ವಿಷಯಕ್ಕೆ ಹೋಗು

ನಾಗ ಪಂಚಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ[]. ಇದು ಹಬ್ಬಗಳ ಸಾಲಿಗೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕ್ರಿಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂತರಂತೆ ಆರಂಭವಾಗುತ್ತದೆ. ನಾಗರ ಪಂಚಮಿಯನ್ನು ಭಾರತದ ಹಲವಾರು ಪ್ರಾಂತ್ಯಗಳಲ್ಲಿ ಆಚರಿಸಲಾಗುತ್ತದೆ[].

ಮಹಾರಾಷ್ಟ್ರದ ಬತ್ತೀಸ ಶಿರಾಳ ಎಂಬ ಗ್ರಾಮದಲ್ಲಿ ನಾಗರ ಪಂಚಮಿಯಂದು ಜೀವಂತ ಹಾವುಗಳನ್ನು ಪೂಜಿಸಲಾಗುತ್ತದೆ[]. ಈ ದಿನದಂದು ಹೆಣ್ಣುಮಕ್ಕಳು ತಮ್ಮ ಸಹೋದರನ ಒಳಿತಿಗೆ ಹುತ್ತಕ್ಕೆ ಹಾವನ್ನು ಎರೆದು ಪೂಜಿಸುತ್ತಾರೆ[]. ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಮೂರುದಿನಗಳ ಕಾಲ ಆಚರಿಸಲಾಗುತ್ತದೆ[].

ನಾಗ ಪಂಚಮಿಯ ಕಥೆ

[ಬದಲಾಯಿಸಿ]

ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ನಾಗರಹಾವೊಂದು ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ - ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.[]

ಪುರಾಣದ ಕಥೆ

[ಬದಲಾಯಿಸಿ]

ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು 'ಸರ್ಪಯಜ್ಞ'ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಪ್ರಾಣಿಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು[].

