರ್ ದಿವಾನಾ ಹೋತಾ ಹೈ | ಸುಂದರ್ | ||
ವಾಹ್! ತೇರಾ ಕ್ಯಾ ಕೆಹೆನಾ | ರಾಜ್ ಒಬೆರಾಯ್/ಬನ್ನೆ ಖಾನ್ | ದ್ವಿಪಾತ್ರ | ||
ಅಖಿಯೋ ಸೆ ಗೋಲಿ ಮಾರೆ | ರಾಜ್ ಒಬೆರಾಯ್ | |||
ಚಲೋ ಇಷ್ಕ ಲಡಾಯೇ | ಪಪ್ಪು | ಸ್ಟ್ರೇಂಜರ್ಸ್ ಆನ್ ಎ ಟ್ರೇನ್ ನ ರೀಮೇಕ್ | ||
೨೦೦೩ | ಏಕ್ ಔರ್ ಏಕ್ ಗ್ಯಾರಹ್ | ತಾರಾ | ||
ರಾಜಾ ಭಯ್ಯಾ | ರಾಜಾ ಭಯ್ಯಾ | |||
ತ್ರೀ ರೋಸಸ್ | - | ಚಾರ್ಲೀಸ್ ಏಂಜಲ್ಸ್ ನ ರೀಮೇಕ್ | ||
೨೦೦೫ | ಸುಖ್ | ಚಂದ್ರಪ್ರಕಾಶ್ ಶರ್ಮಾ | ||
ಖುಲ್ಲಂ ಖುಲ್ಲಾ ಪ್ಯಾರ್ ಕರೇ | ರಾಜಾ/ವಿಕಿ | |||
೨೦೦೬ | ಸ್ಯಾಂಡ್‌ವಿಚ್ | ಶೇಖರ್/ವಿಕಿ | ದ್ವಿಪಾತ್ರ | |
ಭಾಗಮ್ ಭಾಗ್ | ಬಬ್ಲಾ | ಮನ್ನಾರ್ ಮಥೈ ಸ್ಪೀಕಿಂಗ್ ನ ರೀಮೇಕ್ | ||
೨೦೦೭ | Salaam-e-Ishq: A Tribute To Love | ರಾಜು | ಲವ್ ಆಕ್ಚುವಲಿ ಯಿಂದ ಸ್ಫೂರ್ತಿ | |
ಪಾರ್ಟನರ್ | ಭಾಸ್ಕರ್ ದಿವಾಕರ್ ಚೌಧರಿ | ಹಿಚ್ ನ ರೀಮೇಕ್ | ||
ಜಹಾನ್ ಜಾಯೇಗಾ ಹಮೆ ಪಾಯೇಗಾ | ಕರಣ್/ಬಾಬಿ ಸಿಂಗ್/ಷೇರ್ ಖಾನ್ | |||
ಓಂ ಶಾಂತಿ ಓಂ | ಸ್ವತಃ ತಾನೇ | |||
೨೦೦೮ | ಮನಿ ಹೈ ತೋ ಹನಿ ಹೈ | ಬಾಬಿ ಅರೋರಾ | ಹಂಸಿಕಾ ಮೊಟ್ವಾನಿ ತಮ್ಮ ರೋಮಾಂಚಕ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಇವರು ಹಿಂದೆ ಸಂಪೂರ್ಣಗೊಳ್ಳದ "ಯಾಹೂ" ಚಿತ್ರದಲ್ಲಿ ಇವರ ಪುತ್ರಿಯಾಗಿ ಅಭಿನಯಿಸಿದ್ದರು.[೩೨] | |
ಹಮ್ ಸೆ ಹೈ ಜಹಾನ್ | - | |||
೨೦೦೯ | ಚಲ್ ಚಲಾ ಚಲ್ | ದೀಪಕ್ | ವರ್ವೆಲ್ಪು (೧೯೮೯) ಎಂಬ ಮಲಯಾಳಿ ಚಲನಚಿತ್ರದ ರೀಮೇಕ್ | |
ಲೈಫ್ ಪಾರ್ಟನರ್ | ಜೀತ್ ಒಬೆರಾಯ್ | |||
ಡು ನಾಟ್ ಡಿಸ್ಟರ್ಬ್ | ರಾಜ್ | |||
ವಾಂಟೆಡ್ | ಸ್ವತಃ ತಾನೇ | "ಜಲ್ವಾ" ಹಾಡಿನಲ್ಲಿ ಗೌರವ ನಟರಾಗಿ ಕಾಣಿಸಿದ್ದು | ||
೨೦೧೦ | ಬಂದಾ ಯೇ ಬಿಂದಾಸ್ ಹೈ | ಪಪ್ಪು | ಮೈ ಕಸಿನ್ ವಿನ್ನಿ ಯ ರೀಮೇಕ್ | |
ನಾಟಿ @ ೪೦ | - | ದಿ ೪೦-ಇಯರ್-ಓಲ್ಡ್ ವರ್ಜಿನ್ ನ ರಿಮೇಕ್ | ||
ಲೂಟ್ | - | |||
ಚಾಯ್ ಗರಂ | - | |||
ಅಬ್ ದಿಲ್ಲಿ ದೂರ್ ನಹೀ | - | |||
ಶೋಮ್ಯಾನ್ | - | |||
ರಾವಣ್ | ಸಂಜೀವನಿ ಕುಮಾರ್ | |||
೨೦೧೧ | ಪಾರ್ಟನರ್ ೨ | |||
ರನ್ ಭೋಲಾ ರನ್ | - |
ಉಲ್ಲೇಖಗಳು
[ಬದಲಾಯಿಸಿ]- ↑ "Lok Sabha". 164.100.47.132. Archived from the original on 2011-07-03. Retrieved 2010-07-06.
- ↑ "Bollywood star tops the poll". BBC News. 1 July 1999. Retrieved 4 May 2010.
