ಆರ್ಥ್ರಾಲ್ಜಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್ಥ್ರಾಲ್ಜಿಯಾ (ಗ್ರೀಸ್‌ನ ಭಾಷೆಯಿಂದ ಆರ್ಥ್ರೋ-, ಕೀಲು + -ಆಲ್ಗಾಸ್, ನೋವು) ಅಕ್ಷರಶಃ ಕೀಲು ನೋವು ಎಂಬ ಅರ್ಥ ನೀಡುತ್ತದೆ; ಅದು ಗಾಯ, ಸೋಂಕು, ಕಾಯಿಲೆಗಳು (ವಿಶೇಷವಾಗಿ ಸಂಧಿವಾತ) ಅಥವಾ ವೈದ್ಯಕೀಯ ಚಿಕಿತ್ಸೆಯಿಂದ ಉಂಟಾಗುವ ಅಸಹಿಷ್ಣುವಾದ ಪ್ರತಿಕ್ರಿಯೆಯ ಒಂದು ಲಕ್ಷಣ. ಎಮ್ಇಎಸ್ಎಚ್ ಪ್ರಕಾರ, ಪರಿಸ್ಥಿತಿಯು ಅನುದ್ರೇಕಕಾರಿಯಾಗಿದ್ದಾಗ ಮಾತ್ರ "ಆರ್ಥ್ರಾಲ್ಜಿಯಾ" ಪದವನ್ನು ಬಳಸಬೇಕು, ಮತ್ತು ಪರಿಸ್ಥಿತಿಯು ಉದ್ರೇಕಕಾರಿಯಾಗಿದ್ದಾಗ "ಆರ್ಥ್ರೈಟಿಸ್" (ಸಂಧಿವಾತ) ಪದವನ್ನು ಬಳಸಬೇಕು. ರೋಗ ನಿದಾನವು ರೋಗಿಯನ್ನು ಸಂದರ್ಶಿಸುವುದು ಮತ್ತು ದೈಹಿಕ ಪರೀಕ್ಷೆಗಳನ್ನು ನಡೆಸುವುದನ್ನು ಒಳಗೊಳ್ಳುತ್ತದೆ.[೧][೨]

ಕಾರಣಗಳು[ಬದಲಾಯಿಸಿ]

ಆರ್ಥ್ರಾಲ್ಜಿಯಾದ ಕಾರಣಗಳು ವಿಭಿನ್ನವಾಗಿವೆ ಮತ್ತು ಕೀಲುಗಳ ದೃಷ್ಟಿಕೋನದಿಂದ, ಅಸ್ಥಿಸಂಧಿವಾತ ಮತ್ತು ಕ್ರೀಡಾ ಗಾಯಗಳಂತಹ ಕ್ಷೀಣಗೊಳಿಸುವ ಮತ್ತು ವಿನಾಶಕಾರಿ ಪ್ರಕ್ರಿಯೆಗಳಿಂದ ಹಿಡಿದು, ಬರ್ಸೈಟಿಸ್‍ನಂತಹ ಕೀಲುಗಳನ್ನು ಸುತ್ತವರಿದ ಅಂಗಾಂಶಗಳ ಊತದವರೆಗೆ ವ್ಯಾಪಿಸಿವೆ. ಇವು ಸೋಂಕುಗಳು ಅಥವಾ ಲಸಿಕೆ ಹಾಕುವಿಕೆಯಂತಹ ಇತರ ಸ್ಥಿತಿಗಳಿಂದ ಪ್ರಚೋದಿತವಾಗಿರಬಹುದು.

ರೋಗನಿರ್ಣಯ[ಬದಲಾಯಿಸಿ]

ರೋಗನಿರ್ಣಯವು ರೋಗಿಯನ್ನು ಸಂದರ್ಶಿಸುವುದು ಮತ್ತು ದೈಹಿಕ ಪರೀಕ್ಷೆಗಳನ್ನು ನಡೆಸುವುದನ್ನು ಒಳಗೊಂಡಿದೆ. ಆರ್ಥ್ರಾಲ್ಜಿಯಾದ ಕಾರಣವನ್ನು ದೃಢಪಡಿಸಲು ಪ್ರಯತ್ನಿಸುವಾಗ, ಸಂದರ್ಶನದ ಮೇಲೆ ಪ್ರಾಶಸ್ತ್ಯವಿರುತ್ತದೆ. ರೋಗಿಗೆ ಸಂಭಾವ್ಯ ಕಾರಣಗಳ ಸಂಖ್ಯೆಯನ್ನು ಸಂಕುಚಿತಗೊಳಿಸುವ ಉದ್ದೇಶಹೊಂದಿರುವ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಸಂಭವನೀಯ ಕಾರಣಗಳ ವೈವಿಧ್ಯಮಯ ಸ್ವರೂಪದ ಹಿನ್ನೆಲೆಯಲ್ಲಿ, ಕೆಲವು ಪ್ರಶ್ನೆಗಳು ಅಸಂಬದ್ದವಾಗಿ ಕಾಣಿಸಬಹುದು. ಉದಾಹರಣೆಗೆ, ರೋಗಿಗೆ ಬಾಯಿ ಒಣಗುವುದು, ಬೆಳಕಿನ ಸಂವೇದನೆ, ಗಂದೆಗಳು ಅಥವಾ ನಡುಕಗಳ ಇತಿಹಾಸವನ್ನು ಕೇಳಬಹುದು. ಈ ಪ್ರಶ್ನೆಗಳಿಗೆ ಯಾವುದಕ್ಕಾದರೂ ಹೌದು ಅಥವಾ ಇಲ್ಲ ಎಂದು ಉತ್ತರಿಸುವುದು ಸಂಭವನಿಯ ಕಾರಣಗಳ ಸಂಖ್ಯೆಯನ್ನು ಸೀಮಿತಗೊಳಿಸುತ್ತದೆ ಮತ್ತು ವೈದ್ಯನಿಗೆ ಸರಿಯಾದ ಪರೀಕ್ಷೆಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳ ಕಡೆಗೆ ಮಾರ್ಗದರ್ಶಿಸುತ್ತದೆ.

ಚಿಕಿತ್ಸೆ[ಬದಲಾಯಿಸಿ]

ಚಿಕಿತ್ಸೆಯು ನಿರ್ದಿಷ್ಟ ಅಂತರ್ನಿಹಿತ ಕಾರಣದ ಮೇಲೆ ಅವಲಂಬಿತವಾಗಿರುತ್ತದೆ. ಅಂತರ್ನಿಹಿತ ಕಾರಣವನ್ನು ಮೊದಲು ಮತ್ತು ಅಗ್ರಗಣ್ಯವಾಗಿ ಇಲಾಜು ಮಾಡಲಾಗುತ್ತದೆ. ಚಿಕಿತ್ಸೆಗಳು ತೀವ್ರವಾಗಿ ಹಾನಿಗೊಳಗಾದ ಕೀಲುಗಳಿಗೆ ಕೀಲು ಬದಲಿ ಶಸ್ತ್ರಚಿಕಿತ್ಸೆ, ಪ್ರತಿರಕ್ಷಣಾ ವ್ಯವಸ್ಥೆಯ ಅಪಸಾಮಾನ್ಯ ಕ್ರಿಯೆಗಾಗಿ ಪ್ರತಿರಕ್ಷಣಾ ದಮನಕಾರಿ ಮದ್ದುಗಳು, ಸೋಂಕು ಕಾರಣವಾದಾಗ ಪ್ರತಿಜೀವಿಕಗಳು, ಮತ್ತು ಅಲರ್ಜಿಯ ಪ್ರತಿಕ್ರಿಯೆ ಕಾರಣವಾದಾಗ ಔಷಧಿಗಳನ್ನು ನಿಲ್ಲಿಸುವುದನ್ನು ಒಳಗೊಂಡಿರಬಹುದು. ಪ್ರಾಥಮಿಕ ಕಾರಣವನ್ನು ಇಲಾಜು ಮಾಡುವಾಗ, ನೋವು ನಿರ್ವಹಣೆಯು ಚಿಕಿತ್ಸೆಯಲ್ಲಿ ಪಾತ್ರವಹಿಸಬಹುದು. ಆರ್ಥ್ರಾಲ್ಜಿಯಾದ ನಿರ್ದಿಷ್ಟ ಕಾರಣವನ್ನು ಅವಲಂಬಿಸಿ, ಅದರ ಪಾತ್ರದ ವ್ಯಾಪ್ತಿ ಬದಲಾಗುತ್ತದೆ. ನೋವು ನಿರ್ವಹಣೆಯು ಚಾಚುವ ವ್ಯಾಯಾಮಗಳು, ವೈದ್ಯರ ಔಷಧ ಚೀಟಿ ಬೇಕಾಗದ ನೋವಿನ ಔಷಧಿಗಳು, ಶಿಫಾರಸು ಮಾಡಲಾಗಿರುವ ನೋವಿನ ಔಷಧಿಗಳು, ಅಥವಾ ಲಕ್ಷಣಗಳಿಗೆ ಸೂಕ್ತವೆಂದು ಪರಿಗಣಿತವಾದ ಇತರ ಚಿಕಿತ್ಸೆಗಳನ್ನು ಒಳಗೊಂಡಿರಬಹುದು. ಮೆಣಸಿನಕಾಯಿಯಲ್ಲಿ ಕಂಡುಬರುವ ಒಂದು ಪದಾರ್ಥವಾದ ಕ್ಯಾಪ್ಸಿಸಿನ್, ಸಂಧಿವಾತ ಮತ್ತು ಇತರ ಸ್ಥಿತಿಗಳಿಂದ ಕೀಲು ನೋವನ್ನು ನಿವಾರಿಸಬಹುದು. ಕ್ಯಾಪ್ಸೈಸಿನ್ ದೇಹದಲ್ಲಿ ಎಂಡೋರ್ಫಿನ್ ಎಂಬ ನೋವು ತಡೆಗಟ್ಟುವಂತಹ ರಾಸಾಯನಿಕಗಳ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಕ್ಯಾಪ್ಸೈಸಿನ್ ಕ್ರೀಮ್‍ನ ಅಡ್ಡಪರಿಣಾಮಗಳು ಲೇಪಿತ ಪ್ರದೇಶದಲ್ಲಿ ಉರಿ ಅಥವಾ ಕುಟುಕುವಿಕೆಯನ್ನು ಒಳಗೊಂಡಿವೆ. ಮತ್ತೊಂದು ಬಾಹ್ಯ ಆಯ್ಕೆ ಮಿಥೈಲ್ ಸ್ಯಾಲಿಸಿಲೇಟ್ ಘಟಕಾಂಶವನ್ನು ಹೊಂದಿರುವ ಒಂದು ಸಂಧಿವಾತ ಕ್ರೀಂ.

ಆರ್ಥ್ರಾಲ್ಜಿಯಾದ ಮಿಂಗ್ ಔಷಧಿ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2019-08-01. Retrieved 2017-02-02.
  2. "ಆರ್ಕೈವ್ ನಕಲು". Archived from the original on 2019-08-01. Retrieved 2017-02-02.