ನ್ಯುರೆಂಬರ್ಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನ್ಯುರೆಂಬರ್ಗ್ - ಜರ್ಮನ್ ಭಾಷೆಯಲ್ಲಿ ನ್ಯುರ್ನ್‍ಬರ್ಗ್. ಪಶ್ಚಿಮ ಜರ್ಮನಿಯ ಬವೇರಿಯದಲ್ಲಿರುವ ಒಂದು ವಾಣಿಜ್ಯ ಹಾಗೂ ಕೈಗಾರಿಕಾ ನಗರ ಮ್ಯೂನಿಕ್‍ನ ಉತ್ತರ-ವಾಯುವ್ಯಕ್ಕೆ 147 ಕಿಮೀ ದೂರದಲ್ಲಿ ಪೆಗ್ನಿಟ್ಝ್ ನದಿಯ ದಂಡೆಯ ಮೇಲೆ ಇದೆ. ಜನಸಂಖ್ಯೆ 4,74,199 (1969 ಅಂ).

ಇತಿಹಾಸ[ಬದಲಾಯಿಸಿ]

ಈ ನಗರ 11ನೆಯ ಶತಮಾನದಲ್ಲಿ ಸ್ಥಾಪಿತವಾಯಿತು. 1219ರಲ್ಲಿ ಇದು ಸ್ವತಂತ್ರ ನಗರವಾಯಿತು. ಜರ್ಮನಿಯ ಅತ್ಯಂತ ಶ್ರೀಮಂತ ನಗರಗಳ ಪೈಕಿ ಇದೂ ಒಂದಾಗಿತ್ತು.; 16ನೆಯ ಶತಮಾನದಲ್ಲಿ ಇದು ಜರ್ಮನ್ ಸಂಸ್ಕøತಿಯ ಕೇಂದ್ರವಾಗಿತ್ತು. 1806ರಲ್ಲಿ ಬವೇರಿಯಕ್ಕೆ ಸೇರಿತು. 1933ರ ಅನಂತರ ಹಿಟ್ಲರನ ರಾಷ್ಟ್ರೀಯ ಸಮಾಜವಾದಿ ಪಕ್ಷದ ವಾರ್ಷಿಕ ಸಮ್ಮೇಳನ ಇಲ್ಲಿ ಸೇರುತಿತ್ತು. ಎರಡನೆಯ ಮಹಾಯುದ್ಧದ ಬಾಂಬು ದಾಳಿಯಿಂದ ಈ ನಗರದ ಹಲವು ಭಾಗಗಳು ನಾಶವಾದುವು. 1945ರ ಏಪ್ರಿಲ್ 21ರಂದು ಅಮೆರಿಕನರು ಇದನ್ನು ಆಕ್ರಮಿಸಿಕೊಂಡರು. 1945-46ರಲ್ಲಿ ಜರ್ಮನ್ ಯುದ್ಧಾಪರಾಧಿಗಳ ವಿಚಾರಣೆಯನ್ನು ಇಲ್ಲಿ ನೆಡಸಲಾಯಿತು.

ಆಕರ್ಷಣೆಗಳು[ಬದಲಾಯಿಸಿ]

ಇಲ್ಲಿ 11ನೆಯ ಶತಮಾನದ ಗೋಡೆಗಳು ಮತ್ತು ಅವುಗಳ ಹೆಬ್ಬಾಗಿಲುಗಳು, ಅರಮನೆ, ಪುರಭವನ, 14ನೆಯ ಶತಮಾನದ ಕಾರ್ತೂಸಿಯನ್ ಸಂನ್ಯಾಸಿ ಮಠದಲ್ಲಿ 1852ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಮ್ಯೂಸಿಯಂ, ಸೇಂಟ್ ಸೆಬಾಲ್ಡ್ ಮತ್ತು ಸೇಂಟ್ ಲೊರೆನ್ಸರ ಹಳೆಯ ಚರ್ಚುಗಳು ಇವೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: