ಪಂಜಾಬ್
ರಾಜ್ಯ | |
---|---|
Nickname(s): ಐದು ನದಿಗಳ ನಾಡು | |
Country | India |
Formation | 1 ನವೆಂಬರ್ 1966 |
Capital | Chandigarh† |
Largest city | Ludhiana |
Districts | 22 |
ಸರ್ಕಾರ | |
• Governor | ಕಪ್ತಾನ್ ಸಿಂಗ್ ಸೋಲಂಕಿ |
• Chief Minister | ಪ್ರಕಾಶ್ ಸಿಂಗ್ ಬಾದಲ್ (SAD) |
• Legislature | Unicameral (117 seats) |
• Parliamentary constituency | 13 |
• High Court | Punjab and Haryana High Court |
Area | |
• Total | ೫೦,೩೬೨ km೨ (೧೯,೪೪೫ sq mi) |
• ಶ್ರೇಣಿ | 20th |
Highest elevation | ೫೫೦ m (೧,೮೦೦ ft) |
ಕಡಿಮೆ ಎತ್ತರ | ೧೫೦ m (೪೯೦ ft) |
Population (2011)[೧] | |
• Total | ೨,೭೭,೦೪,೨೩೬ |
• ಶ್ರೇಣಿ | 16th |
• ಸಾಂದ್ರತೆ | ೫೫೦/km೨ (೧,೪೦೦/sq mi) |
Languages | |
• Official | Punjabi |
• Others | Hindi, English |
• Regional | Majhi, Malwai, Dogri, Bagri |
ಸಮಯ ವಲಯ | ಯುಟಿಸಿ+05:30 (IST) |
ISO 3166 code | IN-PB |
HDI | 0.679 (medium) |
HDI rank | 9th (2005) |
Literacy | 76.68% |
ಜಾಲತಾಣ | Punjab Govt |
^† Joint Capital with Haryana | |
Symbols of Punjab | |
Emblem | Lion Capital of Ashoka with Wheat stem (above) and Crossed Swords (below) |
Language | Punjabi |
ನೃತ್ಯ | Bhangra, Giddha |
Animal | Blackbuck |
ಪಕ್ಷಿ | Baaz[೨] |
Tree | Tahli |
River | Indus |
Sport | Kabaddi (Circle Style) |
ಭಾರತದ ವಾಯುವ್ಯ ಭಾಗದಲ್ಲಿರುವ ಪಂಜಾಬ್ (ਪੰਜਾਬ),ಅನ್ನು ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಹರ್ಯಾಣ, ರಾಜಸ್ಥಾನ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ಸುತ್ತುವರಿದಿದೆ. ರಾಷ್ಟ್ರದ ಚಿಕ್ಕ ರಾಜ್ಯಗಳಲ್ಲಿ ಒಂದಾಗಿರುವ ಪಂಜಾಬ್ ನ ಸಮೃದ್ಧಿ ಭವ್ಯವಾಗಿದೆ.1947 ರಲ್ಲಿ ಪಂಜಾಬ್ ಪ್ರದೇಶವನ್ನು ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನವೆಂದು ವಿಂಗಡಿಸಿದ ಬಳಿಕ 1947 ರಲ್ಲಿ ಪಂಜಾಬ್ ಮತ್ತೊಮ್ಮೆ ವಿಂಗಡನೆಯಾಗಿ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರ್ಯಾಣ ಎಂದಾಯಿತು.
