ರವೀನಾ ಟಂಡನ್
ರವೀನಾ ಟಂಡನ್ | |
---|---|
ರವೀನಾ ಟಂಡನ್ | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ರವೀನಾ ಟಂಡನ್ ೨೬ ಅಕ್ಟೋಬರ್ ೧೯೭೪ ಮುಂಬೈ, ಮಹಾರಾಷ್ಟ್ರ, ಭಾರತ |
ವರ್ಷಗಳು ಸಕ್ರಿಯ | 1991 - 2006 |
ಪತಿ/ಪತ್ನಿ | Anil Thadani (2004 - present) |
ರವೀನಾ ಟಂಡನ್ (ಹಿಂದಿ:रवीना टंडन, ಭಾರತದ ಮಹಾರಾಷ್ಟ್ರದಲ್ಲಿರುವ ಮುಂಬೈನಲ್ಲಿ 1974 ಅಕ್ಟೋಬರ್ 26ರಂದು ಜನನ[೧]) ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಭಾರತೀಯ ನಟಿ, ನಿರ್ಮಾಪಕಿ ಮತ್ತು ಮಾಜಿ ರೂಪದರ್ಶಿ.
ಬಾಲಿವುಡ್ ಚಿತ್ರ, ಪತ್ಥರ್ ಕೆ ಫೂಲ್ (1991) ಮೂಲಕ ಅವರ ವೃತ್ತಿ ಜೀವನ ಆರಂಭವಾಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಟಂಡನ್ ಫಿಲ್ಮ್‌ಫೇರ್ ಲಕ್ಸ್ ಹೊಸ ಮುಖ ಪ್ರಶಸ್ತಿ ಕೂಡ ಪಡೆದರು. 90ರ ದಶಕದಲ್ಲಿ ತೆರೆ ಕಂಡು ವಾಣಿಜ್ಯ ಯಶಸ್ಸು ಕಂಡ ಚಿತ್ರಗಳ ಪೈಕಿ ಮೊಹ್ರಾ (1994), ಖಿಲಾಡಿಯೋಂ ಕಾ ಖಿಲಾಡಿ (1996) ಮತ್ತು ಝಿದ್ದಿ (1997) ಚಿತ್ರಗಳಲ್ಲಿ ರವೀನಾ ನಟಿಸಿದ್ದಾರೆ. ಚಿತ್ರರಂಗದಲ್ಲಿ ಅದಾಗಲೇ ಸಾಕಷ್ಟು ಜನಪ್ರಿಯತೆ ಪಡೆದಾಗ್ಯೂ, ಅವರು ಓರ್ವ ನಟಿಯೆಂದು ಅದುವರೆಗೂ ಗುರುತಿಸಲ್ಪಟ್ಟಿರಲಿಲ್ಲ. 2000ದ ಹೊತ್ತಿಗೆ ಗಂಭೀರ ಪಾತ್ರಗಳಲ್ಲಿ ಅಭಿನಯಿಸಲು ತೊಡಗಿದಾಗ ಮತ್ತು ಆರ್ಟ್‌ಹೌಸ್ ಹಾಗೂ ಪ್ಯಾರಲಲ್ ಸಿನಿಮಾದತ್ತ ತಿರುಗಿದಾಗ ರವೀನಾರಿಗಿದ್ದ ಈ ಹಣೆಪಟ್ಟಿ ತೊಲಗಿತು. ಅಕ್ಸ್ (2001) ಮತ್ತು ಸತ್ತಾ (2003)ದಲ್ಲಿ ಅವರ ಅಭಿನಯ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. 2002ನೇ ಇಸವಿಯನ್ನು ಅವರ ವೃತ್ತಿ ಜೀವನದ ಉಚ್ಛ್ರಾಯ ಸ್ಥಿತಿಯೆನ್ನಬಹುದು. ಆ ವರ್ಷಗಳಲ್ಲಿ ಕಲ್ಪನಾ ಲಾಜ್ಮಿಯವರ ಡಮಾನ್: ಅ ವಿಕ್ಟಿಮ್ ಆಫ಼್ ಮಾರ್ಶಿಯಲ್ ವೈಲೆನ್ಸ್ (2001)ರ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು.
ಆರಂಭಿಕ ಜೀವನ ಮತ್ತು ಹಿನ್ನೆಲೆ
[ಬದಲಾಯಿಸಿ]ರವೀನಾ ಟಂಡನ್ ಚಿತ್ರ ನಿರ್ಮಾಪಕ ರವೀ ಟಂಡನ್ ಮತ್ತು ವೀಣಾ ದಂಪತಿಗಳ ಪುತ್ರಿ. ರವೀನಾ ಹೆಸರಲ್ಲಿ ಹೆತ್ತವರ ಹೆಸರಿನ ಮಿಶ್ರಣವಿರುವುದನ್ನು ಕಾಣಬಹುದು. ರವೀನಾ ಆರಂಭಿಕ ಶಿಕ್ಷಣಕ್ಕಾಗಿ ಜುಹೂನ ಜಾಮ್ನಾಬಾಯಿ ನರ್ಸೀ ಸ್ಕೂಲ್ ಸೇರಿದರು. ನಂತರ ಕಾಲೇಜು ಶಿಕ್ಷಣ ಮಿಥಿಬಾಯಿ ಕಾಲೇಜಿನಲ್ಲಿ ನಡೆಯಿತು. ಅದೇ ಕಾಲೇಜಿನಲ್ಲಿ ಮೊದಲ ಮತ್ತು ಎರಡನೇ ವರ್ಷವನ್ನು ರವೀನಾ ಪೂರೈಸಿದರು. ಅಲ್ಲಿ ಪ್ರಾಯೋಗಿಕ ಶಿಕ್ಷಕರಾಗಿದ್ದ ವೇಳೆ ಚಲನಚಿತ್ರದಲ್ಲಿ ನಟಿಸಲು ಶಂತನು ಶಿಯೊರೆ ಅವರಿಂದ ಬಂದ ಆಹ್ವಾನವನ್ನು ರವೀನಾ ಒಪ್ಪಿಕೊಂಡರು.[೨] ಕಾಲೇಜು ಶಿಕ್ಷಣವನ್ನು ಅಲ್ಲೇ ಕೈಬಿಟ್ಟ ರವೀನಾ, ಚಿತ್ರರಂಗದಲ್ಲಿ ವೃತ್ತಿ ಕಂಡುಕೊಳ್ಳಲು ತೀರ್ಮಾನಿಸಿದರು.[೨] ಅವರ ಸೋದರಮಾವ ಮ್ಯಾಕ್ ಮೋಹನ್ ಒಬ್ಬ ನಟರಾಗಿದ್ದರು.
ವೃತ್ತಿ ಬದುಕು
[ಬದಲಾಯಿಸಿ]ತಂದೆ ರವಿ ಟಂಡನ್ ಮತ್ತು ತಾಯಿ ವೀಣಾರ ಹೆಸರು ಒಟ್ಟುಗೂಡಿ ರವೀನಾ ತಮ್ಮ ಹೆಸರು ಪಡೆದುಕೊಂಡರು. 1970 ಮತ್ತು 1980ರಲ್ಲಿ ರವಿ ಟಂಡನ್ ಕೆಲವು ಚಿತ್ರಗಳ ನಿರ್ಮಾಪಕರು ಮತ್ತು ನಿರ್ದೇಶಕರಾಗಿದ್ದರು. ರವೀನಾಗೆ ರಾಜೀವ್ ಟಂಡನ್ ಎಂಬ ಸೋದರನಿದ್ದಾನೆ. ದಕ್ಷಿಣ ಭಾರತದ ಖ್ಯಾತ ನಟಿ ಕಿರಣ್ ರಾಥೋಡ್ ರವೀನಾಳ ಸೋದರ ಸಂಬಂಧಿ.[೩]
ರವೀನಾ ನಟಿಸಿದ ಮೊದಲ ಚಿತ್ರ ಪತ್ತರ್ ಕೆ ಫೂಲ್ (1991) ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದೆ,[೪] ಅಲ್ಲದೆ ಅವರ ಮೊದಲ ಅಭಿನಯ ಫಿಲ್ಮ್‌ಫೇರ್ ಲಕ್ಸ್ ಹೊಸ ಮುಖ ಪ್ರಶಸ್ತಿ ಕೂಡ ಗೆದ್ದುಕೊಟ್ಟಿತು.
ರವೀನಾ ನಟನೆಯ ನಂತರದ ಚಿತ್ರಗಳಾದ ಮೊಹ್ರಾ (1994) ಮತ್ತು ದಿಲ್ವಾಲೆ (1994) ಗಲ್ಲಾ ಪೆಟ್ಟಿಗೆಯನ್ನು ಸೂರೆ ಮಾಡಿದವು. ಲಾಡ್ಲಾ ಚಿತ್ರ (1994) ಸಾಮಾನ್ಯ ನಿರ್ವಹಣೆ ನೀಡಿದರೂ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ರವೀನಾಗೆ ನಾಮಕರಣವನ್ನು ಗಳಿಸಿಕೊಟ್ಟಿತು. 1994ರಲ್ಲಿ ಗಲ್ಲಾ ಪೆಟ್ಟಿಗೆ ಕೊಳ್ಳೆ ಹೊಡೆದ ಚಿತ್ರಗಳ ಸಾಲಿನಲ್ಲಿ ಮೊಹ್ರಾ ದ್ವಿತೀಯ ಸ್ಥಾನ ಪಡೆಯಿತು.[೫] ರೋಮಾಂಚಕ ಇಮ್ತಿಹಾನ್ ಮತ್ತು ಹಾಸ್ಯ ಚಿತ್ರ ಅಂದಾಜ್ ಅಪ್ನಾ ಅಪ್ನಾ ಆ ವರ್ಷ ಬಿಡುಗಡೆಯಾದ ಅವರ ಇತರ ಚಿತ್ರಗಳು. ಮೊದಲಿನದ್ದು ಗಲ್ಲಾ ಪೆಟ್ಟಿಗೆಯಲ್ಲಿ[೫] ಸಾಧಾರಣವಾಗಿ ನಿರ್ವಹಿಸಿದ್ದರೆ, ನಂತರದ್ದು ಸಂಪೂರ್ಣ ವೈಫಲ್ಯ ಕಂಡಿತು. ಆದರೂ ನಂತರದ ವರ್ಷಗಳಲ್ಲಿ ರವೀನಾ ಅಭಿಮಾನಿಗಳ ಆರಾಧ್ಯ ದೇವತೆಯಾದರು. ಚಿತ್ರೀಕರಣದ ಸೆಟ್ ಒಂದರಲ್ಲಿ ಸಹ ನಟಿ ಕರೀಶ್ಮಾ ಕಪೂರ್ ಜೊತೆ ಜಗಳಕ್ಕಿಳಿದಿದ್ದರು ಎಂದು ಒಮ್ಮೆ ವರದಿಯಾಗಿತ್ತು.
1995ರಲ್ಲಿ ಶಾರುಖ್ ಖಾನ್ ಜೊತೆ ಮೊದಲ ಬಾರಿಗೆ ಝಮಾನಾ ದೀವಾನಾ ಚಿತ್ರದಲ್ಲಿ ಅಭಿನಯಿಸಿದರು, ಆದರೆ ಚಿತ್ರ ಉತ್ತಮ ಪ್ರದರ್ಶನ ಕಾಣುವಲ್ಲಿ ವಿಫಲವಾಯಿತು.[೬] ರವೀನಾ ನಟಿಸಿದ ನಂತರದ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ, ಇದರೊಂದಿಗೆ ಅವರ ವೃತ್ತಿ ಜೀವನದ ಯಶಸ್ಸು ಇಳಿಮುಖಗೊಂಡಿತು. ಖಿಲಾಡಿಯೋಂ ಕಾ ಖಿಲಾಡಿ (1996)[೭] ಮತ್ತು ಝಿದ್ದಿ (1997) ಚಿತ್ರಗಳು ಭರ್ಜರಿ ಯಶಸ್ಸು ಕಾಣುವುದರೊಂದಿಗೆ ರವೀನಾ ಮತ್ತೆ ತಮ್ಮ ಲಯ ಕಂಡುಕೊಂಡರು, ಇವೆರಡೂ ಚಿತ್ರಗಳೂ ಆ ವರ್ಷಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿವೆ.[೮] 1997ರಲ್ಲಿ ರವೀನಾ ಮೊದಲ ಬಾರಿಗೆ ದಸ್ ಚಿತ್ರದಲ್ಲಿ ಖಳ ನಾಯಕಿಯಾಗಿ ಕಾಣಿಸಿಕೊಳ್ಳಬೇಕಿತ್ತು, ಆದರೆ ಚಿತ್ರೀಕರಣ 40% ಪೂರ್ಣಗೊಂಡಿದ್ದಾಗ ನಿರ್ದೇಶಕರು ತೀರಿಕೊಂಡ ಕಾರಣ ಚಿತ್ರ ಮೂಲೆಗುಂಪಾಯಿತು.
1998ರಲ್ಲಿ ಟಂಡನ್ ಅಭಿನಯದ ಎಂಟು ಚಿತ್ರಗಳು ಬಿಡುಗಡೆಯಾದವು. ಆ ವರ್ಷದ ಅವರ ಕೊನೆಯ ಚಿತ್ರ ಬಡೇ ಮಿಯಾ ಚೋಟೆ ಮಿಯಾ ಆ ವರ್ಷದ ಎರಡನೇ ಅತ್ಯಂತ ಯಶಸ್ವೀ ಚಿತ್ರ, ಅಲ್ಲದೆ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ಗೋವಿಂದ ಅವರ ತಾರಾಗಣವಿದೆ.[೯]
ದಾಖಲೆ ನಿರ್ಮಿಸಿದ ಕುಚ್ ಕುಚ್ ಹೋತಾ ಹೆ ಚಿತ್ರದಲ್ಲಿ ಎರಡನೇ ನಾಯಕಿಯ ಪಾತ್ರ ನಿರ್ವಹಿಸಲು ಟಂಡನ್‌ರನ್ನು ಆಹ್ವಾನಿಸಲಾಗಿತ್ತು, ಆದರೆ ಅವರು ನಿರಾಕರಿಸಿದ್ದು ಮತ್ತು ಅದೇ ಚಿತ್ರ 1998ರಲ್ಲಿ ಅತ್ಯಂತ ಅದ್ಭುತ ಪ್ರದರ್ಶನ ಕಂಡು ಗಲ್ಲಾ ಪೆಟ್ಟಿಗೆ ಸೂರೆ ಮಾಡಿದ್ದು ಈಗ ಕಾಕತಾಳೀಯ.[೧೦] ಅದೇ ವರ್ಷ ತೆರೆ ಕಂಡ ರವೀನಾ ಅಭಿನಯದ ಘರ್ವಾಲಿ ಬಹರ್ವಾಲೀ ಸಾಧಾರಣಕ್ಕಿಂತಲೂ ಕನಿಷ್ಠ ಮನ್ನಣೆ ಪಡೆದರೆ, ವಿನಾಶಕ್ , ಪರ್ದೇಸಿ ಬಾಬು ಮತ್ತು ಆಂಟಿ No. 1 ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ವಿಫಲವಾದವು.[೯]
2000ದಲ್ಲಿ ಟಂಡನ್ ತಮ್ಮ ಬದುಕನ್ನೇ ವೃತ್ತಿಯನ್ನಾಗಿಸಿದರು. ವಾಸ್ತವಕ್ಕೆ ಹತ್ತಿರವಾಗಿರುವ ಚಿತ್ರಗಳು ಮತ್ತು ಕಲಾತ್ಮಕ ಚಿತ್ರ ಗಳ ನಿರ್ದೇಶಕರೊಂದಿಗೆ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಲು ರವೀನಾ ನಿರ್ಧರಿಸಿದರು. ಇದು ಉತ್ತಮ ನಿರ್ಧಾರವೆಂಬುದು ಆನಂತರ ಸಾಬೀತಾಯಿತು. ಅವರು ನಟಿಸಿದ ಸ್ಕೂಲ್ (1999), ಬುಲಾಂದಿ (2000) ಮತ್ತು ಅಕ್ಸ್ (2001) ಚಿತ್ರಗಳು ಎಲ್ಲೆಡೆ ಪ್ರಶಂಸೆ ಗಳಿಸಿದವು. ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ರಾಕೇಶ್ ಓಂಪ್ರಕಾಶ್ ಮೆಹ್ರಾರ ಅಕ್ಸ್ ಚಿತ್ರದಲ್ಲಿನ ಅಭಿನಯಕ್ಕೆ ಫಿಲ್ಮ್‌ಫೇರ್ ಸ್ಪೆಷಲ್ ಫರ್ಫಾರ್ಮೆನ್ಸ್ ಪ್ರಶಸ್ತಿ ಪಡೆಯುವುದರೊಂದಿಗೆ, ರವೀನಾ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.[೧೧]
ಕಲ್ಪನಾ ಲಾಜ್ಮಿಯವರ ಡಮಾನ್: ಅ ವಿಕ್ಟಿಮ್ ಆಫ಼್ ಮಾರ್ಶಿಯಲ್ ವೈಲೆನ್ಸ್ (2001) ಚಿತ್ರದಲ್ಲಿ ಮನೋಜ್ಞ ಅಭಿನಯಕ್ಕಾಗಿ ರವೀನಾಗೆ ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾದಾಗ ಅವರು ಅದುವರೆಗೆ ಚಿತ್ರರಂಗದಲ್ಲಿ ಮಾಡಿದ ಕೆಲಸಕ್ಕೆ ಪ್ರತಿಫಲ ದೊರೆತಂತೆ ಕಂಡು ಬಂತು, ಈ ಚಿತ್ರದಲ್ಲಿ ನಿಂದಿಸುವ ಗಂಡನ ಜರ್ಜರಿತ ಹೆಂಡತಿಯಾಗಿ ಅವರು ಅಭಿನಯಿಸಿದ್ದರು.[೧೨]
ರವೀನಾ ತಮ್ಮ ಅಭಿನಯದಿಂದ ವಿಮರ್ಶಕರು ಮತ್ತು ವೀಕ್ಷಕರನ್ನು ಅಚ್ಚರಿಯಲ್ಲಿ ಕೆಡವಿದ್ದೇ ಅಲ್ಲದೆ, ಪಾತ್ರ ನಿರ್ವಹಣೆಗಾಗಿ ಪ್ರಶಂಸೆಗಳನ್ನು ಪಡೆದರು. "ಜರ್ಜರಿತ ಹೆಂಡತಿಯ ಪಾತ್ರದಲ್ಲಿ ರವೀನಾ ಟಂಡನ್ ಅಭಿನಯ ವಿಶ್ವಾಸಾರ್ಹವಾಗಿತ್ತು, ಮತ್ತು ಎಲ್ಲ ಗೌರವಗಳೂ ಅವರಿಗೆ ಸಲ್ಲಬೇಕು" ಎಂದು ಸಿನಿ ವಿಮರ್ಶಕ ತರಣ್ ಆದರ್ಶ್ ಹೇಳಿದ್ದಾರೆ. ತಮ್ಮ ಭಾವನೆಗಳಿಂದ ಪಾತ್ರಕ್ಕೆ ಜೀವತುಂಬಿ ವೀಕ್ಷಕರೂ ಮರುಕಪಡುವಂತೆ ಮಾಡುವುದರಲ್ಲಿ ಟಂಡನ್ ಯಶಸ್ವಿಯಾಗಿರುವುದರಿಂದ, ಅವರೆಂತಹ ನಟಿಯೆಂಬುದು ಅನುಭವಗೋಚರವಾದೀತು.[೧೩]
ಅಂದಿನಿಂದ, ಸತ್ತಾ (2003) ಮತ್ತು ದೊಬಾರಾ (2004)ದಂತಹ ವಿಮರ್ಶಕರ ಮೆಚ್ಚುಗೆ ಪಡೆದ ಅನೇಕ ಚಿತ್ರಗಳಲ್ಲಿ ಅಭಿನಯಿಸಿದರು. ಆದರೆ ಇವು ಗಲ್ಲಾ ಪೆಟ್ಟಿಗೆಯಲ್ಲಿ ವಿಶೇಷ ಯಶಸ್ಸೇನೂ ಕಾಣಲಿಲ್ಲ. 'ಸತ್ತಾ' ಚಿತ್ರದಲ್ಲಿ ರಾಜಕೀಯ ಜಗತ್ತಿಗೆ ತಳ್ಳಲ್ಪಡುವ ಮಧ್ಯಮ ವರ್ಗದ ಮಹಿಳೆಯ ಪಾತ್ರದಲ್ಲಿ ರವೀನಾ ನಟನೆ ಪ್ರಶಂಸೆಗೆ ಪಾತ್ರವಾಗಿದೆ. ಈ ಕುರಿತು ಸಿನಿ ವಿಮರ್ಶಕ ತರಣ್ ಆದರ್ಶ್ ಹೀಗೆ ಬರೆಯುತ್ತಾರೆ; "ರವೀನಾ ಟಂಡನ್ ಅದ್ಭುತ ಅಭಿನಯ ನೀಡಿದ್ದಾರೆ. ಪಾತ್ರಕ್ಕೆ ಸರಿಯಾದ ರೀತಿಯಲ್ಲಿ ಜೀವ ತುಂಬುವುದರೊಂದಿಗೆ ಆಕೆ ದೊಡ್ಡ ಪ್ರಮಾಣದಲ್ಲಿ ದಾಪುಗಾಲು ಇಟ್ಟಿದ್ದಾರೆ. ಇಲ್ಲೊಂದು ಎಲ್ಲೆಮೀರಿ ಗಮನ ಸೆಳೆಯುವಂತಹ ನಿರ್ವಹಣೆಯಿದೆ".[೧೪]
ದೊಬಾರಾ ಚಿತ್ರದಲ್ಲಿ ಛಿದ್ರಮನಸ್ಕ ಮಹಿಳೆಯಾಗಿ ಅವರ ಅಭಿನಯ ಮನಮುಟ್ಟುವಂತದ್ದು ಎಂದೂ ಶ್ಲಾಘಿಸಲಾಗಿದೆ, "ರವೀನಾ ಲವಲವಿಕೆಯಿಂದ ಅಭಿನಯಿಸುವ ಮೂಲಕ ತಮ್ಮ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ' ಎಂದು ವಿಮರ್ಶಕರೊಬ್ಬರು ಹೇಳಿದ್ದಾರೆ.[೧೫]
ಆದರೆ 2006ರ ಅವರ ಇತ್ತೀಚಿನ ಚಿತ್ರ ಸ್ಯಾಂಡ್‌ವಿಚ್ ಗೆ ಸಾಮಾನ್ಯ ಪ್ರತಿಕ್ರಿಯೆ ಮತ್ತು ವಿಮರ್ಶೆಗಳಷ್ಟೇ ಬಂದವು.[೧೬] ಆನಂತರ ಯಾವುದೇ ಚಿತ್ರಗಳಲ್ಲಿ ಅವರು ನಟಿಸಿಲ್ಲ. ಟಂಡನ್ (2003) ಮತ್ತು ಪೆಹೆಚಾನ್: ದಿ ಫ಼ೇಸ್ ಆಫ಼್ ಟ್ರುತ್ (2005)ರಲ್ಲಿ ಸ್ಟಂಪ್‌ಡ್ ಚಿತ್ರಗಳನ್ನು ನಿರ್ಮಿಸಿದರು, ಆದರೆ ಇವು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ.
ವೈಯುಕ್ತಿಕ ಜೀವನ
[ಬದಲಾಯಿಸಿ]1990ರಲ್ಲಿ ರವೀನಾ ಒಬ್ಬಳೇ ತಾಯಿಯಾಗಿ ಪೂಜಾ ಮತ್ತು ಛಾಯಾ ಎಂಬ ಇಬ್ಬರು ಮಕ್ಕಳನ್ನು ದತ್ತು ಪಡೆದಿರುವರು. ಇದಕ್ಕೂ ಮೊದಲು ಟಂಡನ್ ಹಾಗೂ ನಟ ಅಕ್ಷಯ್ ಕುಮಾರ್ ನಡುವೆ ಪ್ರೇಮಾಂಕುರವಾಗಿತ್ತು, ನಿಶ್ಚಿತಾರ್ಥಕ್ಕೂ ಸಿದ್ಧತೆಯಾಗಿತ್ತು. ಆದಾಗ್ಯೂ, ಕೆಲವೇ ದಿನಗಳಲ್ಲಿ ಅವರ ನಡುವಿನ ಸಂಬಂಧ ಮುರಿದು ಬಿತ್ತು.[೧೭] ಬಳಿಕ ಸ್ಟಂಪ್‌ಡ್ (2003) ಚಿತ್ರದ ನಿರ್ಮಾಣ ವೇಳೆ ಚಿತ್ರ ವಿತರಕ ಅನಿಲ್ ತಾದಾನಿ ಅವರೊಂದಿಗೆ ರವೀನಾ ಡೇಟಿಂಗ್ ಆರಂಭಿಸಿದ್ದರು. ನವೆಂಬರ್ 2003ರಲ್ಲಿ ಅವರ ನಿಶ್ಚಿತಾರ್ಥವೂ ನೆರವೇರಿತು.[೧೮] 2004, ಫೆಬ್ರವರಿ 22ರಂದು ರಾಜಸ್ಥಾನದ ಉದಯಪುರದಲ್ಲಿರುವ ಜಗ ಮಂದಿರ ಅರಮನೆಯಲ್ಲಿ ಪಂಜಾಬಿ ಶೈಲಿಯಲ್ಲಿ ತಾದಾನಿಯನ್ನು ರವೀನಾ ವಿವಾಹವಾದರು.[೧೯] 2005 ಮಾರ್ಚ್ 16ರಂದು ರವೀನಾ ಮತ್ತು ತಾದಾನಿ ದಂಪತಿಗಳಿಗೆ ರಾಶಾ ಎಂಬ ಮಗಳು ಹುಟ್ಟಿದಳು. 2007 ಜುಲೈ 12ರಂದು ರವೀನಾಗೆ ಪುತ್ರೋತ್ಸವವಾಯಿತು. ಎರಡನೇ ಮಗುವಿಗೆ ರಣಬೀರ್ ಎಂದು ಹೆಸರಿಡಲಾಯಿತು.[೨೦]
ವಿವಾದಗಳು
[ಬದಲಾಯಿಸಿ]ಟಂಡನ್ 2003ರಲ್ಲಿ ಭಾರತೀಯ ಮಕ್ಕಳ ಚಲನಚಿತ್ರ ಸಂಸ್ಥೆಯ ಅಧ್ಯಕ್ಷೆಯಾಗಿದ್ದರು, ಆದರೆ ಸಂಸ್ಥೆಯ ಸಭೆಗಳಿಗೆ ಗೈರುಹಾಜರಾಗುತ್ತಿಲ್ಲ ಮತ್ತು ಸಂಸ್ಥೆ ಹಮ್ಮಿಕೊಂಡಿರುವ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ ಎಂಬಿತ್ಯಾದಿ ದೂರುಗಳು ಬರಲಾರಂಭಿಸಿದವು. ಸೆಪ್ಟೆಂಬರ್ 2005ರಲ್ಲಿ, ವೈಯಕ್ತಿಕ ಕಾರಣ ನೀಡಿ ಟಂಡನ್ ತಮ್ಮ ಹುದ್ದೆಗೆ ರಾಜೀನಾಮೆಯಿತ್ತರು.[೨೧]
ನವೆಂಬರ್ 2005ರಲ್ಲಿ, ಪ್ರಚಾರದ ಉದ್ದೇಶದಿಂದ ಅನುಮತಿಯಿಲ್ಲದೆಯೇ ತಮ್ಮ ಭಾವಚಿತ್ರಗಳನ್ನು ಬಳಸಿಕೊಂಡ Shaadi.com ಮತ್ತು Shaaditimes.com ವಿರುದ್ಧ ಮೊಕದ್ದಮೆ ಹೂಡಿದರು. ಟಂಡನ್ ಮತ್ತು ಅವರ ಪತಿ ತಾದಾನಿ ಶಾದಿ ವೆಬ್‌ಸೈಟ್ ಮೂಲಕ ಭೇಟಿಯಾದರೆಂದು ಹೇಳಿಕೊಂಡ ಶಾದಿಯ ಮಾಲೀಕ ಸಂಸ್ಥೆ ಸತ್ಯಾನೆಟ್ ಸೊಲ್ಯೂಷನ್ಸ್ ವಿರುದ್ಧವೂ ರವೀನಾ ಕೇಸು ದಾಖಲಿಸಿದರು.[೨೨]
ಬದ್ಧತೆಗಳು
[ಬದಲಾಯಿಸಿ]ನವೆಂಬರ್ 2002ರಲ್ಲಿ, ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಆನಿಮಲ್ಸ್ ಅನ್ನು ಬೆಂಬಲಿಸಿ ರವೀನಾ ಸಹಿ ಹಾಕಿದರು. ಈ ಸಂಬಂಧದ ಅನೇಕ ಜಾಹೀರಾತುಗಳಲ್ಲೂ ಕಾಣಿಸಿಕೊಂಡು ಶಿಲ್ಪಾ ಶೆಟ್ಟಿ, ಅಮಿಷಾ ಪಟೇಲ್ ಮತ್ತು ಜಾನ್ ಅಬ್ರಾಹಂ ಸಾಲಿಗೆ ಸೇರ್ಪಡೆಯಾದರು. ಚರ್ಮಕ್ಕಾಗಿ ದನಗಳನ್ನು ನಿರ್ದಯವಾಗಿ ಹತ್ಯೆಗೈಯ್ಯಲಾಗುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿ, "ಭ್ರಷ್ಟ ಚರ್ಮ ಮತ್ತು ಮಾಂಸ ವ್ಯಾಪಾರಿಗಳ ಕೈಯಲ್ಲಿ ಅವುಗಳಿಗಾಗುತ್ತಿರುವ ಅನ್ಯಾಯವನ್ನು ಕೂಡಲೇ ನಿಲ್ಲಿಸಬೇಕು" ಎಂದರು[೨೩]
ಜೂನ್ 2006ರಂದು, ರವೀನಾ ಮುಂಬೈಯ ಲೋಟಸ್ ಐ ಆಸ್ಪತ್ರೆಯಲ್ಲಿ ವಿಶೇಷ ಸವಲತ್ತುಗಳನ್ನು ಹೊಂದಿರದ ಮಕ್ಕಳಿಗಾಗಿ ತಮ್ಮ ಕಣ್ಣುಗಳನ್ನು ದಾನ ಮಾಡಿದರು.[೨೪]
ಪ್ರಶಸ್ತಿಗಳು
[ಬದಲಾಯಿಸಿ]- 1992: ಫಿಲ್ಮ್‌ಫೇರ್ ಲಕ್ಸ್ ಹೊಸ ಮುಖ ಪ್ರಶಸ್ತಿ, ಪತ್ತರ್ ಕೆ ಫೂಲ್
- 2002: ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು ಅತ್ಯುತ್ತಮ ಪೋಷಕ ನಟಿ , Aks [೨೫]
- 2002: ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ದಮಾನ್: ಎ ವಿಕ್ಟಿಮ್ ಆಫ್ ಮ್ಯಾರಿಟಲ್ ವಾಯಲೆನ್ಸ್
- 2002: ಫಿಲ್ಮ್‌ಫೇರ್ ಸ್ಪೆಷಲ್ ಫರ್ಫಾರ್ಮೆನ್ಸ್ ಪ್ರಶಸ್ತಿ, ಅಕ್ಸ್
- 2002: ಅತ್ಯುತ್ತಮ ಪೋಷಕ ನಟಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿ, ಅಕ್ಸ್
- 2002: ಬಾಲಿವುಡ್ ಮೂವಿ ಪ್ರಶಸ್ತಿ - ಅತ್ಯುತ್ತಮ ಪೋಷಕ ನಟಿ, ಅಕ್ಸ್
- 2002: ಬಾಲಿವುಡ್ ಮೂವಿ ಪ್ರಶಸ್ತಿ - ಮಹಿಳಾ ವಿಭಾಗದಲ್ಲಿ ವಿಮರ್ಶಕರ ಪ್ರಶಸ್ತಿ, ಅಕ್ಸ್
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಇದನ್ನೂ ನೋಡಿರಿ
[ಬದಲಾಯಿಸಿ]Awards | ||
---|---|---|
ಫಿಲ್ಮ್‌ಫೇರ್ ಪ್ರಶಸ್ತಿ | ||
ಪೂರ್ವಾಧಿಕಾರಿ Pooja Bhatt for Dil Hai Ki Manta Nahin |
Lux New Face for Patthar Ke Phool 1992 |
ಉತ್ತರಾಧಿಕಾರಿ Divya Bharti for Deewana |
ಪೂರ್ವಾಧಿಕಾರಿ TBD |
Special Performance for Aks tied with Amisha Patel for Gadar: Ek Prem Katha 2002 |
ಉತ್ತರಾಧಿಕಾರಿ TBD |
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ | ||
ಪೂರ್ವಾಧಿಕಾರಿ Kiron Kher for Bariwali |
Best Actress for Daman: A Victim of Marital Violence 2002 |
ಉತ್ತರಾಧಿಕಾರಿ Tabu for Chandni Bar |
ಉಲ್ಲೇಖಗಳು
[ಬದಲಾಯಿಸಿ]- ↑ "Raveena Tandon - Biography". Indiatimes. Archived from the original on 2009-01-11. Retrieved 2008-10-27.
- ↑ ೨.೦ ೨.೧ "Raveena Tandon: I am like a dog, faithful and loyal". Rediff.com. 25 June 2004. Retrieved 2007-09-11.
{{cite web}}
: Unknown parameter|dateformat=
ignored (help) - ↑ "Brother". Archived from the original on 24 ಅಕ್ಟೋಬರ್ 2007. Retrieved 13 September 2007.
- ↑ "boxofficeindia.com". Archived from the original on 8 ಏಪ್ರಿಲ್ 2006. Retrieved 25 January 2007.
- ↑ ೫.೦ ೫.೧ "1994 box office report". Archived from the original on 8 ಏಪ್ರಿಲ್ 2006. Retrieved 12 September 2007.
- ↑ "1995 box office report". Archived from the original on 8 ಏಪ್ರಿಲ್ 2006. Retrieved 12 September 2007.
- ↑ "KKK: A Hit". Archived from the original on 8 ಏಪ್ರಿಲ್ 2006. Retrieved 12 September 2007.
- ↑ "Ziddi: A Hit". 1997 box office chart. Archived from the original on 8 ಏಪ್ರಿಲ್ 2006. Retrieved 12 September 2007.
- ↑ ೯.೦ ೯.೧ "1998 box office chart". Archived from the original on 8 ಏಪ್ರಿಲ್ 2006. Retrieved 12 September 2007.
- ↑ "KKHH". Retrieved 12 September 2007.
- ↑ "Raveena wins Special Performance award". Archived from the original on 9 ಜುಲೈ 2012. Retrieved 12 September 2007.
- ↑ "Raveena wins National Film Award". Retrieved 12 September 2007.
- ↑ "Raveena steals the show". Retrieved 12 September 2007.
- ↑ "Raveena's performance in Satta". Retrieved 12 September 2007.
- ↑ "Raveena's performance in Dobara". Retrieved 12 September 2007.
- ↑ "Disaster for Sandwich". Retrieved 12 September 2007.
- ↑ "indiafm.com". Retrieved 13 September 2007.
{{cite web}}
: Unknown parameter|dateformat=
ignored (help) - ↑ "Engagement". Archived from the original on 24 ಅಕ್ಟೋಬರ್ 2007. Retrieved 13 September 2007.
{{cite web}}
: Unknown parameter|dateformat=
ignored (help) - ↑ "Marriage". Archived from the original on 24 ಅಕ್ಟೋಬರ್ 2007. Retrieved 13 September 2007.
{{cite web}}
: Unknown parameter|dateformat=
ignored (help) - ↑ "indiafm.com". Retrieved 13 July 2007.
{{cite web}}
: Unknown parameter|dateformat=
ignored (help) - ↑ "Tandon resigns from CFSI". Retrieved 11 September 2007.
{{cite web}}
: Unknown parameter|dateformat=
ignored (help) - ↑ "Tandon files case". Retrieved 11 September 2007.
{{cite web}}
: Unknown parameter|dateformat=
ignored (help) - ↑ "Raveena joins PETA". Archived from the original on 1 ಅಕ್ಟೋಬರ್ 2007. Retrieved 13 September 2007.
{{cite web}}
: Unknown parameter|dateformat=
ignored (help) - ↑ "Raveena's charitable cause". Archived from the original on 24 ಅಕ್ಟೋಬರ್ 2007. Retrieved 13 September 2007.
{{cite web}}
: Unknown parameter|dateformat=
ignored (help) - ↑ "69th & 70th Annual Hero Honda BFJA Awards 2007". Bfjaawards.com. Archived from the original on 2007-12-27. Retrieved 2008-10-27.