ಮುಟ್ಟು ನಿಲ್ಲುವಿಕೆ

ವಿಕಿಪೀಡಿಯ ಇಂದ
Jump to navigation Jump to search


ಮಹಿಳೆಯರಿಗೆ ಸುಮಾರು ೪೫-೫೫ ವರ್ಷ ಪ್ರಾಯದ ನಂತರ ತಿಂಗಳು- ತಿಂಗಳು ಮುಟ್ಟಾಗುವಿಕೆ ನಿಲ್ಲುತ್ತದೆ. ಈ ಪ್ರಕ್ರಿಯೆಗೆ ಮುಟ್ಟು ನಿಲ್ಲುವಿಕೆ ಅಥವಾ ಮೆನೋಪಾಸ್ ಅಥವಾ ಋತುಸ್ತಬ್ಧ ಎನ್ನುತ್ತಾರೆ. ಮೆನೋಪಾಸ್ ಸಮಯದಲ್ಲಿ ಮಹಿಳೆಯ ಸಂತಾನೋತ್ಪತ್ತಿ ನಿಲ್ಲುತ್ತದೆ. ಮುಟ್ಟು ನಿಂತಾಗ ಮಹಿಳೆಯರಿಗೆ ದೈಹಿಕ ಹಾಗು ಮಾನಸಿಕ ಬದಲಾವಣೆಗಳಾಗುತ್ತದೆ.[೧]

ಋತುಸ್ತಬ್ಧದ ಲಕ್ಷಣಗಳು

ಮುಟ್ಟು ನಿಲ್ಲುವ ಸಮಯ[ಬದಲಾಯಿಸಿ]

ಸಾಮಾನ್ಯವಾಗಿ ೪೫-೫೫ ವರ್ಷ ಪ್ರಾಯದಲ್ಲಿ ಮುಟ್ಟು ನಿಲ್ಲುತ್ತದೆ. ೪೭-೪೮ ವರ್ಷಗಳಲ್ಲಿ ಮುಟ್ಟು ನಿಲ್ಲುವುದಕ್ಕೆ ಅನುವಂಶೀಯ ಕಾರಣಗಳು ಮತ್ತು ಹವಗುಣದ ಕಾರಣಗಳು ಪ್ರಭಾವ ಬೀರುತ್ತವೆ. ಈ ಕ್ರಿಯೆಗೆ ಉಷ್ಣನಿಲಯದ ಮಹಿಳೆಯರಿಗಿಂತ ಶೀತವಲಯದ ಮಹಿಳೆಯರಿಗಿಂತ ಬೇಗ ನಿಲ್ಲುತ್ತದೆ.[೨]

ಋತುಸ್ತಬ್ಧದ ಲಕ್ಷಣಗಳು[ಬದಲಾಯಿಸಿ]

ಯೋನಿ ಮತ್ತು ಗರ್ಭಾಶಯ[ಬದಲಾಯಿಸಿ]

ಋತುಸ್ತಬ್ಧದ ಸಮಯದಲ್ಲಿ ಋತುಚಕ್ರದ ಅವಧಿ ಕಡಿಮೆಯಾಗುತ್ತದೆ (೨-೫ ದಿನಗಳು) ಹಾಗೂ ದೀರ್ಘ ಚಕ್ರಗಳು ಸಾಧ್ಯ. ಕ್ರಮವಲ್ಲದ ರಕ್ತಸ್ರಾವ ಇರಬಹುದು. ಹಾರ್ಮೋನುಗಳ ಬದಲಾವಣೆಗಳಿಂದಾಗಿ ನಿಷ್ಕ್ರಿಯ ಗರ್ಭಾಶಯದ ರಕ್ತಸ್ರಾವ ಕಂಡುಬರುತ್ತದೆ.[೩]

ಮೆನೋಪಾಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಮತ್ತು ಮೆನೋಪಾಸ್ ನಂತರ ಮುಂದುವರಿಯುವ ಲಕ್ಷಣಗಳು:

  • ನೋವಿನ ಸಂಭೋಗ
  • ಯೋನಿ ಶುಷ್ಕತೆ
  • ಅಟ್ರೋಫಿಕ್ ಯೋನಿ ನಾಳದ ಉರಿಯೂತ

ಇತರ ದೈಹಿಕ ಲಕ್ಷಣಗಳು[ಬದಲಾಯಿಸಿ]

  • ಜಂಟಿ ನೋವು, ಬೆನ್ನು ನೋವು, ತೂಕ ಹೆಚ್ಚುವುದು, ಚರ್ಮ ಜುಮ್ಮೆನಿಸುವಿಕೆ, ಶಕ್ತಿಯ ಕಡಿಮೆಯಾಗುವುದು, ಸ್ತನ ನೋವು, ಹೃದಯ ಬಡಿತ ಹೆಚ್ಚಾಗುವುದು, ತಲೆನೋವು, ತಲೆತಿರುಗುವಿಕೆ, ರಾತ್ರಿ ನಿದ್ರಿಸುವಾಗ ಬೆವರುವುದು.

ಮಾನಸಿಕ ಲಕ್ಷಣಗಳು[ಬದಲಾಯಿಸಿ]

  • ಆತಂಕ, ನೆನಪಿನ ಶಕ್ತಿ ಕಡಿಮೆಯಾಗುವುದು, ಖಿನ್ನತೆಯ ಮನಸ್ಥಿತಿ, ಮನಸ್ಥಿತಿಯ ಏರು ಪೇರು, ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆಯಾಗುವುದು

ದೀರ್ಘಕಾಲೀನ ಪರಿಣಾಮಗಳು[ಬದಲಾಯಿಸಿ]

  • ಆಸ್ಟಿಯೋಪೆನಿಯಾ, ಹೃದಯಕ್ಕೆ ಸಂಧಿಸಿದ ರೋಗಗಳು, ದುರ್ಬಲಗೊಂಡ ಶ್ವಾಸಕೋಶದ ಕಾರ್ಯ

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: