ವಿಷಯಕ್ಕೆ ಹೋಗು

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಮಾಲೋಚನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಮಾಲೋಚನೆ ಅಥವಾ ಆಪ್ತ ಸಮಾಲೋಚನೆ , ಎಂದರೆ, ವಂಶ ಪಾರಂಪರ್ಯವಾಗಿ ಬಂದ ಖಿನ್ನತೆಯ ಅಪಾಯವಿರುವ ರೋಗಿ ಅಥವಾ ಅವರ ಸಂಬಂಧಿಕರಿಗೆ, ಅದರ ಪರಿಣಾಮ ಮತ್ತು ಖಿನ್ನತೆಯ ಗುಣ ಲಕ್ಷಣಗಳ ಬಗ್ಗೆ ಸಲಹೆ ನೀಡಲು, ಖಿನ್ನತೆ ಬೆಳೆಯುವ ಅಥವಾ ವರ್ಗಾಯಿಸುವ ಸಂಭವನೀಯತೆಯನ್ನು ಮತ್ತು ಇದನ್ನು ವ್ಯವಸ್ಥಿತವಾಗಿ ತಡೆಗಟ್ಟಲು, ದೂರವಿಡಲು ಅಥವಾ ಉತ್ತಮಗೊಳಿಸಲು ಇರುವ ಆಯ್ಕೆಗಳನ್ನು ಮತ್ತು ಕುಟುಂಬ ನಿಯಂತ್ರಣ ಯೋಜನೆಯನ್ನು ವಿವರಿಸುವ ಕ್ರಮಬದ್ಧವಾದ ವಿಧಾನ. ಈ ಸಂಕೀರ್ಣ ವಿಧಾನವನ್ನು ರೋಗ ನಿರ್ಣಯದಿಂದ(ಅಪಾಯದ ವಾಸ್ತವಿಕ ಅಂದಾಜು) ಮತ್ತು ಆಧಾರವಾಗಿರುವ ವಿಷಯಗಳಿಂದ ತಿಳಿಯಬಹುದು.[]

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರರು

[ಬದಲಾಯಿಸಿ]

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರ ಒಬ್ಬ ವಿಜ್ಞಾನ ಸ್ನಾತಕೋತ್ತರ ಪಧವೀಧರನಾಗಿದ್ದು ವೈದ್ಯಕೀಯ ವಂಶವಾಹಿ ಶಾಸ್ತ್ರ ನಿಪುಣನಾಗಿರುವನು. ಸಂಯುಕ್ತ ಸಂಸ್ಥಾನ ರಾಷ್ಟ್ರಗಳಲ್ಲಿ ಅವರು ಅಮೆರಿಕನ್ ಬೋರ್ಡ್ ಆಫ್ ಜೆನೆಟಿಕ್ ಕೌನ್ಸೆಲಿಂಗ್‌ವತಿಯಿಂದ ಪ್ರಮಾಣ ಪತ್ರ ಪಡೆಯುತ್ತಾರೆ.[೧] ಈ ಕ್ಷೇತ್ರವನ್ನು ಜೀವಶಾಸ್ತ್ರ, ವಾಂಶವಾಹಿ ಶಾಸ್ತ್ರ, ಶುಶ್ರೂಷಾ ತರಬೇತಿ ಹೊಂದಿದವರು, ಮನಶ್ಶಾಸ್ತ್ರ, ಸಾರ್ವಜನಿಕ ಆರೋಗ್ಯ ಮತ್ತು ಸಮಾಜ ಸೇವೆ ಯಂತಹ ವಿವಿಧ ಶಿಕ್ಷಣದವರು ಪ್ರವೇಶಿಸುತ್ತಾರೆ ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರರು ನಿಪುಣ ಶಿಕ್ಷಕರಾಗಿರುತ್ತಾರೆ, ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಸಂಕೀರ್ಣ ವೈದ್ಯಕೀಯ ಭಾಷೆಯನ್ನು ಸುಲಭವಾಗಿ ಅರ್ಥವಾಗುವ ಪದಗಳಿಗೆ ಭಾಷಾಂತರಿಸುವ ಚಾತುರ್ಯ ಹೊಂದಿರುತ್ತಾರೆ.

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರರು ಆರೋಗ್ಯ ಚಿಕಿತ್ಸಾ ತಂಡದ ಸದಸ್ಯರಾಗಿ ಮತ್ತು ರೋಗಿಯ ಸಲಹೆಗಾರರಾಗಿ ಅಲ್ಲದೆ ವೈದ್ಯರಿಗೆ ತಳಿಶಾಸ್ತ್ರದ ಸಂಪನ್ಮೂಲ ವ್ಯಕ್ತಿಯಾಗಿಯೂ ಕೆಲಸ ನಿರ್ವಹಿಸುತ್ತಾರೆ ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರರು, ಹುಟ್ಟಿನಿಂದಲೇ ನ್ಯೂನತೆ ಅಥವಾ ಅನುವಂಶೀಯ ಖಿನ್ನತೆ ಹೊಂದಿರುವ ಸದಸ್ಯರುಳ್ಳ ಕುಟುಂಬಗಳಿಗೆ ಮತ್ತು ವಿವಿಧ ಅನುವಂಶೀಯ ನ್ಯೂನತೆಗಳನ್ನು ಅಪಾಯದ ಮಟ್ಟದಲ್ಲಿ ಹೊಂದಿರುವ ಕುಟುಂಬಗಳಿಗೆ ಬೆಂಬಲ ಮತ್ತು ಶಿಕ್ಷಣ ಒದಗಿಸುತ್ತಾರೆ ಅವರು ಅಪಾಯದಲ್ಲಿರುವ ಸಂಸಾರಗಳನ್ನು ಗುರುತಿಸುತ್ತಾರೆ, ಕುಟುಂಬದ ಸಮಸ್ಯೆಗಳನ್ನು ತನಿಖೆ ಮಾಡುತ್ತಾರೆ, ಖಿನ್ನತೆಯ ಮಾಹಿತಿಯನ್ನು ವ್ಯಾಖ್ಯಾನಿಸುತ್ತಾರೆ, ಅನುವಂಶೀಯ ಮಾದರಿಯನ್ನು ಮತ್ತು ಪುನರಾವೃತ್ತಿಗೊಳ್ಳುವ ಅಪಾಯವನ್ನು ವಿಶ್ಲೇಷಿಸುತ್ತಾರೆ ಮತ್ತು ಮನೆತನದಲ್ಲಿ ವಂಶವಾಹಿ ಪರೀಕ್ಷೆಯ ಆಯ್ಕೆಯನ್ನು ಪಡೆಯುವುದರ ಬಗ್ಗೆ ಗಮನ ಕೊಡುತ್ತಾರೆ.

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರರು ಅತ್ಯಂತ ತುರ್ತು ಪರಿಸ್ಥಿಯಲ್ಲಿರುತ್ತಾರೆ ಅಥವಾ ಜನನ ಪೂರ್ವದ ರೋಗ ನಿರ್ಣಯವನ್ನು ನೀಡುವ ವಿಶೇಷ ಪ್ರಿನ್ಯಾಟಲ್ ಆಸ್ಪತ್ರೆ, ಶಿಶು ಚಿಕಿತ್ಸಾ ಕೇಂದ್ರಗಳು ಮತ್ತು ಪ್ರೌಢ ತಳಿಶಾಸ್ತ್ರ ಸಂಬಂಧಿ ಕೇಂದ್ರಗಳಲ್ಲಿರುತ್ತಾರೆ. ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಯು ಪ್ರೌಢಾವಸ್ಥೆಯ ಮೂಲಕ (ಹಲ್ಲೆಗೊಳಗಾದ ಪ್ರೌಢಾವಸ್ಥೆಯ ವಂಶವಾಹಿ ಸ್ಥಿತಿಗಳಲ್ಲೊಂದಾದ ಹಂಟಿಂಗ್‌ಟನ್‌ನ ರೋಗ ಅಥವಾ ಅನುವಂಶೀಯ ಅರ್ಬುದ ರೋಗದ ಲಕ್ಷಣಗಳು) ಗರ್ಭಧಾರಣೆಗೆ ಮುನ್ನವೇ ನಡೆಯಬೇಕು(ಅಂದರೆ ಪೋಷಕರಲ್ಲಿ ಒಬ್ಬರು ಅಥವಾ ಇಬ್ಬರು ಕೆಲವು ಲಕ್ಷಣದ ವಾಹಕರಾಗಿದ್ದರೆ)

ರೋಗಿಗಳು

[ಬದಲಾಯಿಸಿ]

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಯನ್ನು ಈ ಲಕ್ಷಣಗಳನ್ನು ತಮ್ಮ ಜೈವಿಕ ತಂದೆತಾಯಿಯರಿಂದ ಅನುವಂಶಿಯವಾಗಿ ಹೊಂದಿದ ಯಾವುದೇ ವ್ಯಕ್ತಿಯಾದರೂ ಪಡೆಯಬಹುದು.

ಒಬ್ಬ ಮಹಿಳೆಯನ್ನು, ಅವಳು ಗರ್ಭಿಣಿಯಾಗಿದ್ದರೆ ಮತ್ತು ಜನನ ಪೂರ್ವ ರೋಗಗಳಿಗೆ ಸಂಬಂಧಿಸಿದ ಪರೀಕ್ಷೆ ಅಥವಾ ಸ್ಕ್ರೀನಿಂಗ್‌ಗೆ ಒಳಪಡುವವಳಾಗಿದ್ದರೆ, ಅವಳನ್ನು ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗೆ ಅನ್ವಯಿಸಬಹುದು. ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರರು ರೋಗಿಗೆ, ಪರೀಕ್ಷಾ ಆಯ್ಕೆಯ ಬಗ್ಗೆ ಮತ್ತು ಅದರ ಫಲಿತಾಂಶದ ಬಗೆಗೆ ಶಿಕ್ಷಣವನ್ನು ನೀಡುತ್ತಾರೆ. ಜನನ ಪೂರ್ವ ರೋಗದ ತಪಾಸಣೆ ಅಥವಾ ಪರೀಕ್ಷೆ ಅಸಹಜವಾಗಿದ್ದರೆ, ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರನು ತೊಂದರೆಗೊಳಗಾದ ಗರ್ಭದ ಅಪಾಯವನ್ನು ಪುನಹ ವಿಚಾರಣೆಗೊಳಪಡಿಸುತ್ತಾನೆ, ಈ ಅಪಯದ ಬಗ್ಗೆ ರೋಗಿಗೆ ತಿಳುವಳಿಕೆ ನೀಡುತ್ತಾನೆ ಮತ್ತು ರೋಗಿಗೆ ಅವನೆದುರಿಗಿರುವ ಆಯ್ಕೆಯ ಬಗ್ಗೆಯೂ ತಿಳಿ ಹೇಳುತ್ತಾನೆ.

.ಒಬ್ಬ ವ್ಯಕ್ತಿ ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಯನ್ನು ಅನುವಂಶೀಯ ಲಕ್ಷಣದ ಮಗುವಿನ ಜನನದ ನಂತರವೂ ಪಡೆಯಬಹುದು. .ಈ ನಿದರ್ಶನಗಳಲ್ಲಿ ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರ ರೋಗಿಗೆ ಅವನ ಪರಿಸ್ಥಿತಿಯನ್ನು ವಿವರಿಸುತ್ತಾನಲ್ಲದೆ ಮುಂದೆ ಹುಟ್ಟುವ ಮಕ್ಕಳಲ್ಲಿಯೂ ಇದು ಪುನರಾಗಮನಗೊಳ್ಳುವ ಅಪಾಯವನ್ನೂ ಮನದಟ್ಟು ಮಾಡುತ್ತಾನೆ. ರೋಗ ಲಕ್ಷಣವುಳ್ಳ ಕುಟುಂಬದ ಇತಿಹಾಸವುಳ್ಳ ಎಲ್ಲ ಪ್ರಕರಣಗಳಲ್ಲಿ ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರನು ಅಪಾಯವನ್ನು, ರೋಗ ಮರುಕಳಿಸುವಿಕೆಯನ್ನು ಪುನರ್ ಪರಿಶೀಲಿಸಬಹುದು ಮತ್ತು ರೋಗ ಲಕ್ಷಣಗಳನ್ನೇ ವಿವರಿಸುತ್ತಾನೆ.

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರರು ಒಂದು ಆಧಾರದಂತೆ

[ಬದಲಾಯಿಸಿ]

ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಗಾರರು ಕುಟುಂಬಗಳಿಗೆ ಬೆಂಬಲಾತ್ಮಕವಾದ ಆಪ್ತ ಸಲಹೆಯನ್ನು ಒದಗಿಸುತ್ತಾರೆ, ರೋಗಿಯ ವಕೀಲರಾಗಿ ಸೇವೆ ಸಲ್ಲಿಸುತ್ತಾರೆ ಮತ್ತು ವ್ಯಕ್ತಿಯನ್ನು ಮತ್ತು ಮನೆತನಗಳನ್ನು ಸಮುದಾಯಕ್ಕೆ ಮತ್ತು ಆಧಾರ ಸೇವಾ ಕೇಂದ್ರಗಳಿಗೆ ಪ್ರಸ್ತಾಪಿಸುತ್ತಾರೆ. ಅವರು ಇತರ ಆರೋಗ್ಯ ತಪಾಸಣಾ ಪೃತ್ತಿನಿರತರಿಗೆ ಮತ್ತು ಸಾರ್ವಾಜನಿಕರಿಗೆ ಶಿಕ್ಷಕರಾಗಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಾರೆ. ಕೆಲವು ಆಪ್ತ ಸಲಹೆಗಾರರು ಆಡಳಿತ ವಿಭಾಗದಲ್ಲಿಯೂ ಕಾರ್ಯ ನಿರ್ವಹಿಸುತ್ತಾರೆ. ಅನೇಕರು ವೈದ್ಯಕೀಯ ತಳಿಶಾಸ್ತ್ರ ಮತ್ತು ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಯ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಲಹೆಯ ಕ್ಷೇತ್ರವು ಬಹಳ ತ್ವರಿತವಾಗಿ ಅಭಿವೃದ್ಧಿಗೊಳ್ಳುತ್ತಿದೆ ಮತ್ತು ಅನೇಕ ಸಲಹೆಗಾರರು ತಳಿಶಾಸ್ತ್ರದ ಸಂಸ್ಥೆಗಳಲ್ಲಿ ಮತ್ತು ಪ್ರಯೋಗಶಾಲೆಗಳಲ್ಲಿ ಕಾರ್ಯ ನಿರ್ವಹಿಸಲು "ಅಸಾಂಪ್ರದಾಯಕವಾದ ವಿಭಾಗ"ಗಳನ್ನು ಆರಿಸಿಕೊಳ್ಳುತ್ತಿದ್ದಾರೆ

ಗರ್ಭದ ಒಳಕವಚದ ತಪಾಸಣೆ

[ಬದಲಾಯಿಸಿ]

(ಆಮ್ನಿಯೊಸೆಂಟಸಿಸ್) ಗರ್ಭದ ಒಳಕವಚದ ತಪಾಸಣೆಯನ್ನು ಮೊದಲ ಬಾರಿಗೆ 1967ರಲ್ಲಿ ಮಾಡಲಾಯಿತು, ಇದು ಭ್ರೂಣದಲ್ಲಿ ಇರಬಹುದಾದ ಅನುವಂಶೀಯ ಮತ್ತು ವರ್ಣತಂತುಗಳ ನ್ಯೂನತೆಗಳನ್ನು ಗುರುತಿಸಲು ಪ್ರಸೂತಿ ತಜ್ನರು ಬಳಸುವ ವಿಧಾನವಾಗಿದೆ. ಆಮ್ನಿಯೊಸೆಂಟಸಿಸ್‌ನ ವೈಜ್ನಾನಿಕ ತಳಹದಿಯು ಬಹಳ ನೇರವಾಗಿದೆ. ತಾಯಿಯ ಗರ್ಭಾಶಯದ ಗರ್ಭ ಚೀಲದಲ್ಲಿ ಭ್ರೂಣವು ಗರ್ಭ ದ್ರಾವಣದಿಂದ ಸುತ್ತುವರಿದಿರುತ್ತದೆ. ಗರ್ಭದ ಒಳಕವಚದ ದ್ರವದಲ್ಲಿ ತೇಲುತ್ತಿರುವ ಜೀವಕೋಶಗಳು ಶಿಶುವಿನ ಚರ್ಮ,ಕರುಳುಗಳು ಮತ್ತು ಮೂತ್ರದ ವಲಯವನ್ನು ಸ್ವಚ್ಚಗೊಳಿಸುತ್ತದೆ. ಇಲ್ಲಿರುವ ಪ್ರತಿ ಜೀವಕೋಶಗಳು ಭ್ರೂಣ ವರ್ಣತಂತುಗಳ ಒಂದು ಸಂಪೂರ್ಣ ರಚನೆಯನ್ನು ಹೊಂದಿದೆ. ಗರ್ಭದ ಒಳಕವಚದ ತಪಾಸಣೆಗಾಗಿ ಈ ಜೀವಕೋಶಗಳನ್ನು ಸಂಗ್ರಹಿಸಲು, ಒಂದು ಉದ್ದವಾದ, ತೆಳು ಸೂಜಿಯನ್ನು ತಾಯಿಯ ಕೆಳಹೊಟ್ಟೆಯ ಮೂಲಕ ಚುಚ್ಚಿ, ಒಂದು ಅಥವಾ ಎರಡು ಚಮಚದಷ್ಟು ಗರ್ಭದ ದ್ರಾವಣವನ್ನು ತೆಗೆಕುಕೊಳ್ಳಬೇಕು. ಈ ಭ್ರೂಣ ಜೀವಕೋಶಗಳನ್ನು ದ್ರವದಿಂದ ಬೇರ್ಪಡಿಸಿ ಪ್ರಯೋಗಾಲಯದಲ್ಲಿ ಸಂಸ್ಕರಿಸುತ್ತಾರೆ. ಜೀವಕೋಶಗಳ ವಿಭಜನೆಯನ್ನು ತಡೆಗಟ್ಟಲು ಜೀವಕೋಶಗಳನ್ನು ಒಂದು ಬಗೆಯ ರಾಸಾಯನ ವಸ್ತುವಿನೊಂದಿಗೆ ಸಂಸ್ಕರಿಸುತ್ತಾರೆ, ನಂತರ ಅದನ್ನು ಸಹಜ ಬಿಗುವನ್ನು ಸಡಿಲಗೊಳಿಸುವ ದ್ರಾವಣದೊಂದಿಗೆ ಸಂಸ್ಕರಿಸುತ್ತಾರೆ, ಇದರಿಂದ ಜೀವಕೋಶಗಳು ಉಬ್ಬುತ್ತವೆ. ಈ ರೀತಿ ಹಿಗ್ಗಿದ ಜೀವಕೋಶಗಳು ಒಂದು ಗಾಜಿನ ಹಲಗೆಯ ಮೇಲೆ ಒಂದು ಹನಿ ದ್ರಾವಣವನ್ನು ಜಾರಿಸುವುದರ ಮೂಲಕ ಒಡೆಯಲ್ಪಡುತ್ತವೆ ಗಾಜಿನ ಹಲಗೆಯನ್ನು ಸೂಕ್ಷ್ಮ ದರ್ಶಕದಲ್ಲಿ ವಿಶ್ಲೇಷಿಸಿದಾಗ ಜೀವಕೋಶದಿಂದ ಬಿಡುಗಡೆಗೊಂಡ ವರ್ಣತಂತುಗಳನ್ನು ಗಮನಿಸಬಹುದು. ನಂತರ ವರ್ಣತಂತುಗಳನ್ನು ಎಣಿಸಿ, ವಿಶ್ಲೇಷಿಸಿ, ಬೆಳೆಯುತ್ತಿರುವ ಭ್ರೂಣದ ಒಂದು ವಂಶವಾಹಿ ಚಿತ್ರವನ್ನು ಪಡೆಯಬಹುದು.

ಇವನ್ನೂ ಗಮನಿಸಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Definitions of Genetic Testing". Definitions of Genetic Testing (Jorge Sequeiros and Bárbara Guimarães). EuroGentest Network of Excellence Project. 2008-09-11. Archived from the original on 2009-02-04. Retrieved 2008-08-10.

ಬಾಹ್ಯ ಕೊಂಡಿಗಳು

[ಬದಲಾಯಿಸಿ]