- ↑ "Govinda's father, actor Arun Ahuja, passes away". Indianexpress.com. 1917-01-26. Retrieved 2010-07-06.
- ↑ "Govinda's Nickname Chi Chi-Meaning Behind It". Calcutta Tube. Archived from the original on 19 ಮೇ 2011. Retrieved 27 September 2010.
- ↑ "A Grave Govinda?". Indianexpress.com. Retrieved 2010-09-27.
- ↑ "Govinda gets chatty on radio". In.rediff.com. 2007-08-03. Retrieved 2010-07-06.
- ↑ "Shikari : Movie Review by Taran Adarsh". Indiafm.com. Retrieved 2010-07-06.
- ↑ "Sorry". Indianexpress.com. Retrieved 2010-07-06.
- ↑ "Salaam-E-Ishq : Movie Review by Taran Adarsh". Indiafm.com. Retrieved 2010-07-06.
- ↑ "indiaglitz.com". indiaglitz.com. Retrieved 2010-07-06.
- ↑ "Govinda on his new film, Do Knot Disturb, its meaning, working with David Dhawan & Riteish Deshmukh, Lara Dutta & Sushmita Sen". Archived from the original on 2009-09-08. Retrieved 2011-01-18.
- ↑ Jha, Subhash K (2008-11-04). "Apna Sapna, Mani Mani". Mid-day.com. Retrieved 2010-07-06.
- ↑ "Raavan: Movie Review". Yahoo! Movies. Archived from the original on 22 ಜೂನ್ 2010. Retrieved 8 July 2010.
- ↑ "Movie Review: 'Raavan' a feast for the senses". Economic Times. 19 June 2010. Archived from the original on 22 ಜೂನ್ 2010. Retrieved 8 July 2010.
- ↑ "Movie Review: Raavan". Mid-day.com. Retrieved 8 July 2010.
- ↑ "Lok Sabha". Archived from the original on 2010-09-27.
{{cite web}}
:|archive-date=
/|archive-url=
timestamp mismatch; 2008-06-20 suggested (help) - ↑ "Things getting tough for Shakti Kapoor : Bollywood News". ApunKaChoice.Com. 2005-03-15. Retrieved 2010-07-06.
- ↑ "Govinda justifies his cash distribution during Holi". IBN. Archived from the original on 3 ಏಪ್ರಿಲ್ 2009. Retrieved 27 September 2010.
- ↑ S Balakrishnan, TNN, Jan 20, 2008, 12.15am IST (2008-01-20). "Govinda decides to quit politics - India - The Times of India". Timesofindia.indiatimes.com. Retrieved 2010-07-06.
{{cite web}}
: CS1 maint: multiple names: authors list (link) CS1 maint: numeric names: authors list (link) - ↑ Hakim, Shoeb (2007-11-30). "Shoeb Hakim: The big, fat Govinda family". Hakimshoeb.blogspot.com. Archived from the original on 2011-07-08. Retrieved 2010-07-06.
- ↑ "ಆರತಿ ಸಿಂಗ್ ಆಫ್ 'ಮಾಯ್ಕಾ' ಈಸ್ ಗೋವಿಂದಾಸ್ ನೀಸ್". Archived from the original on 2009-01-07. Retrieved 2011-01-18.
- ↑ "Filmfare - Print Edition". Downloads.movies.indiatimes.com. Archived from the original on 2010-05-18. Retrieved 2010-07-06.
- ↑ "Lok Sabha Biography". Archived from the original on 2007-11-07. Retrieved 2010-09-27.
- ↑ "Handbook for candidates" (PDF). Archived from the original (PDF) on 2010-09-27.
{{cite web}}
:|archive-date=
/|archive-url=
timestamp mismatch; 2006-10-23 suggested (help) - ↑ "Wish Govinda a happy birthday!". Rediff.com. 2004-12-31. Retrieved 2010-07-06.
- ↑ "Latest News, Regional News, Business, Sports News". Samaylive. 2010-06-07. Retrieved 2010-07-06.
- ↑ "Govinda profile Movie". Webindia123.com. 1963-12-21. Retrieved 2010-07-06.
- ↑ "Laughter's the best medicine". Cybernoon.com. Archived from the original on 27 September 2007. Retrieved 27 September 2010.
- ↑ "Govinda, Juhi, Crowned The Badshahs Of Comedy At The Star Gold Comedy Honor 2007". Indiashows.com. Archived from the original on 13 ಜುಲೈ 2011. Retrieved 27 September 2010.
- ↑ ""Dhoom 2", Hrithik sweep away maximum 'Style' awards". Archived from the original on 27 October 2007. Retrieved 27 September 2010.
- ↑ "Winners of 3rd Apsara Film & Television Producers Guild Awards". Indiafm.com. 2008-04-01. Archived from the original on 2008-04-05. Retrieved 2010-07-06.
- ↑ Sonia Chopra (2002-11-15). "Screen > The Business of Entertainment". Screenindia.com. Retrieved 2010-07-06.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- CS1 errors: archive-url
- CS1 maint: multiple names: authors list
- CS1 maint: numeric names: authors list
- Articles with unsourced statements from July 2010
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Persondata templates without short description parameter
- ಭಾರತೀಯ ನಟರು
- ಭಾರತೀಯ ಚಲನಚಿತ್ರ ನಟರು
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ರಾಜಕಾರಣಿಗಳು
- 14ನೇ ಲೋಕ ಸಭೆಯ ಸದಸ್ಯರು
- ಮಹಾರಾಷ್ಟ್ರದ ಚುನಾಯಿತ ಸಂಸತ್ ಸದಸ್ಯರು
- ಭಾರತೀಯ ಟಿವಿ ನಿರೂಪಕರು
- ಭಾರತೀಯ ಹಾಸ್ಯ ನಟರು
- ಹಿಂದಿ ಚಲನಚಿತ್ರ ನಟರು
- ಭಾರತೀಯ ನಟ-ರಾಜಕಾರಣಿಗಳು
- ಭಾರತೀಯ ಹಿಂದೂಗಳು
- ಪಂಜಾಬೀ ಜನರು
- ಮುಂಬಯಿಯ ಜನರು
- ೧೯೬೩ ಜನನ
- ಬದುಕಿರುವ ಜನರು
- ಮಹಾರಾಷ್ಟ್ರದ ರಾಜಕಾರಣಿಗಳು
- ರಾಜಕಾರಣಿಗಳು