ನಾಗ ಪಂಚಮಿಯ ವೈಶಿಷ್ಟ್ಯ

[ಬದಲಾಯಿಸಿ]
  • ನಾಗರಪಂಚಮಿ - ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ. ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು - ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ.[]
  • ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ. ಸ್ಥೂಲ ದೇಹವು ಪ್ರಾಣಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.
  • ಈ ದಿನ ಎಲ್ಲಾ ಸ್ತ್ರೀ ಪುರುಷರೂ ಅಭ್ಯಂಜನ ಸ್ನಾನ ಮಾಡಿ ಹಿಂದಿನ ದಿನ ಪೂಜಿಸಿದ ನಾಗದೇವರನ್ನೇ ಹರಿವಾಯುಗಳ ಪೂಜೆಯ ನಂತರ ಕ್ಷೀರಾಭಿಷೇಕದಿಂದ ಪೂಜಿಸಬೇಕು. ಪೂಜೆಯ ಈ ಫಲವನ್ನು ಶೇಷಾಂತರ್ಗತ ಸಂಕರ್ಷಣನಿಗೆ ಅರ್ಪಿಸಬೇಕು.
  • ಸರ್ಪಗಳು ಮೊದಲು ತುಂಬಾ ದುಷ್ಟತರವಾಗಿದ್ದು ಜನರಿಗೆ ಪೀಡೆಯನ್ನುಂಟು ಮಾಡುತ್ತಿದ್ದವು. ದೇವತೆಗಳು ಇದನ್ನರಿತು ಬ್ರಹ್ಮನ ಬಳಿ ವಿನಂತಿಸಿದರು. ಬ್ರಹ್ಮನು ಸರ್ಪಗಳು ತಮ್ಮ ತಾಯಿ ಕದ್ರುವಿನ ಶಾಪದಿಂದಲೇ ವಿನಾಶ ಹೊಂದುವವೆಂದು ಸೂಚಿಸಿದನು. ಸರ್ಪಗಳು ಎಲ್ಲಾ ಸಹೋದರರಿಂದ ಒಟ್ಟುಗೂಡಿ ಬ್ರಹ್ಮನಿಗೆ ಶಾಪನ್ನು ಹಿಂತೆಗೆದುಕೊಳ್ಳಬೇಕೆಂದು ಪ್ರಾರ್ಥಿಸಿದವು. ಅವರ ಅಪರಾಧೀ ಪ್ರಜ್ಞೆ ಪಶ್ಚಾತ್ತಾಪಗಳನ್ನು ಮನಗಂಡು ಬ್ರಹ್ಮನು ಮುಂದೆ ಆಸ್ತಿಕನೆಂಬುವನು ಸರ್ಪಕುಲ ರಕ್ಷಕನಾಗಿ ನಿಲ್ಲುತ್ತಾನೆ ಎಂದು ನುಡಿದನು. ಹಾಗೆ ಹೇಳುತ್ತಾ ಸರ್ಪಗಳು ಅತಲ, ವಿತಲ, ಪಾತಾಲಗಳಲ್ಲಿ ವಾಸಿಸಬೇಕೆಂದು, ನೋಯದೇ ಕಚ್ಚಬಾರದೆಂದೂ ಆದೇಶಿಸಿದನು.
  • ಹೀಗಾಗಿ ಸರ್ಪಕುಲಗಳ ಒಗ್ಗಟ್ಟಿನ ಪ್ರಾರ್ಥನೆ– ರಕ್ಷಣೆ ಇವೆರಡೂ ಪ್ರತಿಫಲಿಸಿದ್ದು ನಾಗ ಪಂಚಮಿ Archived 2023-08-02 ವೇಬ್ಯಾಕ್ ಮೆಷಿನ್ ನಲ್ಲಿ.ಯ ಈ ಶುಭದಿನದಂದು. ಹೀಗಾಗಿ ಅವುಗಳಿಗೆ ಈ ದಿನ ಪರಮಪ್ರೀತಿಕರ. ಇಂದೇ ಅವುಗಳ ಪೂಜೆ ಮಾಡಬೇಕು. ಅದು ನಾನಾ ಪಾಪಗಳನ್ನೆಲ್ಲಾ ಪರಿಹರಿಸುವುದು.[]

ಉಪವಾಸದ ಮಹತ್ವ

[ಬದಲಾಯಿಸಿ]
  • ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟ ಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ.
  • ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ. ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.[]

ಇಲ್ಲಿ ಮನುಷ್ಯನ ಬೌತಿಕ(ದೇಹದ) ವಿಕಸನವನ್ನು ವಿವರಿಸುತ್ತಿಲ್ಲ.  ವಿಕಸನದ ಹಾದಿಯನ್ನು ಮನಸ್ಸು, ಬುದ್ದಿ ಮತ್ತು ಚಿತ್ತದ ದೃಷ್ಟಿಯಿಂದ ನೋಡಬೇಕು.  ವಿಕಸನದ ಈ ಹಾದಿಯನ್ನು ಪೂರ್ವಜರು ಮೂರೂ ಪ್ರಾಣಿಗಳಿಂದ ಸಾಂಕೇತಿಕವಾಗಿ ವಿಶ್ಲೇಷಿಸಿದ್ದಾರೆ. ಶ್ವಾನ , ಕಾಕಾ ಮತ್ತು ನಾಗ

1. ಶ್ವಾನ: ಶ್ವಾನವು ವಾಸನೆ ಮತ್ತು ಶ್ರವಣವನ್ನು ಪ್ರತಿನಿದಿಸುತ್ತದೆ. ಹೊರಜಗಿತ್ತನ್ನು ತಿಳಿಯಲು ಇವುಗಳು ಅತ್ಯಂತ ಪ್ರಮುಖವಾದವು. ನಮ್ಮಲ್ಲಿರುವ ಶ್ವಾನವು ಮಿದುಳಿನ ಕೆಲವು ಆಯಾಮಗಳನ್ನು ಉತ್ತೇಜಿಸುತ್ತದೆ ಇವುಗಳಿಂದ ಹೊರಜಗತ್ತಿನಲ್ಲಿ ಬದುಕಲು ಮತ್ತು ಉಳಿಯುವ ಪ್ರಕ್ರಿಯೆಯನ್ನು ವೃದ್ಧಿಸುತ್ತದೆ.

2. ಕಾಕ (ಪಕ್ಷಿ): ಇದು ಬುದ್ದಿವಂತಿಕೆ, ದೂರದೃಷ್ಟಿ ಮತ್ತು ಸಂವೇದನೆಯನ್ನು ಸೂಚಿಸುತ್ತದೆ.  ವಾಸನೆ ಮತ್ತು ಶ್ರವಣೇಂದ್ರಿಯವು ಶ್ವಾನದಲ್ಲಿ ಪ್ರಬಲವಾಗಿದೆ, ಆದರೆ ಪಕ್ಷಿಯಲ್ಲಿ ನೋಡುವ(ದೃಷಿ) ಮತ್ತು ಸಂವೇದನೆಗಳ ಶಕ್ತಿ ಪ್ರಬಲವಾಗಿದೆ. ಹಕ್ಕಿಯು ತನ್ನ ಹಾರಾಟದಿಂದ ದೂರದೃಷ್ಟಿಯನ್ನು ಹೊಂದಿದೆ.  ನಾವುಗಳು ಒಂದು ನಿರ್ದಿಷ್ಟರೀತಿಯಲ್ಲಿ ವಿಷಯಗಳನ್ನು ನೋಡಬೇಕಾಗುತ್ತದೆ (Bird View) ನೀವು ಪಕ್ಷಿನೋಟ ಹೊಂದಿದ್ದಾರೆ ಸ್ವಾಭಾವಿಕವಾಗಿ ಬುದ್ದಿವಂತರಾಗುತ್ತೀರಾ, ಏಕೆಂದರೆ ವಿಷಯವನ್ನು ಅಮೂಲಾಗ್ರವಾಗಿ ವಿಶ್ಲೇಷಿಸಬಹುದು.  ಅನೇಕ ಸಂಸ್ಕೃತಿಗಳಲ್ಲಿ ಪಕ್ಷಿಯನ್ನು ಬುದ್ದಿವಂತ ಎಂದು ಗುರುತಿಸಲಾಗುತ್ತದೆ.

ನಿಮ್ಮಲ್ಲಿನ ಕಾಕವನ್ನು ಸಕ್ರಿಯೆಗೊಳಿಸಿ. ಗರಿಗಳಲ್ಲಿರುವ ಸಂವೇದನೆಯನ್ನು ಹೆಚ್ಚಿಸಿಕೊಂಡರೆ ಹಾರಲು ಇನ್ನಷ್ಟು ಬಲ ಬರುತ್ತದೆ.

3. ನಾಗ:  "ಪಂಚೇಂದ್ರಿಯಗಳಿಗಾಚಿನ ಗ್ರಹಿಕೆ"

