ವಿಷಯಕ್ಕೆ ಹೋಗು

ದಿನಚರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನ್ ಫ಼್ರ್ಯಾಂಕ್‍ಳ ಮೂಲ ದಿನಚರಿಯ ಪ್ರತಿ, ಬರ್ಲಿನ್‍ನಲ್ಲಿ

ದಿನಚರಿಯು (ದಿನಚರಿ ಪುಸ್ತಕ) ದಿನಾಂಕವನ್ನು ಆಧರಿಸಿ ಕ್ರಮವಾಗಿರಿಸಿದ ಪ್ರತ್ಯೇಕವಾದ ನಮೂದುಗಳನ್ನು ಹೊಂದಿರುವ (ಮೂಲತಃ ಕೈಬರಹದ ಶೈಲಿಯಲ್ಲಿರುವ) ದಾಖಲೆ. ಇದು ಒಂದು ದಿನ ಅಥವಾ ಇತರ ಸಮಯದ ಅವಧಿಯಲ್ಲಿ ಏನು ನಡೆಯಿತು ಎಂಬುದನ್ನು ವರದಿ ಮಾಡುತ್ತದೆ. ವೈಯಕ್ತಿಕ ದಿನಚರಿಯು ಬರಹಗಾರನ ನೇರ ಅನುಭವದ ಹೊರಗಿನ ಪ್ರಸ್ತುತ ಘಟನೆಗಳ ಮೇಲಿನ ಟಿಪ್ಪಣಿಗಳನ್ನು ಹೊರತುಪಡಿಸಿ, ಒಬ್ಬ ವ್ಯಕ್ತಿಯ ಅನುಭವಗಳು, ಯೋಚನೆಗಳು, ಮತ್ತು/ಅಥವಾ ಅನಿಸಿಕೆಗಳನ್ನು ಒಳಗೊಳ್ಳಬಹುದು. ದಿನಚರಿ ಇಡುವವನನ್ನು ದಿನಚರಿಗಾರನೆಂದು ಕರೆಯಲಾಗುತ್ತದೆ. ಸಾಂಸ್ಥಿಕ ಉದ್ದೇಶಗಳಿಗಾಗಿ ಆರಂಭಿಸಲಾದ ದಿನಚರಿಗಳು ಮಾನವ ನಾಗರೀಕತೆಯ ಅನೇಕ ಅಂಶಗಳಲ್ಲಿ ಪಾತ್ರವನ್ನು ವಹಿಸುತ್ತವೆ, ಉದಾಹರಣೆಗೆ ಸರ್ಕಾರಿ ದಾಖಲೆಗಳು (ಉದಾ. ಹ್ಯಾನ್ಸಾರ್ಡ್), ವ್ಯವಹಾರ ಖಾತೆ ಪುಸ್ತಕಗಳು, ಮತ್ತು ಸೇನಾ ದಾಖಲೆಗಳು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ದಿನಚರಿ&oldid=1055902" ಇಂದ ಪಡೆಯಲ್ಪಟ್ಟಿದೆ