ಅಸ್ತಿತ್ವ
ಅಸ್ತಿತ್ವವು ಜಗತ್ತು ಮತ್ತು ಮಹಾವಿಶ್ವದೊಂದಿಗೆ ಭೌತಿಕವಾಗಿ ಪರಸ್ಪರ ಕಾರ್ಯನಡೆಸುವ ಸಾಮರ್ಥ್ಯದ ಜೊತೆಗೆ ವಾಸ್ತವಿಕವಾಗಿರುವ ಸ್ಥಿತಿಯನ್ನು ಒಳಗೊಳ್ಳುತ್ತದೆ. ಅಸ್ತಿತ್ವವು ಸತ್ತಾಶಾಸ್ತ್ರದ ಅತ್ಯಂತ ಪ್ರಮುಖ ಹಾಗೂ ಮೂಲಭೂತ ವಿಷಯಗಳಲ್ಲಿ ಒಂದಾಗಿದೆ. ಸತ್ತಾಶಾಸ್ತ್ರವೆಂದರೆ ಸಾಮಾನ್ಯ ರೂಪದಲ್ಲಿ ಜೀವಿ, ಅಸ್ತಿತ್ವ ಅಥವಾ ವಾಸ್ತವಿಕತೆಯ ಸ್ವರೂಪದ, ಜೊತೆಗೆ ಜೀವಿಯ ಮೂಲಭೂತ ವರ್ಗಗಳು ಮತ್ತು ಅವುಗಳ ಸಂಬಂಧಗಳ ತಾತ್ವಿಕ ಅಧ್ಯಯನ. ಸಾಂಪ್ರದಾಯಿಕವಾಗಿ ತತ್ವಮೀಮಾಂಸೆ ಎಂದು ಪರಿಚಿತವಾದ ತತ್ವಶಾಸ್ತ್ರಾದ ಪ್ರಮುಖ ಶಾಖೆಯ ಭಾಗವಾಗಿ ಪಟ್ಟಿಮಾಡಲಾದ ಸತ್ತಾಶಾಸ್ತ್ರವು ಯಾವ ವಸ್ತುಗಳು ಅಸ್ತಿತ್ವದಲ್ಲಿರುತ್ತವೆ ಅಥವಾ ಅಸ್ತಿತದಲ್ಲಿವೆ ಎಂದು ಹೇಳಬಹುದು ಎಂಬುದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ, ಮತ್ತು ಅಂತಹ ವಸ್ತುಗಳನ್ನು ಹೇಗೆ ಗುಂಪು ಮಾಡಬಹುದು, ಒಂದು ಶ್ರೇಣಿವ್ಯವಸ್ಥೆಯಲ್ಲಿ ಹೇಗೆ ಸಂಬಂಧಿಸಬಹುದು, ಮತ್ತು ಹೋಲಿಕೆಗಳು ಹಾಗೂ ವ್ಯತ್ಯಾಸಗಳ ಪ್ರಕಾರ ಹೇಗೆ ಉಪವಿಭಜಿಸಬಹುದು ಎಂಬುದಕ್ಕೆ ಸಂಬಂಧಿಸಿರುತ್ತದೆ.
ಅಸ್ತಿತ್ವದಲ್ಲಿರುವ ವಸ್ತುಗಳೆಂದರೆ ಭೌತವಸ್ತು ಮತ್ತು ಶಕ್ತಿ ಮಾತ್ರ ಎಂದು, ಎಲ್ಲ ವಸ್ತುಗಳು ಮೂಲದ್ರವ್ಯದಿಂದ ರಚನೆಗೊಂಡಿರುತ್ತವೆ ಎಂದು, ಎಲ್ಲ ಕ್ರಿಯೆಗಳಿಗೆ ಶಕ್ತಿ ಬೇಕಾಗುತ್ತದೆ ಎಂದು, (ಪ್ರಜ್ಞೆ ಸೇರಿದಂತೆ) ಎಲ್ಲ ವಿದ್ಯಮಾನಗಳು ಪರಸ್ಪರ ಭೌತಿಕ ಕ್ರಿಯೆಗಳ ಪರಿಣಾಮವಾಗಿವೆ ಎಂದು ಭೌತವಾದ ಅಭಿಪ್ರಾಯಪಡುತ್ತದೆ.
ಜೀವನವು ಸ್ವಾವಲಂಬಿ ಜೈವಿಕ ಪ್ರಕ್ರಿಯೆಗಳನ್ನು ಹೊಂದಿರುವ ವಸ್ತುಗಳನ್ನು ಹೊಂದಿರದ ವಸ್ತುಗಳಿಂದ ವ್ಯತ್ಯಾಸಮಾಡುವ ಒಂದು ಗುಣಲಕ್ಷಣವಾಗಿದೆ[೧]—ಅಂತಹ ಕ್ರಿಯೆಗಳು ನಿಂತುಹೋಗಿರುವ ಕಾರಣದಿಂದ (ಮರಣ), ಅಥವಾ ಅವುಗಳು ಅಂತಹ ಕ್ರಿಯೆಗಳನ್ನು ಹೊಂದಿಲ್ಲದಿರುವ ಕಾರಣದಿಂದ ಮತ್ತು ಹಾಗಾಗಿ ನಿರ್ಜೀವ ಎಂದು ವರ್ಗೀಕರಿಸಲ್ಪಡುತ್ತವೆ.
ತತ್ವಶಾಸ್ತ್ರದ ಪಾಶ್ಚಾತ್ಯ ಪರಂಪರೆಯಲ್ಲಿ, ಈ ವಿಷಯದ ಪರಿಚಿತವಿರುವ ಅತ್ಯಂತ ಮುಂಚಿನ ವಿಸ್ತಾರವಾದ ಶಾಸ್ತ್ರಗ್ರಂಥಗಳು ಪ್ಲೇಟೊನ ಫೇಡೊ, ರಿಪಬ್ಲಿಕ್ ಹಾಗೂ ಸ್ಟೇಟ್ಸ್‌ಮನ್ ಮತ್ತು ಅರಿಸ್ಟಾಟಲ್‍ನ ಮೆಟಾಫಿಸಿಕ್ಸ್, ಆದರೆ ಇವಕ್ಕೂ ಮೊದಲಿನ ಅಸಮಗ್ರ ಬರಹ ಇದೆ. ಅರಿಸ್ಟಾಟಲ್ ಜೀವಿಯ ಒಂದು ವಿಸ್ತರವಾದ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದನು. ಇದರ ಪ್ರಕಾರ ಪ್ರತ್ಯೇಕ ವಸ್ತುಗಳು ಮಾತ್ರ ಅಸ್ತಿತ್ವನ್ನು ಪೂರ್ಣವಾಗಿ ಹೊಂದಿರುತ್ತವೆ, ಆದರೆ ಸಂಬಂಧಗಳು, ಪರಿಮಾಣ, ಕಾಲ ಮತ್ತು ಸ್ಥಳದಂತಹ ಇತರ ವಸ್ತುಗಳು ವ್ಯುತ್ಪನ್ನವಾದ ರೀತಿಯ ಅಸ್ತಿತ್ವವನ್ನು ಹೊಂದಿರುತ್ತವೆ, ಅಂದರೆ ಪ್ರತ್ಯೇಕ ವಸ್ತುಗಳ ಮೇಲೆ ಅವಲಂಬಿಸಿರುತ್ತವೆ. ಅರಿಸ್ಟಾಟಲ್‍ನ ಮೆಟಾಫಿಸಿಕ್ಸ್‌ನಲ್ಲಿ, ಪ್ರಕೃತಿಯಲ್ಲಿ ಅಸ್ತಿತ್ವ ಅಥವಾ ಬದಲಾವಣೆಯ ನಾಲ್ಕು ಕಾರಣಗಳಿವೆ, ಭೌತಿಕ ಕಾರಣ, ವಿಧ್ಯುಕ್ತ ಕಾರಣ, ಸಮರ್ಥ ಕಾರಣ ಮತ್ತು ಅಂತಿಮ ಕಾರಣ.
ಉಲ್ಲೇಖಗಳು
[ಬದಲಾಯಿಸಿ]- ↑ Koshland Jr, Daniel E. (2002). "The Seven Pillars of Life". Science. 295 (5563): 2215–2216. doi:10.1126/science.1068489. PMID 11910092.