ಇದು ಗ್ರೀಕರಿಗೆ, ಅಫ್ಘಾನಿಯರಿಗೆ, ಇರಾನಿಗಳಿಗೆ ಮತ್ತು ಮಧ್ಯ ಏಶ್ಯಾದ ಜನರಿಗೆ ರಹದಾರಿಯಾಗಿ ಉಳಿಯಿತು.ಪಂಜಾಬ್ ಗೆ ಐತಿಹಾಸಿಕ ಮಹತ್ವವಿದ್ದು, ಇದರ ಕುರಿತಾಗಿ ಗ್ರೀಕರು ಮತ್ತು ಝೋರೊಸ್ಟ್ರಿಯನ್ ಗಳಲ್ಲಿ ಕೂಡ ಜನಪ್ರಿಯತೆ ಇದೆ. ಅವರ ಪ್ರಕಾರ ಪಂಜಾಬ್ ಐದು ನದಿಗುಳು ಸಂಧಿಸುವ ಭೂಮಿ. ಪಂಜಾಬ್ ನಲ್ಲಿ ಕೃಷಿ ಜನರ ಪ್ರಮುಖ ಉದ್ಯೋಗವಾಗಿದೆ. ಪಂಜಾಬ್ ನಲ್ಲಿ ಸಿಖ್ ಧರ್ಮದ ಅನುಯಾಯಿಗಳು ಬೃಹತ್ ಸಂಖ್ಯೆಯಲ್ಲಿದ್ದಾರೆ.ಯಂತ್ರಗಳ ಬಿಡಿಭಾಗಗಳು, ಜವಳಿ, ಹೊಲಿಯುವ ಯಂತ್ರ, ಕ್ರೀಡಾ ಸಾಮಗ್ರಿಗಳು, ಪಿಷ್ಟ, ಪ್ರವಾಸೋದ್ಯಮ, ರಸಗೊಬ್ಬರಗಳು, ಸೈಕಲ್, ಸಕ್ಕರೆ ಮತ್ತು ಉಡುಪುಗಳ ಉತ್ಪಾದನೆ ಮಾಡುವ ಕಾರ್ಖಾನೆಗಳು ಇಲ್ಲಿವೆ. ಪಂಜಾಬ್ ನಲ್ಲಿ ಕೃಷಿ ಉತ್ಪನ್ನಗಳು, ವೈಜ್ಞಾನಿಕ ಉಪಕರಣ ಮತ್ತು ವಿದ್ಯುತ್ ವಸ್ತುಗಳು ಉತ್ಪಾದನೆಯಾಗುತ್ತದೆ.[೩]
ಪಂಜಾಬ್-ಹವಾಮಾನ, ಭೌಗೋಳಿಕತೆ ಮತ್ತು ವನ್ಯಜೀವಿ
[ಬದಲಾಯಿಸಿ]ಪಂಜಾಬ್ ಮೆಕ್ಕಲು ಮಣ್ಣನ್ನು ಹೊಂದಿದ್ದು, ಇಲ್ಲಿರುವ ನೀರಾವರಿ ಕಾಲುವೆಗಳ ನೀರು ಕೃಷಿ ಮಾಡಲು ಅನುಕೂಲಕರವಾಗಿದೆ. ರಾಜ್ಯದ ಉತ್ತರಪೂರ್ವ ಭಾಗವು ಹಿಮಾಲಯದ ಬುಡದಲ್ಲಿದ್ದರೆ, ನೈಋತ್ಯ ಭಾಗದಲ್ಲಿ ಥಾರ್ ಮರುಭೂಮಿಯಿದೆ. ಬಿರು ಬೇಸಿಗೆ ಮತ್ತು ಶೀತ ಚಳಿಗಾಲದೊಂದಿಗೆ ಪಂಜಾಬ್ ನಲ್ಲಿ ಹವಾಮಾನ ಪರಿಸ್ಥಿತಿ ತೀವ್ರ ಸ್ವರೂಪಕ್ಕೆ ತಲುಪುತ್ತದೆ. ಮನ್ಸೂನ್ ತಿಂಗಳಲ್ಲಿ ಭಾರೀ ಮಳೆಯಾಗುತ್ತದೆ.ರಾಷ್ಟ್ರದ ಈ ಭಾಗದಲ್ಲಿ ನೈಸರ್ಗಿಕ ಅರಣ್ಯದ ಕೊರತೆಯಿದೆ. ಆದರೆ ಇಲ್ಲಿ ಕಿತ್ತಳೆ, ದಾಳಿಂಬೆ, ಸೇಬು, ಪೀಚ್, ಅಂಜೂರ, ಉಪ್ಪುನೇರಳೆ, ಶ್ರೀಫಲ, ಜರದಾಳ ಹಣ್ಣು, ಬಾದಾಮಿ ಮತ್ತು ಒಣದ್ರಾಕ್ಷಿ ಬೆಳೆಸಲಾಗುತ್ತದೆ.
ಭೂಮಿಯಲ್ಲಿ ಚಾಚಿದ ಪೊದೆಗಳು, ಪೊದರುಗಳು ಮತ್ತು ಹುಲ್ಲುಗಳಿಂದ ಆವೃತ್ತವಾಗಿದೆ. ಭಾರತದಲ್ಲಿ ಪಂಜಾಬ್ ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಇದನ್ನು ಭಾರತದ ಕಣಜವೆಂದು ಕರೆಯಲ್ಪಡುತ್ತಿದ್ದು, ಇಲ್ಲಿ ಗೋಧಿ, ಅಕ್ಕಿ, ಕಬ್ಬು ಮತ್ತು ಇತರ ಹಲವಾರು ತರಕಾರಿಗಳನ್ನು ಬೆಳೆಯಲಾಗುತ್ತದೆ.ಇಲ್ಲಿನ ನೀರಿನಲ್ಲಿ ಮೊಸಳೆಗಳು ಸಾಮಾನ್ಯವಾಗಿ ಕಂಡುಬರುತ್ತದೆ. ರೇಷ್ಮೆ ಹುಳು ಮತ್ತು ಜೇನುನೊಣಗಳನ್ನು ಇಲ್ಲಿ ಸಾಕಲಾಗುತ್ತದೆ. ಕುದುರೆ, ಒಂಟೆ ಮತ್ತು ಎಮ್ಮೆಗಳು ಇಲ್ಲಿನ ಸಾಕು ಪ್ರಾಣಿಗಳಾಗಿವೆ. ಪಂಜಾಬ್ ಪ್ರವಾಸೋದ್ಯಮದಲ್ಲಿ ಹಲವಾರು ರೀತಿಯ ಸಸ್ತನಿಗಳನ್ನು ವೀಕ್ಷಿಸಬಹುದಾಗಿದೆ.
ಪಂಜಾಬ್ ಪ್ರವಾಸ ಸ್ಥಳಗಳು
[ಬದಲಾಯಿಸಿ]ಚಂದೀಗಢ್ ಪಂಜಾಬ್ ನ ರಾಜಧಾನಿ ನಗರವಾಗಿದೆ ಮತ್ತು ಭಾರತದ ಯೋಜಿತ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಸಂಸ್ಕೃತಿ ಮತ್ತು ನಾಗರಿಕತೆ ಬಗ್ಗೆ ಪ್ರವಾಸಿಗರ ಆಸಕ್ತಿಯನ್ನು ಕೆರಳಿಸುತ್ತದೆ. ಭವ್ಯ ಅರಮನೆಗಳು, ದೇವಾಲಯಗಳು, ಪುಣ್ಯಕ್ಷೇತ್ರಗಳು ಮತ್ತು ಐತಿಹಾಸಿಕ ಕದನಗಳ ಸ್ಥಳ ಪ್ರವಾಸೋದ್ಯಮಕ್ಕೆ ಹೇಳಿಮಾಡಿಸಿದಂತಿದೆ.ವಿವಿಧ ನಗರಗಳಾದ ಫರೀದಾಕೋಟ್, ಜಲಂಧರ್, ಕರ್ಪುಥಲಾ, ಲೂದಿಯಾನಾ, ಪಠಾಣ್ ಕೋಟ್, ಪಾಟಿಯಾಲ, ಮೊಹಾಲಿ ಮತ್ತು ಇತರ ಪ್ರದೇಶಗಳು ತಮ್ಮದೇ ಆದ ಆಕರ್ಷಣೆ ಮತ್ತು ಘನತೆಯನ್ನು ಹೊಂದಿದೆ.
ಅನ್ವೇಷಿಸುತ್ತಾ ಹೋದಂತೆ ಪ್ರತಿಯೊಂದು ಸ್ಥಳವೂ ತನ್ನದೇ ಆದ ಅನನ್ಯ ವೈಶಿಷ್ಟ್ಯವನ್ನು ಹೊಂದಿರುವುದು ಬಹಿರಂಗವಾಗುತ್ತದೆ.ಸಂಸ್ಕೃತಿ ಮತ್ತು ಪರಂಪರೆ ಪಂಜಾಬ್ ಪ್ರವಾಸೋದ್ಯಮದ ಪ್ರಮುಖ ಅಂಶವಾಗಿದೆ. ವಿವಿಧ ಕೋಟೆಗಳಾದ ಗೋಬಿಂದಗಢ್ ಕೋಟೆ, ಕಿಲಾ ಮುಬಾರಕ್, ಶೇಷ ಮಹಲ್, ಜಗತ್ಜಿತ್ ಅರಮನೆ ಗತ ಆಡಳಿತಗಾರರ ಸಾಮ್ರಾಜ್ಯದ ಘನತೆಯನ್ನು ಸಾರುತ್ತದೆ. ಅಟರಿ ಗಡಿ, ಆಮ್ ಖಾಸ್ ಬಾಗ್, ಬರದರಿ ಗಾರ್ಡನ್ಸ್, ತಖ್ತ್ ಐ ಅಕ್ಬರಿ, ಜಲಿಯನ್ ವಾಲಾಬಾಗ್ ಮತ್ತು ರೋಜಾ ಶರೀಫ್ ಕೆಲವು ಹೆಸರಾಂತ ಸ್ಮಾರಕಗಳು.
ಸರ್ಕಾರಿ ಮ್ಯೂಸಿಯಂ ಮತ್ತು ಕಲಾ ಗ್ಯಾಲರಿ, ಶಹೀದ್ ಎ ಅಜಂ ಸರ್ದಾರ್ ಭಗತ್ ಸಿಂಗ್ ಮ್ಯೂಸಿಯಂ, ಪುಷ್ಪ ಗುಜ್ರಾಲ್ ವಿಜ್ಞಾನ ನಗರ ಮತ್ತು ಮಹಾರಾಜ ರಂಜಿತ್ ಸಿಂಗ್ ಮ್ಯೂಸಿಯಂಗಳು ಚಿರಸ್ಮರಣೀಯ ವಸ್ತುಗಳನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿದ್ದು, ಭೇಟಿ ಅಪೇಕ್ಷಣೀಯವೆನಿಸಲಿದೆ.ಪಂಜಾಬ್ ಪ್ರವಾಸೋದ್ಯಮದ ಯಾತ್ರಸ್ಥಳಗಳಲ್ಲಿ ಡೇರಾ ಸಂತಘರ್, ಗುರುದ್ವಾರ ಗರ್ನಾ ಸಾಹಿಬ್, ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್, ಗುರುದ್ವಾರ ಶಾಹಿದ್ಗಂಜ್ ತಲ್ವಂದಿ ಜತ್ತನ್ ಮತ್ತು ಹಲವಾರು ಗುರುದ್ವಾರಗಳು ರಾಜ್ಯದ ಪ್ರತಿಯೊಂದು ಗ್ರಾಮದಲ್ಲೂ ಕಂಡುಬರುತ್ತದೆ. ಶ್ರೀರಾಮ ತೀರ್ಥ ದೇವಸ್ಥಾನ, ದುರ್ಗಿಯಾನ ಮಂದಿರ, ಶಿವ ಮಂದಿರ ಕಥಾಘರ್, ಕಮಹಿ ದೇವಿ ಮಂದಿರ, ದೇವಿ ತಲಾಬ್ ಮಂದಿರ ಹಿಂದೂಗಳಿಗಾಗಿರುವ ಕೆಲವು ಧಾರ್ಮಿಕ ಕೇಂದ್ರಗಳು.
ಮೂರಿಶ್ ಮಸೀದಿ ಪಂಜಾಬ್ ನಲ್ಲಿ ನೆಲೆಸಿರುವ ಮುಸ್ಲಿಮರ ಪವಿತ್ರ ಸ್ಥಳವಾಗಿದೆ.ಸನ್ಗಹೊಲ್, ಪುರಾತತ್ವ ವಸ್ತುಸಂಗ್ರಹಾಲಯ, ರೂಪ್ನಗರ್ನದಂತಹ ಪುರಾತತ್ವ ಸ್ಥಳಗಳು ಪಂಜಾಬ್ ನ ಪ್ರವಾಸೋದ್ಯಮಕ್ಕೆ ಭಿನ್ನ ದೃಷ್ಟಿಕೋನವನ್ನು ನೀಡುತ್ತದೆ. ಛತ್ಬೀರ್ ಮೃಗಾಲಯ, ತಖ್ನಿ-ರೆಹಂಪುರ್ ವನ್ಯಜೀವಿ ಅಭಯಾರಣ್ಯ, ಕಂಜ್ಲಿ ಜೌಗು ಪ್ರದೇಶ, ಹರಿಕೆ ಜೌಗುಪ್ರದೇಶ, ಹುಲಿ ಸಫಾರಿ ಮತ್ತು ಜಿಂಕೆ ಪಾರ್ಕ್ ಪಂಜಾಬ್ ನ ವನ್ಯಜೀವಿ ಅಭಯಾರಣ್ಯಗಳಾಗಿದ್ದು, ಇದು ರಾಜ್ಯದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಪಂಜಾಬ್ ಸಂಸ್ಕೃತಿ
[ಬದಲಾಯಿಸಿ]ಪಂಜಾಬ್ ಪ್ರವಾಸೋದ್ಯಮ ಪಂಜಾಬಿ ಸಂಸ್ಕೃತಿ ಮತ್ತು ಸಂಪ್ರದಾಯದವನ್ನು ಆನಂದಿಸಲು ಅವಕಾಶವನ್ನು ನೀಡುತ್ತದೆ. ಇಲ್ಲಿರುವ ಹೆಚ್ಚಿನವರು ಸಿಖ್ ಧರ್ಮವನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಅಮೃತಸರದಲ್ಲಿರುವ ಸ್ವರ್ಣ ಮಂದಿರ ಸಿಖ್ ಧರ್ಮಿಯರಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಪಂಜಾಬ್ ನ ಪ್ರತಿಯೊಂದು ಗ್ರಾಮದಲ್ಲೂ ಗುರುದ್ವಾರವಿದೆ. ಹಿಂದೂ ಧರ್ಮ ಇಲ್ಲಿನ ಜನರು ಅನುಸರಿಸುವ ಎರಡನೇ ಧರ್ಮ. ಪಂಜಾಬಿ ಪಂಜಾಬ್ ನ ಅಧಿಕೃತ ಭಾಷೆ.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಇಲ್ಲಿನ ಜನರು ಜೀವನವನ್ನು ಆನಂದಿಸುತ್ತಾರೆ.
ಸಂಗೀತದೊಂದಿಗೆ ನೃತ್ಯ, ಅಸಂಖ್ಯಾತ ತಿನಿಸು ಇಲ್ಲಿ ಸಾಮಾನ್ಯ. ಲೊಹ್ರಿ, ಬಸಂತ್, ಬೈಸಖಿ ಮತ್ತು ತೀಜ್ ಪಂಜಾಬ್ ನ ಕೆಲವು ಪ್ರಮುಖ ಹಬ್ಬಗಳಾಗಿವೆ. ಬಂಗ್ರಾ ಪಂಜಾಬ್ ನ ಜನಪ್ರಿಯ ನೃತ್ಯವಾಗಿದೆ. ಇದು ಮೊದಲು ಸುಗ್ಗಿಯ ನೃತ್ಯವಾಗಿತ್ತು. ಆದರೆ ಈಗ ಇದು ವಿಶ್ವದಾದ್ಯಂತ ಮಾನ್ಯತೆಯನ್ನು ಪಡೆಯುತ್ತಿದೆ. ಜಾನಪದ ಪಂಜಾಬ್ ನ ಇನ್ನೊಂದು ಅಂಶವಾಗಿದೆ. ಇದರಲ್ಲಿ ಗತ ಇತಿಹಾಸವನ್ನು ನಿರೂಪಿಸುತ್ತದೆ.
ಜಿಲ್ಲೆಗಳು
[ಬದಲಾಯಿಸಿ]ಪಂಜಾಬ್ ರಾಜ್ಯದಲ್ಲಿ ೨೦ ಜಿಲ್ಲೆಗಳಿವೆ.
ಪಂಜಾಬ್ ಸರ್ಕಾರ ಮತ್ತು ವಿಧಾನ ಸಭೆ
[ಬದಲಾಯಿಸಿ]ಉಲೇಖನಗಳು
[ಬದಲಾಯಿಸಿ]- ↑ Census of India, 2011. Census Data Online, Population.
- ↑ "State Bird is BAAZ". Archived from the original on 2014-07-14. Retrieved 2016-07-02.
- ↑ http://punjab.gov.in/
- Pages with non-numeric formatnum arguments
- Pages using the JsonConfig extension
- Short description is different from Wikidata
- Pages using infobox settlement with unknown parameters
- Pages using infobox settlement with no coordinates
- Articles containing Punjabi-language text
- Pages using div col with unknown parameters
- ಪಂಜಾಬ್
- ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು