ವಿಷಯಕ್ಕೆ ಹೋಗು

ಸ್ತ್ರೀರೋಗಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ತ್ರೀರೋಗಗಳು - ಮಹಿಳೆಗೆ ಸಂಬಂಧಿಸಿದ ವ್ಯಾಧಿಗಳನ್ನು 5 ವರ್ಗಗಳಲ್ಲಿ ಗಮನಿಸಬಹುದು.

ಜನನೇಂದ್ರಿಯ ಸಂಬಂಧೀ ವ್ಯಾಧಿಗಳು

[ಬದಲಾಯಿಸಿ]

ಹೆಣ್ಣಿಗೆ ತಾಯ್ತನ ಪ್ರಕೃತಿ ಕೊಟ್ಟ ವಿಶಿಷ್ಟ ವರ. ಆದರೆ ಈ ವರದ ಜೊತೆಯಲ್ಲೇ ಬರುವ ಶಾಪ ಎಂದರೆ ಜನನೇಂದ್ರಿಯ ಮತ್ತು ಲೈಂಗಿಕ ಸಂಪರ್ಕದ ಸೋಂಕು ರೋಗಗಳು. ಇವು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಂಡುಬರುವ ಸ್ತ್ರೀರೋಗಗಳು.[] ಜನನಾಂಗ ಮಾರ್ಗದ ಸೋಂಕು ಎಂದರೆ ಯೋನಿ, ಗರ್ಭದ್ವಾರ, ಗರ್ಭಕೋಶ, ಗರ್ಭನಾಳ ಮತ್ತು ಅಂಡಾಶಯದ ಸೋಂಕಿನಿಂದುಂಟಾಗುವ ಕಾಯಿಲೆಗಳು: ಪರಂಗಿರೋಗ (ಸಿಫಿಲಿಸ್),[] ಬಿಳುಪು ಸುರಿಕೆ (ಗೊನೊರಿಯ),[] ಏಡ್ಸ್‌ ರೋಗ, ಬಿಳಿಸೆರಗು,[] ಉರಿಮೂತ್ರ ರೋಗ ಇತ್ಯಾದಿ.

ಕಾರಣಗಳು

[ಬದಲಾಯಿಸಿ]

ವೈಯಕ್ತಿಕ ಅಶುಚಿತ್ವ, ಸುರಕ್ಷಿತವಲ್ಲದ ಗರ್ಭಪಾತ, ಸುರಕ್ಷಿತವಲ್ಲದ ಹೆರಿಗೆ ಮತ್ತು ಸುರಕ್ಷಿತವಲ್ಲದ ಲೈಂಗಿಕ ಸಂಪರ್ಕ.

ಲಕ್ಷಣಗಳು

[ಬದಲಾಯಿಸಿ]

ಜನನೇಂದ್ರಿಯ ತುರಿಕೆ, ಉರಿ, ಹುಣ್ಣು, ನೋವು ಮತ್ತು ವಾಸನೆಯಿಂದ ಕೂಡಿದ ಯೋನಿಸ್ರಾವ, ಕೆಳಹೊಟ್ಟೆನೋವು, ಆಯಾಸ, ಚಳಿಜ್ವರ, ಉರಿಮೂತ್ರ ಮತ್ತು ಮುಟ್ಟಿನ ತೊಂದರೆಗಳು, ದುಗ್ಧರಸ ಗ್ರಂಥಿಗಳ ಊತ ಇತ್ಯಾದಿ.

ದುಷ್ಪರಿಣಾಮಗಳು

[ಬದಲಾಯಿಸಿ]

ಮುಟ್ಟಿನ ತೊಂದರೆಗಳು, ಬಂಜೆತನ, ಗರ್ಭಪಾತ, ಬೇರೆ ಸ್ಥಳದಲ್ಲಿ ಗರ್ಭಧಾರಣೆ, ಉರಿಮೂತ್ರರೋಗ, ಎಚ್.ಐ.ವಿ./ಏಡ್ಸ್‌ರೋಗ, ನವಜಾತ ಶಿಶುವಿಗೆ ಸೋಂಕುರೋಗಗಳು.

ತಡೆಗಟ್ಟುವ ಕ್ರಮ

[ಬದಲಾಯಿಸಿ]

ಸೋಂಕಿನಿಂದ ರಕ್ಷಣೆ, ಕಾಯಿಲೆಗೆ ಯುಕ್ತ ಸಲಹೆ ಮತ್ತು ಚಿಕಿತ್ಸೆ, ಸುರಕ್ಷಿತ ಗರ್ಭಪಾತ, ಸುರಕ್ಷಿತ ಹೆರಿಗೆ, ಸುರಕ್ಷಿತ ಲೈಂಗಿಕ ಜೀವನದ ಬಗ್ಗೆ ತಿಳಿವಳಿಕೆ, ವೈಯಕ್ತಿಕ ಸ್ವಚ್ಛತೆ.

ಚಿಕಿತ್ಸೆ

[ಬದಲಾಯಿಸಿ]

ಯುಕ್ತ ವೇಳೆಯಲ್ಲಿ ಸಲಹೆ ಮತ್ತು ಪ್ರಾರಂಭದಲ್ಲಿಯೇ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದಲ್ಲಿ ಗುಣಮುಖರಾಗಬಹುದು.

ಸ್ತನಸಂಬಂಧೀ ರೋಗಗಳು

[ಬದಲಾಯಿಸಿ]

ಎರಡು ಬಗೆಗಳಿವೆ:

  1. ಸ್ತನಗಳ ಸೋಂಕುರೋಗ: ಎದೆಬಾವು, ಎದೆಯೂತ (ಸೂಕ್ಷ್ಮಾಣುಜೀವಿಗಳಿಂದುಂಟಾಗುವ ಸೋಂಕು);
  2. ಸ್ತನಗಳ ಗೆಡ್ಡೆಗಳು: ಸಾಧಾರಣ ಗೆಡ್ಡೆಗಳು (ಫೈಬ್ರೊಅಡಿನೋಮ), ಅರ್ಬುದಗೆಡ್ಡೆಗಳು (ಕ್ಯಾನ್ಸರ್).

ಲಕ್ಷಣಗಳು

[ಬದಲಾಯಿಸಿ]

ನೋವು, ಎದೆಬಾವು, ಕೀವು ಸುರಿಯುವುದು, ಚಳಿಜ್ವರ ಇತ್ಯಾದಿ, ನೋವು ಮೂಡಿಸದೆ ಓಡಾಡುವ ಗೆಡ್ಡೆಗಳು (ಫೈಬ್ರೊಅಡಿನೋಮ), ಗಟ್ಟಿಯಾದ ಅರ್ಬುದ ಗೆಡ್ಡೆಗಳು (ಕ್ಯಾನ್ಸರ್).

ತಡೆಗಟ್ಟುವ ಕ್ರಮ

[ಬದಲಾಯಿಸಿ]

ಆಗಾಗ ಮತ್ತು ಸಂದೇಹ ಬಂದಾಗ ಸ್ತನಗಳ ಪರೀಕ್ಷೆ, ಮೆಮ್ಮೋಗ್ರಫಿ ಪರೀಕ್ಷೆ.

ಚಿಕಿತ್ಸೆ

[ಬದಲಾಯಿಸಿ]

ಶಸ್ತ್ರಚಿಕಿತ್ಸೆ. ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು.

ಋತುಚಕ್ರ ಸಂಬಂಧೀ ರೋಗಗಳು

[ಬದಲಾಯಿಸಿ]

ಹೆಣ್ಣಿನ ಜೀವನದಲ್ಲಿ ಋತುಚಕ್ರ ಒಂದು ನೈಸರ್ಗಿಕ ಜೈವಿಕಕ್ರಿಯೆ. ಕ್ರಮಬದ್ಧವಾಗಿ ನಿಯಮಿತವಾಗಿ ಪ್ರತಿ ತಿಂಗಳಿಗೊಮ್ಮೆ ಬರುವ ಋತುಚಕ್ರ ಶಾರೀರಿಕ ಕ್ರಿಯೆ ದೇಹದಲ್ಲಿ ಸಮರ್ಪಕವಾಗಿ ನಡೆಯುತ್ತಿರುವುದರ ಪ್ರತೀಕ. ಇದರಲ್ಲಿ ಏರುಪೇರುಂಟಾದಾಗ ಅದಕ್ಕೆ ಸರಿಯಾದ ಕಾರಣವನ್ನು ಪತ್ತೆಹಚ್ಚಿ ಯುಕ್ತ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು.

ಲಕ್ಷಣಗಳು

[ಬದಲಾಯಿಸಿ]

ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವು, ಹೆಚ್ಚಿನ ರಕ್ತಸ್ರಾವ, ಋತುಚಕ್ರದಲ್ಲಿ ಏರುಪೇರು.

ಕಾರಣಗಳು

[ಬದಲಾಯಿಸಿ]

ಚೋದಕದ (ಹಾರ್ಮೋನಿನ) ಅಂಶದಲ್ಲಿ ಏರುಪೇರು, ಗರ್ಭಕೋಶದಲ್ಲಿಯ ಗೆಡ್ಡೆಗಳು (ಫೈಬ್ರಾಯ್ಡ್ ಟ್ಯೂಮರ್), ಅಂಡಾಶಯದ ಗೆಡ್ಡೆಗಳು (ಒವೇರಿಯನ್ ಗೆಡ್ಡೆ), ಗರ್ಭಕೋಶದ ಕ್ಯಾನ್ಸರ್, ಗರ್ಭದ್ವಾರದ ಅರ್ಬುದ ರೋಗ, ಗರ್ಭಕೋಶದ ಸೋಂಕುರೋಗಗಳು, ಕೆಲವು ಔಷಧಗಳ ಸೇವನೆ (ಓರಲ್ ಪಿಲ್) ಇತ್ಯಾದಿ.

ದುಷ್ಪರಿಣಾಮಗಳು

[ಬದಲಾಯಿಸಿ]

ರಕ್ತಹೀನತೆ, ಆಯಾಸ, ಜ್ವರ, ಕೆಳಹೊಟ್ಟೆನೋವು, ಅರ್ಬುದರೋಗ, ಅತಿಗಾತ್ರದ ಗೆಡ್ಡೆಗಳಿಂದ ಹೊಟ್ಟೆಭಾರ, ಸುಸ್ತು.

ತಡೆಗಟ್ಟುವ ಕ್ರಮ

[ಬದಲಾಯಿಸಿ]

ಯುಕ್ತ ಸಲಹೆ ಮತ್ತು ಕ್ರಮಬದ್ಧವಾಗಿ ತಪಾಸಣೆ.

ಚಿಕಿತ್ಸೆ

[ಬದಲಾಯಿಸಿ]

ಹಾರ್ಮೋನಿನ ಚಿಕಿತ್ಸೆ, ಗೆಡ್ಡೆಗಳಿಗೆ ಶಸ್ತ್ರಚಿಕಿತ್ಸೆ, ಅರ್ಬುದರೋಗಕ್ಕೆ ಯುಕ್ತ ಚಿಕಿತ್ಸೆ.

ಜನನೇಂದ್ರಿಯದ ಅರ್ಬುದ ರೋಗಗಳು

[ಬದಲಾಯಿಸಿ]

ನಲವತ್ತು ದಾಟಿದ ಅನಂತರ ಕಂಡುಬರುವ ಸ್ತ್ರೀರೋಗಗಳಲ್ಲಿ ಮುಖ್ಯವಾದದ್ದು ಜನನೇಂದ್ರಿಯದ ಅರ್ಬುದರೋಗ. ಇದೊಂದು ಮಾರಕರೋಗ. ಜನನೇಂದ್ರಿಯದ ಎಲ್ಲ ಅಂಗಗಳಲ್ಲೂ ಕಂಡುಬರುತ್ತದೆ. ಸಾಧಾರಣವಾಗಿ ಎದ್ದುಕಾಣುವುದು ಗರ್ಭದ್ವಾರದ ಅರ್ಬುದರೋಗ (ಕ್ಯಾನ್ಸರ್ ಸರ್ವಿಕ್ಸ್), ಗರ್ಭಕೋಶದ ಕ್ಯಾನ್ಸರ್‌ ರೋಗ (ಎಂಡೊಮೆಟ್ರಿಯಲ್ ಕ್ಯಾನ್ಸರ್) ಮತ್ತು ಅಂಡಾಶಯದ ಕ್ಯಾನ್ಸರ್ ರೋಗ (ಒವೇರಿಯನ್ ಕ್ಯಾನ್ಸರ್).

ಕಾರಣಗಳು

[ಬದಲಾಯಿಸಿ]

ನಿರ್ದಿಷ್ಟವಾಗಿ ತಿಳಿದಿಲ್ಲ.

ಲಕ್ಷಣಗಳು

[ಬದಲಾಯಿಸಿ]

ಕ್ರಮಬದ್ಧವಲ್ಲದ ರಕ್ತಸ್ರಾವ, ಮುಟ್ಟು ನಿಂತಾಗ ಕಾಣಿಸಿಕೊಳ್ಳುವ ರಕ್ತಸ್ರಾವ, ರಕ್ತಹೀನತೆ, ಆಯಾಸ, ತೂಕನಷ್ಟ, ಹೊಟ್ಟೆನೋವು, ವಾಸನೆಯಿಂದ ಕೂಡಿದ ಬಿಳಿಬೆರಕೆ ರಕ್ತಸ್ರಾವ, ಕಾಯಿಲೆ ಉಲ್ಬಣಿಸಿದಾಗ ಗೆಡ್ಡೆಗಳು ಕೈಗೆ ಸಿಗುತ್ತವೆ ಮತ್ತು ತತ್ಪರಿಣಾಮವಾದ ರಕ್ತಸ್ರಾವ.

ತಡೆಗಟ್ಟುವ ಕ್ರಮ

[ಬದಲಾಯಿಸಿ]

ಪ್ರಾರಂಭದಲ್ಲೇ ಕಾಯಿಲೆಯನ್ನು ಗುರುತಿಸಿ ಯುಕ್ತ ಚಿಕಿತ್ಸೆ, ಕ್ರಮಬದ್ಧ ತಪಾಸಣೆ.

ಚಿಕಿತ್ಸೆ

[ಬದಲಾಯಿಸಿ]

ಕಾಯಿಲೆ ಪ್ರಾರಂಭದಲ್ಲಿದ್ದುದಾದರೆ ಶಸ್ತ್ರಚಿಕಿತ್ಸೆ; ಉಲ್ಬಣಿಸಿದಾಗ ಎಕ್ಸ್‌ರೇ ಕಿರಣ ಚಿಕಿತ್ಸೆ, ಔಷಧೋಪಚಾರ; ಅತಿಯಾದಾಗ ತಾತ್ಕಾಲಿಕ ಶಮನ ಚಿಕಿತ್ಸೆ.

ಮುಟ್ಟು ನಿಲ್ಲುವ ವೇಳೆಯಲ್ಲಿ ಕಂಡುಬರುವ ಕಾಯಿಲೆಗಳು

[ಬದಲಾಯಿಸಿ]

ಮುಟ್ಟುನಿಲ್ಲುವ ಮತ್ತು ಮುಟ್ಟು ನಿಂತ ತರುವಾಯದ ದಿನಗಳಂದು ಸ್ತ್ರೀಯರಲ್ಲಿ ಕೆಲವು ರೀತಿಯ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಕಾಣಬಹುದು (ಮೆನೊಪಾಸಲ್ ಸಿಂಡ್ರೋಮ್). ಈ ಅವಧಿ ಸಾಧಾರಣ ವಯಸ್ಸು 40 ರಿಂದ 50ರ ತನಕ ಇರುತ್ತದೆ.

ಅಂಡಾಶಯದಿಂದ ಉತ್ಪತ್ತಿಯಾಗುವ ಸ್ತ್ರೀಚೋದಕಗಳ (ಈಸ್ಟ್ರೊಜನ್ಸ್) ಕೊರತೆ.

ಲಕ್ಷಣಗಳು

[ಬದಲಾಯಿಸಿ]

ಮುಟ್ಟು ನಿಲ್ಲುವಿಕೆ, ಕೀಲುನೋವು, ಮೂಳೆನೋವು, ಬಿಸಿತಾಪಗಳು, ಬೆವರುವಿಕೆ, ಮಾನಸಿಕ ತೊಳಲಾಟ, ಏರಿಳಿತ ಇತ್ಯಾದಿ.

ತಡೆಗಟ್ಟುವ ಕ್ರಮ

[ಬದಲಾಯಿಸಿ]

ಸಕಾಲದಲ್ಲಿ ತಪಾಸಣೆ, ಪರೀಕ್ಷೆ, ಸಮಾಲೋಚನೆ, ಸಲಹೆ, ಹಾರ್ಮೋನಿನ ಚಿಕಿತ್ಸೆ, ಕ್ಯಾಲ್ಸಿಯಮ್ ಮತ್ತು ಶಕ್ತಿವರ್ಧಕಗಳು, ಮನಸ್ಸಿಗೆ ನೆಮ್ಮದಿ ನೀಡುವ ಔಷಧೋಪಚಾರ.

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು" (PDF). Archived from the original (PDF) on 2018-11-23. Retrieved 2018-10-03. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. Ghanem, Khalil G.; Hook, Edward W. (2020). "303. Syphilis". In Goldman, Lee; Schafer, Andrew I. (eds.). Goldman-Cecil Medicine. Vol. 2 (26th ed.). Philadelphia: Elsevier. pp. 1983–1989. ISBN 978-0-323-55087-1.
  3. "Gonorrhea – CDC Fact Sheet (Detailed Version)". CDC. 17 November 2015. Archived from the original on 2 September 2016. Retrieved 27 August 2016.
  4. "Definition of LEUKORRHEA". www.merriam-webster.com. Retrieved 2015-12-20.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: