ಹಾಗಲಕಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bitter melon
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
M. charantia
Binomial name
Momordica charantia
Descourt.
ಎರಡು ಅರ್ಧ ಮತ್ತು ಎರಡು ಅಡ್ಡ ವಿಭಾಗಗಳನ್ನು ಹೊಂದಿರುವ ಪೂರ್ಣ ಮೊಮೊರ್ಡಿಕಾ ಚರಂತಿಯಾ

ಮೊಮೊರ್ಡಿಕಾ ಚರಾಂತಿಯ , ಇಂಗ್ಲಿಷ್ ನಲ್ಲಿ ಬಿಟರ್ ಮೆಲನ್ ಅಥವಾ ಬಿಟರ್ ಗೌರ್ಡ್ ಎಂದು ಕರೆಯಲಾಗುವ ಇದು,ಸೌತೆಕಾಯಿಯಂತಹ ಕ್ಯುಕರ್ಬಿಟೇಸಿಯೆ ಜಾತಿಗೆ ಸೇರಿದ ಉಷ್ಣವಲಯ ಹಾಗು ಉಪೋಷ್ಣವಲಯದ ಬಳ್ಳಿಯಾಗಿದೆ. ಇದು ತಿನ್ನಲು ಯೋಗ್ಯವಾದ ಹಣ್ಣನ್ನು ಹೊಂದಿರುವ ಕಾರಣಕ್ಕೆ ಏಷಿಯಾ, ಆಫ್ರಿಕಾ, ಹಾಗು ಕ್ಯಾರೆಬಿಯನ್ ಅಂದರೆ ವೆಸ್ಟ್ ಇಂಡೀಸ್ ದ್ವೀಪ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದರ ಹಣ್ಣು ಇತರ ಎಲ್ಲ ಹಣ್ಣುಗಳಿಗಿಂತ ಅತ್ಯಧಿಕ ಕಹಿಯಾಗಿರುತ್ತದೆ. ಇದರಲ್ಲಿಯೂ ಮೂಲಭೂತವಾಗಿ ಹಣ್ಣಿನ ಆಕಾರ ಹಾಗು ಕಹಿಯಲ್ಲಿ ವ್ಯತ್ಯಾಸ ಹೊಂದಿರುವ ಹಲವು ಪ್ರಭೇದಗಳಿವೆ.

ಇದು ಉಷ್ಣವಲಯಗಳಲ್ಲಿನ ಸಸ್ಯವಾಗಿದ್ದರೂ, ಇದರ ಮೂಲ ನೆಲೆಯ ಬಗ್ಗೆ ತಿಳಿದುಬಂದಿಲ್ಲ. ಇದು ಬೇಸಿಗೆ ಕಾಲದ ಮೈಧನ ಪ್ರದೇಶಗಳಲ್ಲಿ ಬೆಳೆಯುವ ಬಹುವಿದ ಧಾನ್ಯಗಳಲ್ಲಿ ಒಂದು ಬಗೆ.

ಕೆಲವೊಂದು ಇಂಗ್ಲಿಷ್ ಪಠ್ಯಗಳಲ್ಲಿ, ಸಸ್ಯ ಅಥವಾ ಹಣ್ಣನ್ನು ಅದರ ಸ್ಥಳೀಯ ಹೆಸರಿನಿಂದ ಕರೆಯಲಾಗುತ್ತದೆ, ಇದು ಕುಗೂವ (苦瓜 "ಹಾಗಲಕಾಯಿ", ಚೈನೀಸ್ ಭಾಷೆಯಲ್ಲಿ), ಪಾರೆ ಅಥವಾ ಪಾರೆ ಅಯಂ (ಜಾವಾನೀಸ್ ಹಾಗು ಇಂಡೋನೆಷಿಯನ್ ಭಾಷೆಯಲ್ಲಿ), ಮಲಯಾಳಂನಲ್ಲಿ ಪಾವಕ್ಕಾ ಅಥವಾ ಕಾಯ್ಪ್ಪಯ್ಕ , ಗೊಯೋ (ゴーヤー) ಅಥವಾ ಜಪಾನೀಸ್ ಭಾಷೆಯ ಹಿಂದಿನ ರೂಪ ಒಕಿನವನ್ ಭಾಷೆಯಲ್ಲಿ ನಿಗೌರಿ ), ಪಾಖರ್ಕಾಯಿ ((பாகற்காய், ತಮಿಳಿನಲ್ಲಿ), ಕರೇಲ ಅಥವಾ ಕರೆಲ್ಲ (ಭಾರತೀಯ ಇತರ ಭಾಷೆಗಳಲ್ಲಿ ಹಾಗು ನೇಪಾಳದಲ್ಲಿ), ಅಮ್ಪಲಯ (ತಗಲೋಗ್ ನಲ್ಲಿ), ಮುಯೋಪ್ ಡಂಗ್ ,(ಮುಯೋಪ್ ಡಂಗ್) ಅಥವಾ ಖೋ ಕ್ವಾ (ವಿಯೆಟ್ನಾಮೀಸ್ ನಲ್ಲಿ ಖೋ ಕ್ವಾ), ಕಾರೈಲ್ಲೇ ಕಾರಿಲ್ಲೆಯ್ (ಟ್ರಿನಿಡಾಡ್ ಹಾಗು ಟೊಬ್ಯಾಗೊನಲ್ಲಿ), ಹಾಗು ಸೆರಸೀ ಸೆರಸ್ಸೇ (ಕೆರೇಬಿಯನ್ ಹಾಗು ದಕ್ಷಿಣ ಆಫ್ರಿಕಾದಲ್ಲಿ).

ವಿವರಣೆ[ಬದಲಾಯಿಸಿ]

ಪಕ್ವವಾದ ಹಣ್ಣು

ಇದು ಔಷಧೀಯ ಮೂಲದ,ಈ ದಾರುವಿಲ್ಲದ, ಎಲೆರಹಿತ ಸಸ್ಯಾಂಗವನ್ನು ಹೊಂದಿರುವ ಬಳ್ಳಿಯು ಐದು ಮೀಟರ್ ಗಳವರೆಗೂ ಬೆಳೆಯಬಲ್ಲದು. ಇದು ಸರಳವಾದ, ೪–೧೨ ಸೆಂನಷ್ಟು ಅಡ್ಡವಾಗಿ ಪರ್ಯಾಯ ಎಲೆಗಳನ್ನು, ಜೊತೆಗೆ ೩–೭ರಷ್ಟು ಆಳವಾಗಿ ಪ್ರತ್ಯೇಕಗೊಂಡ ಹಾಲೆಗಳನ್ನು ಹೊಂದಿರುತ್ತದೆ. ಪ್ರತಿ ಸಸ್ಯವೂ, ಪ್ರತ್ಯೇಕವಾದ ಹಳದಿ ಗಂಡು ಹಾಗು ಹೆಣ್ಣು ಹೂವುಗಳನ್ನು ಹೊಂದಿರುತ್ತದೆ. ಉತ್ತರ ಖಗೋಳಾರ್ಧದಲ್ಲಿ, ಜೂನ್ ನಿಂದ ಜುಲೈ ತಿಂಗಳೊಳಗೆ ಇದು ಹೂಬಿಡುತ್ತದೆ, ಹಾಗು ಸೆಪ್ಟೆಂಬರ್ ನಿಂದ ನವೆಂಬರ್ ನ ಅವಧಿಯಲ್ಲಿ ಹಣ್ಣು ಬಿಡುತ್ತದೆ.

ಹಣ್ಣಿನ ಹೊರಭಾಗವು ಗಂಟುಳ್ಳ ಕಾಯಿಯಾಗಿರುತ್ತದಲ್ಲದೇ ಅದು ವಿಶಿಷ್ಟವಾಗಿ ಆಯತಾಕಾರ ಹೊಂದಿರುತ್ತದೆ. ಇದು ಅಡ್ಡಭಾಗದಲ್ಲಿ ಟೊಳ್ಳಾಗಿರುತ್ತದೆ. ದೊಡ್ಡದಾದ ಚಪ್ಪಟೆಯಾಕಾರದ ಬೀಜಗಳು ಹಾಗು ಕಾಂಡದಿಂದ ಭರ್ತಿಯಾದ ಮಧ್ಯಭಾಗದ ಬೀಜದ ಕುಳಿಯನ್ನು ತುಲನಾತ್ಮಕವಾಗಿ ತೆಳುವಾದ ತಿರುಳು ಹೊಂದಿರುವ ಚರ್ಮವು ಇದಕ್ಕೆ ಸುತ್ತುವರೆದಿರುತ್ತದೆ. ಹಣ್ಣನ್ನು ಸಾಮಾನ್ಯವಾಗಿ ಹಸಿರಾಗಿರುವಾಗ, ಅಥವಾ ಹಳದಿ ಬಣ್ಣಕ್ಕೆ ತಿರುಗಲು ಆರಂಭವಾದಾಗ ಸೇವಿಸಲಾಗುತ್ತದೆ. ಈ ಹಂತದಲ್ಲಿ, ಹಣ್ಣಿನ ತಿರುಳಿನ ರಚನೆಯು ಸುಲಭವಾಗಿ ಒಡೆಯುವಂತಿರುವುದರ ಜೊತೆಗೆ ನೀರನ್ನೂ ಒಳಗೊಂಡಿರುತ್ತದೆ. ಇದು ಸೌತೆಕಾಯಿ, ಚಯೋಟೆ ಅಥವಾ ಹಸಿರು ದಪ್ಪಮೆಣಸಿನಕಾಯಿಯ ಮಾದರಿಯನ್ನು ಹೋಲುತ್ತದೆಯಾದರೂ, ಬಹಳ ಕಹಿಯಾಗಿರುತ್ತದೆ. ಕಾಯಿಯ ಹೊರಭಾಗವು ಬಹಳ ತೆಳುವಾಗಿರುವುದರ ಜೊತೆಗೆ ಖಾದ್ಯವಾಗಿಯೂ ಬಳಸಬಹುದು. ಬೀಜಗಳು ಹಾಗು ಕಾಂಡವು ಇನ್ನೂ ಪಕ್ವವಾಗದ ಹಣ್ಣುಗಳಲ್ಲಿ ಬಿಳಿಯ ಅಂಟು ಬಣ್ಣದಲ್ಲಿ ಕಂಡುಬರುತ್ತವೆ; ಇವುಗಳು ತೀವ್ರತರವಾದ ಕಡು ಕಹಿ ಹೊಂದಿರುವುದಿಲ್ಲ, ಅಲ್ಲದೇ ಬೇಯಿಸುವ ಮುಂಚೆ ಇದರ ಕಹಿಯನ್ನು ತೆಗೆಯಬಹುದು.

ಹಣ್ಣು ಪಕ್ವವಾಗುತ್ತಿದ್ದಂತೆ, ತಿರುಳು ದಪ್ಪವಾಗಿ, ಹೆಚ್ಚು ಕಹಿಯಾಗುತ್ತದೆ, ಹಾಗು ತಿನ್ನಲು ಬಹಳ ಅರೋಚಕವಾಗಿರುತ್ತದೆ. ಮತ್ತೊಂದೆಡೆ, ತಿರುಳು ಬಹಳ ಮಧುರ ಹಾಗು ತೀಕ್ಷ್ಣ ಕೆಂಪಾಗಾಗುತ್ತದೆ; ಈ ಹಂತದಲ್ಲಿ ಇದನ್ನು ಬೇಯಿಸದೇ ಹಾಗೆ ತಿನ್ನಬಹುದು, ಹಾಗು ಕೆಲವು ಆಗ್ನೇಯ ಏಶಿಯನ್ ಸಲಾಡ್ ಗಳಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ.

ಹಣ್ಣು ಸಂಪೂರ್ಣ ಪಕ್ವಗೊಂಡಾಗ, ಇದು ಕಿತ್ತಳೆ ಬಣ್ಣಕ್ಕೆ ತಿರುಗುವುದರ ಜೊತೆಗೆ ಮೆತ್ತಗಿರುತ್ತದೆ, ಹಾಗು ವಿವಿಧ ಭಾಗಗಳಾಗಿ ಬೇರ್ಪಟ್ಟಿರುತ್ತದೆ.ಇವುಗಳು ಗಾಢವಾದ ಕೆಂಪು ತಿರುಳಿನಲ್ಲಿ ಸುತ್ತುವರಿದ ಬೀಜಗಳನ್ನು ಪ್ರಕಟಿಸಲು ಆಕರ್ಷಕವಾಗಿ ಹಿಂದಕ್ಕೆ ಸುರುಟಿಕೊಂಡಿರುತ್ತವೆ.

ವೈವಿಧ್ಯಗಳು[ಬದಲಾಯಿಸಿ]

ಹಾಗಲಕಾಯಿಯು ಹಲವು ಆಕಾರ ಹಾಗು ಗಾತ್ರಗಳಲ್ಲಿ ಬೆಳೆಯುತ್ತದೆ. ಸ್ಪಷ್ಟ ಲಕ್ಷಣವುಳ್ಳ ಹಾಗಲಕಾಯಿಯು ೨೦–೩೦ ಸೆಂ ಉದ್ದವಿರುತ್ತದೆ.ಒರಟಾದ ಕ್ರಮೇಣವಾಗಿ ದಪ್ಪ ಕಡಿಮೆಯಾಗುವ ಅಂಚಿನ ತುದಿಗಳೊಂದಿಗೆ ಆಯತಾಕಾರವಾಗಿರುತ್ತದೆ, ಹಾಗು ಮೆತ್ತಗೆ ಅಲೆಯಾಕಾರದ, ಗಂಟುಗಳುಳ್ಳ ಮೇಲ್ಮೈನೊಂದಿಗೆ ತೆಳು ಹಸಿರು ಬಣ್ಣ ಹೊಂದಿರುತ್ತದೆ. ಭಾರತದಲ್ಲಿ ಹೆಚ್ಚು ಮಾದರಿಯಾಗಿರುವ ಹಾಗಲಕಾಯಿಯು ಚೂಪಾದ ತುದಿಗಳೊಂದಿಗೆ ಸಂಕುಚಿತ ಆಕಾರ ಹೊಂದಿರುತ್ತದೆ, ಹಾಗು ಹರಿದ ಅಂಚುಳ್ಳ, ತ್ರಿಕೋನಾಕಾರದ "ಹಲ್ಲು" ಹಾಗು ಎತ್ತರಿಸಿದ ಪಾತಿಯಿಂದ ಮೇಲ್ಮೈನಲ್ಲಿ ಆವರಿಸಲ್ಪಟ್ಟಿರುತ್ತದೆ. ಇದು ಹಸಿರು ಬಣ್ಣದಿಂದ ಹಿಡಿದು ಬಿಳಿಯ ಬಣ್ಣದವರೆಗೂ ರೂಪ ತಾಳಿ ಬೆಳೆಯುತ್ತದೆ. ಈ ಎರಡೂ ವಿರುದ್ಧ ಜಾತಿಗಳ ನಡುವೆ ಹಲವಾರು ಸಂಖ್ಯೆಯ ಮಧ್ಯವರ್ತಿ ರೂಪ-ಆಕಾರಗಳು ಕಂಡುಬರುತ್ತವೆ. ಕೆಲವು ಜಾತಿಗಳಲ್ಲಿ ಕೇವಲ ೬–೧೦ ಸೆಂ ಉದ್ದದ ಸಾಧಾರಣ ಗಾತ್ರದ ಹಣ್ಣು ಬಿಡುತ್ತದೆ, ಇದನ್ನು ಪ್ರತ್ಯೇಕ ತರಕಾರಿಯಾಗಿ, ಹಾಗೆಯೇ ನೇರವಾಗಿ ತಿನ್ನಬಹುದು. ಈ ಸಾಧಾರಣ ಗಾತ್ರದ ಹಣ್ಣು ಆಗ್ನೇಯ ಏಷಿಯಾದಲ್ಲಿ ಹಾಗು ಭಾರತದಲ್ಲಿ ಜನಪ್ರಿಯವಾಗಿದೆ.

ಚೀನಾ ತಳಿಯ ಪ್ರಕಟ ಲಕ್ಷಣ ಉಪೋಷ್ಣ ವಲಯದ ತಳಿಯ ಪ್ರಕಟ ಲಕ್ಷಣ ಭಾರತೀಯ ಉಪಜಾತಿ

ಅಡುಗೆಯಲ್ಲಿ ಬಳಕೆ[ಬದಲಾಯಿಸಿ]

ಒಂದು ಸಣ್ಣ ಹಸಿರಾದ ಹಾಗಲಕಾಯಿ(ಮುಂಭಾಗದ ಚಿತ್ರ) ಹಾಗು ಒಕಿನವನ್ ಹುರಿದ ಗೋಯಾ ಚಂಪುರು(ಹಿಂಭಾಗದ ಚಿತ್ರಣ)
Bitter gourd (boiled, drained, no salt)
Nutritional value per 100 g (3.5 oz)
ಆಹಾರ ಚೈತನ್ಯ 79 kJ (19 kcal)
ಶರ್ಕರ ಪಿಷ್ಟ 4.32 g
- ಸಕ್ಕರೆ 1.95 g
- ಆಹಾರ ನಾರು 2.0 g
ಕೊಬ್ಬು 0.18 g
- saturated 0.014 g
- monounsaturated 0.033 g
- polyunsaturated 0.078 g
Protein 0.84 g
ನೀರು 93.95 g
Vitamin A equiv. 6 μg (1%)
Thiamine (vit. B1) 0.051 mg (4%)
Riboflavin (vit. B2) 0.053 mg (4%)
Niacin (vit. B3) 0.280 mg (2%)
Vitamin B6 0.041 mg (3%)
Folate (vit. B9) 51 μg (13%)
Vitamin B12 0 μg (0%)
Vitamin C 33.0 mg (40%)
ವಿಟಮಿನ್ ಇ 0.14 mg (1%)
ವಿಟಮಿನ್ ಕೆ 4.8 μg (5%)
ಕ್ಯಾಲ್ಸಿಯಂ 9 mg (1%)
ಕಬ್ಬಿಣ ಸತ್ವ 0.38 mg (3%)
ಮೆಗ್ನೇಸಿಯಂ 16 mg (5%)
ರಂಜಕ 36 mg (5%)
ಪೊಟಾಸಿಯಂ 319 mg (7%)
ಸೋಡಿಯಂ 6 mg (0%)
ಸತು 0.77 mg (8%)
Percentages are roughly approximated
using US recommendations for adults.
Source: USDA Nutrient Database
ಹಾಗಲಕಾಯಿಯಿಂದ ತಯಾರಿಸಲಾದ ಒಂದು ಮೆದು ಪೇಯ

ಹಾಗಲಕಾಯಿಯನ್ನು ಸಾಧಾರಣವಾಗಿ ಅದು ಹಸಿರಾಗಿರುವಾಗ ಅಥವಾ ಹಳದಿ ಬಣ್ಣಕ್ಕೆ ತಿರುಗುವ ಆರಂಭಿಕ ಹಂತದಲ್ಲೇ ಸೇವಿಸಲಾಗುತ್ತದೆ. ಹಾಗಲಕಾಯಿಯ ಎಳೆಯದಾದ ಚಿಗುರು ಬಳ್ಳಿಗಳು ಹಾಗು ಎಲೆಗಳನ್ನೂ ಸಹ ಸೊಪ್ಪಿನ ಪದಾರ್ಥವಾಗಿ ಸೇವಿಸಬಹುದು.

ಹಾಗಲಕಾಯಿಯನ್ನು ಅದರ ಕಹಿ ಸ್ವಾದಕ್ಕಾಗಿ ಸಾಮಾನ್ಯವಾಗಿ ಚೈನೀಸ್ ಅಡುಗೆಯಲ್ಲಿ ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಅದನ್ನು ಹುರಿದು ತಿನಿಸನ್ನು ತಯಾರಿಸಲಾಗುತ್ತದೆ.(ಸಾಮಾನ್ಯವಾಗಿ ಹಂದಿಮಾಂಸ ಹಾಗು ಡೌಚಿ ಯೊಂದಿಗೆ), ಇದನ್ನು ಸೂಪ್ ನಲ್ಲಿ ಹಾಗು ಟೀನಂತೆಯೂ ಸಹ ಬಳಸಲಾಗುತ್ತದೆ.

ಇದು ದಕ್ಷಿಣ ಏಷಿಯಾದುದ್ದಕ್ಕೂ ಬಹಳ ಜನಪ್ರಿಯವಾಗಿದೆ. ಉತ್ತರ ಭಾರತದಲ್ಲಿ, ಇದನ್ನು ಸಾಮಾನ್ಯವಾಗಿ ಆಲೂಗಡ್ಡೆಯೊಂದಿಗೆ ತಯಾರಿಸಲಾಗುತ್ತದೆ, ಹಾಗು ಕಹಿ ತಡೆಗಟ್ಟಲು ಮೊಸರಿನೊಂದಿಗೆ ಬಡಿಸಲಾಗುತ್ತದೆ, ಅಥವಾ ಇದನ್ನು ಪಲ್ಯೆ, ಸಬ್ಜಿ ಯಲ್ಲಿಯೂ ಬಳಸಲಾಗುತ್ತದೆ. ಪಂಜಾಬಿ ಪಾಕಪದ್ಧತಿಯಲ್ಲಿ, ಇದಕ್ಕೆ ಮಸಾಲೆ ತುಂಬಿ, ನಂತರ ಎಣ್ಣೆಯಲ್ಲಿ ಕರಿಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ತೋರನ್ /ತುವರನ್ ಖಾದ್ಯಗಳಲ್ಲಿ (ತುರಿದ ತೆಂಗಿನಕಾಯಿಯೊಂದಿಗೆ ಮಿಶ್ರಣ ಮಾಡಲಾಗುತ್ತದೆ), ತೀಯಲ್ (ಹುರಿದ ಕೊಬ್ಬರಿಯೊಂದಿಗೆ ಬೇಯಿಸಲಾಗುತ್ತದೆ) ಹಾಗು ಪಚಡಿ (ಇದು ಡಯಾಬಿಟಿಸ್ ಗೆ ಔಷಧೀಯ ಆಹಾರವೆಂದು ಪರಿಗಣಿಸಲಾಗುತ್ತದೆ) ಮಾಡಲು ಬಳಸಲಾಗುತ್ತದೆ. ಇತರ ಜನಪ್ರಿಯ ಖಾದ್ಯಗಳಲ್ಲಿ, ಇದನ್ನು ಪಲ್ಯದಲ್ಲಿ, ಕಡಲೆಬೀಜದೊಂದಿಗೆ ಅಥವಾ ಇತರ ನೆಲಗಡಲೆಗಳೊಂದಿಗೆ ಹುರಿಯಲಾಗುತ್ತದೆ.ಅಲ್ಲದೇ ಪಚ್ಚಿ ಪುಲುಸು (కాకరకాయ పచ్చి పులుసు), ಹುರಿದ ಈರುಳ್ಳಿ ಹಾಗು ಇತರ ಮಸಾಲೆಗಳೊಂದಿಗೆ ತಯಾರಾದ ಒಂದು ಬಗೆಯ ಸೂಪ್ ಇದಾಗಿದೆ. ಪಾಕಿಸ್ತಾನ ಹಾಗು ಬಾಂಗ್ಲಾದೇಶಗಳಲ್ಲಿ, ಹಾಗಲಕಾಯಿಯನ್ನು ಸಾಧಾರಣವಾಗಿ ಈರುಳ್ಳಿ, ಕೆಂಪು ಮೆಣಸಿನಕಾಯಿ ಪುಡಿ, ಅರಿಶಿನದ ಪುಡಿ, ಉಪ್ಪು, ಧನಿಯಾ ಪುಡಿ, ಹಾಗು ಚಿಟಿಕೆ ಜೀರಿಗೆ ಕಾಳುಗಳನ್ನು ಹಾಕಿ ಬೇಯಿಸಲಾಗುತ್ತದೆ. ಪಾಕಿಸ್ತಾನದಲ್ಲಿ ತಯಾರಿಸಲಾಗುವ ಮತ್ತೊಂದು ಖಾದ್ಯದಲ್ಲಿ ಹಾಗಲಕಾಯಿಯನ್ನು, ಇಡಿಯಾಗಿ, ಸಿಪ್ಪೆ ತೆಗೆಯದೇ ಬೇಯಿಸಲಾಗುತ್ತದೆ, ಹಾಗು ನಂತರ ಬೇಯಿಸಲಾದ ಗೋಮಾಂಸವನ್ನು ರುಬ್ಬಿಕೊಂಡು ಅದಕ್ಕೆ ತುಂಬಲಾಗುತ್ತದೆ. ಇದನ್ನು ಬಿಸಿಯಾದ ತಂದೂರಿ ರೋಟಿ, ನಾನ್ , ಚಪಾತಿ , ಅಥವಾ ಖಿಚ್ರಿ ಯೊಂದಿಗೆ(ಬೀಜಗಳು ಹಾಗು ಅನ್ನದ ಮಿಶ್ರಣದೊಂದಿಗೆ) ಬಡಿಸಲಾಗುತ್ತದೆ.

ಹಾಗಲಕಾಯಿಯು ದ್ವೀಪ ಪ್ರದೇಶಗಳಲ್ಲಿನ ಜನರ ಒಕಿನವನ್ ಪಾಕಪದ್ಧತಿಯ ಮಹತ್ವದ ತರಕಾರಿಯಾಗಿದೆ. ಅದಲ್ಲದೇ ಜಪಾನ್ ನ ಪ್ರಮುಖ ಭಾಗದಲ್ಲಿ ಅಧಿಕವಾಗಿ ಬಳಸಲಾಗುತ್ತದೆ. ದೀರ್ಘಾಯುಷಿಗಳಾದ ಜಪಾನೀಸ್ ಗಳಿಗಿಂತ ಇದನ್ನು ಸೇವಿಸುವ ಒಕಿನವನ್ ಗಳು ಇನ್ನೂ ಹೆಚ್ಚಿನ ದೀರ್ಘಾಯುಷಿಗಳೆಂದು ಜನಪ್ರಿಯವಾಗಿ ಹೇಳಲಾಗುತ್ತದೆ.

ಇಂಡೋನೆಷಿಯಾದಲ್ಲಿ, ಹಾಗಲಕಾಯಿಯನ್ನು ಹಲವಾರು ಖಾದ್ಯಗಳನ್ನು ತಯಾರಿಸಲು ಬಳಸುತ್ತಾರೆ, ಉದಾಹರಣೆಗೆ ಗಡೋ-ಗಡೋ , ಹಾಗು ಇದನ್ನು ಹುರಿಯಲಾಗುತ್ತದೆ. ತೆಂಗಿನಕಾಯಿಯ ಹಾಲಿನಲ್ಲಿ ಬೇಯಿಸಲಾಗುತ್ತದೆ, ಅಥವಾ ಆವಿಯಲ್ಲಿ ಬೇಯಿಸಲಾಗುತ್ತದೆ.

ವಿಯೆಟ್ನಾಂನಲ್ಲಿ, ಹಸಿಯಾದ ಹಾಗಲಕಾಯಿ ತುಂಡುಗಳನ್ನು ಒಣಗಿದ ಮಾಂಸದೊಂದಿಗೆ ಹಾಗು ಹಾಗಲಕಾಯಿಯ ಸೂಪನ್ನು ಸೀಗಡಿಯೊಂದಿಗೆ ಸೇವಿಸುವುದು ಬಹಳ ಜನಪ್ರಿಯವಾಗಿದೆ. ದಕ್ಷಿಣದಲ್ಲಿ, ರುಬ್ಬಿ ಹಂದಿಮಾಂಸಕ್ಕೆ ಸೇರಿಸಲಾದ ಹಾಗಲಕಾಯಿಯನ್ನು ಬೇಸಿಗೆಯಲ್ಲಿ ಜನಪ್ರಿಯಾದ ಸೂಪ್ ಆಗಿ ನೀಡಲಾಗುತ್ತದೆ. ಇದನ್ನು "ಬೇಯಿಸಿದ ಹಾಗಲಕಾಯಿಯ" ಪ್ರಮುಖ ಪದಾರ್ಥವಾಗಿಯೂ ಸಹ ಬಳಸಲಾಗುತ್ತದೆ. ಈ ಖಾದ್ಯವನ್ನು ಸಾಮಾನ್ಯವಾಗಿ ವಿಯೆಟ್ನಾಮಿಗಳ ಟೆಟ್ ರಜಾದಿವಸಕ್ಕಾಗಿ,ವರ್ಷಾಚರಣೆ ಸಂದರ್ಭದಲ್ಲಿ ತಯಾರಿಸಲಾಗುತ್ತದೆ. ಹಿಂದೆ ಅನುಭವಿಸಲಾದ ಬಡತನದ ಪರಿಸ್ಥಿತಿಗಳ ಜ್ಞಾಪಕಕ್ಕಾಗಿ "ಬಿಟರ್"(ಕಹಿ) ಎಂಬ ಪದವನ್ನೂ ಇಲ್ಲಿ ಬಳಸಲಾಗುತ್ತದೆ.

ಫಿಲಿಫೈನ್ಸ್ ನಲ್ಲಿ, ಹಾಗಲಕಾಯಿಯನ್ನು ರುಬ್ಬಿಕೊಂಡ ಗೋಮಾಂಸ ಹಾಗು (ನೀರು,ಸಕ್ಕರೆ ಮತ್ತು ಉಪ್ಪಿನೊಂದಿಗಿನ ಸ್ಟಾರ್ಚ್ ) ಆಯ್ಸ್ಟರ್ ಸಾಸ್ ನೊಂದಿಗೆ ಹುರಿಯಲಾಗುತ್ತದೆ, ಅಥವಾ ತುಂಡರಿಸಿದ ಟೊಮೇಟೊ ಹಾಗು ಮೊಟ್ಟೆಗಳೊಂದಿಗೆ ಬಳಸಲಾಗುತ್ತದೆ. ಲುಜೊನ್ ನ ಇಲೋಕಾಸ್ ಪ್ರದೇಶದಲ್ಲಿ ಜನಪ್ರಿಯವಾಗಿರುವ ಪಿನಕ್ಬೆಟ್ ಖಾದ್ಯವು, ಮುಖ್ಯವಾಗಿ ಹಾಗಲಕಾಯಿ, ಬಿಳಿಬದನೆ, ಬೆಂಡೆಕಾಯಿ, ನಾರು ಹುರುಳಿಕಾಯಿ, ಟೊಮೇಟೊಗಳು, ಲಿಮಾ ಬೀನ್ಸ್, (ಪೆರುವಿನ ರಾಜಧಾನಿ ಲಿಮಾದಲ್ಲಿ ಬೆಳೆಯಲಾಗುತ್ತದೆ.)ಹಾಗು ಇತರ ಹಲವಾರು ಸ್ಥಳೀಯ ತರಕಾರಿಗಳೊಂದಿಗೆ ಸ್ವಲ್ಪ ಬಗೂಂಗ್ ನ ಗಂಜಿಯಲ್ಲಿ ಒಟ್ಟಾಗಿ ಬೇಯಿಸಲಾಗುತ್ತದೆ.

ನೇಪಾಳದಲ್ಲಿ, ಅಚಾರ್ ಎಂದು ಕರೆಯಲಾಗುವ, ಹಾಗಲಕಾಯಿಯಿಂದ ತಾಜಾ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಈ ಹಾಗಲಕಾಯಿಯನ್ನು ಹೋಳುಗಳಾಗಿ ಅಥವಾ ಗುಂಡಗೆ ಕತ್ತರಿಸಿಕೊಂಡು, ಎಣ್ಣೆಯಲ್ಲಿ ಬಾಡಿಸಿ, ಅದಕ್ಕೆ ನೀರನ್ನು ಚಿಮುಕಿಸಲಾಗುತ್ತದೆ. ಇದು ಮೆತ್ತಗಾಗಿ, ಕುಂದಿದಾಗ, ಇದನ್ನು ಬೆಳ್ಳುಳ್ಳಿ ಎಸಳುಗಳು, ಉಪ್ಪು ಹಾಗು ಕೆಂಪು ಅಥವಾ ಹಸಿರು ಮೆಣಸಿನಕಾಯಿ ಹಾಕಿ ಒರಳಿನಲ್ಲಿ ಹಾಕಿ ಸಣ್ಣ ಹೋಳುಗಳಾಗಿ ಕೊಚ್ಚಲಾಗುತ್ತದೆ. ಇದನ್ನು ಕೆಂಬಣ್ಣ ಬರುವವರೆಗೂ ಬಾಡಿಸಲಾಗುತ್ತದೆ, ಅದಕ್ಕೆ ಮಸಾಲೆ ತುಂಬಿ, ಅಥವಾ ಬಟಾಟೆಯೊಂದಿಗೆ ಪಲ್ಯವಾಗಿ ಬಡಿಸಲಾಗುತ್ತದೆ.

ಟ್ರಿನಿಡಾಡ್ ಹಾಗು ಟೊಬ್ಯಾಗೊನಲ್ಲಿ, ಹಾಗಲ ಕಾಯಿಗಳನ್ನು ಸಾಮಾನ್ಯವಾಗಿ ಈರುಳ್ಳಿ, ಬೆಳ್ಳುಳ್ಳಿ ಹಾಗು ಸ್ಕಾಚ್ ಬಾನೆಟ್ ಮೆಣಸಿನಕಾಯಿಯೊಂದಿಗೆ ಅದು ಬಹುತೇಕ ಗರಿಗರಿಯಾಗುವವರೆಗೂ ಬಾಡಿಸಲಾಗುತ್ತದೆ.

ಔಷಧೀಯ ಉಪಯೋಗಗಳು[ಬದಲಾಯಿಸಿ]

ಬಹಳ ಹಿಂದಿನಿಂದಲೂ ಹಾಗಲಕಾಯಿಯನ್ನು ಹಲವಾರು ಏಶಿಯನ್ ಹಾಗು ಆಫ್ರಿಕನ್ ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ.[೧][೨][೩]

ಸಕ್ರಿಯ ಪದಾರ್ಥಗಳು[ಬದಲಾಯಿಸಿ]

ಈ ಸಸ್ಯವು, ಜೀವವಿಜ್ಞಾನ ರೀತ್ಯಾ ಸಕ್ರಿಯವಾದ ಹಲವಾರು ಏಕ ರೂಪದ ಮೂಲಭೂತ ಸಂಯುಕ್ತಗಳನ್ನು ಒಳಗೊಂಡಿದೆ. ಮುಖ್ಯವಾಗಿ ಮೊಮೊರ್ಡಿಸಿನ್ ಹಾಗು II, ಹಾಗು ಕುಕುರ್ಬಿಟಸಿನ್ B.[೪] ಸಸ್ಯಗಳು ಹಲವಾರು ಜೈವಿಕ ಬಯೋಆಕ್ಟಿವ್ ಗ್ಲೈಕೋಸೈಡ್ ಗಳನ್ನು ( ಇದರಲ್ಲಿ ಮೊಮೊರ್ಡಿನ್, ಚರಂತಿನ್, ಚರಂತೋಸೈಡ್ ಗಳು, ಗೊಯಗ್ಲೈಕೋಸೈಡ್ ಗಳು, ಮೊಮೊರ್ಡಿಕಾಸೈಡ್ ಗಳು ಸೇರಿವೆ), ಹಾಗು ಇತರ ಟರ್ಪೆನಾಯ್ಡ್ ಸಂಯುಕ್ತಗಳನ್ನು ಒಳಗೊಂಡಿದೆ.(ಇದರಲ್ಲಿ ಮೊಮೊರ್ಡಿಸಿನ್-೨೮, ಮೊಮೊರ್ಡಿಸಿನಿನ್, ಮೊಮೊರ್ಡಿಸಿಲಿನ್, ಮೊಮೊರ್ಡೆನೋಲ್, ಹಾಗು ಮೊಮೊರ್ಡೋಲ್ ಗಳು ಸೇರಿವೆ.)[೫][೬][೭][೮][೯] ಇದು ವಿಷಾಹಾರಿ ಸೈಟೋಟಾಕ್ಸಿಕ್(ರೈಬೋಸಂಗಳ ನಿಷ್ಕ್ರಿಯತೆ) ಪ್ರೋಟೀನುಗಳಾದ ಮೊಮೊರ್ಚರಿನ್ ಹಾಗು ಮೊಮೊರ್ಡಿನ್ ಗಳನ್ನೂ ಸಹ ಒಳಗೊಂಡಿದೆ.[೧೦]

ಜೀರ್ಣಿಸಲು ಸಹಕಾರಿ[ಬದಲಾಯಿಸಿ]

ಕಹಿಯ ರುಚಿಯಿರುವ ಇತರ ಆಹಾರಗಳ ಮಾದರಿ, ಹಾಗಲಕಾಯಿಯು ಆಹಾರ ಪಚನಶಕ್ತಿಯನ್ನು ಚುರುಕುಗೊಳಿಸುತ್ತದೆಂದು ಹೇಳಲಾಗುತ್ತದೆ. ಅಲ್ಲದೇ ಈ ರೀತಿಯಾಗಿ ಅಜೀರ್ಣ ಹಾಗು ಮಲಬದ್ಧತೆಯ ಚಿಕಿತ್ಸೆಗೆ ಸಹಕಾರಿಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ, ಇದು ಎದೆ ಉರಿ ಹಾಗು ಹುಣ್ಣುಗಳನ್ನು[ಸೂಕ್ತ ಉಲ್ಲೇಖನ ಬೇಕು] ಉಂಟುಮಾಡುತ್ತದೆಂದು ಭಾವಿಸಲಾಗುತ್ತದೆ, ಆದಾಗ್ಯೂ ಈ ಋಣಾತ್ಮಕ ಪರಿಣಾಮಗಳು, ಶಮನಕಾರಿ ಹಾಗು ತೀಕ್ಷ್ಣವಲ್ಲದ ಉರಿಯೂತ ಮಾಡ್ಯೂಲೇಟರ್ ಆಗಿ ಇದರ ಕಾರ್ಯವು ಬಹಳ ಸೀಮಿತವಾಗಿದೆ[ಸೂಕ್ತ ಉಲ್ಲೇಖನ ಬೇಕು].

ಲಾಡಿಹುಳ ನಿರೋಧಕ[ಬದಲಾಯಿಸಿ]

ಹಾಗಲಕಾಯಿಯನ್ನು, ಜಠರಗರುಳಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಟೊಗೊನಲ್ಲಿ ಜನಪದೀಯ ಔಷಧವನ್ನಾಗಿ ಬಳಸಲಾಗುತ್ತದೆ. ಹಾಗು ಇದರ ರಸವು, ನೇಮಟೋಡ್ ವರ್ಗದ ಲಾಡಿಯಂತಹ ಹುಳು ಕಯೇನೋರ್ಹಬ್ಡಿಟಿಸ್ ಎಲೆಗನ್ಸ್ ವಿರುದ್ಧ ವಿಟ್ರೋನಲ್ಲಿ ಚುರುಕುಗೊಂಡಿರುವುದು ಕಂಡುಬಂದಿದೆ.[೨]

ಮಲೇರಿಯಾ ನಿರೋಧಕ[ಬದಲಾಯಿಸಿ]

ಹಾಗಲಕಾಯಿಗೆ ಕಹಿಯು ಕ್ವಿನೈನ್ ಎಂಬ ಸಂಯುಕ್ತದಿಂದ ಬರುತ್ತದೆಂದು ಹೇಳಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಹಾಗಲಕಾಯಿಯು ಮಲೇರಿಯಾ ರೋಗವನ್ನು ತಡೆಗಟ್ಟುವಲ್ಲಿ ಹಾಗು ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದೆಯೆಂದು ಏಷಿಯಾದಲ್ಲಿ ಸಾಂಪ್ರದಾಯಿಕವಾಗಿ ಪರಿಗಣಿಸಲಾಗುತ್ತದೆ. ಪನಾಮ ಹಾಗು ಕೊಲಂಬಿಯಾನಲ್ಲೂ ಸಹ ಈ ಉದ್ದೇಶಗಳಿಗಾಗಿ ಇದರ ಎಲೆಗಳಿಂದ ತಯಾರಿಸಲಾದ ಟೀಯನ್ನು ಬಳಸಲಾಗುತ್ತದೆ. ಪ್ರಾಯೋಗಿಕ ಅಧ್ಯಯನಗಳು, ಕೆಲವೊಂದು ಜಾತಿಯ ಹಾಗಲಕಾಯಿಗಳು ಮಲೇರಿಯಾ-ಪ್ರತಿರೋಧಕ ಕಾರ್ಯ ನಿರ್ವಹಿಸುತ್ತವೆಂದು ದೃಢಪಡಿಸಿವೆ, ಆದಾಗ್ಯೂ ಅಧ್ಯಯನಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಪ್ರಕಟವಾಗಿಲ್ಲ.[೧೧]

ವೈರಸ್ ನಿರೋಧಕ[ಬದಲಾಯಿಸಿ]

ಟೊಗೊನಲ್ಲಿ, ಸಿಡುಬು ಹಾಗು ದಡಾರದಂತಹ ರೋಗಗಳ ವಿರುದ್ಧ ಈ ಜಾತಿ ಸಸ್ಯವನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಎಲೆಯ ರಸದಲ್ಲಿ ನಡೆಸಲಾದ ಪರೀಕ್ಷೆಗಳು ಹರ್ಪಿಸ್ ಸಿಂಪ್ಲೆಕ್ಸ್ ಟೈಪ್ ೧ ವೈರಸ್ ನ ವಿರುದ್ಧ ವಿಟ್ರೋ ಚಟುವಟಿಕೆ ನಡೆಸುತ್ತದೆಂದು ಹೇಳಲಾಗಿದೆ. ಇದಕ್ಕೆ ಮೊಮೊರ್ಡಿಸಿನ್ ಗಳಿಗೆ ಬದಲಾಗಿ ಗುರುತಿಸಲಾದ ಸಂಯುಕ್ತಗಳೇ ಸ್ಪಷ್ಟವಾದ ಕಾರಣ.[೨]

ಹಾಗಲಕಾಯಿಯಲ್ಲಿರುವ ಸಂಯುಕ್ತಗಳು HIV ಸೋಂಕಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆಂದು ಪ್ರಾಯೋಗಿಕ ಪರೀಕ್ಷೆಗಳು ಸೂಚಿಸುತ್ತವೆ.[೧೨] HIV ಸೋಂಕಿನ ಮೇಲೆ ಪರಿಣಾಮ ಬೀರುವ ಹಾಗಲಕಾಯಿಂದ ಬೇರ್ಪಡಿಸಲಾದ ಹೆಚ್ಚಿನ ಸಂಯುಕ್ತಗಳು, ಪ್ರೋಟೀನ್ ಗಳು ಅಥವಾ ಲೆಕ್ಟಿನ್ ಗಳಾಗಿರುತ್ತವೆ. ಇವೆರಡರಲ್ಲಿ ಯಾವುದನ್ನು ಸರಿಯಾಗಿ ಹೀರಿಕೊಳ್ಳಲಾಗುವುದಿಲ್ಲ, ಇದಕ್ಕಿಂತ ಭಿನ್ನವಾಗಿ ಹಾಗಲಕಾಯಿಯ ರಸವನ್ನು ಕುಡಿದರೆ ಸೋಂಕಿತ ಜನರಲ್ಲಿ HIV ಹರಡುವುದು ನಿಧಾನಗೊಳ್ಳುತ್ತದೆ. ಹಾಗಲ ಕಾಯಿಯ ರಸವನ್ನು ಸೇವಿಸಿದರೆ, ಅದು HIV ನಿರೋಧಕ ಔಷಧಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು,ಎಂದು ಹೇಳಲಾಗಿದೆ. ಆದರೆ ಒಂದು ಪ್ರನಾಳದಲ್ಲಿರುವ ವೈರಸ್ ಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಮಾತ್ರ ಈ ಫಲಿತಾಂಶ ಪ್ರಕಟಗೊಂಡಿರುವುದು ಸ್ಪಷ್ಟವಾಗಿದೆ.[೧೩]

ಪ್ರತಿರಕ್ಷಾ ಮಾಡ್ಯೂಲೇಟರ್[ಬದಲಾಯಿಸಿ]

ಒಂದು ಪ್ರಾಯೋಗಿಕ ಪರೀಕ್ಷೆಯು, ಹಾಗಲಕಾಯಿಯು ಪ್ರತಿರಕ್ಷಾ ಕೋಶದ ಕಾರ್ಯಚಟುವಟಿಕೆಯನ್ನು ಸುಧಾರಿಸುತ್ತದೆ, ಹಾಗು ಈ ರೀತಿಯಾಗಿ(ಅರ್ಬುದ) ಕ್ಯಾನ್ಸರ್ ಹಾಗು HIV ಸೋಂಕಿತರಿಗೆ ಪ್ರಯೋಜನಕಾರಿಯಾಗಿರುವ ಬಗ್ಗೆ ಬಹಳ ಸೀಮಿತ ಸಾಕ್ಷ್ಯ ಒದಗಿಸಿತು.[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ, ಈ ಸಮರ್ಥನೆಗಳು ಇನ್ನೂ ದೃಢಪಡಬೇಕಿವೆ.

ಮಧುಮೇಹ[ಬದಲಾಯಿಸಿ]

ಹಾಗಲಕಾಯಿಯು ಡಯಾಬಿಟಿಸ್ ಮೆಲ್ಲಿಟಸ್ ಟೈಪ್ ೨ವನ್ನು ತಡೆಗಟ್ಟಲು ಅಥವಾ ಅದನ್ನು ನಿಷ್ಫಲಗೊಳಿಸಲು ಸಹಾಯಕವಾಗಿದೆಯೆಂದು ಜನಪದೀಯ ಚಿಕಿತ್ಸಾ ವಿಧಾನದ ಜ್ಞಾನವು ಸೂಚಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಪನಾಮಾದ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ, ಈ ಉದ್ದೇಶಕ್ಕಾಗಿ ಎಲೆಗಳಿಂದ ತಯಾರಿಸಲಾದ ಟೀಯನ್ನು ಬಳಸಲಾಗುತ್ತದೆ[ಸೂಕ್ತ ಉಲ್ಲೇಖನ ಬೇಕು].

ಹೀಗೆ ೧೯೬೨ರಲ್ಲಿ, ಲೋಲಿತ್ಕರ್ ಹಾಗು ರಾವ್, ಅವರು ಚರಂತಿನ್ ಎಂಬ ಪದಾರ್ಥವನ್ನು ಈ ಸಸ್ಯದಿಂದ ಬೇರ್ಪಡಿಸಿದರು. ನಂತರ ಇದನ್ನು ಪ್ರಯೋಗಿಸಿದಾಗ ಇದು ಆರೋಗ್ಯಕರ ಹಾಗು ಮಧುಮೇಹವುಳ್ಳ ಮೊಲಗಳ ಮೇಲೆ ಹೈಪೋಗ್ಲೈಸೇಮಿಕ್ ಪರಿಣಾಮ ಬೀರಿತು.[೧೪] ಮಧುಮೇಹವುಳ್ಳ ಮೊಲಗಳ ಮೇಲೆ ನಡೆಸಲಾದ ಮತ್ತೊಂದು ಸಾಮಾನ್ಯ ಪ್ರಯೋಗದಲ್ಲಿ ಇದರ ಪರಿಣಾಮಕಾರಿ ಸೂತ್ರವನ್ನು ೧೯೮೧ರಲ್ಲಿ ವಿಸಾರಾಟ ಹಾಗು ಉಂಗ್ಸುರುಂಗ್ಸಿ ಗುರುತಿಸಿ ರೂಪಿಸಿದರು.[೧೫] ಹಾಗಲಕಾಯಿಯು ಇನ್ಸುಲಿನ್ ಸೂಕ್ಷ್ಮಸಂವೇದನೆಯನ್ನು ಹೆಚ್ಚಿಸುತ್ತದೆಂದು ಪತ್ತೆ ಹಚ್ಚಲಾಗಿದೆ.[೧೬] ಫಿಲಿಫೈನ್ ಡಿಪಾರ್ಟ್ಮೆಂಟ್ ಆಫ್ ಹೆಲ್ತ್, ೨೦೦೭ರಲ್ಲಿ ನಡೆಸಿದ ಅಧ್ಯಯನವು, ದೇಹದ ತೂಕದ ಪ್ರತಿ ಕಿಲೋಗ್ರಾಂಗೆ ೧೦೦ mgಯಷ್ಟು ನಿತ್ಯದ ಡೋಸ್, ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಲಾಗುವಂತಹ ೨.೫ mg/kg ಡಯಾಬಿಟಿಸ್ ನಿರೋಧಕ ಗ್ಲಿಬೆನ್ಕ್ಲಾಮೈಡ್ ಔಷಧಿಗೆ ಸಮನಾಗಿದೆ.[೧೭] ಹಾಗಲಕಾಯಿಯಿಂದ ತಯಾರಿಸಲಾದ ಮಾತ್ರೆಗಳನ್ನು ಚರಂತಿನ್ ಎಂಬ ವ್ಯಾಪಾರೀ ಹೆಸರಿನೊಂದಿಗೆ ಫಿಲಿಫೈನ್ಸ್ ನಲ್ಲಿ ಪೂರಕ ಆಹಾರವಾಗಿ ತಯಾರಿಸಲಾಗುತ್ತದೆ, ಹಾಗು ಇದು ಹಲವು ರಾಷ್ಟ್ರಗಳಿಗೂ ರಫ್ತಾಗುತ್ತದೆ.[೧೭]

ಹಾಗಲಕಾಯಿಯಲ್ಲಿರುವ ಇತರ ಸಂಯುಕ್ತಗಳು AMPKಯನ್ನು(ಆಕ್ಟಿವೇಟೆಡ್ ಪ್ರೊಟೀನ್ ಕೆನಸೆ) ಚುರುಕುಗೊಳಿಸುತ್ತವೆಂದು ಪತ್ತೆ ಮಾಡಲಾಗಿದೆ. ಇದು ಗ್ಲುಕೋಸ್ ನ ಗ್ರಹಿಕೆಯನ್ನು ನಿಯಂತ್ರಿಸುವ ಪ್ರೋಟೀನ್ (ಡಯಾಬಿಟಿಸ್ ನ್ನು ತಗ್ಗಿಸುವ ಪ್ರಕ್ರಿಯೆ) ಎನಿಸಿದೆ.[೧೮][೧೯][೨೦][೨೧][೨೨]


ಹಾಗಲಕಾಯಿಯು, ಇನ್ಸುಲಿನ್ ಹೀರಲು ಒಟ್ಟಾರೆಯಾಗಿ ಬಂಧಿಸುವ ಪ್ರೋಟೀನ್ ಅಲ್ಲದ ನಿರ್ದಿಷ್ಟ ಪೂರಕದ ಕಾರಣದಿಂದಾಗಿ ಇನ್ಸುಲಿನ್-ಮಾದರಿಯ ಚಟುವಟಿಕೆಯನ್ನು ಹೊಂದಿರುವ ಲೆಕ್ಟಿನ್ ನನ್ನೂ(ರೋಗ ನಿರೋಧಕವಲ್ಲದಿದ್ದರೂ ಅದರಂತೆ ವರ್ತಿಸುವುದು) ಸಹ ಒಳಗೊಂಡಿದೆ. ಈ ಲೆಕ್ಟಿನ್, ಹೊರಮೈಯಿನ ಕೋಶಗಳ ಮೇಲೆ ಪರಿಣಾಮ ಬೀರುವ ಮೂಲಕ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ತಗ್ಗಿಸುತ್ತದೆ. ಇದು ಮಿದುಳು, ಹಸಿವಿನ ಅಪೇಕ್ಷೆಯನ್ನು ನಿಗ್ರಹಿಸುವ ಇನ್ಸುಲಿನ್ ನ ಪರಿಣಾಮಕ್ಕೆ ಸದೃಶವಾಗಿದೆ. ಈ ಲೆಕ್ಟಿನ್, ಹಾಗಲಕಾಯಿಯನ್ನು ತಿಂದ ನಂತರ ಬೆಳವಣಿಗೆಯಾಗುವ ಹೈಪೋಗ್ಲೈಸೆಮಿಕ್ ಪರಿಣಾಮಕ್ಕೆ ಪೂರಕವೆನ್ನುವಂತೆ ಪ್ರಮುಖವಾಗಿರುವ ಪರಿಣಾಮ ಬೀರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಕ್ಯಾನ್ಸರ್ ಪ್ರತಿರೋಧಕ[ಬದಲಾಯಿಸಿ]

ಹಾಗಲಕಾಯಿಯಲ್ಲಿ ಎರಡು ಸಂಯುಕ್ತಗಳಿವೆ, α-ಎಲೆಯೋಸ್ಟೀರಿಕ್ ಆಮ್ಲ (ಬೀಜಗಳಿಂದ) ಹಾಗು ೧೫,೧೬-ಡೈ ಹೈಡ್ರಾಕ್ಸಿ -α-ಎಲೆಯೋಸ್ಟೀರಿಕ್ ಆಮ್ಲಗಳು (ಹಣ್ಣಿನಿಂದ) ವಿಟ್ರೋನಲ್ಲಿನ ಲ್ಯುಕೆಮಿಯಾ ಕೋಶಗಳ ವಿನಾಶದಂತಹ ಸ್ವಯಂ ಅಪೋಪ್ಟೋಸಿಸ್ ನ್ನು ಉಂಟುಮಾಡಿರುವುದು ಪತ್ತೆಯಾಗಿದೆ.[೨೩] ಸುಮಾರು ೦.೦೧%ರಷ್ಟು ಹಾಗಲಕಾಯಿ ಎಣ್ಣೆಯನ್ನು ಒಳಗೊಳ್ಳುವ ಆಹಾರವು (೦.೦೦೬% as α-ಎಲೆಯೋಸ್ಟೀರಿಕ್ ಆಮ್ಲವಾಗಿ) ಇಲಿಗಳಲ್ಲಿ, ಅಜೋಕ್ಸಿಮೀಥೇನ್ ಉಂಟುಮಾಡುವ ದೊಡ್ಡ ಕರುಳಿನ ಅರ್ಬುದಂತಹ ಕಾರ್ಸಿನೋಜೆನೆಸಿಸ್ ನ್ನು ತಡೆಗಟ್ಟಿರುವುದು ಪತ್ತೆಯಾಗಿದೆ.[೨೪]

ಇತರೆ ಉಪಯೋಗಗಳು[ಬದಲಾಯಿಸಿ]

ಹಾಗಲಕಾಯಿಯನ್ನು ಭೇದಿ, ಉದರಶೂಲೆ, ಜ್ವರಗಳು, ಸುಟ್ಟಗಾಯಗಳು, ನೋವಿನಿಂದ ಕೂಡಿದ ರಜಃಸ್ರಾವ, ತುರಿಗಜ್ಜಿ ಹಾಗು ಚರ್ಮದ ಇತರ ಸಮಸ್ಯೆಗಳನ್ನು ಒಳಗೊಂಡಂತೆ ಹಲವಾರು ಇತರ ಅಸ್ವಸ್ಥತೆಗಳಿಗಾಗಿ ಸಾಂಪ್ರದಾಯಿಕ ಔಷಧಪದ್ಧತಿಯಲ್ಲಿ ಬಳಸಲಾಗುತ್ತದೆ. ಇದನ್ನು ಸಂತಾನ ನಿಯಂತ್ರಣದಲ್ಲಿ ಗರ್ಭಸ್ರಾವಕವಾಗಿ, ಹಾಗು ಶಿಶುವಿನ ಜನನಕ್ಕೆ ಸಹಕಾರಿಯಾಗಲು ಸಹ ಬಳಸಲಾಗುತ್ತದೆ.[೨] ಕಣ್ಣು ಮತ್ತು ಚರ್ಮ ರೋಗಗಳು, ಗೌಟ್, ಮೂಲವ್ಯಾಧಿ ಹಾಗೂ ಉಸಿರಾಟದ ತೊಂದರೆಗಳನ್ನು ನಿಯಂತ್ರಿಸಬಲ್ಲದು. ಹಾಗಲಕಾಯಿ ಲಿವರ್ ಟಾನಿಕ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

ಮುಂಜಾಗ್ರತೆಗಳು[ಬದಲಾಯಿಸಿ]

ಹಾಗಲಕಾಯಿಯ ಬೀಜಗಳು ವಿಷಕಾರಿಯೆನಿಸಿದ ವಿಸಿನೆಯನ್ನು ಒಳಗೊಂಡಿರುತ್ತವೆ, ಕೆಲವೊಮ್ಮೆ ಈ ರೀತಿಯಾಗಿ ಇದಕ್ಕೆ ಈಡಾಗುವ ವ್ಯಕ್ತಿಗಳಲ್ಲಿ ರಕ್ತಹೀನತೆಯ ಫಾವಿಸಂನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದರ ಜೊತೆಯಲ್ಲಿ, ಬೀಜಗಳ ಕೆಂಪು ರಸಲೆಗಳು ಮಕ್ಕಳಿಗೆ ವಿಷಕಾರಿಯೆಂದು ವರದಿಯಾಗಿದೆ, ಹಾಗು ಹಣ್ಣನ್ನು ಗರ್ಭಧಾರಣೆಯ ಸಮಯದಲ್ಲಿ ಸೇವಿಸುವುದು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ.[೨೫]

ಇವನ್ನೂ ಗಮನಿಸಿ[ಬದಲಾಯಿಸಿ]

  • ಭಾರತೀಯ ತರಕಾರಿಗಳು, ಮಸಾಲೆಗಳು & ಧಾನ್ಯಗಳ ಬಹುಭಾಷಿಕ ಪಟ್ಟಿ
  • ಮೊಮೊರ್ಡಿಕಾ ಕಾಚಿಂಚಿನೇನ್ಸಿಸ್ (ಗಕ್)
  • ಮೊಮೊರ್ಡಿಕಾ ಬಲ್ಸಾಮಿನ (ಬಾಲ್ಸಂ ಸೇಬು)
  • ಮೊಮೊರ್ಡಿಕಾ ಫೀಟಿಡಾ
  • ಮೊಮೊರ್ಡಿಕಾ ಸಿಂಬಲೇರಿಯಾ

ಚಿತ್ರಸಂಪುಟ[ಬದಲಾಯಿಸಿ]

ಸಸ್ಯ[ಬದಲಾಯಿಸಿ]

ಖಾದ್ಯಗಳು ಹಾಗು ಇತರ ಬಳಕೆಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಜೆ.ಕೆ. ಗ್ರೋವರ್ ಹಾಗು ಎಸ್. ಪಿ. ಯಾದವ್(೨೦೦೪), ಫಾರ್ಮಕೊಲಾಜಿಕಲ್ ಆಕ್ಷನ್ಸ್ ಅಂಡ್ ಪೊಟೆನ್ಶಿಯಲ್ ಯೂಸಸ್ ಆಫ್ ಮೊಮೊರ್ಡಿಕಾ ಚರಂತಿಯಾ: ಏ ರಿವ್ಯೂ . ಜರ್ನಲ್ ಆಫ್ ಎಥ್ನೋಫಾರ್ಮಕಾಲಜಿ, ಸಂಪುಟ ೯೩, ಸಂಚಿಕೆ ೧, ಪುಟಗಳು ೧೨೩–೩೨ PubMed doi:10.1016/j.jep.2004.03.035
  2. ೨.೦ ೨.೧ ೨.೨ ೨.೩ ನಡೈನ್ ಬೆಲಾಯಿನ್, ಮೆಸ್ಸನ್ವಿ ಗ್ಬೇಯಸ್ಸೋರ್, ಕೊಫ್ಫಿ ಅಕ್ಪಗಾನ, ಜಿಮ್ ಹಡ್ಸನ್, ಕೊಮ್ಲನ್ ಡೆ ಸೌಸ್ಸ, ಕೊಸ್ಸಿ ಕೌಮಗ್ಲೋ ಹಾಗು ಜೆ. ತೋರ್ ಅರ್ನಸೋನ್(೨೦೦೫), ಎಥ್ನೋಮೆಡಿಸನಲ್ ಯೂಸಸ್ ಆಫ್ ಮೊಮೊರ್ಡಿಕಾ ಚರಂತಿಯಾ(ಕ್ಯುಕುರ್ಬಿಟಸಿಯೆಯಿ) ಇನ್ ತೊಗೋ ಅಂಡ್ ರಿಲೇಶನ್ ಟು ಇಟ್ಸ್ ಫೈಟೋಕೆಮಿಸ್ಟ್ರಿ ಅಂಡ್ ಬಯಲಾಜಿಕಲ್ ಆಕ್ಟಿವಿಟಿ. ಜರ್ನಲ್ ಆಫ್ ಎಥ್ನೋಫಾರ್ಮಕಾಲಜಿ, ಸಂಪುಟ ೯೬, ಸಂಚಿಕೆಗಳು ೧-೨, ಪುಟಗಳು ೪೯-೫೫. doi:10.1016/j.jep.2004.08.009
  3. ಅನನ್ಯ ಪಾಲ್ ಹಾಗು ಶರ್ಮಿಷ್ಠ ಸೇನ್ ರಾಯ್ ಚೌಧರಿ(೨೦೧೦) ಮೆಡಿಸಿನಲ್ ಯೂಸಸ್ ಅಂಡ್ ಮಾಲೆಕ್ಯುಲರ್ ಐಡೆನ್ಟಿಫಿಕೆಶನ್ ಆಫ್ ಟು ಮೊಮೊರ್ಡಿಕಾ ಚರಂತಿಯಾ ವೆರೈಟೀಸ್ - ಏ ರಿವ್ಯೂ Archived 2010-08-20 ವೇಬ್ಯಾಕ್ ಮೆಷಿನ್ ನಲ್ಲಿ. ಇಲೆಕ್ಟ್ರಾನಿಕ್ ಜರ್ನಲ್ ಆಫ್ ಬಯಾಲಜಿ, ಸಂಪುಟ ೬, ಸಂಚಿಕೆ ೨, ಪುಟಗಳು ೪೩-೫೧.
  4. ಮಜೆಕೊಡುನ್ಮಿ ಫಾತೊಪೆ, ಯೋಶಿಯೋ ಟಕೇಡಾ, ಹಿರೋಯಾಸು ಯಮಾಷಿತ, ಹಿಕಾರು ಒಕಾಬೆ, ಹಾಗು ತತ್ಸುವೋ ಯಮಾಉಚಿ(೧೯೯೦), ನ್ಯೂ ಕ್ಯುಕುರ್ಬಿಟೇನ್ ಟ್ರಿಟರ್ಪೆನಾಯ್ಡ್ಸ್ ಫ್ರಂ ಮೊಮೊರ್ಡಿಕಾ ಚರಂತಿಯಾ. ಜರ್ನಲ್ ಆಫ್ ನ್ಯಾಚುರಲ್ ಪ್ರಾಡಕ್ಟ್ಸ್, ಸಂಪುಟ ೫೩, ಸಂಚಿಕೆ ೬, ಪುಟಗಳು ೧೪೯೧-೧೪೯೭
  5. ಸಬಿರಾ ಬೇಗಂ, ಮನ್ಸೂರ್ ಅಹ್ಮದ್, ಬೀನಾ ಎಸ್ ಸಿದ್ದಿಕಿ, ಅಬ್ದುಲಾ ಖಾನ್, ಜಾಫರ್ S. ಸಿಫಿ, ಹಾಗು ಮೊಹಮ್ಮದ್ ಆರಿಫ್(೧೯೯೭), ಟ್ರಿಟರ್ಪೆನೆಸ್, ಏ ಸ್ಟೆರೋಲ್, ಅಂಡ್ ಏ ಮೊನೋಸೈಕ್ಲಿಕ್ ಆಲ್ಕೋಹಾಲ್ ಫ್ರಂ ಮೊಮೊರ್ಡಿಕಾ ಚರಂತಿಯಾ . ಫೈಟೊಕೆಮಿಸ್ಟ್ರಿ, ಸಂಪುಟ ೪೪, ಸಂಚಿಕೆ ೭, ಪುಟಗಳು ೧೩೧೩-೧೩೨೦.
  6. H. ಒಕಾಬೆ, Y. ಮಿಯಾಹಾರ, ಹಾಗು T. ಯಮಾಉಚಿ(೧೯೮೨). ಸ್ಟಡೀಸ್ ಆನ್ ದಿ ಕಾನ್ಸ್ಟಿಟ್ಯುಯೆಂಟ್ಸ್ ಆಫ್ ಮೊಮೊರ್ಡಿಕಾ ಚರಂತಿಯಾ L.' ಕೆಮಿಕಲ್ ಫಾರ್ಮಕಾಲಜಿ ಬುಲೆಟಿನ್, ಸಂಪುಟ ೩೦, ಸಂಚಿಕೆ ೧೨, ಪುಟಗಳು ೪೩೩೪-೪೩೪೦
  7. ಯುಮಿಕೋ ಕಿಮುರ, ತೊಶಿಹಿರೋ ಅಕಿಹಿಸ, ನೋರಿಕೋ ಯುವಾಸ, ಮೋಟೋಹಿಕೋ ಉಕಿಯಾ, ತಕಾಶಿ ಸುಜುಕಿ, ಮಸಹಾರು ತೋರಿಯಾಮ, ಶಿಗೆಯಾಸು ಮೋಟೋಹಾಶಿ, ಹಾಗು ಹರುಕುನಿ ಟೋಕುಡಾ(೨೦೦೫) ಕ್ಯುಕುರ್ಬಿಟೇನ್-ಟೈಪ್ ಟ್ರಿಟರ್ಪೆನಾಯ್ಡ್ಸ್ ಫ್ರಂ ದಿ ಫ್ರೂಟ್ ಆಫ್ ಮೊಮೊರ್ಡಿಕಾ ಚರಂತಿಯಾ.' ಜರ್ನಲ್ ಆಫ್ ನ್ಯಾಚುರಲ್ ಪ್ರಾಡಕ್ಟ್ಸ್, ಸಂಪುಟ ೬೮, ಸಂಚಿಕೆ ೫, ಪುಟಗಳು ೮೦೭-೮೦೯. doi:10.1021/np040218p
  8. ಚಿ-ಐ ಚಾಂಗ್, ಚಿಯ್-ರೊಂಗ್ ಚೆನ್, ಯುನ್-ವೆನ್ ಲಿಯಾವೊ, ಹ್ಸುಎಹ್-ಲಿಂಗ್ ಚೆಂಗ್, ಯೋ-ಚಿಯಾ ಚೆನ್ ಹಾಗು ಚಾಂಗ್-ಹಂಗ್ ಚೌ(೨೦೦೮). ಕ್ಯುಕುರ್ಬಿಟೆನ್-ಟೈಪ್ ಟ್ರಿಟರ್ಪೆನಾಯ್ಡ್ಸ್ ಫ್ರಂ ದಿ ಸ್ತೆಮ್ಸ್ ಆಫ್ ಮೊಮೊರ್ಡಿಕಾ ಚರಂತಿಯಾ.' ಜರ್ನಲ್ ಆಫ್ ನ್ಯಾಚುರಲ್ ಪ್ರಾಡಕ್ಟ್ಸ್, ಸಂಪುಟ ೭೧, ಸಂಚಿಕೆ ೮, ಪುಟಗಳು ೧೩೨೭–೧೩೩೦. doi:10.1021/np070532u.
  9. ತೊಶಿಹಿರೋ ಅಕಿಹಿಸಾ, ನಯೋಕಿ ಹೀಗೋ, ಹರುಕುನಿ ಟೋಕೂಡಾ, ಮೊತೊಹಿಕೋ ಉಕಿಯಾ, ಹಿರೋಯುಕಿ ಅಕಾಜಾವ, ಯುಇಚಿ ತೋಚಿಗಿ, ಯುಮಿಕೋ ಕಿಮೂರ, ತಕಾಶಿ ಸುಜುಕಿ, ಹಾಗು ಹೊಯೊಕು ನಿಶಿನೋ(೨೦೦೭), ಕ್ಯುಕುರ್ಬಿಟೆನ್-ಟೈಪ್ ಟ್ರಿಟರ್ಪೆನಾಯ್ಡ್ಸ್ ಫ್ರಂ ದಿ ಫ್ರೂಟ್ಸ್ ಆಫ್ ಮೊಮೊರ್ಡಿಕಾ ಚರಂತಿಯಾ ಅಂಡ್ ದಿ ಕ್ಯಾನ್ಸರ್ ಕೀಮೋಪ್ರಿವೆನ್ಟೀವ್ ಎಫೆಕ್ಟ್ಸ್.' ಜರ್ನಲ್ ಆಫ್ ನ್ಯಾಚುರಲ್ ಪ್ರಾಡಕ್ಟ್ಸ್, ಸಂಪುಟ ೭೦, ಪುಟಗಳು ೧೨೩೩-೧೨೩೯. doi:10.1021/np068075p
  10. ಮರ್ಸೆಲೋ ಒರ್ಟಿಗಾವೋ ಹಾಗು ಮಾರ್ಕ್ ಬೆಟರ್(೧೯೯೨), [nar.oxfordjournals.org/cgi/ಮರುಮುದ್ರಣ20/17/4662.pdf ಮೊಮೊರ್ಡಿನ್ II, ಏ ರೈಬೋಸಂ ಇನ್ ಆಕ್ಟಿವೇಟಿಂಗ್ ಪ್ರೋಟೀನ್ ಫ್ರಂ ಮೊಮೊರ್ಡಿಕಾ ಬಲ್ಸಮಿನಾ, ಇಸ್ ಹೊಮೊಲೋಗಸ್ ಟು ಅದರ್ ಪ್ಲ್ಯಾಂಟ್ ಪ್ರೋಟೀನ್ಸ್] ನ್ಯೂಕ್ಲಿಕ್ ಆಸಿಡ್ಸ್ ರಿಸರ್ಚ್, ಸಂಪುಟ ೨೦, ಸಂಚಿಕೆ ೧೭, ಪುಟ ೪೬೬೨.
  11. Waako PJ, Gumede B, Smith P, Folb PI (May 2005). "The in vitro and in vivo antimalarial activity of Cardiospermum halicacabum L. and Momordica foetida Schumch. Et Thonn". J Ethnopharmacol. 99 (1): 137–43. doi:10.1016/j.jep.2005.02.017. PMID 15848033. {{cite journal}}: Cite has empty unknown parameter: |month= (help)CS1 maint: multiple names: authors list (link)
  12. Jiratchariyakul W, Wiwat C, Vongsakul M; et al. (June 2001). "HIV inhibitor from Thai bitter gourd". Planta Med. 67 (4): 350–3. doi:10.1055/s-2001-14323. PMID 11458453. {{cite journal}}: Cite has empty unknown parameter: |month= (help); Explicit use of et al. in: |author= (help)CS1 maint: multiple names: authors list (link)[ಶಾಶ್ವತವಾಗಿ ಮಡಿದ ಕೊಂಡಿ]
  13. Nerurkar PV, Lee YK, Linden EH; et al. (August 2006). "Lipid lowering effects of Momordica charantia (Bitter Melon) in HIV-1-protease inhibitor-treated human hepatoma cells, HepG2". Br. J. Pharmacol. 148 (8): 1156–64. doi:10.1038/sj.bjp.0706821. PMC 1752016. PMID 16847441. {{cite journal}}: Cite has empty unknown parameter: |month= (help); Explicit use of et al. in: |author= (help)CS1 maint: multiple names: authors list (link)
  14. ಎಂ. ಎಂ. ಲೋಲಿತ್ಕರ್ ಹಾಗು ಎಂ. ಆರ್. ರಾಜಾರಾಮ ರಾವ್ (೧೯೬೨), ನೋಟ್ ಆನ್ ಏ ಹೈಪೋಗ್ಲೈಸೇಮಿಕ್ ಪ್ರಿನ್ಸಿಪಲ್ ಐಸೋಲೇಟೆಡ್ ಫ್ರಂ ದಿ ಫ್ರೂಟ್ಸ್ ಆಫ್ ಮೊಮೊರ್ಡಿಕಾ ಚರಂತಿಯಾ . ಜರ್ನಲ್ ಆಫ್ ದಿ ಯೂನಿವರ್ಸಿಟಿ ಆಫ್ ಬಾಂಬೆ, ಸಂಪುಟ ೨೯, ಪುಟಗಳು ೨೨೩-೨೨೪
  15. ಎನ್. ವಿಸರಾಟ ಹಾಗು ಎಂ. ಉಂಗ್ಸುರುಂಗ್ಸಿ(೧೯೮೧), ಎಕ್ಸ್ಟ್ರ್ಯಾಕ್ಟ್ಸ್ ಫ್ರಂ ಮೊಮೊರ್ಡಿಕಾ ಚರಂತಿಯಾ' } L. ಫಾರ್ಮಸ್ಯೂಟಿಕಲ್ ಬಯಾಲಜಿ, ಸಂಪುಟ ೧೯, ಸಂಚಿಕೆ ೨–೩, ಪುಟಗಳು ೭೫–೮೦.[34] doi:10.3109/13880208109070580
  16. Sridhar MG, Vinayagamoorthi R, Arul Suyambunathan V, Bobby Z, Selvaraj N (2008-04-01). "Bitter gourd (Momordica charantia) improves insulin sensitivity by increasing skeletal muscle insulin-stimulated IRS-1 tyrosine phosphorylation in high-fat-fed rats". British Journal of Nutrition. 99 (04): 806. doi:10.1017/S000711450783176X. PMID 17942003.{{cite journal}}: CS1 maint: multiple names: authors list (link)
  17. ೧೭.೦ ೧೭.೧ "Ampalaya tablets out soon for diabetics". GMANews.TV. March 27, 2007. Retrieved August ೧೨, ೨೦೧೦. {{cite web}}: Check date values in: |accessdate= (help)
  18. Tan, Min-Jia (21 March 2008). "Antidiabetic Activities of Triterpenoids Isolated from Bitter Melon Associated with Activation of the AMPK Pathway". Chemistry & Biology. 15 (3): 263–273. doi:10.1016/j.chembiol.2008.01.013. PMID 18355726. {{cite journal}}: Unknown parameter |coauthors= ignored (|author= suggested) (help)
  19. Virdi J, Sivakami S, Shahani S, Suthar AC, Banavalikar MM, Biyani MK. (September 2003). "Antihyperglycemic effects of three extracts from Momordica charantia". J Ethnopharmacol. 88 (1): 107–11. doi:10.1016/S0378-8741(03)00184-3. PMID 12902059. {{cite journal}}: Cite has empty unknown parameter: |month= (help)CS1 maint: multiple names: authors list (link)
  20. Shetty AK, Kumar GS, Sambaiah K, Salimath PV (September 2005). "Effect of bitter gourd (Momordica charantia) on glycaemic status in streptozotocin induced diabetic rats". Plant Foods Hum Nutr. 60 (3): 109–12. doi:10.1007/s11130-005-6837-x. PMID 16187012. {{cite journal}}: Cite has empty unknown parameter: |month= (help)CS1 maint: multiple names: authors list (link)
  21. Krawinkel MB, Keding GB (July 2006). "Bitter gourd (Momordica Charantia): A dietary approach to hyperglycemia". Nutr Rev. 64 (7 Pt 1): 331–7. PMID 16910221. {{cite journal}}: Cite has empty unknown parameter: |month= (help)
  22. Miura T, Itoh C, Iwamoto N, Kato M, Kawai M, Park SR, Suzuki I (October 2001). "Hypoglycemic activity of the fruit of the Momordica charantia in type 2 diabetic mice". J Nutr Sci Vitaminol (Tokyo). 47 (5): 340–4. PMID 11814149. {{cite journal}}: Cite has empty unknown parameter: |month= (help)CS1 maint: multiple names: authors list (link)
  23. ಮಸುಕೋ ಕೊಬೋರಿ, ಮಯುಮಿ ಓಹ್ನಿಷಿ-ಕಮೆಯಮ, ಯುಕಾರಿ ಅಕಿಮೊಟೋ, ಚಿಜುಕೋ ಯುಕಿಜಕಿ ಹಾಗು ಮಿತ್ಸುರು ಯೋಶಿಡಾ(೨೦೦೮)α-ಎಲೆಯೋಸ್ಟೆಯಾರಿಕ್ ಆಸಿಡ್ ಅಂಡ್ ಇಟ್ಸ್ ಡೈಹೈಡ್ರಾಕ್ಸಿಡಿರೈವೇಟಿವ್ ಆರ್ ಮೇಜರ್ ಅಪೋಪ್ಟೋಸಿಸ್-ಇಂಡ್ಯೂಸಿಂಗ್ ಕಾಮ್ಪೋನೆಂಟ್ಸ್ ಆಫ್ ಬಿಟರ್ ಗಾರ್ಡ್ . ಜರ್ನಲ್ ಆಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರಿ, ಸಂಪುಟ ೫೬, ಸಂಚಿಕೆ ೨೨, ಪುಟಗಳು ೧೦೫೧೫–೧೦೫೨೦. doi:10.1021/jf8020877
  24. H. ಕೊಹ್ನೋ, Y. ಯಸುಯಿ, R. ಸುಜುಕಿ, M. ಹೊಸೋಕಾವ, K. ಮಿಯಾಷಿತ, T. ತನಾಕ (೨೦೦೪), ಡಯಟ್ರಿ ಸೀಡ್ ಆಯಿಲ್ ರಿಚ್ ಇನ್ ಕಾಂಜುಗೆಟೆಡ್ ಲಿನೋಲೆನಿಕ್ ಆಸಿಡ್ ಫ್ರಂ ಬಿಟರ್ ಮೆಲಾನ್ ಇನ್ಹಿಬಿಟ್ಸ್ ಅಜೋಕ್ಸಿ ಮೀಥೇನ್-ಇಂಡ್ಯೂಸ್ಡ್ ರಾಟ್ ಕೊಲೋನ್ ಕಾರ್ಸಿಯೋ ಜೆನೆಸಿಸ್ ಥ್ರೂ ಎಲೆವೆಶನ್ ಆಫ್ ಕೊಲೋನಿಕ್ PPAR γ ಎಕ್ಸ್ಪ್ರೆಸ್ಸಿಒನ್ ಅಂಡ್ ಆಲ್ಟರೇಶನ್ ಆಫ್ ಲಿಪಿಡ್ ಕಾಂಪೋಸಿಶನ್. ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್, ಸಂಪುಟ ೧೧೦, ಪುಟಗಳು ೮೯೬–೯೦೧.
  25. "About Herbs: Bitter Melon". Memorial Sloan-Kettering Cancer Center. Retrieved ೨೦೦೭-೧೨-೨೭. {{cite web}}: Check date values in: |accessdate= (help)
  • Abascal K, Yarnell E (2005). "Using bitter melon to treat diabetes". Altern Complemen Ther. 11 (4): 179–184. doi:10.1089/act.2005.11.179.
  • H.K.Bakhru (1997). Foods that Heal: The Natural Way to Good Health. Orient Paperbacks. ISBN 81-222-0033-8.
  • Baldwa VS, Bhandari CM, Pangaria A, Goyal RK (1977). "Clinical trial in patients with diabetes mellitus of an insulin-like compound obtained from plant source". Upsala J Med Sci. 82 (1): 39–41. doi:10.3109/03009737709179057. PMID 20078273.{{cite journal}}: CS1 maint: multiple names: authors list (link)

ಬಾಹ್ಯ ಕೊಂಡಿಗಳು‌[ಬದಲಾಯಿಸಿ]