ವಿಷಯಕ್ಕೆ ಹೋಗು

ಸೇವ್ ಪೂರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೇವ್ ಪೂರಿ
ಸೇವ್ ಪೂರಿ
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಮಹಾರಾಷ್ಟ್ರ
ವಿವರಗಳು
ಮುಖ್ಯ ಘಟಕಾಂಶ(ಗಳು)ಪೂರಿ, ಸೇವ್, ಆಲೂಗಡ್ಡೆ, ಈರುಳ್ಳಿ, ಚಟ್ನಿಗಳು
ಪ್ರಭೇದಗಳುಭೇಲ್ ಪುರಿ, ದಹಿ ಪೂರಿ, ಪಾನಿ ಪೂರಿ, ಸೇವ್ ಪಾಪ್ಡಿ ಚಾಟ್

ಸೇವ್ ಪೂರಿ ಒಂದು ಭಾರತೀಯ ತಿಂಡಿ ಮತ್ತು ಒಂದು ಬಗೆಯ ಚಾಟ್ ಆಗಿದೆ.[] ಇದು ಮುಂಬಯಿ, ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ಒಂದು ವಿಶೇಷತೆ.[] ಮುಂಬಯಿ ಮತ್ತು ಪುಣೆಯಲ್ಲಿ, ಸೇವ್ ಪೂರಿಯನ್ನು ಬೀದಿ ಆಹಾರದೊಂದಿಗೆ ಬಲವಾಗಿ ಸಂಬಂಧಿಸಲಾಗುತ್ತದೆ, ಆದರೆ ಇದನ್ನು ದುಬಾರಿ ಸ್ಥಳಗಳಲ್ಲೂ ಬಡಿಸಲಾಗುತ್ತದೆ.[] ಇತ್ತೀಚೆಗೆ, ಸೂಪರ್‍ಮಾರ್ಕೆಟ್‍ಗಳು ಸೇವ್ ಪೂರಿ ಮತ್ತು ಭೇಲ್ ಪುರಿಯಂತಹ ಹೋಲುವ ಖಾದ್ಯಗಳ ಸಿದ್ಧ ಆಹಾರ ಪ್ಯಾಕೆಟ್‍ಗಳನ್ನು ದಾಸ್ತಾನು ಮಾಡುವುದನ್ನು ಆರಂಭಿಸಿವೆ.[]

ತಯಾರಿಕೆ

[ಬದಲಾಯಿಸಿ]

ಸೇವ್ ಪೂರಿಗೆ ಯಾವುದೇ ನಿಶ್ಚಿತ ಪಾಕವಿಧಿ ಇಲ್ಲವಾದರೂ, ವ್ಯಾಪಕವಾಗಿ ಬಳಸಲಾದ ಮೂಲ ಘಟಕಾಂಶಗಳು ಸಮಾನವಾಗಿರುತ್ತವೆ. ಸೇವ್ ಪೂರಿಯನ್ನು ಮೂಲಭೂತವಾಗಿ ಪೂರಿಯಿಂದ ತಯಾರಿಸಲಾಗುತ್ತದೆ. ಪೂರಿಯಲ್ಲಿ ಚೌಕವಾಗಿ ಕತ್ತರಿಸಿದ ಆಲೂಗಡ್ಡೆ ಚೂರುಗಳು, ಈರುಳ್ಳಿ, ಮೂರು ರೀತಿಯ ಚಟ್ನಿಗಳು: ಹುಣಸೆ, ಖಾರ ಮತ್ತು ಬೆಳ್ಳುಳ್ಳಿ ತುಂಬಿಸಲಾಗುತ್ತದೆ ಮತ್ತು ಮೇಲೆ ಸೇವ್‍ನ್ನು ಧಾರಾಳವಾಗಿ ಸಿಂಪಡಿಸಲಾಗುತ್ತದೆ. ಮಾವಿನಕಾಯಿಯ ಋತು ಬಂದಾಗ, ಮಾವಿನಕಾಯಿಯಿಂದ ಅಥವಾ ಸ್ವಲ್ಪ ನಿಂಬೆರಸ ಮತ್ತು ಚಾಟ್ ಮಸಾಲಾದಿಂದ ರುಚಿಗೊಳಿಸಲಾಗುತ್ತದೆ.[]

ವಿವಿಧತೆಗಳು

[ಬದಲಾಯಿಸಿ]

ಸೇವ್ ಪೂರಿಯನ್ನು ವಿವಿಧ ಹೂರಣಗಳು ಮತ್ತು ಅಲಂಕಾರಿಕ ಪದಾರ್ಥಗಳಿಂದ ತಯಾರಿಸಬಹುದು. ಕೆಲವು ಜನಪ್ರಿಯ ರೂಪಗಳೆಂದರೆ ದಹಿ ಸೇವ್ ಬಟಾಟಾ ಪೂರಿ[] (ಮೊಸರು ಮತ್ತು ಆಲೂಗಡ್ಡೆಯಿರುವ ಸೇವ್ ಪೂರಿ), ಪಾಲಕ್ ಸೇವ್ ಪೂರಿ (ಪಾಲಕ್‍ನೊಂದಿಗೆ ಸೇವ್ ಪೂರಿ) ಮತ್ತು ಮೆಕ್ಕೆ ಜೋಳ ಸೇವ್ ಪೂರಿ. ಕೆಲವು ವೇಳೆ ಅದರ ತಯಾರಿಕೆಯಲ್ಲಿ ಪುದೀನಾ ಚಟ್ನಿ ಮತ್ತು ಪನೀರ್‍ನ್ನೂ ಸೇರಿಸಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Mumbai's best chaat". CNN. 12 December 2010. Retrieved 19 March 2012.
  2. "CHOICE TABLES; Wide World of Food in the Capital". ದ ನ್ಯೂ ಯಾರ್ಕ್ ಟೈಮ್ಸ್. 27 November 1994. Retrieved 19 March 2012. {{cite news}}: Italic or bold markup not allowed in: |newspaper= (help)
  3. "Mumbai: A gastronomic's paradise!". ದಿ ಟೈಮ್ಸ್ ಆಫ್‌ ಇಂಡಿಯಾ. 27 July 2009. Archived from the original on 15 ಜೂನ್ 2013. Retrieved 19 March 2012. {{cite news}}: Italic or bold markup not allowed in: |newspaper= (help); More than one of |archivedate= and |archive-date= specified (help); More than one of |archiveurl= and |archive-url= specified (help)
  4. Dalal, Tarla (2000). Chaat Cookbook. Gardners Books. p. 116. ISBN 978-81-86469-62-0.
  5. "SBDP or Sev Batata Dahi Puri – anytime delight!".
  6. Remedios, Trina (6 March 2012). "Street food: Fast, yummy, healthy?". Times of India. Retrieved 19 March 2012.