ವಿಷಯಕ್ಕೆ ಹೋಗು

ಹರಿದತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹರಿದತ್ತ
ಜನನca.650 CE
ರಾಷ್ಟ್ರೀಯತೆಭಾರತೀಯ
ವೃತ್ತಿಖಗೋಳಶಾಸ್ತ್ರಜ್ಞ-astrologer
ಗಮನಾರ್ಹ ಕೆಲಸಗಳುPromulgation of the Parahita system of astronomical computations
ಹೆಸರಾಂತ ಕೆಲಸಗಳುಗ್ರಹಚಾರಿಣಿಬಂಧನ
Notes
Promulgated the Parahita system of astronomical computations in 683 CE at ತಿರುವನ್ನವಾಯ.

ಹರಿದತ್ತ (c. ೬೮೩ ಕ್ರಿ. ಶ) ಒಬ್ಬ ಖಗೋಳಶಾಸ್ತ್ರಜ್ಞ - ಭಾರತದ ಕೇರಳದ ಗಣಿತಶಾಸ್ತ್ರಜ್ಞ, ಇವರು ಖಗೋಳ ಗಣನೆಗಳ ಪರಹಿತ ವ್ಯವಸ್ಥೆಯ ಪ್ರವರ್ತಕ ಎಂದು ನಂಬಲಾಗಿದೆ. ಈ ಗಣನೆಯ ವ್ಯವಸ್ಥೆಯು ಕೇರಳ ಮತ್ತು ತಮಿಳುನಾಡಿನಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ದಂತಕಥೆಗಳ ಪ್ರಕಾರ, ಹರಿದತ್ತನು ಕ್ರಿ.ಶ.೬೮೩ ರಲ್ಲಿ ನಡೆದ ಮಾಮಾಂಕಮ್ ಸಂದರ್ಭದಲ್ಲಿ ಪರಹಿತ ಪದ್ದತಿಯನ್ನು ಘೋಷಿಸಿದನು. ಮಾಮಾಂಕಂ ಎಂಬುದು ಭರತಪುಳ ನದಿಯ ದಡದಲ್ಲಿರುವ ತಿರುನ್ನವಾಯದಲ್ಲಿ ೧೨ ವರ್ಷಗಳಿಗೊಮ್ಮೆ ನಡೆಯುವ ಉತ್ಸವವಾಗಿದೆ.

ಹರಿದತ್ತನ ವಿಶಿಷ್ಟ ಕೊಡುಗೆ, ಆರ್ಯಭಟೀಯ ಲೆಕ್ಕಾಚಾರಗಳನ್ನು ಪರಿಹರಿಸುವುದು ಮತ್ತು ಅಂಕಿಗಳ ಕಟಪಯಾದಿ ವ್ಯವಸ್ಥೆಯನ್ನು ಬಳಸುವುದು. ಇದರ ಜೊತೆಗೆ ಅವರು ಚಂದ್ರ ಮತ್ತು ಇತರ ಗ್ರಹಗಳ ಸರಾಸರಿ ಮತ್ತು ನಿಜವಾದ ಸ್ಥಾನಗಳ ಮೌಲ್ಯಗಳು, ವೇಗ ಇತ್ಯಾದಿಗಳ ಮೌಲ್ಯಗಳಿಗೆ ಆರ್ಯಭಟನ ಸ್ಥಿರಾಂಕಗಳನ್ನು ಅನುಸರಿಸಿ ತಿದ್ದುಪಡಿಗಳನ್ನು ಪರಿಚಯಿಸಿದರು. ಈ ತಿದ್ದುಪಡಿಯನ್ನು ಶಕ ೪೪೪ ರಲ್ಲಿ ಆರ್ಯಭಟನ ದಿನಾಂಕದಿಂದ ಅನ್ವಯಿಸುವುದರಿಂದ ಇದನ್ನುಶಕಾಬ್ದ -ಸಂಸ್ಕಾರ ಎಂದು ಕರೆಯಲಾಗುತ್ತದೆ. ಆ ದಿನಾಂಕದಂದು ಅವನ ಸ್ಥಿರಾಂಕಗಳು ನಿಖರವಾದ ಫಲಿತಾಂಶಗಳನ್ನು ನೀಡಿತು. []

ಪರಹಿತ ವ್ಯವಸ್ಥೆ

[ಬದಲಾಯಿಸಿ]

ಹರಿದತ್ತ ಪರಿಚಯಿಸಿದ ಪರಹಿತಾ ಪದ್ದತಿಯು ಆರ್ಯಭಟನಿಂದ ಆರ್ಯಭಟಿಯದಲ್ಲಿ ಪ್ರತಿಪಾದಿಸಿದ ವ್ಯವಸ್ಥೆಯ ಸರಳೀಕರಣವಾಗಿದೆ. ಹರಿದತ್ತ ಈ ಕೆಳಗಿನ ಸರಳೀಕರಣಗಳನ್ನು ಪರಿಚಯಿಸಿದರು. [] ಇದು ಸಾಮಾನ್ಯ ಮನುಷ್ಯನಿಗೆ ಕೂಡಾ ಸೂಕ್ತವಾಗಿದೆ ಏಕೆಂದರೆ ಇದು ಖಗೋಳಶಾಸ್ತ್ರದ ಲೆಕ್ಕಾಚಾರಗಳನ್ನು ಸರಳೀಕರಿಸಿತು ಮತ್ತು ಸಾಮಾನ್ಯ ವ್ಯಕ್ತಿಗಳಿಗೂ ಅಭ್ಯಾಸಕ್ಕೆ ಒದಗುವಂತೆ ಮಾಡಿತು. ಆದುದರಿಂದ ಈ ವ್ಯವಸ್ಥೆಯನ್ನು ಪರಹಿತ ಎಂದು ಕರೆಯಲಾಯಿತು.

  • ಹರಿದತ್ತನು ಆರ್ಯಭಟನು ಬಳಸಿದ ಸಂಖ್ಯಾತ್ಮಕ ಸಾಂಕೇತಿಕತೆಯನ್ನು ತ್ಯಜಿಸಿದನು ಮತ್ತು ಅದನ್ನು ಹೆಚ್ಚು ಹೊಂದಿಕೊಳ್ಳುವ ಕಟಪಯಾದಿ ವ್ಯವಸ್ಥೆಯನ್ನಾಗಿ ಬದಲಾಯಿಸಿದನು. ಈ ವ್ಯವಸ್ಥೆಯಲ್ಲಿ ಅಕ್ಷರಗಳನ್ನು ಅಂಕೆಗಳನ್ನು ಪ್ರತಿನಿಧಿಸಲು ಬಳಸಲಾಗುತ್ತದೆ ಮತ್ತು ಈ ಅಕ್ಷರಗಳನ್ನು ನಿರ್ದಿಷ್ಟ ಸಂಖ್ಯೆಗಳನ್ನು ಸೂಚಿಸಲು ಅರ್ಥಪೂರ್ಣ ಪದಗಳು ಮತ್ತು ವಾಕ್ಯಗಳನ್ನು ಆವಿಷ್ಕರಿಸಲು ಬಳಸಲಾಗುತ್ತದೆ. ಈ ಪದಗಳು ಮತ್ತು ವಾಕ್ಯಗಳನ್ನು ಕಡಿಮೆ ಶ್ರಮದಿಂದ ನೆನಪಿನಲ್ಲಿಟ್ಟುಕೊಳ್ಳಬಹುದು.
  • ಭಾರತೀಯ ಖಗೋಳಶಾಸ್ತ್ರದಲ್ಲಿನ ಲೆಕ್ಕಾಚಾರಗಳು ೪೩,೨೦,೦೦೦ ವರ್ಷಗಳ ಅವಧಿಯ ಮಹಾಯುಗಕ್ಕೆ ಅನ್ವಯವಾಗುವ ಹಲವಾರು ಆಕಾಶ ವಸ್ತುಗಳಿಗೆ ಸಂಬಂಧಿಸಿದ ವಿವಿಧ ನಿಯತಾಂಕಗಳನ್ನು ಪ್ರತಿನಿಧಿಸುವ ದೀರ್ಘ ಸಂಖ್ಯೆಗಳನ್ನು ಒಳಗೊಂಡಿವೆ. ಈ ದೊಡ್ಡ ಸಂಖ್ಯೆಗಳೊಂದಿಗೆ ಗಣನೆಗಳನ್ನು ತಪ್ಪಿಸಲು, ಹರಿದತ್ತನು ೫೭೬ ವರ್ಷಗಳು ಅಥವಾ ೨,೧೦,೩೮೯ ದಿನಗಳ (ಇದು ಮಹಾಯುಗದ 1/7500 ಭಾಗ) ಧಿಜಗನ್ನೂಪುರ-ಯುಗ ಎಂದು ಕರೆಯಲ್ಪಡುವ ಚಿಕ್ಕ ಯುಗವನ್ನು ಪರಿಚಯಿಸಿದನು ಮತ್ತು ಈ ಉಪ-ಯುಗಕ್ಕೆ ಹಲವಾರು ಗ್ರಹಗಳ ಸರಾಸರಿ ಚಲನೆಗೆ ಸಂಬಂಧಿಸಿದಂತೆ ಶೂನ್ಯ ತಿದ್ದುಪಡಿಗಳನ್ನು ನಿಖರವಾಗಿ ನಿರ್ಧರಿಸಿದನು. ಈ ತಿದ್ದುಪಡಿಗಳನ್ನು ಯಾವುದೇ ನಿರ್ದಿಷ್ಟ ದಿನಾಂಕಕ್ಕೆ ಸರಾಸರಿ ಗ್ರಹಗಳನ್ನು ಲೆಕ್ಕಾಚಾರ ಮಾಡಲು ಬಳಸಲಾಯಿತು.

ಹರಿದತ್ತನ ಕೃತಿಗಳು

[ಬದಲಾಯಿಸಿ]

ವಿದ್ವಾಂಸರು ಹರಿದತ್ತ ಬರೆದ ಎರಡು ಕೃತಿಗಳನ್ನು ಮಾತ್ರ ಗುರುತಿಸಲು ಸಾಧ್ಯವಾಯಿತು. ಅವುಗಳಲ್ಲಿ ಒಂದು, ಗ್ರಹಚರಣಿಬಂಧನ ಎಂಬ ಶೀರ್ಷಿಕೆಯು, ಖಗೋಳಶಾಸ್ತ್ರದ ಪರಹಿತ ವ್ಯವಸ್ಥೆಯ ಲೆಕ್ಕಾಚಾರಗಳ ಮೂಲ ಕೈಪಿಡಿಯಾಗಿದೆ. ಇದನ್ನು ಕೆ.ವಿ.ಶರ್ಮಾ ಅವರು ಸಂಶೋಧಿಸಿ ೧೯೫೪ [] ರಲ್ಲಿ ಪ್ರಕಟಿಸಿದರು. ಮಹಾಮಾರ್ಗನಿಬಂಧನ ಎಂಬ ಇನ್ನೊಂದು ಕೃತಿಯು ಈಗ ಉಳಿದಿಲ್ಲ.

ಸಹ ನೋಡಿ

[ಬದಲಾಯಿಸಿ]
  • ಭಾರತೀಯ ಖಗೋಳಶಾಸ್ತ್ರ
  • ಭಾರತೀಯ ಗಣಿತಶಾಸ್ತ್ರ
  • ಭಾರತೀಯ ಗಣಿತಜ್ಞರು
  • ಗಣಿತಶಾಸ್ತ್ರದ ಇತಿಹಾಸ
  • ಕೇರಳ ಶಾಲೆಯ ಖಗೋಳಶಾಸ್ತ್ರಜ್ಞರು ಮತ್ತು ಗಣಿತಜ್ಞರ ಪಟ್ಟಿ

ಉಲ್ಲೇಖಗಳು

[ಬದಲಾಯಿಸಿ]
  1. K. Chandra Hari (2002). "Date of Haridatta, promulgator of the Parahita system of astronomy in Kerala". Indian Journal of History of Science. 37 (3): 223–236.
  2. K.V. Sarma (1972). "Parahita system of astronomy". A History of the Kerala School of Hindu Astronomy. Hoshiarpur: Vishveshwaranand Institute. pp. 7–9.
  3. K.V. Sarma (1954). Grahacaranibandhana: A Parahita manual by Haridatta. Madras: Kuppuswamy Research Foundation.

ಟೆಂಪ್ಲೇಟು:Scientific Research in Kerala

"https://kn.wikipedia.org/w/index.php?title=ಹರಿದತ್ತ&oldid=1172330" ಇಂದ ಪಡೆಯಲ್ಪಟ್ಟಿದೆ