ವಿಜಯಕಲಾ
ವಿಜಯಕಲಾ | |
---|---|
ಮರಣ | ಸಪ್ಟೆಂಬರ್ ೩೦, ೨೦೧೩ |
ವೃತ್ತಿ | ಚಲನಚಿತ್ರ ಮತ್ತು ರಂಗ ನಟಿ |
ಸಕ್ರಿಯ ವರ್ಷಗಳು | ೧೯೭೧-೧೯೯೧ |
ವಿಜಯಕಲಾ ಕನ್ನಡದ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದೆ [೧][೨]. ಉತ್ತರ ಕರ್ನಾಟಕದ ನಾಟಕ ಕಂಪೆನಿಗಳ ಮೂಲಕ ರಂಗಭೂಮಿಯಲ್ಲಿ ಅಪಾರ ಯಶಸ್ಸು ಗಳಿಸಿದ್ದ ವಿಜಯಕಲಾ ಸುಮಾರು ೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ೭೦ ಮತ್ತು ೮೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವಿಜಯಕಲಾ ಅವರ ಪ್ರಮುಖ ಚಿತ್ರಗಳೆಂದರೆ ಮಗ ಮೊಮ್ಮಗ(೧೯೭೪), ಯಾರು ಹಿತವರು (೧೯೭೬) ಮತ್ತು ತೀರದ ಬಯಕೆ(೧೯೮೧).
ವೃತ್ತಿ ಜೀವನ
[ಬದಲಾಯಿಸಿ]ಕಲ್ಯಾಣಿ(೧೯೭೧) ಮತ್ತು ತ್ರಿವೇಣಿ(೧೯೭೨) ಮುಂತಾದ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ವಿಜಯಕಲಾ ಮಗ ಮೊಮ್ಮಗ(೧೯೭೪) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾಯಿ ಮತ್ತು ಮಗಳ ಪಾತ್ರಗಳಲ್ಲಿ ಇವರ ಅಭಿನಯ ಗಮನಾರ್ಹವಾಗಿತ್ತು. ವಿಜಯಕಲಾ ನಾಯಾಕಿಯಾಗಿ ಅಭಿನಯಿಸಿದ ಪ್ರಮುಖ ಚಿತ್ರಗಳೆಂದರೆ ಆಶೀರ್ವಾದ(೧೯೭೫), ಯಾರು ಹಿತವರು(೧೯೭೬) ಮತ್ತು ತೀರದ ಬಯಕೆ(೧೯೮೧). ಪ್ರಖ್ಯಾತ ನಿರ್ದೇಶಕ ಸಿ.ವಿ.ಶಿವಶಂಕರ್ ಅವರ ನಿರ್ದೇಶನದ ಮಹಾತಪಸ್ವಿ(೧೯೭೭) ಮತ್ತು ಹೊಯ್ಸಳ(೧೯೭೮) ಚಿತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ ವಿಜಯಕಲಾ ಪ್ರೇಮ ಮಂದಿರ(೧೯೮೪) ಮತ್ತು ಡೈಮಂಡ್ ಸಿಕ್ರೆಟ್ ಚಿತ್ರಗಳನ್ನು ಸ್ವತಃ ತಾವೇ ನಿರ್ಮಿಸಿ ನಿರ್ದೇಶಿಸಿದ್ದರು. ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದ ಕಾರಣಕ್ಕೆ ಚಿತ್ರರಂಗದಿಂದ ದೂರ ಸರಿದಿದ್ದರು[೨].
ನಿಧನ
[ಬದಲಾಯಿಸಿ]೨೦೧೩ರ ಸಪ್ಟೆಂಬರ್ ೩೦ರಂದು ಉಸಿರಾಟದ ತೊಂದರೆಯಿಂದ ನಿಧನರಾದರು.[೨]
ವಿಜಯಕಲಾ ಅಭಿನಯದ ಕೆಲವು ಚಿತ್ರಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ವಿಜಯಕಲಾ". ಚಿಲೋಕ.
- ↑ ೨.೦ ೨.೧ ೨.೨ "ಕನ್ನಡಸಿನಿಮಾ ಹಾಗೂ ರಂಗಭೂಮಿ ಕಲಾವಿದೆ ವಿಜಯಕಲಾ ನಿಧನ". ಕನ್ನಡ ಫಿಲ್ಮಿ ಬೀಟ್.
- ↑ "ವಿಜಯಕಲಾ ಅಭಿನಯದ ಕನ್ನಡ ಚಲನಚಿತ್ರಗಳ ಪಟ್ಟಿ". ಚಿಲೋಕ.ಕಾಮ್.