ವಿಷಯಕ್ಕೆ ಹೋಗು

ನಿರ್ವಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Translations of
[ನಿಬ್ಬಾಣ] Error: {{Transliteration}}: transliteration text not Latin script (pos 1) (help)
Englishextinguishing
Paliನಿಬ್ಬಾಣ
Sanskritनिर्वाण ([ನಿರ್ವಾಣ] Error: {{Transliteration}}: transliteration text not Latin script (pos 1) (help))
Burmeseနိဗ္ဗာန် (ನಿಬ್ಬಾಣ)
Chinese涅槃
(Pinyinnièpán)
Japanese涅槃
(rōmaji: [ನೆಹನ್] Error: {{Lang}}: Non-latn text (pos 1)/Latn script subtag mismatch (help))
Korean열반 (ಯೋಲ್ಬಾಬ್)
Mongolianγasalang-aca nögcigse OLIVER QUINN IZ DA BEST
Sinhalaනිවන
Tibetanmya-ngan-las-'das-pa
Thaiนิพพาน (ನಿಬ್‌ಪಾನ್)
VietnameseNiết bàn
ಬೌದ್ಧಧರ್ಮದ ಶಬ್ದಕೋಶ

ನಿರ್ವಾಣ ಸಂಸ್ಕೃತ:निर्वाणಪಾಳಿ:निब्बानಪ್ರಾಕೃತ:णिव्वाणನಿರ್ವಾಣವು ಸಂಕಷ್ಟ(ಅಥವಾ ದುಃಖ)ದಿಂದ ಮುಕ್ತವಾಗಿರುವ ಸ್ಥಿತಿ ಎಂದು ಶ್ರಮಣ ಚಿಂತನೆಯಲ್ಲಿದೆ. ಪಾಲಿಯಲ್ಲಿ "ನಿಬ್ಬಾನಾ"ಎಂದರೆ "ನಂದಿಸುವುದು"-ಅಸೂಯೆ,ದ್ವೇಷ ಮತ್ತು ಅಜ್ಞಾನದ ಬೆಂಕಿಗಳನ್ನು ನಂದಿಸುವುದು.[] ಇದು ಬೌದ್ಧಧರ್ಮದಲ್ಲಿ ಶ್ರೇಷ್ಟ ಸತ್ಯವಾಗಿದ್ದು,ಜೈನಧರ್ಮದಲ್ಲಿ ಮುಖ್ಯ ಪರಿಕಲ್ಪನೆಯಾಗಿದೆ.

ಬೌದ್ಧಧರ್ಮದಲ್ಲಿ ನಿರ್ವಾಣ

[ಬದಲಾಯಿಸಿ]

ಬುದ್ಧ ನಿರ್ವಾಣವನ್ನು ಕಡುಬಯಕೆ, ಕೋಪ ಮತ್ತು ಇತರೆ ಕ್ಲೇಶದ ಸ್ಥಿತಿಗಳಿಂದ(ಕಿಲೇಸಗಳು) ಮುಕ್ತವಾಗಿರುವ ಸಂಪೂರ್ಣ ಶಾಂತ ಮನಸ್ಥಿತಿ ಎಂದು ಬಣ್ಣಿಸಿದ್ದಾನೆ. ವ್ಯಕ್ತಿಯು ಜಗತ್ತಿನಲ್ಲಿ ಶಾಂತಿಯಿಂದ ಇರುತ್ತಾನೆ, ಎಲ್ಲರಿಗೂ ಕರುಣೆ ತೋರುತ್ತಾನೆ ಹಾಗೂ ಗೀಳುಗಳು ಮತ್ತು ಆಕರ್ಷಣೆಗಳನ್ನು ತೊರೆಯುತ್ತಾನೆ. ಪ್ರಸಕ್ತ ಇಚ್ಛೆಗಳ ರಚನೆಗಳನ್ನು(ಸಂಸ್ಕಾರ) ಉಪಶಮನಗೊಳಿಸಿದಾಗ ಈ ಶಾಂತಿ ಸಾಧನೆಯಾಗುತ್ತದೆ. ಹೊಸ ಇಚ್ಛೆಗಳ ನಿರ್ಮಾಣದ ಪರಿಸ್ಥಿತಿಗಳು ನಿರ್ಮೂಲನೆಯಾಗುತ್ತವೆ. ನಿರ್ವಾಣದಲ್ಲಿ ಕಡುಬಯಕೆ ಮತ್ತು ದ್ವೇಷದ ಮೂಲ ಕಾರಣಗಳನ್ನು ಅಳಿಸಲಾಗುತ್ತದೆ. ಇದರಿಂದ ಒಬ್ಬ ವ್ಯಕ್ತಿಯು ಮಾನವ ಸಂಕಷ್ಟಗಳಿಗೆ ಗುರಿಯಾಗುವುದಿಲ್ಲ(ಪಾಲಿ: ದುಃಖ)ಅಥವಾ ಸಂಸಾರದಲ್ಲಿ ಪುನರ್ಜನ್ಮಗಳ ಸ್ಥಿತಿಗಳಿಗೆ ಒಳಗಾಗುವುದಿಲ್ಲ.

ಪಾಲಿ ಗ್ರಂಥವು ನಿರ್ವಾಣ ಕುರಿತು ಇತರೆ ದೃಷ್ಟಿಕೋನಗಳನ್ನು ಹೊಂದಿವೆ. ಇದು ಇಂದ್ರಿಯಗ್ರಾಹ್ಯ ಸಂಗತಿಗಳ ಶೂನ್ಯತೆಯ ಸ್ವರೂಪವನ್ನು ನೋಡುವುದಕ್ಕೆ ಸಂಬಂಧಿಸಿದೆ. ಇದನ್ನು ಪ್ರಜ್ಞೆಯ ಮೂಲಭೂತ ಮರುಸ್ಥಾಪನೆ ಮತ್ತು ಅರಿವನ್ನು ಬಿಡುಗಡೆ ಮಾಡುವುದು ಎಂದು ವರ್ಣಿಸಲಾಗಿದೆ.[] ವಿದ್ವಾಂಸ ಹರ್ಬರ್ಟ್ ಗೆಂಥರ್ ನಿರ್ವಾಣದೊಂದಿಗೆ "ಸೂಕ್ತ ವ್ಯಕ್ತಿತ್ವ ಮತ್ತು ನಿಜವಾದ ಮಾನವ ಜೀವ"ವು ವಾಸ್ತವರೂಪ ಪಡೆಯುತ್ತದೆಂದು ಬಣ್ಣಿಸಿದ್ದಾರೆ.[]

ಬುಧ್ಧ ಧಮ್ಮಪದದಲ್ಲಿ ನಿರ್ವಾಣದ ಬಗ್ಗೆ ತಿಳಿಸುತ್ತಾ, "ಇದು ಸಂತೋಷದ ಪರಮಾವಧಿ ಸ್ಥಿತಿ"ಯೆಂದು ಹೇಳಿದ್ದಾನೆ. ಈ ಸಂತೋಷವು ಅನುಭವಕ್ಕೆ ಬರುವ ಅತೀಂದ್ರಿಯ ಸಂತೋಷವಾಗಿದ್ದು, ನಶ್ವರ ವಸ್ತುಗಳಿಂದ ಹುಟ್ಟಿದ ಸಂತೋಷಕ್ಕಿಂತ ಜ್ಞಾನೋದಯ ಅಥವಾ ಬೋಧಿ ಮೂಲಕ ಸಾಧಿಸಿದ ಶಾಂತಿಗೆ ಅವಿಭಾಜ್ಯವಾಗಿದೆ. ನಿರ್ವಾಣದ ಜತೆಗೂಡುವ ಜ್ಞಾನವು ಬೋಧಿ ಪದ ಮೂಲಕ ವ್ಯಕ್ತವಾಗುತ್ತದೆ.

ಬುದ್ಧ ನಿರ್ವಾಣವನ್ನು ಯಾವುದೇ ನಿರ್ಬಂಧವಿಲ್ಲದಅಸಂಕತ ಮನಸ್ಸಾಗಿದ್ದು, ಇಚ್ಛೆಗಳ ರಚನೆಯ ಸ್ಥಗಿತದಿಂದ, ಸಂಪೂರ್ಣ ನಿರ್ಮಲತೆ ಮತ್ತು ಸ್ಪಷ್ಟತೆ ಪಡೆದ ಹಂತ ಹೊಂದಿರುವ ಮನಸ್ಸು ಎಂದು ವಿವರಿಸುತ್ತಾನೆ. ಇದನ್ನು ಬುದ್ಧ "ಅಮರತ್ವ" ಎಂದು ಬಣ್ಣಿಸುತ್ತಾನೆ(ಪಾಲಿ:ಅಮತ ಅಥವಾ ಅಮರಾವತಿ ),ಗರಿಷ್ಠ ಆಧ್ಮಾತಿಕ ಸಾಧನೆಯಾಗಿದ್ದು,ಉದಾತ್ತ ಎಂಟುಹಂತದ ಹಾದಿಗೆ ಅನುಗುಣವಾಗಿ ಆಚಾರವಿಚಾರಗಳಲ್ಲಿ ಸದ್ಗುಣದ ಜೀವನ ನಡೆಸುವವರಿಗೆ ಸಿಗುವ ಸ್ವಾಭಾವಿಕ ಫಲ. ಇಂತಹ ಜೀವನವು ಕರ್ಮದ ಪೀಳಿಗೆಯ ಮೇಲೆ ಹೆಚ್ಚು ನಿಯಂತ್ರಣವನ್ನು ಹೊಂದುತ್ತದೆ.(ಸಂಸ್ಕೃತ, ಪಾಲಿ ಕಮ್ಮ ). ಇದು ಸಂಪೂರ್ಣ ಕರ್ಮವನ್ನು ಸಕಾರಾತ್ಮಕ ಫಲಿತಾಂಶದೊಂದಿಗೆ ನೀಡುತ್ತದೆ ಮತ್ತು ಅಂತಿಮವಾಗಿ ನಿಬ್ಬಾಣದ ಸಾಧನೆಯೊಂದಿಗೆ ಕರ್ಮದ ಹುಟ್ಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತದೆ. ಇಲ್ಲದಿದ್ದರೆ,ಜೀವಿಗಳು ನಶ್ವರ ಮತ್ತು ಸಂಕಷ್ಟಗಳನ್ನು ಉಂಟುಮಾಡುವ ಸಂಸಾರ ವೆಂದು ಒಟ್ಟಾಗಿ ಕರೆಯುವ ಆಸೆ,ರೂಪ,ರೂಪರಾಹಿತ್ಯ ಜಗತ್ತಿನಲ್ಲಿ ನಿರಂತರವಾಗಿ ಅಲೆದಾಡುತ್ತವೆ.

ಪ್ರತಿಯೊಬ್ಬ ವಿಮೋಚಿತ ವ್ಯಕ್ತಿ ಯಾವುದೇ ಹೊಸ ಕರ್ಮವನ್ನು ಸೃಷ್ಟಿಸುವುದಿಲ್ಲ, ಆದರೆ,ನಿರ್ದಿಷ್ಟ ವ್ಯಕ್ತಿತ್ವವನ್ನು ಗಳಿಸುತ್ತಾನೆ. ಇದು ಅವನ ಅಥವಾ ಅವಳ ಕರ್ಮದ ಪರಂಪರೆಯ ಗುರುತುಗಳ ಫಲವಾಗಿದೆ. ಅರಹಂತ್ ಜೀವಿತಾವಧಿಯ ಮಿಕ್ಕಭಾಗದಲ್ಲಿ ಮಾನಸಿಕ-ಭೌತಿಕ ತಳಹದಿಯಿರುತ್ತದೆಂಬ ಸತ್ಯವು ಕರ್ಮದ ನಿರಂತರ ಪರಿಣಾಮವನ್ನು ತೋರಿಸುತ್ತದೆ.[]

ನಿರ್ವಾಣವು "ಯಾವುದೇ ನಿರ್ಬಂಧವಿಲ್ಲದ್ದಾಗಿದ್ದು" ಅದು "ಕಾರಣವಿಲ್ಲದ್ದು" ಅಥವಾ "ಸ್ವತಂತ್ರ"ವಲ್ಲ.

ಮುಂಚಿನ ಧರ್ಮಗ್ರಂಥಗಳ ನಿಲುವೇನೆಂದರೆ ನಿರ್ವಾಣವನ್ನು ಪ್ರಸಕ್ತ ಅಥವಾ ಪುನರ್ಜನ್ಮದಲ್ಲಿ ಸಾಧಿಸುವುದು ಸ್ವಪ್ರಯತ್ನವನ್ನು ಅವಲಂಬಿಸಿದ್ದು, ಪೂರ್ವನಿರ್ಧರಿತವಲ್ಲ ಎನ್ನುವುದಾಗಿದೆ.[] ಇದಿಷ್ಟೇ ಅಲ್ಲದೇ ಮೋಕ್ಷಸಾಧನೆಯು ಪಾಲಿ ನಿಕಾಯಗಳ ಪ್ರಕಾರ, ಪೂರ್ವದಲ್ಲಿದ್ದ ಅಥವಾ ಶಾಶ್ವತ ಬದುಕಿನ ಪರಿಪೂರ್ಣತೆಗೆ ಸಂದ ಮನ್ನಣೆಯಲ್ಲ,ಆದರೆ ಇಲ್ಲಿವರೆಗೆ ಸಾಧಿಸಲಾಗದ್ದನ್ನು ಸಾಧಿಸಿದ್ದಕ್ಕೆ ಸಿಕ್ಕಿದ ಫಲ.[] ಇದು ಸಂಪ್ರದಾಯಬದ್ಧ ಯೋಗಕರ ಸ್ಥಿತಿಯಾಗಿದ್ದು,ಅದು ಬುದ್ಧಗೋಷನದ್ದಾಗಿದೆ.[]

ವ್ಯುತ್ಪತ್ತಿ ಶಾಸ್ತ್ರ

[ಬದಲಾಯಿಸಿ]

ನಿರ್ವಾಣವು ಪೂರ್ವಪ್ರತ್ಯಯದ ಸಂಯೋಗವಾಗಿದ್ದು ನಿ(ರ್)-(ನಿ,ನಿಸ್,ನಿಹ್)ಅಂದರೆ ಅಥವಾ, "ಹೊರಗೆ, ದೂರ, ಇಲ್ಲದೇ" ಮತ್ತು ಮೂಲ ವಾ(ನಾ)(ಪಾಲಿ.ವಾಟಿ ),ಅದನ್ನು ಬೀಸುವುದು ಎಂದು ಅನುವಾದಿಸಬಹುದು, "ಗಾಳಿ ಬೀಸುವುದು" ಮುಂತಾದವು,ಮತ್ತು "ವಾಸನೆ ಹೀರುವುದು ಮುಂತಾದವು"[೭] Archived 2009-04-20 ವೇಬ್ಯಾಕ್ ಮೆಷಿನ್ ನಲ್ಲಿ.

(0}ಅಭಿಧರ್ಮಾ-ಮಹಾವಿಭಾಷಾ-ಶಾಸ್ತ್ರ, ಸರ್ವಸ್ಟಿವಾದ ವ್ಯಾಖ್ಯೆಯು ಸಂಸ್ಕೃತ ಮೂಲಗಳಿಂದ ಸಂಭಾವ್ಯ ಅರ್ಥಗಳ ಸಂಪೂರ್ಣ ಸಂದರ್ಭಗಳನ್ನು ನೀಡುತ್ತದೆ.

  • ವನಾ,ಮರುಜನ್ಮದ ಹಾದಿಯನ್ನು ಸೂಚಿಸುವ,+ನಿರ್,ಅರ್ಥ ಬಿಡುವುದು ಅಥವಾ "ಪುನರ್ಜನ್ಮದ ಹಾದಿಯಿಂದ ದೂರಸರಿಯುವುದು"
  • ವನಾ ಎಂದರೆ ಅರ್ಥ 'ದುರ್ನಾತ',+ ನಿರ್,ಅರ್ಥ "ಸ್ವಾತಂತ್ರ್ಯ" "ವೇದನೆಯ ಕರ್ಮದ ದುರ್ನಾತದಿಂದ ಮುಕ್ತಿ"
  • ವನಾ ಅರ್ಥ ದಟ್ಟವಾದ ಕಾಡುಗಳು,+ ನಿರ್,ಅರ್ಥ "ತ್ಯಜಿಸುವುದು" "ಐದು ಸ್ಕಂದಗಳ ದಟ್ಟವಾದ ಕಾಡನ್ನು ಕಾಯಂ ತ್ಯಜಿಸುವುದು"(ಪಂಕಾ ಸ್ಕಂದಾ)ಅಥವಾ ಆಸೆ,ದ್ವೇಷ ಮತ್ತು ಅಜ್ಞಾನದ ಮೂರು ಮೂಲಗಳು(ರಾಗ ,ದ್ವೇಷ ,ಅವಿದ್ಯಾ )ಅಥವಾ ಅಸ್ತಿತ್ವದ ಮೂರು ಗುಣಗಳು(ನಶ್ವರ,ಅನಿತ್ಯ,ಅತೃಪ್ತಿ, ದುಃಖ,ಆತ್ಮಶೂನ್ಯತೆ ಮತ್ತು ಅನಾತ್ಮನ್)
  • ವನಾ ಅರ್ಥ ಹೊಲಿಯುವುದು + ನಿರ್ ಅರ್ಥ "ಗಂಟು"= "ಕರ್ಮದ ಯಾತನೀಯ ಗಂಟಿನಿಂದ ಸ್ವಾತಂತ್ರ್ಯ"

ಸ್ಥೂಲ ಅವಲೋಕನ

[ಬದಲಾಯಿಸಿ]

ನಿರ್ವಾಣವು ಸೂತ್ರಗಳಲ್ಲಿ ಸ್ಥಳವಾಗಿ ಗ್ರಹಿಕೆಯಾಗಿಲ್ಲ(ಒಬ್ಬರು ಸ್ವರ್ಗವೆಂದು ಎಣಿಸಬಹುದು)ಆದರೆ ಸ್ವತಃ ಅಜ್ಞಾನದ ಸಮಾನಾರ್ಥಕ(ಅವಿದ್ಯಾ,ಪಾಲಿ ಅವಿಜ್ಜ )ವಾದ ಸಂಸಾರವಿರೋಧವೂ ಅಲ್ಲ(ಕೆಳಗೆ ನೋಡಿ) , ಅದನ್ನು ಹೀಗೆಂದು ಹೇಳಿದೆ:

ಹೀಗೆ ಹೇಳಿದೆ:

"ಅಂಟಿಕೊಳ್ಳದ ವಿಮೋಚನೆ ಹೊಂದಿದ ಮನಸ್ಸು(ಸಿಟ್ಟ)ಅಂದರೆ ಅರ್ಥ ನಿಬ್ಬಾನಾ"(ಮಜಿಮಾ ನಿಕಾಯ 2-Att.4.68) 4.68).

ನಿರ್ವಾಣವು ನಿರ್ದಿಷ್ಟವಾಗಿ ಅಧ್ಯಾತ್ಮ ರಹಸ್ಯಜ್ಞಾನಕ್ಕೆ ಸಂಬಂಧಿಸಿದೆ.ಇದು ಮನಸ್ಸಿನ ಗುರುತನ್ನು(ಸಿಟ್ಟಾ)ಪ್ರಾಯೋಗಿಕ ವಿದ್ಯಮಾನದೊಂದಿಗೆ ಕೊನೆಗೊಳಿಸುತ್ತದೆ. ಸೈದ್ಧಾಂತಿಕವಾಗಿ ನಿಬ್ಬಾಣವು "ಇನ್ನೆಂದೂ ಆಗಮಿಸದಿರುವ ಮನಸ್ಸು(ಭಾವ )ಮತ್ತು ನಿರ್ಗಮಿಸದಿರುವ ಮನಸ್ಸು (ವಿಭಾವ ). ಆದರೆ ನಿರಂತರತೆಯ ಸ್ಥಿತಿಗತಿಯನ್ನು ಸಾಧಿಸಿದ ಇದು ವಿಮೋಚನೆ(ವಿಮುಟ್ಟಾ )ಪಡೆಯಬಹುದು.

ನಿಶ್ಚಲ,ಶೀತಲ ಮತ್ತು ಶಾಂತಿ ಮಂತಾದ ಹೆಚ್ಚಿನ ಅರ್ಥಗಳನ್ನು ಕೊಡುತ್ತದೆ. ನಿರ್ವಾಣದ ಸಾಕ್ಷಾತ್ಕಾರವನ್ನು ಅವಿದ್ಯ(ಅಜ್ಞಾನ)ದ ಅಂತ್ಯಕ್ಕೆ ಹೋಲಿಸಲಾಗಿದೆ. ಮನಸ್ಸಿನ ಅವತಾರವನ್ನು ಜೈವಿಕ ಅಥವಾ ಇತರೆ ಸ್ವರೂಪಕ್ಕೆ ತಿರುಗಿಸುವಂತೆ ಅಜ್ಞಾನವು ಇಚ್ಛೆಯ(ಸೆಟಾನ) ಮೇಲೆ ನಿರಂತರ ಪರಿಣಾಮ ಉಂಟುಮಾಡಿ,ಜನ್ಮದಿಂದ ಜನ್ಮಕ್ಕೆ ಸತತವಾಗಿ ಸಾಗುವಂತೆ(ಸಂಸಾರ)ಮಾಡುತ್ತದೆ. ಸಂಸಾರವು ಮುಖ್ಯವಾಗಿ ಕಡುಬಯಕೆ ಮತ್ತು ಅಜ್ಞಾನದಿಂದ ಉಂಟಾಗುತ್ತದೆ(ಪರಸ್ಪರ ಅವಲಂಬನೆಯ ಸೃಷ್ಟಿ) ವ್ಯಕ್ತಿಯೊಬ್ಬ ಸಾವನ್ನಪ್ಪದೇ ಜೀವಂತವಿರುವಾಗಲೇ ನಿರ್ವಾಣವನ್ನು ಸಾಧಿಸಬಹುದು. ನಿರ್ವಾಣವನ್ನು ಸಾಧಿಸಿದ ವ್ಯಕ್ತಿ ಮೃತನಾದರೆ,ಅವನ ಸಾವನ್ನು(ಪಾಲಿ:ಪರಿನಿಬ್ಬಾನಾ )ಅವನು ಪೂರ್ಣವಾಗಿ ಮೃತಪಟ್ಟ ಎಂದು ಉಲ್ಲೇಖಿಸಲಾಗುತ್ತದೆ.[[parinirvāṇa]] ಸಾವು ಮತ್ತು ಪುನರ್ಜನ್ಮದ ಚಕ್ರಕ್ಕೆ ಅವನ ಜೀವನವು ಕೊನೆಯ ಕೊಂಡಿಯಾಗಿದ್ದು, ಪುನಃ ಮರುಜನ್ಮ ತಾಳುವುದಿಲ್ಲ. ಬೌದ್ಧಧರ್ಮವು ಅಂತಿಮ ಗುರಿ ಮತ್ತು ಸಂಸಾರದ ಅಸ್ತಿತ್ವದ ಕೊನೆ(ಎಂದಿಗೂ "ಜನ್ಮತಾಳದ" ಮತ್ತು "ಸಾವನ್ನಪ್ಪದ" ಹಾಗೂ ನಿಜವಾದ ಅಸ್ತಿತ್ವ ಇಲ್ಲದಿರುವಿಕೆ)ಯು ನಿರ್ವಾಣದ ಸಾಕ್ಷಾತ್ಕಾರವಾಗಿದೆಯೆಂದು ಪ್ರತಿಪಾದಿಸುತ್ತದೆ; ವ್ಯಕ್ತಿಗೆ ಅವನparinirvāṇaನಂತರ ಏನಾಗುತ್ತದೆಂದು ವಿವರಿಸಲು ಸಾಧ್ಯವಾಗದು,ಇದು ಊಹಿಸಲಾಗುವ ಎಲ್ಲ ಅನುಭವವನ್ನು ಮೀರಿದೆ. ಅನೇಕ ಪ್ರಶ್ನೆಗಳ ಸರಣಿಮೂಲಕ,ಸಾರಿಪುಟ್ಟಾಮುಂದೆ ತಥಾಗತನು ಸತ್ಯ ಅಥವಾ ವಾಸ್ತವಾಂಶದ ಪ್ರತೀಕವೆಂದು ಪ್ರಸಕ್ತ ಜೀವನದಲ್ಲಿ ಕೂಡ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲವೆಂದು ಭಿಕ್ಕುವೊಬ್ಬ ಒಪ್ಪಿಕೊಳ್ಳುತ್ತಾನೆ. ಆದ್ದರಿಂದ ಅರಹಂತನ ಸಾವಿನ ನಂತರದ ಮೂಲತತ್ವವಿಚಾರದ ಸ್ಥಿತಿಗತಿಗೆ ಸಂಬಂಧಿಸಿದಂತೆ ಊಹಿಸುವುದು ಸೂಕ್ತವಲ್ಲ.[] ನೋಡಿ ತಥಾಗತ#ಇನ್‌ಸ್ಕ್ರಟೇಬಲ್.

ವ್ಯಕ್ತಿಗಳು ಹಿಂತಿರುಗಲಾರದ(ಅನಗಾಮಿ) ಮಟ್ಟದವರೆಗೆ ಮಾನಸಿಕ ಪ್ರಜ್ಞೆಯ ವಸ್ತುವಾಗಿ ನಿರ್ವಾಣದ ಅನುಭವವನ್ನು ಪಡೆಯುತ್ತಾರೆ.[][೧೦] ನಿಬ್ಬಾಣವು ಸಮಾಧಿಸ್ಥಿತಿಯ ವಸ್ತುವೆಂಬ ಕೆಲವು ಪರಿಭಾವನೆಗಳು ಹಿಂತಿರುಗಲಾರದ(ಅನಗಾಮಿ)ಅಥವಾ ಅರಾಹಂತ್‌ಆಧ್ಯಾತ್ಮಿಕ ಜ್ಞಾನದ ಮಟ್ಟಕ್ಕೆ ಬೆಳೆಯುವುದಕ್ಕೆ ದಾರಿ ಕಲ್ಪಿಸುತ್ತದೆ.[೧೧] ಒಳದೃಷ್ಟಿಯ ಪ್ರಗತಿಯ ಮೂಲಕ ತಲುಪಿದ ಪರಿಭಾವನೆಯ ಆ ಹಂತದಲ್ಲಿ,ಧ್ಯಾನಸ್ಥ ವ್ಯಕ್ತಿಗೆ ಆ ಸ್ಥಿತಿ ಕೂಡ ನಿರ್ಮಾಣವಾಗಿದ್ದು, ಅದು ಅಶಾಶ್ವತ ಎಂದು ಅರಿವುಂಟಾದರೆ,ಬಂಧನಗಳು ನಾಶವಾಗಿ ಅರಹಂತ್ ಸ್ಥಿತಿ ಸಾಧನೆಯಾಗುತ್ತದೆ ಹಾಗೂ ನಿಬ್ಬಾಣ ಸಾಕ್ಷಾತ್ಕಾರವಾಗುತ್ತದೆ.[೧೨]

ಇಂದ್ರಿಯಾತೀತ ತಿಳಿವಳಿಕೆ

[ಬದಲಾಯಿಸಿ]

ಮನಸ್ಸು ಅರಿವಿಂದ ಕೂಡಿರುತ್ತದೆ; ಅದು ಪ್ರಜ್ಞೆ. ನಿರ್ವಾಣದೊಂದಿಗೆ,ಜ್ಞಾನ ಬಿಡುಗಡೆಯಾಗುತ್ತದೆ ಮತ್ತು ನಿಯಮಾಧೀನ ಪ್ರಪಂಚದಲ್ಲಿ ಯಾವ ನಿರ್ಬಂಧಕ್ಕೆ ಸಂಪೂರ್ಣವಾಗಿ ಒಳಪಡದ ರೀತಿಯಲ್ಲಿ ಮನಸ್ಸು ಜಾಗೃತಗೊಳ್ಳುತ್ತದೆ. ಬುದ್ಧ ವಿವಿಧ ಭಾಗಗಳಲ್ಲಿ ಇವನ್ನು ವಿವರಿಸಿದ್ದಾನೆ. ಒಂದು ಮಾರ್ಗವು ಕೆಳಗಿನಂತಿದೆ:

ಲಕ್ಷಣವಿಲ್ಲದ, ಗುರಿಯಿಲ್ಲದ ಪ್ರಜ್ಞೆ ಸುತ್ತಲೂ ಬೆಳಕನ್ನು ಚೆಲ್ಲುತ್ತದೆ.[೧೩][೧೪]

"ವಿನ್ನಾನ"(ವಿಜ್ಞಾನ) ಪದದ ಬಳಕೆ ಕುರಿತು ಅರಿವಿನ ಉತ್ಕೃಷ್ಟತೆಯೆಂದು ಉಲ್ಲೇಖಿಸಲಾಗಿದೆಯೆಂದು ಅಜಾನ್ಸ್ ಪಸಾನ್ನೊ ಮತ್ತು ಅಮಾರೊ ಬರೆಯುತ್ತಾರೆ."ವಿನ್ನಾನ" ಪದದ ಬಳಕೆಯು ಸಾಮಾನ್ಯವಾಗಿ ಅರ್ಥಕೊಡುವುದಕ್ಕಿಂತ ವಿಶಾಲಾರ್ಥದಲ್ಲಿ ಬಳಕೆಯಾಗಿರಬೇಕು. ಬುದ್ಧ ತನ್ನ ಸಮಕಾಲೀನರಾದ ಅನೇಕ ತತ್ವಜ್ಞಾನಿಗಳ ಕ್ಷುಲ್ಲಕತಪ್ಪುಗಳನ್ನೂ ಹುಡುಕುವ ಶುಷ್ಕಪಾಂಡಿತ್ಯದಿಂದ ದೂರಸರಿದು,ಹೆಚ್ಚು ವಿಶಾಲವಾದ, ಆಡುಮಾತಿನ ಶೈಲಿಯಲ್ಲಿ ಕೇಳುಗರಿಗೆ ಅರ್ಥವಾಗುವ ಭಾಷೆಯಲ್ಲಿ ಭೋಧಿಸಲು ಇಚ್ಛಿಸಿದ. ಹೀಗೆ ‘ವಿನ್ನಾನ‘ ತಿಳಿವಳಿಕೆ ಎಂದು ಅರ್ಥಕೊಡುತ್ತದೆಂದು ಭಾವಿಸಬಹುದು ಆದರೆ ಪದವು ಸಾಮಾನ್ಯವಾಗಿ ಸೂಚಿಸುವ ಆಂಶಿಕ,ವಿಭಜಿತ,ವಿವೇಕದ(ವಿ-)ತಿಳಿವಳಿಕೆ(-ನಾನಾ)ಯಲ್ಲ. ಬದಲಾಗಿ ಇದು ಸೃಷ್ಟಿಕಾಲದ,ಇಂದ್ರಿಯಾತೀತ ಸ್ವರೂಪದ ಅರಿವು ಎಂದು ಅರ್ಥಕೊಡುತ್ತದೆ.ಇಲ್ಲದಿದ್ದರೆ ಈ ಭಾಗವು ಸ್ವಯಂ ತದ್ವಿರುದ್ಧವಾಗುತ್ತದೆ. ಈ ಪದಗಳ ಆಯ್ಕೆಯನ್ನು ಏಕೆ ಮಾಡಲಾಗಿದೆಯೆಂದು ಅವರು ಮತ್ತಷ್ಟು ಸಂದರ್ಭವನ್ನು ನೀಡುತ್ತಾರೆ.[೧೫] ಈ "ಪ್ರಕಟವಾಗದ ಪ್ರಜ್ಞೆ"ಯು ಆರು ಜ್ಞಾನ ಮಾಧ್ಯಮಕ್ಕೆ ಸಂಬಂಧಿಸಿದ, ಪ್ರಜ್ಞೆಯ ವಿಧಗಳಿಗಿಂತ ಭಿನ್ನವಾಗಿದೆ. ಇವಕ್ಕೆ ಮೇಲೆ ಬೀಳುವ ಮತ್ತು ಪ್ರತಿಕ್ರಿಯೆಯಾಗಿ ಎದ್ದೇಳುವ "ಹೊರರೂಪ"ವಿದೆ.[೧೩] ಪೀಟರ್ ಹಾರ್ವೆ ಪ್ರಕಾರ, "ಪ್ರಜ್ಞೆ" ಪದವು ನಿಖರವಾಗಿದೆಯೇ ಎಂಬ ಬಗ್ಗೆ ಮುಂಚಿನ ಪಠ್ಯಗಳು ಭಿನ್ನಾಭಿಪ್ರಾಯ ಹೊಂದಿವೆ.[೧೬] ವಿಮೋಚನೆಗೊಂಡ ವ್ಯಕ್ತಿಯಲ್ಲಿ,ಇದು ನೇರ ಅನುಭವವಾಗಿದ್ದು,ಯಾವುದೇ ಸ್ಥಿತಿಗಳ ಮೇಲೆ ಅವಲಂಬನೆಯಿಂದ ಮುಕ್ತವಾದ ದಾರಿಯಲ್ಲಿದೆ.[][೧೩]

ಒಂದು ವ್ಯಾಖ್ಯೆಯಲ್ಲಿ, "ಬೆಳಕುಬೀರುವ ಪ್ರಜ್ಞೆ "ಯು ನಿರ್ವಾಣದ ಜತೆ ಗುರುತಿಸಲ್ಪಟ್ಟಿದೆ.[೧೭][೧೮] ಉಳಿದವರು ಅದು ಸ್ವಯಂ ನಿರ್ವಾಣವೆನ್ನುವುದನ್ನು ಒಪ್ಪುವುದಿಲ್ಲ. ಆದರೆ ಬದಲಿಗೆ ಅರಹಂತ್‌ರಿಗೆ ಲಭ್ಯವಾಗುವ ಒಂದು ರೀತಿಯ ಜ್ಞಾನದ ವಿಧ.[೧೯][೨೦] ಮಾಜ್ಜಿಮಾ ನಿಕಾಯದಲ್ಲಿರುವ ಸಾಲಿನಲ್ಲಿ ಅದನ್ನು ಖಾಲಿ ಸ್ಥಳಕ್ಕೆ ಹೋಲಿಸಲಾಗಿದೆ.[೨೧] ವಿಮೋಚಿತ ವ್ಯಕ್ತಿಗೆ ಬೆಳಕುಬೀರುವ,ಬೆಂಬಲವಿಲ್ಲದ ನಿಬ್ಬಾಣ ಜತೆ ಸಂಬಂಧಿಸಿದ ಪ್ರಜ್ಞೆಯು ಪರಸ್ಪರ ಅವಲಂಬಿತ ಹುಟ್ಟಿನಲ್ಲಿ ಮಾನಸಿಕ ಪ್ರಜ್ಞೆಯ ಅಂಶದ ಮಧ್ಯಸ್ಥಿಕೆಯಿಲ್ಲದೇ ನೇರವಾಗಿ ತಿಳಿವಳಿಕೆಗೆ ಬರುತ್ತದೆ ಮತ್ತು ಮಾನಸಿಕ ಪ್ರಜ್ಞೆಯಿರುವ ಎಲ್ಲ ವಸ್ತುಗಳಿಗೆ ಅತೀತವಾಗಿದೆ.[][೧೨] ಸ್ವಯಂ ಸಾಕ್ಷಾತ್ಕಾರದ ಬುದ್ಧಪೂರ್ವ ಉಪನಿಷತ್ ಮತ್ತು ಭಗವದ್ಗೀತೆಯ ಪರಿಕಲ್ಪನೆಗೆ ಇದು ಮೂಲಭೂತ ವ್ಯತ್ಯಾಸ ಹೊಂದಿದೆ.ವ್ಯಕ್ತಿಯ ಅಂತರಂಗದ ಪ್ರಜ್ಞೆಯನ್ನು ಜಾಗೃತಗೊಳಿಸುವುದೆಂದು ಬಣ್ಣಿತವಾಗಿದ್ದು,ಇದು ಭಾವನೆಯೆಂದು ಪರಿಗಣಿತವಾಗಿಲ್ಲ, ಅಥವಾ ವ್ಯಕ್ತಿತ್ವದ ತೀವ್ರವಾದ ಭಾವನೆಯೂ ಅಲ್ಲ,ಅದನ್ನು "ಆತ್ಮ"ದ ಜತೆ ಯಾವುದೇ ರೀತಿಯಲ್ಲಿ ಹೋಲಿಸಿ ಗೊಂದಲಕ್ಕೀಡಾಗಬಾರದು.[೨೨] ಇದಿಷ್ಟೇ ಅಲ್ಲದೇ,ಇದು ಬುದ್ಧನ 6ನೇ ಜಾನವಾದ ಅನಂತ ಪ್ರಜ್ಞೆಯ ವೃತ್ತಕ್ಕೆ ಅತೀತವಾಗಿದ್ದು,ಅದು ಸ್ವಯಂ "ನಾನು" ಎಂಬ ಅಹಮಿಕೆಯ ಅಂತ್ಯವಲ್ಲ.[೨೩]

ದಿಗಾನಿಕಾಯದ ಎರಡು ಭಿನ್ನ ಕೃತಿಗಳಲ್ಲಿ ನಾಗಾರ್ಜುನ ಈ ಮಟ್ಟದ ಪ್ರಜ್ಞೆಗೆ ಸಂಬಂಧಿಸಿದ ಸಾಲನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ಹೀಗೆ ಬರೆದಿದ್ದಾರೆ:

ಭೂಮಿ,ಜಲ,ಅಗ್ನಿ ಮತ್ತು ಗಾಳಿ,ಉದ್ದ,ಹ್ರಸ್ವ,ಉತ್ತಮ ಮತ್ತು ಕಳಪೆ ಮುಂತಾದವು ಪ್ರಜ್ಞೆಯಲ್ಲಿ ನಂದಿಹೋಗಿದೆ ಎಂದು ಸಂತನು ಘೋಷಿಸಿದ,... ಉದ್ದ ಮತ್ತು ಹ್ರಸ್ವ,ಉತ್ತಮ ಮತ್ತು ಕಳಪೆ, ಒಳ್ಳೆಯದು ಮತ್ತು ಕೆಟ್ಟದು,ಇಲ್ಲಿ ನಾಮ ಮತ್ತು ರೂಪ ಎಲ್ಲವೂ ಸ್ಥಗಿತಗೊಳ್ಳುತ್ತದೆ.[೨೪]

ಇದಕ್ಕೆ ಸಂಬಂಧಿಸಿದ, ಅರಹಂತ್ ಮನಸ್ಸೇ ಸ್ವಯಂ ನಿಬ್ಬಾಣ ಎಂಬ ಕಲ್ಪನೆಯು ಥೆರವಾಡ ವ್ಯಾಖ್ಯಾನಗಳಲ್ಲಿ ಮತ್ತು ಅಭಿಧಾಮಾದಲ್ಲಿ ಇಲ್ಲದಿದ್ದರೂ, ಪಾಲಿ ಸೂತ್ರದಲ್ಲಿ ಹಾಗೂ ಸಮಕಾಲೀನ ಥೆರವಾಡ ಪದ್ಧತಿಯ ಸಂಪ್ರದಾಯದಲ್ಲಿ ಇದಕ್ಕೆ ಬೆಂಬಲ ಸಿಗುತ್ತದೆ.[೨೫]

ನಿರ್ವಾಣ ಮತ್ತು ಸಂಸಾರ

[ಬದಲಾಯಿಸಿ]

ಮಹಾಯಾನ ಬೌದ್ಧಧರ್ಮದಲ್ಲಿ, ನಿರ್ವಾಣ ಮತ್ತು ಸಂಸಾರವನ್ನು ಧರ್ಮಕಾಯದ ಅಂತಿಮ ಸ್ವರೂಪದಿಂದ ನೋಡಿದರೆ ಭಿನ್ನವಾಗಿ ಕಾಣುವುದಿಲ್ಲವೆಂದು ಹೇಳಲಾಗಿದೆ. ಬೌದ್ಧ ಪಥವನ್ನು ಅನುಸರಿಸುವ ಮೂಲಕ ವ್ಯಕ್ತಿಯೊಬ್ಬ ನಿರ್ವಾಣವನ್ನು ಸಾಧಿಸಬಹುದು. ಅವು ಅಂತಿಮವಾಗಿ ಭಿನ್ನವಾಗಿದ್ದರೆ,ಅದರ ಸಾಧನೆ ಸಾಧ್ಯವಾಗುವುದಿಲ್ಲ. ಆದ್ದರಿಂದ ನಿರ್ವಾಣ ಮತ್ತು ಸಂಸಾರದ ನಡುವೆ ಎರಡುಹಂತ ಕೇವಲ ಸಾಂಪ್ರದಾಯಿಕ ಮಟ್ಟದಲ್ಲಿ ಕರಾರುವಾಕ್ಕಾಗಿರುತ್ತದೆ. ಎಲ್ಲ ವಿದ್ಯಮಾನಗಳು ಅವಶ್ಯಕ ಗುರುತಿಸುವಿಕೆಯಿಂದ ಬರಿದಾಗಿರುತ್ತದೆ ಎಂಬ ವಿಶ್ಲೇಷಣೆಯ ಮೂಲಕ ಈ ತೀರ್ಮಾನಕ್ಕೆ ಬರಬಹುದು.ಆದ್ದರಿಂದ ಯಾತನೆಗಳು ಯಾವುದೇ ಪರಿಸ್ಥಿತಿಯಲ್ಲಿ ಅಂತರ್ಗತವಾಗಿರುವುದಿಲ್ಲ. ಆದ್ದರಿಂದ ಯಾತನೆಗಳು ಮತ್ತು ಅದರ ಕಾರಣಗಳಿಂದ ವಿಮೋಚನೆಯು ಯಾವುದೇ ರೀತಿಯ ಅಬೌತಿಕ ಸ್ಥಳಾಂತರವಲ್ಲ. ಈ ಚಿಂತನೆಯ ಉತ್ತಮ ವಿವರಕ್ಕೆ ಎರಡು ಸತ್ಯಗಳ ಸಿದ್ಧಾಂತ ನೋಡಿ.

ಥೇರವಾಡ ಶಾಲೆಯು ಸಂಸಾರದ ವಿರೋಧವಾಗಿದ್ದು, ವಿಮೋಚನೆಯ ಇಡೀ ಶೋಧನೆಗೆ ನಿಬ್ಬಾಣವು ಆರಂಭದ ಹಂತವೆಂದು ಹೇಳುತ್ತದೆ. ಅಷ್ಟೇ ಅಲ್ಲದೇ, ಈ ವೈದೃಶ್ಯವು ಅಂತಿಮ ಗುರಿಯ ನಿರ್ಧಾರಕ,ಅದು ನಿಖರವಾಗಿ ಸಂಸಾರದ ಅನುಭಾವಾತೀತ ಸ್ಥಿತಿ ಮತ್ತು ನಿಬ್ಬಾಣದಲ್ಲಿ ವಿಮೋಚನೆಯ ಸಾಧನೆಯೆಂದು ಪರಿಗಣಿಸಿದೆ. ಥೆರವಾಡಾ ಮಹಾಯಾನ ಶಾಲೆಗಳಿಂದ ಗಮನಾರ್ಹವಾಗಿ ವ್ಯತ್ಯಾಸ ಹೊಂದಿದ್ದು,ಮಹಾಯಾನ ಕೂಡ ಸಂಸಾರ ಮತ್ತು ನಿರ್ವಾಣದ ಎರಡುಹಂತಗಳೊಂದಿಗೆ ಆರಂಭವಾಗುತ್ತದೆ.ಈ ದ್ರುವೀಯತೆಗೆ ಸಂಬಂಧಿಸಿದಂತೆ ತರುವಾಯ ಕೆಲವು ಉನ್ನತ ಅದ್ವೈತ ಸಾಧನೆಯಿಂದ ಅದನ್ನು ಹಿಂದಿಕ್ಕುವುದಕ್ಕೆ, ಕೇವಲ ಮೊಂಡು ಬೋಧಕಶಾಖೆಗಳನ್ನು ಹೊಂದಿರುವವರಿಗೆ ರೂಪಿಸಿದ ಪೂರ್ವಭಾವಿ ಪಾಠವಲ್ಲ.[ಸೂಕ್ತ ಉಲ್ಲೇಖನ ಬೇಕು] ಪಾಲಿ ಸೂತ್ರಗಳ ದೃಷ್ಟಿಕೋನದಿಂದ, ಬುದ್ಧ ಮತ್ತು ಅರಹಂತರಿಗೆ ಕೂಡ ಯಾತನೆಗಳು ಮತ್ತು ಅದರ ನಿಲುಗಡೆಯಾದ ಸಂಸಾರ ಮತ್ತು ನಿಬ್ಬಾಣವು ಭಿನ್ನವಾಗಿ ಉಳಿದಿವೆ.[ಸೂಕ್ತ ಉಲ್ಲೇಖನ ಬೇಕು]

ಶಾಕ್ಯಮುನಿ ನಿರ್ವಾಣವನ್ನು ಸಾಧಿಸುವ ಸಂದರ್ಭದಲ್ಲಿ ಸಂಸಾರದ ಬಂಧನದಲ್ಲಿದ್ದ ಎಂದು ಎರಡೂ ಶಾಲೆಗಳು ಒಪ್ಪಿಕೊಳ್ಳುತ್ತವೆ. ಸಂಸಾರದಿಂದ ಏಕಕಾಲದಲ್ಲಿ ಬಿಡುಗಡೆಯಾಗುವ ಮುನ್ನ ಅವನನ್ನು ಎಲ್ಲರೂ ಇಲ್ಲಿಯವರೆಗೆ ಹಾಗೇ ಕಂಡಿದ್ದರು.

ಪಾಲಿ ಸೂತ್ರದಲ್ಲಿ ನಿರ್ವಾಣಕ್ಕೆ ಮಾರ್ಗಗಳು

[ಬದಲಾಯಿಸಿ]

ವಿಶುದ್ಧಿಮಗದಲ್ಲಿ Ch. I, v. 6(ಬುದ್ಧಘೋಷ & Ñāṇamoli1999,pp. 6–7),ಬುದ್ಧಘೋಷ ಪಾಲಿ ಸೂತ್ರದಲ್ಲಿ ನಿರ್ವಾಣದ ಮಾರ್ಗವನ್ನು ಹಿಡಿಯುವ ಬಗ್ಗೆ ವಿವಿಧ ಆಯ್ಕೆಗಳನ್ನು ಗುರುತಿಸಿದೆ.Ñāṇamoli[೨೬]

  1. ಒಳದೃಷ್ಟಿ(ವಿಪಾಸನ )ದ ಮೂಲಕ ಮಾತ್ರ.(ನೋಡಿ Dh.277<ಉಲ್ಲೇಖ>ಅಕ್ಸೆಸ್ ಟು ಇನ್‌ಸೈಟ್:ರೀಡಿಂಗ್ಸ್ ಇನ್ ಥೆರವಾಡ ಬುದ್ಧಿಸಂ,ಬುದ್ಧರಕಿತ(1996ಅ) ಪಾರಮಟ್ಟಾ-ಮಂಜೂಸಾ(ವಿಶುದ್ಧಿಮಗ ವ್ಯಾಖ್ಯಾನ),vv. 9-10 "ಒಳದೃಷ್ಟಿ ಮಾತ್ರ" ಆಯ್ಕೆಗೆ ಸಂಬಂಧಿಸಿದಂತೆ ಇದು ಕೆಳಗಿನ ತಡೆಯನ್ನು ಸೇರಿಸುತ್ತದೆ:
'ಒಳದೃಷ್ಟಿ ಮಾತ್ರ' ಪದಗಳು ಸದ್ಗುಣವಲ್ಲದ್ದು ಮುಂತಾದವನ್ನು ಹೊರತಾಗಿಸಿದೆ.ಆದರೆ ಪ್ರಶಾಂತತೆ(ಅಂದರೆ ಜಾನ(ಸಾಂಕೇತಿಕವಾಗಿ ಬಿಂಬಿಸುತ್ತದೆ)ಮತ್ತು ಪ್ರಶಾಂತತೆ ಮತ್ತು ಒಳದೃಷ್ಟಿಯ ಜೋಡಿಯಲ್ಲಿ... 'ಮಾತ್ರ' ಪದವು ವಾಸ್ತವವಾಗಿ,ವಿಶಿಷ್ಟತೆಯೊಂದಿಗೆ ಏಕಾಗ್ರತೆ ಮಾತ್ರ ಎನ್ನುವುದರಿಂದ ಹೊರತಾಗಿದೆ.(ಧ್ಯಾನದಲ್ಲಿ ತಲ್ಲೀನತೆ);ಏಕಾಗ್ರತೆಯನ್ನು ಪ್ರವೇಶ(ಅಥವಾ ಕ್ಷಣಿಕ)ಮತ್ತು ತಲ್ಲೀನತೆ ಎಂದು ಎರಡೂ ರೀತಿಯಲ್ಲಿ ವರ್ಗೀಕರಿಸಲಾಗಿದೆ... ಈ ಸಾಲನ್ನು ಒಳದೃಷ್ಟಿಯ ಸಾಧನ ಹೊಂದಿದವರಿಗೆ ಬೋಧನೆಯಾಗಿ ತೆಗೆದುಕೊಳ್ಳುವುದು ಏಕಾಗ್ರತೆಯಿಲ್ಲವೆಂದು ಸೂಚಿಸುವುದಿಲ್ಲ.ಕ್ಷಣಿಕ ಏಕಾಗ್ರತೆಯಿಂದ ಯಾವುದೇ ಒಳದೃಷ್ಟಿ ಮೂಡುವುದಿಲ್ಲ.

ಪುನಃ ಒಳದೃಷ್ಟಿಯನ್ನು ನಶ್ವರತೆ,ನೋವು ಮತ್ತು ಅನಾತ್ಮದ ಮೂರು ಅವಲೋಕನಗಳೆಂದು ತಿಳಿಯಬಹುದು.[ನೋಡಿ ತಿಲಕಾನ ];ನಶ್ವರತೆಯ ಅವಲೋಕನ ಮಾತ್ರವಲ್ಲ(ಬುದ್ಧಘೋಷ & Ñāṇamoli, 1999, p. 750, n . 3).</ಉಲ್ಲೇಖ>

  1. ಧ್ಯಾನ ಮತ್ತು ತಿಳಿವಳಿಕೆ(ನೋಡಿ Dh. 372)[೨೭]
  2. ಕೃತ್ಯಗಳು,ದೃಷ್ಟಿಕೋನ ಮತ್ತು ನ್ಯಾಯಪರತೆ (ನೋಡಿMN iii.262)ಉಲ್ಲೇಖ ದೋಷ: Closing </ref> missing for <ref> tag
  3. ಸದ್ಗುಣ,ತಿಳಿವಳಿಕೆ,ಏಕಾಗ್ರತೆ ಮತ್ತು ಪ್ರಯತ್ನ(ನೋಡಿSN i.53)<ಉಲ್ಲೇಖ>ಬುದ್ಧಘೋಷ & Ñāṇamoli (1999), p. 7, ಅನುವಾದ SN i.53 :
ಸತತ ಸದ್ಗುಣವನ್ನು ಹೊಂದಿದವನು
ತಿಳಿವಳಿಕೆ ಹೊಂದಿದವ, ಏಕಾಗ್ರತೆ ಉಳ್ಳವ,
ಯಾರು ಶ್ರಮಜೀವಿ,ಕರ್ತವ್ಯನಿಷ್ಠರೊ,
ಅವರು ದಾಟಲು ಕಷ್ಟವಾದ ಪ್ರವಾಹವನ್ನು ದಾಟುತ್ತಾರೆ.</ಉಲ್ಲೇಖ>
  1. ಸಾವಧಾನತೆಯ ನಾಲ್ಕು ಅಡಿಪಾಯಗಳಿಂದ (ನೋಡಿಸಾಟಿಪಟ್ಟಣ ಸೂಟ್ಟ, DN ii.290)<ಉಲ್ಲೇಖ>ನೋಡಿ ಥಾನಿಸಾರೊ (2000). ಈ ಸೂತ್ರದ 290ನೇ ಸಾಲನ್ನು ಥಾನಿಸಾರೊ ಈ ರೀತಿ ಅನುವಾದಿಸಿದ್ದಾರೆ:
ಪೂಜ್ಯರು ಹೀಗೆ ಹೇಳಿದರು:ಇದು ಜೀವಿಗಳ ಶುದ್ಧೀಕರಣಕ್ಕೆ ನೇರ ಮಾರ್ಗ,ದುಃಖ ಮತ್ತು ರೋದನಗಳನ್ನು ಜಯಿಸಲು,ನೋವು & ಯಾತನೆಯ ಕಣ್ಮರೆಗೆ,ಸೂಕ್ತ ವಿಧಾನದ ಸಾಧನೆಗೆ,ಬಂಧನವಿಲ್ಲದ ಸಾಕ್ಷಾತ್ಕಾರಕ್ಕೆ-ಬೇರೆ ಪದಗಳಲ್ಲಿ,ಉಲ್ಲೇಖದ ನಾಲ್ಕು ಚೌಕಟ್ಟುಗಳು...</ಉಲ್ಲೇಖ>

ಒಬ್ಬರ ವಿಶ್ಲೇಷಣೆಯ ಆಧಾರದ ಮೇಲೆ,ಪ್ರತಿಯೊಂದು ಆಯ್ಕೆಗಳನ್ನು ಬುದ್ಧನ ಸದ್ಗುಣ,ಮಾನಸಿಕ ಬೆಳವಣಿಗೆ ಮತ್ತು ವಿವೇಕಮೂರು ಹಂತದ ತರಬೇತಿಯ ಮರುಚೌಕಟ್ಟಿನಂತೆ ಕಾಣಬಹುದು.[೨೮]

ನಿರ್ವಾಣ ಕುರಿತು ಮಹಾಯಾನ ದೃಷ್ಟಿಕೋನಗಳು

[ಬದಲಾಯಿಸಿ]

ಶುದ್ಧ,ದ್ವಿರೂಪವಿಲ್ಲದ ಉನ್ನತ ಮನಸ್ಸು ಎಂಬ ನಿರ್ವಾಣದ ಕಲ್ಪನೆಯನ್ನು ಕೆಲವು ಮಹಾಯಾನ/ತಾಂತ್ರಿಕ್ ಪಠ್ಯಗಳಲ್ಲಿ ಕಾಣಬಹುದು. ಉದಾಹರಣೆಗೆಸಂಪುಟ , ವಿವರಿಸುತ್ತದೆ:

'ಮೋಹ ಮತ್ತು ಭಾವನಾತ್ಮಕ ಅಶುದ್ಧತೆಯಿಂದ ಕೂಡಿಲ್ಲದ,ದ್ವಂದ್ವಾತ್ಮಕ ಪರಿಕಲ್ಪನೆಗಳಿಂದ ಮುಸುಗಿರದ ಉನ್ನತ ಮನಸ್ಸು ನಿಜವಾಗಲೂ ಬಲಾಢ್ಯ ನಿರ್ವಾಣ.[೨೯]

ಕೆಲವು ಮಹಾಯಾನ ಸಂಪ್ರದಾಯಗಳು ಬುದ್ಧನನ್ನು ಡೊಸೆಟಿಕ್ ಪದಗಳಲ್ಲಿ(ಅಬೌತಿಕ ಸ್ವರೂಪ)ವೆಂಬಂತೆ ಕಾಣುತ್ತಾರೆ.ಅವನ ಗೋಚರ ಅಭಿವ್ಯಕ್ತಿಗಳು ನಿರ್ವಾಣದ ಸ್ಥಿತಿಯಲ್ಲಿ ಹೊರಹೊಮ್ಮಿವೆಯೆಂದು ಅಭಿಪ್ರಾಯ ಪಡುತ್ತಾರೆ. ಪ್ರಾಧ್ಯಾಪಕ ಎಟೀನ್ ಲಾಮೋಟ್ಟೆ ಪ್ರಕಾರ,ಬುದ್ಧರು ಸದಾ ಎಲ್ಲ ಕಾಲದಲ್ಲಿಯೂ ನಿರ್ವಾಣದಲ್ಲಿರುತ್ತಾರೆ, ಅವರ ಸ್ವಯಂ ಬೌತಿಕ ಪ್ರದರ್ಶನಗಳು ಮತ್ತು ಬುದ್ಧಿಕ್ ವೃತ್ತಿಜೀವನಗಳು ಎಲ್ಲವೂ ಅಂತಿಮವಾಗಿ ಭ್ರಮೆ. ಲ್ಯಾಮೋಟ್ಟೆ ಬುದ್ಧರ ಬಗ್ಗೆ ಬರೆಯುತ್ತಾರೆ: ‘ಅವರು ಹುಟ್ಟುತ್ತಾರೆ, ಜ್ಞಾನೋದಯ ಹೊಂದುತ್ತಾರೆ,ಧರ್ಮದ ಚಕ್ರವನ್ನು ತಿರುಗಿಸುತ್ತಾರೆ ಮತ್ತು ನಿರ್ವಾಣಕ್ಕೆ ಪ್ರವೇಶಿಸುತ್ತಾರೆ. ಆದಾಗ್ಯೂ, ಇವೆಲ್ಲವೂ ಕೇವಲ ಭ್ರಮೆಯಾಗಿದೆ: ಬುದ್ಧ ಗೋಚರವು ಹುಟ್ಟು,ಜೀವನ ಮತ್ತು ನಾಶದ ಗೈರುಹಾಜರಿಯಾಗಿದೆ.ಅವರ ನಿರ್ವಾಣವು ವಾಸ್ತವವಾಗಿ ಸರ್ವಕಾಲದಲ್ಲೂ ನಿರ್ವಾಣದಲ್ಲಿರುವುದೇ ಆಗಿದೆ.[೩೦]

ಕೆಲವು ಮಹಾಯಾನ ಸೂತ್ರಗಳು ಇನ್ನಷ್ಟು ಮುಂದೆ ಹೋಗಿ ಸ್ವತಃ ನಿರ್ವಾಣದ ಸ್ವರೂಪವನ್ನು ವರ್ಣಿಸುತ್ತದೆ. ಮಹಾಯಾನ ಮಹಾಪರಿನಿರ್ವಾಣ ಸೂತ್ರವು ಮುಖ್ಯ ವಿಷಯಗಳಲ್ಲಿ ಒಂದಾದ ನಿಖರವಾಗಿ ನಿರ್ವಾಣದ ಸಾಮ್ರಾಜ್ಯ ಅಥವಾ ಧಾತು ವನ್ನು ಹೊಂದಿದೆ. ಇದರಲ್ಲಿ ಬುದ್ಧ ನಿರ್ವಾಣವನ್ನು ಸಾಧಿಸುವ ನಾಲ್ಕು ಅವಶ್ಯಕ ವಸ್ತುಗಳ ಬಗ್ಗೆ ಹೇಳಿದ್ದಾನೆ. ಅವುಗಳಲ್ಲಿ ಒಂದು ‘ಸ್ವಯಂ’ ಆತ್ಮನ್ ,ಅದು ಬುದ್ಧನ ನಿರಂತರ ಆತ್ಮವೆಂದು ವಿಶ್ಲೇಷಿಸಲಾಗಿದೆ. ನಿರ್ವಾಣದ ಮಹಾಯಾನದ ತಿಳುವಳಿಕೆ ಬಗ್ಗೆ ಬರೆದ ವಿಲಿಯಂ ಎಡ್ವಾರ್ಡ್ ಸೂತಿಲ್ ಮತ್ತು ಲೆವಿಸ್ ಹೋಡಸ್ ವಿವರಿಸುತ್ತಾರೆ:

ನಿರ್ವಾಣವು ಅತೀಂದ್ರಿಯ ಸಾಮ್ರಾಜ್ಯದಲ್ಲಿ ಶಾಶ್ವತ, ಆನಂತ,ಪರಿಶುದ್ಧತೆಯ ಪ್ರಾಚೀನ ಕಲ್ಪನೆಗಳನ್ನು ಹೊಂದುವುದೆಂದು ನಿರ್ವಾಣ ಸೂತ್ರ ಹೇಳುತ್ತದೆ. ಹೀನಾಯಾನ,ಅತೀಂದ್ರಿಯ ಸಾಮ್ರಾಜ್ಯದಲ್ಲಿ ವ್ಯಕ್ತಿತ್ವವನ್ನು ನಿರಾಕರಿಸುವ ಮೂಲಕ ಬುದ್ಧನ ಅಸ್ತಿತ್ವವನ್ನು ನಿರಾಕರಿಸಿತು ಎಂದು ಮಹಾಯಾನ ಘೋಷಿಸುತ್ತದೆ. ಮಹಾಯಾನದಲ್ಲಿ ಅಂತಿಮ ನಿರ್ವಾಣವು ಅತೀಂದ್ರಿಯವಾಗಿದ್ದು, ಪರಿಪೂರ್ಣಕ್ಕೆ ಪದವಾಗಿ ಕೂಡ ಬಳಸಲಾಗುತ್ತದೆ.’[೩೧]

ಆ ಗ್ರಂಥವನ್ನು ಬರೆದ ಸಂದರ್ಭದಲ್ಲಿ,ನಿರ್ವಾಣ ಮತ್ತು ಬುದ್ಧನ ಬಗ್ಗೆ ಧನಾತ್ಮಕ ಭಾಷೆಯ ಸುದೀರ್ಘ ಸಂಪ್ರದಾಯ ಇತ್ತು.[೩೨] ಪೂರ್ವದ ಬುದ್ದನ ಚಿಂತನೆಯಲ್ಲಿ ನಿರ್ವಾಣವು ಶಾಶ್ವತತೆ,ಅನಂತ, ಪರಿಶುದ್ಧತೆಯ ಲಕ್ಷಣಗಳಿಂದ ಕೂಡಿತ್ತು. "ನಾನು" ಮನೋಭಾವದ ಪುನರುತ್ಪತ್ತಿ ಸ್ಥಗಿತಗೊಳಿಸುವುದೆಂದು ಹಾಗೂ ಸ್ವಯಂಭ್ರಮೆಯ ಎಲ್ಲ ಸಾಧ್ಯತೆಗಳನ್ನು ಮೀರಿದ್ದೆಂದು ಭಾವಿಸಲಾಯಿತು.[][೩೩] ಮಹಾಯಾನ ಗ್ರಂಥದ ಸುದೀರ್ಘ ಮತ್ತು ಉನ್ನತವಾಗಿ ಸಂಯೋಜಿತವಾದ ಮಹಾಪರಿನಿರ್ವಾಣ ಸೂತ್ರ ವು[೩೪] ಬುದ್ಧ ಬೌದ್ಧೇತರ ತಪಸ್ವಿಗಳ ಮನಸ್ಸನ್ನು ಗೆಲ್ಲುವುದಕ್ಕಾಗಿ "ಆತ್ಮ" ಪದವನ್ನು ಬಳಸಿದನೆಂದು ಉಲ್ಲೇಖಿಸಿದೆ.[೩೫] ಇದರಿಂದ ಹೀಗೆ ಮುಂದುವರಿಯುತ್ತದೆ: "ಬುದ್ಧನ ಸ್ವರೂಪವು ವಾಸ್ತವವಾಗಿ ಆತ್ಮ ಅಲ್ಲ. ಸಚೇತನ ಜೀವಿಗಳಿಗೆ ಮಾರ್ಗದರ್ಶನ ಮಾಡುವ ದೃಷ್ಟಿಯಿಂದ,ಅದನ್ನು ಆತ್ಮ ಎಂದು ಬಣ್ಣಿಸುವೆ"[೩೬]

ತಥಾಗತಗರ್ಭದ ಬೋಧನೆಯಲ್ಲಿ ಸಚೇತನ ಜೀವಿಗಳು ತಮ್ಮ "ಆತ್ಮದ ಬಗ್ಗೆ ಅನುರಾಗ"ವನ್ನು ತ್ಯಜಿಸಬೇಕೆಂಬ ಇಚ್ಛೆಯನ್ನು ಸಂಬಂಧಿಸಿದ ಧರ್ಮಗ್ರಂಥ ರತ್ನಗೋತ್ರವಿಭಾಗವು ಸೂಚಿಸುತ್ತದೆ"-ಇದು ಬೌದ್ಧೇತರ ಬೋಧನೆಯಿಂದ ಉಂಟಾದ ಐದು ದೋಷಗಳಲ್ಲಿ ಒಂದು. ಲಂಕಾವತಾರ ಸೂತ್ರದಲ್ಲಿ ಯೂರು ವಾಂಗ್ ಇದೇ ರೀತಿಯ ಭಾಷೆಯನ್ನು ಸೂಚಿಸಿದ್ದಾರೆ, ನಂತರ ಬರೆಯುತ್ತಾರೆ,"ಈ ಸಂದರ್ಭವನ್ನು ಗಮನಿಸುವುದು ಮುಖ್ಯ ತಥಾಗತಗರ್ಭ ಚಿಂತನೆಯು ಸರಳವಾಗಿ ಅಬೌತ ಕಲ್ಪನೆಯ ಇನ್ನೊಂದು ಪ್ರಕರಣವೆಂಬ ಸಿದ್ಧಾಂತಕ್ಕೆ ಬರುವುದನ್ನು ತಪ್ಪಿಸಲು ಇದು ನೆರವಾಗುತ್ತದೆ.[೩೬] ಆದಾಗ್ಯೂ,ಕೆಲವರು,[who?]ನಿರ್ದಿಷ್ಟವಾಗಿ ಮಹಾಪರಿನಿರ್ವಾಣ ಸೂತ್ರಕ್ಕೆ ಸಂಬಂಧಿಸಿದ ನಿರೂಪಣೆಗೆ ಆಕ್ಷೇಪಿಸಿದ್ದಾರೆ.ಬುದ್ಧ ಆಗ ಈ ಆತ್ಮಸಾಕ್ಷಾತ್ಕಾರದ ದೃಢೀಕರಣದೊಂದಿಗೆ ಈ ಸಾಲಿನಲ್ಲಿ ಪ್ರತಿಕ್ರಿಯೆ ನೀಡಿದ್ದಾನೆಂದು ವಾದಿಸಿ,ಅವನು ವಾಸ್ತವವಾಗಿ ಆತ್ಮಸ್ವರೂಪಿಯೆಂದು ಘೋಷಿಸಿದ್ದಾರೆ.

'ವಿವಿಧ ಕಾರಣಗಳು ಮತ್ತು ಪರಿಸ್ಥಿತಿಯಿಂದಾಗಿ, ಆತ್ಮರಾಹಿತ್ಯವೇ ಆತ್ಮ,ಅಲ್ಲಿ ನಿಜವಾಗಲೂ ಆತ್ಮವಿದ್ದರೂ ಅಲ್ಲಿ ಆತ್ಮವಿಲ್ಲವೆಂದು ನಾನು ಬೋಧಿಸಿದೆ,ಆದರೂ ಅದರಲ್ಲಿ ತಪ್ಪೇನೂ ಇಲ್ಲ. ಬುದ್ಧ-ಧಾತು ಆತ್ಮರಹಿತರಾಗಿದ್ದರು. ತಥಾಗತ ಆತ್ಮವಿಲ್ಲವೆಂದು ಬೋಧಿಸುವುದು ಏಕೆಂದರೆ ಆತ್ಮ ಅನಂತವಾಗಿದೆ. ತಥಾಗತ ಸ್ವತಃ ಆತ್ಮ,ಆತ್ಮವಿಲ್ಲವೆಂಬ ಅವನು ಬೋಧಿಸುವುದು ಏಕೆಂದರೆ ಅವನು ಪ್ರಭುತ್ವ/ಸಾರ್ವಬೌಮತ್ವ(ಐಶ್ವರ್ಯ)ವನ್ನು ಸಾಧಿಸಿದ್ದಾನೆ.[೩೭]

ನಿರ್ವಾಣ ಸೂತ್ರದಲ್ಲಿ,ತಾನು ಈಗ ಬಹಿರಂಗ ಮಾಡಿರದ ಸಿದ್ಧಾಂತಗಳನ್ನು(ನಿರ್ವಾಣವೂ ಸೇರಿದಂತೆ)ಬೋಧಿಸುವುದಾಗಿ, ಅನಾತ್ಮನ್ ಕುರಿತ ತನ್ನ ಬೋಧನೆಯು ಸಮಯೋಚಿತವಾಗಿತ್ತು ಎಂದು ಬುಧ್ಧ ಹೇಳುತ್ತಾನೆ. ಡಾ. ಕೋಶೋ ಯಮಾಮೊಟೊ ಬರೆಯುತ್ತಾರೆ:

‘ಅನಾತ್ಮನ್ ಕುರಿತ ಅವನ ಬೋಧನೆಯು ಸಮಯೋಚಿತವಾಗಿದ್ದು,ಬಹಿರಂಗವಾಗದ ಬೋಧನೆಗಳ ಬಗ್ಗೆ ಮಾತನಾಡಲು ತಾನು ಸಿದ್ಧವೆಂದು ಹೇಳುತ್ತಾನೆ. ಮೇಲೆಕೆಳಗಾದ ಚಿಂತನೆಗಳಿಗೆ ಅನುಸಾರವಾಗಿ ಮನುಷ್ಯರು ನಡೆದುಕೊಳ್ಳುತ್ತಾರೆ. ಆದ್ದರಿಂದ ಅವನು ನಿರ್ವಾಣದ ನಿಜಸ್ಥಿತಿಯ ಲಕ್ಷಣಗಳ ಬಗ್ಗೆ ಈಗ ಮಾತನಾಡುತ್ತಾನೆ, ಅವು ಶಾಶ್ವತ,ಆನಂದ,ಆತ್ಮ ಮತ್ತು ಪರಿಶುದ್ಧತೆ ಬಿಟ್ಟರೆ ಬೇರೆ ಯಾವುದೂ ಅಲ್ಲ.[೩೮]

ಕೆಲವು ವಿದ್ವಾಂಸರ ಪ್ರಕಾರ,ತಥಾಗತಗರ್ಭ ಸೂತ್ರಗಳಲ್ಲಿ ಬಳಸಿದ ಭಾಷೆಯು ಪರಸ್ಪರ ಅವಲಂಬಿತ ಸೃಷ್ಟಿ(ಪ್ರತೀತ್ಯಸಮತ್ಪುದ)ಯ ಸಂಪ್ರದಾಯವಾದಿ ಬೌದ್ಧ ಬೋಧನೆಗಳ ಪ್ರಯತ್ನವೆಂದು ಕಾಣಲಾಗಿದೆ. ನಿರಾಕರಣವಾದದ ತಪ್ಪುಭಾವನೆಯಿಂದ ಬೌದ್ಧಧರ್ಮದಿಂದ ಜನರು ದೂರ ಸರಿಯದಂತೆ ಬದಲಾಗಿ ಧನಾತ್ಮಕ ಭಾಷೆಯನ್ನು ಬಳಸಲಾಗಿದೆ. ಉದಾಹರಣೆಗೆ,ಕೆಲವು ಸೂತ್ರಗಳಲ್ಲಿ ಅನಾತ್ಮದ ವಿವೇಕದ ಪರಿಪೂರ್ಣತೆಯನ್ನು ನಿಜವಾದ ಆತ್ಮವೆಂದು ವಿವರಿಸಲಾಗಿದೆ.ಕೆಲವು ಅತೀ ಮುಖ್ಯ ತತ್ವಜ್ಞಾನಿಗಳು ಭಾರತೀಯ ತತ್ವಜ್ಞಾನದಲ್ಲಿ ಬಳಸಿದ ಧನಾತ್ಮಕ ಭಾಷೆಯ ವ್ಯಾಪ್ತಿಯನ್ನು ಬಳಸಿಕೊಳ್ಳುವುದು ಆಗ ಪಥದ ಅಂತಿಮ ಗುರಿಯ ವೈಶಿಷ್ಟ್ಯವಾಗಿತ್ತು.ಆದರೆ ಈಗ ಬೌದ್ಧಪಥವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಜೀವಿಯನ್ನು ವರ್ಣಿಸಲು ಈಗ ಅದನ್ನು ಹೊಸ ಬೌದ್ಧ ಶಬ್ಧಕೋಶಕ್ಕೆ ಪರಿವರ್ತಿಸಲಾಗಿದೆ.[೩೯]

ನಿರ್ವಾಣದ ಈ ‘ದೃಢೀಕರಣ‘ ಲಕ್ಷಣವು ಬಹುಶಃ ನಿರ್ವಾಣದ ಉನ್ನತ ರೂಪ ಅಂದರೆ ‘ಮಹಾನ್ ನಿರ್ವಾಣ‘ಕ್ಕೆ ಸಂಬಂಧಿಸಿರಬಹುದು ಎಂದು ಡಾ.ಯಮಮೋಟೊ ಗಮನಸೆಳೆದಿದ್ದಾರೆ. ನಿರ್ವಾಣ ಸೂತ್ರ ದ ಅಧ್ಯಾಯದಲ್ಲಿ 'ಬೋಧಿಸತ್ವ ಅತ್ಯಂತ ಸದ್ಗುಣದ ರಾಜ' ಕುರಿತು ಮಾತನಾಡುತ್ತಾ, ಯಮಮೋಟೊ ಗ್ರಂಥವನ್ನು ಉಲ್ಲೇಖಿಸಿ ಹೇಳುತ್ತಾನೆ:ನಿರ್ವಾಣವೆಂದರೇನು?...ಇದು ಹಸಿವಾದವನಿಗೆ ಶಾಂತಿ ಮತ್ತು ಪರಮಾನಂದ ಉಂಟಾಗುವ ಪ್ರಕರಣದಂತೆ,ಏಕೆಂದರೆ ಅವನು ಕಡಿಮೆ ಆಹಾರ ಸೇವಿಸಿರುತ್ತಾನೆ.' -[75] ಯಮಮೋಟೊ ಉಲ್ಲೇಖದೊಂದಿಗೆ ಮುಂದುವರಿಸಿ, ತನ್ನ ಪ್ರತಿಕ್ರಿಯೆಯನ್ನು ನೀಡುತ್ತಾನೆ:

"‘ಆದರೆ ಇಂತಹ ನಿರ್ವಾಣವನ್ನು “ಮಹಾನ್ ನಿರ್ವಾಣ“ವೆಂದು ಕರೆಯಲು ಸಾಧ್ಯವಾಗುವುದಿಲ್ಲ. ಮತ್ತು ಅದು[ನಿರ್ವಾಣ ಕುರಿತು ಬುದ್ಧನ ಹೊಸ ಬಹಿರಂಗ]ಮಹಾನ್ ಆತ್ಮ,ಮಹಾನ್ ಆನಂದ,ಮಹಾನ್ ಶುದ್ಧತೆ,ಎಲ್ಲವೂ ನಿರಂತರತೆ ಜತೆಗೆ ಮಹಾನ್ ನಿರ್ವಾಣದ ನಾಲ್ಕು ಲಕ್ಷಣಗಳ ಬಗ್ಗೆ ಗಮನವಿಡುತ್ತದೆ.[೪೦]

ಕೆಲವು ವಿದ್ವಾಂಸರ ಪ್ರಕಾರ, ಸಂಬಂಧಿಸಿದ ಸೂತ್ರಗಳಲ್ಲಿ ವಿವರಿಸಲಾದ "ಆತ್ಮ"ವು ಗಣನೀಯ ಆತ್ಮವನ್ನು ಪ್ರತಿನಿಧಿಸುವುದಿಲ್ಲ. ಇಷ್ಟೇ ಅಲ್ಲದೇ,ಇದು ಶೂನ್ಯತೆಯ ಧನಾತ್ಮಕ ಭಾಷೆಯ ಅಭಿವ್ಯಕ್ತತೆಯಾಗಿದೆ ಹಾಗೂ ಬೌದ್ಧ ಆಚರಣೆಗಳ ಮೂಲಕ ಬುದ್ಧತ್ವವನ್ನು ಸಾಕ್ಷಾತ್ಕರಿಸುವ ಸಾಮರ್ಥ್ಯವನ್ನು ಅದು ಬಿಂಬಿಸುತ್ತದೆ. ಈ ದೃಷ್ಟಿಯಲ್ಲಿ,'ತಥಾಗತಾಗರ್ಭ'ಬುದ್ಧ ಸ್ವಭಾವದ ಬೋಧನೆಯ ಉದ್ದೇಶವು ತತ್ವಾಧಾರಕ್ಕೆ ಬದಲಾಗಿ ಮೋಕ್ಷಸಿದ್ಧಾಂತದಿಂದ ಕೂಡಿದೆ.[೪೧]

ಆದಾಗ್ಯೂ, ಈ ವ್ಯಾಖ್ಯಾನವು ವಿವಾದಾತ್ಮಕವಾಗಿದೆ. ಎಲ್ಲ ವಿದ್ವಾಂಸರೂ ಇದನ್ನು ಹಂಚಿಕೊಳ್ಳುವುದಿಲ್ಲ. ನಿರ್ವಾಣ ಸೂತ್ರ ಮತ್ತು ಅದೇ ರೀತಿಯ ಗ್ರಂಥಗಳಲ್ಲಿ ಕಂಡುಬಂದಿರುವ ತಥಾಗತಗರ್ಭ ಸಿದ್ಧಾಂತದ ವೈವಿಧ್ಯದ ತಿಳಿವಳಿಕೆಗಳ ಬಗ್ಗೆ ಬರೆಯುತ್ತಾ,ಡಾ.ಜಾಮಿ ಹಬಾರ್ಡ್,ಹೇಗೆ ಕೆಲವು ಪಂಡಿತರು ಈ ತಥಾಗತಗರ್ಭದಲ್ಲಿ ಪಾರಮ್ಯ ಸಿದ್ಧಾಂತ ಮತ್ತು ಏಕತತ್ತ್ವವಾದದ ಪ್ರವೃತ್ತಿಯನ್ನು ಹೇಗೆ ಕಾಣುತ್ತಾರೆಂಬ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.(ಈ ಪ್ರವೃತ್ತಿಯನ್ನು ಜಪಾನಿನ ವಿಧ್ವಾಂಸ ಮಟ್‌ಸುಮುಟೊ ಬೌದ್ದೇತರ ಎಂದು ಟೀಕಿಸಿದ್ದಾರೆ). ಡಾ.ಹಬರ್ಡ್ ಪ್ರತಿಕ್ರಿಯಿಸುತ್ತಾರೆ:

'ತಥಾಗತಗರ್ಭ ಸಾಹಿತ್ಯದಲ್ಲಿ ಸಿಗುವ ತೀವ್ರ ಧನಾತ್ಮಕ ಭಾಷೆ ಮತ್ತು ಜ್ಞಾನೋದಯದ ಸಾಮಾನ್ಯ ರಚನೆ ಹಾಗೂ ಆತ್ಮನ್/ಬ್ರಾಹ್ಮನ್ ಸಂಪ್ರದಾಯದಲ್ಲಿ ಕಾಣುವ ಗಣನೀಯ ಏಕತತ್ವವಾದದ ನಡುವೆ ಹೋಲಿಕೆ ಬಗ್ಗೆ ಮಾಟ್ಸುಮುಟೊ ಗಮನಸೆಳೆಯುತ್ತಾರೆ. ಈ ರೀತಿಯ ಹೋಲಿಕೆಯನ್ನು ಗಮನಿಸಿದವರು ಮಾಟ್ಸುಮುಟೊ ಮಾತ್ರವಲ್ಲ. ಉದಾಹರಣೆಗೆ ತಥಾಗತಗರ್ಭ ಸಂಪ್ರದಾಯದ ಪ್ರಮುಖ ಪಂಡಿತ ತಕಾಸಾಕಿ ಜಿಕಿಡೊ ತಥಾಗತಾಗರ್ಭ ಮತ್ತು ಸಾಮಾನ್ಯವಾಗಿ ಮಹಾಯಾನದ ಸಿದ್ಧಾಂತದಲ್ಲಿ ಏಕತತ್ವವಾದವನ್ನು ಕಾಣುತ್ತಾರೆ.

ಓಬರ್‌ಮಿಲ್ಲರ್ ರತ್ನಗೋತ್ರದಲ್ಲಿ ತಮ್ಮ ಅನುವಾದ ಮತ್ತು ವ್ಯಾಖ್ಯೆಗಳಲ್ಲಿ ತಥಾಗತಗರ್ಭ ಸಾಹಿತ್ಯಕ್ಕೆ ಏಕತತ್ವವಾದದ ಪರಿಪೂರ್ಣತೆಯ ಕಲ್ಪನೆಯನ್ನು ಹೆಣೆದಿದ್ದು, ಅದಕ್ಕೆ “ಬೌದ್ಧ ಏಕತತ್ವವಾದದ ಕೈಪಿಡಿ“ಯೆಂದು ಉಪಶೀರ್ಷಿಕೆ ನೀಡಿದ್ದಾರೆ.

ಲಾಮೋಟಾ ಮತ್ತು ಫ್ರವಾಲ್ನರ್‌ ಅವರು ತಥಾಗತಗರ್ಭ ಸಿದ್ದಾಂತವು ಮಾಧ್ಯಮಿಕಕ್ಕೆ ನೇರವಾಗಿ ವಿರೋಧಿಯೆಂದು ಕಂಡಿದ್ದು,ಆತ್ಮನ್/ಬ್ರಾಹ್ಮಿನ್ ಪ್ರವೃತ್ತಿಯ ಏತತತ್ವವಾದಕ್ಕೆ ಸಮಾನವಾದ ವಸ್ತುವನ್ನು ಪ್ರತಿನಿಧಿಸುತ್ತದೆಂದು ಕಂಡಿದ್ದಾರೆ. ಆದರೆ ನಾಗೋವ,ಸೇಪೋರ್ಟ್ ರೂಗ್, ಜಾನ್ಸ್‌ಟನ್(ರತ್ನಗೋತ್ರದ ಸಂಪಾದಕರು)ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿ,ಇದು ವೇದದ ನಂತರದ ಏಕತತ್ವವಾದದ ಸ್ವರೂಪಗಳಿಗೆ ಹೋಲಿಕೆಯಾಗುವಂತೆ ಕಾಣುತ್ತದೆಂದು ಹೇಳಿದ್ದಾರೆ. ಯಮಗುಚಿ ಸುಸುಮು ಮತ್ತು ಅವನ ವಿದ್ಯಾರ್ಥಿ ಒಗಾವ ಇಚಿಜೊ ಪ್ರತಿನಿಧಿಸುವ ಇನ್ನೊಂದು ಸಿದ್ಧಾಂತವು ವೇದದ ಕಲ್ಪನೆಗಳನ್ನು ಅವಲಂಬಿಸದೇ,ಅದನ್ನು ಬೌದ್ಧಸಂಪ್ರದಾಯದ ನಿಯಮಾಧೀನ ಕಾರ್ಯಕಾರಣ ಸಂಬಂಧ ಮತ್ತು ಶೂನ್ಯತೆಯಲ್ಲಿ ನೇರವಾಗಿ ಇರಿಸಿ, ಏಕತತ್ವವಾದದ ಯಾವುದೇ ರೀತಿಯನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ. ತಥಾಗತಗರ್ಭ ಮತ್ತು ಬುದ್ಧಸ್ವರೂಪದ ಸಂಪ್ರದಾಯಗಳ ಏಕತತ್ವ ಅಥವಾ ಪಾರಮ್ಯ ಸಿದ್ಧಾಂತದ ಪ್ರಶ್ನೆಯು ಜಟಿಲವಾಗಿದೆ.[೪೨]

ಡಾ.ಹಬಾರ್ಡ್ ತಥಾಗತಗರ್ಭ ಸಿದ್ದಾಂತಗಳನ್ನು ಕುರಿತು ಸಂಶೋಧನೆಯನ್ನು ಸಂಕ್ಷೇಪಗೊಳಿಸಿ ಈ ಪದಗಳಲ್ಲಿ ಹೇಳಿದ್ದಾರೆ.

ತಥಾಗತಗರ್ಭ ಬೋಧನೆ ಸದಾ ಚರ್ಚಾಸ್ಪದವಾಗಿದ್ದು,ಇದು ಮೂಲಭೂತವಾಗಿ ಸತ್ಯಾಂಶ ಮತ್ತು ವಿವೇಕದ ಬಗ್ಗೆ ದೃಢಪಡಿಸುವ ನಿಲುವಾಗಿದ್ದು,ವಾಸ್ತವತೆಯಲ್ಲಿ ಯಾವ ಕೊರತೆ ಅಥವಾ ಶೂನ್ಯತೆ ಇದೆಯೆಂಬ ನಕಾರಾತ್ಮಕ ಪದಗಳಲ್ಲಿ ವಿವರಿಸದೇ(ನೇತ್ಯಾತ್ಮಕ ವಿವರಣೆ,ವಿವೇಕದ ಪರಿಪೂರ್ಣತೆಯ ಸಂಗ್ರಹ ಮತ್ತು ಮಾಧ್ಯಮಿಕ ಶಾಲೆಯ ಮಾದರಿ)ಅದು ಏನು ಎನ್ನುವುದನ್ನು ಧನಾತ್ಮಕ ಪದಗಳಲ್ಲಿ ವಿವರಿಸುತ್ತದೆ.(ದೃಢೀಕರಣದ ವಿವರಣೆ,ಹೆಚ್ಚಾಗಿ ಭಕ್ತಿ,ತಾಂತ್ರಿಕ್,ಮಹಾಪರಿನಿರ್ವಾಣ ಮತ್ತು ಲೋಟಸ್ ಸೂತ್ರ ಸಂಪ್ರದಾಯಗಳ ಮಾದರಿ,ಸಂಪ್ರದಾಯವಾದಿ ಬ್ರಾಹ್ಮಣ ಪದ್ಧತಿಗಳ ಏಕತತ್ವವಾದವನ್ನು ಗಮನಿಸಬೇಕು)[೪೩]

ಪಾಲ್ ವಿಲಿಯಮ್ಸ್ ಪ್ರಕಾರ,ನಿರ್ವಾಣ ಸೂತ್ರವು ತನ್ನ ಆತ್ಮದ ಬೋಧನೆಗಳನ್ನು ಬೌದ್ಧೇತರ ಸನ್ಯಾಸಿಗಳ ಮನಸ್ಸನ್ನು ಗೆಲ್ಲಲು ಪ್ರಸ್ತುತಪಡಿಸಿದಾಗ,ಆತ್ಮನ್/ಬ್ರಾಹ್ಮಿನ್ ಚಿಂತನೆಯ ಏಕತತ್ವವಾದದ ಹೋಲಿಕೆಗೆ ವಿವರಣೆ ಸಿಗುತ್ತದೆ:

ಈ ಹಂತದಲ್ಲಿ ಬೌದ್ಧಧರ್ಮದ ಮೇಲೆ ಹಿಂದು ಪ್ರಭಾವವನ್ನು ಕುರಿತು ಮಾತನಾಡಬೇಕೆನಿಸುತ್ತದೆ, ಆದರೆ ಬರೀ ಪ್ರಭಾವಗಳ ಬಗ್ಗೆ ಮಾತನಾಡುವುದು ಬಹಳ ಸುಲಭ.... ಬುದ್ಧ ಆತ್ಮ ಪದವನ್ನು ಬೌದ್ಧೇತರ ಸನ್ಯಾಸಿಗಳ ಮನಸ್ಸನ್ನು ಗೆಲ್ಲಲು ಬಳಸಿದನೆಂದು ಮಹಾಪರಿನಿರ್ವಾಣ ಸೂತ್ರ ಉಲ್ಲೇಖಿಸಿದಾಗ,ಅದು ಹಿಂದು ಪ್ರಭಾವವನ್ನು ಒಂದು ರೀತಿಯಲ್ಲಿ ಸ್ವಯಂ ಒಪ್ಪಿಕೊಂಡಿದೆ. ಅದೇನೇ ಇದ್ದರೂ,ಅದ್ವೈತ ವೇದಾಂತದ ಅತೀಂದ್ರಿಯ ಆತ್ಮ-ಬ್ರಾಹ್ಮಣ್ ಅವಶ್ಯಕವಾಗಿ ಈ ಹಂತದಲ್ಲಿ ಬೌದ್ಧಧರ್ಮದ ಮೇಲೆ ಪ್ರಭಾವ ಬೀರುತ್ತಿದೆಯೆಂದು ನಿರ್ದಿಷ್ಟವಾಗಿ ಯೋಚಿಸುವುದು ತಪ್ಪಾಗುತ್ತದೆ. ಆತ್ಮ ನಿಜವಾಗಲೂಮಹಾಪರಿನಿರ್ವಾಣ ಸೂತ್ರ ದ ಅನಾತ್ಮವು ಅದ್ವೈತ ಬ್ರಾಹ್ಮನ್‌ಗೆ ಹೋಲಿಕೆಯಾಗಿರುವುದು ಯಾವುದೇ ರೀತಿಯಲ್ಲಿ ಸ್ಪಷ್ಟವಾಗಿಲ್ಲ.ಅಲ್ಲದೇ,ತಥಾಗತಾಗರ್ಭ ಸೂತ್ರಗಳು ಹಿಂದು ಅದ್ವೈತ ಶಾಲೆಯ ಸಂಸ್ಥಾಪಕ ಗೌಡಪದಕ್ಕಿಂತ ಮುಂಚಿನದಾಗಿದೆ(ಏಳನೇ ಶತಮಾನ).[೩೨]

ಈ ಸೂತ್ರವು ಬುದ್ಧ-ಸ್ವರೂಪವು ನಿಜವಾಗಲೂ ಅನಾತ್ಮವಾಗಿದ್ದು,ಮಾತನಾಡುವ ರೀತಿಯಲ್ಲಿ ಆತ್ಮ ಎಂದು ಕೂಡ ವಿವರಿಸುತ್ತದೆ.[೪೪] ಈ ಸೂತ್ರದ ಇನ್ನೊಂದು ವಿಭಾಗದಲ್ಲಿ,ಯಾವುದನ್ನಾದರೂ "ಹೊಂದಲು" ವ್ಯಕ್ತಿಗೆ ಮೂರು ಮಾರ್ಗಗಳಿವೆ.ಅದನ್ನು ಭೂತಕಾಲದಲ್ಲಿ ಪಡೆಯುವುದು, ಅದನ್ನು ವರ್ತಮಾನಕಾಲದಲ್ಲಿ ಪಡೆಯುವುದು ಹಾಗೂ ಭವಿಷ್ಯತ್‌ಕಾಲದಲ್ಲಿ ಹೊಂದುವುದು. "ಎಲ್ಲ ಜೀವಿಗಳಿಗೂ ಬುದ್ಧಸ್ವರೂಪವಿದೆ" ಎನ್ನುವುದರ ಅರ್ಥವೇನೆಂದರೆ,ಎಲ್ಲ ಜೀವಿಗಳು ಭವಿಷ್ಯದಲ್ಲಿ ಬುದ್ಧರಾಗುತ್ತಾರೆ ಎಂದು ಅದು ಹೇಳುತ್ತದೆ.[೪೫]. ಡೊಜೆನ್,ಆದಾಗ್ಯೂ ಸುಸ್ಪಷ್ಟವಾಗಿ ಬುದ್ಧ ಸ್ವರೂಪವು ವರ್ತಮಾನದಲ್ಲಿ ಕೂಡ ಬೌದ್ದೇತರರಲ್ಲಿ ಒಂದು ಅರ್ಥದಲ್ಲಿ ಉಪಸ್ಥಿತವಿರುತ್ತದೆಂದು ಹೇಳುತ್ತಾರೆ: ವಾಸ್ತವವಾಗಿ ಪ್ರಸಕ್ತ ಕ್ಷಣದ ವಾಸ್ತವತೆಯನ್ನು(ನಿಶ್ಚಲತೆರಹಿತವಾಗಿ)ಹುಲ್ಲು ಮತ್ತು ಮರಗಳು ಹಾಗೂ ಮನಸ್ಸು ಹಾಗೂ ದೇಹ ಸೇರಿದಂತೆ ಬುದ್ಧಸ್ವರೂಪದೊಂದಿಗೆ ಸಮನಾಗಿಸುವ ಮೂಲಕ ಹೇಳುತ್ತಾರೆ. ಡೊಜೆನ್‌ಗೆ ಯಾವುದನ್ನು ನೋಡಿದರೂ ಬುದ್ಧ-ಸ್ವರೂಪ ಕಾಣುತ್ತದೆ.ಆದರೆ ಇದು ದೇಹದಲ್ಲಿ ವಾಸನೆ, ದೃಷ್ಟಿ ಮುಂತಾದವುಗಳ ರೀತಿಯಲ್ಲಿ ಈಗಲೂ ಇವೆ ಎಂದು ಚಿನುಲ್ ವಾದಮಂಡಿಸುತ್ತಾರೆ. ಪ್ರಮುಖ ಲಂಕಾವತಾರ ಸೂತ್ರವು ಎಲ್ಲ ಕ್ರಿಯೆಗಳು ಬುದ್ಧ-ಸ್ವರೂಪದ ಕ್ರಿಯೆಗಳಾಗಿದ್ದು,ಎಲ್ಲ ಕರ್ಮದ ವಿಧಿಗೂ ಬುದ್ಧ-ಸ್ವರೂಪ ಕಾರಣಕರ್ತ ಮತ್ತು ಮೂಲ ಎಂದು ಹೇಳುತ್ತದೆ.

ಮೇಲೆ ಸೂಚಿಸಿರುವಂತೆ,ಜಪಾನಿನ ಜೆನ್ ಮಾಸ್ಟರ್ ಡೊಜೆನ್ ಬುದ್ಧ-ಸ್ವರೂಪದ ಬಗ್ಗೆ ವಿಶಿಷ್ಟ ವ್ಯಾಖ್ಯಾನ ನೀಡಿದ್ದು, ಸರ್ವ-ಜೀವಿಗಳಲ್ಲೂ ಬುದ್ಧನ ಸ್ವರೂಪವನ್ನು ಕಾಣಲಾಗಿದ್ದು,ಯಾವುದೂ(ಜಡವಸ್ತುಗಳು ಕೂಡ)ಅದರಿಂದ ಪ್ರತ್ಯೇಕವಾಗಿಲ್ಲ ಅಥವಾ ವಿಶಿಷ್ಠವಾಗಿಲ್ಲ. ಬುದ್ಧ-ಸ್ವರೂಪವು ಬುದ್ಧತ್ವದ 'ಸಂಭಾವ್ಯತೆ'ಯಲ್ಲ,ಇದು ಎಲ್ಲ ವಸ್ತುಗಳ ನಿಜವಾದ ಸ್ವರೂಪ. ಎಲ್ಲ ವಸ್ತುಗಳನ್ನು ಅವುಗಳ ನಶ್ವರತೆಯಲ್ಲಿ ಬುದ್ಧ-ಸ್ವರೂಪವೆಂದು ಕಾಣಲಾಗುತ್ತದೆ,[೪೬] ಹಾಗೂ ಅವು ಬುದ್ಧ-ಸ್ವರೂಪದ 'ಸಂಭಾವ್ಯತೆ'ಯ ಬೀಜವನ್ನು ಹೊಂದಿರುವುದಿಲ್ಲ. ಈ ತಿಳಿವಳಿಕೆಯ ಬಗ್ಗೆ ಡಾ.ಮಾಸಾವೊ ಬರೆಯುತ್ತಾರೆ:

'... ಡೊಜೆನ್ ತಿಳಿವಳಿಕೆಯಲ್ಲಿ,ಸಕಲ ಚೇತನಾತ್ಮಕ ಜೀವಿಗಳಲ್ಲಿ ಅಸ್ತಿತ್ವದಲ್ಲಿರುವ ಬೀಜದ ರೀತಿಯಲ್ಲಿ ಬುದ್ಧ-ಸ್ವರೂಪವು ಒಂದು ಸಾಮರ್ಥ್ಯವಲ್ಲ. ಬದಲಿಗೆ,ಎಲ್ಲ ಚೇತನಾತ್ಮಕ ಜೀವಿಗಳು, ಸಜೀವ ಮತ್ತು ನಿರ್ಜೀವದ ಬಹುತೇಕ ಎಲ್ಲ ಜೀವಿಗಳು ಮೂಲತಃ ಬುದ್ಧ-ಸ್ವರೂಪಿಯಾಗಿವೆ. ಇದನ್ನು ಭವಿಷ್ಯದಲ್ಲಿ ಕಾರ್ಯತಃ ಸಾಧಿಸುವ ಸಾಮರ್ಥ್ಯವಲ್ಲ.ಆದರೆ ಎಲ್ಲ ಜೀವಿಗಳ ಮೂಲಭೂತ ಸ್ವರೂಪ.[೪೭]

ಡೊಜೆನ್ ಹೀಗೆ,ಬುದ್ಧ-ಸ್ವರೂಪ ಮತ್ತು 'ಸಚೇತನ ಜೀವಿ'ಗಳ ಪರಿಕಲ್ಪನೆಯನ್ನು ವಿಸ್ತರಿಸಿ,ಸಂಪೂರ್ಣ ಎಲ್ಲ ಜೀವಂತವಿರುವ, ಮನಸ್ಸನ್ನು ಹೊಂದಿದ ಜೀವಿಗಳಲ್ಲಿ ಸ್ವಯಂ ಬುದ್ಧಸ್ವರೂಪ ಆವರಿಸಿದೆಯೆಂದು ಹೇಳಿದ್ದಾರೆ. ಡಾ. ಮಾಸಾವೊ ಅಬೆ ಸ್ಪಷ್ಟೀಕರಣ ನೀಡಿದ್ದಾರೆ:

'... ಡೋಜೆನ್ ಬುದ್ಧ-ಸ್ವರೂಪದ ಅರ್ಥವನ್ನು ವಿಶಾಲಗೊಳಿಸಿದ್ದಾರೆ ಮಾತ್ರವಲ್ಲ, ಸಚೇತನ ಜೀವಿ ಗಳ ಪದವನ್ನು ಕೂಡ ವಿಶಾಲಗೊಳಿಸಿದ್ದಾರೆ ಶೂಜೊ "ಬುಶೊ" ಪುಸ್ತಕದಲ್ಲಿ,ಇಡೀ ಜೀವಿಗಳು ಬುದ್ಧ-ಸ್ವರೂಪಿಯೆಂದು ಹೇಳಿದ ತಕ್ಷಣ,ಅವನು ಮುಂದುವರಿಸುತ್ತಾನೆ,"ಇಡೀ ಜೀವಿಗಳ ಒಂದು ಅವಿಭಾಜ್ಯ ಸ್ವರೂಪವನ್ನು ಸಚೇತನ ಜೀವಿಗಳು ಎಂದು ಕರೆಯುವೆ'" ... ಇದರ ಅರ್ಥ ಡೋಜೆನ್ ಶೂಜೊ (ಸಚೇತನ ಜೀವಿ)ಅರ್ಥವನ್ನು ವಿಶಾಲಗೊಳಿಸಿದ್ದು,ಸಾಂಪ್ರದಾಯಿಕವಾಗಿ ನಿರ್ಜೀವಿ ಅಥವಾ ಸಚೇತನರಹಿತ ವಸ್ತುಗಳನ್ನು ಉಲ್ಲೇಖಿಸಿದ್ದು,ಸಜೀವಿ ಅಥವಾ ಅಚೇತನ ಜೀವಿಗಳನ್ನು ಸೇರಿಸಲಾಗಿದೆ. ಇನ್ನೊಂದು ರೀತಿಯಲ್ಲಿ,ಅವನು ಜಡ ವಸ್ತುಗಳಿಗೆ ಜೀವವನ್ನು ಹೊರಿಸಿ,ಅಚೇತನ ವಸ್ತುಗಳಿಗೆ ಭಾವನೆಗಳನ್ನು ಹೊರಿಸಿ, ಅಂತಿಮವಾಗಿ ಮನಸ್ಸು ಮತ್ತು ಬುದ್ಧ-ಸ್ವರೂಪವನ್ನು ಅವುಗಳಿಗೆಲ್ಲ ಹೊರಿಸುತ್ತಾನೆ.[೪೮].

ಉಲ್ಲೇಖಗಳು

[ಬದಲಾಯಿಸಿ]
  • ಗೌತಮ ಬುದ್ಧ:
    • "ನಿರ್ವಾಣವು ಪರಮಾವಧಿ ಆನಂದ." [Dp 204]
    • "ಎಲ್ಲಿ ಏನೂ ಇರುವುದಿಲ್ಲವೋ; ಎಲ್ಲಿ ಶೂನ್ಯತೆ ಆವರಿಸಿದೆಯೋ, ಅಲ್ಲಿ ಆಚೆಯಿಲ್ಲದ ದ್ವೀಪವಿರುತ್ತದೆ. ನಿರ್ವಾಣವನ್ನು ನಾನು -- ಮುಪ್ಪು ಮತ್ತು ಸಾವಿನ ಸಂಪೂರ್ಣ ಕ್ಷೀಣತೆ ಎಂದು ಕರೆಯಲೇ."
    • "ಅಲ್ಲಿ ಭಿಕ್ಕುಗಳು, ಅಜಾತ -- ಪುನರ್ಜನ್ಮ ಹೊಂದಲಾರದ -- ಸೃಷ್ಟಿಯಾಗದ -- ಅಸಂಕತ(ನಿರ್ಬಂಧವಿಲ್ಲದ) ಸ್ಥಿತಿಯಲ್ಲಿರುತ್ತಾರೆ. ಅಜಾತ--ಪುನರ್ಜನ್ಮರಹಿತ-ಸೃಷ್ಟಿರಹಿತ-ಅಸಂಕತರಿಲ್ಲದಿದ್ದರೆ ಅಲ್ಲಿ ಜಾತ--ಪುನರ್ಜನ್ಮ--ಸೃಷ್ಟಿ--ರಚನೆಯಿಂದ ಮುಕ್ತಿಯನ್ನು ಕಂಡುಕೊಳ್ಳಲಾಗುವುದಿಲ್ಲ. ಆದರೆ ನಿಖರವಾಗಿ ಅಲ್ಲಿ ಅಜಾತ,ಪುನರ್ಜನ್ಮರಹಿತ--ಸೃಷ್ಟಿರಹಿತ-ಅಸಂಕತರಿರುವುದರಿಂದ, ಜನ್ಮ,ಪುನರ್ಜನ್ಮ,ಸೃಷ್ಟಿ,ರಚನೆಯಿಂದ ಮುಕ್ತಿಯನ್ನು ಕಂಡುಕೊಳ್ಳಲಾಗುತ್ತದೆ" [ಉಡಾನ VIII.3]
    • ಇದು ಹೇಳಿದೆ: ‘ವಿಮೋಚಿತ ಮನಸ್ಸು/ಇಚ್ಚೆ(ಸಿಟ್ಟಾ)ಅಂಟಿಕೊಳ್ಳದಿದ್ದರೆ’ಅದರ ಅರ್ಥ ನಿಬ್ಬಾಣ”[MN2-Att. 4.68]
    • “'ಸತತ ಪುನರ್ಜನ್ಮದ ಸ್ಥಿತಿಯ ನಿಗ್ರಹವೇ ನಿರ್ವಾಣ';

ಇದರ ಅರ್ಥ ಐದು ಸ್ಕಂಧಗಳ ನಿಗ್ರಹವೇ ನಿರ್ವಾಣ” [SN-Att. 2.123]

    • ಅಗ್ಗಿ-ವಚಗೋಟ್ಟ ಸೂತ್ರ ದಲ್ಲಿ ಬುದ್ಧ ನಿಬ್ಬಾಣವನ್ನು ನಿಲುಗಡೆ ಮತ್ತು ಅಗ್ನಿಯನ್ನು ನಂದಿಸುವುದಕ್ಕೆ ಹೋಲಿಸಿದ್ದಾನೆ.ಅಲ್ಲಿ ಪೋಷಣೆಯ ವಸ್ತುಗಳನ್ನು ತೆಗೆಯಲಾಗಿದೆ: ಆಳವಾದ ಜ್ಞಾನವುಳ್ಳ ವಚ್ಚಾ,ಈ ವಿದ್ಯಮಾನವು ನೋಡಲು ಕಷ್ಟವಾಗಿದೆಯೇ, ಅರಿಯಲು ಕಷ್ಟವಾಗಿದೆಯೇ,ನೆಮ್ಮದಿಯ,ಪರಿಶುದ್ಧಗೊಳಿಸಿದ,ಊಹೆಯ ವ್ಯಾಪ್ತಿಯನ್ನು ಮೀರಿದ,ಸೂಕ್ಷ್ಮ,ವಿವೇಕಿಗಳಿಗೆ ಮಾತ್ರ ಅನುಭವವಾಗುತ್ತದೆ."
    • "ಅಲ್ಲಿ ಭೂಮಿರಹಿತ,ಜಲರಹಿತ,ಅಗ್ನಿರಹಿತ,ಗಾಳಿರಹಿತ ವ್ಯಾಪ್ತಿಯನ್ನು ಹೊಂದಿದೆ;ಆಕಾಶದ ಅನಂತತೆಯ ವ್ಯಾಪ್ತಿ ಇಲ್ಲ,ಪ್ರಜ್ಞೆಯ ಅನಂತತೆಯ ವ್ಯಾಪ್ತಿಯಿಲ್ಲ,ಶೂನ್ಯತೆಯ ವ್ಯಾಪ್ತಿಯಿಲ್ಲ,ಪರಿಕಲ್ಪನೆ ಅಥವಾ ಪರಿಕಲ್ಪನೆರಹಿತ ವ್ಯಾಪ್ತಿಯಿಲ್ಲ, ಈ ಜಗತ್ತು, ಮುಂದಿನ ಜಗತ್ತು, ಸೂರ್ಯ ಅಥವಾ ಚಂದ್ರ ಅಲ್ಲಿಲ್ಲ. ಅಲ್ಲಿ, ನಾನು ಹೇಳುತ್ತೇನೆ,ಆಗಮನ, ನಿರ್ಗಮನವಿಲ್ಲ,ಅಥವಾ ಸ್ತಂಭನವಿಲ್ಲ;ಅಲ್ಲಿ ಸಾವು ಅಥವಾ ಹುಟ್ಟಿಲ್ಲ:ದೃಷ್ಟಿಕೋನರಹಿತ,ಅಡಿಪಾಯರಹಿತ,ಬೆಂಬಲರಹಿತ(ಮಾನಸಿಕ ವಸ್ತು) ಇದು ಒತ್ತಡದ ಅಂತ್ಯ."
  • ಗೌತಮ ಬುದ್ಧನ ದೈಹಿಕ ಸಾವು ಸಂಭವಿಸಿದ ಕೂಡಲೇ ಅವನ ಮನಸ್ಸು(ಸಿಟ್ಟಾ)parinirvāṇaವಿಮೋಚನೆಯ ಸಾರ ಎನ್ನಲಾಗಿದೆ:
    • [DN 2.157]“ಇನ್ನು ಉಚ್ಛ್ವಾಸ, ನಿಶ್ವಾಸವಿಲ್ಲ(ಅಸ್ತಿತ್ವವಿಲ್ಲ.ಆದ್ದರಿಂದ ಅವನು(ಗೌತಮ)ನಿಶ್ಚಲ ಮನಸ್ಸಿ(ಸಿಟ್ಟಾ)ನವನು,ಅಂತರ್ಗತವಾಗಿ ಎಲ್ಲ ಆಸೆಗಳಿಂದ ನಿಗ್ರಹಿತನಾಗಿ, ಮಹಾನ್ ತಪಸ್ವಿ ಅವುಗಳನ್ನು ಬಿಟ್ಟು ಹೋಗಿದ್ದಾನೆ.

ಮನಸ್ಸು(ಸಿಟ್ಟಾ)ಮಿತಿರಹಿತ,ಅವನಿಗೆ ಇನ್ನು ಸಂವೇದನೆಗಳನ್ನು ಹೊಂದಿಲ್ಲ; ಪ್ರಕಾಶಿತ ಮತ್ತು ನಿರ್ಬಂಧಿತ(ನಿಬ್ಬಾಣ),ಅವನ ಮನಸ್ಸು(ಸಿಟ್ಟಾ)ಖಂಡಿತವಾಗಿ(ಅಹು)ವಿಮೋಚನೆ ಹೊಂದಿದೆ.”

  • ಸುಟ್ಟಾ ನಿಪಾಟಾ, tr. ರೂನ್ ಜಾನ್‌ಸನ್:
    • accī yathā vātavegena khitto
      atthaṁ paleti na upeti sankhaṁ
      evaṁ muni nāmakāyā kimutto
      atthaṁ paleti na upeti sankhaṁ
    • atthan gatassa na pamāṇam atthi
      ynea naṁ vajju taṁ tassan atthi
      sabbesu dhammesu samūhatesu
      samūhatā vādapathāpi sabbe
    • ಬಲವಾದ ಗಾಳಿಯಿಂದ ನಂದಿಹೋದ ಬೆಂಕಿಯ ಜ್ವಾಲೆಯೊಂದು ತಟಸ್ಥವಾಗಿ ಅದನ್ನು ಹೇಗೆ ವ್ಯಾಖ್ಯಾನಿಸಲು ಸಾಧ್ಯವಿಲ್ಲವೋ,ಹಾಗೇ ಹೆಸರು ಮತ್ತು ದೇಹದಿಂದ ಮುಕ್ತನಾದ ತಪಸ್ವಿ ವಿಶ್ರಾಂತಿಗೆ ತೆರಳುತ್ತಾನೆ ಹಾಗೂ ಅದನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ.
      ವಿಶ್ರಾಂತ ಸ್ಥಿತಿಗೆ ಮರಳಿದ ಅವನನ್ನು ವರ್ಣಿಸಲು ಅಳತೆಯ ಸಾಧನೆಯೇ ಇಲ್ಲ;ಅದು ಅವನಿಗಲ್ಲ. ಎಲ್ಲ ಧರ್ಮಗಳು ಬಿಟ್ಟುಹೋದಾಗ,ಎಲ್ಲ ಮನ್ನಣೆಯ ಲಕ್ಷಣಗಳು ಹೋಗುತ್ತವೆ.[೪೯]
  • ಪೂಜ್ಯ ಸಾರಿಪುಟ್ಟಾ:
    • ದುರಾಸೆ, ದ್ವೇಷ ಮತ್ತು ಭ್ರಮೆಯ ನಾಶವೇ ನಿರ್ವಾಣ.

ಜೈನಧರ್ಮದಲ್ಲಿ ನಿರ್ವಾಣ

[ಬದಲಾಯಿಸಿ]

ಟೆಂಪ್ಲೇಟು:Religion ಜೈನಧರ್ಮದಲ್ಲಿ ಇದರ ಅರ್ಥವೇನೆಂದರೆ ಕರ್ಮದ ಬಂಧನದಿಂದ ಅಂತಿಮ ಬಿಡುಗಡೆ. ಅರಾಹತ್ ಅಥವಾ ತೀರ್ಥಂಕರ ಮುಂತಾದ ಜ್ಞಾನೋದಯಗೊಂಡ ಮನುಷ್ಯರು ತಮ್ಮ ಉಳಿದ ಆಗತೀಯ ಕರ್ಮಗಳನ್ನು ನಂದಿಸುತ್ತಾರೆ, ಹೀಗೆ,ಪ್ರಾಪಂಚಿಕ ಅಸ್ತಿತ್ವವನ್ನು ಅಂತ್ಯಗೊಳಿಸುತ್ತಾರೆ, ಇದಕ್ಕೆ ನಿರ್ವಾಣ ಎಂದು ಕರೆಯುತ್ತಾರೆ. ತಾಂತ್ರಿಕವಾಗಿ,ಅರಾಹತ್ ಸಾವನ್ನು ಅರಾಹತ್ ನಿರ್ವಾಣವೆನ್ನುತ್ತಾರೆ,ಅವನು ಪ್ರಾಪಂಚಿಕ ಅಸ್ತಿತ್ವವನ್ನು ಕೊನೆಗೊಳಿಸಿ,ಮೋಕ್ಷವನ್ನು ಸಾಧಿಸಿರುತ್ತಾನೆ. ಮೋಕ್ಷ, ಅಂದರೆ ವಿಮೋಚನೆಯು ನಿರ್ವಾಣವನ್ನು ಅನುಸರಿಸುತ್ತದೆ. ಅರಾಹತ್,ನಿರ್ವಾಣವನ್ನು ಸಾಧಿಸಿದ ನಂತರ ಸಿದ್ಧ ಅಥವಾ ವಿಮೋಚಿತ ವ್ಯಕ್ತಿಯಾಗುತ್ತಾನೆ.

ಜೈನ ಧರ್ಮದಲ್ಲಿ ನಿರ್ವಾಣವೆಂದರೆ :

  1. ಅರಾಹತ್‌ನ ಪ್ರಾಪಂಚಿಕ ಅಸ್ತಿತ್ವಕ್ಕೆ ಅಂತ್ಯ,ನಂತರ ವಿಮೋಚನೆ ಹೊಂದುತ್ತಾರೆ.
  2. ಮೋಕ್ಷ (ಜೈನಧರ್ಮ)

ಜೈನ ಪಠ್ಯಗಳಲ್ಲಿ ತೀರ್ಥಂಕರನ ನಿರ್ವಾಣದ ವಿವರಣೆ

[ಬದಲಾಯಿಸಿ]

ಜೈನರು ಮಹಾವೀರನ ನಿರ್ವಾಣದ ದಿನವನ್ನು ದಿವಾಳಿಯಾಗಿ ಆಚರಿಸುತ್ತಾರೆ. ಕಲ್ಪಸೂತ್ರ ಮಹಾವೀರ ನಿರ್ವಾಣದ ಬಗ್ಗೆ ವಿಸ್ತೃತ ವಿವರಗಳನ್ನು ನೀಡುತ್ತದೆ.

The aghatiya Karma’s of venerable Ascetic Mahavira got exhausted, when in this Avasarpini era the greater part of the Duhshamasushama period had elapsed and only three years and eight and a half months were left. Mahavira had recited the fifty-five lectures which detail the results of Karma, and the thirty-six unasked questions (the Uttaradhyana Sutra). The moon was in conjunction with the asterism Svati, at the time of early morning, in the town of Papa, and in king Hastipala's office of the writers, (Mahivira) single and alone, sitting in the Samparyahka posture, left his body and attained nirvana, freed from all pains.” (147)

In the fourth month of that rainy season, in the seventh fortnight, in the dark (fortnight) of Karttika, on its fifteenth day, in the last night, in the town of Papa, in king Hastipala's office of the writers, the Venerable Ascetic Mahavira died, went off, cut asunder the ties of birth, old age, and death; became a Siddha, a Buddha, a Mukta, a maker of the end (to all misery), finally liberated, freed from all pains. (123)

That night in which the Venerable Ascetic Mahavira died, freed from all pains, was lighted up by many descending and ascending gods. (125)

In that night in which the Venerable Ascetic Mahavira, died, freed from all pains, the eighteen confederate kings of Kasi and Kosala, the nine Mallakis and nine Licchavis, on the day of new moon, instituted an illuminations on the Poshadha, which was a fasting day; for they said: 'Since the light of intelligence is gone, let us make an illumination of material matter!'(128)

ಮೋಕ್ಷವಾಗಿ ನಿರ್ವಾಣ

[ಬದಲಾಯಿಸಿ]

ಉತ್ತರಾಧ್ಯಾನ ಸೂತ್ರದಲ್ಲಿ ಗೌತಮನು ಪಾರ್ಸ್ವಾದ ಶಿಷ್ಯನಾದ ಕೇಸಿಗೆ ನಿರ್ವಾಣದ ಅರ್ಥವನ್ನು ವಿವರಿಸುತ್ತಿರುವ ವಿದ್ಯಮಾನವನ್ನು ಒದಗಿಸಲಾಗಿದೆ.[೫೦]

There is a safe place in view of all, but difficult of approach, where there is no old age nor death, no pain nor disease. It is what is called Nirvâna, or freedom from pain, or perfection, which is in view of all; it is the safe, happy, and quiet place which the great sages reach. That is the eternal place, in view of all, but difficult of approach. Those sages who reach it are free from sorrows, they have put an end to the stream of existence. (81-4)

ಇವನ್ನೂ ನೋಡಿ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. [34] ^ ರಿಚರ್ಡ್ ಗಾಂಬ್ರಿಚ್‌, "ಥೇರವಾಢ ಬುದ್ಧಿಸಂ : ಎ ಸೋಷಿಯಲ್‌ ಹಿಸ್ಟರಿ ಫ್ರಂ ಆನ್‌ಷಿಯೆಂಟ್‌ ಬೆನಾರಸ್‌ ಟು ಮಾಡರ್ನ್ ಕೊಲೊಂಬೋ." ರೋಟ್‌ಲೆಡ್ಜ್ ಎಂಡ್ ಕೇಗಾನ್ ಪಾಲ್ , 1988, ಪುಟ 63: "ನಿಬ್ಬಾಣ ಅಂದರೆ 'ನಂದಿಸುವುದು.' ದುರಾಸೆ,ದ್ವೇಷ ಮತ್ತು ಭ್ರಮೆಯ ತ್ರಿವಳಿ ಅಗ್ನಿಯನ್ನು ನಂದಿಸಬೇಕು.."
  2. ಪೀಟರ್ ಹಾರ್ವೆ, ಕಾನ್ಷಸ್‌ನೆಸ್ ಮಿಸ್ಟಿಸಿಸಂ ಇನ್ ದಿ ಡಿಸ್ಕೋರ್ಸಸ್ ಆಫ್ ದಿ ಬುದ್ಧ ಕರೇಲ್ ವರ್ನರ್, ದಿ ಯೋಗಿ ಎಂಡ್ ದಿ ಮಿಸ್ಟಿಕ್; ಸ್ಟಡೀಸ್ ಇನ್ ಇಂಡಿಯನ್ ಅಂಡ್ ಕಂಪ್ಯಾರಟೀವ್ ಮಿಸ್ಟಿಸಿಸಂ." ರೌಲೆಡ್ಜ್, 1995, ಪುಟ 82; books.google.com
  3. ಗೆಂಥರ್, ದಿ ಪ್ರಾಬ್ಲಂ ಆಫ್ ದಿ ಸೌಲ್ ಇನ್ ಅರ್ಲಿ ಬುದ್ಧಿಸಂ, ಕರ್ಟ್ ವೆಲ್ಲರ್ ವೆರ್ಲಾಗ್, ಕಾನ್‌ಸ್ಟಾಂಜ್, 1949, pp. 156-157.
  4. ಸ್ಟೀವನ್ ಕಾಲಿನ್ಸ್, ಸೆಲ್ಫ್‌ಲೆಸ್ ಪರ್ಸನ್ಸ್: ಇಮೇಜರಿ ಎಂಡ್ ತಾಟ್ ಇನ್ ಥೇರವಾಡ ಬುದ್ದಿಸಂ. ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್, 1982, ಪುಟ 207.
  5. ಪೀಟರ್ ಹಾರ್ವೆ, "ದಿ ಸೆಲ್ಷ್‌ಲೆಸ್ ಮೈಂಡ್." ಕರ್ಜನ್ ಪ್ರೆಸ್ 1995, ಪುಟ 87.
  6. ಕಾಶಿ ನಾಥ್ ಉಪಾಧ್ಯಾಯ, ಅರ್ಲಿ ಬುದ್ಧಿಸಂ ಎಂಡ್ ದಿ ಭಗವದ್ಗೀತಾ . ಮೋತಿಲಾಲ್ ಬನಾರಸಿದಾಸ್ ಪ್ರಕಟಣೆ., 1998, ಪುಟ 352.
  7. ೭.೦ ೭.೧ ಡ್ಯಾನ್ ಲುಸ್ತಾಸ್, ಬುದ್ಧಿಸ್ಟ್ ಫೆನೋಮೆನಾಲಜಿ. ರೌಲೆಡ್ಜ್, 2002, ಪುಟ 126, ಮತ್ತು ಟಿಪ್ಪಣಿ 7, ಪುಟ 154.
  8. ಯಮಕ ಸುಟ್ಟಾ, SN 22.85.
  9. ೯.೦ ೯.೧ ೯.೨ ಬ್ರಹ್ಮ-ನಿಮತಂತಿಕ ಸೂತ್ರಕ್ಕೆ ಥಾನಿಸಾರೊ ಭಿಕ್ಕುವಿನ ವ್ಯಾಖ್ಯಾನ, ಅಕ್ಸೆಸ್ ಟು ಇನ್‌ಸೈಟ್:ರೀಡಿಂಗ್ಸ್ ಇನ್ ಥೇರವಾಡ ಬುದ್ಧಿಸಂ
  10. ಉದಾಹರಣೆಗೆ ಧ್ಯಾನ ಸೂತ್ರವನ್ನು ನೋಡಿ ಅಕ್ಸೆಸ್ ಟು ಇನ್‌ಸೈಟ್: ರೀಡಿಂಗ್ಸ್ ಇನ್ ಥೇರವಾಡ ಬುದ್ದಿಸಂ
  11. ಪೀಟರ್ ಹಾರ್ವೆ ಕಾನ್ಷಸ್‌ನೆಸ್ ಮಿಸ್ಟಿಸಿಸಂ ಇನ್ ದಿ ಡಿಸ್ಕೋರ್ಸಸ್ ಆಫ್ ಬುದ್ಧ. ಇನ್ ಕಾರೆಲ್ ವರ್ನರ್, ಎಡ್., ದಿ ಯೋಗಿ ಎಂಡ್ ದಿ ಮಿಸ್ಟಿಕ್. ಕರ್ಜನ್ ಪ್ರೆಸ್ 1989, ಪುಟ 91.
  12. ೧೨.೦ ೧೨.೧ ಪೀಟರ್ ಹಾರ್ವೆ ಕಾನ್ಷಸ್‌ನೆಸ್ ಮಿಸ್ಟಿಸಿಸಂ ಇನ್ ದಿ ಡಿಸ್ಕೋರ್ಸಸ್ ಆಫ್ ಬುದ್ಧ. ಇನ್ ಕಾರೆಲ್ ವರ್ನರ್, ಎಡ್., ದಿ ಯೋಗಿ ಎಂಡ್ ದಿ ಮಿಸ್ಟಿಕ್. ಕರ್ಜನ್ ಪ್ರೆಸ್ 1989, ಪುಟ , 93.
  13. ೧೩.೦ ೧೩.೧ ೧೩.೨ ಥಾನಿಸಾರೊ ಭಿಕ್ಕು, ಅಕ್ಸೆಸ್ ಟು ಇನ್‌ಸೈಟ್: ರೀಡಿಂಗ್ಸ್ ಇನ್ ಥೇರವಾಡ ಬುದ್ಧಿಸಂ
  14. ಪೀಟರ್ ಹಾರ್ವೆ ಕಾನ್ಷಸ್‌ನೆಸ್ ಮಿಸ್ಟಿಸಿಸಂ ಇನ್ ದಿ ಡಿಸ್ಕೋರ್ಸಸ್ ಆಫ್ ಬುದ್ಧ. ಇನ್ ಕಾರೆಲ್ ವರ್ನರ್, ದಿ ಯೋಗಿ ಎಂಡ್ ದಿ ಮಿಸ್ಟಿಕ್; ಸ್ಟಡೀಸ್ ಇನ್ ಇಂಡಿಯನ್ ಅಂಡ್ ಕಂಪ್ಯಾರಟೀವ್ ಮಿಸ್ಟಿಸಿಸಂ" ." ರೌಟ್‌ಲೆಡ್ಜ್, 1995 ಪುಟ 82; [೧].
  15. ಅಜಾನ್ ಪಸಾನೊ ಎಂಡ್ ಅಜಾನ್ ಅಮಾರೊ, ದಿ ಐಲೆಂಡ್: ಎನ್ ಆಂಥೋಲಜಿ ಆಫ್ ದಿ ಬುದ್ಧಾಸ್ ಟೀಚಿಂಗ್ಸ್ ಆನ್ ನಿಬ್ಬಾಣ, ಪುಟ 131. ಆನ್‌ಲೈನ್‌ನಲ್ಲಿ ಲಭ್ಯವಿದೆ [೨] Archived 2010-05-23 ವೇಬ್ಯಾಕ್ ಮೆಷಿನ್ ನಲ್ಲಿ..
  16. ಪೀಟರ್ ಹಾರ್ವೆ, ಕಾನ್ಷಸ್‌ನೆಸ್ ಮಿಸ್ಟಿಸಿಸಂ ಇನ್ ದಿ ಡಿಸ್ಕೋರ್ಸಸ್ ಆಫ್ ದಿ ಬುದ್ಧ. ಇನ್ ಕಾರೆಲ್ ವರ್ನರ್,ಎಡ್, ದಿ ಯೋಗಿ ಎಂಡ್ ದಿ ಮಿಸ್ಟಿಕ್ ಕರ್ಜನ್ ಪ್ರೆಸ್ 1989,ಪುಟಗಳು 87, 90.
  17. ಥಾನಿಸಾರೊ ಭಿಕ್ಕು, ಅಕ್ಸೆಸ್ ಟು ಇನ್‌ಸೈಟ್:ರೀಡಿಂಗ್ಸ್ ಇನ್ ಥೇರವಾಡ ಬುದ್ಧಿಸಂ, ಅಕ್ಸೆಸ್ ಟು ಇನ್‌ಸೈಟ್:ರೀಡಿಂಗ್ಸ್ ಇನ್ ಥೇರವಾಡ ಬುದ್ಧಿಸಂ.
  18. ,ಪೀಟರ್ ಹಾರ್ವೆ ಕೂಡ ನೋಡಿದಿ ಸೆಲ್ಫ್‌ಲೆಸ್ ಮೈಂಡ್.
  19. ಅಜಾನ್ ಬ್ರಹ್ಮಾಲಿ, [೩].
  20. ರೂಪರ್ಟ್ ಗೇಥಿನ್ ಹಾರ್ವೆಯ ವಾದದ ಕೆಲವು ಭಾಗಗಳಿಗೆ ಆಕ್ಷೇಪ; [೪] Archived 2010-06-16 ವೇಬ್ಯಾಕ್ ಮೆಷಿನ್ ನಲ್ಲಿ..
  21. ಪೀಟರ್ ಹಾರ್ವೆ, ಕಾನ್ಷಸ್‌ನೆಸ್ ಮಿಸ್ಟಿಸಿಸಂ ಇನ್ ದಿ ಡಿಸ್ಕೋರ್ಸಸ್ ಆಫ್ ದಿ ಬುದ್ಧ. ಇನ್ ಕಾರೆಲ್ ವರ್ನರ್,ಎಡ್, ದಿ ಯೋಗಿ ಎಂಡ್ ದಿ ಮಿಸ್ಟಿಕ್ ಕರ್ಜನ್ ಪ್ರೆಸ್ 1989, ಪುಟ 88. ಉಲ್ಲೇಖವು MN I, 127-128.
  22. ಕಾಶಿ ನಾಥ್ ಉಪಾಧ್ಯಾಯ, ಅರ್ಲಿ ಬುದ್ಧಿಸಂ ಎಂಡ್ ದಿ ಭಗವದ್ಗೀತಾ . ಮೋತಿಲಾಲ್ ಬನಾರಸಿದಾಸ್ ಪ್ರಕಟಣೆ ., 1998, ಪುಟ 355.
  23. ಕಾಶಿನಾಥ್ ಉಪಾಧ್ಯಾಯ, ಅರ್ಲಿ ಬುದ್ಧಿಸಂ ಎಂಡ್ ದಿ ಭಗವದ್ಗೀತಾ . ಮೋತಿಲಾಲ್ ಬನಾರಸಿದಾಸ್ ಪ್ರಕಟಣೆ ., 1998, ಪುಟಗಳು 354-356. [೫]
  24. [7] ^ ಕ್ರಿಶ್ಚಿಯನ್‌ ಲಿಂಡ್‌ಟ್ನರ್‌, ಮಾಸ್ಟರ್‌ ಆಫ್‌ ವಿಸ್‌ಡಂ. ಧರ್ಮ ಪಬ್ಲಿಷಿಂಗ್‌ 1997, ಪುಟ 322. ಲಿಂಡ್‌ನರ್ ಹೇಳುತ್ತಾರೆ, ನಾಗಾರ್ಜುನ ಡನ್ ಉಲ್ಲೇಖಿಸುತ್ತಿದ್ದಾರೆ.
  25. ಪೀಟರ್ ಹಾರ್ವೆ, ಕಾನ್ಷಸ್‌ನೆಸ್ ಮಿಸ್ಟಿಸಿಸಂ ಇನ್ ದಿ ಡಿಸ್ಕೋರ್ಸಸ್ ಆಫ್ ದಿ ಬುದ್ಧ. ಇನ್ ಕರೇಲ್ ವರ್ನರ್ ಎಡ್, ದಿ ಯೋಗಿ ಎಂಡ್ ದಿ ಮಿಸ್ಟಿಕ್ ಕರ್ಜನ್ ಪ್ರೆಸ್ 1989, ಪುಟ 100.
  26. ಕೆಳಗೆ ಉಲ್ಲೇಖಿಸಿರುವ ಅನೇಕ ಸೂತ್ರಗಳು ಹಾಗೂ ಸ್ವತಃ ಬುದ್ಧಘೋಷನ ಸೂತ್ರಗಳು ನಿರ್ವಾಣವನ್ನು ಸ್ಪಷ್ಟವಾಗಿ ಉಲ್ಲೇಖಿಸುವುದಿಲ್ಲ, ಆದರೆ "ಶುದ್ಧೀಕರಣದ ಮಾರ್ಗವನ್ನು ಉಲ್ಲೇಖಿಸುತ್ತದೆ"(ಪಾಲಿ: ವಿಶುದ್ಧಿಮಗ ) ವಿಶುದ್ಧಿಮಗದಲ್ಲಿ,Ch. I, v. 5, ಬುದ್ಧಘೋಷ ಟಿಪ್ಪಣಿ ಮಾಡಿದ್ದಾರೆ: "ಈ ಸಂದರ್ಭದಲ್ಲಿ, ಶುದ್ಧೀಕರಣ ವನ್ನು ನಿಬ್ಬಾಣವೆಂದು ತಿಳಿಯಬೇಕು, ಎಲ್ಲ ಕಳಂಕಗಳರಹಿತವಾದ ಇದು ಸಂಪೂರ್ಣ ಶುದ್ಧ " (ಬುದ್ಧಘೋಷ & Ñāṇamoli, 1999, ಪುಟ. 6).
  27. ನೋಡಿ ಅಕ್ಸೆಸ್ ಟು ಇನ್‌ಸೈಟ್:ರೀಡಿಂಗ್ಸ್ ಇನ್ ಥೇರವಾಡ ಬುದ್ಧಿಸಂ , ಬುದ್ಧರಕ್ಕಿತ (1996b).
  28. ನಿಕಾಯದಲ್ಲಿ ಮಾನಸಿಕ ಬೆಳವಣಿಗೆಯನ್ನು ಸಾಮಾನ್ಯವಾಗಿ ಧ್ಯಾನದಲ್ಲಿ ತಲ್ಲೀನತೆಯ ಸಾಧನೆ ಎಂದು ಬಣ್ಣಿಸಲಾಗಿದೆ. ಆದಾಗ್ಯೂ,"ಒಳದೃಷ್ಟಿ ಮಾತ್ರ"ಕ್ಕೆ ಸಂಬಂಧಿಸಿದ ಟಿಪ್ಪಣಿಯಲ್ಲಿ ಸೂಚಿಸಿರುವಂತೆ,ಕೆಲವು ಸಂದರ್ಭಗಳಲ್ಲಿ ಇದು "ಪ್ರವೇಶ" ಸಾಧನೆ ಅಥವಾ ಪೂರ್ಣ ತಲ್ಲೀನತೆ ಇಲ್ಲದೇ "ಕ್ಷಣಿಕ" ತನ್ಮಯ ಸಾಧಿಸುವುದು.
  29. ಟಾಕ್ಪೊ ತಾಶಿ ನಮ್ಗಾಯಲ್, ಮಹಾಮುದ್ರ ಶಂಬಾಲಾ, ಬೋಸ್ಟನ್ ಎಂಡ್ ಲಂಡನ್, 1986, ಪುಟ.219
  30. ಪ್ರೊಫೆಸರ್ ಎಟೀನೆ, ಲಾಮೊಟ್ಟೆ, tr. ಸಾರಾ ಬಾಯಿನ್-ವೆಬ್, ಸುರಂಗಮಸಮಾಧಿ ಸೂತ್ರ , ಕರ್ಜನ್, ಲಂಡನ್, 1998, p.4
  31. ವಿಲಿಯಂ ಎಡ್ವರ್ಡ್ ಸೂಥಿಲ್, ಲೂವಿಸ್ ಹೋಡಸ್, ಎ ಡಿಕ್ಷ್ನರಿ ಆಫ್ ಚೈನೀಸ್ ಬುದ್ಧಿಸ್ಟ್ ಟರ್ಮ್ಸ್ , ಮೋತಿಲಾಲ್ ಬನಾರಸಿದಾಸ್, ಡೆಲ್ಲಿ, 1997, p. 328
  32. ೩೨.೦ ೩೨.೧ ಪಾಲ್ ವಿಲಿಯಮ್ಸ್, ಮಹಾಯಾನ ಬುದ್ದಿಸಂ: ದಿ ಡಾಕ್ಟ್ರೈನಲ್ ಫೌಂಡೇಶನ್ಸ್. ಟೈಲರ್ & ಫ್ರಾನ್ಸಿಸ್, 1989, page 100.
  33. ಪೀಟರ್ ಹಾರ್ವೆ, ದಿ ಸೆಲ್ಫ್‌ಲೆಸ್ ಮೈಂಡ್. ಕರ್ಜನ್ ಪ್ರೆಸ್, 1995, ಪುಟ 53.
  34. ಪಾಲ್ ವಿಲಿಯಂಸ್, ಮಹಾಯಾನ ಬುದ್ಧಿಸಂ: ದಿ ಡಾಕ್ಟ್ರೈನಲ್ ಫೌಂಡೇಶನ್ಸ್. ಟೈಲರ್ & ಫ್ರಾನ್ಸಿಸ್, 1989, ಪುಟ 98, ನೋಡಿ, ಪುಟ 99.
  35. ಪಾಲ್ ವಿಲಿಯಮ್ಸ್, ಮಹಾಯಾನ ಬುದ್ಧಿಸಂ: ದಿ ಡಾಕ್ಟ್ರೈನಲ್ ಫೌಂಡೇಶನ್ಸ್. ಟೈಲರ್ & ಫ್ರಾನ್ಸಿಸ್, 1989, ಪುಟ 100. "...ಬೌದ್ದೇತರ ಸನ್ಯಾಸಿಗಳ ಮನಸ್ಸು ಗೆಲ್ಲುವ ಸಲುವಾಗಿ ಬುದ್ದ "ಆತ್ಮ" ಪದವನ್ನು ಬಳಸಿದ್ದನ್ನು ಉಲ್ಲೇಖಿಸುತ್ತದೆ.
  36. ೩೬.೦ ೩೬.೧ ಯೂರು ವಾಂಗ್, ಲಿಂಗ್ವಿಸ್ಟಿಕ್ ಸ್ಟ್ರಾಟಜೀಸ್ ಇನ್ ಜಾವೋಂಗ್ಜಿ ಎಂಡ್ ಚಾನ್ ಬುದ್ಧಿಸಂ : ದಿ ಅದರ್ ವೇ ಆಫ್ ಸ್ಪೀಕಿಂಗ್. ರೋಟ್‌ಲೆಡ್ಜ್, 2003, ಪುಟ 58.
  37. ಕೋಶೋ ಯಮಾಮೊಟೊ, 3 ಸಂಪುಟಗಳಲ್ಲಿ ಮಹಾಯಾನ ಮಹಾಪರಿನಿರ್ವಾಣ ಸೂತ್ರ, ಸಂಪುಟ, 3, p. 660, ಕರೀನ್‌ಬುಂಕೊ, ಉಬೆ ಸಿಟಿ, ಜಪಾನ್ 1975
  38. Dr. ಕೋಶೊ ಯಮಮೋಟೊ ಮಹಾಯಾನಿಸಂ: ಎ ಕ್ರಿಟಿಕಲ್ ಎಕ್ಸ್‌ಪೋಸಿಷನ್ ಆಫ್ ದಿ ಮಹಾಯಾನ ಮಹಾಪರಿನಿರ್ವಾಣ ಸೂತ್ರ , ಕರೀನ್‌ಬುಂಕೊ, ಉಬೆ ಸಿಟಿ, ಜಪಾನ್, 1975, pp. 141, 142
  39. ಸಾಲ್ಲಿ B. ಕಿಂಗ್, ದಿ ಡಾಕ್ಟ್ರೈನ್ ಆಫ್ ಬುದ್ಧಾ-ನೇಚರ್ ಈಸ್ ಇಂಪಕೇಬ್ಲಿ ಬುದ್ಧಿಸ್ಟ್ I. [೬] Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.,ಪುಟಗಳು 1-6.
  40. ಯಮಮೊಟೊ ಮಹಾಯಾನಿಸಂ , ಇಬಿಡ್
  41. ಹೆಂಗ್-ಚಿಂಗ್ ಶಿಹ್, "ದಿ ಸಿಗ್ನಿಫಿಕೇನ್ಸ್ ಆಫ್ 'ತಥಾಗತಗರ್ಭ' -- ಎ ಪಾಸಿಟಿವ್ ಎಕ್ಸ್‌ಪ್ರೆಶನ್ ಆಫ್ 'ಸುನ್ಯತಾ'" ZEN ಕಂಪ್ಯೂಟರ್ ಸಿಸ್ಟಂಸ್‌ನಲ್ಲಿ
  42. Dr. ಜಾಮೀ ಹಬಾರ್ಡ್, ಅಬ್ಸೋಲ್ಯೂಟ್ ಡೆಲ್ಯೂಷನ್, ಪರ್ಫೆಕ್ಟ್ ಬುದ್ಧಾಹುಡ್ ,ಯೂನಿವರ್ಸಿಟಿ ಆಫ್ ಹವಾಯ್ ಪ್ರೆಸ್, ಹೊನೊಲುಲು, 2001, pp. 99-100
  43. Dr. ಜಾಮಿ ಹಬ್ಬರ್ಡ್, op. ಸಿಟ್., pp. 120-121
  44. ಪಾಲ್ ವಿಲಿಯಮ್ಸ್, ಮಹಾಯಾನ ಬುದ್ಧಿಸಂ: ದಿ ಡಾಕ್ಟ್ರೈಲ್ ಫೌಂಡೇಶನ್ಸ್. ಟೈಲರ್ & ಫ್ರಾನ್ಸಿಸ್, 1989, ಪುಟ 99. "ಇಲ್ಲಿ ಬುದ್ಧ ಸ್ವರೂಪವು ನಿಜವಾಗಿ ಅನಾತ್ಮನ್‌ ಆಗಿದೆ.ಆದರೆ ಆತ್ಮ ಎಂದು ಇದನ್ನು ಒಂದು ರೀತಿಯಲ್ಲಿ ಹೇಳಲಾಗುತ್ತದೆ. "
  45. ಹೆಂಗ್-ಚಿಂಗ್ ಶಿಹ್, "ದಿ ಸಿಗ್ನಿಫಿಕೇನ್ಸ್ ಆಫ್'ತಥಾಗತಾಗರ್ಭ', ಎ ಪಾಸಿಟಿವ್ ಎಕ್ಸ್‌ಪ್ರೆಶನ್ ಆಫ್ 'ಸುನ್ಯತಾ'"., ಎಟ್ ZEN ಕಂಪ್ಯೂಟರ್ ಸಿಸ್ಟಮ್ಸ್
  46. ಎ ಸ್ಟಡಿ ಆಫ್ ಡೋಜೆನ್: ಹಿಸ್ ಫಿಲಾಸಫಿ ಎಂಡ್ ರಿಲಿಜಿಯನ್ , ಮಾಸೊ ಅಬೆ ಅವರಿಂದ, ಸಂ. ಸ್ಟೀವ್ ಹೇನ್ SUNY, ಅಲ್ಬಾನಿ, 1992, p. 57
  47. ಎ ಸ್ಟಡಿ ಆಫ್ ಡೋಜೆನ್: ಹಿಸ್ ಫಿಲಾಸಫಿ ಎಂಡ್ ರಿಲಿಜಿಯನ್ , ಮಾಸೊ ಅಬೆ ಅವರಿಂದ, ಸಂ. ಸ್ಟೀವ್ ಹೇನ್ SUNY, ಅಲ್ಬಾನಿ, 1992, p. 42
  48. ಎ ಸ್ಟಡಿ ಆಫ್ ಡೋಜೆನ್: ಹಿಸ್ ಫಿಲಾಸಫಿ ಎಂಡ್ ರಿಲಿಜಿಯನ್ , ಮಾಸೊ ಅಬೆ ಅವರಿಂದ, ಸಂ. ಸ್ಟೀವ್ ಹೇನ್ SUNY, ಅಲ್ಬಾನಿ, 1992, p. 54
  49. ಬುದ್ಧನು ಜ್ವಾಲೆಯನ್ನು ನಂದಿಸುವ ರೂಪಕಾಲಂಕಾರ ಬಳಸಿದ್ದು,ಅಗ್ನಿ ಶಾಶ್ವತವಾಗಿರುವ ವೇದಗಳ ಅರ್ಥದಲ್ಲಿ ತೆಗೆದುಕೊಳ್ಳಬಾರದು,ಅಥವಾ ನಂದಿಸಿದ ಅಗ್ನಿಯು ಅಸ್ತಿತ್ವವನ್ನು ಸ್ಥಗಿತಗೊಳಿಸುತ್ತದೆ ಎಂಬ ಆಧುನಿಕ ಅರ್ಥದಲ್ಲಿ ತೆಗೆದುಕೊಳ್ಳೂಬಾರದು. ಬದಲಾಗಿ ಅವನು ಅಸ್ತಿತ್ವ ಅಥವಾ ಅಸ್ತಿತ್ವವಿಲ್ಲದಿರುವಿಕೆ ಪ್ರಶ್ನೆಗಳನ್ನು ಮೀರಿ ಅವನು ಪರಿಸ್ಥಿತಿಯನ್ನು ಚರ್ಚಿಸುತ್ತಾನೆ. ನೋಡಿ ಅಕ್ಸೆಸ್ ಟು ಇನ್‌ಸೈಟ್:ರೀಡಿಂಗ್ಸ್ ಇನ್ ಥೇರವಾಡ ಬುದ್ಧಿಸಂ.
  50. Jacobi, Hermann (1895). Uttaradhyayana Sutra, Jain Sutras Part II, Sacred Books of the East, Vol. 45. Oxford: The Clarendon Press. {{cite book}}: Unknown parameter |coauthors= ignored (|author= suggested) (help)


^ ಕವಾಮುರಾ, ಬೌದ್ಧಮತದಲ್ಲಿ ಬೋಧಿಸತ್ವ ಸಿದ್ಧಾಂತ ವಿಲ್ಫ್ರಿಡ್ ಲಾರಿಯರ್ ಯುನಿವರ್ಸಿಟಿ ಪ್ರೆಸ್, 1981, pp. 11.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ನಿಬ್ಬಾಣವನ್ನು ವ್ಯಾಖ್ಯಾನಿಸಿದ ಪಾಲಿ ತ್ರಿಪಿಟಿಕಾದಿಂದ ಹೆಚ್ಚಿನ ಭಾಗಗಳು.

"https://kn.wikipedia.org/w/index.php?title=ನಿರ್ವಾಣ&oldid=1212582" ಇಂದ ಪಡೆಯಲ್ಪಟ್ಟಿದೆ