ಗುಂಡು
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (August 2009) |
ಬುಲೆಟ್ ಬಂದೂಕಿನಿಂದ, ದೋಲಕ, ಅಥವಾ ಏರ್ ಗನ್ನಿಂದ ಮುಂದೆ ಹೋಗುವ ಒಂದು ಉತ್‌ಕ್ಷೇಪಕ.
ಬುಲೆಟ್‌ಗಳು ಸಮಾನ್ಯವಾಗಿ ಸ್ಪೋಟಕಗಳನ್ನು ಹೊಂದಿರುವುದಿಲ್ಲ[೧], ಆದರೆ ಮಾನವನ ದೇಹಕ್ಕೆ ಡಿಕ್ಕಿ ಹೊಡೆಯುವ ಮತ್ತು ಹಾದುಹೋಗುವ ಮೂಲಕ ಹಾನಿಗೊಳಿಸುತ್ತವೆ. "ಬುಲೆಟ್" ಎಂಬ ಪದವನ್ನು ಕೆಲವೊಮ್ಮೆ ಯುದ್ದಸಾಮಗ್ರಿ, ಅಥವಾ ಬುಲೆಟ್‌ನೊಂದಿಗೆ ಕೇಸ್/ಶೆಲ್, ಪೌಡರ್ ಮತ್ತು ಪ್ರೀಮಿಯರ್‌ನ ಸಮ್ಮಿಶ್ರಣದ ಸಿಡಿಮದ್ದು ಎಂದು ಪರಿಗಣಿಸಲಾಗಿದೆ. ಬುಲೆಟನ್ನು ವಿವರಿಸಲು ಬಳಸುವ ಯುದ್ಧಸಾಮಗ್ರಿ ಅಥವಾ ಸಿಡಿಮದ್ದು ಎಂಬ ಪದವು ತಾಂತ್ರಿಕವಾಗಿ ಸರಿಯಾದುದಲ್ಲ.
ಇತಿಹಾಸ
[ಬದಲಾಯಿಸಿ]ಬುಲೆಟ್ನ ಇತಿಹಾಸವು ಬಂದೂಕಿನದಕ್ಕಿಂತ ಬಹಳ ಹಿಂದಿನದಾಗಿದೆ. ನೈಜವಾಗಿ ಬುಲೆಟ್‌ಗಳು ಬೇಟೆಯಲ್ಲಿ ಕವಣೆಯ ತೂಗುಹಗ್ಗದಿಂದ ಹೊಡೆಯಲು ಬಳಸುವ ಲೋಹದ ಅಥವಾ ಕಲ್ಲಿನ ಚೆಂಡುಗಳಾಗಿವೆ.
ಕಾಲ ಕಳೆದಂತೆ ಬಂದೂಕುಗಳು ಅಭಿವೃದ್ಧಿಯಾದಂತೆ ಇದೇ ವಸ್ತುಗಳನ್ನು ಕೊಳವೆಯ ತುದಿಯಲ್ಲಿ ಗನ್ ಪೌಡರ್‌ನ ಜೊತೆಗೆ ಮುಂಭಾಗದಲ್ಲಿರಿಸಲಾಯಿತು. ಬಂದೂಕುಗಳು 1500 ರಿಂದ 1800ರ ವರೆಗೂ ತಾಂತ್ರಿಕವಾಗಿ ಅಭಿವೃದ್ಧಿಯಾದರೂ ಬುಲೆಟ್‌ಗಳ ಆಕಾರದಲ್ಲಿ ಸಣ್ಣಪುಟ್ಟ ಬದಲಾವಣೆಗಳಾದವು. ಇವು ವೃತ್ತಾಕಾರದ (ಗೋಳಾಕಾರದ) ಸೀಸದ ಚೆಂಡುಗಳಾಗಿಯೇ ಉಳಿದುಕೊಂಡವು. ಗಾತ್ರದಲ್ಲಿ ಮಾತ್ರ ಅಲ್ಪಸ್ವಲ್ಪ ಬದಲಾವಣೆ ಕಂಡುಬಂದಿತು.
ದೊಡ್ಡ ಫಿರಂಗಿ ಮತ್ತು ಮ್ಯಾಚ್‌ಲಾಕ್ ಆರ್ಕ್ವೆಬಸ್‌ಗಳಲ್ಲಿ ಸೀಸದ ಕಾಸ್ಟ್ ಚೆಂಡುಗಳನ್ನು ಉತ್‌ಕ್ಷೇಪಕಗಳಾಗಿ ಬಳಲಾಗುತಿತ್ತು. "ಬುಲೆಟ್" ಎಂಬ ಪದವು ಫ್ರೆಂಚ್‌ನ boulette ಎಂಬ ಸಣ್ಣ ಚೆಂಡು ಎಂಬ ಅರ್ಥವನ್ನು ಕೊಡುವ ಪದದಿಂದ ಬಂದುದಾಗಿದೆ.
ನೈಜವಾದ ಮಸ್ಕೆಟ್ ಬುಲೆಟ್ ನಾಳಕ್ಕಿಂತ ಸಣ್ಣದಾದ ಗೋಳಾಕಾರದ ಸೀಸದ ಚೆಂಡಾಗಿದೆ, ಸಡಿಲವಾಗಿ-ಕೂರಿಸಿರುವ ಪೇಪರ್ ಪಟ್ಟಿಯಿಂದ ಸುತ್ತುವರೆದಿದೆ, ಇದು ಬ್ಯಾರೆಲ್‌ನಲ್ಲಿ ಬುಲೆಟ್ ಪೌಡರ್‌ನ ಮೇಲೆ ಭದ್ರವಾಗಿರಲು ಸಹಾಯ ಮಾಡುತ್ತದೆ. (ಬುಲೆಟ್‌ಗಳು ಪೌಡರ್‌ನ ಮೇಲೆ ಭದ್ರವಾಗಿರದಿದ್ದರೆ ಹಾರಿಸಿದ ನಂತರ ಬ್ಯಾರಲ್ ಸ್ಫೋಟಗೊಳ್ಳುವ ಸಾಧ್ಯತೆಯಿರುತ್ತದೆ, ಈ ಸ್ಥಿತಿಯನ್ನು ಶಾರ್ಟ್ ಸ್ಟಾರ್ಟ್ ಎಂದು ಕರೆಯುತ್ತೇವೆ.)
ಹಳೆಯ ಮೃದು-ನಾಳ ಬ್ರೌನ್‌ಬೆಸ್ ಮತ್ತು ಅದೇ ತರದ ಸೈನ್ಯದ ಮಸ್ಕೆಟ್‌ಗಳಿಂದ ಮಸ್ಕೆಟ್‌ಗಳನ್ನು ಬಂದೂಕಿಗೆ ತುಂಬಿಸುವುದು ಸುಲಭವಾಯಿತು. ನೈಜವಾದ (muzzle-loading rifle) ಕೈಯಿಂದ ತುಂಬಿಸಬಹುದಾದ ರೈಫಲ್, ಇನ್ನೊಂದೆಡೆ ಬುಲೆಟ್‌ಗಳನ್ನು ತುಂಬಿಸಲು , ಅತ್ಯಂತ ಹತ್ತಿರದಲ್ಲಿ ಸೇರಿಸಿರುವ ಚೆಂಡನ್ನು ರೈಫಲಿಂಗ್ ಗ್ರೂವ್‌ಗಳಿಂದ ತೆಗೆಯಲು ಅತ್ಯಂತ ಕಷ್ಟವಾಗುತ್ತದೆ, ವಿಶೇಷವಾಗಿ ಮೊದಲಿನ ಹಾರಿಸುವಿಕೆಗಳಿಂದ ಫೌಲ್ ಮಡಲಾದ ಬೋರ್‌ನ ಬ್ಯಾರೆಲ್‌ಗಳು.
ಈ ಕಾರಣಕ್ಕಾಗಿಯೇ ಮೊದಲಿನ ರೈಫಲ್‌ಗಳನ್ನು ಸೈನ್ಯದ ಉದ್ಧೇಶಕ್ಕಾಗಿ ಬಳಸುತ್ತಿರಲಿಲ್ಲ.
ಹತ್ತೊಂಬತ್ತನೇ ಶತಮಾನದ ಮೊದಲಾರ್ಧದಲ್ಲಿ ಬುಲೆಟ್‌ನ ಆಕಾರ ಮತ್ತು ಕಾರ್ಯ ವೈಖರಿಯಲ್ಲಿ ಗಮನಾರ್ಹ ಬೆಳವಣಿಗೆಗಳು ಕಂಡುಬಂದವು. 1826ರಲ್ಲಿ ಡೆಲ್ವಿಗ್ನೆ, ಫ್ರೆಂಚ್ ಪದಾತಿಸೈನ್ಯದ ಅಧಿಕಾರಿ. ಒರಟಾದ ಭುಜಗಳನ್ನು ಹೊಂದಿರುವ ಬಂದೂಕಿನ ತೂತಿನ ಹಿಂಭಾಗವನ್ನು ಕಂಡುಹಿಡಿದನು, ಇದರಲ್ಲಿ ಗೋಳಾಕಾರದ ಬುಲೆಟ್‌ಗಳನ್ನು ನಳಿಕೆಯ ತುದಿಯನ್ನು ಮುಟ್ಟುವವರೆಗೆ ತುರುಕುವ ವಿಧಾನವನ್ನು ಅಭಿವೃದ್ಧಿಗೊಳಿಸಿದನು. ಡೆಲ್ವಿಗ್ನೆಯ ವಿಧಾನವು ಬುಲೆಟ್ ಅನ್ನು ವಿಕಾರಗೊಳಿಸಿದವು ಹಾಗಿದ್ದಾಗ್ಯೂ ಸರಿಯಾದುದಾಗಿರಲಿಲ್ಲ.
ಮೊನೆಯುಳ್ಳ (ತೀಕ್ಷ್ಣವಾದ) ಬುಲೆಟ್‌ಗಳು
[ಬದಲಾಯಿಸಿ]ಮೊದಲ ಮೊನೆಯುಳ್ಳ ಅಥವಾ "ಗೋಳಾಕಾರದ" ಬುಲೆಟ್‌ಗಳು 1823ರಲ್ಲಿ ಬ್ರಿಟೀಷ್ ಆರ್ಮಿಯ ಕ್ಯಾಪ್ಟನ್ ಜಾನ್ ನರ್ಟನ್‌ನ ವಿನ್ಯಾಸಗಳಾಗಿವೆ. ನರ್ಟನ್‌ನ ಬುಲೆಟ್ ಕೆಳಭಾಗದಲ್ಲಿ ಟೊಳ್ಳಾಗಿದ್ದು ನಂತರ ಅಂಚು ಒತ್ತಡದಿಂದ ವಿಸ್ತಾರಗೊಳ್ಳುತ್ತದೆ, ಇದು ಕೊಳವೆಯ ರೈಫ್ಲಿಂಗ್‌ನಲ್ಲಿ ಭಾಗವಹಿಸುತ್ತದೆ. ಗೋಳಾಕಾರದ ಬುಲೆಟ್‌ಗಳನ್ನು ಕಳೆದ 300 ವರ್ಷಗಳಿಂದ ಬಳಸಲಾಗುತ್ತಿದೆ ಎಂಬ ಕಾರಣಕ್ಕಾಗಿ ಬ್ರಿಟಿಷ್ ಬೋರ್ಡ್ ಆಫ್ ಆರ್ಡೆನ್ಸ್ ಇದನ್ನು ತಿರಸ್ಕರಿಸಿತು.[ಸೂಕ್ತ ಉಲ್ಲೇಖನ ಬೇಕು]
1836ರಲ್ಲಿ ಇಂಗ್ಲೀಷಿನ ಪ್ರಸಿದ್ಧ ಬಂದೂಕು ತಯಾರಿಸುವವನಾದ ವಿಲಿಯಮ್ ಗ್ರೀನರ್ ಗ್ರೀನರ್ ಬುಲೆಟನ್ನು ಕಂಡುಹಿಡಿದನು. ಇದು ನರ್ಟನ್ನನ ಬುಲೆಟ್‌ನ ರೀತಿಯದೇ ಆಗಿದ್ದು, ಕೊಳವೆಯಾಕಾರದ ಕೆಳಭಾಗದ ಬದಲಿಗೆ ಮರದ ಪ್ಲಗ್‌ನ್ನು ಅಳವಡಿಸಲಾಗಿದೆ. ಇದು ಖಚಿತವಾಗಿ ಬುಲೆಟ್‌ನ ಕೆಳಭಾಗವನ್ನು ವಿಸ್ತಾರಗೊಳ್ಳಲು ಮತ್ತು ಶೂಟ್ ಮಾಡುವುದನ್ನು ಸಮರ್ಪಕವಾಗಿಸಲು ಇದು ಸಹಾಯ ಮಾಡುತ್ತದೆ. ಪರೀಕ್ಷೆಗಳಿಂದ ಗ್ರೀನರ್‌ನ ಬುಲೆಟ್ ಅತ್ಯಂತ ಪರಿಣಾಮಕಾರಿಯಾದುದೆಂದರೂ ಕೂಡ ಸೈನ್ಯದಲ್ಲಿ ಬಳಸಲು ತಿರಸ್ಕರಿಸಲಾಯಿತು. ಇದರ ಎರಡು ಭಾಗಗಳನ್ನು ತಯಾರಿಸುವುದು ಕ್ಲಿಷ್ಟಕರವೆಂದು ಇದನ್ನು ತಿರಸ್ಕರಿಸಲಾಯಿತು.
1847ರಲ್ಲಿ ಮೊದಲು ಮೃದುವಾದ ಸೀಸದ ಮಿನೆ ಚೆಂಡನ್ನು ಫ್ರೆಂಚ್ ಆರ್ಮಿಯ ಕ್ಯಾಪ್ಟನ್ ಕ್ಲೌಡ್ ಎಟಿನ್ನೆ ಮಿನೆ(1814? – 1879) ಪರಿಚಯಿಸಿದನು. ಇದು ಗ್ರೀನರ್‌ನ ಬುಲೆಟನ್ನು ಹೋಲುತ್ತಿತ್ತು. ಮಿನೆ ವಿನ್ಯಾಸಗೊಳಿಸಿದ ಬುಲೆಟ್ ಶಂಕುವಿನಾಕೃತಿಯದಾಗಿದ್ದು ಹಿಂಭಾಗದಲ್ಲಿ ಟೊಳ್ಳಾದ ಕೊಳವೆಯಾಕೃತಿಯನ್ನು ಹೊಂದಿದೆ, ಇದನ್ನು ಮರದ ಪ್ಲಗ್‌ನ ಬದಲಿಗೆ ಕಬ್ಬಿಣದ ಸಣ್ಣ ಮುಚ್ಚುಳ(ಕ್ಯಾಪ್)ವನ್ನು ಹೊಂದಿದೆ. ಬುಲೆಟನ್ನು ಹಾರಿಸಿದಾಗ ಅದರ ಟೊಳ್ಳಾದ ಕೆಳಭಾಗದ ಮೂಲಕ ಕಬ್ಬಿಣದ ಮುಚ್ಚುಳವು ಬಲವನ್ನು ಪಡೆದುಕೊಂಡು, ಬುಲೆಟ್‌ನಿಂದ ಗ್ರಿಪ್‌ನೆಡೆಗೆ ವಿಸ್ತರಿಸುತ್ತಾ ಮತ್ತು ರೈಫಲಿಂಗ್ ಮಾಡುತ್ತಾ ಸಾಗುತ್ತದೆ. 1855ರಲ್ಲಿ ಬ್ರಿಟೀಷರು ಮಿನೆ ಬಾಲನ್ನು ಎನ್‌ಫೀಲ್ಡ್ ಬಂದೂಕುಗಳಿಗೆ ಅಳವಡಿಸಿದರು.
ಮಿನೆ ಬಾಲನ್ನು ಹೇರಳವಾಗಿ ಅಮೇರಿಕನ್ ಸಿವಿಲ್ ವಾರ್‌ನಲ್ಲಿ ಬಳಸಲಾಯಿತು. ಸುಮಾರು 90% ಯುದ್ಧರಂಗದ ಹಾನಿಯು ಬಂದೂಕಿನ ಮಿನೆ ಬಾಲ್‌ಗಳಿಂದಾಯಿತು.
1854ರಿಂದ 1857ರನಡುವೆ ಸರ್ ಜೊಸೆಫ್ ವಿಟ್‌ವರ್ತ್ ಅನೇಕ ಬಂದೂಕಿನ ಪ್ರಯೋಗಗಳನ್ನು ಕೈಗೊಂಡನು, ಚಿಕ್ಕ ಬೋರ್‌ಗಳ, ವಿಶೇಷವಾಗಿ ಉದ್ದವಾದ ಬುಲೆಟ್‌ಗಳ ಉಪಯೋಗಗಳನ್ನು ಮತ್ತು ಇನ್ನಿತರ ವಿಷಯಗಳನ್ನು ಸಾಧಿಸಿದನು.ವೈಟ್‌ವರ್ತ್ ಬುಲೆಟ್‌ನ್ನು ಬಂದೂಕಿನ ಕೊಳವೆಗಳಿಗೆ ಯಾಂತ್ರಿಕವಾಗಿ ಅಳವಡಿಸುವಂತೆ ಮಾಡಲಾಗಿತ್ತು. ವಿಟ್‌ವರ್ತ್ ಬಂದೂಕನ್ನು ಸರ್ಕಾರವು ಎಂದಿಗೂ ಅಳವಡಿಸಿಕೊಳ್ಳಲಿಲ್ಲ, ಆದಾಗ್ಯೂ ಮೆಟ್‌ಫೊರ್ಡ್‌ನಿಂದ ನಿಧಾನವಾಗಿ ಆಕ್ರಮಿಸಲ್ಪಟ್ಟಾಗ ಇದನ್ನು 1857ರಿಂದ 1866ರಲ್ಲಿ ಆಟದ ಉದ್ಧೇಶಕ್ಕಾಗಿ ಮತ್ತು ಗುರಿಯನ್ನು ಅಭ್ಯಾಸ ಮಾಡಲು ಬಳಸಲಾಯಿತು.
1862ರ ನಂತರ ಡಬ್ಲು ಇ ಮೆಟ್‌ಫೊರ್ಡ್ ಬುಲೆಟ್ ಮತ್ತು ಬಂದೂಕುಗಳ ಮೇಲೆ ಸರಣಿ ಪ್ರಯೋಗಗಳನ್ನು ಕೈಗೊಂಡನು, ಮತ್ತು ಮುಖ್ಯವಾದ ಹಗುರವಾದ ಬಂದೂಕು ಮತ್ತು ಹೆಚ್ಚಿದ ಸುರುಳಿ ಮತ್ತು ಗಟ್ಟಿಯಾದ ಬುಲೆಟ್‌ನೊಳಗೊಂಡ ವ್ಯವಸ್ಥೆಯನ್ನು ಕಂಡುಹಿಡಿದನು. ಇದರ ಪರಿಣಾವಮವಾಗಿ 1888ರ ಡಿಸೆಂಬರ್‌ನಲ್ಲಿ ಕೊನೆಗೂ ಲೀ-ಮೆಟ್‌ಫೊರ್ಡ್ ಸ್ಮಾಲ್-ಬೊರ್ (0.303 [disambiguation needed]", 7.70 ಮಿಮಿ) ಬಂದೂಕು, ಮಾರ್ಕ್ I, ( ಬಲಭಾಗದ ಚಿತ್ರದಲ್ಲಿರುವಂತೆ ಕ್ಯಾಟ್ರಿಡ್ಜ್) ಬ್ರಿಟೀಷ್ ಆರ್ಮಿಯಿಂದ ಅಂಗೀಕರಿಸಲ್ಪಟ್ಟಿತು. ಲೀ-ಮೆಟ್‌ಫೋರ್ಡ್ ಲೀ-ಎನ್‌ಫೀಲ್ಡ್‌ನ ಪೂರ್ವಾಧಿಕಾರಿಯಗಿದ್ದನು.
ಆಧುನಿಕ ಬುಲೆಟ್
[ಬದಲಾಯಿಸಿ]1882ರಲ್ಲಿ ಬುಲೆಟ್‌ನ ಇತಿಹಾಸದಲ್ಲಿ ಮಹತ್ತರ ಬದಲಾವಣೆಯಾಯಿತು, ಥುನ್‌ನಲ್ಲಿರುವ ಸ್ವಿಸ್ ಆರ್ಮಿಯ ಪ್ರಯೋಗಾಲಯದ ನಿರ್ದೇಶಕ ಮೇಜರ್ ಎಡ್ವರ್ಡ್ ರುಬಿನ್ ತಾಮ್ರದ ಜಾಕೆಟನ್ನೊಳಗೊಂಡ- ತಾಮ್ರದ ಜಾಕೇಟ್‌ನೊಳಗೆ ಸೀಸದ ಒಳಭಾಗವನ್ನೊಳಗೊಂಡ ಒಂದು ಉದ್ದನೆಯ ಬುಲೆಟ್‌ನ್ನು ಕಂಡುಹಿಡಿದನು. ಇದೂ ಸಹ ಚಿಕ್ಕ ನಾಳ(7.5ಮಿಮಿ ಮತ್ತು 8ಮಿಮಿ) ಮತ್ತು ಅಗ್ರಗಾಮಿಯಾದ 8ಮಿಮಿಯ "ಲೆಬಲ್ ಬುಲೆಟ್"ನ್ನು ಹೊಗೆರಹಿತ ಪುಡಿಯಾದ ಅಮೋನಿಯಮ್‌ನ್ನು Mle 1886 ಲೇಬಲ್ ಬಂದೂಕಿನಲ್ಲಿ ಅಳವಡಿಸಲಾಯಿತು.
ಸೀಸದ ಬುಲೆಟ್‌ನ ಹೊರಮೈ, ಬಂದೂಕಿನಿಂದ ಹಾರಿಸಿದಾಗ ವೇಗದಿಂದಾಗಿ ಬಿಸಿಯಾದ ಅನಿಲಗಳ ಮತ್ತು ಬೊರ್‌ನೊಂದಿಗಿನ ಘರ್ಷಣೆಯಿಂದಾಗಿ ಕರಗುತ್ತವೆ. ಎಕೆಂದರೆ ತಾಮ್ರವು ಅತ್ಯಂತ ಹೆಚ್ಚಿನ ಕರಗುವ ಬಿಂದುವನ್ನು ಹೊಂದಿದೆ, ಮತ್ತು ಹೆಚ್ಚಿನ ನಿರ್ದಿಷ್ಟ ತಾಪ ಸಾಮರ್ಥ್ಯ ಮತ್ತು ಹಚ್ಚಿನ ವೇಗದಲ್ಲಿ ಚಲಿಸುವ ಹೊರಕವಚವಿರುವ ತಾಮ್ರದ ಜಾಕೆಟಿರುವ ಬುಲೆಟ್‌ಗಳನ್ನು ಹೊಂದಿದೆ.
ಯುರೋಪಿನ ಆಕಾಶಕಾಯ ವಿಜ್ಞಾನಗಳ ಅಭಿವೃದ್ಧಿಯು ಪಾಯಿಂಟೆಡ್ ಸ್ಪಿಟ್ಜರ್ ಬುಲೆಟ್‌ನ ಉಗಮಕ್ಕೆ ಕಾರಣವಾಯಿತು. ಇಪ್ಪತ್ತನೇ ಶತಮಾನದ ಆರಂಭದಿಂದ ಹೆಚ್ಚಿನ ಪ್ರಪಂಚದ ಸೇನೆಗಳು ಸ್ಪಿಟ್ಜರ್ ಬುಲೆಟ್‌ಗಳನ್ನು ಉಪಯೋಗಿಸತೊಡಗಿದರು. ಈ ಬುಲೆಟ್‍ಗಳು ತಮ್ಮೊಂದಿಗೆ ಹೆಚ್ಚಿನ ಶಕ್ತಿಯನ್ನು ಹಿಡಿದುಕೊಂಡು ಹೆಚ್ಚಿನ ದೂರದವರೆಗೆ ನಿಖರವಾಗಿ ಸಾಗುತ್ತದೆ.ಸ್ಪಿಟ್ಜರ್ ಬುಲೆಟ್‌ಗಳು ಮಶಿನ್‌ಗನ್‌ಗಳಿಗಿಂತ ಹೆಚ್ಚಿನ ಯುದ್ಧದ ಮಾರಕತೆಯೊಂದಿಗೆ ತಯಾರಿಸಲ್ಪಟ್ಟಿದೆ.
ಆಧುನಿಕ ಸ್ಪಿಟ್ಜರ್ ಬುಲೆಟ್ ಬೋಟ್ ಟೈಲ್ ಆಕೃತಿಯದಾಗಿದ್ದು ಸುಗಮಗೊಳಿಸಿದ ಕೆಳಭಾಗವನ್ನು ಹೊಂದಿತ್ತು. ಗಾಳಿಯು ಹೆಚ್ಚಿನ ವೇಗದಿಂದ ಚಲಿಸಿದಾಗ ಬುಲೆಟ್‌ನ ಕೆಳಭಾಗದಲ್ಲಿ ನಿರ್ವಾತ ಪ್ರದೇಶ ರಚನೆಗೊಳ್ಳುವುದರಿಂದ ಅದರ ಚಲನೆಯು ನಿಧಾನಗೊಳ್ಳುತ್ತದೆ.
ಸುಗಮಗೊಳಿಸಿದ ಬೋಟ್ ಟೈಲ್ ವಿನ್ಯಾಸವು ಎಳೆತವನ್ನು ಕಡಿಮೆ ಮಾಡುವುದರ ಮೂಲಕ ಗಾಳಿಯನ್ನು ಬುಲೆಟ್‌ನ ಚೂಪಾದ ಮುಂಭಾಗದ ಹೊರಮೈ ಕಡೆಗೆ ಚಲಿಸುವಂತೆ ಮಾಡುತ್ತದೆ. ಆಕಾಶಕಾಯ ವಿಜ್ಞಾನಗಳ ಪರಿಣಾಮದಿಂದ ಈಗಿರುವ ಅತ್ಯುತ್ತಮ ಆಕೃತಿಯ ರೈಫಲ್ ತಂತ್ರಜ್ಞಾನವನ್ನು ಕಾಣಬಹುದು. ಮೊದಲ ಸ್ಪಿಟ್ಜರ್ ಮತ್ತು ಬೋಟ್-ಟೈಲ್ ಬುಲೆಟ್‌ನ ಜೋಡಿಯನ್ನು ಅದರ ಸಂಶೋಧಕನ ಹೆಸರಿನಿಂದ ಬಾಲ್ "ಡಿ"(Balle "D" ) ಎಂದು ಹೆಸರಿಸಲಾಯಿತು,(ಲೆಫ್ಟಿನೆಂಟ್ ಕೊಲೊನೆಲ್ ಡೆಸೆಲೆಕ್ಸ್ )1901ರಲ್ಲಿ ಈತನು ಫ್ರೆಂಚ್ ಲೇಬಲ್ ಮಾಡೆಲ್ 1886 ರೈಫಲ್‌ನ್ನು ಸೈನ್ಯದ ಯುದ್ಧಸಾಮಾಗ್ರಿಯಾಗಿ ಪರಿಚಯಿಸಿದನು.
ವಿನ್ಯಾಸ
[ಬದಲಾಯಿಸಿ]ಬುಲೆಟ್(ಗುಂಡು) ವಿನ್ಯಾಸವು ಎರಡು ಪ್ರಾಥಮಿಕ ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತದೆ. ಅವು ಮೊದಲು ಬಂದೂಕಿನ ಕೊಳವೆಯನ್ನು ಮುಚ್ಚುತ್ತದೆ(ಸೀಲ್). ಭದ್ರವಾದ ಮುಚ್ಚಿಗೆಯನ್ನು ಮಾಡದಿದ್ದರೆ, ಗುಂಡು ಹೋಗುವ ಮೊದಲು ನೋದಕ(ಪ್ರೊಪಲ್ಲೆಂಟ್)ದಲ್ಲಿನ ಅನಿಲವು ಸೋರಿಕೆಯಾಗಿ ಅದರ ದಕ್ಷತೆಯನ್ನು ಕಡಿಮೆಮಾಡುತ್ತದೆ. ಅಲ್ಲದೆ ಗುಂಡು ಬಂದೂಕಿನ ಕೊಳವೆಗೆ ಹಾನಿಮಾಡದೆ ಕುಳಿತುಕೊಳ್ಳಬೇಕು. ಹೆಚ್ಚಿನ ಘರ್ಷಣೆ ಮಾಡದೆ ಮುಚ್ಚಿಗೆಯನ್ನು ಒದಗಿಸುವ ಹಾಗೆ ಗುಂಡಿನ ಮೇಲ್ಮೈ ಇರಬೇಕು. ಗುಂಡು ಮತ್ತು ಕೊಳವೆಯ ನಡುವಿನ ಈ ಪ್ರಕ್ರಿಯೆಯನ್ನು ಆಂತರಿಕ ಕ್ಷಿಪಣಿಶಾಸ್ತ್ರ(ಇಂಟರ್ನಲ್ ಬಲಿಸ್ಟಿಕ್ಸ್) ಎನ್ನಲಾಗುತ್ತದೆ. ಗುಂಡಿನ ಮೇಲ್ಮೈಯಲ್ಲಿನ ದೋಷವು ಗುಂಡುಹಾರಿಸುವುದರ ನಿಖರತೆಯ ಮೇಲೆ ಪರಿಣಾಮ ಬೀರುವುದರಿಂದ ಒಳ್ಳೆಯ ಗುಣಮಟ್ಟದ ಗುಂಡನ್ನು ಉತ್ಪಾದಿಸಬೇಕು.
ಗುಂಡು ಒಮ್ಮೆ ಬಂದೂಕಿನ ಕೊಳವೆಯಿಂದ ಹೊರಟ ನಂತರದ ಭೌತಿಕ ಪರಿಣಾಮವನ್ನು ಬಾಹ್ಯ ಕ್ಷಿಪಣಿಶಾಸ್ತ್ರ ಎನ್ನಲಾಗುತ್ತದೆ. ವಿಮಾನದಲ್ಲಿ, ಆಕಾಶಕಾಯ ವಿಜ್ಞಾನಗಳಿಂದ ಗಾಳಿಯಲ್ಲಿ ಗುಂಡಿನ ಚಲನೆಯ ಮೇಲೆ ಪರಿಣಾಮ ಬೀರುವ ಪ್ರಾಥಮಿಕ ಅಂಶಗಳೆಂದರೆ, ಗುಂಡಿನ ಆಕಾರ ಮತ್ತು ಬಂದೂಕಿನ ಕೊಳವೆಯಲ್ಲಿನ ಸುರುಳಿಯಾಕಾರದ ವಿನ್ಯಾಸವು ಒದಗಿಸಿದ ಪರಿಭ್ರಮಣೆ. ಈ ಸುತ್ತುವ ಶಕ್ತಿಯು ಗುಂಡಿನ ಪರಿಭ್ರಮಣೆ ಹಾಗೂ ಗಾಳಿಯಲ್ಲಿನ ವೇಗವನ್ನು ಸ್ಥಿರಗೊಳಿಸುತ್ತದೆ. ಗುಂಡು ತಿರುಗಿದಾಗ ಗುಂಡಿನ ಅಸಮ ಪಾರ್ಶ್ವದ ಹೆಚ್ಚಿನ ಭಾಗ ತೆಗೆಯಲ್ಪಡುತ್ತದೆ.
ನಯವಾದ ಕೊಳವೆಯು ಮತ್ತು ವೃತ್ತಾಕಾರ ಪ್ರಶಸ್ತವಾಗಿದ್ದು, ಇದರಿಂದ ಗುಂಡಿನ ದಿಕ್ಕು ಬದಲಾದರೂ ಅದು ಒಂದೇ ದಿಕ್ಕನ್ನು ತೋರಿಸುತ್ತದೆ. ಈ ಅಸ್ಥಿರವಾದ ಗುಂಡುಗಳು ಯದ್ವಾತದ್ವಾ ಹೋಗುತ್ತವೆ ಹಾಗೂ ನಿಖರತೆಯು ಮಧ್ಯಮ ಮಟ್ಟದಲ್ಲಿರುತ್ತದೆ. ಹಾಗಿದ್ದರೂ, ಶತಮಾನಗಳಿಂದ ಆಕಾಶಕಾಯ ವಿಜ್ಞಾನ ಆಕಾರವನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ಸಾಮಾನ್ಯವಾಗಿ, ಗುಂಡಿನ ಆಕಾರವು ವಾಯುಬಲಶಾಸ್ತ್ರ, ಆಂತರಿಕ ಕ್ಷಿಪಣಿ ಶಾಸ್ತ್ರ ಹಾಗೂ ಟರ್ಮಿನಲ್ ಕ್ಷಪಣಿಶಾಸ್ತ್ರವನ್ನು ಅವಲಂಬಿಸಿದೆ. ಸ್ಥಿರತೆಯ ಇನ್ನೊಂದು ವಿಧಾನವೆಂದರೆ, ಭಾರ ಇರುವ ಬುಲೆಟ್‌ನ ಭಾಗವು ಮಿನಿ ಬಾಲ್‌ನಲ್ಲಿ ಇರುವಂತೆ ಅಥವಾ ಶಟ್ಲ್‌ಕಾಕ್‌ನಲ್ಲಿರುವಂತೆ ಒಂದುಕಡೆಗೆ ಶೇಖರವಾಗಿರುವಂತೆ ನೋಡಿಕೊಳ್ಳಬಹುದಾಗಿದೆ. ಇದು ಗುಂಡು ವಾಯುಬಲಶಾಸ್ತ್ರದಿಂದ ಮುಂದೆ ಹಾರಲು ಅನುವು ಮಾಡಿಕೊಡುತ್ತದೆ.
ಗುಂಡು ವಸ್ತುವಿಗೆ ಬಡಿದಾಗ ಉಂಟಾಗುವ ಪರಿಣಾಮವು ಗುಂಡಿನ ವಿನ್ಯಾಸವನ್ನು ಯಾವ ರೀತಿಯಲ್ಲಿ ಅವಲಂಬಿಸಿದೆ ಎನ್ನುವುದನ್ನು ತಿಳಿಯಲು ಟರ್ಮಿನಲ್ ಬಲಿಸ್ಟಿಕ್ಸ್ ಮತ್ತು/ಅಥವಾ ತಡೆಯುವ ಶಕ್ತಿ(ಸ್ಟಾಪಿಂಗ್ ಪವರ್)ಯನ್ನು ನೋಡಿ. ಗುಂಡು ಬಡಿತದ ಪರಿಣಾಮವನ್ನು, ಗುರಿಯಾಗಿಸಲ್ಪಟ್ಟಿದ್ದ ವಸ್ತುವಿನ ಸಂಯುಕ್ತ ಮತ್ತು ಸಾಂದ್ರತೆ, ತಗುಲಿದ ಕೋನ ಹಾಗೂ ಗುಂಡಿನ ವೇಗ ಮತ್ತು ಭೌತಿಕ ಲಕ್ಷಣಗಳಿಂದ ಕಂಡುಹಿಡಿಯಬಹುದಾಗಿದೆ. ಗುಂಡನ್ನು ಸಾಮಾನ್ಯವಾಗಿ, ನುಸುಳಿ ಹೋಗುವಂತೆ, ವಿರೂಪ ಮಾಡುವಂತೆ ಮತ್ತು/ಅಥವಾ ಬೇರೆ ಬೇರೆಯಾಗಿ ತುಂಡರಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.
ನೀಡಿರುವ ವಸ್ತು ಹಾಗೂ ಗುಂಡಿನಲ್ಲಿ , ಹೊಡೆತದ ವೇಗವು ಪರಿಣಾಮವನ್ನು ನಿರ್ಧರಿಸುವ ಪ್ರಾಥಮಿಕ ಅಂಶವಾಗಿದೆ.
ಗುಂಡಿನ ಆಕಾರವು ಹಲವು ರೀತಿಯಿದ್ದು ಭಿನ್ನವಾಗಿರುತ್ತದೆ. ಗುಂಡುಗಳನ್ನು ತುಂಬುವ ಜಾಗದಲ್ಲಿ ಬಳಸಲಾಗುವ ಮ್ಯಾನುವಲ್‌ಗೆ ತಕ್ಕುದಾದ ಗುಂಡುಗಳನ್ನು ಕಾಣಬಹುದಾಗಿದೆ. ಆರ‍್ಸಿಬಿಎಸ್ Archived 2012-03-26 ವೇಬ್ಯಾಕ್ ಮೆಷಿನ್ ನಲ್ಲಿ. ಗುಂಡಿನ ಉತ್ಪಾದಕರಲ್ಲಿ ಒಬ್ಬರಾಗಿದ್ದು, ವೃತ್ತಾಕಾರದ ಚೆಂಡಿನಂತಹ ಪ್ರಾಥಮಿಕ(ಮೂಲ) ವಿನ್ಯಾಸದೊಂದಿಗೆ ಅನೇಕ ರೀತಿಯ ವಿನ್ಯಾಸಗಳನ್ನು ಉತ್ಪಾದಿಸುತ್ತಾರೆ. ಮೌಲ್ಡ್ ಲಭ್ಯವಿದ್ದಲ್ಲಿ ತಮ್ಮ ಉಪಯೋಗಕ್ಕೆ ಅಗತ್ಯವಿರುವ ಗುಂಡುಗಳನ್ನು ಸ್ಥಳೀಯ ನಿಯಮಗಳು ಅನುವು ಮಾಡಿಕೊಟ್ಟಲ್ಲಿ ತಯಾರಿಸಿಕೊಳ್ಳಬಹುದಾಗಿದೆ. ಕೈಯಲ್ಲಿ ತಯಾರಿಸುವ ಘನ ಸೀಸದ ಗುಂಡು, ಕಡಿಮೆ ಸಮಯ ಹಾಗೂ ಬೆಲೆಯಲ್ಲಿ ದೊರೆಯುತ್ತದೆ. ಕಾಸ್ಟ್ ಮತ್ತು ಜಾಕೆಟೆಡ್ ಗುಂಡುಗಳು ವಾಣಿಜ್ಯವಾಗಿ ಅನೇಕ ಉತ್ಪಾದಕರಿಂದ ದೊರೆಯುತ್ತದೆ ಮತ್ತು ಇವನ್ನು ಕೈಯಿಂದ ತುಂಬಬಹುದಾಗಿದ್ದು ಕಾಸ್ಟಿಂಗ್ ಬುಲೆಟ್‍ಗಿಂತ ಹೆಚ್ಚು ಅನುಕೂಲಕಾರಿಯಾಗಿವೆ.
ಉಪಕರಣಗಳು
[ಬದಲಾಯಿಸಿ]ಬ್ಲಾಕ್ ಪೌಡರ್ ಅಥವಾ ಕೊಳವೆಯಿಂದ ಗುಂಡನ್ನು ತುಂಬುವ ಬಂದೂಕುಗಳನ್ನು ಗುಂಡನ್ನು ಅಪ್ಪಟ ಸೀಸದಿಂದ ಮಾಡಿರುತ್ತಾರೆ. ಇದು 450ಕಿ.ಮೀ./ಸೆಕೆಂಡ್‍ಗಳಿಗಿಂತ ಕಡಿಮೆ ವೇಗದಲ್ಲಿ ಹಾರಿಸುವ ಗುಂಡುಗಳಿಗೆ ಚೆನ್ನಾಗಿ ಕೆಲಸ ಮಾಡುತ್ತದೆ.
ಆಧುನಿಕ ಬಂದೂಕಗಳಲ್ಲಿ ಸ್ವಲ್ಪ ಹೆಚ್ಚು ವೇಗದಲ್ಲಿ ಹಾರಿಸಲ್ಪಡುವ ಗುಂಡುಗಳನ್ನು ಗಟ್ಟಿಯಾದ ಸೀಸದ ಮಿಶ್ರಲೋಹ ಮತ್ತು ತವರ ಅಥವಾ ಅಚ್ಚು ಮಾಡುವ ಸೀಸದಿಂದ( ಲಿನೋಟೈಪ್ನ್ನು ಮೊಲ್ಡ್ ಮಾಡಲು ಬಳಸುತ್ತಾರೆ) ಮಾಡಿದರೆ ಚೆನ್ನಾಗಿ ಕೆಲಸಮಾಡುತ್ತದೆ. ಇದಕ್ಕಿಂತ ಹೆಚ್ಚು ವೇಗದ ಗುಂಡುಗಳಲ್ಲಿ ಕವಚ ಇರುವಂತಹ ಸೀಸವನ್ನು ಉಪಯೋಗಿಸಲಾಗುತ್ತದೆ. ಇವೆಲ್ಲದರಲ್ಲೂ ಸಾಮಾನ್ಯವಾಗಿ ಸೀಸವನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಏಕೆಂದರೆ, ಇದು ಹೆಚ್ಚು ಸಾಂದ್ರತೆ ಹೊಂದಿರುವುದರಿಂದ ನೀಡಿರುವ ಘನ ಅಳತೆಗೆ ಹೆಚ್ಚಿನ ದ್ರವ್ಯರಾಶಿಯನ್ನು ಒದಗಿಸುತ್ತದೆ- ಮತ್ತು ಚಲನಶಕ್ತಿಯನ್ನು ಸಹ-. ಸೀಸವು ಕಡಿಮೆ ಬೆಲೆಗೆ, ಸುಲಭವಾಗಿ ಸಿಗುತ್ತದೆ, ಅದರೊಂದಿಗೆ ಕೆಲಸ ಮಾಡುವುದು ಸುಲಭ, ಕಡಿಮೆ ಉಷ್ಣತೆಯಲ್ಲಿ ಕರಗುತ್ತದೆ ಹಾಗೂ ಅದಕ್ಕೆ ಗುಂಡಿನ ರೂಪ ಕೊಡಲು ಸುಲಭ. ಸೀಸ ಒಂದು ವಿಷವಾಗಿದ್ದು, ಇದು ಅದನ್ನು ತುಂಬಾ ಅಪಾಯಕಾರಿ ಆಯುಧವನ್ನಾಗಿಸಿದೆ.
- ಸೀಸ: ಸರಳ ಕಾಸ್ಟ್, ಎಕ್ಸ್‌ಟ್ರೂಡ್ ಮಾಡಲಾದ, ಸ್ವಾಗ್ ಮಾಡಲಾದ ಅಥವಾ ಅಚ್ಚು ಮಾಡಿದ ಗುಂಡುಗಳು ಸಾಮಾನ್ಯ ರೀತಿಯ ಗುಂಡುಗಳು. ಇವು 300ಮೀ./ಸೆ.(1000ಅಡಿ/ಸೆ)(ಸಾಮಾನ್ಯವಾಗಿ ಎಲ್ಲಾ ಕೈಬಂದೂಕುಗಳಲ್ಲಿ) ವೇಗದಲ್ಲಿ ಚಲಿಸುತ್ತವೆ. ಸೀಸವು ಹೆಚ್ಚಿನ ಪ್ರಮಾಣದಲ್ಲಿ ಬಂದೂಕಿನ ಕೊಳವೆಯಲ್ಲಿ ತುಂಬಲ್ಪಟ್ಟಿರುತ್ತದೆ.
ಸೀಸದೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ತವರ ಅಥವಾ ಆಯ್‌೦ಟಿಮನಿಯನ್ನು ಮಿಶ್ರಣ ಮಾಡಿದರೆ ಈ ಪರಿಣಾಮವನ್ನು ಕಡಿಮೆ ಮಾಡುತ್ತದೆ, ಆದರೆ, ವೇಗವು ಹೆಚ್ಚಿದಂತೆ ಪ್ರಭಾವವು ಕಡಿಮೆಯಾಗುತ್ತದೆ.
ತಾಮ್ರದಂತಹ ಗಡುಸಾದ ಲೋಹದಿಂದ ಮಾಡಿದ ಬಟ್ಟಲನ್ನು(ಕಪ್) ಗುಂಡಿನ ತಳಭಾಗದಲ್ಲಿ ಇಡಲಾಗುತ್ತದೆ. ಇದನ್ನು ಗ್ಯಾಸ್ ಚೆಕ್ ಎನ್ನುತ್ತಾರೆ. ಹೆಚ್ಚಿನ ಒತ್ತಡದಲ್ಲಿ ಗುಂಡನ್ನು ಹಾರಿಸಿದಾಗ ಗುಂಡಿನ ಹಿಂಬದಿಯನ್ನು ಕರಗದಂತೆ ಮಾಡಿ ಸೀಸದ ಶೇಕರಣೆಯನ್ನು ಕಡಿಮೆಮಾಡಲಾಗುತ್ತದೆ. ಆದರೆ, ಇದೂ ಸಹ ಹೆಚ್ಚಿನ ವೇಗದಲ್ಲಿ ಸಮಸ್ಯೆಯನ್ನು ಪರಿಹರಿಸುವುದಿಲ್ಲ.
- ಕವಚವಿರುವ ಸೀಸ: ಹೆಚ್ಚು ವೇಗದಲ್ಲಿ ಬಳಸಲ್ಪಡುವ ಗುಂಡುಗಳಲ್ಲಿ, ಸೀಸವು ಕವಚದಿಂದ ಆವರಿಸಲ್ಪಟ್ಟಿರುತ್ತದೆ ಅಥವಾ ದ್ರವ ಲೋಹ, ಕಪ್ರಾನಿಕ್ಕಲ್, ತಾಮ್ರ ಮಿಶ್ರಲೋಹ ಅಥವಾ ಉಕ್ಕುಗಳ ಲೇಪನ ಮಾಡಲಾಗಿರುತ್ತದೆ. ಗಡುಸಾದ ಲೋಹದ ತೆಳುವಾದ ಪದರವು ಗುಂಡು ಕೊಳವೆಯ ಮೂಲಕ ಹೋಗುವಾಗ ಹಾಗೂ ಹಾರಿದಾಗ ಮೃದುವಾದ ಸೀಸದ ತಿರುಳನ್ನು(ಕೋರ್) ರಕ್ಷಿಸುತ್ತದೆ. ಇದು ಗುಂಡು ಗುರಿಗೆ ಸರಿಯಾಗಿ ಬಡಿಯಲು ಅನುವು ಮಾಡುತ್ತದೆ. ಭಾರವಾದ ಸೀಸದ ತಿರುಳು ತನ್ನ ಚಲನ ಶಕ್ತಿಯನ್ನು ಗುರಿಗೆ ತಲುಪಿಸುತ್ತದೆ.
ಪೂರ್ಣ ಕವಚದ ಗುಂಡು ಅಥವಾ ಬಾಲ್ ಗುಂಡು ಮುಖ(ಮುಂಭಾಗ)ಹಾಗೂ ಪಾರ್ಶ್ವಗಳನ್ನು ಹೊಂದಿದ್ದು, ಗಡುಸಾದ ಲೋಹದ ಕವಚದಲ್ಲಿ ಮುಚ್ಚಲಾಗಿರುತ್ತದೆ.
ಕೆಲವು ಗುಂಡಿನ ಕವಚಗಳು ಗುಂಡಿನ ಮುಂಭಾಗದ ವರೆಗೂ ವಿಸ್ತರಿಸಲ್ಪಟ್ಟಿರುವುದಿಲ್ಲ. ಇದು ಗುಂಡಿನಲ್ಲಿ ಕೆಲವು ಮಾರ್ಪಾಡು ಮಾಡಿ ವಿಸ್ತರಿಸಲು ಹಾಗೂ ಅದರ ಮಾರಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇವುಗಳನ್ನು ಸಾಫ್ಟ್ ಪಾಯಿಂಟ್ಸ್ ಅಥವಾ ಹಾಲೋ ಪಾಯಿಂಟ್ ಬುಲೆಟ್‍ಗಳೆನ್ನುತ್ತಾರೆ.
ಸ್ಟೀಲ್ ಗುಂಡುಗಳಿಗೆ ದೀರ್ಘ ಅವಧಿಯಲ್ಲಿ ತುಕ್ಕು ಹಿಡಿಯದಂತೆ ತಾಮ್ರ ಅಥವಾ ಇತರೆ ಲೋಹಗಳಿಂದ ಲೇಪನ ಮಾಡಿರುತ್ತಾರೆ. ನೈಲಾನ್ ಮತ್ತು ಟೆಫ್ಲಾನ್‍ನಿಂದ ಮಾಡಿದ ಕವಚಗಳು ಕಡಿಮೆ ಪ್ರಮಾಣದಲ್ಲಿ ಯಶಸ್ವಿಯಾಗಿವೆ.
- ಘನವಾದ(ಸಾಲಿಡ್) ಒಂದೇ-ಲೋಹದಿಂದ ಮಾಡಿದ ಗುಂಡುಗಳು ದೊಡ್ಡ ಪ್ರಾಣಿಗಳಲ್ಲಿ ಹೆಚ್ಚು ಆಳದವರೆಗೆ ಇಳಿಯುವ ಹಾಗೆ ವಿನ್ಯಾಸ ಮಾಡಿರಲಾಗುತ್ತದೆ. ಅದೇ ರೀತಿಯಾಗಿ ತೆಳು ಆಕಾರದ ಕಡಿಮೆ ಎಳೆತವಿರುವಂತಹ ಗುಂಡುಗಳನ್ನು ಹೆಚ್ಚು ದೂರದ ಶೂಟಿಂಗ್‌ಗಾಗಿ ಬಳಸಲಾಗುತ್ತದೆ. ಇವುಗಳನ್ನು ಆಮ್ಲಜನಕರಹಿತ ತಾಮ್ರ ಅಲ್ಲದೆ ಕಾಪರ್ ನಿಕೆಲ್ ಮಿಶ್ರಲೋಹದಿಂದ, ಟೆಲ್ಲೆರಿಯಮ್ ಕಾಪರ್ ಮತ್ತು ಕಂಚಿನಿಂದ ಮಾಡಲಾಗುತ್ತದೆ. ಇವು ಹೆಚ್ಚು ಯಾಂತ್ರಿಕವಾಗಿದ್ದು UNS C36000 ಫ್ರಿ-ಕಟ್ಟಿಂಗ್ ಕಂಚಿನಿಂದ ಮಾಡಲಾಗಿರುತ್ತದೆ. ಈ ಕ್ಷಿಪಣಿಗಳನ್ನು ಸಿಎನ್‍ಸಿ ಲೇಥ್‍ಗಳನ್ನು ಉಪಯೋಗಿಸಿ ಕಾರ್ಯನಿರ್ವಹಿಸುವಂತೆ ಮಾಡಲಾಗಿರುತ್ತದೆ.
- ರಕ್ಷಾಕವಚ ಛೇದಕ: ಗುಂಡಿನ ಕವಚವನ್ನು ಹೆಚ್ಚು ಗಡುಸಾದ ಹಾಗೂ ಸಾಂದ್ರತೆಯಿರುವ ಲೋಹಗಳಾದ ಟಂಗ್‌ಸ್ಟನ್, ಟಂಗ್‌ಸ್ಟನ್ ಕಾರ್ಬೈಡ್, ಡಿಪ್ಲೀಟೆಡ್ ಯುರೇನಿಯಂ ಅಥವಾ ಉಕ್ಕಿನಿಂದ ಮಾಡಿರುತ್ತಾರೆ. ಸಾಮಾನ್ಯವಾಗಿ ಮೊನಚಾದ ತುದಿಯ ಗುಂಡನ್ನು ಉಪಯೋಗಿಸಲಾಗುತ್ತದೆ. ಆದರೆ, ಗುಂಡು ನುಸುಳಿಕೊಂಡು ಹೋಗುವ ಭಾಗದಲ್ಲಿ ಚಪ್ಪಟೆಯಾದ ತುದಿಯಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ[೨]
- ಟ್ರೇಸರ್: ಇವು ಟೊಳ್ಳಾಗಿದ ಹಿಂಭಾಗವನ್ನು ಹೊಂದಿದ್ದು ದಹನಶೀಲ ವಸ್ತುಗಳಿಂದ ತುಂಬಲ್ಪಟ್ಟಿರುತ್ತದೆ.
ಸಾಮಾನ್ಯವಾಗಿ ಇದು ಮೆಗ್ನೀಶಿಯಂ ಲೋಹ, ಪರ್ಕ್ಲೋರೇಟ್ ಮತ್ತು ಸ್ಟ್ರಾಂಟಿಯಮ್ ಸಾಲ್ಟ್‌ಗಳ ಮಿಶ್ರಣದಿಂದಾಗಿದ್ದು ಪ್ರಕಾಶಮಾನವಾದ ಕೆಂಪುಬಣ್ಣವನ್ನು ನೀಡುತ್ತದೆ. ಹಾಗಿದ್ದರೂ, ಇತರೆ ಬಣ್ಣಗಳನ್ನು ನೀಡುವ ಇತರೆ ವಸ್ತುಗಳನ್ನು ಸಹ ಕೆಲವೊಮ್ಮೆ ಉಪಯೋಗಿಸಲಾಗುತ್ತದೆ. ನಿಗದಿತ ಸಮಯದ ನಂತರ ಟ್ರೇಸರ್ ವಸ್ತುವು ಸುಡಲ್ಪಡುತ್ತದೆ. ಈ ರೀತಿಯ ಸ್ಪೋಟಕವು ಗುರಿಕಾರರಿಗೆ, ಗುಂಡು ಬಡಿಯಬೇಕಾದಲ್ಲಿ ಬಡಿಯಬೇಕಾದರೆ ಎಲ್ಲಿಗೆ ಗುರಿಯಿಡಬೇಕೆಂಬುದನ್ನು ತಿಳಿಯಲು ಸಹಕಾರಿಯಾಗಿದೆ ಹಾಗೂ ಚಲಿಸುವ ವಸ್ತುಗಳಿಗೆ ಹೇಗೆ ಗುರಿಯಿಡಬೇಕೆಂಬುದನ್ನು ಕಲಿಯಲು ಸಹಕಾರಿಯಾಗಿದೆ. ಇದನ್ನು ಅಮೇರಿಕ ಸಂಯುಕ್ತ ಸಂಸ್ಥಾನದ ಮಿಲಿಟರಿಯಲ್ಲಿ ಯುದ್ಧದ ಸಂದರ್ಭದಲ್ಲಿ ಮಿತ್ರಪಕ್ಷದವರಿಗೆ ಸಂಕೇತ ನೀಡಲು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಇದನ್ನು ಬಾಲ್ ಸೋಟಕದೊಂದಿಗೆ 4:1 ಅನುಪಾತದಲ್ಲಿ ತುಂಬಿಸಲಾಗುತ್ತದೆ. ಎಲ್ಲಿ ಗುಂಡನ್ನು ಹಾರಿಸಲಾಗುತ್ತಿದೆ ಹಾಗೂ ಗುರಿಯನ್ನು ಮಿತ್ರಪಡೆಗಳು ತಿಳಿಯುವಂತೆ ಮಾಡಲು ಹಾಗೆ ಮಾಡಲಾಗುತ್ತದೆ. ಟ್ರೇಸರ್ ರೌಂಡ್‍ನ ಗುಣಲಕ್ಷಣಗಳು ಸಾಮಾನ್ಯ ಗುಂಡುಗಳಿಗಿಂತ ಭಿನ್ನ ರೀತಿಯಲ್ಲಿದ್ದು, ವಾಯುಬಲದಲ್ಲಿನ ಎಳೆತವು ಹೆಚ್ಚಾಗುವುದರಿಂದ, ಇತರೆ ಗುಂಡುಗಳಿಗಿಂತ ಇದರ ಎತ್ತರವು ಬಹುಬೇಗ ಕಡಿಮೆಯಾಗುತ್ತದೆ.
- ಅಗ್ನಿ ಸೋಟಕ: ಈ ಗುಂಡುಗಳನ್ನು ಸ್ಪೋಟಕ ಅಥವಾ ಹೊತ್ತಿಕೊಂಡು ಉರಿಯುವ ವಸ್ತುಗಳ ಮಿಶ್ರಣವನ್ನು ಅದರ ತುದಿಯಲ್ಲಿಟ್ಟು ಲಕ್ಷ್ಯಕ್ಕೆ ಬಡಿದಾಗ ಹೊತ್ತಿಕೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಇದರ ಉದ್ದೇಶ, ಸ್ಪೋಟಕ ಅಥವಾ ಇಂಧನವನ್ನು ಗುರಿಯ ಪ್ರದೇಶಕ್ಕೆ ತಗುಲುವಂತೆ ಮಾಡಿ ಗುಂಡಿನ ವಿನಾಶಕ ಶಕ್ತಿಯನ್ನು ಹೆಚ್ಚು ಮಾಡುವುದಾಗಿದೆ.
- ಫ್ರಾಂಜಿಬಲ್: ಗುರಿಗೆ ಬಡಿದಾಗ ಚಿಕ್ಕ ಭಾಗಗಳಾಗಿ ವಿಭಜನೆಯಾಗುವಂತೆ ಇದನ್ನು ವಿನ್ಯಾಸಮಾಡಿರಲಾಗುತ್ತದೆ. ಸುರಕ್ಷತೆ, ವಾತಾವರಣದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಹಾಗೂ ಅಪಾಯಕಾರಿ ಸಂದರ್ಭದಲ್ಲಿ ಹೊಡೆಯುವುದನ್ನು ಕಡಿಮೆ ಮಾಡಲು ಈ ರೀತಿ ಮಾಡಲಾಗಿರುತ್ತದೆ. ಉದಾಹರಣೆಗೆ, ಗ್ಲೇಸರ್ ಸೇಫ್ಟಿ ಸ್ಲಗ್ .
- ನಾನ್‍ಟಾಕ್ಸಿಕ್(ವಿಷರಹಿತ): ಬಿಸ್ಮತ್, ಟಂಗ್‌ಸ್ಟನ್, ಸ್ಟೀಲ್ ಮತ್ತು ಇತರೆ ಮಿಶ್ರಣದ ಗುಂಡುಗಳು ವಿಷಪೂರಿತ ಸೀಸವು ವಾತಾವರಣಕ್ಕೆ ಬಿಡುಗಡೆಯಾಗುವುದನ್ನು ತಡೆಯುತ್ತದೆ.
ಕೆಲವು ದೇಶಗಳಲ್ಲಿ, ವಿಶೇಷವಾಗಿ ಜಲಚರಗಳನ್ನು ಬೇಟೆಯಾಡುವಾಗ ಕಡ್ಡಾಯವಾಗಿ ವಿಷರಹಿತ ಸ್ಪೋಟಕಗಳನ್ನು ಉಪಯೋಗಿಸಬೇಕೆಂಬ ಕಾನೂನನ್ನು ಜಾರಿಗೆ ತರಲಾಗಿದೆ.
ಆಹಾರವನ್ನು ಜೀರ್ಣಿಸಿಕೊಳ್ಳಲು ಪಕ್ಷಿಗಳು ಸ್ವಲ್ಪ ಪ್ರಮಾಣದ ಸೀಸವನ್ನು ತಿನ್ನುತ್ತವೆ(ಚಿಕ್ಕ ಹರಳಿನಂತಹ(ಕಲ್ಲು) ವಸ್ತುಗಳನ್ನು ಸೇವಿಸಿದಾಗ). ವಿಷಪೂರಿತ ಸೀಸವು ಆಹಾರದ ಜೀರ್ಣಕ್ರಿಯೆಯಲ್ಲಿ ಪಾಲ್ಗೊಂಡು ಅದರ ವಿಷದ ಪರಿಣಾಮವು ಹೆಚ್ಚಾಗುತ್ತದೆ. ಈ ರೀತಿಯ ವಿಧಾನವು ಹೆಚ್ಚಾಗಿ ಶಾಟ್‌ಗನ್‌ಗಳಿಗೆ, ಫೈರಿಂಗ್ ಪಾಲ್ಲೆಟ್ಸ್ ಅನ್ವಯವಾಗುತ್ತದೆಯೇ ಹೊರತು ಬುಲೆಟ್‌ಗಳಿಗಲ್ಲ. ಪರಿಸರ ಹಾನಿಕಾರಕ ವಸ್ತುಗಳನ್ನು ಬಳಸುವುದನ್ನು ಕಡಿಮೆ ಮಾಡುವ (RoHS) ಸಲುವಾಗಿ ಕೆಲವು ಕಾನೂನುಗಳನ್ನು ಕೂಡ ತರಲಾಗಿದೆ. ಅಂದರೆ ಲೆಡ್ ಬಳಕೆಯಿಂದ ಶೂಟಿಂಗ್ ಪ್ರದೇಶದ ಸುತ್ತಮುತ್ತಲು ಪರಿಸರದ ಮೇಲೆ ಆಗುವ ಪ್ರಭಾವವನ್ನು ತಡೆಯಲು ಇದನ್ನು ಬಳಸಲಾಗುತ್ತದೆ.
- ಪದ್ಧತಿ: ಹಗುರ ವಸ್ತುಗಳಾದ ರಬ್ಬರ್, ಮೇಣ, ಮರ, ಪ್ಲಾಸ್ಟಿಕ್ ಅಥವಾ ಹಗುರ ಲೋಹಗಳಿಂದ ಮಾಡಿದ ಗುಂಡುಗಳು ಕಡಿಮೆ ವ್ಯಾಪ್ತಿಯನ್ನು ಹೊಂದಿರುತ್ತವೆ.
ಏಕೆಂದರೆ, ಅವುಗಳ ತೂಕ ಮತ್ತು ವೇಗವು ಕಡಿಮೆಯಿರುತ್ತದೆ.
- ಕಡಿಮೆ ವಿನಾಶಕಾರಿ ಸ್ಪೋಟಕಗಳು ಅಥವಾ ಅವುಗಳಿಗಿಂತ ಕಡಿಮೆ ವಿನಾಶಕಾರಿಗಳು: ರಬ್ಬರ್ ಗುಂಡುಗಳು, ಪ್ಲಾಸ್ಟಿಕ್ ಗುಂಡುಗಳು ಹಾಗೂ ಬೀನ್‍ಬ್ಯಾಗ್‍ಗಳನ್ನು ವಿನಾಶಕಾರಿಯಲ್ಲದ ಸ್ಪೋಟಕಗಳಾಗಿ ವಿನ್ಯಾಸ ಮಾಡಲಾಗಿದ್ದು ಗಲಭೆಗಳನ್ನು ನಿಯಂತ್ರಿಸಲು ಉಪಯೋಗಿಸಲಾಗುತ್ತದೆ. ಇವು ಕಡಿಮೆ ವೇಗವನ್ನು ಹೊಂದಿದ್ದು, ಶಾಟ್‍ಗನ್, ಗ್ರೆನೇಡ್ ಲಾಂಚರ್ಸ್, ಪೇಯಿಂಟ್ ಬಾಲ್ ಗನ್ಸ್ ಅಥವಾ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿರುವ ಆಯುಧಗಳು ಮತ್ತು ಏರ‍್ಗನ್‍ನಿಂದ ಹಾರಿಸಲಾಗುತ್ತದೆ.
- ಹುಸಿಗುಂಡು(ಬ್ಲ್ಯಾಂಕ್ಸ್):ಮೇಣ, ಕಾಗದ, ಪ್ಲಾಸ್ಟಿಕ್ ಮತ್ತು ಇತರೆ ವಸ್ತುಗಳನ್ನು ಗುಂಡುಗಳ ಹೊಡೆತವನ್ನು ನೈಜದಂತೆ ಬಿಂಬಿಸಲು ಉಪಯೋಗಿಸಲಾಗುತ್ತದೆ ಮತ್ತು ಕೇವಲ ಮದ್ದನ್ನು ತುಂಬಿದ್ದು, ಸದ್ದನ್ನು ಉಂಟುಮಾಡುತ್ತದೆ.
"ಬುಲೆಟ್"ನ್ನು ಅದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಉಪಕರಣದಿಂದ ಹಿಡಿಯಬಹುದಾಗಿದೆ ಅಥವಾ ಅದು ಗಾಳಿಯಲ್ಲಿ ಹೊಂದಿರುವ ಅಲ್ಪ ಶಕ್ತಿಯನ್ನು ಉಪಯೋಗಿಸಿಕೊಳ್ಳಲು ಅನುವುಮಾಡಿಕೊಡುತ್ತದೆ. ಕೆಲವು ಹುಸಿಗುಂಡಿನ ಆಯುಧಗಳನ್ನು ತುದಿಯಲ್ಲಿ ಮುಚ್ಚಲಾಗಿರುತ್ತದೆ ಹಾಗೂ ಯಾವುದೇ ಗುಂಡನ್ನು ಹೊಂದಿರುವುದಿಲ್ಲ.
- ಮಿಶ್ರ-ಲೋಹ: ಗುಂಡುಗಳನ್ನು ಸೀಸದೊಂದಿಗೆ ಇತರ ಲೋಹಗಳನ್ನು ಸೇರಿಸಿ ಮಾಡುವ ಬದಲು ಗಡುಸಾದ ಲೋಹದ ತಿರುಳಿನಿಂದ ಮಾಡಿರುತ್ತಾರೆ. ಕೆಲವೊಮ್ಮೆ ಹೆಪ್ಪುಗಟ್ಟಿಸುವುದರ ಮೂಲಕ ಮಾಡಲಾಗುತ್ತದೆ.
- ಸ್ಪೋಟಕಗಳು: ಅಗ್ನಿ ಸ್ಪೋಟಕ ಗುಂಡುಗಳಂತೆಯೇ, ಈ ಸ್ಪೋಟಕಗಳನ್ನು ಗಡುಸಾದ ಮೇಲೈ ಮೇಲೆ ತಗುಲಿದ ಕೂಡಲೇ ಸ್ಪೋಟಿಸುವಂತೆ ವಿನ್ಯಾಸ ಮಾಡಲಾಗಿದೆ. ಗುರಿಯನ್ನು ತಲುಪಿದ ಕ್ಷಣ ಅದರ ದೊರಗು ಮೇಲ್ಮೈಗೆ ಗುಂಡು ತಾಕಿದ ಕ್ಷಣದಲ್ಲಿ ಅದು ಸ್ಪೋಟಗೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ. ಇದನ್ನು ತೋಪುಗಳ ಸ್ಪೋಟಕ್ಕೆ ಅಥವಾ ಫ್ಯೂಸ್ ಇರುವಂತಹ ಗ್ರೆನೆಡ್‌ಗಳ ಸ್ಪೋಟಕ್ಕೆ ಹೋಲಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಗುಂಡುಗಳಲ್ಲಿ ಸ್ವಲ್ಪ ಪ್ರಮಾಣದ ಸ್ಪೋಟಕವನ್ನು ಮಾತ್ರ ತುಂಬಿರಲಾಗುತ್ತದೆ. ಅದು ಗುರಿಯ ಮೇಲೆ ಯಾವ ಪ್ರಮಾಣದ ಪರಿಣಾಮ ಉಂಟಾಗಬೇಕು ಎಂಬುದನ್ನು ಅವಲಂಬಿಸಿ ಸ್ಪೋಟಕದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಈ ಗುಂಡುಗಳನ್ನು, ಗುಂಡಿನ ಪರಿಣಾಮವನ್ನು ಹೆಚ್ಚಿಸುವ ಉದ್ದೇಶದಿಂದ ಬೇಟೆಯಾಡುವ ಏರ‍್ಗನ್‍ಗಳಿಗಾಗಿ ಉತ್ಪಾದಿಸಲಾಗಿತ್ತದೆ.
ಒಪ್ಪಂದಗಳು ಹಾಗೂ ನಿಷೇಧಗಳು
[ಬದಲಾಯಿಸಿ]1868ರ ಸೈಂಟ್ ಪೀಟರ್ಸ್‌ಬರ್ಗ್ ಘೋಷಣೆಯು 400ಗ್ರಾಂಗಳಿಗಿಂತ ಕಡಿಮೆ ತೂಕದ ಸ್ಪೋಟಕಗಳ ಬಳಕೆಯನ್ನು ನಿಷೇಧಿಸಿದೆ.[೩]
ಹೇಗ್ ಒಪ್ಪಂದವು ಕೆಲವು ರೀತಿಯ ಸ್ಪೋಟಕಗಳನ್ನು ಸಮವಸ್ತ್ರಧಾರಿ ಮಿಲಿಟರಿಯವರು, ತಮ್ಮ ಎದುರಾಳಿ ಸಮವಸ್ತ್ರಧಾರಿ ಮಿಲಿಟರಿ ಪಡೆಗಳ ಮೇಲೆ ಉಪಯೋಗಿಸುವುದನ್ನು ನಿಷೇಧಿಸಿದೆ. ಅದು ಒಳಗೊಂಡಿರುವ ಸ್ಪೋಟಕಗಳೆಂದರೆ, ವೈಯಕ್ತಿಕವಾಗಿ ಸ್ಪೋಟಗೊಳ್ಳುವ ಸ್ಪೋಟಕಗಳು, ವಿಷಕಾರಿ ಹಾಗೂ ವಿಸ್ತಾರಗೊಳ್ಳುವ ಗುಂಡುಗಳು
1983ರ ನಿರ್ದಿಷ್ಟ ಅಸ್ತ್ರಗಳ ಮೇಲಿನ ಒಪ್ಪಂದದ ಪ್ರೊಟೊಕಾಲ್ IIIಯಲ್ಲಿ ಜಿನೆವಾ ಒಪ್ಪಂದಗಳ ಅನುಬಂಧದಲ್ಲಿ ಸ್ಪೋಟಕ ವಸ್ತುಗಳನ್ನು ನಾಗರಿಕರ ಮೇಲೆ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.
ಈ ಒಪ್ಪಂದಗಳು ಟ್ರೇಸರ್‌ಗಳು ಅಥವಾ ನಿಷೇಧಿಸಲ್ಪಟ್ಟ ಗುಂಡುಗಳನ್ನು ಮಿಲಿಟರಿಯಲ್ಲಿ ಉಪಯೋಗಿಸುವುದನ್ನು ನಿಷೇಧಿಸಿಲ್ಲ.
ಈ ಒಪ್ಪಂದಗಳು ಪಿಸ್ತೂಲು, ಬಂದೂಕು ಹಾಗೂ ಮೆಶಿನ್ ಗನ್‍ಗಳಲ್ಲಿ ಬಳಸುವ .22ಎಲ್‍ಆರ್ ಗುಂಡುಗಳಿಗೂ ಸಹ ಅನ್ವಯಿಸುತ್ತದೆ. ಎರಡನೇ ವಿಶ್ವಯುದ್ಧದ ಸಮುಯದಲ್ಲಿ .22ಎಲ್‍ಆರ್ ಇಲ್ಲದ ಪಿಸ್ತೂಲಾದ ಹೈ ಸ್ಟಾಂಡರ್ಡ್ ಹೆಚ್‍ಡಿಎಂ ಪಿಸ್ತೂಲಿಗೆ ಹೊಸರೀತಿಯ ಗುಂಡನ್ನು ತಯಾರಿಸಲಾಯಿತು. ಟೊಳ್ಳಾದ ತುದಿಯ ಗುಂಡಿಗೆ ಬದಲಾಗಿ ಅವು ಪೂರ್ಣ ಲೋಹದ ಕವಚವನ್ನು ಹೊಂದಿದ್ದವು. ಅದಲ್ಲದಿದ್ದಲ್ಲಿ ಸಾರ್ವತ್ರಿಕವಾಗಿ .22 LR ರೌಂಡ್‌ಗಳನ್ನೇ ಬಳಸಲಾಗುತ್ತಿತ್ತು.
ಗುಂಡಿನ ಸಂಕ್ಷಿಪ್ತ ರೂಪಗಳು
[ಬದಲಾಯಿಸಿ]
ಎಸಿಸಿ - ರೆಮಿಂಗ್ಟನ್ ಎಕ್ಸಲರೇಟರ್[೪](ಸ್ಯಾಬಟ್ ನೋಡಿ)
ಎಪಿ -ಆರ್ಮರ್ ಪೀಸಿಂಗ್(ಸ್ಟೀಲ್ ಅಥವಾ ಬೇರೆ ಗಡುಸಾದ ಲೋಹದ ತಿರುಳಿದೆ)
ಎಪಿಎಫ್‍ಎಸ್‍ಡಿಎಸ್ - ಆರ್ಮರ್ ಪೀಸಿಂಗ್ ಫಿನ್ ಸ್ಟೆಬಿಲೈಸ್ಡ್ ಡಿಸ್ಕಾರ್ಡಿಂಗ್ ಸ್ಯಾಬಟ್ ರೌಂಡ್
ಬಿಬಿಡಬ್ಲೂಸಿ -ಬೆವೆಲ್ ಬೇಸ್ ವಾಡ್‍ಕಟ್ಟರ್
ಬಿಇಬಿ -ಬ್ರಾಸ್ ಎನ್‍ಕ್ಲೋಸ್ಡ್ ಬೇಸ್
ಬಿಜೆಹೆಚ್‍ಪಿ - ಬ್ರಾಸ್ ಜಾಕೆಟೆಡ್ ಹಾಲೊ ಪಾಯಿಂಟ್
ಜಿಡಿ - ಸ್ಪೀರ್ ಗೋಲ್ಡ್ ಡಾಟ್
ಜಿಡಿಹೆಚ್‍ಪಿ -ಸ್ಪೀರ್ ಗೋಲ್ಡ್ ಡಾಟ್ ಹಾಲೊ ಪಾಯಿಂಟ್
|
ಹೆಚ್‍ವಿ - ಲೊ ಫ್ರಿಕ್ಷನ್ ಡ್ರೈವ್ ಬ್ಯಾಂಡ್ ಬುಲೆಟ್ಸ್ Archived 2010-08-21 ವೇಬ್ಯಾಕ್ ಮೆಷಿನ್ ನಲ್ಲಿ. ಹೈ ವೆಲಾಸಿಟಿ
ಜೆಹೆಚ್‍ಪಿ./ಸ್ಯಾಬಟ್ - ಜಾಕೆಟೆಡ್ ಹಾಲೊ ಪಾಯಿಂಟ್/ಸ್ಯಾಬಟ್
ಎಲ್-ಟಿ -ಲೆಡ್ ಟಾರ್ಗೆಟ್
ಎಲ್‍ಎಫ್‍ಪಿ -ಲೆಡ್ ಫ್ಲಾಟ್ ಪಾಯಿಂಟ್
ಎಲ್‍ಆರ್‌ಎನ್ - ಲೆಡ್ ರೌಂಡ್ ನೋಸ್
ಎಲ್‍ಎಸ್‍ಡಬ್ಲೂಸಿ - ಲೆಡ್ ಸೆಮಿವಾಡ್‍ಕಟ್ಟರ್
ಎಂಸಿ - ಮೆಟಲ್ ಕೇಸ್ಡ್
ಎಂಹೆಚ್‍ಪಿ -ಮ್ಯಾಚ್ ಹಾಲೊ ಪಾಯಿಂಟ್ ಎಂಕೆ - ಸಿಯೆರಾ ಮ್ಯಾಚ್‍ಕಿಂಗ್
ಎಂಆರ‍್ಡಬ್ಲೂಸಿ - ಮಿಡ್-ರೇಂಜ್ ವಾಡ್‍ಕಟ್ಟರ್
ಓಟಿಎಂ - ಓಪನ್ ಟಿಪ್ ಮ್ಯಾಚ್
ಪಿಬಿ - ಪ್ಯಾರಾಬೆಲ್ಲಮ್
ಪಿಎಲ್ - ರೆಮಿಂಗ್ಟನ್ ಪವರ್-ಲಾಕ್ಟ್
ಪಿಎಸ್‍ಪಿ, ಪಿಟಿಡಿಎಸ್‍ಪಿ - ಪಾಯಿಂಟೆಡ್ ಸಾಫ್ಟ್ ಪಾಯಿಂಟ್ |
ಆರೆನ್‍ಎಫ್‍ಪಿ - ರೌಂಡ್ ನೋಸ್ ಫ್ಲಾಟ್ ಪಾಯಿಂಟ್
ಆರ್‌ಎನ್‍ಎಲ್ - ರೌಂಡ್ ನೋಸ್ ಲೆಡ್
ಎಸ್‍ಜೆ- ಸೆಮಿ-ಜಾಕೆಟೆಡ್
ಎಸ್‍ಟಿಹೆಚ್‍ಪಿ - ಸಿಲ್ವರ್ ಟಿಪ್ ಹಾಲೊ ಪಾಯಿಂಟ್
ಎಸ್‍ಎಕ್ಸ್‌ಟಿ - ವಿಂಚೆಸ್ಟರ್ ರೇಂಜರ್ ಸುಪ್ರೀಮ್ ಎಕ್ಸ್‌ಪ್ಯಾಂಷನ್ ಟೆಕ್ನಾಲಜಿ
|
ಅಲಂಕಾರಿಕ ಬಳಕೆ
[ಬದಲಾಯಿಸಿ]ಬುಲೆಟ್ ಎಂಬ ಹೆಸರು ಅದರ ವೇಗದಿಂದ ಬಂದಿದೆ. ಕೆಲವೊಮ್ಮೆ ಇದನ್ನು ಅಲಂಕಾರಿಕ(ಸಾಂಕೇತಿಕ)ವಾಗಿ ಬಳಸಲಾಗುತ್ತದೆ. ಉದಾಹರಣೆಗೆ,
- ಜಪಾನಿಯರ ಬುಲೆಟ್ ರೈಲು.
- ಭಾರತದಲ್ಲಿ ಮಾರಾಟಮಾಡುವ 350ಸಿಸಿ ರಾಯಲ್ ಎನ್‌ಫೀಲ್ಡ್ ಮೋಟಾರ‍್ಸೈಕಲನ್ನು ಬುಲೆಟ್ ಎಂದು ಕರೆಯುತ್ತಾರೆ.
- ಡಾಲಿಸೆಫಾಲಿಕ್ ಆಕೃತಿಯಲ್ಲಿರುವ ಪ್ರಾಣಿಗಳ ಉದ್ದನೆಯ ತಲೆಯನ್ನು "ಬುಲೆಟ್ ಹೆಡೆಡ್" ಎಂದು ಹೇಳಲಾಗುತ್ತದೆ.
- ಸಿಲ್ವರ್ ಬುಲೆಟ್ ಎಂಬ ಪದವನ್ನು ಸಮಸ್ಯೆಗೆ ಪರಿಣಾಮಕಾರಿಯಾದ ಪರಿಹಾರ ಎಂಬುದಕ್ಕೆ ಬಳಸಲಾಗುತ್ತದೆ. ಜನಪದದಲ್ಲಿ ವೃಕ ಮಾನವರಂತವರನ್ನು ಪರಿಣಾಮಕಾರಿಯಾಗಿ ಗಾಯಗೊಳಿಸಲು ಬೆಳ್ಳಿ ಲೇಪಿತ ಬುಲೆಟ್ ಅನ್ನು ಬಳಸಲಾಗುತ್ತಿತ್ತು. ವೃಕ ಮಾನವರ ಸಮಸ್ಯೆಯಿಂದ ಇದು ಪರಿಹಾರವನ್ನು ನೀಡುತ್ತಿತ್ತು. ಇದೇ ಅರ್ಥದಲ್ಲಿ ಆಧುನಿಕ ಯುಗದಲ್ಲಿ ಸಿಲ್ವರ್ ಬುಲೆಟ್ ಪದವನ್ನು ಬಳಸಲಾಗುತ್ತಿದೆ.
- "ಬೈಟಿಂಗ್ ದಿ ಬುಲೆಟ್" ಎಂಬ ಪದಗುಚ್ಛವು ಹಿತಕರವಲ್ಲದ ಕೆಲಸ ಅಥವಾ ಅನುಭವಕ್ಕೆ ತಯಾರಿ ನಡೆಸುವುದು ಎಂಬ ಅರ್ಥ ನೀಡುತ್ತದೆ. ಇದು ರೋಗಿಯು ಅನಸ್ತೇಷಿಯಾ ಕೊಡುವ ಮೊದಲು ಮಾಡುವ ನೋವುಂಟಾಗುವ ವೈಧ್ಯಕೀಯ ಚಿಕಿತ್ಸೆಗಾಗಿ(ಕಾಲಿನಿಂದ ಗುಂಡನ್ನು ಹೊರತೆಗೆಯುವುದು) ತನ್ನ ಹಿಂದಿನ ಹಲ್ಲುಗಳಿಗೆ ಸೀಸದ ಗುಂಡನ್ನು ಇಟ್ಟು ಜಗಿಯುವಂತೆ ಮಾಡುವುದನ್ನು ಹೇಳುತ್ತದೆ. ಇದನ್ನು ಆಗಾಗ ಹೆಚ್ಚು ಗುಂಡುಗಳು ಲಭ್ಯವಿರುವ ಯುದ್ಧಭೂಮಿ ಅಥವಾ ಅದರ ಹೊರಗಡೆ ಮಾಡಲಾಗುತ್ತದೆ.
- ಕುದುರೆಗಳ ಓಟದ ಸ್ಪರ್ಧೆಯಲ್ಲಿ ಪ್ರತಿ ಹಾದಿಯಲ್ಲಿ ಕುದುರೆಯ ಹಿಂದಿನ ಪ್ರದರ್ಶನಗಳಲ್ಲಿ ಹೆಚ್ಚು ವೇಗದ ತರಬೇತಿ ಕಾಲಾವಧಿಯನ್ನು ಬುಲೆಟ್‍ನ ಮೂಲಕ ಗುರುತುಮಾಡಲಾಗುತ್ತದೆ.
- ಚಲನಚಿತ್ರ(ಮೋಶನ್ ಪಿಕ್ಚರ್)ಗಳಲ್ಲಿ( ದೂರದರ್ಶನ, ವಿವರಣಾತ್ಮಕ ಚಿತ್ರ ಮತ್ತು ಚಲನಚಿತ್ರಗಳು ಹಾಗೂ ದೃಶ್ಯ ಆಟಗಳು), ಬುಲೆಟ್ ಸಮಯ ಎನ್ನುವುದು ಅಂಕೀಯ(ಡಿಜಿಟಲಿ) ವಿಸ್ತರಿಸಲ್ಪಟ್ಟ ಹೊಡೆತವಾಗುದ್ದು, ಇದರಲ್ಲಿ ಮೊದಲು ಚಿತ್ರದ ವೇಗವು ತುಂಬಾ ಕಡಿಮೆಯಾಗುತ್ತದೆ ಅಥವಾ ಕೆಲವೊಮ್ಮೆ, ಸ್ಥಿರವಾಗುತ್ತದೆ. ನಂತರ ಎರಡನೆಯದಾಗಿ, ಕ್ಯಾಮರಾ ದೃಶ್ಯದ ಸುತ್ತಲೂ ತಿರುಗುವ ಮೂಲಕ ವೀಕ್ಷಕರಿಗೆ ಬೇರೆ ಬೇರೆ ಕೋನಗಳಿಂದ ಚಲಿಸುವ ಚಿತ್ರದಂತೆ ಕ್ಷಣಕಾಲ ಕಾಣಿಸುತ್ತದೆ. ಸಾಮಾನ್ಯ ವೇಗದಲ್ಲಿ ನೋಡಲಾಗದ ಘಟನಾವಳಿಯನ್ನು ಅವನು/ಅವಳು ನೋಡಬಹುದಾಗಿದೆ. ಇದು ವೀಕ್ಷಕರಿಗೆ ಹಲವಾರು ಕೋನಗಳಲ್ಲಿ ಘಟನಾವಳಿಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುತ್ತದೆ, ಆದರೆ ಸಾಮಾನ್ಯ ವೇಗದಲ್ಲಿ ಈ ಕೋನಗಳನ್ನು ಮರೆಮಾಡಲಾಗಿರುತ್ತದೆ. ಸಾಮಾನ್ಯ ಚಿತ್ರೀಕರಣದ ಪರಿಸ್ಥಿತಿಯಲ್ಲಿ ದೃಶ್ಯವನ್ನು ಸೆರೆಹಿಡಿಯುವ ವ್ಯಕ್ತಿಯು, ಸೆರೆಹಿಡಿಯಲು ಒಂದು ಕೋನವನ್ನು ಆರಿಸಬೇಕಾಗುತ್ತದೆ. ಬುಲೆಟ್ ಕಾಲದಲ್ಲಿ ಕ್ಯಾಮಾರದ ತಿರುಗುವುದರಲ್ಲಿನ ವ್ಯತ್ಯಾಸವು, 90ಡಿಗ್ರಿಯಿಂದ ಪೂರ್ಣ 360ಡಿಗ್ರಿಯಷ್ಟು ಕಡಿಮೆ ಪ್ರಮಾಣದ ಕೋನದ ಬದಲಾವಣೆಯಿಂದ ಉಂಟಾಗುತ್ತದೆ. ಈ ಬುಲೆಟ್ ಕಾಲದ ತಂತ್ರಕಾರಿಕೆಯನ್ನು ಹೆಚ್ಚಾಗಿ ದೃಶ್ಯ ಆಟದಲ್ಲಿ(ವೀಡಿಯೋ ಗೇಮ್) ಉಪಯೋಗಿಸುತ್ತಾರೆ. ಇದು ಆಟಗಾರನಿಗೆ ಆಟವನ್ನು ನಿಧಾನಗತಿ ಮಾಡುವ ಹಾಗೂ ಅದರ ಮೂಲಕ ಪ್ರಯೋಜನ ಪಡೆಯುವ ಅವಕಾಶವನ್ನು ನೀಡುತ್ತದೆ. "ಬುಲೆಟ್ ಟೈಮ್" ಎಂಬ ಪದವನ್ನು ದಿ ಮ್ಯಾಟ್ರಿಕ್ಸ್ ಎಂಬ ಚಿತ್ರದಲ್ಲಿ, ಹೊಡೆದ ಗುಂಡಿನ ನಿಧಾನಗತಿಯ ಚಿತ್ರ ಹಾಗೂ ಗುಂಡಿನ ಸರಣಿಯನ್ನು ಮತ್ತು ತಗುಲಬೇಕಿದ್ದ ಗುರಿಯನ್ನು ತೋರಿಸುವ ತಂತ್ರಗಾರಿಕೆಯಲ್ಲಿ ಉಪಯೋಗಿಸಲಾಯಿತು.
- ಜನಪ್ರಿಯವಾದ ಪದಗುಚ್ಛವಾದ "ಕ್ಯಾಚಿಂಗ್ ಎ ಬುಲೆಟ್ ಇನ್ ಹಿಸ್ ಟೀತ್" ಜನಪ್ರಿಯ ಕೈ ಚಳಕದ ಜಾದುಗಾರನಾದ ಬೆಂಜಾಮಿನ್ ಪೆರ್ರಿ ಕೊವಿಂಗ್ಟನ್ ಎಂಬುವವನಿಂದ ಬಂದಿದೆ. ಆತ 1920ರಲ್ಲಿ ನ್ಯೂಯಾರ್ಕ್ ಮ್ಯಾಜಿಕ್‍ನಲ್ಲಿ ಸ್ವಯಂ ಸೇವಕರು ಮೂರು ಪ್ರತ್ಯೇಕ ಬಂದೂಕುಗಳಿಂದ ಹೊಡೆದ ಗುಂಡುಗಳನ್ನು ಹಲ್ಲಿನಿಂದ ಹಿಡಿದಿದ್ದ ಎಂದು ಹೇಳಲಾಗಿದೆ.
- ಪುರುಷರ ಪುರುಷತ್ವವನ್ನು ಕುರಿತಾಗಿ ಮಾತನಾಡುವಾಗ ಮಾರ್ಮಿಕವಾಗಿ "shooting blanks" ಎಂಬ ಮಾತನ್ನು ಹೇಳಲಾಗುತ್ತದೆ. ನಪುಂಸಕ ಪುರುಷನು ಲೈಂಗೀಕ ಕ್ರಿಯೆಯ ಕೊನೆಯಲ್ಲಿ ಯಾವುದೇ ರೀತಿಯ ವೀರ್ಯವನ್ನು ಹೊರಹಾಕುವಲ್ಲಿ ಸಫಲವಾಗುವುದಿಲ್ಲ. ಒಂದೊಮ್ಮೆ ಸಫಲವಾದರೂ ಕೂಡ ವೀರ್ಯದ ಪ್ರಮಾಣ ಕಡಿಮೆ ಇರುತ್ತದೆ. ಇದನ್ನು ಬ್ಲ್ಯಾಂಕ್ ರೌಂಡ್ ಎಂದು ಮಾರ್ಮಿಕವಾಗಿ ಕರೆಯಲಾಗುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ದ ಎಕ್ಸ್‌ಪ್ಲೋಡಿಂಗ್ ಬುಲೆಟ್ಸ್ ಜರ್ನಲ್ ಆಫ್ ಕ್ಲಿನಿಕಲ್ ಪಾಥೋಲಜಿ
- ↑ Hughes, David (1990). The History and Development of the M16 Rifle and Its Cartridge. Oceanside: Armory Pub. ISBN 9780962609602.
- ↑ Glover, William H. "Purposes and Basic Principles of the Law of War". Retrieved 2010-07-28.
- ↑ ಬುಲೆಟ್ ಬೇಸಿಕ್ಸ್ 1- ಮಟೀರಿಯಲ್ಸ್; ರೆಮಿಂಗ್ಟನ್ ಆಕ್ಸಿಲರೇಟರ್ (ಪುಟದ ಕೆಳಭಾಗದಲ್ಲಿ)
- ↑ "ಲೆಡ್ ಬುಲೆಟ್ಸ್ ಟೆಕ್ನಾಲಜಿ - ಪ್ರೀಮಿಯಮ್ ಮೋಲ್ಡ್ಸ್". Archived from the original on 2010-10-09. Retrieved 2010-08-23.
This article incorporates text from a publication now in the public domain: Chisholm, Hugh, ed. (1911). Encyclopædia Britannica (11th ed.). Cambridge University Press. {{cite encyclopedia}}
: Cite has empty unknown parameters: |separator=
and |HIDE_PARAMETER=
(help); Invalid |ref=harv
(help); Missing or empty |title=
(help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- "ಬುಲೆಟ್ಸ್ ಬೈ ದಿ ಮಿಲಿಯನ್", 1946 - ಪ್ರಪಂಚ ಯುದ್ಧ IIರ ಸಮಯದಲ್ಲಿ ಚಿಕ್ಕ ಒಳವ್ಯಾಸದ ಯುದ್ಧಸಾಮಾಗ್ರಿ ತಯರಿಕೆಯ ಕುರಿತ ಕಥೆ Archived 2010-01-04 ವೇಬ್ಯಾಕ್ ಮೆಷಿನ್ ನಲ್ಲಿ.
- ಅರಿಜೋನ ಗನ್ ಲಿಸ್ಟ್ - ಯುದ್ಧ ಸಮಗ್ರಿಗಳ ವಿಧಗಳು
- ಬುಲೆಟ್ನ ವಿವರಣೆಯೊಂದಿಗೆ ಸಂಕ್ಷಿಪ್ತರೂಪಗಳು ಮತ್ತು ಸಂಕೇತಾಕ್ಷರಗಳು Archived 2011-02-11 ವೇಬ್ಯಾಕ್ ಮೆಷಿನ್ ನಲ್ಲಿ.
- ಬುಲೆಟ್ಸ್ ಫಾರ್ ಬಿಗಿನರ್ಸ್
- ಡೇಂಜರಸ್ ಗೇಮ್ ಬುಲೆಟ್ಸ್ Archived 2009-08-08 ವೇಬ್ಯಾಕ್ ಮೆಷಿನ್ ನಲ್ಲಿ.
- ಯುರೋಪಿಯನ್ ಅಮ್ಮ್ಯುನಿಶನ್ ಬಾಕ್ಸ್ ಟ್ರಾನ್ಸ್ಲೇಶನ್ಸ್
- ರೆಮಿಂಗ್ಟನ್ ಕೊರ್-ಲಾಕ್ಟ್, ಬ್ರೊನ್ಜ್ ಪಾಯಿಂಟ್ & ಪವರ್-ಲಾಕ್ಟ್ ಸೆಂಟರ್‌ಫೈರ‍್ ಅಮ್ಮ್ಯುನಿಶನ್ Archived 2009-12-06 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- Pages using duplicate arguments in template calls
- Articles needing additional references from August 2009
- Articles with invalid date parameter in template
- All articles needing additional references
- Articles with unsourced statements from August 2009
- Articles with links needing disambiguation
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using columns-list with unknown parameters
- CS1 errors: empty unknown parameters
- CS1 errors: missing title
- CS1 errors: invalid parameter value
- Wikipedia articles incorporating a citation from the 1911 Encyclopaedia Britannica with no article parameter
- Wikipedia articles incorporating text from the 1911 Encyclopædia Britannica
- Commons category link is locally defined
- ಯುದ್ಧಸಾಮಾಗ್ರಿ