ಮಂಜರಾಬಾದ್ ಕೋಟೆ
ಮಂಜರಾಬಾದ್ ಕೋಟೆ ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮುಂದಕ್ಕೆ ೫ ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಇದು ಶಿರಾಡಿ ಘಾಟಿ ಹಾಗು ಬಿಸಿಲೆ ಘಾಟಿ ರಸ್ತೆಗಳ ಕವಲಿನಲ್ಲಿ ಇದೆ.
ಕೋಟೆಯ ಹಿನ್ನೆಲೆ[ಬದಲಾಯಿಸಿ]
ಮಂಜರಾಬಾದ್ ಕೋಟೆಯನ್ನು ಟಿಪ್ಪು ಸುಲ್ತಾನ್ ೧೭೮೫-೧೭೯೨ರ ನಡುವೆ ನಿರ್ಮಿಸಿದನು[೧]. ನಾಲ್ಕನೇ ಆಂಗ್ಲ-ಮೈಸೂರು ಯುದ್ಧದಲ್ಲಿ ಈ ಕೋಟೆಯನ್ನು ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಬ್ರಿಟೀಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಅದರ ಕೆಲವು ಭಾಗಗಳನ್ನು ನಾಶಮಾಡಿದರೆನ್ನಲಾಗಿದೆ.
ಕೋಟೆಯ ವಿನ್ಯಾಸ[ಬದಲಾಯಿಸಿ]
ಸುಮಾರು ೨೫೦ ಮೆಟ್ಟಿಲುಗಳನ್ನು ಏರಿ ಮಂಜರಾಬಾದ್ ಕೋಟೆಯನ್ನು ತಲುಪಬಹುದು. ಸಮುದ್ರ ಮಟ್ಟದಿಂದ ಸುಮಾರು ೩೨೪೦ ಅಡಿ ಎತ್ತರದಲ್ಲಿದ್ದು, ಸುಮಾರು ೫ ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಿಸಲ್ಪಟ್ಟಿದೆ[೨]. ಇದನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಜಾಗ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳಿವೆ. ಈ ಕೋಟೆಯಲ್ಲಿ ಹಲವಾರು ಸುರಂಗ ಮಾರ್ಗಗಳು ಇವೆಯೆಂದು ಹೇಳಲಾಗುತ್ತದೆ. ಅವು ಶ್ರೀರಂಗಪಟ್ಟಣದವರೆಗೂ ತಲುಪಿಸುತ್ತದೆ ಎಂದು ಹೇಳಲಾಗುತ್ತದೆ, ಆದರೆ ಈವರೆಗೆ ಯಾರೂ ಅದರಲ್ಲಿ ಸಂಚರಿಸಿದ ಮಾಹಿತಿಯಿಲ್ಲ.
![]() |
ವಿಕಿಮೀಡಿಯ ಕಣಜದಲ್ಲಿ Manjarabad Fort ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |