ವರಾಹಮಿಹಿರ
ಗೋಚರ
वराहमिहिर ವರಾಹಮಿಹಿರ | |
---|---|
ಜನನ | 505 CE |
ಮರಣ | 587 CE |
ವೃತ್ತಿ | astronomer, mathematician, and astrologer |
ರಾಷ್ಟ್ರೀಯತೆ | ಭಾರತೀಯ |
ಜನಾಂಗೀಯತೆ | ಭಾರತೀಯ |
ಕಾಲ | ಗುಪ್ತರ ಕಾಲ |
ವಿಷಯ | ಖಗೋಳ ಶಾಸ್ತ್ರ, ಜ್ಯೋತಿಷ ಶಾಸ್ತ್ರ, ಗಣಿತ |
ಪ್ರಮುಖ ಕೆಲಸ(ಗಳು) | ಪಂಚ ಸಿದ್ಧಾಂತಿಕಾ ಬೃಹತ್ ಸಂಹಿತಾ, ಬೃಹತ್ ಜಾತಕ |
ಪ್ರಭಾವಗಳು
| |
ಪ್ರಭಾವಿತರು
|
ವರಾಹಮಿಹಿರ ಉಜ್ಜಯಿನಿಯಲ್ಲಿ ಐದನೇ ಶತಮಾನದಲ್ಲಿ ಜನಿಸಿದ ಇವರು ಒಬ್ಬ ಭಾರತೀಯ ಖಗೋಳ ಶಾಸ್ತ್ರಜ್ಞ,ಗಣಿತಶಾಸ್ತ್ರಜ್ಞ ಹಾಗೂ ಜ್ಯೊತಿಷಿ.ವರಾಹಮಿಹಿರರು ಅವಂತಿ ದೇಶದ ಮಾಲ್ವ ಎಂಬಲ್ಲಿ ಖಗೋಳಶಾಸ್ತ್ರಜ್ಞನಾದ ಆದಿತ್ಯದಾಸ ಹಾಗು ಸತ್ಯವತಿಯರ ಮಗನಾಗಿ ಜನಿಸಿದರು.ನಂತರ ಕಪಿತ್ತಕ ಎಂಬಲ್ಲಿ ವಿದ್ಯಾಭ್ಯಾಸವನ್ನು ಪಡೆದರು.ಯಶೋವರ್ಮನ ಆಸ್ಥಾನದ ನವರತ್ನಗಳಲೊಬ್ಬರು.
'ಪಂಚ ಸಿದ್ಧಾಂತಿಕ'
[ಬದಲಾಯಿಸಿ]- ಇದು ವರಾಹಮಿಹಿರ ರಚಿಸಿದ ಮುಖ್ಯ ಸಿದ್ಧಾಂತಗಳಲ್ಲೊಂದು.ಇದು ಸೂರ್ಯಸಿದ್ಧಾಂತ, ರೋಮಕಸಿದ್ಧಾಂತ, ಪೌಲಿಸಸಿದ್ಧಾಂತ, ವಸಿಷ್ಠಸಿದ್ಧಾಂತ, ಪೈತಾಮಹಸಿದ್ಧಾಂತ ಹಾಗೂ ಖಗೋಳ ಶಾಸ್ತ್ರದ ಕೆಲವು ತುಣುಕುಗಳನ್ನು ಹೊಂದಿದೆ. ಸುಮಾರು ೧೫೦೦ ವರ್ಷಕ್ಕೂ ಮುನ್ನವೇ ಮಂಗಳ ಗ್ರಹದಲ್ಲಿ ನೀರು, ಕಬ್ಬಿಣ ಇದೆ ಎಂದು ಹೇಳಿದ್ದ. ಆಕಾಶ, ಸೂರ್ಯ,ಚಂದ್ರ,ನಕ್ಷತ್ರಗಳೆಲ್ಲ ದೇವರುಗಳೆಂದು ಪೂಜಿಸುತ್ತಿದ್ದ ಕಾಲದಲ್ಲಿ ಅವರಲ್ಲಾ ಸೃಷ್ಟಿಯ ಕೊಡುಗೆ ಎಂದು ಸಾರಿ ಹೇಳಿದ. ಯಾವುದೇ ಉಪಕರಣಗಳಿಲ್ಲದ ಆ ಕಾಲದಲ್ಲಿ ಸೂರ್ಯ, ಚಂದ್ರ, ಭೂಮಿ, ಗ್ರಹಗಳ ಗತಿಯನ್ನು ಕರಾರುವಾಕ್ಕಾಗಿ ಹೇಳಿದ. ೫೧೨ನೇ ಇಸವಿಯಲ್ಲಿ ಅಂದರೆ ತನ್ನ ೧೩ ನೇ ವಯಸ್ಸಿನಲ್ಲಿ 'ಸೂರ್ಯಸಿದ್ಧಾಂತ' ಬರೆದ. ಇದರಲ್ಲಿ ನಕ್ಷತ್ರ ಮಂಡಲ, ಸೂರ್ಯ ಗ್ರಹಣ ಮತ್ತು ಗ್ರಹಗಳ ಸ್ಥಾನಗಳನ್ನು ಕುರಿತು ವಿವರಿಸಿದ. ಗಣಿತದ ತ್ರಿಕೋಣಮಿತಿ ನಿಯಮ ಹಾಗು 'ಜ್ಯಾ' ಮಾನದ ಸರಣಿಯನ್ನೂ ಆರಂಭಿಸಿದ. ಇದಲ್ಲದೇ ಈತ ಷಟ್ ಪಂಚಾಂಗ, ಹೋರಾ-ಪಂಚ-ಹೋತ್ರೀಯ ಯೊಗಯಾತ್ರಾ, ಟಿಕನಿಯಾತ್ರಾ, ಬೃಹಜ್ಜಾತಕ, ವಾಹ ಪಟಲ ಮೊದಲಾದ ಕೃತಿಗಳನ್ನು ರಚಿಸಿದ. ಇವನ ಕಾಲದಲ್ಲಿ ಉಜ್ಜಯಿನಿ ವಿಶ್ವವಿದ್ಯಾಲಯದಲ್ಲಿ ಗಣಿತ ಸಂಶೋಧನೆಗಳು ಆರಂಭವಾಗಿದ್ದವು. ಇವನ ನಂತರ ಬಂದ ಆರ್ಯಭಟ ಇದನ್ನು ಮುಂದುವರಿಸಿ ಆಧುನಿಕ ಗಣಿತದ ರೂವಾರಿಯಾದ. ಇವನು ಮೊತ್ತ ಮೊದಲ ಜಲವಿಜ್ಞಾನಿಯೂ ಹೌದು. ಮಳೆ, ಅಂತರ್ಜಲದ ಮಟ್ಟ, ನೀರಿನ ಒಳಹರಿವು, ಭೂಜಲವನ್ನು ಗುರುತಿಸುವುದು, ಮಣ್ಣಿನ ಗುಣಮಟ್ಟದಿಂದ ನೀರಿನ ಪ್ರಮಾಣ ಅಳೆಯುವುದು, ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ನೀರು ಹರಿಯುತ್ತದೆ, ಪ್ರವಾಹ ತಡೆ, ಬರಪರಿಹಾರಕ್ಕೆ ಮಾರ್ಗೋಪಾಯಳ ಬಗ್ಗೆ ಕೂಡ ಹೇಳಿದ್ದಾನೆ.
ಬೃಹತ್ ಸಂಹಿತೆ
[ಬದಲಾಯಿಸಿ]- ಇದೂ ವರಾಹಮಿಹಿರನ ಕೊಡುಗೆಗಳಲ್ಲೊಂದು. ಇದು ಜ್ಯೊತಿಷ್ಯ, ಗ್ರಹಗಳ ಚಲನೆ, ಗ್ರಹಣ, ಮೋಡ, ಮಳೆ, ಶಿಲ್ಪಕಲೆ, ಬೆಳೆಗಳ ಬೆಳವಣಿಗೆ,ಸುಗಂಧ ದ್ರವ್ಯಗಳ ತಯಾರಿಕೆ, ಮದುವೆ, ಮುತ್ತು, ರತ್ನ ಹಾಗೂ ಸಂಪ್ರದಾಯದ ವಿಷಯಗಳನ್ನೊಳಗೊಂದಿದೆ. ಬೃಹತ್ ಜಾತಕ, ಲಘುಜತಕ, ಸಮಾಸ ಜಟಕ, ಬೃಹತ್ ಯೋಗಯಾತ್ರ, ಯೋಗಯಾತ್ರ, ಟಿಕ್ಕಾಣಿ ಯಾತ್ರ, ಬೃಹತ್ ವಿವಾಹ ಪತಲ್, ಲಘು ವಿವಾಹ ಪತಲ್, ಲಗ್ನ ವರಾಹಿ, ಕುತೂಹಲ ಮಂಜರಿ, ದೈವಜ್ಞ ವಲ್ಲಭ- ಇವು ವರಾಹಮಿಹಿರ ಬರೆದ ಜ್ಯೋತಿಷ ಶಾಸ್ತ್ರ ಗ್ರಂಥಗಳು. ತ್ರಿಕೋನಮಿತೀಯಕ್ಕೆ ಇವನ ಕೊಡುಗೆಗಳು ಅಪಾರ.[೧][೨]
ಉಲ್ಲೇಖ
[ಬದಲಾಯಿಸಿ]- ↑ Pancasiddhantika, Brihat Jataka, Brihat Samhita and Hora Shastra Various editions in English and Sanskrit. (PDF)]
- ↑ The Brihat Jataka (1905) Pdf edition internet archive