ಶ್ವಾನ ಮತ್ತು ಕಾಕವು ಇಂದ್ರೀಯಗಳಿಂದ ಶ್ರವಣ, ವಾಸನೆ, ದೃಷ್ಟಿ ಮತ್ತು ಭಾವನೆಗಳ ತೀಕ್ಷ್ಣತೆಯನ್ನು ಪ್ರತಿಬಿಂಬಿಸುತ್ತದೆ. ನಾಗವು ಇಂದ್ರಿಯಗಳಿಗಿಂದ ಗ್ರಹಿಸಲಾಗದ ಆಯಾಮಗಳನ್ನು ಪ್ರತಿನಿಧಿಸುತ್ತದೆ. ಪಂಚೇಂದ್ರಿಯಗಳು ಎಲ್ಲಿ ವಿಫಲವಾಗುತ್ತದೆಯೋ ಅಲ್ಲಿ ನಾಗ ಕೆಲಸ ಮಾಡುತ್ತದೆ. ಬುದ್ದಿಯು (ಪ್ರಾಪಂಚಿಕ ಜ್ಯಾನ) ನಂತರ ಗ್ರಹಿಕೆ ಇದೆ. ನೀವು ಬುದ್ದಿಯನ್ನು ಸಶಕ್ತಗೊಳಿಸಿದರೆ ಬುದ್ದಿವಂತರಾಗುತ್ತೀರ. ಆದರೆ ಬುದ್ದಿವಂತಿಕೆಯನ್ನು ಮೆರೆಸಲು ನಿಮ್ಮ ಸುತ್ತ ಮೂರ್ಖರಿರಬೇಕು. ಜೀವನವು ತನ್ನ ಪೂರ್ಣ ವೈಭವದಲ್ಲಿ ಸಂಭ್ರಮಿಸಲು ನೀವು ಅನುಮತಿಸಿದರೆ (ಅಂದರೆ, ನೀವು ಧ್ಯಾನಸ್ಥರಾದರೆ, ಯೋಗಿಗಳಾದರೆ ಎಂದು) ನೀವು ಜಾಣನು ಅಲ್ಲ ಮೂರ್ಖನೂ ಅಲ್ಲ.  ಜನರು ಎಲ್ಲಿ ಧ್ಯಾನಸ್ಥರಾಗಿ ಕುಳಿತರೋ ಅಲ್ಲೇ ನಾಗ ಪ್ರಮುಖನಾದನು , ಇಂದ್ರಿಯಗಳನ್ನು ಮೀರಿದ್ದನ್ನು ಗ್ರಹಿಸಲಾರಂಬಿಸಿದನು

"ಮಾನವನು ಜೀವನದ ಸುತ್ತಾ ಸುತ್ತದೆ ನಿಶ್ಚಲದಿಂದ, ಸಾಕ್ಷೀಭಾವದಿಂದ ಕುಳಿತರೆ ನಿಮ್ಮ ಸುತ್ತಲೂ ಜೇವನವು ಸುತ್ತುತ್ತದೆ" ಇದುವೇ ನಾಗತತ್ವ

ಇಂದ್ರೀಯಗಳಿಗೆ ಮೀರಿದನ್ನು ಗ್ರಹಿಸಲು ನಿಮ್ಮೊಳಗೆ ಉಳಿದಿರುವ ವಿಕಸನೀಯ ಶೇಷದ ಆಯಾಮ ಮಹತ್ವದಾಗಿರುತ್ತದೆ.  ಪ್ರಪಂಚಾದಾದ್ಯಂತ ವಿವಿಧ ಸಂಸ್ಕೃತಿಯಲ್ಲಿ ನಾಗವನ್ನು  ಚಿತ್ರಿಸಿರುವುದನ್ನು  ಕಾಣಬಹುದು.  ಭಾರತದಲ್ಲಿ ನಾಗನಿಗೆ ಹನ್ನೆರಡು ಆಯಾಮಗಳಿವೆ. ಇವುಗಳೆಂದರೆ , ಅನಂತ, ವಾಸುಕಿ, ಶೇಷ, ಪದ್ಮ, ಕಂಬಳ, ಕಾರ್ಕೊಟ, ಅಶ್ವತ್ರ, ದೃತರಾಷ್ಟ್ರ, ಶಂಖಪಾಲ, ಕಾಳಿಯ, ತಕ್ಷಕ, ಮತ್ತು ಪಿಂಗಳ. ಈ ಹನ್ನೆರಡು ಅಂಶಗಳು ೧೨ ತಿಂಗಳಿಗೆ ಸಂಭಂದ ಪಟ್ಟಿವೆ.

ಶಿವನ(ನಾಗಭೂಷಣನ) ಕಂಠಾಭರಣದ ಹಾವನ್ನು ವಾಸುಕಿ ಎಂತಲೂ, ವಿಷ್ಣುವಿನ ಹಾವನ್ನು ಶೇಷ ಎಂತಲೂ ಕರೆಯುತ್ತಾರೆ.  ಗಣಿತದಲ್ಲಿ ಶೇಷ ವೆಂದರೆ  ಮೂಲವನ್ನು ಭಾಗಿಸಿ ಉಳಿದ ಅಂಕಿ ಎಂದು.  ಒಂದು ನಿರ್ದಿಷ್ಟ ಮೂಲ ಅಂಶವು ಮತ್ತೊಂದು ಸೃಷ್ಟಿಗೆ ಮೊಳಕೆಯೊಡೆಯುತ್ತದೆ.  ವಿಷ್ಣುವು ಶೇಷನ ಮೇಲೆ ವಿಶ್ರಾಂತಿ ಪಡೆಯುತ್ತಾನೆ, ಎಂದರೆ ನಿರ್ವಹಿಸಲು ಯಾವುದೇ ಸೃಷ್ಟಿಇಲ್ಲದಿದ್ದಾಗ ಅವನು ಶೇಷ ಅಥವಾ ಶೇಷದಮೇಲೆ ವಿಶ್ರಾಂತಿ ಪಡೆಯುತ್ತಾನೆ ಎಂದರ್ಥ. ಆದಿಶೇಷನು ಸುರಳಿ ಬಿಚ್ಚಿದಾಗ ಕಾಲವು ಮುಂದೆ ಹೋಗುತ್ತದೆ ಎಂದು ಪುರಾಣಗಳು ಹೇಳುತ್ತವೆ.  ಇದರಾರ್ಥ ಹಿಂದಿನ ಸೃಷ್ಟಿಯಿಂದ ಉಳಿದಿರುವ ಶೇಷವು ಬಿಚ್ಚಲು ಆರಂಭಿಸಿದೆ ಎಂದರ್ಥ.  ಅದು ಬಿಚ್ಚಲು ಆರಂಭಿಸಿದಾಗ ಇನ್ನೊಂದು ಸೃಷ್ಟಿಯಾಗಲು ಶುರುವಾಗುತ್ತದೆ.  ಭೂಮಿಯನ್ನು ಶೇಷನಾಗವು ಎತ್ತಿ ಹಿಡಿದಿದೆ ಎನ್ನುವುದೂ ಈ ಕಾರಣಕ್ಕೆ.

ಹಾವು ದೇಹವನ್ನು ಕಿವಿಯಾಗಿಸಿ ಚಾನಲನೆಗಳನ್ನು ಅಳಿಸುತ್ತದೆ. ಈ ನಾಗಮಂಚಮಿಯಲ್ಲಿ ಭಕ್ತರು ಇಂದ್ರೀಯಗಳಿಗಿಂತ ಸಂವೇದನೆಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಮಾಡುತ್ತಾರೆ.

ನಗರ ಪಂಚಮಿ ನಾವು ಬೌತಿಕತೆಯ ಇಂದ್ರಿಯಗಳನ್ನೂ ಮೀರಿ ಜೀವನ ತಿಳಿಯಬೇಸುವುದಕ್ಕಾಗಿ ಆಚರಿಸುತ್ತಾರೆ.  ಇದು ಸಾಕ್ಷಾತ್ಕಾರ, ಅಥವಾ ಮುಕ್ತಿಗಾಗಿ ಅಲ್ಲ.

  • ೧. ‘ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ಮಾಣಿಕ್ಯವಿದೆ. ಅವನು ಶ್ರೀವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಪವಡಿಸಿರುತ್ತಾನೆ.
  • ತ್ರೇತಾಯುಗದಲ್ಲಿ ಶ್ರೀವಿಷ್ಣು ರಾಮನ ಅವತಾರವನ್ನು ಎತ್ತಿದಾಗ, ಶೇಷನು ಲಕ್ಷ್ಮಣನ ಅವತಾರವನ್ನು ಎತ್ತಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು.
  • ೨. ‘ಶ್ರೀಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಲಿಯಾ ನಾಗನನ್ನು ಮರ್ದನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು.
  • ೩. ‘ನಾಗಗಳಲ್ಲಿನ ಶ್ರೇಷ್ಠನಾದ ‘ಅನಂತ’ನೇ ನಾನು’, ಎಂದು ಗೀತೆಯಲ್ಲಿ (೧೦.೨೯) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.

"ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್|

ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ"|

ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯ ಇರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.’[೧೦]

  • ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಸೂಕ್ಷ್ಮಾತಿಸೂಕ್ಷ್ಮ ದೈವೀಕಣಗಳು (ಚೈತನ್ಯ ಕಣಗಳು).
  • ಭಾವಾರ್ಥ: ‘ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿವೆ. ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ‘ಭಗವಂತನು ಅವುಗಳ ಮೂಲಕ ಕಾರ್ಯವನ್ನು ಮಾಡುತ್ತಿದ್ದಾನೆ’, ಎಂಬ ವಿಶಾಲ ದೃಷ್ಟಿಕೋನವನ್ನಿಡಲು ಕಲಿಯುವುದಿರುತ್ತದೆ.’ - ಪ.ಪೂ. ಪರಶುರಾಮ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.
  • ನಿಷೇಧ: ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು, ಒಲೆಯ ಮೇಲೆ ತವೆಯನ್ನು ಇಡಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯಬಾರದು.[]

ಉಲ್ಲೇಖ

[ಬದಲಾಯಿಸಿ]
  1. ೧.೦ ೧.೧ "ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ? ಹೆಣ್ಮಕ್ಕಳ ಹಬ್ಬ ಯಾಕೆ? ಇಲ್ಲಿದೆ ಕಥೆ". Public TV - Latest Kannada News, Public TV Kannada Live, Public TV News (in ಅಮೆರಿಕನ್ ಇಂಗ್ಲಿಷ್). 2021-08-13. Retrieved 2024-08-09.
  2. "Nag Panchami 2024: Date, Puja Muhurat, Celebration and Significance". The Times of India. 2024-08-09. ISSN 0971-8257. Retrieved 2024-08-09.
  3. Bharat, E. T. V. (2022-08-02). "Legend of Battis Shirala village where live snakes were worshipped on Nag Panchami". ETV Bharat News (in ಇಂಗ್ಲಿಷ್). Retrieved 2024-08-09.
  4. India, The Hans (2015-08-19). "What's the significance of Nag Panchami". www.thehansindia.com (in ಇಂಗ್ಲಿಷ್). Retrieved 2024-08-09.
  5. "Nag Panchami 2024: The sacred connection of food and tradition across India". The Times of India. 2024-08-06. ISSN 0971-8257. Retrieved 2024-08-09.
  6. ೬.೦ ೬.೧ "ನಾಗರ ಪಂಚಮಿ ಇಂದು ನಾಗದೇವರ ಪೂಜೆ ಮಾಡುವುದೇಕೆ?". Vistara News. Vistara News. 2 August 2023.{{cite web}}: CS1 maint: url-status (link)
  7. "The Story of Janamejaya's Sarpa Yaga". Jai Guru Dev (in ಇಂಗ್ಲಿಷ್). 2010-06-23. Retrieved 2024-08-09.
  8. "Nag Panchami 2024: Muhurta, Significance, History, Rituals And All You Need To Know". Free Press Journal (in ಇಂಗ್ಲಿಷ್). Retrieved 2024-08-09.
  9. "Nag Panchami Significance, Story, Fasting, and Rituals". Bejan Daruwalla (in ಇಂಗ್ಲಿಷ್). Retrieved 2024-08-09.
  10. ವಿಶ್ವನಾಥ್, ರಾಜೇಶ್ವರಿ (2021-08-13). "ನಾಡಿಗೆ ಬಂತು ನಾಗರ ಪಂಚಮಿ • ನಸುಕು.ಕಾಮ್". ನಸುಕು.ಕಾಮ್ (in ಅಮೆರಿಕನ್ ಇಂಗ್ಲಿಷ್). Retrieved 2024-08-09.