ಇವಾ ಬ್ರೌನ್
ಇವಾ ಬ್ರೌನ್ | |
---|---|
ಜನನ | ಇವಾ ಅನ್ನಾ ಪೌಲಾ ಬ್ರೌನ್ ೬ ಫೆಬ್ರವರಿ ೧೯೧೨ |
ಮರಣ | 30 April 1945 | (aged 33)
Cause of death | ಆತ್ಮಹತ್ಯೆ ಸೈನೈಡ್ ವಿಷ |
ಇತರೆ ಹೆಸರು | ಇವಾ ಹಿಟ್ಲರ್ |
ವೃತ್ತಿ(ಗಳು) | ಛಾಯಾಗ್ರಾಹಕಿ, ಛಾಯಾಗ್ರಹಣ ಸ್ಟುಡಿಯೋದಲ್ಲಿ ಕಚೇರಿ ಮತ್ತು ಲ್ಯಾಬ್ ಸಹಾಯಕಿ ಹೆನ್ರಿಕ್ ಹಾಫ್ಮನ್ (ಛಾಯಾಗ್ರಾಹಕ) |
ಗಮನಾರ್ಹ ಕೆಲಸಗಳು | ಅಡಾಲ್ಫ್ ಹಿಟ್ಲರ್‌ನ ಸಂಗಾತಿ ಮತ್ತು ಪತ್ನಿ |
ಸಂಗಾತಿ |
ಅಡಾಲ್ಫ್ ಹಿಟ್ಲರ್
(m. ೧೯೪೫; died ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".) |
ಸಂಬಂಧಿಕರು |
|
Signature | |
ಇವಾ ಅನ್ನಾ ಪೌಲಾ ಹಿಟ್ಲರ್ (೬ ಫೆಬ್ರವರಿ ೧೯೧೨ - ೩೦ ಏಪ್ರಿಲ್ ೧೯೪೫) ಇವರು ಜರ್ಮನ್ ಛಾಯಾಗ್ರಾಹಕಿಯಾಗಿದ್ದು, ಅಡಾಲ್ಫ್ ಹಿಟ್ಲರ್‌ನ ಪತ್ನಿಯಾಗಿದ್ದರು. ಬ್ರೌನ್‌ರವರು ಮ್ಯೂನಿಕ್‌ನಲ್ಲಿ ಹಿಟ್ಲರ್‌ನನ್ನು ಭೇಟಿಯಾದರು. ಅವರು ೧೭ ವರ್ಷದವರಾಗಿದ್ದಾಗ ಅವರ ವೈಯಕ್ತಿಕ ಛಾಯಾಗ್ರಾಹಕರಾದ ಹೆನ್ರಿಕ್ ಹಾಫ್ಮನ್‌ರವರಿಗೆ ಸಹಾಯಕಿ ಮತ್ತು ರೂಪದರ್ಶಿಯಾಗಿದ್ದರು. ಸುಮಾರು ಎರಡು ವರ್ಷಗಳ ನಂತರ, ಅವರು ಹಿಟ್ಲರ್‌ನನ್ನು ಆಗಾಗ್ಗೆ ನೋಡಲು ಪ್ರಾರಂಭಿಸಿದರು.[೧]
ಅವರ ಆರಂಭಿಕ ಸಂಬಂಧದ ಸಮಯದಲ್ಲಿ, ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ೧೯೩೬ ರ ಹೊತ್ತಿಗೆ, ಬ್ರೌನ್‌ರವರು ಜರ್ಮನಿಯ ಬವೇರಿಯಾದ ಬೆರ್ಚ್ಟೆಸ್ಗಾಡೆನ್ ಬಳಿಯ ಬರ್ಗ್ಹೋಫ್‌ನಲ್ಲಿ ಹಿಟ್ಲರ್‌ನ ಮನೆಯ ಭಾಗವಾಗಿದ್ದರು ಮತ್ತು ಎರಡನೇ ಮಹಾಯುದ್ಧದ ಉದ್ದಕ್ಕೂ ಆಶ್ರಯ ಜೀವನವನ್ನು ನಡೆಸಿದರು. ಅವರು ಹಿಟ್ಲರ್‌ನ ಆಂತರಿಕ ಸಾಮಾಜಿಕ ವಲಯದಲ್ಲಿ ಮಹತ್ವದ ವ್ಯಕ್ತಿಯಾದರು. ಆದರೆ, ೧೯೪೪ ರ ಮಧ್ಯಭಾಗದವರೆಗೆ ಅವರ ಸಹೋದರಿಯಾದ ಗ್ರೆಟಲ್ ಅವರ ಸಿಬ್ಬಂದಿಯ ಎಸ್ಎಸ್ ಸಂಪರ್ಕ ಅಧಿಕಾರಿಯಾದ ಹರ್ಮನ್ ಫೆಗೆಲೀನ್ ಅವರನ್ನು ಮದುವೆಯಾದಾಗ ಅವರೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲ್ಲಿಲ್ಲ.[೨]
ಯುದ್ಧದ ಕೊನೆಯಲ್ಲಿ ನಾಜಿ ಜರ್ಮನಿ ಕುಸಿಯುತ್ತಿದ್ದಾಗ, ಬ್ರೌನ್‌ರವರು ಹಿಟ್ಲರ್‌ಗೆ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದರು ಮತ್ತು ರೀಚ್ ಚಾನ್ಸಲೆರಿ ಉದ್ಯಾನದ ಕೆಳಗಿನ ಹೆಚ್ಚು ಬಲವರ್ಧಿತ ಫ್ಯೂರೆರ್‌ಬಂಕರ್‌ನಲ್ಲಿ ಹಿಟ್ಲರ್ ಜೊತೆಗೆ ಇರಲು ಬರ್ಲಿನ್‌ಗೆ ಹೋದರು. ಕೆಂಪು ಸೈನ್ಯ ಪಡೆಗಳು ಕೇಂದ್ರ ಸರ್ಕಾರದ ಜಿಲ್ಲೆಗೆ ಪ್ರವೇಶಿಸುತ್ತಿದ್ದಂತೆ, ೨೯ ಏಪ್ರಿಲ್ ೧೯೪೫ ರಂದು, ಬ್ರೌನ್‌ರವರು ಹಿಟ್ಲರ್‌ನನ್ನು ಸಂಕ್ಷಿಪ್ತ ನಾಗರಿಕ ಸಮಾರಂಭದಲ್ಲಿ ವಿವಾಹವಾದರು. ಆ ಸಮಯದಲ್ಲಿ ಬ್ರೌನ್‌ರವರಿಗೆ ೩೩ ವರ್ಷ ಮತ್ತು ಹಿಟ್ಲರ್‌ಗೆ ೫೬ ವರ್ಷ ವಯಸ್ಸಾಗಿತ್ತು. ವಿವಾಹವಾದ ೪೦ ಗಂಟೆಗಳ ನಂತರ, ಬಂಕರ್‌ನ ಕುಳಿತುಕೊಳ್ಳುವ ಕೋಣೆಯಲ್ಲಿ ಬ್ರೌನ್‌ರವರು ಸೈನೈಡ್ ಕ್ಯಾಪ್ಸೂಲ್ ಅನ್ನು ಕಚ್ಚಿ ನುಂಗುವ ಮೂಲಕ ಮತ್ತು ಹಿಟ್ಲರ್ ತಲೆಗೆ ಗುಂಡು ಹಾರಿಸುವ ಮೂಲಕ ಆತ್ಮಹತ್ಯೆ ಮಾಡಿಕೊಂಡರು.[೩] ಜರ್ಮನ್ ಸಾರ್ವಜನಿಕರಿಗೆ ಹಿಟ್ಲರನೊಂದಿಗಿನ ಬ್ರೌನ್‌ರವರ ಸಂಬಂಧದ ಬಗ್ಗೆ ಅವರ ಮರಣದ ನಂತರದವರೆಗೂ ತಿಳಿದಿರಲಿಲ್ಲ.
ಆರಂಭಿಕ ಜೀವನ
[ಬದಲಾಯಿಸಿ]ಇವಾ ಬ್ರೌನ್‌ರವರು ಮ್ಯೂನಿಕ್‌ನಲ್ಲಿ ಜನಿಸಿದರು ಮತ್ತು ಶಾಲಾ ಶಿಕ್ಷಕರಾದ ಫ್ರೆಡ್ರಿಕ್ "ಫ್ರಿಟ್ಜ್" ಬ್ರೌನ್ (೧೮೭೯–೧೯೬೪) ಮತ್ತು ಫ್ರಾಂಜಿಸ್ಕಾ "ಫ್ಯಾನಿ" ಕ್ರೋನ್ಬರ್ಗರ್ (೧೮೮೫–೧೯೭೬) ಅವರ ಎರಡನೇ ಮಗಳು. ಅವರ ತಾಯಿ ಮದುವೆಗೆ ಮೊದಲು ಸಿಂಪಿಗಿತ್ತಿಯಾಗಿ ಕೆಲಸ ಮಾಡಿದ್ದರು. ಅವರ ತಂದೆ ಲೂಥರನ್ ಮತ್ತು ತಾಯಿ ಕ್ಯಾಥೊಲಿಕ್. ಬ್ರೌನ್‌ರವರಿಗೆ ಇಲ್ಸೆ (೧೯೦೯–೧೯೭೯) ಎಂಬ ಹಿರಿಯ ಸಹೋದರಿ ಮತ್ತು ಮಾರ್ಗರೆಟ್ (ಗ್ರೆಟಲ್) (೧೯೧೫–೧೯೮೭) ಎಂಬ ತಂಗಿ ಇದ್ದರು.
ಬ್ರೌನ್ ಅವರ ಪೋಷಕರು ಏಪ್ರಿಲ್ ೧೯೨೧ ರಲ್ಲಿ, ವಿಚ್ಛೇದನ ಪಡೆದರು. ಆದರೆ, ನವೆಂಬರ್ ೧೯೨೨ ರಲ್ಲಿ, ಆರ್ಥಿಕ ಕಾರಣಗಳಿಂದಾಗಿ ಮರುಮದುವೆಯಾದರು. ಆ ಸಮಯದಲ್ಲಿ ಅತಿಯಾದ ಹಣದುಬ್ಬರವು ಜರ್ಮನ್ ಆರ್ಥಿಕತೆಯನ್ನು ಕಾಡುತ್ತಿತ್ತು. ಬ್ರೌನ್‌ರವರು ಮ್ಯೂನಿಕ್‌ನ ಕ್ಯಾಥೊಲಿಕ್ ಲೈಸಿಯಂನಲ್ಲಿ ಶಿಕ್ಷಣ ಪಡೆದರು ಮತ್ತು ಸಿಂಬಾಕ್ ಆಮ್ ಇನ್‌ನಲ್ಲಿರುವ ಕಾನ್ವೆಂಟ್ ಆಫ್ ದಿ ಇಂಗ್ಲಿಷ್ ಸಿಸ್ಟರ್ಸ್‌ನ ವ್ಯವಹಾರ ಶಾಲೆಯಲ್ಲಿ ಒಂದು ವರ್ಷ ಶಿಕ್ಷಣ ಪಡೆದರು. ಅಲ್ಲಿ ಅವರು ಸರಾಸರಿ ಶ್ರೇಣಿಗಳನ್ನು ಮತ್ತು ಅಥ್ಲೆಟಿಕ್ಸ್‌ನಲ್ಲಿ ಪ್ರತಿಭೆಯನ್ನು ಹೊಂದಿದ್ದರು.
೧೭ ನೇ ವಯಸ್ಸಿನಲ್ಲಿ, ಬ್ರೌನ್‌ರವರು ನಾಜಿ ಪಕ್ಷದ ಅಧಿಕೃತ ಛಾಯಾಗ್ರಾಹಕರಾದ ಹೆನ್ರಿಕ್ ಹಾಫ್ಮನ್ ಅವರಲ್ಲಿ ಕೆಲಸವನ್ನು ಪಡೆದರು. ಆರಂಭದಲ್ಲಿ, ಅಂಗಡಿ ಸಹಾಯಕಿ ಮತ್ತು ಮಾರಾಟ ಗುಮಾಸ್ತರಾಗಿ ನೇಮಕಗೊಂಡ ಅವರು ಶೀಘ್ರದಲ್ಲೇ ಕ್ಯಾಮೆರಾವನ್ನು ಹೇಗೆ ಬಳಸುವುದು ಮತ್ತು ಛಾಯಾಚಿತ್ರಗಳನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬುದನ್ನು ಕಲಿತರು. ಅಕ್ಟೋಬರ್ ೧೯೨೯ ರಲ್ಲಿ, ಅವರು ಮ್ಯೂನಿಕ್‌ನ ಹಾಫ್ಮನ್ ಸ್ಟುಡಿಯೋದಲ್ಲಿ, ೪೦ ವರ್ಷ ವಯಸ್ಸಿನ (ಬ್ರೌನ್‌ರವರಿಗಿಂತ ೨೩ ವರ್ಷ ಹಿರಿಯ) ಅಡೋಲ್ಫ್ ಹಿಟ್ಲರ್ ಅವರನ್ನು ಭೇಟಿಯಾದರು. ಹಿಟ್ಲರ್‌ನನ್ನು ಅವರಿಗೆ "ಹರ್ ವೋಲ್ಫ್" ಎಂದು ಪರಿಚಯಿಸಲಾಯಿತು. ಬ್ರೌನ್ ಅವರ ಕಿರಿಯ ಸಹೋದರಿಯಾದ ಗ್ರೆಟಲ್ ಕೂಡ ೧೯೩೨ ರಿಂದ ಹಾಫ್ಮನ್‌ನಲ್ಲಿ ಕೆಲಸ ಮಾಡಿದರು. ಇಬ್ಬರು ಸ್ವಲ್ಪ ಸಮಯದವರೆಗೆ ಒಟ್ಟಿಗೆ ಫ್ಲಾಟ್ ಅನ್ನು ಬಾಡಿಗೆಗೆ ಪಡೆದರು. ಹಿಟ್ಲರ್ ಮತ್ತು ಇವಾ ಬ್ರೌನ್‌ರವರೊಂದಿಗೆ ಒಬೆರ್ಸಾಲ್ಜ್‌ಬರ್ಗ್‌ಗೆ ಗ್ರೆಟಲ್‌ರವರು ಪ್ರವಾಸಕ್ಕೆ ಹೋಗುತ್ತಿದ್ದರು.[೪][೫] ೧೯೩೦ ರ ದಶಕದಲ್ಲಿ, ಅವರು ಪೊಬಿರೊವೊ (ಈಗ ಪೋಲೆಂಡ್) ಬಳಿಯ ಕಡಲತೀರದಲ್ಲಿ ಬೇಸಿಗೆಯ ಮನೆಯನ್ನು ಖರೀದಿಸಿದರು. ಅಲ್ಲಿ ಅವರು ಸಾಂದರ್ಭಿಕವಾಗಿ ರಜಾದಿನಗಳನ್ನು ಕಳೆಯುತ್ತಿದ್ದರು. ಹಿಟ್ಲರ್‌ನ ದಂತವೈದ್ಯರಾದ ಹ್ಯೂಗೋ ಬ್ಲಾಶ್ಕೆಯವರ ಪ್ರಕಾರ, ಬ್ರೌನ್‌ರವರು ತಮ್ಮ ಕೂದಲಿಗೆ ಹೊಂಬಣ್ಣದ ಛಾಯೆಗೆ ಬಣ್ಣ ಹಚ್ಚಲು ಪೆರಾಕ್ಸೈಡ್ ಅನ್ನು ಬಳಸುತ್ತಿದ್ದರು.
ಹಿಟ್ಲರ್ ಜೊತೆಗಿನ ಸಂಬಂಧ
[ಬದಲಾಯಿಸಿ]ಹಿಟ್ಲರ್ ೧೯೨೯ ರಿಂದ, ಮ್ಯೂನಿಕ್‌ನ ಪ್ರಿಂಜ್ರೆಜೆಂಟೆನ್‌ಪ್ಲಾಟ್ಜ್ ೧೬ ನೇ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಅತ್ತೆಯ ಸೊಸೆಯಾದ ಗೆಲಿ ರೌಬಲ್‌ನ ಮರಣದವರೆಗೂ ಅವರೊಂದಿಗೆ ವಾಸಿಸುತ್ತಿದ್ದನು. ೧೯೩೧ ರ ಸೆಪ್ಟೆಂಬರ್ ೧೮ ರಂದು, ರೌಬಲ್ ತನ್ನ ಎದೆಯ ಗುಂಡೇಟಿನ ಗಾಯದೊಂದಿಗೆ ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾದಳು. ಇದು ಹಿಟ್ಲರ್‌ನ ಪಿಸ್ತೂಲ್‌ನಿಂದಾದ ಆತ್ಮಹತ್ಯೆಯಾಗಿದೆ. ಆ ಸಮಯದಲ್ಲಿ, ಹಿಟ್ಲರ್ ನ್ಯೂರೆಂಬರ್ಗ್‌ನಲ್ಲಿದ್ದನು. ರೌಬಲ್‌ನೊಂದಿಗಿನ ಅವನ ಸಂಬಂಧವು ಬಹುಶಃ ಅವನ ಜೀವನದ ಅತ್ಯಂತ ತೀವ್ರವಾದುದಾಗಿತ್ತು. ರೌಬಲ್‌ನ ಆತ್ಮಹತ್ಯೆಯ ನಂತರ, ಹಿಟ್ಲರ್ ಬ್ರೌನ್‌ರವರನ್ನು ಚೆನ್ನಾಗಿ ನೋಡಲು ಪ್ರಾರಂಭಿಸಿದನು.[೬]
ಬ್ರೌನ್‌ರವರು ಸ್ವತಃ ಆಗಸ್ಟ್ ೧೦ ಅಥವಾ ೧೧, ೧೯೩೨ ರಂದು ತಮ್ಮ ತಂದೆಯ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು. ಇತಿಹಾಸಕಾರರು ಈ ಪ್ರಯತ್ನವು ಗಂಭೀರವಾಗಿರಲಿಲ್ಲ. ಆದರೆ, ಹಿಟ್ಲರ್‌ನ ಗಮನವನ್ನು ಸೆಳೆಯುವ ಪ್ರಯತ್ನವಾಗಿತ್ತು ಎಂದು ಭಾವಿಸಿದ್ದಾರೆ. ಬ್ರೌನ್‌ರವರು ಚೇತರಿಸಿಕೊಂಡ ನಂತರ, ಹಿಟ್ಲರ್ ಅವರಿಗೆ ಹೆಚ್ಚು ಬದ್ಧನಾದನು ಮತ್ತು ೧೯೩೨ ರ ಅಂತ್ಯದ ವೇಳೆಗೆ ಅವರು ಪ್ರೇಮಿಗಳಾದರು. ಹಿಟ್ಲರ್ ಪಟ್ಟಣದಲ್ಲಿದ್ದಾಗ ಬ್ರೌನ್‌ರವರು ಆಗಾಗ್ಗೆ ಮ್ಯೂನಿಕ್ ಅಪಾರ್ಟ್ಮೆಂಟ್‌ನಲ್ಲಿ ರಾತ್ರಿ ತಂಗುತ್ತಿದ್ದರು. ೧೯೩೩ ರಿಂದ, ಬ್ರೌನ್‌ರವರು ಹಾಫ್ಮನ್‌ರವರೊಂದಿಗೆ ಛಾಯಾಗ್ರಾಹಕಿಯಾಗಿ ಕೆಲಸ ಮಾಡಿದರು. ಈ ಸ್ಥಾನವು ನಾಜಿ ಪಕ್ಷದ ಛಾಯಾಗ್ರಾಹಕರಾಗಿ ಹಿಟ್ಲರ್‌ನ ಪರಿವಾರವಾದ ಹಾಫ್ಮನ್ ಅವರೊಂದಿಗೆ ಪ್ರಯಾಣಿಸಲು ಅನುವು ಮಾಡಿಕೊಟ್ಟಿತು. ಅವರ ವೃತ್ತಿಜೀವನದ ನಂತರ, ಅವರು ಹಾಫ್ಮನ್ ಅವರ ಕಲಾ ಮುದ್ರಣಾಲಯದಲ್ಲಿ ಕೆಲಸ ಮಾಡಿದರು.
ಅವರ ದಿನಚರಿಯ ಒಂದು ತುಣುಕು ಮತ್ತು ಜೀವನಚರಿತ್ರೆಕಾರರಾದ ನೆರಿನ್ ಗನ್ ಅವರ ವಿವರಣೆಯ ಪ್ರಕಾರ, ಬ್ರೌನ್ ಅವರ ಎರಡನೇ ಆತ್ಮಹತ್ಯೆ ಪ್ರಯತ್ನವು ಮೇ ೧೯೩೫ ರಲ್ಲಿ, ಸಂಭವಿಸಿತು. ಹಿಟ್ಲರ್ ತನ್ನ ಜೀವನದಲ್ಲಿ ಅವರಿಗೆ ಸಮಯವನ್ನು ನೀಡಲು ವಿಫಲವಾದಾಗ ಅವರು ನಿದ್ರೆ ಮಾತ್ರೆಗಳನ್ನು ಮಿತಿಮೀರಿ ತೆಗೆದುಕೊಂಡರು. ಹಿಟ್ಲರ್ ಮ್ಯೂನಿಕ್‌ನಲ್ಲಿ, ಬ್ರೌನ್‌ರವರು ಮತ್ತು ಅವರ ಸಹೋದರಿಗೆ ಮೂರು ಬೆಡ್ ರೂಮ್‌ಗಳ ಫ್ಲಾಟ್ ಅನ್ನು ಒದಗಿಸಿದನು ಮತ್ತು ಮುಂದಿನ ವರ್ಷ ಸಹೋದರಿಯರಿಗೆ ವಾಸರ್ ಬರ್ಗರ್ ಸ್ಟರ್‌ನ ಬೊಗೆನ್‌ಹೌಸೆನ್‌ನಲ್ಲಿ ಒಂದು ವಿಲ್ಲಾವನ್ನು ಒದಗಿಸಲಾಯಿತು. ೧೯೩೬ ರ ಹೊತ್ತಿಗೆ, ಬ್ರೌನ್‌ರವರು ಹಿಟ್ಲರ್‌ನ ಮನೆಯಲ್ಲಿ ಬೆರ್ಚ್ಟೆಸ್ಗಾಡೆನ್ ಬಳಿಯ ಬರ್ಗಾಫ್‌ನಲ್ಲಿ ವಾಸಿಸುತ್ತಿದ್ದರು. ಆದರೆ, ಅವರು ಹೆಚ್ಚಾಗಿ ಮ್ಯೂನಿಕ್‌ನಲ್ಲಿ ವಾಸಿಸುತ್ತಿದ್ದರು. ಬರ್ಲಿನ್‌ನ ಹೊಸ ರೀಚ್ ಚಾನ್ಸಲೆರಿಯಲ್ಲಿ ಬ್ರೌನ್‌ರವರು ತಮ್ಮದೇ ಆದ ಫ್ಲಾಟ್ ಅನ್ನು ಸಹ ಹೊಂದಿದ್ದರು. ಇದನ್ನು ಆಲ್ಬರ್ಟ್ ಸ್ಪೀರ್‌ರವರು ವಿನ್ಯಾಸಗೊಳಿಸಿದರು.
ಬ್ರೌನ್‌ರವರು ೧೯೩೫ ರಲ್ಲಿ, ಮೊದಲ ಬಾರಿಗೆ ನ್ಯೂರೆಂಬರ್ಗ್ ರ್ಯಾಲಿಯಲ್ಲಿ ಭಾಗವಹಿಸಿದಾಗ ಹಾಫ್ಮನ್ ಅವರ ಸಿಬ್ಬಂದಿಯ ಸದಸ್ಯರಾಗಿದ್ದರು. ಹಿಟ್ಲರ್‌ನ ಮಲ-ಸಹೋದರಿ ಏಂಜೆಲಾ ರೌಬಾಲ್ (ಗೆಲಿಯ ತಾಯಿ) ತನ್ನ ಉಪಸ್ಥಿತಿಯನ್ನು ಆಕ್ಷೇಪಿಸಿದಳು ಮತ್ತು ಬರ್ಗ್ಹಾಫ್‌ನಲ್ಲಿ ಮನೆಕೆಲಸಗಾರ್ತಿ ಹುದ್ದೆಯಿಂದ ವಜಾಗೊಂಡಳು. ಬ್ರೌನ್‌ರವರ ಬಗ್ಗೆ ಅವಳಿಗಿದ್ದ ದ್ವೇಷವೊಂದೇ ಅವಳ ನಿರ್ಗಮನಕ್ಕೆ ಕಾರಣವೇ ಎಂದು ಕಂಡುಹಿಡಿಯಲು ಸಂಶೋಧಕರಿಗೆ ಸಾಧ್ಯವಾಗಲ್ಲಿಲ್ಲ. ಆದರೆ, ಹಿಟ್ಲರ್‌ಣ ಪರಿವಾರದ ಇತರ ಸದಸ್ಯರು ಅಂದಿನಿಂದ ಬ್ರೌನ್‌ರವರನ್ನು ಅಸ್ಪೃಶ್ಯರಂತೆ ನೋಡಿದರು.
ಹಿಟ್ಲರ್‌ನೊಂದಿಗೆ ಸಂಬಂಧವನ್ನು ಪ್ರಾರಂಭಿಸಿದ ನಂತರ, ಬ್ರೌನ್‌ರವರು ಹಾಫ್ಮನ್‌ರವರೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದರು. ಅವರು ಹಿಟ್ಲರನ ಆಂತರಿಕ ವಲಯದ ಸದಸ್ಯರ ಅನೇಕ ಛಾಯಾಚಿತ್ರಗಳು ಮತ್ತು ಚಲನಚಿತ್ರಗಳನ್ನು ತೆಗೆದುಕೊಂಡಳು. ಅವುಗಳಲ್ಲಿ, ಕೆಲವು ಹಾಫ್ಮನ್‌ರವರಿಗೆ ಹೆಚ್ಚಿನ ಬೆಲೆಗೆ ಮಾರಾಟವಾದವು. ಅವರು ೧೯೪೩ ರ ಕೊನೆಯಲ್ಲಿ ಹಾಫ್ಮನ್ ಅವರ ಕಂಪನಿಯಿಂದ ಹಣವನ್ನು ಪಡೆದರು. ಬ್ರೌನ್‌ರವರು ಹಿಟ್ಲರ್‌ನ ಖಾಸಗಿ ಕಾರ್ಯದರ್ಶಿಯ ಸ್ಥಾನವನ್ನೂ ಹೊಂದಿದ್ದರು. ಇದರರ್ಥ ಅವರು ಒಂದು ಬದಿಯ ಪ್ರವೇಶದ್ವಾರ ಮತ್ತು ಹಿಂಭಾಗದ ಮೆಟ್ಟಿಲುಗಳ ಮೂಲಕ ಚಾನ್ಸಲೆರಿಯನ್ನು ಗುರುತಿಸದೆ ಪ್ರವೇಶಿಸಬಹುದು ಮತ್ತು ಬಿಡಬಹುದು. ಬ್ರೌನ್‌ರವರು ಮತ್ತು ಹಿಟ್ಲರ್ ಸಾಮಾನ್ಯ ಲೈಂಗಿಕ ಜೀವನವನ್ನು ಆನಂದಿಸುತ್ತಿದ್ದರು ಎಂದು ಗೋರ್ಟೆಮೇಕರ್ ಹೇಳುತ್ತಾರೆ.[೭]
ಜೂನ್ ೩, ೧೯೪೪ ರಂದು, ಬ್ರೌನ್ ಅವರ ಸಹೋದರಿ ಗ್ರೆಟಲ್ ಎಸ್ಎಸ್-ಗ್ರುಪ್ಪೆನ್ಫುಹ್ರೆರ್ ಹರ್ಮನ್ ಫೆಗೆಲೀನ್ ಅವರನ್ನು ವಿವಾಹವಾದರು. ಅವರು ಹಿಟ್ಲರ್‌ನ ಸಿಬ್ಬಂದಿಯಲ್ಲಿ ರೀಚ್ಸ್ಫುಹ್ರೆರ್-ಎಸ್ಎಸ್ ಹೆನ್ರಿಕ್ ಹಿಮ್ಲರ್ ಅವರ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಹಿಟ್ಲರ್ ಈ ಮದುವೆಯನ್ನು ಬ್ರೌನ್‌ರವರಿಗೆ ಅಧಿಕೃತ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲು ಅವಕಾಶ ನೀಡಲು ಒಂದು ನೆಪವಾಗಿ ಬಳಸಿಕೊಂಡನು. ಯುದ್ಧದ ಕೊನೆಯ ದಿನಗಳಲ್ಲಿ, ಸ್ವೀಡನ್ ಅಥವಾ ಸ್ವಿಟ್ಜರ್‌ಲ್ಯಾಂಡ್‌ಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಫೆಗೆಲೀನ್ ಸಿಕ್ಕಿಬಿದ್ದಾಗ, ಹಿಟ್ಲರ್ ಅವನನ್ನು ಗಲ್ಲಿಗೇರಿಸಲು ಆದೇಶಿಸಿದನು. ೧೯೪೫ ರ ಏಪ್ರಿಲ್ ೨೮ ರಂದು, ರೀಚ್ ಚಾನ್ಸಲೆರಿಯ ತೋಟದಲ್ಲಿ ಅವನನ್ನು ಪಲಾಯನ ಮಾಡಿದ್ದಕ್ಕಾಗಿ ಗುಂಡಿಕ್ಕಿ ಕೊಲ್ಲಲಾಯಿತು.
ಜೀವನಶೈಲಿ
[ಬದಲಾಯಿಸಿ]ಹಿಟ್ಲರ್ ೧೯೩೩ ರಲ್ಲಿ ಬರ್ಗ್ಹಾಫ್ ಅನ್ನು ಖರೀದಿಸಿದಾಗ, ಅದು ಒಬೆರ್ಸಾಲ್ಜ್ಬರ್ಗ್‌ನ ಪರ್ವತದ ಮೇಲಿನ ಸಣ್ಣ ಮನೆಯಾಗಿತ್ತು. ನವೀಕರಣಗಳು ೧೯೩೪ ರಲ್ಲಿ, ಪ್ರಾರಂಭವಾದವು ಮತ್ತು ೧೯೩೬ ರ ವೇಳೆಗೆ ಪೂರ್ಣಗೊಂಡವು. ಮೂಲ ಮನೆಯ ಮೇಲೆ ದೊಡ್ಡ ರೆಕ್ಕೆಯನ್ನು ಸೇರಿಸಲಾಯಿತು ಮತ್ತು ಹಲವಾರು ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಲಾಯಿತು. ಇಡೀ ಪ್ರದೇಶವನ್ನು ಬೇಲಿ ಹಾಕಲಾಯಿತು ಮತ್ತು ಪರ್ವತದ ಮೇಲಿನ ಉಳಿದ ಮನೆಗಳನ್ನು ನಾಜಿ ಪಕ್ಷವು ಖರೀದಿಸಿ ನೆಲಸಮಗೊಳಿಸಿತು. ಬ್ರೌನ್‌ರವರು ಮತ್ತು ಪರಿವಾರದ ಇತರ ಸದಸ್ಯರು ನಿವಾಸದಲ್ಲಿದ್ದಾಗ ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿದುಕೊಂಡರು. ಸ್ಪೀರ್, ಹರ್ಮನ್ ಗೋರಿಂಗ್ ಮತ್ತು ಮಾರ್ಟಿನ್ ಬೋರ್ಮನ್ ಕಾಂಪೌಂಡ್ ಒಳಗೆ ಮನೆಗಳನ್ನು ನಿರ್ಮಿಸಿದರು.[೮]
ಹಿಟ್ಲರ್‌ನ ಸೇವಕರಾದ ಹೈಂಜ್ ಲಿಂಗೆ ತಮ್ಮ ಆತ್ಮಚರಿತ್ರೆಯಲ್ಲಿ, ಹಿಟ್ಲರ್ ಮತ್ತು ಬ್ರೌನ್‌ರವರು ಬರ್ಗ್‌ನಲ್ಲಿ ಎರಡು ಮಲಗುವ ಕೋಣೆಗಳು ಮತ್ತು ಪರಸ್ಪರ ಸಂಪರ್ಕಿಸುವ ಬಾಗಿಲುಗಳನ್ನು ಹೊಂದಿರುವ ಎರಡು ಸ್ನಾನಗೃಹಗಳನ್ನು ಹೊಂದಿದ್ದರು ಮತ್ತು ಹಿಟ್ಲರ್ ಮಲಗುವ ಮೊದಲು ತನ್ನ ಅಧ್ಯಯನದಲ್ಲಿ ಬ್ರೌನ್‌ರವರೊಂದಿಗೆ ಹೆಚ್ಚಿನ ಸಂಜೆಗಳನ್ನು ಏಕಾಂಗಿಯಾಗಿ ಕಳೆಯುತ್ತಿದ್ದನು ಎಂದು ಹೇಳಿದ್ದಾರೆ. ಅವರು "ಡ್ರೆಸ್ಸಿಂಗ್ ಗೌನ್ ಅಥವಾ ಹೌಸ್-ಕೋಟ್" ಧರಿಸುತ್ತಿದ್ದರು ಮತ್ತು ವೈನ್ ಕುಡಿಯುತ್ತಿದ್ದಳು. ಹಿಟ್ಲರ್ ಚಹಾ ಕುಡಿಯುತ್ತಿದ್ದ. ಬರ್ಗೊಫ್‌ನ ಸುತ್ತುವರಿದ ಜಗತ್ತಿನಲ್ಲಿಯೂ ಸಹ ಪ್ರೀತಿ ಅಥವಾ ದೈಹಿಕ ಸಂಪರ್ಕದ ಸಾರ್ವಜನಿಕ ಪ್ರದರ್ಶನಗಳು ಅಸ್ತಿತ್ವದಲ್ಲಿರಲ್ಲಿಲ್ಲ. ಬ್ರೌನ್‌ರವರು ಮನೆಯನ್ನು ನಡೆಸುವಲ್ಲಿ ಭಾಗಿಯಾಗದಿದ್ದರೂ, ನಿಯಮಿತ ಸಂದರ್ಶಕರಲ್ಲಿ ಅತಿಥಿಯಾಗಿ ಪಾತ್ರವನ್ನು ವಹಿಸಿದರು. ಅವರು ತಮ್ಮ ವಾಸ್ತವ್ಯದ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ನಿಯಮಿತವಾಗಿ ಆಹ್ವಾನಿಸುತ್ತಿದ್ದರು.[೯]
ಯುದ್ಧದ ನಂತರ, ಬ್ರೌನ್‌ರವರು ತಲೆಮರೆಸಿಕೊಂಡು ಹೋಗಬೇಕೆಂದು ಹೆನ್ರಿಯೆಟ್ ವಾನ್ ಶಿರಾಚ್ ಸಲಹೆ ನೀಡಿದಾಗ, ಬ್ರೌನ್‌ರವರು, "ನಾನು ಅವನನ್ನು ಒಬ್ಬಂಟಿಯಾಗಿ ಸಾಯಲು ಬಿಡುತ್ತೇನೆ ಎಂದು ನೀವು ಭಾವಿಸುತ್ತೀರಾ? ಕೊನೆಯ ಕ್ಷಣದವರೆಗೂ ನಾನು ಅವರೊಂದಿಗೆ ಇರುತ್ತೇನೆ" ಎಂದು ಉತ್ತರಿಸಿದರು. ಹಿಟ್ಲರ್ ತನ್ನ ಮರಣದ ನಂತರ ವರ್ಷಕ್ಕೆ ೧೨,೦೦೦ ರೀಚ್‌ಮಾರ್ಕ್‌ಗಳನ್ನು ಸ್ವೀಕರಿಸಲು ಬ್ರೌನ್‌ರವರನ್ನು ತನ್ನ ಇಚ್ಛೆಯಲ್ಲಿ ಹೆಸರಿಸಿದನು. ಅವನು ಅವರನ್ನು ತುಂಬಾ ಇಷ್ಟಪಡುತ್ತಿದ್ದನು ಮತ್ತು ಅವರು ಕ್ರೀಡೆಗಳಲ್ಲಿ ಭಾಗವಹಿಸಿದಾಗ ಅಥವಾ ಚಹಾಕ್ಕೆ ತಡವಾಗಿ ಹಿಂದಿರುಗಿದಾಗ ಚಿಂತಿತನಾಗಿದ್ದನು.[೧೦]
ಬ್ರೌನ್‌ರವರು ತಮ್ಮ ಎರಡು ಸ್ಕಾಟಿಷ್ ಟೆರಿಯರ್ ನಾಯಿಗಳಾದ ನೆಗಸ್ ಮತ್ತು ಸ್ಟಾಸಿಯನ್ನು ತುಂಬಾ ಇಷ್ಟಪಡುತ್ತಿದ್ದರು ಮತ್ತು ಅವು ಅವರ ಮನೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತವೆ. ೧೯೪೫ ರ ಏಪ್ರಿಲ್ ೨೯ ರಂದು ಬ್ರೌನ್‌ರವರು ಮತ್ತು ಹಿಟ್ಲರ್‌ನ ಆತ್ಮಹತ್ಯೆಗಾಗಿ ಪಡೆದ ಸೈನೈಡ್ ಕ್ಯಾಪ್ಸೂಲ್‌ಗಳಲ್ಲಿ ಒಂದನ್ನು ನಾಯಿಯ ಮೇಲೆ ಪರೀಕ್ಷಿಸಲು ಆದೇಶಿಸಿದಾಗ ಬ್ಲಾಂಡಿಯನ್ನು ಹಿಟ್ಲರನ ಪರಿವಾರವೊಂದು ಕೊಂದಿತು. ನಂತರ, ಬ್ರೌನ್‌ರವರ ನಾಯಿಗಳನ್ನು ಮತ್ತು ಬ್ಲಾಂಡಿಯ ನಾಯಿಮರಿಗಳನ್ನು ಏಪ್ರಿಲ್ ೩೦ ರಂದು ಹಿಟ್ಲರ್‌ನ ನಾಯಿ ನಿರ್ವಹಣೆಗಾರನಾದ ಫ್ರಿಟ್ಜ್ ಟೊರ್ನೊ ಗುಂಡಿಕ್ಕಿ ಕೊಂದನು.
ಮದುವೆ ಮತ್ತು ಆತ್ಮಹತ್ಯೆ
[ಬದಲಾಯಿಸಿ]ಏಪ್ರಿಲ್ ೧೯೪೫ ರ ಆರಂಭದಲ್ಲಿ, ಬ್ರೌನ್‌ರವರು ಮ್ಯೂನಿಕ್‌ನಿಂದ ಬರ್ಲಿನ್‌ಗೆ ಪ್ರಯಾಣಿಸಿ ಫ್ಯೂರೆರ್‌ಬಂಕರ್‌ನಲ್ಲಿ ಹಿಟ್ಲರ್‌ನೊಂದಿಗೆ ಇದ್ದರು. ಕೆಂಪು ಸೇನೆಯು ರಾಜಧಾನಿಯನ್ನು ಮುಚ್ಚಿದ್ದರಿಂದ ಅವರು ಅಲ್ಲಿಂದ ಹೊರಡಲು ನಿರಾಕರಿಸಿದರು. ಏಪ್ರಿಲ್ ೨೮-೨೯ ರ ಮಧ್ಯರಾತ್ರಿಯ ನಂತರ, ಹಿಟ್ಲರ್ ಮತ್ತು ಬ್ರೌನ್‌ರವರು ಬಂಕರ್‌ನಲ್ಲಿ ಒಂದು ಸಣ್ಣ ನಾಗರಿಕ ಸಮಾರಂಭದಲ್ಲಿ ವಿವಾಹವಾದರು. ಈ ಘಟನೆಗೆ ಜೋಸೆಫ್ ಗೀಬೆಲ್ಸ್ ಮತ್ತು ಮಾರ್ಟಿನ್ ಬೋರ್ಮನ್ ಸಾಕ್ಷಿಯಾದರು. ನಂತರ, ಹಿಟ್ಲರ್ ತನ್ನ ಹೊಸ ಹೆಂಡತಿಯೊಂದಿಗೆ ಸಾಧಾರಣ ವಿವಾಹ ಉಪಾಹಾರವನ್ನು ಆಯೋಜಿಸಿದನು. ಬ್ರೌನ್‌ರವರು ಹಿಟ್ಲರ್‌ನನ್ನು ಮದುವೆಯಾದಾಗ, ಅವರ ಕಾನೂನುಬದ್ಧ ಹೆಸರು ಇವಾ ಹಿಟ್ಲರ್ ಎಂದು ಬದಲಾಯಿತು. ಅವರು ತಮ್ಮ ಮದುವೆ ಪ್ರಮಾಣಪತ್ರಕ್ಕೆ ಸಹಿ ಮಾಡಿದಾಗ, ತನ್ನ ಕುಟುಂಬದ ಹೆಸರಿಗೆ ಬಿ ಅಕ್ಷರವನ್ನು ಬರೆದರು. ನಂತರ, ಅದನ್ನು ಹಿಟ್ಲರ್ ಎಂದು ಬದಲಾಯಿಸಿದರು.[೧೧]
ಏಪ್ರಿಲ್ ೩೦, ೧೯೪೫ ರಂದು ಮಧ್ಯಾಹ್ನ ೧:೦೦ ಗಂಟೆಯ ನಂತರ, ಬ್ರೌನ್‌ರವರು ಮತ್ತು ಹಿಟ್ಲರ್, ಸಿಬ್ಬಂದಿ ಮತ್ತು ಆಂತರಿಕ ವೃತ್ತದ ಸದಸ್ಯರಿಗೆ ವಿದಾಯ ಹೇಳಿದರು. ಆ ಮಧ್ಯಾಹ್ನದ ನಂತರ, ಸರಿಸುಮಾರು ಮಧ್ಯಾಹ್ನ ೩:೩೦ಕ್ಕೆ, ಹಲವಾರು ಜನರು ಗುಂಡಿನ ಶಬ್ದವನ್ನು ಕೇಳಿದರು ಎಂದು ವರದಿ ಮಾಡಿದರು. ಕೆಲವು ನಿಮಿಷಗಳ ನಂತರ, ಲಿಂಗೆ, ಹಿಟ್ಲರನ ಎಸ್ಎಸ್ ಸಹಾಯಕ ಒಟ್ಟೊ ಗೊನ್ಶೆಯೊಂದಿಗೆ ಸಣ್ಣ ಅಧ್ಯಯನವನ್ನು ಪ್ರವೇಶಿಸಿ ಒಂದು ಸಣ್ಣ ಸೋಫಾದ ಮೇಲೆ ಹಿಟ್ಲರ್ ಮತ್ತು ಬ್ರೌನ್ ಅವರ ನಿರ್ಜೀವ ದೇಹಗಳನ್ನು ಕಂಡುಕೊಂಡರು. ಬ್ರೌನ್‌ರವರು ಸೈನೈಡ್ ಕ್ಯಾಪ್ಸೂಲ್ ಅನ್ನು ಕಚ್ಚಿದ್ದರು ಮತ್ತು ಹಿಟ್ಲರ್ ತನ್ನ ಪಿಸ್ತೂಲಿನಿಂದ ಬಲ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದನು. ಶವಗಳನ್ನು ಮೆಟ್ಟಿಲುಗಳ ಮೇಲೆ ಮತ್ತು ಬಂಕರ್‌ನ ತುರ್ತು ನಿರ್ಗಮನದ ಮೂಲಕ ರೀಚ್ ಚಾನ್ಸಲೆರಿಯ ಹಿಂದಿನ ಉದ್ಯಾನಕ್ಕೆ ಸಾಗಿಸಲಾಯಿತು. ಕೆಂಪು ಸೇನೆಯು ಉದ್ಯಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಸಿದ ಶೆಲ್ ದಾಳಿಯ ಸಮಯದಲ್ಲಿ ಆ ಮೃತದೇಹಗಳನ್ನು ಸುಟ್ಟುಹಾಕಲಾಯಿತು.
ಮೇ ೧೧ ರ ಹೊತ್ತಿಗೆ, ಹಿಟ್ಲರ್‌ನ ದಂತವೈದ್ಯರ ಸಹಾಯಕರಾದ ಕ್ಯಾಥೆ ಹ್ಯೂಸರ್ಮನ್ ಮತ್ತು ದಂತ ತಂತ್ರಜ್ಞರಾದ ಫ್ರಿಟ್ಜ್ ಎಚ್ಟ್ಮನ್ ದಂತ ಅವಶೇಷಗಳು ಹಿಟ್ಲರ್ ಮತ್ತು ಬ್ರೌನ್‌ರವರಿಗೆ ಸೇರಿದ್ದು ಎಂದು ಗುರುತಿಸಿದ್ದಾರೆ. ಹಲವಾರು ಜನರ ಅವಶೇಷಗಳನ್ನು (ಜೋಸೆಫ್ ಮತ್ತು ಮ್ಯಾಗ್ಡಾ ಗೀಬೆಲ್ಸ್, ಆರು ಗೀಬೆಲ್ಸ್ ಮಕ್ಕಳು, ಜನರಲ್ ಹ್ಯಾನ್ಸ್ ಕ್ರೆಬ್ಸ್ ಮತ್ತು ಹಿಟ್ಲರನ ನಾಯಿಗಳು ಸೇರಿದಂತೆ) ಪದೇ ಪದೇ ಸಮಾಧಿ ಮಾಡಲಾಯಿತು ಮತ್ತು ಹೊರತೆಗೆಯಲಾಯಿತು. ಇದು ೧೯೭೦ ರಲ್ಲಿ, ಅವರ ಅಂತ್ಯಕ್ರಿಯೆಯು ಮೊದಲು ಪೂರ್ವ ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿ ಕೊನೆಗೊಂಡಿತು. ಹಿಟ್ಲರ್ ಮತ್ತು ಬ್ರೌನ್‌ರವರ ಅವಶೇಷಗಳನ್ನು ಸ್ಥಳಾಂತರಿಸಲಾಯಿತು ಮತ್ತು ದಹನ ಮಾಡಲಾಯಿತು ಎಂದು ಆರೋಪಿಸಲಾಗಿದೆ. ಆದರೆ, ಇದು ಹೆಚ್ಚಾಗಿ ಸೋವಿಯತ್ ತಪ್ಪು ಮಾಹಿತಿಯಾಗಿದೆ (ದಂಪತಿಗಳು ತಪ್ಪಿಸಿಕೊಂಡಿರಬಹುದು ಎಂಬ ನಿರೂಪಣೆಯಂತೆ). ಹಲ್ಲಿನ ಅವಶೇಷಗಳನ್ನು ಹೊರತುಪಡಿಸಿ ಹಿಟ್ಲರ್ ಅಥವಾ ಬ್ರೌನ್ ಅವರ ಯಾವುದೇ ದೈಹಿಕ ಅವಶೇಷಗಳು ಸೋವಿಯತ್ ಒಕ್ಕೂಟದಿಂದ ಕಂಡುಬಂದಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಬ್ರೌನ್‌ರವರ ಕುಟುಂಬದ ಉಳಿದವರು ಯುದ್ಧದಿಂದ ಬದುಕುಳಿದರು. ಅವರ ತಾಯಿ, ಫ್ರಾಂಜಿಸ್ಕಾ, ಜನವರಿ ೧೯೭೬ ರಲ್ಲಿ, ೯೧ ನೇ ವಯಸ್ಸಿನಲ್ಲಿ ನಿಧನರಾದರು. ಅವರು ಕೊನೆಯ ದಿನಗಳನ್ನು ಬವೇರಿಯಾದ ರುಹ್ಪೋಲ್ಡಿಂಗ್‌ನಲ್ಲಿರುವ ಹಳೆಯ ತೋಟದ ಮನೆಯಲ್ಲಿ ಕಳೆದರು. ಬ್ರೌನ್‌ರವರ ತಂದೆ ಫ್ರಿಟ್ಜ್ ೧೯೬೪ ರಲ್ಲಿ ನಿಧನರಾದರು.[೧೨] ಗ್ರೆಟಲ್ ೫ ಮೇ ೧೯೪೫ ರಂದು, ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಮಗುವಿಗೆ ಇವಾ ಎಂದು ಹೆಸರಿಟ್ಟಳು. ನಂತರ, ಗ್ರೆಟಲ್ ಕರ್ಟ್ ಬೆರಿಂಗ್ಹಾಫ್ ಎಂಬ ಉದ್ಯಮಿಯನ್ನು ವಿವಾಹವಾದರು. ಆದರೆ, ಅವರು ೧೯೮೭ ರಲ್ಲಿ ನಿಧನರಾದರು. ಬ್ರೌನ್‌ರವರ ಹಿರಿಯ ಸಹೋದರಿಯದ ಇಲ್ಸೆ ಹಿಟ್ಲರ್‌ನ ಆಂತರಿಕ ವಲಯದ ಭಾಗವಾಗಿರಲಿಲ್ಲ. ಅವರು ಎರಡು ಬಾರಿ ವಿವಾಹವಾದರು ಮತ್ತು ೧೯೭೯ ರಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ https://www.historyextra.com/period/second-world-war/eva-braun-life-death-adolf-hitler-mistress-wife-who-was-she-pictures-born-marriage-wedding-holocaust/
- ↑ https://www.goodreads.com/book/show/10750010-eva-braun
- ↑ https://www.washingtonpost.com/history/2020/04/30/hitler-suicide-bunker-eva-braun/
- ↑ "Dom Ewy Braun - jak dotrzeć, jak dojechać". pobierowo.net.pl (in ಪೊಲಿಶ್). Retrieved 2024-04-19.
- ↑ Willa Ewy Braun (in ಪೊಲಿಶ್). Retrieved 2024-04-19 – via tv-polska.eu.
- ↑ https://www.history.com/this-day-in-history/adolf-and-eva-marry
- ↑ https://www.nytimes.com/2011/11/20/books/review/eva-braun-life-with-hitler-by-heike-b-gortemakertranslated-by-damion-searls-book-review.html
- ↑ https://www.britannica.com/biography/Eva-Braun
- ↑ https://www.nationalww2museum.org/war/articles/belle-third-reich-eva-braun
- ↑ https://www.npr.org/sections/thesalt/2017/07/05/534117546/how-eva-brauns-champagne-soaked-fantasies-fueled-a-make-believe-morality
- ↑ https://jacobwilliamwilkins.medium.com/she-was-married-to-hitler-for-two-days-dd6d0647fd7a
- ↑ https://www.jewishvirtuallibrary.org/eva-braun
ಗ್ರಂಥಸೂಚಿ
[ಬದಲಾಯಿಸಿ]- Beevor, Antony (2002). Berlin: The Downfall 1945. Viking Press. ISBN 978-0-670-03041-5.
- Bullock, Alan (1999) [1952]. Hitler: A Study in Tyranny. New York: Konecky & Konecky. ISBN 978-1-56852-036-0.
- Connolly, Kate (14 February 2010). "Nazi loyalist and Adolf Hitler's devoted aide: the true story of Eva Braun". The Observer. Guardian News and Media. Retrieved 5 July 2018.
- Eberle, Henrik; Uhl, Matthias, eds. (2005). The Hitler Book: The Secret Dossier Prepared for Stalin from the Interrogations of Hitler's Personal Aides. New York: Public Affairs. ISBN 978-1-58648-366-1.
- Fest, Joachim (2004). Inside Hitler's Bunker: The Last Days of the Third Reich. New York: Farrar, Straus and Giroux. ISBN 978-0-374-13577-5.
- Görtemaker, Heike B. (2011). Eva Braun: Life with Hitler. New York: Alfred A. Knopf. ISBN 978-0-307-59582-9.
- Guest, Katy (12 March 2006). "The Eva Braun story: Behind every evil man ..." The Independent. London: INM. ISSN 0951-9467. OCLC 185201487. Retrieved 5 July 2018.
- Hoffmann, Heinrich (1955). Hitler was My Friend. London: Burke. OCLC 1486685.
- Joachimsthaler, Anton (1999) [1995]. The Last Days of Hitler: The Legends, The Evidence, The Truth. London: Brockhampton Press. ISBN 978-1-86019-902-8.
- Junge, Traudl (2003). Until the Final Hour: Hitler's Last Secretary. London: Weidenfeld & Nicolson. ISBN 978-0-297-84720-5.
- Kershaw, Ian (2000). Hitler, 1936–1945: Nemesis. New York; London: W. W. Norton & Company. ISBN 978-0-393-32252-1.
- Kershaw, Ian (2008). Hitler: A Biography. New York: W. W. Norton & Company. ISBN 978-0-393-06757-6.
- Knopp, Guido (2003). Hitler's Women. New York: Routledge. ISBN 978-0-415-94730-5.
- Lambert, Angela (2006). The Lost Life of Eva Braun. New York: St. Martin's Press. ISBN 978-0-312-36654-4.
- Linge, Heinz (2009). With Hitler to the End: The Memoir of Hitler's Valet. New York: Frontline–Skyhorse. ISBN 978-1-84832-544-9.
- McNab, Chris (2014). Hitler's Fortresses: German Fortifications and Defences 1939–45. Oxford; New York: Osprey Publishing. ISBN 978-1-78200-828-6.
- Speer, Albert (1971) [1969]. Inside the Third Reich. New York: Avon. ISBN 978-0-380-00071-5.
- Vinogradov, V. K. (2005). Hitler's Death: Russia's Last Great Secret from the Files of the KGB. Chaucer Press. ISBN 978-1-904449-13-3.
ಮತ್ತಷ್ಟು ಓದಿ
[ಬದಲಾಯಿಸಿ]- Alexander, Alex (2005). In De Ban Van Hitler: Maria Reiter, Geli Raubal, Unity Mitford, Eva Braun (in ಡಚ್). Rijswijk: Elmar. ISBN 978-90-389-1547-0.
- Gun, Nerin E. (1968). Eva Braun: Hitler's Mistress. New York: Meredith Press. OCLC 712347.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Newspaper clippings about ಇವಾ ಬ್ರೌನ್ in the 20th Century Press Archives of the ZBW
- Private Motion Pictures of Adolf Hitler and Eva Braun in US National Archives Catalog