ಸದಾಶಿವಗಡ
ಗೋಚರ
ಸದಾಶಿವಗಡ ಇದು ಕಾಳಿ ನದಿಯು ಅರಬ್ಬಿ ಸಮುದ್ರಕ್ಕೆ ಸೇರುವ ಜಾಗದಲ್ಲಿ ಇರುವ ಒಂದು ಸಣ್ಣ ಊರು. ಇದು ಕಾರವಾರದಿಂದ ೬ ಕಿ.ಮೀ ದೂರದಲ್ಲಿದೆ. ಕಾರವಾರ ಮತ್ತು ಸದಾಶಿವಗಡದ ನಡುವೆ ಕಾಳಿ ನದಿಗೆ ತುಂಬಾ ಉದ್ದವಾದ ಸೇತುವೆಯನ್ನು ಕಟ್ಟಿದ್ದಾರೆ. ಇಲ್ಲಿ ಒಂದು ಎತ್ತರವಾದ ಗುಡ್ಡವಿದೆ ಹಾಗು ಗುಡ್ಡದ ಮೇಲೆ ಒಂದು ಕೋಟೆ ಇದೆ.ಗುಡ್ಡದ ಬುಡಬಾಗದಲ್ಲಿ ತುಳಜಾ ಭವಾನಿ ದೇವಾಲಯವಿದೆ. ಗುಡ್ಡದ ಮೇಲಿನಿಂದ ಅರಬ್ಬಿ ಸಮುದ್ರ ಮತ್ತು ಕಾಳಿ ನದಿ ಸೇರುವ ಸುಂದರ ದೃಶ್ಯ ಮನಮೋಹಕ. ಕೊಂಕಣಿ ಸ್ಥಳೀಯ ಭಾಷೆಯಾಗಿ ಮಾತನಾಡುತ್ತಾರೆ.
ಈ ಕೋಟೆಯನ್ನು, ಸಮುದ್ರ ಸಂಧಿಸುವ ಕಾಳಿ ನದಿಯ ಉತ್ತರ ದಂಡೆಯಲ್ಲಿರುವ ಹಳೆಯ ಕೋಟೆಯ ಜಾಗದಲ್ಲಿ ಕಟ್ಟಲಾಗಿದೆ. ಇದು ಸುಮಾರು ೮ ಮೀಟರ್ಗಳಷ್ಟು ಎತ್ತರದ ಗೋಡೆಗಳನ್ನು ಹೊಂದಿತ್ತು. ಆ ಗೋಡೆಯ ಮೇಲ್ಭಾಗವು ಸುಮಾರು ೨ ಮೀಟರ್ ಅಗಲ ಇದ್ದವು. ಬಂದೂಕುಗಳನ್ನು ಇರಿಸಲು ಗೋಪುರಗಳು ಮತ್ತು ಅವಶ್ಯವಾದ ಜಾಗ ಇದ್ದವು.
ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.